\id SNG - Biblica® Open Kannada Contemporary Version \ide UTF-8 \h ಪರಮಗೀತೆ \toc1 ಪರಮಗೀತೆ \toc2 ಪರಮಗೀತೆ \toc3 ಪರಮ \mt1 ಪರಮಗೀತೆ \c 1 \p \v 1 ಸೊಲೊಮೋನನ ಪರಮಗೀತೆ. \b \sp ಪ್ರಿಯತಮೆ \q1 \v 2 ಬಾಯಿಯ ಮುದ್ದುಗಳಿಂದ ನನಗೆ ಮುದ್ದಿಡಲಿ, \q2 ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಉತ್ತಮ. \q1 \v 3 ನೀನು ಹಚ್ಚಿಕೊಂಡಿರುವ ಸುಗಂಧ ತೈಲದ ಪರಿಮಳವು ಮೆಚ್ಚಿಕೆಯಾಗಿದೆ. \q2 ನಿನ್ನ ಹೆಸರು ಸುರಿದ ಸುಗಂಧ ತೈಲವಾಗಿದೆ. \q2 ಆದ್ದರಿಂದ ಕನ್ಯೆಯರು ನಿನ್ನನ್ನು ಪ್ರೀತಿ ಮಾಡುತ್ತಾರೆ! \q1 \v 4 ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಲು ಅವಸರಪಡು! \q2 ಅರಸನು ನನ್ನನ್ನು ತನ್ನ ಕೊಠಡಿಯೊಳಗೆ ಕರೆದುಕೊಂಡು ಬರಲಿ. \sp ಸ್ನೇಹಿತರು \q1 ನಾವು ನಿನ್ನಲ್ಲಿ ಉಲ್ಲಾಸಪಟ್ಟು, ಸಂತೋಷ ಪಡುತ್ತೇವೆ. \q2 ದ್ರಾಕ್ಷಾರಸಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಯನ್ನು ಹೊಗಳುತ್ತೇವೆ. \sp ಪ್ರಿಯತಮೆ \q1 ಅವರು ಯಥಾರ್ಥವಾಗಿ ನಿನ್ನನ್ನು ಮೆಚ್ಚುತ್ತಾರೆ! \b \q1 \v 5 ಯೆರೂಸಲೇಮಿನ ಪುತ್ರಿಯರೇ, \q2 ನಾನು ಕಪ್ಪಾದವಳು ಆದರೂ ಸುಂದರಿ. \q1 ಕೇದಾರಿನ ಗುಡಾರಗಳಂತೆಯೂ, ಸೊಲೊಮೋನನ ಡೇರೆಯ ತೆರೆಗಳಂತೆಯೂ ಚೆಲುವೆ. \q1 \v 6 ನನ್ನನ್ನು ದಿಟ್ಟಿಸಿ ನೋಡಬೇಡಿರಿ. \q2 ನಾನು ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿದ್ದೇನೆ. \q1 ನನ್ನ ಸಹೋದರರು ನನ್ನ ಮೇಲೆ ಕೋಪಮಾಡಿಕೊಂಡು, \q2 ದ್ರಾಕ್ಷಿತೋಟಗಳನ್ನು ಕಾಯಲು ನನ್ನನ್ನು ನೇಮಿಸಿದರು. \q2 ಆದರೆ ನನ್ನ ಸ್ವಂತ ದ್ರಾಕ್ಷಿತೋಟವನ್ನು ನಾನು ಅಲಕ್ಷ್ಯ ಮಾಡಬೇಕಾಯಿತು. \q1 \v 7 ನನ್ನ ಪ್ರಾಣ ಪ್ರಿಯನೇ, \q2 ನೀನು ನಿನ್ನ ಮಂದೆಯನ್ನು ಮೇಯಿಸುವುದು ಎಲ್ಲಿ? \q2 ಮಧ್ಯಾಹ್ನದಲ್ಲಿ ನೀನು ವಿಶ್ರಮಿಸಿಕೊಳ್ಳುವ ಸ್ಥಳ ಎಲ್ಲಿ? ನನಗೆ ತಿಳಿಸು. \q1 ನಾನು ನಿನ್ನ ಜೊತೆಗಾರರ ಮಂದೆಗಳ ಬಳಿಯಲ್ಲಿ \q2 ಮುಸುಕು ಹಾಕಿದವಳಂತೆ ಏಕೆ ಅಲೆಯಬೇಕು? \sp ಸ್ನೇಹಿತರು \q1 \v 8 ಸ್ತ್ರೀಯರಲ್ಲಿ ಸೌಂದರ್ಯವಂತಳೇ, ನಿನಗೆ ಗೊತ್ತಿಲ್ಲವಾದರೆ, \q2 ನೀನು ಮಂದೆಯ ಜಾಡಿನಲ್ಲಿಯೇ ಹೋಗಿ, \q1 ಕುರುಬರ ಗುಡಾರಗಳ ಬಳಿಯಲ್ಲಿ \q2 ನಿನ್ನ ಮೇಕೆಯ ಮರಿಗಳನ್ನು ಮೇಯಿಸು. \sp ಪ್ರಿಯಕರ \q1 \v 9 ನನ್ನ ಪ್ರಿಯಳೇ, ಫರೋಹನ ರಥಕ್ಕೆ ಕಟ್ಟಿದ ಕುದುರೆಗೆ \q2 ನಿನ್ನನ್ನು ಹೋಲಿಸಿದ್ದೇನೆ. \q1 \v 10 ನಿನ್ನ ಕೆನ್ನೆಗಳು ಆಭರಣಗಳ ಸಾಲಿನಿಂದಲೂ, \q2 ನಿನ್ನ ಕೊರಳು ಕಂಠ ಮಾಲೆಗಳಿಂದಲೂ ರಮ್ಯವಾಗಿವೆ. \q1 \v 11 ನಾವು ನಿನಗೋಸ್ಕರ ಬಂಗಾರದ ಕಿವಿಯೋಲೆಗಳನ್ನು \q2 ಬೆಳ್ಳಿಯ ಸರಪಳಿಗಳೊಂದಿಗೆ ಮಾಡಿಸುವೆವು. \sp ಪ್ರಿಯತಮೆ \q1 \v 12 ಅರಸನು ಮೇಜಿನ ಬಳಿಯಲ್ಲಿ ಕೂತಿದ್ದಾಗ, \q2 ನನ್ನ ಪರಿಮಳ ತೈಲವು ಸುವಾಸನೆಯನ್ನು ಬೀರುತ್ತಿತ್ತು. \q1 \v 13 ನನ್ನ ಪ್ರಿಯತಮನು ನನ್ನ ಸ್ತನಗಳ ಮಧ್ಯದಲ್ಲಿ \q2 ವಿಶ್ರಾಂತಿ ಪಡೆಯುವ ರಕ್ತಬೋಳದ ಚೀಲದಂತಿರುವನು. \q1 \v 14 ನನ್ನ ಪ್ರಿಯನು ನನಗೆ ಏನ್ಗೆದಿಯ ದ್ರಾಕ್ಷಿ ತೋಟಗಳಲ್ಲಿರುವ \q2 ಗೋರಂಟಿ ಹೂಗೊಂಚಲಿನಂತೆ ಇರುವನು. \sp ಪ್ರಿಯಕರ \q1 \v 15 ನನ್ನ ಪ್ರಿಯಳೇ, ನೀನು ಎಷ್ಟು ಸೌಂದರ್ಯವಂತೆ! \q2 ಆಹಾ, ನೀನು ಸೌಂದರ್ಯವಂತಳೇ! \q2 