\id 2PE \ide UTF-8 \ide UTF-8 \rem Copyright © 2017 Bridge Connectivity Solutions. This translation is made available to you under the terms of the Creative Commons Attribution-ShareAlike 4.0 License \h 2 ಪೇತ್ರನು \toc1 2 ಪೇತ್ರನು \toc2 2 ಪೇತ್ರ \toc3 2ಪೇತ್ರ \mt 2 ಪೇತ್ರನು \is ಗ್ರಂಥಕರ್ತೃತ್ವ \ip 2 ಪೇತ್ರ 1:1 ರಲ್ಲಿ ಹೇಳಿರುವಂತೆ ಅಪೊಸ್ತಲನಾದ ಪೇತ್ರನು ಎರಡನೆಯ ಪೇತ್ರನ ಪತ್ರಿಕೆಯ ಗ್ರಂಥಕರ್ತನಾಗಿದ್ದಾನೆ, 3:1 ರಲ್ಲಿ ಅವನು ಅದನ್ನು ಶ್ರುತಪಡಿಸುತ್ತಿದ್ದಾನೆ, ಯೇಸುವಿನ ರೂಪಾಂತರದ ಪ್ರತ್ಯಕ್ಷದರ್ಶಿಯೆಂದು ಹೇಳಿಕೊಳ್ಳುತ್ತಾನೆ (1:16-18). ಸಮಾನದೃಷ್ಟಿಯ ಸುವಾರ್ತೆಗಳ ಪ್ರಕಾರ, ಪೇತ್ರನು ಯೇಸುವಿನ ಜೊತೆಯಲ್ಲಿದ್ದ ಮೂರು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು (ಇನ್ನಿಬ್ಬರು ಯಾರೆಂದರೆ ಯಾಕೋಬನು ಮತ್ತು ಯೋಹಾನನು). ರಕ್ತಸಾಕ್ಷಿಯಾಗಿ ಸಾಯಲು ನೇಮಿಸಲ್ಪಟ್ಟಿದ್ದೇನೆ ಎಂದು ತೋರುತ್ತದೆಂದು 2 ಪೇತ್ರನ ಪತ್ರಿಕೆಯ ಗ್ರಂಥಕರ್ತನು ಉಲ್ಲೇಖಿಸುತ್ತಾನೆ (1:14); ಯೋಹಾ 21:18-19 ರಲ್ಲಿ, ಪೇತ್ರನು ಕಾರಾಗೃಹವಾಸದ ಅವಧಿಯ ನಂತರ ರಕ್ತಸಾಕ್ಷಿಯಾಗಿ ಸಾಯುತ್ತಾನೆಂದು ಯೇಸು ಮುಂತಿಳಿಸಿದನು. \is ಬರೆದ ದಿನಾಂಕ ಮತ್ತು ಸ್ಥಳ \ip ಸರಿಸುಮಾರು ಕ್ರಿ.ಶ. 65-68 ರ ನಡುವೆ ಬರೆಯಲ್ಪಟ್ಟಿದೆ. \ip ಪ್ರಾಯಶಃ ಇದು ರೋಮಾಪುರದಿಂದ ಬರೆಯಲ್ಪಟ್ಟಿರಬಹುದು, ಯಾಕೆಂದರೆ ಅಪೊಸ್ತಲನು ತನ್ನ ಜೀವನದ ಕೊನೆಯ ವರ್ಷಗಳನ್ನು ಅಲ್ಲಿ ಕಳೆದನು. \is ಸ್ವೀಕೃತದಾರರು \ip ಮೊದಲನೆಯ ಪೇತ್ರನ ಪತ್ರಿಕೆಯ ಅದೇ ವಾಚಕರಿಗೆ ಅಂದರೆ ಉತ್ತರ ಆಸ್ಯ ಸೀಮೆಯಲ್ಲಿರುವವರಿಗೆ ಇದನ್ನು ಬರೆಯಲಾಗಿದೆ. \is ಉದ್ದೇಶ \ip ಕ್ರೈಸ್ತೀಯ ನಂಬಿಕೆಯ ಪ್ರಧಾನ ಅಂಶಗಳನ್ನು ಜ್ಞಾಪಿಸಲು (1:12-13,16-21) ಮತ್ತು ಅಪೊಸ್ತಲಿಕ ಸಂಪ್ರದಾಯವನ್ನು ದೃಢೀಕರಿಸುವ ಮೂಲಕ (1:15) ವಿಶ್ವಾಸಿಗಳ ಭವಿಷ್ಯದ ಪೀಳಿಗೆಗಳನ್ನು ನಂಬಿಕೆಯಲ್ಲಿ ಬೋಧಿಸಲು ಪೇತ್ರನು ಇದನ್ನು ಬರೆದನು, ಪೇತ್ರನು ತನ್ನ ಸಮಯವು ಕೊಂಚವಾಗಿದ್ದರಿಂದ ಮತ್ತು ದೇವರ ಜನರು ಅನೇಕ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂದು ಅವನಿಗೆ ತಿಳಿದಿದ್ದರಿಂದ ಪೇತ್ರನು ಇದನ್ನು ಬರೆದನು (1:13-14; 2:1-3), ಕರ್ತನ ಶೀಘ್ರ ಬರೋಣವನ್ನು ತಿರಸ್ಕರಿಸುವಂಥ ಸುಳ್ಳು ಬೋಧಕರು ಬರುವುದರ ಕುರಿತು (3: 3-4) ತನ್ನ ಓದುಗರನ್ನು ಎಚ್ಚರಿಸಲು ಪೇತ್ರನು ಈ ಪತ್ರಿಕೆಯನ್ನು ಬರೆದನು (2:1-22). \is ಮುಖ್ಯಾಂಶ \ip ಸುಳ್ಳು ಬೋಧಕರ ವಿರುದ್ಧ ಎಚ್ಚರಿಕೆ \iot ಪರಿವಿಡಿ \io1 1. ವಂದನೆಗಳು — 1:1-2 \io1 2. ಕ್ರೈಸ್ತೀಯ ಸದ್ಗುಣಗಳಲ್ಲಿ ಬೆಳವಣಿಗೆ — 1:3-11 \io1 3. ಪೇತ್ರನ ಸಂದೇಶದ ಉದ್ದೇಶ — 1:12-21 \io1 4. ಸುಳ್ಳು ಬೋಧಕರ ವಿರುದ್ಧ ಎಚ್ಚರಿಕೆ — 2:1-22 \io1 5. ಕ್ರಿಸ್ತನ ಪುನರಾಗಮನ — 3:1-16 \io1 6. ಸಮಾಪ್ತಿ — 3:17-18 \c 1 \s ಪೀಠಿಕೆ \p \v 1 ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸಿಮೆಯೋನ ಪೇತ್ರನು \f + \fr 1:1 \fr*\ft ರೋಮಾ. 3:21-26:\ft*\f*ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ \f + \fr 1:1 \fr*\ft ರೋಮಾ. 