\id JOL - Biblica® Open Kannada Contemporary Version \ide UTF-8 \h ಯೋಯೇಲ \toc1 ಯೋಯೇಲ \toc2 ಯೋಯೇಲ \toc3 ಯೋಯೇಲ \mt1 ಯೋಯೇಲ \c 1 \p \v 1 ಪೆತುಯೇಲನ ಮಗನಾದ ಯೋಯೇಲನಿಗೆ ಬಂದ ಯೆಹೋವ ದೇವರು ವಾಕ್ಯವು: \b \s1 ಮಿಡತೆಗಳಿಂದಾದ ಹಾನಿ \q1 \v 2 ಹಿರಿಯರೇ, ಇದನ್ನು ಕೇಳಿರಿ: \q2 ದೇಶದ ನಿವಾಸಿಗಳೇ, ಕಿವಿಗೊಡಿರಿ. \q1 ಇಂಥ ದುರ್ಘಟನೆಯು ನಿಮ್ಮ ದಿವಸಗಳಲ್ಲಾದರೂ \q2 ನಿಮ್ಮ ಪೂರ್ವಿಕರ ದಿವಸಗಳಲ್ಲಾದರೂ ಉಂಟಾಯಿತೋ? \q1 \v 3 ಇದರ ವಿಷಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, \q2 ಅವರು ತಮ್ಮ ಮಕ್ಕಳಿಗೆ ತಿಳಿಸಲಿ, \q2 ಅವರ ಮಕ್ಕಳೂ ಮತ್ತೊಂದು ತಲಾಂತರಕ್ಕೂ ತಿಳಿಸಲಿ. \q1 \v 4 ಚೂರಿಮಿಡತೆ ತಿಂದು, ಉಳಿದಿದ್ದ ಬೆಳೆಯನ್ನು \q2 ಗುಂಪುಮಿಡತೆ ತಿಂದುಬಿಟ್ಟಿತು. \q1 ಗುಂಪುಮಿಡತೆ ತಿಂದು ಬಿಟ್ಟಿದ್ದನ್ನು, \q2 ಕುದುರೆಮಿಡತೆ ತಿಂದುಬಿಟ್ಟಿತು. \q1 ಕುದುರೆಮಿಡತೆ ಬಿಟ್ಟಿದ್ದನ್ನು \q2 ಕಂಬಳಿಮಿಡತೆ ತಿಂದುಬಿಟ್ಟಿತು. \b \q1 \v 5 ಅಮಲೇರಿದವರೇ, ಎಚ್ಚೆತ್ತು ಅಳಿರಿ; \q2 ದ್ರಾಕ್ಷಾರಸ ಕುಡಿಯುವವರೆಲ್ಲರೇ, \q1 ಹೊಸ ದ್ರಾಕ್ಷಾರಸದ ನಿಮಿತ್ತ ಗೋಳಾಡಿರಿ; \q2 ಏಕೆಂದರೆ, ಅದು ನಿಮ್ಮ ಬಾಯಿಗೆ ಇನ್ನು ದೊರಕುವುದಿಲ್ಲ. \q1 \v 6 ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು. \q2 ಅದು ಬಲವಾದದ್ದೂ, ಲೆಕ್ಕವಿಲ್ಲದ್ದೂ; \q1 ಅದರ ಕೋರೆಗಳು ಸಿಂಹದ ಹಲ್ಲುಗಳು, \q2 ಸಿಂಹಿಣಿಯ ಹಲ್ಲುಗಳು ಅದಕ್ಕೆ ಇವೆ. \q1 \v 7 ಅದು ನನ್ನ ದ್ರಾಕ್ಷಿಬಳ್ಳಿಯನ್ನು ಹಾಳು ಮಾಡಿ, \q2 ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ. \q1 ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ. \q2 ಅದರ ಕೊಂಬೆಗಳು ಬಿಳುಪಾದವು. \b \q1 \v 8 ಯೌವನದ ಗಂಡನಿಗೋಸ್ಕರ ಗೋಣಿತಟ್ಟು ಧರಿಸಿ, \q2 ಕನ್ಯೆಯ ಹಾಗೆ ಪ್ರಲಾಪಿಸು. \q1 \v 9 ಧಾನ್ಯ ಸಮರ್ಪಣೆಯನ್ನಾಗಲಿ ಪಾನಾರ್ಪಣೆಯನ್ನಾಗಲಿ \q2 ಯೆಹೋವ ದೇವರ ಆಲಯದಲ್ಲಿ ಅರ್ಪಿಸುವುದಿಲ್ಲ. \q1 ಯೆಹೋವ ದೇವರ ಸೇವಕರಾದ ಯಾಜಕರು ಗೋಳಾಡುತ್ತಾರೆ. \q1 \v 10 ಹೊಲವು ಹಾಳಾಗಿದೆ; \q2 ಭೂಮಿಯು ಒಣಗಿದೆ, \q1 ಧಾನ್ಯವು ನಾಶವಾಗಿದೆ; \q2 ಹೊಸ ದ್ರಾಕ್ಷಾರಸವು