ನಿನ್ನ ಕಣ್ಣುಗಳು ಪಾರಿವಾಳಗಳಂತಿವೆ. \sp ಪ್ರಿಯತಮೆ \q1 \v 16 ನನ್ನ ಪ್ರಿಯನೇ, ಇಗೋ, ನೀನು ಎಷ್ಟು ಸೌಂದರ್ಯವಂತನು! \q2 ಹೌದು, ರಮ್ಯವಾದವನು! \q2 ಹಸಿರು ಚಿಗುರುಗಳೇ ನಮ್ಮ ಮಂಚವಾಗಿದೆ. \sp ಪ್ರಿಯಕರ \q1 \v 17 ನಮ್ಮ ಮನೆಯ ತೊಲೆಗಳು ದೇವದಾರು ಮರಗಳು. \q2 ನಮ್ಮ ಮೇಲ್ಛಾವಣಿ ತುರಾಯಿ ಮರಗಳು. \c 2 \sp ಪ್ರಿಯತಮೆ \q1 \v 1 ಶಾರೋನಿನ ಗುಲಾಬಿ ಹೂವೂ, \q2 ತಗ್ಗಿನ ತಾವರೆಯೂ ನಾನೇ. \sp ಪ್ರಿಯಕರ \q1 \v 2 ಮುಳ್ಳುಪೊದರಿನ ನಡುವೆ ತಾವರೆಯಂತೆ \q2 ನನ್ನ ಪ್ರಿಯಳು ಕನ್ಯಾಮಣಿಗಳಲ್ಲಿ ಶ್ರೇಷ್ಠಳು. \sp ಪ್ರಿಯತಮೆ \q1 \v 3 ಅಡವಿಯ ಮರಗಳಲ್ಲಿ ಸೇಬಿನ ಮರದಂತೆ \q2 ಯುವಜನರಲ್ಲಿ ನನ್ನ ಪ್ರಿಯನಿದ್ದಾನೆ. \q1 ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತುಕೊಂಡೆನು. \q2 ಅವನ ಫಲವು ನನ್ನ ರುಚಿಗೆ ಮಧುರವಾಗಿತ್ತು. \q1 \v 4 ಅವನು ಔತಣದ ಮನೆಗೆ ನನ್ನನ್ನು ಕರೆದುಕೊಂಡು ಬಂದನು. \q2 ನನ್ನ ಮೇಲೆ ಇರುವ ಅವನ ಧ್ವಜವು ಪ್ರೀತಿಯೇ. \q1 \v 5 ದ್ರಾಕ್ಷೆಯಿಂದ ನನ್ನನ್ನು ಬಲಪಡಿಸು. \q2 ಸೇಬು ಹಣ್ಣುಗಳಿಂದ ನನ್ನನ್ನು ಚೇತನಗೊಳಿಸು. \q2 ಏಕೆಂದರೆ ನಾನು ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ. \q1 \v 6 ಅವನ ಎಡಗೈ ನನ್ನ ತಲೆದಿಂಬಾಗಿರಲಿ. \q2 ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ. \q1 \v 7 ಯೆರೂಸಲೇಮಿನ ಪುತ್ರಿಯರೇ, \q2 ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. \q1 ಎಚ್ಚರಿಸಲೂ ಬೇಡಿರಿ ಎಂದು \q2 ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. \b \q1 \v 8 ನನ್ನ ಪ್ರಿಯನ ಸ್ವರವು! ಇಗೋ! \q2 ಅವನು ಪರ್ವತಗಳ ಮೇಲೆ ಹಾರುತ್ತಾ, \q1 ಗುಡ್ಡಗಳ ಮೇಲೆ ಜಿಗಿಯುತ್ತಾ ಬರುತ್ತಿದ್ದಾನೆ. \q1 \v 9 ನನ್ನ ಪ್ರಿಯನು ಜಿಂಕೆಯ ಹಾಗೆ ಇದ್ದಾನೆ. \q2 ದುಪ್ಪಿಯ ಮರಿಯ ಹಾಗೆಯೂ ಇದ್ದಾನೆ. \q1 ಇಗೋ! ಅವನು ನಮ್ಮ ಗೋಡೆಯ ಹಿಂದೆ ನಿಂತಿದ್ದಾನೆ. \q2 ಜಾಲಾಂತರಗಳಲ್ಲಿ ತನ್ನನ್ನು ತೋರಿಸಿ, ಕಿಟಿಕಿಗಳಿಂದ ನೋಡುತ್ತಿದ್ದಾನೆ. \q1 \v 10 ನನ್ನ ಪ್ರಿಯನು ನನ್ನೊಡನೆ ಮಾತನಾಡಿ ಹೀಗೆಂದನು: \q2 “ನನ್ನ ಪ್ರಿಯಳೇ ಎದ್ದು ಬಾ, \q2 ನನ್ನ ಸುಂದರಿಯೇ, ಹೊರಟು ಬಾ. \q1 \v 11 ಇಗೋ! ಚಳಿಗಾಲ ಕಳೆಯಿತು, \q2 ಮಳೆ ನಿಂತುಹೋಯಿತು. \q1 \v 12 ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತಿವೆ. \q2 ಪಕ್ಷಿಗಳು ಹಾಡುವ ಕಾಲ ಬಂತು. \q1 ಪಾರಿವಾಳಗಳ ಸ್ವರ \q2 ನಮ್ಮ ಊರಲ್ಲಿ ಕೇಳಿಸುತ್ತಿದೆ. \q1 \v 13 ಅಂಜೂರದ ಕಾಯಿಗಳು ಹಣ್ಣಾಗಿವೆ. \q2 ದ್ರಾಕ್ಷಿಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ. \q1 ಎದ್ದು ಬಾ, ನನ್ನ ಪ್ರಿಯಳೇ, \q2 ನನ್ನ ಸುಂದರಿಯೇ, ನನ್ನೊಂದಿಗೆ ಬಾ.” \sp ಪ್ರಿಯಕರ \q1 \v 14 ಬಂಡೆಯ ಬಿರುಕುಗಳಲ್ಲಿಯೂ \q2 ಸಂದುಗಳ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ ಬಾ. \q1 ನಿನ್ನ ಮುಖವನ್ನು ನನಗೆ ತೋರಿಸು. \q2 ನಿನ್ನ ಸ್ವರವನ್ನು ನನಗೆ ಕೇಳಿಸು. \q1 ನಿನ್ನ ಸ್ವರವು ಇಂಪಾಗಿದೆ. \q2 ನಿನ್ನ ಮುಖವು ಸುಂದರವಾಗಿಯೂ ಇದೆ. \q1 \v 15 ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ \q2 ನರಿಮರಿಗಳನ್ನೂ ಹಿಡಿಯಿರಿ. \q2 ನಮ್ಮ ದ್ರಾಕ್ಷಿತೋಟಗಳಲ್ಲಿ ಹೂಗಳು ಅರಳಿವೆ. \sp ಪ್ರಿಯತಮೆ \q1 \v 16 ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. \q2 ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ. \q1 \v 17 ನನ್ನ ಪ್ರಿಯನೇ, \q2 ಹೊತ್ತು ಮೂಡುವ ಮುಂಚೆ \q1 ಕತ್ತಲು ಕವಿಯುವ ಮೊದಲು ಹೊರಟು ಬಾ. \q2 ಒರಟಾದ ಪರ್ವತಗಳ\f + \fr 2:17 \fr*\ft ಅಥವಾ \ft*\fqa ಬೆತೇರ್ ಪರ್ವತ\fqa*\f* \q1 ಮೇಲಿರುವ ಜಿಂಕೆಯಂತಿರು. \q2 ಹೌದು, ಪ್ರಾಯದ ದುಪ್ಪಿಯಂತೆಯೂ ಇರು. \b \c 3 \q1 \v 1 ರಾತ್ರಿಯೆಲ್ಲಾ ನನ್ನ ಹಾಸಿಗೆಯ ಮೇಲಿದ್ದೆನು; \q2 ನನ್ನ ಪ್ರಾಣ ಪ್ರಿಯನನ್ನು ಹುಡಕಿದೆನು. ಅವನನ್ನು ಎಷ್ಟು ಹುಡುಕಿದರೂ \q2 ಅವನು ಸಿಗಲಿಲ್ಲ. \q1 \v 2 ನಾನು ಎದ್ದು, ಪಟ್ಟಣವನ್ನು ಸಂಚರಿಸಿ, \q2 ಬೀದಿಗಳಲ್ಲಿಯೂ, ಮಾರ್ಗಗಳಲ್ಲಿಯೂ \q1 ನನ್ನ ಪ್ರಾಣ ಪ್ರಿಯನನ್ನು ಹುಡುಕಾಡಿದೆನು. \q2 ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲೇ ಇಲ್ಲ. \q1 \v 3 ನಾನು ಪಟ್ಟಣವನ್ನು ಕಾಯುವ \q2 ಕಾವಲುಗಾರರಿಗೆ ಸಿಕ್ಕಿಬಿದ್ದಾಗ, \q2 “ನನ್ನ ಪ್ರಾಣ ಪ್ರಿಯನನ್ನು ನೀವು ಕಂಡಿರಾ?” ಎಂದು ವಿಚಾರಿಸಿದೆ. \q1 \v 4 ನಾನು ಅವರನ್ನು ಬಿಟ್ಟು ಸ್ವಲ್ಪ ದೂರ ಹೋದ ಮೇಲೆ, \q2 ನನ್ನ ಪ್ರಾಣ ಪ್ರಿಯನನ್ನು ಕಂಡುಕೊಂಡೆನು. \q1 ನಾನು ಅವನ ಕೈಯನ್ನು ಹಿಡಿದುಕೊಂಡು ನನ್ನ ತಾಯಿಯ ಮನೆಗೆ, \q2 ಹೌದು, ನನ್ನ ಹೆತ್ತವಳ ಕೋಣೆಗೆ \q2 ಅವನನ್ನು ಬಿಡದೆ ಕರೆದುಕೊಂಡು ಹೋದೆನು. \q1 \v 5 ಯೆರೂಸಲೇಮಿನ ಪುತ್ರಿಯರೇ, \q2 ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. \q1 ಎಚ್ಚರಿಸಲೂ ಬೇಡಿರಿ ಎಂದು \q2 ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. \b \q1 \v 6 ರಕ್ತಬೋಳ, ಸಾಂಬ್ರಾಣಿಗಳಿಂದಲೂ \q2 ವರ್ತಕರು ಮಾರುವ ಸಕಲ ಸುಗಂಧ ದ್ರವ್ಯಗಳಿಂದಲೂ \q2 ಧೂಮಸ್ತಂಭಗಳಂತೆ ಅಡವಿಯಿಂದ ಬರುವ ಈ ಮೆರವಣೆಗೆ ಯಾರದು? \q1 \v 7 ನೋಡಿರಿ! ಇದು ಸೊಲೊಮೋನನ ರಥ. \q2 ಇಸ್ರಾಯೇಲಿನ ಪರಾಕ್ರಮಶಾಲಿಗಳಲ್ಲಿ ಅರವತ್ತು \q2 ಮಂದಿ ಅದರ ಸುತ್ತಲಿದ್ದಾರೆ. \q1 \v 8 ಯುದ್ಧ ನಿಪುಣರಾದ ಅವರೆಲ್ಲರೂ \q2 ಖಡ್ಗ ಹಿಡಿದಿದ್ದಾರೆ. \q1 ರಾತ್ರಿಯ ಅಪಾಯದ ನಿಮಿತ್ತ ಪ್ರತಿಯೊಬ್ಬರೂ \q2 ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾರೆ. \q1 \v 9 ಅರಸನಾದ ಸೊಲೊಮೋನನು ಲೆಬನೋನಿನ ಮರದಿಂದ \q2 ಒಂದು ರಥವನ್ನು ತನಗೆ ಮಾಡಿಸಿಕೊಂಡಿದ್ದನು. \q1 \v 10 ಅವನು ಅದರ ಸ್ತಂಭಗಳನ್ನು ಬೆಳ್ಳಿಯಿಂದಲೂ \q2 ಅದರ ಕೆಳಗಿನ ಭಾಗವನ್ನು ಬಂಗಾರದಿಂದಲೂ \q1 ಅದರ ಹೊದಿಕೆಯನ್ನು \q2 ಧೂಮ್ರವರ್ಣದ ವಸ್ತ್ರದಿಂದಲೂ ಮಾಡಿಸಿದ್ದನು. \q1 ಯೆರೂಸಲೇಮಿನ ಪುತ್ರಿಯರು ಪ್ರೀತಿಯಿಂದ ಅದನ್ನು ಅಲಂಕರಿಸಿದ್ದರು. \q2 \v 11 ಚೀಯೋನಿನ ಪುತ್ರಿಯರೇ, ನೀವು ಹೊರಗೆ ಬನ್ನಿರಿ. \q2 ಅರಸನಾದ ಸೊಲೊಮೋನನನ್ನು ನೋಡಿರಿ. \q2 ಅವನ ಮದುವೆಯ ದಿನದಂದು, \q1 ಅವನ ಹೃದಯ ಸಂತೋಷಗೊಂಡ ದಿನದಲ್ಲಿ, \q2 ಅವನ ತಾಯಿ ಅವನಿಗೆ ತೊಡಿಸಿದ ಕಿರೀಟವನ್ನು ಅವನು ಧರಿಸಿರುವುದನ್ನು ಬಂದು ನೋಡಿರಿ. \c 4 \sp ಪ್ರಿಯಕರ \q1 \v 1 ಇಗೋ, ನನ್ನ ಪ್ರಿಯಳೇ, \q2 