1:12; ತೀತ. 1:4:\ft*\f*ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದೇನಂದರೆ, \v 2 ದೇವರನ್ನು ಕುರಿತಾಗಿಯೂ, ನಮ್ಮ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿಯೂ ಇರುವ \f + \fr 1:2 \fr*\ft 2 ಪೇತ್ರ. 1:3,8; 2:20; 3:18. ಯೋಹಾ 173; ಫಿಲಿ. 3:8:\ft*\f*ಪರಿಜ್ಞಾನದಲ್ಲಿ ನಿಮಗೆ \f + \fr 1:2 \fr*\ft 1 ಪೇತ್ರ. 1:2; ಯೂದ. 2:\ft*\f*ಕೃಪೆಯೂ, ಶಾಂತಿಯೂ ಹೆಚ್ಚುಹೆಚ್ಚಾಗಿ ದೊರೆಯಲಿ. \s ಭಕ್ತಿವೃದ್ಧಿಗೆ ಅನುಕೂಲವಾದ ಪ್ರೇರಣೆಗಳು \p \v 3 ನಮ್ಮನ್ನು ತನ್ನ ಮಹಿಮೆಯಿಂದಲೂ, ಗುಣಾತಿಶಯದಿಂದಲೂ \f + \fr 1:3 \fr*\ft 1 ಥೆಸ. 2:12; 2 ಥೆಸ. 2:14; 2 ತಿಮೊ. 1:9; 1 ಪೇತ್ರ. 5:10:\ft*\f*ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯಶಕ್ತಿಯು ನಮಗೆ ದೈವಿಕ ಪರಿಜ್ಞಾನವನ್ನು ಕೊಟ್ಟಿರುವುದರ ಮೂಲಕ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವನ್ನೂ ದಾನಮಾಡಲಾಗಿದೆಯೆಂದು ನಾವು ಬಲ್ಲೆವು. \v 4 ನೀವು ಲೋಕದಲ್ಲಿ \f + \fr 1:4 \fr*\ft 2 ಪೇತ್ರ. 2:18,20:\ft*\f*ದುರಾಶೆಯಿಂದುಂಟಾಗುವ ಕೆಟ್ಟತನದಿಂದ ದೂರವಾಗಿ \f + \fr 1:4 \fr*\ft ಎಫೆ 4:24; ಇಬ್ರಿ. 12:10; 1 ಯೋಹಾ 3:2:\ft*\f*ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂಬ ಉದ್ದೇಶದಿಂದ ದೇವರು ತನ್ನ ಅತ್ಯಂತ ಮಹತ್ವವುಳ್ಳ ಮತ್ತು ಅಮೂಲ್ಯವಾದ ವಾಗ್ದಾನಗಳನ್ನು ನಮಗೆ ದಯಪಾಲಿಸಿದ್ದಾನೆ. \v 5 ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ \f + \fr 1:5 \fr*\ft ಫಿಲಿ. 4:8:\ft*\f*ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ, \v 6 ಜ್ಞಾನಕ್ಕೆ \f + \fr 1:6 \fr*\ft ಅ. ಕೃ. 24:25; ಗಲಾ. 5:22-23:\ft*\f*ದಮೆಯನ್ನೂ, ದಮೆಗೆ \f + \fr 1:6 \fr*\ft ಇಬ್ರಿ. 10:36; ಯಾಕೋಬ. 1:3; \ft*\f*ತಾಳ್ಮೆಯನ್ನೂ, \v 7 ತಾಳ್ಮೆಗೆ ಭಕ್ತಿಯನ್ನೂ, ಭಕ್ತಿಗೆ \f + \fr 1:7 \fr*\ft ಇಬ್ರಿ. 13:1:\ft*\f*ಸಹೋದರ ಸ್ನೇಹವನ್ನೂ, ಸಹೋದರ ಸ್ನೇಹಕ್ಕೆ \f + \fr 1:7 \fr*\ft 1 ಕೊರಿ 13; 1 ಯೋಹಾ 4:16:\ft*\f*ಪ್ರೀತಿಯನ್ನೂ ಕೂಡಿಸಿರಿ. \v 8 ಇವು ನಿಮ್ಮಲ್ಲಿದ್ದು ಬೆಳೆದು ಬಂದರೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕುರಿತಾದ ಪರಿಜ್ಞಾನದಲ್ಲಿ ನೀವು ನಿರುತ್ಸಾಹಿಗಳೂ, \f + \fr 1:8 \fr*\ft ಯೋಹಾ 15:2; ತೀತ. 3:14:\ft*\f*ನಿಷ್ಪ್ರಯೋಜಕರೂ ಆಗದಂತೆ ಮಾಡುತ್ತವೆ. \v 9 ಇವುಗಳಿಲ್ಲದವನು \f + \fr 1:9 \fr*\ft ಯೋಬ. 5:14; 12:25; ಚೆಫ. 1:17; \ft*\f*ಕುರುಡನಾಗಿದ್ದಾನೆ. ಅವನು ದೂರ ದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಣ ಪಾಪಗಳು ಪರಿಹಾರವಾಗಿ \f + \fr 1:9 \fr*\ft ಎಫೆ 5:26; ತೀತ. 2:14; 1 ಯೋಹಾ 1:7; ಪ್ರಕ 7:14:\ft*\f*ತಾನು ಶುದ್ಧನಾದದ್ದನ್ನು ಮರೆತುಬಿಟ್ಟಿದ್ದಾನೆ. \v 10 ಆದ್ದರಿಂದ ಸಹೋದರರೇ, ದೇವರಲ್ಲಿ ನಿಮ್ಮ ಕರೆಯುವಿಕೆಯನ್ನೂ, \f + \fr 1:10 \fr*\ft 1 ಥೆಸ. 1:4:\ft*\f*ಆಯ್ಕೆಯನ್ನೂ ದೃಢಪಡಿಸಿಕೊಳ್ಳುವುದಕ್ಕೆ \f + \fr 1:10 \fr*\ft ಫಿಲಿ. 2:12; ಇಬ್ರಿ. 3:14:\ft*\f*ಮತ್ತಷ್ಟು ಪ್ರಯಾಸಪಡಿರಿ. ಏಕೆಂದರೆ ನೀವು ಹೀಗೆ ಮಾಡುವುದಾದರೆ ಎಂದಿಗೂ ಎಡುವುದಿಲ್ಲ. \v 11 ಹೀಗಿರುವುದರಿಂದ ನಮ್ಮ ಕರ್ತನೂ, ರಕ್ಷಕನೂ ಆಗಿರುವ \f + \fr 1:11 \fr*\ft ಕೊಲೊ 1:13; ಅ. ಕೃ. 