ಒಣಗಿದೆ; \q2 ಎಣ್ಣೆ ತೀರಿಹೋಗಿದೆ. \b \q1 \v 11 ರೈತರೇ, ರೋದಿಸಿರಿ, \q2 ತೋಟಗಾರರೇ, ಪರಿತಪಿಸಿರಿ; \q1 ಗೋಧಿ ಮತ್ತು ಜವೆಗೋಧಿಗಾಗಿ ದುಃಖಿಸಿ; \q2 ಏಕೆಂದರೆ ಹೊಲದ ಬೆಳೆ ನಾಶವಾಗಿದೆ. \q1 \v 12 ದ್ರಾಕ್ಷಾಲತೆ ಒಣಗಿದೆ; \q2 ಅಂಜೂರದ ಗಿಡ ಬಾಡಿ ಹೋಗಿದೆ; \q1 ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ. \q2 ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ. \s1 ಪ್ರಲಾಪಕ್ಕೆ ಕರೆ \q1 \v 13 ಯಾಜಕರೇ, ಗೋಣಿತಟ್ಟು ಕಟ್ಟಿಕೊಂಡು ಗೋಳಾಡಿರಿ. \q2 ಬಲಿಪೀಠದ ಸೇವಕರೇ, ಗೋಳಾಡಿರಿ. \q1 ನನ್ನ ದೇವರ ಸೇವಕರೇ, \q2 ಬಂದು ಗೋಣಿತಟ್ಟಿನಲ್ಲಿ ರಾತ್ರಿಯೆಲ್ಲಾ ಕಳೆಯಿರಿ. \q1 ಏಕೆಂದರೆ, ಧಾನ್ಯ ಸಮರ್ಪಣೆಯೂ ಪಾನಾರ್ಪಣೆಯೂ \q2 ನಿಮ್ಮ ದೇವರ ಆಲಯದಿಂದ ನಿಂತುಹೋಗಿವೆ. \q1 \v 14 ಪವಿತ್ರ ಉಪವಾಸವನ್ನು ಘೋಷಿಸಿರಿ. \q2 ಪವಿತ್ರ ಸಭೆಯನ್ನು ಕರೆಯಿರಿ. \q1 ಹಿರಿಯರನ್ನೂ ದೇಶದ ನಿವಾಸಿಗಳೆಲ್ಲರನ್ನೂ \q2 ನಿಮ್ಮ ಯೆಹೋವ ದೇವರ ಆಲಯದಲ್ಲಿ ಕೂಡಿಸಿ, \q2 ಯೆಹೋವ ದೇವರಿಗೆ ಮೊರೆಯಿಡಿರಿ. \b \q1 \v 15 ಆ ದಿನ ಭಯಂಕರವಾದದ್ದು! \q2 ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. \q2 ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು. \b \q1 \v 16 ನಮ್ಮ ಕಣ್ಣೆದುರೇ \q2 ಆಹಾರವು ಹಾಳಾಯಿತಲ್ಲಾ. \q1 ಸಂತೋಷವೂ ಉಲ್ಲಾಸವೂ \q2 ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತಲ್ಲವೇ? \q1 \v 17 ಬೀಜಗಳು ಹೆಂಟೆಗಳ ಕೆಳಗೆ ಕೆಟ್ಟು ಹೋಗಿವೆ. \q2 ಉಗ್ರಾಣಗಳು ನಾಶವಾಗಿವೆ. \q1 ಕಣಜಗಳು ಕುಸಿದುಬಿದ್ದಿವೆ. \q2 ಏಕೆಂದರೆ ಧಾನ್ಯವು ಒಣಗಿದೆ. \q1 \v 18 ಪಶುಗಳು ನರಳುತ್ತವೆ. \q2 ದನದ ಹಿಂಡುಗಳು ಕಳವಳಗೊಂಡಿವೆ. \q1 ಏಕೆಂದರೆ ಅವುಗಳಿಗೆ ಮೇವು ಇಲ್ಲ; \q2 ಕುರಿಮಂದೆಗಳು ಸಹ ಕಷ್ಟಪಡುತ್ತಲಿವೆ. \b \q1 \v 19 ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ. \q2 ಬೆಂಕಿಯು ಹುಲ್ಲುಗಾವಲನ್ನು ದಹಿಸಿಬಿಟ್ಟಿದೆ; \q2 ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿವೆ. \q1 \v 20 ಕಾಡುಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. \q2 ನೀರಿನ ಹೊಳೆಗಳು ಬತ್ತಿ ಹೋಗಿವೆ. \q2 ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ. \c 2 \s1 ಮಿಡತೆಗಳ ಒಂದು ಸೈನ್ಯ \q1 \v 1 ನೀವು ಚೀಯೋನಿನಲ್ಲಿ ಕೊಂಬು ಊದಿರಿ. \q2 ನನ್ನ ಪರಿಶುದ್ಧ ಪರ್ವತದಲ್ಲಿ ಆರ್ಭಟಿಸಿರಿ. \b \q1 ದೇಶದ ನಿವಾಸಿಗಳೆಲ್ಲರು ನಡುಗಲಿ. \q2 ಏಕೆಂದರೆ ಯೆಹೋವ ದೇವರ ದಿವಸವು ಬರುತ್ತದೆ. \q1 ಅದು ಸಮೀಪವಾಗಿದೆ. \q2 \v 2 ಅದು ಕತ್ತಲೆಯೂ ಮಬ್ಬೂ ಉಳ್ಳ ದಿವಸವೂ, \q2 ಮೇಘವೂ ಕಾರ್ಗತ್ತಲು ಉಳ್ಳ ದಿವಸವೂ ಆಗಿದೆ. \q1 ಬೆಟ್ಟಗಳ ಮೇಲೆ ಹರಡುವ ಉದಯದ ಹಾಗೆ \q2 ದೊಡ್ಡ ಬಲವಾದ ಸ್ಯೆನ್ಯವು ಬರುತ್ತದೆ. \q1 ಅದು ಪ್ರಾಚೀನ ಕಾಲದಲ್ಲಿ ಮತ್ತು \q2 ಮುಂದಿನ ಯುಗಗಳಲ್ಲಿ ಎಂದಿಗೂ ಇರುವುದಿಲ್ಲ. \b \q1 \v 3 ಅವುಗಳ ಮುಂದೆ ಬೆಂಕಿ ದಹಿಸುತ್ತದೆ. \q2 ಅವುಗಳ ಹಿಂದೆ ಜ್ವಾಲೆ ಧಗಧಗಿಸುತ್ತದೆ. \q1 ಅವುಗಳ ಮುಂದೆ ದೇಶವು ಏದೆನ್ ತೋಟದ ಹಾಗಿದೆ. \q2 ಅವುಗಳ ಹಿಂದೆ ಕಾಡು ಹಾಳಾಗಿದೆ. \q2 ಯಾವುದೂ ಅವುಗಳಿಂದ ತಪ್ಪಿಸಿಕೊಳ್ಳುವುದಿಲ್ಲ. \q1 \v 4 ಅವುಗಳ ಆಕಾರವು ಕುದುರೆಗಳ ಆಕಾರದ ಹಾಗಿದೆ. \q2 ಸವಾರರ ಹಾಗೆಯೇ ಓಡುತ್ತವೆ. \q1 \v 5 ರಥಗಳ ಶಬ್ದದಂತೆ ಅವು ಪರ್ವತಗಳ ತುದಿಗಳಲ್ಲಿ ಹಾರುತ್ತವೆ. \q2 ಸಿಡಿಯುವ ಬೆಂಕಿಯು ದಹಿಸುವ ಕೋಲಿನಂತೆ, \q1 ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಸೈನ್ಯದ ಹಾಗೆಯೂ ಇವೆ. \b \q1 \v 6 ಅವುಗಳ ಮುಂದೆ ಜನಾಂಗಗಳು ಬಹಳವಾಗಿ ನೊಂದುಕೊಳ್ಳುತ್ತವೆ. \q2 ಎಲ್ಲಾ ಮುಖಗಳು ಕಳೆಗುಂದುತ್ತವೆ. \q1 \v 7 ಶೂರರ ಹಾಗೆ ಓಡುತ್ತವೆ. \q2 ಯುದ್ಧಶಾಲಿಗಳ ಹಾಗೆ ಗೋಡೆ ಏರುತ್ತವೆ. \q1 ಅವೆಲ್ಲಾ ಸಾಲಾಗಿ ಮುನ್ನಡೆಯುತ್ತವೆ. \q2 ತಮ್ಮ ಹಾದಿಗಳನ್ನು ಬದಲು ಮಾಡುವುದಿಲ್ಲ. \q1 \v 8 ಒಂದು ಇನ್ನೊಂದನ್ನು ನೂಕುವುದಿಲ್ಲ. \q2 ಅವುಗಳಲ್ಲಿ ಪ್ರತಿಯೊಂದು \q1 ತನ್ನ ತನ್ನ ದಾರಿಯಲ್ಲಿ ಮುನ್ನಡೆಯುತ್ತವೆ. \q2 ತಮ್ಮ ಸ್ಥಾನಗಳನ್ನು ಬಿಟ್ಟುಕೊಡದೆ ಯುದ್ಧ ಮಾಡುತ್ತವೆ. \q1 \v 9 ಪಟ್ಟಣದಲ್ಲಿ ಅತ್ತಿತ್ತ ತಿರುಗಾಡುತ್ತವೆ. \q2 ಗೋಡೆಯ ಮೇಲೆ ಓಡುತ್ತವೆ. \q1 ಅವು ಮನೆಗಳನ್ನು ಹತ್ತಿ, \q2 ಕಳ್ಳನ ಹಾಗೆ ಕಿಟಿಕಿಗಳಿಂದ ಪ್ರವೇಶಿಸುತ್ತವೆ. \b \q1 \v 10 ಅವುಗಳ ಮುಂದೆ ಭೂಮಿಯು ನಡುಗುತ್ತದೆ. \q2 ಆಕಾಶಗಳು