ನೀನು ಎಷ್ಟು ಸುಂದರಿ! \q2 ಆಹಾ, ನೀನು ಎಷ್ಟು ಸುಂದರಿಯು. \q1 ನಿನ್ನ ಮುಸುಕಿನೊಳಗಿನ ನಿನ್ನ ಕಣ್ಣುಗಳು ಪಾರಿವಾಳಗಳೇ. \q2 ನಿನ್ನ ತಲೆಕೂದಲು ಗಿಲ್ಯಾದಿನ ಪರ್ವತದಿಂದ ಇಳಿದು ಬರುವ ಮೇಕೆ ಮಂದೆಯ ಹಾಗೆ ಇದೆ. \q1 \v 2 ನಿನ್ನ ಹಲ್ಲುಗಳ ಹೊಳಪು \q2 ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ. \q1 ಅವು ಜೊತೆಯಾಗಿಯೇ ಇರುತ್ತವೆ. \q2 ಅವುಗಳಲ್ಲಿ ಒಂದೂ ಒಂಟಿಯಾಗಿರದು. \q1 \v 3 ನಿನ್ನ ತುಟಿ ಕೆಂಪು ದಾರದ ಹಾಗೆ ಇವೆ. \q2 ನಿನ್ನ ಮಾತು ರಮ್ಯ. \q1 ಮುಸುಕಿನೊಳಗಿನ ನಿನ್ನ ಕೆನ್ನೆ \q2 ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ. \q1 \v 4 ನಿನ್ನ ಕೊರಳು ದಾವೀದನ ಆಯುಧ ಶಾಲೆಗೋಸ್ಕರ \q2 ಕಟ್ಟಿಸಲಾದ ಬುರುಜಿನ ಹಾಗೆ ಇದೆ. \q1 ಅದರಲ್ಲಿ ಶೂರರ ಸಾವಿರ ಗುರಾಣಿಗಳು \q2 ತೂಗುಹಾಕಿ ಇವೆ. \q1 \v 5 ನಿನ್ನ ಎರಡು ಸ್ತನಗಳು \q2 ನೆಲದಾವರೆಯ ನಡುವೆ ಮೇಯುವ \q2 ಹುಲ್ಲೆಯ ಅವಳಿಮರಿಗಳ ಹಾಗಿವೆ. \q1 \v 6 ಹೊತ್ತು ಮೂಡುವವರೆಗೂ \q2 ನೆರಳು ಓಡಿ ಹೋಗುವವರೆಗೂ \q1 ನಾನು ರಕ್ತಬೋಳದ ಪರ್ವತಕ್ಕೂ \q2 ಸಾಂಬ್ರಾಣಿಯ ಗುಡ್ಡಕ್ಕೂ ಹೋಗುವೆನು. \q1 \v 7 ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿ, \q2 ನಿನ್ನಲ್ಲಿ ದೋಷವೇನೂ ಇಲ್ಲ. \b \q1 \v 8 ಬಾ, ವಧುವೇ, ಲೆಬನೋನಿನಿಂದ ಬಾ, \q2 ಲೆಬನೋನಿನಿಂದ ನನ್ನೊಡನೆ ಬಾ. \q1 ಅಮಾನದ ಶಿಖರಗಳಿಂದ, \q2 ಸೆನೀರ್, ಹೆರ್ಮೋನ್ ಶಿಖರಗಳಿಂದ, \q1 ಸಿಂಹದ ಗವಿಗಳಿಂದ, \q2 ಚಿರತೆಗಳ ಪರ್ವತಗಳಿಂದ ಇಳಿದು ಬಾ. \q1 \v 9 ನನ್ನ ಹೃದಯವನ್ನು ನೀನು ಸೆಳಕೊಂಡಿರುವೆ. ನನ್ನ ಪ್ರಿಯಳೇ, ನನ್ನ ವಧುವೇ, \q2 ನೀನು ನಿನ್ನ ಒಂದೇ ಕಿರುನೋಟದಿಂದಲೂ, \q1 ನಿನ್ನ ಕೊರಳಿನ ಒಂದೇ ಕಂಠ ಹಾರದಿಂದಲೂ, \q2 ನನ್ನ ಹೃದಯವನ್ನು ಸೆಳಕೊಂಡಿರುವೆ. \q1 \v 10 ನನ್ನ ಪ್ರಿಯಳೇ, ವಧುವೇ! ನಿನ್ನ ಪ್ರೀತಿಯು ಎಷ್ಟೋ ಚೆಂದ. \q2 ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! \q1 ಎಲ್ಲಾ ಸುಗಂಧಗಳಿಗಿಂತ \q2 ನಿನ್ನ ತೈಲದ ಸುವಾಸನೆಯು ಎಷ್ಟೋ ಉತ್ತಮ! \q1 \v 11 ನನ್ನ ವಧುವೇ, ನಿನ್ನ ತುಟಿಗಳಿಂದ ಜೇನು ಸುರಿಯುತ್ತಿದೆ. \q2 ಹಾಲೂ, ಜೇನೂ ನಿನ್ನ ನಾಲಿಗೆ ಅಡಿಯಲ್ಲಿವೆ. \q1 ನಿನ್ನ ವಸ್ತ್ರಗಳ ಸುವಾಸನೆಯು \q2 ಲೆಬನೋನಿನ ಸುಗಂಧದಂತಿದೆ. \q1 \v 12 ನನ್ನ ಪ್ರಿಯಳೇ, ನನ್ನ ವಧುವೇ, ನೀನು ಭದ್ರ ತೋಟವೂ ಬೇಲಿಯೊಳಗಿನ ಬುಗ್ಗೆಯೂ \q2 ಮುದ್ರಿಸಿದ ಬಾವಿಯೂ ಆಗಿರುವೆ. \q1 \v 13 ನಿನ್ನ ತೋಟದಲ್ಲಿ ದಾಳಿಂಬೆ ವನವೂ \q2 ಫಲಕೊಡುವ ಉತ್ತಮ ಗಿಡಗಳೂ \q2 ಕರ್ಪೂರವೂ ಜಟಾಮಾಂಸಿಯೂ ಇವೆ. \q2 \v 14 ಜಟಾಮಾಂಸಿ ಅಷ್ಟೇ ಅಲ್ಲದೆ ಕೇಸರಿಯೂ \q2 ಬಜೆಯೂ ದಾಲ್ಚಿನ್ನಿಯೂ \q2 ಸಕಲ ಸಾಂಬ್ರಾಣಿ ಗಿಡಮೂಲಿಕೆಗಳೂ \q2 ರಕ್ತಬೋಳವೂ ಅಗರೂ \q2 ಸಕಲವಿಧ ಶ್ರೇಷ್ಠ ಸುಗಂಧ ದ್ರವ್ಯಗಳೂ ಬೆಳೆದಿವೆ. \q1 \v 15 ನೀನು ತೋಟದ ಬುಗ್ಗೆಯೂ \q2 ಉಕ್ಕಿಬರುವ ಒರತೆಯೂ \q2 ಲೆಬನೋನಿನಿಂದ ಹರಿಯುವ ಹೊಳೆಯೂ ಆಗಿರುವೆ. \sp ಪ್ರಿಯತಮೆ \q1 \v 16 ಉತ್ತರಗಾಳಿಯೇ, ಬೀಸು, \q2 ದಕ್ಷಿಣ ಗಾಳಿಯೇ ಬಾ \q1 ನನ್ನ ತೋಟದ ಮೇಲೆ ಬೀಸು. \q2 ಸುಗಂಧ ಸುವಾಸನೆ ಹರಡಲಿ. \q1 ನನ್ನ ಪ್ರಿಯನು ತನ್ನ ತೋಟಕ್ಕೆ ಬಂದು ಉತ್ತಮ ಫಲಗಳನ್ನು