\id LUK - Biblica® Open Kannada Contemporary Version \ide UTF-8 \h ಲೂಕ \toc1 ಲೂಕನು ಬರೆದ ಸುವಾರ್ತೆ \toc2 ಲೂಕ \toc3 ಲೂಕ \mt1 ಲೂಕನು \mt2 ಬರೆದ ಸುವಾರ್ತೆ \c 1 \s1 ಪೀಠಿಕೆ \p \v 1 ಸನ್ಮಾನ್ಯ ಥೆಯೊಫಿಲರೇ, ನಮ್ಮ ಮಧ್ಯದಲ್ಲಿ ನಡೆದಿರುವ ಘಟನೆಗಳ ವರದಿಯನ್ನು ಬರೆದಿಡಲು ಅನೇಕರು ಪ್ರಯತ್ನಿಸಿದ್ದಾರೆ. \v 2 ಮೊದಲಿನಿಂದ ಕಣ್ಣಾರೆ ಕಂಡವರೂ ದೇವರ ವಾಕ್ಯದ ಸೇವಕರೂ ನಮಗೆ ಕೊಟ್ಟಿರುವ ರೀತಿಯಲ್ಲಿಯೇ ಬರೆದಿದ್ದಾರೆ. \v 3 ಆದ್ದರಿಂದ ನಾನು ಸಹ ಮೊದಲಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೋಧಿಸಿ, ಅವುಗಳನ್ನು ಕ್ರಮವಾಗಿ ನಿಮಗೆ ಬರೆಯುವುದು ಒಳ್ಳೆಯದೆಂದು ನನಗೆ ತೋಚಿತು. \v 4 ಹೀಗೆ ನಿಮಗೆ ಬೋಧಿಸಿರುವ ವಿಷಯಗಳು ಖಚಿತವೆಂದು ನಿಮಗೆ ತಿಳಿದುಬರುವುದು. \s1 ಸ್ನಾನಿಕ ಯೋಹಾನನ ಜನನವನ್ನು ಮುಂತಿಳಿಸಿದ್ದು \p \v 5 ಯೂದಾಯದ ಅರಸನಾಗಿದ್ದ ಹೆರೋದನ ದಿನಗಳಲ್ಲಿ, ಅಬೀಯನ ವರ್ಗಕ್ಕೆ\f + \fr 1:5 \fr*\ft 24 ಯಾಜಕ ವರ್ಗದಲ್ಲಿ ಅಬೀಯನ ವರ್ಗವು ಒಂದಾಗಿತ್ತು. ಅಬೀಯನು ಎಂಟನೆಯ ವರ್ಗದ ಮುಖ್ಯಸ್ಥನಾಗಿದ್ದನು \+xt 1 ಪೂರ್ವ 24:7-18\+xt*\ft*\f* ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಹೆಂಡತಿಯ ಹೆಸರು ಎಲಿಸಬೇತ್. ಇವಳು ಆರೋನನ ವಂಶದವಳು. \v 6 ಇವರಿಬ್ಬರೂ ಕರ್ತದೇವರ ಎಲ್ಲಾ ಆಜ್ಞೆಗಳನ್ನೂ ತೀರ್ಪುಗಳನ್ನೂ ತಪ್ಪಿಲ್ಲದೆ ಕೈಕೊಂಡು, ದೇವರ ಮುಂದೆ ನೀತಿವಂತರಾಗಿದ್ದರು. \v 7 ಆದರೆ ಎಲಿಸಬೇತಳು ಬಂಜೆಯಾದುದರಿಂದ ಅವರಿಗೆ ಮಕ್ಕಳಿರಲಿಲ್ಲ, ಇದಲ್ಲದೆ ಅವರಿಬ್ಬರೂ ಬಹಳ ವಯಸ್ಸಾದವರಾಗಿದ್ದರು. \p \v 8 ಹೀಗಿರಲಾಗಿ ಜಕರೀಯನು ತನ್ನ ವರ್ಗದ ಸರದಿಯ ಪ್ರಕಾರ ದೇವರ ಮುಂದೆ ಯಾಜಕ ಸೇವೆಯನ್ನು ಮಾಡುತ್ತಿದ್ದಾಗ, \v 9 ಯಾಜಕೋದ್ಯೋಗದ ಪದ್ಧತಿಯಂತೆ, ಅವನು ಕರ್ತದೇವರ ಆಲಯವನ್ನು ಪ್ರವೇಶಿಸಿ ಧೂಪವನ್ನು ಅರ್ಪಿಸುವದಕ್ಕೆ ಚೀಟು ಹಾಕಿದಾಗ, ಅದು ಅವನ ಪಾಲಿಗೆ ಬಿದ್ದಿತು. \v 10 ಧೂಪಾರ್ಪಣೆಯ ಸಮಯದಲ್ಲಿ ಸೇರಿದ ಜನರೆಲ್ಲರೂ ಹೊರಗೆ ಪ್ರಾರ್ಥಿಸುತ್ತಿದ್ದರು. \p \v 11 ಆಗ ಧೂಪವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ, ಕರ್ತದೇವರ ದೂತನು ಅವನಿಗೆ ಕಾಣಿಸಿಕೊಂಡನು. \v 12 ಜಕರೀಯನು ದೂತನನ್ನು ಕಂಡು, ಚಕಿತಗೊಂಡು ಭಯಭ್ರಾಂತನಾದನು. \v 13 ಆದರೆ ದೂತನು ಅವನಿಗೆ, “ಜಕರೀಯನೇ; ಭಯಪಡಬೇಡ, ದೇವರು ನಿನ್ನ ವಿಜ್ಞಾಪನೆಯನ್ನು ಕೇಳಿದ್ದಾರೆ. ನಿನ್ನ ಹೆಂಡತಿ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು, ನೀನು ಅವನಿಗೆ, ‘ಯೋಹಾನ’\f + \fr 1:13 \fr*\fq ಯೋಹಾನ \fq*\ft ಅಂದರೆ, \ft*\fqa ದೇವರ ದಯೆಯುಳ್ಳವನು\fqa*\f* ಎಂದು ಹೆಸರನ್ನಿಡಬೇಕು. \v 14 ಅನೇಕರು ಅವನ ಜನನಕ್ಕೆ ಸಂತೋಷಪಡುವರು, ನಿನಗೆ ಆನಂದವೂ ಉಲ್ಲಾಸವೂ ಆಗುವುದು, \v 15 ಅವನು ಕರ್ತದೇವರ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಕುಡಿಯುವುದಿಲ್ಲ, ಅವನು ತಾಯಿಯ ಗರ್ಭದಿಂದಲೇ ಪವಿತ್ರಾತ್ಮ ಭರಿತನಾಗಿರುವನು. \v 16 ಅವನು ಇಸ್ರಾಯೇಲರಲ್ಲಿ ಅನೇಕರನ್ನು ಅವರ ಕರ್ತದೇವರ ಕಡೆಗೆ ತಿರುಗಿಸುವನು. \v 17 ಅವನು ತಂದೆಯರ ಹೃದಯಗಳನ್ನು ಮಕ್ಕಳ ಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತ ದೇವರಿಗೋಸ್ಕರ ಜನರನ್ನು ಸಿದ್ಧಮಾಡುವುದಕ್ಕೆ ಎಲೀಯನ ಆತ್ಮದಿಂದಲೂ ಶಕ್ತಿಯಿಂದಲೂ ಕರ್ತದೇವರ ಮುಂದೆ ಹೋಗುವನು,” ಎಂದು ಹೇಳಿದನು. \p \v 18 ಜಕರೀಯನು ಆ ದೇವದೂತನಿಗೆ, “ಇದನ್ನು ನಾನು ಯಾವುದರಿಂದ ತಿಳಿದುಕೊಳ್ಳಲಿ? ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯ ಮೀರಿದವಳು,” ಎಂದನು. \p \v 19 ಅದಕ್ಕೆ ಆ ದೂತನು ಉತ್ತರವಾಗಿ, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು. ನಿನ್ನ ಸಂಗಡ ಮಾತನಾಡುವುದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾರೆ. \v 20 ಸಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದಕಾರಣ, ಈ ಸಂಗತಿಗಳು ಈಡೇರುವ ದಿನದವರೆಗೆ ನೀನು ಮಾತನಾಡಲಾರದೆ ಮೂಕನಾಗಿರುವಿ,” ಎಂದನು. \p \v 21 ಆಗ, ಜಕರೀಯನಿಗಾಗಿ ಕಾದುಕೊಂಡಿದ್ದ ಜನರು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು. \v 22 ಜಕರೀಯನು ಹೊರಗೆ ಬಂದಾಗ, ಅವರೊಂದಿಗೆ ಏನೂ ಮಾತನಾಡಲಾಗಲಿಲ್ಲ. ಅವನು ಅವರಿಗೆ ಸನ್ನೆಮಾಡುತ್ತಾ ಮೂಕನಾಗಿಯೇ ಇದ್ದುದರಿಂದ, ಅವರು ದೇವಾಲಯದಲ್ಲಿ ಅವನಿಗೆ ಏನೋ ದರ್ಶನವಾಗಿರಬೇಕೆಂದು ಗ್ರಹಿಸಿದರು. \p \v 23 ತನ್ನ ಸೇವೆಯ ದಿನಗಳು ಮುಗಿದ ನಂತರ, ಜಕರೀಯನು ತನ್ನ ಮನೆಗೆ ಹೊರಟುಹೋದನು. \v 24 ಕೆಲವು ದಿನಗಳಾದ ಮೇಲೆ, ಅವನ ಹೆಂಡತಿ ಎಲಿಸಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು. \v 25 ಅವಳು, “ಜನರಲ್ಲಿ ನನಗಿದ್ದ ಅವಮಾನವನ್ನು ತೆಗೆದುಹಾಕುವುದಕ್ಕಾಗಿ ಕರ್ತದೇವರು ನನ್ನ ಮೇಲೆ ದಯೆತೋರಿಸಿ ಈ ದಿನಗಳಲ್ಲಿ ನನಗೆ ಹೀಗೆ ಮಾಡಿದ್ದಾರೆ,” ಎಂದು ಹೇಳಿದಳು. \s1 ದೇವದೂತನು ಯೇಸುವಿನ ಜನನವನ್ನು ಮುಂತಿಳಿಸಿದ್ದು \p \v 26 ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ಗಲಿಲಾಯ ಪ್ರಾಂತದ ನಜರೇತೆಂಬ ಊರಿಗೆ, ದೇವರು ಗಬ್ರಿಯೇಲನೆಂಬ ದೇವದೂತನನ್ನು, \v 27 ದಾವೀದನ ವಂಶದ ಯೋಸೇಫನಿಗೆ, ನಿಶ್ಚಯವಾಗಿದ್ದ ಮರಿಯಳೆಂಬ ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದರು. \v 28 ಆ ದೇವದೂತನು ಆಕೆಗೆ, “ಅತ್ಯಂತ ದಯೆ ಹೊಂದಿದವಳೇ! ನಿನಗೆ ಶುಭವಾಗಲಿ, ಪ್ರಭುವು ನಿನ್ನೊಂದಿಗಿದ್ದಾರೆ,” ಎಂದು ಹೇಳಿದನು. \p \v 29 ಮರಿಯಳು ದೇವದೂತನ ಮಾತಿಗೆ ಬಹಳವಾಗಿ ಕಳವಳಗೊಂಡು, “ಇದು ಎಂಥಾ ಶುಭಾಶಯ?” ಎಂದು ತನ್ನ ಮನದಲ್ಲಿ ಯೋಚಿಸತೊಡಗಿದಳು. \v 30 ಆ ದೇವದೂತನು ಆಕೆಗೆ, “ಮರಿಯಳೇ, ಹೆದರಬೇಡ. ನೀನು ದೇವರ ದಯೆಯನ್ನು ಹೊಂದಿರುವಿ. \v 31 ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವೆ, ಅವರಿಗೆ ‘ಯೇಸು’\f + \fr 1:31 \fr*\fq ಯೇಸು \fq*\ft ಅಂದರೆ, \ft*\fqa ಪ್ರಭುವು ರಕ್ಷಿಸುವನು\fqa*\f* ಎಂದು ಹೆಸರಿಡಬೇಕು. \v 32 ಅವರು ದೊಡ್ಡವರಾಗಿ ಮಹೋನ್ನತರ ಪುತ್ರ ಎಂದು ಎನಿಸಿಕೊಳ್ಳುವರು. ಕರ್ತದೇವರು ಅವರ ತಂದೆ ದಾವೀದನ ಸಿಂಹಾಸನವನ್ನು ಅವರಿಗೆ ಕೊಡುವರು. \v 33 ಅವರು ಯಾಕೋಬನ ವಂಶವನ್ನು ಸದಾಕಾಲ ಆಳುವರು; ಅವರ ರಾಜ್ಯಕ್ಕೆ ಅಂತ್ಯವೇ ಇರುವುದಿಲ್ಲ,” ಎಂದು ಹೇಳಿದನು. \p \v 34 ಮರಿಯಳು ಆ ದೇವದೂತನಿಗೆ, “ಇದು ಹೇಗಾಗುವುದು, ನಾನು ಕನ್ಯೆ?” ಎಂದಳು. \p \v 35 ಆ ದೇವದೂತನು ಉತ್ತರವಾಗಿ ಮರಿಯಳಿಗೆ, “ಪವಿತ್ರಾತ್ಮ ನಿನ್ನ ಮೇಲೆ ಬರಲು, ಮಹೋನ್ನತ ದೇವರ ಶಕ್ತಿಯು ನಿನ್ನನ್ನು ಆವರಿಸುವುದು. ಆದ್ದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರ ಶಿಶುವು ದೇವರ ಪುತ್ರ ಎನಿಸಿಕೊಳ್ಳುವುದು. \v 36 ನಿನ್ನ ಬಂಧು ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಒಬ್ಬ ಮಗನನ್ನು ಹೆರಲಿದ್ದಾಳೆ. ಬಂಜೆಯಾಗಿದ್ದ ಆಕೆಗೆ ಇದು ಆರನೆಯ ತಿಂಗಳು. \v 37 ದೇವರಿಂದ ಬರುವ ಯಾವ ತಕ್ಕ ಮಾತು ಎಂದಿಗೂ ಅಸಾಧ್ಯವಾಗಿರುವುದಿಲ್ಲ,” ಎಂದು ಹೇಳಿದನು. \p \v 38 ಮರಿಯಳು, “ಇಗೋ ನಾನು ಕರ್ತದೇವರ ದಾಸಿ, ನಿನ್ನ ತಕ್ಕ ಮಾತಿನಂತೆ ನನಗಾಗಲಿ,” ಎಂದಳು. ಆಗ ದೇವದೂತನು ಆಕೆಯ ಬಳಿಯಿಂದ ಹೊರಟುಹೋದನು. \s1 ಮರಿಯಳು ಎಲಿಸಬೇತಳನ್ನು ಸಂಧಿಸಿದ್ದು \p \v 39 ಆ ಕಾಲದಲ್ಲಿ ಮರಿಯಳು ಬೆಟ್ಟದ ಸೀಮೆಯ ಯೆಹೂದದಲ್ಲಿರುವ ಒಂದು ಊರಿಗೆ ಅವಸರವಾಗಿ ಹೊರಡಲು ಸಿದ್ಧಳಾದಳು. \v 40 ಅಲ್ಲಿ ಜಕರೀಯನ ಮನೆಯನ್ನು ಪ್ರವೇಶಿಸಿ, ಎಲಿಸಬೇತಳನ್ನು ವಂದಿಸಿದಳು. \v 41 ಮರಿಯಳ ವಂದನೆಯನ್ನು ಕೇಳಿದಾಗ, ಎಲಿಸಬೇತಳ ಗರ್ಭದಲ್ಲಿದ್ದ ಕೂಸು ನಲಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮ ಭರಿತಳಾಗಿ \v 42 ಮಹಾಧ್ವನಿಯಿಂದ: “ಸ್ತ್ರೀಯರಲ್ಲಿ ನೀನು ಧನ್ಯಳೇ, ನಿನ್ನಲ್ಲಿ ಹುಟ್ಟುವ ಶಿಶುವೂ ಆಶೀರ್ವಾದ ಹೊಂದಿದ್ದು! \v 43 ನನ್ನ ಕರ್ತದೇವರ ತಾಯಿಯು, ನನ್ನ ಬಳಿಗೆ ಬರುವಷ್ಟು ನಾನು ದಯೆ ಹೊಂದಿದ್ದು ಏಕೆ? \v 44 ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿಗಳಲ್ಲಿ ಬಿದ್ದ ಕೂಡಲೇ, ಶಿಶುವು ನನ್ನ ಗರ್ಭದಲ್ಲಿ ಉಲ್ಲಾಸದಿಂದ ನಲಿದಾಡಿತು. \v 45 ಕರ್ತದೇವರು ತಮಗೆ ಹೇಳಿದವುಗಳು ನೆರವೇರುವುವು ಎಂದು ನಂಬಿದವಳು ಧನ್ಯಳು,” ಎಂದು ಹೇಳಿದಳು. \s1 ಮರಿಯಳ ಹಾಡು \p \v 46 ಆಗ ಮರಿಯಳು ಹೀಗೆ ಹೇಳಿದ್ದು: \q1 “ನನ್ನ ಪ್ರಾಣವು ಕರ್ತದೇವರನ್ನು ಸ್ತುತಿಸುತ್ತದೆ, \q2 \v 47 ನನ್ನ ಆತ್ಮವು ನನ್ನ ರಕ್ಷಕ ದೇವರಲ್ಲಿ ಉಲ್ಲಾಸಗೊಂಡಿದೆ. \q1 \v 48 ದೇವರು ತಮ್ಮ ದಾಸಿಯ \q2 ದೀನಸ್ಥಿತಿಯನ್ನು ಲಕ್ಷಿಸಿದ್ದಾರೆ. \q1 ಇಂದಿನಿಂದ ತಲತಲಾಂತರದವರೆಲ್ಲರೂ ನನ್ನನ್ನು ಧನ್ಯಳೆಂದು ಕರೆಯುವರು, \q2 \v 49 ಪರಾಕ್ರಮಿಯಾದ ದೇವರು ನನಗೆ ಮಹಾಕಾರ್ಯಗಳನ್ನು ಮಾಡಿದ್ದಾರೆ, \q2 ಅವರ ಹೆಸರು ಪವಿತ್ರವಾದದ್ದು. \q1 \v 50 ದೇವರಲ್ಲಿ ಭಯಭಕ್ತಿಯುಳ್ಳವರ ಮೇಲೆ, \q2 ಅವರ ಕರುಣೆಯು ತಲತಲಾಂತರಗಳಿಗೂ ಇರುವುದು. \q1 \v 51 ದೇವರು ತಮ್ಮ ಭುಜಪರಾಕ್ರಮವನ್ನು ಮಾಡಿ; \q2 ಹೃದಯದ ಯೋಚನೆಯಲ್ಲಿ ಗರ್ವಿಷ್ಠರಾದವರನ್ನು ಚದರಿಸಿಬಿಟ್ಟಿದ್ದಾರೆ. \q1 \v 52 ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗೆ ದಬ್ಬಿ, \q2 ದೀನರನ್ನು ಮೇಲಕ್ಕೆ ಎತ್ತಿದ್ದಾರೆ. \q1 \v 53 ಹಸಿದವರನ್ನು ಒಳ್ಳೆಯವುಗಳಿಂದ ತುಂಬಿಸಿ, \q2 ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾರೆ. \q1 \v 54-55 ನಮ್ಮ ಪಿತೃಗಳಾದ \q2 ಅಬ್ರಹಾಮನಿಗೂ ಅವನ ಸಂತತಿಗೂ \q1 ತಾವು ವಾಗ್ದಾನಮಾಡಿದ ತಮ್ಮ ನಿತ್ಯ ಕರುಣೆಯನ್ನು \q2 ಜ್ಞಾಪಕಮಾಡಿಕೊಂಡು, ತಮ್ಮ ಸೇವಕನಾದ ಇಸ್ರಾಯೇಲನಿಗೆ, ದೇವರು ಸಹಾಯ ಮಾಡಿದ್ದಾರೆ.” \p \v 56 ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಜೊತೆಯಲ್ಲಿದ್ದು, ಅನಂತರ ತನ್ನ ಮನೆಗೆ ಹಿಂತಿರುಗಿ ಹೋದಳು. \s1 ಸ್ನಾನಿಕ ಯೋಹಾನನ ಜನನ \p \v 57 ಎಲಿಸಬೇತಳಿಗೆ ಹೆರಿಗೆಯ ಕಾಲ ಬಂದಾಗ, ಆಕೆಯು ಒಬ್ಬ ಮಗನನ್ನು ಹೆತ್ತಳು. \v 58 ಕರ್ತದೇವರು ತಮ್ಮ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಯವರೂ ಬಂಧುಗಳೂ ಕೇಳಿ, ಆಕೆಯ ಕೂಡ ಸಂತೋಷಪಟ್ಟರು. \p \v 59 ಅವರು ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡಿಸುವುದಕ್ಕಾಗಿ ಬಂದು, ಅವನ ತಂದೆಯ ಹೆಸರಿನಂತೆ ಮಗನನ್ನು ಜಕರೀಯನೆಂದು ನಾಮಕರಣ ಮಾಡಲಿದ್ದರು. \v 60 ಆದರೆ ಅದಕ್ಕೆ ಶಿಶುವಿನ ತಾಯಿಯು ಉತ್ತರವಾಗಿ, “ಹಾಗಲ್ಲ! ಅವನಿಗೆ ‘ಯೋಹಾನ’ ಎಂದು ಹೆಸರಿಡಬೇಕು,” ಎಂದಳು. \p \v 61 ಬಂದಿದ್ದವರು ಆಕೆಗೆ, “ನಿನ್ನ ಬಂಧುಬಳಗದವರಲ್ಲಿ ಆ ಹೆಸರಿನವರು ಒಬ್ಬರೂ ಇಲ್ಲವಲ್ಲಾ,” ಎಂದರು. \p \v 62 ಶಿಶುವನ್ನು ಯಾವ ಹೆಸರಿನಿಂದ ಕರೆಯಬೇಕೆಂದು, ಅವನ ತಂದೆಗೆ ಅವರು ಸನ್ನೆಮಾಡಿದರು. \v 63 ಆಗ ಜಕರೀಯನು ಒಂದು ಬರೆಯುವ ಹಲಗೆಯನ್ನು ಕೇಳಿ, “ಶಿಶುವಿನ ಹೆಸರು ಯೋಹಾನ,” ಎಂದು ಬರೆದನು. ಆಗ ಅವರೆಲ್ಲರೂ ಆಶ್ಚರ್ಯಪಟ್ಟರು. \v 64 ಕೂಡಲೇ ಜಕರೀಯನಿಗೆ ಮಾತು ಬಂತು, ಅವನ ನಾಲಿಗೆಯು ಸಡಿಲವಾಯಿತು, ಅವನು ಮಾತನಾಡಿ, ದೇವರನ್ನು ಕೊಂಡಾಡಿದನು. \v 65 ಈ ಘಟನೆಯಿಂದ ಸುತ್ತಲೂ ವಾಸಮಾಡುತ್ತಿದ್ದವರೆಲ್ಲರಿಗೆ ಭಯವುಂಟಾಯಿತು, ಯೂದಾಯದ ಬೆಟ್ಟದ ಪ್ರಾಂತದಲ್ಲೆಲ್ಲಾ ಈ ಸಂಗತಿಗಳನ್ನು ಮಾತನಾಡಿಕೊಳ್ಳುತ್ತಿದ್ದರು. \v 66 ಕೇಳಿದವರೆಲ್ಲರೂ ವಿಸ್ಮಯಗೊಂಡು, “ಈ ಮಗುವು ಎಂಥವನಾಗುವನೋ?” ಎಂದು ತಮ್ಮ ಮನಸ್ಸಿನಲ್ಲಿ ಪ್ರಶ್ನಿಸಿಕೊಂಡರು. ಕರ್ತದೇವರ ಹಸ್ತವು ಈ ಮಗುವಿನ ಮೇಲೆ ಇತ್ತು. \s1 ಜಕರೀಯನ ಹಾಡು \p \v 67 ಆಗ ಮಗುವಿನ ತಂದೆ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು: \q1 \v 68 “ಇಸ್ರಾಯೇಲಿನ ಕರ್ತದೇವರಿಗೆ ಸ್ತೋತ್ರವಾಗಲಿ, \q2 ದೇವರು ತಮ್ಮ ಜನರನ್ನು ಸಂಧಿಸಿ ಅವರನ್ನು ವಿಮೋಚಿಸಿದ್ದಾರೆ. \q1 \v 69-70 ಪುರಾತನದಿಂದ ಅವರು ತಮ್ಮ \q2 ಪವಿತ್ರ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ, \q1 ದೇವರು ತಮ್ಮ ಸೇವಕ ದಾವೀದನ ಮನೆತನದಿಂದ, \q2 ನಮಗಾಗಿ ಬಲವಾದ ರಕ್ಷಣೆಯ\f + \fr 1:69-70 \fr*\ft ಮೂಲಭಾಷೆಯಲ್ಲಿ ರಕ್ಷಣೆಯ ಕೊಂಬು. ಕೊಂಬು ಇದು ಬಲವಾದ ರಾಜನ ಪ್ರತೀಕವಾಗಿದೆ\ft*\f* ಕರ್ತದೇವರನ್ನು ಎಬ್ಬಿಸಿದ್ದಾರೆ. \q1 \v 71 ಇದನ್ನು, ನಾವು ನಮ್ಮ ಶತ್ರುಗಳಿಂದಲೂ \q2 ನಮ್ಮನ್ನು ದ್ವೇಷಮಾಡುವವರ ಕೈಯಿಂದಲೂ ರಕ್ಷಣೆ ಹೊಂದುವಂತೆಯೂ \q1 \v 72-73 ನಮ್ಮ ಪಿತೃಗಳಿಗೆ ಕರುಣೆ ತೋರಿಸುವಂತೆಯೂ \q2 ನಮ್ಮ ಪಿತೃವಾದ ಅಬ್ರಹಾಮನಿಗೆ \q2 ಆಣೆಯಿಟ್ಟು ಪ್ರಮಾಣ ಮಾಡಿದಂತೆಯೂ \q2 ತಮ್ಮ ಪವಿತ್ರ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡವನಾಗಿಯೂ \q1 \v 74 ನಾವು ನಮ್ಮ ಶತ್ರುಗಳ ಕೈಯಿಂದ ಬಿಡುಗಡೆಹೊಂದಿ ನಿರ್ಭಯವುಳ್ಳವರಾಗಿಯೂ \q1 \v 75 ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ದೇವರ ಮುಂದೆ ಪವಿತ್ರತೆಯಿಂದಲೂ ನೀತಿಯಿಂದಲೂ \q2 ಅವರನ್ನೇ ಸೇವಿಸುವವರಾಗುವಂತೆಯೂ ಈ ಪ್ರಕಾರ ಮಾಡಿದ್ದಾರೆ. \b \b \q1 \v 76 “ನನ್ನ ಮಗುವೇ, ನೀನಾದರೋ ಮಹೋನ್ನತರ ಪ್ರವಾದಿ ಎಂದು ಎನಿಸಿಕೊಳ್ಳುವೆ. \q2 ಯಾಕೆಂದರೆ, ನೀನು ಕರ್ತದೇವರ ಮಾರ್ಗಗಳನ್ನು ಸಿದ್ಧಮಾಡುವುದಕ್ಕೆ, ಅವರ ಮುಂದೆ ಹೋಗುವೆ. \q1 \v 77 ನೀನು ಜನರ ಪಾಪಕ್ಷಮಾಪಣೆಯ ಮೂಲಕ \q2 ರಕ್ಷಣೆ ಹೊಂದುವ ತಿಳುವಳಿಕೆಯನ್ನು ಕೊಡುವೆ, \q1 \v 78 ನಮ್ಮ ದೇವರ ಮಮತೆಯ ಕರುಣೆಯಿಂದಲೇ, \q2 ಸ್ವರ್ಗದಿಂದ ನಮಗೆ ಅರುಣೋದಯವು ಉಂಟಾಗಿ \q1 \v 79 ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ \q2 ವಾಸಿಸುವವರಿಗೆ ಪ್ರಕಾಶಿಸಿ, \q1 ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವಂತೆ ಮಾಡುವೆ.” \p \v 80 ಆ ಶಿಶುವಾದ ಯೋಹಾನನು ಬೆಳೆದು, ಆತ್ಮದಲ್ಲಿ ಬಲಗೊಂಡು; ತನ್ನನ್ನು ಇಸ್ರಾಯೇಲರಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು. \c 2 \s1 ಕ್ರಿಸ್ತ ಯೇಸುವಿನ ಜನನವು \p \v 1 ಆ ದಿನಗಳಲ್ಲಿ ಇಡೀ ರೋಮನ್ ರಾಜ್ಯದಲ್ಲಿ ಜನಗಣತಿಯಾಗಬೇಕೆಂದು ಕೈಸರ್ ಔಗುಸ್ತನಿಂದ ಶಾಸನವು ಹೊರಟಿತು. \v 2 ಕುರೇನ್ಯನು ಸಿರಿಯ ಪ್ರಾಂತಕ್ಕೆ ಅಧಿಪತಿಯಾಗಿದ್ದಾಗ, ಈ ಜನಗಣತಿಯು ಮೊದಲನೆಯ ಸಾರಿ ನಡೆಯಿತು. \v 3 ಆಗ ಎಲ್ಲರೂ ತಮ್ಮ ಹೆಸರುಗಳನ್ನು ದಾಖಲೆ ಮಾಡಿಸಿಕೊಳ್ಳುವುದಕ್ಕಾಗಿ ತಮ್ಮ ತಮ್ಮ ಸ್ವಂತ ಪಟ್ಟಣಗಳಿಗೆ ಹೋದರು. \p \v 4 ಯೋಸೇಫನು ದಾವೀದನ ಕುಟುಂಬದವನೂ ವಂಶದವನೂ ಆಗಿದ್ದರಿಂದ, ಅವನು ಸಹ ಗಲಿಲಾಯ ಪ್ರಾಂತದ ನಜರೇತೆಂಬ ಪಟ್ಟಣದಿಂದ ಯೂದಾಯ ಪ್ರಾಂತದ ಬೇತ್ಲೆಹೇಮ್ ಎಂಬ ದಾವೀದನ ಪಟ್ಟಣಕ್ಕೆ ಹೋದನು. \v 5 ಅವನು ತನಗೆ ನಿಶ್ಚಯಿಸಿದ್ದ ಮತ್ತು ಪೂರ್ಣ ಗರ್ಭಿಣಿಯಾಗಿದ್ದ ಮರಿಯಳೊಂದಿಗೆ ಜನಗಣತಿಯ ದಾಖಲೆ ಮಾಡಿಸಿಕೊಳ್ಳುವುದಕ್ಕಾಗಿ ಹೋದನು. \v 6 ಅವರು ಬೇತ್ಲೆಹೇಮಿನಲ್ಲಿ ಇದ್ದಾಗ, ಆಕೆಗೆ ಹೆರಿಗೆಯ ಕಾಲ ಸಮೀಪಿಸಿತು. \v 7 ಮರಿಯಳು ತನ್ನ ಚೊಚ್ಚಲು ಮಗನನ್ನು ಹೆತ್ತು, ಬಟ್ಟೆಗಳಿಂದ ಸುತ್ತಿ, ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಶಿಶುವನ್ನು ದನದ ಕೊಟ್ಟಿಗೆಯಲ್ಲಿ ಮಲಗಿಸಿದಳು. \p \v 8 ಅದೇ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದು, ರಾತ್ರಿಯಲ್ಲಿ ತಮ್ಮ ಹಿಂಡನ್ನು ಕಾಯುತ್ತಿದ್ದರು. \v 9 ಆಗ ಕರ್ತದೇವರ ದೂತನು ಅವರಿಗೆ ಪ್ರತ್ಯಕ್ಷನಾದನು. ಕರ್ತದೇವರ ಮಹಿಮೆಯು ಅವರ ಸುತ್ತಲೂ ಪ್ರಕಾಶಿಸಿತು, ಅವರು ಬಹಳವಾಗಿ ಹೆದರಿದರು. \v 10 ಆ ದೂತನು ಅವರಿಗೆ, “ಹೆದರಬೇಡಿರಿ. ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಶುಭಸಮಾಚಾರವನ್ನು ನಾನು ನಿಮಗೆ ತಿಳಿಸುತ್ತೇನೆ. \v 11 ಅದೇನೆಂದರೆ, ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕರು ಹುಟ್ಟಿದ್ದಾರೆ. ಅವರು ಯಾರೆಂದರೆ ಕರ್ತದೇವರು ಆಗಿರುವ ಕ್ರಿಸ್ತ. \v 12 ಅಲ್ಲಿ ಬಟ್ಟೆಯಿಂದ ಸುತ್ತಿರುವ ಶಿಶುವು ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ಇದೇ ನಿಮಗೆ ಗುರುತು,” ಎಂದು ಹೇಳಿದನು. \p \v 13 ತಕ್ಷಣವೇ ಆ ದೂತನ ಸಂಗಡ ಇದ್ದ ಪರಲೋಕ ಸೈನ್ಯದ ಸಮೂಹವು ದೇವರನ್ನು ಕೊಂಡಾಡುತ್ತಾ ಹೀಗೆ ಹೇಳಿದರು: \q1 \v 14 “ಮಹೋನ್ನತದಲ್ಲಿ ದೇವರಿಗೆ ಮಹಿಮೆ, \q2 ಭೂಲೋಕದಲ್ಲಿ ದೇವರ ಮೆಚ್ಚುಗೆ, ಮಾನವರಿಗೆ ಸಮಾಧಾನ.” \p \v 15 ದೇವದೂತರು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು, “ದೇವರು ನಮಗೆ ತಿಳಿಯಪಡಿಸಿದ ಈ ಸಂಗತಿಯನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. \p \v 16 ಅವರು ಅವಸರದಿಂದ ಹೋಗಿ ಮರಿಯಳನ್ನೂ ಯೋಸೇಫನನ್ನೂ ಕೊಟ್ಟಿಗೆಯಲ್ಲಿ ಮಲಗಿದ್ದ ಶಿಶುವನ್ನು ಕಂಡರು. \v 17 ಅನಂತರ, ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ದೇವದೂತನ ಮಾತನ್ನು ಪ್ರಕಟಮಾಡಿದರು. \v 18 ಕುರುಬರು ಹೇಳಿದ ವಿಷಯಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. \v 19 ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಆಲೋಚಿಸುತ್ತಿದ್ದಳು. \v 20 ತಮಗೆ ತಿಳಿಸಿದ ಪ್ರಕಾರವೇ ಕುರುಬರು ತಾವು ಕೇಳಿ, ಕಂಡ ಎಲ್ಲಾ ವಿಷಯಗಳಿಗಾಗಿ ದೇವರನ್ನು ಮಹಿಮೆಪಡಿಸುತ್ತಾ, ಕೊಂಡಾಡುತ್ತಾ ಹಿಂದಿರುಗಿ ಹೋದರು. \p \v 21 ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದಂತೆ “ಯೇಸು” ಎಂದು ನಾಮಕರಣ ಮಾಡಿದರು. \s1 ಯೇಸುವನ್ನು ದೇವಾಲಯದಲ್ಲಿ ಸಮರ್ಪಿಸಿದ್ದು \p \v 22 ಮೋಶೆಯ ನಿಯಮದ ಪ್ರಕಾರ ಮರಿಯಳಿಗೆ ಶುದ್ಧೀಕರಣದ\f + \fr 2:22 \fr*\ft \+xt ಯಾಜಕ 12:1-8\+xt*\ft*\f* ದಿವಸಗಳು ಮುಗಿದ ಮೇಲೆ, ಯೋಸೇಫನು ಮತ್ತು ಮರಿಯಳು ಶಿಶುವನ್ನು ಕರ್ತದೇವರಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತಂದರು. \v 23 ಕರ್ತದೇವರ ನಿಯಮದಲ್ಲಿ ಬರೆದಿರುವಂತೆ, “ಪ್ರತಿಯೊಂದು ಚೊಚ್ಚಲ ಗಂಡು ಮಗು ಕರ್ತದೇವರಿಗೆ ಪವಿತ್ರವಾಗಿ ಸಮರ್ಪಿಸಬೇಕು,”\f + \fr 2:23 \fr*\ft \+xt ವಿಮೋ 13:2,12\+xt*\ft*\f* \v 24 ಎಂತಲೂ, “ಒಂದು ಜೊತೆ ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ಬಲಿ ಅರ್ಪಿಸಬೇಕು,”\f + \fr 2:24 \fr*\ft \+xt ಯಾಜಕ 12:8\+xt*\ft*\f* ಎಂತಲೂ ಕರ್ತದೇವರ ನಿಯಮದಲ್ಲಿ ಹೇಳಿರುವ ಪ್ರಕಾರ ಅವರು ಸಮರ್ಪಿಸಿದರು. \p \v 25 ಆಗ ಸಿಮೆಯೋನನೆಂಬ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಅವನು ನೀತಿವಂತನೂ ಭಕ್ತನೂ ಆಗಿದ್ದನು. ಅವನು ಇಸ್ರಾಯೇಲರನ್ನು ಸಂತೈಸುವ ಒಬ್ಬರ ಬರುವಿಕೆಗಾಗಿ ಕಾಯುತ್ತಿದ್ದನು. ಪವಿತ್ರಾತ್ಮ ದೇವರ ಪ್ರಸನ್ನತೆ ಅವನ ಮೇಲಿತ್ತು. \v 26 ಇದಲ್ಲದೆ, ಅವನು ಕರ್ತದೇವರು ಕಳುಹಿಸಲಿರುವ ಕ್ರಿಸ್ತನನ್ನು\f + \fr 2:26 \fr*\fq ಕ್ರಿಸ್ತ \fq*\ft ಯೆಹೂದ್ಯರು ನಿರೀಕ್ಷಿಸುತ್ತಿದ್ದ \ft*\fqa ವಿಮೋಚಕನು\fqa*\f* ಕಾಣುವುದಕ್ಕಿಂತ ಮುಂಚೆ ಮರಣ ಹೊಂದುವುದಿಲ್ಲವೆಂದು ಪವಿತ್ರಾತ್ಮನಿಂದ ಅವನಿಗೆ ಪ್ರಕಟನೆಯಾಗಿತ್ತು. \v 27 ಅವನು ಪವಿತ್ರಾತ್ಮ ಪ್ರೇರಣೆಯಿಂದ ದೇವಾಲಯದ ಅಂಗಳದೊಳಗೆ ಬಂದನು, ಆಗ ನಿಯಮವನ್ನು ಪೂರೈಸಲು ತಂದೆತಾಯಿಗಳು ಶಿಶು ಯೇಸುವನ್ನು ಒಳಗೆ ತಂದರು. \v 28 ಆಗ ಸಿಮೆಯೋನನು ಶಿಶುವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದೇವರನ್ನು ಕೊಂಡಾಡುತ್ತಾ ಹೀಗೆಂದನು: \q1 \v 29 “ಸರ್ವೇಶ್ವರರಾದ ಕರ್ತದೇವರೇ, ನಿಮ್ಮ ವಾಗ್ದಾನದ ಪ್ರಕಾರ, \q2 ನಿಮ್ಮ ದಾಸನನ್ನು ಸಮಾಧಾನದಿಂದ ಈಗ ಕಳುಹಿಸಿರಿ. \q1 \v 30 ನನ್ನ ಕಣ್ಣುಗಳು ನಿಮ್ಮ ರಕ್ಷಣೆಯನ್ನು ಕಂಡವು, \q2 \v 31 ಈ ರಕ್ಷಣೆಯನ್ನು ನೀವು ಎಲ್ಲಾ ಜನಗಳ ಮುಂದೆ ಸಿದ್ಧಪಡಿಸಿದ್ದೀರಿ: \q1 \v 32 ಅದು ಯೆಹೂದ್ಯರಲ್ಲದವರಿಗೆ ಪ್ರಕಟಣೆಯ ಬೆಳಕೂ, \q2 ನಿಮ್ಮ ಪ್ರಜೆಯಾದ ಇಸ್ರಾಯೇಲರ ಮಹಿಮೆಯೂ ಆಗಿದೆ.” \p \v 33 ಶಿಶುವಿನ ವಿಷಯವಾಗಿ ಸಿಮೆಯೋನನು ಹೇಳಿದ ಮಾತುಗಳಿಗೆ ಶಿಶುವಿನ ತಂದೆತಾಯಿಗಳು ಆಶ್ಚರ್ಯಪಟ್ಟರು. \v 34 ಅನಂತರ ಸಿಮೆಯೋನನು ಅವರನ್ನು ಆಶೀರ್ವದಿಸಿ, ಶಿಶುವಿನ ತಾಯಿ ಮರಿಯಳಿಗೆ, “ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವುದಕ್ಕೂ ಏಳುವುದಕ್ಕೂ ಈ ಮಗು ನೇಮಕವಾಗಿದೆ, ಜನರು ಎದುರು ಮಾತನಾಡುವುದಕ್ಕೆ ಈ ಮಗು ಗುರುತಾಗಿರುವದು. \v 35 ಹೀಗೆ ಅನೇಕ ಹೃದಯಗಳ ಆಲೋಚನೆಗಳು ಪ್ರಕಟವಾಗುವವು. ನಿನ್ನ ಸ್ವಂತ ಪ್ರಾಣವನ್ನು ಸಹ ಖಡ್ಗವು ತಿವಿಯುವುದು” ಎಂದನು. \p \v 36 ಅಲ್ಲಿ ಆಶೇರನ ಗೋತ್ರದ ಫನೂಯೇಲನ ಮಗಳಾದ ಅನ್ನಳೆಂಬ ಒಬ್ಬ ಬಹು ಮುಪ್ಪಿನ ಪ್ರವಾದಿನಿಯಿದ್ದಳು. ಅವಳು ಮದುವೆಯಾಗಿ ಗಂಡನೊಂದಿಗೆ ಏಳು ವರ್ಷ ಬಾಳಿದ್ದಳು. \v 37 ಅವಳು ಎಂಬತ್ತನಾಲ್ಕು ವರ್ಷ ವಿಧವೆಯಾಗಿದ್ದು, ದೇವಾಲಯವನ್ನು ಬಿಟ್ಟುಹೋಗದೆ ಉಪವಾಸಗಳಿಂದಲೂ ಪ್ರಾರ್ಥನೆಗಳಿಂದಲೂ ರಾತ್ರಿ ಹಗಲೂ ಆರಾಧನೆ ಮಾಡುತ್ತಿದ್ದಳು. \v 38 ಆ ಸಂದರ್ಭದಲ್ಲಿ ಅನ್ನಳು ಬಂದು, ದೇವರನ್ನು ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಶಿಶುವಿನ ವಿಷಯವಾಗಿ ಮಾತನಾಡಿದಳು. \p \v 39 ಯೋಸೇಫನೂ ಮರಿಯಳೂ ಕರ್ತದೇವರ ನಿಯಮದ ಪ್ರಕಾರ ಎಲ್ಲವನ್ನು ಮಾಡಿ ಮುಗಿಸಿದ ಮೇಲೆ, ತಮ್ಮ ಊರಾಗಿದ್ದ ಗಲಿಲಾಯದ ನಜರೇತಿಗೆ ಹಿಂದಿರುಗಿದರು. \v 40 ಆ ಶಿಶುವು ಬೆಳೆದು ಬಲಗೊಂಡು; ಜ್ಞಾನದಲ್ಲಿ ವೃದ್ಧಿಯಾಯಿತು ಮತ್ತು ದೇವರ ಕೃಪೆಯು ಶಿಶುವಿನ ಮೇಲೆ ಇತ್ತು. \s1 ದೇವಾಲಯದಲ್ಲಿ ಬಾಲಕ ಯೇಸು \p \v 41 ಯೇಸುವಿನ ತಂದೆತಾಯಿಗಳು ಪ್ರತಿವರ್ಷವೂ ಪಸ್ಕಹಬ್ಬಕ್ಕೆ\f + \fr 2:41 \fr*\ft ಅಥವಾ \ft*\fqa ವಿಮೋಚನೆಯ ಹಬ್ಬ. \fqa*\ft ದೇವರು ಇಸ್ರಾಯೇಲರನ್ನು ಈಜಿಪ್ಟಿನಿಂದ ಹೇಗೆ ವಿಮೋಚಿಸಿದರು ಎನ್ನುವುದರ ನೆನಪಿಗಾಗಿ ಆಚರಿಸುವ ಹಬ್ಬ\ft*\f* ಯೆರೂಸಲೇಮಿಗೆ ಹೋಗುತ್ತಿದ್ದರು. \v 42 ಯೇಸುವಿಗೆ ಹನ್ನೆರಡು ವರ್ಷವಾದಾಗ, ಪದ್ಧತಿಯ ಪ್ರಕಾರ ಅವರು ಹಬ್ಬಕ್ಕಾಗಿ ಯೆರೂಸಲೇಮಿಗೆ ಹೋದರು. \v 43 ಅವರು ಆ ಹಬ್ಬವನ್ನು ಮುಗಿಸಿಕೊಂಡು ಹಿಂದಿರುಗಿ ಬರುವಾಗ ಬಾಲಕ ಯೇಸು ಯೆರೂಸಲೇಮಿನಲ್ಲಿಯೇ ಉಳಿದದ್ದು, ತಂದೆತಾಯಿಗಳಿಗೆ ತಿಳಿದಿರಲಿಲ್ಲ. \v 44 ಯೇಸು ಗುಂಪಿನಲ್ಲಿ ಇದ್ದಿರಬಹುದೆಂದು ಅವರು ಭಾವಿಸಿ, ಒಂದು ದಿನದ ಪ್ರಯಾಣವನ್ನು ಮಾಡಿದ ಮೇಲೆ ತಮ್ಮ ಬಳಗದವರಲ್ಲಿಯೂ ಪರಿಚಿತರಲ್ಲಿಯೂ ಬಾಲಕ ಯೇಸುವನ್ನು ಹುಡುಕಿದರು. \v 45 ಆದರೆ ಅವರು ಯೇಸುವನ್ನು ಕಂಡುಕೊಳ್ಳದೆ ಹೋದುದರಿಂದ, ಅವರನ್ನು ಹುಡುಕುತ್ತಾ ಪುನಃ ಯೆರೂಸಲೇಮಿಗೆ ಹಿಂತಿರುಗಿ ಬಂದರು. \v 46 ಮೂರು ದಿವಸಗಳಾದ ಮೇಲೆ ಯೇಸುವನ್ನು ದೇವಾಲಯದಲ್ಲಿ ಕಂಡರು. ಬೋಧಕರ ನಡುವೆ ಕೂತುಕೊಂಡು, ಬಾಲಕ ಯೇಸು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಪ್ರಶ್ನಿಸುತ್ತಾ ಇರುವುದನ್ನು ಅವರು ಕಂಡರು. \v 47 ಯೇಸು ಆಡಿದ ಮಾತುಗಳನ್ನು ಕೇಳಿದವರೆಲ್ಲರೂ ಅವರ ಜ್ಞಾನಕ್ಕೂ ಉತ್ತರಗಳಿಗೂ ಬೆರಗಾದರು. \v 48 ತಂದೆತಾಯಿಗಳು ಯೇಸುವನ್ನು ಕಂಡಾಗ ಆಶ್ಚರ್ಯಪಟ್ಟರು. ಆತನ ತಾಯಿಯು, “ಮಗು, ನೀನು ನಮಗೆ ಹೀಗೇಕೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಗೊಂಡು ನಿನ್ನನ್ನು ಹುಡುಕಿದೆವು,” ಎಂದಳು. \p \v 49 ಯೇಸು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕೆಂಬುದು ನಿಮಗೆ ತಿಳಿಯಲಿಲ್ಲವೋ?” ಎಂದರು. \v 50 ಆದರೆ ಯೇಸು ಅವರಿಗೆ ಹೇಳಿದ ಮಾತನ್ನು ಅವರು ಗ್ರಹಿಸಲಿಲ್ಲ. \p \v 51 ಬಳಿಕ ಯೇಸು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನರಾಗಿದ್ದರು. ಆದರೆ ಯೇಸುವಿನ ತಾಯಿಯು ಈ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಳು. \v 52 ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ಬೆಳೆದು, ದೇವರ ಮೆಚ್ಚುಗೆ ಮತ್ತು ಮನುಷ್ಯರ ಮೆಚ್ಚುಗೆ ಹೆಚ್ಚಾಗಿ ಅವರಿಗೆ ದೊರೆಯಿತು. \c 3 \s1 ಸ್ನಾನಿಕ ಯೋಹಾನನು ಮಾರ್ಗ ಸಿದ್ಧಪಡಿಸಿದ್ದು \p \v 1 ಕೈಸರ್ ತಿಬೇರಿಯನ ಆಳ್ವಿಕೆಯ ಕಾಲದ ಹದಿನೈದನೆಯ ವರ್ಷದಲ್ಲಿ ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾಯಕ್ಕೆ ಚತುರಾಧಿಪತಿಯೂ\f + \fr 3:1 \fr*\ft ನಾಲ್ಕರಲ್ಲಿ ಒಂದು ಭಾಗವನ್ನು ಆಳುವವನು\ft*\f* ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನಿತಿ ಸೀಮೆಗೆ ಚತುರಾಧಿಪತಿಯೂ ಲುಸನ್ಯನು ಅಬಿಲೇನೆಗೆ ಚತುರಾಧಿಪತಿಯೂ ಆಗಿದ್ದಾಗ, \v 2 ಅನ್ನನು ಮತ್ತು ಕಾಯಫನು ಮಹಾಯಾಜಕರು ಆಗಿದ್ದ ಸಮಯದಲ್ಲಿ, ಅರಣ್ಯದಲ್ಲಿದ್ದ ಜಕರೀಯನ ಮಗ ಯೋಹಾನನಿಗೆ ದೇವರ ವಾಕ್ಯವುಂಟಾಯಿತು. \v 3 ಅವನು ಯೊರ್ದನ್ ನದಿಯ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು, ಪಾಪಗಳ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಪಡೆಯುವದರ ಕುರಿತು ಸಾರಿ ಹೇಳಿದನು. \v 4 ಇದರ ಬಗ್ಗೆ ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿ ಹೀಗೆಂದು ಬರೆದಿದೆ: \q1 “ಅರಣ್ಯದಲ್ಲಿ ಕೂಗುವವನ ಸ್ವರವು, \q1 ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ, \q2 ಅವರ ದಾರಿಗಳನ್ನು ಸರಾಗಮಾಡಿರಿ. \q1 \v 5 ಪ್ರತಿಯೊಂದು ಹಳ್ಳಕೊಳ್ಳಗಳೂ ಭರ್ತಿಯಾಗಬೇಕು, \q2 ಎಲ್ಲಾ ಬೆಟ್ಟಗುಡ್ಡಗಳು ನೆಲಸಮವಾಗಬೇಕು; \q1 ಡೊಂಕಾದ ರಸ್ತೆಗಳು ನೆಟ್ಟಗಾಗಬೇಕು, \q2 ಮತ್ತು ಕೊರಕಲಾದ ದಾರಿಗಳು ಸರಾಗವಾಗಬೇಕು; \q1 \v 6 ಮಾನವರೆಲ್ಲರೂ ದೇವರ ರಕ್ಷಣೆಯನ್ನು ಕಾಣುವರು.’ ”\f + \fr 3:6 \fr*\ft \+xt ಯೆಶಾಯ 40:3-5\+xt*\ft*\f* \p \v 7 ಆಗ ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟು ಬಂದ ಜನಸಮೂಹಕ್ಕೆ, ಯೋಹಾನನು, “ಎಲೈ ಸರ್ಪಸಂತತಿಯವರೇ! ಮುಂದೆ ಬರುವ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಎಚ್ಚರಿಸಿದವರು ಯಾರು? \v 8 ಹಾಗಾದರೆ ದೇವರ ಕಡೆಗೆ ತಿರುಗಿಕೊಂಡದ್ದಕ್ಕೆ ತಕ್ಕ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ,’ ಎಂದು ನಿಮ್ಮೊಳಗೆ ಕೊಚ್ಚಿಕೊಳ್ಳಬೇಡಿರಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಮಕ್ಕಳನ್ನು ಹುಟ್ಟಿಸಲು ಶಕ್ತರೆಂದು ನಾನು ನಿಮಗೆ ಹೇಳುತ್ತೇನೆ. \v 9 ಮರಗಳ ಬೇರಿಗೆ ಈಗಾಗಲೇ ಕೊಡಲಿ ಬಿದ್ದಿದೆ, ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕಲಾಗುವುದು,” ಎಂದು ಹೇಳಿದನು. \p \v 10 ಆಗ ಜನರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಕೇಳಿದರು. \p \v 11 ಅದಕ್ಕೆ ಯೋಹಾನನು ಉತ್ತರವಾಗಿ, “ಎರಡು ಅಂಗಿಗಳಿದ್ದರೆ ಇಲ್ಲದವನಿಗೆ ಒಂದನ್ನು ಕೊಡಲಿ, ಆಹಾರವುಳ್ಳವನು ಇಲ್ಲದವನೊಂದಿಗೆ ಹಂಚಿಕೊಳ್ಳಲಿ,” ಎಂದು ಹೇಳಿದನು. \p \v 12 ತರುವಾಯ ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಬಂದು ಯೋಹಾನನಿಗೆ, “ಬೋಧಕರೇ, ನಾವೇನು ಮಾಡಬೇಕು?” ಎಂದು ಕೇಳಿದರು. \p \v 13 ಅದಕ್ಕೆ ಯೋಹಾನನು ಅವರಿಗೆ, “ನಿಮಗೆ ಆಜ್ಞಾಪಿಸಿದ್ದಕ್ಕಿಂತ ಹೆಚ್ಚೇನೂ ವಸೂಲಿ ಮಾಡಬೇಡಿರಿ,” ಎಂದನು. \p \v 14 ಅದರಂತೆಯೇ ಸೈನಿಕರು, “ನಾವೇನು ಮಾಡಬೇಕು?” ಎಂದು ಕೇಳಿದರು. \p ಅದಕ್ಕೆ ಯೋಹಾನನು, “ಯಾರನ್ನೂ ಬೆದರಿಸಿ ಹಣ ತೆಗೆದುಕೊಳ್ಳಬೇಡಿರಿ. ಯಾರ ಮೇಲೆಯೂ ಸುಳ್ಳು ದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ,” ಎಂದು ಹೇಳಿದನು. \p \v 15 ಆಗ ಜನರು ಕ್ರಿಸ್ತನಿಗಾಗಿ ಎದುರುನೋಡುತ್ತಾ ಇದ್ದದ್ದರಿಂದ, ಯೋಹಾನನೇ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಹೃದಯಗಳಲ್ಲಿ ಆಲೋಚಿಸುತ್ತಿದ್ದರು. \v 16 ಯೋಹಾನನು ಉತ್ತರವಾಗಿ ಅವರೆಲ್ಲರಿಗೆ: “ನಾನಂತೂ ನಿಮಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನಗಿಂತ ಶಕ್ತರೊಬ್ಬರು ಬರುತ್ತಾರೆ, ಅವರ ಪಾದರಕ್ಷೆಗಳ ದಾರವನ್ನು ಬಿಚ್ಚುವ ಗುಲಾಮನಾಗಿರುವುದಕ್ಕೂ ನಾನು ಯೋಗ್ಯನಲ್ಲ. ಅವರು ಪವಿತ್ರಾತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ದೀಕ್ಷಾಸ್ನಾನ ಮಾಡಿಸುವರು. \v 17 ಮೊರವು ಅವರ ಕೈಯಲ್ಲಿದೆ, ಅವರು ತಮ್ಮ ಕಣವನ್ನು ಶುದ್ಧಮಾಡಿ ಗೋಧಿಯನ್ನು ತಮ್ಮ ಕಣಜದಲ್ಲಿ ಕೂಡಿಸುವರು. ಆದರೆ ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ಹೇಳಿದನು. \v 18 ಯೋಹಾನನು ಇನ್ನೂ ಅನೇಕ ರೀತಿಗಳಿಂದ ಜನರನ್ನು ಎಚ್ಚರಿಸಿ ಅವರಿಗೆ ಸುವಾರ್ತೆಯನ್ನು ಸಾರುತ್ತಿದ್ದನು. \p \v 19 ಚತುರಾಧಿಪತಿಯಾದ ಹೆರೋದನು, ತನ್ನ ಸಹೋದರ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಇಟ್ಟುಕೊಂಡಿದ್ದನು ಮತ್ತು ಹೆರೋದನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳಿಗಾಗಿ ಯೋಹಾನನು ಅವನನ್ನು ಬಹಿರಂಗವಾಗಿ ಗದರಿಸಿದ್ದರಿಂದ, \v 20 ಹೆರೋದನು ಯೋಹಾನನನ್ನು ಸೆರೆಯಲ್ಲಿ ಬಂಧಿಸಿ, ತನ್ನ ಎಲ್ಲಾ ದುಷ್ಕೃತ್ಯಗಳೊಂದಿಗೆ ಮತ್ತೊಂದನ್ನು ಕೂಡಿಸಿದ್ದನು. \s1 ಯೇಸುವಿನ ದೀಕ್ಷಾಸ್ನಾನ ಹಾಗೂ ವಂಶಾವಳಿ \p \v 21 ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು, ಆಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡು ಪ್ರಾರ್ಥಿಸುತ್ತಿರುವಲ್ಲಿ, ಸ್ವರ್ಗವು ತೆರೆಯಿತು. \v 22 ಆಗ ಪವಿತ್ರಾತ್ಮರು ದೇಹಾಕಾರವಾಗಿ ಪಾರಿವಾಳದಂತೆ ಯೇಸುವಿನ ಮೇಲೆ ಇಳಿದರು. ಆಗ, “ನೀನು ನನ್ನ ಪ್ರಿಯ ಪುತ್ರನು, ನಿನ್ನನ್ನು ಅಪಾರವಾಗಿ ಮೆಚ್ಚಿದ್ದೇನೆ,” ಎಂಬ ಧ್ವನಿಯು ಪರಲೋಕದಿಂದ ಕೇಳಿಬಂತು. \p \v 23 ಯೇಸು ಸೇವೆಯನ್ನು ಪ್ರಾರಂಭಿಸಿದಾಗ ಹೆಚ್ಚು ಕಡಿಮೆ ಮೂವತ್ತು ವರ್ಷದವರಾಗಿದ್ದರು. ಯೇಸು ಜನರ ಎಣಿಕೆಯಲ್ಲಿ ಯೋಸೇಫನ ಮಗನು. \b \li1 ಯೋಸೇಫನು, ಹೇಲೀಯ ಮಗನು, \v 24 ಹೇಲೀಯನು ಮತ್ಥಾತನ ಮಗನು, \li1 ಮತ್ಥಾತನನು ಲೇವಿಯ ಮಗನು, ಲೇವಿಯನು ಮೆಲ್ಖಿಯ ಮಗನು, \li1 ಮೆಲ್ಖಿಯನು ಯನ್ನಾಯನ ಮಗನು, ಯನ್ನಾಯನು ಯೋಸೇಫನ ಮಗನು, \li1 \v 25 ಯೋಸೇಫನು ಮತ್ತಥೀಯನ ಮಗನು, ಮತ್ತಥೀಯನು ಆಮೋಸನ ಮಗನು, \li1 ಆಮೋಸನು ನಹೂಮನ ಮಗನು, ನಹೂಮನು ಎಸ್ಲಿಯ ಮಗನು, \li1 ಎಸ್ಲಿಯನು ನಗ್ಗಾಯನ ಮಗನು, \v 26 ನಗ್ಗಾಯನು ಮಹಾಥನ ಮಗನು, \li1 ಮಹಾಥನು ಮತ್ತಥೀಯನ ಮಗನು, ಮತ್ತಥೀಯನು ಶಿಮೀಯಿನ ಮಗನು, \li1 ಶಿಮೀಯಿನು ಯೊಸೇಖನ ಮಗನು, ಯೊಸೇಖನು ಯೋದನ ಮಗನು, \li1 \v 27 ಯೋದನು ಯೋಹಾನನ ಮಗನು, ಯೋಹಾನನು ರೇಸನ ಮಗನು, \li1 ರೇಸನು ಜೆರುಬ್ಬಾಬೆಲನ ಮಗನು, ಜೆರುಬ್ಬಾಬೆಲನು