ಅದರುತ್ತವೆ. \q1 ಸೂರ್ಯ ಚಂದ್ರರು ಕಪ್ಪಾಗುತ್ತವೆ. \q2 ನಕ್ಷತ್ರಗಳು ಇನ್ನು ಮುಂದೆ ಹೊಳೆಯುವುದಿಲ್ಲ. \q1 \v 11 ಯೆಹೋವ ದೇವರು ತಮ್ಮ ಸೈನ್ಯಕ್ಕೆ \q2 ಗುಡುಗಿನಂತೆ ಆಜ್ಞಾಪಿಸುತ್ತಾರೆ. \q1 ಅವರ ಸೈನ್ಯ ಬಹು ದೊಡ್ಡದಾಗಿದೆ. \q2 ಅವರ ಆಜ್ಞೆಯನ್ನು ಪಾಲಿಸುವವನು ಪರಾಕ್ರಮಿಯು. \q1 ಯೆಹೋವ ದೇವರ ದಿವಸವು ದೊಡ್ಡದು, \q2 ಮಹಾ ಭಯಂಕರವಾದದ್ದು. \q2 ಅದನ್ನು ಸಹಿಸಿಕೊಳ್ಳುವವರು ಯಾರು? \s1 ನಿಮ್ಮ ಹೃದಯಗಳನ್ನು ಹರಿದುಕೊಳ್ಳಿರಿ \q1 \v 12 ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, “ಈಗಲಾದರೂ \q2 ಉಪವಾಸದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದಲೂ \q2 ನಿಮ್ಮ ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ.” \b \q1 \v 13 ನಿಮ್ಮ ಬಟ್ಟೆಗಳನ್ನಲ್ಲ, \q2 ನಿಮ್ಮ ಹೃದಯಗಳನ್ನು ಹರಿದುಕೊಂಡು, \q1 ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳಿರಿ. \q2 ಅವರು ದಯೆಯೂ ಕರುಣೆಯೂ, \q1 ದೀರ್ಘಶಾಂತಿಯೂ ಮಹಾ ಪ್ರೀತಿಯೂ \q2 ಉಳ್ಳವರಾಗಿ ಮಾಡಬೇಕೆಂದಿರುವ ಕೇಡಿಗೆ ಮನಮರುಗುತ್ತಾರೆ. \q1 \v 14 ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಬಹುದು. \q2 ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು. \q1 ನಿಮ್ಮ ಯೆಹೋವ ದೇವರಿಗೆ ಅರ್ಪಿಸಲು ಬೇಕಾದ ಧಾನ್ಯ ಸಮರ್ಪಣೆ ಹಾಗು ಪಾನಾರ್ಪಣೆಯನ್ನು \q2 ನಿಮಗೆ ಧಾರಾಳವಾಗಿ ಉಳಿಸಬಹುದು, ಯಾರಿಗೆ ಗೊತ್ತು? \b \q1 \v 15 ಚೀಯೋನಿನಲ್ಲಿ ಕೊಂಬು ಊದಿರಿ; \q2 ಪವಿತ್ರ ಉಪವಾಸವನ್ನು ಸಾರಿರಿ; \q2 ಪವಿತ್ರ ಸಭೆಯನ್ನು ಕರೆಯಿರಿ. \q1 \v 16 ಜನರನ್ನು ಕೂಡಿಸಿರಿ; \q2 ಸಭೆಯನ್ನು ಪವಿತ್ರಗೊಳಿಸಿರಿ; \q1 ಹಿರಿಯರನ್ನು ಒಟ್ಟುಗೂಡಿಸಿರಿ, \q2 ಮಕ್ಕಳನ್ನೂ ಹಸುಗೂಸುಗಳನ್ನೂ ಕೂಡಿಸಿರಿ; \q1 ಮದುಮಗನು ತನ್ನ ಕೊಠಡಿಯೊಳಗಿಂದಲೂ \q2 ಮದುಮಗಳು ತನ್ನ ಕೊಠಡಿಯೊಳಗಿಂದಲೂ ಹೊರಡಲಿ. \q1 \v 17 ಯೆಹೋವ ದೇವರ ಸಮ್ಮುಖ ಸೇವಕರಾದ ಯಾಜಕರು, \q2 ಅಂಗಳಕ್ಕೂ, ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ, \q1 “ಯೆಹೋವ ದೇವರೇ, ನಿನ್ನ ಜನರನ್ನು ಕನಿಕರಿಸು, \q2 ಜನಾಂಗಗಳು ನಿಂದಿಸುವುದಕ್ಕೆ ನಿನ್ನ ಬಾಧ್ಯತೆಯನ್ನು \q2 ದೂಷಣೆಗೆ ಗುರಿಮಾಡಬೇಡಿರಿ. \q1 ‘ಅವರ ದೇವರು ಎಲ್ಲಿ?’ \q2 ಎಂದು ಅವರು ಏಕೆ ನಿಂದಿಸಬೇಕು?” \s1 ಯೆಹೋವ ದೇವರ ಉತ್ತರ \q1 \v 18 ಆಗ ಯೆಹೋವ ದೇವರು ತಮ್ಮ ದೇಶಕ್ಕೋಸ್ಕರ ಅಭಿಮಾನಗೊಂಡು, \q2 ತಮ್ಮ ಜನರನ್ನು ಕನಿಕರಿಸುವರು. \p \v 19 ಯೆಹೋವ ದೇವರು ತನ್ನ ಜನರಿಗೆ ಉತ್ತರಕೊಟ್ಟು, \q1 ನಾನು ನಿಮಗೆ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ \q2 ನಿಮಗೆ ಸಾಕಾಗುವಷ್ಟು ಕಳುಹಿಸಿ, \q1 ನಿಮ್ಮನ್ನು ಇನ್ನು ಮೇಲೆ \q2 ಜನಾಂಗಗಳಲ್ಲಿ ನಿಂದಿತರಾಗಿ ಇಡುವುದಿಲ್ಲ. \b \q1 \v 20 “ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮಿಂದ ದೂರಮಾಡಿ, \q2 ಅದನ್ನು ಹಾಳುಬಿದ್ದ ಬಂಜರು ಭೂಮಿಗೂ, \q1 ಅದರ ಮುಂಭಾಗವನ್ನು ಪೂರ್ವದ ಉಪ್ಪು ಸಮುದ್ರಕ್ಕೂ \q2 ಅದರ ಹಿಂಭಾಗವನ್ನು ಪಶ್ಚಿಮದ ಮೆಡಿಟರೇನಿಯನ್ ಸಮುದ್ರಕ್ಕೂ ಓಡಿಸಿಬಿಡುವೆನು. \q1 ಅದರ ದುರ್ವಾಸನೆಯು ಏರುವುದು. \q2 ಅದು ಗಬ್ಬು ನಾರುವುದು.” \b \q1 ಏಕೆಂದರೆ, ಆತನು ಮಹಾಕಾರ್ಯಗಳನ್ನು ಮಾಡಿದ್ದಾರೆ. \q2 \v 21 ಯಹೂದ ದೇಶವೇ, ಭಯಪಡಬೇಡ; \q2 ಉಲ್ಲಾಸಿಸಿ, ಸಂತೋಷವಾಗಿರು. \q1 ಏಕೆಂದರೆ, ಯೆಹೋವ ದೇವರು ಮಹತ್ತಾದವುಗಳನ್ನು ಮಾಡಿದ್ದಾರೆ. \q2 \v 22 ಕಾಡುಮೃಗಗಳೇ, ಭಯಪಡಬೇಡಿರಿ. \q2 ಏಕೆಂದರೆ, ಅಡವಿಯ ಮೇವಿನ ಸ್ಥಳಗಳು ಮೊಳೆಯುತ್ತವೆ. \q1 ಮರಗಳು ತಮ್ಮ ಫಲವನ್ನು ಫಲಿಸುತ್ತವೆ. \q2 ಅಂಜೂರದ ಗಿಡವೂ ದ್ರಾಕ್ಷಿ ಬಳ್ಳಿಯೂ ತಮ್ಮ ಫಲವನ್ನು ಕೊಡುತ್ತವೆ. \q1 \v 23 ಚೀಯೋನಿನ ಜನರೇ, \q2 ನಿಮ್ಮ ದೇವರಾದ ಯೆಹೋವ ದೇವರಲ್ಲಿ ಉಲ್ಲಾಸಿಸಿರಿ, ಸಂತೋಷವಾಗಿರಿ. \q1 ಏಕೆಂದರೆ ನಿಮಗೆ ಮುಂಗಾರು ಮಳೆಯನ್ನು \q2 ಸಾಕಷ್ಟು ಕೊಡುವರು. \q1 ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನ ಹಾಗೆ \q2 ನಿಮಗೆ ಸುರಿಸುವರು. \q1 \v 24 ಕಣಗಳು ಧಾನ್ಯದಿಂದ ತುಂಬುವುವು. \q2 ತೊಟ್ಟಿಗಳು ದ್ರಾಕ್ಷಾರಸದಿಂದಲೂ ಎಣ್ಣೆಯಿಂದಲೂ ತುಂಬಿ ತುಳುಕುವುವು. \b \q1 \v 25 “ನಾನು ನಿಮ್ಮಲ್ಲಿ ಕಳುಹಿಸಿದಂಥ ನನ್ನ ದೊಡ್ಡ ಸೈನ್ಯವಾದ ಮಿಡತೆಗಳು, \q2 ಗುಂಪು ಮಿಡತೆಗಳು, ಕಂಬಳಿ ಮಿಡತೆಗಳು, \q2 ಚೂರಿ ಮಿಡತೆಗಳು ತಿಂದು ಬಿಟ್ಟ ವರ್ಷಗಳನ್ನು \q1 ನಿಮಗೆ ಪುನಃಸ್ಥಾಪಿಸಿ ಕೊಡುವೆನು. \q1 \v 26 