ರುಚಿಸಲಿ. \c 5 \sp ಪ್ರಿಯಕರ \q1 \v 1 ನನ್ನ ಪ್ರಿಯಳೇ, ನನ್ನ ವಧುವೇ, ನಾನು ನನ್ನ ತೋಟಕ್ಕೆ ಬಂದಿರುವೆ. \q2 ನನ್ನ ರಕ್ತಬೋಳ ಸುಗಂಧಗಳನ್ನೂ ಕೂಡಿಸಿರುವೆ. \q1 ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ. \q2 ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ. \sp ಸ್ನೇಹಿತರು \q1 ಸ್ನೇಹಿತರೇ, ಊಟಮಾಡಿರಿ, ಕುಡಿಯಿರಿ. \q2 ಹೌದು ಪ್ರಿಯರೇ, ಸಮೃದ್ಧಿಯಾಗಿ ಪಾನಮಾಡಿರಿ. \sp ಪ್ರಿಯತಮೆ \q1 \v 2 ನಾನು ನಿದ್ರಿಸುತ್ತಿದ್ದರೂ, ನನ್ನ ಹೃದಯವು ಎಚ್ಚರವಾಗಿತ್ತು. \q2 ಇಗೋ! ಬಾಗಿಲು ತಟ್ಟುವ ನನ್ನ ಪ್ರಿಯನ ಶಬ್ದವಿದು: \q1 “ನನ್ನ ಪ್ರಿಯಳೇ, ನನ್ನ ವಧುವೇ, \q2 ನನ್ನ ಪಾರಿವಾಳವೇ, ಪರಿಪೂರ್ಣಳೇ, \q1 ಬಾಗಿಲು ತೆಗೆ! ನನ್ನ ತಲೆ ಮಂಜಿನಿಂದ ನೆನೆದಿದೆ. \q2 ನನ್ನ ಕೂದಲು ರಾತ್ರಿಯ ಹನಿಗಳಿಂದ ತೋಯ್ದಿದೆ.” \q1 \v 3 ನಾನು ನನ್ನ ಅಂಗಿಯನ್ನು ತೆಗೆದು ಹಾಕಿರಲು, \q2 ಅದನ್ನು ಮತ್ತೆ ಹಾಕಿಕೊಳ್ಳುವುದು ಹೇಗೆ? \q1 ನಾನು ನನ್ನ ಕಾಲುಗಳನ್ನು ತೊಳೆದುಕೊಂಡಿರಲು, \q2 ನಾನು ಮತ್ತೆ ಅವುಗಳನ್ನು ಕೊಳೆ ಮಾಡುವುದು ಹೇಗೆ? \q1 \v 4 ಅನಂತರ ನನ್ನ ಪ್ರಿಯನು ಬಾಗಿಲ ಸಂದಿನಲ್ಲಿ ತನ್ನ ಕೈ ಹಾಕಿದನು. \q2 ನನ್ನ ಹೃದಯವು ಅವನಿಗಾಗಿ ಮಿಡಿಯಿತು. \q1 \v 5 ನಾನು ನನ್ನ ಪ್ರಿಯನಿಗೆ ಬಾಗಿಲು ತೆರೆಯಲು ಎದ್ದಾಗ, \q2 ಬೀಗದ ಹಿಡಿಗಳ ಮೇಲೆ \q1 ನನ್ನ ಕೈಗಳಿಂದ ರಕ್ತಬೋಳವು ತೊಟ್ಟಿಕ್ಕಿತು. \q2 ನನ್ನ ಬೆರಳುಗಳಿಂದಲೂ ರಕ್ತಬೋಳವು ಸುರಿಯಿತು. \q1 \v 6 ನಾನು ನನ್ನ ಪ್ರಿಯನಿಗೆ ಬಾಗಿಲು ತೆರೆದೆನು. \q2 ಆದರೆ ಅಷ್ಟರಲ್ಲಿ ನನ್ನ ಪ್ರಿಯನು ಹಿಂದಿರುಗಿ ಹೋಗಿಬಿಟ್ಟಿದ್ದನು. \q2 ಅವನು ಹೋಗಿದ್ದರಿಂದ ನನ್ನ ಹೃದಯ ಕುಗ್ಗಿಹೋಯಿತು. \q1 ಅವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ. \q2 ಅವನನ್ನು ಕರೆದೆನು, ಉತ್ತರವೇ ಇಲ್ಲ. \q1 \v 7 ಪಟ್ಟಣದಲ್ಲಿ ಸಂಚರಿಸುವ \q2 ಕಾವಲುಗಾರರು ನನ್ನನ್ನು ಕಂಡುಹಿಡಿದರು. \q1 ನನ್ನನ್ನು ಹೊಡೆದು, ಗಾಯ ಮಾಡಿದರು. \q2 ಗೋಡೆಗಳನ್ನು ಕಾಯುವವರು \q2 ನನ್ನ ಮುಸುಕನ್ನು ಕಸಿದುಕೊಂಡರು. \q1 \v 8 ಯೆರೂಸಲೇಮಿನ ಪುತ್ರಿಯರೇ, ನಿಮಗೆ ಆಣೆಯಿಟ್ಟು ಹೇಳುತ್ತೇನೆ. \q2 ನೀವು ನನ್ನ ಪ್ರಿಯನನ್ನು ಕಂಡರೆ, \q1 ನಾನು ಪ್ರೀತಿಯಿಂದ ಅಸ್ವಸ್ಥಳಾಗಿದ್ದೇನೆಂದು \q2 ಅವನಿಗೆ ತಿಳಿಸಿರಿ. \sp ಸ್ನೇಹಿತರು \q1 \v 9 ಸ್ತ್ರೀಯರಲ್ಲಿ ಅತಿ ಸುಂದರಿಯೇ, \q2 ಬೇರೆಯವರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು? \q1 ನೀನು ನಮಗೆ ಹೀಗೆ ಆಣೆ ಇಡುವುದಕ್ಕೆ ಬೇರೆಯವರ ಪ್ರಿಯರಿಗಿಂತ \q2 ನಿನ್ನ ಪ್ರಿಯನ ವಿಶೇಷವೇನು? \sp ಪ್ರಿಯತಮೆ \q1 \v 10 ನನ್ನ ಪ್ರಿಯನು, ತೇಜೋಮಯನು, ಕೆಂಪೂ ಬಣ್ಣವುಳ್ಳವನು. \q2 ಹತ್ತು ಸಾವಿರ ಜನರಲ್ಲಿ ಶ್ರೇಷ್ಠನು. \q1 \v 11 ಅವನ ತಲೆಯು ಚೊಕ್ಕ ಬಂಗಾರದಂತಿದೆ. \q2 ಅವನ ಗುಂಗುರು ಕೂದಲು \q2 ಕಾಗೆಯಂತೆ ಕಪ್ಪಾಗಿದೆ. \q1 \v 12 ಅವನ ಕಣ್ಣುಗಳು ತುಂಬುತೊರೆಗಳ ಬಳಿ ತಂಗುವ, \q2 ಹಾಲಿನಿಂದ ತೊಳೆದಿರುವ, \q2 ಪಾರಿವಾಳಗಳ ಕಣ್ಣುಗಳಂತಿವೆ. \q1 \v 13 ಅವನ ಕೆನ್ನೆಗಳು \q2 ಸುಗಂಧ ಸಸ್ಯಗಳು ಬೆಳೆಯುವ ದಿಬ್ಬಗಳಂತಿವೆ. \q1 ಅವನ ತುಟಿಗಳು \q2 ಸುಗಂಧ ರಕ್ತಬೋಳವನ್ನು ಸುರಿಸುವ ಕೆಂದಾವರೆಗಳು. \q1 \v 14 ಅವನ ಕೈಗಳು ಗೋಮೇಧಿಕ ರತ್ನದ \q2 ಬಂಗಾರದ ಸಲಾಕೆಗಳಂತಿವೆ. \q1 ಅವನ ದೇಹ ಇಂದ್ರನೀಲಗಳಿಂದ \q2 ಹೊಳೆಯುವ ದಂತದ ಹಾಗೆ ಇದೆ. \q1 \v 15 ಅವನ ಕಾಲುಗಳು ಶುದ್ಧ ಬಂಗಾರದ ಮೇಲೆ \q2 ನಿಂತಿರುವ ಚಂದ್ರಕಾಂತ ಸ್ತಂಭಗಳು. \q1 ಅವನ ತೋರಿಕೆಯು ಲೆಬನೋನಿನ \q2 ದೇವದಾರುಗಳ ಹಾಗೆ ಶ್ರೇಷ್ಠವಾಗಿವೆ. \q1 \v 16 ಅವನ ಬಾಯಿ ಮಾತು ಬಹು ಮಧುರ. \q2 ಹೌದು, ಅವನು ಸರ್ವಾಂಗ ಸುಂದರ. \q1 ಯೆರೂಸಲೇಮಿನ ಪುತ್ರಿಯರೇ, \q2 ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು. \c 6 \sp ಸ್ನೇಹಿತರು \q1 \v 1 ನಿನ್ನ ಪ್ರಿಯನು ಎಲ್ಲಿಗೆ ಹೋದನು? \q2 ಸ್ತ್ರೀಯರಲ್ಲಿ ಅತಿ ಸುಂದರಿಯೇ, \q1 ನಾವು ಅವನನ್ನು ನಿನ್ನ ಸಂಗಡ ಹುಡುಕುವಂತೆ \q2 ನಿನ್ನ ಪ್ರಿಯನು ಯಾವ ಕಡೆಗೆ ಹೋಗಿದ್ದಾನೆ? \sp ಪ್ರಿಯತಮೆ \q1 \v 2 ನನ್ನ ಪ್ರಿಯನು ತೋಟಗಳಲ್ಲಿ ಮಂದೆ ಮೇಯಿಸುವುದಕ್ಕೂ, \q2 ನೆಲದಾವರೆಗಳನ್ನು ಕೊಯ್ದು ತರುವುದಕ್ಕೂ, \q1 ಸುಗಂಧ ಸಸ್ಯಗಳಿರುವ \q2 ಉದ್ಯಾನವನಕ್ಕೆ ಹೋಗಿದ್ದಾನೆ. \q1 \v 3 ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. \q2 ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ. \sp ಪ್ರಿಯಕರ \q1 \v 4 ನನ್ನ ಪ್ರಿಯಳೇ, ನೀನು ತಿರ್ಚ ನಗರದಂತೆ ಸುಂದರಿ, \q2 ಯೆರೂಸಲೇಮಿನ ಹಾಗೆ ರಮ್ಯಳು, \q2 ಧ್ವಜಗಳಿರುವ ದಂಡಿನ ಹಾಗೆ ಗಂಭೀರಳೂ ಆಗಿರುವೆ. \q1 \v 5 ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, \q2 ಏಕೆಂದರೆ ಅವು ನನ್ನನ್ನು ಜಯಿಸಿವೆ. \q1 ನಿನ್ನ ತಲೆಗೂದಲು ಗಿಲ್ಯಾದ್ ಪರ್ವತದಿಂದ ಇಳಿಯುವ \q2 ಮೇಕೆಯ ಮಂದೆಯಂತಿದೆ. \q1 \v 6 ನಿನ್ನ ಹಲ್ಲುಗಳ ಹೊಳಪು \q2 ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ. \q1 ಅವು ಜೊತೆಯಾಗಿಯೇ ಇರುತ್ತವೆ. \q2 ಅವುಗಳಲ್ಲಿ ಒಂದೂ ಒಂಟಿಯಾಗಿರದು. \q1 \v 7 ಮುಸುಕಿನೊಳಗಿನ ನಿನ್ನ ಕೆನ್ನೆ \q2 ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ. \q1 \v 8 ಅರಸನಿಗೆ ಅರವತ್ತು ಮಂದಿ ರಾಣಿಯರೂ \q2 ಎಂಬತ್ತು ಮಂದಿ ಉಪಪತ್ನಿಯರೂ \q2 ಲೆಕ್ಕವಿಲ್ಲದ ಕನ್ಯೆಯರೂ ಇದ್ದಾರೆ. \q1 \v 9 ಆದರೆ ನನಗೆ ನನ್ನ ಪಾರಿವಾಳವು, ನನ್ನ ಪರಿಪೂರ್ಣಳು ಒಬ್ಬಳೇ. \q2 ಇವಳು ತನ್ನ ತಾಯಿಗೆ ಒಬ್ಬಳೇ ಮಗಳು. \q2 ತನ್ನ ಹೆತ್ತವಳಿಗೆ ಪ್ರಿಯಳು. \q1 ಕನ್ನಿಕೆಯರು ಇವಳನ್ನು ಕಂಡು ಆಶೀರ್ವದಿಸಿದರು. \q2 ಹೌದು, ರಾಣಿಯರೂ ಉಪಪತ್ನಿಯರೂ ಇವಳನ್ನು ಹೀಗೆಂದು ಹೊಗಳಿದರು: \sp ಸ್ನೇಹಿತರು \q1 \v 10 ಮೆರವಣೆಗೆಯಲ್ಲಿ ನಕ್ಷತ್ರಗಳ ಹಾಗೆ ಗಂಭೀರಳೂ, \q2 ಚಂದ್ರನ ಹಾಗೆ ಸುಂದರಿಯೂ, ಸೂರ್ಯನ ಹಾಗೆ ಪ್ರಕಾಶಿಸುವವಳೂ \q2 ಆಗಿರುವ ಈ ಉದಯವಂತೆ ಯಾರು? \sp ಪ್ರಿಯಕರ \q1 \v 11 ದ್ರಾಕ್ಷಿಬಳ್ಳಿಯು ಚಿಗುರಿದೆಯೋ, \q2 ದಾಳಿಂಬೆ ಗಿಡ ಹೂಬಿಟ್ಟಿದೆಯೋ ಎಂದು \q1 ಕಣಿವೆಯಲ್ಲಿನ ಫಲಗಳನ್ನು ನೋಡಲು \q2 ನಾನು ಬಾದಾಮಿಯ ತೋಟಕ್ಕೆ ಹೋದೆನು. \q1 \v 12 ನಾನು ಅದನ್ನು ಅರಿತುಕೊಳ್ಳುವ ಮೊದಲು, \q2 ನನ್ನ ಆಸೆ ನನ್ನ ಜನ ಪ್ರಧಾನರ ನಡುವೆ ರಥದ ಮೇಲೆ ಕೂತಿರುವಂತೆ ನನ್ನನ್ನು ನಡೆಸಿತು. \sp ಸ್ನೇಹಿತರು \q1 \v 13 ತಿರುಗಿ ಬಾ, ತಿರುಗಿ ಬಾ, ಶೂಲಮ್ ಊರಿನವಳೇ, \q2 