\id NAM - Biblica® Open Kannada Contemporary Version \ide UTF-8 \h ನಹೂಮ \toc1 ನಹೂಮ \toc2 ನಹೂಮ \toc3 ನಹೂಮ \mt1 ನಹೂಮ \c 1 \p \v 1 ನಿನೆವೆಯ ವಿಷಯವಾದ ಪ್ರವಾದನೆ: ಎಲ್ಕೋಷಿನವನಾದ ನಹೂಮನ ದರ್ಶನದ ಪುಸ್ತಕವು. \b \s1 ನಿನೆವೆ ಮೇಲೆ ಯೆಹೋವ ದೇವರ ರೌದ್ರ \q1 \v 2 ಯೆಹೋವ ದೇವರು ಅಸೂಯೆಪಡುವ ಮತ್ತು ಸೇಡು ತೀರಿಸಿಕೊಳ್ಳುವ ದೇವರು. \q2 ಅವರು ತಮ್ಮನ್ನು ಎದುರಿಸುವವರನ್ನು ಎದುರಿಸುತ್ತಾರೆ. \q2 ಯೆಹೋವ ದೇವರು ರೋಷದಿಂದ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ. \q1 ಯೆಹೋವ ದೇವರು ತಮ್ಮ ವೈರಿಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, \q2 ತಮ್ಮ ಶತ್ರುಗಳ ಮೇಲೆ ಕೋಪವನ್ನು ಪ್ರಕಟಿಸಿಕೊಳ್ಳುತ್ತಾರೆ. \q1 \v 3 ಯೆಹೋವ ದೇವರು ಕೋಪಗೊಳ್ಳುವುದರಲ್ಲಿ ಶಾಂತಿಸ್ವರೂಪರು. ಆದರೂ ಶಕ್ತಿಯಲ್ಲಿ ಮಹತ್ತಾದವರು. \q2 ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ಶಿಕ್ಷಿಸದೆ ಇರರು. \q1 ಯೆಹೋವ ದೇವರ ಮಾರ್ಗವು ಸುಳಿಗಾಳಿಯಲ್ಲಿಯೂ, ಬಿರುಗಾಳಿಯಲ್ಲಿಯೂ ಇದೆ. \q2 ಮೇಘಗಳು ಅವರ ಕಾಲುಗಳ ಧೂಳೇ. \q1 \v 4 ಅವರು ಸಮುದ್ರವನ್ನು ಗದರಿಸಿ, ಅದನ್ನು ಒಣಗುವಂತೆ ಮಾಡುತ್ತಾರೆ. \q2 ಸಕಲನದಿಗಳನ್ನು ಬತ್ತಿಸುತ್ತಾರೆ. \q1 ಬಾಷಾನು, ಕರ್ಮೆಲು ಬಾಡಿ ಹೋಗುತ್ತವೆ \q2 ಮತ್ತು ಲೆಬನೋನಿನ ಹೂವು ಬಾಡಿ ಹೋಗುತ್ತದೆ. \q1 \v 5 ಬೆಟ್ಟಗಳು ಅವರ ಮುಂದೆ ಕಂಪಿಸುತ್ತವೆ; \q2 ಗುಡ್ಡಗಳು ಕರಗುತ್ತವೆ; \q1 ಭೂಮಿಯೂ, ಲೋಕವೂ, ಅದರ ನಿವಾಸಿಗಳೆಲ್ಲವೂ \q2 ಅವರ ಮುಂದೆ ನಡುಗುತ್ತವೆ. \q1 \v 6 ಅವರ ರೌದ್ರದ ಎದುರಿಗೆ ಯಾರು ನಿಲ್ಲುವರು? \q2 ಅವರ ರೋಷಾಗ್ನಿಯಲ್ಲಿ ಯಾರು