ಸಮೃದ್ಧಿಯಾಗಿ ಉಂಡು, ತೃಪ್ತಿಪಟ್ಟು, \q2 ನಿಮ್ಮನ್ನು ಅದ್ಭುತವಾಗಿ ನಡೆಸಿದ \q2 ನಿಮ್ಮ ದೇವರಾದ ಯೆಹೋವ ದೇವರ ಹೆಸರನ್ನು ಸ್ತುತಿಸುವಿರಿ. \q1 ನನ್ನ ಜನರು ಎಂದೆಂದಿಗೂ ನಾಚಿಕೆಪಡರು. \q1 \v 27 ನಾನೇ ಇಸ್ರಾಯೇಲಿನ ಮಧ್ಯೆ ನೆಲೆಯಾಗಿ ಇರುವವನು. \q2 ನಾನೇ ನಿಮ್ಮ ಯೆಹೋವ ದೇವರು, \q2 ನಾನಲ್ಲದೆ ಬೇರೆ ದೇವರು ನಿಮಗಿಲ್ಲ. \q1 ನನ್ನ ಜನರು ಎಂದಿಗೂ ನಾಚಿಕೆಪಡರು. \s1 ಯೆಹೋವ ದೇವರ ದಿನ \q1 \v 28 “ಆಮೇಲೆ ನಾನು, \q2 ನನ್ನ ಆತ್ಮನನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, \q1 ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು. \q2 ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು. \q2 ನಿಮ್ಮ ಯುವಜನರಿಗೆ ದರ್ಶನಗಳಾಗುವವು. \q1 \v 29 ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, \q2 ನನ್ನ ಆತ್ಮವನ್ನು ಸುರಿಸುವೆನು. \q1 \v 30 ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು, \q2 ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು. \q1 \v 31 ಯೆಹೋವ ದೇವರ ಭಯಂಕರವಾದ ಮಹಾದಿನವು ಬರುವುದಕ್ಕಿಂತ ಮೊದಲು, \q2 ಸೂರ್ಯನು ಕತ್ತಲಾಗುವನು, \q2 ಚಂದ್ರನು ರಕ್ತವಾಗುವನು. \q1 \v 32 ಯೆಹೋವ ದೇವರ ಹೆಸರನ್ನು \q2 ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು. \q1 ಏಕೆಂದರೆ ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ \q2 ಅನೇಕರಿಗೆ ಮುಕ್ತಿ ದೊರಕುವುದು. \q1 ಯೆಹೋವ ದೇವರು ಹೇಳಿದ ಪ್ರಕಾರ \q2 ಯೆಹೋವ ದೇವರ ಕರೆಹೊಂದಿ ಉಳಿದವರಲ್ಲಿಯೂ ಬಿಡುಗಡೆ ಇರುವುದು. \c 3 \s1 ಜನಾಂಗಗಳ ನ್ಯಾಯತೀರ್ಪು \q1 \v 1 “ಆ ದಿವಸಗಳಲ್ಲಿಯೂ, ಆ ಸಮಯದಲ್ಲಿಯೂ \q2 ನಾನು ಯೆಹೂದ ಮತ್ತು ಯೆರೂಸಲೇಮಿನ ಸಿರಿಸಂಪತ್ತನ್ನು ಪುನಃ ಸ್ಥಾಪಿಸುವಾಗ, \q1 \v 2 ನಾನು ಎಲ್ಲಾ ಜನಾಂಗಗಳನ್ನು ಕೂಡಿಸುವೆನು. \q2 ಯೆಹೋಷಾಫಾಟನ\f + \fr 3:2 \fr*\fq ಯೆಹೋಷಾಫಾಟ \fq*\ft ಇದರ ಅರ್ಥ \ft*\fqa ಯೆಹೋವ ದೇವರು ನ್ಯಾಯತೀರ್ಪು ಮಾಡುತ್ತಾರೆ\fqa*\f* ತಗ್ಗಿಗೆ ಅವರನ್ನು ತರುವೆನು. \q1 ಅಲ್ಲಿ ನನ್ನ ಜನರೂ ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯವಾಗಿ \q2 ಅವರ ಸಂಗಡ ವ್ಯಾಜ್ಯವಾಡುವೆನು. \q1 ಅವರು ಅವರನ್ನು ಜನಾಂಗಗಳಲ್ಲಿ ಚದುರಿಸಿ, \q2 ನನ್ನ ದೇಶವನ್ನು ಹಂಚಿಕೊಂಡರು. \q1 \v 3 ನನ್ನ ಜನರಿಗೋಸ್ಕರ ಚೀಟುಹಾಕಿ, \q2 ಬಾಲಕರನ್ನು ವೇಶ್ಯಾ ವೃತ್ತಿಗೆ ಕೊಟ್ಟು, \q2 ಬಾಲಕಿಯರನ್ನು ಕುಡಿಯುವ ದ್ರಾಕ್ಷಾರಸಕ್ಕಾಗಿ ಮಾರಿದ್ದಾರೆ. \p \v 4 “ಟೈರೇ, ಸೀದೋನೇ, ಫಿಲಿಷ್ಟಿಯದ ಎಲ್ಲಾ ಪ್ರಾಂತ್ಯಗಳೇ, ನನ್ನ ವಿರೋಧವಾಗಿ ನಿಮಗೆ ಏನು ಇದೆ? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ಮುಯ್ಯಿ ನನಗೆ ಸಲ್ಲಿಸಿದರೆ, ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು. \v 5 ನೀವು ನನ್ನ ಬೆಳ್ಳಿಯನ್ನೂ ನನ್ನ ಬಂಗಾರವನ್ನೂ, ನನ್ನ ಅತ್ಯುತ್ತಮ ಸಂಪತ್ತನ್ನೂ ನಿಮ್ಮ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿದ್ದಿರಿ. \v 6 ಯೆಹೂದದ ಹಾಗೂ ಯೆರೂಸಲೇಮಿನ ಜನರನ್ನು ಅವರ ಪ್ರಾಂತಗಳಿಂದ ದೂರ ಮಾಡುವುದಕ್ಕಾಗಿ ಗ್ರೀಕರಿಗೆ ಮಾರಿದ್ದೀರಿ. \p \v 7 “ಇಗೋ, ಎಲ್ಲಿ ಅವರನ್ನು ಮಾರಿದಿರೋ, ಆ ಸ್ಥಳದಿಂದ ನಾನು ಅವರನ್ನು ಎಬ್ಬಿಸಿ, ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿತೀರಿಸುವೆನು. \v 8 ನಿಮ್ಮ ಪುತ್ರರನ್ನೂ ನಿಮ್ಮ ಪುತ್ರಿಯರನ್ನೂ ಯೆಹೂದದ ಜನರಿಗೆ ಮಾರುವೆನು. ಇವರು ಅವರನ್ನು ದೂರ ಜನವಾದ ಶೆಬದವರಿಗೆ ಮಾರುವರು.” ಯೆಹೋವ ದೇವರು ಇದನ್ನು ಹೇಳಿದ್ದಾರೆ. \q1 \v 9 ಜನಾಂಗಗಳಲ್ಲಿ ಇದನ್ನು ಘೋಷಿಸಿರಿ; \q2 ಯುದ್ಧಕ್ಕೆ ಇದನ್ನು ಸಿದ್ಧಮಾಡಿರಿ; \q1 ಶೂರರನ್ನು ಎಬ್ಬಿಸಿರಿ; \q2 ಯುದ್ಧಭಟರೆಲ್ಲರು ಸಮೀಪಿಸಿ ಬರಲಿ. \q1 \v 10 ನಿಮ್ಮ ನೇಗಿಲುಗಳ ಗುಳಗಳನ್ನು ಖಡ್ಗಗಳನ್ನಾಗಿಯೂ \q2 ನಿಮ್ಮ ಕುಡುಗೋಲುಗಳನ್ನು ಈಟಿಗಳನ್ನಾಗಿಯೂ ಬಡಿಯಿರಿ \q1 ಬಲಹೀನನು ಸಹ \q2 ನಾನು ಶಕ್ತಿವಂತನು ಎಂದು ಹೇಳಲಿ. \q1 \v 11 ಸುತ್ತಲಿನ ಎಲ್ಲಾ ರಾಷ್ಟ್ರಗಳೇ, \q2 ಸಭೆಯಾಗಿ ಕೂಡಿಕೊಳ್ಳಿರಿ. \b \q1 ಯೆಹೋವ ದೇವರೇ, ನಿನ್ನ ಶೂರರನ್ನು ಕೆಳಗೆ ಇಳಿಸಿರಿ. \b \q1 \v 12 ಜನಾಂಗಗಳು ಎಚ್ಚೆತ್ತು \q2 ಯೆಹೋಷಾಫಾಟನ ಕಣಿವೆಗೆ ಇಳಿಯಲಿ. \q1 ಸುತ್ತಮುತ್ತ ನೆರೆದಿರುವ ಜನಾಂಗಗಳಿಗೆ ನ್ಯಾಯತೀರಿಸಲು \q2 ಅಲ್ಲಿ ನಾನು ಆಸೀನನಾಗಿರುವೆನು. \q1 \v 13 ಕುಡುಗೋಲನ್ನು