ನಾವು ನಿನ್ನನ್ನು ನೋಡುವಂತೆ ತಿರುಗಿ ಬಾ, ತಿರುಗಿ ಬಾ! \sp ಪ್ರಿಯಕರ \q1 ಎರಡು ಗುಂಪಿನ\f + \fr 6:13 \fr*\fq ಎರಡು ಗುಂಪಿನ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಮಹನಯಿಮ್\fqa*\f* ನರ್ತಕಿಯರ ನಡುವೆ ಕುಣಿಯುತ್ತಿರುವ, \q2 ಶೂಲಮ್ ಊರಿನವಳನ್ನು ನೀವು ನೋಡುವುದೇಕೆ? \b \c 7 \q1 \v 1 ಓ ರಾಜಪುತ್ರಿಯೇ! \q2 ಕೆರಗಳನ್ನು ಮೆಟ್ಟಿರುವ ನಿನ್ನ ಪಾದಗಳು ಎಷ್ಟು ಸುಂದರವಾಗಿವೆ! \q1 ನಿನ್ನ ಅಂದದ ಕಾಲುಗಳು \q2 ಶಿಲ್ಪಿಯ ಕೈಕೆಲಸದ ಆಭರಣಗಳಂತಿವೆ. \q1 \v 2 ನಿನ್ನ ಹೊಕ್ಕಳು ಮಿಶ್ರಪಾನಕ ತುಂಬಿದ \q2 ದುಂಡು ಬಟ್ಟಲಿನ ಹಾಗಿದೆ. \q1 ನಿನ್ನ ಹೊಟ್ಟೆ ನೆಲದಾವರೆಗಳಿಂದ ಸುತ್ತಿಕೊಂಡಿರುವ ಹೂವುಗಳು ಸುತ್ತಿಕೊಂಡಿರುವ \q2 ಗೋಧಿಯ ರಾಶಿಯಾಗಿದೆ. \q1 \v 3 ನಿನ್ನ ಸ್ತನಗಳೆರಡೂ \q2 ಹುಲ್ಲೆಯ ಅವಳಿಮರಿಗಳ ಹಾಗಿವೆ. \q1 \v 4 ನಿನ್ನ ಕೊರಳು ದಂತದ ಗೋಪುರ. \q1 ನಿನ್ನ ಕಣ್ಣುಗಳು ಬತ್ ರಬ್ಬೀಮ್ ಬಾಗಿಲ ಬಳಿಯಲ್ಲಿರುವ \q2 ಹೆಷ್ಬೋನಿನ ಕೊಳಗಳು. \q1 ನಿನ್ನ ಮೂಗು, ದಮಸ್ಕದ ಕಡೆಗಿರುವ \q2 ಲೆಬನೋನಿನ ಗೋಪುರದ ಹಾಗಿದೆ. \q1 \v 5 ನಿನ್ನ ತಲೆಯು ಕರ್ಮೆಲ್ ಬೆಟ್ಟದಂತೆ ವೈಭವ. \q2 ನಿನ್ನ ತಲೆಕೂದಲು ಧೂಮ್ರ ಬಣ್ಣದ ಹಾಗೆ ಇದೆ. \q2 ಹೆಣೆದ ಆ ಜಡೆಯಿಂದ ಅರಸನಿಗೂ ಆಕರ್ಷಣ. \q1 \v 6 ನನ್ನ ಪ್ರೇಮವೇ, ನೀನು ನಿನ್ನ ಹರ್ಷದಿಂದ \q2 ಎಷ್ಟೋ ಸುಂದರಿಯೂ ಎಷ್ಟೋ ಮನೋಹರಳೂ ಆಗಿರುವೆ. \q1 \v 7 ನಿನ್ನ ನೀಳ ಆಕಾರವು ಖರ್ಜೂರ ಮರದಂತಿದೆ. \q2 ನಿನ್ನ ಸ್ತನಗಳು ಅದರ ಗೊಂಚಲುಗಳು. \q1 \v 8 ನಾನು, “ಆ ಖರ್ಜೂರದ ಮರವನ್ನು ಹತ್ತಿ \q2 ಅದರ ಗರಿಗಳನ್ನು ಹಿಡಿಯುವೆ,” ಎಂದುಕೊಂಡೆನು. \q1 ನಿನ್ನ ಸ್ತನಗಳು ದ್ರಾಕ್ಷಿ ಗೊಂಚಲುಗಳಂತಿರಲಿ, \q2 ನಿನ್ನ ಉಸಿರು ಸೇಬು ಹಣ್ಣಿನ ಪರಿಮಳದಂತೆಯೂ ಇರಲಿ. \q2 \v 9 ನಿನ್ನ ಬಾಯಿಯ ಮುದ್ದುಗಳು ಉತ್ತಮ ದ್ರಾಕ್ಷಾರಸದ ಹಾಗಿರಲಿ. \sp ಪ್ರಿಯತಮೆ \q1 ನನ್ನ ಪ್ರಿಯಕರನ ತುಟಿ, ಹಲ್ಲುಗಳಲ್ಲಿ ದ್ರಾಕ್ಷಾರಸವು \q2 ನೇರವಾಗಿ ಹರಿದು ಇಂಪಾಗಿ ರುಚಿಸಲಿ. \q1 \v 10 ನಾನು ನನ್ನ ಪ್ರಿಯನವಳು. \q2 ಅವನ ಆಸೆಯು ನನ್ನ ಕಡೆಗಿರುವುದು. \q1 \v 11 ನನ್ನ ಪ್ರಿಯನೇ, ಬಾ ಹೋಗೋಣ. \q2 ನಾವು ಗ್ರಾಮಗಳಲ್ಲಿ ವಸತಿಯಾಗಿರೋಣ ಬಾ. \q1 \v 12 ನಾವು ಬೆಳಗ್ಗೆ ಹೊರಟು, ದ್ರಾಕ್ಷಿ ತೋಟಗಳಿಗೆ ಹೋಗೋಣ ಬಾ. \q2 ದ್ರಾಕ್ಷಿ ಚಿಗುರಿದೆಯೋ, \q1 ಅದರ ಹೂ ಅರಳಿದೆಯೋ \q2 ದಾಳಿಂಬೆ ಹೂಬಿಟ್ಟಿದೆಯೋ ನೋಡೋಣ ಬಾ. \q2 ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಅರ್ಪಿಸುವೆನು. \q1 \v 13 ನನ್ನ ಪ್ರಿಯನೇ, ಕಾಮಜನಕ ವೃಕ್ಷಗಳು ಪರಿಮಳ ಬೀರುತ್ತಿವೆ. \q2 ನಮ್ಮ ಬಾಗಿಲ ಬಳಿಯಲ್ಲಿ ನಿನಗೋಸ್ಕರ ನಾನು \q1 ರುಚಿಯುಳ್ಳ ಮಾಗಿದ ಹೊಸ ಹಣ್ಣುಗಳನ್ನು ಸಿದ್ಧಪಡಿಸಿದ್ದೇನೆ. \b \c 8 \q1 \v 1 ನೀನು ನನ್ನ ತಾಯಿಯ ಹಾಲು ಕುಡಿದ \q2 ನನ್ನ ಅಣ್ಣನಾಗಿದ್ದರೆ, ಎಷ್ಟೋ ಚೆನ್ನಾಗಿರುತ್ತಿತ್ತು! \q1 ನಾನು ನಿನ್ನನ್ನು ಕಂಡು ಹೊರಗೆಯೇ \q2 ನಿನಗೆ ಮುದ್ದಿಡುತ್ತಿದ್ದೆ. \q2 ಆಗ ಯಾರೂ ನನ್ನನ್ನು ನಿಂದಿಸುತ್ತಿರಲಿಲ್ಲ. \q1 \v 2 ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು. \q2 ಅಲ್ಲಿ ನೀನು ನನಗೆ ಉಪದೇಶ ಮಾಡಬಹುದಾಗಿತ್ತು. \q1 ನಾನು