14:22:\ft*\f*ಯೇಸುಕ್ರಿಸ್ತನ ನಿತ್ಯ ರಾಜ್ಯದಲ್ಲಿ ನಿಮಗೆ ಧಾರಾಳವಾಗಿ ಪ್ರವೇಶವು ದೊರೆಯುವುದು. \s ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುವುದಕ್ಕೆ ದೃಢವಾದ ಆಧಾರ ಉಂಟು \p \v 12 ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ \f + \fr 1:12 \fr*\ft 2 ಯೋಹಾ 2:\ft*\f*ನಿಮಗೆ ದೊರೆತಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ \f + \fr 1:12 \fr*\ft ಯೂದ. 5. ಫಿಲಿ. 3:1:\ft*\f*ನೆನಪಿಸಿಕೊಡುವುದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು. \v 13 ನಾನು \f + \fr 1:13 \fr*\ft 2 ಕೊರಿ 5:1,4:\ft*\f*ನನ್ನ ದೇಹವೆಂಬ ಗುಡಾರದಲ್ಲಿರುವ ತನಕ \f + \fr 1:13 \fr*\ft 2 ಪೇತ್ರ. 3:1:\ft*\f*ನಿಮ್ಮನ್ನು ನೆನಪುಮಾಡಿಸಿ ಪ್ರೇರೇಪಿಸುವುದು ಯುಕ್ತವೆಂದೆಣಿಸಿದ್ದೇನೆ. \v 14 ಏಕೆಂದರೆ \f + \fr 1:14 \fr*\ft ಯೋಹಾ 21:18,19:\ft*\f*ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತಿಳಿಸಿದ ಪ್ರಕಾರ ನಾನು \f + \fr 1:14 \fr*\ft 2 ತಿಮೊ. 4:6:\ft*\f*ಈ ಗುಡಾರವನ್ನು ಬಿಟ್ಟುಹೋಗುವ ಕಾಲವು ಸಮೀಪವಾಗಿದೆಯೆಂದು ಬಲ್ಲೆನು. \v 15 ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಾನು ಆಸಕ್ತಿವಹಿಸುವೆನು. \v 16 ನಮ್ಮ ಕರ್ತನಾದ ಯೇಸುಕ್ರಿಸ್ತನ ಶಕ್ತಿಯನ್ನೂ, \f + \fr 1:16 \fr*\ft 1 ಥೆಸ. 2:19:\ft*\f*ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ \f + \fr 1:16 \fr*\ft 1 ಕೊರಿ 1:17:\ft*\f*ಚಮತ್ಕಾರದಿಂದ ಕಲ್ಪಿಸಿದ \f + \fr 1:16 \fr*\ft 1 ತಿಮೊ. 1:4:\ft*\f*ಕಟ್ಟುಕಥೆಗಳನ್ನು ನಾವು ಅನುಸರಿಸಲಿಲ್ಲ. \f + \fr 1:16 \fr*\ft ಮತ್ತಾ 17:1,2,6; ಮಾರ್ಕ 9:2; ಯೋಹಾ 1:14:\ft*\f*ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ಅದನ್ನು ತಿಳಿಯಪಡಿಸಿದೆವು. \v 17 ಏಕೆಂದರೆ, \f + \fr 1:17 \fr*\ft ಮತ್ತಾ 17:5; 3:17; ಲೂಕ 9:35:\ft*\f*“ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಮಹೋನ್ನತವಾದ ಮಹಿಮೆಯಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ, ಮಹಿಮೆಯನ್ನೂ ಹೊಂದಿದನಲ್ಲವೇ. \v 18 ನಾವು \f + \fr 1:18 \fr*\ft ವಿಮೋ 3:5; ಯೆಹೋ. 5:15:\ft*\f*ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ವಾಣಿಯನ್ನು ನಾವು ಕೇಳಿಸಿಕೊಂಡೆವು. \v 19 ಇದಲ್ಲದೆ \f + \fr 1:19 \fr*\ft 1 ಪೇತ್ರ. 1:10:\ft*\f*ಪ್ರವಾದನವಾಕ್ಯವು ನಮಗೆ ಬಹುದೃಢವಾಗಿ ದೊರೆತಿದೆ. ಆ ದಿನವು ಅರುಣೋದಯವಾಗುವರೆಗೆ ಮತ್ತು \f + \fr 1:19 \fr*\ft ಅಥವಾ, ಸೂರ್ಯನು, ದಿವಾಕರನು; ಮಲಾ. 4:2; ಪ್ರಕ 2:28; 22:16:\ft*\f*ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವತನಕ \f + \fr 1:19 \fr*\ft ಕೀರ್ತ 119:105; ಯೋಹಾ 5:35:\ft*\f*ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಟ್ಟರೆ ಒಳ್ಳೆಯದು. \v 20 ಯಾವ ಪ್ರವಾದನಾ ವಾಕ್ಯವೂ ಕೇವಲ ಮನುಷ್ಯನ ಸ್ವಬುದ್ಧಿಯಿಂದ ವಿವರಿಸತಕ್ಕಂಥದ್ದಲ್ಲವೆಂಬುದನ್ನು ಮುಖ್ಯವಾಗಿ ಮೊದಲು ತಿಳಿದುಕೊಳ್ಳಿರಿ. \v 21 ಏಕೆಂದರೆ \f + \fr 1:21 \fr*\ft 2 ತಿಮೊ. 3:16:\ft*\f*ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ. ಆದರೆ ಮನುಷ್ಯರು \f + \fr 1:21 \fr*\ft 1 ಪೇತ್ರ. 1:11; 2 ಸಮು 23:2; ಅ. ಕೃ. 1:16; ಯಾಕೋಬ. 5:10:\ft*\f*ಪವಿತ್ರಾತ್ಮಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತನಾಡಿರುವುದು. \c 2 \s ದುರ್ಮಾರ್ಗತನವನ್ನು ಬೋಧಿಸುವವರ ವಿಷಯದಲ್ಲಿ ಎಚ್ಚರಿಕೆ (ಯೂದ 1-19) \p \v 1 ಆದರೆ ಇಸ್ರಾಯೇಲ್ ಜನರೊಂದಿಗೆ \f + \fr 2:1 \fr*\ft ಧರ್ಮೋ 13:1-3; ಯೆರೆ 14:14; 23:16; ಅ. ಕೃ. 13:6; 1 ಯೋಹಾ 4:1:\ft*\f*ಸುಳ್ಳುಪ್ರವಾದಿಗಳೂ ಸಹ ಇದ್ದರು. ಅದೇ ಪ್ರಕಾರ ನಿಮ್ಮಲ್ಲಿಯೂ \f + \fr 2:1 \fr*\ft ಅ. ಕೃ. 20:30; 2 ಕೊರಿ 11:13; 1 ತಿಮೊ. 4:1:\ft*\f*ಸುಳ್ಳುಬೋಧಕರು ಇರುವರು. ಅವರು ಹಾನಿಕರವಾದ ದುರ್ಬೋಧನೆಗಳನ್ನು \f + \fr 2:1 \fr*\ft ಯೂದ. 4; ಗಲಾ. 2:4:\ft*\f*ರಹಸ್ಯವಾಗಿ ಒಳಗೆತರುವವರೂ \f + \fr 2:1 \fr*\ft 1 ಕೊರಿ 6:20; 7:23; ಗಲಾ. 3:13; 4:5; ವಿಮೋ 15:16:\ft*\f*ತಮ್ಮನ್ನು ಕೊಂಡುಕೊಂಡ ಒಡೆಯನನ್ನೂ ಕೂಡ \f + \fr 2:1 \fr*\ft ಮತ್ತಾ 10:33:\ft*\f*ಅಲ್ಲಗಳೆಯುವವರೂ ಆಗಿದ್ದು ಫಕ್ಕನೆ ತಮ್ಮ ಮೇಲೆ ನಾಶನವನ್ನು ಬರಮಾಡಿಕೊಳ್ಳುವರು. \v 2 ಅವರ ದುಷ್ಕರ್ಮಗಳ ಮಾರ್ಗವನ್ನು ಅನೇಕರು ಅನುಸರಿಸುವರು. \f + \fr 2:2 \fr*\ft ರೋಮಾ. 2:24:\ft*\f*ಅವರ ನಿಮಿತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವುದು. \v 3 ಅವರು \f + \fr 2:3 \fr*\ft 1 ತಿಮೊ. 6:5; ತೀತ. 1:11:\ft*\f*ದ್ರವ್ಯಾಶೆಯುಳ್ಳವರಾಗಿ \f + \fr 2:3 \fr*\ft ರೋಮಾ. 16:18; ಕೊಲೊ 2:4:\ft*\f*ಕಲ್ಪಿತ ಮಾತುಗಳನ್ನಾಡುತ್ತಾ ನಿಮ್ಮನ್ನು ಮಾರಾಟಮಾಡಿ ಲಾಭವನ್ನು ಸಂಪಾದಿಸಬೇಕೆಂದಿರುವರು. ಧೀರ್ಘಕಾಲದಿಂದ \f + \fr 2:3 \fr*\ft ಧರ್ಮೋ 32:35; ಫಿಲಿ. 3:19:\ft*\f*ಅಂಥವರಿಗಿರುವಂಥ ದಂಡನೆಯ ತೀರ್ಪು ತಪ್ಪದೆ ಬರುತ್ತಿರುವುದು. ಅವರಿಗೆ ಬರುವ ನಾಶವು ತೂಕಡಿಸುವುದಿಲ್ಲ. \v 4 ಹೇಗೆಂದರೆ \f + \fr 2:4 \fr*\ft ಯೂದ. 6:\ft*\f*ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ \f + \fr 2:4 \fr*\ft ಮತ್ತಾ 25:41:\ft*\f*ನ್ಯಾಯತೀರ್ಪನ್ನು ಹೊಂದುವುದಕ್ಕಾಗಿ ಸಂಕೋಲೆಗಳಿಂದ ಬಂಧಿಸಿ \f + \fr 2:4 \fr*\ft ಪ್ರಕ 20:2,3,10:\ft*\f*ಕತ್ತಲೆಯ ಕೂಪಕ್ಕೆ ಒಪ್ಪಿಸಿದನು. \v 5 ಆತನು ಭಕ್ತಿಹೀನರಾದ ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ \f + \fr 2:5 \fr*\ft 2 ಪೇತ್ರ. 3:6; 1 ಪೇತ್ರ. 3:20; ಆದಿ 7:10, 8:14:\ft*\f*ಜಲಪ್ರಳಯವನ್ನು ಬರಮಾಡಿದನು. ಆದರೆ ಸುನೀತಿಯನ್ನು ಸಾರುತ್ತಿದ್ದ \f + \fr 2:5 \fr*\ft 1 ಪೇತ್ರ. 3:20:\ft*\f*ನೋಹನನ್ನೂ ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ಉಳಿಸಿದನು. \v 6 \f + \fr 2:6 \fr*\ft ಆದಿ 19:24:\ft*\f*ಆತನು ಸೊದೋಮ್ ಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ ಇನ್ನು ಮೇಲೆ \f + \fr 2:6 \fr*\ft ಅರಣ್ಯ 26:10:\ft*\f*ಭಕ್ತಿಹೀನರಾಗಿ ಬದುಕುವವರಿಗೆ ಬರುವ ದುರ್ಗತಿಯನ್ನು ಸೂಚಿಸುವುದಕ್ಕಾಗಿ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು. \v 7 ಆದರೆ ದೇವರು ಆ ದುಷ್ಟರ ಅನೈತಿಕ ನಡತೆಗೆ ನೊಂದುಕೊಂಡಿದ್ದ ನೀತಿವಂತನಾದ \f + \fr 2:7 \fr*\ft ಆದಿ 19:16:\ft*\f*ಲೋಟನನ್ನು ಕಾಪಾಡಿದನು. \v 8 ಏಕೆಂದರೆ ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ \f + \fr 2:8 \fr*\ft ಕೀರ್ತ 119:136,158; ಯೆಹೆ. 