ಹಾಕಿರಿ. \q2 ಏಕೆಂದರೆ ಬೆಳೆ ಪಕ್ವವಾಯಿತು. \q1 ಬಂದು ಇಳಿಯಿರಿ. ಏಕೆಂದರೆ ದ್ರಾಕ್ಷಿಯ ಆಲೆ ತುಂಬಿ ಇದೆ. \q2 ತೊಟ್ಟಿಗಳು ತುಳುಕುವಂತೆ \q2 ಅವರ ಕೆಟ್ಟತನವು ಬಹಳವಾಗಿದೆ. \b \q1 \v 14 ತೀರ್ಮಾನದ ಕಣಿವೆಯಲ್ಲಿ \q2 ಗುಂಪು ಗುಂಪುಗಳಾಗಿ ಜನರಿದ್ದಾರೆ! \q1 ಏಕೆಂದರೆ ಯೆಹೋವ ದೇವರ ದಿವಸವು \q2 ನಿರ್ಣಯದ ತಗ್ಗಿನಲ್ಲಿ ಸಮೀಪವಾಗಿದೆ. \q1 \v 15 ಸೂರ್ಯ, ಚಂದ್ರರು ಕಪ್ಪಾಗುವುವು. \q2 ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆಮಾಡುವುವು. \q1 \v 16 ಯೆಹೋವ ದೇವರು ಚೀಯೋನಿನೊಳಗಿಂದ ಗರ್ಜಿಸಿ, \q2 ಯೆರೂಸಲೇಮಿನೊಳಗಿಂದ ಗುಡುಗುವರು. \q2 ಆಕಾಶಗಳೂ ಭೂಮಿಯೂ ನಡುಗುವುವು. \q1 ಆದರೆ ಯೆಹೋವ ದೇವರು ತಮ್ಮ ಜನರಿಗೆ ಆಶ್ರಯವೂ, \q2 ಇಸ್ರಾಯೇಲರಿಗೆ ರಕ್ಷಣೆಯ ದುರ್ಗವೂ ಆಗಿರುವರು. \s1 ದೇವರ ಜನರಿಗೆ ಆಶೀರ್ವಾದಗಳು \q1 \v 17 ಆಗ ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ವಾಸಿಸುವ \q2 ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ ಎಂದು ನೀವು ತಿಳಿದುಕೊಳ್ಳುವಿರಿ. \q1 ಯೆರೂಸಲೇಮು ಪರಿಶುದ್ಧವಾಗಿರುವುದು. \q2 ವಿದೇಶಿಯರು ಅದನ್ನೆಂದಿಗೂ ಆಕ್ರಮಿಸರು. \b \q1 \v 18 ಆ ದಿವಸದಲ್ಲಿ ಬೆಟ್ಟಗಳು ಹೊಸ ದ್ರಾಕ್ಷಾರಸವನ್ನು ಸುರಿಯುವುವು. \q2 ಗುಡ್ಡಗಳು ಹಾಲಿನಿಂದ ಹರಿಯುವುವು. \q2 ಯೆಹೂದದ ಹಳ್ಳಗಳೆಲ್ಲಾ ನೀರಿನಿಂದ ಹರಿಯುವುವು. \q1 ಯೆಹೋವ ದೇವರ ಆಲಯದೊಳಗಿಂದ ಬುಗ್ಗೆ ಹೊರಟು, \q2 ಶಿಟ್ಟೀಮಿನ\f + \fr 3:18 \fr*\fq ಶಿಟ್ಟೀಮಿನ \fq*\ft ಅಥವಾ \ft*\fqa ಅಕೇಶಿಯಾ\fqa*\f* ಕಣಿವೆಗೆ ಜಲ ಕೊಡುವುದು. \q1 \v 19 ಈಜಿಪ್ಟ್ ಹಾಳಾಗುವುದು. \q2 ಎದೋಮು ಹಾಳಾದ ಮರುಭೂಮಿಯಾಗುವುದು. \q1 ಏಕೆಂದರೆ ಅವರು ಯೆಹೂದದ ಜನರನ್ನು ಬಲಾತ್ಕಾರ ಮಾಡಿ, \q2 ತಮ್ಮ ದೇಶದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲಿದರು. \q1 \v 20 ಯೆಹೂದವು ಎಂದೆಂದಿಗೂ ಜನಭರಿತವಾಗುವುದು. \q2 ಯೆರೂಸಲೇಮು ಸಹ ತಲತಲಾಂತರಕ್ಕೂ ನಿಲ್ಲುವುದು. \q1 \v 21 ನಾನು ಅವರ ಮುಗ್ಧ ರಕ್ತಕ್ಕೆ ಪ್ರತೀಕಾರ ತೀರಿಸದೆ ಬಿಡಬೇಕೇ? \q2 ಇಲ್ಲ, ನಾನು ಎಂದಿಗೂ ಬಿಡುವುದಿಲ್ಲ. \b \qc ಯೆಹೋವ ದೇವರು ಚೀಯೋನಿನಲ್ಲಿ ವಾಸವಾಗಿರುತ್ತಾರೆ.