ನಿಂತುಕೊಳ್ಳುವರು? \q1 ಅವರ ಕೋಪಾಗ್ನಿ ಬೆಂಕಿಯ ಹಾಗೆ ಸುರಿಸಲಾಗಿದೆ; \q2 ಬಂಡೆಗಳು ಆತನ ಮುಂದೆ ಕೆಡವಲಾಗಿವೆ. \b \q1 \v 7 ಯೆಹೋವ ದೇವರು ಒಳ್ಳೆಯವರು. \q2 ಇಕ್ಕಟ್ಟಿನ ದಿವಸದಲ್ಲಿ ಆಶ್ರಯದಾತರಾಗಿದ್ದಾರೆ. \q1 ತಮ್ಮಲ್ಲಿ ನಂಬಿಕೆ ಇಡುವವರನ್ನು ಅವರು ಪರಿಪಾಲಿಸುತ್ತಾರೆ. \q2 \v 8 ಆದರೆ ಮೇರೆ ಮೀರುವ ಪ್ರಳಯದಿಂದ \q1 ನಿನೆವೆಯನ್ನು ಮುಗಿಸಿಬಿಡುವರು. \q2 ಕತ್ತಲೆ ಅವರ ಶತ್ರಗಳನ್ನು ಹಿಂದಟ್ಟುವುದು. \b \q1 \v 9 ಯೆಹೋವ ದೇವರಿಗೆ ವಿರೋಧವಾಗಿ ಅವರು ಏನೇನು ಯೋಚಿಸಿರುವರೋ, \q2 ಅದನ್ನು ಅವರು ಅಂತ್ಯಗೊಳಿಸುವರು. \q2 ತೊಂದರೆಯು ಎರಡು ಸಾರಿ ಏಳದು. \q1 \v 10 ಅವರು ಮುಳ್ಳುಗಳಲ್ಲಿ ಸಿಕ್ಕಿಕೊಳ್ಳುವರು, \q2 ತಮ್ಮ ದ್ರಾಕ್ಷಾರಸದಿಂದ ಮತ್ತರಾಗುವರು. \q2 ಪೂರ್ಣವಾಗಿ ಒಣಗಿದ ಕೂಳೆಯಂತೆ ಅವರು ಸುಟ್ಟು ಹೋಗುವರು. \q1 \v 11 ನಿನೆವೆಯೇ ಯೆಹೋವ ದೇವರಿಗೆ \q2 ವಿರೋಧವಾಗಿ ದುರಾಲೋಚನೆ ಮಾಡಿ, \q2 ಕೇಡನ್ನು ಯೋಚಿಸುವವನು ನಿನ್ನೊಳಗಿಂದ ಹೊರಟಿದ್ದಾನೆ. \p \v 12 ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 ಅವರೊಂದಿಗೆ ಒಪ್ಪಂದ ಮಾಡಿಕೊಂಡವರಿದ್ದರೂ, \q2 ಅವರು ಬಹುಮಂದಿಯಾಗಿದ್ದರೂ ನಾಶಕ್ಕೆ ಒಳಗಾಗುವರು. \q1 ಯೆಹೂದವೇ, ನಾನು ನಿನ್ನನ್ನು ಕಷ್ಟಪಡಿಸಿದಾಗ್ಯೂ, \q2 ಇನ್ನು ಮೇಲೆ ಕಷ್ಟಪಡಿಸೆನು. \q1 \v 13 ನಾನು ಈಗ ನಿನ್ನ ಮೇಲಿನ ಅವರ ನೊಗವನ್ನು ಮುರಿದು, \q2 ನಿನ್ನ ಬಂಧನಗಳನ್ನು ಹರಿದುಬಿಡುವೆನು. \b \q1 \v 14 ನಿನೆವೆಯೇ, ನಿನ್ನ ವಿಷಯವಾಗಿ ಯೆಹೋವ ದೇವರು ಆಜ್ಞಾಪಿಸುವುದೇನೆಂದರೆ: \q2 ಹೆಸರೆತ್ತಲು ನಿನಗೆ ಸಂತಾನವಿಲ್ಲದಂತೆ ಮಾಡುವೆನು. \q1 ನಿನ್ನ ದೇವರ ಮಂದಿರದಲ್ಲಿರುವ ಕೆತ್ತಿದ ವಿಗ್ರಹವನ್ನೂ, \q2 ಎರಕ ಬೊಂಬೆಯನ್ನೂ ನಾಶಮಾಡುವೆನು. \q1 ನೀನು ತುಚ್ಛನಾದದ್ದರಿಂದ \q2 ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು. \b \q1 \v 15 ಇಗೋ, ಪರ್ವತಗಳ ಮೇಲೆ ಶುಭಸಮಾಚಾರವನ್ನು ತಂದು, \q2 ಸಮಾಧಾನವನ್ನು ತಿಳಿಸುವವನ ಪಾದಗಳನ್ನು ನೋಡು. \q1 ಯೆಹೂದವೇ, ನಿನ್ನ ಪರಿಶುದ್ಧ ಹಬ್ಬಗಳನ್ನು ನಡೆಸು, \q2 ನಿನ್ನ ಹರಕೆಗಳನ್ನು ಸಲ್ಲಿಸು. \q1 ಏಕೆಂದರೆ ಇನ್ನು ಮೇಲೆ ದುಷ್ಟರು ನಿನ್ನ ಮೇಲೆ ಮುತ್ತಿಗೆ ಹಾಕರು. \q2 ಅವರು ಸಂಪೂರ್ಣವಾಗಿ ನಾಶವಾಗುವರು. \c 2 \s1 ನಿನೆವೆಯು ಬೀಳುವುದು \q1 \v 1 ನಿನೆವೆಯೇ, ಮುತ್ತಿಗೆ ಹಾಕುವವನು ನಿನಗೆ ವಿರೋಧವಾಗಿ ಹೊರಟಿದ್ದಾನೆ, \q2 ಕೋಟೆಯನ್ನು ಭದ್ರಪಡಿಸು; \q2 ದಾರಿಯನ್ನು ಕಾಯಿ; \q2 ನಡುವನ್ನು ಬಲಪಡಿಸಿಕೋ; \q2 ನಿನ್ನ ಶಕ್ತಿಯನ್ನು ಬಲವಾಗಿ ಗಟ್ಟಿಮಾಡಿಕೋ. \b \q1 \v 2 ಯೆಹೋವ ದೇವರು ಯಾಕೋಬಿನ ಹೆಚ್ಚಳವನ್ನು \q2 ಇಸ್ರಾಯೇಲಿನ ಹೆಚ್ಚಳದ ಹಾಗೆಯೇ ಪುನಃ ಸ್ಥಾಪಿಸುತ್ತಾರೆ. \q1 ನಾಶಕರು ಅವುಗಳನ್ನು ನಾಶಮಾಡಿದರೂ \q2 ಅವರ ದ್ರಾಕ್ಷಿಬಳ್ಳಿಗಳನ್ನು ಕೆಡಿಸಿದ್ದಾರೆ. \b \q1 \v 3 ಸೈನಿಕರ ಗುರಾಣಿಗಳು ಕೆಂಪಾಗಿವೆ; \q2 ಯುದ್ಧವೀರರು ರಕ್ತವರ್ಣದ ಬಟ್ಟೆ ಧರಿಸಿದ್ದಾರೆ; \q1 ಆತನು ಸಿದ್ಧಮಾಡುವ ದಿವಸದಲ್ಲಿ, \q2 ರಥಗಳ ಉಕ್ಕು ಥಳಥಳಿಸುವುದು, \q2 ತುರಾಯಿ ಮರದಿಂದ ಮಾಡಿದ ಈಟಿಗಳು ಝಳಪಿಸುವುವು; \q1 \v 4 ರಥಗಳು ಬೀದಿಗಳಲ್ಲಿ ಬಿರುಗಾಳಿಯಂತೆ ಓಡಾಡುತ್ತವೆ, \q2 ಅವು ಚೌಕಗಳಲ್ಲಿ ವೇಗವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ನುಗ್ಗುತ್ತವೆ. \q1 ಅವು ಉರಿಯುವ ಪಂಜುಗಳಂತೆ ಕಾಣುತ್ತವೆ; \q2 ಅವರು ಮಿಂಚಿನಂತೆ ಸುತ್ತಾಡುತ್ತಾರೆ. \b \q1 \v 5 ನಿನೆವೆಯು ತನ್ನ ಸೇನಾಪತಿಗಳನ್ನು ಕರೆಕಳುಹಿಸಿದ್ದಾನೆ. \q2 ಅವರು ತಮ್ಮ ನಡೆಯಲ್ಲಿ ಎಡವುವರು. \q1 ಅವರು ಸುಣ್ಣದ ಗೋಡೆಯ ಬಳಿಗೆ ತ್ವರೆಯಾಗಿ ಬರುವರು. \q2 ರಕ್ಷಣಾತ್ಮಕ ಗುರಾಣಿಯನ್ನು ಸಿದ್ಧ ಮಾಡಲಾಗಿದೆ. \q1 \v 6 ನದಿಗಳ ಬಾಗಿಲುಗಳು ತೆರೆಯಲಾಗಿವೆ; \q2 ಅರಮನೆ ಬಿದ್ದುಹೋಗುವುದು. \q1 \v 7 ನಿನೆವೆಯು ಸೆರೆಯಾಗಿ \q2 ಹೋಗಬೇಕೆಂಬ ಆಜ್ಞೆಯಾಗಿದೆ. \q1 ಅವಳ ದಾಸಿಯರು ಪಾರಿವಾಳಗಳಂತೆ ರೋದಿಸುವರು, \q2 ತಮ್ಮ ಎದೆಗಳನ್ನು ಬಡಿದುಕೊಳ್ಳುವರು. \q1 \v 8 ನಿನೆವೆ ಹುಟ್ಟಿದಂದಿನಿಂದ ನೀರಿನ ಕೆರೆಯ ಹಾಗಿತ್ತು. \q2 ಅದರ ನೀರು ಹರಿದು ಖಾಲಿಯಾಗುತ್ತಲಿದೆ. \q1 “ನಿಲ್ಲಿರಿ! ನಿಲ್ಲಿರಿ!” ಎಂದು ಅವರು ಕೂಗಿದರೂ, \q2 ಒಬ್ಬನೂ ಹಿಂದಕ್ಕೆ ನೋಡುವುದಿಲ್ಲ. \q1 \v 9 ಬೆಳ್ಳಿಯನ್ನು ಸುಲಿದುಕೊಳ್ಳಿರಿ; \q2 ಬಂಗಾರವನ್ನು ಸುಲಿದುಕೊಳ್ಳಿರಿ. \q1 ಕೂಡಿಸಿಟ್ಟ ಧನಕ್ಕೂ, \q2 ಸಕಲ ವಿಧವಾದ ಶ್ರೇಷ್ಠ ವಸ್ತುಗಳ ನಿಧಿಗೂ ಪಾರವೇ ಇಲ್ಲ. \q1 \v 10 ನಿನೆವೆ ಬರಿದಾಗಿದೆ, ಸುಲಿಗೆಯಾಗಿದೆ, ಹಾಳುಬಿದ್ದಿದೆ, \q2 ಹೃದಯಗಳು ಕರಗುತ್ತವೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. \q2 ಎಲ್ಲರ ಸೊಂಟಗಳಲ್ಲಿ ಸಂಕಟವಿದೆ; ಎಲ್ಲಾ ಮುಖಗಳು ಕಳೆಗುಂದುತ್ತವೆ. \b \q1 \v 11 ಸಿಂಹದ ಗವಿಯೂ, \q2 ಎಳೆಯ ಸಿಂಹಗಳು ಮೇಯುವ ಸ್ಥಳವೂ ಎಲ್ಲಿ? \q1 ಸಿಂಹವೂ, ಸಿಂಹಿಣಿಯೂ, \q2 ಸಿಂಹದ ಮರಿಗಳೂ ಭಯವಿಲ್ಲದೆ ನಡೆದಾಡುವ ಸ್ಥಳಗಳೆಲ್ಲಿ? \q1 \v 12 ಸಿಂಹವು, ತನ್ನ ಮರಿಗಳಿಗೆ, \q2 ಸಿಂಹಿಣಿಗಳಿಗೆ, ಕೊರಳು ಹಿಸುಕಿ ಕೊಂದ ಪ್ರಾಣಿಗಳಿಂದ \q2 ತನ್ನ ಗುಹೆಯನ್ನು ತುಂಬಿಸುತ್ತಿತ್ತು. \b \q1 \v 13 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: \q2 “ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ. \q1 ನಿನ್ನ ರಥಗಳನ್ನು ಹೊಗೆಯಾಗಲು ಸುಡುತ್ತೇನೆ. \q2 ಖಡ್ಗವು ನಿನ್ನ ಎಳೆಯ ಸಿಂಹಗಳನ್ನು ನುಂಗಿಬಿಡುವುದು. \q2 ನಿನಗೆ ಸಿಕ್ಕಿದ ಬೇಟೆಯನ್ನು ಭೂಮಿಯ ಮೇಲಿನಿಂದ ತೆಗೆದುಬಿಡುತ್ತೇನೆ. \q1 ನಿನ್ನ ರಾಯಭಾರಿಗಳ ಧ್ವನಿಯು \q2 ಇನ್ನು ಕೇಳಿಸದು.” \c 3 \s1 ನಿನೆವೆಗೆ ಕಷ್ಟ \q1 \v 1 ರಕ್ತಮಯ ಪಟ್ಟಣಕ್ಕೆ ಕಷ್ಟ, \q2 ಅದೆಲ್ಲಾ ಸುಳ್ಳಿನಿಂದಲೂ, \q1 ಕಳ್ಳತನದಿಂದಲೂ ತುಂಬಿದೆ, \q2 ಕೊಳ್ಳೆಯನ್ನೂ ಬಿಡುವುದಿಲ್ಲ. \q1 \v 2 ಚಾವಟಿಗೆ, ಚಬುಕಿನ ಶಬ್ದವೂ, \q2 ಚಕ್ರಗಳ ಧಡಧಡನೆಯ ಶಬ್ದವೂ, \q1 ಕುದುರೆಗಳ ಕುಣಿದಾಟವೂ, \q2 ರಥಗಳ ಹಾರಾಟವೂ ಇದೆ. \q1 \v 3 ಸವಾರರು ಹತ್ತುತ್ತಾರೆ, \q2 ಈಟಿಗಳು ಥಳಥಳಿಸುತ್ತವೆ, \q2 ಖಡ್ಗಗಳು ಮಿಂಚುತ್ತವೆ, \q1 ಹತರಾದವರು ಬಹಳ; \q2 ಹೆಣಗಳ ರಾಶಿ; \q1 ಅಸಂಖ್ಯಾತ ಮೃತ ದೇಹಗಳು, \q2 ಶವಗಳ ಮೇಲೆ ತತ್ತರಿಸುತ್ತಿರುವ ಜನರು, \q1 \v 4 ಇದೆಲ್ಲವೂ ಆ ಒಬ್ಬ ವೇಶ್ಯೆಯ ಕಾಮತೃಷೆಯಿಂದಾಗಿ, \q2 ವೇಶ್ಯೆಯು ಲೆಕ್ಕವಿಲ್ಲದ ವೇಶ್ಯಾವಾಟಿಕೆಯ ಬಹಳ. \q1 ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ, \q2 ತನ್ನ ಮಾಟಗಳಿಂದ ಗೋತ್ರಗಳನ್ನೂ ಗುಲಾಮರನ್ನಾಗಿ ಮಾಡಿಕೊಂಡಳಲ್ಲವೇ? \b \q1 \v 5 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, \q2 “ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ. \q2 ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲಿಂದ ಎತ್ತಿ, \q1 ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ, \q2 ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ. \q1 \v 6 ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ, \q2 ನಿನ್ನನ್ನು ನೀಚಳನ್ನಾಗಿ ಮಾಡಿ, \q2 ನಿನ್ನನ್ನು ಪರಿಹಾಸ್ಯಕ್ಕೀಡುಮಾಡುವೆನು. \q1 \v 7 ನಿನ್ನನ್ನು ನೋಡುವವರೆಲ್ಲರೂ ನಿನ್ನಿಂದ ಓಡಿಹೋಗಿ ಹೀಗೆ ಹೇಳುವರು, \q2 ‘ನಿನೆವೆ ಹಾಳಾಯಿತು, ಅದಕ್ಕೆ ಯಾರು ಚಿಂತೆಪಡುವರು?’ \q2 ನಿನ್ನನ್ನು ಆದರಿಸುವವರನ್ನು ನಾನು ಎಲ್ಲಿಂದ ಹುಡುಕಲಿ.” \b \q1 \v 8 ನೈಲ್ ನದಿಯ ಬಳಿ ನೆಲೆಯಾಗಿದ್ದ ತೆಬೆಸ್ಸಿಗಿಂತ \q2 ನೀನು ಒಳ್ಳೆಯವಳೋ? \q2 ಅವಳ ಸುತ್ತಲೂ ನೀರಿತ್ತು. \q1 ನದಿ ಅವಳ ರಕ್ಷಣೆ, \q2 ನೀರು ಅವಳ ಗೋಡೆ. \q1 \v 9 ಕೂಷ್ ಮತ್ತು ಈಜಿಪ್ಟ್ ಅವಳ ಅಪಾರ ಬಲವಾಗಿದ್ದವು. \q2 ಪೂಟರೂ, ಲಿಬಿಯದವರೂ ಅವಳ ಸಹಾಯಕರಾಗಿದ್ದರು. \q1 \v 10 ಆದರೆ ಅವಳು ಸೆರೆಯಾಗಿ \q2 ದೇಶಾಂತರಕ್ಕೆ ಹೋದಳು. \q1 ಅವಳ ಕೂಸುಗಳು ಸಹ \q2 ಎಲ್ಲಾ ಬೀದಿಗಳ ಮುಖ್ಯ ಸ್ಥಳಗಳಲ್ಲಿ ಅಪ್ಪಳಿಸಲಾಯಿತು. \q1 ಅವಳ ಪ್ರಧಾನರಿಗೋಸ್ಕರ ಚೀಟುಹಾಕಿದರು. \q2 ಅವಳ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಕಟ್ಟಿದರು. \q1 \v 11 ನೀನೂ ಸಹ ಅಮಲೇರಿ ಅಡಗಿಕೊಳ್ಳುವೆ; \q2 ನೀನೂ ಸಹ ಶತ್ರುವಿನ ನಿಮಿತ್ತ \q2 ಅಡಗಿಕೊಳ್ಳಲು ಆಶ್ರಯ ಸ್ಥಾನವನ್ನು ಹುಡುಕುವೆ. \b \q1 \v 12 ನಿನ್ನ ಕೋಟೆಗಳೆಲ್ಲಾ ಮೊದಲನೆಯ ಮಾಗಿದ ಹಣ್ಣುಳ್ಳ \q2 ಅಂಜೂರದ ಗಿಡಗಳ ಹಾಗಿರುವುವು. \q1 ಅಲ್ಲಾಡಿಸಿದರೆ ಹಣ್ಣು \q2 ತಿನ್ನುವವನ ಬಾಯಿಗೆ ಬೀಳುವುದು. \q1 \v 13 ಇಗೋ, ನಿನ್ನ ಸೈನ್ಯಗಳನ್ನು ನೋಡು. \q2 ಅವರೆಲ್ಲರೂ ಮಹಿಳೆಯರೇ. \q1 ನಿನ್ನ ದೇಶದ ಬಾಗಿಲುಗಳು \q2 ನಿನ್ನ ಶತ್ರುಗಳಿಗೆ ವಿಶಾಲವಾಗಿ ತೆರೆದಿವೆ. \q2 ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಟ್ಟಿದೆ. \b \q1 \v 14 ಮುತ್ತಿಗೆಗೋಸ್ಕರ ನೀರನ್ನು ಸೇದು; \q2 ನಿನ್ನ ಬಲವಾದ ಕೋಟೆಗಳನ್ನು ಭದ್ರಮಾಡು; ಕೆಸರಿನಲ್ಲಿ ಸೇರು; \q1 ಮಣ್ಣನ್ನು ತುಳಿ; \q2 ಇಟ್ಟಿಗೆ ಅಚ್ಚನ್ನು ಹಿಡಿ. \q1 \v 15 ಅಲ್ಲೇ ಬೆಂಕಿ ನಿನ್ನನ್ನು ತಿನ್ನುವುದು; \q2 ಖಡ್ಗವು ನಿನ್ನನ್ನು ಕಡಿದುಬಿಡುವುದು; \q2 ಹುಲ್ಲು ಮೇಯುವ ಹುಳ ನಿನ್ನನ್ನು ತಿಂದುಬಿಡುವುದು; \q1 ಬಹುಮಂದಿಯಾಗು, ಮಿಡತೆಗಳಂತೆ \q2 ಬಹುಮಂದಿಯಾಗು, ಗುಂಪು ಮಿಡತೆಗಳಂತೆ \q1 \v 16 ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ \q2 ಹೆಚ್ಚಾಗಿ ಸಂಖ್ಯೆಯಲ್ಲಿ ಬೆಳೆಸಿದ್ದೀ. \q1 ಆದರೆ ಅವರು ಮಿಡತೆಗಳಂತೆ ದೇಶವನ್ನು \q2 ಸುಲಿದುಕೊಂಡು ಹಾರಿಹೋಗುವರು. \q1 \v 17 ನಿನ್ನ ಕಾವಲುಗಾರರು ಮಿಡತೆಗಳ ಹಾಗೆಯೂ, \q2 ನಿನ್ನ ಅಧಿಪತಿಗಳು ತಂಪಾದ ದಿವಸದಲ್ಲಿ ಬೇಲಿಗಳೊಳಗೆ \q2 ಇಳಿದುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ. \q1 ಸೂರ್ಯೋದಯವಾಗುವಾಗ ಹಾರಿ ಹೋಗುತ್ತವೆ. \q2 ಆಗ ಅವು ಎಲ್ಲಿದ್ದಾವೆಂದು ಅವುಗಳ ಸ್ಥಳವು ತಿಳಿಯುವುದಿಲ್ಲ. \b \q1 \v 18 ಅಸ್ಸೀರಿಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ. \q2 ನಿನ್ನ ಪ್ರಧಾನರು ವಿಶ್ರಾಂತಿಗೈಯುತ್ತಿದ್ದಾರೆ. \q1 ಕೂಡಿಸುವವರು ಯಾರೂ ಇಲ್ಲದಂತೆ \q2 ನಿನ್ನ ಜನರೆಲ್ಲರೂ ಬೆಟ್ಟಗಳಲ್ಲಿ ಚದರಿಹೋಗಿದ್ದಾರೆ. \q1 \v 19 ನಿನ್ನ ಗಾಯಕ್ಕೆ ಮದ್ದಿಲ್ಲ, \q2 ನಿನ್ನ ಗಾಯ ಪ್ರಾಣನಾಶಕ. \q1 ನಿನ್ನ ಸುದ್ದಿಯನ್ನು ಕೇಳುವವರೆಲ್ಲರೂ \q2 ನಿನ್ನ ಪತನಕ್ಕಾಗಿ ಕೈ ತಟ್ಟುವರು. \q1 ಏಕೆಂದರೆ ನಿನ್ನ ಕೆಡುಕಿಗೆ \q2 ನಿತ್ಯವೂ ಗುರಿಯಾಗದವರು ಯಾರಿದ್ದಾರೆ?