9:4:\ft*\f*ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ನೊಂದುಕೊಂಡನು. \v 9 ಕರ್ತನು \f + \fr 2:9 \fr*\ft 1 ಕೊರಿ 10:13; ಪ್ರಕ 3:10:\ft*\f*ಭಕ್ತರನ್ನು ಕಷ್ಟಗಳಿಂದ ರಕ್ಷಿಸುವುದಕ್ಕೂ ಅನೀತಿವಂತರನ್ನು ಶಿಕ್ಷಿಸುವುದಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಇಡುವುದಕ್ಕೂ ಬಲ್ಲವನಾಗಿದ್ದಾನೆ. \v 10 ಮುಖ್ಯವಾಗಿ \f + \fr 2:10 \fr*\ft ಯೂದ. 16,18.\ft*\f*ಶಾರೀರಿಕ ಬಂಡುತನದ ದುರಾಶೆಗಳಲ್ಲಿ ನಡೆದು \f + \fr 2:10 \fr*\ft ಯೂದ. 8.\ft*\f*ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೇ ಸ್ವೇಚ್ಛಾಪರರಾಗಿದ್ದಾರೆ. \f + \fr 2:10 \fr*\ft ಯೂದ. 8. ಕೆಲವು ಪ್ರತಿಗಳಲ್ಲಿ ದೇವದೂತರು ಎಂದು ಬರೆದದೆ. \ft*\f*ಮಹಿಮಾಪದವಿಯವರನ್ನು ನಿರ್ಭಯವಾಗಿ ದೂಷಿಸುವರು. \v 11 \f + \fr 2:11 \fr*\ft ಯೂದ. 9:\ft*\f*ದೇವದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ ಅವರಿಗೆ ವಿರೋಧವಾಗಿ ದೂಷಣೆಯನ್ನು, ನಿಂದೆಯನ್ನು ಹೇಳದಿರಲು, ಆ ಗರ್ವಿಷ್ಠರು ಮಹಿಮಾಪದವಿಗಳನ್ನು ದೂಷಿಸಲು ಹಿಂಜರಿಯುವುದಿಲ್ಲ. \v 12 \f + \fr 2:12 \fr*\ft ಯೂದ. 10; ಯೆರೆ 12:3:\ft*\f*ಸ್ವಾಭಾವಿಕವಾಗಿ ಸೆರೆಹಿಡಿಯಲ್ಪಟ್ಟು ನಾಶವಾಗುವುದಕ್ಕೆ ಹುಟ್ಟಿರುವ \f + \fr 2:12 \fr*\ft ಫಿಲಿ. 3:19:\ft*\f*ವಿವೇಕಶೂನ್ಯ ಪ್ರಾಣಿಗಳಂತಿರುವ ಈ ದುರ್ಬೋಧಕರು ತಮಗೆ ತಿಳಿಯದವುಗಳ ವಿಷಯವಾಗಿ ದೂಷಿಸುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ತಾವೇ ಸಂಪೂರ್ಣ ನಾಶವಾಗುವರು. \v 13 ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. \f + \fr 2:13 \fr*\ft ಅಥವಾ, ತಾತ್ಕಾಲಿಕ ಭೋಗಾನುಭವವನ್ನೇ. \ft*\f*ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು \f + \fr 2:13 \fr*\ft 1 ಕೊರಿ 11:21:\ft*\f*ನಿಮ್ಮೊಂದಿಗೆ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು \f + \fr 2:13 \fr*\ft ಕೆಲವು ಪ್ರತಿಗಳಲ್ಲಿ, ಪ್ರೇಮಭೋಜನಗಳಲ್ಲಿ ಎಂದು ಬರೆದದೆ; ಯೂದ. 12:\ft*\f*ಉಂಡು ಕುಡಿದು ಕಳಂಕಕ್ಕೂ, ಅವಮಾನಕ್ಕೂ ಕಾರಣರಾಗಿದ್ದಾರೆ. \v 14 ಇವರು ವ್ಯಭಿಚಾರಿಣಿಯನ್ನು ಕಂಡು ಆನಂದಿಸುವವರೂ, \f + \fr 2:14 \fr*\ft 1 ಪೇತ್ರ. 4:1:\ft*\f*ಪಾಪವನ್ನು ಕಂಡು ತೃಪ್ತಿಹೊಂದದ ಕಣ್ಣುಳ್ಳವರೂ, ಚಂಚಲತೆ ಮನಸ್ಸುವುಳ್ಳವರನ್ನು ಮರುಳುಗೊಳಿಸುವವರೂ, ಹಣದಾಸೆಯಲ್ಲಿ ಪರಿಣಿತಿ ಪಡೆದ ಹೃದಯವುಳ್ಳವರೂ, \f + \fr 2:14 \fr*\ft ಎಫೆ 2:3:\ft*\f*ಶಾಪಗ್ರಸ್ತ ಮಕ್ಕಳೂ ಆಗಿದ್ದಾರೆ. \v 15 ಇವರು ಸನ್ಮಾರ್ಗವನ್ನು ಬಿಟ್ಟವರು. ಹಾದಿ ತಪ್ಪಿದವರು ಮತ್ತು ಬೇಯೋರಿನ ಮಗನಾದ \f + \fr 2:15 \fr*\ft ಅರಣ್ಯ 22:5,7; ಧರ್ಮೋ 23:4; ನೆಹೆ 