ದ್ರಾಕ್ಷಿ ಮಿಶ್ರಪಾನಕವನ್ನು ಕೊಡುತ್ತಿದ್ದೆನು. \q2 ದಾಳಿಂಬೆ ರಸವನ್ನು ನಿನಗೆ ಕುಡಿಸುತ್ತಿದ್ದೆನು. \q1 \v 3 ನಿನ್ನ ಎಡಗೈ ನನ್ನ ತಲೆದಿಂಬಾಗಿರಲಿ. \q2 ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ. \q1 \v 4 ಯೆರೂಸಲೇಮಿನ ಪುತ್ರಿಯರೇ, \q2 ಮೆಚ್ಚುವ ಕಾಲಕ್ಕೆ ಮುಂಚೆ \q1 ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ, \q2 ಎಚ್ಚರಿಸಲೂ ಬೇಡಿರಿ ಎಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. \sp ಸ್ನೇಹಿತರು \q1 \v 5 ತನ್ನ ಪ್ರಿಯನನ್ನು ಒರಗಿಕೊಂಡು ಅಡವಿಯಿಂದ ಬರುವ \q2 ಇವಳು ಯಾರು? \sp ಪ್ರಿಯತಮೆ \q1 ಸೇಬುಗಿಡದ ಕೆಳಗೆ ನಿನ್ನನ್ನು ಪ್ರೇರಿಸಿದೆನು. \q2 ಅದು ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ ಸ್ಥಳ. \q2 ಅಲ್ಲಿ ನಿನ್ನ ತಾಯಿ ಪ್ರಸವವೇದನೆಯಿಂದ ನಿನ್ನನ್ನು ಹಡೆದಳು. \q1 \v 6 ನನ್ನನ್ನು ನಿನ್ನ ಹೃದಯದ ಮೇಲೆ ಒಂದು ಮುದ್ರೆಯಾಗಿ ಧರಿಸಿಕೋ. \q2 ನಾನು ನಿನ್ನ ಕೈಮೇಲೆ ಒಂದು ಮುದ್ರೆಯಾಗಿರುವೆ. \q1 ಪ್ರೀತಿಯು ಮರಣದಷ್ಟು ಬಲವಾಗಿದೆ. \q2 ಮತ್ಸರವು ಸಮಾಧಿಯಷ್ಟು ಕ್ರೂರ. \q1 ಪ್ರೀತಿಯು ಉರಿಯುವ ಬೆಂಕಿ ಪ್ರಜ್ವಲಿಸುವ \q2 ಜ್ವಾಲೆಯ ಹಾಗಿರುವುದು. \q1 \v 7 ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು. \q2 ಪ್ರವಾಹಗಳು ಸಹ ಪ್ರೀತಿಯನ್ನು ಮುಳುಗಿಸಲಾರವು. \q1 ಒಬ್ಬನು ತನ್ನ ಆಸ್ತಿಯನ್ನೆಲ್ಲಾ \q2 ಪ್ರೀತಿಗೋಸ್ಕರ ಕೊಟ್ಟರೂ, \q2 ಆ ಪ್ರೀತಿಗೆ ಬದಲಾಗಿ ಅಂಥವನಿಗೆ ಸಂಪೂರ್ಣ ನಿಂದೆಯೇ ಸಿಗುವುದು. \sp ಸ್ನೇಹಿತರು \q1 \v 8 ಪ್ರಾಯಕ್ಕೆ ಬಾರದ ತಂಗಿ ಒಬ್ಬಳು ನಮಗಿದ್ದಾಳೆ. \q2 ಅವಳನ್ನು ಮದುವೆಗಾಗಿ ಮಾತಾಡಲು \q2 ಯಾರಾದರೂ ಬಂದರೆ, ನಾವೇನು ಮಾಡೋಣ? \q1 \v 9 ಅವಳು ಗೋಡೆಯಾದರೆ, \q2 ನಾವು ಅವಳ ಮೇಲೆ ಬೆಳ್ಳಿಯ ಗೋಪುರವನ್ನು ಕಟ್ಟುವೆವು. \q1 ಅವಳು ಬಾಗಿಲಾದರೆ, \q2 ದೇವದಾರು ಹಲಿಗೆಗಳಿಂದ ಅವಳನ್ನು ಭದ್ರಪಡಿಸುವೆವು. \sp ಪ್ರಿಯತಮೆ \q1 \v 10 ನಾನು ಗೋಡೆಯಂಥವಳೇ, \q2 ನನ್ನ ಯೌವನವು ಬುರುಜುಗಳು. \q1 ಹೀಗೆ ನಾನು ಅವನ ದೃಷ್ಟಿಯಲ್ಲಿ \q2 ಸಮಾಧಾನ ಹೊಂದುವೆನು. \q1 \v 11 ಸೊಲೊಮೋನನಿಗೆ ಬಾಳ್ ಹಾಮೋನಿನಲ್ಲಿ ಒಂದು ದ್ರಾಕ್ಷಿತೋಟ ಇತ್ತು. \q2 ಅವನು ಆ ದ್ರಾಕ್ಷಿತೋಟವನ್ನು ರೈತರಿಗೆ ಗುತ್ತಿಗೆಗೆ ಕೊಟ್ಟನು. \q1 ಪ್ರತಿಯೊಬ್ಬ ಗುತ್ತಿಗೆಗಾರನು ಅದರ ಫಲದಿಂದ \q2 ಸಾವಿರ ಬೆಳ್ಳಿಯ ನಾಣ್ಯಗಳನ್ನು\f + \fr 8:11 \fr*\ft ಸುಮಾರು 12 ಕಿಲೋಗ್ರಾಂ\ft*\f* ತರಬೇಕಾಗಿತ್ತು. \q1 \v 12 ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯಗಳು ನಿನಗೇ ಇರಲಿ.\f + \fr 8:12 \fr*\ft ಸುಮಾರು 2.3 ಕಿಲೋಗ್ರಾಂ\ft*\f* \q2 ತೋಟದ ಫಲವನ್ನು ಕಾಪಾಡುವವರಿಗೆ ಇನ್ನೂರು ಬೆಳ್ಳಿನಾಣ್ಯಗಳು ಸೇರಲಿ. \q2 ಆದರೆ ನನ್ನ ದ್ರಾಕ್ಷಿತೋಟ ನನಗೇ ಇರಲಿ. \sp ಪ್ರಿಯಕರ \q1 \v 13 ತೋಟಗಳಲ್ಲಿ ವಾಸವಾಗಿರುವಳೇ, \q2 ಸ್ನೇಹಿತರು ನನ್ನ ಸಂಗಡ ಇದ್ದಾರೆ. \q2 ನಾನು ನಿನ್ನ ಧ್ವನಿಯನ್ನು ಕೇಳ ಮಾಡು! \sp ಪ್ರಿಯತಮೆ \q1 \v 14 ನನ್ನ ಪ್ರಿಯನೇ, \q2 ಸುಗಂಧ ಸಸ್ಯ ಪರ್ವತಗಳ ಮೇಲಿರುವ \q1 ಜಿಂಕೆಯಂತೆಯೂ, ಪ್ರಾಯದ ಹುಲ್ಲೆಯಂತೆಯೂ \q2 ನೀನು ಬೇಗ ಬಾ.