ಶೆಯಲ್ತೀಯೇಲನ ಮಗನು, \li1 ಶೆಯಲ್ತಿಯೇಲನು ನೇರಿಯನ ಮಗನು, \v 28 ನೇರಿಯನು ಮೆಲ್ಖಿಯನ ಮಗನು, \li1 ಮೆಲ್ಖಿಯನು ಅದ್ದಿಯನ ಮಗನು, ಅದ್ದಿಯನು ಕೋಸಾಮನ ಮಗನು, \li1 ಕೋಸಾಮನು ಎಲ್ಮದಾಮನ ಮಗನು, ಎಲ್ಮದಾಮನು ಏರನ ಮಗನು, \li1 \v 29 ಏರನು ಯೆಹೋಷುವನ ಮಗನು, ಯೆಹೋಷುವನು ಎಲೀಯೆಜೆರನ ಮಗನು, \li1 ಎಲಿಯೇಜರನು ಯೋರೈಮನ ಮಗನು, ಯೋರೈಮನು ಮತ್ಥಾತನ ಮಗನು, \li1 ಮತ್ಥಾತನು ಲೇವಿಯನ ಮಗನು, \v 30 ಲೇವಿಯನು ಸಿಮಿಯೋನನ ಮಗನು, \li1 ಸಿಮಿಯೋನನು ಯೂದನ ಮಗನು, ಯೂದನು ಯೋಸೇಫನ ಮಗನು, \li1 ಯೋಸೇಫನು ಯೋನಾಮನ ಮಗನು, ಯೋನಾಮನು ಎಲಿಯಕೀಮನ ಮಗನು, \li1 \v 31 ಎಲಿಯಕೀಮನು ಮೆಲೆಯಾನ ಮಗನು, ಮೆಲೆಯಾನು ಮೆನ್ನನ ಮಗನು, \li1 ಮೆನ್ನನು ಮತ್ತಾಥನ ಮಗನು, ಮತ್ತಾಥನು ನಾತಾನನ ಮಗನು, \li1 ನಾತಾನನು ದಾವೀದನ ಮಗನು, \v 32 ದಾವೀದನು ಇಷಯನ ಮಗನು, \li1 ಇಷಯನು ಓಬೇದನ ಮಗನು, ಓಬೇದನು ಬೋವಜನ ಮಗನು, \li1 ಬೋವಜನು ಸಲ್ಮೋನನ ಮಗನು, ಸಲ್ಮೋನನು ನಹಶೋನನ ಮಗನು, \li1 \v 33 ನಹಶೋನನು ಅಮ್ಮೀನಾದಾಬನ ಮಗನು, ಅಮ್ಮೀನಾದಾಬನು ಆರ್ನೈಯನ ಮಗನು, \li1 ಆರ್ನೈಯನು ಹೆಚ್ರೋನನ ಮಗನು, ಹೆಚ್ರೋನನು ಪೆರೆಸನ ಮಗನು, \li1 ಪೆರೆಸನು ಯೂದನ ಮಗನು, \v 34 ಯೂದನು ಯಾಕೋಬನ ಮಗನು, \li1 ಯಾಕೋಬನು ಇಸಾಕನ ಮಗನು, ಇಸಾಕನು ಅಬ್ರಹಾಮನ ಮಗನು, \li1 ಅಬ್ರಹಾಮನು ತೇರನ ಮಗನು, ತೇರನು ನಹೋರನ ಮಗನು, \li1 \v 35 ನಹೋರನು ಸೆರೂಗನ ಮಗನು, ಸೆರೂಗನು ರೆಗೂವನ ಮಗನು, \li1 ರೆಗೂವನು ಪೆಲೆಗನ ಮಗನು, ಪೆಲೆಗನು ಹೆಬೆರನ ಮಗನು, \li1 ಹೆಬೆರನು ಶೆಲಹ ಮಗನು, \v 36 ಶೆಲಹ ಕಯಿನಾನನ ಮಗನು, \li1 ಕಯಿನಾನನು ಅರ್ಫಕ್ಷಾದನ ಮಗನು, ಅರ್ಫಕ್ಷಾದನು ಶೇಮನ ಮಗನು, \li1 ಶೇಮನು ನೋಹನ ಮಗನು, ನೋಹನು ಲಾಮೆಕನ ಮಗನು, \li1 \v 37 ಲಾಮೆಕನು ಮತೂಷಲನ ಮಗನು, ಮತೂಷಲನು ಹನೋಕನ ಮಗನು, \li1 ಹನೋಕನು ಯೆರೆದನ ಮಗನು, ಯೆರೆದನು ಮಹಲಲೇಲನ ಮಗನು, \li1 ಮಹಲಲೇಲನು ಕಯಿನಾನನ ಮಗನು, \v 38 ಕಯಿನಾನನು ಎನೋಷನ ಮಗನು, \li1 ಎನೋಷನು ಸೇಥನ ಮಗನು, ಸೇತನು ಆದಾಮನ ಮಗನು, \li1 ಆದಾಮನು ದೇವರ ಮಗನು. \c 4 \s1 ಯೇಸುವಿನ ಶೋಧನೆ \p \v 1 ಯೇಸು ಪವಿತ್ರಾತ್ಮಭರಿತರಾಗಿ, ಯೊರ್ದನ್ ನದಿ ತೀರದಿಂದ ಹಿಂದಿರುಗಿ ಬಂದು, ದೇವರಾತ್ಮರಿಂದ ಅರಣ್ಯದೊಳಕ್ಕೆ ಮಾರ್ಗದರ್ಶನ ಹೊಂದಿ, \v 2 ನಲವತ್ತು ದಿನಗಳು ಸೈತಾನನಿಂದ ಶೋಧನೆಯನ್ನು ಎದುರಿಸಿದರು. ಆ ದಿನಗಳಲ್ಲಿ ಯೇಸು ಏನೂ ತಿನ್ನಲಿಲ್ಲ. ಆ ದಿನಗಳು ಮುಗಿದ ಮೇಲೆ ಯೇಸುವಿಗೆ ಹಸಿವಾಯಿತು. \p \v 3 ಸೈತಾನನು ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗುವಂತೆ ಹೇಳು,” ಎಂದನು. \p \v 4 ಅದಕ್ಕೆ ಯೇಸು ಉತ್ತರವಾಗಿ ಅವನಿಗೆ, “ ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ’\f + \fr 4:4 \fr*\ft \+xt ಧರ್ಮೋ 8:3\+xt*\ft*\f* ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು. \p \v 5 ಸೈತಾನನು ಯೇಸುವನ್ನು ಎತ್ತರವಾದ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನು ಕ್ಷಣಮಾತ್ರದಲ್ಲಿ ಅವರಿಗೆ ತೋರಿಸಿದನು. \v 6 ಅನಂತರ ಸೈತಾನನು ಯೇಸುವಿಗೆ, “ಈ ಎಲ್ಲಾ ರಾಜ್ಯಗಳ ಅಧಿಕಾರವನ್ನೂ ಇವುಗಳ ಮಹಿಮೆಯನ್ನೂ ನಾನು ನಿನಗೆ ಕೊಡುವೆನು. ಇವೆಲ್ಲಾ ನನಗೆ ಕೊಟ್ಟಿರುವುದರಿಂದ ನನಗೆ ಇಷ್ಟ ಬಂದ ಯಾರಿಗಾದರೂ ನಾನು ಕೊಡುವೆನು. \v 7 ಆದ್ದರಿಂದ ನೀನು ನನ್ನನ್ನು ಆರಾಧಿಸಿದರೆ, ಎಲ್ಲವೂ ನಿನ್ನದಾಗುವವು,” ಎಂದು ಹೇಳಿದನು. \p \v 8 ಯೇಸು ಅವನಿಗೆ ಉತ್ತರವಾಗಿ, “ ‘ನಿನ್ನ ದೇವರಾದ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’\f + \fr 4:8 \fr*\ft \+xt ಧರ್ಮೋ 6:13\+xt*\ft*\f* ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು. \p \v 9 ಸೈತಾನನು ಯೇಸುವನ್ನು ಯೆರೂಸಲೇಮಿಗೆ ಕರೆತಂದು ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ ಇಲ್ಲಿಂದ ಕೆಳಕ್ಕೆ ಧುಮುಕು, \v 10 ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವಂತೆ: \q1 “ ‘ದೇವರು ನಿನ್ನನ್ನು ಕಾಪಾಡುವುದಕ್ಕೆ \q2 ತಮ್ಮ ದೂತರಿಗೆ ಆಜ್ಞಾಪಿಸುವರು \q1 \v 11 ಮತ್ತು ನಿನ್ನ ಪಾದಗಳು ಕಲ್ಲಿಗೆ ತಗಲದಂತೆ, \q2 ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’\f + \fr 4:11 \fr*\ft \+xt ಕೀರ್ತನೆ 91:11,12\+xt*\ft*\f*” \m ಎಂದನು. \p \v 12 ಅದಕ್ಕೆ ಯೇಸು ಅವನಿಗೆ, “ ‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು,’ ಎಂದೂ ಹೇಳಿದೆ,”\f + \fr 4:12 \fr*\ft \+xt ಧರ್ಮೋ 6:16\+xt*\ft*\f* ಎಂದು ಉತ್ತರಕೊಟ್ಟರು. \p \v 13 ಸೈತಾನನು ಯೇಸುವನ್ನು ನಾನಾರೀತಿಯಲ್ಲಿ ಶೋಧಿಸಿದ ಮೇಲೆ, ತಕ್ಕಕಾಲ ಬರುವ ತನಕ ಅವರನ್ನು ಬಿಟ್ಟು ಹೊರಟುಹೋದನು. \s1 ನಜರೇತಿನವರು ಯೇಸುವನ್ನು ತಿರಸ್ಕರಿಸಿದ್ದು \p \v 14 ಯೇಸು ಪವಿತ್ರಾತ್ಮರ ಶಕ್ತಿಯಿಂದ ಗಲಿಲಾಯಕ್ಕೆ ಹಿಂದಿರುಗಿದರು. ಅವರ ಸುದ್ದಿಯು ಸುತ್ತಮುತ್ತೆಲ್ಲಾ ಹರಡಿತು. \v 15 ಯೇಸು ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸಿದ್ದರಿಂದ, ಎಲ್ಲರೂ ಅವರನ್ನು ಹೊಗಳಿದರು. \p \v 16 ಯೇಸು ತಾವು ಬೆಳೆದ ನಜರೇತಿಗೆ ಬಂದು, ತಮ್ಮ ಪದ್ಧತಿಯಂತೆ ಸಬ್ಬತ್\f + \fr 4:16 \fr*\fq ಸಬ್ಬತ್ \fq*\ft ಇದು ವಾರದ ಏಳನೆಯ ದಿನ, ಈ ದಿನವನ್ನು ಯೆಹೂದ್ಯರು ಪವಿತ್ರ ದಿನ ಎನ್ನುತ್ತಿದ್ದರು. ಈ ದಿನದಲ್ಲಿ ಅವರು ದೇವರ ಆರಾಧನೆ ಮತ್ತು ತಮ್ಮ ಕೆಲಸದಿಂದ \ft*\fqa ವಿಶ್ರಾಂತಿ \fqa*\ft ಪಡೆಯುತ್ತಿದ್ದರು. \+xt ಆದಿ 2:2,3\+xt* ನೋಡಿರಿ\ft*\f* ದಿನದಲ್ಲಿ ಸಭಾಮಂದಿರದೊಳಕ್ಕೆ ಹೋಗಿ ಪವಿತ್ರ ವೇದದ ಸುರುಳಿಯನ್ನು ಓದುವುದಕ್ಕಾಗಿ ಎದ್ದು ನಿಂತರು. \v 17 ಯೇಸುವಿನ ಕೈಗೆ ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಕೊಟ್ಟರು. ಯೇಸು ಅದನ್ನು ಬಿಚ್ಚಿ, ಅದರಲ್ಲಿ ಬರೆದಿರುವ ಈ ವಾಕ್ಯಗಳನ್ನು ಕಂಡು ಓದಿದರು: \q1 \v 18 “ಕರ್ತದೇವರ ಆತ್ಮರು ನನ್ನ ಮೇಲೆ ಇದ್ದಾರೆ, \q2 ಅವರು ನನ್ನನ್ನು ಬಡವರಿಗೆ ಸುವಾರ್ತೆ ಸಾರುವುದಕ್ಕೆ ಅಭಿಷೇಕಿಸಿದ್ದಾರೆ. \q1 ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವುದಕ್ಕೂ, \q2 ಕುರುಡರಿಗೆ ದೃಷ್ಟಿ ಕೊಡುವುದಕ್ಕೂ, \q1 ಜಜ್ಜಿ ಹೋದವರನ್ನು ಬಿಡಿಸಿ ಕಳುಹಿಸುವುದಕ್ಕೂ, \q2 \v 19 ಕರ್ತದೇವರ ಮೆಚ್ಚುಗೆಯ ವರ್ಷವನ್ನು ಸಾರುವುದಕ್ಕೂ ಅವರು ನನ್ನನ್ನು ಕಳುಹಿಸಿದ್ದಾರೆ.”\f + \fr 4:19 \fr*\ft \+xt ಯೆಶಾಯ 61:1,2; ಯೆಶಾಯ 58:6\+xt*\ft*\f* \p \v 20 ಯೇಸು ಗ್ರಂಥದ ಸುರುಳಿಯನ್ನು ಸುತ್ತಿ, ಪರಿಚಾರಕನ ಕೈಗೆ ಕೊಟ್ಟು ಕುಳಿತುಕೊಂಡರು. ಆಗ ಆ ಸಭಾಮಂದಿರದಲ್ಲಿ ಇದ್ದವರೆಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. \v 21 ಯೇಸು ಅವರಿಗೆ, “ನೀವು ಕೇಳುತ್ತಿದ್ದಂತೆಯೇ ಈ ಪವಿತ್ರ ವೇದದ ವಾಕ್ಯವು ಇಂದು ನೆರವೇರಿತು,” ಎಂದು ಹೇಳಲಾರಂಭಿಸಿದರು. \p \v 22 ಎಲ್ಲರೂ ಅವರನ್ನು ಹೊಗಳಿದರು. ಯೇಸುವಿನ ಬಾಯಿಂದ ಬಂದ ಕೃಪೆಯುಳ್ಳ ಮಾತುಗಳಿಗೆ ಆಶ್ಚರ್ಯಪಟ್ಟು, “ಈತನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು. \p \v 23 ಯೇಸು ಅವರಿಗೆ, “ ‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ!’ ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಹೇಳಿ, ‘ಕಪೆರ್ನೌಮಿನಲ್ಲಿ ಎಂತೆಂಥ ಕಾರ್ಯಗಳು ನಡೆಯಿತೆಂದು ನಾವು ಕೇಳಿದೆವು. ಅದನ್ನು ಇಲ್ಲಿ ನಿನ್ನ ಸ್ವಂತ ಊರಿನಲ್ಲಿಯೂ ಮಾಡು’ ಎಂದು ನನಗೆ ಹೇಳುವಿರಿ,” ಎಂದರು. \p \v 24 ಯೇಸು ಮುಂದುವರಿಸಿ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಯಾವ ಪ್ರವಾದಿಯೂ ಸ್ವಂತ ಊರಿನಲ್ಲಿ ಸ್ವೀಕಾರವಾಗುವುದಿಲ್ಲ. \v 25 ನಿಮಗೆ ಸತ್ಯವನ್ನು ಹೇಳುತ್ತೇನೆ: ಎಲೀಯನ ದಿವಸಗಳಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ\f + \fr 4:25 \fr*\ft ಮೂಲಭಾಷೆಯಲ್ಲಿ ಆಕಾಶವು ಮುಚ್ಚಲಾಗಿತ್ತು\ft*\f* ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ, ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರು. \v 26 ಅವರಲ್ಲಿ ಯಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ ಸೀದೋನ್ ಪಟ್ಟಣದ ಸರೆಪ್ತದಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಕಳುಹಿಸಿದರು.\f + \fr 4:26 \fr*\ft \+xt 1 ಅರಸು 17:8\+xt*\ft*\f* \v 27 ಹಾಗೆಯೇ, ಪ್ರವಾದಿ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿದ್ದರೂ ಸಿರಿಯದ ನಾಮಾನನ ಹೊರತು ಅವರಲ್ಲಿ ಬೇರೆ ಯಾರೂ ಶುದ್ಧರಾಗಲಿಲ್ಲ,”\f + \fr 4:27 \fr*\ft \+xt 2 ಅರಸು 5:1-24\+xt* ನೋಡಿರಿ\ft*\f* ಎಂದರು. \p \v 28 ಆಗ ಸಭಾಮಂದಿರದಲ್ಲಿ ಇದ್ದವರೆಲ್ಲರೂ ಇವುಗಳನ್ನು ಕೇಳಿ ಬಹು ಕೋಪಗೊಂಡರು. \v 29 ಅವರು ಮೇಲಕ್ಕೆದ್ದು, ಯೇಸುವನ್ನು ಪಟ್ಟಣದ ಹೊರಗೆ ದಬ್ಬಬೇಕೆಂದು, ತಮ್ಮ ಬೆಟ್ಟದ ಮೇಲೆ ಕಟ್ಟಿರುವ ಪಟ್ಟಣದ ಕಡಿದಾದ ಸ್ಥಳಕ್ಕೆ ಅವರನ್ನು ಹಿಡಿದುಕೊಂಡು ಹೋದರು. \v 30 ಆದರೆ ಯೇಸು ಅವರ ಮಧ್ಯದಿಂದ ಹಾದು ಹೊರಟು ಹೋದರು. \s1 ಯೇಸು ದೆವ್ವಗಳನ್ನು ಬಿಡಿಸಿದ್ದು \p \v 31 ಯೇಸು ಗಲಿಲಾಯದ ಕಪೆರ್ನೌಮಿಗೆ ಬಂದು, ಸಬ್ಬತ್ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದರು. \v 32 ಯೇಸುವಿನ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. ಏಕೆಂದರೆ ಅವರ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು. \p \v 33 ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕಿರುಚುತ್ತಾ, \v 34 “ನಜರೇತಿನ ಯೇಸುವೇ, ನಮ್ಮ ಗೊಡವೆ ನಿಮಗೆ ಏಕೆ? ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರಾ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರ ಪರಿಶುದ್ಧರು,” ಎಂದು ಹೇಳಿದನು. \p \v 35 ಆಗ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಅವನೊಳಗಿಂದ ಹೊರಗೆ ಬಾ,” ಎಂದರು. ಆ ದೆವ್ವವು ಅವನನ್ನು ಮಧ್ಯದಲ್ಲಿ ಕೆಡವಿ, ಬಾಧಿಸದೆ ಅವನೊಳಗಿಂದ ಹೊರಗೆ ಬಂತು. \p \v 36 ಜನರೆಲ್ಲರೂ ಬೆರಗಾಗಿ, “ಇದೆಂಥಾ ಮಾತಾಗಿದೆ! ಈತನು ಅಧಿಕಾರದಿಂದಲೂ ಶಕ್ತಿಯಿಂದಲೂ ಅಶುದ್ಧಾತ್ಮಗಳಿಗೆ ಅಪ್ಪಣೆಕೊಡಲು ಅವು ಹೊರಗೆ ಬರುತ್ತವಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. \v 37 ಯೇಸುವಿನ ಸುದ್ದಿಯು ಸುತ್ತಲಿನ ಪ್ರದೇಶದ ಪ್ರತಿಯೊಂದು ಸ್ಥಳದಲ್ಲಿ ಹರಡಿತು. \s1 ಯೇಸು ಅನೇಕರನ್ನು ಸ್ವಸ್ಥಪಡಿಸಿದ್ದು \p \v 38 ಯೇಸು ಸಭಾಮಂದಿರದಿಂದ ಎದ್ದು ಸೀಮೋನನ ಮನೆಗೆ ಹೋದರು. ಅಲ್ಲಿ ಸೀಮೋನನ ಅತ್ತೆಗೆ ಕಠಿಣ ಜ್ವರವಿದ್ದುದರಿಂದ ಅಲ್ಲಿದ್ದವರು ಆಕೆಗೆ ಸಹಾಯ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡರು. \v 39 ಆಗ ಯೇಸು ಆಕೆಯ ಬಳಿಯಲ್ಲಿ ನಿಂತು ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೇ ಆಕೆಯು ಎದ್ದು ಅವರನ್ನು ಉಪಚರಿಸಿದಳು. \p \v 40 ಸಂಜೆಯಾದ ನಂತರ, ನಾನಾ ವಿಧವಾದ ರೋಗಗಳಿಂದ ಅಸ್ವಸ್ಥರಾದವರೆಲ್ಲರನ್ನು ಜನರು ಯೇಸುವಿನ ಬಳಿಗೆ ಕರೆತಂದರು, ಅವರಲ್ಲಿ ಪ್ರತಿಯೊಬ್ಬನ ಮೇಲೆ ಯೇಸು ತಮ್ಮ ಕೈಗಳನ್ನಿಟ್ಟು ಅವರನ್ನು ಸ್ವಸ್ಥಪಡಿಸಿದರು. \v 41 ಅನೇಕರೊಳಗಿಂದ, ದೆವ್ವಗಳು ಸಹ ಹೊರಗೆ ಬಂದು, “ನೀವು ದೇವರ ಪುತ್ರ” ಎಂದು ಅರಚಿದವು. ಯೇಸು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದರು. ಏಕೆಂದರೆ ಅವರೇ ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು. \p \v 42 ಬೆಳಗಾದ ಮೇಲೆ, ಯೇಸು ಏಕಾಂತ ಸ್ಥಳಕ್ಕೆ ಹೊರಟು ಹೋದರು. ಜನರು ಅವರನ್ನು ಹುಡುಕಿಕೊಂಡು ಅವರ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗಬಾರದೆಂದು ಅವರನ್ನು ತಡೆದರು. \v 43 ಆದರೆ ಯೇಸು ಅವರಿಗೆ, “ಬೇರೆ ಪಟ್ಟಣಗಳಿಗೂ ದೇವರ ರಾಜ್ಯದ ಸುವಾರ್ತೆಯನ್ನು ನಾನು ಸಾರಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಇದಕ್ಕಾಗಿಯೇ,” ಎಂದರು. \v 44 ಅನಂತರ ಯೇಸು ಯೂದಾಯದ ಸಭಾಮಂದಿರಗಳಲ್ಲಿ ಸುವಾರ್ತೆ ಸಾರುತ್ತಾ ಇದ್ದರು. \c 5 \s1 ಪ್ರಥಮ ಶಿಷ್ಯರನ್ನು ಕರೆದದ್ದು \p \v 1 ಒಂದು ದಿನ ಯೇಸು ಗೆನೆಜರೇತ್\f + \fr 5:1 \fr*\ft ಅಂದರೆ, ಗಲಿಲಾಯ ಸರೋವರ\ft*\f* ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ, ಜನರು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಅವರ ಸುತ್ತಲೂ ಗುಂಪಾಗಿ ಕೂಡಿದ್ದರು. \v 2 ಯೇಸು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡರು. ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. \v 3 ಅವುಗಳಲ್ಲಿ ಸೀಮೋನನ ದೋಣಿಯನ್ನು, ಯೇಸು ಹತ್ತಿ ಅದನ್ನು ದಡದಿಂದ ಸ್ವಲ್ಪ ದೂರ ನೂಕಬೇಕೆಂದು ಅವನನ್ನು ಕೇಳಿಕೊಂಡರು. ಆಮೇಲೆ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಜನರಿಗೆ ಬೋಧಿಸಿದರು. \p \v 4 ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ, ಮೀನು ಹಿಡಿಯುವುದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ,” ಎಂದರು. \p \v 5 ಅದಕ್ಕೆ ಉತ್ತರವಾಗಿ ಸೀಮೋನನು ಯೇಸುವಿಗೆ, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ. ಆದರೂ ನಿಮ್ಮ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ,” ಎಂದು ಹೇಳಿದನು. \p \v 6 ಅವರು ಅದರಂತೆ ಬಲೆ ಹಾಕಿದಾಗ, ಮೀನಿನ ದೊಡ್ಡ ರಾಶಿಯನ್ನು ಹಿಡಿದರು ಅವರ ಬಲೆಯು ಹರಿಯುವಂತಾಯಿತು. \v 7 ಆಗ ಬೇರೆ ದೋಣಿಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆಮಾಡಿದರು. ಪಾಲುಗಾರರು ಬಂದು ಎರಡು ದೋಣಿಗಳನ್ನು ತುಂಬಿಸಲಾಗಿ ಅವು ಮುಳುಗಲಾರಂಭಿಸಿದವು. \p \v 8 ಸೀಮೋನ್ ಪೇತ್ರನು ಇದನ್ನು ಕಂಡಾಗ, ಯೇಸುವಿನ ಮುಂದೆ ಮೊಣಕಾಲೂರಿ, “ಸ್ವಾಮಿ, ನನ್ನನ್ನು ಬಿಟ್ಟು ಹೋಗಿರಿ, ನಾನು ಪಾಪಿ,” ಎಂದನು. \v 9 ಯಾಕಂದರೆ, ಅವರು ಹಿಡಿದ ಮೀನುಗಳ ರಾಶಿಯನ್ನು ಕಂಡು ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು. \v 10 ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ, ಯೋಹಾನರೂ ಹಾಗೆಯೇ ವಿಸ್ಮಯಗೊಂಡಿದ್ದರು. \p ಆಗ ಯೇಸು ಸೀಮೋನನಿಗೆ, “ಹೆದರಬೇಡ; ಇಂದಿನಿಂದ ನೀನು ದೇವರಿಗಾಗಿ ಮನುಷ್ಯರನ್ನೇ ಹಿಡಿಯುವವನಾಗಿರುವೆ,\f + \fr 5:10 \fr*\ft ಅಂದರೆ, ಸುವಾರ್ತೆಯನ್ನು ಹೇಳಿ ಜನರನ್ನು ಯೇಸುವಿನ ಹಿಂಬಾಲಕರಾಗಿ ಮಾಡುವುದು\ft*\f*” ಎಂದರು. \v 11 ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನು ಬಿಟ್ಟು, ಯೇಸುವನ್ನೇ ಹಿಂಬಾಲಿಸಿದರು. \s1 ಯೇಸು ಒಬ್ಬ ಕುಷ್ಠರೋಗಿಯನ್ನು ವಾಸಿಮಾಡಿದ್ದು \p \v 12 ಯೇಸು ಒಂದು ಪಟ್ಟಣದಲ್ಲಿದ್ದಾಗ, ಮೈಯೆಲ್ಲಾ ಕುಷ್ಠರೋಗವಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಅಡ್ಡಬಿದ್ದು ಅವರಿಗೆ, “ಸ್ವಾಮಿ, ನಿಮಗೆ ಮನಸ್ಸಿದ್ದರೆ, ನೀವು ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದು ಅವರನ್ನು ಬೇಡಿಕೊಂಡನು. \p \v 13 ಯೇಸು ತಮ್ಮ ಕೈಚಾಚಿ ಅವನನ್ನು ಮುಟ್ಟಿ ಅವನಿಗೆ, “ನನಗೆ ಮನಸ್ಸಿದೆ, ನೀನು ಶುದ್ಧನಾಗು!” ಎಂದು ಹೇಳಿದರು. ಕೂಡಲೇ ಆ ಕುಷ್ಠವು ಅವನನ್ನು ಬಿಟ್ಟುಹೋಯಿತು. \p \v 14 ಆಗ ಯೇಸು ಅವನಿಗೆ, “ಇದನ್ನು ನೀನು ಯಾರಿಗೂ ಹೇಳಬೇಡ, ಆದರೆ ನೀನು ಗುಣಹೊಂದಿದ್ದಕ್ಕೆ ಜನರಿಗೆ ಸಾಕ್ಷಿಯಾಗಿರುವಂತೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆ ಅಪ್ಪಣೆ ಕೊಟ್ಟಂತೆ ಅರ್ಪಿಸು,” ಎಂದು ಆಜ್ಞಾಪಿಸಿದರು. \p \v 15 ಆದರೂ ಯೇಸುವಿನ ವಿಷಯವು, ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು. ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ಅವರಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ದೊಡ್ಡ ಸಮೂಹಗಳು ಕೂಡಿ ಬಂದವು. \v 16 ಆದರೆ ಯೇಸು ತಮ್ಮನ್ನು ಪ್ರತ್ಯೇಕಿಸಿಕೊಂಡು ಎಂದಿನಂತೆ ಏಕಾಂತ ಸ್ಥಳಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದರು. \s1 ಒಬ್ಬ ಪಾರ್ಶ್ವವಾಯು ರೋಗಿಯನ್ನು ಗುಣಮಾಡಿದ್ದು \p \v 17 ಒಂದು ದಿನ ಯೇಸು ಬೋಧಿಸುತ್ತಿದ್ದಾಗ, ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ\f + \fr 5:17 \fr*\fq ಫರಿಸಾಯರೂ \fq*\ft ಅಂದರೆ, \ft*\fqa ಯೆಹೂದ್ಯರಲ್ಲಿ ಮೋಶೆಯ ನಿಯಮವನ್ನು ಆಚರಿಸುವವರು\fqa*\f* ನಿಯಮ ಬೋಧಕರೂ ಅಲ್ಲಿ ಕುಳಿತುಕೊಂಡಿದ್ದರು. ಯೇಸುವಿನಲ್ಲಿ ಸ್ವಸ್ಥಮಾಡುವುದಕ್ಕಾಗಿ ದೇವರ ಶಕ್ತಿಯು ಇತ್ತು. \v 18 ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯಲ್ಲಿ ಹೊತ್ತುಕೊಂಡು ಬಂದು, ಒಳಗೆ ಯೇಸುವಿನ ಎದುರಿಗೆ ತರುವುದಕ್ಕೆ ಪ್ರಯತ್ನಿಸುತ್ತಿದ್ದರು. \v 19 ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ, ಮನೆಯ ಮೇಲೆ ಹೋಗಿ ಹೆಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ಯೇಸುವಿನ ಮುಂದೆ ಇಳಿಸಿದರು. \p \v 20 ಯೇಸು ಅವರ ವಿಶ್ವಾಸವನ್ನು ಕಂಡು ಅವನಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದು ಹೇಳಿದರು. \p \v 21 ಆಗ ಫರಿಸಾಯರೂ ನಿಯಮ ಬೋಧಕರೂ, “ದೇವದೂಷಣೆಯನ್ನು ಮಾಡುವುದಕ್ಕೆ ಈತನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮಲ್ಲಿ ಮಾತನಾಡಲಾರಂಭಿಸಿದರು. \p \v 22 ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವುದೇನು? \v 23 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ ‘ಎದ್ದು ನಡೆ,’ ಎನ್ನುವುದೋ? \v 24 ಆದರೆ ಮನುಷ್ಯಪುತ್ರನಾದ ನನಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು. \v 25 ಕೂಡಲೇ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೊರಟುಹೋದನು. \v 26 ಅಲ್ಲಿದ್ದವರೆಲ್ಲರೂ ವಿಸ್ಮಯಗೊಂಡು ದೇವರನ್ನು ಸ್ತುತಿಸಿದರು. ಅವರು ಭಯಭಕ್ತಿಯಿಂದ ಕೂಡಿದವರಾಗಿ, “ನಾವು ಈ ದಿನ ಅಪೂರ್ವವಾದ ಕಾರ್ಯಗಳನ್ನು ಕಂಡೆವು,” ಎಂದರು. \s1 ಲೇವಿಯನ್ನು ಯೇಸು ಕರೆದದ್ದು \p \v 27 ಇವುಗಳಾದ ಮೇಲೆ, ಯೇಸು ಹೊರಟುಹೋಗಿ ತೆರಿಗೆಯ ಕಛೇರಿಯಲ್ಲಿ ಕುಳಿತುಕೊಂಡಿದ್ದ ಲೇವಿ ಎಂಬ ಹೆಸರುಳ್ಳ ಒಬ್ಬ ಸುಂಕದವನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದರು. \v 28 ಲೇವಿ ಎಲ್ಲವನ್ನು ಬಿಟ್ಟು ಎದ್ದು ಯೇಸುವನ್ನು ಹಿಂಬಾಲಿಸಿದನು. \p \v 29 ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಯೇಸುವಿಗೆ ದೊಡ್ಡ ಔತಣವನ್ನು ಮಾಡಿಸಲು, ಬಹಳ ಜನ ಸುಂಕದವರು ಮತ್ತು ಇತರರು ಯೇಸುವಿನೊಂದಿಗೆ ಊಟಮಾಡುತ್ತಿದ್ದರು. \v 30 ಆದರೆ ಫರಿಸಾಯರೂ ಅವರ ಗುಂಪಿಗೆ ಸೇರಿದ ನಿಯಮ ಬೋಧಕರೂ ಯೇಸುವಿನ ವಿರೋಧವಾಗಿ ಗೊಣಗಾಡುತ್ತಾ ಶಿಷ್ಯರಿಗೆ, “ನೀವು ಏಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ?” ಎಂದು ಕೇಳಿದರು. \p \v 31 ಅದಕ್ಕೆ ಯೇಸು, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ. \v 32 ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನೇ ದೇವರ ಕಡೆಗೆ ತಿರುಗಿಕೊಳ್ಳುವಂತೆ ಕರೆಯಲು ಬಂದೆನು,” ಎಂದರು. \s1 ಉಪವಾಸದ ಕುರಿತು ಯೇಸುವನ್ನು ಪ್ರಶ್ನಿಸಿದ್ದು \p \v 33 ಕೆಲವರು ಯೇಸುವಿಗೆ, “ಯೋಹಾನನ ಶಿಷ್ಯರು ಪದೇಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ, ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ, ಆದರೆ ನಿಮ್ಮ ಶಿಷ್ಯರು ಏಕೆ ತಿಂದು ಕುಡಿಯುತ್ತಾರೆ?” ಎಂದು ಕೇಳಿದರು. \p \v 34 ಅದಕ್ಕೆ ಯೇಸು, “ಮದುಮಗನು ಮದುವೆ ಅತಿಥಿಗಳ ಸಂಗಡವಿರುವಾಗ ಅವರನ್ನು ಉಪವಾಸವಿರಿಸಲಾದೀತೆ? \v 35 ಆದರೆ ಮದುಮಗನನ್ನು ಅವರಿಂದ ತೆಗೆದುಕೊಂಡು ಹೋಗುವ ದಿವಸಗಳು ಬರುವುವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು,” ಎಂದು ಹೇಳಿದರು. \p \v 36 ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: “ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತುಂಡನ್ನು ಹರಿದು ತೇಪೆ ಹಚ್ಚುವುದಿಲ್ಲ. ಹಚ್ಚಿದರೆ ಆ ಹೊಸದು ಹರಿದು ಹೋಗುವುದು. ಹೊಸದರಿಂದ ಕತ್ತರಿಸಿದ ತುಂಡು ಹಳೆಯದರೊಂದಿಗೆ ಹೊಂದಿಕೆಯಾಗುವುದಿಲ್ಲ. \v 37 ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಚರ್ಮದ ಚೀಲಗಳು ಒಡೆದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ. \v 38 ಆದರೆ, ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ಹಾಕಿಡಬೇಕು. \v 39 ಯಾರೂ ಹಳೆಯ ದ್ರಾಕ್ಷಾರಸವನ್ನು ಕುಡಿದ ಮೇಲೆ ಹೊಸದನ್ನು ಅಪೇಕ್ಷಿಸುವುದಿಲ್ಲ, ಏಕೆಂದರೆ ಅವರು, ‘ಹಳೆಯದೇ ಉತ್ತಮವಾದದ್ದು,’ ಎನ್ನುವರು,” ಎಂದರು. \c 6 \s1 ಸಬ್ಬತ್ ದಿನದ ಒಡೆಯ \p \v 1 ಒಂದು ಯೆಹೂದ್ಯರ ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ದಾಟಿಹೋಗುತ್ತಿದ್ದರು. ಆಗ ಅವರ ಶಿಷ್ಯರು ತೆನೆಗಳನ್ನು ಕಿತ್ತು ತಮ್ಮ ಕೈಗಳಲ್ಲಿ ಹೊಸಕಿಕೊಂಡು ಅದರ ಕಾಳುಗಳನ್ನು ತಿನ್ನುತ್ತಿದ್ದರು. \v 2 ಫರಿಸಾಯರಲ್ಲಿ ಕೆಲವರು ಅವರಿಗೆ, “ಸಬ್ಬತ್ ದಿನದಲ್ಲಿ ಮೋಶೆಯ ನಿಯಮಕ್ಕೆ ವಿರುದ್ಧವಾಗಿರುವದನ್ನು ನೀವು ಏಕೆ ಮಾಡುತ್ತೀರಿ?” ಎಂದರು. \p \v 3 ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೇ?\f + \fr 6:3 \fr*\ft \+xt 1 ಅರಸು 21:6\+xt*\ft*\f* \v 4 ಅವನು ದೇವರ ಆಲಯದೊಳಗೆ ಹೋಗಿ, ಯಾಜಕರ ಹೊರತು ಬೇರೆಯವರು ತಿನ್ನುವುದಕ್ಕೆ ಮೋಶೆ ನಿಯಮಕ್ಕೆ ಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತೆಗೆದುಕೊಂಡು ತಿಂದು, ತನ್ನ ಸಂಗಡಿಗರಿಗೂ ಕೊಟ್ಟನಲ್ಲವೇ” ಎಂದರು. \v 5 ಯೇಸು ಅವರಿಗೆ, “ಮನುಷ್ಯಪುತ್ರನಾದ ನಾನು ಸಬ್ಬತ್ತಿಗೂ ಕರ್ತ ದೇವರಾಗಿದ್ದೇನೆ,” ಎಂದರು. \p \v 6 ಇನ್ನೊಂದು ಸಬ್ಬತ್ ದಿನದಲ್ಲಿ ಯೇಸು ಸಭಾಮಂದಿರದೊಳಕ್ಕೆ ಪ್ರವೇಶಿಸಿ ಬೋಧಿಸಿದರು, ಅಲ್ಲಿ ಬಲಗೈ ಬತ್ತಿದ ಒಬ್ಬ ಮನುಷ್ಯನಿದ್ದನು. \v 7 ಆಗ ಫರಿಸಾಯರೂ ನಿಯಮ ಬೋಧಕರೂ ಯೇಸುವಿಗೆ ವಿರೋಧವಾಗಿ ತಪ್ಪು ಕಂಡು ಹಿಡಿಯಬೇಕೆಂದು, ಅವರು ಆ ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಗಮನಿಸಿ ನೋಡುತ್ತಿದ್ದರು. \v 8 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದುಕೊಂಡು ಕೈಬತ್ತಿದವನಿಗೆ, “ನೀನು ಎದ್ದು ಬಂದು ನಡುವೆ ನಿಂತುಕೋ,” ಎಂದಾಗ ಅವನು ಎದ್ದು ನಿಂತುಕೊಂಡನು. \p \v 9 ಯೇಸು ಅವರಿಗೆ, “ನಾನು ನಿಮ್ಮನ್ನು ಕೇಳುತ್ತೇನೆ: ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ಮೋಶೆಯ ನಿಯಮಕ್ಕೆ ಸಮ್ಮತವೋ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಳಿಸುವುದೋ?” ಎಂದರು. \p \v 10 ಯೇಸು ಸುತ್ತಲೂ ಇದ್ದವರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದರು. ಅವನು ಹಾಗೆಯೇ ಮಾಡಿದನು. ಆಗ ಅವನ ಕೈ ಸಂಪೂರ್ಣವಾಗಿ ಗುಣವಾಯಿತು. \v 11 ಆದರೆ ಫರಿಸಾಯರೂ ನಿಯಮ ಬೋಧಕರೂ ತುಂಬಾ ಕೋಪಗೊಂಡು ಯೇಸುವಿಗೆ ಏನಾದರೂ ಮಾಡಬೇಕೆಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. \s1 ಹನ್ನೆರಡು ಮಂದಿ ಅಪೊಸ್ತಲರು \p \v 12 ಆ ದಿನಗಳಲ್ಲಿ ಯೇಸು ಪ್ರಾರ್ಥಿಸುವುದಕ್ಕಾಗಿ ಒಂದು ಬೆಟ್ಟಕ್ಕೆ ಹೋಗಿ, ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದರು. \v 13 ಬೆಳಗಾದ ಮೇಲೆ, ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ “ಅಪೊಸ್ತಲರು” ಎಂದು ಹೆಸರಿಟ್ಟರು. \b \li1 \v 14 ಅವರು ಯಾರೆಂದರೆ: ಪೇತ್ರನೆಂದು ಹೆಸರು ಹೊಂದಿದ ಸೀಮೋನ, ಅವನ ಸಹೋದರ ಅಂದ್ರೆಯ, \li1 ಯಾಕೋಬ, \li1 ಯೋಹಾನ, \li1 ಫಿಲಿಪ್ಪ, \li1 ಬಾರ್ತೊಲೊಮಾಯ, \li1 \v 15 ಮತ್ತಾಯ, \li1 ತೋಮ, \li1 ಅಲ್ಫಾಯನ ಮಗ ಯಾಕೋಬ, \li1 ದೇಶಾಭಿಮಾನಿ\f + \fr 6:15 \fr*\ft ರೋಮಾಧಿಕಾರಕ್ಕೆ ಎದುರಾಗಿ ಹೋರಾಡುತ್ತಿದ್ದ ಯೆಹೂದ್ಯರ ಒಂದು ಗುಂಪಿನ ಸದಸ್ಯನಾಗಿದ್ದನು.\ft*\f* ಎಂದು ಅನ್ನಿಸಿಕೊಂಡ ಸೀಮೋನ, \li1 \v 16 ಯಾಕೋಬನ ಮಗ ಯೂದ, \li1 ಮತ್ತು ದ್ರೋಹಿಯಾದ ಇಸ್ಕರಿಯೋತ ಯೂದ. \s1 ಆಶೀರ್ವಾದವೂ ಶಾಪವೂ \p \v 17 ಯೇಸು ಅವರೊಂದಿಗೆ ಕೆಳಗಿಳಿದು ಸಮತಟ್ಟಾದ ಭೂಮಿಯ ಮೇಲೆ ನಿಂತಿದ್ದಾಗ, ಅವರ ಶಿಷ್ಯರ ಗುಂಪು ಅಲ್ಲದೆ ಯೂದಾಯದಿಂದಲೂ ಯೆರೂಸಲೇಮಿನಿಂದಲೂ ಟೈರ್, ಸೀದೋನ್ ಪಟ್ಟಣಗಳಿರುವ ಸಮುದ್ರ ತೀರದಿಂದಲೂ \v 18 ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳಿಂದ ಸ್ವಸ್ಥರಾಗುವುದಕ್ಕೂ ಜನರು ದೊಡ್ಡ ಸಮೂಹವಾಗಿ ಬಂದರು. ದುರಾತ್ಮಗಳಿಂದ ಪೀಡಿತರಾದವರೂ ಬಂದು ಸ್ವಸ್ಥರಾದರು, \v 19 ಆಗ ಸಮೂಹದವರೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ಪ್ರಯತ್ನಿಸಿದರು, ಏಕೆಂದರೆ ಅವರಿಂದ ಶಕ್ತಿಯು ಹೊರಟು ಅವರೆಲ್ಲರನ್ನು ಸ್ವಸ್ಥಮಾಡುತ್ತಿತ್ತು. \p \v 20 ಯೇಸು ತಮ್ಮ ಶಿಷ್ಯರನ್ನು ನೋಡಿ, ಹೇಳಿದ್ದೇನೆಂದರೆ: \q1 “ಬಡವರಾದ ನೀವು ಧನ್ಯರು, \q2 ದೇವರ ರಾಜ್ಯವು ನಿಮ್ಮದೇ. \q1 \v 21 ಈಗ ಹಸಿದವರಾದ ನೀವು ಧನ್ಯರು, \q2 ನೀವು ತೃಪ್ತಿಹೊಂದುವಿರಿ. \q1 ಈಗ ಅಳುವವರಾದ ನೀವು ಧನ್ಯರು, \q2 ನೀವು ನಗುವಿರಿ. \q1 \v 22 ಮನುಷ್ಯಪುತ್ರನಾದ ನನ್ನ ನಿಮಿತ್ತ ಜನರು ನಿಮ್ಮನ್ನು ದ್ವೇಷಮಾಡಿ, \q2 ನಿಮ್ಮನ್ನು ಬಹಿಷ್ಕರಿಸಿ, ನಿಂದಿಸಿ, \q2 ನಿಮ್ಮ ಹೆಸರನ್ನು ಕೆಟ್ಟದೆಂದು ತಿರಸ್ಕರಿಸಿದರೆ \q3 ನೀವು ಧನ್ಯರು. \p \v 23 “ಆ ದಿನದಲ್ಲಿ ನೀವು ಸಂತೋಷಪಡಿರಿ, ಉಲ್ಲಾಸದಿಂದ ಕುಣಿದಾಡಿರಿ. ಇಗೋ, ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಈ ಜನರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು. \q1 \v 24 “ಆದರೆ ಐಶ್ವರ್ಯವಂತರೇ, ನಿಮಗೆ ಕಷ್ಟ, \q2 ಏಕೆಂದರೆ ನೀವು ನಿಮ್ಮ ನೆಮ್ಮದಿಯನ್ನು ಹೊಂದಿದ್ದೀರಿ. \q1 \v 25 ಈಗ ತಿಂದು ತೃಪ್ತಿಯಿಂದಿರುವವರೇ, ನಿಮಗೆ ಕಷ್ಟ, \q2 ಏಕೆಂದರೆ ನಿಮಗೆ ಹಸಿವೆಯಾಗುವುದು. \q1 ಈಗ ನಗುವವರೇ ನಿಮಗೆ ಕಷ್ಟ, \q2 ಏಕೆಂದರೆ ನೀವು ದುಃಖಿಸಿ ಗೋಳಾಡುವಿರಿ. \q1 \v 26 ಎಲ್ಲಾ ಜನರು ನಿಮ್ಮ ವಿಷಯದಲ್ಲಿ ಒಳ್ಳೆಯದಾಗಿ ಮಾತನಾಡಿದರೆ ನಿಮಗೆ ಕಷ್ಟ, \q2 ಇವರ ಪಿತೃಗಳು ಸುಳ್ಳು ಪ್ರವಾದಿಗಳಿಗೆ ಹಾಗೆಯೇ ಮಾಡಿದರು. \s1 ಶತ್ರುಗಳನ್ನು ಪ್ರೀತಿಸಬೇಕು \p \v 27 “ನನ್ನನ್ನು ಆಲಿಸುತ್ತಿರುವವರೆ ನನ್ನ ಮಾತನ್ನು ಕೇಳಿರಿ: ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಮಾಡುವವರಿಗೆ ಒಳ್ಳೆಯದನ್ನು ಮಾಡಿರಿ, \v 28 ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ಅವಮಾನ ಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ. \v 29 ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ತೋರಿಸು. ನಿನ್ನ ಮೇಲಂಗಿಯನ್ನು ತೆಗೆದುಕೊಳ್ಳುವವನಿಗೆ, ನಿನ್ನ ಒಳ ಅಂಗಿಯನ್ನು ಕೊಟ್ಟುಬಿಡು. \v 30 ನಿನ್ನಿಂದ ಕೇಳುವ ಪ್ರತಿಯೊಬ್ಬರಿಗೂ ಕೊಡು, ನಿನ್ನ ಸೊತ್ತನ್ನು ತೆಗೆದುಕೊಳ್ಳುವವನಿಂದ, ಅವುಗಳನ್ನು ತಿರುಗಿ ಕೇಳಬೇಡ. \v 31 ಇತರರು ನಿಮಗೆ ಏನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿರಿ. \p \v 32 “ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ, ನಿಮಗೇನು ದೊಡ್ಡಸ್ತಿಕೆ ಬಂದೀತು? ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವರನ್ನೇ ಪ್ರೀತಿಸುತ್ತಾರೆ. \v 33 ನಿಮಗೆ ಒಳ್ಳೆಯದನ್ನು ಮಾಡುವವರಿಗೆ ನೀವು ಒಳ್ಳೆಯದನ್ನು ಮಾಡಿದರೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ಮಾಡುತ್ತಾರಲ್ಲಾ. \v 34 ಯಾರಿಂದ ತಿರುಗಿ ಪಡೆದುಕೊಳ್ಳಬೇಕೆಂದು ನಿರೀಕ್ಷಿಸುತ್ತೀರೋ ಅಂಥವರಿಗೆ ಸಾಲಕೊಟ್ಟರೆ, ಅದರಿಂದ ನಿಮಗೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟದ್ದನ್ನು ತಿರುಗಿ ಪಡೆಯುವಂತೆ, ಪಾಪಿಗಳಿಗೆ ಸಾಲ ಕೊಡುತ್ತಾರೆ. \v 35 ಆದರೆ ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಅವರಿಗೆ ಒಳ್ಳೆಯದನ್ನು ಮಾಡಿರಿ. ಏನನ್ನೂ ತಿರುಗಿ ನಿರೀಕ್ಷಿಸದೆ ಸಾಲ ಕೊಡಿರಿ, ಆಗ ನಿಮ್ಮ ಪ್ರತಿಫಲ ದೊಡ್ಡದಾಗಿರುವುದು. ನೀವು ಮಹೋನ್ನತ ದೇವರ ಮಕ್ಕಳಾಗಿರುವಿರಿ, ಅವರು ಕೃತಜ್ಞತೆಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವರಾಗಿದ್ದಾರೆ. \v 36 ನಿಮ್ಮ ತಂದೆಯು ಕರುಣೆಯುಳ್ಳವರಾಗಿರುವ ಪ್ರಕಾರ, ನೀವೂ ಕರುಣೆಯುಳ್ಳವರಾಗಿರಿ. \s1 ಇತರರನ್ನು ತೀರ್ಪುಮಾಡಬೇಡಿರಿ \p \v 37 “ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ಇತರರನ್ನು ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ. ಕ್ಷಮಿಸಿರಿ, ಆಗ ನಿಮ್ಮನ್ನೂ ಕ್ಷಮಿಸುವರು. \v 38 ಕೊಡಿರಿ, ಆಗ ನಿಮಗೂ ಕೊಡುವರು. ಒಳ್ಳೆಯ ಅಳತೆಯಲ್ಲಿ ಒತ್ತಿ, ಕುಲುಕಿ, ಚೆಲ್ಲುವಂತೆ ಮನುಷ್ಯರು ನಿಮ್ಮ ಮಡಿಲಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು,” ಎಂದರು. \p \v 39 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದು: “ಕುರುಡನು ಕುರುಡನಿಗೆ ದಾರಿತೋರಿಸಬಲ್ಲನೋ? ಅವರಿಬ್ಬರೂ ಹಳ್ಳಕ್ಕೆ ಬೀಳುವರಲ್ಲವೇ? \v 40 ತನ್ನ ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ, ಆದರೆ ಪರಿಪೂರ್ಣನಾಗಿರುವ ಪ್ರತಿಯೊಬ್ಬನು ತನ್ನ ಗುರುವಿನಂತೆ ಇರುವನಷ್ಟೇ. \p \v 41 “ನೀನು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ನೋಡುವುದೇಕೆ? \v 42 ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೀನು ತೆಗೆಯದೆ ನಿನ್ನ ಸಹೋದರನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯುತ್ತೇನೆ,’ ಎಂದು ನೀನು ಹೇಳುವುದು ಹೇಗೆ? ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ತೆಗೆದುಹಾಕು, ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯಲು ನಿನ್ನ ಕಣ್ಣು ಸ್ಪಷ್ಟವಾಗಿ ಕಾಣುವುದು. \s1 ಮರ ಮತ್ತು ಅದರ ಫಲಗಳು \p \v 43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ, ಇಲ್ಲವೆ ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. \v 44 ಪ್ರತಿಯೊಂದು ಮರವು ಅದರ ಫಲದಿಂದಲೇ ಗೊತ್ತಾಗುವುದು. ಏಕೆಂದರೆ ಮನುಷ್ಯರು ಮುಳ್ಳುಗಿಡಗಳಲ್ಲಿ ಅಂಜೂರಗಳನ್ನು ಕೀಳುವುದಿಲ್ಲ, ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿಗಳನ್ನು ಕೊಯ್ಯುವುದಿಲ್ಲ. \v 45 ಒಳ್ಳೆಯವನು ತನ್ನ ಹೃದಯದ ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಆದರೆ ಕೆಟ್ಟವನು ತನ್ನ ಹೃದಯದ ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವದನ್ನೇ ಅವನ ಬಾಯಿ ಮಾತನಾಡುತ್ತದೆ. \s1 ಮನೆ ಕಟ್ಟಿದ ಬುದ್ಧಿವಂತ ಹಾಗೂ ಬುದ್ಧಿಹೀನ \p \v 46 “ನನ್ನನ್ನು ನೀವು, ‘ಕರ್ತದೇವರೇ, ಕರ್ತದೇವರೇ,’ ಎಂದು ಕರೆದು ನಾನು ಹೇಳುವವುಗಳನ್ನು ನೀವು ಮಾಡದೆ ಇರುವುದು ಏಕೆ? \v 47 ಯಾರು ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ ಅದರಂತೆ ನಡೆಯುತ್ತಾರೋ, ಅಂಥವರು ಯಾರಿಗೆ ಸಮಾನರಾಗಿದ್ದಾರೆಂದು ನಾನು ನಿಮಗೆ ತೋರಿಸುತ್ತೇನೆ. \v 48 ಅವರು ಆಳವಾಗಿ ಅಗೆದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ, ಮನೆ ಕಟ್ಟಿದವರಿಗೆ ಸಮಾನರಾಗಿದ್ದಾರೆ. ಪ್ರಳಯವು ಎದ್ದು, ಪ್ರವಾಹವು ಆ ಮನೆಗೆ ರಭಸವಾಗಿ ಬಡಿದರೂ ಅದನ್ನು ಕದಲಿಸಲಿಕ್ಕಾಗದೆ ಹೋಯಿತು, ಏಕೆಂದರೆ ಅದು ಬಲವಾಗಿ ಕಟ್ಟಲಾಗಿತ್ತು. \v 49 ಆದರೆ ನನ್ನ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದೆ ಇರುವವರು, ಅಸ್ತಿವಾರವಿಲ್ಲದೆ ಮರಳಿನ ಮೇಲೆ ಮನೆ ಕಟ್ಟಿದವರಿಗೆ ಹೋಲಿಕೆಯಾಗಿದ್ದಾರೆ. ಪ್ರವಾಹವು ಆ ಮನೆಗೆ ಅಪ್ಪಳಿಸಿದಾಗ, ಕೂಡಲೇ ಅದು ಕುಸಿದು ಬಿತ್ತು. ಹೀಗೆ ಆ ಮನೆಯು ಸರ್ವನಾಶವಾಯಿತು.” \c 7 \s1 ಶತಾಧಿಪತಿಯ ವಿಶ್ವಾಸ \p \v 1 ತಮ್ಮ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ, ಯೇಸು ಕಪೆರ್ನೌಮಿಗೆ ಪ್ರವೇಶಿಸಿದರು. \v 2 ಆಗ ಒಬ್ಬ ಶತಾಧಿಪತಿಗೆ,\f + \fr 7:2 \fr*\fq ಶತಾಧಿಪತಿ \fq*\ft ನೂರು ಮಂದಿ ಸೈನಿಕರಿಗೆ ಅಧಿಪತಿ\ft*\f* ಪ್ರಿಯನಾಗಿದ್ದ ಸೇವಕ, ಅಸ್ವಸ್ಥನಾಗಿ ಸಾಯುವುದರಲ್ಲಿದ್ದನು. \v 3 ಅವನು ಯೇಸುವಿನ ವಿಷಯ ಕೇಳಿದಾಗ, ಬಂದು ತನ್ನ ಸೇವಕನನ್ನು ಗುಣಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಅವರ ಬಳಿಗೆ ಕಳುಹಿಸಿದನು. \v 4 ಅವರು ಯೇಸುವಿನ ಬಳಿಗೆ ಬಂದು ಅವರಿಗೆ, “ನೀವು ಇದನ್ನು ಮಾಡುವುದಕ್ಕೆ ಅವನು ಯೋಗ್ಯನು, \v 5 ಏಕೆಂದರೆ ಅವನು ನಮ್ಮ ಜನಾಂಗವನ್ನು ಪ್ರೀತಿಸುವುದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ,” ಎಂದು ಆಸಕ್ತಿಯಿಂದ ಬೇಡಿಕೊಂಡರು. \v 6 ಯೇಸು ಅವರೊಂದಿಗೆ ಹೋದರು. \p ಅವರು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗಲೇ ಶತಾಧಿಪತಿಯು ಸ್ನೇಹಿತರನ್ನು ಯೇಸುವಿನ ಬಳಿಗೆ ಕಳುಹಿಸಿ, “ಕರ್ತದೇವರೇ, ನಿಮ್ಮನ್ನು ತೊಂದರೆ ಪಡಿಸಿಕೊಳ್ಳಬೇಡಿರಿ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ. \v 7 ನಾನು ನಿಮ್ಮ ಬಳಿಗೆ ಬರುವುದಕ್ಕೆ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು. \v 8 ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು,’ ಎಂದರೆ ಅವನು ಹೋಗುತ್ತಾನೆ, ಮತ್ತೊಬ್ಬನಿಗೆ ‘ಬಾ,’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ,” ಎಂದು ಹೇಳಿ ಕಳುಹಿಸಿದನು. \p \v 9 ಯೇಸು ಅವನ ಈ ಮಾತುಗಳನ್ನು ಕೇಳಿದಾಗ, ಆಶ್ಚರ್ಯಪಟ್ಟು ತಿರುಗಿಕೊಂಡು ತಮ್ಮನ್ನು ಹಿಂಬಾಲಿಸುತ್ತಿದ್ದ ಗುಂಪಿಗೆ, “ನಾನು ನಿಮಗೆ ಹೇಳುವುದೇನೆಂದರೆ, ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲ್ ಜನರಲ್ಲಿಯೂ ಸಹ ಕಾಣಲಿಲ್ಲ,” ಎಂದರು. \v 10 ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಅಸ್ವಸ್ಥನಾಗಿದ್ದ ಆ ಸೇವಕ ಸ್ವಸ್ಥನಾಗಿರುವುದನ್ನು ಕಂಡರು. \s1 ಸತ್ತು ಹೋಗಿದ್ದ ವಿಧವೆಯ ಮಗನನ್ನು ಬದುಕಿಸಿದ್ದು \p \v 11 ಇದಾದ ಮೇಲೆ, ಯೇಸು ನಾಯಿನ್ ಎಂಬ ಪಟ್ಟಣಕ್ಕೆ ಹೋದರು. ಆಗ ಅವರ ಶಿಷ್ಯರೂ ಜನರ ದೊಡ್ಡ ಗುಂಪೂ ಅವರ ಸಂಗಡ ಹೋದರು. \v 12 ಯೇಸು ಪಟ್ಟಣ ದ್ವಾರದ ಸಮೀಪಕ್ಕೆ ಬಂದಾಗ, ಸತ್ತು ಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೋಗುತ್ತಿದ್ದರು, ಅವನು ತನ್ನ ತಾಯಿಗೆ ಒಬ್ಬನೇ ಮಗನು, ಆಕೆಯು ವಿಧವೆಯಾಗಿದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು. \v 13 ಕರ್ತದೇವರು ಆಕೆಯನ್ನು ಕಂಡು, ಆಕೆಯ ಮೇಲೆ ಕನಿಕರಪಟ್ಟು, “ಅಳಬೇಡ” ಎಂದರು. \p \v 14 ಅನಂತರ ಯೇಸು ಬಂದು ಶವದ ಚಟ್ಟವನ್ನು ಮುಟ್ಟಿದಾಗ, ಅದನ್ನು ಹೊತ್ತುಕೊಂಡಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು!” ಎಂದರು. \v 15 ಆಗ ಸತ್ತವನು ಎದ್ದು ಕುಳಿತುಕೊಂಡು ಮಾತನಾಡಲಾರಂಭಿಸಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದರು. \p \v 16 ಆಗ ಅವರೆಲ್ಲರೂ ಭಯಭಕ್ತಿಯಿಂದ ಕೂಡಿದವರಾಗಿ, “ನಮ್ಮ ಮಧ್ಯದಲ್ಲಿ ಒಬ್ಬ ಮಹಾ ಪ್ರವಾದಿಯು ಎದ್ದಿದ್ದಾರೆ; ದೇವರು ತಮ್ಮ ಜನರಿಗೆ ಸಹಾಯಮಾಡಲು ಬಂದಿದ್ದಾರೆ,” ಎಂದು ದೇವರನ್ನು ಮಹಿಮೆಪಡಿಸುತ್ತಾ ಹೇಳಿದರು. \v 17 ಯೇಸುವಿನ ವಿಷಯವಾದ ಈ ಸುದ್ದಿಯು ಯೂದಾಯದ ಎಲ್ಲಾ ಪ್ರಾಂತಕ್ಕೂ, ಸುತ್ತಲಿನ ಎಲ್ಲಾ ಪ್ರಾಂತಕ್ಕೂ ಹರಡಿತು. \s1 ಸ್ನಾನಿಕ ಯೋಹಾನನು ಹಾಗೂ ಯೇಸು \p \v 18 ಯೋಹಾನನ ಶಿಷ್ಯರು ಈ ಎಲ್ಲಾ ವಿಷಯಗಳನ್ನು ಅವನಿಗೆ ತಿಳಿಯಪಡಿಸಿದರು, \v 19 ಆಗ ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದ ಕ್ರಿಸ್ತನು ನೀನೋ\f + \fr 7:19 \fr*\ft ಯೆಹೂದ್ಯರು ಕ್ರಿಸ್ತನನ್ನು ಮೆಸ್ಸೀಯನನ್ನು ಎದುರುನೋಡುತ್ತಿದ್ದರು, ಆದ್ದರಿಂದ ಯೋಹಾನನು ಈ ಪ್ರಶ್ನೆಯನ್ನು ಕೇಳಿದನು\ft*\f* ಇಲ್ಲವೇ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ?” ಎಂದು ಕರ್ತದೇವರನ್ನು ಕೇಳಲು ಅವರ ಬಳಿಗೆ ಕಳುಹಿಸಿದನು. \p \v 20 ಅವರು ಯೇಸುವಿನ ಬಳಿಗೆ ಬಂದು, “ ‘ಬರಬೇಕಾದವರು ನೀವೋ? ಇಲ್ಲವೆ ನಾವು ಬೇರೊಬ್ಬರಿಗಾಗಿ ಎದುರು ನೋಡಬೇಕೋ?’ ಎಂದು ಕೇಳುವುದಕ್ಕಾಗಿ ಸ್ನಾನಿಕ ಯೋಹಾನನು ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ,” ಎಂದು ಹೇಳಿದರು. \p \v 21 ಅದೇ ಸಮಯದಲ್ಲಿ ರೋಗಗಳಿಂದಲೂ ವ್ಯಾಧಿಗಳಿಂದಲೂ ದುರಾತ್ಮಗಳಿಂದಲೂ ಪೀಡಿತರಾದ ಅನೇಕರನ್ನು ಯೇಸು ಗುಣಪಡಿಸುತ್ತಿದ್ದರು, ಕುರುಡರಾದ ಅನೇಕರಿಗೆ ದೃಷ್ಟಿ ನೀಡುತ್ತಿದ್ದರು. \v 22 ತರುವಾಯ ಯೇಸು ಅವರಿಗೆ, “ನೀವು ಕಂಡು ಕೇಳಿದವುಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ: ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ.\f + \fr 7:22 \fr*\ft \+xt ಯೆಶಾಯ 35:5,6; 61:1\+xt*\ft*\f* \v 23 ನನ್ನ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳದವನೇ ಧನ್ಯನು,” ಎಂದರು. \p \v 24 ಯೋಹಾನನ ಶಿಷ್ಯರು ಹೊರಟುಹೋದ ಮೇಲೆ, ಯೇಸು ಯೋಹಾನನ ವಿಷಯವಾಗಿ ಮಾತನಾಡಲಾರಂಭಿಸಿ ಜನರಿಗೆ, “ನೀವು ಯಾವುದನ್ನು ಕಾಣುವುದಕ್ಕಾಗಿ ಅರಣ್ಯಕ್ಕೆ ಹೋದಿರಿ? ಗಾಳಿಗೆ ಓಲಾಡುವ ದಂಟನ್ನೋ? \v 25 ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿಕೊಂಡು ಸುಖವಾಗಿ ಜೀವಿಸುವವರು ಅರಮನೆಗಳಲ್ಲಿ ಇರುತ್ತಾರೆ. \v 26 ಹಾಗಾದರೆ ಏನು ಕಾಣುವುದಕ್ಕಾಗಿ ಹೋದಿರಿ? ಒಬ್ಬ ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ, ಎಂದು ನಾನು ನಿಮಗೆ ಹೇಳುತ್ತೇನೆ. \v 27 ಯಾರ ವಿಷಯವಾಗಿ ಪವಿತ್ರ ವೇದದಲ್ಲಿ ಬರೆದಿತ್ತೋ ಅವನೇ ಇವನು: \q1 “ ‘ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧಮಾಡುವಂತೆ \q2 ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ,’\f + \fr 7:27 \fr*\ft \+xt ಮಲಾಕಿ 3:1\+xt*\ft*\f* \m \v 28 ನಾನು ನಿಮಗೆ ಹೇಳುವುದೇನೆಂದರೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಇಲ್ಲ; ಆದರೆ ದೇವರ ರಾಜ್ಯದಲ್ಲಿ ಅತ್ಯಂತ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ,” ಎಂದರು. \p \v 29 ಯೋಹಾನನಿಂದ ಉಪದೇಶ ಕೇಳಿದ ಎಲ್ಲಾ ಜನರೂ ಸುಂಕದವರೂ ಸಹ, ಯೇಸುವಿನ ಮಾತುಗಳನ್ನು ಕೇಳಿದಾಗ, ದೇವರ ಮಾರ್ಗವು ಸರಿಯಾಗಿದೆಯೆಂದು ಒಪ್ಪಿಕೊಂಡರು, ಏಕೆಂದರೆ ಅವರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು. \v 30 ಆದರೆ ಫರಿಸಾಯರೂ ಮೋಶೆಯ ನಿಯಮ ಪಂಡಿತರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು. \p \v 31 ಅನಂತರ ಯೇಸು ಜನರಿಗೆ, “ಈ ಕಾಲದ ಜನರನ್ನು, ನಾನು ಯಾವುದಕ್ಕೆ ಹೋಲಿಸಲಿ? ಅವರು ಯಾವುದಕ್ಕೆ ಹೋಲಿಕೆಯಾಗಿದ್ದಾರೆ? \v 32 ಅವರು ಸಂತೆಯಲ್ಲಿ ಕುಳಿತುಕೊಂಡು ಒಬ್ಬರನ್ನೊಬ್ಬರು ಕರೆಯುತ್ತಾ: \q1 “ ‘ನಾವು ನಿಮಗಾಗಿ ಕೊಳಲೂದಿದೆವು, \q2 ನೀವು ಕುಣಿಯಲಿಲ್ಲ, \q1 ನಾವು ನಿಮಗಾಗಿ ಶೋಕಗೀತೆ ಹಾಡಿದೆವು, \q2 ನೀವು ಅಳಲಿಲ್ಲ,’ \m ಎಂದು ಹೇಳುವ ಮಕ್ಕಳಿಗೆ ಹೋಲಿಕೆಯಾಗಿದ್ದಾರೆ. \p \v 33 “ಸ್ನಾನಿಕ ಯೋಹಾನನು ರೊಟ್ಟಿಯನ್ನು ತಿನ್ನದೆಯೂ ದ್ರಾಕ್ಷಾರಸವನ್ನು ಕುಡಿಯದೆಯೂ ಬಂದನು, ಅದಕ್ಕೆ ನೀವು, ‘ಅವನಿಗೆ ದೆವ್ವ ಹಿಡಿದಿದೆ,’ ಎನ್ನುತ್ತೀರಿ. \v 34 ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು, ಆದರೆ ನೀವು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎನ್ನುತ್ತೀರಿ. \v 35 ಆದರೆ ಜ್ಞಾನವನ್ನು ಅನ್ವಯಿಸಿಕೊಳ್ಳುವಾಗಲೇ ಜ್ಞಾನದ ಗುಣಲಕ್ಷಣಗಳು ಸ್ಪಷ್ಟವಾಗಿರುವುದು,” ಎಂದರು. \s1 ಪಾಪಿಯಾದ ಸ್ತ್ರೀಯಿಂದ ಯೇಸು ಅಭಿಷೇಕ ಹೊಂದಿದ್ದು \p \v 36 ಆಗ ಫರಿಸಾಯರಲ್ಲಿ ಒಬ್ಬನು ಯೇಸು ತನ್ನೊಂದಿಗೆ ಊಟ ಮಾಡಬೇಕೆಂದು ಅಪೇಕ್ಷಿಸಿದನು, ಆಗ ಯೇಸು ಆ ಫರಿಸಾಯನ ಮನೆಯೊಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. \v 37 ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತುಕೊಂಡಿದ್ದಾರೆಂದು ಒಬ್ಬ ಪಾಪಿ ಸ್ತ್ರೀಯು ತಿಳಿದು, ಸುಗಂಧ ತೈಲದ ಭರಣಿಯನ್ನು ತಂದು, \v 38 ಅವರ ಪಾದಗಳ ಬಳಿಯಲ್ಲಿ ನಿಂತು, ಅಳುತ್ತಾ ಅವರ ಪಾದಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ, ತನ್ನ ತಲೆಕೂದಲಿನಿಂದ ಒರೆಸಿ, ಅವರ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು. \p \v 39 ಆಗ ಯೇಸುವನ್ನು ಆಮಂತ್ರಿಸಿದ ಫರಿಸಾಯನು, ಅದನ್ನು ಕಂಡು ತನ್ನೊಳಗೆ, “ಈ ಮನುಷ್ಯ ಒಬ್ಬ ಪ್ರವಾದಿಯಾಗಿದ್ದರೆ, ತನ್ನನ್ನು ಮುಟ್ಟುತ್ತಿದ್ದವಳು ಯಾರು, ಎಂಥಾ ಹೆಂಗಸು ಎಂದು ತಿಳಿದುಕೊಳ್ಳುತ್ತಿದ್ದನು. ಅವಳು ಒಬ್ಬ ಪಾಪಿ,” ಎಂದು ಅಂದುಕೊಂಡನು. \p \v 40 ಆಗ ಯೇಸು ಅವನಿಗೆ, “ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ವಿಷಯವಿದೆ,” ಎಂದರು. \p ಸೀಮೋನನು ಯೇಸುವಿಗೆ, “ಗುರುವೇ, ಹೇಳಿ” ಎಂದನು. \p \v 41 ಆಗ ಯೇಸು, “ಸಾಲಕೊಡುವ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು, ಒಬ್ಬನು ಐದು ನೂರು ಬೆಳ್ಳಿ ನಾಣ್ಯಗಳನ್ನೂ,\f + \fr 7:41 \fr*\ft ಗ್ರೀಕ್ ಭಾಷೆಯಲ್ಲಿ ದಿನಾರಿ. ರೋಮನ್ನರ ಒಂದು ದಿನಾರಿಯ ಬೆಳ್ಳಿ ನಾಣ್ಯವು, ಒಬ್ಬ ಸಾಮಾನ್ಯ ಕೂಲಿಗಾರನ ಒಂದು ದಿನದ ಕೂಲಿಗೆ ಸಮವಾಗಿತ್ತು. ನೋಡಿರಿ \+xt ಮತ್ತಾಯ 20:2\+xt*\ft*\f* ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನೂ ಕೊಡಬೇಕಾಗಿತ್ತು. \v 42 ಆದರೆ ಅವರಿಬ್ಬರಿಗೂ ಸಾಲತೀರಿಸುವುದಕ್ಕೆ ಹಣ ಇರಲಿಲ್ಲ. ಅವನು ಅವರಿಬ್ಬರ ಸಾಲವನ್ನೂ ರದ್ದುಮಾಡಿಬಿಟ್ಟನು. ಆದ್ದರಿಂದ ಅವರಲ್ಲಿ ಯಾರು ಬಹಳವಾಗಿ ಅವನನ್ನು ಪ್ರೀತಿಸುವರು?” ಎಂದು ಕೇಳಿದರು. \p \v 43 ಅದಕ್ಕೆ ಸೀಮೋನನು ಉತ್ತರವಾಗಿ, “ಯಾರಿಗೆ ಅವನು ಹೆಚ್ಚಾಗಿ ರದ್ದು ಮಾಡಿದನೋ ಅವನೇ ಎಂದು ತೋರುತ್ತದೆ,” ಎಂದನು. \p ಆಗ ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪು ಮಾಡಿದೆ,” ಎಂದರು. \p \v 44 ತರುವಾಯ ಯೇಸು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನನಿಗೆ, “ಈ ಸ್ತ್ರೀಯನ್ನು ಕಂಡಿದ್ದೀಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ. ಇವಳಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತನ್ನ ತಲೆಕೂದಲಿನಿಂದ ಅವುಗಳನ್ನು ಒರೆಸಿದ್ದಾಳೆ. \v 45 ನೀನು ನನಗೆ ಮುದ್ದು ಕೊಡಲಿಲ್ಲ. ಆದರೆ ನಾನು ಒಳಗೆ ಬಂದಾಗಿನಿಂದ ಈ ಸ್ತ್ರೀಯು ನನ್ನ ಪಾದಗಳಿಗೆ ಮುದ್ದಿಡುವುದನ್ನು ಬಿಡಲಿಲ್ಲ. \v 46 ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ, ಆದರೆ ಈ ಸ್ತ್ರೀಯು ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿದ್ದಾಳೆ. \v 47 ಬಹಳವಾಗಿರುವ ಇವಳ ಪಾಪಗಳು ಕ್ಷಮಿಸಲಾಗಿವೆ. ಏಕೆಂದರೆ ಇವಳು ಬಹಳವಾಗಿ ಪ್ರೀತಿಸಿದಳು. ಆದರೆ ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿಸುವನು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು. \p \v 48 ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು. \p \v 49 ಯೇಸುವಿನ ಸಂಗಡ ಊಟಕ್ಕೆ ಕುಳಿತವರು, “ಪಾಪಗಳನ್ನು ಸಹ ಕ್ಷಮಿಸುವುದಕ್ಕೆ ಈತನು ಯಾರು?” ಎಂದು ತಮ್ಮತಮ್ಮೊಳಗೆ ಅಂದುಕೊಳ್ಳಲಾರಂಭಿಸಿದರು. \p \v 50 ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿದೆ, ಸಮಾಧಾನದಿಂದ ಹೋಗು,” ಎಂದರು. \c 8 \s1 ಬಿತ್ತುವವನ ಸಾಮ್ಯ \p \v 1 ಇದಾದ ಮೇಲೆ, ಯೇಸು ಪ್ರತಿಯೊಂದು ಪಟ್ಟಣಕ್ಕೂ ಹಳ್ಳಿಗೂ ಹೋಗಿ, ದೇವರ ರಾಜ್ಯದ ವಿಷಯ ಪ್ರಚಾರ ಮಾಡುತ್ತಾ ಸುವಾರ್ತೆಯನ್ನು ಸಾರುತ್ತಾ ಇದ್ದರು. ಹನ್ನೆರಡು ಮಂದಿ ಶಿಷ್ಯರು ಅವರೊಂದಿಗೆ ಇದ್ದರು. \v 2 ಇದಲ್ಲದೆ ದುರಾತ್ಮಗಳಿಂದಲೂ ರೋಗಗಳಿಂದಲೂ ಬಿಡುಗಡೆ ಹೊಂದಿದ ಕೆಲವು ಸ್ತ್ರೀಯರು ಮತ್ತು ಏಳು ದೆವ್ವಗಳು ಬಿಟ್ಟುಹೋಗಿದ್ದ ಮಗ್ದಲಿನ ಎಂದು ಕರೆಯಲಾದ ಮರಿಯಳು, \v 3 ಹೆರೋದನ ಅರಮನೆಯ ಗೃಹ ನಿರ್ವಾಹಕನಾದ ಕೂಜನ ಪತ್ನಿ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕರು ತಮ್ಮ ಆಸ್ತಿಯಿಂದ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರಮಾಡುತ್ತಿದ್ದರು. \p \v 4 ಪ್ರತಿಯೊಂದು ಪಟ್ಟಣದಿಂದ ಬಹುಜನರು ಅವರ ಬಳಿಗೆ ಒಟ್ಟಾಗಿ ಸೇರಿ ಬರಲು ಯೇಸು ಒಂದು ಸಾಮ್ಯವನ್ನು ಅವರಿಗೆ ಹೇಳಿದರು. \v 5 “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುತ್ತಿರುವಾಗ, ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು; ಅವು ಕಾಲ್ತುಳಿತಕ್ಕೆ ಒಳಗಾದವು, ಆಕಾಶದ ಪಕ್ಷಿಗಳು ಅವುಗಳನ್ನು ಹೆಕ್ಕಿ ತಿಂದವು. \v 6 ಇದಲ್ಲದೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು, ಅವು ಮೊಳೆತ ಕೂಡಲೇ ತೇವ ಇಲ್ಲದಿರುವ ಕಾರಣ ಒಣಗಿಹೋದವು. \v 7 ಇನ್ನು ಕೆಲವು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆಗ ಮುಳ್ಳುಗಿಡಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. \v 8 ಉಳಿದ ಬೀಜಗಳು ಒಳ್ಳೆಯ ನೆಲದ ಮೇಲೆ ಬಿದ್ದವು. ಆಗ ಅವು ಬೆಳೆದು ನೂರರಷ್ಟು ಫಲಕೊಟ್ಟವು.” \p ಇದನ್ನು ಯೇಸು ಹೇಳಿ, “ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ,” ಎಂದು ಒತ್ತಿ ಹೇಳಿದರು. \p \v 9 ಯೇಸುವಿನ ಶಿಷ್ಯರು ಅವರನ್ನು ಈ ಸಾಮ್ಯದ ಅರ್ಥ ಏನಾಗಿರಬಹುದು? ಎಂದು ಕೇಳಿದರು. \v 10 ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕೆ ನಿಮಗೆ ಅನುಮತಿಸಲಾಗಿದೆ, ಆದರೆ ಉಳಿದವರಿಗೆ, \q1 “ ‘ಅವರು ಕಣ್ಣಾರೆ ನೋಡಿದರೂ ಕಾಣದಂತೆಯೂ; \q2 ಮತ್ತು ಕೇಳಿದರೂ ಗ್ರಹಿಸದಂತೆ ಸಾಮ್ಯಗಳಲ್ಲಿ ಮರೆಯಾಗಿವೆ.’\f + \fr 8:10 \fr*\ft \+xt ಯೆಶಾಯ 6:9\+xt*\ft*\f* \p \v 11 “ಆ ಸಾಮ್ಯದ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ. \v 12 ವಾಕ್ಯವನ್ನು ಕೇಳಿದವರು ನಂಬಿ ರಕ್ಷಣೆ ಹೊಂದಿಕೊಳ್ಳದಂತೆ, ಪಿಶಾಚನು ಬಂದು ಅವರ ಹೃದಯದೊಳಗಿಂದ, ಆ ವಾಕ್ಯವನ್ನು ತೆಗೆದುಬಿಡುತ್ತಾನೆ, ಇವರೇ ಆ ಬೀಜಗಳು ಬಿದ್ದ ಪಕ್ಕದ ದಾರಿಯಾಗಿದ್ದಾರೆ. \v 13 ಬೀಜ ಬಿದ್ದ ಕಲ್ಲುಭೂಮಿಯು ಯಾರೆಂದರೆ ವಾಕ್ಯವನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸುವವರು, ಆದರೆ ಇವರು ಬೇರಿಲ್ಲದಿರುವುದರಿಂದ, ಸ್ವಲ್ಪಕಾಲ ನಂಬಿ, ಶೋಧನೆ ಬಂದಾಗ ಬಿದ್ದುಹೋಗುವವರು. \v 14 ಬೀಜ ಬಿದ್ದ ಮುಳ್ಳುನೆಲವು ಯಾರೆಂದರೆ ವಾಕ್ಯವನ್ನು ಕೇಳಿದ ಮೇಲೆ ಮುಂದುವರಿದು, ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಮತ್ತು ಭೋಗಗಳಿಂದಲೂ ಅದುಮಿಬಿಟ್ಟು, ಪರಿಪಕ್ವತೆಗೆ ಫಲಕೊಡದಿದ್ದವರು. \v 15 ಆದರೆ ಬೀಜ ಬಿದ್ದ ಒಳ್ಳೆಯ ಭೂಮಿಯವರು ಯಾರೆಂದರೆ ಯಥಾರ್ಥವಾದ ಒಳ್ಳೆಯ ಹೃದಯದಿಂದ, ವಾಕ್ಯವನ್ನು ಕೇಳಿ ಅದನ್ನು ಕೈಕೊಂಡು, ತಾಳ್ಮೆಯಿಂದ ಫಲಿಸುವವರೇ,” ಎಂದು ಹೇಳಿದರು. \s1 ದೀಪಸ್ತಂಭದ ಮೇಲೆ ದೀಪ \p \v 16 “ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚುವುದಿಲ್ಲ, ಇಲ್ಲವೆ ಮಂಚದ ಕೆಳಗೆ ಇಡುವುದಿಲ್ಲ. ಆದರೆ ಮನೆಯೊಳಗೆ ಪ್ರವೇಶಿಸುವವರು ಬೆಳಕನ್ನು ಕಾಣುವಂತೆ, ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. \v 17 ಪ್ರಕಟವಾಗದಂತೆ ಯಾವುದೂ ಮರೆಯಾಗಿರುವುದಿಲ್ಲ, ಬೆಳಕಿಗೆ ಬಾರದೆ ಇರುವ ರಹಸ್ಯವು ಯಾವುದೂ ಇಲ್ಲ. \v 18 ಆದ್ದರಿಂದ ನೀವು ಕೇಳುವ ವಿಷಯಗಳಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು; ಇಲ್ಲದವರ ಕಡೆಯಿಂದ ತಮಗಿದೆ ಎಂದುಕೊಳ್ಳುವುದನ್ನು ಸಹ, ಅವರಿಂದ ಕಿತ್ತುಕೊಳ್ಳಲಾಗುವುದು,” ಎಂದು ಹೇಳಿದರು. \s1 ಯೇಸುವಿನ ಸಂಬಂಧಿಕರು \p \v 19 ಯೇಸುವಿನ ತಾಯಿ ಮತ್ತು ಸಹೋದರರು ಅವರಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಅವರ ಬಳಿಗೆ ಹೋಗಲಾರದೆ ಇದ್ದರು. \v 20 ಆಗ ಒಬ್ಬನು ಯೇಸುವಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮ್ಮನ್ನು ಕಾಣಬೇಕೆಂದು, ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ,” ಎಂದನು. \p \v 21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನ್ನ ತಾಯಿ ಮತ್ತು ನನ್ನ ಸಹೋದರರು ಆಗಿದ್ದಾರೆ,” ಎಂದು ಹೇಳಿದರು. \s1 ಯೇಸು ಸಮುದ್ರದ ಬಿರುಗಾಳಿಯನ್ನು ನಿಲ್ಲಿಸಿದ್ದು \p \v 22 ಒಂದು ದಿನ ಯೇಸು ತಮ್ಮ ಶಿಷ್ಯರಿಗೆ, “ನಾವು ಕೆರೆಯ ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು, ಆಗ ಅವರು ದೋಣಿಯನ್ನು ಹತ್ತಿ ಹೊರಟರು. \v 23 ಆದರೆ ಅವರು ಪ್ರಯಾಣ ಮಾಡುತ್ತಿದ್ದಾಗ, ಯೇಸು ನಿದ್ರಿಸುತ್ತಿದ್ದರು. ಆಗ ಬಿರುಗಾಳಿಯು ಸರೋವರದ ಮೇಲೆ ಬೀಸಲು, ದೋಣಿಯು ನೀರಿನಿಂದ ತುಂಬಿದ್ದರಿಂದ, ಅವರು ಅಪಾಯಕ್ಕೊಳಗಾದರು. \p \v 24 ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಗುರುವೇ, ಗುರುವೇ, ನಾವು ಮುಳುಗುತ್ತಿದ್ದೇವೆ!” ಎಂದರು. \p ಆಗ ಯೇಸು ಎದ್ದು ಬಿರುಗಾಳಿಯನ್ನೂ ರಭಸವಾಗಿ ಬರುತ್ತಿದ್ದ ಅಲೆಗಳನ್ನೂ ಗದರಿಸಿದರು; ಆಗ ಬಿರುಗಾಳಿಯು ನಿಂತು ಹೋಗಿ, ಎಲ್ಲಾ ಪ್ರಶಾಂತವಾಯಿತು. \v 25 ಆಗ ಯೇಸು ತಮ್ಮ ಶಿಷ್ಯರಿಗೆ, “ನಿಮ್ಮ ನಂಬಿಕೆ ಎಲ್ಲಿ?” ಎಂದರು. \p ಅವರು ಹೆದರಿದವರಾಗಿ ಆಶ್ಚರ್ಯದಿಂದ ಒಬ್ಬರಿಗೊಬ್ಬರು, “ಇವರು ಯಾರಿರಬಹುದು? ಗಾಳಿಗೂ ನೀರಿಗೂ ಸಹ ಅಪ್ಪಣೆ ಕೊಡುತ್ತಾರಲ್ಲಾ. ಅವು ಇವರು ಹೇಳಿದ ಹಾಗೆ ಕೇಳುತ್ತಾವಲ್ಲಾ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. \s1 ದೆವ್ವಗಳಿಂದ ಪೀಡಿತನಾದವನನ್ನು ಗುಣಮಾಡಿದ್ದು \p \v 26 ಅವರು ಗಲಿಲಾಯಕ್ಕೆ ಎದುರಾಗಿದ್ದ, ಗೆರಸೇನರ ಸೀಮೆಗೆ ತಲುಪಿದರು. \v 27 ಯೇಸು ದಡಕ್ಕೆ ಸೇರಿದಾಗ, ಬಹುಕಾಲದಿಂದ ದೆವ್ವಗಳು ಹಿಡಿದು ಬಟ್ಟೆ ಧರಿಸಿಕೊಳ್ಳದೆ ಯಾವ ಮನೆಯಲ್ಲಿ ಇರದೆ ಸಮಾಧಿಯ ಗುಹೆಗಳಲ್ಲಿ ವಾಸಿಸುತ್ತಿದ್ದ ಒಬ್ಬ ಮನುಷ್ಯನನ್ನು ಯೇಸು ಸಂಧಿಸಿದರು. \v 28 ಅವನು ಯೇಸುವನ್ನು ಕಂಡಾಗ, ಅವರ ಮುಂದೆ ಅಡ್ಡಬಿದ್ದು, “ಯೇಸುವೇ, ಮಹೋನ್ನತ ದೇವಪುತ್ರರೇ, ನನ್ನ ಗೊಡವೆ ನಿಮಗೆ ಏಕೆ? ನನ್ನನ್ನು ಪೀಡಿಸಬೇಡಿ, ನಿಮ್ಮನ್ನು ಬೇಡಿಕೊಳ್ಳುತ್ತೇನೆ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿ ಹೇಳಿದನು. \v 29 ಏಕೆಂದರೆ, ದೆವ್ವಕ್ಕೆ ಅವನಿಂದ ಹೊರಗೆ ಬರಬೇಕೆಂದು ಯೇಸು ಅಪ್ಪಣೆ ಕೊಟ್ಟಿದ್ದರು. ಅದು ಬಹಳ ಸಾರಿ ಅವನನ್ನು ಹಿಡಿಯುತ್ತಿದ್ದುದರಿಂದ, ಅವನು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿತನಾದರೂ ಅವನು ಆ ಬಂಧನಗಳನ್ನು ಮುರಿದು ಬಿಡುತ್ತಿದ್ದನು ಮತ್ತು ದೆವ್ವವು ಅವನನ್ನು ಏಕಾಂತ ಸ್ಥಳಕ್ಕೆ ಓಡಿಸಿಕೊಂಡು ಹೋಗುತ್ತಿತ್ತು. \p \v 30 ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದರು. \p ಅದಕ್ಕವನು, “ಸೇನೆ,”\f + \fr 8:30 \fr*\ft ಗ್ರೀಕ್ ಭಾಷೆಯಲ್ಲಿ \ft*\fqa ಲೀಜನ್ \fqa*\ft ಅಂದರೆ ಸುಮಾರು 4000 ದಿಂದ 6000 ಸೈನ್ಯದ ಸಮೂಹ.\ft*\f* ಎಂದನು. ಏಕೆಂದರೆ ಬಹಳ ದೆವ್ವಗಳು ಅವನಲ್ಲಿ ಸೇರಿಕೊಂಡಿದ್ದವು. \v 31 ಅವು ತಮ್ಮನ್ನು ಪಾತಾಳಕ್ಕೆ ಹೋಗುವಂತೆ ಅಪ್ಪಣೆ ಕೊಡಬಾರದೆಂದು ಯೇಸುವನ್ನು ಬೇಡಿಕೊಂಡವು. \p \v 32 ಆಗ ಅಲ್ಲಿ ಬೆಟ್ಟದ ಮೇಲೆ ಹಂದಿಗಳ ಹಿಂಡು ಮೇಯುತ್ತಿದ್ದರಿಂದ ಅವುಗಳೊಳಗೆ ತಾವು ಸೇರಿಕೊಳ್ಳಲು ಅಪ್ಪಣೆ ಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು, ಅವರು ಅವುಗಳಿಗೆ ಅನುಮತಿ ಕೊಟ್ಟರು. \v 33 ಆಗ ಆ ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು, ಹಂದಿಗಳೊಳಗೆ ಸೇರಿದವು. ಆ ಗುಂಪು ಚುರುಕಾಗಿ ಓಡಿ, ಕಡಿದಾದ ಬದಿಯಿಂದ ಸರೋವರಕ್ಕೆ ಬಿದ್ದು ಮುಳುಗಿಹೋಯಿತು. \p \v 34 ಹಂದಿಗಳನ್ನು ಮೇಯಿಸುತ್ತಿದ್ದವರು ನಡೆದದ್ದನ್ನು ಕಂಡು, ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ಅದನ್ನು ತಿಳಿಯಪಡಿಸಿದರು, \v 35 ಆಗ ಜನರು ನಡೆದ ಸಂಗತಿ ಏನೆಂದು ಕಾಣುವುದಕ್ಕಾಗಿ ಹೊರಟು ಯೇಸುವಿನ ಬಳಿಗೆ ಬಂದರು. ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯುಳ್ಳವನಾಗಿ, ಯೇಸುವಿನ ಪಾದಗಳ, ಬಳಿಯಲ್ಲಿ ಕುಳಿತಿರುವುದನ್ನು ಕಂಡು ಭಯಪಟ್ಟರು. \v 36 ನಡೆದದ್ದನ್ನು ಕಂಡವರು, ಯಾವ ರೀತಿಯಲ್ಲಿ ದೆವ್ವಪೀಡಿತನಾಗಿದ್ದವನು ಮತ್ತೆ ಸ್ವಸ್ಥನಾದನೆಂದು ಅವರಿಗೆ ತಿಳಿಯಪಡಿಸಿದರು. \v 37 ಆಗ ಗೆರಸೇನರ ಸೀಮೆಯ ಸುತ್ತಮುತ್ತಲಿನ ಜನಸಮೂಹವೆಲ್ಲವು, ಬಹಳ ಭಯಹಿಡಿದವರಾದುದರಿಂದ ಅವರು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು. ಯೇಸು ದೋಣಿಯನ್ನು ಹತ್ತಿ ಹಿಂದಿರುಗಿದರು. \p \v 38 ಆಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ತಾನೂ ಅವರ ಜೊತೆಯಲ್ಲಿ ಬರುವೆನೆಂದು, ಯೇಸುವನ್ನು ಬೇಡಿಕೊಂಡನು, ಆದರೆ ಯೇಸು ಅವನಿಗೆ, \v 39 “ನೀನು ನಿನ್ನ ಮನೆಗೆ ಹಿಂದಿರುಗಿ ಹೋಗಿ ದೇವರು ನಿನಗೆ ಎಂಥಾ ಮಹಾಕಾರ್ಯಗಳನ್ನು ಮಾಡಿದ್ದಾರೆಂಬುದನ್ನು ಹೇಳು,” ಎಂದು ಅವನನ್ನು ಕಳುಹಿಸಿಬಿಟ್ಟರು. ಅವನು ತನ್ನ ಮಾರ್ಗವಾಗಿ ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ಊರೆಲ್ಲಾ ಸಾರಿದನು. \s1 ಯೇಸು ಸತ್ತ ಹುಡುಗಿಯನ್ನು ಬದುಕಿಸಿದ್ದು \p \v 40 ಯೇಸು ಹಿಂತಿರುಗಿ ಬಂದಾಗ ಅವರ ಬರುವಿಕೆಯನ್ನು ಎದುರುನೋಡುತ್ತಿದ್ದ ಜನರೆಲ್ಲರೂ ಅವರನ್ನು ಸ್ವಾಗತಿಸಿದರು. \v 41 ಆಗ ಸಭಾಮಂದಿರದ ಅಧಿಕಾರಿಯಾಗಿದ್ದ, ಯಾಯೀರನೆಂಬವನು ಬಂದು ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು, ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು \v 42 ಏಕೆಂದರೆ ಸುಮಾರು ಹನ್ನೆರಡು ವರ್ಷದ, ಅವನ ಒಬ್ಬಳೇ ಮಗಳು, ಸಾಯುವ ಹಾಗಿದ್ದಳು. \p ಯೇಸು ದಾರಿಯಲ್ಲಿ ಹೋಗುತ್ತಿದ್ದಾಗ, ಜನರು ಅವರನ್ನು ನೂಕಾಡುತ್ತಿದ್ದರು. \v 43 ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು. ಅವಳು ತನ್ನ ಆಸ್ತಿಯನ್ನೆಲ್ಲಾ ವೆಚ್ಚಮಾಡಿದ್ದರೂ ಆಕೆಯನ್ನು ಗುಣಪಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. \v 44 ಅವಳು ಯೇಸುವಿನ ಹಿಂದೆ ಬಂದು ಅವರ ಉಡುಪಿನ ಅಂಚನ್ನು ಮುಟ್ಟಿದಳು, ಕೂಡಲೇ ಆಕೆಯ ರಕ್ತಸ್ರಾವವು ನಿಂತುಹೋಯಿತು. \p \v 45 ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದರು. \p ಎಲ್ಲರೂ ನಿರಾಕರಿಸಿದರು, ಪೇತ್ರನು ಯೇಸುವಿಗೆ, “ಬೋಧಕರೇ, ಇಷ್ಟೊಂದು ಜನರು ನಿಮ್ಮನ್ನು ನೂಕುತ್ತಾ ನಿಮ್ಮನ್ನು ಒತ್ತುತ್ತಿದ್ದಾರಲ್ಲಾ” ಎಂದನು. \p \v 46 ಆದರೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದ್ದಾರೆ; ನನ್ನಿಂದ ಗುಣಪಡಿಸುವ ಶಕ್ತಿಯು ಹೊರಟಿತೆಂದು ನನಗೆ ತಿಳಿಯಿತು,” ಎಂದರು. \p \v 47 ಆ ಸ್ತ್ರೀಯು, ತಾನು ಇನ್ನು ಮರೆಮಾಡಲು ಸಾಧ್ಯವಿಲ್ಲವೆಂದು ತಿಳಿದು, ನಡುಗುತ್ತಾ ಬಂದು ಯೇಸುವಿನ ಮುಂದೆ ಅಡ್ಡಬಿದ್ದು, ಯಾವ ಕಾರಣದಿಂದ ಆಕೆಯು ಯೇಸುವನ್ನು ಮುಟ್ಟಿದಳೆಂದೂ ಹೇಗೆ ತಾನು ಕೂಡಲೇ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಅವರಿಗೆ ತಿಳಿಯಪಡಿಸಿದಳು. \v 48 ಆಗ ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು,” ಎಂದರು. \p \v 49 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಒಬ್ಬನು ಬಂದು ಅಧಿಕಾರಿಗೆ, “ನಿನ್ನ ಮಗಳು ತೀರಿಹೋದಳು, ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದನು. \p \v 50 ಯೇಸು ಅದನ್ನು ಕೇಳಿ, ಆ ಅಧಿಕಾರಿಗೆ, “ಭಯಪಡಬೇಡ; ನಂಬಿಕೆ ಮಾತ್ರ ಇರಲಿ, ಅವಳು ಬದುಕುವಳು,” ಎಂದು ಹೇಳಿದರು. \p \v 51 ಯೇಸು ಯಾಯೀರನ ಮನೆಯೊಳಕ್ಕೆ ಬಂದಾಗ ಪೇತ್ರ, ಯಾಕೋಬ ಯೋಹಾನ ಮತ್ತು ಹುಡುಗಿಯ ತಂದೆತಾಯಿಗಳ ಹೊರತು ಯಾರನ್ನೂ ಒಳಗೆ ಬರಗೊಡಲಿಲ್ಲ. \v 52 ಎಲ್ಲರೂ ಅಳುತ್ತಾ ಹುಡುಗಿಗಾಗಿ ಗೋಳಾಡುತ್ತಿದ್ದರು. ಯೇಸು, “ಅಳಬೇಡಿರಿ, ಆಕೆಯು ಸತ್ತಿಲ್ಲ, ನಿದ್ರೆ ಮಾಡುತ್ತಾಳೆ,” ಎಂದರು. \p \v 53 ಆಕೆಯು ಸತ್ತಿದ್ದಾಳೆಂದು ತಿಳಿದು ಅಳುತ್ತಿದ್ದವರು ಯೇಸುವನ್ನು ಹಾಸ್ಯಮಾಡಿದರು. \v 54 ಆದರೆ ಯೇಸು ಆಕೆಯ ಕೈಹಿಡಿದು, “ಮಗಳೇ, ಎದ್ದೇಳು!” ಎಂದು ಕರೆದರು. \v 55 ಆಗ ಆಕೆಯ ಪ್ರಾಣವು ಹಿಂದಿರುಗಿ ಬಂತು. ಕೂಡಲೇ ಆಕೆಯು ಎದ್ದಳು. ಆಕೆಗೆ ತಿನ್ನಲು ಏನಾದರೂ ಕೊಡುವಂತೆ ಯೇಸು ಅಪ್ಪಣೆಕೊಟ್ಟರು. \v 56 ಆಕೆಯ ತಂದೆತಾಯಿಗಳು ಬೆರಗಾದರು, ಆಗ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದರು. \c 9 \s1 ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಕಳುಹಿಸಿದ್ದು \p \v 1 ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಅವರಿಗೆ ಎಲ್ಲಾ ದೆವ್ವಗಳನ್ನು ಓಡಿಸುವುದಕ್ಕೂ ರೋಗಗಳನ್ನು ಸ್ವಸ್ಥಮಾಡುವುದಕ್ಕೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು, \v 2 ಶಿಷ್ಯರು ದೇವರ ರಾಜ್ಯವನ್ನು ಸಾರುವುದಕ್ಕೂ ರೋಗಿಗಳನ್ನು ಸ್ವಸ್ಥಮಾಡುವುದಕ್ಕೂ ಯೇಸು ಅವರನ್ನು ಕಳುಹಿಸಿಕೊಟ್ಟರು. \v 3 ಯೇಸು ಅವರಿಗೆ, “ನೀವು ಪ್ರಯಾಣಕ್ಕಾಗಿ ಕೋಲು, ಚೀಲ, ರೊಟ್ಟಿ ಅಥವಾ ಹಣವನ್ನು ತೆಗೆದುಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು. \v 4 ನೀವು ಯಾವುದಾದರೂ ಮನೆಯನ್ನು ಪ್ರವೇಶಿಸಿದಾಗ, ಅಲ್ಲೇ ಇದ್ದು ಆ ಪಟ್ಟಣದಿಂದ ಹೋಗುವವರೆಗೆ ಆ ಮನೆಯಲ್ಲೇ ವಾಸವಾಗಿದ್ದು, ಅಲ್ಲಿಂದಲೇ ಹೊರಡಿರಿ. \v 5 ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ, ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ,” ಎಂದರು. \v 6 ಶಿಷ್ಯರು ಪ್ರತಿಯೊಂದು ಹಳ್ಳಿಗೆ ಹೋಗುತ್ತಾ, ಸುವಾರ್ತೆಯನ್ನು ಸಾರುತ್ತಾ, ಎಲ್ಲಾ ಕಡೆಗಳಲ್ಲಿ ರೋಗಿಗಳನ್ನು ಸ್ವಸ್ಥಮಾಡುತ್ತಾ ಹೋದರು. \p \v 7 ಚತುರಾಧಿಪತಿಯಾದ ಹೆರೋದನು ಯೇಸು ಮಾಡಿದವುಗಳನ್ನೆಲ್ಲಾ ಕೇಳಿ ಕಳವಳಗೊಂಡನು. ಏಕೆಂದರೆ ಯೋಹಾನನು ಸತ್ತವರೊಳಗಿಂದ ಎದ್ದಿದ್ದಾನೆಂದು ಕೆಲವರು ಹೇಳುತ್ತಿದ್ದರು. \v 8 ಕೆಲವರು ಎಲೀಯನು ಪ್ರತ್ಯಕ್ಷನಾಗಿದ್ದಾನೆಂದೂ ಇನ್ನೂ ಕೆಲವರು ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ತಿರುಗಿ ಎದ್ದಿದ್ದಾನೆಂದೂ ಹೇಳುತ್ತಿದ್ದರು. \v 9 ಆದರೆ ಹೆರೋದನು, “ನಾನು ಯೋಹಾನನನ್ನು ಶಿರಚ್ಛೇದನ ಮಾಡಿದೆ, ನಾನು ಯಾರನ್ನು ಕುರಿತು, ಈ ವಿಷಯಗಳನ್ನು ಕೇಳುತ್ತಿರುವೆ, ಈತನು ಯಾರು?” ಎಂದು ಹೇಳಿ ಅವನು ಯೇಸುವನ್ನು ಕಾಣಲು ಪ್ರಯತ್ನಿಸಿದನು. \s1 ಯೇಸು ಐದು ಸಾವಿರ ಜನರಿಗೆ ಊಟಮಾಡಿಸಿದ್ದು \p \v 10 ಅಪೊಸ್ತಲರು ಹಿಂದಿರುಗಿ ಬಂದು, ತಾವು ಮಾಡಿದವುಗಳನ್ನೆಲ್ಲಾ ಯೇಸುವಿಗೆ ತಿಳಿಸಿದರು. ಆಗ ಯೇಸು ಬೇತ್ಸಾಯಿದ ಎಂಬ ಹೆಸರಿನ ಪಟ್ಟಣಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದರು. \v 11 ಆದರೆ ಜನರು ಅದನ್ನು ತಿಳಿದು ಯೇಸುವನ್ನು ಹಿಂಬಾಲಿಸಿದರು. ಯೇಸು ಅವರನ್ನು ಸ್ವೀಕರಿಸಿ, ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥಮಾಡಿದರು. \p \v 12 ಸಂಜೆಯಾಗುತ್ತಿದ್ದಾಗ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಊಟವಸತಿಯನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡಿ. ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲ,” ಎಂದರು. \p \v 13 ಆದರೆ ಯೇಸು ಅವರಿಗೆ, “ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದರು. \p ಅದಕ್ಕೆ ಅವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನುಗಳಿಗಿಂತ ಹೆಚ್ಚೇನು ಇಲ್ಲ. ನಾವು ಹೋಗಿ ಈ ಜನರಿಗೆ ಬೇಕಾಗುವಷ್ಟು ಆಹಾರವನ್ನು ಕೊಂಡುಕೊಂಡು ಬರಬೇಕೆ?” ಎಂದರು. \v 14 ಅಲ್ಲಿ ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಮಂದಿ ಇದ್ದರು. \p ಆಗ ಯೇಸು ತಮ್ಮ ಶಿಷ್ಯರಿಗೆ, “ಪಂಕ್ತಿಗಳಲ್ಲಿ ಐವತ್ತರಂತೆ ಅವರನ್ನು ಕೂರಿಸಿರಿ,” ಎಂದರು. \v 15 ಅವರು ಹಾಗೆಯೇ ಮಾಡಿ, ಎಲ್ಲರನ್ನೂ ಕುಳ್ಳಿರಿಸಿದರು. \v 16 ತರುವಾಯ ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ಅವುಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು. \v 17 ಅವರೆಲ್ಲರೂ ತಿಂದು ತೃಪ್ತರಾದರು. ಶಿಷ್ಯರು ಉಳಿದ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿಗಳು ತುಂಬಿದವು. \s1 ಪೇತ್ರನು ಯೇಸುವನ್ನು ಕ್ರಿಸ್ತನೆಂದು ಅರಿಕೆಮಾಡಿದ್ದು \p \v 18 ಯೇಸು ಏಕಾಂತವಾಗಿ ಪ್ರಾರ್ಥಿಸುತ್ತಿದ್ದಾಗ ಅವರ ಶಿಷ್ಯರು ಅವರೊಂದಿಗೆ ಇದ್ದರು, ಆಗ ಯೇಸು ಅವರಿಗೆ, “ಜನರು ನನ್ನನ್ನು ಯಾರೆನ್ನುತ್ತಾರೆ?” ಎಂದು ಕೇಳಿದರು. \p \v 19 ಅವರು ಉತ್ತರವಾಗಿ, “ಸ್ನಾನಿಕನಾದ ಯೋಹಾನನು ಎನ್ನುತ್ತಾರೆ. ಆದರೆ ಕೆಲವರು ಎಲೀಯನು. ಬೇರೆ ಕೆಲವರು ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ಪುನಃ ಜೀವಂತನಾಗಿದ್ದಾನೆ ಎನ್ನುತ್ತಾರೆ,” ಎಂದು ಹೇಳಿದರು. \p \v 20 ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದರು. \p ಆಗ ಪೇತ್ರನು, “ನೀವು ದೇವರು ಕಳುಹಿಸಿಕೊಟ್ಟ ಕ್ರಿಸ್ತನು,” ಎಂದು ಹೇಳಿದನು. \s1 ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು \p \v 21 ಯೇಸು ಈ ಸಂಗತಿಯನ್ನು ಯಾರಿಗೂ ಹೇಳಬಾರದೆಂದು ಅವರಿಗೆ ಖಂಡಿತವಾಗಿ ಆಜ್ಞಾಪಿಸಿದರು. \v 22 ಅನಂತರ ಯೇಸು, “ಮನುಷ್ಯಪುತ್ರನಾದ ನಾನು ಅನೇಕ ಕಷ್ಟಗಳನ್ನು ಅನುಭವಿಸಿ ಜನನಾಯಕರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ, ಕೊಲೆಗೆ ಗುರಿಯಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಏಳುವುದು ಅಗತ್ಯವಾಗಿದೆ,” ಎಂದು ಎಚ್ಚರಿಸಿದರು. \p \v 23 ಯೇಸು ಅವರೆಲ್ಲರಿಗೆ: “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. \v 24 ಯಾರಾದರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವವರು, ಅದನ್ನು ಕಳೆದುಕೊಳ್ಳುವರು, ಆದರೆ ನನ್ನ ನಿಮಿತ್ತವಾಗಿ ಯಾರಾದರೂ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರು ಅದನ್ನು ಕಂಡುಕೊಳ್ಳುವರು. \v 25 ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡು, ತನ್ನನ್ನು ತಾನೇ ಹಾಳು ಮಾಡಿಕೊಂಡರೆ, ಇಲ್ಲವೆ ನಷ್ಟಪಡಿಸಿಕೊಂಡರೆ, ಆ ವ್ಯಕ್ತಿಗೆ ಪ್ರಯೋಜನವೇನು? \v 26 ಯಾರಾದರೂ ನನ್ನ ಮತ್ತು ನನ್ನ ವಾಕ್ಯಗಳ ವಿಷಯದಲ್ಲಿ ನಾಚಿಕೊಳ್ಳುವುದಾದರೆ, ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯೊಡನೆಯೂ ಪರಿಶುದ್ಧ ದೂತರೊಡನೆಯೂ ಬರುವಾಗ, ಅವರ ವಿಷಯದಲ್ಲಿ ನಾಚಿಕೊಳ್ಳುವೆನು. \p \v 27 “ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವನ್ನು ಕಾಣುವತನಕ ಮರಣವನ್ನು ಹೊಂದುವುದೇ ಇಲ್ಲ,” ಎಂದರು. \s1 ಯೇಸು ರೂಪಾಂತರವಾದದ್ದು \p \v 28 ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಯೇಸು, ಪೇತ್ರ, ಯೋಹಾನ ಮತ್ತು ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟವನ್ನೇರಿದರು. \v 29 ಯೇಸು ಪ್ರಾರ್ಥನೆ ಮಾಡುತ್ತಿದ್ದಾಗ, ಅವರ ಮುಖಭಾವವು ಬದಲಾಯಿತು ಮತ್ತು ಅವರ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂತು. \v 30 ಮೋಶೆ ಮತ್ತು ಎಲೀಯನು ಎಂಬ ಇಬ್ಬರು ಪುರುಷರು ಯೇಸುವಿನೊಂದಿಗೆ ಮಾತನಾಡುತ್ತಿದ್ದರು. \v 31 ಇವರು ಮಹಿಮೆಯಲ್ಲಿ ಕಾಣಿಸಿಕೊಂಡು, ಯೇಸು ಯೆರೂಸಲೇಮಿನಲ್ಲಿ ಪೂರೈಸುವುದಕ್ಕಿದ್ದ ಅವರ ಮರಣದ\f + \fr 9:31 \fr*\ft ಗ್ರೀಕ್ ಭಾಷೆಯಲ್ಲಿ \ft*\fqa ಹೊರಡುವಿಕೆ\fqa*\f* ವಿಷಯವಾಗಿ ಮಾತನಾಡುತ್ತಿದ್ದರು. \v 32 ಆದರೆ ಪೇತ್ರನು ಅವನ ಸಂಗಡ ಇದ್ದವರೂ ನಿದ್ರೆಯಿಂದ ಭಾರವುಳ್ಳವರಾಗಿದ್ದರು, ಅವರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರ ಕೂಡ ನಿಂತಿದ್ದ ಇಬ್ಬರು ಪುರುಷರನ್ನೂ ಕಂಡರು. \v 33 ಅವರು ಹೋಗುತ್ತಿದ್ದಾಗ ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ನಮಗೆ ಒಳ್ಳೆಯದು, ನಾವು ನಿಮಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು, ಹೀಗೆ ಮೂರು ಗುಡಾರಗಳನ್ನು ಕಟ್ಟುವೆವು,” ಎಂದನು. ತಾನು ಹೇಳಿದ್ದನ್ನು ಅವನು ಅರಿಯದೆ ಇದ್ದನು. \p \v 34 ಹೀಗೆ ಪೇತ್ರನು ಮಾತನಾಡುತ್ತಿದ್ದಾಗಲೇ, ಮೇಘವು ಬಂದು ಅವರನ್ನು ಕವಿದುಕೊಂಡಿತು ಮತ್ತು ಅವರು ಆ ಮೇಘದೊಳಗೆ ಪ್ರವೇಶಿಸುತ್ತಿದ್ದಾಗ ಶಿಷ್ಯರು ಭಯಪಟ್ಟರು. \v 35 ಆಗ ಮೇಘದೊಳಗಿಂದ, “ಈತನು, ನಾನು ಆರಿಸಿಕೊಂಡ ನನ್ನ ಮಗನು, ಈತನ ಮಾತನ್ನು ಕೇಳಿರಿ,” ಎಂದು ಹೇಳುವ ಧ್ವನಿಯಾಯಿತು. \v 36 ಧ್ವನಿಯಾದ ನಂತರ, ಅವರು ಯೇಸುವನ್ನು ಮಾತ್ರ ಕಂಡರು. ಅವರು ಕಂಡವುಗಳನ್ನು ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು. \s1 ದೆವ್ವ ಹಿಡಿದಿದ್ದ ಬಾಲಕನು ಸ್ವಸ್ಥವಾದದ್ದು \p \v 37 ಮರುದಿನ, ಅವರು ಬೆಟ್ಟದಿಂದ ಕೆಳಗಿಳಿದು ಬಂದಾಗ, ಬಹಳ ಜನರು ಯೇಸುವನ್ನು ಸಂಧಿಸಿದರು. \v 38 ಆಗ ಆ ಗುಂಪಿನೊಳಗಿಂದ ಒಬ್ಬ ಮನುಷ್ಯನು ಕೂಗಿ, “ಬೋಧಕರೇ, ನನ್ನ ಮಗನ ಮೇಲೆ ದೃಷ್ಟಿಯಿಡಿರಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಏಕೆಂದರೆ ಅವನು ನನಗೆ ಒಬ್ಬನೇ ಮಗನು. \v 39 ದೆವ್ವವು ಅವನನ್ನು ಹಿಡಿಯುತ್ತಲೇ ಅವನು ಫಕ್ಕನೆ ಕೂಗಿಕೊಳ್ಳುತ್ತಾನೆ; ಇದಲ್ಲದೆ ಬಾಯಲ್ಲಿ ನೊರೆ ಸುರಿಯುವಷ್ಟು ಅವನನ್ನು ಒದ್ದಾಡಿಸುವುದಲ್ಲದೆ ಜಜ್ಜುತ್ತದೆ. ಅದು ಅವನನ್ನು ಬಿಟ್ಟು ಹೋಗುವುದು ಕಷ್ಟ. \v 40 ಅದನ್ನು ಓಡಿಸುವಂತೆ, ನಾನು ನಿಮ್ಮ ಶಿಷ್ಯರನ್ನು ಬೇಡಿಕೊಂಡೆನು, ಆದರೆ ಅದು ಅವರಿಂದ ಆಗಲಿಲ್ಲ,” ಎಂದನು. \p \v 41 ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಿಮ್ಮನ್ನು ಸಹಿಸಲಿ?” ಎಂದು ಹೇಳಿ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ,” ಎಂದರು. \p \v 42 ಅವನು ಇನ್ನೂ ಬರುತ್ತಿದ್ದಾಗಲೇ, ದೆವ್ವವು ಅವನನ್ನು ಒದ್ದಾಡಿಸಿ ನೆಲಕ್ಕೆ ಅಪ್ಪಳಿಸಿತು. ಯೇಸು ಆ ದೆವ್ವವನ್ನು ಗದರಿಸಿ ಹುಡುಗನನ್ನು ಸ್ವಸ್ಥಮಾಡಿ, ಅವನನ್ನು ಅವನ ತಂದೆಗೆ ಪುನಃ ಒಪ್ಪಿಸಿದರು. \v 43 ಆಗ ಜನರೆಲ್ಲರೂ ದೇವರ ಮಹತ್ತಾದ ಶಕ್ತಿಗಾಗಿ ಬೆರಗಾದರು. \s1 ಯೇಸು ತಮ್ಮ ಮರಣವನ್ನು ಎರಡನೆಯ ಬಾರಿ ಮುಂತಿಳಿಸಿದ್ದು \p ಯೇಸು ಮಾಡಿದ ಎಲ್ಲಾ ಕಾರ್ಯಗಳಿಗಾಗಿ ಅವರಲ್ಲಿ ಪ್ರತಿಯೊಬ್ಬನೂ ಆಶ್ಚರ್ಯಪಡುತ್ತಿರುವಲ್ಲಿ, ಯೇಸು ತಮ್ಮ ಶಿಷ್ಯರಿಗೆ, \v 44 “ಈ ಮಾತುಗಳನ್ನು ಆಳವಾಗಿ ಗ್ರಹಿಸಿಕೊಳ್ಳಿರಿ: ಏಕೆಂದರೆ ಮನುಷ್ಯಪುತ್ರನಾದ ನಾನು ಮನುಷ್ಯರ ಕೈವಶವಾಗುವೆನು,” ಎಂದು ಹೇಳಿದರು. \v 45 ಆದರೆ ಶಿಷ್ಯರು ಈ ಮಾತನ್ನು ತಿಳಿದುಕೊಳ್ಳಲಿಲ್ಲ. ಅವರು ಗ್ರಹಿಸಲಾರದಂತೆ ಅದು ಅವರಿಗೆ ಮರೆಯಾಗಿತ್ತು, ಆ ಮಾತನ್ನು ಕುರಿತು ಯೇಸುವನ್ನು ಕೇಳುವುದಕ್ಕೆ ಅವರು ಭಯಪಟ್ಟರು. \p \v 46 ತಮ್ಮಲ್ಲಿ ಯಾವನು ಎಲ್ಲರಿಗಿಂತ ದೊಡ್ಡವನು ಎಂಬ ತರ್ಕವು ಶಿಷ್ಯರೊಳಗೆ ಎದ್ದಿತು. \v 47 ಯೇಸು, ಅವರ ಮನದ ಆಲೋಚನೆಯನ್ನು ತಿಳಿದವರಾಗಿ, ಒಂದು ಮಗುವನ್ನು ತಮ್ಮ ಬಳಿಯಲ್ಲಿ ನಿಲ್ಲಿಸಿ, \v 48 “ಯಾರು ಈ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳುತ್ತಾರೋ ಅವರು ನನ್ನನ್ನೇ ಸ್ವೀಕರಿಸಿಕೊಳ್ಳುತ್ತಾರೆ; ಯಾರು ನನ್ನನ್ನು ಸ್ವೀಕರಿಸಿಕೊಳ್ಳುತ್ತಾರೋ ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಳ್ಳುತ್ತಾರೆ. ನಿಮ್ಮೆಲ್ಲರಲ್ಲಿ ಚಿಕ್ಕವನಾಗಿರುವವನೇ ದೊಡ್ಡವನಾಗಿರುವನು,” ಎಂದರು. \p \v 49 ಯೋಹಾನನು, “ಬೋಧಕರೇ, ಒಬ್ಬನು ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಓಡಿಸುವುದನ್ನು ನಾವು ಕಂಡು ಅವನಿಗೆ ಅಡ್ಡಿಮಾಡಿದೆವು, ಏಕೆಂದರೆ ಅವನು ನಮ್ಮೊಂದಿಗೆ ಸೇರಿದವನಲ್ಲ,” ಎಂದನು. \p \v 50 ಅದಕ್ಕೆ ಯೇಸು, “ಅವನನ್ನು ತಡೆಯಬೇಡಿರಿ, ನಿಮಗೆ ವಿರೋಧವಾಗಿರದವನು ನಿಮ್ಮ ಪಕ್ಷದವನೇ,” ಎಂದು ಹೇಳಿದರು. \s1 ಸಮಾರ್ಯರ ಪ್ರತಿರೋಧ \p \v 51 ಯೇಸು ತಾವು ಸ್ವರ್ಗಕ್ಕೆ ಏರಿಹೋಗುವ ಕಾಲ ಬಂದಾಗ, ಯೆರೂಸಲೇಮಿಗೆ ಹೋಗುವುದಕ್ಕಾಗಿ ತಮ್ಮ ಮನಸ್ಸನ್ನು ದೃಢಮಾಡಿಕೊಂಡು \v 52 ತಮಗೆ ಮುಂದಾಗಿ ಶಿಷ್ಯರನ್ನು ದೂತರನ್ನಾಗಿ ಕಳುಹಿಸಿದರು. ಅವರು ಹೋಗಿ ಅವರಿಗಾಗಿ ಎಲ್ಲವನ್ನೂ ಸಿದ್ಧಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು. \v 53 ಆದರೆ ಸಮಾರ್ಯದವರು ಯೇಸುವನ್ನು ಸ್ವೀಕರಿಸಲಿಲ್ಲ, ಏಕೆಂದರೆ ಯೇಸು ಯೆರೂಸಲೇಮಿಗೆ ಹೋಗುವವರಾಗಿದ್ದರು. \v 54 ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನರು ಇದನ್ನು ಕಂಡು, “ಕರ್ತದೇವರೇ, ಎಲೀಯನು ಮಾಡಿದ ಪ್ರಕಾರ ಇವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿಮಗೆ ಒಪ್ಪಿಗೆ ಇದೆಯೋ?” ಎಂದು ಕೇಳಿದರು. \v 55 ಆದರೆ ಯೇಸು ಅವರ ಕಡೆ ತಿರುಗಿ ಅವರನ್ನು ಗದರಿಸಿ, “ನೀವು ಎಂಥ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು. \v 56 ಮನುಷ್ಯಪುತ್ರನಾದ ನಾನು ಮನುಷ್ಯರ ಪ್ರಾಣಗಳನ್ನು ನಾಶಮಾಡುವುದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವುದಕ್ಕಾಗಿ ಬಂದೆನು,” ಎಂದು ಹೇಳಿದರು. ಅನಂತರ ಅವರು ಮತ್ತೊಂದು ಹಳ್ಳಿಗೆ ಹೋದರು.\f + \fr 9:56 \fr*\ft ಈ ಭಾಗವು ಕೆಲವು ಪ್ರತಿಗಳಲ್ಲಿ ಇಲ್ಲ\ft*\f* \s1 ಯೇಸುವನ್ನು ಹಿಂಬಾಲಿಸುವುದರ ಬೆಲೆ \p \v 57 ಅವರು ದಾರಿಯಲ್ಲಿ ಹೋಗುತ್ತಿರುವಾಗ, ಒಬ್ಬನು ಯೇಸುವಿಗೆ, “ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುವೆನು” ಎಂದನು. \p \v 58 ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಪುತ್ರನಾದ ನನಗೆ ತಲೆಯಿಡುವುದಕ್ಕೂ ಸ್ಥಳ ಇಲ್ಲ,” ಎಂದರು. \p \v 59 ಯೇಸು ಮತ್ತೊಬ್ಬನಿಗೆ, “ನನ್ನನ್ನು ಹಿಂಬಾಲಿಸು,” ಎಂದರು. \p ಆದರೆ ಅವನು, “ಕರ್ತದೇವರೇ, ಮೊದಲು ನಾನು ಹೋಗಿ ನನ್ನ ತಂದೆಯ ಶವಸಂಸ್ಕಾರ ಮಾಡಿಬರಲು ಅನುಮತಿಕೊಡಿರಿ,” ಎಂದನು. \p \v 60 ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ, ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು,” ಎಂದರು. \p \v 61 ಇದಲ್ಲದೆ ಮತ್ತೊಬ್ಬನು ಸಹ, “ಕರ್ತದೇವರೇ, ನಾನು ನಿಮ್ಮನ್ನು ಹಿಂಬಾಲಿಸುವೆನು, ಆದರೆ ನಾನು ಮೊದಲು ಹೋಗಿ ನನ್ನ ಮನೆಯಲ್ಲಿದ್ದವರನ್ನು ಬೀಳ್ಕೊಡುವಂತೆ ನನಗೆ ಅಪ್ಪಣೆಕೊಡಿ,” ಎಂದನು. \p \v 62 ಆಗ ಯೇಸು ಅವನಿಗೆ, “ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡುವವನು ದೇವರ ರಾಜ್ಯಕ್ಕೆ ಯೋಗ್ಯನಲ್ಲ,” ಎಂದರು. \c 10 \s1 ಯೇಸು ಎಪ್ಪತ್ತೆರಡು ಮಂದಿ ಶಿಷ್ಯರನ್ನು ಕಳುಹಿಸಿದ್ದು \p \v 1 ಇವುಗಳಾದ ಮೇಲೆ ಕರ್ತದೇವರು ಬೇರೆ ಎಪ್ಪತ್ತೆರಡು\f + \fr 10:1 \fr*\ft ಕೆಲವು ಹಸ್ತಪ್ರತಿಗಳಲ್ಲಿ \ft*\fqa ಎಪ್ಪತ್ತು \fqa*\ft ಎಂದಿದೆ\ft*\f* ಮಂದಿಯನ್ನು ಸಹ ನೇಮಿಸಿ ತಾವೇ ಸ್ವತಃ ಹೋಗಬೇಕೆಂದಿದ್ದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಇಬ್ಬಿಬ್ಬರನ್ನಾಗಿ ತಮಗೆ ಮುಂದಾಗಿ ಕಳುಹಿಸಿದರು. \v 2 ಯೇಸು ಅವರಿಗೆ, “ಬೆಳೆಯೋ ಬಹಳವಾಗಿದೆ, ಕೆಲಸದವರೋ ಕೆಲವರು. ಆದ್ದರಿಂದ, ಬೆಳೆಯ ಯಜಮಾನನನ್ನು ತನ್ನ ಬೆಳೆಗೆ ತಕ್ಕಷ್ಟು ಕೆಲಸದವರನ್ನು ಕಳುಹಿಸುವಂತೆ, ನೀವು ಬೇಡಿಕೊಳ್ಳಿರಿ. \v 3 ಹೋಗಿರಿ! ತೋಳಗಳ ಮಧ್ಯದಲ್ಲಿ ಕುರಿಮರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. \v 4 ಹಣದ ಚೀಲವನ್ನಾಗಲಿ, ಪ್ರಯಾಣದ ಚೀಲವನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರನ್ನೂ ಕುಶಲ ವಿಚಾರ ಮಾಡಿಕೊಂಡಿರಬೇಡಿರಿ. \p \v 5 “ನೀವು ಯಾವ ಮನೆಯನ್ನಾದರೂ ಪ್ರವೇಶಿಸುವಾಗ ಮೊದಲು, ‘ಈ ಮನೆಗೆ ಸಮಾಧಾನವಾಗಲಿ,’ ಎಂದು ಹೇಳಿರಿ. \v 6 ಅಲ್ಲಿ ಸಮಾಧಾನದ ಮನುಷ್ಯನು ಇದ್ದರೆ, ನಿಮ್ಮ ಸಮಾಧಾನವು ಅವನ ಮೇಲೆ ಇರುವುದು; ಇಲ್ಲದಿದ್ದರೆ, ಅದು ನಿಮಗೇ ಹಿಂದಿರುಗುವುದು. \v 7 ಮನೆಯಿಂದ ಮನೆಗೆ ಹೋಗದೆ, ಅದೇ ಮನೆಯಲ್ಲಿದ್ದು, ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ. ಕೆಲಸದವನು ತನ್ನ ಕೂಲಿಗೆ ಯೋಗ್ಯನು. \p \v 8 “ಯಾವುದಾದರೂ ಒಂದು ಪಟ್ಟಣದೊಳಗೆ ನೀವು ಪ್ರವೇಶಿಸುವಾಗ, ಅವರು ನಿಮ್ಮನ್ನು ಸೇರಿಸಿಕೊಂಡರೆ ಅವರು ನೀಡಿದ್ದನ್ನು ತಿನ್ನಿರಿ. \v 9 ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿ, ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ,’ ಎಂದು ಹೇಳಿರಿ. \v 10 ಆದರೆ ನೀವು ಪ್ರವೇಶಿಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ, ನೀವು ಅದರ ಬೀದಿಗಳಲ್ಲಿ ಹೋಗಿ, \v 11 ‘ನಮ್ಮ ಪಾದಗಳಿಗೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ. ಆದರೂ ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿರಲಿ,’ ಎಂದು ಹೇಳಿರಿ. \v 12 ಆದರೆ ನ್ಯಾಯತೀರ್ಪಿನ ದಿನ, ಆ ಪಟ್ಟಣಕ್ಕಿಂತಲೂ ಸೊದೋಮಿನ\f + \fr 10:12 \fr*\ft \+xt ಆದಿ 19\+xt* ನೋಡಿ\ft*\f* ಗತಿ ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ. \p \v 13 “ಖೊರಾಜಿನೇ, ನಿನಗೆ ಕಷ್ಟ! ಬೇತ್ಸಾಯಿದವೇ, ನಿನಗೆ ಕಷ್ಟ! ಏಕೆಂದರೆ ನಿಮ್ಮಲ್ಲಿ ನಡೆದ ಅದ್ಭುತಗಳು ಟೈರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅಲ್ಲಿಯವರು ಬಹಳ ಕಾಲದ ಹಿಂದೆಯೇ, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆ ತಿರುಗಿಕೊಳ್ಳುತ್ತಿದ್ದರು.\f + \fr 10:13 \fr*\ft ಇದು ಜನರು ತಮ್ಮ ಪಾಪಗಳ \ft*\fqa ಪಶ್ಚಾತ್ತಾಪದ ದುಃಖಾಚರಣೆ ಸಂಕೇತ\fqa*\f* \v 14 ಆದರೆ ನ್ಯಾಯತೀರ್ಪಿನಲ್ಲಿ ನಿಮ್ಮ ಗತಿಗಿಂತಲೂ ಟೈರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ತಾಳಬಹುದಾಗಿರುವುದು. \v 15 ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ ಇಳಿಯುವೆ. \p \v 16 “ನಿಮ್ಮ ಮಾತನ್ನು ಕೇಳುವವರು ನನ್ನ ಮಾತನ್ನು ಕೇಳುತ್ತಾರೆ; ನಿಮ್ಮನ್ನು ತಿರಸ್ಕರಿಸುವವರು ನನ್ನನ್ನು ತಿರಸ್ಕರಿಸುತ್ತಾರೆ; ಆದರೆ ನನ್ನನ್ನು ತಿರಸ್ಕರಿಸುವವರು ನನ್ನನ್ನು ಕಳುಹಿಸಿದಾತನನ್ನೇ ತಿರಸ್ಕರಿಸುತ್ತಾರೆ,” ಎಂದರು. \p \v 17 ಆ ಎಪ್ಪತ್ತೆರಡು ಮಂದಿ ಸಂತೋಷದಿಂದ ಹಿಂತಿರುಗಿ, “ಕರ್ತದೇವರೇ, ನಿಮ್ಮ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು,” ಎಂದರು. \p \v 18 ಯೇಸು ಅವರಿಗೆ, “ಸೈತಾನನು ಮಿಂಚಿನ ಹಾಗೆ ಆಕಾಶದಿಂದ ಬೀಳುವುದನ್ನು ನಾನು ಕಂಡೆನು. \v 19 ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವುದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವುದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡಲಾರದು. \v 20 ಹೀಗಿದ್ದರೂ, ದೆವ್ವಗಳು ನಿಮಗೆ ಅಧೀನವಾಗಿವೆ ಎಂದು ಸಂತೋಷ ಪಡಬೇಡಿರಿ, ಆದರೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಲಿಖಿತವಾಗಿವೆ ಎಂದು ಸಂತೋಷಿಸಿರಿ,” ಎಂದರು. \p \v 21 ಆ ಸಮಯದಲ್ಲಿ ಯೇಸು, ಪವಿತ್ರಾತ್ಮರ ಮುಖಾಂತರ ಆನಂದಗೊಂಡು, “ತಂದೆಯೇ, ಪರಲೋಕ, ಭೂಲೋಕಗಳ ಒಡೆಯರೇ, ನೀವು ಈ ವಿಷಯಗಳನ್ನು ಜ್ಞಾನಿಗಳಿಂದಲೂ ಬುದ್ಧಿವಂತರಿಂದಲೂ ಮರೆಮಾಡಿ, ಶಿಶುಗಳಿಗೆ ಪ್ರಕಟ ಮಾಡಿರುವುದರಿಂದ ನಾನು ನಿಮ್ಮನ್ನು ಕೊಂಡಾಡುತ್ತೇನೆ. ಹೌದು ತಂದೆಯೇ, ಹೀಗೆ ಮಾಡುವುದು ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋಚಿತು. \p \v 22 “ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾರೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು,” ಎಂದರು. \p \v 23 ಯೇಸು ತಮ್ಮ ಶಿಷ್ಯರ ಕಡೆಗೆ ತಿರುಗಿಕೊಂಡು, “ನೀವು ಕಾಣುತ್ತಿರುವುದನ್ನೆಲ್ಲಾ ಕಾಣುವ ಕಣ್ಣುಗಳು ಭಾಗ್ಯವುಳ್ಳವು. \v 24 ಏಕೆಂದರೆ ಅನೇಕ ಪ್ರವಾದಿಗಳು ಮತ್ತು ಅರಸರು ನೀವು ಕಾಣುವಂಥವುಗಳನ್ನು ಕಾಣಬೇಕೆಂದು ಅಪೇಕ್ಷಿಸಿದರೂ ಕಾಣಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು. \s1 ಒಳ್ಳೆಯ ಸಮಾರ್ಯದವನ ಕುರಿತು ಸಾಮ್ಯ \p \v 25 ಒಂದು ಸಂದರ್ಭದಲ್ಲಿ ಒಬ್ಬ ನಿಯಮ ಬೋಧಕನು ಎದ್ದು ನಿಂತು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು. \p \v 26 ಯೇಸು ಅವನಿಗೆ, “ಮೋಶೆಯ ನಿಯಮದಲ್ಲಿ ಏನು ಬರೆದಿದೆ? ನೀನು ಅದನ್ನು ಹೇಗೆ ಓದುತ್ತೀ?” ಎಂದು ಕೇಳಿದರು. \p \v 27 ಅದಕ್ಕೆ ಅವನು ಉತ್ತರವಾಗಿ, “ ‘ನೀನು ನಿನ್ನ ದೇವರಾದ ಕರ್ತದೇವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು,’\f + \fr 10:27 \fr*\ft \+xt ಧರ್ಮೋ 6:5\+xt*\ft*\f* ಮತ್ತು ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು,’\f + \fr 10:27 \fr*\ft \+xt ಯಾಜಕ 19:18\+xt*\ft*\f*” ಎಂದನು. \p \v 28 ಆಗ ಯೇಸು ಅವನಿಗೆ, “ನೀನು ಸರಿಯಾಗಿ ಉತ್ತರಕೊಟ್ಟೆ, ಅದರಂತೆಯೇ ಮಾಡು, ಆಗ ನೀನು ಬದುಕುವೆ,” ಎಂದರು. \p \v 29 ಆದರೆ ಅವನು ತಾನೇ ನೀತಿವಂತನೆಂದು ತೋರಿಸುವುದಕ್ಕೆ, ಅಪೇಕ್ಷೆಯುಳ್ಳವನಾಗಿ ಯೇಸುವಿಗೆ, “ನನ್ನ ನೆರೆಯವನು ಯಾರು?” ಎಂದು ಕೇಳಿದನು. \p \v 30 ಆಗ ಯೇಸು: “ಒಬ್ಬ ಮನುಷ್ಯನು ಯೆರೂಸಲೇಮಿನಿಂದ ಯೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನ ವಸ್ತ್ರಗಳನ್ನು ಕಿತ್ತುಕೊಂಡು, ಅವನನ್ನು ಗಾಯಮಾಡಿ, ಅರೆಜೀವ ಮಾಡಿಬಿಟ್ಟು ಹೊರಟು ಹೋದರು. \v 31 ಆಗ ಒಬ್ಬ ಯಾಜಕನು ಅದೇ ಮಾರ್ಗವಾಗಿ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು. \v 32 ಅದೇ ಪ್ರಕಾರ ಒಬ್ಬ ಲೇವಿಯೂ\f + \fr 10:32 \fr*\fq ಲೇವಿ \fq*\ft ಅಂದರೆ \ft*\fqa ದೇವಾಲಯದ ಯಾಜಕನ ಸಹಾಯಕ\fqa*\f* ಆ ಸ್ಥಳಕ್ಕೆ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು. \v 33 ಆದರೆ ಒಬ್ಬ ಸಮಾರ್ಯದವನು, ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ಕಂಡು, ಕನಿಕರಪಟ್ಟು, \v 34 ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು, ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ವಾಹಕಪಶುವಿನ ಮೇಲೆ ಕುಳ್ಳಿರಿಸಿ, ವಸತಿಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು. \v 35 ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ಬೆಳ್ಳಿ ನಾಣ್ಯವನ್ನು\f + \fr 10:35 \fr*\ft ಗ್ರೀಕ್ ಭಾಷೆಯಲ್ಲಿ ದಿನಾರಿ\ft*\f* ತೆಗೆದು ಛತ್ರದ ಯಜಮಾನನಿಗೆ ಕೊಟ್ಟು ಅವನಿಗೆ, ‘ಇವನನ್ನು ಆರೈಕೆ ಮಾಡು, ನೀನು ಏನಾದರೂ ಹೆಚ್ಚು ವೆಚ್ಚಮಾಡಿದರೆ, ನಾನು ತಿರುಗಿ ಬರುವಾಗ ಕೊಟ್ಟು ತೀರಿಸುತ್ತೇನೆ,’ ಎಂದನು. \p \v 36 “ಈಗ ಆ ಕಳ್ಳರ ಕೈಗೆ ಸಿಕ್ಕಿಬಿದ್ದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಕೇಳಿದರು. \p \v 37 ಅದಕ್ಕೆ ನಿಯಮ ಪಂಡಿತನು, “ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ನಿನ್ನ ನೆರೆಯವನು,” ಎಂದನು. \p ಆಗ ಯೇಸು ಅವನಿಗೆ, “ಹೋಗು, ನೀನೂ ಅದರಂತೆಯೇ ಮಾಡು,” ಎಂದು ಹೇಳಿದರು. \s1 ಮಾರ್ಥ ಮತ್ತು ಮರಿಯಳ ಮನೆಯಲ್ಲಿ ಯೇಸು \p \v 38 ಯೇಸು ಮತ್ತು ಅವರ ಶಿಷ್ಯರು ಸಂಚಾರಮಾಡುತ್ತಾ, ಒಂದು ಹಳ್ಳಿಗೆ ಬಂದರು, ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಅವರನ್ನು ತನ್ನ ಮನೆಯೊಳಗೆ ಸ್ವೀಕರಿಸಿಕೊಂಡಳು. \v 39 ಆಕೆಗೆ ಮರಿಯಳೆಂಬ ಒಬ್ಬ ಸಹೋದರಿ ಇದ್ದಳು, ಆಕೆಯು ಕರ್ತದೇವರ ಪಾದಗಳ ಬಳಿಯಲ್ಲಿ ಕುಳಿತು ಅವರ ವಾಕ್ಯವನ್ನು ಕೇಳುತ್ತಿದ್ದಳು. \v 40 ಆದರೆ ಮಾರ್ಥಳು ಬಹಳ ಕೆಲಸದ ನಿಮಿತ್ತವಾಗಿ ಬೇಸರಗೊಂಡು ಅವರ ಬಳಿಗೆ ಬಂದು, “ಕರ್ತದೇವರೇ, ಕೆಲಸ ಮಾಡುವುದಕ್ಕೆ ನನ್ನ ಸಹೋದರಿಯು ನನ್ನೊಬ್ಬಳನ್ನೇ ಬಿಟ್ಟಿರುವುದು ನಿಮಗೆ ಚಿಂತೆಯಿಲ್ಲವೋ? ನನಗೆ ಸಹಾಯಮಾಡುವುದಕ್ಕಾಗಿ ಅವಳಿಗೆ ಹೇಳಿರಿ!” ಎಂದಳು. \p \v 41 ಅದಕ್ಕೆ ಕರ್ತದೇವರು ಪ್ರತ್ಯುತ್ತರವಾಗಿ, “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀ, \v 42 ಆದರೆ ಬೇಕಾದದ್ದು ಕೆಲವೇ, ಅವಶ್ಯವಾಗಿರುವುದು. ಮರಿಯಳು ಆ ಉತ್ತಮ ಭಾಗವನ್ನೇ ಆರಿಸಿಕೊಂಡಿದ್ದಾಳೆ ಅದು ಆಕೆಯಿಂದ ಯಾರೂ ತೆಗೆಯಲಾಗುವುದಿಲ್ಲ,” ಎಂದು ಹೇಳಿದರು. \c 11 \s1 ಪ್ರಾರ್ಥನೆಯ ಬಗ್ಗೆ ಯೇಸುವಿನ ಬೋಧನೆ \p \v 1 ಯೇಸು ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡಿ ಮುಗಿಸಿದ ಮೇಲೆ, ಅವರ ಶಿಷ್ಯರಲ್ಲಿ ಒಬ್ಬನು ಅವರಿಗೆ, “ಕರ್ತದೇವರೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆಯೇ ನಮಗೂ ಪ್ರಾರ್ಥನೆಮಾಡುವುದಕ್ಕೆ ಕಲಿಸಿರಿ,” ಎಂದು ಕೇಳಿದನು. \p \v 2 ಯೇಸು ಅವರಿಗೆ, “ನೀವು ಪ್ರಾರ್ಥನೆ ಮಾಡುವಾಗ ಈ ರೀತಿಯಾಗಿ ಪ್ರಾರ್ಥಿಸಿರಿ, \q1 “ಪರಲೋಕದಲ್ಲಿರುವ ನಮ್ಮ ತಂದೆಯೇ, \q1 ನಿಮ್ಮ ನಾಮವು ಪರಿಶುದ್ಧವೆಂದು ಎಣಿಕೆಯಾಗಿರಲಿ, \q1 ನಿಮ್ಮ ರಾಜ್ಯವು ಬರಲಿ. \q1 ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.\f + \fr 11:2 \fr*\ft ಕೆಲವು ಪ್ರತಿಗಳಲ್ಲಿ ಈ ವಾಕ್ಯವು ಇರುವುದಿಲ್ಲ\ft*\f* \q1 \v 3 ನಮ್ಮ ಅನುದಿನದ ಆಹಾರವನ್ನು ನಮಗೆ ಪ್ರತಿದಿನವೂ ದಯಪಾಲಿಸಿರಿ. \q1 \v 4 ನಮಗೆ ಪಾಪಮಾಡಿದವರನ್ನು,\f + \fr 11:4 \fr*\ft ಗ್ರೀಕ್ ಭಾಷೆಯಲ್ಲಿ \ft*\fqa ಸಾಲಗಾರರಿಗೆ\fqa*\f* ನಾವು ಕ್ಷಮಿಸಿದಂತೆಯೇ \q2 ನಮ್ಮ ಪಾಪಗಳನ್ನು ಕ್ಷಮಿಸಿರಿ. \q1 ನಮ್ಮನ್ನು ಶೋಧನೆಯೊಳಗೆ ಸೇರಿಸದೆ, ಕೇಡಿನಿಂದ ನಮ್ಮನ್ನು ತಪ್ಪಿಸಿ.” \p \v 5 ಯೇಸು ಅವರಿಗೆ, “ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಸ್ನೇಹಿತನಿರಲಾಗಿ, ಮಧ್ಯರಾತ್ರಿಯಲ್ಲಿ ಅವನ ಬಳಿಗೆ ಹೋಗಿ ಅವನಿಗೆ, ‘ಸ್ನೇಹಿತನೇ, ಮೂರು ರೊಟ್ಟಿಗಳನ್ನು ನನಗೆ ಸಾಲವಾಗಿ ಕೊಡು; \v 6 ಏಕೆಂದರೆ ನನ್ನ ಒಬ್ಬ ಸ್ನೇಹಿತನು ಪ್ರಯಾಣಮಾಡಿ ನನ್ನ ಬಳಿಗೆ ಬಂದಿದ್ದಾನೆ, ಅವನಿಗೆ ಬಡಿಸುವುದಕ್ಕೆ ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು \v 7 ಅವನು ಒಳಗಿನಿಂದಲೇ ಇವನಿಗೆ ಉತ್ತರವಾಗಿ, ‘ನನ್ನನ್ನು ತೊಂದರೆಪಡಿಸಬೇಡ. ಬಾಗಿಲು ಈಗ ಮುಚ್ಚಿದೆ, ಹಾಸಿಗೆಯಲ್ಲಿ ನನ್ನ ಮಕ್ಕಳು ನನ್ನ ಜೊತೆ ಮಲಗಿದ್ದಾರೆ. ನಾನೆದ್ದು ಕೊಡಲಾರೆನು,’ ಎಂದು ಹೇಳುವನು. \v 8 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಅವನು ಸ್ನೇಹಿತನಾಗಿರುವುದರಿಂದ ಎದ್ದು ಇವನಿಗೆ ಕೊಡದೆಹೋದರೂ ಮೇಲಿಂದ ಮೇಲೆ ನಾಚಿಕೆಪಡದೆ ಬೇಡುವುದರಿಂದ ಎದ್ದು ಇವನಿಗೆ ಬೇಕಾದಷ್ಟು ಕೊಡುವನು. \p \v 9 “ಕೇಳಿಕೊಳ್ಳಿರಿ ನಿಮಗೆ ಕೊಡಲಾಗುವುದು; ಹುಡುಕಿರಿ ನಿಮಗೆ ಸಿಗುವುದು; ತಟ್ಟಿರಿ ನಿಮಗೆ ಬಾಗಿಲು ತೆರೆಯಲಾಗುವುದು. \v 10 ಬೇಡಿಕೊಳ್ಳುವ ಪ್ರತಿಯೊಬ್ಬರು ಪಡೆದುಕೊಳ್ಳುವರು; ಹುಡುಕುವವರಿಗೆ ಸಿಗುವುದು; ತಟ್ಟುವವರಿಗೆ ಬಾಗಿಲು ತೆರೆಯಲಾಗುವುದು. \p \v 11 “ನಿಮ್ಮಲ್ಲಿ ತಂದೆಯಾಗಿರುವಾತನು, ತನ್ನ ಮಗನು ರೊಟ್ಟಿಯನ್ನು ಕೇಳಿದರೆ ಮಗನಿಗೆ ಕಲ್ಲನ್ನು ಕೊಡುವನೇ,\f + \fr 11:11 \fr*\ft ಕೆಲವು ಹಸ್ತಪ್ರತಿಗಳಲ್ಲಿ ಈ ವಾಕ್ಯವು ಇರುವುದಿಲ್ಲ\ft*\f* ಮೀನನ್ನು ಕೇಳಿದರೆ, ಮೀನಿಗೆ ಬದಲಾಗಿ ಹಾವನ್ನು ಕೊಡುವನೇ? \v 12 ಇಲ್ಲವೆ ಮೊಟ್ಟೆಯನ್ನು ಕೇಳಿದರೆ, ಅವನಿಗೆ ಚೇಳನ್ನು ಕೊಡುವನೇ? \v 13 ಹಾಗಾದರೆ ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯವುಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತಮ್ಮನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮರನ್ನು ದಯಪಾಲಿಸುವರಲ್ಲವೇ!” ಎಂದು ನಾನು ನಿಮಗೆ ಹೇಳುತ್ತೇನೆ ಎಂದರು. \s1 ಯೇಸು ಮತ್ತು ಬೆಲ್ಜೆಬೂಲನೂ \p \v 14 ಯೇಸು ಒಂದು ಮೂಕದೆವ್ವವನ್ನು ಹೊರಗೆ ಓಡಿಸುತ್ತಿದ್ದರು. ಆ ದೆವ್ವವು ಹೊರಟುಹೋದ ಮೇಲೆ, ಆ ಮೂಕನು ಮಾತನಾಡಿದನು. ಅದಕ್ಕೆ ಜನರು ಆಶ್ಚರ್ಯಪಟ್ಟರು. \v 15 ಆದರೆ ಅವರಲ್ಲಿ ಕೆಲವರು, “ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು. \v 16 ಇನ್ನು ಕೆಲವರು ಯೇಸುವನ್ನು ಪರೀಕ್ಷಿಸುವವರಾಗಿ ಪರಲೋಕದಿಂದ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಕೇಳಿದರು. \p \v 17 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು: “ತನಗೆ ತಾನೇ ವಿರೋಧವಾಗಿ ವಿಭಾಗಗೊಂಡರೆ ಪ್ರತಿಯೊಂದು ರಾಜ್ಯವು ನಾಶವಾಗುವುದು, ಒಂದು ಮನೆಯು ತನಗೆ ತಾನೇ ವಿರೋಧವಾಗಿ ವಿಭಾಗವಾದರೆ, ಅದು ಬಿದ್ದುಹೋಗುವುದು. \v 18 ಸೈತಾನನು ಸಹ ತನಗೆ ತಾನೇ ವಿರೋಧವಾಗಿ ತನ್ನಲ್ಲಿ ವಿಭಾಗವಾದರೆ, ಅವನ ರಾಜ್ಯವು ನಿಲ್ಲುವುದು ಹೇಗೆ? ಏಕೆಂದರೆ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುತ್ತೇನೆಂದು ನೀವು ಹೇಳುತ್ತೀರಲ್ಲಾ. \v 19 ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುವುದಾದರೆ, ನಿಮ್ಮ ಪುತ್ರರು ಯಾರಿಂದ ಅವುಗಳನ್ನು ಓಡಿಸುತ್ತಾರೆ? ಆದ್ದರಿಂದ, ನಿಮ್ಮವರೇ ನಿಮಗೆ ನ್ಯಾಯಾಧಿಪತಿಗಳಾಗಿರುವರು. \v 20 ನಾನು ದೇವರ ಬಲದಿಂದಲೇ ದೆವ್ವಗಳನ್ನು ಓಡಿಸುವುದಾದರೆ, ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ. \p \v 21 “ಆಯುಧಗಳನ್ನು ಧರಿಸಿಕೊಂಡು, ಬಲಿಷ್ಠನಾದವನೊಬ್ಬನು ತನ್ನ ಮನೆಯನ್ನು ಕಾಯುವುದಾದರೆ ಅವನ ಸೊತ್ತು ಸುರಕ್ಷಿತವಾಗಿರುವುದು. \v 22 ಆದರೆ ಅವನಿಗಿಂತ ಬಲಿಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ, ಅವನು ಭರವಸೆಯಿಟ್ಟಿದ್ದ ಆಯುಧಗಳನ್ನು ಅವನಿಂದ ತೆಗೆದುಕೊಂಡು ತನ್ನ ಸುಲಿಗೆಯನ್ನೆಲ್ಲಾ ಹಂಚುವನು. \p \v 23 “ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ. \p \v 24 “ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ, ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ಹುಡುಕಾಡಿದರೂ ಅದನ್ನು ಕಂಡುಕೊಳ್ಳದೆ ಅದು, ‘ನಾನು ಹೊರಟು ಬಂದ ನನ್ನ ಮನೆಗೆ ಹಿಂದಿರುಗುವೆನು,’ ಎಂದು ಹೇಳಿಕೊಂಡು ಬಂದು, \v 25 ಅದು ಬಂದು ಆ ಮನೆಯು ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. \v 26 ಆ ಅಶುದ್ಧಾತ್ಮವು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ಅಶುದ್ಧಾತ್ಮಗಳನ್ನು ತನ್ನೊಂದಿಗೆ ಕರೆದುಕೊಂಡು ಅವನ ಒಳಗೆ ಸೇರಿ ಅಲ್ಲಿ ವಾಸಮಾಡುತ್ತವೆ. ಹೀಗೆ ಆ ಮನುಷ್ಯನ ಕಡೆಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು,” ಎಂದರು. \p \v 27 ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಆ ಗುಂಪಿನಲ್ಲಿದ್ದ ಒಬ್ಬ ಸ್ತ್ರೀಯು ತನ್ನ ಸ್ವರವನ್ನೆತ್ತಿ ಅವರಿಗೆ, “ನಿಮ್ಮನ್ನು ಗರ್ಭದಲ್ಲಿ ಹೊತ್ತು, ನಿಮಗೆ ಹಾಲುಣಿಸಿದ ತಾಯಿ ಧನ್ಯಳು,” ಎಂದು ಹೇಳಿದಳು. \p \v 28 ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವರು ಹೆಚ್ಚು ಭಾಗ್ಯವಂತರು,” ಎಂದರು. \s1 ಯೋನನ ಸೂಚನೆ \p \v 29 ಜನರು ಗುಂಪುಗುಂಪಾಗಿ ಕೂಡಿಬಂದಿದ್ದಾಗ, ಯೇಸು, “ಇದು ದುಷ್ಟ ಸಂತತಿಯು. ಇದು ಸೂಚಕಕಾರ್ಯವನ್ನು ಹುಡುಕುತ್ತದೆ, ಪ್ರವಾದಿ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ದೊರಕದು.\f + \fr 11:29 \fr*\ft \+xt ಯೋನ 1–2\+xt* ನೋಡಿರಿ. ಯೋನನು ಮೀನಿನ ಹೊಟ್ಟೆಯಲ್ಲಿ ಮೂರು ದಿನವಿದ್ದರೂ ಜೀವದಿಂದ ಬದುಕುಳಿದದ್ದು. ಇದಕ್ಕೆ ಸೂಚಕವಾಗಿದೆ\ft*\f* \v 30 ಏಕೆಂದರೆ ಯೋನನು ನಿನೆವೆ ಪಟ್ಟಣದವರಿಗೆ ಸೂಚನೆಯಾಗಿದ್ದಂತೆಯೇ, ಮನುಷ್ಯಪುತ್ರನಾದ ನಾನೇ ಈ ಸಂತತಿಗೆ ಸೂಚನೆಯಾಗಿರುವೆನು. \v 31 ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು.\f + \fr 11:31 \fr*\ft \+xt 1 ಅರಸು 10:1-13; 2 ಪೂರ್ವ 9:1-12\+xt*\ft*\f* ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು\f + \fr 11:31 \fr*\ft ಅಥವಾ \ft*\fqa ಮಹತ್ತಾದದ್ದು\fqa*\f* ಇಲ್ಲಿದ್ದಾನೆ. \v 32 ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ,” ಎಂದು ಹೇಳಿದರು. \s1 ದೇಹದ ದೀಪ \p \v 33 “ಯಾರೂ ದೀಪವನ್ನು ಹಚ್ಚಿ ಮರೆಯಾದ ಸ್ಥಳದಲ್ಲಾಗಲಿ ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ, ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. \v 34 ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ. ಆದ್ದರಿಂದ ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವುದು. ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವು ಸಹ ಕತ್ತಲೆಯಾಗಿರುವುದು. \v 35 ಆದ್ದರಿಂದ, ನಿನ್ನಲ್ಲಿರುವ ಬೆಳಕು ಕತ್ತಲೆಯಾಗದಂತೆ ನೋಡಿಕೋ. \v 36 ದೇಹದ ಯಾವುದೊಂದು ಭಾಗದಲ್ಲಿಯೂ ಕತ್ತಲೆಯಾಗಿರದೆ, ನಿನ್ನ ದೇಹವೆಲ್ಲವೂ ಪೂರ್ಣವಾಗಿ ಬೆಳಕಾಗಿರುವುದಾದರೆ, ಪ್ರಕಾಶಮಾನವಾದ ದೀಪವು ನಿನಗೆ ಬೆಳಕುಕೊಡುವಂತೆ ಸಮಸ್ತವೂ ಬೆಳಕಾಗಿರುವುದು,” ಎಂದು ಹೇಳಿದರು. \s1 ಯೇಸು ನಿಯಮ ಪಂಡಿತರನ್ನು ಖಂಡಿಸಿದ್ದು \p \v 37 ಯೇಸು ಮಾತನಾಡುವುದನ್ನು ಮುಗಿಸಿದಾಗ, ಒಬ್ಬ ಫರಿಸಾಯನು ತನ್ನೊಂದಿಗೆ ಊಟ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡನು, ಆಗ ಅವರು ಒಳಗೆ ಹೋಗಿ ಊಟಕ್ಕೆ ಕೂತುಕೊಂಡರು. \v 38 ಆದರೆ ಊಟಕ್ಕೆ ಮೊದಲು ಯೇಸು ಕೈತೊಳೆಯದೆ ಇರುವುದನ್ನು ಫರಿಸಾಯನು ಕಂಡು ಆಶ್ಚರ್ಯಪಟ್ಟನು. \p \v 39 ಆಗ ಕರ್ತದೇವರು ಅವನಿಗೆ, “ಫರಿಸಾಯರಾದ ನೀವು, ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ. \v 40 ಮೂರ್ಖರೇ! ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಸಹ ಮಾಡಿದನಲ್ಲವೇ? \v 41 ನೀವು ನಿಮ್ಮೊಳಗೆ ಅಂಟಿಕೊಂಡಿರುವವುಗಳನ್ನು ಬಡವರಿಗೆ ದಾನ ಮಾಡಿಬಿಡಿರಿ, ಆಗ ನಿಮಗೆ ಎಲ್ಲವೂ ಶುದ್ಧವಾಗಿರುವುವು. \p \v 42 “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಪುದೀನ, ಸದಾಪು ಮತ್ತು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು, ನ್ಯಾಯವನ್ನೂ ದೇವರ ಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಅವುಗಳನ್ನು ಮಾಡಿದ ನೀವು ಇವುಗಳನ್ನೂ ಅವಶ್ಯವಾಗಿ ಮಾಡಬೇಕಾಗಿತ್ತು. \p \v 43 “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಇಷ್ಟಪಡುತ್ತೀರಿ. \p \v 44 “ನಿಮಗೆ ಕಷ್ಟ, ಏಕೆಂದರೆ ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ, ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು,” ಎಂದು ಹೇಳಿದರು. \p \v 45 ನಿಯಮ ಬೋಧಕ ಒಬ್ಬನು ಯೇಸುವಿಗೆ, “ಬೋಧಕರೇ, ನೀವು ಇವುಗಳನ್ನು ಹೇಳುವುದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀರಿ,” ಎಂದನು. \p \v 46 ಅದಕ್ಕೆ ಯೇಸು, “ನಿಯಮ ಪಂಡಿತರೇ, ನಿಮಗೂ ಕಷ್ಟ, ಏಕೆಂದರೆ ಹೊರಲಾಗದ ಹೊರೆಗಳನ್ನು ಮನುಷ್ಯರ ಮೇಲೆ ಹೊರಿಸುತ್ತೀರಿ, ನೀವಾದರೋ ಈ ಹೊರೆಗಳನ್ನು ನಿಮ್ಮ ಬೆರಳುಗಳಲ್ಲಿ ಒಂದರಿಂದಾದರೂ ಮುಟ್ಟುವುದಿಲ್ಲ. \p \v 47 “ನಿಮಗೆ ಕಷ್ಟ, ಏಕೆಂದರೆ ನಿಮ್ಮ ಪಿತೃಗಳು ಪ್ರವಾದಿಗಳನ್ನು ಕೊಂದರು, ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ. \v 48 ಇದರಿಂದ ನಿಜವಾಗಿಯೂ ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಒಪ್ಪಿಕೊಳ್ಳುವಂತೆ ಸಾಕ್ಷಿಕರಿಸುತ್ತೀರಿ; ಏಕೆಂದರೆ ಅವರು ನಿಜವಾಗಿಯೂ ಪ್ರವಾದಿಗಳನ್ನು ಕೊಂದರು, ನೀವೋ ಅವರ ಸಮಾಧಿಗಳನ್ನು ಕಟ್ಟುತ್ತೀರಿ. \v 49 ಈ ಕಾರಣದಿಂದ, ದೇವರ ಜ್ಞಾನವು ಸಹ ಹೇಳಿರುವುದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು, ಅವರಲ್ಲಿ ಕೆಲವರನ್ನು ಅವರು ಕೊಲ್ಲುವರು ಮತ್ತು ಹಿಂಸೆಪಡಿಸುವರು.’ \v 50 ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಲೆಕ್ಕ ಕೊಡಬೇಕಾಗಿರುವುದು, \v 51 ಹೇಬೆಲನ\f + \fr 11:51 \fr*\ft ನೋಡಿರಿ \+xt ಆದಿ 4:2-15\+xt*\ft*\f* ರಕ್ತ ಮೊದಲುಗೊಂಡು ಬಲಿಪೀಠಕ್ಕೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ\f + \fr 11:51 \fr*\ft ನೋಡಿರಿ \+xt 2 ಪೂರ್ವ 24:20-22\+xt*\ft*\f* ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು. ಹೌದು, ಈ ಸಂತತಿಯವರೇ ಇದಕ್ಕೆಲ್ಲಾ ಉತ್ತರಕೊಡಬೇಕೆಂದು, ನಾನು ನಿಮಗೆ ನಿಜವಾಗಿ ಹೇಳುತ್ತೇನೆ. \p \v 52 “ನಿಯಮ ಪಂಡಿತರೇ, ನಿಮಗೆ ಕಷ್ಟ, ಏಕೆಂದರೆ ನೀವು ಜ್ಞಾನದ ಬೀಗದ ಕೈಯನ್ನು ತೆಗೆದುಕೊಂಡಿದ್ದೀರಿ. ನೀವಂತೂ ಒಳಗೆ ಪ್ರವೇಶಿಸಲಿಲ್ಲ; ಒಳಗೆ ಪ್ರವೇಶಿಸುತ್ತಿರುವವರಿಗೂ ನೀವು ತಡೆಗಟ್ಟುತ್ತೀರಿ,” ಎಂದು ಹೇಳಿದರು. \p \v 53 ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ, ನಿಯಮ ಬೋಧಕರೂ ಫರಿಸಾಯರೂ ಕೋಪಾವೇಶವುಳ್ಳವರಾಗಿ, ಯೇಸು ಇನ್ನೂ ಹೆಚ್ಚು ವಿಷಯಗಳನ್ನು ಮಾತನಾಡುವಂತೆ ಅವರನ್ನು ಕೆಣಕಿದರು, \v 54 ಏಕೆಂದರೆ ಯೇಸುವಿನ ಮಾತಿನಲ್ಲಿ ಏನನ್ನಾದರೂ ಕಂಡುಹಿಡಿದು ಅವರ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡುತ್ತಿದ್ದರು. \c 12 \s1 ಎಚ್ಚರಿಕೆಯೂ ಉತ್ತೇಜನವೂ \p \v 1 ಅಷ್ಟರಲ್ಲಿ, ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿದಾಡುವಷ್ಟು ಕಿಕ್ಕಿರಿದು ಬಂದಿರಲಾಗಿ, ಯೇಸು ಮೊದಲು ತಮ್ಮ ಶಿಷ್ಯರಿಗೆ ಹೀಗೆಂದು ಮಾತನಾಡಲಾರಂಭಿಸಿದರು, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದರೆ, ಕಪಟತನದ ಬಗ್ಗೆ ನೀವು ಎಚ್ಚರವಾಗಿರಿ. \v 2 ಪ್ರಕಟವಾಗದಂತೆ ಯಾವುದೂ ಮರೆಯಾಗಿರುವುದಿಲ್ಲ, ತಿಳಿಯಲಾಗದಂತೆ ಯಾವುದೂ ಗುಪ್ತವಾಗಿರುವುದಿಲ್ಲ. \v 3 ಆದ್ದರಿಂದ ನೀವು ಕತ್ತಲೆಯಲ್ಲಿ ಯಾವುದನ್ನು ಹೇಳಿದ್ದೀರೋ ಅದು ಬೆಳಕಿನಲ್ಲಿ ಕೇಳಲಾಗುವುದು, ಕೋಣೆಗಳೊಳಗೆ ನೀವು ಪಿಸುಗುಟ್ಟಿದ್ದು ಮಾಳಿಗೆಗಳ ಮೇಲೆ ಸಾರಲಾಗುವುದು. \p \v 4 “ನನ್ನ ಸ್ನೇಹಿತರೇ, ದೇಹವನ್ನು ಕೊಂದು, ಅದಕ್ಕಿಂತ ಹೆಚ್ಚೇನೂ ಮಾಡಲಾರದವರಿಗೆ ಹೆದರಬೇಡಿರಿ ಎಂದು ನಿಮಗೆ ಹೇಳುತ್ತೇನೆ. \v 5 ಆದರೆ ಯಾರಿಗೆ ನೀವು ಭಯಪಡಬೇಕೆಂದು ನಾನು ನಿಮಗೆ ತೋರಿಸುತ್ತೇನೆ: ನಿಮ್ಮ ದೇಹವನ್ನು ಕೊಂದ ಮೇಲೆ, ನರಕದಲ್ಲಿ ಹಾಕುವುದಕ್ಕೆ ಅಧಿಕಾರವಿರುವ ದೇವರಿಗೆ ಭಯಪಡಿರಿ. ಹೌದು, ದೇವರಿಗೇ ಭಯಪಡಿರಿ, ಎಂದು ನಾನು ನಿಮಗೆ ಹೇಳುತ್ತೇನೆ. \v 6 ಎರಡು ರೂಪಾಯಿಗಳಿಗೆ\f + \fr 12:6 \fr*\ft ದಿನದ ಕೂಲಿಯ 1/8 ಭಾಗದ ಹಣ\ft*\f* ಐದು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. \v 7 ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿರಿ; ಅನೇಕ ಗುಬ್ಬಿಗಳಿಗಿಂತಲೂ ನೀವು ಎಷ್ಟೋ ಮೌಲ್ಯವುಳ್ಳವರು. \p \v 8 “ಆದರೆ ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರ ಮುಂದೆ ನನ್ನನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬರನ್ನು, ಮನುಷ್ಯಪುತ್ರನಾದ ನಾನು ಸಹ ದೇವದೂತರ ಮುಂದೆ ನನ್ನವರೆಂದು ಒಪ್ಪಿಕೊಳ್ಳುವೆನು. \v 9 ಆದರೆ ಯಾರು ಜನರ ಮುಂದೆ ನನ್ನನ್ನು ಅಲ್ಲಗಳೆಯುವರೋ ಅವರನ್ನು ದೇವದೂತರ ಮುಂದೆ ನಾನು ಅಲ್ಲಗಳೆಯುವೆನು. \v 10 ಮನುಷ್ಯಪುತ್ರನಾದ ನನಗೆ ವಿರೋಧವಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮರಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದಕ್ಕೆ ಕ್ಷಮಾಪಣೆಯಿಲ್ಲ. \p \v 11 “ಜನರು ನಿಮ್ಮನ್ನು ಸಭಾಮಂದಿರಗಳಿಗೂ ಆಳುವವರ ಮುಂದೆಯೂ ಅಧಿಕಾರಿಗಳ ಮುಂದೆಯೂ ತಂದಾಗ ಹೇಗೆ ಇಲ್ಲವೆ ಯಾವುದನ್ನು ಕುರಿತು ಉತ್ತರಕೊಡಬೇಕೆಂದು, ಇಲ್ಲವೆ ಏನು ಹೇಳಬೇಕೆಂದು ಚಿಂತಿಸಬೇಡಿರಿ, \v 12 ಆ ಸಮಯದಲ್ಲಿ ನೀವು ಹೇಳಬೇಕಾದದ್ದನ್ನು ಪವಿತ್ರಾತ್ಮರು ನಿಮಗೆ ಕಲಿಸಿಕೊಡುವರು.” \s1 ಬುದ್ಧಿಯಿಲ್ಲದ ಐಶ್ವರ್ಯವಂತನ ಸಾಮ್ಯ \p \v 13 ಗುಂಪಿನಲ್ಲಿದ್ದ ಒಬ್ಬನು ಯೇಸುವಿಗೆ, “ಬೋಧಕರೇ, ಆಸ್ತಿಯನ್ನು ಭಾಗಮಾಡಿ ನನಗೆ ಕೊಡುವಂತೆ ನನ್ನ ಸಹೋದರನಿಗೆ ಹೇಳಿ,” ಎಂದನು. \p \v 14 ಯೇಸು, “ಸ್ನೇಹಿತನೇ, ನಿಮ್ಮ ಮೇಲೆ ನ್ಯಾಯಾಧಿಪತಿಯಾಗಿ ಇಲ್ಲವೆ ನಿಮಗೆ ಭಾಗಮಾಡಿಕೊಡುವುದಕ್ಕೆ ನನ್ನನ್ನು ನೇಮಿಸಿದವರು ಯಾರು?” ಎಂದು ಹೇಳಿದರು. \v 15 ಅನಂತರ ಯೇಸು ಜನರಿಗೆ, “ಎಚ್ಚರಿಕೆ! ನೀವು ಎಲ್ಲಾ ಲೋಭದಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ; ಏಕೆಂದರೆ ಜೀವನವು ಸಮೃದ್ಧಿಯಾದ ಆಸ್ತಿಗೆ ಆಧಾರವಾದದ್ದಲ್ಲ,” ಎಂದರು. \p \v 16 ಅನಂತರ ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: “ಒಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆ ಕೊಟ್ಟಿತು. \v 17 ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನಗಿರುವ ಬೆಳೆಯನ್ನು ಇಡುವುದಕ್ಕೆ ನನಗೆ ಸ್ಥಳವಿಲ್ಲ,’ ಎಂದು ಆಲೋಚಿಸಿ ಹೀಗೆಂದುಕೊಂಡನು, \p \v 18 “ನಾನು ಹೀಗೆ ಮಾಡುತ್ತೇನೆ, ‘ನನ್ನ ಕಣಜಗಳನ್ನು ಮುರಿದು ಹಾಕಿಸಿ ಇನ್ನೂ ದೊಡ್ಡದಾಗಿ ಕಟ್ಟಿಸುತ್ತೇನೆ, ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ಕೂಡಿಸಿಟ್ಟುಕೊಳ್ಳುತ್ತೇನೆ. \v 19 ಅಲ್ಲದೆ, ನಾನು ನನ್ನ ಪ್ರಾಣಕ್ಕೆ, “ಪ್ರಾಣವೇ ಅನೇಕ ವರ್ಷಗಳಿಗಾಗಿ ನಿನಗೆ ಬಹಳ ಸರಕು ಇಡಲಾಗಿದೆ. ವಿಶ್ರಮಿಸಿಕೋ; ತಿನ್ನು, ಕುಡಿ ಮತ್ತು ಆನಂದವಾಗಿರು ಎಂದು ಹೇಳಿಕೊಳ್ಳುತ್ತೇನೆ,” ’ ಎಂದುಕೊಂಡನು. \p \v 20 “ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ! ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ತೆಗೆದುಕೊಳ್ಳಲಾಗುವುದು. ಆಗ ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದು ಹೇಳಿದರು. \p \v 21 “ತನಗೋಸ್ಕರ ಸಂಪತ್ತನ್ನು ಕೂಡಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತ ಆಗದಿರುವವನು ಇವನಂತೆಯೇ ಇರುವನು,” ಎಂದರು. \s1 ಚಿಂತಿಸಬೇಡ \p \v 22 ಯೇಸು ತಮ್ಮ ಶಿಷ್ಯರಿಗೆ: “ಆದಕಾರಣ, ನೀವು ನಿಮ್ಮ ಜೀವನಕ್ಕಾಗಿ ಏನು ಊಟಮಾಡಬೇಕು; ಮತ್ತು ನಿಮ್ಮ ದೇಹಕ್ಕೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ. \v 23 ಊಟಕ್ಕಿಂತ ಜೀವನವೂ ವಸ್ತ್ರಕ್ಕಿಂತ ದೇಹವೂ ಹೆಚ್ಚಿನದು. \v 24 ಕಾಗೆಗಳನ್ನು ಗಮನಿಸಿರಿ: ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವಾಗಲಿ ಕಣಜವಾಗಲಿ ಇಲ್ಲ, ಆದರೂ ದೇವರು ಅವುಗಳನ್ನು ಪೋಷಿಸುತ್ತಾರೆ. ನೀವು ಪಕ್ಷಿಗಳಿಗಿಂತ ಎಷ್ಟೋ ಮೌಲ್ಯವುಳ್ಳವರಾಗಿದ್ದೀರಲ್ಲಾ! \v 25 ನಿಮ್ಮಲ್ಲಿ ಯಾರಾದರೂ ಚಿಂತೆ ಮಾಡುವುದರಿಂದ ತಮ್ಮ ಜೀವನಾವಧಿಗೆ ಒಂದು ತಾಸನ್ನು ಕೂಡಿಸಲು ಸಾಧ್ಯವೇ?\f + \fr 12:25 \fr*\ft ಅಥವಾ \ft*\fqa ಒಂದು ಮೊಳ ಹೆಚ್ಚಿಸಲು ಸಾಧ್ಯ\fqa*\f* \v 26 ಅತ್ಯಲ್ಪವಾಗಿರುವುದನ್ನು ನೀವು ಮಾಡಲಾರದವರಾಗಿದ್ದರೆ, ಇತರ ವಿಷಯಗಳಿಗಾಗಿ ನೀವು ಚಿಂತೆ ಮಾಡುವುದೇನು? \p \v 27 “ಅಡವಿಯ ಹೂವುಗಳು ಹೇಗೆ ಬೆಳೆಯುತ್ತವೆಂದು ಯೋಚಿಸಿರಿ. ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಆ ಹೂವುಗಳಲ್ಲಿ ಒಂದರಂತೆಯಾದರೂ ಉಡುಪನ್ನು ಧರಿಸಿರಲಿಲ್ಲ ಎಂದು, ನಾನು ನಿಮಗೆ ಹೇಳುತ್ತೇನೆ. \v 28 ಅಲ್ಪವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ, ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವರಲ್ಲವೇ? \v 29 ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಡಬೇಡಿರಿ; ಚಿಂತೆಯೂ ಮಾಡಬೇಡಿರಿ. \v 30 ದೇವರನ್ನು ಅರಿಯದವರು ಇವೆಲ್ಲವುಗಳಿಗಾಗಿ ಬೆನ್ನಟ್ಟುತ್ತಾರೆ, ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ತಿಳಿದಿದ್ದಾರೆ. \v 31 ಆದರೆ ನೀವು ದೇವರ ರಾಜ್ಯವನ್ನೇ ಹುಡುಕಿರಿ, ಆಗ ಇವೆಲ್ಲವನ್ನು ದೇವರು ನಿಮಗೆ ಕೊಡುವರು. \p \v 32 “ಚಿಕ್ಕ ಹಿಂಡೇ, ಭಯಪಡಬೇಡ, ಏಕೆಂದರೆ ನಿಮ್ಮ ತಂದೆಯು ತಮ್ಮ ರಾಜ್ಯವನ್ನು ನಿಮಗೆ ಕೊಡುವುದಕ್ಕೆ ಮೆಚ್ಚಿದ್ದಾರೆ. \v 33 ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ ಬಡವರಿಗೆ ಕೊಡಿರಿ. ನಿಮಗೋಸ್ಕರ ನಾಶವಾಗದ ಹಣದ ಚೀಲಗಳನ್ನೂ, ಕ್ಷಯವಾಗದ ಸಂಪತ್ತನ್ನೂ ಪರಲೋಕದಲ್ಲಿ ಮಾಡಿಕೊಳ್ಳಿರಿ, ಅಲ್ಲಿ ಕಳ್ಳನು ಸಮೀಪಕ್ಕೆ ಬರುವುದಿಲ್ಲ. ನುಸಿಹಿಡಿದು ಕೆಟ್ಟುಹೋಗುವುದಿಲ್ಲ. \v 34 ನಿಮ್ಮ ಸಂಪತ್ತು ಇರುವಲ್ಲಿಯೇ, ನಿಮ್ಮ ಹೃದಯವು ಸಹ ಇರುವುದು,” ಎಂದು ಹೇಳಿದರು. \s1 ಎಚ್ಚರವಾಗಿರುವುದರ ಕುರಿತು \p \v 35 “ನೀವು ವಸ್ತ್ರ ಧರಿಸಿ ಸೇವೆಗೆ ಸಿದ್ಧರಾಗಿರಿ. ನಿಮ್ಮ ದೀಪಗಳು ಉರಿಯುತ್ತಿರಲಿ, \v 36 ನೀವಂತೂ ಮದುವೆಯ ಔತಣದಿಂದ ಹಿಂದಿರುಗುವ ತಮ್ಮ ಯಜಮಾನನಿಗಾಗಿ ಕಾಯುತ್ತಿದ್ದು, ಅವನು ಬಂದು ಬಾಗಿಲನ್ನು ತಟ್ಟಿದ ತಕ್ಷಣವೇ ಅವನಿಗಾಗಿ ತೆರೆಯುವ ಸೇವಕರಂತೆ ಇರಿ. \v 37 ಯಜಮಾನನು ಬಂದಾಗ ಯಾರು ಎಚ್ಚರವಾಗಿರುವುದನ್ನು ಅವನು ಕಾಣುವನೋ ಆ ಸೇವಕರು ಧನ್ಯರು. ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಅವನು ಬಂದು ನಡುಕಟ್ಟಿ ನಿಂತು ಅವರನ್ನು ಊಟಕ್ಕೆ ಕೂರಿಸಿ, ಅವರಿಗೆ ತಾನೇ ಸೇವೆಮಾಡುವನು. \v 38 ಯಜಮಾನನು ನಡು ರಾತ್ರಿಯಲ್ಲಾಗಲಿ ಮುಂಜಾನೆಯಲ್ಲಾಗಲಿ ಬಂದು, ಸೇವಕರು ಇನ್ನೂ ಎಚ್ಚರದಿಂದಿರುವುದನ್ನು ಕಂಡರೆ ಆ ಸೇವಕರು ಧನ್ಯರು. \v 39 ಆದರೆ, ಕಳ್ಳನು ಯಾವ ಸಮಯದಲ್ಲಿ ಬರುವನೆಂಬುದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ತನ್ನ ಮನೆಯನ್ನು ಪ್ರವೇಶಿಸಲು ಕನ್ನಾಹಾಕಲು ಬಿಡುತ್ತಿರಲಿಲ್ಲ ಎಂಬುದನ್ನು ತಿಳಿದುಕೊಳ್ಳಿರಿ. \v 40 ಆದಕಾರಣ ನೀವು ಸಹ ಸಿದ್ಧವಾಗಿರಿ, ಏಕೆಂದರೆ ನೀವು ನಿರೀಕ್ಷಿಸದ ಸಮಯದಲ್ಲಿ ಮನುಷ್ಯಪುತ್ರನಾದ ನಾನು ಬರುತ್ತೇನೆ,” ಎಂದು ಹೇಳಿದರು. \p \v 41 ಪೇತ್ರನು ಯೇಸುವಿಗೆ, “ಕರ್ತದೇವರೇ, ನೀವು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತೀರೋ ಅಥವಾ ಎಲ್ಲರಿಗೋ?” ಎಂದು ಕೇಳಿದನು. \p \v 42 ಕರ್ತದೇವರು ಹೇಳಿದ್ದೇನೆಂದರೆ, “ತಕ್ಕ ಕಾಲದಲ್ಲಿ ತನ್ನ ಸೇವಕರಿಗೆ ಅವರ ಪಾಲಿನ ಆಹಾರವನ್ನು ಕೊಡುವುದಕ್ಕಾಗಿ, ಅವರ ಯಜಮಾನನು ತನ್ನ ಮನೆಯ ಮೇಲೆ ನೇಮಿಸಿದ ನಂಬಿಗಸ್ತನೂ ಜ್ಞಾನಿಯೂ ಆಗಿರುವ ಆಡಳಿತಗಾರನು ಯಾರು? \v 43 ತನ್ನ ಯಜಮಾನನು ಬಂದಾಗ ಯಾವ ಸೇವಕನು ಸೇವೆ ಮಾಡುವುದನ್ನು ಕಾಣುವನೋ ಆ ಸೇವಕನು ಧನ್ಯನು. \v 44 ಅವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಯ ಮೇಲೆ ಆಡಳಿತಗಾರನಾಗಿ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. \v 45 ಆದರೆ ಆ ಸೇವಕನು, ‘ನನ್ನ ಯಜಮಾನನು ಬರುವುದಕ್ಕೆ ತಡಮಾಡುತ್ತಾನೆ,’ ಎಂದು ತನ್ನ ಹೃದಯದಲ್ಲಿ ಭಾವಿಸಿಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆದು, ತಿಂದು ಕುಡಿದು ಮತ್ತನಾಗುವುದಕ್ಕೆ ಆರಂಭಿಸಿದರೆ, \v 46 ಆ ಸೇವಕನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಸಮಯದಲ್ಲಿಯೂ ಅವನ ಯಜಮಾನನು ಬಂದು, ಅವನನ್ನು ಕಠಿಣವಾಗಿ ಹೊಡಿಸಿ ಅವಿಶ್ವಾಸಿಗಳಿಗೆ ಆಗ ಸಿಕ್ಕುವ ಪಾಲನ್ನು ಅವನಿಗೆ ನೇಮಿಸುವನು. \p \v 47 “ತನ್ನ ಯಜಮಾನನ ಚಿತ್ತವನ್ನು ತಿಳಿದು ತನ್ನನ್ನು ಸಿದ್ಧಮಾಡಿಕೊಳ್ಳದೆ, ಇಲ್ಲವೆ ಅವನ ಚಿತ್ತಕ್ಕೆ ಅನುಸಾರವಾಗಿ ಮಾಡದೆ ಇದ್ದ ಸೇವಕನು ಬಹಳ ಪೆಟ್ಟುಗಳಿಗೆ ಗುರಿಯಾಗುವನು. \v 48 ದಂಡನೆಗೆ ಯೋಗ್ಯವಾದದ್ದನ್ನು ತಿಳಿಯದೆ ಮಾಡಿದವನು ಸ್ವಲ್ಪ ಪೆಟ್ಟುಗಳಿಗೆ ಗುರಿಯಾಗುವನು. ಯಾವನಿಗೆ ಹೆಚ್ಚು ಕೊಡಲಾಗಿದೆಯೋ, ಅವನಿಂದ ಹೆಚ್ಚು ಕೇಳಲಾಗುವುದು; ಯಾವನಿಗೆ ಹೆಚ್ಚಾಗಿ ಒಪ್ಪಿಸಿರುವುದೋ, ಅವನಿಂದ ಹೆಚ್ಚಾಗಿಯೇ ಕೇಳಲಾಗುವುದು.” \s1 ಸಮಾಧಾನವನ್ನಲ್ಲ ಆದರೆ ಭೇದ \p \v 49 “ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕುವುದಕ್ಕಾಗಿ ಬಂದೆನು, ಅದು ಈಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ! \v 50 ಆದರೆ ನಾನು ಪಡೆಯಲಿರುವ ಒಂದು ದೀಕ್ಷಾಸ್ನಾನ ಉಂಟು, ಅದು ನೆರವೇರುವ ತನಕ ನಾನು ಎಷ್ಟೋ ಇಕ್ಕಟ್ಟಿನಲ್ಲಿದ್ದೇನೆ! \v 51 ನಾನು ಭೂಮಿಯ ಮೇಲೆ ಸಮಾಧಾನವನ್ನು ತರುವುದಕ್ಕಾಗಿ ಬಂದಿದ್ದೇನೆಂದು ನೀವು ಭಾವಿಸುತ್ತೀರೋ? ಇಲ್ಲ, ಭಿನ್ನಭೇದಗಳನ್ನು ಉಂಟುಮಾಡುವುದಕ್ಕೆ ಬಂದಿದ್ದೇನೆಂದು, ನಿಮಗೆ ಹೇಳುತ್ತೇನೆ. \v 52 ಹೇಗೆಂದರೆ ಇಂದಿನಿಂದ ಒಂದೇ ಮನೆಯಲ್ಲಿರುವ ಐದು ಮಂದಿಯಲ್ಲಿ ಇಬ್ಬರಿಗೆ ವಿರೋಧವಾಗಿ ಮೂವರೂ ಮೂವರಿಗೆ ವಿರೋಧವಾಗಿ ಇಬ್ಬರೂ ವಿಭಾಗವಾಗುವರು. \v 53 ತಂದೆಗೆ ವಿರೋಧವಾಗಿ ಮಗನು, ಮಗನಿಗೆ ವಿರೋಧವಾಗಿ ತಂದೆಯು, ತಾಯಿಗೆ ವಿರೋಧವಾಗಿ ಮಗಳು, ಮಗಳಿಗೆ ವಿರೋಧವಾಗಿ ತಾಯಿಯು, ಅತ್ತೆಗೆ ವಿರೋಧವಾಗಿ ಸೊಸೆಯು, ಸೊಸೆಗೆ ವಿರೋಧವಾಗಿ ಅತ್ತೆಯು ವಿಭಾಗವಾಗುವರು.” \s1 ಕಾಲಗಳ ವಿವರಣೆ \p \v 54 ಯೇಸು ಜನಸಮೂಹಕ್ಕೆ ಹೇಳಿದ್ದೇನೆಂದರೆ: “ನೀವು ಪಶ್ಚಿಮದ ಕಡೆಯಿಂದ ಏಳುವ ಮೋಡವನ್ನು ನೋಡಿ, ‘ಮಳೆ ಬರುತ್ತದೆ ಎನ್ನುತ್ತೀರಿ,’ ಹಾಗೆಯೇ ಆಗುವುದು. \v 55 ದಕ್ಷಿಣ ದಿಕ್ಕಿನ ಗಾಳಿ ಬೀಸುವುದನ್ನು ನೀವು ನೋಡಿ, ‘ಸೆಕೆಯಾಗುತ್ತದೆ,’ ಎನ್ನುತ್ತೀರಿ, ಅದು ಹಾಗೆ ಆಗುತ್ತದೆ. \v 56 ಕಪಟಿಗಳೇ! ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಗ್ರಹಿಸಬಲ್ಲಿರಿ, ಆದರೆ ಈ ಕಾಲವನ್ನು ನೀವು ವಿವೇಚಿಸದಿರುವುದು ಹೇಗೆ? \p \v 57 “ಹೌದು, ನಿಮ್ಮಷ್ಟಕ್ಕೆ ನೀವು ಸರಿಯಾದದ್ದನ್ನು ಏಕೆ ನಿರ್ಣಯಿಸಿಕೊಳ್ಳುವುದಿಲ್ಲ? \v 58 ನೀನು ನಿನ್ನ ವಿರೋಧಿಯ ಸಂಗಡ ನ್ಯಾಯಾಧಿಪತಿಯ ಎದುರಿಗೆ ಹೋಗುವಾಗ, ಮಾರ್ಗದಲ್ಲಿಯೇ ಅವನಿಂದ ವ್ಯಾಜ್ಯ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡು, ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಬಲವಂತವಾಗಿ ಎಳೆಯಬಹುದು, ಆಗ ನ್ಯಾಯಾಧಿಪತಿಯು ನಿನ್ನನ್ನು ಸೆರೆಮನೆಯ ಅಧಿಕಾರಿಗೆ ಒಪ್ಪಿಸಬಹುದು ಮತ್ತು ಅಧಿಕಾರಿಯು ನಿನ್ನನ್ನು ಸೆರೆಯಲ್ಲಿ ಹಾಕಬಹುದು. \v 59 ನೀನು ಕೊನೆಯ ರೂಪಾಯಿಯನ್ನು ಸಲ್ಲಿಸುವವರೆಗೂ ಅಲ್ಲಿಂದ ಹೊರಗೆ ಬರುವುದೇ ಇಲ್ಲವೆಂದು, ನಾನು ನಿನಗೆ ಹೇಳುತ್ತೇನೆ,” ಎಂದರು. \c 13 \s1 ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನಾಶ \p \v 1 ಪಿಲಾತನು, ಬಲಿ ಅರ್ಪಿಸುತ್ತಿದ್ದ ಗಲಿಲಾಯದವರ ರಕ್ತವನ್ನೇ ಅವರ ಬಲಿಗಳೊಂದಿಗೆ ಬೆರೆಸಿದ ವಿಷಯವನ್ನು ಯೇಸುವಿಗೆ ತಿಳಿಸಿದ ಕೆಲವರು ಆ ಸಮಯದಲ್ಲಿ ಅಲ್ಲಿದ್ದರು. \v 2 ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಗೆ ಈಡಾದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ದೋಷಿಗಳೆಂದು ನೀವು ಭಾವಿಸುತ್ತೀರೋ? \v 3 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ, ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ. \v 4 ಇಲ್ಲವೆ ಸಿಲೋವ ಎಂಬಲ್ಲಿ ಗೋಪುರವು ಬಿದ್ದು ಸತ್ತು ಹೋದ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ದೋಷಿಗಳೆಂದು ಭಾವಿಸುತ್ತೀರೋ? \v 5 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ,” ಎಂದರು. \p \v 6 ಅನಂತರ ಯೇಸು ಈ ಸಾಮ್ಯವನ್ನು ಹೇಳಿದರು: “ಒಬ್ಬ ಮನುಷ್ಯನಿಗೆ ತನ್ನ ದ್ರಾಕ್ಷಿಯ ತೋಟದಲ್ಲಿ ನೆಡಲಾಗಿದ್ದ, ಒಂದು ಅಂಜೂರದ ಮರವಿತ್ತು. ಅವನು ಬಂದು ಅದರಲ್ಲಿ ಫಲವನ್ನು ಹುಡುಕಲು ಒಂದೂ ಸಿಕ್ಕಲಿಲ್ಲ. \v 7 ಆಗ ಅವನು ತನ್ನ ದ್ರಾಕ್ಷಿಯ ತೋಟ ಮಾಡುವವನಿಗೆ, ‘ನೋಡು, ಮೂರು ವರ್ಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕುತ್ತಾ ಬಂದಿದ್ದೇನೆ, ಆದರೆ ಏನೂ ಸಿಕ್ಕಲಿಲ್ಲ. ಇದನ್ನು ಕಡಿದುಹಾಕು! ಇದು ಏಕೆ ನೆಲವನ್ನು ಕೆಡಿಸಬೇಕು?’ ಎಂದು ಹೇಳಿದನು. \p \v 8 “ಆದರೆ ಅವನು ಉತ್ತರವಾಗಿ ಅವನಿಗೆ, ‘ಒಡೆಯನೇ, ಇನ್ನೊಂದು ವರ್ಷವೂ ಇದನ್ನು ಬಿಡು, ನಾನು ಅದರ ಸುತ್ತಲೂ ಅಗಿದು ಗೊಬ್ಬರ ಹಾಕುವೆನು. \v 9 ಮುಂದಿನ ವರ್ಷ ಇದು ಫಲ ಫಲಿಸಿದರೆ, ಸರಿ! ಇಲ್ಲವಾದರೆ, ನೀನು ಇದನ್ನು ಕಡಿದುಹಾಕು, ಎಂದನು.’ ” \s1 ಸಬ್ಬತ್ ದಿನದಲ್ಲಿ ಒಬ್ಬ ಸ್ತ್ರೀ ಗುಣವಾದದ್ದು \p \v 10 ಯೇಸು ಸಬ್ಬತ್ ದಿನದಲ್ಲಿ ಒಂದು ಸಭಾಮಂದಿರದೊಳಗೆ ಬೋಧಿಸುತ್ತಾ ಇದ್ದರು, \v 11 ಆಗ, ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು. ಆಕೆ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು. \v 12 ಯೇಸು ಆಕೆಯನ್ನು ಕಂಡು, ಹತ್ತಿರಕ್ಕೆ ಕರೆದು ಆಕೆಗೆ, “ಅಮ್ಮಾ, ನೀನು ಈ ನಿನ್ನ ಬಲಹೀನತೆಯಿಂದ ಬಿಡುಗಡೆಯಾಗಿದ್ದಿ,” ಎಂದು ಹೇಳಿ, \v 13 ಯೇಸು ಆಕೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು, ಕೂಡಲೇ ಆಕೆಯು ನೆಟ್ಟಗಾದಳು ಮತ್ತು ದೇವರನ್ನು ಸ್ತುತಿಸಿದಳು. \p \v 14 ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, “ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ,” ಎಂದನು. \p \v 15 ಅದಕ್ಕೆ ಕರ್ತದೇವರು ಅವನಿಗೆ, “ಕಪಟಿಗಳೇ! ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ, ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವುದಕ್ಕಾಗಿ ಹೋಗುವುದಿಲ್ಲವೇ? \v 16 ಅಬ್ರಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರ್ಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೇ?” ಎಂದರು. \p \v 17 ಯೇಸು ಇದನ್ನು ಹೇಳುತ್ತಿರುವಾಗ, ಅವರ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು, ಆದರೆ ಇತರರು, ಅವರಿಂದ ನಡೆದ ಎಲ್ಲಾ ಮಹಿಮೆಯುಳ್ಳ ಕಾರ್ಯಗಳಿಗಾಗಿ ಸಂತೋಷಪಟ್ಟರು. \s1 ಸಾಸಿವೆಕಾಳಿನ ಸಾಮ್ಯ ಹಾಗೂ ಹುಳಿಹಿಟ್ಟಿನ ಸಾಮ್ಯ \p \v 18 ಅನಂತರ ಯೇಸು, “ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ? ನಾನು ಯಾವುದಕ್ಕೆ ಅದನ್ನು ಹೋಲಿಸಲಿ? \v 19 ಅದು ಸಾಸಿವೆಕಾಳಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ತೆಗೆದುಕೊಂಡುಹೋಗಿ ತನ್ನ ತೋಟದಲ್ಲಿ ಬಿತ್ತಲು, ಅದು ಬೆಳೆದು ಒಂದು ದೊಡ್ಡ ಮರವಾಯಿತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡಿದವು,” ಎಂದರು. \p \v 20 ಪುನಃ ಯೇಸು, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ? \v 21 ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ\f + \fr 13:21 \fr*\ft ಸುಮಾರು ಮೂವತ್ತು ಸೇರು\ft*\f* ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು. \s1 ಇಕ್ಕಟ್ಟಾದ ಬಾಗಿಲು \p \v 22 ಯೇಸು ಪಟ್ಟಣಗಳನ್ನೂ ಹಳ್ಳಿಗಳನ್ನೂ ಸಂಚರಿಸಿ, ಅಲ್ಲೆಲ್ಲಾ ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣಮಾಡಿದರು. \v 23 ಒಬ್ಬನು ಯೇಸುವಿಗೆ, “ಸ್ವಾಮಿ, ರಕ್ಷಣೆ ಹೊಂದುವವರು ಕೆಲವರೋ?” ಎಂದು ಕೇಳಲು, \p ಯೇಸು ಅವರಿಗೆ, \v 24 “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಪ್ರವೇಶಿಸುವುದಕ್ಕೆ ಪ್ರಯಾಸಪಡಿರಿ, ಅನೇಕರು ಒಳಗೆ ಪ್ರವೇಶಿಸುವುದಕ್ಕೆ ಪ್ರಯತ್ನಿಸಿದರೂ ಆಗುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. \v 25 ಮನೆಯಜಮಾನರು ಒಂದು ಸಾರಿ ಎದ್ದು ಬಾಗಿಲನ್ನು ಮುಚ್ಚಿಕೊಂಡರೆ, ನೀವು ಹೊರಗೆ ನಿಂತುಕೊಂಡು ಬಾಗಿಲನ್ನು ತಟ್ಟುತ್ತಾ, ‘ಸ್ವಾಮಿ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದು ಹೇಳುವುದಕ್ಕೆ ಆರಂಭಿಸಿದಾಗ, \p “ಆತನು ನಿಮಗೆ ಉತ್ತರವಾಗಿ, ‘ನೀವು ಯಾರು? ಎಲ್ಲಿಯವರೋ ನಾನು ನಿಮ್ಮನ್ನು ಅರಿಯೆನು,’ ಎಂದು ಹೇಳುವನು. \p \v 26 “ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದೆವು, ಪಾನಮಾಡಿದೆವು, ನೀವು ನಮ್ಮ ಬೀದಿಗಳಲ್ಲಿ ಬೋಧಿಸಿದಿರಿ,’ ಎಂದು ಹೇಳಲಾರಂಭಿಸುವಿರಿ. \p \v 27 “ಅದಕ್ಕೆ ಆತನು, ‘ನೀವು ಎಲ್ಲಿಯವರೋ ನಾನರಿಯೆ, ಅನೀತಿಯನ್ನು ಮಾಡುವವರಾದ ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳುವರು. \p \v 28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ಕಾಣುವಾಗ, ಅಲ್ಲಿ ನಿಮಗೆ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು. \v 29 ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಜನರು ಬಂದು, ದೇವರ ರಾಜ್ಯದಲ್ಲಿ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು. \v 30 ಆಗ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು. \s1 ಯೆರೂಸಲೇಮಿಗಾಗಿ ಯೇಸುವಿನ ಶೋಕ \p \v 31 ಅದೇ ಸಮಯದಲ್ಲಿ ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು, “ನೀವು ಇಲ್ಲಿಂದ ಹೊರಟು ಹೋಗಿರಿ. ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿರುವನು,” ಎಂದು ಅವರಿಗೆ ಹೇಳಿದರು. \p \v 32 ಅದಕ್ಕೆ ಯೇಸು ಅವರಿಗೆ, “ಇಗೋ, ‘ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಓಡಿಸುತ್ತೇನೆ ಸ್ವಸ್ಥಮಾಡುತ್ತೇನೆ, ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ,’ ಎಂದು ನೀವು ಹೋಗಿ ಆ ನರಿಗೆ ಹೇಳಿರಿ. \v 33 ಆದರೂ ಈ ದಿವಸ ಮತ್ತು ನಾಳೆ ಮತ್ತು ನಾಡಿದ್ದು ನಾನು ಪ್ರಯಾಣ ಮಾಡಲೇಬೇಕು. ಏಕೆಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲೆಗೀಡಾಗಬಾರದು! \p \v 34 “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು. \v 35 ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು. ಏಕೆಂದರೆ, ‘ಕರ್ತದೇವರ ಹೆಸರಿನಲ್ಲಿ ಬರುವವರು ಧನ್ಯರು,’\f + \fr 13:35 \fr*\ft \+xt ಕೀರ್ತನೆ 118:26\+xt*\ft*\f* ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು. \c 14 \s1 ಫರಿಸಾಯನ ಮನೆಯಲ್ಲಿ ಯೇಸು \p \v 1 ಯೇಸು ಒಂದು ಸಬ್ಬತ್ ದಿನದಲ್ಲಿ, ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ, ಎಲ್ಲರು ಅವರನ್ನು ಗಮನಿಸುತ್ತಿದ್ದರು. \v 2 ಅಲ್ಲಿ ದೇಹದಲ್ಲಿ ಅಸಾಧಾರಣವಾಗಿ ನೀರು ತುಂಬಿದ್ದ\f + \fr 14:2 \fr*\ft ಅಥವಾ \ft*\fqa ಜಲೋದರವುಳ್ಳ\fqa*\f* ರೋಗಿಯೊಬ್ಬನು ಯೇಸುವಿನ ಮುಂದೆ ಇದ್ದನು. \v 3 ಆಗ ಯೇಸು ನಿಯಮ ಪಂಡಿತರಿಗೂ ಫರಿಸಾಯರಿಗೂ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಮೋಶೆಯ ನಿಯಮದ ಪ್ರಕಾರವೋ?” ಎಂದು ಕೇಳಿದರು. \v 4 ಆದರೆ ಅವರು ಮೌನವಾಗಿಯೇ ಇದ್ದರು. ಆಗ ಯೇಸು, ಆ ರೋಗಿಯನ್ನು ಸ್ವಸ್ಥಮಾಡಿ ಕಳುಹಿಸಿಬಿಟ್ಟರು. \p \v 5 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬರ ಮಗುವಾಗಲಿ, ಎತ್ತಾಗಲಿ\f + \fr 14:5 \fr*\ft ಕೆಲವು ಹಸ್ತಪ್ರತಿಗಳಲ್ಲಿ \ft*\fqa ಕತ್ತೆಯಾಗಲಿ ಎಂದಿದೆ\fqa*\f* ಒಂದು ಬಾವಿಯಲ್ಲಿ ಬಿದ್ದರೆ, ಅದನ್ನು ತಕ್ಷಣವೇ ಸಬ್ಬತ್ ದಿನದಲ್ಲಿ ಮೇಲಕ್ಕೆ ಎಳೆಯುವುದಿಲ್ಲವೇ?” ಎಂದು ಕೇಳಿದರು. \v 6 ಅದಕ್ಕೆ ಅವರು ಉತ್ತರ ಕೊಡಲಾರದೆ ಇದ್ದರು. \p \v 7 ಊಟಕ್ಕೆ ಆಹ್ವಾನಿತರು ತಮಗಾಗಿ ಮುಖ್ಯ ಸ್ಥಳಗಳನ್ನು ಹೇಗೆ ಆರಿಸಿಕೊಂಡರೆಂದು ಯೇಸು ಗುರುತಿಸಿ, ಅವರಿಗೆ ಒಂದು ಸಾಮ್ಯವನ್ನು ಹೇಳಿದರು: \v 8 “ಯಾರಾದರೂ ನಿನ್ನನ್ನು ಮದುವೆಯ ಊಟಕ್ಕೆ ಕರೆದರೆ ಮೊದಲನೆಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಏಕೆಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಆಹ್ವಾನಿಸಿರಬಹುದು. \v 9 ಆಗ, ನಿನ್ನನ್ನು ಮತ್ತು ಅವನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಈ ಮನುಷ್ಯನಿಗೆ ಸ್ಥಳಕೊಡು,’ ಎಂದು ಹೇಳುವಾಗ ನೀನು ನಾಚಿಕೆಯಿಂದ ಕಡೇ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುವುದು. \v 10 ಆದರೆ ನಿನ್ನನ್ನು ಆಹ್ವಾನಿಸಿದಾಗ, ಹೋಗಿ ಕಡೇ ಸ್ಥಳದಲ್ಲಿ ಕುಳಿತುಕೋ, ಆಗ ನಿನ್ನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಸ್ನೇಹಿತನೇ, ಉತ್ತಮ ಸ್ಥಳಕ್ಕೆ ಬಾ,’ ಎಂದು ಹೇಳುವಾಗ ನಿನ್ನ ಜೊತೆಯಲ್ಲಿ ಊಟಕ್ಕೆ ಕುಳಿತವರೆಲ್ಲರ ಮುಂದೆ ನಿನಗೆ ಗೌರವವಿರುವುದು. \v 11 ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು. \p \v 12 ಯೇಸು ತಮ್ಮನ್ನು ಆಹ್ವಾನಿಸಿದವನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಇಲ್ಲವೆ ರಾತ್ರಿಯ ಊಟಕ್ಕೆ ಸಿದ್ಧಪಡಿಸಿದಾಗ, ನಿನ್ನ ಸ್ನೇಹಿತರನ್ನಾಗಲಿ ನಿನ್ನ ಸಹೋದರ ಸಹೋದರಿಯನ್ನಾಗಲಿ, ನಿನ್ನ ಬಂಧುಗಳನ್ನಾಗಲಿ, ಇಲ್ಲವೆ ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ, ಏಕೆಂದರೆ ಅವರೂ ಪ್ರತಿಯಾಗಿ ನಿನ್ನನ್ನೂ ಆಹ್ವಾನಿಸಬಹುದು ಮತ್ತು ನಿನಗೆ ಪ್ರತ್ಯುಪಕಾರವಾದೀತು. \v 13 ಆದರೆ ನೀನು ಔತಣಮಾಡಿಸಿದಾಗ, ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಹ್ವಾನಿಸು. \v 14 ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವುದಕ್ಕೆ ಆಗದಿರುವುದರಿಂದ, ನೀನು ಧನ್ಯನಾಗುವೆ. ಏಕೆಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವುದು.” \s1 ಮಹಾ ಔತಣದ ಸಾಮ್ಯ \p \v 15 ಯೇಸುವಿನ ಸಂಗಡ ಔತಣಕ್ಕೆ ಕುಳಿತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಅವರಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು,” ಎಂದು ಹೇಳಿದನು. \p \v 16 ಯೇಸು ಅವನಿಗೆ ಹೀಗೆ ಹೇಳಿದರು: “ಒಬ್ಬ ಮನುಷ್ಯನು ಒಂದು ದೊಡ್ಡ ಔತಣ ಮಾಡಿಸಿ ಅನೇಕರನ್ನು ಆಹ್ವಾನಿಸಿದನು. \v 17 ಊಟಕ್ಕೆ ಸಮಯವಾದಾಗ ಆಹ್ವಾನಿತರಿಗೆ ಅವನು, ‘ಎಲ್ಲವೂ ಸಿದ್ಧವಾಗಿದೆ ಬನ್ನಿರಿ,’ ಎಂದು ಹೇಳಲು ತನ್ನ ಸೇವಕನನ್ನು ಕಳುಹಿಸಿದನು. \p \v 18 “ಆದರೆ ಅವರೆಲ್ಲರೂ ಒಂದೇ ರೀತಿಯಾಗಿ ನೆಪ ಹೇಳಲಾರಂಭಿಸಿದರು. ಮೊದಲನೆಯವನು, ‘ನಾನು ಒಂದು ಹೊಲ ಕೊಂಡುಕೊಂಡಿದ್ದೇನೆ, ನಾನು ಅದನ್ನು ನೋಡಬೇಕಾಗಿದೆ, ದಯವಿಟ್ಟು ಕ್ಷಮಿಸಬೇಕು,’ ಎಂದು ಹೇಳಿದನು. \p \v 19 “ಇನ್ನೊಬ್ಬನು, ‘ನಾನು ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಬೇಕು,’ ಎಂದನು. \p \v 20 “ಮತ್ತೊಬ್ಬನು, ‘ನಾನು ಮದುವೆ ಮಾಡಿಕೊಂಡಿದ್ದೇನೆ, ಆದ್ದರಿಂದ ಬರಲಾರೆ,’ ಎಂದನು. \p \v 21 “ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಲು, ಆ ಮನೆಯಜಮಾನನು ಕೋಪಗೊಂಡು ತನ್ನ ಸೇವಕನಿಗೆ, ‘ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ, ಬಡವರನ್ನೂ ಊನವಾದವರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿ ಕರೆದುಕೊಂಡು ಬಾ,’ ಎಂದನು. \p \v 22 “ಆ ಸೇವಕನು, ‘ಸ್ವಾಮಿ, ನೀನು ಅಪ್ಪಣೆ ಕೊಟ್ಟಂತೆ ಮಾಡಿದ್ದಾಯಿತು, ಆದರೂ ಸ್ಥಳವಿದೆ,’ ಎಂದನು. \p \v 23 “ಆಗ ಯಜಮಾನನು ಸೇವಕನಿಗೆ, ‘ನೀನು ಬೀದಿಗಳಿಗೂ ಓಣಿಗಳಿಗೂ ಹೊರಟುಹೋಗಿ ನನ್ನ ಮನೆ ತುಂಬುವಂತೆ, ಇಲ್ಲಿ ಬರುವುದಕ್ಕೆ ಕಂಡವರನ್ನು ಬಲವಂತಮಾಡು. \v 24 ಆದರೆ, ಮೊದಲು ಆಹ್ವಾನಿತರಲ್ಲಿ ಒಬ್ಬನಾದರೂ ನನ್ನ ಔತಣವನ್ನು ರುಚಿ ನೋಡಬಾರದು ಎಂದು ನಾನು ನಿನಗೆ ಹೇಳುತ್ತೇನೆ.’ ” \s1 ಶಿಷ್ಯತ್ವದ ಬೆಲೆ \p \v 25 ದೊಡ್ಡ ಜನಸಮೂಹವು ಯೇಸುವಿನ ಸಂಗಡ ಹೋಗುತ್ತಿರಲು, ಯೇಸು ತಿರುಗಿಕೊಂಡು ಅವರನ್ನು ನೋಡಿ ಹೇಳಿದ್ದೇನೆಂದರೆ: \v 26 “ಯಾರಾದರೂ ನನ್ನ ಬಳಿಗೆ ಬಂದು ತಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳು, ಸಹೋದರರು, ಸಹೋದರಿಯರು ಹಾಗೂ ತಮ್ಮ ಸ್ವಂತ ಪ್ರಾಣವನ್ನು ಸಹ ದ್ವೇಷಿಸದಿದ್ದರೆ ಅವರು ನನ್ನ ಶಿಷ್ಯರಾಗಲಾರರು. \v 27 ಯಾರಾದರೂ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸದವರು ನನ್ನ ಶಿಷ್ಯರಾಗಲಾರರು. \p \v 28 “ನಿಮ್ಮಲ್ಲಿ ಒಬ್ಬರು ಗೋಪುರವನ್ನು ಕಟ್ಟಲು ಇಚ್ಛಿಸಿದರೆ. ನೀವು ಮೊದಲು ಕುಳಿತು ಅದನ್ನು ಪೂರೈಸುವುದಕ್ಕೆ ಬೇಕಾದ ಖರ್ಚು ಇದೆಯೋ ಎಂದು ಲೆಕ್ಕ ಮಾಡುವುದಿಲ್ಲವೋ? \v 29-30 ಒಂದು ವೇಳೆ ಹಾಗೆ ಲೆಕ್ಕಮಾಡದೆ ನೀವು ಅದಕ್ಕೆ ಅಸ್ತಿವಾರ ಹಾಕಿದ ಮೇಲೆ, ಅದನ್ನು ಪೂರೈಸದಿದ್ದರೆ, ನಿಮ್ಮನ್ನು ನೋಡುವವರೆಲ್ಲರೂ, ‘ಈ ವ್ಯಕ್ತಿ ಕಟ್ಟಲಾರಂಭಿಸಿದ, ಮುಗಿಸಲು ಇವನಿಗೆ ಆಗಲಿಲ್ಲ,’ ಎಂದು ಹೇಳಿ ಹಾಸ್ಯಮಾಡುವರು. \p \v 31 “ಅಥವಾ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋಗುವಾಗ, ಮೊದಲು ಕುಳಿತು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ ಸೈನ್ಯದೊಂದಿಗೆ ಬರುವ ಆ ಅರಸನನ್ನು ತನ್ನ ಹತ್ತು ಸಾವಿರ ಸೈನ್ಯದೊಂದಿಗೆ ಎದುರಿಸುವುದಕ್ಕೆ ಸಮರ್ಥವೋ ಎಂದು ಆಲೋಚನೆ ಮಾಡುವುದಿಲ್ಲವೇ? \v 32 ಸಾಮರ್ಥ್ಯ ಇಲ್ಲದಿದ್ದರೆ, ಇನ್ನೂ ದೂರದಲ್ಲಿರುವಾಗಲೇ ಪ್ರತಿನಿಧಿಗಳನ್ನು ಕಳುಹಿಸಿ ಸಮಾಧಾನವನ್ನು ಕೋರುವನಲ್ಲವೇ? \v 33 ಆದ್ದರಿಂದ ನಿಮ್ಮಲ್ಲಿ ಯಾರಾದರೂ ತಮಗಿರುವುದನ್ನೆಲ್ಲಾ ಬಿಟ್ಟುಬಿಡದಿದ್ದರೆ, ಅವರು ನನ್ನ ಶಿಷ್ಯರಾಗಲಾರರು. \p \v 34 “ಉಪ್ಪು ಒಳ್ಳೆಯದು, ಆದರೆ ಉಪ್ಪೇ ಸಪ್ಪಗಾದರೆ, ಅದಕ್ಕೆ ಇನ್ನಾವುದರಿಂದ ರುಚಿ ಬಂದೀತು? \v 35 ಅದು ಭೂಮಿಗಾದರೂ ಗೊಬ್ಬರಕ್ಕಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. \p “ಕೇಳುವುದಕ್ಕೆ ಕಿವಿಯುಳ್ಳವರು, ಕೇಳಲಿ.” \c 15 \s1 ಕಳೆದುಹೋದ ಕುರಿಯ ಸಾಮ್ಯ \p \v 1 ಅನೇಕ ಸುಂಕದವರೂ ಪಾಪಿಗಳೆನ್ನಿಸಿಕೊಂಡವರೂ ಯೇಸುವಿನ ಉಪದೇಶವನ್ನು ಕೇಳಲು ಅವರ ಸಮೀಪಕ್ಕೆ ಬಂದರು. \v 2 ಫರಿಸಾಯರು ಮತ್ತು ನಿಯಮ ಬೋಧಕರು, “ಈತನು ಪಾಪಿಗಳನ್ನು ಸ್ವೀಕರಿಸಿ ಅವರೊಂದಿಗೆ ಊಟಮಾಡುತ್ತಾನೆ,” ಎಂದು ಗೊಣಗುಟ್ಟಿದರು. \p \v 3 ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದರು: \v 4 “ನಿಮ್ಮಲ್ಲಿ ಯಾವ ಮನುಷ್ಯನು ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದನ್ನು ಕಳೆದುಕೊಂಡರೆ, ಅವನು ತೊಂಬತ್ತೊಂಬತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲಿ ಬಿಟ್ಟು ಕಳೆದುಹೋದ ಆ ಒಂದು ಕುರಿ ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದಿರುವನೇ? \v 5 ಅದು ಸಿಕ್ಕಿದ ಮೇಲೆ ಸಂತೋಷಪಡುತ್ತಾ ಅದನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು, \v 6 ಅವನು ಮನೆಗೆ ಬಂದು, ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು ಅವರಿಗೆ, ‘ನನ್ನ ಸಂಗಡ ಸಂತೋಷಪಡಿರಿ; ಕಳೆದುಹೋದ ಕುರಿ ನನಗೆ ಸಿಕ್ಕಿತು ಎನ್ನುವನು.’ \v 7 ಅದರಂತೆಯೇ, ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಲು ಅವಶ್ಯವಿಲ್ಲದ ತೊಂಬತ್ತೊಂಬತ್ತು ನೀತಿವಂತರಿಗಿಂತ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಬಹಳ ಸಂತೋಷ ಉಂಟಾಗುವುದು ಎಂದು ನಾನು ನಿಮಗೆ ಹೇಳುತ್ತೇನೆ. \s1 ಕಳೆದುಹೋದ ನಾಣ್ಯ \p \v 8 “ಒಬ್ಬ ಸ್ತ್ರೀಯು ತನ್ನ ಬಳಿ ಹತ್ತು ಬೆಳ್ಳಿಯ ನಾಣ್ಯವಿರಲಾಗಿ,\f + \fr 15:8 \fr*\ft ಒಂದು \ft*\fqa ದ್ರಹ್ಮ ನಾಣ್ಯದ \fqa*\ft ಮೌಲ್ಯವು, ಒಂದು ದಿನದ ಕೂಲಿ\ft*\f* ಒಂದು ನಾಣ್ಯವನ್ನು ಕಳೆದುಕೊಂಡರೆ, ಅವಳು ದೀಪಹಚ್ಚಿ ಮನೆಯನ್ನು ಗುಡಿಸಿ, ಅದು ಸಿಕ್ಕುವವರೆಗೆ ಜಾಗ್ರತೆಯಿಂದ ಹುಡುಕುವುದಿಲ್ಲವೇ? \v 9 ಅವಳು ಅದನ್ನು ಕಂಡುಕೊಂಡ ಮೇಲೆ, ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ಅವರಿಗೆ, ‘ಕಳೆದುಹೋದ ನಾಣ್ಯವು ಸಿಕ್ಕಿತು; ನನ್ನ ಸಂಗಡ ಸಂತೋಷಪಡಿರಿ,’ ಎನ್ನುವಳು. \v 10 ಅದೇ ಪ್ರಕಾರ, ಪಶ್ಚಾತ್ತಾಪಪಟ್ಟು ದೇವರ ಕಡೆ ತಿರುಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವುದು, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು. \s1 ತಪ್ಪಿಹೋದ ಮಗನು \p \v 11 ಇನ್ನೂ ಯೇಸು ಹೇಳಿದ್ದು: “ಒಬ್ಬ ಮನುಷ್ಯನಿಗೆ ಇಬ್ಬರು ಪುತ್ರರಿದ್ದರು. \v 12 ಅವರಲ್ಲಿ ಕಿರಿಯವನು ತನ್ನ ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು,’ ಎಂದನು. ಆಗ ತಂದೆ ತನ್ನ ಆಸ್ತಿಯನ್ನು ಅವರಿಬ್ಬರಿಗೂ ಪಾಲು ಮಾಡಿಕೊಟ್ಟನು. \p \v 13 “ಕೆಲವೇ ದಿನಗಳಲ್ಲಿ, ಕಿರಿಯ ಮಗನು ಎಲ್ಲವನ್ನೂ ಕೂಡಿಸಿಕೊಂಡು, ದೂರದೇಶಕ್ಕೆ ಪ್ರಯಾಣಮಾಡಿ, ಅಲ್ಲಿ ದುಂದು ವೆಚ್ಚದ ಜೀವನ ಮಾಡಿ ತನ್ನ ಆಸ್ತಿಯನ್ನು ಹಾಳು ಮಾಡಿಕೊಂಡನು. \v 14 ಅವನು ಎಲ್ಲವನ್ನೂ ಹಾಳುಮಾಡಿದ ಮೇಲೆ, ಆ ದೇಶದಾದ್ಯಂತ ಘೋರವಾದ ಕ್ಷಾಮವು ಬಂದು, ಕೊರತೆಪಡಲಾರಂಭಿಸಿದನು. \v 15 ಆಗ ಅವನು ಹೋಗಿ ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿಕೊಂಡನು, ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. \v 16 ಅವನು ಹಂದಿಗಳು ತಿನ್ನುತ್ತಿದ್ದ ಸಿಪ್ಪೆಗಳಿಂದಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕೆ ಆಶೆಪಟ್ಟನು, ಆದರೆ ಅದನ್ನು ಸಹ ಅವನಿಗೆ ಯಾರೂ ಕೊಡಲಿಲ್ಲ. \p \v 17 “ಆಗ ಅವನಿಗೆ ಬುದ್ಧಿ ಬಂದು, ‘ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿಯೂ ಉಳಿಯುವಷ್ಟು ಆಹಾರವಿದೆಯಲ್ಲಾ, ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಿದ್ದೇನೆ! \v 18 ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ, ಆತನಿಗೆ: ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿಮಗೆ ವಿರೋಧವಾಗಿಯೂ ನಾನು ಪಾಪಮಾಡಿದ್ದೇನೆ. \v 19 ಇನ್ನೆಂದಿಗೂ ನಾನು ನಿಮ್ಮ ಮಗನೆಂದು ಕರೆಸಿಕೊಳ್ಳುವುದಕ್ಕೆ ಯೋಗ್ಯನಲ್ಲ; ನನ್ನನ್ನು ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎನ್ನುವೆನು,’ ಎಂದುಕೊಂಡು, \v 20 ಎದ್ದು ತನ್ನ ತಂದೆಯ ಬಳಿಗೆ ಹೋದನು. \p “ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ, ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು, ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು. \p \v 21 “ಆದರೂ ಮಗನು ತಂದೆಗೆ, ‘ಅಪ್ಪಾ, ನಾನು ಪರಲೋಕಕ್ಕೆ ವಿರೋಧವಾಗಿಯೂ ನಿಮ್ಮ ಮುಂದೆಯೂ ಪಾಪಮಾಡಿದ್ದೇನೆ. ಇನ್ನೆಂದಿಗೂ ನಾನು ನಿಮ್ಮ ಮಗನೆಂದು ಕರೆಯಿಸಿಕೊಳ್ಳಲು ಯೋಗ್ಯನಲ್ಲ,’ ಎಂದನು. \p \v 22 “ಆದರೆ ತಂದೆಯು ತನ್ನ ಸೇವಕರಿಗೆ, ‘ಶ್ರೇಷ್ಠವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಇವನ ಬೆರಳಿಗೆ ಉಂಗುರವನ್ನು ತೊಡಿಸಿರಿ, ಪಾದಗಳಿಗೆ ಪಾದರಕ್ಷೆಗಳನ್ನೂ ಮೆಟ್ಟಿಸಿರಿ. \v 23 ಇದಲ್ಲದೆ ವಿಶೇಷ ಆಹಾರವನ್ನು ತಂದು ಕೊಯ್ದು ವಿಶೇಷ ಔತಣವನ್ನು\f + \fr 15:23 \fr*\ft ಮೂಲಭಾಷೆಯಲ್ಲಿ \ft*\fqa ಕೊಬ್ಬಿಸಿದ ಕರು\fqa*\f* ಬೇಗ ಸಿದ್ಧಮಾಡಿರಿ. ನಾವು ಉಂಡು ಸಂತೋಷಪಡೋಣ. \v 24 ಏಕೆಂದರೆ ಈ ನನ್ನ ಮಗನು ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ,’ ಎಂದು ಹೇಳಿದನು. ಹೀಗೆ ಅವರು ಅವನ ಬರುವಿಕೆಯನ್ನು ಆಚರಿಸತೊಡಗಿದರು. \p \v 25 “ಆಗ, ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿದ್ದಾಗ, ನರ್ತನವನ್ನೂ ವಾದ್ಯವನ್ನೂ ಕೇಳಿ, \v 26 ಸೇವಕರಲ್ಲಿ ಒಬ್ಬನನ್ನು ಕರೆದು, ‘ಇವುಗಳು ಏನು?’ ಎಂದು ಕೇಳಿದನು. \v 27 ಆ ಸೇವಕನು ಅವನಿಗೆ, ‘ನಿನ್ನ ತಮ್ಮನು ಬಂದಿದ್ದಾನೆ, ನಿನ್ನ ತಂದೆಯು ಅವನು ಸುರಕ್ಷಿತವಾಗಿ ಮತ್ತು ಸೌಖ್ಯವಾಗಿ ಹಿಂದಿರುಗಿದ್ದರಿಂದ, ವಿಶೇಷ ಔತಣವನ್ನು ಮಾಡಿಸಿದ್ದಾನೆ,’ ಎಂದನು. \p \v 28 “ಅದಕ್ಕೆ ಹಿರಿಯ ಮಗನು ಕೋಪಗೊಂಡು ಒಳಗೆ ಹೋಗಲು ಇಷ್ಟಪಡಲಿಲ್ಲ. ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು. \v 29 ಆದರೆ ಅವನು ಉತ್ತರವಾಗಿ ತನ್ನ ತಂದೆಗೆ, ‘ಎಷ್ಟೋ ವರ್ಷಗಳಿಂದ ನಾನು ನಿನ್ನ ಸೇವೆ ಮಾಡುತ್ತಿದ್ದೇನೆ. ನಾನು ನಿನ್ನ ಒಂದು ಅಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ. ಆದರೂ ನಾನು ನನ್ನ ಸ್ನೇಹಿತರೊಂದಿಗೆ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಮೇಕೆಯ ಮರಿಯನ್ನಾದರೂ ಕೊಡಲಿಲ್ಲ. \v 30 ಆದರೆ ನಿನ್ನ ಆಸ್ತಿಯನ್ನು ವೇಶ್ಯೆಯರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದಾಗ, ವಿಶೇಷ ಔತಣವನ್ನೇ ಮಾಡಿಸಿದ್ದೀಯಲ್ಲಾ!’ ಎಂದನು. \p \v 31 “ಆಗ ತಂದೆ, ‘ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ನನಗಿರುವುದೆಲ್ಲವೂ ನಿನ್ನದೇ. \v 32 ಆದರೆ ಈ ನಿನ್ನ ತಮ್ಮ ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಉಲ್ಲಾಸಪಟ್ಟು ಆನಂದಪಡುವುದು ಯುಕ್ತವಾದದ್ದೇ ಎಂದು ಹೇಳಿದನು.’ ” \c 16 \s1 ಕುಯುಕ್ತಿಯುಳ್ಳ ನಿರ್ವಾಹಕನ ಸಾಮ್ಯ \p \v 1 ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದು: “ಒಬ್ಬ ಐಶ್ವರ್ಯವಂತನಿದ್ದನು, ಅವನಿಗಿದ್ದ ಒಬ್ಬ ನಿರ್ವಾಹಕನು ಅವನ ಸರಕುಗಳನ್ನು ಹಾಳು ಮಾಡುತ್ತಿದ್ದಾನೆಂದು ಅವನಿಗೆ ಯಾರೋ ದೂರು ಹೇಳಿದರು. \v 2 ಆಗ ಐಶ್ವರ್ಯವಂತನು ಆ ನಿರ್ವಾಹಕನನ್ನು ಕರೆದು, ‘ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವುದು? ನಿನ್ನ ಲೆಕ್ಕವನ್ನು ಒಪ್ಪಿಸು. ನೀನು ಇನ್ನು ಮೇಲೆ ನಿರ್ವಾಹಕನಾಗಿರಲು ಆಗಲ್ಲ,’ ಎಂದನು. \p \v 3 “ಆಗ ಆ ನಿರ್ವಾಹಕನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಕೆಲಸದಿಂದ ತೆಗೆದುಬಿಡುತ್ತಾನಲ್ಲಾ. ಅಗೆಯಲು ನನಗೆ ಶಕ್ತಿಯಿಲ್ಲ, ಭಿಕ್ಷೆ ಬೇಡಲು ನನಗೆ ನಾಚಿಕೆ. \v 4 ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗಳಲ್ಲಿ ಸೇರಿಸಿಕೊಳ್ಳುವಂತೆ, ನಾನು ಏನು ಮಾಡಬೇಕಾದದ್ದು ಗೊತ್ತಾಯಿತು’ ಎಂದುಕೊಂಡನು. \p \v 5 “ಹೀಗೆ ಅವನು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲವೆಷ್ಟು?’ ಎಂದು ಕೇಳಲು, \p \v 6 “ ‘ಅವನು, 3,000 ಲೀಟರ್ ಎಣ್ಣೆ,’\f + \fr 16:6 \fr*\ft ಸುಮಾರು, 100 ಬತ್. ಇದು ಹೀಬ್ರೂ ಪದ\ft*\f* ಎಂದನು. \p “ಆಗ ನಿರ್ವಾಹಕನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೋ, ಬೇಗ ಕುಳಿತುಕೊಂಡು 1,500 ಲೀಟರ್ ಎಂದು ಬರೆ,’ ಎಂದು ಹೇಳಿದನು. \p \v 7 “ಬಳಿಕ ಅವನು ಮತ್ತೊಬ್ಬನಿಗೆ, ‘ನೀನೆಷ್ಟು ಸಾಲ ತೀರಿಸಬೇಕು,’ ಎಂದು ಕೇಳಲು, \p “30 ‘ಟನ್ ಗೋಧಿ,’\f + \fr 16:7 \fr*\ft ಸುಮಾರು 100 ಕೋರ್\ft*\f* ಎಂದನು. \p “ಆಗ ಅವನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೊಂಡು 24 ಟನ್ ಎಂದು ಬರೆ,’ ಎಂದನು. \p \v 8 “ಆಗ ಯಜಮಾನನು ಆ ಅಪನಂಬಿಗಸ್ತ ನಿರ್ವಾಹಕನು ಕುಯುಕ್ತಿಯಿಂದ ಮಾಡಿದ್ದನ್ನು ಹೊಗಳಿದನು. ಯೇಸು ಮುಂದುವರಿಸಿ ಹೇಳಿದ್ದು: ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಯುಕ್ತಿಯುಳ್ಳವರಾಗಿದ್ದಾರೆ. \v 9 ನಾನು ನಿಮಗೆ ಹೇಳುವುದೇನೆಂದರೆ, ಲೌಕಿಕ ಸಂಪತ್ತಿನಿಂದ\f + \fr 16:9 \fr*\ft ಅಥವಾ \ft*\fqa ಅನ್ಯಾಯದ ಧನದಿಂದ\fqa*\f* ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಅದು ನಿಮ್ಮನ್ನು ಬಿಟ್ಟುಹೋದಾಗ ನಿಮ್ಮನ್ನು ನಿತ್ಯ ನಿವಾಸಗಳಲ್ಲಿ ಸೇರಿಸಿಕೊಳ್ಳುವರು. \p \v 10 “ಸ್ವಲ್ಪವಾದದ್ದರಲ್ಲಿ ನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ನಂಬಿಗಸ್ತರಾಗಿರುವರು ಮತ್ತು ಸ್ವಲ್ಪವಾದದ್ದರಲ್ಲಿ ಅಪನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ಅಪನಂಬಿಗಸ್ತರಾಗಿರುವರು. \v 11 ಆದ್ದರಿಂದ ಲೌಕಿಕ ಸಂಪತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಾಗಿ ಇರದಿದ್ದರೆ, ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸುವರು? \v 12 ಮತ್ತೊಬ್ಬರಿಗೆ ಸೇರಿದ ವಸ್ತುಗಳಲ್ಲಿ ನೀವು ನಂಬಿಗಸ್ತರಾಗಿ ಇರದಿದ್ದರೆ ನಿಮ್ಮ ಪಾಲನ್ನು ನಿಮಗೆ ಯಾರು ಒಪ್ಪಿಸುವರು? \p \v 13 “ಯಾವ ಸೇವಕನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು. ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ,” ಎಂದರು. \p \v 14 ಆಗ ಹಣದಾಶೆಯಿಂದ ಕೂಡಿದ ಫರಿಸಾಯರು, ಇವುಗಳನ್ನು ಕೇಳಿ ಯೇಸುವನ್ನು ಪರಿಹಾಸ್ಯ ಮಾಡಿದರು. \v 15 ಯೇಸು ಅವರಿಗೆ, “ನೀವು ಮನುಷ್ಯರ ಮುಂದೆ ನೀತಿಕರಿಸಿಕೊಳ್ಳುವವರು, ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾರೆ. ಮನುಷ್ಯರಲ್ಲಿ ಶ್ರೇಷ್ಠವೆಂದು ಎಣಿಸಿಕೊಳ್ಳುವಂಥದ್ದು ದೇವರ ದೃಷ್ಟಿಯಲ್ಲಿ ಅದು ಅಸಹ್ಯವಾಗಿದೆ. \s1 ಹೆಚ್ಚುವರಿ ಬೋಧನೆಗಳು \p \v 16 “ಮೋಶೆಯ ನಿಯಮವೂ ಪ್ರವಾದನೆಗಳೂ ಯೋಹಾನನವರೆಗೆ ಇದ್ದವು. ಅಂದಿನಿಂದ, ದೇವರ ರಾಜ್ಯವು ಸಾರಲಾಗಿದೆ. ಪ್ರತಿಯೊಬ್ಬನು ಬಲವಂತದಿಂದ ಅದರೊಳಗೆ ನುಗ್ಗುತ್ತಿದ್ದಾನೆ. \v 17 ನಿಯಮದ ಒಂದು ಚುಕ್ಕೆಯು ಬಿದ್ದುಹೋಗುವುದಕ್ಕಿಂತ ಆಕಾಶವೂ ಭೂಮಿಯೂ ಅಳಿದುಹೋಗುವುದು ಸುಲಭ. \p \v 18 “ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ. ಯಾವನು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ.” \s1 ಸಿರಿವಂತನೂ ಬಡ ಲಾಜರನೂ \p \v 19 ಅನಂತರ ಯೇಸು ಹೀಗೆ ಒಂದು ಸಾಮ್ಯ ಹೇಳಿದರು, “ಬಹು ಬೆಲೆಬಾಳುವ\f + \fr 16:19 \fr*\ft ಗ್ರೀಕ್ ಭಾಷೆಯಲ್ಲಿ \ft*\fqa ಸಕಲಾತಿ, ನಸುಗೆಂಪು\fqa*\f* ಹಾಗೂ ನಯವಾದ ನಾರುಮಡಿ ವಸ್ತ್ರಗಳನ್ನೂ ಧರಿಸಿಕೊಂಡು ಪ್ರತಿದಿನವೂ ಭೋಗಗಳಲ್ಲಿಯೂ ಆಡಂಭರದಲ್ಲಿಯೂ ಬಾಳುತ್ತಿದ್ದ ಒಬ್ಬ ಧನವಂತನಿದ್ದನು. \v 20 ಅವನ ಬಾಗಿಲಲ್ಲಿ, ಮೈತುಂಬಾ ಹುಣ್ಣುಗಳಿದ್ದ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದಿರುತ್ತಿದ್ದನು. \v 21 ಧನವಂತನ ಮೇಜಿನಿಂದ ಬೀಳುವ ರೊಟ್ಟಿತುಂಡುಗಳನ್ನು ತಿನ್ನುವುದಕ್ಕೆ ಆ ಲಾಜರನು ಹಂಬಲಿಸುತ್ತಿದ್ದನು. ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. \p \v 22 “ಒಂದು ದಿನ ಆ ಭಿಕ್ಷುಕನು ಸತ್ತುಹೋದನು. ದೇವದೂತರು ಅವನನ್ನು ಅಬ್ರಹಾಮನ ಬಳಿಗೆ ತೆಗೆದುಕೊಂಡು ಹೋದರು. ಧನವಂತನು ಸಹ ಸತ್ತುಹೋದನು. ಅವನಿಗೆ ಶವಸಂಸ್ಕಾರವಾಯಿತು. \v 23 ಅವನು ಪಾತಾಳದಲ್ಲಿ, ಯಾತನೆಪಡುತ್ತಾ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಲ್ಲಿ ಅಬ್ರಹಾಮನನ್ನೂ, ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ಕಂಡನು. \v 24 ಆಗ ಧನವಂತನು, ‘ತಂದೆಯೇ ಅಬ್ರಹಾಮನೇ, ನನ್ನನ್ನು ಕರುಣಿಸು. ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ, ನನ್ನ ನಾಲಿಗೆಯನ್ನು ತಣ್ಣಗೆ ಮಾಡಲು ಅವನನ್ನು ಕಳುಹಿಸು, ಈ ಅಗ್ನಿಜ್ವಾಲೆಯಲ್ಲಿ ಯಾತನೆಪಡುತ್ತಿದ್ದೇನೆ,’ ಎಂದು ಕೂಗಿ ಹೇಳಿದನು. \p \v 25 “ಆದರೆ ಅಬ್ರಹಾಮನು, ‘ಮಗನೇ, ನೀನು ನಿನ್ನ ಜೀವಮಾನದಲ್ಲಿ ಒಳ್ಳೆಯವುಗಳನ್ನು ಹೊಂದಿದೆಯಲ್ಲಾ, ಲಾಜರನು ಕೆಟ್ಟವುಗಳನ್ನು ಅನುಭವಿಸಿದ್ದನ್ನು ನೆನಪಿಗೆ ತಂದುಕೋ, ಈಗ ಅವನು ಆದರಣೆ ಹೊಂದುತ್ತಿದ್ದಾನೆ. ನೀನು ಯಾತನೆಪಡುತ್ತಿದ್ದೀ. \v 26 ಇದಲ್ಲದೆ ಇಲ್ಲಿಂದ ನಿಮ್ಮ ಕಡೆಗೆ ದಾಟಬೇಕೆಂದಿರುವವರು ದಾಟದ ಹಾಗೆಯೂ ಅಲ್ಲಿಂದ ನಮ್ಮ ಕಡೆಗೆ ಬರಬೇಕೆಂದಿರುವವರು ಬಾರದಂತೆಯೂ ನಮಗೂ ನಿಮಗೂ ನಡುವೆ ಒಂದು ದೊಡ್ಡ ಅಂತರ ಸ್ಥಾಪಿಸಿದೆ,’ ಎಂದನು. \p \v 27 “ಆಗ ಅವನು, ‘ಅಪ್ಪಾ, ಹಾಗಾದರೆ ನೀನು ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಾನು ಬೇಡಿಕೊಳ್ಳುತ್ತೇನೆ. \v 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರೂ ಈ ಯಾತನೆಯ ಸ್ಥಳಕ್ಕೆ ಬಾರದ ಹಾಗೆ ಲಾಜರನು ಅವರನ್ನು ಎಚ್ಚರಿಸಲಿ,’ ಎಂದನು. \p \v 29 “ಅದಕ್ಕೆ ಅಬ್ರಹಾಮನು ಅವನಿಗೆ, ‘ಅವರಿಗೆ ಮೋಶೆಯ ಮತ್ತು ಪ್ರವಾದಿಗಳ ಗ್ರಂಥಗಳಿವೆ; ಅದರಲ್ಲಿರುವುದಕ್ಕೆ ಅವರು ಕಿವಿಗೊಡಲಿ,’ ಎಂದನು. \p \v 30 “ಆಗ ಅವನು, ‘ಹಾಗಲ್ಲ, ತಂದೆ ಅಬ್ರಹಾಮನೇ, ಸತ್ತವರೊಳಗಿಂದ ಒಬ್ಬನು ಜೀವಂತವಾಗಿ ಅವರ ಬಳಿಗೆ ಹೋದರೆ, ಅವರು ಪಶ್ಚಾತ್ತಾಪ ಪಡುವರು,’ ಎಂದನು. \p \v 31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಮೋಶೆಯು ಮತ್ತು ಪ್ರವಾದಿಗಳು ಹೇಳಿದ್ದನ್ನೇ ಅವರು ಕೇಳದೆ ಹೋದರೆ, ಸತ್ತವರೊಳಗಿಂದ ಒಬ್ಬನು ಎದ್ದರೂ ಅವರು ಒಪ್ಪುವುದಿಲ್ಲ,’ ಎಂದು ಹೇಳಿದನು.” \c 17 \s1 ಪಾಪ, ವಿಶ್ವಾಸ, ಕರ್ತವ್ಯ \p \v 1 ಯೇಸು ತಮ್ಮ ಶಿಷ್ಯರಿಗೆ: “ಜನರಿಗೆ ಪಾಪದ ಶೋಧನೆಗಳು ಬಂದೇ ಬರುತ್ತವೆ, ಆದರೆ ಅವು ಯಾರಿಂದ ಬರುತ್ತವೋ ಅವರಿಗೆ ಕಷ್ಟ. \v 2 ಅಂಥವರು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ನಡೆಸುವುದಕ್ಕಿಂತ ಅವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದೊಳಗೆ ಬಿಸಾಡುವುದು ಉತ್ತಮವಾಗಿರುವುದು. \v 3 ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಿಂದಿರಿ. \p “ನಿನ್ನ ಸಹೋದರನು ಅಥವಾ ಸಹೋದರಿ ನಿನಗೆ ವಿರೋಧವಾಗಿ ಪಾಪಮಾಡಿದರೆ, ಅವರನ್ನು ಗದರಿಸು; ಅವರು ಪಶ್ಚಾತ್ತಾಪಪಟ್ಟರೆ, ಅವರನ್ನು ಕ್ಷಮಿಸು. \v 4 ಅವರು ಒಂದು ದಿನದಲ್ಲಿ ಏಳು ಸಾರಿ ಪಾಪಮಾಡಿ, ಏಳು ಸಾರಿಯೂ ನಿನ್ನ ಬಳಿಗೆ ಬಂದು, ‘ನಾನು ಪಶ್ಚಾತ್ತಾಪಪಡುತ್ತೇನೆ,’ ಎಂದು ಹೇಳಿದರೆ ನೀನು ಅವರನ್ನು ಕ್ಷಮಿಸಬೇಕು,” ಎಂದರು. \p \v 5 ಆಗ ಅಪೊಸ್ತಲರು ಕರ್ತದೇವರಿಗೆ, “ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ,” ಎಂದರು. \p \v 6 ಅದಕ್ಕೆ ಯೇಸು, “ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ, ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ,’ ಎಂದು ಹೇಳುವುದಾದರೆ ಅದು ನಿಮಗೆ ವಿಧೇಯವಾಗುವುದು. \p \v 7 “ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಕೆಲಸದವನಿರಲಾಗಿ, ಅವನು ಹೊಲದ ಕೆಲಸ ಅಥವಾ ಕುರಿ ಮೇಯಿಸಿ ಮನೆಗೆ ಬಂದ ಕೂಡಲೇ ಯಜಮಾನನು ಕೆಲಸದವನಿಗೆ, ‘ಬಾ ಊಟಕ್ಕೆ ಕುಳಿತುಕೋ,’ ಎಂದು ಹೇಳುವುದುಂಟೇ? \v 8 ಹಾಗೆ ಹೇಳದೆ, ‘ನೀನು ಊಟ ತಯಾರುಮಾಡಿ, ನೀನೂ ಸಿದ್ಧವಾಗಿ, ನಾನು ತಿಂದು ಕುಡಿಯುವ ತನಕ ನನ್ನ ಸೇವೆಮಾಡು; ಆಮೇಲೆ ನೀನು ಊಟಮಾಡು,’ ಎಂದು ಅವನಿಗೆ ಹೇಳುವಿರಲ್ಲವೇ? \v 9 ತನಗೆ ಅಪ್ಪಣೆ ಕೊಟ್ಟವುಗಳನ್ನು ಆ ಕೆಲಸದವನು ಮಾಡಿದ್ದಕ್ಕೆ ಯಜಮಾನನು ಅವನಿಗೆ ಕೃತಜ್ಞತೆ ಸಲ್ಲಿಸುವನೋ? \v 10 ಅದೇ ರೀತಿಯಾಗಿ, ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ನೀವು ಮಾಡಿದ ಮೇಲೆ, ‘ನಾವು ಅಯೋಗ್ಯರಾದ ಆಳುಗಳಷ್ಟೇ, ನಾವು ಮಾಡಬೇಕಾದ ಕರ್ತವ್ಯವನ್ನೇ ಮಾಡಿದ್ದೇವೆ ಎಂದು ನೀವು ಹೇಳಿರಿ,’ ” ಎಂದು ಹೇಳಿದರು. \s1 ಯೇಸು ಹತ್ತು ಕುಷ್ಠರೋಗಿಗಳನ್ನು ಗುಣಪಡಿಸಿದ್ದು \p \v 11 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ, ಸಮಾರ್ಯ ಮತ್ತು ಗಲಿಲಾಯ ಪ್ರಾಂತಗಳ ಮಧ್ಯದಲ್ಲಿದ್ದ ಹಳ್ಳಿಯ ಮಾರ್ಗವಾಗಿ ಪ್ರಯಾಣಮಾಡಿದರು. \v 12 ಯೇಸು ಒಂದು ಹಳ್ಳಿಯನ್ನು ಪ್ರವೇಶಿಸಿದಾಗ, ಹತ್ತು ಮಂದಿ ಕುಷ್ಠರೋಗಿಗಳು ಯೇಸುವಿನ ಕಡೆಗೆ ಬಂದು ದೂರದಲ್ಲಿ ನಿಂತುಕೊಂಡು, \v 13 “ಯೇಸುವೇ, ಗುರುವೇ, ನಮ್ಮನ್ನು ಕರುಣಿಸು!” ಎಂದು ತಮ್ಮ ಧ್ವನಿಯೆತ್ತಿ ಕೂಗಿದರು. \p \v 14 ಯೇಸು ಅವರನ್ನು ನೋಡಿ, “ಹೋಗಿ, ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿರಿ,”\f + \fr 17:14 \fr*\ft \+xt ಯಾಜಕ 14:2-32\+xt*\ft*\f* ಎಂದರು. ಅವರು ಹೋಗುತ್ತಿರುವಾಗಲೇ ಸ್ವಸ್ಥರಾದರು. \p \v 15 ಅವರಲ್ಲಿ ಒಬ್ಬನು, ತಾನು ಸ್ವಸ್ಥವಾದದ್ದನ್ನು ಕಂಡು, ಮಹಾಶಬ್ದದಿಂದ ದೇವರನ್ನು ಮಹಿಮೆಪಡಿಸುತ್ತಾ ಹಿಂದಿರುಗಿ ಬಂದು, \v 16 ಯೇಸುವಿನ ಪಾದಕ್ಕೆ ಅಡ್ಡಬಿದ್ದು, ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದನು. ಅವನೋ ಸಮಾರ್ಯದವನಾಗಿದ್ದನು. \p \v 17 ಯೇಸು ಅವನಿಗೆ, “ಆ ಎಲ್ಲಾ ಹತ್ತು ಮಂದಿ ಸ್ವಸ್ಥರಾದರಲ್ಲವೆ? ಉಳಿದ ಒಂಬತ್ತು ಮಂದಿ ಎಲ್ಲಿ? \v 18 ದೇವರನ್ನು ಮಹಿಮೆಪಡಿಸುವುದಕ್ಕೆ ಈ ವಿದೇಶಿಯೇ ಹೊರತು ಯಾರೂ ಹಿಂದಿರುಗಲಿಲ್ಲವೇ?” \v 19 ಎಂದು ಹೇಳಿ ಅವನಿಗೆ, “ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು. \s1 ದೇವರ ರಾಜ್ಯದ ಬರುವಿಕೆ \p \v 20 ಒಂದು ದಿನ, ದೇವರ ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಯೇಸುವನ್ನು ಕೇಳಲು, ಅವರಿಗೆ ಉತ್ತರವಾಗಿ ಯೇಸು, “ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವುದಿಲ್ಲ, \v 21 ‘ಇಗೋ ಇಲ್ಲಿದೆ,’ ಇಲ್ಲವೆ ‘ಅಗೋ ಅಲ್ಲಿದೆ,’ ಎಂದು ಹೇಳುವುದಕ್ಕಾಗುವುದಿಲ್ಲ ಏಕೆಂದರೆ ದೇವರ ರಾಜ್ಯವು ನಿಮ್ಮ ನಡುವೆ ಇದೆ,\f + \fr 17:21 \fr*\ft ಅಥವಾ \ft*\fqa ನಿಮ್ಮೊಳಗೇ\fqa*\f*” ಎಂದರು. \p \v 22 ಯೇಸು ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನ ದಿವಸಗಳಲ್ಲಿ ಒಂದನ್ನು ಕಾಣಬೇಕೆಂದು ನೀವು ಬಯಸುವ ಕಾಲ ಬರುತ್ತದೆ, ಆದರೂ ನೀವು ಅದನ್ನು ಕಾಣುವುದಿಲ್ಲ. \v 23 ಜನರು ನಿಮಗೆ, ‘ಇಲ್ಲಿ ಇದ್ದಾನೆ!’ ಇಲ್ಲವೆ, ‘ಅಲ್ಲಿ ಇದ್ದಾನೆ’ ಎಂದು ಹೇಳಿದರೆ ಅವರ ಹಿಂದೆ ಓಡಬೇಡಿರಿ. \v 24 ಏಕೆಂದರೆ ಮಿಂಚು ಆಕಾಶದ ಒಂದು ಭಾಗದಲ್ಲಿ ಮಿಂಚಿ ಮತ್ತೊಂದು ಭಾಗದಲ್ಲಿ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಮನುಷ್ಯಪುತ್ರನಾದ ನಾನು ಬರುವ ದಿನದಲ್ಲಿ ಕಾಣಿಸಿಕೊಳ್ಳುವೆನು. \v 25 ಆದರೆ ನಾನು ಮೊದಲು ಅನೇಕ ಕಷ್ಟಗಳನ್ನು ಅನುಭವಿಸಿ ಈ ಸಂತತಿಯವರಿಂದ ತಿರಸ್ಕಾರ ಹೊಂದುವುದು ಅಗತ್ಯವಾಗಿದೆ. \p \v 26 “ನೋಹನ ದಿವಸಗಳು ಇದ್ದಂತೆಯೇ,\f + \fr 17:26 \fr*\ft \+xt ಆದಿ 7\+xt* ನೋಡಿರಿ\ft*\f* ಅದೇ ರೀತಿಯಲ್ಲಿ ಮನುಷ್ಯಪುತ್ರನಾದ ನನ್ನ ದಿವಸಗಳಲ್ಲಿಯೂ ಇರುವುದು. \v 27 ನೋಹನು ನಾವೆಯಲ್ಲಿ ಸೇರಿದ ದಿನದವರೆಗೂ ಅವರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮದುವೆ ಮಾಡಿಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ನಾವೆಯ ಹೊರಗಡೆ ಇದ್ದವರೆಲ್ಲರನ್ನು ನಾಶಮಾಡಿತು. \p \v 28 “ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಜನರೆಲ್ಲರೂ ತಿನ್ನುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.\f + \fr 17:28 \fr*\ft \+xt ಆದಿ 19\+xt* ನೋಡಿರಿ\ft*\f* \v 29 ಆದರೆ ಲೋಟನು ಸೊದೋಮಿನಿಂದ ತೆರಳಿದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಮಾಡಿತು. \p \v 30 “ಮನುಷ್ಯಪುತ್ರನಾದ ನನ್ನ ಪ್ರತ್ಯಕ್ಷತೆಯ ದಿನದಲ್ಲಿಯೂ ಹಾಗೆ ಇರುವುದು. \v 31 ಆ ದಿನದಲ್ಲಿ ಮನೆಯ ಮಾಳಿಗೆಯ ಮೇಲೆ ಇದ್ದವನು, ಮನೆಯಲ್ಲಿದ್ದ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಕೆಳಗಿಳಿದು ಬರಬಾರದು. ಹಾಗೆಯೇ, ಹೊಲದಲ್ಲಿದ್ದವನು ಹಿಂದಿರುಗಿ ಬರಬಾರದು. \v 32 ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ! \v 33 ಯಾರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವರೋ ಅವರು ಅದನ್ನು ಕಳೆದುಕೊಳ್ಳುವರು ಮತ್ತು ಯಾರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವರೋ ಅವರು ಅದನ್ನು ಕಾಪಾಡಿಕೊಳ್ಳುವರು. \v 34 ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು; ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. \v 35 ಇಬ್ಬರು ಹೆಂಗಸರು ಜೊತೆಯಾಗಿ ಕಾಳುಬೀಸುತ್ತಿರುವರು; ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬಳನ್ನು ಬಿಡಲಾಗುವುದು. \v 36 \it ಇಬ್ಬರು ಹೊಲದಲ್ಲಿರುವರು. ಒಬ್ಬರನ್ನು ತೆಗೆದುಕೊಳ್ಳಲಾಗುವುದು ಮತ್ತೊಬ್ಬರನ್ನು ಬಿಡಲಾಗುವುದು,\it*\f + \fr 17:36 \fr*\ft ಕೆಲವು ಮೂಲ ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.\ft*\f* ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು. \p \v 37 ಅವರು ಯೇಸುವಿಗೆ, “ಕರ್ತದೇವರೇ, ಇದು ಎಲ್ಲಿ ನಡೆಯುವುದು?” ಎಂದು ಕೇಳಲು ಯೇಸು ಅವರಿಗೆ, \p “ಹೆಣ ಎಲ್ಲಿದೆಯೋ, ಅಲ್ಲಿ ಹದ್ದುಗಳು ಬಂದು ಸೇರುತ್ತವೆ,” ಎಂದರು. \c 18 \s1 ವಿಧವೆಯ ಸಾಮ್ಯ \p \v 1 ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತಮ್ಮ ಶಿಷ್ಯರಿಗೆ ಒಂದು ಸಾಮ್ಯವನ್ನು ಹೇಳಿದರು. \v 2 “ಒಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೂ ಭಯಪಡುತ್ತಿರಲಿಲ್ಲ ಮನುಷ್ಯರಿಗೂ ಲಕ್ಷ್ಯಕೊಡುತ್ತಿರಲಿಲ್ಲ. \v 3 ಅದೇ ಪಟ್ಟಣದಲ್ಲಿ ಒಬ್ಬ ವಿಧವೆಯಿದ್ದಳು. ಆಕೆ ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿಯ ಎದುರಾಗಿ ನನಗೆ ನ್ಯಾಯ ದೊರಕಿಸಿಕೊಡು,’ ಎಂದು ಕೇಳಿಕೊಳ್ಳುತ್ತಿದ್ದಳು. \p \v 4 “ಅವನು ಸ್ವಲ್ಪಕಾಲ ಆಕೆಗೆ ಗಮನಕೊಡಲಿಲ್ಲ. ತರುವಾಯ ಅವನು ತನ್ನೊಳಗೆ, ‘ನಾನು ದೇವರಿಗೆ ಭಯಪಡುವುದಿಲ್ಲ ಹಾಗೂ ಮನುಷ್ಯರಿಗೂ ಲಕ್ಷ್ಯಕೊಡುವುದಿಲ್ಲ, \v 5 ಆದರೂ ಈ ವಿಧವೆಯು ನನಗೆ ತೊಂದರೆಕೊಟ್ಟು ಪದೇಪದೇ ನನ್ನ ಬಳಿಗೆ ಬಂದು, ನನ್ನನ್ನು ಕಾಡಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು,’ ” ಎಂದುಕೊಂಡನು. \p \v 6 ಅನಂತರ ಕರ್ತದೇವರು, “ಈ ಅನ್ಯಾಯಗಾರನಾದ ನ್ಯಾಯಾಧಿಪತಿಯು ಹೇಳಿಕೊಂಡಿದ್ದನ್ನು ಕೇಳಿರಿ. \v 7 ದೇವರಾದುಕೊಂಡವರು ದೇವರಿಗೆ ಹಗಲುರಾತ್ರಿ ಮೊರೆಯಿಡುವಾಗ, ದೇವರು ಅವರ ವಿಷಯದಲ್ಲಿ ಅವರಿಗೆ ನ್ಯಾಯವನ್ನು ಕೊಡದೆ ಇರುವರೋ? ದೇವರು ನ್ಯಾಯ ಕೊಡಲು ತಡಮಾಡುವರೋ? \v 8 ದೇವರು ಬೇಗನೇ ಅವರಿಗೆ ನ್ಯಾಯತೀರಿಸುವರೆಂದು, ನಾನು ನಿಮಗೆ ಹೇಳುತ್ತೇನೆ. ಆದರೂ, ಮನುಷ್ಯಪುತ್ರನಾದ ನಾನು ಬಂದಾಗ ಭೂಮಿಯ ಮೇಲೆ ವಿಶ್ವಾಸವನ್ನು ಕಾಣುವೆನೋ?” ಎಂದರು. \s1 ಫರಿಸಾಯ ಹಾಗೂ ಸುಂಕದವನ ಸಾಮ್ಯ \p \v 9 ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸೆಯನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ, ಯೇಸು ಈ ಸಾಮ್ಯವನ್ನು ಹೇಳಿದರು: \v 10 “ಇಬ್ಬರು ಪ್ರಾರ್ಥನೆಮಾಡುವುದಕ್ಕೆ ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬನು ಫರಿಸಾಯನು ಮತ್ತೊಬ್ಬನು ಸುಂಕದವನು. \v 11 ಫರಿಸಾಯನು ನಿಂತುಕೊಂಡು: ‘ದೇವರೇ, ಸುಲಿಗೆ ಮಾಡುವವರು, ಅನೀತಿವಂತರು, ವ್ಯಭಿಚಾರಿಗಳು ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ನಾನಲ್ಲ. ಆದ್ದರಿಂದ ನಾನು ನಿನಗೆ ಸ್ತೋತ್ರ ಮಾಡುತ್ತೇನೆ. \v 12 ನಾನು ವಾರಕ್ಕೆ ಎರಡು ಸಾರಿ ಉಪವಾಸ ಮಾಡುತ್ತೇನೆ. ನನಗಿರುವ ಎಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ,’ ಎಂದು ಹೇಳಿ ತನಗೆ ತಾನೇ ಪ್ರಾರ್ಥಿಸಿದನು. \p \v 13 “ಆದರೆ ಸುಂಕದವನು ದೂರದಲ್ಲಿ ನಿಂತು, ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಧೈರ್ಯಗೊಳ್ಳದೇ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ ಪಾಪಿಯಾದವನು ನಾನೇ ನನ್ನನ್ನು ಕರುಣಿಸು,’ ಎಂದು ಪ್ರಾರ್ಥಿಸಿದನು. \p \v 14 “ನಾನು ನಿಮಗೆ ಹೇಳುತ್ತೇನೆ, ಅವನಲ್ಲ, ಇವನೇ ನೀತಿವಂತನೆಂಬ ನಿರ್ಣಯ ಪಡೆದವನಾಗಿ ತನ್ನ ಮನೆಗೆ ಹೋದನು. ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು. \s1 ಚಿಕ್ಕಮಕ್ಕಳು ಹಾಗೂ ಯೇಸು \p \v 15 ಚಿಕ್ಕಮಕ್ಕಳನ್ನು ಯೇಸು ಮುಟ್ಟುವಂತೆ ಕೆಲವರು ಚಿಕ್ಕಮಕ್ಕಳನ್ನು ಅವರ ಬಳಿಗೆ ತಂದರು ಆಗ ಅವರ ಶಿಷ್ಯರು ಇದನ್ನು ಕಂಡು, ಜನರನ್ನು ಗದರಿಸಿದರು. \v 16 ಆದರೆ ಯೇಸುವೋ ಚಿಕ್ಕಮಕ್ಕಳನ್ನು ತಮ್ಮ ಹತ್ತಿರಕ್ಕೆ ಆಹ್ವಾನಿಸಿ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ. \v 17 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು. \s1 ಸಿರಿವಂತನಾದ ಅಧಿಕಾರಿ \p \v 18 ಒಬ್ಬ ಅಧಿಕಾರಿಯು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು. \p \v 19 ಅದಕ್ಕೆ ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬರೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ. \v 20 ‘ವ್ಯಭಿಚಾರ ಮಾಡಬಾರದು, ನರಹತ್ಯೆ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’\f + \fr 18:20 \fr*\ft \+xt ವಿಮೋ 20:12-16; ಧರ್ಮೋ 5:16-20\+xt*\ft*\f* ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು. \p \v 21 ಅದಕ್ಕವನು, “ನನ್ನ ಬಾಲ್ಯದಿಂದಲೇ ನಾನು ಇವೆಲ್ಲವನ್ನೂ ಕೈಕೊಂಡಿದ್ದೇನೆ,” ಎಂದು ಹೇಳಿದನು. \p \v 22 ಯೇಸು ಇವುಗಳನ್ನು ಕೇಳಿ ಅವನಿಗೆ, “ಆದರೂ ನಿನಗೆ ಒಂದು ಕೊರತೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು. \p \v 23 ಅವನು ಇದನ್ನು ಕೇಳಿ, ಬಹಳ ದುಃಖವುಳ್ಳವನಾದನು. ಏಕೆಂದರೆ ಅವನು ಬಹಳ ಸಿರಿವಂತನಾಗಿದ್ದನು. \v 24 ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ಕಂಡು, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ! \v 25 ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ,” ಎಂದು ಹೇಳಿದರು. \p \v 26 ಇದನ್ನು ಕೇಳಿದವರು, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದರು. \p \v 27 ಅದಕ್ಕೆ ಯೇಸು, “ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ,” ಎಂದು ಹೇಳಿದರು. \p \v 28 ಆಗ ಪೇತ್ರನು, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು. \p \v 29 ಯೇಸು ಅವರಿಗೆ, “ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಮನೆಯನ್ನಾದರೂ ಹೆಂಡತಿಯನ್ನಾದರೂ ಸಹೋದರರನ್ನಾದರೂ ತಂದೆತಾಯಿಗಳನ್ನಾದರೂ ಮಕ್ಕಳನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು, \v 30 ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಕಾಲದಲ್ಲಿ ನಿತ್ಯಜೀವವನ್ನೂ ಹೊಂದುವನು,” ಎಂದರು. \s1 ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು \p \v 31 ಯೇಸು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ, “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ, ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಪ್ರವಾದಿಗಳಿಂದ ಬರೆದಿರುವುದೆಲ್ಲವೂ ನೆರವೇರಬೇಕು. \v 32 ನಾನು ಯೆಹೂದ್ಯರಲ್ಲದವರ ಕೈಗೆ ಸೆರೆಯಾಗುವೆನು. ಅವರು ನನ್ನನ್ನು ಹಾಸ್ಯಮಾಡಿ, ನನಗೆ ಅವಮಾನ ಮಾಡಿ, ನನ್ನ ಮೇಲೆ ಉಗುಳುವರು. \v 33 ಇದಲ್ಲದೆ ಅವರು ನನ್ನನ್ನು ಕೊರಡೆಗಳಿಂದ ಹೊಡೆದು, ಕೊಂದುಹಾಕುವರು. ಆದರೆ ನಾನು ಮೂರನೆಯ ದಿನ ಜೀವಿತನಾಗಿ ಎದ್ದು ಬರುವೆನು,” ಎಂದರು. \p \v 34 ಆದರೆ ಶಿಷ್ಯರಿಗೆ ಇವುಗಳಲ್ಲಿ ಒಂದೂ ಅರ್ಥವಾಗಲಿಲ್ಲ. ಈ ಮಾತುಗಳು ಅವರಿಗೆ ಮರೆಯಾಗಿದ್ದುದರಿಂದ, ಯೇಸು ಹೇಳಿದವುಗಳನ್ನು ಅವರು ತಿಳಿದುಕೊಳ್ಳಲಿಲ್ಲ. \s1 ಕುರುಡ ಭಿಕ್ಷುಕನಿಗೆ ದೃಷ್ಟಿ ಬಂದದ್ದು \p \v 35 ಯೇಸು ಯೆರಿಕೋವಿನ ಸಮೀಪಕ್ಕೆ ಬಂದಾಗ, ಒಬ್ಬ ಕುರುಡನು ದಾರಿಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. \v 36 ಜನಸಮೂಹವು ಹಾದು ಹೋಗುವುದನ್ನು ಇವನು ಕೇಳಿಸಿಕೊಂಡು, ಅದೇನೆಂದು ವಿಚಾರಿಸಿದನು. \v 37 “ನಜರೇತಿನ ಯೇಸು ಹಾದು ಹೋಗುತ್ತಿದ್ದಾರೆ,” ಎಂದು ಜನರು ಅವನಿಗೆ ಹೇಳಿದರು. \p \v 38 ಆಗ ಅವನು, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸಿ!” ಎಂದು ಗಟ್ಟಿಯಾಗಿ ಕೂಗಿಕೊಂಡನು. \p \v 39 ಮುಂದೆ ಹೋಗುತ್ತಿದ್ದವರು ಸುಮ್ಮನಿರುವಂತೆ ಅವನನ್ನು ಗದರಿಸಿದರು, ಆದರೂ ಅವನು, “ದಾವೀದನ ಪುತ್ರರೇ, ನನ್ನನ್ನು ಕರುಣಿಸಿ,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡನು. \p \v 40 ಆಗ ಯೇಸು ನಿಂತು ಅವನನ್ನು ತಮ್ಮ ಬಳಿಗೆ ಕರೆತರುವಂತೆ ಅಪ್ಪಣೆಕೊಟ್ಟರು. ಅವನು ಯೇಸುವಿನ ಬಳಿಗೆ ಬಂದಾಗ, ಅವರು ಅವನಿಗೆ, \v 41 “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಿದರು. \p ಅದಕ್ಕವನು, “ಕರ್ತದೇವರೇ, ನನಗೆ ದೃಷ್ಟಿ ಕೊಡಿ,” ಎಂದನು. \p \v 42 ಆಗ ಯೇಸು ಅವನಿಗೆ, “ನೀನು ದೃಷ್ಟಿ ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು. \v 43 ಕೂಡಲೇ ಅವನು ದೃಷ್ಟಿಯನ್ನು ಪಡೆದನು. ಆಗ ಅವನು ದೇವರನ್ನು ಸ್ತುತಿಸುತ್ತಾ, ಯೇಸುವನ್ನು ಹಿಂಬಾಲಿಸಿದನು. ಎಲ್ಲಾ ಜನರು ಅದನ್ನು ಕಂಡು, ದೇವರಿಗೆ ಸ್ತೋತ್ರ ಸಲ್ಲಿಸಿದರು. \c 19 \s1 ಸುಂಕದವನಾದ ಜಕ್ಕಾಯನು \p \v 1 ಯೇಸು ಯೆರಿಕೋ ಪಟ್ಟಣವನ್ನು ಪ್ರವೇಶಿಸಿ ಅಲ್ಲಿಂದ ಪ್ರಯಾಣ ಮಾಡುತ್ತಿದ್ದರು. \v 2 ಅಲ್ಲಿ ಜಕ್ಕಾಯ ಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಸುಂಕದವರಲ್ಲಿ ಮುಖಂಡನೂ ಐಶ್ವರ್ಯವಂತನೂ ಆಗಿದ್ದನು. \v 3 ಅವನು ಯೇಸು ಯಾರೆಂದು ಕಾಣಬೇಕೆಂದು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದದರಿಂದ ಜನರ ಗುಂಪಿನ ನಿಮಿತ್ತವಾಗಿ ಅವರನ್ನು ಕಾಣಲಾರದೆ ಇದ್ದನು. \v 4 ಆಗ ಯೇಸುವನ್ನು ಕಾಣುವಂತೆ ಅವನು ಮುಂದಾಗಿ ಓಡಿಹೋಗಿ, ಒಂದು ಅತ್ತಿಮರವನ್ನು ಹತ್ತಿದನು. ಏಕೆಂದರೆ ಯೇಸು ಆ ಮಾರ್ಗವಾಗಿಯೇ ಬರುತ್ತಿದ್ದರು. \p \v 5 ಯೇಸು ಆ ಸ್ಥಳಕ್ಕೆ ಬಂದು, ಮೇಲಕ್ಕೆ ನೋಡಿ ಅವನಿಗೆ, “ಜಕ್ಕಾಯನೇ, ತಕ್ಷಣವೇ ಇಳಿದು ಬಾ. ನಾನು ಇಂದು ನಿನ್ನ ಮನೆಯಲ್ಲಿ ತಂಗಬೇಕು,” ಎಂದರು. \v 6 ಜಕ್ಕಾಯನು ತಕ್ಷಣವೇ ಇಳಿದುಬಂದು ಅವರನ್ನು ಸಂತೋಷದಿಂದ ಬರಮಾಡಿಕೊಂಡನು. \p \v 7 ಇದನ್ನು ಕಂಡವರೆಲ್ಲರೂ, “ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ,” ಎಂದು ಗೊಣಗುಟ್ಟಿದರು. \p \v 8 ಆದರೆ ಜಕ್ಕಾಯನು ನಿಂತುಕೊಂಡು ಕರ್ತದೇವರಿಗೆ, “ಸ್ವಾಮೀ, ಇಗೋ, ನನ್ನ ಸ್ವತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಟ್ಟುಬಿಡುತ್ತೇನೆ. ನಾನು ಯಾರಿಗಾದರೂ ಏನಾದರೂ ಮೋಸಮಾಡಿ ಅವರಿಂದ ತೆಗೆದುಕೊಂಡಿದ್ದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು. \p \v 9 ಯೇಸು ಅವನಿಗೆ, “ಈ ದಿನವೇ ಈ ಮನೆಗೆ ರಕ್ಷಣೆ ಬಂದಿದೆ. ಏಕೆಂದರೆ ಇವನು ಸಹ ಅಬ್ರಹಾಮನ ಪುತ್ರನಲ್ಲವೇ? \v 10 ತಪ್ಪಿಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕಲ್ಲವೇ ಮನುಷ್ಯಪುತ್ರನಾದ ನಾನು ಬಂದೆನು,” ಎಂದು ಹೇಳಿದರು. \s1 ಹತ್ತು ನಾಣ್ಯಗಳ ಸಾಮ್ಯ \p \v 11 ಜನರು ಈ ಮಾತುಗಳನ್ನು ಕೇಳುತ್ತಿರಲಾಗಿ, ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದ್ದುದರಿಂದಲೂ ದೇವರ ರಾಜ್ಯವು ಕೂಡಲೇ ಪ್ರತ್ಯಕ್ಷವಾಗುವುದೆಂದು ಅವರು ಭಾವಿಸಿದ್ದರಿಂದ \v 12 ಯೇಸು ಇನ್ನೊಂದು ಸಾಮ್ಯವನ್ನು ಹೇಳಿದರು: “ಘನವಂತನಾಗಿದ್ದ ಒಬ್ಬನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರುಗಿ ಬರುವುದಕ್ಕಾಗಿ ದೂರದೇಶಕ್ಕೆ ಹೊರಟುಹೋದನು. \v 13 ಆ ವ್ಯಕ್ತಿ ತನ್ನ ಹತ್ತು ಕೆಲಸಗಾರರನ್ನು ಕರೆದು, ಅವರಿಗೆ ಹತ್ತು ನಾಣ್ಯಗಳನ್ನು\f + \fr 19:13 \fr*\ft ಒಂದು ನಾಣ್ಯ, ಸುಮಾರು ಮೂರು ತಿಂಗಳ ಕೂಲಿಗೆ ಸಮ\ft*\f* ಒಪ್ಪಿಸಿ, ‘ನಾನು ಬರುವವರೆಗೆ ವ್ಯಾಪಾರ ಮಾಡಿಕೊಂಡಿರಿ,’ ಎಂದು ಹೇಳಿದನು. \p \v 14 “ಆದರೆ ಅವನ ನಾಡಿನವರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮ್ಮ ಅರಸನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ಪ್ರತಿನಿಧಿಗಳನ್ನು ಕಳುಹಿಸಿದರು. \p \v 15 “ಆದರೂ ಅವನು ತನ್ನ ರಾಜ್ಯವನ್ನು ಪಡೆದು ಹಿಂದಿರುಗಿದಾಗ, ವ್ಯಾಪಾರದಿಂದ ಇನ್ನೂ ಎಷ್ಟು ಲಾಭಗಳಿಸಿದರೆಂದು ತಿಳಿದುಕೊಳ್ಳುವಂತೆ, ತಾನು ಹಣ ಕೊಟ್ಟ ಆ ಕೆಲಸಗಾರರನ್ನು ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದನು. \p \v 16 “ಆಗ ಮೊದಲನೆಯವನು ಬಂದು, ‘ಸ್ವಾಮಿ, ನಿಮ್ಮ ಒಂದು ನಾಣ್ಯದಿಂದ ಇನ್ನೂ ಹತ್ತು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು. \p \v 17 “ಅದಕ್ಕೆ ಅವನು, ‘ಚೆನ್ನಾಗಿ ಮಾಡಿದಿ, ಒಳ್ಳೆಯ ಸೇವಕನೇ. ನೀನು ಅತ್ಯಂತ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ, ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು,’ ಎಂದನು. \p \v 18 “ಎರಡನೆಯವನು ಬಂದು, ‘ಸ್ವಾಮಿ, ನಿನ್ನ ಒಂದು ನಾಣ್ಯದಿಂದ ಇನ್ನೂ ಐದು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು. \p \v 19 “ಅದಕ್ಕೆ ಅವನು, ‘ನೀನು ಐದು ಪಟ್ಟಣಗಳ ಮೇಲೆ ಅಧಿಕಾರಿಯಾಗಿರು,’ ಎಂದು ಅವನಿಗೆ ಹೇಳಿದನು. \p \v 20 “ಆಗ ಮತ್ತೊಬ್ಬನು ಬಂದು, ‘ಸ್ವಾಮಿ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿಟ್ಟಿದ್ದ ನಿಮ್ಮ ನಾಣ್ಯ ಇದೇ. \v 21 ನೀವು ಕಠಿಣ ಮನುಷ್ಯರೆಂದು ನಾನು ನಿಮಗೆ ಭಯಪಟ್ಟೆನು. ನೀನು ಕೂಡಿಡದಿರುವುದನ್ನು ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ,’ ಎಂದನು. \p \v 22 “ಆಗ ಆ ಯಜಮಾನನು, ‘ಕೆಟ್ಟ ಸೇವಕನೇ! ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿಸುವೆನು. ನಾನು ಕೂಡಿಡದೆ ಇರುವಲ್ಲಿ ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ. \v 23 ಹಾಗಿದ್ದರೆ ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ\f + \fr 19:23 \fr*\ft ಇದು ಈಗಿನ ಬ್ಯಾಂಕ್ ರೀತಿ\ft*\f* ಏಕೆ ಹಾಕಲಿಲ್ಲ, ನಾನು ಹಿಂದಿರುಗಿದಾಗ ಹಣವನ್ನು ಬಡ್ಡಿ ಸಮೇತವಾಗಿ ತೆಗೆದುಕೊಳ್ಳುತ್ತಿದ್ದೆನು,’ ಎಂದು ಹೇಳಿದನು. \p \v 24 “ಯಜಮಾನನು ಹತ್ತಿರ ನಿಂತಿದ್ದವರಿಗೆ, ‘ಇವನಿಂದ ಆ ನಾಣ್ಯವನ್ನು ತೆಗೆದುಕೊಂಡು ಹತ್ತು ನಾಣ್ಯಗಳಿದ್ದವನಿಗೆ ಕೊಡಿರಿ,’ ಎಂದನು. \p \v 25 “ಆಗ ಅವರು, ‘ಸ್ವಾಮಿ, ಅವನಿಗೆ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ!’ ಎಂದರು. \p \v 26 “ಆಗ ಯಜಮಾನನು, ‘ಇದ್ದ ಪ್ರತಿಯೊಬ್ಬರಿಗೆ ಕೊಡಲಾಗುವುದು ಮತ್ತು ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ಕಸಿದುಕೊಳ್ಳಲಾಗುವುದು. \v 27 ಆದರೆ ತಮ್ಮ ಮೇಲೆ ನಾನು ಆಳಿಕೆ ಮಾಡುವುದನ್ನು ಇಷ್ಟಪಡದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ,’ ಎಂದನು.” \s1 ಯೆರೂಸಲೇಮಿನ ಜಯ ಪ್ರವೇಶ \p \v 28 ಯೇಸು ಹೀಗೆ ಹೇಳಿದ ತರುವಾಯ, ಶಿಷ್ಯರಿಗೆ ಮುಂದಾಗಿ, ಯೆರೂಸಲೇಮಿಗೆ ಹೊರಟರು. \v 29 ಇದಾದ ಮೇಲೆ ಅವರು ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ, ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು, \v 30 “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ, ನೀವು ಅದರೊಳಗೆ ಪ್ರವೇಶಿಸುತ್ತಿರುವಾಗ, ಅಲ್ಲಿ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ. \v 31 ಯಾರಾದರೂ ನಿಮಗೆ, ‘ಏಕೆ ಅದನ್ನು ಬಿಚ್ಚುತ್ತೀರಿ?’ ಎಂದು ಕೇಳಿದರೆ, ನೀವು ಅವರಿಗೆ, ‘ಇದು ಕರ್ತದೇವರಿಗೆ ಬೇಕಾಗಿದೆ,’ ಎಂದು ಹೇಳಿರಿ,” ಎಂದರು. \p \v 32 ಆ ಶಿಷ್ಯರಿಬ್ಬರೂ ತಮ್ಮ ಮಾರ್ಗವಾಗಿ ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡರು. \v 33 ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ, ಅದರ ಯಜಮಾನರು ಅವರಿಗೆ, “ನೀವು ಕತ್ತೆಮರಿಯನ್ನು ಯಾಕೆ ಬಿಚ್ಚುತ್ತೀರಿ?” ಎಂದು ಕೇಳಿದ್ದಕ್ಕೆ, \p \v 34 ಅವರು, “ಇದು ಕರ್ತದೇವರಿಗೆ ಬೇಕಾಗಿದೆ,” ಎಂದರು. \p \v 35 ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದು, ತಮ್ಮ ಬಟ್ಟೆಗಳನ್ನು ಕತ್ತೆಮರಿಯ ಮೇಲೆ ಹಾಕಿ, ಅದರ ಮೇಲೆ ಯೇಸುವನ್ನು ಕೂರಿಸಿದರು. \v 36 ಯೇಸು ಹೋಗುತ್ತಿರುವಾಗ, ಜನರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. \p \v 37 ಇದಲ್ಲದೆ ಯೇಸು ಓಲಿವ್ ಗುಡ್ಡದಿಂದ ಇಳಿಜಾರನ್ನು ಸಮೀಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ಕಂಡ ಎಲ್ಲ ಮಹತ್ಕಾರ್ಯಗಳಿಗಾಗಿ ಸಂತೋಷಪಡುತ್ತಾ, ಮಹಾ ಸ್ವರದಿಂದ ದೇವರನ್ನು ಹೀಗೆ ಕೊಂಡಾಡಲಾರಂಭಿಸಿದರು: \q1 \v 38 “ಕರ್ತದೇವರ ಹೆಸರಿನಲ್ಲಿ ಬರುವ ಅರಸನು ಆಶೀರ್ವಾದ ಹೊಂದಲಿ!” \b \q1 “ಪರಲೋಕದಲ್ಲಿ ಸಮಾಧಾನ, ಅತ್ಯುನ್ನತದಲ್ಲಿ ಮಹಿಮೆ!”\f + \fr 19:38 \fr*\ft \+xt ಕೀರ್ತನೆ 118:26\+xt*\ft*\f* \p \v 39 ಜನಸಮೂಹದಲ್ಲಿದ್ದ ಕೆಲವು ಫರಿಸಾಯರು ಯೇಸುವಿಗೆ, “ಬೋಧಕರೇ, ನಿಮ್ಮ ಶಿಷ್ಯರನ್ನು ಗದರಿಸಿ!” ಎಂದರು. \p \v 40 ಆಗ ಯೇಸು ಅವರಿಗೆ, “ಇವರು ಸುಮ್ಮನಾದರೆ, ಈ ಕಲ್ಲುಗಳು ಕೂಗುವವು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು. \p \v 41 ತರುವಾಯ ಯೇಸು ಯೆರೂಸಲೇಮ ಪಟ್ಟಣವನ್ನೂ ಅದರ ಸ್ಥಿತಿಯನ್ನೂ ಕಂಡು, ಅದರ ಸಲುವಾಗಿ ಅತ್ತು, \v 42 “ನೀನು ಇಂದಾದರೂ ನಿನ್ನ ಸಮಾಧಾನದ ವಿಷಯಗಳನ್ನು ಅರಿತುಕೊಂಡಿದ್ದರೆ, ಚೆನ್ನಾಗಿತ್ತು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ. \v 43 ನಿನ್ನ ಶತ್ರುಗಳು ನಿನ್ನ ಸುತ್ತಲೂ ಅಡ್ಡಗೋಡೆಯನ್ನು ಕಟ್ಟಿ, ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಬಂಧಿಸುವ ದಿನಗಳು ಬರುವವು. \v 44 ಇದಲ್ಲದೆ ಅವರು ಗೋಡೆಯೊಳಗಿನ ನಿನ್ನನ್ನೂ ನಿನ್ನ ಮಕ್ಕಳನ್ನೂ ನೆಲಕ್ಕೆ ಬಡಿಯುವರು. ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ ದೇವರು ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲ,” ಎಂದರು. \s1 ದೇವಾಲಯದಲ್ಲಿ ಯೇಸು \p \v 45 ಅನಂತರ ಯೇಸು ದೇವಾಲಯದ ಅಂಗಳದೊಳಗೆ ಹೋಗಿ, ಅದರಲ್ಲಿ ವ್ಯಾಪಾರಮಾಡುವವರನ್ನು ಹೊರಗೆ ಹಾಕುವುದಕ್ಕೆ ಪ್ರಾರಂಭಿಸಿ, \v 46 ಅವರಿಗೆ, “ ‘ನನ್ನ ಮನೆಯು ಪ್ರಾರ್ಥನೆಯ ಮನೆಯಾಗಿದೆ,’\f + \fr 19:46 \fr*\ft \+xt ಯೆಶಾಯ 56:7\+xt*\ft*\f* ಎಂದು ಬರೆದದೆ. ನೀವೋ ಅದನ್ನು, ‘ಕಳ್ಳರ ಗವಿಯನ್ನಾಗಿ’ ಮಾಡಿದ್ದೀರಿ,”\f + \fr 19:46 \fr*\ft \+xt ಯೆರೆ 7:11\+xt*\ft*\f* ಎಂದರು. \p \v 47 ಯೇಸು ಪ್ರತಿದಿನವೂ ದೇವಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ ಮುಖ್ಯಯಾಜಕರೂ ನಿಯಮ ಬೋಧಕರೂ ಜನರ ಪ್ರಮುಖರೂ ಯೇಸುವನ್ನು ಕೊಲ್ಲುವುದಕ್ಕೆ ಹವಣಿಸುತ್ತಿದ್ದರು. \v 48 ಜನರೆಲ್ಲರೂ ಯೇಸು ಹೇಳುವ ಒಂದೊಂದು ಮಾತಿಗೂ ಬಹಳ ಲಕ್ಷ್ಯಕೊಟ್ಟು ಯೇಸುವಿನ ಉಪದೇಶವನ್ನು ಕೇಳುತ್ತಿದ್ದುದರಿಂದ, ಅವರಿಗೆ ಏನು ಮಾಡಬೇಕೋ ತೋಚಲಿಲ್ಲ. \c 20 \s1 ಯೇಸುವಿನ ಅಧಿಕಾರವನ್ನು ಪ್ರಶ್ನಿಸಿದ್ದು \p \v 1 ಆ ದಿವಸಗಳಲ್ಲಿ ಒಂದು ದಿನ ಯೇಸು ದೇವಾಲಯದ ಅಂಗಳದಲ್ಲಿ ಜನರಿಗೆ ಬೋಧಿಸುತ್ತಾ, ಸುವಾರ್ತೆಯನ್ನು ಸಾರುತ್ತಿದ್ದರು. ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೊಂದಿಗೆ ಅವರ ಬಳಿಗೆ ಬಂದು \v 2 ಯೇಸುವಿಗೆ, “ನೀವು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತೀರಿ? ನಿಮಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ನಮಗೆ ಹೇಳಿ,” ಎಂದರು. \p \v 3 ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ವಿಷಯ ಕೇಳುತ್ತೇನೆ, ನನಗೆ ಉತ್ತರಕೊಡಿರಿ. \v 4 ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ?” ಎಂದು ಕೇಳಿದರು. \p \v 5 ಆಗ ಅವರು ತಮ್ಮೊಳಗೆ, “ ‘ಪರಲೋಕದಿಂದ’ ಎಂದು ನಾವು ಹೇಳಿದರೆ ಆತನು, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು. \v 6 ‘ಮನುಷ್ಯರಿಂದ ಬಂತು,’ ಎಂದು ನಾವು ಹೇಳಿದರೆ, ಜನರೆಲ್ಲಾ ನಮಗೆ ಕಲ್ಲೆಸೆಯುವರು. ಏಕೆಂದರೆ ಯೋಹಾನನು ಒಬ್ಬ ಪ್ರವಾದಿಯೆಂದು ಅವರು ಒಪ್ಪಿದ್ದಾರೆ,” ಎಂದು ಆಲೋಚಿಸಿ, \p \v 7 “ಅದು ಎಲ್ಲಿಂದಲೋ ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು. \p \v 8 ಆಗ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು. \s1 ರೈತರ ಸಾಮ್ಯ \p \v 9 ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದರು: “ಒಬ್ಬನು ದ್ರಾಕ್ಷಿಯ ತೋಟವನ್ನು ನೆಟ್ಟು, ಅದನ್ನು ರೈತರಿಗೆ ಗೇಣಿಗೆ ಕೊಟ್ಟು, ದೀರ್ಘಕಾಲ ದೂರದೇಶಕ್ಕೆ ಪ್ರವಾಸಹೋದನು. \v 10 ಫಲದ ಕಾಲ ಬಂದಾಗ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷಿತೋಟದ ಫಲವನ್ನು ಕೊಡುವಂತೆ ತನ್ನ ಸೇವಕನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ಗೇಣಿಗೆದಾರರು ಅವನನ್ನು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು. \v 11 ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ಅವರು ಎರಡನೆಯವನನ್ನೂ ಸಹ ಹೊಡೆದು, ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. \v 12 ಆ ಯಜಮಾನನು ಮೂರನೆಯವನನ್ನು ಕಳುಹಿಸಿದನು. ಆಗ ಅವರು ಅವನನ್ನೂ ಗಾಯಪಡಿಸಿ ಹೊರಗೆ ಹಾಕಿದರು. \p \v 13 “ಆಗ ದ್ರಾಕ್ಷಿಯ ತೋಟದ ಯಜಮಾನನು, ‘ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿಸುವೆನು, ಬಹುಶಃ ಅವರು ಅವನಿಗಾದರೂ ಮರ್ಯಾದೆಕೊಟ್ಟಾರು,’ ಎಂದುಕೊಂಡನು. \p \v 14 “ಆದರೆ ಗೇಣಿಗೆದಾರರು ಅವನನ್ನು ಕಂಡಾಗ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು. \v 15 ಹಾಗೆಯೇ, ಅವರು ಅವನನ್ನು ದ್ರಾಕ್ಷಿತೋಟದ ಹೊರಗೆ ಹಾಕಿ ಕೊಂದರು. \p “ಹೀಗಿರಲಾಗಿ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು? \v 16 ಅವನು ಬಂದು ಆ ಗೇಣಿಗೆದಾರರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಒಪ್ಪಿಸುವನು,” ಎಂದರು. \p ಜನರು ಇದನ್ನು ಕೇಳಿದಾಗ, “ಹಾಗೆ ಎಂದಿಗೂ ಆಗಬಾರದು!” ಎಂದರು. \p \v 17 ಆಗ ಯೇಸು ಅವರನ್ನು ದಿಟ್ಟಿಸಿ ನೋಡಿ, “ಹಾಗಾದರೆ, \q1 “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ \q2 ಮುಖ್ಯವಾದ ಮೂಲೆಗಲ್ಲಾಯಿತು,’\f + \fr 20:17 \fr*\ft \+xt ಕೀರ್ತನೆ 118:22\+xt*\ft*\f* ಎಂದು ಪವಿತ್ರ ವೇದದಲ್ಲಿ ಬರೆದಿರುವುದರ ಅರ್ಥ ಏನು? \m \v 18 ಆ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದೇ ಕಲ್ಲು ಯಾವನ ಮೇಲೆ ಬೀಳುವುದೋ ಅವನನ್ನು ಅದು ಜಜ್ಜಿ ಹೋಗುವಂತೆ ಮಾಡುವುದು,” ಎಂದರು. \p \v 19 ಅದೇ ಗಳಿಗೆಯಲ್ಲಿ ನಿಯಮ ಬೋಧಕರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸುವುದಕ್ಕೆ ಹವಣಿಸಿದರು. ಏಕೆಂದರೆ ಯೇಸು ತಮಗೆ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದ್ದಾರೆಂದು ಅವರು ತಿಳಿದುಕೊಂಡರು. ಆದರೂ ಅವರು ಜನರಿಗೆ ಭಯಪಟ್ಟರು. \s1 ಚಕ್ರವರ್ತಿಗೆ ತೆರಿಗೆ ಕೊಡುವುದು \p \v 20 ಅವರು ಯೇಸುವನ್ನು ಹೊಂಚಿ ನೋಡುತ್ತಾ, ಮಾತಿನಲ್ಲಿ ಅವರನ್ನು ಸಿಕ್ಕಿಸುವಂತೆ ಅಧಿಪತಿಗೂ ಅಧಿಕಾರಕ್ಕೂ ಒಪ್ಪಿಸಿಕೊಡಲು, ನೀತಿವಂತರೆಂದು ನಟಿಸುವ ಗೂಢಚಾರರನ್ನು ಕಳುಹಿಸಿದರು. \v 21 ಅವರು ಯೇಸುವಿಗೆ, “ಗುರುವೇ, ನೀವು ಮುಖ ದಾಕ್ಷಿಣ್ಯವಿಲ್ಲದೆ ಸರಿಯಾಗಿ ಬೋಧಿಸುತ್ತೀರಿ ಮತ್ತು ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವರಾಗಿದ್ದೀರೆಂದು ನಾವು ಬಲ್ಲೆವು. \v 22 ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ನಮಗೆ ಮೋಶೆಯ ನಿಯಮಕ್ಕೆ ಅನುಸಾರವಾದದ್ದೋ?” ಎಂದು ಕೇಳಿದರು. \p \v 23 ಆದರೆ ಯೇಸು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ, \v 24 “ಒಂದು ಬೆಳ್ಳಿ ನಾಣ್ಯವನ್ನು\f + \fr 20:24 \fr*\ft ಗ್ರೀಕ್ ಭಾಷೆಯಲ್ಲಿ ದಿನಾರ್\ft*\f* ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಅವರನ್ನು ಕೇಳಲು ಅವರು, \p “ಕೈಸರನದು,”\f + \fr 20:24 \fr*\ft ರೋಮ್ ಚಕ್ರವರ್ತಿಯ ಶಿರೋನಾಮೆ\ft*\f* ಎಂದರು. \p \v 25 ಆಗ ಯೇಸು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೂ ದೇವರದ್ದನ್ನು ದೇವರಿಗೂ ಕೊಡಿರಿ,” ಎಂದರು. \p \v 26 ಯೇಸು ಜನರ ಮುಂದೆ ಬಹಿರಂಗವಾಗಿ ಹೇಳಿದ ಮಾತಿನಲ್ಲಿ ಅವರು ತಪ್ಪು ಕಂಡುಹಿಡಿಯಲಾರದೆ ಹೋದರು. ಯೇಸುವಿನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಾದರು. \s1 ಪುನರುತ್ಥಾನ ಹಾಗೂ ಮದುವೆ \p \v 27 ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು, ಯೇಸುವಿನ ಬಳಿಗೆ ಬಂದು ಅವರಿಗೆ, \v 28 “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಸಹೋದರನು ಅವನ ಪತ್ನಿಯನ್ನು ಮದುವೆಯಾಗಿ ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆ ನಮಗೆ ಬರೆದಿಟ್ಟಿದ್ದಾನೆ.\f + \fr 20:28 \fr*\ft \+xt ಧರ್ಮೋ 25:5,6\+xt*\ft*\f* \v 29 ಹೀಗೆ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಆ ಸ್ತ್ರೀಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು. \v 30 ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು. \v 31 ಮೂರನೆಯವನು ಆಕೆಯನ್ನು ಮದುವೆಯಾದನು, ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ನಿಧನರಾದರು. \v 32 ಕೊನೆಗೆ, ಆ ಸ್ತ್ರೀಯು ಸಹ ಮರಣಹೊಂದಿದಳು. \v 33 ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದರು. \p \v 34 ಅದಕ್ಕೆ ಯೇಸು ಉತ್ತರವಾಗಿ, “ಈ ಲೋಕದ ಜನರು ಮದುವೆ ಮಾಡಿಕೊಳ್ಳುತ್ತಾರೆ. ಮದುವೆ ಮಾಡಿಕೊಡುತ್ತಾರೆ. \v 35 ಆದರೆ ಮುಂಬರುವ ಲೋಕದಲ್ಲಿ ಸತ್ತವರು ಪುನರುತ್ಥಾನವನ್ನು ಹೊಂದಿ, ಯೋಗ್ಯರೆಂದು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. \v 36 ಅವರು ಇನ್ನೆಂದಿಗೂ ಸಾಯುವುದಿಲ್ಲ. ಏಕೆಂದರೆ ಅವರು ಪುನರುತ್ಥಾನದ ಮಕ್ಕಳೂ ದೇವದೂತರಿಗೆ ಸರಿಸಮಾನರೂ ಆಗಿರುವುದರಿಂದ, ಅವರು ದೇವರ ಮಕ್ಕಳಾಗಿದ್ದಾರೆ. \v 37 ಆದರೆ ಉರಿಯುವ ಪೊದೆಯ ಬಳಿ ಕರ್ತದೇವರು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು,’ ಎಂದು ತಿಳಿಸಿ ಸತ್ತವರು ಏಳುತ್ತಾರೆಂಬದನ್ನು ಮೋಶೆಗೆ ವ್ಯಕ್ತಪಡಿಸಿದ್ದಾರೆ.\f + \fr 20:37 \fr*\ft \+xt ವಿಮೋ 3:6\+xt*\ft*\f* \v 38 ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ. ಏಕೆಂದರೆ ಎಲ್ಲರೂ ಅವರಿಗಾಗಿ ಜೀವಿಸುತ್ತಾರೆ,” ಎಂದರು. \p \v 39 ಆಗ ನಿಯಮ ಬೋಧಕರಲ್ಲಿ ಕೆಲವರು ಪ್ರತ್ಯುತ್ತರವಾಗಿ, “ಬೋಧಕರೇ, ನೀವು ಸರಿಯಾಗಿ ಹೇಳಿದಿರಿ,” ಎಂದರು. \v 40 ಯಾರೂ ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳುವುದಕ್ಕೂ ಧೈರ್ಯಗೊಳ್ಳಲಿಲ್ಲ. \s1 ಕ್ರಿಸ್ತನು ಯಾರ ಪುತ್ರ? \p \v 41 ಯೇಸು ಅವರಿಗೆ, “ಕ್ರಿಸ್ತನು ದಾವೀದನ ಪುತ್ರನೆಂದು ಜನರು ಹೇಳುವುದು ಹೇಗೆ? \v 42 ದಾವೀದನು ತಾನೇ ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ: \q1 “ ‘ಕರ್ತದೇವರು ನನ್ನ ಕರ್ತದೇವರಿಗೆ: \q2 “ನಾನು ನಿನ್ನ ವಿರೋಧಿಗಳನ್ನು \q1 \v 43 ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ \q2 ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.” ’\f + \fr 20:43 \fr*\ft \+xt ಕೀರ್ತನೆ 110:1\+xt*\ft*\f* \m \v 44 ಆದಕಾರಣ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರು,’ ಎಂದು ಕರೆಯುವಾಗ, ಅವರು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು. \s1 ನಿಯಮ ಬೋಧಕರ ಕುರಿತು ಎಚ್ಚರಿಕೆ \p \v 45 ಜನರೆಲ್ಲರೂ ಕೇಳುತ್ತಿದ್ದಾಗ ಯೇಸು ತಮ್ಮ ಶಿಷ್ಯರಿಗೆ, \v 46 “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಬಯಸುವವರಾಗಿದ್ದಾರೆ; \v 47 ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು. \c 21 \s1 ವಿಧವೆಯ ಕಾಣಿಕೆ \p \v 1 ಯೇಸು ಗಮನಿಸುತ್ತಿರುವಾಗ, ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡರು. \v 2 ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು\f + \fr 21:2 \fr*\ft ಬಹಳ ಕಡಿಮೆ ಬೆಲೆಯ ತಾಮ್ರದ ನಾಣ್ಯ\ft*\f* ಪೆಟ್ಟಿಗೆಯಲ್ಲಿ ಹಾಕುವುದನ್ನು ಯೇಸು ಕಂಡರು. \v 3 ಆಗ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. \v 4 ಏಕೆಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ, ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ,” ಎಂದರು. \s1 ಯುಗದ ಸಮಾಪ್ತಿಯ ಸೂಚನೆಗಳು \p \v 5 ತರುವಾಯ ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಅದು ಸುಂದರವಾದ ಕಲ್ಲುಗಳಿಂದಲೂ ದೇವರಿಗೆ ಪ್ರತಿಷ್ಠೆಯ ಕೊಡುಗೆಗಳಿಂದಲೂ ಅಲಂಕೃತವಾಗಿದೆ ಎಂದು ಮಾತನಾಡುತ್ತಿದ್ದರು. \v 6 ಆದರೆ ಯೇಸು, “ನೀವು ಕಾಣುತ್ತಿರುವ ಇವೆಲ್ಲವೂ ಕೆಡವಿಹಾಕಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯದ ಕಾಲ ಬರುವುದು,” ಎಂದರು. \p \v 7 ಆಗ ಅವರು ಯೇಸುವಿಗೆ, “ಬೋಧಕರೇ, ಇವುಗಳು ಯಾವಾಗ ಆಗುವುವು? ಇವುಗಳು ಸಂಭವಿಸುವುದಕ್ಕಿರುವಾಗ ಯಾವ ಸೂಚನೆ ಇರುವುದು?” ಎಂದು ಕೇಳಿದರು. \p \v 8 ಅದಕ್ಕೆ ಯೇಸು, “ನೀವು ಮೋಸಹೋಗದಂತೆ ಎಚ್ಚರಿಕೆಯಾಗಿರಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಅವರು,’ ಎಂದೂ ‘ಸಮಯ ಸಮೀಪಿಸಿದೆ,’ ಎಂದೂ ಹಕ್ಕು ಸಾಧಿಸುವರು. ನೀವು ಅವರನ್ನು ಹಿಂಬಾಲಿಸಬೇಡಿರಿ. \v 9 ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಕೂಡಲೇ ಅಂತ್ಯ ಬರುವುದಿಲ್ಲ,” ಎಂದರು. \p \v 10 ಯೇಸು ಅವರಿಗೆ, “ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. \v 11 ವಿವಿಧ ಕಡೆಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವುವು. ಭಯ ಹುಟ್ಟಿಸುವ ಘಟನೆಗಳೂ ಆಕಾಶದಿಂದ ಮಹಾಸೂಚನೆಗಳೂ ಆಗುವುವು. \p \v 12 “ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು, ಹಿಂಸಿಸಿ ಸಭಾಮಂದಿರಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ, ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು. \v 13 ಇದು ಸಾಕ್ಷಿ ನೀಡಲು ನಿಮಗೆ ಸದಾವಕಾಶವಾಗಿರುತ್ತದೆ. \v 14 ಆಗ ನೀವು ಏನು ಉತ್ತರಕೊಡಬೇಕೆಂದು ಮುಂದಾಗಿ ಚಿಂತಿಸಬೇಕಾಗಿಲ್ಲವೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ. \v 15 ಏಕೆಂದರೆ ನಿಮ್ಮ ವಿರೋಧಿಗಳು ಸಹ ಪ್ರತಿವಾದಿಸಲಾಗದ ಇಲ್ಲವೆ ವಿರೋಧಿಸಲಾಗದ ಮಾತನ್ನೂ ಜ್ಞಾನವನ್ನೂ ನಾನು ನಿಮಗೆ ಕೊಡುವೆನು. \v 16 ತಂದೆತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿತರೂ ನಿಮ್ಮನ್ನು ಹಿಡಿದುಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. \v 17 ಇದಲ್ಲದೆ ನನ್ನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು.\f + \fr 21:17 \fr*\ft ಮೂಲಭಾಷೆಯಲ್ಲಿ ನನ್ನ ಹೆಸರಿನ ನಿಮಿತ್ತವಾಗಿ\ft*\f* \v 18 ಆದರೆ ನಿಮ್ಮ ತಲೆ ಕೂದಲೊಂದಾದರೂ ನಾಶವಾಗುವುದಿಲ್ಲ. \v 19 ನೀವು ನಿಮ್ಮ ಸಹನೆಯಿಂದ, ನಿಮ್ಮ ಪ್ರಾಣಗಳನ್ನು ಕಾಪಾಡಿಕೊಳ್ಳುವಿರಿ. \p \v 20 “ಸೈನ್ಯಗಳು ಯೆರೂಸಲೇಮಿಗೆ ಮುತ್ತಿಗೆ ಹಾಕುವುದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲವು ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ. \v 21 ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ; ಪಟ್ಟಣದ ಮಧ್ಯದಲ್ಲಿರುವವರು ಹೊರಟು ಹೋಗಲಿ; ಇದಲ್ಲದೆ ಹಳ್ಳಿಗಳಲ್ಲಿ ಇರುವವರು ಪಟ್ಟಣಕ್ಕೆ ಪ್ರವೇಶಿಸದೆ ಇರಲಿ. \v 22 ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವವುಗಳೆಲ್ಲವೂ ನೆರವೇರಲು, ಇವು ದಂಡನೆಯ ದಿವಸಗಳಾಗಿವೆ. \v 23 ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ! ದೇಶದಲ್ಲಿ ಈ ಜನರು ಮಹಾ ವಿಪತ್ತಿಗೂ ಕೋಪಕ್ಕೂ ಗುರಿಯಾಗುವರು. \v 24 ಇದಲ್ಲದೆ ಅವರು ಖಡ್ಗಕ್ಕೆ ತುತ್ತಾಗಿ ಬೀಳುವರು ಮತ್ತು ಸೆರೆಯಾಗಿ ಎಲ್ಲಾ ರಾಷ್ಟ್ರಗಳಲ್ಲಿ ಒಯ್ಯುವರು. ಯೆಹೂದ್ಯರಲ್ಲದವರ ಕಾಲ ಪರಿಪೂರ್ಣವಾಗುವವರೆಗೆ ಅವರು ಯೆರೂಸಲೇಮನ್ನು ತುಳಿದುಹಾಕುವರು. \p \v 25 “ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಸೂಚನೆಗಳು ಕಾಣಿಸಿಕೊಳ್ಳುವುವು. ಭೂಮಿಯಲ್ಲಾದರೋ, ಮೊರೆಯುವ ತೆರೆಗಳ ಮತ್ತು ಭೋರ್ಗರೆಯುವ ಸಮುದ್ರದ ನಿಮಿತ್ತ ಜನಾಂಗಗಳು ದಿಕ್ಕುತೋಚದೆ ಸಂಕಟಕ್ಕೆ ಒಳಗಾಗುವರು. \v 26 ಆಕಾಶದ ಶಕ್ತಿಗಳು ಕದಲುವುದರಿಂದ ಲೋಕಕ್ಕೆ ಏನು ಸಂಭವಿಸುವುದೋ ಎಂಬ ಭಯಭೀತಿಯಿಂದ, ಮಾನವರು ಮನಗುಂದಿಹೋಗುವರು. \v 27 ಆಗ ಮನುಷ್ಯಪುತ್ರನಾದ ನಾನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಜನರು ಕಾಣುವರು. \v 28 ಈ ಸಂಗತಿಗಳು ಸಂಭವಿಸಲು ತೊಡಗುವಾಗ, ತಲೆಯೆತ್ತಿ ನಿಲ್ಲಿರಿ. ಏಕೆಂದರೆ ನಿಮ್ಮ ವಿಮೋಚನೆಯು ಸಮೀಪಿಸಿತು,” ಎಂದರು. \p \v 29 ಯೇಸು ಶಿಷ್ಯರಿಗೆ ಈ ಸಾಮ್ಯವನ್ನು ಹೇಳಿದರು: “ಅಂಜೂರದ ಮರವನ್ನು ಮತ್ತು ಇತರ ಮರಗಳನ್ನು ಗಮನಿಸಿರಿ. \v 30 ಅವುಗಳ ಎಲೆಗಳು ಚಿಗುರುವುದನ್ನು ಕಾಣುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿಯೇ ತಿಳಿದುಕೊಳ್ಳುತ್ತೀರಿ. \v 31 ಅದೇ ಪ್ರಕಾರ, ಇವೆಲ್ಲ ಸಂಭವಿಸುವುದನ್ನು ನೀವು ಕಾಣುವಾಗ, ದೇವರ ರಾಜ್ಯ ಸಮೀಪಿಸಿತೆಂದು ತಿಳಿದುಕೊಳ್ಳಿರಿ. \p \v 32 “ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. \v 33 ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ. \p \v 34 “ನಿಮ್ಮ ಮೇಲೆ ಆ ದಿನವು ಉರುಲಿನಂತೆ ಫಕ್ಕನೆ ಬಾರದಂತೆ ನೀವು ಅತಿಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ, ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. \v 35 ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಬರುವುದು. \v 36 ಆದಕಾರಣ ಸಂಭವಿಸುವುದಕ್ಕಿರುವ ಇವೆಲ್ಲವುಗಳಿಂದ, ನೀವು ತಪ್ಪಿಸಿಕೊಳ್ಳುವುದಕ್ಕೆ ಯೋಗ್ಯರೆಂದು ಎಣಿಸಿಕೊಳ್ಳುವಂತೆಯೂ ಮನುಷ್ಯಪುತ್ರನಾದ ನನ್ನ ಮುಂದೆ ನಿಂತುಕೊಳ್ಳುವಂತೆಯೂ ಯಾವಾಗಲೂ ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ,” ಎಂದರು. \p \v 37 ಯೇಸು ಹಗಲಿನಲ್ಲಿ ದೇವಾಲಯದೊಳಗೆ ಬೋಧಿಸುತ್ತಾ ಇದ್ದು, ರಾತ್ರಿಯಲ್ಲಿ ಹೊರಟುಹೋಗಿ ಓಲಿವ್ ಗುಡ್ಡದಲ್ಲಿ ವಾಸಿಸುತ್ತಿದ್ದರು. \v 38 ಜನರೆಲ್ಲರೂ ಬೆಳಗಿನ ಜಾವದಲ್ಲಿ ಎದ್ದು ಯೇಸುವಿನ ಉಪದೇಶವನ್ನು ಕೇಳುವುದಕ್ಕಾಗಿ ದೇವಾಲಯಕ್ಕೆ ಬರುತ್ತಿದ್ದರು. \c 22 \s1 ಯೂದನು ಯೇಸುವಿಗೆ ದ್ರೋಹ ಬಗೆಯಲು ಒಪ್ಪಿದ್ದು \p \v 1 ಪಸ್ಕವೆಂಬ, ಹುಳಿಯಿಲ್ಲದ ರೊಟ್ಟಿಯ ಹಬ್ಬವು\f + \fr 22:1 \fr*\ft ಪಸ್ಕವೆಂಬ ಹಬ್ಬವು ಸೂರ್ಯನು ಅಸ್ತಮಿಸುವಾಗ ಪ್ರಾರಂಭವಾಗುತ್ತಿತ್ತು. ಆದರೆ, ಹುಳಿಯಿಲ್ಲದ ರೊಟ್ಟಿಯ ಹಬ್ಬವು ಪಸ್ಕಹಬ್ಬದ ಮಾರನೆಯ ದಿನದಿಂದ ಪ್ರಾರಂಭಿಸಿ ಏಳು ದಿನಗಳು ಆಚರಿಸಲಾಗುತ್ತಿತ್ತು. ಇವೆರಡೂ ಬೇರೆಯಾಗಿದ್ದರೂ ಒಂದರ ನಂತರ ಒಂದು ಆಚರಿಸಲಾಗುತ್ತಿತ್ತು. ಇವೆರಡೂ ಪರಸ್ಪರವಾಗಿ ಕರೆಯಲಾಗಿತ್ತು\ft*\f* ಸಮೀಪವಾಗಿತ್ತು. \v 2 ಮುಖ್ಯಯಾಜಕರೂ ನಿಯಮ ಬೋಧಕರೂ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಹುಡುಕುತ್ತಿದ್ದರು. ಆದರೆ ಅವರು ಜನರಿಗೆ ಭಯಪಟ್ಟರು. \v 3 ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಎಂದು ಕರೆಯಲಾಗುವ ಯೂದನಲ್ಲಿ, ಸೈತಾನನು ಪ್ರವೇಶಿಸಿದನು. \v 4 ಅವನು ಮುಖ್ಯಯಾಜಕರ ಬಳಿಗೂ ದೇವಾಲಯದ ಕಾವಲಧಿಕಾರಿಗಳ ಬಳಿಗೂ ಹೋಗಿ ಯೇಸುವನ್ನು ಅವರಿಗೆ ಹಿಡಿದುಕೊಡುವ ವಿಧಾನವನ್ನು ಕುರಿತು ಅವರ ಕೂಡ ಚರ್ಚಿಸಿದನು. \v 5 ಆಗ ಅವರು ಸಂತೋಷಪಟ್ಟು ಅವನಿಗೆ ಹಣ ಕೊಡುವುದಕ್ಕೆ ವಾಗ್ದಾನ ಮಾಡಿದರು. \v 6 ಅವನೂ ಸಮ್ಮತಿಸಿ, ಜನಸಮೂಹವು ಇಲ್ಲದಿರುವಾಗ ಯೇಸುವನ್ನು ಅವರಿಗೆ ಹಿಡಿದುಕೊಡುವಂತೆ ಸಂದರ್ಭವನ್ನು ಕಾಯುತ್ತಿದ್ದನು. \s1 ಕಡೆಯ ಭೋಜನ \p \v 7 ಆಗ ಪಸ್ಕದ ಕುರಿಯು ಬಲಿಕೊಡಬೇಕಾಗಿದ್ದ ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನ ಬಂದಿತು. \v 8 ಯೇಸು ಪೇತ್ರ ಯೋಹಾನರನ್ನು ಕರೆದು, “ನೀವು ಹೋಗಿ ನಮಗೋಸ್ಕರ ಪಸ್ಕಭೋಜನವನ್ನು ಸಿದ್ಧಮಾಡಿರಿ,” ಎಂದರು. \p \v 9 ಅವರು ಯೇಸುವಿಗೆ, “ನಾವು ಎಲ್ಲಿ ಸಿದ್ಧಮಾಡಬೇಕು?” ಎಂದರು. \p \v 10 ಆಗ ಯೇಸು ಅವರಿಗೆ, “ನೀವು ಪಟ್ಟಣವನ್ನು ಪ್ರವೇಶಿಸಿದಾಗ, ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡಿರುವ ಒಬ್ಬನು ನಿಮ್ಮನ್ನು ಸಂಧಿಸುವನು. ಅವನು ಪ್ರವೇಶಿಸುವ ಮನೆಯೊಳಗೆ ನೀವು ಅವನ ಹಿಂದೆ ಹೋಗಿರಿ. \v 11 ನೀವು ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರೊಂದಿಗೆ ಪಸ್ಕಭೋಜನ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ? ಎಂದು ಬೋಧಕರು ನಿನ್ನನ್ನು ಕೇಳುತ್ತಾರೆ’ ಎಂದು ಹೇಳಿರಿ. \v 12 ಅವನು ಕ್ರಮಪಡಿಸಿದ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು, ಅಲ್ಲಿಯೇ ಪಸ್ಕಭೋಜನ ಸಿದ್ಧಪಡಿಸಿರಿ,” ಎಂದರು. \p \v 13 ಅವರು ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡು, ಪಸ್ಕವನ್ನು ಸಿದ್ಧಮಾಡಿದರು. \p \v 14 ನಿಶ್ಚಿತ ಸಮಯ ಬಂದಾಗ ಯೇಸು ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಕುಳಿತುಕೊಂಡರು. \v 15 ಆಗ ಯೇಸು ಅವರಿಗೆ, “ನಾನು ಬಾಧೆಯನ್ನು ಅನುಭವಿಸುವುದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕಭೋಜನ ಮಾಡುವುದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ. \v 16 ದೇವರ ರಾಜ್ಯದಲ್ಲಿ ಇದು ನೆರವೇರುವ ತನಕ ನಾನು ಇನ್ನು ಮೇಲೆ ಪಸ್ಕಭೋಜನ ಮಾಡುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು. \p \v 17 ಅನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು, ಸ್ತೋತ್ರಮಾಡಿ, “ಇದನ್ನು ತೆಗೆದುಕೊಳ್ಳಿರಿ ಮತ್ತು ನಿಮ್ಮೊಳಗೆ ಹಂಚಿಕೊಳ್ಳಿರಿ. \v 18 ದೇವರ ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ,” ಎಂದರು. \p \v 19 ಆಮೇಲೆ ಯೇಸು ರೊಟ್ಟಿಯನ್ನು ತೆಗೆದುಕೊಂಡು, ಸ್ತೋತ್ರಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು. \p \v 20 ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ.\f + \fr 22:20 \fr*\ft ಪುರಾತನ ಕಾಲದಲ್ಲಿ ಒಡಂಬಡಿಕೆಯನ್ನು ದೃಢೀಕರಿಸಲು ಬಲಿ ಅರ್ಪಣೆಯಿಂದ ರಕ್ತಸುರಿಸುವ ಪದ್ಧತಿ ಇತ್ತು.\ft*\f* \v 21 ಆದರೂ ಇಗೋ, ನನಗೆ ದ್ರೋಹಬಗೆಯುವವನ ಕೈ ನನ್ನ ಕೈಯೊಂದಿಗೆ ಮೇಜಿನ ಮೇಲೆ ಇದೆ. \v 22 ನೇಮಕವಾದ ಪ್ರಕಾರ ಮನುಷ್ಯಪುತ್ರನಾದ ನಾನು ಹೊರಟುಹೋಗುತ್ತೇನೆ; ಆದರೆ ನನಗೆ ದ್ರೋಹಬಗೆಯುವವನಿಗೋ ಎಷ್ಟೋ ಕಷ್ಟ!” ಎಂದು ಹೇಳಿದರು. \v 23 ಆಗ ಇದನ್ನು ದ್ರೋಹಬಗೆಯುವವನು ಯಾವನು ಎಂದು ಶಿಷ್ಯರು ತಮ್ಮೊಳಗೆ ಪ್ರಶ್ನೆ ಮಾಡಲಾರಂಭಿಸಿದರು. \p \v 24 ಇದಲ್ಲದೆ ತಮ್ಮೊಳಗೆ ಯಾರು ಅತಿ ದೊಡ್ಡವನೆಂಬುದಾಗಿ ಶಿಷ್ಯರಲ್ಲಿ ವಿವಾದವು ಪ್ರಾರಂಭವಾಯಿತು. \v 25 ಆಗ ಯೇಸು ಅವರಿಗೆ, “ಯೆಹೂದ್ಯರಲ್ಲದವರ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ; ಅವರ ಮೇಲೆ ಅಧಿಕಾರವನ್ನು ನಡೆಸುವವರು ಉಪಕಾರಿಗಳು ಎಂದು ಎಣಿಸಿಕೊಳ್ಳುತ್ತಾರೆ. \v 26 ಆದರೆ ನೀವು ಹಾಗಿರಬಾರದು. ನಿಮ್ಮೊಳಗೆ ಅತಿ ದೊಡ್ಡವನಾಗಿರುವವನು ಅತಿ ಚಿಕ್ಕವನಂತೆ ಇರಲಿ ಮತ್ತು ಆಳ್ವಿಕೆ ಮಾಡುವವನು ಸೇವೆ ಮಾಡುವವನಂತೆ ಇರಲಿ. \v 27 ಯಾರು ದೊಡ್ಡವನು? ಊಟಕ್ಕೆ ಕುಳಿತುಕೊಂಡಿರುವವನೋ ಅಥವಾ ಸೇವೆ ಮಾಡುವವನೋ? ಊಟಕ್ಕೆ ಕುಳಿತುಕೊಂಡವನಲ್ಲವೋ? ಆದರೆ ನಾನು ನಿಮ್ಮೊಳಗೆ ಸೇವೆ ಮಾಡುವವನಂತಿದ್ದೇನೆ. \v 28 ನೀವೇ, ನನ್ನ ಕಷ್ಟಗಳಲ್ಲಿ ನನ್ನೊಂದಿಗೆ ನಿಂತವರು. \v 29 ನನ್ನ ತಂದೆ ನನಗೆ ರಾಜ್ಯವನ್ನು ನೇಮಕ ಮಾಡಿದ ಹಾಗೆಯೇ, ನಾನೂ ನಿಮಗೆ ರಾಜ್ಯವನ್ನು ನೇಮಕ ಮಾಡುತ್ತೇನೆ. \v 30 ಹೀಗೆ ನೀವು ನನ್ನ ರಾಜ್ಯದಲ್ಲಿ ನನ್ನ ಮೇಜಿನ ಬಳಿಯಲ್ಲಿ ಊಟಮಾಡಿ ಪಾನೀಯವನ್ನು ಸೇವಿಸುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. \p \v 31 “ಸೀಮೋನನೇ, ಸೀಮೋನನೇ, ಇಗೋ, ಸೈತಾನನು ನಿಮ್ಮೆಲ್ಲರನ್ನೂ ಗೋಧಿಯಂತೆ ತೂರಬೇಕೆಂದು ಅಪ್ಪಣೆ ಕೇಳಿದ್ದಾನೆ. \v 32 ಆದರೆ ನಿನ್ನ ನಂಬಿಕೆಯು ಕುಂದದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು,” ಎಂದು ಹೇಳಿದರು. \p \v 33 ಆದರೆ ಅವನು ಯೇಸುವಿಗೆ, “ಕರ್ತದೇವರೇ, ನಾನು ನಿಮ್ಮ ಜೊತೆಯಲ್ಲಿ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ಧನಾಗಿದ್ದೇನೆ,” ಎಂದನು. \p \v 34 ಆಗ ಯೇಸು, “ಪೇತ್ರನೇ, ನೀನು ನನ್ನನ್ನು ಅರಿಯೆನೆಂದು ಮೂರು ಸಾರಿ ಅಲ್ಲಗಳೆಯುವುದಕ್ಕಿಂತ ಮುಂಚೆ, ಈ ದಿವಸ ಹುಂಜ ಕೂಗುವುದಿಲ್ಲ ಎಂದು ನಿನಗೆ ಹೇಳುತ್ತೇನೆ,” ಎಂದರು. \p \v 35 ನಂತರ ಯೇಸು ಅವರಿಗೆ, “ನಾನು ನಿಮ್ಮನ್ನು ಹಣದ ಚೀಲ, ಪ್ರಯಾಣದ ಚೀಲ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದಾಗ ನೀವು ಏನಾದರೂ ಕೊರತೆಪಟ್ಟಿರೋ?” ಎಂದು ಕೇಳಲು, \p ಶಿಷ್ಯರು, “ಏನೂ ಇಲ್ಲ,” ಎಂದರು. \p \v 36 ಆಗ ಯೇಸು ಅವರಿಗೆ, “ಆದರೆ ಈಗ ಹಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಅದರಂತೆಯೇ ಪ್ರಯಾಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಖಡ್ಗಯಿಲ್ಲದವನು ತನ್ನ ಬಟ್ಟೆಯನ್ನು ಮಾರಿ ಅದನ್ನು ಕೊಂಡುಕೊಳ್ಳಲಿ. \v 37 ಏಕೆಂದರೆ, ‘ಆತನು ಪಾತಕರಲ್ಲಿ ಒಬ್ಬನಂತೆ ಎಣಿಸಿಕೊಂಡನು,’\f + \fr 22:37 \fr*\ft \+xt ಯೆಶಾಯ 53:12\+xt*\ft*\f* ಎಂಬುದಾಗಿ ಪವಿತ್ರ ವೇದದಲ್ಲಿ ಬರೆದಿರುವುದೆಲ್ಲವೂ ನೆರವೇರಬೇಕು ಎಂದು ನಾನು ನಿಮಗೆ ಹೇಳುತ್ತೇನೆ. ಹೌದು, ನನ್ನ ವಿಷಯವಾಗಿ ಬರೆದದ್ದು ನೆರವೇರಲಿದೆ,” ಎಂದರು. \p \v 38 ಶಿಷ್ಯರು, “ಕರ್ತದೇವರೇ, ಇಗೋ ಇಲ್ಲಿ ಎರಡು ಖಡ್ಗಗಳಿವೆ,” ಎಂದರು. \p ಅದಕ್ಕೆ ಯೇಸು ಅವರಿಗೆ, “ಅಷ್ಟು ಸಾಕು,” ಎಂದರು. \s1 ಓಲಿವ್ ಬೆಟ್ಟದ ಮೇಲೆ ಯೇಸು ಪ್ರಾರ್ಥಿಸಿದ್ದು \p \v 39 ಯೇಸು ಹೊರಗೆ ಬಂದು ತಮ್ಮ ವಾಡಿಕೆಯಂತೆ ಓಲಿವ್ ಗುಡ್ಡಕ್ಕೆ ಹೋದರು. ಯೇಸುವಿನ ಶಿಷ್ಯರೂ ಅವರನ್ನು ಹಿಂಬಾಲಿಸಿದರು. \v 40 ಯೇಸು ಆ ಸ್ಥಳದಲ್ಲಿದ್ದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ,” ಎಂದರು. \v 41 ಯೇಸು ಅವರಿಂದ ಒಂದು ಕಲ್ಲೆಸೆಯುವಷ್ಟು ದೂರಹೋಗಿ ಮೊಣಕಾಲೂರಿ, \v 42 “ತಂದೆಯೇ, ನಿಮ್ಮ ಚಿತ್ತವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸಿ. ಆದರೂ ನನ್ನ ಚಿತ್ತವಲ್ಲ ನಿಮ್ಮ ಚಿತ್ತದಂತೆಯೇ ಆಗಲಿ,” ಎಂದು ಪ್ರಾರ್ಥಿಸಿದರು. \v 43 ಆಗ ಪರಲೋಕದಿಂದ ಒಬ್ಬ ದೇವದೂತನು ಯೇಸುವಿಗೆ ಕಾಣಿಸಿಕೊಂಡು, ಅವರನ್ನು ಬಲಪಡಿಸುತ್ತಾ ಇದ್ದನು. \v 44 ಯೇಸು ವೇದನೆಯಲ್ಲಿದ್ದು ಬಹಳ ಆಸಕ್ತಿಯಿಂದ ಪ್ರಾರ್ಥಿಸಿದರು. ಯೇಸುವಿನ ಬೆವರು ನೆಲಕ್ಕೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳಂತಿದ್ದವು. \p \v 45 ಯೇಸು ಪ್ರಾರ್ಥನೆಮಾಡಿ ಎದ್ದ ಮೇಲೆ ತಮ್ಮ ಶಿಷ್ಯರ ಕಡೆಗೆ ಬಂದು, ಅವರು ದುಃಖದಿಂದ ಬಳಲಿ ನಿದ್ರೆ ಮಾಡುತ್ತಿರುವುದನ್ನು ಕಂಡು ಅವರಿಗೆ, \v 46 “ನೀವು ನಿದ್ರೆ ಮಾಡುವುದು ಏಕೆ? ಶೋಧನೆಗೆ ಒಳಗಾಗದಂತೆ ಎದ್ದು ಪ್ರಾರ್ಥಿಸಿರಿ,” ಎಂದರು. \s1 ಯೇಸುವಿನ ಬಂಧನ \p \v 47 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದ ಯೂದನು ಅವರಿಗೆ ಮುಂದಾಳಾಗಿ ಬಂದು, ಮುದ್ದಿಡುವುದಕ್ಕಾಗಿ ಯೇಸುವನ್ನು ಸಮೀಪಿಸಿದನು. \v 48 ಆಗ ಯೇಸು ಅವನಿಗೆ, “ಯೂದಾ, ಮುದ್ದಿನಿಂದ ಮನುಷ್ಯಪುತ್ರನಾದ ನನಗೆ ದ್ರೋಹಮಾಡುತ್ತೀಯೋ?” ಎಂದರು. \p \v 49 ಯೇಸುವಿನ ಸುತ್ತಲಿದ್ದ ಶಿಷ್ಯರು ಮುಂದೆ ಸಂಭವಿಸುವುದನ್ನು ಅರಿತು ಯೇಸುವಿಗೆ, “ಕರ್ತದೇವರೇ, ನಾವು ಖಡ್ಗದಿಂದ ಹೊಡೆಯೋಣವೋ?” ಎಂದು ಕೇಳಿದರು. \v 50 ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು. \p \v 51 ಆದರೆ ಯೇಸು, “ಸಾಕು ಇಂಥದ್ದು ಬೇಡ!” ಎಂದು ಹೇಳಿ, ಅವನ ಕಿವಿಯನ್ನು ಮುಟ್ಟಿ ಸ್ವಸ್ಥಮಾಡಿದರು. \p \v 52 ಆಗ ಯೇಸು ತಮ್ಮ ಬಳಿಗೆ ಬಂದಿದ್ದ ಮುಖ್ಯಯಾಜಕರಿಗೂ ದೇವಾಲಯದ ಕಾವಲಾಧಿಕಾರಿಗಳಿಗೂ ಹಿರಿಯರಿಗೂ, “ದಂಗೆಗಾರನನ್ನು ಹಿಡಿಯುವುದಕ್ಕಾಗಿ ಬಂದ ಹಾಗೆ ಖಡ್ಗಗಳಿಂದಲೂ ದೊಣ್ಣೆಗಳಿಂದಲೂ ನೀವು ಹೊರಟು ಬಂದಿರುವಿರೋ? \v 53 ನಾನು ನಿಮ್ಮ ಸಂಗಡ ಪ್ರತಿದಿನವೂ ದೇವಾಲಯದಲ್ಲಿದ್ದಾಗ, ನೀವು ನನ್ನನ್ನು ಹಿಡಿಯಲಿಲ್ಲ. ಆದರೆ ಇದು ನಿಮ್ಮ ಸಮಯ, ಅಂಧಕಾರ ದೊರೆತನ ಮಾಡುವ ಕಾಲ,” ಎಂದರು. \s1 ಪೇತ್ರನು ಯೇಸುವನ್ನು ಅಲ್ಲಗಳೆದದ್ದು \p \v 54 ಆಗ ಅವರು ಯೇಸುವನ್ನು ಬಂಧಿಸಿ, ಮಹಾಯಾಜಕನ ಭವನಕ್ಕೆ ಕರೆದುಕೊಂಡು ಬಂದರು. ಪೇತ್ರನೋ ದೂರದಿಂದ ಹಿಂಬಾಲಿಸಿದನು. \v 55 ಅವರು ಭವನದ ಹೊರಾಂಗಣದ ನಡುವೆ ಬೆಂಕಿಮಾಡಿ, ಅದರ ಸುತ್ತಲೂ ಒಟ್ಟಾಗಿ ಕುಳಿತುಕೊಂಡಾಗ ಪೇತ್ರನೂ ಅವರ ಸಂಗಡ ಸೇರಿ ಕುಳಿತುಕೊಂಡನು. \v 56 ಆದರೆ ಒಬ್ಬ ದಾಸಿಯು ಬೆಂಕಿಯ ಬಳಿಯಲ್ಲಿ ಕುಳಿತುಕೊಂಡಿದ್ದ ಪೇತ್ರನನ್ನು ದೃಷ್ಟಿಸಿ ನೋಡಿ, “ಈ ಮನುಷ್ಯನು ಸಹ ಯೇಸುವಿನ ಸಂಗಡ ಇದ್ದವನು,” ಎಂದಳು. \p \v 57 ಆದರೆ ಪೇತ್ರನು ಅಲ್ಲಗಳೆದು, “ಅಮ್ಮಾ, ನಾನು ಯೇಸುವನ್ನು ಅರಿಯೆನು,” ಎಂದನು. \p \v 58 ಸ್ವಲ್ಪ ಸಮಯದ ಮೇಲೆ ಮತ್ತೊಬ್ಬನು ಪೇತ್ರನನ್ನು ಕಂಡು, “ನೀನು ಸಹ ಅವರಲ್ಲಿ ಒಬ್ಬನು,” ಎಂದನು. ಅದಕ್ಕೆ ಪೇತ್ರನು, \p “ಇಲ್ಲಪ್ಪ, ನಾನಲ್ಲ,” ಎಂದನು. \p \v 59 ಹೆಚ್ಚು ಕಡಿಮೆ ಒಂದು ತಾಸು ಕಳೆದನಂತರ ಮತ್ತೊಬ್ಬನು, “ನಿಜವಾಗಿಯೂ ಇವನು ಸಹ ಯೇಸುವಿನೊಂದಿಗೆ ಇದ್ದವನು. ಏಕೆಂದರೆ ಇವನು ಗಲಿಲಾಯದವನೇ,” ಎಂದನು. \p \v 60 ಆದರೆ ಪೇತ್ರನು, “ಅಯ್ಯಾ, ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುತ್ತಾಯಿಲ್ಲ,” ಎಂದನು. ಹೀಗೆ ಅವನು ಇನ್ನೂ ಮಾತನಾಡುತ್ತಿರುವಾಗಲೇ ಹುಂಜ ಕೂಗಿತು. \v 61 ಆಗ ಕರ್ತದೇವರು ಹಿಂದಿರುಗಿ ಪೇತ್ರನ ಕಡೆಗೆ ದಿಟ್ಟಿಸಿ ನೋಡಿದರು. “ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ,” ಎಂದು ಕರ್ತದೇವರು ತನಗೆ ಹೇಳಿದ್ದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು \v 62 ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು. \s1 ಕಾವಲುಗಾರರು ಯೇಸುವನ್ನು ಹಾಸ್ಯಮಾಡಿದ್ದು \p \v 63 ಯೇಸುವನ್ನು ಕಾಯುತ್ತಿದ್ದ ಜನರು, ಹಾಸ್ಯಮಾಡಿ ಅವರನ್ನು ಹೊಡೆದರು. \v 64 ಇದಲ್ಲದೆ ಅವರು ಯೇಸುವಿನ ಕಣ್ಣಿಗೆ ಬಟ್ಟೆ ಕಟ್ಟಿ, ಅವರ ಮುಖದ ಮೇಲೆ ಹೊಡೆದು ಯೇಸುವಿಗೆ, “ನಿನ್ನನ್ನು ಹೊಡೆದವರು ಯಾರು? ಪ್ರವಾದನೆ ಹೇಳು,” ಎಂದರು. \v 65 ಅವರು ಯೇಸುವಿಗೆ ವಿರೋಧವಾಗಿ ಅನೇಕ ದೂಷಣೆಯ ಮಾತುಗಳನ್ನಾಡಿದರು. \s1 ಯೇಸು ಪಿಲಾತನ ಹಾಗೂ ಹೆರೋದನ ಮುಂದೆ \p \v 66 ಬೆಳಗಾದ ಕೂಡಲೇ ಜನರ ಹಿರಿಯರೂ ಮುಖ್ಯಯಾಜಕರೂ ನಿಯಮ ಬೋಧಕರೂ ಒಟ್ಟಾಗಿ ಬಂದು ಯೇಸುವನ್ನು ತಮ್ಮ ಆಲೋಚನಾ ಸಭೆಗೆ ಸಾಗಿಸಿಕೊಂಡು ಹೋಗಿ, \v 67 “ನೀನು ಆ ಕ್ರಿಸ್ತನೋ? ನಮಗೆ ಹೇಳು,” ಎಂದರು. \p ಯೇಸು ಅವರಿಗೆ, “ನಾನು ನಿಮಗೆ ಹೇಳಿದರೂ ನೀವು ನಂಬುವುದಿಲ್ಲ. \v 68 ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರ ಕೊಡುವುದಿಲ್ಲ. \v 69 ಆದರೆ ಇಂದಿನಿಂದ ಮನುಷ್ಯಪುತ್ರನಾದ ನಾನು ಸರ್ವಶಕ್ತರಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡಿರುವೆನು,” ಎಂದರು. \p \v 70 ಆಗ ಅವರೆಲ್ಲರೂ, “ಹಾಗಾದರೆ ನೀನು ದೇವರ ಪುತ್ರನೋ?” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ, \p “ನಾನೇ ಆತನು ಎಂದು ನೀವೇ ಹೇಳುತ್ತಿದ್ದೀರಿ,” ಎಂದು ಉತ್ತರಕೊಟ್ಟರು. \p \v 71 ಆಗ ಅವರು, “ನಮಗೆ ಇನ್ನೇನು ಸಾಕ್ಷಿ ಬೇಕು? ನಾವೇ ಈತನ ಬಾಯಿಂದ ಕೇಳಿದ್ದೇವಲ್ಲಾ?” ಎಂದರು. \c 23 \p \v 1 ಆಗ ಅಲ್ಲಿ ಕೂಡಿದ್ದವರೆಲ್ಲರೂ ಎದ್ದು ಯೇಸುವನ್ನು ಪಿಲಾತನ\f + \fr 23:1 \fr*\ft ರೋಮಾ ರಾಜ್ಯಪಾಲನು\ft*\f* ಬಳಿಗೆ ಕರೆದುಕೊಂಡು ಹೋದರು. \v 2 ಅವರು ಯೇಸುವಿನ ಮೇಲೆ ದೂರು ಹೇಳಲಾರಂಭಿಸಿ, “ಈ ನಮ್ಮ ಜನಾಂಗವು ದಂಗೆಯೇಳುವಂತೆಯೂ ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದೂ ಹೇಳಿ ಕೈಸರನಿಗೆ ತೆರಿಗೆ ಕೊಡದಂತೆ ಈತನು ಅಡ್ಡಿಮಾಡುತ್ತಿರುವುದನ್ನೂ ನಾವು ಕಂಡಿದ್ದೇವೆ,” ಎಂದರು. \p \v 3 ಆಗ ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. \p ಅದಕ್ಕೆ ಯೇಸು ಅವರಿಗೆ, “ನೀವೇ ಹೇಳುತ್ತಿದ್ದೀರಿ,” ಎಂದರು. \p \v 4 ತರುವಾಯ ಪಿಲಾತನು, ಮುಖ್ಯಯಾಜಕರಿಗೂ ಜನರಿಗೂ, “ಈ ಮನುಷ್ಯನಲ್ಲಿ ನಾನು ಯಾವ ತಪ್ಪನ್ನೂ ಕಾಣಲಿಲ್ಲ,” ಎಂದನು. \p \v 5 ಅದಕ್ಕೆ ಅವರು, “ಈತನು ಗಲಿಲಾಯ ಪ್ರಾಂತ ಮೊದಲುಗೊಂಡು ಈ ಸ್ಥಳದವರೆಗೂ ಯೂದಾಯ ಪ್ರಾಂತದ ಎಲ್ಲಾ ಕಡೆಗೂ ಬೋಧಿಸುತ್ತಾ, ಜನರನ್ನು ಕ್ರಾಂತಿಗೆ ಪ್ರೇರೇಪಿಸುತ್ತಿದ್ದಾನೆ,” ಎಂದು ಒತ್ತಾಯ ಪೂರ್ವಕವಾಗಿ ಹೇಳಿದರು. \p \v 6 ಪಿಲಾತನು ಗಲಿಲಾಯದ ವಿಷಯವಾಗಿ ಕೇಳಿದಾಗ, “ಈ ಮನುಷ್ಯನು ಗಲಿಲಾಯದವನೋ?” ಎಂದು ವಿಚಾರಿಸಿದನು. \v 7 ಯೇಸು ಹೆರೋದನ ಅಧಿಕಾರಕ್ಕೆ ಸಂಬಂಧ ಪಟ್ಟವನೆಂದು ತಿಳಿದ ಕೂಡಲೇ ಅದೇ ಸಮಯದಲ್ಲಿ ಯೆರೂಸಲೇಮಿನಲ್ಲಿಯೇ ಇದ್ದ ಹೆರೋದನ ಬಳಿಗೆ ಯೇಸುವನ್ನು ಕಳುಹಿಸಿದನು. \p \v 8 ಹೆರೋದನು ಯೇಸುವನ್ನು ಕಂಡಾಗ, ಅತ್ಯಂತ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ, ಅವರನ್ನು ಕಾಣಲು ಬಹಳ ಕಾಲದಿಂದ ಆಶೆಪಟ್ಟಿದ್ದನು. ಅವರಿಂದಾಗುವ ಸೂಚಕಕಾರ್ಯವನ್ನು ಕಾಣಲು ನಿರೀಕ್ಷಿಸುತ್ತಿದ್ದನು. \v 9 ಅವನು ಯೇಸುವನ್ನು ಅನೇಕ ಪ್ರಶ್ನೆಗಳನ್ನು ಕೇಳಿದರೂ ಯೇಸು ಅವನಿಗೆ ಏನೂ ಉತ್ತರ ಕೊಡಲಿಲ್ಲ. \v 10 ಮುಖ್ಯಯಾಜಕರೂ ನಿಯಮ ಬೋಧಕರು ನಿಂತುಕೊಂಡು ಬಲವಾಗಿ ಯೇಸುವಿನ ಮೇಲೆ ದೂರುಗಳನ್ನು ಹೇಳುತ್ತಿದ್ದರು. \v 11 ಆಗ ಹೆರೋದನು ತನ್ನ ಸೈನಿಕರೊಂದಿಗೆ ಯೇಸುವನ್ನು ತಿರಸ್ಕರಿಸಿ, ಹಾಸ್ಯಮಾಡಿ, ಅವರ ಮೇಲೆ ರಾಜವಸ್ತ್ರವನ್ನು ಹೊದಿಸಿ ಅವರನ್ನು ತಿರುಗಿ ಪಿಲಾತನ ಬಳಿಗೆ ಕಳುಹಿಸಿದನು. \v 12 ಪಿಲಾತನೂ ಹೆರೋದನೂ ಅದೇ ದಿನದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾದರು. ಏಕೆಂದರೆ ಅದುವರೆಗೂ ಅವರು ವೈರಿಗಳಾಗಿದ್ದರು. \p \v 13 ಪಿಲಾತನು ಮುಖ್ಯಯಾಜಕರನ್ನೂ ಅಧಿಕಾರಿಗಳನ್ನೂ ಜನರನ್ನೂ ಒಟ್ಟಾಗಿ ಕರೆಯಿಸಿ ಅವರಿಗೆ, \v 14 “ಜನರು ತಿರುಗಿ ಬೀಳುವಂತೆ ಮಾಡುತ್ತಾನೆಂದು ನೀವು ಈತನನ್ನು ನನ್ನ ಬಳಿಗೆ ತಂದಿದ್ದೀರಿ. ಇಗೋ, ನೀವು ಈತನ ಮೇಲೆ ತಂದಿರುವ ದೂರುಗಳನ್ನು ನಾನು ನಿಮ್ಮ ಮುಂದೆಯೇ ವಿಚಾರಿಸಿದಾಗ ಈತನಲ್ಲಿ ನನಗೆ ಯಾವ ಅಪರಾಧವೂ ಕಾಣಲಿಲ್ಲ. \v 15 ಮಾತ್ರವಲ್ಲದೆ, ಈತನನ್ನು ನಮ್ಮ ಬಳಿಗೆ ಕಳುಹಿಸಿದ ಹೆರೋದ ಅರಸನಿಗೂ ಸಹ ಈತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ. ಇಗೋ, ಈತನಲ್ಲಿ ಮರಣಕ್ಕೆ ಯೋಗ್ಯವಾದದ್ದೇನೂ ಕಾಣಲಿಲ್ಲ. \v 16 ಹೀಗಿರುವುದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು. \v 17 \it ಏಕೆಂದರೆ ಅಧಿಪತಿಯು ಸೆರೆಯಾಳು ಒಬ್ಬನನ್ನು ಹಬ್ಬದಲ್ಲಿ ಜನರಿಗೋಸ್ಕರ ಬಿಡಿಸುವುದು ಪದ್ಧತಿಯಾಗಿತ್ತು.\it*\f + \fr 23:17 \fr*\ft ಕೆಲವು ಮೂಲ ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.\ft*\f* \p \v 18 ಆಗ ಅವರೆಲ್ಲರೂ ಆ ಕ್ಷಣವೇ, “ಈತನಿಗೆ ಮರಣದಂಡನೆ ವಿಧಿಸಿರಿ, ನಮಗೆ ಬರಬ್ಬನನ್ನು ಬಿಡುಗಡೆಮಾಡು,” ಎಂದು ಬೊಬ್ಬೆಹಾಕಿದರು. \v 19 ಬರಬ್ಬನು ಪಟ್ಟಣದಲ್ಲಿ ನಡೆದ ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಿದವನಾಗಿದ್ದನು. \p \v 20 ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿ ಮತ್ತೊಮ್ಮೆ ಜನರಲ್ಲಿ ಮನವಿ ಮಾಡಿಕೊಂಡನು. \v 21 ಅವರಾದರೋ, “ಈತನನ್ನು ಶಿಲುಬೆಗೆ ಹಾಕಿಸು, ಈತನನ್ನು ಶಿಲುಬೆಗೆ ಹಾಕಿಸು!” ಎಂದು ಆರ್ಭಟಿಸತೊಡಗಿದರು. \p \v 22 ಪಿಲಾತನು ಮೂರನೆಯ ಸಾರಿ ಅವರಿಗೆ, “ಏಕೆ? ಈತನು ಮಾಡಿದ ಅಪರಾಧವೇನು? ಈತನಲ್ಲಿ ಮರಣದಂಡನೆಗೆ ಕಾರಣವಾದದ್ದೇನೂ ನನಗೆ ಕಾಣಲಿಲ್ಲ. ಆದ್ದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು. \p \v 23 ಆದರೆ ಯೇಸುವನ್ನು ಶಿಲುಬೆಗೆ ಹಾಕಿಸಬೇಕೆಂದು ಜನರು ಆರ್ಭಟಿಸುತ್ತಾ, ಒತ್ತಾಯಮಾಡಿದರು. ಹೀಗೆ ಅವರ ಕೂಗಾಟವೇ ಗೆದ್ದಿತು. \v 24 ಪಿಲಾತನು ಅವರು ಕೇಳಿಕೊಂಡಂತೆಯೇ ಆಗಲಿ ಎಂದು ನಿರ್ಣಯಿಸಿದನು. \v 25 ಇದಲ್ಲದೆ ಪಿಲಾತನು ಜನರು ಬರಬ್ಬನನ್ನು ಎಂದರೆ, ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಿದವನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನೋ ಅವರ ಇಷ್ಟಕ್ಕೆ ಒಪ್ಪಿಸಿದನು. \s1 ಯೇಸುವನ್ನು ಶಿಲುಬೆಗೆ ಹಾಕಿದ್ದು \p \v 26 ಸೈನಿಕರು ಯೇಸುವನ್ನು ತೆಗೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆದ\f + \fr 23:26 \fr*\ft ಉತ್ತರ ಆಫ್ರಿಕದ ಈಗಿನ \ft*\fqa ಲಿಬಿಯದ \fqa*\ft ಒಂದು ಊರು\ft*\f* ಸೀಮೋನನೆಂಬವನನ್ನು ಹಿಡಿದು, ಅವನ ಮೇಲೆ ಶಿಲುಬೆಯನ್ನು ಹೊರಿಸಿ, ಯೇಸುವಿನ ಹಿಂದೆ ಹೊತ್ತುಕೊಂಡು ಹೋಗುವಂತೆ ಮಾಡಿದರು. \v 27 ಜನರ ಮಹಾ ಸಮೂಹ ಯೇಸುವಿನ ಹಿಂದೆ ಹೊರಟಿತು. ಅವರಲ್ಲಿ ಯೇಸುವಿಗಾಗಿ ಶೋಕಿಸುತ್ತಾ, ಗೋಳಾಡುತ್ತಿದ್ದ ಮಹಿಳೆಯರು ಸಹ ಇದ್ದರು. \v 28 ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಪುತ್ರಿಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿ ಅಳಿರಿ. \v 29 ಏಕೆಂದರೆ, ‘ಇಗೋ, ಬಂಜೆಯರೂ ಹೆರದವರೂ ಹಾಲು ಕುಡಿಸದವರೂ ಧನ್ಯರು,’ ಎಂದು ಜನರು ಹೇಳುವ ದಿವಸಗಳು ಬರುತ್ತವೆ. \v 30 ಆಗ ಅವರು, \q1 “ ‘ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ!” \q2 ಗುಡ್ಡಗಳಿಗೆ, “ನಮ್ಮನ್ನು ಮುಚ್ಚಿಕೊಳ್ಳಿರಿ!” ’\f + \fr 23:30 \fr*\ft \+xt ಹೋಶೇ 10:8\+xt*\ft*\f* \m ಎಂದು ಹೇಳಲಾರಂಭಿಸುವರು. \v 31 ಅವರು ಹಸಿ ಮರಕ್ಕೆ ಇವುಗಳನ್ನು ಮಾಡಿದರೆ, ಒಣ ಮರಕ್ಕೆ ಇನ್ನೇನು ಮಾಡಿಯಾರು?” ಎಂದರು. \p \v 32 ಅಪರಾಧಿಗಳಾದ ಬೇರೆ ಇಬ್ಬರನ್ನು ಕೂಡ ಯೇಸುವಿನೊಂದಿಗೆ ಮರಣದಂಡನೆಗಾಗಿ ಕರೆದುಕೊಂಡು ಹೋದರು. \v 33 ಅವರು “ತಲೆಬುರುಡೆಯ ಸ್ಥಳ” ಎಂದು ಕರೆಯಲಾಗುವ ಸ್ಥಳಕ್ಕೆ ಬಂದಾಗ, ಅಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದರು. ಆ ಅಪರಾಧಿಗಳಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿ ಮತ್ತೊಬ್ಬನನ್ನು ಅವರ ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು. \v 34 ಆಗ ಯೇಸು, “ತಂದೆಯೇ, ಇವರನ್ನು ಕ್ಷಮಿಸಿ, ತಾವು ಏನು ಮಾಡುತ್ತಿದ್ದಾರೆಂದು ಅರಿಯರು,” ಎಂದರು. ಸೈನಿಕರಾದರೋ ಯೇಸುವಿನ ಉಡುಪನ್ನು ಚೀಟುಹಾಕಿ, ಹಂಚಿಕೊಂಡರು. \p \v 35 ಜನರು ನೋಡುತ್ತಾ ನಿಂತುಕೊಂಡಿದ್ದರು. ಅವರೊಂದಿಗೆ ಅಧಿಕಾರಿಗಳು ಸಹ ಯೇಸುವನ್ನು ಅಪಹಾಸ್ಯಮಾಡಿ, “ಬೇರೆಯವರನ್ನು ರಕ್ಷಿಸಿದ ಈತನು ದೇವರು ಆರಿಸಿಕೊಂಡ ಕ್ರಿಸ್ತನಾಗಿದ್ದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು. \p \v 36 ಸೈನಿಕರು ಸಹ ಯೇಸುವಿನ ಬಳಿಗೆ ಬಂದು ಅವರನ್ನು ಹಾಸ್ಯಮಾಡಿ ಯೇಸುವಿಗೆ ಹುಳಿರಸವನ್ನು ಕೊಟ್ಟು, \v 37 “ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೋ,” ಎಂದರು. \p \v 38 ಯೇಸುವಿನ ಶಿಲುಬೆಯ ಮೇಲ್ಗಡೆಯಲ್ಲಿ ಒಂದು ಲಿಖಿತ ಹೀಗಿತ್ತು: \pc \sc ಈತನು ಯೆಹೂದ್ಯರ ಅರಸನು.\sc* \p \v 39 ಶಿಲುಬೆಗೆ ಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು, ನಮ್ಮನ್ನೂ ರಕ್ಷಿಸು,” ಎಂದು ಯೇಸುವನ್ನು ದೂಷಿಸಿದನು. \p \v 40 ಆದರೆ ಮತ್ತೊಬ್ಬ ಅಫರಾಧಿಯು ಅವನನ್ನು ಖಂಡಿಸುತ್ತಾ, “ನೀನು ಇದೇ ದಂಡನೆಗೆ ಗುರಿಯಾಗಿದ್ದರೂ ದೇವರಿಗೆ ಭಯಪಡುವುದಿಲ್ಲವೋ? \v 41 ನಮಗಾದರೋ ನಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆ ನ್ಯಾಯವಾಗಿ ಸಿಕ್ಕಿದೆ. ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ,” ಎಂದನು. \p \v 42 ಬಳಿಕ ಅವನು, “ಯೇಸುವೇ, ನೀವು ನಿಮ್ಮ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪುಮಾಡಿಕೊಳ್ಳಿರಿ,” ಎಂದನು. \p \v 43 ಆಗ ಯೇಸು ಅವನಿಗೆ, “ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ\f + \fr 23:43 \fr*\fq ಪರದೈಸ \fq*\ft ಅಂದರೆ \ft*\fqa ಆನಂದದ ಪರಮ ಸ್ಥಳ\fqa*\f* ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು. \s1 ಯೇಸುವಿನ ಮರಣ \p \v 44 ಆಗ ಸುಮಾರು ಮಧ್ಯಾಹ್ನವಾಗಿತ್ತು, ಆ ಹೊತ್ತಿನಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. \v 45 ಸೂರ್ಯನು ಕಳೆಗುಂದಿದನು ಮತ್ತು ದೇವಾಲಯದ ತೆರೆಯು ಹರಿದು ಎರಡು ಭಾಗವಾಯಿತು. \v 46 ಯೇಸು ಮಹಾಧ್ವನಿಯಿಂದ, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ,”\f + \fr 23:46 \fr*\ft \+xt ಕೀರ್ತನೆ 31:5\+xt*\ft*\f* ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು. \p \v 47 ಆಗ ಶತಾಧಿಪತಿಯು, ನಡೆದದ್ದನ್ನು ಕಂಡು, “ಈತನು ನೀತಿವಂತನೇ ಸರಿ,” ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು. \v 48 ಆ ದೃಶ್ಯವನ್ನು ಕಾಣಲು ಬಂದ ಜನರು ನಡೆದ ಘಟನೆಗಳನ್ನು ಕಂಡು, ತಮ್ಮ ಎದೆಗಳನ್ನು ಬಡಿದುಕೊಂಡು ಹಿಂದಿರುಗಿ ಹೋದರು. \v 49 ಯೇಸುವಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯದಿಂದ ಅವರನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು. \s1 ಯೇಸುವನ್ನು ಸಮಾಧಿಯಲ್ಲಿ ಇಟ್ಟಿದ್ದು \p \v 50 ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು, ಇವನು ಆಲೋಚನಾ ಸಭೆಯವನೂ ಒಳ್ಳೆಯವನೂ ಮತ್ತು ನೀತಿವಂತನೂ ಆಗಿದ್ದನು. \v 51 ಇವನು ಅವರ ತೀರ್ಮಾನಕ್ಕೂ ಕೃತ್ಯಕ್ಕೂ ಒಪ್ಪಿಕೊಂಡಿರಲಿಲ್ಲ. ಇವನು ಯೆಹೂದ್ಯರ ಪಟ್ಟಣವಾದ ಅರಿಮಥಾಯದವನೂ ದೇವರ ರಾಜ್ಯಕ್ಕಾಗಿ ಎದುರುನೋಡುವವನೂ ಆಗಿದ್ದನು. \v 52 ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ಕೊಡಲು ಬೇಡಿಕೊಂಡನು. \v 53 ತರುವಾಯ ಇವನು ಶರೀರವನ್ನು ಕೆಳಗೆ ಇಳಿಸಿ, ನಾರುಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಇಟ್ಟನು, ಅದರಲ್ಲಿ ಅದುವರೆಗೆ ಯಾರನ್ನೂ ಇಟ್ಟಿರಲಿಲ್ಲ. \v 54 ಅಂದು ಸಿದ್ಧತೆಯ ದಿನವಾಗಿತ್ತು.\f + \fr 23:54 \fr*\ft ಸಬ್ಬತ್ ದಿನ ಶನಿವಾರವಾಗಿತ್ತು, ಆದರೆ ಸಿದ್ಧತೆಯ ದಿನ ಶುಕ್ರವಾರವಾಗಿತ್ತು\ft*\f* ಸಬ್ಬತ್ ದಿನ ಪ್ರಾರಂಭವಾಗಲಿತ್ತು. \p \v 55 ಗಲಿಲಾಯದಿಂದ ಯೇಸುವಿನೊಂದಿಗೆ ಬಂದ ಸ್ತ್ರೀಯರು ಅರಿಮಥಾಯದ ಯೋಸೇಫನೊಂದಿಗೆ ಹೋಗಿ, ಸಮಾಧಿಯನ್ನೂ ದೇಹವನ್ನು ಅದರಲ್ಲಿಟ್ಟ ರೀತಿಯನ್ನೂ ನೋಡಿದರು. \v 56 ಅವರು ಮನೆಗೆ ಹಿಂತಿರುಗಿ ಪರಿಮಳ ದ್ರವ್ಯವನ್ನೂ ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡರು; ಆದರೆ ಮೋಶೆಯ ಆಜ್ಞಾನುಸಾರವಾಗಿ ಸಬ್ಬತ್ ದಿನದಲ್ಲಿ ವಿಶ್ರಮಿಸಿಕೊಂಡರು. \c 24 \s1 ಯೇಸುವಿನ ಪುನರುತ್ಥಾನ \p \v 1 ವಾರದ ಮೊದಲನೆಯ ದಿನದ, ಬೆಳಗಿನ ಜಾವದಲ್ಲಿ, ಆ ಸ್ತ್ರೀಯರು ಸಿದ್ಧಪಡಿಸಿದ್ದ ಪರಿಮಳ ದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಹೋದರು. \v 2 ಆಗ ಸಮಾಧಿಯಿಂದ ಬಂಡೆ ಉರುಳಿಸಲಾಗಿದ್ದನ್ನು ಅವರು ಕಂಡರು, \v 3 ಅವರು ಅದರ ಒಳಗೆ ಪ್ರವೇಶಿಸಿದಾಗ, ಅಲ್ಲಿ ಕರ್ತದೇವರು ಯೇಸುವಿನ ದೇಹವನ್ನು ಕಾಣಲಿಲ್ಲ. \v 4 ಅವರು ಬಹಳವಾಗಿ ಗಲಿಬಿಲಿಗೊಂಡರು. ಆಗ ಮಿಂಚಿನಂತೆ ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿ ನಿಂತಿದ್ದರು. \v 5 ಆ ಸ್ತ್ರೀಯರು ಭಯಪಟ್ಟು ತಮ್ಮ ದೃಷ್ಟಿಯನ್ನು ನೆಲದ ಕಡೆಗೆ ನಾಟಿರಲು, ಆ ಪುರುಷರು ಅವರಿಗೆ, “ಜೀವಿಸುವವರನ್ನು ಸತ್ತವರೊಳಗೆ ನೀವು ಏಕೆ ಹುಡುಕುತ್ತೀರಿ? \v 6 ಅವರು ಇಲ್ಲಿಲ್ಲ; ಜೀವಂತರಾಗಿ ಎದ್ದಿದ್ದಾರೆ! ಅವರು ಇನ್ನೂ ಗಲಿಲಾಯದಲ್ಲಿದ್ದಾಗಲೇ: \v 7 ‘ಮನುಷ್ಯಪುತ್ರನಾದ ನಾನು ಪಾಪಿಷ್ಠರ ಕೈಗೆ ಒಪ್ಪಿಸಿದವನಾಗಿ, ಶಿಲುಬೆಗೆ ಹಾಕಲಾಗಿ ಮೂರನೆಯ ದಿನದಲ್ಲಿ ತಿರುಗಿ ಜೀವಂತನಾಗಿ ಏಳುವೆನು,’ ಎಂದು ನಿಮಗೆ ಹೇಳಿದ್ದನ್ನು ನೀವು ನೆನಪುಮಾಡಿಕೊಳ್ಳಿರಿ,” ಎಂದರು. \v 8 ಆಗ ಆ ಸ್ತ್ರೀಯರು ಯೇಸುವಿನ ಮಾತುಗಳನ್ನು ನೆನಪು ಮಾಡಿಕೊಂಡರು. \p \v 9 ಸಮಾಧಿಯಿಂದ ಆ ಸ್ತ್ರೀಯರು ಹಿಂತಿರುಗಿ ಹೋಗಿ, ಆ ಹನ್ನೊಂದು ಮಂದಿಗೂ ಉಳಿದವರೆಲ್ಲರಿಗೂ ಈ ಎಲ್ಲಾ ವಿಷಯಗಳನ್ನು ತಿಳಿಸಿದರು. \v 10 ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿ ಮರಿಯಳು ಮತ್ತು ಅವರೊಂದಿಗಿದ್ದ ಬೇರೆ ಸ್ತ್ರೀಯರು ಅಪೊಸ್ತಲರಿಗೆ ಈ ವಿಷಯಗಳನ್ನು ಹೇಳಿದರು. \v 11 ಅವರಿಗಾದರೋ ಈ ಸ್ತ್ರೀಯರು ಹೇಳಿದ್ದು ಕಟ್ಟು ಕಥೆಗಳಂತೆ ಕಂಡವು, ಅವರು ಅವುಗಳನ್ನು ನಂಬಲಿಲ್ಲ. \v 12 ಆಗ ಪೇತ್ರನು ಎದ್ದು, ಸಮಾಧಿ ಬಳಿಗೆ ಓಡಿಹೋಗಿ, ಅದರೊಳಗೆ ಬಗ್ಗಿ ನೋಡಿದಾಗ, ಅಲ್ಲಿ ನಾರುಬಟ್ಟೆಗಳು ಮಾತ್ರ ಬಿದ್ದಿರುವುದನ್ನು ಕಂಡು ನಡೆದ ಸಂಭವಕ್ಕಾಗಿ ತನ್ನೊಳಗೆ ಆಶ್ಚರ್ಯಪಡುತ್ತಾ ಹೊರಟುಹೋದನು. \s1 ಎಮ್ಮಾಹುವಿನ ದಾರಿಯಲ್ಲಿ ಯೇಸು \p \v 13 ಅದೇ ದಿನ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಹನ್ನೊಂದು ಕಿಲೋಮೀಟರು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಿದ್ದರು. \v 14 ಅವರು ನಡೆದ ಈ ಎಲ್ಲಾ ಸಂಭವಗಳ ಕುರಿತಾಗಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದರು. \v 15 ಅವರು ಮಾತನಾಡಿಕೊಂಡು ಚರ್ಚಿಸುತ್ತಾ ಹೋಗಲು, ಯೇಸು ತಾವೇ ಅವರನ್ನು ಸಮೀಪಿಸಿ ಅವರ ಜೊತೆಯಲ್ಲಿ ಹೋದರು; \v 16 ಆದರೆ ಅವರಿಗೆ ತಿಳಿಯದ ಹಾಗೆ ಕಣ್ಣಿಗೆ ಮರೆಯಾಗಿದ್ದರಿಂದ ಅವರು ಯೇಸುವಿನ ಗುರುತು ಹಿಡಿಯಲಿಲ್ಲ. \p \v 17 ಆಗ ಯೇಸು ಅವರಿಗೆ, “ನೀವು ದಾರಿಯಲ್ಲಿ ಒಬ್ಬರಿಗೊಬ್ಬರು ಚರ್ಚೆಮಾಡಿಕೊಂಡು ಹೋಗುತ್ತಿದ್ದೀರಲ್ಲಾ ಏನು ವಿಷಯ?” ಎಂದು ಕೇಳಿದರು. \p ಅವರು ತಕ್ಷಣವೇ ನಿಂತರು, ಅವರ ಮುಖ ದುಖಃಭರಿತವಾಗಿತ್ತು. \v 18 ಆಗ ಅವರಲ್ಲಿ ಒಬ್ಬನಾದ, ಕ್ಲೆಯೊಫ ಎಂಬುವನು ಯೇಸುವಿಗೆ, “ಇತ್ತೀಚೆಗೆ ಯೆರೂಸಲೇಮಿನೊಳಗೆ ನಡೆದಿರುವ ಘಟನೆಗಳನ್ನು ತಿಳಿಯದ ಪರಸ್ಥಳದವನು ನೀನೊಬ್ಬನೇ ಆಗಿದ್ದೀಯಾ?” ಎಂದು ಕೇಳಿದನು. \p \v 19 ಅದಕ್ಕೆ ಯೇಸು ಅವರಿಗೆ, “ಯಾವ ಘಟನೆ?” ಎಂದು ಕೇಳಲು, \p ಅವರು ಯೇಸುವಿಗೆ, “ನಜರೇತಿನ ಯೇಸುವಿನ ವಿಷಯಗಳೇ, ಅವರು ಕೃತ್ಯಗಳಲ್ಲಿಯೂ ಮಾತುಗಳಲ್ಲಿಯೂ ದೇವರ ದೃಷ್ಟಿಯಲ್ಲಿಯೂ ಜನರೆಲ್ಲರ ದೃಷ್ಟಿಯಲ್ಲಿಯೂ ಬಹುಶಕ್ತಿವಂತರಾಗಿದ್ದ ಪ್ರವಾದಿಯಾಗಿದ್ದರು. \v 20 ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಯೇಸುವನ್ನು ಮರಣದಂಡನೆಗೆ ಒಪ್ಪಿಸಿಕೊಟ್ಟು, ಅವರನ್ನು ಶಿಲುಬೆಗೆ ಹಾಕಿದರು. \v 21 ಆದರೆ ಇಸ್ರಾಯೇಲರನ್ನು ವಿಮೋಚಿಸುವವರು ಆ ಯೇಸುವೇ ಎಂದು ನಾವು ನಂಬಿಕೊಂಡಿದ್ದೆವು. ಇದಲ್ಲದೆ ಈ ಘಟನೆಗಳು ನಡೆದು ಇದು ಮೂರನೆಯ ದಿನವಾಗಿದೆ. \v 22 ನಮ್ಮವರಲ್ಲಿ, ಕೆಲವು ಸ್ತ್ರೀಯರು ಇಂದು ಬೆಳಗಿನ ಜಾವದಲ್ಲಿ ಸಮಾಧಿಗೆ ಹೋಗಿದ್ದರು. \v 23 ಅಲ್ಲಿ ಅವರು ಯೇಸುವಿನ ದೇಹವನ್ನು ಕಾಣದೆ ಬಂದು, ಯೇಸು ಜೀವದಿಂದ ಎದ್ದಿದ್ದಾರೆ, ಎಂದು ಹೇಳಿದ ದೇವದೂತರನ್ನೂ ಕಂಡಿದ್ದ ದೃಶ್ಯವನ್ನೂ ನಮಗೆ ಹೇಳಿದರು. \v 24 ಇದಲ್ಲದೆ ನಮ್ಮೊಂದಿಗಿದ್ದ ಕೆಲವರು ಸಮಾಧಿಗೆ ಹೋಗಿ, ಆ ಸ್ತ್ರೀಯರು ಹೇಳಿದ್ದನ್ನೇ ಕಂಡರು. ಆದರೆ ಅವರು ಯೇಸುವನ್ನು ಮಾತ್ರ ಕಾಣಲಿಲ್ಲ,” ಎಂದರು. \p \v 25 ಆಗ ಯೇಸು ಅವರಿಗೆ, “ಎಂಥ ಬುದ್ಧಿಹೀನರು ನೀವು, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬುವುದರಲ್ಲಿ ಮಂದ ಹೃದಯದವರೇ! \v 26 ಶ್ರಮೆಗಳನ್ನು ಅನುಭವಿಸಿದ ಮೇಲೆ ಕ್ರಿಸ್ತನು ಮಹಿಮೆಯಲ್ಲಿ ಪ್ರವೇಶಿಸುವುದು ಅಗತ್ಯವಾಗಿತ್ತಲ್ಲವೇ?” ಎಂದು ಹೇಳಿ, \v 27 ಮೋಶೆಯ ಮತ್ತು ಎಲ್ಲಾ ಪ್ರವಾದಿಗಳಿಂದ ಆರಂಭಿಸಿ, ಪವಿತ್ರ ವೇದಗಳಲ್ಲಿ ತನ್ನ ವಿಷಯವಾಗಿ ಬರೆದವುಗಳನ್ನು ಯೇಸು ಅವರಿಗೆ ವಿವರಿಸಿದರು. \p \v 28 ಅವರು ಹೋಗಬೇಕಾಗಿದ್ದ ಹಳ್ಳಿಯನ್ನು ಸಮೀಪಿಸುತ್ತಿದ್ದಾಗ, ಯೇಸು ಮುಂದೆ ಹೋಗುವವರಂತೆ ವರ್ತಿಸಿದರು. \v 29 ಆದರೆ ಅವರು ಯೇಸುವಿಗೆ, “ನಮ್ಮೊಂದಿಗೆ ಇರು, ಈಗ ಸಂಜೆಯಾಯಿತು. ಕತ್ತಲಾಯಿತು,” ಎಂದು ಹೇಳಿ, ಆತನನ್ನು ಬಲವಂತ ಮಾಡಿದರು. ಆಗ ಯೇಸು ಅವರೊಂದಿಗೆ ಇರುವುದಕ್ಕಾಗಿ ಹೋದರು. \p \v 30 ಯೇಸು ಆ ಇಬ್ಬರು ಶಿಷ್ಯರೊಂದಿಗೆ ಊಟಕ್ಕೆ ಕುಳಿತುಕೊಂಡಿರಲು ರೊಟ್ಟಿಯನ್ನು ತೆಗೆದುಕೊಂಡು ಆಶೀರ್ವದಿಸಿ, ಮುರಿದು ಅವರಿಗೆ ಕೊಟ್ಟರು. \v 31 ಆಗ ಅವರ ಕಣ್ಣುಗಳು ತೆರೆದವು. ಅವರು ಯೇಸುವಿನ ಗುರುತು ಹಿಡಿದರು ಮತ್ತು ಯೇಸು ಅವರ ದೃಷ್ಟಿಗೆ ಅದೃಶ್ಯರಾದರು. \v 32 ಅವರು ಒಬ್ಬರಿಗೊಬ್ಬರು, “ಅವರು ದಾರಿಯಲ್ಲಿ ನಮ್ಮ ಕೂಡ ಮಾತನಾಡುತ್ತಾ, ಪವಿತ್ರ ವೇದವನ್ನು ನಮಗೆ ವಿವರಿಸಿದಾಗ ನಮ್ಮ ಹೃದಯವು ಬೆಂಕಿಯಂತೆ ದಹಿಸಿತಲ್ಲವೇ?” ಎಂದುಕೊಂಡರು. \p \v 33 ಆ ಇಬ್ಬರು ಶಿಷ್ಯರು ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರೊಂದಿಗಿದ್ದವರೂ ಒಟ್ಟಾಗಿ ಕೂಡಿಕೊಂಡಿರುವುದನ್ನು ಕಂಡರು. \v 34 ಅಲ್ಲಿದ್ದವರು, “ಇದು ನಿಜವೇ! ಕರ್ತದೇವರು ಜೀವಂತರಾಗಿ ಎದ್ದಿದ್ದಾರೆ ಮತ್ತು ಸೀಮೋನನಿಗೆ ಕಾಣಿಸಿಕೊಂಡಿದ್ದಾರೆ,” ಎಂದು ಹೇಳಿದರು. \v 35 ಆಗ ಆ ಇಬ್ಬರು ಶಿಷ್ಯರು ದಾರಿಯಲ್ಲಿ ನಡೆದವುಗಳನ್ನೂ ರೊಟ್ಟಿ ಮುರಿಯುವುದರಲ್ಲಿ ಅವರು ಹೇಗೆ ಯೇಸುವಿನ ಗುರುತು ಹಿಡಿದರೆಂದೂ ವಿವರಿಸಿದರು. \s1 ಯೇಸು ಶಿಷ್ಯರಿಗೆ ಕಾಣಿಸಿಕೊಂಡದ್ದು \p \v 36 ಅವರೆಲ್ಲರೂ ಹೀಗೆ ಮಾತನಾಡುತ್ತಿರುವಾಗ, ಯೇಸು ತಾವೇ ಅವರ ನಡುವೆ ನಿಂತು ಅವರಿಗೆ, “ನಿಮಗೆ ಸಮಾಧಾನವಾಗಲಿ,” ಎಂದರು. \p \v 37 ಅವರು ತಾವು ಕಾಣುತ್ತಿರುವುದು ಭೂತವೆಂದು ಭಾವಿಸಿ, ದಿಗಿಲುಬಿದ್ದು ಭಯಹಿಡಿದವರಾದರು. \v 38 ಆದರೆ ಯೇಸು ಅವರಿಗೆ, “ಏಕೆ ನೀವು ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಸಂಶಯಗಳು ಹುಟ್ಟುವುದು ಏಕೆ? \v 39 ನನ್ನ ಕೈಗಳನ್ನು ಮತ್ತು ನನ್ನ ಕಾಲುಗಳನ್ನು ನೋಡಿರಿ. ನಾನೇ ಆತನು! ನನ್ನನ್ನು ಮುಟ್ಟಿ ನೋಡಿರಿ; ನೀವು ಕಾಣುವಂತೆ ನನಗಿರುವ ಮಾಂಸ ಮತ್ತು ಎಲುಬುಗಳು ಭೂತಕ್ಕೆ ಇಲ್ಲ,” ಎಂದರು. \p \v 40 ಹೀಗೆ ಯೇಸು ಮಾತನಾಡಿದ ಮೇಲೆ, ತನ್ನ ಕೈಗಳನ್ನು ತನ್ನ ಕಾಲುಗಳನ್ನು ಅವರಿಗೆ ತೋರಿಸಿದರು. \v 41 ಆದರೆ ಅವರು ಸಂತೋಷದ ನಿಮಿತ್ತವಾಗಿ ಇನ್ನೂ ನಂಬದೆ ಆಶ್ಚರ್ಯಪಡುತ್ತಿರುವಾಗ ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದರು. \v 42 ಅವರು ಯೇಸುವಿಗೆ ಒಂದು ತುಂಡು ಸುಟ್ಟ ಮೀನನ್ನು ಕೊಟ್ಟರು. \v 43 ಯೇಸು ತೆಗೆದುಕೊಂಡು ಅವರ ಮುಂದೆ ತಿಂದರು. \p \v 44 ಯೇಸು ಶಿಷ್ಯರಿಗೆ, “ಮೋಶೆಯ ನಿಯಮದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆದಿರುವುದೆಲ್ಲವೂ ನೆರವೇರುವುದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ನಿಮಗೆ ಹೇಳಿದ್ದೇನೆ,” ಎಂದರು. \p \v 45 ತರುವಾಯ ಅವರು ಪವಿತ್ರ ವೇದಗಳನ್ನು ಅರ್ಥಮಾಡಿಕೊಳ್ಳುವಂತೆ ಯೇಸು ಅವರ ಬುದ್ಧಿಯನ್ನು ತೆರೆದರು. \v 46 ಯೇಸು ಅವರಿಗೆ, “ಕ್ರಿಸ್ತನು ಹೀಗೆ ಬಾಧೆಪಟ್ಟು ಸತ್ತವರೊಳಗಿಂದ ಮೂರನೆಯ ದಿನದಲ್ಲಿ ಎದ್ದು ಬರುವುದು ಅಗತ್ಯವಾಗಿತ್ತೆಂತಲೂ \v 47 ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವರೊಳಗೆ ಆತನ ಹೆಸರಿನಲ್ಲಿ ಪಶ್ಚಾತ್ತಾಪಪಟ್ಟು ಮತ್ತು ಪಾಪಗಳ ಕ್ಷಮಾಪಣೆ ಸಾರಬೇಕೆಂತಲೂ ಬರೆಯಲಾಗಿದೆ. \v 48 ಇವುಗಳ ವಿಷಯವಾಗಿ ನೀವು ಸಾಕ್ಷಿಗಳಾಗಿದ್ದೀರಿ. \v 49 ಇಗೋ, ನನ್ನ ತಂದೆಯು ವಾಗ್ದಾನ ಮಾಡಿದ್ದನ್ನು ನಿಮಗೆ ಕಳುಹಿಸುವೆನು; ಆದರೆ ನೀವು ಪರಲೋಕದ ಶಕ್ತಿಯನ್ನು ಹೊದಿಸುವ ತನಕ, ಈ ಪಟ್ಟಣದಲ್ಲಿಯೇ ಕಾದುಕೊಂಡಿರಿ,” ಎಂದರು. \s1 ಸ್ವರ್ಗಕ್ಕೆ ಏರಿಹೋಗುವುದು \p \v 50 ಯೇಸು ಶಿಷ್ಯರನ್ನು ಬೇಥಾನ್ಯದವರೆಗೆ ಕರೆದುಕೊಂಡು ಹೋಗಿ, ತಮ್ಮ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದರು. \v 51 ಯೇಸು ಅವರನ್ನು ಆಶೀರ್ವದಿಸುತ್ತಿರುವಾಗಲೇ ಅವರನ್ನು ಬಿಟ್ಟು ಮೇಲೆ ಪರಲೋಕಕ್ಕೆ ಏರಿದರು. \v 52 ಆಗ ಶಿಷ್ಯರು ಯೇಸುವನ್ನು ಆರಾಧಿಸಿ, ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂದಿರುಗಿದರು. \v 53 ಅವರು ಯಾವಾಗಲೂ ದೇವಾಲಯದಲ್ಲಿ, ದೇವರನ್ನು ಸ್ತುತಿಸುತ್ತಾ ಇದ್ದರು.