13:2; ಯೂದ 11:\ft*\f*ಬಿಳಾಮನ ಮಾರ್ಗವನ್ನು ಹಿಡಿದವರಾಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಭಾವನೆಯನ್ನು ಪ್ರೀತಿಸಿದನು. \v 16 ಆದರೆ ಅವನ ದುಷ್ಟ ಕೃತ್ಯಕ್ಕೆ ಖಂಡನೆಯಾಯಿತು. \f + \fr 2:16 \fr*\ft ಅರಣ್ಯ 22:21,23,28:\ft*\f*ಮೂಕ ಪ್ರಾಣಿಯಾದ ಕತ್ತೆಯು ಮನುಷ್ಯಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನವನ್ನು ಅಡ್ಡಿ ಮಾಡಿತು. \v 17 ಇವರು \f + \fr 2:17 \fr*\ft ಯೂದ 12:\ft*\f*ನೀರಿಲ್ಲದ ಹಾಳು ಬಾವಿಗಳೂ, ಬಿರುಗಾಳಿಯಿಂದ ಬಡಿಸಿಕೊಂಡು ಹಾರಿಹೋಗುವ ಮೋಡಗಳೂ ಆಗಿದ್ದಾರೆ. \f + \fr 2:17 \fr*\ft ಯೂದ 13:\ft*\f*ಇಂಥವರಿಗಾಗಿ ಕಗ್ಗತ್ತಲೆಯನ್ನು ಸಂಗ್ರಹಿಸಿ ಇಡಲಾಗಿದೆ. \v 18 ಕೇಡುಕಿನ ಮಾರ್ಗದಲ್ಲಿ ನಡೆಯುವವರ ಸಹವಾಸದಿಂದ \f + \fr 2:18 \fr*\ft 2 ಪೇತ್ರ. 1:4; 2:20:\ft*\f*ಹೊಸದಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ \f + \fr 2:18 \fr*\ft ಯೂದ 16:\ft*\f*ಪೊಳ್ಳು ಮಾತುಗಳನ್ನಾಡಿ ಕೆಟ್ಟ ಕಾಮಾಭಿಲಾಷೆ ಹುಟ್ಟಿಸಿ ಅತಿಯಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ. \v 19 ಇಂಥವರು \f + \fr 2:19 \fr*\ft ಗಲಾ. 5:13; ಯಾಕೋಬ. 1:25:\ft*\f*ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನಮಾಡುತ್ತಾರೆ. ಆದರೆ \f + \fr 2:19 \fr*\ft ಯೋಹಾ 8:34; ರೋಮಾ. 6:16:\ft*\f*ತಾವೇ ಕೆಟ್ಟತನಕ್ಕೆ ದಾಸರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋಲುವನೋ ಅವನು ಅದರ ದಾಸನಾಗಿದ್ದಾನಷ್ಟೇ. \p \v 20 ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನನ್ನು ಕುರಿತಾದ ಪರಿಜ್ಞಾನಹೊಂದಿ ಲೋಕದ ಮಲಿನತ್ವಗಳಿಗೆ \f + \fr 2:20 \fr*\ft ವ. 18:\ft*\f*ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ \f + \fr 2:20 \fr*\ft ಮತ್ತಾ 12:45:\ft*\f*ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು. \v 21 \f + \fr 2:21 \fr*\ft ಯೆಹೆ. 18:24; ಲೂಕ 12:47; ಯಾಕೋಬ. 4:17:\ft*\f*ಅವರು ನೀತಿಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯನ್ನು ಬಿಟ್ಟು ದೂರ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಹೋಗಿದ್ದರೆ ಚೆನ್ನಾಗಿತ್ತು. \v 22 \f + \fr 2:22 \fr*\ft ಜ್ಞಾ. 26:11:\ft*\f*“ನಾಯಿ ತಾನು ಕಕ್ಕಿದ್ದನ್ನು ನೆಕ್ಕುವುದಕ್ಕೆ ತಿರುಗಿಕೊಂಡಿತು. ಮತ್ತು ಮೈತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವುದಕ್ಕೆ ಹೋಯಿತು.” ಎಂಬ ಗಾದೆ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ. \c 3 \s ದೇವರ ದಿನವು ತಡವಾದರೂ ಅದು ಬರುವುದು ನಿಶ್ಚಯ \p \v 1 ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ. \v 2 \f + \fr 3:2 \fr*\ft ಲೂಕ 1:70; ಅ. ಕೃ. 3:21:\ft*\f*ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ \f + \fr 3:2 \fr*\ft ಯೂದ. 17:\ft*\f*ನೀವು ಜ್ಞಾಪಕಮಾಡಿಕೊಳ್ಳಬೇಕೆಂದು ಈ ಎರಡು ಪತ್ರಿಕೆಗಳ ಮೂಲಕ ನಿಮಗೆ \f + \fr 3:2 \fr*\ft 2 ಪೇತ್ರ. 1:13:\ft*\f*ತಿಳಿಸಿಕೊಡುತ್ತಾ ನಿಮ್ಮ ನಿರ್ಮಲವಾದ ಮನಸ್ಸನ್ನು ಎಚ್ಚರಗೊಳಿಸುತ್ತಿದ್ದೇನೆ. \p \v 3 ಕಡೆ ದಿನಗಳಲ್ಲಿ \f + \fr 3:3 \fr*\ft ಯೂದ. 18:\ft*\f*ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ, \v 4 \f + \fr 3:4 \fr*\ft 1 ಥೆಸ. 2:19:\ft*\f*“ಆತನ ಪ್ರತ್ಯಕ್ಷತೆಯ ವಿಷಯವಾದ \f + \fr 3:4 \fr*\ft ಯೆಶಾ 5:19; ಯೆರೆ 17:15; ಯೆಹೆ. 11:3; 12:22, 27; ಮಲಾ. 2:17:\ft*\f*ವಾಗ್ದಾನವು ಏನಾಯಿತು? ನಮ್ಮ ಪೂರ್ವಿಕರು ನಿದ್ರೆಹೊಂದಿದ ನಂತರದಿಂದ; ಸಮಸ್ತವೂ ಸೃಷ್ಟಿಯ ಆರಂಭದಲ್ಲಿ ಇದ್ದ ಹಾಗೆಯೇ ಇದೆಯಲ್ಲಾ?” ಎಂದು ಪರಿಹಾಸ್ಯಮಾಡುತ್ತಾ ಕೇಳುವರೆಂಬುದಾಗಿ ನೀವು ಮೊದಲು ತಿಳಿದುಕೊಳ್ಳಬೇಕು. \v 5 ಆದರೆ ಪೂರ್ವಕಾಲದಲ್ಲಿ ಭೂಮ್ಯಾಕಾಶಗಳು \f + \fr 3:5 \fr*\ft ಆದಿ 1:6, 7, 9; ಕೀರ್ತ 33:6; ಇಬ್ರಿ. 11:3:\ft*\f*ದೇವರ ವಾಕ್ಯದ ಮೂಲಕ \f + \fr 3:5 \fr*\ft ಕೀರ್ತ 24:2; 136:6:\ft*\f*ನೀರಿನೊಳಗಿನಿಂದ ಹಾಗೂ ನೀರಿನಿಂದ ರೂಪಿಸಲ್ಪಟ್ಟಿತೆಂಬುದನ್ನು ಅವರು ಉದ್ದೇಶರ್ಪೂವಕವಾಗಿಯೇ ಮರೆತುಬಿಡುತ್ತಾರೆ. \v 6 \f + \fr 3:6 \fr*\ft ಆದಿ 7:11, 21; 2 ಪೇತ್ರ. 2:5:\ft*\f*ಆ ನೀರಿನಿಂದಲೇ ಅಂದಿನ ಲೋಕವು ಜಲಪ್ರಳಯದಲ್ಲಿ ನಾಶವಾಯಿತು. \v 7 ಆದರೆ ಈಗಿನ ಭೂಮ್ಯಾಕಾಶಗಳು ಅದೇ ವಾಕ್ಯದಿಂದ ಅಗ್ನಿನಾಶಕ್ಕಾಗಿ ಕಾದಿರಿಸಲ್ಪಟ್ಟಿವೆ. ಅವು ನ್ಯಾಯ ತೀರ್ಪಿನ ದಿನಕ್ಕಾಗಿ ಮತ್ತು \f + \fr 3:7 \fr*\ft 2 ಥೆಸ. 1:9:\ft*\f*ಭಕ್ತಿಹೀನರ ನಾಶಕ್ಕಾಗಿ ಉಳಿಸಲ್ಪಟ್ಟಿವೆ. \p \v 8 ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ \f + \fr 3:8 \fr*\ft ಕೀರ್ತ 90. 4:\ft*\f*ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ. \v 9 \f + \fr 3:9 \fr*\ft ಹಬ 2:3; ಇಬ್ರಿ. 10:37; ಪ್ರಸಂಗಿ. 8:11:\ft*\f*ಕರ್ತನು ತನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂಬುದಾಗಿ ಕೆಲವರು ತಿಳಿದುಕೊಂಡಿರುವ ಪ್ರಕಾರ ಆತನು ತಡಮಾಡುವವನಲ್ಲ. \f + \fr 3:9 \fr*\ft ಯೆಹೆ. 18:23, 32; 33:11:\ft*\f*ಯಾರೊಬ್ಬನೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ \f + \fr 3:9 \fr*\ft 1 ತಿಮೊ. 2:4:\ft*\f*ಎಲ್ಲರೂ ಪಶ್ಚಾತ್ತಾಪ ಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ \f + \fr 3:9 \fr*\ft ಯೆಶಾ 30. 18; ಲೂಕ 18:7; 1 ಪೇತ್ರ. 3:20:\ft*\f*ದೀರ್ಘಶಾಂತಿಯುಳ್ಳವನಾಗಿದ್ದಾನೆ. \v 10 ಆದರೂ \f + \fr 3:10 \fr*\ft ಮತ್ತಾ 24:42-51; ಲೂಕ 12:39-46; 1 ಥೆಸ. 5:2; ಪ್ರಕ 3:3:\ft*\f*ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ. \f + \fr 3:10 \fr*\ft ಮತ್ತಾ 24:35; ಇಬ್ರಿ. 12:26, 27; ಪ್ರಕ 6:14; 20:11; 21:1:\ft*\f*ಆ ದಿನದಲ್ಲಿ ಆಕಾಶ ಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವವು. \f + \fr 3:10 \fr*\ft ಯೆಶಾ 34:4:\ft*\f*ಮೂಲಧಾತುಗಳು ಉರಿದು ಲಯವಾಗಿ ಹೋಗುವವು. \f + \fr 3:10 \fr*\ft ಕೆಲವು ಪ್ರತಿಗಳಲ್ಲಿ ಭೂಮಿಯೂ ಅದರಲ್ಲಿರುವ ಕೆಲಸಗಳೂ ಕಾಣುವವೇ? ಎಂದು ಬರೆದದೆ. \ft*\f*ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು. \s ಲೋಕಾಂತ್ಯವನ್ನು ಎದುರುನೋಡುತ್ತಾ ಪರಿಶುದ್ಧರಾಗಿ ನಡೆಯಿರಿ ಎಂಬ ಬೋಧನೆ \p \v 11 ಇವೆಲ್ಲವುಗಳು ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿರಬೇಕು? \f + \fr 3:11 \fr*\ft 1 ಪೇತ್ರ. 1:15:\ft*\f*ಪರಿಶುದ್ಧವಾಗಿಯೂ ಭಕ್ತಿಯುಳ್ಳವರಾಗಿಯೂ ಜೀವಿಸಬೇಕು. \v 12 ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ \f + \fr 3:12 \fr*\ft ಅಥವಾ, ಬೇಗ ಬರುವಂತೆ ಪ್ರಯತ್ನಿಸುತ್ತಾ. \ft*\f*ಆತುರಪಡುವ ಆ ದಿನದಲ್ಲಿ ಆಕಾಶಮಂಡಲವು ಬೆಂಕಿಯಿಂದ ನಾಶವಾಗಿ ಹೋಗುವವು. ಅತಿ ಉಷ್ಣದಿಂದ ಮೂಲಧಾತುಗಳು ಉರಿದು ಕರಗಿ ಹೋಗುವವು. \v 13 ಆದರೂ ನಾವು ದೇವರ ವಾಗ್ದಾನದ ಪ್ರಕಾರ \f + \fr 3:13 \fr*\ft ಯೆಶಾ 65:17; 66:22; ಪ್ರಕ 21:1:\ft*\f*ನೂತನ ಆಕಾಶ ಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ. \f + \fr 3:13 \fr*\ft ಯೆಶಾ 60. 21; ಪ್ರಕ 21:27:\ft*\f*ಅವುಗಳಲ್ಲಿ ನೀತಿಯು ವಾಸವಾಗಿರುವುದು. \p \v 14 \f + \fr 3:14 \fr*\ft 1 ಕೊರಿ 15:58; 1 ಥೆಸ. 3:13; 5:23:\ft*\f*ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರುನೋಡುವವರಾಗಿರುವುದರಿಂದ ಆತನೊಂದಿಗೆ ಸಮಾಧಾನದಲ್ಲಿದ್ದು \f + \fr 3:14 \fr*\ft ಯಾಕೋಬ 1:27; ಫಿಲಿ. 2:15:\ft*\f*ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಪ್ರಯತ್ನಿಸಿರಿ. \v 15 \f + \fr 3:15 \fr*\ft ವ. 9:\ft*\f*ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಇದೆ ಎಂದು ಪರಿಗಣಿಸಿರಿ. \f + \fr 3:15 \fr*\ft ಅ. ಕೃ. 15:25:\ft*\f*ನಮ್ಮ ಪ್ರಿಯ ಸಹೋದರನಾದ ಪೌಲನು ಸಹ \f + \fr 3:15 \fr*\ft 1 ಕೊರಿ 3:10:\ft*\f*ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ \f + \fr 3:15 \fr*\ft ರೋಮಾ. 2:4:\ft*\f*ನಿಮಗೆ ಬರೆದಿದ್ದಾನೆ. \v 16 ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ \f + \fr 3:16 \fr*\ft ರೋಮಾ. 8:19; 1 ಕೊರಿ 15:24; 1 ಥೆಸ. 4:15:\ft*\f*ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ಸಂಗತಿಗಳು ನಿಮಗೆ ಅರ್ಥಮಾಡಿಕೊಳ್ಳುವುದಕ್ಕೆ ಕಠಿಣವಾಗಿವೆ. ಅಜ್ಞಾನಿಗಳೂ, ಚಂಚಲಚಿತ್ತರೂ ಆದವರು ಉಳಿದ ಗ್ರಂಥಗಳ ಹಾಗೆ ಇದನ್ನೂ ತಪ್ಪಾಗಿ ಅರ್ಥ ಕೊಟ್ಟು \f + \fr 3:16 \fr*\ft ಯೆಶಾ 28:13:\ft*\f*ತಮಗೆ ನಾಶವನ್ನುಂಟು ಮಾಡಿಕೊಳ್ಳುತ್ತಾರೆ. \v 17 ಆದಕಾರಣ ಪ್ರಿಯರೇ, \f + \fr 3:17 \fr*\ft 2 ಪೇತ್ರ. 1:12:\ft*\f*ನೀವು ಈ ಸಂಗತಿಗಳನ್ನು ಮುಂಚಿತವಾಗಿ ತಿಳಿದುಕೊಂಡಿರುವುದರಿಂದ ದುಷ್ಟರ ವಂಚನೆಯಲ್ಲಿ ಸಿಕ್ಕಿ \f + \fr 3:17 \fr*\ft 2 ಪೇತ್ರ. 1:10; 1:1 ಕೊರಿ 10:12:\ft*\f*ನಿಮ್ಮ ಸ್ಥಿರವಾದ ನಂಬಿಕೆಯನ್ನು ಬಿಟ್ಟು ಭ್ರಷ್ಟರಾಗದಂತೆಯೂ ಎಚ್ಚರಿಕೆಯಾಗಿರಿ. \v 18 ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಕುರಿತಾದ \f + \fr 3:18 \fr*\ft 2 ಪೇತ್ರ. 1:5; ಎಫೆ 4:15; ಕೊಲೊ 1:10; 2:19; 1 ಪೇತ್ರ. 2:2:\ft*\f*ಕೃಪೆಯಲ್ಲಿಯೂ ಜ್ಞಾನದಲ್ಲಿಯೂ ನೀವು ಅಭಿವೃದ್ಧಿ ಹೊಂದಿರಿ. \f + \fr 3:18 \fr*\ft ರೋಮಾ. 11:36:\ft*\f*ಆತನಿಗೆ ಈಗಲೂ ಸದಾಕಾಲವೂ ಮಹಿಮೆಯುಂಟಾಗಲಿ. ಆಮೆನ್.