\id JDG - Biblica® Open Kannada Contemporary Version \ide UTF-8 \h ನ್ಯಾಯಸ್ಥಾಪಕರು \toc1 ನ್ಯಾಯಸ್ಥಾಪಕರು \toc2 ನ್ಯಾಯಸ್ಥಾಪಕರು \toc3 ನ್ಯಾಯ \mt1 ನ್ಯಾಯಸ್ಥಾಪಕರು \c 1 \s1 ಉಳಿದ ಕಾನಾನ್ಯರೊಡನೆ ಇಸ್ರಾಯೇಲರ ಯುದ್ಧ \p \v 1 ಯೆಹೋಶುವನು ಮರಣ ಹೊಂದಿದ ಬಳಿಕ ಇಸ್ರಾಯೇಲರು, “ಕಾನಾನ್ಯರೊಡನೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ಯೆಹೋವ ದೇವರನ್ನು ಕೇಳಿದರು. \p \v 2 ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಹೋಗಲಿ; ನಾನು ಆ ದೇಶವನ್ನು ಇವರ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ,” ಎಂದರು. \p \v 3 ಯೆಹೂದ ಗೋತ್ರದವರು ತಮ್ಮ ಸಹೋದರರಾದ ಸಿಮೆಯೋನ್ಯರಿಗೆ, “ನೀವು ನಮ್ಮ ಸಂಗಡ ನಮ್ಮ ಪ್ರಾಂತಕ್ಕೆ ಬನ್ನಿರಿ, ಕಾನಾನ್ಯರ ಮೇಲೆ ಯುದ್ಧ ಮಾಡೋಣ. ಹಾಗೆಯೇ ನಾವು ನಿಮ್ಮ ಸಂಗಡ ನಿಮ್ಮ ಪ್ರಾಂತಕ್ಕೆ ಬರುತ್ತೇವೆ,” ಎಂದರು. ಹೀಗೆ ಸಿಮೆಯೋನ್ಯರು ಅವರ ಸಂಗಡ ಹೋದರು. \p \v 4 ಯೆಹೂದ ಗೋತ್ರದವರು ಹೋದಾಗ, ಯೆಹೋವ ದೇವರು ಕಾನಾನ್ಯರನ್ನೂ ಪೆರಿಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟರು. ಅವರು ಬೆಜೆಕಿನಲ್ಲಿ ಹತ್ತು ಸಾವಿರ ಜನರನ್ನು ಕೊಂದರು. \v 5 ಅವರು ಬೆಜೆಕಿನಲ್ಲಿ ಅರಸನಾದ ಅದೋನೀಬೆಜೆಕನನ್ನು ಸಂಧಿಸಿ, ಅವನ ವಿರೋಧವಾಗಿ ಯುದ್ಧಮಾಡಿ, ಕಾನಾನ್ಯರನ್ನೂ ಪೆರಿಜೀಯರನ್ನೂ ಕೊಂದುಹಾಕಿದರು. \v 6 ಆದರೆ ಅದೋನೀಬೆಜೆಕನು ಓಡಿ ಹೋದದ್ದರಿಂದ, ಅವನನ್ನು ಹಿಂದಟ್ಟಿ ಹಿಡಿದು, ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು. \p \v 7 ಆಗ ಅದೋನೀಬೆಜೆಕನು, “ನಾನು ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟ ಎಪ್ಪತ್ತು ಮಂದಿ ಅರಸರು, ನನ್ನ ಮೇಜಿನ ಕೆಳಗೆ ಬೀಳುವ ಚೂರುಗಳನ್ನು ಕೂಡಿಸಿಕೊಂಡು ತಿನ್ನುತ್ತಿದ್ದರು. ನಾನು ಅವರಿಗೆ ಮಾಡಿದಂತೆಯೇ, ದೇವರು ನನಗೆ ಮಾಡಿದ್ದಾರೆ,” ಎಂದನು. ಅವರು ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು ಬಂದರು. ಅಲ್ಲಿ ಅವನು ಮರಣಹೊಂದಿದನು. \p \v 8 ಯೆಹೂದ ಗೋತ್ರದವರು ಯೆರೂಸಲೇಮಿನವರ ಮೇಲೆ ಯುದ್ಧಮಾಡಿ, ಅಲ್ಲಿದ್ದವರನ್ನು ಖಡ್ಗದಿಂದ ಸಂಹರಿಸಿ, ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು. \p \v 9 ತರುವಾಯ ಯೆಹೂದ ಗೋತ್ರದವರು ಬೆಟ್ಟದಲ್ಲಿಯೂ ದಕ್ಷಿಣದಲ್ಲಿಯೂ ತಗ್ಗಿನಲ್ಲಿಯೂ ವಾಸಿಸಿದ ಕಾನಾನ್ಯರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋದರು. \v 10 ಯೆಹೂದ ಗೋತ್ರದವರು ಪೂರ್ವದಲ್ಲಿ ಕಿರ್ಯತ್ ಅರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್, ತಲ್ಮೈರನ್ನು ಸೋಲಿಸಿದರು. \v 11 ಅಲ್ಲಿಂದ ದೆಬೀರಿನ ನಿವಾಸಿಗಳ ವಿರೋಧವಾಗಿ ಹೋದರು. ದೆಬೀರಿಗೆ ಮೊದಲು ಕಿರ್ಯತ್ ಸೇಫೆರ್ ಎಂಬ ಹೆಸರಿತ್ತು. \p \v 12 ಕಾಲೇಬನು, “ಕಿರ್ಯತ್ ಸೇಫೆರ ಮೇಲೆ ದಾಳಿಮಾಡಿ ತೆಗೆದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ,” ಎಂದು ಹೇಳಿದ್ದನು. \v 13 ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು. \p \v 14 ಒಂದು ದಿನ ಅಕ್ಷಾ ಒತ್ನಿಯೇಲನೊಂದಿಗೆ ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಇನ್ನೂ ಒಂದು ಹೊಲವನ್ನು ಕೇಳುವುದಕ್ಕೆ ಅವನನ್ನು ಪ್ರೇರೇಪಿಸಿ, ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳಿಗೆ, “ನಿನಗೆ ಏನು ಬೇಕು?” ಎಂದನು. \p \v 15 ಅದಕ್ಕೆ ಅವಳು ಅವನಿಗೆ, “ನನಗೆ ಒಂದು ಸಹಾಯಮಾಡಬೇಕು. ಮೊದಲು ದಕ್ಷಿಣ ಹೊಲವನ್ನು ನೀನು ನನಗೆ ಕೊಟ್ಟೆ; ನೀರಿನ ಬುಗ್ಗೆಗಳನ್ನು ಸಹ ನನಗೆ ಕೊಡು,” ಎಂದಳು. ಆಗ ಕಾಲೇಬನು ಅವಳಿಗೆ ಮೇಲಿನ ಹಾಗೂ ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು. \p \v 16 ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು, ಯೆಹೂದ ಗೋತ್ರದವರ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೆಹೂದದ ಗೋತ್ರದವರ ಮರುಭೂಮಿಗೆ ಬಂದು, ಅಲ್ಲಿನ ಜನರ ಸಂಗಡ ವಾಸವಾಗಿದ್ದರು. \p \v 17 ಯೆಹೂದ ಗೋತ್ರದವರು ತನ್ನ ಸಹೋದರರಾದ ಸಿಮೆಯೋನ್ಯರ ಸಂಗಡ ಹೊರಟು, ಚೆಫೆತ್‌ನಲ್ಲಿ ವಾಸವಾಗಿರುವ ಕಾನಾನ್ಯರ ಮೇಲೆ ದಾಳಿಮಾಡಿ, ಆ ಪಟ್ಟಣವನ್ನು ನಿರ್ಮೂಲ ಮಾಡಿದರು. ಆ ಪಟ್ಟಣವು ಹೊರ್ಮಾ ಎಂದು ಕರೆಯಲಾಗಿತ್ತು. \v 18 ಇದಲ್ಲದೆ ಯೆಹೂದ ಗೋತ್ರದವರು ಗಾಜಾವನ್ನೂ ಅದರ ಮೇರೆಯನ್ನೂ; ಅಷ್ಕೆಲೋನನ್ನೂ, ಅದರ ಮೇರೆಯನ್ನೂ; ಎಕ್ರೋನನ್ನೂ, ಅದರ ಮೇರೆಯನ್ನೂ ತೆಗೆದುಕೊಂಡರು. \p \v 19 ಯೆಹೋವ ದೇವರು ಯೆಹೂದ ಗೋತ್ರದವರ ಸಂಗಡ ಇದ್ದುದರಿಂದ, ಅವರು ಬೆಟ್ಟದ ಪ್ರದೇಶಗಳನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಆದರೆ ತಗ್ಗಿನ ನಿವಾಸಿಗಳಿಗೆ ಕಬ್ಬಿಣದ ರಥಗಳಿದ್ದುದರಿಂದ, ಅವರು ಅವರನ್ನು ಹೊರಡಿಸಲಾರದೆ ಹೋದರು. \v 20 ಮೋಶೆಯು ಹೇಳಿದ ಪ್ರಕಾರ, ಅವರು ಹೆಬ್ರೋನನ್ನು ಕಾಲೇಬನಿಗೆ ಕೊಟ್ಟರು. ಅವರು ಅನಾಕನ ಮೂವರು ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟರು. \v 21 ಬೆನ್ಯಾಮೀನ್ಯರಿಗೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಯೆಬೂಸಿಯರು ಈ ದಿನದವರೆಗೂ ಬೆನ್ಯಾಮೀನರ ಸಂಗಡ ವಾಸವಾಗಿದ್ದಾರೆ. \p \v 22 ಇದಲ್ಲದೆ ಯೋಸೇಫನ ಮನೆಯವರು ಬೇತೇಲಿಗೆ ಏರಿಹೋದರು. ಯೆಹೋವ ದೇವರು ಅವರ ಸಂಗಡ ಇದ್ದರು. \v 23 ಆದರೆ ಮೊದಲು ಲೂಜ್ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಸಂಚರಿಸಿ ನೋಡಲು, ಯೋಸೇಫನ ಮನೆಯವರನ್ನು ಕಳುಹಿಸಲಾಯಿತು. \v 24 ಗೂಢಚಾರರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ, “ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು. ನಾವು ನಿನಗೆ ಕರುಣೆ ತೋರಿಸುವೆವು,” ಎಂದರು. \v 25 ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ, ಅವರು ಬಂದು ಪಟ್ಟಣವನ್ನು ಖಡ್ಗದಿಂದ ಹೊಡೆದು, ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು. \v 26 ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ, ಅಲ್ಲಿ ಒಂದು ಪಟ್ಟಣವನ್ನು ಕಟ್ಟಿ, ಅದಕ್ಕೆ ಲೂಜ್ ಎಂದು ಹೆಸರಿಟ್ಟನು. ಈವರೆಗೂ ಅದಕ್ಕೆ ಅದೇ ಹೆಸರಿದೆ. \p \v 27 ಮನಸ್ಸೆಯ ಗೋತ್ರದವರು ಬೇತ್ ಷೆಯಾನರನ್ನೂ, ಅವರ ಊರುಗಳವರನ್ನೂ; ತಾನಕದವರನ್ನೂ, ಅವರ ಊರುಗಳವರನ್ನೂ; ದೋರಿನವರನ್ನೂ, ಅವರ ಊರುಗಳವರನ್ನೂ; ಇಬ್ಲೆಯಾಮಿನವರನ್ನೂ, ಅವರ ಊರುಗಳವರನ್ನೂ, ಮೆಗಿದ್ದೋನಿನವರನ್ನೂ, ಅವರ ಊರುಗಳವರನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಆ ದೇಶದಲ್ಲಿ ವಾಸಿಸಬೇಕೆಂದಿದ್ದರು. \v 28 ಇಸ್ರಾಯೇಲರು ಬಲಗೊಂಡಾಗ, ಅವರನ್ನು ಪೂರ್ಣವಾಗಿ ಹೊರಡಿಸಿಬಿಡದೆ, ಅವರನ್ನು ದಾಸತ್ವಕ್ಕೆ ಕಾನಾನ್ಯರಿಗೆ ನೇಮಕ ಮಾಡಿದರು. \v 29 ಇದಲ್ಲದೆ ಎಫ್ರಾಯೀಮ್ಯರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು. \v 30 ಜೆಬುಲೂನ್ಯರು ಕಿಟ್ರೋನಿನ ವಾಸಿಗಳನ್ನೂ ನಹಲೋಲಿನ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಅವರಲ್ಲಿ ದಾಸರಾಗಿ ವಾಸಮಾಡುವವರಾದರು. \v 31 ಆಶೇರ್ಯರು ಅಕ್ಕೋವಿನ ವಾಸಿಗಳನ್ನೂ; ಸೀದೋನಿನ ವಾಸಿಗಳನ್ನೂ; ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಪಟ್ಟಣಗಳ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. \v 32 ಆದರೆ ಆಶೇರ್ಯರು ಅವರನ್ನು ಹೊರಡಿಸಿಬಿಡದೆ, ಆ ದೇಶದ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸವಾಗಿದ್ದರು. \v 33 ನಫ್ತಾಲಿ ಗೋತ್ರದವರು ಬೇತ್ ಷೆಮೆಷ್ ವಾಸಿಗಳನ್ನೂ ಹೊರಡಿಸಿಬಿಡದೆ, ಆ ದೇಶವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್ ಷೆಮೆಷ್, ಬೇತ್ ಅನಾತ್ ಪಟ್ಟಣ ವಾಸಿಗಳು ಅವರಿಗೆ ದಾಸರಾದರು. \v 34 ಅಮೋರಿಯರು ದಾನ್ಯರನ್ನು ತಗ್ಗಿನಲ್ಲಿ ಇಳಿಯಗೊಡದೆ, ಬೆಟ್ಟಗಳಿಗೆ ಓಡಿಸಿಬಿಟ್ಟರು \v 35 ಹೀಗೆ ಅಮೋರಿಯರು ಹರ್‌ಹೆರೆಸ್ ಬೆಟ್ಟದಲ್ಲಿಯೂ ಅಯ್ಯಾಲೋನಿನಲ್ಲಿಯೂ ಶಾಲ್ಬೀಮಿನಲ್ಲಿಯೂ ವಾಸಿಸಬೇಕೆಂದಿದ್ದರು. ಆದರೆ ಯೋಸೇಫನ ಗೋತ್ರದವರ ಕೈ ಬಲ ಹೆಚ್ಚಾದದ್ದರಿಂದ ಅವರಿಗೆ ದಾಸರಾದರು. \v 36 ಹೀಗೆ ಅಮೋರಿಯರ ಮೇರೆಯು ಅಕ್ರಬ್ಬೀಮನ್ನು ಹಿಡಿದು ಸೆಲ ಬಂಡೆಯಿಂದ ಮೇಲಕ್ಕೆ ವಿಸ್ತರಿಸಿಕೊಂಡಿದೆ. \c 2 \s1 ಬೋಕಿಮ್‌ನಲ್ಲಿ ಯೆಹೋವ ದೇವರ ದೂತ \p \v 1 ಯೆಹೋವ ದೇವರ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು, “ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ, ನಿಮ್ಮ ತಂದೆಗಳಿಗೆ ಆಣೆ ಇಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದೆನು. ನಾನು ನಿಮ್ಮ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಎಂದಿಗೂ ನಿರರ್ಥಕ ಮಾಡೆನು. \v 2 ‘ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡದೆ, ಅವರ ಬಲಿಪೀಠಗಳನ್ನು ಕೆಡಿವಿಬಿಡಿರಿ,’ ಎಂದು ಹೇಳಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಏಕೆ ಮಾಡಿದಿರಿ? \v 3 ಆದ್ದರಿಂದ, ‘ನಾನು ಸಹ ಅವರನ್ನು ನಿಮ್ಮ ಎದುರಿನಿಂದ ಓಡಿಸಿಬಿಡುವುದಿಲ್ಲ. ಅವರು ನಿಮ್ಮ ಪಕ್ಕದಲ್ಲಿ ಮುಳ್ಳುಗಳಂತಿರುವರು. ಅವರ ದೇವರುಗಳು ನಿಮಗೆ ಉರುಲಾಗುವುವು,’ ಎಂದು ನಾನು ಹೇಳಿದ್ದೆನು.” \p \v 4 ಯೆಹೋವ ದೇವರ ದೂತನು ಈ ಮಾತುಗಳನ್ನು ಇಸ್ರಾಯೇಲರೆಲ್ಲರಿಗೆ ಹೇಳುವಾಗ, ಜನರು ಗಟ್ಟಿಯಾಗಿ ಅತ್ತರು. \v 5 ಆ ಸ್ಥಳಕ್ಕೆ ಬೋಕೀಮ್\f + \fr 2:5 \fr*\fq ಬೋಕೀಮ್ \fq*\ft ಎಂದರೆ \ft*\fqa ಅಳುವವರು\fqa*\f* ಎಂಬ ಹೆಸರಿಟ್ಟು, ಅಲ್ಲಿ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸಿದರು. \s1 ಅವಿಧೇಯತೆ ಮತ್ತು ಸೋಲು \p \v 6 ಯೆಹೋಶುವನು ಜನರನ್ನು ಕಳುಹಿಸಿಬಿಟ್ಟಾಗ, ಇಸ್ರಾಯೇಲರು ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ತಮ್ಮ ತಮ್ಮ ಬಾಧ್ಯತೆಗಳಿಗೆ ಹೋದರು. \v 7 ಆದರೆ ಯೆಹೋಶುವನ ಎಲ್ಲಾ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವ ದೇವರು ಇಸ್ರಾಯೇಲರಿಗೋಸ್ಕರ ಮಾಡಿದ ಎಲ್ಲ ಮಹತ್ಕಾರ್ಯಗಳನ್ನು ಅರಿತಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲರು ಯೆಹೋವ ದೇವರನ್ನು ಸೇವಿಸಿದರು. \p \v 8 ಆದರೆ ನೂನನ ಮಗನೆಂಬ ಯೆಹೋವ ದೇವರ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಪ್ರಾಯದವನಾಗಿ ಮರಣಹೊಂದಿದನು. \v 9 ಅವನನ್ನು ಎಫ್ರಾಯೀಮನ ಬೆಟ್ಟದಲ್ಲಿ ಗಾಷ್ ಪರ್ವತದ ಉತ್ತರ ದಿಕ್ಕಿನಲ್ಲಿರುವ ಅವನ ಬಾಧ್ಯತೆಯ ಮೇರೆಯಾದ ತಿಮ್ನತ್ ಹೆರೆಸ್‌ನಲ್ಲಿ\f + \fr 2:9 \fr*\fq ತಿಮ್ನತ್ ಹೆರೆಸ್ \fq*\ft ಇನ್ನೊಂದು ಹೆಸರು \ft*\fqa ಸೆರಾ\fqa*\f* ಹೂಳಿಟ್ಟರು. \p \v 10 ಅವನ ಕಾಲದವರೆಲ್ಲರೂ ಪಿತೃಗಳ ಬಳಿಗೆ ಸೇರಿದ ಮೇಲೆ, ಯೆಹೋವ ದೇವರನ್ನೂ ಅವರು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು. \v 11 ಇಸ್ರಾಯೇಲರು ಯೆಹೋವ ದೇವರ ಮುಂದೆ ಕೆಟ್ಟತನ ಮಾಡಿ, ಬಾಳನನ್ನು ಸೇವಿಸಿ, \v 12 ತಮ್ಮ ತಂದೆಗಳನ್ನು ಈಜಿಪ್ಟಿನಿಂದ ಹೊರಡಿಸಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು, ತಮ್ಮ ಸುತ್ತಲಿರುವ ಜನಾಂಗಗಳ ದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದರು. \v 13 ಅವರು ಯೆಹೋವ ದೇವರನ್ನು ಬಿಟ್ಟು, ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದರು. \v 14 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿಗೆ ವಿರೋಧವಾಗಿ ಉರಿಗೊಂಡು, ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟರು. ಅವರು ಇನ್ನು ಮೇಲೆ ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ, ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟರು. \v 15 ಯೆಹೋವ ದೇವರು ಹೇಳಿದ ಹಾಗೆಯೂ ಕರ್ತನು ಅವರಿಗೆ ಆಣೆಯಿಟ್ಟ ಹಾಗೆಯೂ ಅವರು ಎಲ್ಲಿ ಹೋದರೂ ಅಲ್ಲಿ ಕೇಡು ಆಗುವುದಕ್ಕೆ ಯೆಹೋವ ದೇವರ ಕೈ ಅವರಿಗೆ ವಿರೋಧವಾಗಿತ್ತು. \p \v 16 ಆದರೂ ಯೆಹೋವ ದೇವರು ಅವರನ್ನು ಕೊಳ್ಳೆಹೊಡೆಯುವವರ ಕೈಯಿಂದ ಬಿಡಿಸುವದಕ್ಕೋಸ್ಕರ ನ್ಯಾಯಾಧಿಪತಿಗಳನ್ನು ಎಬ್ಬಿಸಿದರು. \v 17 ಅವರು ತಮ್ಮ ನ್ಯಾಯಾಧಿಪತಿಗಳ ಮಾತನ್ನು ಕೇಳದೆ, ಅನ್ಯದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಪಿತೃಗಳು ಯೆಹೋವ ದೇವರ ಆಜ್ಞೆಗಳನ್ನು ಕೇಳಿ ನಡೆದ ಮಾರ್ಗವನ್ನು ಶೀಘ್ರವಾಗಿ ತೊರೆದುಬಿಟ್ಟರು. ಅವರು ಮಾಡಿದ ಪ್ರಕಾರ ಮಾಡಲಿಲ್ಲ. \v 18 ಯೆಹೋವ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿದಾಗ, ಯೆಹೋವ ದೇವರು ನ್ಯಾಯಾಧಿಪತಿಯ ಸಂಗಡ ಇದ್ದು, ಆ ನ್ಯಾಯಾಧಿಪತಿಯ ದಿವಸಗಳಲ್ಲೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ತಪ್ಪಿಸಿ ರಕ್ಷಿಸುತ್ತಿದ್ದರು. ಏಕೆಂದರೆ ಅವರು ತಮ್ಮನ್ನು ಬಾಧಿಸಿ, ಶ್ರಮೆಪಡಿಸುವವರ ನಿಮಿತ್ತ ಗೋಳಾಡಿದ್ದರಿಂದ ಯೆಹೋವ ದೇವರು ಕನಿಕರಪಟ್ಟರು. \v 19 ಆ ನ್ಯಾಯಾಧಿಪತಿಯ ಮರಣದ ನಂತರ, ಅವರು ತಿರುಗಿ ಮಾರ್ಗತಪ್ಪಿ, ಅನ್ಯದೇವರುಗಳನ್ನು ಹಿಂಬಾಲಿಸಿ ಹೋಗಿ, ಅವುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಹಿರಿಯರಿಗಿಂತ ಅಧಿಕ ಭ್ರಷ್ಟರಾದರು. ಅವರು ತಮ್ಮ ದುರ್ಮಾರ್ಗಗಳನ್ನೂ ಹಟಮಾರಿತನವನ್ನೂ ಬಿಡಲೇ ಇಲ್ಲ. \p \v 20 ಆದ್ದರಿಂದ ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪದಿಂದ ಉರಿಗೊಂಡು, “ಈ ಜನಾಂಗವು ನಾನು ಅವರ ಪಿತೃಗಳಿಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ, \v 21 ನಾನು ಸಹ ಇನ್ನು ಮೇಲೆ ಯೆಹೋಶುವನು ಮರಣಹೊಂದುವಾಗ ಉಳಿಸಿದ ಜನಾಂಗಗಳಲ್ಲಿ ಒಬ್ಬರನ್ನಾದರೂ ಇವರ ಮುಂದೆ ಹೊರಡಿಸಿಬಿಡುವುದಿಲ್ಲ,” ಎಂದರು. \v 22 ಇಸ್ರಾಯೇಲರು ತಮ್ಮ ತಂದೆಗಳು ಕೈಗೊಂಡು ನಡೆದ ಯೆಹೋವ ದೇವರ ಮಾರ್ಗದಲ್ಲಿ ತಾವು ಕೈಗೊಂಡು ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುವ ಹಾಗೆ, \v 23 ಯೆಹೋವ ದೇವರು ಆ ಜನಾಂಗಗಳನ್ನು ಯೆಹೋಶುವನ ಕೈಯಲ್ಲಿ ಒಪ್ಪಿಸಿಕೊಡದೆ, ಅವುಗಳನ್ನು ಶೀಘ್ರವಾಗಿ ಓಡಿಸಿಬಿಡದೆ ಉಳಿಸಿದರು. \c 3 \p \v 1 ಕಾನಾನ್ ದೇಶದ ಸಕಲ ಯುದ್ಧಗಳನ್ನು ಅರಿಯದೆ ಇದ್ದ ಇಸ್ರಾಯೇಲರನ್ನು ಪರೀಕ್ಷಿಸುವುದಕ್ಕೂ, \v 2 ಮೊದಲು ಯುದ್ಧವನ್ನು ಅರಿಯದೆ ಇದ್ದ ಇಸ್ರಾಯೇಲಿನ ಸಂತತಿಗಳವರು ಅದನ್ನು ಕೂಡ ಕಲಿತುಕೊಳ್ಳುವುದಕ್ಕೂ ಯೆಹೋವ ದೇವರು ಉಳಿಸಿದ ಜನಾಂಗಗಳು ಯಾವುವೆಂದರೆ: \v 3 ಐದು ಮಂದಿ ಫಿಲಿಷ್ಟಿಯರ ಅಧಿಪತಿಗಳೂ ಸಮಸ್ತ ಕಾನಾನ್ಯರೂ ಸೀದೋನ್ಯರೂ ಬಾಳ್ ಹೆರ್ಮೋನ್ ಬೆಟ್ಟದಿಂದ ಪ್ರಾರಂಭಿಸಿ ಹಮಾತಿನ ಪ್ರದೇಶದವರೆಗೂ ಲೆಬನೋನಿನ ಬೆಟ್ಟದಲ್ಲಿ ವಾಸವಾಗಿರುವ ಹಿವ್ವಿಯರು ಇವರೇ. \v 4 ತಾವು ಮೋಶೆಯ ಮುಖಾಂತರವಾಗಿ ಇಸ್ರಾಯೇಲರ ಪಿತೃಗಳಿಗೆ ಆಜ್ಞಾಪಿಸಿದ ಆಜ್ಞೆಗಳನ್ನು ಇಸ್ರಾಯೇಲರು ಕೇಳುವರೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕೆ ಯೆಹೋವ ದೇವರು ಅವರನ್ನು ಉಳಿಸಿಬಿಟ್ಟರು. \p \v 5 ಇಸ್ರಾಯೇಲರು ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ ಮಧ್ಯದಲ್ಲಿ ವಾಸವಾಗಿದ್ದು, \v 6 ಅವರ ಪುತ್ರಿಯರನ್ನು ತಾವು ಹೆಂಡತಿಯರನ್ನಾಗಿ ತೆಗೆದುಕೊಂಡು, ತಮ್ಮ ಪುತ್ರಿಯರನ್ನು ಅವರ ಪುತ್ರರಿಗೆ ಮದುವೆ ಮಾಡಿಕೊಟ್ಟು, ಅವರ ದೇವರುಗಳನ್ನು ಸೇವಿಸಿದರು. \s1 ಒತ್ನಿಯೇಲ \p \v 7 ಇಸ್ರಾಯೇಲರು ಯೆಹೋವ ದೇವರ ಮುಂದೆ ಕೆಟ್ಟದ್ದನ್ನು ಮಾಡಿ, ತಮ್ಮ ದೇವರಾದ ಯೆಹೋವ ದೇವರನ್ನು ಮರೆತು, ಬಾಳನನ್ನೂ ಅಶೇರನನ್ನೂ ಸೇವಿಸಿದರು. \v 8 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಗೊಂಡು, ಅವರನ್ನು ಅರಾಮ್ ನಹರೈಮ್‌ದ\f + \fr 3:8 \fr*\ft ಅಂದರೆ, ವಾಯುವ್ಯ ಮೆಸೊಪೊತಾಮ್ಯ\ft*\f* ಅರಸನಾದ ಕೂಷನ್ ರಿಷಾತಯಿಮನ ಕೈಗೆ ಮಾರಿಬಿಟ್ಟರು. ಇಸ್ರಾಯೇಲರು ಕೂಷನ್‌ರಿಷಾತಯಿಮ್ ಎಂಬವನಿಗೆ ಎಂಟು ವರ್ಷ ಗುಲಾಮರಾಗಿದ್ದರು. \v 9 ತರುವಾಯ ಇಸ್ರಾಯೇಲರು ಯೆಹೋವ ದೇವರನ್ನು ಕೂಗುವಾಗ, ಯೆಹೋವ ದೇವರು ಇಸ್ರಾಯೇಲರಿಗೆ ಅವರನ್ನು ರಕ್ಷಿಸುವ ರಕ್ಷಕನನ್ನು ಅಂದರೆ, ಕಾಲೇಬನ ತಮ್ಮನಾದ ಕೆನಾಜನ ಮಗ ಒತ್ನಿಯೇಲನನ್ನು ಎಬ್ಬಿಸಿದರು. \v 10 ಅವನ ಮೇಲೆ ಯೆಹೋವ ದೇವರ ಆತ್ಮವು ಬಂದದ್ದರಿಂದ, ಅವನು ಇಸ್ರಾಯೇಲರಿಗೆ ನ್ಯಾಯತೀರಿಸಿದನು. ಯುದ್ಧಮಾಡುವುದಕ್ಕೆ ಹೊರಟಾಗ, ಯೆಹೋವ ದೇವರು ಅವನ ಕೈಗೆ ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮನನ್ನು ಒಪ್ಪಿಸಿಕೊಟ್ಟರು. ಅವನು ಕೂಷನ್ ರಿಷಾತಯಿಮನ ಮೇಲೆ ಜಯಹೊಂದಿದನು. \v 11 ದೇಶವು ನಾಲ್ವತ್ತು ವರ್ಷದವರೆಗೆ ವಿಶ್ರಾಂತಿಯಿಂದಿತ್ತು. ತರುವಾಯ ಕೆನಾಜನ ಮಗ ಒತ್ನಿಯೇಲನು ಮರಣಹೊಂದಿದನು. \s1 ಏಹೂದ್ \p \v 12 ಇಸ್ರಾಯೇಲರು ಯೆಹೋವ ದೇವರ ಮುಂದೆ ತಿರುಗಿ ಕೆಟ್ಟದ್ದನ್ನೇ ಮಾಡಿದರು. ಅವರು ಯೆಹೋವ ದೇವರ ಮುಂದೆ ಕೆಟ್ಟದ್ದನ್ನೇ ಮಾಡಿದ್ದರಿಂದ, ಯೆಹೋವ ದೇವರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಇಸ್ರಾಯೇಲಿಗೆ ವಿರೋಧವಾಗಿ ಬಲಪಡಿಸಿದರು. \v 13 ಅವನು ಅಮ್ಮೋನನ ಮತ್ತು ಅಮಾಲೇಕ್ಯರನ್ನು ಕೂಡಿಸಿಕೊಂಡು ಬಂದು, ಇಸ್ರಾಯೇಲರನ್ನು ಹೊಡೆದು, ಖರ್ಜೂರ ಗಿಡಗಳಿರುವ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು. \v 14 ಇಸ್ರಾಯೇಲರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಹದಿನೆಂಟು ವರ್ಷ ಸೇವಿಸಿದರು. \p \v 15 ಆದರೆ ಇಸ್ರಾಯೇಲರು ಯೆಹೋವ ದೇವರನ್ನು ಕೂಗಿದಾಗ, ಯೆಹೋವ ದೇವರು ಅವರಿಗೆ ಬೆನ್ಯಾಮೀನನಾದ ಗೇರನ ಮಗ ಏಹೂದನನ್ನು ರಕ್ಷಿಸುವುದಕ್ಕೆ ಎಬ್ಬಿಸಿದರು. ಅವನು ಎಡಗೈಯವನಾಗಿದ್ದನು. ಅವನ ಕೈಯಿಂದ ಇಸ್ರಾಯೇಲರು ಮೋವಾಬಿನ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಕಳುಹಿಸಿದರು. \v 16 ಏಹೂದನು ಇಬ್ಬಾಯಿಯುಳ್ಳ ಒಂದು ಮೊಳ ಉದ್ದವಾದ ಒಂದು ಕಠಾರಿಯನ್ನು ತನಗೆ ಮಾಡಿಕೊಂಡು, ಅದನ್ನು ತನ್ನ ವಸ್ತ್ರದ ಕೆಳಗೆ ತನ್ನ ಬಲಗಡೆ ತೊಡೆಯಲ್ಲಿ ಕಟ್ಟಿಕೊಂಡು, \v 17 ಕಾಣಿಕೆಯನ್ನು ಮೋವಾಬಿನ ಅರಸನಾದ ಎಗ್ಲೋನನ ಬಳಿಗೆ ತಂದನು. ಎಗ್ಲೋನನು ಬಹು ದಪ್ಪ ಮನುಷ್ಯನಾಗಿದ್ದನು. \v 18 ಏಹೂದನು ಕಾಣಿಕೆಯನ್ನು ಕೊಟ್ಟು ತೀರಿಸಿದಾಗ, ಕಾಣಿಕೆಯನ್ನು ಹೊತ್ತುಕೊಂಡು ಬಂದ ಜನರನ್ನು ಕಳುಹಿಸಿಬಿಟ್ಟು, \v 19 ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಕ್ಕೆ ತಿರುಗಿ, ಅವನ ಬಳಿಗೆ ಬಂದು, “ಅರಸನೇ, ನಿನ್ನ ಸಂಗಡ ಹೇಳಬೇಕಾದ ರಹಸ್ಯವಾದ ಒಂದು ಮಾತು ಇದೆ,” ಎಂದನು. \p ಅವನು, “ನಿಶ್ಶಬ್ದ,” ಎಂದು ಹೇಳಿದಾಗ, ಅವನ ಬಳಿಯಲ್ಲಿ ನಿಂತಿದ್ದವರೆಲ್ಲರು ಅವನನ್ನು ಬಿಟ್ಟು ಹೊರಗೆ ಹೋದರು. \p \v 20 ಅವನು ತನಗೋಸ್ಕರ ಮಾತ್ರ ಇದ್ದ ಬೇಸಿಗೆಯ ಕೊಠಡಿಯಲ್ಲಿ ಕುಳಿತಾಗ, ಏಹೂದನು ಅವನ ಬಳಿಗೆ ಪ್ರವೇಶಿಸಿ, “ನಿನ್ನ ಸಂಗಡ ಹೇಳಬೇಕಾದ ದೇವರ ಸಂದೇಶ ನನಗಿದೆ,” ಎಂದನು. ಅವನು ತನ್ನ ಸಿಂಹಾಸನದಿಂದ ಎದ್ದನು. \v 21 ಏಹೂದನು ತನ್ನ ಎಡಗೈಯನ್ನು ಚಾಚಿ, ತನ್ನ ಬಲಗಡೆ ತೊಡೆಯಲ್ಲಿದ್ದ ಕಠಾರಿಯನ್ನು ತೆಗೆದುಕೊಂಡು, ಅವನ ಹೊಟ್ಟೆಯಲ್ಲಿ ತಿವಿದನು. \v 22 ಅದು ಅಲಗಿನ ಸಂಗಡ ಹಿಡಿ ಸಮೇತ ಅವನ ಹೊಟ್ಟೆಯಲ್ಲಿ ಹೊಕ್ಕು, ಕಿತ್ತು ತೆಗೆಯಕೂಡದ ಹಾಗೆ ಕೊಬ್ಬು ಅಲಗನ್ನು ಸುತ್ತಿಕೊಂಡಿತು. ಅದರಿಂದ ಮಲವು ಹೊರಟಿತು. \v 23 ಆಗ ಏಹೂದನು ಕೊಠಡಿಯ ಬಾಗಿಲನ್ನು ತನ್ನ ಹಿಂಭಾಗದಲ್ಲಿ ಮುಚ್ಚಿ, ಬೀಗವನ್ನು ಹಾಕಿ, ದ್ವಾರಾಂಗಳದಿಂದ ಹೊರಟುಹೋದನು. \p \v 24 ಅವನು ಹೋದ ತರುವಾಯ, ಕೊಠಡಿಯ ಸೇವಕರು ಬಾಗಿಲು ಮುಚ್ಚಿರುವುದನ್ನು ಕಂಡು, “ಅರಸನು ನಿಶ್ಚಯವಾಗಿ ತನ್ನ ತಂಪಾದ ಕೋಣೆಯಲ್ಲಿ ವಿಸರ್ಜನೆಗಾಗಿ ಹೋಗಿರಬೇಕು,” ಎಂದುಕೊಂಡರು. \v 25 ಅವರು ತಮಗೆ ಬೇಸರವಾಗುವ ಮಟ್ಟಿಗೂ ಕಾದಿದ್ದರು. ಆದರೆ, ಅವನು ಕೊಠಡಿ ಬಾಗಿಲನ್ನು ತೆರೆಯದೆ ಇದ್ದುದರಿಂದ, ಅವರು ಬೀಗದ ಕೈಯನ್ನು ತೆಗೆದುಕೊಂಡು ಬಾಗಿಲನ್ನು ತೆರೆದರು. ಅವರ ಪ್ರಭುವು ನೆಲದ ಮೇಲೆ ಮರಣಹೊಂದಿದ್ದನು. \p \v 26 ಅವರು ಆಲಸ್ಯ ಮಾಡುತ್ತಿರುವಾಗ, ಏಹೂದನು ತಪ್ಪಿಸಿಕೊಂಡು ವಿಗ್ರಹಗಳನ್ನು ದಾಟಿ, ಸೇಯೀರಾತನ್ನು ಸೇರಿ ತಪ್ಪಿಸಿಕೊಂಡನು. \v 27 ಅವನು ಅಲ್ಲಿ ಬಂದಾಗ, ಎಫ್ರಾಯೀಮನ ಬೆಟ್ಟದಲ್ಲಿ ತುತೂರಿಯನ್ನು ಊದಿದನು. ಆಗ ಇಸ್ರಾಯೇಲರು ಅವನ ಸಂಗಡ ಬೆಟ್ಟದಿಂದ ಇಳಿದರು. ಅವನು ಇವರ ಮುಂದೆ ನಡೆದರು. \p \v 28 ಅವರಿಗೆ, “ನೀವು ನನ್ನ ಹಿಂದೆ ಬನ್ನಿರಿ. ಏಕೆಂದರೆ ಯೆಹೋವ ದೇವರು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು. ಅವರು ಅವನ ಹಿಂದೆ ಬಂದು, ಮೋವಾಬ್ಯರಿಗೆ ಎದುರಾದ ಯೊರ್ದನ್ ನದಿ ರೇವುಗಳನ್ನು ಹಿಡಿದು, ಒಬ್ಬರನ್ನಾದರೂ ದಾಟಗೊಡದೆ, \v 29 ಮೋವಾಬ್ಯರಲ್ಲಿ ಹೆಚ್ಚು ಕಡಿಮೆ ಹತ್ತು ಸಾವಿರ ಜನರನ್ನು ಹತಮಾಡಿದರು. ಅವರೆಲ್ಲರು ಪುಷ್ಟರೂ, ಪರಾಕ್ರಮಿಗಳೂ ಆಗಿದ್ದರು. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ. \v 30 ಹೀಗೆ ಆ ದಿವಸದಲ್ಲಿ ಮೋವಾಬ್ ಇಸ್ರಾಯೇಲರ ಆಳಿಕೆಗೆ ಅಧೀನವಾಗಿತ್ತು. ದೇಶವು ಎಂಬತ್ತು ವರ್ಷ ವಿಶ್ರಾಂತಿಗೊಂಡಿತು. \s1 ಷಮ್ಗರ \p \v 31 ಏಹೂದನ ತರುವಾಯ ಅನಾತನ ಮಗ ಶಮ್ಗರನು ಎದ್ದನು. ಅವನು ಫಿಲಿಷ್ಟಿಯರಲ್ಲಿ ಆರುನೂರು ಜನರನ್ನು ಎತ್ತಿನ ಮುಳ್ಳುಗೋಲಿನಿಂದ ಹತಮಾಡಿದನು. ಅವನು ಸಹ ಇಸ್ರಾಯೇಲರನ್ನು ರಕ್ಷಿಸಿದನು. \c 4 \s1 ದೆಬೋರಾ \p \v 1 ಏಹೂದನು ಮರಣಹೊಂದಿದನಂತರ ಇಸ್ರಾಯೇಲರು ತಿರುಗಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. \v 2 ಆದ್ದರಿಂದ ಯೆಹೋವ ದೇವರು ಅವರನ್ನು ಹಾಚೋರಿನಲ್ಲಿ ಆಳುವ ಕಾನಾನಿನ ಅರಸನಾದ ಯಾಬೀನನ ಕೈಗೆ ಮಾರಿಬಿಟ್ಟರು. ಅವನ ಸೈನ್ಯಕ್ಕೆ ಜನಾಂಗಗಳ ಪಟ್ಟಣವಾದ ಹರೋಷೆತ್ ಹಗ್ಗೊಯಿಮ್‌ನಲ್ಲಿ ವಾಸವಾಗಿರುವ ಸೀಸೆರನು ಅಧಿಪತಿಯಾಗಿದ್ದನು. \v 3 ಆಗ ಇಸ್ರಾಯೇಲರು ಯೆಹೋವ ದೇವರಿಗೆ ಮೊರೆಯಿಟ್ಟರು. ಅವನಿಗೆ ಒಂಬೈನೂರು ಕಬ್ಬಿಣದ ರಥಗಳಿದ್ದವು. ಅವನು ಇಸ್ರಾಯೇಲರನ್ನು ಇಪ್ಪತ್ತು ವರುಷ ಬಲವಾಗಿ ಬಾಧೆಪಡಿಸಿದನು. \p \v 4 ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿ ಇಸ್ರಾಯೇಲರಿಗೆ ನ್ಯಾಯ ತೀರಿಸುತ್ತಿದ್ದಳು. \v 5 ದೆಬೋರಳು ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿ ಎಫ್ರಾಯೀಮ್ ಬೆಟ್ಟದಲ್ಲಿ ಖರ್ಜೂರದ ಮರದ ಕೆಳಗೆ ವಾಸಿಸುತ್ತಿದ್ದಳು. ಇಸ್ರಾಯೇಲರು ಅವಳ ಬಳಿಗೆ ನ್ಯಾಯಕ್ಕಾಗಿ ಬರುತ್ತಿದ್ದರು. \v 6 ಅವಳು ಕೆದೆಷ್ ನಫ್ತಾಲಿಯಲ್ಲಿರುವ ಅಬೀನೋವಮನ ಮಗ ಬಾರಾಕನನ್ನು ಕರೆಯಿಸಿ ಅವನಿಗೆ, “ಇಸ್ರಾಯೇಲ್ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ್ದೇನೆಂದರೆ, ‘ನೀನು ನಫ್ತಾಲಿಯರಲ್ಲಿಯು, ಜೆಬುಲೂನರಲ್ಲಿಯು ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು. \v 7 ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ, ಅವನ ರಥಗಳನ್ನೂ, ಅವನ ಸೈನ್ಯವನ್ನೂ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬಂದು, ನಿನ್ನ ಕೈಗೆ ಒಪ್ಪಿಸುವೆನು,’ ಎಂದು ಆಜ್ಞಾಪಿಸಿದನು,” ಎಂದಳು. \p \v 8 ಬಾರಾಕನು ಅವಳಿಗೆ, “ನೀನು ನನ್ನ ಸಂಗಡ ಬಂದರೆ ನಾನು ಹೋಗುವೆನು. ನೀನು ನನ್ನ ಸಂಗಡ ಬಾರದೆ ಇದ್ದರೆ ನಾನು ಹೋಗುವುದಿಲ್ಲ,” ಎಂದನು. \p \v 9 ಅದಕ್ಕವಳು, “ನಾನು ನಿನ್ನ ಸಂಗಡ ಖಂಡಿತವಾಗಿ ಬರುವೆನು. ಆದರೆ ನೀನು ಹೋಗುವ ಪ್ರಯಾಣದಿಂದ ಉಂಟಾಗುವ ಘನತೆ ನಿನ್ನದಾಗಿರುವುದಿಲ್ಲ. ಏಕೆಂದರೆ ಯೆಹೋವ ದೇವರು ಸೀಸೆರನನ್ನು ಒಬ್ಬ ಸ್ತ್ರೀಯ ಕೈಗೆ ಒಪ್ಪಿಸಿಬಿಡುವೆನು,” ಎಂದು ಹೇಳಿದಳು. ದೆಬೋರಳು ಎದ್ದು ಬಾರಾಕನ ಸಂಗಡ ಕೆದೆಷಿಗೆ ಹೋದಳು. \v 10 ಬಾರಾಕನು ಜೆಬುಲೂನನ್ನೂ, ನಫ್ತಾಲಿಯನ್ನೂ ಕೆದೆಷಿಗೆ ಕರೆದನು. ಅವನು ಹತ್ತು ಸಾವಿರ ಜನರಸಹಿತವಾಗಿ ಹೋದನು. ದೆಬೋರಳು ಅವನ ಸಂಗಡ ಹೋದಳು. \p \v 11 ಮೋಶೆಯ ಅಳಿಯನಾದ ಹೊಬಾಬನ ಮಕ್ಕಳಲ್ಲಿ ಸೇರಿದ ಕೇನ್ಯನಾದ ಹೆಬೆರನು ಕೇನ್ಯರನ್ನು ಬಿಟ್ಟು, ತನ್ನನ್ನು ಪ್ರತ್ಯೇಕಿಸಿ, ಕೆದೆಷಿನ ಬಳಿಯಲ್ಲಿರುವ ಚಾನನ್ನೀಮ್ ಎಂಬ ಊರಲ್ಲಿ ಅಲ್ಲೋನ್ ಮರದ ಬಳಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. \p \v 12 ಆಗ ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟದಲ್ಲಿ ಏರಿದನೆಂದು ಸೀಸೆರನಿಗೆ ತಿಳಿಸಲಾಯಿತು. \v 13 ಆದ್ದರಿಂದ ಸೀಸೆರನು ಒಂಬೈನೂರು ಕಬ್ಬಿಣದ ರಥಗಳನ್ನೂ, ತನ್ನ ಎಲ್ಲಾ ಸೈನ್ಯವನ್ನೂ ತೆಗೆದುಕೊಂಡು ಹರೋಷೆತ್ ಹಗ್ಗೋಯಿಮಿನಿಂದ ಕೀಷೋನ್ ಹಳ್ಳಕ್ಕೆ ಬಂದನು. \p \v 14 ಆಗ ದೆಬೋರಳು ಬಾರಾಕನಿಗೆ, “ನೀನು ಏಳು. ಏಕೆಂದರೆ ಯೆಹೋವ ದೇವರು ಸೀಸೆರನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವ ದಿನವು ಇದೇ. ಯೆಹೋವ ದೇವರು ನಿನ್ನ ಮುಂದೆ ಹೊರಡಲಿಲ್ಲವೋ?” ಎಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು, ತಾಬೋರ್ ಬೆಟ್ಟದಿಂದ ಇಳಿದನು. \v 15 ಯೆಹೋವ ದೇವರು ಸೀಸೆರನನ್ನೂ, ಅವನ ಎಲ್ಲಾ ರಥಗಳನ್ನೂ, ಅವನ ಎಲ್ಲಾ ಸೈನ್ಯವನ್ನೂ ಬಾರಾಕನ ಮುಂದೆ ಖಡ್ಗದಿಂದ ಚದರಿಸಿದರು. ಸೀಸೆರನು ರಥದಿಂದ ಇಳಿದು ಓಡಿಹೋದನು. \p \v 16 ಬಾರಾಕನು ಅವನ ಸೈನ್ಯ, ರಥಗಳನ್ನು ಹರೋಷೆತ್ ಹಗ್ಗೋಯಿಮಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರು ಖಡ್ಗದಿಂದ ಹತರಾದರು, ಒಬ್ಬನೂ ಉಳಿಯಲಿಲ್ಲ. \v 17 ಆದರೆ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರಕ್ಕೆ ಓಡಿಬಂದನು. ಏಕೆಂದರೆ ಯಾಬೀನನೆಂಬ ಹಾಚೋರಿನ ಅರಸನಿಗೂ, ಕೇನ್ಯನಾದ ಹೆಬೆರನ ಮನೆಗೂ ನಡುವೆ ಶಾಂತಿ ಇತ್ತು. \p \v 18 ಆಗ ಯಾಯೇಲಳು ಸೀಸೆರನನ್ನು ಎದುರುಗೊಳ್ಳುವುದಕ್ಕೆ ಹೋಗಿ ಅವನಿಗೆ, “ಒಳಗೆ ಬಾ, ನನ್ನ ಪ್ರಭುವೇ, ನಮ್ಮ ಬಳಿಗೆ ಬಾ, ಭಯಪಡಬೇಡ,” ಎಂದು ಹೇಳಿದಳು. ಅವನನ್ನು ಒಂದು ಕಂಬಳಿಯಿಂದ ಮುಚ್ಚಿದಳು. \p \v 19 ಸೀಸೆರನು ಅವಳಿಗೆ, “ದಯಮಾಡಿ, ನನಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಡು, ನನಗೆ ದಾಹವಾಗಿದೆ,” ಎಂದನು. ಅವಳು ಹಾಲಿನ ಬುದ್ದಲಿಯನ್ನು ತೆರೆದು, ಅವನಿಗೆ ಕುಡಿಯುವುದಕ್ಕೆ ಕೊಟ್ಟು, ಅವನನ್ನು ಮುಚ್ಚಿದಳು. \p \v 20 ತಿರುಗಿ ಅವನು ಅವಳಿಗೆ, “ನೀನು ಬಾಗಿಲಲ್ಲಿ ನಿಂತಿರು. ಯಾವನಾದರೂ ಬಂದು, ‘ಇಲ್ಲಿ ಯಾರಾದರೂ ಇದ್ದಾರೋ?’ ಎಂದು ನಿನ್ನನ್ನು ಕೇಳಿದರೆ, ‘ಇಲ್ಲ’ ಎಂದು ಹೇಳು,” ಎಂದನು. \p \v 21 ಹೆಬೆರನ ಹೆಂಡತಿಯಾದ ಯಾಯೇಲಳು ಗುಡಾರದ ಮೊಳೆಯನ್ನು ತೆಗೆದು, ತನ್ನ ಕೈಯಲ್ಲಿ ಸುತ್ತಿಗೆಯನ್ನು ಹಿಡಿದುಕೊಂಡು, ಅವನು ಆಯಾಸದಿಂದ ನಿದ್ರೆ ಮಾಡುತ್ತಿರುವಾಗ, ಮೆಲ್ಲನೆ ಅವನ ಬಳಿಗೆ ಬಂದು, ಅವನ ತಲೆಯಲ್ಲಿ ಆ ಮೊಳೆಯನ್ನು ಹೊಡೆದು ನೆಲದಲ್ಲಿ ನಾಟಿಸಿದಳು. ಅವನು ಮರಣಹೊಂದಿದನು. \p \v 22 ಸೀಸೆರನನ್ನು ಹಿಂದಟ್ಟುವ ಬಾರಾಕನು ಬಂದನು. ಆಗ ಯಾಯೇಲಳು ಅವನನ್ನು ಎದುರುಗೊಳ್ಳುವುದಕ್ಕೆ ಹೊರಟುಹೋಗಿ ಅವನಿಗೆ, “ಬಾ, ನೀನು ಹುಡುಕುವ ಮನುಷ್ಯನನ್ನು ನಾನು ನಿನಗೆ ತೋರಿಸುವೆನು,” ಎಂದು ಹೇಳಿದಳು. ಬಾರಾಕನು ಅವಳ ಬಳಿಗೆ ಬಂದಾಗ, ಸೀಸೆರನು ಮರಣಹೊಂದಿದ್ದನು. ಮೊಳೆಯು ಅವನ ತಲೆಯಲ್ಲಿ ಹೊಡೆದಿತ್ತು. \p \v 23 ಹೀಗೆಯೇ ದೇವರು ಆ ದಿವಸದಲ್ಲಿ ಕಾನಾನ್ಯರ ಅರಸನಾದ ಯಾಬೀನನನ್ನು ಇಸ್ರಾಯೇಲರ ಮುಂದೆ ತಗ್ಗಿಸಿದರು. \v 24 ಇಸ್ರಾಯೇಲರ ಕೈ ಕಾನಾನ್ಯರ ಅರಸನಾದ ಯಾಬೀನನನ್ನು ಕೊಂದುಬಿಡುವ ಮಟ್ಟಿಗೂ ಹೆಚ್ಚಿ ಜಯಹೊಂದಿತು. \c 5 \s1 ದೆಬೋರಳ ಗೀತೆ \p \v 1 ಆ ದಿವಸದಲ್ಲಿ ದೆಬೋರಳೂ, ಅಬೀನೋವಮನ ಮಗ ಬಾರಾಕನೂ ಹಾಡಿದ್ದೇನೆಂದರೆ: \q1 \v 2 “ಇಸ್ರಾಯೇಲಿನ ನಾಯಕರು ಮುನ್ನಡೆದಾಗ, \q2 ಜನರು ಸ್ವಇಚ್ಛೆಯಿಂದ ಅವರನ್ನು ಹಿಂಬಾಲಿಸಿದಾಗ \q2 ಯೆಹೋವ ದೇವರನ್ನು ಸ್ತುತಿಸಿರಿ! \b \q1 \v 3 “ಅರಸರೇ ಕೇಳಿರಿ, ಪ್ರಭುಗಳೇ ಕೇಳಿರಿ, ಕಿವಿಗೊಡಿರಿ; \q2 ನಾನು, ನಾನೇ ಯೆಹೋವ ದೇವರಿಗೆ ಹಾಡುವೆನು. \q2 ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತುತಿಗೀತೆ ಹಾಡುವೆನು. \b \b \q1 \v 4 “ಯೆಹೋವ ದೇವರೇ, ನೀವು ಸೇಯೀರಿನಿಂದ ಹೊರಟು, \q2 ಎದೋಮಿನ ಹೊಲದಿಂದ ಮುನ್ನಡೆಯುವಾಗ, \q1 ಭೂಮಿ ನಡುಗಿತು. ಆಕಾಶವು ಸಹ ಸುರಿಸಿತು. \q2 ಮೇಘಗಳು ಸಹ ನೀರು ಸುರಿಸಿದವು. \q1 \v 5 ಯೆಹೋವ ದೇವರ ಮುಂದೆ ಬೆಟ್ಟಗಳು ಕಂಪಿಸಿದವು. \q2 ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮುಂದೆ ಸೀನಾಯಿ ಪರ್ವತವು ಸಹ ಕಂಪಿಸಿತು. \b \q1 \v 6 “ಅನಾತನ ಮಗ ಶಮ್ಗರನ ಕಾಲದಲ್ಲಿಯೂ, \q2 ಯಾಯೇಲಳ ದಿವಸಗಳಲ್ಲಿಯೂ ಹೆದ್ದಾರಿಯ ಸಂಚಾರ ನಿಂತುಹೋಯಿತು. \q2 ಪ್ರಯಾಣಿಕರು ಡೊಂಕು ದಾರಿಗಳಲ್ಲಿ ನಡೆಯುತ್ತಿದ್ದರು. \q1 \v 7 ದೆಬೋರಳಾದ ನಾನು ಏಳುವವರೆಗೂ, \q2 ಇಸ್ರಾಯೇಲಿನಲ್ಲಿ ತಾಯಿಯಾಗಿ ನಾನು ಏಳುವವರೆಗೂ \q2 ಇಸ್ರಾಯೇಲಿನ ಹಳ್ಳಿಗಳ ನಿವಾಸಿಗಳು ಯುದ್ಧಮಾಡಲಿಲ್ಲ. \q1 \v 8 ಅವರು ಹೊಸ ದೇವರುಗಳನ್ನು ಆಯ್ದುಕೊಂಡರು. \q2 ಆಗ ಯುದ್ಧವು ಬಾಗಿಲುಗಳಲ್ಲಿ ಆಯಿತು. \q1 ಇಸ್ರಾಯೇಲಿನಲ್ಲಿ ನಲವತ್ತು ಸಾವಿರ ಸೈನಿಕರಲ್ಲಿ ಗುರಾಣಿಯೂ, \q2 ಕಠಾರಿಯೂ ಇರಲಿಲ್ಲ. \q1 \v 9 ನಾನು ಇಸ್ರಾಯೇಲ್ ನಾಯಕರೊಂದಿಗೂ \q2 ಸ್ವೇಚ್ಛೆಯಿಂದ ಬಂದ ಜನರೊಂದಿಗೆ ನನ್ನ ಹೃದಯವಿದೆ. \q2 ಯೆಹೋವ ದೇವರನ್ನು ಸ್ತುತಿಸಿರಿ. \b \q1 \v 10 “ಬಿಳಿ ಕತ್ತೆಗಳ ಮೇಲೆ ಸವಾರಿ ಮಾಡುವವರೇ, \q2 ರತ್ನಗಂಬಳಿಗಳ ಮೇಲೆ ಕುಳಿತಿರುವವರೇ, \q2 ಮಾರ್ಗದಲ್ಲಿ ನಡೆಯುವವರೇ, ಗಾನಮಾಡಿರಿ. \q1 \v 11 ನೀರು ಸೇದುವ ಸ್ಥಳಗಳ ಹತ್ತಿರ ಗಾಯಕರ ಶಬ್ದದಿಂದ \q2 ಯೆಹೋವ ದೇವರ ನೀತಿಸಾಧನೆಗಳನ್ನು ವರ್ಣಿಸುತ್ತಾರೆ. \q1 ಇಸ್ರಾಯೇಲಿನಲ್ಲಿ ಅವರ ಹಳ್ಳಿಗಳ ನಿವಾಸಿಗಳಿಗೆ \q2 ಮಾಡಿದ ಮಹತ್ಕಾರ್ಯಗಳನ್ನು ತಿರುಗಿ ಪ್ರಕಟಿಸುವರು. \b \q1 “ಆಗ ಯೆಹೋವ ದೇವರ ಜನರು \q2 ಪಟ್ಟಣದ ಬಾಗಿಲುಗಳಿಗೆ ಇಳಿದು ಬರುವರು. \q1 \v 12 ‘ಎಚ್ಚರವಾಗು, ಎಚ್ಚರವಾಗು, ದೆಬೋರಳೇ, \q2 ಎಚ್ಚರವಾಗು, ಎಚ್ಚರವಾಗಿ ಹಾಡನ್ನು ಹಾಡು; \q1 ಬಾರಾಕನೇ, ಏಳು; \q2 ಅಬೀನೋವಮನ ಮಗನೇ, ನಿನ್ನನ್ನು ಸೆರೆಹಿಡಿದವರನ್ನು ಸೆರೆಯಾಗಿ ನಡೆಸು.’ \b \q1 \v 13 “ಆಗ ಉಳಿದವನನ್ನು ಅವರು ಜನರಲ್ಲಿ ಶ್ರೇಷ್ಠರಾದವರ ಮೇಲೆ ಆಳುವಂತೆ ಮಾಡಿದರು. \q2 ಯೆಹೋವ ದೇವರ ಜನರು ನನ್ನ ಸಹಾಯಕ್ಕಾಗಿ ಬಂದು, \q2 ಪರಾಕ್ರಮಶಾಲಿಗಳ ವಿರುದ್ಧ ಯುದ್ಧಮಾಡಿದರು. \q1 \v 14 ಅಮಾಲೇಕ್ಯರಿಗೆ ವಿರೋಧ ಮಾಡಿದವರ ಬೇರು ಎಫ್ರಾಯೀಮಿನಿಂದ ಉಂಟಾಯಿತು. \q2 ನಿನ್ನ ಹಿಂದೆ ನಿನ್ನ ಜನರಲ್ಲಿ ಬೆನ್ಯಾಮೀನನು \q1 ಮಾಕೀರನಲ್ಲಿಂದ ಅಧಿಪತಿಗಳೂ, \q2 ಜೆಬುಲೂನನಲ್ಲಿಂದ ಬರಹಗಾರನ ಲೇಖನಿಯನ್ನು ಉಪಯೋಗಿಸುವವರೂ ಬಂದರು. \q1 \v 15 ಇಸ್ಸಾಕಾರನ ಪ್ರಧಾನರು ದೆಬೋರಳ ಸಂಗಡ ಇದ್ದರು. \q2 ಹೌದು, ಇಸ್ಸಾಕಾರನ ಗೋತ್ರದವರು ಬಾರಾಕನ ಹಿಂದೆ ಅವನ ಕಟ್ಟಳೆಯ ಪ್ರಕಾರ, \q2 ಕಾಲುನಡಿಗೆಯಾಗಿ ಕಣಿವೆಯಲ್ಲಿ ನಡೆದರು. \q1 ರೂಬೇನನ ಕಡೆಯವರು ತಮ್ಮ ಹೃದಯಗಳನ್ನು \q2 ಮಹಾ ಪರಿಶೋಧನೆ ಮಾಡಿಕೊಂಡರು. \q1 \v 16 ಮಂದೆಗಳ ಕೂಗನ್ನು ಕೇಳಿ, \q2 ನೀನು ಕುರಿ ಹಟ್ಟಿಗಳ ಬಳಿಯಲ್ಲಿ ಇದ್ದದ್ದೇನು? \q1 ರೂಬೇನ್ಯರ ನಡುವೆ \q2 ಹೃದಯದ ಮಹಾ ಪರಿಶೋಧನೆಗಳು ಇದ್ದವು. \q1 \v 17 ಗಿಲ್ಯಾದನು ಯೊರ್ದನ್ ನದಿಯ ಆಚೆ ವಾಸಿಸಿದನು. \q2 ದಾನನು ಹಡಗುಗಳಲ್ಲಿ ನಿಂತದ್ದೇನು? \q1 ಆಶೇರನು ಸಮುದ್ರದ ದಡದಲ್ಲಿದ್ದು, \q2 ತನ್ನ ರೇವುಗಳ ಬಳಿಯಲ್ಲಿ ವಾಸಿಸಿದನು. \q1 \v 18 ಜೆಬುಲೂನ್ಯರು ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಕೊಡುವ ಜನರಾಗಿದ್ದರು. \q2 ನಫ್ತಾಲಿಯೂ ಸಹ ಹೊಲದ ಎತ್ತರವಾದ ಸ್ಥಳಗಳಲ್ಲಿ \q2 ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಕೊಡುವ ಜನರಾಗಿದ್ದರು. \b \q1 \v 19 “ಅರಸರು ಬಂದು ಯುದ್ಧಮಾಡಿದರು; \q2 ಆಗ ಕಾನಾನ್ಯರ ಅರಸರು \q1 ಮೆಗಿದ್ದೋನಿನ ಜಲ ಸಮೀಪವಾದ ತಾನಕದಲ್ಲಿ ಯುದ್ಧಮಾಡಿದರು. \q2 ಅವರು ಬೆಳ್ಳಿ ದ್ರವ್ಯಗಳನ್ನು ತೆಗೆದುಕೊಳ್ಳಲಿಲ್ಲ. \q1 \v 20 ಆಕಾಶದಲ್ಲಿ ಇರುವವುಗಳು ಯುದ್ಧ ಮಾಡಿದವು. \q2 ನಕ್ಷತ್ರಗಳು ತಮ್ಮ ಓಟಗಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧ ಮಾಡಿದವು. \q1 \v 21 ಕೀಷೋನ್ ನದಿಯು, \q2 ಆ ಹಳೆಯದಾದ ಕೀಷೋನ್ ನದಿಯು ಅವರನ್ನು ಬಡಿದುಕೊಂಡು ಹೋಯಿತು. \q2 ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದೆ. \q1 \v 22 ಆಗ ನೆಲವನ್ನು ಘಟ್ಟಿಸಿ ಓಡುವ ಅವನ ಬಲವಾದ ಕುದುರೆಗಳ \q2 ಮೆಟ್ಟಿನಿಂದ ಗೊರಸುಗಳು ಸೀಳಿಹೋದವು. \q1 \v 23 ಯೆಹೋವ ದೇವರ ದೂತನು ಹೀಗೆ ಹೇಳುತ್ತಾನೆ, \q2 ‘ನೀವು ಮೆರೋಜನ್ನು ಶಪಿಸಿರಿ. \q2 ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ, \q1 ಏಕೆಂದರೆ ಅವರು ಯೆಹೋವ ದೇವರ ಸಹಾಯಕ್ಕೂ, \q2 ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಯೆಹೋವ ದೇವರ ಸಹಾಯಕ್ಕೂ ಬಾರದೆ ಹೋದರು.’ \b \b \q1 \v 24 “ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳು ಆಶೀರ್ವಾದ ಹೊಂದಿದವಳು. \q2 ಗುಡಾರದಲ್ಲಿ ವಾಸಿಸುವ \q2 ಹೌದು, ಅವಳೇ ಸ್ತ್ರೀಯರೊಳಗೆ ಅಧಿಕ ಆಶೀರ್ವಾದ ಹೊಂದಿದವಳು. \q1 \v 25 ಅವನು ನೀರನ್ನು ಕೇಳಿದನು. ಅವಳು ಹಾಲು ಕೊಟ್ಟಳು; \q2 ಅಮೂಲ್ಯವಾದ ಬಟ್ಟಲಿನಲ್ಲಿ ಬೆಣ್ಣೆಯನ್ನು ತಂದಿಟ್ಟಳು. \q1 \v 26 ತನ್ನ ಕೈಯಲ್ಲಿ ಮೊಳೆಯನ್ನೂ, \q2 ತನ್ನ ಬಲಗೈಯಲ್ಲಿ ಕೆಲಸಗಾರನ ಸುತ್ತಿಗೆಯನ್ನೂ ತೆಗೆದುಕೊಂಡಳು. \q1 ಸುತ್ತಿಗೆಯಿಂದ ಸೀಸೆರನನ್ನು ಅವಳು ಹೊಡೆದಳು. ಅವಳು ಅವನ ತಲೆಯನ್ನು ತಿವಿದು ಹೊಡೆದಳು. \q2 ಅವನ ತಲೆಯನ್ನು ಹೊಡೆದು ಬಿಟ್ಟಳು. \q1 \v 27 ಅವಳ ಕಾಲುಗಳ ಹತ್ತಿರ ಮುದುರಿ ಬಿದ್ದು ಮಲಗಿದನು. \q2 ಅವಳ ಕಾಲುಗಳ ಹತ್ತಿರ ಬಾಗಿ ಬಿದ್ದನು. \q1 ಎಲ್ಲಿ ಬಾಗಿ ಬಿದ್ದನೋ, \q2 ಅಲ್ಲಿಯೇ ಬಿದ್ದು ಮರಣಹೊಂದಿದನು. \b \q1 \v 28 “ಸೀಸೆರನ ತಾಯಿ ಕಿಟಿಕಿಯಿಂದ ನೋಡಿದಳು, \q2 ಕಿಂಡಿಯಿಂದ ಕೂಗಿದಳು, \q1 ‘ಅವನ ರಥವು ಬರುವುದಕ್ಕೆ ಇಷ್ಟು ತಡವಾದದ್ದೇನು? \q2 ಅವನ ರಥಗಳ ಗಾಲಿಗಳು ಹಿಂದುಳಿದಿರುವುದೇನು?’ \q1 \v 29 ಅದಕ್ಕೆ ಅವಳ ಜ್ಞಾನವುಳ್ಳ ಪ್ರಧಾನ ಸ್ತ್ರೀಯರು ಉತ್ತರಕೊಟ್ಟರು. \q2 ಅವಳೇ ತನಗೆ ಬದಲು ಮಾತು ಕೇಳಿಕೊಂಡಳು: \q1 \v 30 ‘ಅವರು ಓಡಲಿಲ್ಲವೋ? ಕೊಳ್ಳೆ ಹಂಚಿಕೊಳ್ಳಲಿಲ್ಲವೋ? \q2 ಒಬ್ಬೊಬ್ಬ ಸೈನಿಕನಿಗೆ ಒಂದೆರಡು ದಾಸಿಯರು \q1 ಸೀಸೆರನಿಗಾದರೋ ನಾನಾ ವರ್ಣವುಳ್ಳ ಬಟ್ಟೆಗಳು. \q2 ನಾನಾ ವರ್ಣವುಳ್ಳ ವಿಚಿತ್ರವಾಗಿ ಕಸೂತಿಹಾಕಿದ ಬಟ್ಟೆಗಳು, \q1 ವಿಚಿತ್ರವಾಗಿ ಕಸೂತಿಹಾಕಿದ ಒಂದೆರಡು ಬಟ್ಟೆಗಳೂ \q2 ಕೊಳ್ಳೆ ಹಿಡಿಯುವವರಿಗೆ ತಕ್ಕಂಥ ಕಂಠಮಾಲೆಗಳೂ ಸಿಕ್ಕಲಿಲ್ಲವೋ?’ \b \b \q1 \v 31 “ಯೆಹೋವ ದೇವರೇ, ಹೀಗೆಯೇ ನಿಮ್ಮ ಶತ್ರುಗಳೆಲ್ಲರೂ ನಾಶವಾಗಲಿ. \q2 ಆದರೆ ಅವರನ್ನು ಪ್ರೀತಿ ಮಾಡುವವರು \q2 ಪರಾಕ್ರಮದಿಂದ ಹೊರಡುವ ಸೂರ್ಯನ ಹಾಗೆಯೇ ಇರಲಿ.” \p ಅನಂತರ ದೇಶವು ನಲವತ್ತು ವರ್ಷ ವಿಶ್ರಾಂತಿಯಲ್ಲಿತ್ತು. \c 6 \s1 ಗಿದ್ಯೋನನು \p \v 1 ಇಸ್ರಾಯೇಲರು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ಆದ್ದರಿಂದ ಯೆಹೋವ ದೇವರು ಅವರನ್ನು ಏಳು ವರ್ಷ ಮಿದ್ಯಾನ್ಯರ ಕೈಗೆ ಒಪ್ಪಿಸಿಕೊಟ್ಟರು. \v 2 ಮಿದ್ಯಾನ್ಯರ ಕೈ ಇಸ್ರಾಯೇಲಿಗೆ ವಿರೋಧವಾಗಿ ಬಲವಾದ್ದರಿಂದ ಇಸ್ರಾಯೇಲರು ಮಿದ್ಯಾನ್ಯರ ನಿಮಿತ್ತ ತಮಗೆ ಪರ್ವತಗಳಲ್ಲಿ ಇರುವ ಬಂಡೆಯ ಬಿರುಕುಗಳನ್ನೂ, ಗವಿಗಳನ್ನೂ, ಬಲವಾದ ಸ್ಥಾನಗಳನ್ನೂ ಮಾಡಿಕೊಂಡರು. \v 3 ಇಸ್ರಾಯೇಲರು ಬೀಜ ಬಿತ್ತಿದ ತರುವಾಯ ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಅವರಿಗೆ ವಿರೋಧವಾಗಿ ಬಂದು ದಂಡಿಳಿದು, \v 4 ಗಾಜದ ಪ್ರದೇಶದ ಮಟ್ಟಿಗೂ ಭೂಮಿಯ ಫಲವನ್ನು ಕೆಡಿಸಿಬಿಟ್ಟು, ಇಸ್ರಾಯೇಲಿನಲ್ಲಿ ಆಹಾರವಾದರೂ ಕುರಿ, ದನ, ಕತ್ತೆಗಳಾದರೂ ಉಳಿಯಗೊಡಿಸಲಿಲ್ಲ. \v 5 ಅವರು ತಮ್ಮ ಪಶುಗಳ ಡೇರೆಗಳ ಸಹಿತವಾಗಿ ಮಿಡತೆಗಳ ಹಾಗೆ ಗುಂಪಾಗಿ ಬಂದರು. ಅವರಿಗೂ, ಅವರ ಒಂಟೆಗಳಿಗೂ ಎಣಿಕೆ ಇರಲಿಲ್ಲ. ಅವರು ನಾಡನ್ನು ನಾಶಮಾಡುವುದಕ್ಕೆ ಬಂದರು. \v 6 ಆದಕಾರಣ ಇಸ್ರಾಯೇಲರು ಮಿದ್ಯಾನ್ಯರಿಂದ ಬಹಳ ಬಡವರಾದರು. ಆಗ ಇಸ್ರಾಯೇಲರು ಯೆಹೋವ ದೇವರಿಗೆ ಬೇಡಿಕೊಂಡರು. \p \v 7 ಇಸ್ರಾಯೇಲರು ಮಿದ್ಯಾನ್ಯರ ನಿಮಿತ್ತ ಯೆಹೋವ ದೇವರನ್ನು ಬೇಡಿಕೊಂಡಾಗ, \v 8 ಅವರು ಒಬ್ಬ ಪ್ರವಾದಿಯನ್ನು ಇಸ್ರಾಯೇಲರ ಬಳಿಗೆ ಕಳುಹಿಸಿದರು. ಅವನು ಅವರಿಗೆ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, “ನೀವು ದಾಸತ್ವದಲ್ಲಿದ್ದ ನಿಮ್ಮನ್ನು ನಾನು ಈಜಿಪ್ಟಿನಿಂದ ಬರಮಾಡಿದೆನು. \v 9 ನಿಮ್ಮನ್ನು ಈಜಿಪ್ಟಿನವರ ಕೈಯಿಂದ ತಪ್ಪಿಸಿ, ಅವರನ್ನು ನಿಮ್ಮ ಮುಂದೆ ಹೊರಗೆ ಹಾಕಿ, ಅವರ ದೇಶವನ್ನು ನಿಮಗೆ ಕೊಟ್ಟೆನು. \v 10 ‘ನಾನೇ ನಿಮ್ಮ ದೇವರಾದ ಯೆಹೋವ ದೇವರು. ನೀವು ವಾಸಿಸಿರುವ ಅಮೋರಿಯರ ದೇಶದ ದೇವರುಗಳಿಗೆ ಭಯಪಡಬೇಡಿರಿ,’ ಎಂದು ನಾನು ಹೇಳಿದೆನು. ಆದರೆ ನೀವು ನನ್ನ ಸ್ವರವನ್ನು ಕೇಳದೆ ಹೋದಿರಿ,” ಎಂದು ಹೇಳಿದನು. \p \v 11 ಯೆಹೋವ ದೇವರ ದೂತನು ಬಂದು ಅಬೀಯೆಜೆರನಾದ ಯೋವಾಷನಿಗೆ ಹೊಂದಿದ ಒಫ್ರದಲ್ಲಿರುವ ಏಲಾ ಮರದ ಕೆಳಗೆ ಕುಳಿತನು. ಆಗ ಯೋವಾಷನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಯಾಗುವ ಹಾಗೆ ದ್ರಾಕ್ಷಿಯ ಆಲೆಯ ಬಳಿಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು. \v 12 ಆಗ ಯೆಹೋವ ದೇವರ ದೂತನು ಗಿದ್ಯೋನನಿಗೆ ಪ್ರತ್ಯಕ್ಷವಾಗಿ ಅವನಿಗೆ, “ಬಲಿಷ್ಠನಾದ ಪರಾಕ್ರಮಶಾಲಿಯೇ, ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದನು. \p \v 13 ಆಗ ಗಿದ್ಯೋನನು ಅವನಿಗೆ, “ಒಡೆಯನೇ, ಕ್ಷಮಿಸಿರಿ, ಯೆಹೋವ ದೇವರು ನಮ್ಮ ಸಂಗಡ ಇದ್ದರೆ, ಇದೆಲ್ಲಾ ನಮಗೆ ಏಕೆ ಸಂಭವಿಸಿತು? ಯೆಹೋವ ದೇವರು ನಮ್ಮನ್ನು ಈಜಿಪ್ಟಿನಿಂದ ಬರಮಾಡಲಿಲ್ಲವೋ? ಎಂದು ನಮ್ಮ ಪಿತೃಗಳು ನಮಗೆ ವಿವರಿಸಿ ಹೇಳಿದಂಥ ಅದ್ಭುತಗಳು ಎಲ್ಲಿ? ಈಗ ಯೆಹೋವ ದೇವರು ನಮ್ಮನ್ನು ಕೈಬಿಟ್ಟು, ಮಿದ್ಯಾನ್ಯರ ಕೈಗೆ ನಮ್ಮನ್ನು ಒಪ್ಪಿಸಿದ್ದಾರೆ,” ಎಂದನು. \p \v 14 ಯೆಹೋವ ದೇವರು ಅವನನ್ನು ದೃಷ್ಟಿಸಿ ನೋಡಿ, “ನಿನಗಿರುವ ಈ ಶಕ್ತಿಯಲ್ಲಿ ಹೋಗು, ನೀನು ಇಸ್ರಾಯೇಲನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿಸುವೆ; ನಾನು ನಿನ್ನನ್ನು ಕಳುಹಿಸಲಿಲ್ಲವೋ?” ಎಂದರು. \p \v 15 ಅದಕ್ಕವನು ಅವರಿಗೆ, “ನನ್ನ ಒಡೆಯನೇ, ಕ್ಷಮಿಸಿರಿ ನಾನು ಇಸ್ರಾಯೇಲನ್ನು ಹೇಗೆ ರಕ್ಷಿಸಲಿ? ಮನಸ್ಸೆಯಲ್ಲಿ ನನ್ನ ಕುಟುಂಬವು ಬಡತನದ್ದು. ನನ್ನ ತಂದೆಯ ಮನೆಯಲ್ಲಿ ನಾನು ಅಲ್ಪನು,” ಎಂದನು. \p \v 16 ಆದರೆ ಯೆಹೋವ ದೇವರು ಅವನಿಗೆ, “ನಾನು ನಿನ್ನ ಸಂಗಡ ಖಂಡಿತವಾಗಿ ಇರುವುದರಿಂದ ನೀನು ಮಿದ್ಯಾನ್ಯರನ್ನು ಒಬ್ಬ ಮನುಷ್ಯನೋ ಎಂಬಂತೆ ಹೊಡೆಯುವಿ,” ಎಂದರು. \p \v 17 ಅದಕ್ಕವನು, “ಈಗ ನಿಮ್ಮ ಸಮ್ಮುಖದಲ್ಲಿ ನನಗೆ ದಯೆ ದೊರಕಿದ್ದರೆ, ನನ್ನ ಸಂಗಡ ಮಾತನಾಡುವವರು ನೀವು ಎಂಬುದಕ್ಕೆ ನನಗೆ ಒಂದು ಗುರುತನ್ನು ತೋರಿಸಬೇಕು. \v 18 ನಾನು ನಿಮ್ಮ ಬಳಿಗೆ ನನ್ನ ಕಾಣಿಕೆಯನ್ನು ತಂದು, ನಿಮ್ಮ ಮುಂದೆ ಇಡುವವರೆಗೆ ನೀವು ಈ ಸ್ಥಳವನ್ನು ಬಿಟ್ಟುಹೋಗಬಾರದು,” ಎಂದು ಬೇಡಿಕೊಂಡನು. \p ಅದಕ್ಕೆ ಯೆಹೋವ ದೇವರು, “ನೀನು ತಿರುಗಿ ಬರುವ ತನಕ ನಾನು ಕಾದಿರುವೆನು,” ಎಂದರು. \p \v 19 ಆಗ ಗಿದ್ಯೋನನು ಒಳಗೆ ಹೋಗಿ, ಒಂದು ಮೇಕೆಯ ಮರಿಯನ್ನೂ, ಹದಿನಾರು ಕಿಲೋಗ್ರಾಂ\f + \fr 6:19 \fr*\ft ಸುಮಾರು ಒಂದು ಎಫಾ\ft*\f* ಹಿಟ್ಟಿನಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ಸಿದ್ಧಮಾಡಿ, ಮಾಂಸವನ್ನು ಪುಟ್ಟಿಯಲ್ಲಿ ಇಟ್ಟು, ರಸವನ್ನು ಪಾತ್ರೆಯಲ್ಲಿ ಹೊಯ್ದು, ಅದನ್ನು ಹೊರಗೆ ಏಲಾ ಮರದ ಕೆಳಗೆ ಇದ್ದ ಅವರ ಬಳಿಯಲ್ಲಿ ತಂದಿಟ್ಟನು. \p \v 20 ದೇವದೂತನು ಅವನಿಗೆ, “ನೀನು ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ತೆಗೆದುಕೊಂಡು ಈ ಬಂಡೆಯ ಮೇಲೆ ಇಟ್ಟು, ರಸವನ್ನು ಸುರಿ,” ಎಂದನು. ಅವನು ಹಾಗೆಯೇ ಮಾಡಿದನು. \v 21 ಆಗ ಯೆಹೋವ ದೇವರ ದೂತನು ತನ್ನ ಕೈಯಲ್ಲಿದ್ದ ಕೋಲಿನ ಕೊನೆಯನ್ನು ಚಾಚಿ, ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ಮುಟ್ಟಿದನು. ಆಗ ಬೆಂಕಿಯು ಬಂಡೆಯಿಂದ ಎದ್ದು, ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ದಹಿಸಿಬಿಟ್ಟಿತು. ಆಗ ಯೆಹೋವ ದೇವರ ದೂತನು ಅವನ ಕಣ್ಣುಗಳಿಗೆ ಕಾಣಿಸದೆ ಹೋದನು. \v 22 ಅವನು ಯೆಹೋವ ದೇವರ ದೂತನೆಂದು ಗಿದ್ಯೋನನು ತಿಳಿದಾಗ ಗಿದ್ಯೋನನು, “ಸಾರ್ವಭೌಮ ಯೆಹೋವ ದೇವರೇ, ನಾನು ಯೆಹೋವ ದೇವರ ದೂತನನ್ನು ಮುಖಾಮುಖಿಯಾಗಿ ಕಂಡೆನು,” ಎಂದನು. \p \v 23 ಆದರೆ ಯೆಹೋವ ದೇವರು ಅವನಿಗೆ, “ನಿನಗೆ ಸಮಾಧಾನವಾಗಲಿ; ಭಯಪಡಬೇಡ, ನೀನು ಸಾಯುವುದಿಲ್ಲ,” ಎಂದರು. \p \v 24 ಗಿದ್ಯೋನನು ಯೆಹೋವ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿ, “ಯೆಹೋವ ಶಾಲೋಮ್”\f + \fr 6:24 \fr*\ft ಹೀಬ್ರೂ ಭಾಷೆಯಲ್ಲಿ \ft*\fq ಯೆಹೋವ ಶಾಲೋಮ್ \fq*\ft ಅಂದರೆ \ft*\fqa ಯೆಹೋವ ದೇವರು ಸಮಾಧಾನಪ್ರದರು \fqa*\ft ಎಂದು ಅರ್ಥ\ft*\f* ಎಂದು ಅದಕ್ಕೆ ಹೆಸರಿಟ್ಟನು. ಅದು ಈವರೆಗೂ ಅಬೀಯೆಜೆರ್ ಒಫ್ರದಲ್ಲಿ ಇನ್ನೂ ಇದೆ. \p \v 25 ಅದೇ ರಾತ್ರಿಯಲ್ಲಿ ಯೆಹೋವ ದೇವರು ಅವನಿಗೆ, “ನೀನು ನಿನ್ನ ತಂದೆಗಿರುವ ಎತ್ತುಗಳಲ್ಲಿ ಎಳೆಯದಾದ ಏಳು ವರ್ಷದ ಎರಡನೆಯ ಹೋರಿಯನ್ನು ತೆಗೆದುಕೊಂಡುಹೋಗಿ, ನಿನ್ನ ತಂದೆಗೆ ಇರುವ ಬಾಳನ ಬಲಿಪೀಠವನ್ನು ಕೆಡವಿ, ಅದರ ಸಮೀಪದಲ್ಲಿರುವ ಅಶೇರವೆಂಬ ವಿಗ್ರಹಸ್ತಂಭಗಳನ್ನು\f + \fr 6:25 \fr*\ft ಅಶೇರಾ ದೇವಿಯ ಮರದ ಚಿಹ್ನೆ\ft*\f* ಕಡಿದುಹಾಕಿ, \v 26 ಈ ಪರ್ವತದ ತುದಿಯಲ್ಲಿ ನೇಮಕವಾದ ಸ್ಥಳದಲ್ಲಿ ನಿನ್ನ ದೇವರಾದ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಆ ಎರಡನೆಯ ಹೋರಿಯನ್ನು ತಂದು, ನೀನು ಕಡಿದುಹಾಕಿದ ಅಶೇರ ಸ್ತಂಭವನ್ನು ಕಟ್ಟಿಗೆಗಳ ಮೇಲೆ ದಹನಬಲಿಯಾಗಿ ಅರ್ಪಿಸು,” ಎಂದರು. \p \v 27 ಆಗ ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ತೆಗೆದುಕೊಂಡು, ಯೆಹೋವ ದೇವರು ತನಗೆ ಹೇಳಿದ ಹಾಗೆಯೇ ಮಾಡಿದನು. ಆದರೆ ಅವನು ತನ್ನ ತಂದೆಯ ಮನೆಯವರೆಗೂ, ಆ ಊರಿನ ಮನುಷ್ಯರಿಗೂ ಭಯಪಟ್ಟದ್ದರಿಂದ ಹಗಲಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು. \p \v 28 ಆ ಊರಿನ ಮನುಷ್ಯರು ಬೆಳಿಗ್ಗೆ ಎದ್ದಾಗ, ಬಾಳನ ಬಲಿಪೀಠವು ಕೆಡವಲಾಗಿದ್ದನ್ನು ಮತ್ತು ಅದರ ಪಕ್ಕದಲ್ಲಿದ್ದ ಅಶೇರ ಸ್ತಂಭವನ್ನು ಕಡಿಯಲಾಗಿರುವುದನ್ನು ಕಂಡರು. ಹೊಸದಾಗಿ ಕಟ್ಟಿದ ಬಲಿಪೀಠದ ಮೇಲೆ ಆ ಎರಡನೆಯ ಹೋರಿಯ ಬಲಿ ಅರ್ಪಿಸಲಾಗಿತ್ತು. \p \v 29 ಆಗ ಅವರು ಒಬ್ಬರಿಗೊಬ್ಬರು, “ಈ ಕಾರ್ಯವನ್ನು ಮಾಡಿದವನ್ಯಾರು?” ಎಂದರು. \p ವಿಚಾರಿಸಿ ಕೇಳಿದಾಗ, ಅವರು, “ಯೋವಾಷನ ಮಗ ಗಿದ್ಯೋನನು ಈ ಕಾರ್ಯ ಮಾಡಿದನು,” ಎಂದರು. \p \v 30 ಆ ಊರಿನವರು ಯೋವಾಷನಿಗೆ, “ನಿನ್ನ ಮಗನನ್ನು ಹೊರಗೆ ತೆಗೆದುಕೊಂಡು ಬಾ, ಅವನು ಸಾಯಬೇಕು. ಏಕೆಂದರೆ ಬಾಳನ ಬಲಿಪೀಠವನ್ನು ಕೆಡವಿ, ಅದರ ಬಳಿಯಲ್ಲಿದ್ದ ಅಶೇರ ಸ್ತಂಭವನ್ನು ಕಡಿದುಹಾಕಿದನು,” ಎಂದರು. \p \v 31 ಆದರೆ ಯೋವಾಷನು ತನಗೆ ವಿರೋಧವಾಗಿ ನಿಂತಿದ್ದ ಸಮಸ್ತರಿಗೂ, “ನೀವು ಬಾಳನಿಗಾಗಿ ವ್ಯಾಜ್ಯವಾಡುವಿರೋ? ನೀವು ಅವನನ್ನು ರಕ್ಷಿಸುವಿರೋ? ಅವನಿಗಾಗಿ ವ್ಯಾಜ್ಯ ಮಾಡುವವನು ಈ ಉದಯಕಾಲದಲ್ಲೇ ಹತನಾಗಲಿ. ಅವನು ದೇವರಾದರೆ ತನ್ನ ಬಲಿಪೀಠವನ್ನು ಕೆಡವಿದ್ದರಿಂದ, ಅವನು ತನ್ನನ್ನು ರಕ್ಷಿಸಿಕೊಳ್ಳಲಿ” ಎಂದನು. \v 32 ಗಿದ್ಯೋನನು ಬಾಳನ ಬಲಿಪೀಠವನ್ನು ಕೆಡವಿದ ಕಾರಣ ಅವರು ಆ ದಿವಸದಲ್ಲಿ, “ಬಾಳನೇ ವ್ಯಾಜ್ಯವಾಡಲಿ” ಎಂದು ಹೇಳಿದ್ದರಿಂದ ಗಿದ್ಯೋನನಿಗೆ ಯೆರುಬ್ಬಾಳ ಎಂಬ ಹೆಸರಾಯಿತು. \p \v 33 ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಒಟ್ಟಾಗಿ ಕೂಡಿ, ಯೊರ್ದನ್ ಹೊಳೆ ದಾಟಿ ಬಂದು, ಇಜ್ರೆಯೇಲ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು. \v 34 ಆದರೆ ಯೆಹೋವ ದೇವರ ಆತ್ಮರು ಗಿದ್ಯೋನನ ಮೇಲೆ ಬಂದರು. ಅವನು ತುತೂರಿಯನ್ನು ಊದಿದಾಗ, ಅಬೀಯೆಜೆರಿನವರು ಅವನ ಹಿಂದೆ ಕೂಡಿಬಂದರು. \v 35 ಮನಸ್ಸೆಯವರ ಬಳಿ ದೂತರನ್ನು ಕಳುಹಿಸಿದಾಗ, ಅವರು ಅವನ ಹಿಂದೆ ಕೂಡಿಬಂದರು. ಆಶೇರ್, ಜೆಬುಲೂನಿನಲ್ಲಿಯೂ, ನಫ್ತಾಲಿನಲ್ಲಿಯೂ ದೂತರನ್ನು ಕಳುಹಿಸಲು, ಅವರು ಇವರಿಗೆ ಭೇಟಿಯಾಗಲು ಬಂದರು. \p \v 36 ಗಿದ್ಯೋನನು ದೇವರಿಗೆ, “ನೀವು ಹೇಳಿದ ಹಾಗೆಯೇ ನನ್ನ ಕೈಯಿಂದ ಇಸ್ರಾಯೇಲನನ್ನು ರಕ್ಷಿಸುವಿರಿಯಾದರೆ, \v 37 ಇಗೋ, ಉಣ್ಣೆಯ ತುಪ್ಪಟವನ್ನು ಕಣದಲ್ಲಿ ಹಾಕುವೆನು. ಮಂಜು ಉಣ್ಣೆಯ ಮೇಲೆ ಮಾತ್ರವೇ ಇದ್ದು ಭೂಮಿಯೆಲ್ಲಾ ಒಣಗಿದ್ದರೆ, ಆಗ ನೀವು ಹೇಳಿದ ಹಾಗೆ ಇಸ್ರಾಯೇಲನ್ನು ನನ್ನ ಕೈಯಿಂದ ನೀವು ರಕ್ಷಿಸುವಿರಿ ಎಂಬುದನ್ನು ನಾನು ತಿಳಿಯುವೆನು,” ಎಂದನು. \v 38 ಅದು ಹಾಗೆಯೇ ಆಯಿತು. ಅವನು ಮರುದಿವಸ ಉದಯದಲ್ಲಿ ಎದ್ದು, ಉಣ್ಣೆಯ ತುಪ್ಪಟವನ್ನು ತೆಗೆದುಕೊಂಡು, ಅದರೊಳಗಿದ್ದ ಮಂಜಿನ ನೀರನ್ನು ಒಂದು ಬೋಗುಣಿಯ ತುಂಬಾ ಹಿಂಡಿದನು. \p \v 39 ಗಿದ್ಯೋನನು ದೇವರಿಗೆ, “ನಾನು ಇನ್ನೊಂದು ಸಾರಿ ಮಾತನಾಡುವುದರಿಂದ ನಿಮ್ಮ ಕೋಪವು ನನ್ನ ಮೇಲೆ ಉರಿಯಬಾರದು. ಉಣ್ಣೆಯ ತುಪ್ಪಟದಿಂದ ಇನ್ನೊಂದು ಸಾರಿ ನಾನು ನಿಮ್ಮನ್ನು ಶೋಧಿಸುವೆನು. ತುಪ್ಪಟ ಮಾತ್ರವೇ ಒಣಗುವ ಹಾಗೆಯೂ ಭೂಮಿಯಲ್ಲೆಲ್ಲಾ ಮಂಜು ಇರುವ ಹಾಗೆಯೂ ಅಪ್ಪಣೆ ಆಗಲಿ,” ಎಂದನು. \v 40 ಆ ರಾತ್ರಿ ದೇವರು ಹಾಗೆಯೇ ಮಾಡಿದರು. ತುಪ್ಪಟ ಮಾತ್ರ ಒಣಗಿತ್ತು, ನೆಲದ ಮೇಲೆಲ್ಲಾ ಹನಿಬಿದ್ದಿತ್ತು. \c 7 \s1 ಗಿದ್ಯೋನನು ಮಿದ್ಯಾನರನ್ನು ಸೋಲಿಸಿದ್ದು \p \v 1 ಗಿದ್ಯೋನನೆಂಬ ಯೆರುಬ್ಬಾಳನೂ, ಅವನ ಸಂಗಡ ಇದ್ದ ಜನರೆಲ್ಲರೂ ಉದಯದಲ್ಲಿ ಎದ್ದು, ಹೆರೋದಿನ ಬಾವಿಯ ಬಳಿಯಲ್ಲಿ ದಂಡಿಳಿಸಿದರು. ಮಿದ್ಯಾನ್ಯರ ದಂಡು ಅವರಿಗೆ ಉತ್ತರಕ್ಕೆ ಮೋರೆ ಬೆಟ್ಟದ ತಗ್ಗಿನಲ್ಲಿ ಇಳಿದಿತ್ತು. \v 2 ಆಗ ಯೆಹೋವ ದೇವರು ಗಿದ್ಯೋನನಿಗೆ, “ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ, ನಾನು ಮಿದ್ಯಾನ್ಯರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವುದಕ್ಕೆ ಸಾಧ್ಯವಿಲ್ಲ ಇಸ್ರಾಯೇಲರು, ‘ನನ್ನ ಕೈ ನನ್ನನ್ನು ರಕ್ಷಿಸಿತು,’ ಎಂದು ನನಗೆ ವಿರೋಧವಾಗಿ ಹೆಚ್ಚಳಪಟ್ಟಾರು. \v 3 ಆದ್ದರಿಂದ ನೀನು ಹೋಗಿ ಜನರು ಕೇಳುವ ಹಾಗೆ, ‘ಯಾವನಿಗೆ ಭಯವೂ, ಹೆದರಿಕೆಯೂ ಉಂಟೋ ಅವನು ತಿರುಗಿ ತ್ವರೆಯಾಗಿ ಗಿಲ್ಯಾದ್ ಬೆಟ್ಟದಿಂದ ಹೋಗಲಿ,’ ಎಂದು ಪ್ರಕಟಮಾಡು,” ಎಂದರು. ಆಗ ಜನರಲ್ಲಿ ಇಪ್ಪತ್ತೆರಡು ಸಾವಿರ ಜನರು ತಿರುಗಿ ಹೋದರು; ನಂತರ ಹತ್ತು ಸಾವಿರ ಜನರು ಉಳಿದರು. \p \v 4 ಯೆಹೋವ ದೇವರು ಗಿದ್ಯೋನನಿಗೆ, “ಜನರು ಇನ್ನೂ ತುಂಬ ಇದ್ದರೆ; ಅವರನ್ನು ಹತ್ತಿರದ ಹಳ್ಳಕ್ಕೆ ಕರೆದುಕೊಂಡು ಹೋಗು. ಅಲ್ಲಿ ನಾನು ಅವರನ್ನು ನಿನಗೋಸ್ಕರ ಪರೀಕ್ಷೆಮಾಡಿ ಆರಿಸುವೆನು. ನಿನ್ನ ಸಂಗಡ ಹೋಗುವವರಲ್ಲಿ ಯಾವನನ್ನು ಕುರಿತು ಹೇಳುವೆನೋ, ಅವನು ನಿನ್ನ ಸಂಗಡ ಹೋಗಲಿ. ಆದರೆ ನಾನು ನಿನ್ನ ಸಂಗಡ ಬರಬಾರದೆಂದು ಯಾವನನ್ನು ಕುರಿತು ಹೇಳುವೆನೋ, ಅವನು ಹೋಗಬಾರದು,” ಎಂದರು. \p \v 5 ಗಿದ್ಯೋನನು ಜನರನ್ನು ಹಳ್ಳದ ಬಳಿಗೆ ಕರಕೊಂಡು ಬಂದನು. ಆಗ ಯೆಹೋವ ದೇವರು ಗಿದ್ಯೋನನಿಗೆ, “ನಾಯಿ ನೆಕ್ಕುವ ಹಾಗೆ ಜಲವನ್ನು ತನ್ನ ನಾಲಿಗೆಯಿಂದ ನೆಕ್ಕುವ ಪ್ರತಿಯೊಬ್ಬನನ್ನೂ, ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗುವ ಪ್ರತಿಯೊಬ್ಬನನ್ನೂ ಬೇರೆಬೇರೆಯಾಗಿ ನಿಲ್ಲಿಸು,” ಎಂದರು. \v 6 ಆಗ ನೀರನ್ನು ತಮ್ಮ ಕೈಯಿಂದ ತೆಗೆದುಕೊಂಡು, ತಮ್ಮ ಬಾಯಿಗೆ ಎತ್ತಿ ನೆಕ್ಕಿದವರು ಮುನ್ನೂರು ಜನ, ಉಳಿದ ಜನರೆಲ್ಲಾ ನೀರು ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗಿದರು. \p \v 7 ಆಗ ಯೆಹೋವ ದೇವರು ಗಿದ್ಯೋನನಿಗೆ, “ನೆಕ್ಕಿ ಕುಡಿದ ಆ ಮುನ್ನೂರು ಜನರಿಂದ ನಾನು ನಿಮ್ಮನ್ನು ರಕ್ಷಿಸಿ, ಮಿದ್ಯಾನ್ಯರನ್ನು ನಿನ್ನ ಕೈಯಲ್ಲಿ ಒಪ್ಪಿಸುವೆನು. ಇತರ ಜನರೆಲ್ಲಾ ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ,” ಎಂದರು. \v 8 ಆಗ ಜನರು ಆಹಾರವನ್ನೂ, ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು. ಆದರೆ ಗಿದ್ಯೋನನು ಇಸ್ರಾಯೇಲರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ, ಆ ಮುನ್ನೂರು ಜನರನ್ನು ಇಟ್ಟುಕೊಂಡನು. \p ಮಿದ್ಯಾನ್ಯರ ದಂಡು ಅವನಿಗೆ ಕೆಳಭಾಗದ ಕಣಿವೆಯಲ್ಲಿ ಇತ್ತು. \v 9 ಆಗ ರಾತ್ರಿಯಲ್ಲಿ, ಯೆಹೋವ ದೇವರು ಅವನಿಗೆ, “ನೀನು ಎದ್ದು ಪಾಳೆಗೆ ವಿರೋಧವಾಗಿ ಇಳಿದು ಹೋಗು. ಏಕೆಂದರೆ ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ. \v 10 ಇಳಿದು ಹೋಗುವುದಕ್ಕೆ ನೀನು ಭಯಪಟ್ಟರೆ, ಮೊದಲು ನೀನು ನಿನ್ನ ಸೇವಕನಾದ ಪುರನ ಸಂಗಡ ಪಾಳೆಯ ಬಳಿಗೆ ಇಳಿದು ಹೋಗಿ, \v 11 ಅವರು ಮಾತನಾಡುವುದನ್ನು ಕೇಳು. ತರುವಾಯ ಪಾಳೆಯಲ್ಲಿ ಇಳಿದು ಹೋಗುವುದಕ್ಕೆ ನಿನ್ನ ಕೈಗಳು ಬಲಗೊಳ್ಳುವುವು,” ಎಂದರು. ಹಾಗೆಯೇ ಅವನು ತನ್ನ ಸೇವಕನಾದ ಪುರನ ಸಂಗಡ ಪಾಳೆಯ ಹೊರಗಿರುವ ಸೈನಿಕರ ಬಳಿಗೆ ಹೋದನು. \v 12 ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಮಿಡತೆಗಳಷ್ಟು ಗುಂಪಾಗಿ ತಗ್ಗಿನಲ್ಲಿ ಮಲಗಿದ್ದರು. ಅವರ ಒಂಟೆಗಳು ಸಮುದ್ರದ ಮರಳಿನ ಹಾಗೆ ಅಸಂಖ್ಯವಾಗಿದ್ದವು. \p \v 13 ಗಿದ್ಯೋನನು ಬಂದಾಗ, ಒಬ್ಬನು ತನ್ನ ಜೊತೆಗಾರನಿಗೆ ತನಗಾದ ಸ್ವಪ್ನವನ್ನು ವಿವರಿಸಿ ಹೇಳಿದ್ದೇನೆಂದರೆ, “ಇಗೋ, ನಾನು ಒಂದು ಕನಸನ್ನು ಕಂಡೆನು. ಒಂದು ಜವೆಗೋಧಿಯ ರೊಟ್ಟಿಯು ಮಿದ್ಯಾನ್ಯರ ಪಾಳೆಯ ಮೇಲೆ ಹೊರಳಿ, ಒಂದು ಡೇರೆಯ ಮೇಲೆ ಬಂದು, ಅದು ಬೀಳುವ ಹಾಗೆ ಅದನ್ನು ಹೊಡೆದು, ಅದನ್ನು ಕೆಡವಿ ಹಾಕಿತು. ಆಗ ಡೇರೆಯು ಬಿದ್ದುಹೋಯಿತು,” ಎಂದನು. \p \v 14 ಅವನ ಜೊತೆಗಾರನು ಉತ್ತರಕೊಟ್ಟು, “ಇದು ಯೋವಾಷನ ಮಗನಾದ ಗಿದ್ಯೋನನೆಂಬ ಇಸ್ರಾಯೇಲಿನ ಮನುಷ್ಯನ ಖಡ್ಗವೇ ಹೊರತು ಬೇರೆ ಅಲ್ಲ. ದೇವರು ಮಿದ್ಯಾನ್ಯರನ್ನೂ, ಈ ಸಮಸ್ತ ಪಾಳೆಯನ್ನೂ ಅವನ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು. \p \v 15 ಗಿದ್ಯೋನನು ಆ ಕನಸಿನ ವಿವರವನ್ನೂ, ಅದರ ಅರ್ಥವನ್ನೂ ಕೇಳಿದಾಗ, ಅವನು ಯೆಹೋವ ದೇವರನ್ನು ಆರಾಧಿಸಿ, ಇಸ್ರಾಯೇಲ್ ಪಾಳೆಗೆ ತಿರುಗಿಬಂದು, “ಏಳಿರಿ, ಯೆಹೋವ ದೇವರು ಮಿದ್ಯಾನ್ಯರ ಪಾಳೆಯನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರೆ,” ಎಂದು ಹೇಳಿದನು. \v 16 ಆ ಮುನ್ನೂರು ಜನರನ್ನು ಮೂರು ಭಾಗವಾಗಿ ಹಂಚಿ, ಎಲ್ಲರ ಕೈಯಲ್ಲಿ ತುತೂರಿಗಳನ್ನೂ, ಬರಿದಾದ ಕೊಡಗಳನ್ನೂ, ಅವುಗಳಲ್ಲಿ ಇಡುವ ಪಂಜುಗಳನ್ನೂ ಕೊಟ್ಟನು. \p \v 17 ಅನಂತರ ಗಿದ್ಯೋನನು, “ನಾನು ಮಾಡುವುದನ್ನು ನೋಡಿ ಹಾಗೆಯೇ ನೀವೂ ಮಾಡಿರಿ. ನಾನು ಪಾಳೆಯ ಹೊರಗೆ ಬಂದಾಗ ಹೇಗೆ ಮಾಡುವೆನೋ, ಹಾಗೆಯೇ ನೀವೂ ಮಾಡಿರಿ. \v 18 ನಾನೂ, ನನ್ನ ಸಂಗಡ ಇರುವವರೆಲ್ಲರೂ ತುತೂರಿಯನ್ನು ಊದುವಾಗ, ನೀವೆಲ್ಲರೂ ಪಾಳೆಯ ಸುತ್ತಲೂ, ಎಲ್ಲಾ ಕಡೆಯಲ್ಲಿಯೂ ತುತೂರಿಗಳನ್ನು ಊದಿ, ‘ಯೆಹೋವ ದೇವರಿಗಾಗಿ, ಗಿದ್ಯೋನನಿಗಾಗಿ,’ ಎಂದು ಕೂಗಿರಿ,” ಎಂದನು. \p \v 19 ಮಧ್ಯರಾತ್ರಿ ಆರಂಭದ ಜಾವದಲ್ಲಿ ಕಾವಲುಗಾರರನ್ನು ಬದಲಾಯಿಸಿದಾಗ, ಗಿದ್ಯೋನನೂ, ಅವನ ಸಂಗಡ ಇದ್ದ ನೂರು ಮಂದಿಯೂ ಪಾಳೆಯ ಹೊರಗೆ ಬಂದು, ತುತೂರಿಗಳನ್ನು ಊದಿ, ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದರು. \v 20 ಈ ಮೂರು ಗುಂಪಿನ ಜನರು ತುತೂರಿಗಳನ್ನು ಊದಿ, ಆ ಕೊಡಗಳನ್ನು ಒಡೆದುಬಿಟ್ಟು, ಪಂಜುಗಳನ್ನು ತಮ್ಮ ಎಡಗೈಯಲ್ಲಿಯೂ, ಊದುವ ತುತೂರಿಗಳನ್ನು ತಮ್ಮ ಬಲಗೈಯಲ್ಲಿಯೂ ಹಿಡಿದು, “ಯೆಹೋವ ದೇವರಿಗಾಗಿ ಖಡ್ಗ, ಗಿದ್ಯೋನನಿಗಾಗಿ ಖಡ್ಗ,” ಎಂದು ಕೂಗಿ ಪಾಳೆಯ ಸುತ್ತಲೂ ಅವರವರ ಸ್ಥಳದಲ್ಲಿ ನಿಂತರು. \v 21 ಆಗ ಪಾಳೆಯದವರಾದರೋ ಕೂಗುತ್ತಾ ಓಡಿಹೋದರು. \p \v 22 ಮುನ್ನೂರು ಜನರು ತುತೂರಿಗಳನ್ನು ಊದುವಾಗ, ಯೆಹೋವ ದೇವರು ಪಾಳೆಯದಲ್ಲಿ ಎಲ್ಲೆಲ್ಲಿಯೂ ಒಬ್ಬನ ಖಡ್ಗವನ್ನು ಒಬ್ಬನ ಮೇಲೆ ಬರಮಾಡಿದರು. ಪಾಳೆಯ ಚೆರೇರಿನಲ್ಲಿರುವ ಬೇತ್ ಷಿಟ್ಟದವರೆಗೂ, ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾದ ಮೇರೆಯವರೆಗೂ ಓಡಿಹೋಯಿತು. \v 23 ಇಸ್ರಾಯೇಲರು ನಫ್ತಾಲಿಯಿಂದಲೂ, ಆಶೇರನಿಂದಲೂ, ಸಮಸ್ತ ಮನಸ್ಸೆಯವರೆಲ್ಲರೂ ಕೂಡಿಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು. \v 24 ಇದಲ್ಲದೆ ಗಿದ್ಯೋನನು ಎಫ್ರಾಯೀಮ್ ಬೆಟ್ಟದಲ್ಲೆಲ್ಲಾ ದೂತರನ್ನು ಕಳುಹಿಸಿ, “ನೀವು ಮಿದ್ಯಾನ್ಯರಿಗೆ ಎದುರಾಗಿ ಇಳಿದು ಹೋಗಿ, ಬೇತ್‌ಬಾರದವರೆಗಿರುವ ನೀರನ್ನೂ, ಯೊರ್ದನನ್ನೂ ಅವರಿಗೆ ಮುಂದಾಗಿ ಹಿಡಿಯಿರಿ,” ಎಂದು ಹೇಳಿದನು. \p ಹಾಗೆಯೇ ಎಫ್ರಾಯೀಮನ ಜನರೆಲ್ಲರೂ ಕೂಡಿಕೊಂಡು, ಬೇತ್‌ಬಾರದವರೆಗೆ ನೀರನ್ನೂ, ಯೊರ್ದನನ್ನೂ ಹಿಡಿದರು. \v 25 ಮಿದ್ಯಾನ್ಯರ ಇಬ್ಬರು ಅಧಿಪತಿಗಳಾದ ಓರೇಬನನ್ನೂ, ಜೇಬನನ್ನೂ ಹಿಡಿದು, ಓರೇಬನನ್ನು ಓರೇಬೆಂಬ ಬಂಡೆಯಲ್ಲಿಯೂ, ಜೇಬನನ್ನು ಜೇಬನ ದ್ರಾಕ್ಷಿಯ ಆಲೆಯ ಬಳಿಯಲ್ಲಿಯೂ ಕೊಂದುಹಾಕಿ, ಮಿದ್ಯಾನ್ಯರನ್ನು ಹಿಂದಟ್ಟಿ, ಓರೇಬ್, ಜೇಬರ ತಲೆಗಳನ್ನು ಯೊರ್ದನಿಗೆ ಈಚೆಯಲ್ಲಿದ್ದ ಗಿದ್ಯೋನನ ಬಳಿಗೆ ತಂದರು. \c 8 \s1 ಜೆಬಹ ಮತ್ತು ಚಲ್ಮುನ್ನ \p \v 1 ಆಗ ಎಫ್ರಾಯೀಮ್ಯರು, “ನೀನು ಮಿದ್ಯಾನ್ಯರ ಮೇಲೆ ಯುದ್ಧಮಾಡುವುದಕ್ಕೆ ಹೋಗುವಾಗ, ನಮ್ಮನ್ನು ಕರೆಯದೆ ಹೋದದ್ದೇನು?” ಎಂದು ಹೇಳಿ ಅವನ ಸಂಗಡ ತೀಕ್ಷ್ಣವಾಗಿ ವಿವಾದ ಮಾಡಿದರು. \p \v 2 ಅವನು ಅವರಿಗೆ, “ನೀವು ಮಾಡಿದ್ದಕ್ಕೆ ಸಮಾನವಾಗಿ ನಾನೇನು ಮಾಡಿದೆನು? ಅಬೀಯೆಜೆರನ ದ್ರಾಕ್ಷಿ ಫಲ ಕೂಡಿಸುವುದಕ್ಕಿಂತ ಎಫ್ರಾಯೀಮನ ಉಳಿದ ದ್ರಾಕ್ಷಿಗಳನ್ನು ಸಂಗ್ರಹಿಸುವುದು ಉತ್ತಮವಲ್ಲವೇ? \v 3 ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ಪ್ರಧಾನರಾದ ಓರೇಬನನ್ನೂ, ಜೇಬನನ್ನೂ ಒಪ್ಪಿಸಿಕೊಡಲಿಲ್ಲವೇ? ನೀವು ಮಾಡಿದ್ದಕ್ಕೆ ನಾನು ಮಾಡಿದ್ದು ಎಷ್ಟು?” ಎಂದನು. ಅವನು ಈ ಮಾತು ಹೇಳಿದಾಗ, ಅವನ ವಿಷಯವಾಗಿ ಅವರ ಕೋಪವು ಶಾಂತವಾಯಿತು. \p \v 4 ಗಿದ್ಯೋನನು ಯೊರ್ದನಿಗೆ ಬಂದು ಅದನ್ನು ದಾಟಿ; ಅವನೂ, ಅವನ ಸಂಗಡ ಇದ್ದ ಮುನ್ನೂರು ಜನರೂ ದಣಿದವರಾಗಿಯೂ, ಹಿಂದಟ್ಟುವವರಾಗಿಯೂ ಇದ್ದರು. \v 5 ಅವನು ಸುಕ್ಕೋತನವರಿಗೆ, “ದಯಮಾಡಿ ನನ್ನ ಕೂಡ ಇರುವ ಜನರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ. ಏಕೆಂದರೆ ಅವರು ದಣಿದಿದ್ದಾರೆ. ನಾನು ಮಿದ್ಯಾನ್ಯರ ಅರಸುಗಳಾದ ಜೆಬಹನನ್ನೂ, ಚಲ್ಮುನ್ನನನ್ನೂ ಹಿಂದಟ್ಟುತ್ತೇನೆ,” ಎಂದನು. \p \v 6 ಆದರೆ ಸುಕ್ಕೋತಿನ ಪ್ರಧಾನರು ಅವನಿಗೆ, “ನಿನ್ನ ಸೈನ್ಯಕ್ಕೆ ನಾವು ರೊಟ್ಟಿ ಕೊಡುವಂತೆ ಜೆಬಹ ಚಲ್ಮುನ್ನರ ಕೈ ನಿನ್ನ ಕೈವಶವಾಗಿದೆಯೋ?” ಎಂದರು. \p \v 7 ಆಗ ಗಿದ್ಯೋನನು, “ಆಗ ಯೆಹೋವ ದೇವರು ಜೆಬಹನನ್ನೂ, ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟ ತರುವಾಯ, ನಿಮ್ಮ ಮಾಂಸವನ್ನು ಮರುಭೂಮಿಯ ಮುಳ್ಳುಗಳಿಂದಲೂ, ಕಾರೆಗಿಡದ ಮುಳ್ಳುಗಳಿಂದಲೂ ಹೊಡಿಸುವೆನು,” ಎಂದನು. \p \v 8 ಅಲ್ಲಿಂದ ಪೆನೀಯೇಲಿಗೆ ಹೋಗಿ, ಆ ಊರಿನವರ ಸಂಗಡ ಆ ಪ್ರಕಾರವೇ ಮಾತನಾಡಿದನು. ಅವರು ಸುಕ್ಕೋತಿನ ಮನುಷ್ಯರು ಉತ್ತರ ಕೊಟ್ಟ ಹಾಗೆಯೇ ಉತ್ತರಕೊಟ್ಟರು. \v 9 ಆಗ ಅವನು ಪೆನೀಯೇಲಿನ ಮನುಷ್ಯರಿಗೆ ಸಹ, “ನಾನು ಸಮಾಧಾನವಾಗಿ ತಿರುಗಿ ಬರುವಾಗ, ಈ ಗೋಪುರವನ್ನು ಕೆಡವಿಬಿಡುವೆನು,” ಎಂದನು. \p \v 10 ಜೆಬಹನೂ, ಚಲ್ಮುನ್ನನೂ ತಮ್ಮ ಸೈನ್ಯದ ಹೆಚ್ಚು ಕಡಿಮೆ ಹದಿನೈದು ಸಾವಿರ ಜನರ ಸಂಗಡ ಕರ್ಕೋರಿನಲ್ಲಿ ಇದ್ದರು. ಇವರಷ್ಟೂ, ಖಡ್ಗ ಹಿಡಿಯತಕ್ಕ ಒಂದು ಲಕ್ಷದ ಇಪ್ಪತ್ತು ಸಾವಿರ ಜನ ಬಿದ್ದುಹೋದಾಗ, ಪೂರ್ವದೇಶದ ಸಮಸ್ತ ಜನರು ಅಲ್ಲಿ ಉಳಿದರು. \v 11 ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಪೂರ್ವದಲ್ಲಿದ್ದ ಡೇರೆಗಳಲ್ಲಿ ಸುರಕ್ಷಿತವಾಗಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಅವರು ನಿರೀಕ್ಷಿಸದ ಸಮಯದಲ್ಲಿ ಅವರ ಮೇಲೆ ದಾಳಿಮಾಡಿದರು. \v 12 ಜೆಬಹನೂ, ಚಲ್ಮುನ್ನನೂ ಓಡಿ ಹೋದದ್ದರಿಂದ, ಅವನು ಮಿದ್ಯಾನ್ಯರ ಇಬ್ಬರು ಅರಸುಗಳಾದ ಜೆಬಹನನ್ನೂ, ಚೆಲ್ಮುನ್ನನನ್ನೂ ಹಿಂದಟ್ಟಿ ಹಿಡಿದು ಪಾಳೆಯನ್ನೆಲ್ಲಾ ಚದರಿಸಿಬಿಟ್ಟರು. \p \v 13 ಯೋವಾಷನ ಮಗನಾದ ಗಿದ್ಯೋನನು ಯುದ್ಧ ತೀರಿಸಿಕೊಂಡು ಹೆರೆಸ್ ಎಂಬ ಬೆಟ್ಟದ ಮಾರ್ಗವಾಗಿ ತಿರುಗಿಬಂದು, \v 14 ಸುಕ್ಕೋತಿನ ಮನುಷ್ಯರಲ್ಲಿ ಒಬ್ಬ ಯೌವನಸ್ಥನನ್ನು ಹಿಡಿದು ಅವನನ್ನು ಕೇಳಿದಾಗ ಅವನು, ಸುಕ್ಕೋತಿನ ಪ್ರಧಾನರೂ, ಹಿರಿಯರೂ ಆದ ಎಪ್ಪತ್ತೇಳು ಜನರ ಹೆಸರನ್ನು ಅವನು ಬರೆದನು. \v 15 ಗಿದ್ಯೋನನು ಸುಕ್ಕೋತಿನ ಮನುಷ್ಯರ ಬಳಿಗೆ ಬಂದು, “ಇಗೋ, ದಣಿದಿರುವ ನಿನ್ನ ಮನುಷ್ಯರಿಗೆ ನಾವು ರೊಟ್ಟಿಯನ್ನು ಕೊಡುವ ಹಾಗೆ, ಜೆಬಹ, ಚೆಲ್ಮುನ್ನರ ಕೈ ಈಗಲೇ ನಿನ್ನ ಕೈವಶವಾಗಿದೆಯೋ ಎಂದು ನೀವು ನನ್ನನ್ನು ನಿಂದಿಸಿದ ಜೆಬಹನನ್ನೂ, ಚಲ್ಮುನ್ನನನ್ನೂ ನೋಡಿರಿ,” ಎಂದು ಹೇಳಿ \v 16 ಪಟ್ಟಣದ ಹಿರಿಯರನ್ನು ಮತ್ತು ಸುಕ್ಕೋತಿನವರನ್ನು ಹಿಡಿದು, ಮರುಭೂಮಿಯ ಮುಳ್ಳು ಹಾಗು ಕಾರೆಗಿಡದ ಮುಳ್ಳುಗಳಿಂದ ದಂಡಿಸಿ ಅವರಿಗೆ ಪಾಠ ಕಲಿಸಿದನು. \v 17 ಪೆನೀಯೇಲಿನ ಗೋಪುರವನ್ನು ಕೆಡವಿ, ಆ ಪಟ್ಟಣದ ಮನುಷ್ಯರನ್ನು ಕೊಂದುಹಾಕಿದನು. \p \v 18 ಅವನು ಜೆಬಹನಿಗೂ, ಚಲ್ಮುನ್ನನಿಗೂ, “ನೀವು ತಾಬೋರಿನಲ್ಲಿ ಕೊಂದುಹಾಕಿದ ಆ ಮನುಷ್ಯರು ಯಾವ ತರಹದವರಾಗಿದ್ದರು?” ಎಂದನು. \p ಅದಕ್ಕವರು, “ನಿನ್ನ ಹಾಗೆಯೇ ಅವರು ಒಬ್ಬೊಬ್ಬರು ರೂಪದಲ್ಲಿ ಅರಸನ ಮಕ್ಕಳಂತಿದ್ದರು,” ಎಂದರು. \p \v 19 ಅದಕ್ಕವನು, “ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು. ಯೆಹೋವ ದೇವರ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುತ್ತಿರಲಿಲ್ಲ,” ಎಂದನು. \v 20 ತನ್ನ ಚೊಚ್ಚಲಮಗನಾದ ಎತೆರನಿಗೆ, “ನೀನೆದ್ದು ಅವರನ್ನು ಕೊಂದುಹಾಕು,” ಎಂದನು. ಆದರೆ ಆ ಯುವಕನು ತನ್ನ ಖಡ್ಗವನ್ನು ಬಿಚ್ಚದೆ ಹೋದನು. ಏಕೆಂದರೆ ಅವನು ಇನ್ನೂ ಹುಡುಗನಾದ್ದರಿಂದ ಭಯಪಟ್ಟನು. \p \v 21 ಆಗ ಜೆಬಹನೂ, ಚಲ್ಮುನ್ನನೂ, “ನೀನು ಎದ್ದು ನಮ್ಮ ಮೇಲೆ ಬೀಳು. ಏಕೆಂದರೆ ಮನುಷ್ಯನು ಹೇಗೋ ಹಾಗೆಯೇ ಅವನ ಬಲವು ಇರುವುದು,” ಎಂದರು. ಗಿದ್ಯೋನನು ಎದ್ದು ಜೆಬಹನನ್ನೂ, ಚೆಲ್ಮುನ್ನನನ್ನೂ ಕೊಂದುಹಾಕಿ, ಅವರ ಒಂಟೆಗಳ ಕುತ್ತಿಗೆಗಳಲ್ಲಿ ಇದ್ದ ಆಭರಣಗಳನ್ನು ತೆಗೆದುಕೊಂಡನು. \s1 ಗಿದ್ಯೋನನ ಏಫೋದು \p \v 22 ಆಗ ಇಸ್ರಾಯೇಲ್ ಜನರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನರ ಕೈಯಿಂದ ತಪ್ಪಿಸಿ ರಕ್ಷಿಸಿದ್ದರಿಂದ, ನೀನೂ, ನಿನ್ನ ಪುತ್ರನೂ, ನಿನ್ನ ಪುತ್ರನ ಪುತ್ರನೂ ನಮ್ಮನ್ನು ಆಳಬೇಕು,” ಎಂದರು. \p \v 23 ಗಿದ್ಯೋನನು ಅವರಿಗೆ, “ನಾನು ನಿಮ್ಮನ್ನು ಆಳುವುದಿಲ್ಲ. ನನ್ನ ಮಗನೂ ನಿಮ್ಮನ್ನು ಆಳುವುದಿಲ್ಲ. ಯೆಹೋವ ದೇವರೇ ನಿಮ್ಮನ್ನು ಆಳುವರು.” \v 24 ಮತ್ತು ಗಿದ್ಯೋನನು ಅವರಿಗೆ, “ಒಂದು ಬಿನ್ನಹವನ್ನು ನಾನು ನಿಮಗೆ ಮಾಡುತ್ತೇನೆ. ಪ್ರತಿಯೊಬ್ಬನು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ನನಗೆ ಕೊಡಿರಿ,” ಎಂದನು. ಏಕೆಂದರೆ ಮಿದ್ಯಾನರು ಇಷ್ಮಾಯೇಲರಾಗಿದ್ದದರಿಂದ ಅವರು ಬಂಗಾರದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು. \p \v 25 ಅವರು, “ನಾವು ಇಷ್ಟಪೂರ್ವಕವಾಗಿ ಕೊಡುತ್ತೇವೆ,” ಎಂದು ಹೇಳಿ, ಒಂದು ವಸ್ತ್ರವನ್ನು ಹಾಸಿ, ಅಲ್ಲಿ ಅವರವರು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ಹಾಕಿದರು. \v 26 ಆಭರಣಗಳೂ, ಕಂಠಮಾಲೆಗಳೂ, ಮಿದ್ಯಾನರ ಅರಸರು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ, ಅವರ ಒಂಟೆಗಳ ಕೊರಳೊಳಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದುಕೊಂಡ ಬಂಗಾರದ ಓಲೆಗಳ ತೂಕವು ಇಪ್ಪತ್ತು ಕಿಲೋಗ್ರಾಂ ತೂಕವಾಗಿತ್ತು. \v 27 ಆ ಬಂಗಾರದಿಂದ ಗಿದ್ಯೋನನು ಏಫೋದನ್ನು ಮಾಡಿಸಿ, ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲರೆಲ್ಲರೂ ಅದರ ಹಿಂದೆ ಹೋಗಿ ಪೂಜಿಸಿ ದೇವದ್ರೋಹಿಗಳಾದರು, ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು. \s1 ಗಿದ್ಯೋನನ ಮರಣ \p \v 28 ಮಿದ್ಯಾನ್ಯರು ತಮ್ಮ ತಲೆಯನ್ನು ತಿರುಗಿ ಎತ್ತಕೂಡದ ಹಾಗೆ ಇಸ್ರಾಯೇಲರ ಮುಂದೆ ತಗ್ಗಿಹೋದರು. ದೇಶವು ಗಿದ್ಯೋನನ ದಿವಸಗಳಲ್ಲಿ ನಲವತ್ತು ವರುಷ ವಿಶ್ರಾಂತಿಯಲ್ಲಿತ್ತು. \p \v 29 ಯೋವಾಷನ ಮಗ ಯೆರುಬ್ಬಾಳನು ಹೋಗಿ ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದನು. \v 30 ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದುದರಿಂದ ಅವನಿಂದ ಜನಿಸಿದ ಎಪ್ಪತ್ತು ಮಂದಿ ಮಕ್ಕಳು ಇದ್ದರು. \v 31 ಶೆಖೆಮಿನಲ್ಲಿದ್ದ ಅವನ ಉಪಪತ್ನಿಯು ಅವನಿಗೆ ಒಬ್ಬ ಮಗನನ್ನು ಹೆತ್ತಳು. ಅವನು ಆ ಮಗನಿಗೆ ಅಬೀಮೆಲೆಕನೆಂದು ಹೆಸರಿಟ್ಟನು. \v 32 ಯೋವಾಷನ ಮಗನಾದ ಗಿದ್ಯೋನನು ಒಳ್ಳೆಯ ವೃದ್ಧಾಪ್ಯದಲ್ಲಿ ಮರಣಹೊಂದಿದಾಗ, ಅವನನ್ನು ಅಬೀಯೆಜೆರೀಯರಿಗೆ ಸೇರಿದ ಒಫ್ರದಲ್ಲಿ ತನ್ನ ತಂದೆಯಾದ ಯೋವಾಷನ ಸಮಾಧಿಯಲ್ಲಿ ಹೂಳಿಡಲಾಯಿತು. \p \v 33 ಗಿದ್ಯೋನನ ಮರಣದ ತರುವಾಯ, ಇಸ್ರಾಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜೆ ಮಾಡುತ್ತಾ ಬಾಳ್ ಬೆರೀತನ್ನು ತಮಗೆ ದೇವರಾಗಿ ಮಾಡಿಕೊಂಡರು. \v 34 ಸುತ್ತಲೂ ಇದ್ದ ತಮ್ಮ ಎಲ್ಲಾ ಶತ್ರುಗಳ ಕೈಯಿಂದ ತಮ್ಮನ್ನು ತಪ್ಪಿಸಿಬಿಟ್ಟ ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟರು. \v 35 ಗಿದ್ಯೋನನೆಂಬ ಯೆರುಬ್ಬಾಳನು ಇಸ್ರಾಯೇಲಿಗೆ ಮಾಡಿದ ಸಕಲ ಉಪಕಾರಗಳಿಗೆ ತಕ್ಕ ಹಾಗೆ ದಯೆಯನ್ನು ಅವನ ಮನೆಗೆ ಮಾಡದೆ ಹೋದರು. \c 9 \s1 ಅಬೀಮೆಲೆಕ \p \v 1 ಯೆರುಬ್ಬಾಳನ ಮಗನಾದ ಅಬೀಮೆಲೆಕನು ಶೆಕೆಮಿನಲ್ಲಿರುವ ತನ್ನ ತಾಯಿಯ ಸಹೋದರರ ಬಳಿಗೆ ಹೋಗಿ, ಅವರ ಸಂಗಡ ಮತ್ತು ತನ್ನ ತಾಯಿಯ ತಂದೆ ಮನೆಯ ಕುಟುಂಬದವರೆಲ್ಲರ ಸಂಗಡ ಮಾತನಾಡಿ, \v 2 “ನೀವು ದಯಮಾಡಿ ಶೆಕೆಮಿನ ಹಿರಿಯರಿಗೆ, ‘ಯೆರುಬ್ಬಾಳನ ಮಕ್ಕಳಾದ ಎಪ್ಪತ್ತು ಮಂದಿಯು ನಿಮ್ಮನ್ನು ಆಳುವುದು ಒಳ್ಳೆಯದೋ? ಒಬ್ಬನು ಆಳುವುದು ಒಳ್ಳೆಯದೋ?’ ಎಂದು ವಿಚಾರಿಸಿರಿ. ನಾನು ನಿಮ್ಮ ಎಲುಬೂ, ನಿಮ್ಮ ಮಾಂಸವೂ ಆಗಿದ್ದೇನೆಂದು ಜ್ಞಾಪಕಮಾಡಿಕೊಳ್ಳಿರಿ,” ಎಂದನು. \p \v 3 ಹಾಗೆಯೇ ಅವನ ತಾಯಿಯ ಸಹೋದರರು ಅವನನ್ನು ಕುರಿತು ಶೆಕೆಮಿನ ಹಿರಿಯರೆಲ್ಲರೂ ಕೇಳುವಂತೆ ಈ ಮಾತುಗಳನ್ನೆಲ್ಲಾ ಹೇಳಿದರು. ಅವರು, “ಇವನು ನಮ್ಮ ಸಹೋದರನು,” ಎಂದು ಹೇಳಿದ್ದರಿಂದ, ಆ ಜನರ ಹೃದಯವು ಅಬೀಮೆಲೆಕನ ಕಡೆಗೆ ತಿರುಗಿತು. \v 4 ಅವರು ಬಾಳ್ ಬೆರೀತಿನ ಮನೆಯೊಳಗಿಂದ ಎಪ್ಪತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು ಅವನಿಗೆ ಕೊಟ್ಟರು. ಅವುಗಳಿಂದ ಅಬೀಮೆಲೆಕನು ಪುಂಡಪೋಕರಿಗಳನ್ನು ಸಂಬಳಕ್ಕೆ ಇಟ್ಟುಕೊಂಡನು. ಅವರು ಅವನ ಹಿಂದೆ ಹೋದರು. \v 5 ಅವನು ಒಫ್ರದಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ, ತನ್ನ ಸಹೋದರರಾದ ಯೆರುಬ್ಬಾಳನ ಎಪ್ಪತ್ತು ಮಂದಿ ಪುತ್ರರನ್ನು ಒಂದು ಬಂಡೆಯ ಮೇಲೆ ಕೊಂದುಹಾಕಿದನು. ಆದರೆ ಯೆರುಬ್ಬಾಳನ ಚಿಕ್ಕ ಮಗ ಯೋತಾಮನು ಒಬ್ಬನೇ ಉಳಿದನು. ಏಕೆಂದರೆ ಅವನು ಅಡಗಿಕೊಂಡನು. \v 6 ಶೆಕೆಮಿನ ಜನರೆಲ್ಲರೂ, ಮಿಲ್ಲೋನಿನ ಮನೆಯವರೆಲ್ಲರೂ ಕೂಡಿಕೊಂಡು ಹೋಗಿ, ಶೆಕೆಮಿನ ಬಯಲಲ್ಲಿ ಇರುವ ಸ್ತಂಭದ ಬಳಿ ಇರುವ ಅಲ್ಲೋನ್ ಮರದ ಹತ್ತಿರ ಸೇರಿ ಅಬೀಮೆಲೆಕನನ್ನು ಅರಸನನ್ನಾಗಿ ನೇಮಿಸಿದರು. \p \v 7 ಯೋತಾಮನಿಗೆ ಇದನ್ನು ತಿಳಿಸಿದಾಗ, ಅವನು ಹೋಗಿ ಗೆರಿಜೀಮ್ ಬೆಟ್ಟದ ತುದಿಯಲ್ಲಿ ಏರಿ ನಿಂತು, ತನ್ನ ಸ್ವರವನ್ನೆತ್ತಿ ಕೂಗಿ ಅವರಿಗೆ, “ಶೆಕೆಮಿನ ಹಿರಿಯರೇ, ದೇವರು ನಿಮ್ಮನ್ನು ಕೇಳುವ ಹಾಗೆ ನನ್ನ ಮಾತನ್ನು ಕೇಳಿರಿ. \v 8 ಮರಗಳು ತಮ್ಮ ಮೇಲೆ ಒಬ್ಬ ಅರಸನನ್ನು ಅಭಿಷೇಕಿಸಿಕೊಳ್ಳುವುದಕ್ಕಾಗಿ ಹೊರಟುಹೋಗಿ, ಹಿಪ್ಪೆಯ ಮರಕ್ಕೆ, ‘ನೀನು ನಮ್ಮನ್ನು ಆಳು,’ ಎಂದವು. \p \v 9 “ಹಿಪ್ಪೆಯ ಮರ ಅವುಗಳಿಗೆ, ‘ಯಾವುದರಿಂದ ದೇವರನ್ನೂ, ಮನುಷ್ಯನನ್ನೂ ಘನಪಡಿಸುತ್ತಾರೋ, ಈ ನನ್ನ ಎಣ್ಣೆಯನ್ನು ಬಿಟ್ಟು, ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು. \p \v 10 “ಮರಗಳು ಅಂಜೂರದ ಗಿಡಕ್ಕೆ, ‘ನೀನು ಬಂದು ನಮ್ಮ ಮೇಲೆ ಆಳಬೇಕು,’ ಎಂದವು. \p \v 11 “ಆದರೆ ಅಂಜೂರದ ಗಿಡಗಳು ಅವುಗಳಿಗೆ, ‘ನಾನು ನನ್ನ ಮಧುರವನ್ನೂ, ನನ್ನ ಒಳ್ಳೆಯ ಫಲವನ್ನೂ ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು. \p \v 12 “ಮರಗಳು ದ್ರಾಕ್ಷಿ ಗಿಡಕ್ಕೆ, ‘ನೀನು ಬಂದು ನಮ್ಮನ್ನು ಆಳು,’ ಎಂದವು. \p \v 13 “ಆದರೆ ದ್ರಾಕ್ಷಿ ಗಿಡವು ಅವುಗಳಿಗೆ, ‘ದೇವರನ್ನೂ, ಮನುಷ್ಯನನ್ನೂ ಸಂತೋಷಪಡಿಸುವ ನನ್ನ ರಸವನ್ನು ನಾನು ಬಿಟ್ಟು, ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು. \p \v 14 “ಆಗ ಎಲ್ಲಾ ಮರಗಳು ಮುಳ್ಳಿನ ಗಿಡಕ್ಕೆ, ‘ನೀನು ಬಂದು ನಮ್ಮನ್ನು ಆಳು,’ ಎಂದವು. \p \v 15 “ಮುಳ್ಳಿನ ಗಿಡವು ಮರಗಳಿಗೆ, ‘ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವುದು ಸತ್ಯವಾದರೆ, ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು, ಲೆಬನೋನಿನ ದೇವದಾರುಗಳು ದಹಿಸಿಬಿಡಲಿ,’ ಎಂದಿತು. \p \v 16 “ನೀವು ಈಗ ಅಬೀಮೆಲೆಕನನ್ನು ಅರಸನಾಗಿ ಮಾಡಿದ್ದು ಸತ್ಯದಲ್ಲಿಯೂ, ಯಥಾರ್ಥದಿಂದಲೂ ಮಾಡಿರುವುದಾದರೆ ಮತ್ತು ಯೆರುಬ್ಬಾಳನಿಗೂ, ಅವನ ಮನೆಗೂ ಒಳ್ಳೆಯದನ್ನು ಮಾಡಿದ್ದರೆ, \v 17 ನನ್ನ ತಂದೆಯಾದ ಅವನು ನಿಮಗೋಸ್ಕರ ಯುದ್ಧಮಾಡಿದವನಾಗಿಯೂ, ತನ್ನ ಪ್ರಾಣವನ್ನು ಲೆಕ್ಕಿಸದೆ, ಮಿದ್ಯಾನಿನ ಕೈಯಿಂದ ನಿಮ್ಮನ್ನು ತಪ್ಪಿಸಿದವನಾಗಿಯೂ ಇರಲಾಗಿ, \v 18 ನೀವು ಈ ಹೊತ್ತು ನನ್ನ ತಂದೆಯ ಮನೆಗೆ ವಿರೋಧವಾಗಿ ಎದ್ದು, ಅವನ ಎಪ್ಪತ್ತು ಮಕ್ಕಳನ್ನು ಒಂದೇ ಬಂಡೆ ಮೇಲೆ ಕೊಂದು, ಅವನ ದಾಸಿಯ ಮಗನಾದ ಅಬೀಮೆಲೆಕನನ್ನು, ಅವನು ನಿಮ್ಮ ಸಹೋದರನಾಗಿರುವುದರಿಂದ ಶೆಕೆಮಿನ ಜನರ ಮೇಲೆ ಅರಸನಾಗಿ ಇಟ್ಟದ್ದು, \v 19 ಯೆರುಬ್ಬಾಳನ ಯೋಗ್ಯತೆಗೆ ತಕ್ಕದ್ದಾಗಿದ್ದರೆ ಮತ್ತು ಈ ಹೊತ್ತು ಅವನಿಗೂ, ಅವನ ಮಗನಿಗೂ ನೀವು ಸತ್ಯದಲ್ಲಿಯೂ, ಯಥಾರ್ಥತೆಯಲ್ಲಿಯೂ ಕಾರ್ಯ ಮಾಡಿದ್ದರೆ, ಅಬೀಮೆಲೆಕನಲ್ಲಿ ನೀವು ಸಂತೋಷಪಡಿರಿ. ಅವನು ಸಹ ನಿಮ್ಮಲ್ಲಿ ಸಂತೋಷಪಡಲಿ. \v 20 ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿ ಹೊರಟು ಶೆಕೆಮಿನ ಹಿರಿಯರನ್ನೂ, ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನರಿಂದಲೂ, ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ,” ಎಂದನು. \p \v 21 ಆಗ ಯೋತಾಮನು ತಪ್ಪಿಸಿಕೊಂಡು ಓಡಿ ಬೇರಕ್ಕೆ ಹೋಗಿ, ತನ್ನ ಸಹೋದರನಾದ ಅಬೀಮೆಲೆಕನ ಭಯದ ನಿಮಿತ್ತವಾಗಿ ಅಲ್ಲಿ ವಾಸವಾಗಿದ್ದನು. \p \v 22 ಅಬೀಮೆಲೆಕನು ಇಸ್ರಾಯೇಲನ್ನು ಮೂರು ವರ್ಷ ಆಳಿದ ತರುವಾಯ, \v 23 ದೇವರು ಅಬೀಮೆಲೆಕ ಮತ್ತು ಶೆಕೆಮಿನ ಹಿರಿಯರ ನಡುವೆ ಒಂದು ದುರಾತ್ಮನನ್ನು ಕಳುಹಿಸಿದರು. ಆಗ ಶೆಕೆಮಿನವರು ಅಬೀಮೆಲೆಕನಿಗೆ ದ್ರೋಹಮಾಡಿದರು. \v 24 ಇದರಿಂದ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳಿಗೆ ಮಾಡಿದ್ದ ಕ್ರೂರತ್ವವು ಬಂದು ಪ್ರಾಪ್ತಿಸುವ ಹಾಗೆಯೂ, ಅವರ ರಕ್ತವು ಅವರನ್ನು ಕೊಂದ ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ, ಅವನ ಸಹೋದರರನ್ನು ಕೊಲ್ಲುವುದಕ್ಕೆ ಅವನ ಕೈಗಳನ್ನು ಬಲಪಡಿಸಿದ ಶೆಕೆಮಿನ ಮನುಷ್ಯರ ಮೇಲೆಯೂ ಬರುವ ಹಾಗೆ, ಶೆಕೆಮಿನ ಜನರು ಅಬೀಮೆಲೆಕನಿಗೆ ದ್ರೋಹಮಾಡಿದರು. \v 25 ಶೆಕೆಮಿನ ಹಿರಿಯರು ಪರ್ವತ ಶಿಖರಗಳ ಮೇಲೆ ಅವನಿಗೋಸ್ಕರ ಹೊಂಚುಗಾರರನ್ನು ಇಟ್ಟು, ತಮ್ಮ ಸಮೀಪವಾಗಿ ಮಾರ್ಗದಲ್ಲಿ ಹಾದುಹೋಗುವ ಎಲ್ಲರನ್ನು ಸುಲಿದುಕೊಂಡರು. ಈ ವರ್ತಮಾನವು ಅಬೀಮೆಲೆಕನಿಗೆ ಮುಟ್ಟಿತು. \p \v 26 ಆಗ ಏಬೆದನ ಮಗನಾದ ಗಾಳನೂ, ಅವನ ಸಹೋದರರೂ ಶೆಕೆಮಿಗೆ ದಾಟಿ ಬಂದರು. ಆದರೆ ಶೆಕೆಮಿನ ಹಿರಿಯರು ಅವನಲ್ಲಿ ಭರವಸೆಯಿಟ್ಟು, \v 27 ಹೊರಗೆ ಹೋಗಿ ತಮ್ಮ ದ್ರಾಕ್ಷಿ ಫಲಗಳನ್ನು ಕೊಯ್ದು, ಅವುಗಳನ್ನು ತುಳಿದು ಸಂತೋಷಪಟ್ಟು, ತಮ್ಮ ದೇವರ ಮನೆಯೊಳಗೆ ಹೋಗಿ, ತಿಂದು ಕುಡಿದು ಅಬೀಮೆಲೆಕನನ್ನು ಶಪಿಸಿದರು. \v 28 ಆಗ ಏಬೆದನ ಮಗನಾದ ಗಾಳನು, “ನಾವು ಅವನನ್ನು ಸೇವಿಸುವ ಹಾಗೆ ಅಬೀಮೆಲೆಕನು ಯಾರು? ಶೆಕೆಮನು ಯಾರು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪ್ರಧಾನನು ಜೆಬೂಲನಲ್ಲವೋ? ಶೆಕೆಮಿನ ತಂದೆಯಾದ ಹಮೋರನ ಮನುಷ್ಯರನ್ನೇ ಸೇವಿಸಿರಿ. ಇವನನ್ನು ನಾವು ಏಕೆ ಸೇವಿಸಬೇಕು? \v 29 ಈ ಜನರನ್ನು ದೇವರು ನನ್ನ ಕೈಗೆ ಒಪ್ಪಿಸಿದರೆ ಚೆನ್ನಾಗಿತ್ತು, ಆಗ ನಾನು ಅಬೀಮೆಲೆಕನನ್ನು ತೆಗೆದುಹಾಕುತ್ತಿದ್ದೆನು. ತರುವಾಯ ಅಬೀಮೆಲೆಕನಿಗೆ, ‘ನೀನು ನಿನ್ನ ಸೈನ್ಯವನ್ನು ಹೆಚ್ಚಿಸಿಕೊಂಡು ಹೊರಟು ಬಾ,’ ಎಂದು ಹೇಳುತ್ತಿದ್ದೆನು,” ಎಂದನು. \p \v 30 ಆ ಪಟ್ಟಣದ ಅಧಿಪತಿಯಾದ ಜೆಬೂಲನು, ಏಬೆದನ ಮಗ ಗಾಳನು ಹೇಳಿದ ಮಾತುಗಳನ್ನು ಕೇಳಿದಾಗ ಕೋಪಗೊಂಡು, \v 31 ಅವನು ಅಬೀಮೆಲೆಕನ ಬಳಿಗೆ ರಹಸ್ಯವಾಗಿ ದೂತರನ್ನು ಕಳುಹಿಸಿ, “ಏಬೆದನ ಮಗ ಗಾಳನೂ, ಅವನ ಸಹೋದರರೂ ಶೆಕೆಮಿಗೆ ಬಂದಿದ್ದಾರೆ. ಅವರು ಪಟ್ಟಣವನ್ನು ನಿನಗೆ ವಿರೋಧವಾಗಿ ಬಲಪಡಿಸುತ್ತಿದ್ದಾರೆ. \v 32 ಆದ್ದರಿಂದ ಈಗ ನೀನೂ, ನಿನ್ನ ಸಂಗಡ ಇರುವ ಜನರೂ ಕೂಡಿ, ರಾತ್ರಿಯಲ್ಲಿ ಎದ್ದು, ಹೊಲದಲ್ಲಿ ಹೊಂಚುಹಾಕಿಕೊಂಡಿರಬೇಕು. \v 33 ಹೊತ್ತಾರೆ ಸೂರ್ಯನು ಉದಯಿಸುವಾಗ, ನೀನು ಎದ್ದು ಪಟ್ಟಣದ ಮೇಲೆ ಬೀಳಬೇಕು. ಗಾಳನೂ, ಅವನ ಸಂಗಡ ಇರುವ ಜನರೂ ನಿಮಗೆದುರಾಗಿ ಹೊರಟು ಬರುವಾಗ, ನೀನು ನಿನ್ನ ಕೈಗೆ ಸರಿಬಂದ ಹಾಗೆ ಅವನಿಗೆ ಮಾಡಬೇಕು,” ಎಂದು ಹೇಳಿದನು. \p \v 34 ಹಾಗೆಯೇ ಅಬೀಮೆಲೆಕನೂ, ಅವನ ಸಂಗಡ ಇದ್ದ ಸಮಸ್ತ ಜನರೂ ರಾತ್ರಿಯಲ್ಲಿ ಎದ್ದು, ಶೆಕೆಮಿಗೆ ವಿರೋಧವಾಗಿ ನಾಲ್ಕು ಗುಂಪಾಗಿ ಹೊಂಚಿಕಾಯುತ್ತಿದ್ದರು. \v 35 ಏಬೆದನ ಮಗ ಗಾಳನು ಹೊರಟುಬಂದು ಪಟ್ಟಣದ ಬಾಗಿಲಿನ ದ್ವಾರದಲ್ಲಿ ನಿಂತನು. ಆಗ ಹೊಂಚುಹಾಕೊಕೊಂಡಿದ್ದ ಅಬೀಮೆಲೆಕನೂ, ಅವನ ಸಂಗಡ ಇದ್ದ ಜನರೂ ಎದ್ದು ಬಂದರು. \p \v 36 ಗಾಳನು ಆ ಜನರನ್ನು ಕಂಡಾಗ, “ಬೆಟ್ಟದ ಶಿಖರಗಳಿಂದ ಜನರು ಬರುತ್ತಾರೆ,” ಎಂದು ಜೆಬೂಲನಿಗೆ ಹೇಳಿದರು. \p ಜೆಬೂಲನು ಅವನಿಗೆ, “ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ಕಾಣುತ್ತೀ,” ಎಂದನು. \p \v 37 ಗಾಳನು ತಿರುಗಿ ಅವನ ಸಂಗಡ ಮಾತನಾಡಿ, “ಇಗೋ, ಜನರು ಭೂಮಧ್ಯ ಸ್ಥಳದಿಂದ ಇಳಿದು ಬರುತ್ತಾರೆ. ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ,” ಎಂದನು. \p \v 38 ಆಗ ಜೆಬೂಲನು ಅವನಿಗೆ, “ನಾವು ಅವನನ್ನು ಸೇವಿಸುವ ಹಾಗೆ ಅಬೀಮೆಲೆಕನು ಯಾರು, ಎಂದು ನೀನು ಹೇಳಿದ ನಿನ್ನ ಬಾಯಿ ಈಗ ಎಲ್ಲಿ? ಅದು ನೀನು ಅಲಕ್ಷ್ಯಮಾಡಿದ ಜನರಲ್ಲವೋ? ಈಗ ನೀನು ಹೊರಟು ಅವರ ಸಂಗಡ ಯುದ್ಧ ಮಾಡು,” ಎಂದನು. \p \v 39 ಗಾಳನು ಶೆಕೆಮಿನವರ ನಾಯಕನಾಗಿ ಹೊರಟು, ಅಬೀಮೆಲೆಕನ ಸಂಗಡ ಯುದ್ಧಮಾಡಿದನು. \v 40 ಆದರೆ ಅಬೀಮೆಲೆಕನು ಅವನನ್ನು ಹಿಂದಟ್ಟಿದಾಗ, ಗಾಳನು ಅವನ ಮುಂದೆ ಓಡಿಹೋದನು. ಬಾಗಿಲ ಹತ್ತಿರದವರೆಗೆ ಅನೇಕರು ಸಂಹಾರವಾಗಿ, ಅನೇಕರು ಗಾಯಗೊಂಡರು. \v 41 ಆಗ ಅಬೀಮೆಲೆಕನು ಅರೂಮದಲ್ಲಿ ವಾಸಮಾಡಿದನು. ಆದರೆ ಜೆಬೂಲನು ಗಾಳನನ್ನೂ, ಅವನ ಸಹೋದರರನ್ನೂ ಶೆಕೆಮಿನಲ್ಲಿ ಇರದ ಹಾಗೆ ಹೊರಡಿಸಿಬಿಟ್ಟನು. \p \v 42 ಮಾರನೆಯ ದಿನ ಶೆಕೆಮಿನ ಜನರು ಹೊಲಕ್ಕೆ ಹೊರಟರು. ಸೈನಿಕರು ಅದನ್ನು ಅಬೀಮೆಲೆಕನಿಗೆ ತಿಳಿಸಿದರು. \v 43 ಅವನು ಸೈನಿಕರನ್ನು ತೆಗೆದುಕೊಂಡು, ಅವರನ್ನು ಮೂರು ಗುಂಪುಗಳಾಗಿ ಮಾಡಿ, ಹೊಲದಲ್ಲಿ ಹೊಂಚಿಹಾಕಿಕೊಂಡನು. ಆಗ ಜನರು ಪಟ್ಟಣದಿಂದ ಹೊರಗೆ ಬಂದರು. ಅವನು ಅವರ ಮೇಲೆ ಎದ್ದು ಬಂದು, ಅವರನ್ನು ಹೊಡೆದನು. \v 44 ಅಬೀಮೆಲೆಕನೂ, ಅವನ ಸಂಗಡ ಇದ್ದ ಸೈನಿಕರ ಗುಂಪೂ ಮುಂದಕ್ಕೆ ಓಡಿ, ಪಟ್ಟಣದ ಬಾಗಿಲಿನ ಬಳಿ ನಿಂತರು. ಮಿಕ್ಕಾದ ಎರಡು ಗುಂಪಿನ ಜನರು, ಹೊಲದಲ್ಲಿರುವವರೆಲ್ಲರ ಮೇಲೆ ಬಿದ್ದು ಅವರನ್ನು ಹತಮಾಡಿದರು. \v 45 ಅಬೀಮೆಲೆಕನು ಆ ದಿನವೆಲ್ಲಾ ಪಟ್ಟಣದ ಮೇಲೆ ಯುದ್ಧಮಾಡಿ, ಪಟ್ಟಣವನ್ನು ಹಿಡಿದು, ಅದರಲ್ಲಿದ್ದ ಜನರನ್ನು ಕೊಂದು, ಪಟ್ಟಣವನ್ನು ಕೆಡವಿಬಿಟ್ಟು, ಅದರಲ್ಲಿ ಉಪ್ಪು ಎರಚಿಬಿಟ್ಟನು. \p \v 46 ಅದನ್ನು ಶೆಕೆಮಿನ ಗೋಪುರದಲ್ಲಿ ಜನರೆಲ್ಲರೂ ಕೇಳಿದಾಗ, ಅವರು ಬೆರೀತೆಂಬ ದೇವರ ಮನೆಯ ಭದ್ರವಾದ ಸ್ಥಳದಲ್ಲಿ ಅಡಗಿಕೊಂಡರು. \v 47 ಆದರೆ ಶೆಕೆಮಿನ ಗೋಪುರದಲ್ಲಿದ್ದ ಜನರೆಲ್ಲರೂ ಅಲ್ಲಿ ಕೂಡಿದ್ದಾರೆಂದು ಅಬೀಮೆಲೆಕನಿಗೆ ಗೊತ್ತಾದಾಗ, \v 48 ಅಬೀಮೆಲೆಕನು ತನ್ನ ಸಂಗಡ ಇದ್ದ ಸೈನಿಕರೆಲ್ಲರ ಸಹಿತವಾಗಿ ಚಲ್ಮೋನ್ ಬೆಟ್ಟವನ್ನೇರಿ, ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದು, ಒಂದು ಮರದ ಕೊಂಬೆಯನ್ನು ಕಡಿದು, ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು, ತನ್ನ ಕೂಡ ಇದ್ದ ಜನರಿಗೆ, “ನಾನು ಮಾಡಿದ್ದನ್ನು ನೋಡಿ ಹಾಗೆಯೇ ತೀವ್ರವಾಗಿ ಮಾಡಿರಿ,” ಎಂದನು. \v 49 ಸೈನಿಕರೆಲ್ಲರಲ್ಲಿ ಒಬ್ಬೊಬ್ಬನು ಒಂದೊಂದು ಕೊಂಬೆಯನ್ನು ಕಡಿದು, ಅಬೀಮೆಲೆಕನ ಹಿಂದೆ ಹೋಗಿ, ಅವುಗಳನ್ನು ಆ ಭದ್ರವಾದ ಸ್ಥಳಕ್ಕೆ ಹಾಕಿ, ಅದಕ್ಕೆ ಬೆಂಕಿಯನ್ನು ಹಚ್ಚಿದರು. ಆಗ ಶೆಕೆಮಿನ ಗೋಪುರದಲ್ಲಿರುವವರೆಲ್ಲರೂ ಹೆಚ್ಚು ಕಡಿಮೆ ಸಾವಿರ ಜನರು ಸತ್ತುಹೋದರು. ಅವರು ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು. \p \v 50 ಆಗ ಅಬೀಮೆಲೆಕನು ತೆಬೇಚಿಗೆ ಹೋಗಿ, ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಿ, ಅದನ್ನು ಹಿಡಿದನು. \v 51 ಆದರೆ ಪಟ್ಟಣದ ಒಳಗೆ ಬಲವಾದ ಗೋಪುರ ಇತ್ತು. ಆ ಪಟ್ಟಣದಲ್ಲಿರುವ ಸಮಸ್ತ ಸ್ತ್ರೀ ಪುರುಷರು ಅಲ್ಲಿಗೆ ಓಡಿಹೋಗಿ, ಅದರಲ್ಲಿ ಹೊಕ್ಕು, ತಮ್ಮ ಹಿಂದಿನಿಂದ ಬಾಗಿಲನ್ನು ಮುಚ್ಚಿ ಗೋಪುರದ ಮೇಲೆ ಏರಿದರು. \v 52 ಆಗ ಅಬೀಮೆಲೆಕನು ಆ ಗೋಪುರಕ್ಕೆ ಬಂದು, ಅದರ ವಿರುದ್ಧ ಯುದ್ಧಮಾಡಿ, ಗೋಪುರದ ಬಾಗಿಲನ್ನು ಸುಟ್ಟು ಬಿಡುವುದಕ್ಕೆ ಅದರ ಬಳಿಗೆ ಬಂದನು. \v 53 ಆದರೆ ಒಬ್ಬ ಸ್ತ್ರೀಯು ಒಂದು ಬೀಸುವ ಕಲ್ಲಿನ ತುಂಡನ್ನು ಅಬೀಮೆಲೆಕನ ತಲೆಯ ಮೇಲೆ ಹಾಕಿದಳು. ಅದರಿಂದ ಅವನ ತಲೆಯನ್ನು ಒಡೆದು ಹಾಕಿದಳು. \p \v 54 ಆಗ ಅವನು ಶೀಘ್ರವಾಗಿ ತನ್ನ ಆಯುಧಗಳನ್ನು ಹೊರುವ ಸೇವಕನನ್ನು ಕರೆದು ಅವನಿಗೆ, “ಒಬ್ಬ ಸ್ತ್ರೀಯು ಕೊಂದಳೆಂದು ಮನುಷ್ಯರು ನನ್ನನ್ನು ಕುರಿತು ಹೇಳದ ಹಾಗೆ ನೀನು ನಿನ್ನ ಖಡ್ಗದಿಂದ ಇರಿದು, ನನ್ನನ್ನು ಕೊಲ್ಲು,” ಎಂದು ಅವನಿಗೆ ಹೇಳಿದನು. ಹಾಗೆಯೇ ಅವನ ಸೇವಕನು ಅವನನ್ನು ತಿವಿದು ಹಾಕಿದನು. ಅವನು ಮರಣಹೊಂದಿದನು. \v 55 ಅಬೀಮೆಲೆಕನು ಮರಣಹೊಂದಿದ್ದನ್ನು ಇಸ್ರಾಯೇಲರು ಕಂಡಾಗ, ಅವರು ತಮ್ಮ ತಮ್ಮ ಮನೆಗಳಿಗೆ ಹೋದರು. \p \v 56 ಈ ಪ್ರಕಾರ ಅಬೀಮೆಲೆಕನು ತನ್ನ ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿದ್ದರಿಂದ, ತನ್ನ ತಂದೆಗೆ ಮಾಡಿದ ಕೇಡನ್ನು ದೇವರು ಅವನ ಮೇಲೆ ತಿರುಗಿ ಬರಮಾಡಿದರು. \v 57 ಇದಲ್ಲದೆ ಶೆಕೆಮಿನವರು ಮಾಡಿದ ಸಮಸ್ತ ಕೆಟ್ಟತನವನ್ನು ಅವರ ತಲೆಗಳ ಮೇಲೆ ದೇವರು ಬರಮಾಡಿದರು. ಹೀಗೆ ಯೆರುಬ್ಬಾಳನ ಮಗನಾದ ಯೋತಾಮನ ಶಾಪವು ಅವರ ಮೇಲೆ ಬಂದಿತು. \c 10 \s1 ತೋಲ \p \v 1 ಅಬೀಮೆಲೆಕನ ತರುವಾಯ ಇಸ್ಸಾಕಾರನ ಕುಲದ ದೋದೋವಿನ ಮಗನಾದ ಪೂವನ ಮಗನಾದ ತೋಲನು ಇಸ್ರಾಯೇಲರನ್ನು ರಕ್ಷಿಸುವುದಕ್ಕೆ ಎದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ಶಾಮೀರೆಂಬ ಊರಲ್ಲಿ ವಾಸಮಾಡಿದನು. \v 2 ಇಸ್ರಾಯೇಲಿಗೆ ಇಪ್ಪತ್ಮೂರು ವರುಷ ನ್ಯಾಯ ತೀರಿಸಿದ ತರುವಾಯ, ಅವನು ಮರಣಹೊಂದಿ ಶಾಮೀರಲ್ಲಿ ಸಮಾಧಿಯಾದನು. \s1 ಯಾಯೀರ್ \p \v 3 ಅವನ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಾಯೇಲರನ್ನು ಇಪ್ಪತ್ತೆರಡು ವರುಷ ನ್ಯಾಯತೀರಿಸಿದನು. \v 4 ಅವನಿಗೆ ಮೂವತ್ತು ಕತ್ತೆಗಳ ಮೇಲೆ ಸವಾರಿ ಮಾಡುವ ಮೂವತ್ತು ಮಂದಿ ಪುತ್ರರು ಇದ್ದರು. ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳು ಅವರ ಅಧಿಕಾರದಲ್ಲಿದ್ದವು. ಅವುಗಳಿಗೆ ಈ ದಿನದವರೆಗೂ ಹವೋತ್ ಯಾಯೀರ್ ಎಂಬ ಹೆಸರಿದೆ. \v 5 ಯಾಯೀರನು ಮರಣಹೊಂದಿ, ಕಾಮೋನಿನಲ್ಲಿ ಸಮಾಧಿಯಾದನು. \s1 ಯೆಫ್ತಾಹ \p \v 6 ಇಸ್ರಾಯೇಲರು ಪುನಃ ಯೆಹೋವ ದೇವರ ಮುಂದೆ ಕೆಟ್ಟತನವನ್ನು ಮಾಡಿ, ಬಾಳನನ್ನೂ, ಅಷ್ಟೋರೆತನ್ನೂ, ಅರಾಮ್ ದೇಶದ ದೇವರುಗಳನ್ನೂ, ಸೀದೋನಿನ ದೇವರುಗಳನ್ನೂ, ಮೋವಾಬಿನ ದೇವರುಗಳನ್ನೂ, ಅಮ್ಮೋನಿಯರ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸಿದರು. \v 7 ಅವರು ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ಯೆಹೋವ ದೇವರು ಇಸ್ರಾಯೇಲ್ಯರ ಮೇಲೆ ಕೋಪವುಳ್ಳವರಾಗಿ ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಮಾರಿಬಿಟ್ಟರು. \v 8 ಇವರು ಆ ವರ್ಷ ಮೊದಲುಗೊಂಡು ಹದಿನೆಂಟು ವರ್ಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲರನ್ನೆಲ್ಲಾ ಬಾಧಿಸಿ ಕುಂದಿಸಿದರು. \v 9 ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದ ಹಾಗೂ ಬೆನ್ಯಾಮೀನರಿಗೆ ವಿರೋಧವಾಗಿಯೂ, ಎಫ್ರಾಯೀಮರ ಮನೆಗೆ ವಿರೋಧವಾಗಿಯೂ ಯುದ್ಧಮಾಡುವುದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹು ಸಂಕಟವಾಯಿತು. \v 10 ಆಗ ಇಸ್ರಾಯೇಲರು ಯೆಹೋವ ದೇವರಿಗೆ ಕೂಗಿ, “ನಮ್ಮ ದೇವರನ್ನು ಬಿಟ್ಟು, ಬಾಳನನ್ನು ಸೇವಿಸಿದ್ದರಿಂದ, ನಾವು ನಿಮಗೆ ವಿರೋಧವಾಗಿ ಪಾಪಮಾಡಿದೆವು,” ಎಂದರು. \p \v 11 ಯೆಹೋವ ದೇವರು ಇಸ್ರಾಯೇಲರಿಗೆ, “ನಾನು ನಿಮ್ಮನ್ನು ಈಜಿಪ್ಟ್, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, \v 12 ಸೀದೋನ್ಯ, ಅಮಾಲೇಕ್ಯ, ಮಾವೋನ್ಯ ಈ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ತಪ್ಪಿಸಿಬಿಡಲಿಲ್ಲವೋ? \v 13 ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸುತ್ತಾ ಬಂದಿರಿ; ಆದ್ದರಿಂದ ಇನ್ನು ನಾನು ನಿಮ್ಮನ್ನು ರಕ್ಷಿಸುವುದಿಲ್ಲ. \v 14 ನೀವು ಹೋಗಿ ನಿಮಗೆ ನೀವೇ ಆಯ್ದುಕೊಂಡ ದೇವರುಗಳಿಗೆ ಕೂಗಿರಿ, ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ,” ಎಂದರು. \p \v 15 ಇಸ್ರಾಯೇಲರು ಯೆಹೋವ ದೇವರಿಗೆ, “ನಾವು ಪಾಪಮಾಡಿದೆವು. ನೀವು ನಿಮಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ನಮಗೆ ಮಾಡಿರಿ. ಆದರೆ ಈ ಹೊತ್ತು ನಮ್ಮನ್ನು ರಕ್ಷಿಸಿರಿ,” ಎಂದು ಬೇಡಿಕೊಂಡರು. \v 16 ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು, ಯೆಹೋವ ದೇವರನ್ನು ಸೇವಿಸಿದರು. ಆಗ ಯೆಹೋವ ದೇವರು ಇಸ್ರಾಯೇಲಿನ ಕಷ್ಟಕ್ಕೋಸ್ಕರ ಮನಸ್ಸಿನಲ್ಲಿ ಬಹಳ ನೊಂದುಕೊಂಡರು. \p \v 17 ಅಮ್ಮೋನಿಯರು ಏಕವಾಗಿ ಕೂಡಿಕೊಂಡು, ಗಿಲ್ಯಾದಿನಲ್ಲಿ ಪಾಳೆಯಮಾಡಿಕೊಂಡರು. ಆದರೆ ಇಸ್ರಾಯೇಲರು ಏಕವಾಗಿ ಕೂಡಿ, ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು. \v 18 ಆಗ ಗಿಲ್ಯಾದಿನ ಜನರೂ, ಪ್ರಧಾನರೂ ಒಬ್ಬರಿಗೊಬ್ಬರು, “ಯಾವನು ಅಮ್ಮೋನಿಯರ ಮೇಲೆ ಯುದ್ಧಮಾಡಲಾರಂಭಿಸುವನೋ, ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ತಲೆಯಾಗಿರುವನು,” ಎಂದು ಮಾತನಾಡಿಕೊಂಡರು. \c 11 \p \v 1 ಗಿಲ್ಯಾದ್ಯನಾದ ಯೆಫ್ತಾಹನು ಬಲಿಷ್ಠನಾದ ಪರಾಕ್ರಮಶಾಲಿಯಾಗಿದ್ದನು. ಅವನು ಒಬ್ಬ ವೇಶ್ಯೆಯಲ್ಲಿ ಹುಟ್ಟಿದ ಗಿಲ್ಯಾದನ ಮಗನು. \v 2 ಇದಲ್ಲದೆ ಗಿಲ್ಯಾದನ ಹೆಂಡತಿ ಅವನಿಗೆ ಪುತ್ರರನ್ನು ಪಡೆದಳು. ಅವನ ಹೆಂಡತಿಯ ಮಕ್ಕಳು ದೊಡ್ಡವರಾದಾಗ ಅವರು ಯೆಫ್ತಾಹನಿಗೆ, “ನೀನು ನಮ್ಮ ತಂದೆಯ ಮನೆಯ ಬಾಧ್ಯಸ್ಥನಲ್ಲ. ಏಕೆಂದರೆ ನೀನು ಪರಸ್ತ್ರೀಯ ಮಗನು,” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು. \v 3 ಆಗ ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ, ಟೋಬ್ ದೇಶದಲ್ಲಿ ವಾಸವಾಗಿದ್ದನು. ಆ ಸ್ಥಳದ ಪುಂಡಪೋಕರಿಗಳು ಯೆಫ್ತಾಹನ ಬಳಿಗೆ ಕೂಡಿಕೊಂಡು ಅವನನ್ನು ಹಿಂಬಾಲಿಸುತ್ತಿದ್ದರು. \p \v 4 ಕೆಲವು ದಿವಸಗಳಾದ ಮೇಲೆ ಅಮ್ಮೋನಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಿದರು. \v 5 ಆದರೆ ಅಮ್ಮೋನಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡುವಾಗ, ಗಿಲ್ಯಾದಿನ ಹಿರಿಯರು ಯೆಫ್ತಾಹನನ್ನು ಟೋಬ್ ದೇಶದಿಂದ ಕರೆದುಕೊಂಡು ಬರಲು ಹೋಗಿ, \v 6 ಯೆಫ್ತಾಹನಿಗೆ, “ನಾವು ಅಮ್ಮೋನಿಯರ ಸಂಗಡ ಯುದ್ಧಮಾಡುವಂತೆ, ನೀನು ಬಂದು ನಮ್ಮ ಸೈನ್ಯಾಧಿಪತಿಯಾಗಿರು,” ಎಂದರು. \p \v 7 ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ, “ನೀವಲ್ಲವೇ ನನ್ನನ್ನು ಹಗೆಮಾಡಿ, ನನ್ನ ತಂದೆಯ ಮನೆಯಿಂದ ಹೊರಡಿಸಿದವರು? ಈಗ ನಿಮಗೆ ಇಕ್ಕಟ್ಟು ಬಂದಿರುವಾಗ ನನ್ನ ಬಳಿಗೆ ಏಕೆ ಬಂದಿರಿ?” ಎಂದನು. \p \v 8 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನೀನು ನಮ್ಮೊಂದಿಗೆ ಬಂದು ಅಮ್ಮೋನ್ಯರಿಗೆ ವಿರೋಧವಾಗಿ ಯುದ್ಧಮಾಡಿ, ಗಿಲ್ಯಾದಿನ ನಿವಾಸಿಗಳಾದ ನಮ್ಮೆಲ್ಲರಿಗೆ ನೀನು ತಲೆಯಾಗಿರುವ ಹಾಗೆ, ಈಗ ನಿನ್ನ ಬಳಿಗೆ ತಿರುಗಿ ಬಂದೆವು,” ಎಂದರು. \p \v 9 ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ, “ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ನೀವು ತಿರುಗಿ ನನ್ನನ್ನು ಮನೆಗೆ ಕರೆತಂದರೆ ಮತ್ತು ಯೆಹೋವ ದೇವರು ಅವರನ್ನು ನನ್ನ ಮುಂದೆ ಒಪ್ಪಿಸಿಕೊಟ್ಟರೆ, ನಾನು ನಿಮಗೆ ತಲೆಯಾಗಿರುವೆನೋ?” ಎಂದನು. \p \v 10 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನಾವು ಈ ನಿನ್ನ ಮಾತಿನ ಹಾಗೆ ಮಾಡದೆ ಹೋದರೆ, ಯೆಹೋವ ದೇವರು ನಮ್ಮ ಮತ್ತು ನಿನ್ನ ಮಧ್ಯದಲ್ಲಿ ಸಾಕ್ಷಿಯಾಗಿರಲಿ,” ಎಂದರು. \v 11 ಹಾಗೆಯೇ ಯೆಫ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನನ್ನಾಗಿಯೂ, ಸೈನ್ಯಾಧಿಪತಿಯಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಹೇಳಿದನು. \p \v 12 ಯೆಫ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನೀನು ನನಗೆ ವಿರೋಧವಾಗಿ ನನ್ನ ಸಂಗಡ ಯುದ್ಧಮಾಡುವುದಕ್ಕೆ ನನ್ನ ದೇಶದಲ್ಲಿ ಬರುವ ಕಾರಣವೇನು?” ಎಂದು ಹೇಳಿ ಕಳುಹಿಸಿದನು. \p \v 13 ಅಮ್ಮೋನಿಯ ಅರಸನು ಯೆಫ್ತಾಹನ ದೂತರಿಗೆ, “ಇಸ್ರಾಯೇಲರು ಈಜಿಪ್ಟಿನಿಂದ ಬರುವಾಗ, ಅರ್ನೋನಿನಿಂದ ಯಬ್ಬೋಕಿನವರೆಗೂ ಮತ್ತು ಯೊರ್ದನಿನವರೆಗೂ ಇರುವ ನನ್ನ ದೇಶವನ್ನು ತೆಗೆದುಕೊಂಡರು. ಆದ್ದರಿಂದ ಈಗ ಅದನ್ನು ನನಗೆ ಸಮಾಧಾನವಾಗಿ ತಿರುಗಿಕೊಡು,” ಎಂದನು. \p \v 14 ಆದರೆ ಯೆಫ್ತಾಹನು ತಿರುಗಿ ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, \v 15 ಅವರಿಗೆ ಯೆಫ್ತಾಹನು ಹೇಳುವ ಮಾತೇನೆಂದರೆ: \pm “ಇದೇ ಇಸ್ರಾಯೇಲರು ಮೋವಾಬಿನ ದೇಶವನ್ನಾದರೂ, ಅಮ್ಮೋನಿಯರ ದೇಶವನ್ನಾದರೂ ತೆಗೆದುಕೊಂಡಿಲ್ಲ. \v 16 ಆದರೆ ಇಸ್ರಾಯೇಲು ಈಜಿಪ್ಟಿನಿಂದ ಬರುವಾಗ, ಮರುಭೂಮಿಯಲ್ಲಿ ಕೆಂಪು ಸಮುದ್ರದವರೆಗೆ ನಡೆದು ಕಾದೇಶಿಗೆ ಬಂದು, \v 17 ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಾನು ನಿನ್ನ ದೇಶವನ್ನು ಹಾದು ಹೋಗಲು ಅಪ್ಪಣೆ ಆಗಬೇಕು,’ ಎಂದು ಹೇಳಿದರು. ಆದರೆ ಎದೋಮಿನ ಅರಸನು ಕೇಳದೆ ಹೋದನು. ಅವರು ಮೋವಾಬಿನ ಅರಸನ ಬಳಿಗೂ ಹಾಗೆಯೇ ಕಳುಹಿಸಿದರು; ಅವನೂ ಒಪ್ಪದೆ ಹೋದನು. ಆದ್ದರಿಂದ ಇಸ್ರಾಯೇಲರು ಕಾದೇಶಿನಲ್ಲಿ ವಾಸಮಾಡಿದರು. \pm \v 18 “ಮರುಭೂಮಿಯಲ್ಲಿ ನಡೆದು, ಎದೋಮ್ ದೇಶವನ್ನೂ, ಮೋವಾಬ್ ದೇಶವನ್ನೂ ಸುತ್ತಿಕೊಂಡು ಹೋಗಿ, ಮೋವಾಬ್ ದೇಶದ ಪೂರ್ವದಿಕ್ಕಿಗೆ ಬಂದು, ಮೋವಾಬಿನ ಮೇರೆಯೊಳಗೆ ಪ್ರವೇಶಿಸದೆ, ಮೋವಾಬಿನ ಮೇರೆಯಾದ ಅರ್ನೋನಿನ ಆಚೆಯಲ್ಲಿ ಇಳಿದುಕೊಂಡರು. \pm \v 19 “ಇಸ್ರಾಯೇಲರು ಹೆಷ್ಬೋನನ್ನು ಆಳಿದ ಅಮೋರಿಯರ ಅರಸನಾದಂಥ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ, ‘ನಮ್ಮ ಸ್ಥಳಕ್ಕೆ ನಿನ್ನ ದೇಶವನ್ನು ನಾವು ದಾಟಿಹೋಗುವುದಕ್ಕೆ ಅಪ್ಪಣೆ ಆಗಬೇಕು,’ ಎಂದರು. \v 20 ಆದರೆ ಸೀಹೋನನು ತನ್ನ ಮೇರೆಯನ್ನು ದಾಟುವುದಕ್ಕೆ ಇಸ್ರಾಯೇಲರನ್ನು ನಂಬದೆ, ತನ್ನ ಜನರನ್ನೆಲ್ಲಾ ಕೂಡಿಸಿ, ಯಹಚಿನಲ್ಲಿ ದಂಡಿಳಿದು, ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಮಾಡಿದನು. \pm \v 21 “ಆಗ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಸೀಹೋನನನ್ನೂ, ಅವನ ಸಕಲ ಜನರನ್ನೂ ಇಸ್ರಾಯೇಲರ ಕೈಗೆ ಒಪ್ಪಿಸಿಕೊಟ್ಟರು. ಇಸ್ರಾಯೇಲರು ಸೀಹೋನನನ್ನೂ, ಅವನ ಸಕಲ ಜನರನ್ನೂ ಹೊಡೆದುಬಿಟ್ಟರು. ಹಾಗೆಯೇ ಇಸ್ರಾಯೇಲರು ಆ ದೇಶದಲ್ಲಿ ವಾಸಿಸಿದ್ದ ಅಮೋರಿಯರ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡರು. \v 22 ಅರ್ನೋನಿನಿಂದ ಯಬ್ಬೋಕಿನವರೆಗೂ, ಮರುಭೂಮಿಯಿಂದ ಯೊರ್ದನಿನವರೆಗೂ ಇರುವ ಅಮೋರಿಯರ ಮೇರೆಯಾದ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡರು. \pm \v 23 “ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಅಮೋರಿಯರನ್ನು ತಮ್ಮ ಜನರಾದ ಇಸ್ರಾಯೇಲಿನ ಮುಂದೆ ಹೊರಡಿಸಿರುವಾಗ, ನೀನು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವಿಯೋ? \v 24 ಆದರೆ ನಿನ್ನ ದೇವರಾದ ಕೆಮೋಷನು ನಿನ್ನ ಮುಂದೆ ಹೊರಡಿಸುವವರ ದೇಶವನ್ನು ನೀನು ಸ್ವಾಧೀನ ಮಾಡಿಕೊಳ್ಳುವುದಿಲ್ಲವೋ? ಹಾಗೆಯೇ ನಮ್ಮ ದೇವರಾದ ಯೆಹೋವ ದೇವರು ನಮ್ಮ ಮುಂದೆ ಹೊರಡಿಸುವವರ ದೇಶವನ್ನೆಲ್ಲಾ ನಾವು ಸ್ವಾಧೀನ ಮಾಡಿಕೊಳ್ಳುವೆವು. \v 25 ಈಗ ಚಿಪ್ಪೋರನ ಮಗ ಮೋವಾಬಿನ ಅರಸ ಬಾಲಾಕನಿಗಿಂತ ಯಾವುದರಲ್ಲಾದರೂ ನೀನು ಉತ್ತಮನೋ? ಅವನು ಇಸ್ರಾಯೇಲಿಗೆ ವಿರೋಧವಾಗಿ ಎಂದಾದರೂ ವಿವಾದ ಮಾಡಿದನೋ ಅಥವಾ ಅವರಿಗೆ ವಿರೋಧವಾಗಿ ಯುದ್ಧ ಮಾಡಿದನೋ? \v 26 ಇಸ್ರಾಯೇಲು ಹೆಷ್ಬೋನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ; ಅರೋಯೇರಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ; ಅರ್ನೋನಿನ ತೀರವಾದ ಎಲ್ಲಾ ಪಟ್ಟಣಗಳಲ್ಲಿಯೂ, ಮುನ್ನೂರು ವರ್ಷಗಳಿಂದ ವಾಸಿಸಿರುವಾಗ, ಇಷ್ಟರವರೆಗೆ ನೀವು ಅದನ್ನು ಬಿಡಿಸದೆ ಹೋದದ್ದೇನು? \v 27 ಆದ್ದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧ ಮಾಡುವುದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀಯೆ. ನ್ಯಾಯಾಧಿಪತಿಯಾದ ಯೆಹೋವ ದೇವರು ಈ ಹೊತ್ತು ಇಸ್ರಾಯೇಲರಿಗೂ, ಅಮ್ಮೋನಿಯರಿಗೂ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು. \m \v 28 ಹೇಗಿದ್ದರೂ ಅಮ್ಮೋನಿಯರ ಅರಸನು ಯೆಫ್ತಾಹನು ತನಗೆ ಹೇಳಿ ಕಳುಹಿಸಿದ ಮಾತನ್ನು ಕೇಳದೆ ಹೋದನು. \p \v 29 ಆಗ ಯೆಹೋವ ದೇವರ ಆತ್ಮ ಯೆಫ್ತಾಹನ ಮೇಲೆ ಬಂತು. ಅವನು ಗಿಲ್ಯಾದ್, ಮನಸ್ಸೆಯ ಸೀಮೆಗಳನ್ನು ದಾಟಿ ಹೋಗಿ, ಗಿಲ್ಯಾದಿನಲ್ಲಿರುವ ಮಿಚ್ಪೆಗೆ ಬಂದು, ಅಲ್ಲಿಂದ ಅಮ್ಮೋನಿಯರೆದುರಿಗೆ ಹಾದುಹೋದನು. \v 30 ಯೆಫ್ತಾಹನು ಯೆಹೋವ ದೇವರಿಗೆ ಒಂದು ಪ್ರಮಾಣವನ್ನು ಮಾಡಿ, “ನೀನು ಅಮ್ಮೋನಿಯರನ್ನು ನನ್ನ ಕೈಯಲ್ಲಿ ತಪ್ಪದೆ ಒಪ್ಪಿಸಿಕೊಟ್ಟರೆ, \v 31 ನಾನು ಅಮ್ಮೋನಿಯರನ್ನು ಜಯಿಸಿ ಹಿಂತಿರುಗಿ ಬರುವಾಗ, ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥದ್ದು ಯೆಹೋವ ದೇವರದಾಗಿರುವುದು. ಅದನ್ನು ದಹನಬಲಿಯಾಗಿ ಅರ್ಪಿಸುವೆನು,” ಎಂದನು. \p \v 32 ಹೀಗೆ ಯೆಫ್ತಾಹನು ಅಮ್ಮೋನಿಯರ ಮೇಲೆ ಯುದ್ಧಮಾಡುವುದಕ್ಕೆ ಅವರೆದುರಿಗೆ ಹೊರಟುಹೋದನು. ಯೆಹೋವ ದೇವರು ಅವರನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟರು. \v 33 ಯೆಫ್ತಾಹನು ಅವರನ್ನು ಅರೋಯೇರಿನಿಂದ ಮಿನ್ನೀಥಿನ ದಾರಿಯವರೆಗೆ ಮತ್ತು ಆಬೇಲ್ ಕೆರಾಮೀಮಗೆ ಹೋಗುವವರೆಗೆ ಇರುವ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿದನು. ಹೀಗೆ ದೊಡ್ಡ ಜಯಹೊಂದಿ, ಅಮ್ಮೋನಿಯರು ಇಸ್ರಾಯೇಲರಿಗೆ ಶರಣಾದರು. \p \v 34 ಯೆಫ್ತಾಹನು ಮಿಚ್ಪೆಯಲ್ಲಿರುವ ತನ್ನ ಮನೆಗೆ ಹಿಂದಿರುಗಿ ಬರುವಾಗ, ಅವನ ಮಗಳು ದಮ್ಮಡಿಗಳಿಂದಲೂ, ನಾಟ್ಯದಿಂದಲೂ ಅವನನ್ನು ಎದುರುಗೊಳ್ಳಲು ಹೊರಟಳು. ಅವನಿಗೆ ಅವಳು ಒಬ್ಬಳೇ ಮಗಳು. ಅವಳ ಹೊರತಾಗಿ ಅವನಿಗೆ ಮಗನಾಗಲಿ, ಮಗಳಾಗಲಿ ಇರಲಿಲ್ಲ. \v 35 ಅವನು ಅವಳನ್ನು ನೋಡಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡು, “ಅಯ್ಯೋ, ನನ್ನ ಮಗಳೇ, ನೀನು ನನ್ನನ್ನು ಬಹಳವಾಗಿ ಕುಂದಿಸಿದೆ. ನನ್ನನ್ನು ತೊಂದರೆ ಪಡಿಸುವವರಲ್ಲಿ ನೀನೂ ಒಬ್ಬಳಾದೆ. ಏಕೆಂದರೆ ನಾನು ಯೆಹೋವ ದೇವರಿಗೆ ನನ್ನ ಬಾಯಿತೆರೆದು, ಪ್ರಮಾಣಮಾಡಿದೆನು, ಹಿಂದೆಗೆಯಲಾರೆನು,” ಎಂದನು. \p \v 36 ಅವಳು ಅವನಿಗೆ, “ಅಪ್ಪಾ, ನೀನು ಯೆಹೋವ ದೇವರಿಗೆ ನಿನ್ನ ಬಾಯಿ ತೆರೆದೆಯಲ್ಲ. ಯೆಹೋವ ದೇವರು ಅಮ್ಮೋನಿಯರಾದ ನಿನ್ನ ಶತ್ರುಗಳಿಗೆ ನಿನ್ನಿಂದ ಮುಯ್ಯಿ ತೀರಿಸಿದ್ದರಿಂದ, ಅವರಿಗೆ ನಿನ್ನ ಬಾಯಿಂದ ಹೊರಟ ಮಾತಿನ ಪ್ರಕಾರವೇ ನನಗೆ ಮಾಡು,” ಎಂದಳು. \v 37 ಇದಲ್ಲದೆ ಅವಳು ತನ್ನ ತಂದೆಗೆ, “ಈ ಕಾರ್ಯವು ನನಗೆ ಆಗಲಿ. ಆದರೆ ನಾನೂ, ನನ್ನ ಗೆಳತಿಯರೂ ಕೂಡ ನನ್ನ ಕನ್ಯಾವಸ್ಥೆಗಾಗಿ ಬೆಟ್ಟಗಳ ಮೇಲೆ ಹೋಗಿ, ನನ್ನ ಗೆಳತಿಯರ ಸಂಗಡ ಅಳುವುದಕ್ಕೆ ನನಗೆ ಎರಡು ತಿಂಗಳು ಸಮಯವನ್ನು ಕೊಡು,” ಎಂದಳು. \p \v 38 ಆಗ ಅವನು, “ಎರಡು ತಿಂಗಳು ಹೋಗಿ ಬಾ,” ಎಂದು ಹೇಳಿ ಮಗಳನ್ನು ಕಳುಹಿಸಿಬಿಟ್ಟನು. ಅವಳು ತನ್ನ ಗೆಳತಿಯರ ಸಂಗಡ ಹೋಗಿ, ತನ್ನ ಕನ್ಯಾವಸ್ಥೆಗಾಗಿ ಬೆಟ್ಟದಲ್ಲಿ ಅತ್ತು, \v 39 ಎರಡು ತಿಂಗಳು ತೀರಿದಾಗ ತನ್ನ ತಂದೆಯ ಬಳಿಗೆ ಬಂದಳು. \p ಆಗ ಅವನು ಮಾಡಿದ್ದ ತನ್ನ ಪ್ರಮಾಣದ ಪ್ರಕಾರ ಅವಳಿಗೆ ತೀರ್ಪನ್ನು ಈಡೇರಿಸಿದನು. ಅವಳು ಕನ್ಯೆಯಾಗಿಯೇ ಮರಣಹೊಂದಿದಳು. \v 40 ಹೀಗೆ ವರ್ಷಕ್ಕೆ ನಾಲ್ಕು ದಿವಸ ಇಸ್ರಾಯೇಲಿನ ಪುತ್ರಿಯರು ಹೋಗಿ, ಗಿಲ್ಯಾದ್ಯನಾದ ಯೆಫ್ತಾಹನ ಮಗಳಿಗಾಗಿ ಗೋಳಾಡುವುದು ಇಸ್ರಾಯೇಲಿನಲ್ಲಿ ಪದ್ಧತಿ ಆಯಿತು. \c 12 \s1 ಯೆಫ್ತಾಹ ಮತ್ತು ಎಫ್ರಾಯೀಮ್ \p \v 1 ಎಫ್ರಾಯೀಮನ ಜನರು ಕೂಡಿಕೊಂಡು ಉತ್ತರದ ಜಪೋನಿಗೆ ಹೋಗಿ, ಯೆಫ್ತಾಹನಿಗೆ, “ನೀನು ಅಮ್ಮೋನಿಯರ ಮೇಲೆ ಯುದ್ಧಮಾಡುವುದಕ್ಕೆ ಹೋದಾಗ, ನಮ್ಮನ್ನು ಏಕೆ ನಿನ್ನ ಸಂಗಡ ಹೋಗಲು ಕರೆಕಳುಹಿಸಲಿಲ್ಲ? ನಾವು ನಿನ್ನ ಮನೆಯನ್ನು ನಿನ್ನನ್ನು ಸಹಿತವಾಗಿ ಬೆಂಕಿಯಿಂದ ಸುಟ್ಟುಬಿಡುತ್ತೇವೆ,” ಎಂದರು. \p \v 2 ಯೆಫ್ತಾಹನು ಅವರಿಗೆ, “ನನಗೂ, ನಮ್ಮ ಜನರಿಗೂ ಅಮ್ಮೋನಿಯರ ಸಂಗಡ ದೊಡ್ಡ ವ್ಯಾಜ್ಯವಿರುವಾಗ, ನಾನು ನಿಮ್ಮನ್ನು ಕರೆದೆನು. ಆದರೆ ನೀವು ನನ್ನನ್ನು ಅವರ ಕೈಯಿಂದ ಬಿಡಿಸಿ ರಕ್ಷಿಸಲಿಲ್ಲ. \v 3 ನೀವು ನನ್ನನ್ನು ರಕ್ಷಿಸುವುದಿಲ್ಲವೆಂದು ನಾನು ಕಂಡು ನನ್ನ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು, ಅಮ್ಮೋನಿಯರಿಗೆ ವಿರೋಧವಾಗಿ ಹೋದೆನು. ಯೆಹೋವ ದೇವರು ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ನೀವು ನನ್ನ ಸಂಗಡ ಯುದ್ಧಮಾಡುವುದಕ್ಕೆ ಈ ಹೊತ್ತು ನನಗೆ ವಿರೋಧವಾಗಿ ಏಕೆ ಬಂದಿರಿ?” ಎಂದನು. \p \v 4 ಆಗ ಯೆಫ್ತಾಹನು ಗಿಲ್ಯಾದ್ ಜನರೆಲ್ಲರನ್ನು ಕೂಡಿಸಿ, ಎಫ್ರಾಯೀಮ್ಯರ ಸಂಗಡ ಯುದ್ಧಮಾಡಿದನು. ಏಕೆಂದರೆ, “ಎಫ್ರಾಯೀಮ್ಯರನ್ನು ಮನಸ್ಸೆಯವರ ಮಧ್ಯದಲ್ಲಿದ್ದ ಗಿಲ್ಯಾದ್ಯರಾದ ನೀವು ಸ್ವಕುಲವನ್ನು ಬಿಟ್ಟು ತಪ್ಪಿಸಿಕೊಂಡವರಾಗಿದ್ದೀರಿ,” ಎಂದು ಎಫ್ರಾಯೀಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಎಫ್ರಾಯೀಮ್ಯರನ್ನು ಹೊಡೆದರು. \v 5 ಗಿಲ್ಯಾದ್ಯರು ಎಫ್ರಾಯೀಮ್ಯರಿಗೆ ಮುಂದುಗಡೆ ಯೊರ್ದನ್ ನದಿ ರೇವುಗಳನ್ನು ಹಿಡಿದರು. ಆಗ ಏನಾಯಿತೆಂದರೆ, ಎಫ್ರಾಯೀಮ್ಯರಲ್ಲಿ ತಪ್ಪಿಸಿಕೊಂಡ ಯಾವನಾದರೂ ಬಂದು, “ದಾಟುತ್ತೇನೆ,” ಎಂದು ಹೇಳಿದರೆ, ಗಿಲ್ಯಾದ್ಯರು, “ನೀನು ಎಫ್ರಾಯೀಮ್ಯನೋ?” ಎಂದು ಅವನನ್ನು ಕೇಳುತ್ತಿದ್ದರು. ಅವನು, “ಇಲ್ಲ,” ಎಂದರೆ, ಅವನಿಗೆ, “ನೀನು ಷಿಬ್ಬೋಲೆತ್ ಅನ್ನು,” ಎಂದು ಹೇಳುತ್ತಿದ್ದರು. \v 6 ಆಗ ಅವನು ಹಾಗೆ ಹೇಳಲಾರದೆ, “ಸಿಬ್ಬೋಲೆತ್,” ಎಂದು ಉಚ್ಛರಿಸುವವನನ್ನು ಹಿಡಿದು ಯೊರ್ದನ್ ನದಿ ರೇವುಗಳ ಬಳಿಯಲ್ಲಿ ಕೊಂದುಹಾಕುತ್ತಿದ್ದರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಾಲ್ವತ್ತೆರಡು ಸಾವಿರ ಜನರು ನಾಶವಾದರು. \p \v 7 ಯೆಫ್ತಾಹನು ಇಸ್ರಾಯೇಲರಿಗೆ ಆರು ವರ್ಷ ನ್ಯಾಯತೀರಿಸಿದನು. ಅನಂತರ ಗಿಲ್ಯಾದ್ಯನಾದ ಯೆಫ್ತಾಹನು ಮರಣಹೊಂದಿದನು. ಅವನ ಶವವನ್ನು ಗಿಲ್ಯಾದ್ ಪಟ್ಟಣಗಳ ಒಂದರಲ್ಲಿ ಸಮಾಧಿಮಾಡಿದರು. \s1 ಇಬ್ಚಾನನು, ಏಲೋನನು ಹಾಗೂ ಅಬ್ದೋನನು \p \v 8 ಅವನ ತರುವಾಯ ಬೇತ್ಲೆಹೇಮಿನವನಾದ ಇಬ್ಚಾನನು ಇಸ್ರಾಯೇಲಿಗೆ ನ್ಯಾಯತೀರಿಸಿದನು. \v 9 ಅವನಿಗೆ ಮೂವತ್ತು ಮಂದಿ ಪುತ್ರರು, ಮೂವತ್ತು ಮಂದಿ ಪುತ್ರಿಯರು ಇದ್ದರು. ಪುತ್ರಿಯರನ್ನು ಹೊರಗೆ ಮದುವೆ ಮಾಡಿಕೊಟ್ಟನು; ಹೊರಗಿನಿಂದ ಮೂವತ್ತು ಮಂದಿ ಕನ್ಯೆಯರನ್ನು ತನ್ನ ಪುತ್ರರಿಗೆ ತೆಗೆದುಕೊಂಡನು. ಅವನು ಇಸ್ರಾಯೇಲಿಗೆ ಏಳು ವರ್ಷ ನ್ಯಾಯತೀರಿಸಿದನು. \v 10 ನಂತರ ಇಬ್ಚಾನನು ಮರಣಹೊಂದಿ ಬೇತ್ಲೆಹೇಮಿನಲ್ಲಿ ಸಮಾಧಿಯಾದನು. \p \v 11 ಅವನ ತರುವಾಯ ಜೆಬುಲೂನಿನವನಾದ ಏಲೋನನು ಇಸ್ರಾಯೇಲರಿಗೆ ನ್ಯಾಯತೀರಿಸಿದನು. ಅವನು ಹತ್ತು ವರ್ಷಗಳು ಇಸ್ರಾಯೇಲಿಗೆ ನ್ಯಾಯತೀರಿಸಿದನು. \v 12 ಜೆಬುಲೂನಿನವನಾದ ಏಲೋನನು ಮರಣಹೊಂದಿ, ಜೆಬುಲೂನ್ ದೇಶವಾದ ಅಯ್ಯಾಲೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು. \p \v 13 ಅವನ ತರುವಾಯ ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಇಸ್ರಾಯೇಲಿಗೆ ನ್ಯಾಯತೀರಿಸಿದನು. \v 14 ಅವನಿಗೆ ಎಪ್ಪತ್ತು ಕತ್ತೆಗಳ ಮೇಲೆ ಏರುವ ನಾಲ್ವತ್ತು ಮಂದಿ ಮಕ್ಕಳೂ, ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಅವನು ಇಸ್ರಾಯೇಲಿಗೆ ಎಂಟು ವರ್ಷ ನ್ಯಾಯತೀರಿಸಿದನು. \v 15 ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಮರಣಹೊಂದಿ, ಎಫ್ರಾಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು. \c 13 \s1 ಸಂಸೋನನ ಜನನ \p \v 1 ಇಸ್ರಾಯೇಲರು ತಿರುಗಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ, ಯೆಹೋವ ದೇವರು ಅವರನ್ನು ನಾಲ್ವತ್ತು ವರ್ಷದವರೆಗೆ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಟ್ಟರು. \p \v 2 ಆದರೆ ಚೊರ್ಗದವನಾದ ದಾನನ ಗೋತ್ರದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಮಕ್ಕಳನ್ನು ಹೆರದೆ, ಬಂಜೆಯಾಗಿದ್ದಳು. \v 3 ಯೆಹೋವ ದೇವರ ದೂತನು ಆ ಸ್ತ್ರೀಗೆ ಪ್ರತ್ಯಕ್ಷವಾಗಿ ಅವಳಿಗೆ, “ಇಗೋ, ನೀನು ಮಕ್ಕಳನ್ನು ಹೆರದೆ ಬಂಜೆಯಾಗಿದ್ದೀಯೆ. ಆದರೆ ನೀನು ಗರ್ಭಧರಿಸಿ ಒಬ್ಬ ಮಗನನ್ನು ಹೆರುವೆ. \v 4 ಆದ್ದರಿಂದ ನೀನು ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ, ಅಶುಚಿಯಾದ ಒಂದನ್ನಾದರೂ ತಿನ್ನದೆ, ಎಚ್ಚರಿಕೆಯಾಗಿರಬೇಕು. \v 5 ನೀನು ಗರ್ಭವನ್ನು ಧರಿಸಿ, ಒಬ್ಬ ಮಗನನ್ನು ಹೆರುವೆ; ಅವನ ತಲೆಯ ಮೇಲೆ ಕ್ಷೌರದ ಕತ್ತಿ ಬರಬಾರದು. ಏಕೆಂದರೆ ಗರ್ಭದಿಂದಲೇ ಆ ಹುಡುಗನು ದೇವರಿಗೆ ಪ್ರತಿಷ್ಠಿತನಾದ ನಾಜೀರನಾಗಿರುವನು. ಅವನು ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ, ರಕ್ಷಿಸಲು ಪ್ರಾರಂಭಿಸುವನು,” ಎಂದನು. \p \v 6 ಆಗ ಆ ಸ್ತ್ರೀಯು ಬಂದು ತನ್ನ ಗಂಡನಿಗೆ, “ಒಬ್ಬ ದೇವರ ಮನುಷ್ಯ ನನ್ನ ಹತ್ತಿರ ಬಂದಿದ್ದನು. ಅವನ ರೂಪವು ದೇವದೂತನ ರೂಪದ ಹಾಗೆ ಮಹಾ ಭಯಂಕರವಾಗಿತ್ತು. ನಾನು ಅವನನ್ನು ಎಲ್ಲಿಂದ ಬಂದೆ ಎಂದು ಕೇಳಲಿಲ್ಲ; ಅವನು ತನ್ನ ಹೆಸರನ್ನು ನನಗೆ ತಿಳಿಸಲಿಲ್ಲ. \v 7 ಅವನು ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಈಗ ನೀನು ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುದ್ಧವಾದ ಒಂದನ್ನಾದರೂ ತಿನ್ನದೆ ಇರು. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಮರಣಹೊಂದುವವರೆಗೆ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು,’ ಎಂದಳು.” \p \v 8 ಆಗ ಮಾನೋಹನು ಯೆಹೋವ ದೇವರಿಗೆ ಬೇಡಿಕೊಂಡು, “ನನ್ನ ಕರ್ತದೇವರೇ, ನೀವು ಕಳುಹಿಸಿದ ದೇವರ ಮನುಷ್ಯನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು, ಹುಟ್ಟುವ ಕೂಸಿಗೋಸ್ಕರ ನಾವು ಮಾಡಬೇಕಾದದ್ದನ್ನು ನಮಗೆ ಕಲಿಸಲಿ,” ಎಂದು ಪ್ರಾರ್ಥಿಸಿದನು. \p \v 9 ದೇವರು ಮಾನೋಹನ ಬೇಡಿಕೆಯನ್ನು ಕೇಳಿದರು. ಆ ಸ್ತ್ರೀಯು ಹೊಲದಲ್ಲಿ ಕುಳಿತಿರುವಾಗ, ದೇವದೂತನು ತಿರುಗಿ ಅವಳ ಬಳಿಗೆ ಬಂದನು. ಆಗ ಅವಳ ಗಂಡನಾದ ಮಾನೋಹನು ಅವಳ ಸಂಗಡ ಇರಲಿಲ್ಲ. \v 10 ಆದ್ದರಿಂದ ಅವಳು ಬೇಗ ಓಡಿಹೋಗಿ, ತನ್ನ ಗಂಡನಿಗೆ, “ಇಗೋ, ಆ ದಿನ ನನಗೆ ಪ್ರತ್ಯಕ್ಷನಾದ ಮನುಷ್ಯನು ತಿರುಗಿ ನನಗೆ ಪ್ರತ್ಯಕ್ಷನಾಗಿದ್ದಾನೆ,” ಎಂದು ತಿಳಿಸಿದಳು. \p \v 11 ಆಗ ಮಾನೋಹನು ಎದ್ದು ತನ್ನ ಹೆಂಡತಿಯೊಡನೆ ಹೋಗಿ, ಅವನ ಬಳಿಗೆ ಬಂದು, ಅವನಿಗೆ, “ಈ ಸ್ತ್ರೀಯ ಸಂಗಡ ಮಾತನಾಡಿದವನು ನೀನೋ?” ಎಂದನು. \p ಅವನು, “ನಾನೇ,” ಎಂದನು. \p \v 12 ಮಾನೋಹನು, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ಆ ಕೂಸಿಗೋಸ್ಕರ ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು?” ಎಂದನು. \p \v 13 ಯೆಹೋವ ದೇವರ ದೂತನು ಮಾನೋಹನಿಗೆ, “ನಾನು ಈ ಸ್ತ್ರೀಗೆ ಹೇಳಿದ್ದೆಲ್ಲದರಲ್ಲಿ ಅವಳು ಎಚ್ಚರಿಕೆಯಾಗಿದ್ದು, \v 14 ದ್ರಾಕ್ಷಿ ಗಿಡದಲ್ಲಿ ಹುಟ್ಟುವ ಒಂದನ್ನೂ ತಿನ್ನದೆ, ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುಚಿಯಾದ ಒಂದನ್ನೂ ತಿನ್ನದೆ ಇದ್ದು, ನಾನು ಅವಳಿಗೆ ಆಜ್ಞಾಪಿಸಿದ್ದೆಲ್ಲಾ ಕೈಗೊಳ್ಳಲಿ,” ಎಂದನು. \p \v 15 ಮಾನೋಹನು ಯೆಹೋವ ದೇವರ ದೂತನಿಗೆ, “ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವವರೆಗೆ ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ,” ಎಂದನು. \p \v 16 ಯೆಹೋವ ದೇವರ ದೂತನು ಮಾನೋಹನಿಗೆ, “ನೀನು ನನ್ನನ್ನು ನಿಲ್ಲಿಸಿಕೊಂಡರೂ, ನಾನು ನಿನ್ನ ರೊಟ್ಟಿಯನ್ನು ತಿನ್ನುವುದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ, ಅದನ್ನು ಯೆಹೋವ ದೇವರಿಗೆ ಅರ್ಪಿಸಬೇಕು,” ಎಂದನು. \p \v 17 ಏಕೆಂದರೆ ಅವನು ಯೆಹೋವ ದೇವರ ದೂತನೆಂದು ಮಾನೋಹನು ಅರಿಯದೆ ಇದ್ದನು. ಮಾನೋಹನು ಯೆಹೋವ ದೇವರ ದೂತನಿಗೆ, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ನಿನ್ನನ್ನು ಘನಪಡಿಸುವ ಹಾಗೆ ನಿನ್ನ ಹೆಸರೇನು?” ಎಂದನು. \p \v 18 ಆದರೆ ಯೆಹೋವ ದೇವರ ದೂತನು ಅವನಿಗೆ, “ನನ್ನ ಹೆಸರು ಏನೆಂದು ನೀನು ಕೇಳುವುದೇನು? ಆ ಹೆಸರು ಆಶ್ಚರ್ಯಕರವಾದದ್ದು,” ಎಂದನು. \v 19 ಹೀಗೆ ಮಾನೋಹನು ಮೇಕೆಯ ಮರಿಯನ್ನೂ, ಧಾನ್ಯ ಸಮರ್ಪಣೆಯನ್ನೂ ತಂದು, ಅವುಗಳನ್ನು ಬಂಡೆಯ ಮೇಲೆ ಯೆಹೋವ ದೇವರಿಗೆ ಅರ್ಪಿಸಿದನು. ಮಾನೋಹನೂ, ಅವನ ಹೆಂಡತಿಯೂ ನೋಡುವಾಗ, ಯೆಹೋವ ದೇವರ ದೂತನು ಆಶ್ಚರ್ಯಕರವಾದ ಸಂಗತಿಯನ್ನು ಮಾಡಿದನು. \v 20 ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳುವಾಗ, ಯೆಹೋವ ದೇವರ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋಹನೂ, ಅವನ ಹೆಂಡತಿಯೂ ಕಂಡು, ನೆಲದ ಮೇಲೆ ಬೋರಲು ಬಿದ್ದರು. \v 21 ಯೆಹೋವ ದೇವರ ದೂತನು ಮಾನೋಹನಿಗೂ, ಅವನ ಹೆಂಡತಿಗೂ ತಿರುಗಿ ಕಾಣಿಸಲಿಲ್ಲ. ಆಗ ಮಾನೋಹನು, ಅವನು ದೇವರ ದೂತನು ಎಂದು ತಿಳಿದುಕೊಂಡನು. \p \v 22 ಮಾನೋಹನು ತನ್ನ ಹೆಂಡತಿಗೆ, “ನಾವು ದೇವರನ್ನು ಕಂಡದ್ದರಿಂದ ನಿಶ್ಚಯವಾಗಿ ಸಾಯುವೆವು,” ಎಂದನು. \p \v 23 ಅವನ ಹೆಂಡತಿ ಅವನಿಗೆ, “ಯೆಹೋವ ದೇವರು ನಮ್ಮನ್ನು ಕೊಲ್ಲಬೇಕೆಂದಿದ್ದರೆ, ಅವರು ನಮ್ಮ ಕೈಯಿಂದ ದಹನಬಲಿಯನ್ನೂ, ಅರ್ಪಣೆಯನ್ನೂ ಸ್ವೀಕರಿಸುತ್ತಿರಲಿಲ್ಲ; ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ. ಈಗ ಹೇಳಿದವುಗಳನ್ನು ನಮಗೆ ತಿಳಿಯಮಾಡುತ್ತಿರಲಿಲ್ಲ,” ಎಂದಳು. \p \v 24 ಆ ಸ್ತ್ರೀಯು ಮಗನನ್ನು ಹೆತ್ತು, ಅವನಿಗೆ ಸಂಸೋನ ಎಂದು ಹೆಸರಿಟ್ಟಳು. ಆ ಹುಡುಗನು ಬೆಳೆದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು. \v 25 ಇದಲ್ಲದೆ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಯೆಹೋವ ದೇವರ ಆತ್ಮರು ಆಗಾಗ್ಗೆ ಪ್ರೇರೇಪಿಸುವುದಕ್ಕೆ ಪ್ರಾರಂಭಿಸಿದರು. \c 14 \s1 ಸಂಸೋನನ ವಿವಾಹ \p \v 1 ಸಂಸೋನನು ತಿಮ್ನಾತಿಗೆ ಇಳಿದು, ಅಲ್ಲಿ ತಿರುಗಿ ಫಿಲಿಷ್ಟಿಯರ ಪುತ್ರಿಯರ ಒಬ್ಬ ಸ್ತ್ರೀಯನ್ನು ಕಂಡು, \v 2 ತನ್ನ ತಂದೆತಾಯಿಗಳ ಬಳಿಗೆ ಬಂದು ಅವರಿಗೆ, “ನಾನು ತಿಮ್ನಾತಿನಲ್ಲಿ ಫಿಲಿಷ್ಟಿಯರ ಪುತ್ರಿಯರೊಳಗೆ ಒಬ್ಬ ಸ್ತ್ರೀಯನ್ನು ಕಂಡೆನು. ಈಗ ಅವಳನ್ನು ನನಗೆ ಮದುವೆ ಮಾಡಿರಿ,” ಎಂದನು. \p \v 3 ಆಗ ಅವನ ತಂದೆಯೂ, ತಾಯಿಯೂ ಅವನಿಗೆ, “ನಿನಗೆ ಸುನ್ನತಿಯಾಗದ ಫಿಲಿಷ್ಟಿಯರಲ್ಲಿ ಹೆಂಡತಿಯನ್ನು ತೆಗೆದುಕೊಳ್ಳುವುದಕ್ಕೆ ನಿನ್ನ ಸಹೋದರರ ಪುತ್ರಿಯರಲ್ಲಿಯೂ, ನಮ್ಮ ಎಲ್ಲಾ ಜನರಲ್ಲಿಯೂ ಸ್ತ್ರೀ ಇಲ್ಲವೋ?” ಎಂದರು. \p ಆದರೆ ಸಂಸೋನನು ತನ್ನ ತಂದೆಗೆ, “ಅವಳನ್ನು ನನಗೆ ತೆಗೆದುಕೋ. ಏಕೆಂದರೆ ಅವಳು ನನ್ನ ಮನಸ್ಸಿಗೆ ಒಪ್ಪಿದ್ದಾಳೆ,” ಎಂದನು. \v 4 ಇದು ಯೆಹೋವ ದೇವರಿಂದ ಉಂಟಾಯಿತೆಂದು ಅವನ ತಂದೆತಾಯಂದಿರು ಅರಿಯದೆ ಇದ್ದರು. ಏಕೆಂದರೆ ಫಿಲಿಷ್ಟಿಯರಿಗೆ ವಿರೋಧವಾಗಿ ಅವನು ಕಾರಣವನ್ನು ಹುಡುಕಿದನು. ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲರನ್ನು ಆಳುತ್ತಿದ್ದರು. \p \v 5 ಆಗ ಸಂಸೋನನೂ, ಅವನ ತಂದೆತಾಯಿಗಳೂ ತಿಮ್ನಾತಿಗೆ ಹೋಗುತ್ತಿದ್ದರು. ಅವರು ತಿಮ್ನತಿನ ದ್ರಾಕ್ಷಿತೋಟಗಳ ಬಳಿಗೆ ಬಂದಾಗ, ಪ್ರಾಯದ ಸಿಂಹವು ಗರ್ಜಿಸುತ್ತಾ ಅವನ ಎದುರಿಗೆ ಬಂದಿತು. \v 6 ಅವನು ತನ್ನ ಕೈಯಲ್ಲಿ ಏನೂ ಇಲ್ಲದಿದ್ದರೂ, ಯೆಹೋವ ದೇವರ ಆತ್ಮ ಅವನ ಮೇಲೆ ಬಂದದ್ದರಿಂದ ಅದನ್ನು ಒಂದು ಮೇಕೆಯ ಮರಿಯ ಹಾಗೆ ಸೀಳಿ ಬಿಟ್ಟನು. ಆದರೆ ಅವನು ತಾನು ಮಾಡಿದ್ದನ್ನು ತನ್ನ ತಂದೆತಾಯಿಗಳಿಗೆ ತಿಳಿಸಲಿಲ್ಲ. \v 7 ಅವನು ಹೋಗಿ ಆ ಸ್ತ್ರೀಯ ಸಂಗಡ ಮಾತನಾಡಿದನು. ಅವಳು ಸಂಸೋನನ ಕಣ್ಣಿಗೆ ಒಪ್ಪುವವಳಾಗಿದ್ದಳು. \p \v 8 ಸ್ವಲ್ಪ ಸಮಯವಾದ ಮೇಲೆ ಅವನು ಅವಳನ್ನು ಮದುವೆ ಮಾಡಿಕೊಳ್ಳುವುದಕ್ಕೆ ತಿರುಗಿ ಬರುವಾಗ, ಸಿಂಹದ ಹೆಣವನ್ನು ನೋಡುವುದಕ್ಕೆ ಪಕ್ಕಕ್ಕೆ ಹೋದಾಗ, ಸಿಂಹದ ಹೆಣದಲ್ಲಿ ಜೇನುಹುಳಗಳನ್ನು ಮತ್ತು ಜೇನನ್ನು ಕಂಡನು. \v 9 ಅದನ್ನು ಅವನು ತನ್ನ ಕೈಗಳಲ್ಲಿ ತೆಗೆದುಕೊಂಡು ತಿನ್ನುತ್ತಾ, ತನ್ನ ತಂದೆತಾಯಿಗಳ ಬಳಿಗೆ ಹೋಗಿ ಅವರಿಗೂ ಕೊಟ್ಟನು; ಅವರೂ ತಿಂದರು. ಆದರೆ ಸಿಂಹದ ಹೆಣದಿಂದ ತಾನು ಜೇನು ತೆಗೆದುಕೊಂಡೆನೆಂದು ಅವರಿಗೆ ತಿಳಿಸಲಿಲ್ಲ. \p \v 10 ಅವನ ತಂದೆಯು ಆ ಸ್ತ್ರೀ ಇರುವ ಸ್ಥಳಕ್ಕೆ ಬಂದಾಗ, ಸಂಸೋನನು ಪ್ರಾಯಸ್ಥರು ಮಾಡುವ ಪದ್ಧತಿಯ ಪ್ರಕಾರ ಅಲ್ಲಿ ಔತಣ ಮಾಡಿಸಿದನು. \v 11 ಅವರು ಅವನನ್ನು ಕಂಡಾಗ, ಅವನ ಸಂಗಡ ಇರುವುದಕ್ಕೆ ಮೂವತ್ತು ಮಂದಿ ಸಂಗಡಿಗರನ್ನು ಕೊಟ್ಟರು. \p \v 12 ಅವರಿಗೆ ಸಂಸೋನನು, “ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ಹೇಳಿದರೆ, ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನು, ಮೂವತ್ತು ಜೊತೆ ಬಟ್ಟೆಗಳನ್ನು ಕೊಡುವೆನು. \v 13 ನಿಮ್ಮಿಂದ ಗ್ರಹಿಸಲು ಆಗದೆ ಹೋದರೆ, ನೀವು ನನಗೆ ಮೂವತ್ತು ದುಪ್ಪಟಿಗಳನ್ನು, ಮೂವತ್ತು ಜೊತೆ ಬಟ್ಟೆಗಳನ್ನು ಕೊಡಬೇಕು,” ಎಂದನು. \p ಅವರು ಅವನಿಗೆ, “ನೀನು ನಿನ್ನ ಒಗಟನ್ನು ಹೇಳು, ಅದನ್ನು ಕೇಳೋಣ,” ಎಂದರು. \p \v 14 ಆಗ ಅವನು ಅವರಿಗೆ ಹೇಳಿದ್ದೇನೆಂದರೆ, \q1 “ತಿಂದು ಬಿಡುವಂಥದ್ದರಿಂದ ತಿನ್ನತಕ್ಕದ್ದು ಹೊರಟಿತು. \q2 ಬಲಿಷ್ಠವಾದದ್ದರಿಂದ ಸಿಹಿಯು ಹೊರಟಿತು.” \m ಒಗಟನ್ನು ಅವರು ಮೂರು ದಿವಸ ಬಿಡಿಸಲಾರದೆ ಹೋದರು. \p \v 15 ನಾಲ್ಕನೆಯ\f + \fr 14:15 \fr*\ft ಕೆಲವು ಪ್ರತಿಗಳಲ್ಲಿ \ft*\fqa ಏಳನೆಯ ದಿವಸ\fqa*\f* ದಿವಸದಲ್ಲಿ ಅವರು ಸಂಸೋನನ ಹೆಂಡತಿಗೆ, “ನಾವು ನಿನ್ನನ್ನೂ, ನಿನ್ನ ತಂದೆಯ ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಡದ ಹಾಗೆ ನೀನು ನಿನ್ನ ಗಂಡನ ಆ ಒಗಟನ್ನು ನಮಗೆ ತಿಳಿಸುವ ಹಾಗೆ ಅವನನ್ನು ಮರಳುಗೊಳಿಸು. ನೀನು ನಮಗಿರುವುದೆಲ್ಲವನ್ನು ಕಸಿದುಕೊಳ್ಳುವುದಕ್ಕೆ ಅಲ್ಲವೇ ನಮ್ಮನ್ನು ಇಲ್ಲಿಗೆ ಕರೆಸಿದೆ?” ಎಂದರು. \p \v 16 ಆಗ ಸಂಸೋನನ ಹೆಂಡತಿ ಅವನ ಮುಂದೆ ಅತ್ತು, “ನನ್ನನ್ನು ಹಗೆ ಮಾಡುತ್ತಿರುವೆ. ನೀನು ನನ್ನನ್ನು ನಿಜವಾಗಿ ಪ್ರೀತಿ ಮಾಡುವುದಿಲ್ಲ, ಏಕೆಂದರೆ ನೀನು ನನ್ನ ಜನರಿಗೆ ಒಂದು ಒಗಟನ್ನು ಹೇಳಿ ನನಗೆ ತಿಳಿಸದೆ ಹೋದೆ,” ಎಂದಳು. \p ಅವನು ಅವಳಿಗೆ, “ಇಗೋ, ನಾನು ನನ್ನ ತಂದೆತಾಯಿಗೆ ಅದನ್ನು ತಿಳಿಸಲಿಲ್ಲ. ನಿನಗೆ ತಿಳಿಸುವೆನೋ?” ಎಂದನು. \v 17 ಅವಳು ಔತಣದ ಏಳು ದಿವಸಗಳಲ್ಲಿಯೂ ಅವನ ಮುಂದೆ ಅಳುತ್ತಿದ್ದಳು. ಆದರೆ ಏಳನೆಯ ದಿವಸದಲ್ಲಿ ಅವಳು, ಅವನನ್ನು ಬಹಳವಾಗಿ ಪೀಡಿಸಿದ್ದರಿಂದ ಒಗಟಿನ ಅರ್ಥವನ್ನು ತಿಳಿಸಿದನು. ಆಗ ಆಕೆ ತನ್ನ ಜನರಿಗೆ ಆ ಒಗಟನ್ನು ತಿಳಿಸಿದಳು. \p \v 18 ಏಳನೆಯ ದಿವಸದಲ್ಲಿ ಸೂರ್ಯ ಮುಳುಗುವುದಕ್ಕಿಂತ ಮುಂಚೆ ಆ ಊರಿನವರು ಅವನಿಗೆ, \q1 “ಜೇನಿಗಿಂತ ಸಿಹಿಯಾದದ್ದೇನು? \q2 ಸಿಂಹಕ್ಕಿಂತ ಬಲಿಷ್ಠವಾದದ್ದೇನು?” \m ಎಂದು ಹೇಳಿದರು. \p ಅವನು ಉತ್ತರವಾಗಿ ಅವರಿಗೆ, \q1 “ನೀವು ನನ್ನ ಕಡಸಿನಿಂದ ಉಳದೆ ಇದ್ದರೆ, \q2 ನನ್ನ ಒಗಟನ್ನು ಗ್ರಹಿಸಲಾರಿರಿ.” \p \v 19 ಯೆಹೋವ ದೇವರ ಆತ್ಮ ಅವನ ಮೇಲೆ ಬಂದದ್ದರಿಂದ, ಅವನು ಅಷ್ಕೆಲೋನಿಗೆ ಹೋಗಿ, ಆ ಊರಿನಲ್ಲಿ ಮೂವತ್ತು ಜನರನ್ನು ವಧಿಸಿ, ಸುಲಿದುಕೊಂಡು ಒಗಟನ್ನು ತಿಳಿಸಿದವರಿಗೆ ದುಸ್ತು ವಸ್ತ್ರಗಳನ್ನು ಕೊಟ್ಟನು. \v 20 ಅವನು ಕೋಪಗೊಂಡು ತನ್ನ ತಂದೆಯ ಮನೆಗೆ ಹೊರಟುಹೋದನು. ಆದರೆ ಸಂಸೋನನ ಹೆಂಡತಿಯನ್ನು ಅವನ ಸಂಗಡ ಸ್ನೇಹಿತನಾಗಿದ್ದವನಿಗೆ ಮದುವೆ ಮಾಡಿಕೊಟ್ಟರು. \c 15 \s1 ಸಂಸೋನನು ಫಿಲಿಷ್ಟಿಯರ ಮೇಲೆ ಸೇಡು ತೀರಿಸಿಕೊಂಡದ್ದು \p \v 1 ಸ್ವಲ್ಪ ಸಮಯವಾದ ತರುವಾಯ, ಗೋಧಿಯ ಸುಗ್ಗಿಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡುವುದಕ್ಕೆ ಒಂದು ಮೇಕೆಯ ಮರಿಯನ್ನು ತೆಗೆದುಕೊಂಡುಹೋಗಿ, ಅವಳ ತಂದೆಗೆ, “ನನ್ನ ಹೆಂಡತಿಯ ಕೋಣೆಗೆ ಹೋಗುತ್ತೇನೆ,” ಎಂದನು. \p \v 2 ಆದರೆ ಅವಳ ತಂದೆಯು ಅವನನ್ನು ಅನುಮತಿಸದೆ ಅವನಿಗೆ, “ನೀನು ಅವಳನ್ನು ಪೂರ್ಣವಾಗಿ ಹಗೆ ಮಾಡಿದೆ ಎಂದು ನಾನು ನಿಜವಾಗಿ ತಿಳಿದು, ಅವಳನ್ನು ನಿನ್ನ ಜೊತೆಯವನಿಗೆ ಮದುವೆ ಮಾಡಿಕೊಟ್ಟೆನು. ಅವಳ ತಂಗಿ ಅವಳಿಗಿಂತ ಸುಂದರಿಯಾಗಿದ್ದಾಳೆ. ಅವಳಿಗೆ ಬದಲಾಗಿ ಇವಳನ್ನು ಮದುವೆಯಾಗು,” ಎಂದನು. \p \v 3 ಆಗ ಸಂಸೋನನು, “ಅವರನ್ನು ಕುರಿತು, ನಾನು ಈ ಸಾರಿ ನಿರಪರಾಧಿ ಫಿಲಿಷ್ಟಿಯರಿಗೆ ಕೇಡನ್ನು ಮಾಡುವ ಸರಿಯಾದ ಸಮಯವಿದು,” ಎಂದು ಹೇಳಿ, ಹೊರಟುಹೋಗಿ, \v 4 ಮುನ್ನೂರು ನರಿಗಳನ್ನು ಹಿಡಿದು, ಪಂಜುಗಳನ್ನು ತೆಗೆದುಕೊಂಡು ಬಂದು, ಬಾಲಕ್ಕೆ ಬಾಲ ಸೇರಿಸಿ, ಎರಡು ಬಾಲಗಳ ನಡುವೆ ಒಂದು ಪಂಜನ್ನು ಕಟ್ಟಿದನು. \v 5 ಬಾಲಗಳಿಗೆ ಬೆಂಕಿ ಹಚ್ಚಿ, ಅವುಗಳನ್ನು ಫಿಲಿಷ್ಟಿಯರ ಪೈರಿನಲ್ಲಿ ಕಳುಹಿಸಿಬಿಟ್ಟು, ತೆನೆ ಗೂಡುಗಳನ್ನೂ, ಪೈರುಗಳನ್ನೂ, ದ್ರಾಕ್ಷಿತೋಟಗಳನ್ನೂ, ಹಿಪ್ಪೆಯ ತೋಪುಗಳನ್ನೂ ಕೂಡ ಸುಟ್ಟುಬಿಟ್ಟನು. \p \v 6 ಫಿಲಿಷ್ಟಿಯರು, “ಇದನ್ನು ಮಾಡಿದವರು ಯಾರು?” ಎಂದರು. ಅದಕ್ಕೆ ಅವರು, “ತಿಮ್ನಾದವನ ಅಳಿಯನಾದ ಸಂಸೋನನು ಮಾಡಿದನು. ಏಕೆಂದರೆ ಇವನು ಅವನ ಹೆಂಡತಿಯನ್ನು ತೆಗೆದುಕೊಂಡು, ಅವನ ಜೊತೆಗಾರನಿಗೆ ಕೊಟ್ಟನು,” ಎಂದರು. \p ಆಗ ಫಿಲಿಷ್ಟಿಯರು ಬಂದು, ಅವಳನ್ನೂ, ಅವಳ ತಂದೆಯನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. \v 7 ಸಂಸೋನನು ಅವರಿಗೆ, “ನೀವು ಈ ಪ್ರಕಾರ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿಗೆ ಮುಯ್ಯಿ ತೀರಿಸದೆ ಬಿಡುವುದಿಲ್ಲ,” ಎಂದನು. \v 8 ಅವರ ಮೇಲೆ ಬಲವಾಗಿ ಬಿದ್ದು, ಅವರಲ್ಲಿ ಅನೇಕರನ್ನು ಕೊಂದುಹಾಕಿ ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು. \p \v 9 ಫಿಲಿಷ್ಟಿಯರು ಹೊರಟುಹೋಗಿ ಯೆಹೂದದಲ್ಲಿ ಇಳಿದು, ಲೇಹಿಯಲ್ಲಿ ವ್ಯಾಪಿಸಿದರು. \v 10 ಯೆಹೂದದಲ್ಲಿ ವಾಸಿಸುವ ಜನರು ಅವರಿಗೆ, “ನೀವು ನಮಗೆ ವಿರೋಧವಾಗಿ ಬಂದದ್ದೇನು?” ಎಂದರು. \p ಫಿಲಿಷ್ಟಿಯರು, “ಸಂಸೋನನು ನಮಗೆ ಮಾಡಿದ ಹಾಗೆ ನಾವು ಅವನಿಗೆ ಪ್ರತಿಯಾಗಿ ಮಾಡುವುದಕ್ಕೆ, ಅವನನ್ನು ಹಿಡಿದು ಕಟ್ಟುವುದಕ್ಕೆ ಬಂದೆವು,” ಎಂದರು. \p \v 11 ಆಗ ಯೆಹೂದದಲ್ಲಿ ಮೂರು ಸಾವಿರ ಜನರು ಏಟಾಮ್ ಬಂಡೆಯ ಮೇಲಕ್ಕೆ ಏರಿಹೋಗಿ, ಸಂಸೋನನಿಗೆ, “ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಏಕೆ ಮಾಡಿದೆ?” ಎಂದರು. \p ಅದಕ್ಕವನು, “ಅವರು ನನಗೆ ಮಾಡಿದ ಪ್ರಕಾರವೇ, ನಾನು ಅವರಿಗೆ ಮಾಡಿದೆನು,” ಎಂದು ಅವರಿಗೆ ಹೇಳಿದನು. \p \v 12 ಆಗ ಅವರು ಅವನಿಗೆ, “ನಾವು ನಿನ್ನನ್ನು ಕಟ್ಟಿ, ಫಿಲಿಷ್ಟಿಯರ ಕೈಗೆ ಒಪ್ಪಿಸಿಕೊಡಲು ಬಂದೆವು,” ಎಂದರು. \p ಸಂಸೋನನು ಅವರಿಗೆ, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ನನಗೆ ಆಣೆ ಇಡಿರಿ,” ಎಂದನು. \p \v 13 ಅದಕ್ಕವರು, “ಇಲ್ಲ; ಆದರೆ ನಿನ್ನನ್ನು ಭದ್ರವಾಗಿ ಕಟ್ಟಿ, ಅವರ ಕೈಯಲ್ಲಿ ಒಪ್ಪಿಸಿಕೊಡುವೆವು. ನಾವು ನಿನ್ನನ್ನು ನಿಜವಾಗಿ ಕೊಲ್ಲುವುದೇ ಇಲ್ಲ,” ಎಂದರು. ಎರಡು ಹೊಸ ಹಗ್ಗಗಳಿಂದ ಅವನನ್ನು ಕಟ್ಟಿ, ಬಂಡೆಯ ಮೇಲಿನಿಂದ ತಂದರು. \v 14 ಅವನು ಲೇಹಿಗೆ ಬಂದಾಗ, ಫಿಲಿಷ್ಟಿಯರು ಅವನ ಎದುರಾಗಿ ಆರ್ಭಟಿಸುತ್ತಾ ಬಂದರು. ಯೆಹೋವ ದೇವರ ಆತ್ಮ ಅವನ ಮೇಲೆ ಬಲವಾಗಿ ಬಂದದ್ದರಿಂದ, ಅವನ ತೋಳುಗಳಲ್ಲಿ ಕಟ್ಟಿದ್ದ ಸೆಣಬಿನ ಹಗ್ಗಗಳು ಬೆಂಕಿಯಲ್ಲಿ ಸುಟ್ಟುಹೋದ ದಾರದ ಹಾಗೆ ಆದವು. ಅವನ ಕೈಯಲ್ಲಿ ಇದ್ದ ಕಟ್ಟುಗಳು ಬಿಚ್ಚಿಬಿದ್ದವು. \v 15 ಅವನು ಒಂದು ಕತ್ತೆಯ ದವಡೆಯ ಹೊಸ ಎಲುಬನ್ನು ಕಂಡುಕೊಂಡು, ತನ್ನ ಕೈಯನ್ನು ಚಾಚಿ ತೆಗೆದುಕೊಂಡು, ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು. \p \v 16 ಆಗ ಸಂಸೋನನು ಹೇಳಿದ್ದೇನೆಂದರೆ, \q1 “ಕತ್ತೆಯ ದವಡೆಯಿಂದ ನಾನು \q2 ಅವರನ್ನು ಹೆಣಗಳನ್ನಾಗಿ ಮಾಡಿದ್ದೇನೆ. \q1 ಕತ್ತೆ ದವಡೆಯ ಎಲುಬಿನಿಂದ \q2 ಒಂದು ಸಾವಿರ ಜನರನ್ನು ಕೊಂದಿದ್ದೇನೆ.” \m \v 17 ಅವನು ಮಾತನಾಡಿ ತೀರಿಸಿದಾಗ, ತನ್ನ ಕೈಯಲ್ಲಿದ್ದ ದವಡೆಯ ಎಲುಬನ್ನು ಎಸೆದುಬಿಟ್ಟನು. ಆ ಸ್ಥಳಕ್ಕೆ ರಾಮತ್ ಲೇಹಿ\f + \fr 15:17 \fr*\fq ರಾಮತ್ ಲೇಹಿ \fq*\ft ಅರ್ಥ \ft*\fqa ದವಡೆಯ ಎಲುಬು\fqa*\f* ಎಂಬ ಹೆಸರಾಯಿತು. \p \v 18 ಅವನಿಗೆ ಬಹಳ ಬಾಯಾರಿಕೆಯಾದದರಿಂದ ಅವನು ಯೆಹೋವ ದೇವರಿಗೆ ಮೊರೆಯಿಟ್ಟನು, “ನಿಮ್ಮ ಸೇವಕನಿಗೆ ನೀವು ಈ ಮಹಾ ರಕ್ಷಣೆಯನ್ನು ಕೊಟ್ಟಿದ್ದೀರಿ. ಈಗ ಬಾಯಾರಿಕೆಯಿಂದ ಬಳಲಿ, ಸುನ್ನತಿಯಾಗದ ಈ ಜನರ ಕೈಯಲ್ಲಿ ನಾನು ಬೀಳಬೇಕೋ?” ಎಂದನು. \v 19 ಆಗ ದೇವರು ಲೇಹಿಯಲ್ಲಿ ಟೊಳ್ಳಾದ ಸ್ಥಳವನ್ನು ಸೀಳಿಬಿಟ್ಟರು. ಅದರೊಳಗಿಂದ ನೀರು ಹೊರಟು ಬಂತು. ಸಂಸೋನನು ಆ ನೀರನ್ನು ಕುಡಿದದ್ದರಿಂದ ಅವನ ಬಲ ತಿರುಗಿಬಂದು, ಅವನು ಚೇತರಿಸಿಕೊಂಡನು. ಆದ್ದರಿಂದ ಏನ್ ಹಕ್ಕೋರೇ\f + \fr 15:19 \fr*\fq ಏನ್ ಹಕ್ಕೋರೇ \fq*\ft ಅರ್ಥ \ft*\fqa ಮೊರೆಯಿಡುವವನ ಬುಗ್ಗೆ\fqa*\f* ಎಂದು ಅದಕ್ಕೆ ಹೆಸರಾಯಿತು. ಈ ದಿವಸದವರೆಗೂ ಅದು ಲೇಹಿಯಲ್ಲಿ ಇದೆ. \p \v 20 ಸಂಸೋನನು ಫಿಲಿಷ್ಟಿಯರ ದಿವಸಗಳಲ್ಲಿ ಇಪ್ಪತ್ತು ವರ್ಷ ಇಸ್ರಾಯೇಲಿಗೆ ನ್ಯಾಯತೀರಿಸಿದನು. \c 16 \s1 ಸಂಸೋನ ಮತ್ತು ದೆಲೀಲ \p \v 1 ಸಂಸೋನನು ಗಾಜಕ್ಕೆ ಹೋಗಿ, ಅಲ್ಲಿ ಒಬ್ಬ ಜಾರಸ್ತ್ರೀಯನ್ನು ಕಂಡು, ಅವಳ ಬಳಿಗೆ ಹೋದನು. \v 2 ಆಗ ಸಂಸೋನನು ಅಲ್ಲಿಗೆ ಬಂದಿದ್ದಾನೆಂದು ಗಾಜದವರಿಗೆ ತಿಳಿದಿದ್ದರಿಂದ, ಅವರು ಅವನನ್ನು ಸುತ್ತಿಕೊಂಡು, ಪಟ್ಟಣದ ಬಾಗಿಲಲ್ಲಿ ಅವನಿಗಾಗಿ ಹೊಂಚಿಕೊಂಡಿದ್ದು, ರಾತ್ರಿಯೆಲ್ಲಾ ಕಾದುಕೊಂಡಿದ್ದರು. ಅವರು, “ಹೊತ್ತಾರೆ ಬೆಳಕಾದಾಗ ಅವನನ್ನು ಕೊಂದು ಹಾಕುವೆವು,” ಎಂದರು. \p \v 3 ಸಂಸೋನನು ಅರ್ಧ ರಾತ್ರಿಯವರೆಗೆ ಮಲಗಿದ್ದು, ಮಧ್ಯರಾತ್ರಿಯಲ್ಲಿ ಎದ್ದು, ಪಟ್ಟಣದ ಬಾಗಿಲ ಕದಗಳನ್ನೂ, ಅದರ ಎರಡು ತೋಳುಗಳನ್ನೂ ಹಿಡಿದು, ಅಗುಳಿ ಸಹ ಕಿತ್ತು, ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ, ಹೆಬ್ರೋನಿಗೆ ಎದುರಾಗಿರುವ ಪರ್ವತದ ಶಿಖರದ ಮೇಲಕ್ಕೆ ಹೋದನು. \p \v 4 ಇದರ ತರುವಾಯ, ಸೊರೇಕ್ ತಗ್ಗಿನಲ್ಲಿದ್ದ ದೆಲೀಲ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯನ್ನು ಪ್ರೀತಿಮಾಡಿದನು. \v 5 ಅವಳ ಬಳಿಗೆ ಫಿಲಿಷ್ಟಿಯರ ಅಧಿಪತಿಗಳು ಬಂದು ಅವಳಿಗೆ, “ನೀನು ಅವನನ್ನು ಮರಳುಗೊಳಿಸಿ, ನಾವು ಅವನನ್ನು ಯಾವ ಪ್ರಕಾರ ಗೆದ್ದು, ಕಟ್ಟಿ, ಬಾಧಿಸಬಹುದೆಂದೂ ಅವನ ದೊಡ್ಡ ಶಕ್ತಿ ಯಾವುದರಲ್ಲಿ ಇದೆ ಎಂದೂ ನೋಡು. ನಾವು ಒಬ್ಬೊಬ್ಬರು ನಿನಗೆ ಸಾವಿರದ ನೂರು ಬೆಳ್ಳಿಯ ನಾಣ್ಯಗಳನ್ನು\f + \fr 16:5 \fr*\ft ಸುಮಾರು 13 ಕಿಲೋಗ್ರಾಂ ಬೆಳ್ಳಿ\ft*\f* ಕೊಡುವೆವು,” ಎಂದರು. \p \v 6 ಆಗ ದೆಲೀಲಳು ಸಂಸೋನನಿಗೆ, “ನಿನ್ನ ದೊಡ್ಡ ಶಕ್ತಿ ಯಾವುದರಲ್ಲಿ ಉಂಟೆಂದೂ ನಿನ್ನನ್ನು ಬಾಧಿಸುವುದಕ್ಕೆ ಹೇಗೆ ಕಟ್ಟಬಹುದೆಂದೂ ನನಗೆ ದಯಮಾಡಿ ತಿಳಿಸು,” ಎಂದಳು. \p \v 7 ಸಂಸೋನನು ಅವಳಿಗೆ, “ಅವರು ನನ್ನನ್ನು ಒಣಗದೆ ಇರುವ ಹಸುರಾದ ಏಳು ನಾರಿನ ಬರಲುಗಳಿಂದ ಕಟ್ಟಿದರೆ, ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು,” ಎಂದನು. \p \v 8 ಆಗ ಫಿಲಿಷ್ಟಿಯರ ಅಧಿಪತಿಗಳು ಒಣಗದೆ ಇರುವ ಹಸಿಯಾದ ಏಳು ನಾರಿನ ಬರಲುಗಳನ್ನು ಅವಳಿಗೆ ಕೊಟ್ಟರು. ಅವಳು ಅವನನ್ನು ಅವುಗಳಿಂದ ಬಂಧಿಸಿದಳು. \v 9 ಹೊಂಚುಗಾರರು ಅವಳಿಗೋಸ್ಕರ ಕೊಠಡಿಯಲ್ಲಿದ್ದರು. ಅವಳು ಅವನಿಗೆ, “ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ,” ಎಂದಳು. ಆಗ ಅವನು ಬೆಂಕಿ ತಗುಲಿದ ಸೆಣಬಿನ ದಾರ ಹರಿದು ಹೋಗುವ ಹಾಗೆಯೇ ನಾರಿನ ಬರಲುಗಳನ್ನು ಹರಿದುಬಿಟ್ಟನು. ಹೀಗೆ ಅವನ ಶಕ್ತಿಯ ರಹಸ್ಯ ತಿಳಿಯದೆ ಹೋಯಿತು. \p \v 10 ಆಗ ದೆಲೀಲಳು ಸಂಸೋನನಿಗೆ, “ನೀನು ನನ್ನನ್ನು ವಂಚನೆಮಾಡಿ, ನನಗೆ ಸುಳ್ಳು ಹೇಳಿದೆ. ಈಗ ನಿನ್ನನ್ನು ಯಾವುದರಿಂದ ಕಟ್ಟಬಹುದೆಂಬುದನ್ನು ನನಗೆ ದಯಮಾಡಿ ತಿಳಿಸು,” ಎಂದಳು. \p \v 11 ಸಂಸೋನನು ಅವಳಿಗೆ, “ಯಾವ ಕೆಲಸಕ್ಕೆ ಬಳಸದೆ ಇರುವ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ, ನಾನು ಬಲಹೀನನಾಗಿ, ಬೇರೆ ಮನುಷ್ಯನಂತಾಗುವೆನು,” ಎಂದನು. \p \v 12 ಆಗ ದೆಲೀಲಳು ಹೊಸ ಹಗ್ಗಗಳನ್ನು ತೆಗೆದುಕೊಂಡು, ಅವುಗಳಿಂದ ಅವನನ್ನು ಕಟ್ಟಿ, ಅವನಿಗೆ, “ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬಂದಿದ್ದಾರೆ,” ಎಂದಳು. ಹೊಂಚುಗಾರರು ಕೊಠಡಿಯಲ್ಲಿದ್ದರು. ಆದರೆ ಅವನು ತನ್ನ ತೋಳುಗಳಲ್ಲಿ ಇರುವವುಗಳನ್ನು ದಾರದ ಹಾಗೆಯೇ ಹರಿದುಬಿಟ್ಟನು. \p \v 13 ದೆಲೀಲಳು ಸಂಸೋನನಿಗೆ, “ಈವರೆಗೂ ನನ್ನನ್ನು ವಂಚನೆಮಾಡಿ, ನನಗೆ ಸುಳ್ಳುಗಳನ್ನು ಹೇಳಿದೆ. ನಿನ್ನನ್ನು ಯಾವುದರಿಂದ ಕಟ್ಟಬಹುದೋ ತಿಳಿಸು,” ಎಂದಳು. \p ಅವನು ಅವಳಿಗೆ, “ನೀನು ನನ್ನ ತಲೆಯ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದರೆ ಆಗುವುದು,” ಎಂದನು. \v 14 ಸಂಸೋನನು ಮಲಗಿರುವಾಗ ದೆಲೀಲಳು ಅವನ ತಲೆಗೂದಲಿನ ಏಳು ಜಡೆಗಳನ್ನು ಆಗ ಅವುಗಳನ್ನು ಗೂಟದಿಂದ ಭದ್ರಮಾಡಿ, \p ಅವನಿಗೆ, “ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬಂದಿದ್ದಾರೆ,” ಎಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು ಎದ್ದು, ಮಗ್ಗದ ಗೂಟವನ್ನೂ ಮಗ್ಗವನ್ನೂ ತೆಗೆದುಕೊಂಡು ಹೋದನು. \p \v 15 ಅವಳು ಅವನಿಗೆ, “ನಿನ್ನ ಹೃದಯವು ನನ್ನ ಸಂಗಡ ಇಲ್ಲದೆ ಇರುವಾಗ, ನಿನ್ನನ್ನು ಪ್ರೀತಿಮಾಡುತ್ತೇನೆ ಎಂದು ನೀನು ಹೇಗೆ ಹೇಳುತ್ತೀ? ನೀನು ಈ ಮೂರು ಸಾರಿ ನನಗೆ ವಂಚನೆ ಮಾಡಿದೆ; ನಿನ್ನ ದೊಡ್ಡ ಶಕ್ತಿಯ ರಹಸ್ಯ ಯಾವುದರಲ್ಲಿ ಉಂಟೋ ನನಗೆ ತಿಳಿಸಲಿಲ್ಲ,” ಎಂದಳು. \v 16 ಅವಳು ಅವನನ್ನು ದಿನದಿನವೂ ತನ್ನ ಮಾತುಗಳಿಂದ ಪೀಡಿಸಿ, ತೊಂದರೆ ಪಡಿಸಿದ್ದರಿಂದ, ಅವನ ಪ್ರಾಣವು ಸಾಯುವಷ್ಟು ವ್ಯಸನಪಟ್ಟಿತು. \p \v 17 ಅವನು ತನ್ನ ಹೃದಯವನ್ನೆಲ್ಲಾ ಅವಳಿಗೆ ತಿಳಿಸಿ, ಅವಳಿಗೆ, “ಕ್ಷೌರದ ಕತ್ತಿ ನನ್ನ ತಲೆಯ ಮೇಲೆ ಬಂದದ್ದಿಲ್ಲ; ಏಕೆಂದರೆ ನಾನು ನನ್ನ ತಾಯಿಯ ಗರ್ಭದಲ್ಲಿಂದ ದೇವರಿಗೆ ಪ್ರತಿಷ್ಠಿತನಾದ ನಾಜೀರನಾಗಿದ್ದೇನೆ. ನನ್ನ ತಲೆಯನ್ನು ಬೋಳಿಸಿದರೆ, ನನ್ನ ಶಕ್ತಿಯು ನನ್ನನ್ನು ಬಿಟ್ಟು ಹೋಗುವುದು; ನಾನು ಬಲಹೀನನಾಗಿ ಎಲ್ಲಾ ಮನುಷ್ಯರ ಹಾಗೆ ಇರುವೆನು,” ಎಂದನು. \p \v 18 ಆಗ ದೆಲೀಲಳು, ಅವನು ತನಗೆ ತನ್ನ ಹೃದಯಲ್ಲಿರುವುದನ್ನೆಲ್ಲಾ ತಿಳಿಸಿದ್ದಾನೆಂದು ಕಂಡು, ಅವಳು ಫಿಲಿಷ್ಟಿಯರ ಅಧಿಪತಿಗಳಿಗೆ, “ನೀವು ಈ ಸಾರಿ ಬನ್ನಿರಿ. ಏಕೆಂದರೆ ಅವನು ತನ್ನ ಹೃದಯದಲ್ಲಿರುವುದನ್ನೆಲ್ಲಾ ನನಗೆ ತಿಳಿಸಿದನು,” ಎಂದು ಕರೆಕಳುಹಿಸಿದಳು. ಆಗ ಫಿಲಿಷ್ಟಿಯರ ಅಧಿಪತಿಗಳು ಅವಳ ಬಳಿಗೆ ಹಣವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ಬಂದರು. \v 19 ಅವಳು ಅವನನ್ನು ತನ್ನ ತೊಡೆಗಳ ಮೇಲೆ ನಿದ್ರೆ ಹೋಗುವಂತೆ ಮಾಡಿ, ಒಬ್ಬನನ್ನು ಕರೆದು, ಅವನ ತಲೆಯ ಏಳು ಜಡೆಗಳನ್ನು ಬೋಳಿಸುವಂತೆ ಮಾಡಿ, ಅವನನ್ನು ದುರ್ಬಲಪಡಿಸಿದಳು. ಆಗ ಅವನ ಶಕ್ತಿ ಅವನನ್ನು ಬಿಟ್ಟುಹೋಯಿತು. \p \v 20 ಅವಳು, “ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬಂದಿದ್ದಾರೆ,” ಎಂದಳು. \p ಅವನು ತನ್ನ ನಿದ್ರೆಯಿಂದ ಎಚ್ಚತ್ತು, “ಮೊದಲಿನಂತೆಯೇ ನಾನು ಹೊರಗೆ ಹೋಗಿ ಬಿಡುಗಡೆಯಾಗುವೆನು,” ಎಂದುಕೊಂಡನು. ಆದರೆ ಯೆಹೋವ ದೇವರು ತನ್ನನ್ನು ಬಿಟ್ಟು ಹೋಗಿದ್ದಾರೆಂದು ಅವನು ಅರಿಯಲಿಲ್ಲ. \p \v 21 ಆದರೆ ಫಿಲಿಷ್ಟಿಯರು ಅವನನ್ನು ಹಿಡಿದು, ಅವನ ಕಣ್ಣುಗಳನ್ನು ಕಿತ್ತು, ಅವನನ್ನು ಗಾಜಕ್ಕೆ ಒಯ್ದು ಎರಡು ಕಂಚಿನ ಸಂಕೋಲೆಗಳನ್ನು ಹಾಕಿದರು. ಸೆರೆಮನೆಯಲ್ಲಿ ಅವನನ್ನು ಬೀಸುವುದಕ್ಕೆ ಹಚ್ಚಿದರು. \v 22 ಆದರೆ ಕ್ಷೌರ ಮಾಡಿದ ತರುವಾಯ ಅವನ ತಲೆಯ ಕೂದಲು ತಿರುಗಿ ಬೆಳೆಯಲಾರಂಭಿಸಿತು. \s1 ಸಂಸೋನನ ಮರಣ \p \v 23 ಫಿಲಿಷ್ಟಿಯರ ಅಧಿಪತಿಗಳು ತಮ್ಮ ದೇವರಾದ ದಾಗೋನನಿಗೆ ದೊಡ್ಡ ಬಲಿಯನ್ನು ಅರ್ಪಿಸುವುದಕ್ಕೂ ಸಂತೋಷಪಡುವುದಕ್ಕೂ ಕೂಡಿಬಂದರು. “ನಮ್ಮ ದೇವರು ನಮ್ಮ ಶತ್ರುವಾದ ಸಂಸೋನನನ್ನು ನಮ್ಮ ಕೈಗೆ ಒಪ್ಪಿಸಿಕೊಟ್ಟನು,” ಎಂದು ಅವರು ಹೇಳಿಕೊಂಡರು. \p \v 24 ಜನರು ಸಂಸೋನನನ್ನು ನೋಡಿದಾಗ ತಮ್ಮ ದೇವರನ್ನು ಹೊಗಳಿದರು. ಏಕೆಂದರೆ, \q1 “ನಮ್ಮ ದೇಶವನ್ನು ಹಾಳು ಮಾಡಿ, \q2 ನಮ್ಮಲ್ಲಿ ಅನೇಕರನ್ನು ಕೊಂದ \q1 ನಮ್ಮ ವೈರಿಯನ್ನು \q2 ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು,” \m ಎಂದು ಅವರು ಹೇಳಿಕೊಂಡರು. \p \v 25 ಅಲ್ಲಿ ಅವರು ಸಂಭ್ರಮವಾಗಿರುವಾಗ, “ನಮ್ಮ ಮುಂದೆ ಮನೋರಂಜನೆಗಾಗಿ ಸಂಸೋನನನ್ನು ಕರೆದುಕೊಂಡು ಬನ್ನಿರಿ,” ಎಂದರು. ಅವರು ಸಂಸೋನನನ್ನು ಸೆರೆಮನೆಯಿಂದ ಕರೆತಂದಾಗ, ಅವನು ಅವರ ಮುಂದೆ ವಿನೋದ ಮಾಡಬೇಕಾಯಿತು. \p ಅವರು ಅವನನ್ನು ಸ್ತಂಭಗಳ ನಡುವೆ ನಿಲ್ಲಿಸಿದ್ದರು. \v 26 ಆದರೆ ಸಂಸೋನನು ತನ್ನ ಕೈಹಿಡಿದ ಹುಡುಗನಿಗೆ, “ಈ ಕಟ್ಟಡದ ಆಧಾರ ಸ್ತಂಭಗಳನ್ನು ನಾನು ಸ್ಪರ್ಶಿಸಿ, ಅವುಗಳ ಮೇಲೆ ಆತುಕೊಳ್ಳುವ ಹಾಗೆ ನನ್ನನ್ನು ಬಿಡು,” ಎಂದನು. \v 27 ಆ ಮನೆಯು ಸ್ತ್ರೀಪುರುಷರಿಂದ ತುಂಬಿತ್ತು. ಅಲ್ಲಿ ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಇದ್ದರು. ಇದಲ್ಲದೆ ಸಂಸೋನನು ವಿನೋದ ಮಾಡುವುದನ್ನು ಕಾಣುವುದಕ್ಕೆ ಮಾಳಿಗೆಯ ಮೇಲೆ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಸ್ತ್ರೀ ಪುರುಷರಿದ್ದರು. \v 28 ಆಗ ಸಂಸೋನನು ಯೆಹೋವ ದೇವರನ್ನು ಕೂಗಿ, “ಸಾರ್ವಭೌಮ ಯೆಹೋವ ದೇವರೇ, ನಾನು ನನ್ನ ಎರಡು ಕಣ್ಣುಗಳಿಗಾಗಿ ಒಂದೇ ಸಾರಿ ಫಿಲಿಷ್ಟಿಯರಿಗೆ ಮುಯ್ಯಿಗೆ ಮುಯ್ಯಿ ಮಾಡುವ ಹಾಗೆ ಈ ಸಾರಿ ಮಾತ್ರ ನನ್ನನ್ನು ನೆನಸಿ ಬಲಪಡಿಸಿ ದೇವರೇ,” \v 29 ಎಂದು ಹೇಳಿ ಸಂಸೋನನು ಆ ಕಟ್ಟಡ ನಿಲ್ಲುವುದಕ್ಕೆ ಆಧಾರವಾದ ಎರಡು ನಡುವಿನ ಸ್ತಂಭಗಳನ್ನು ಒಂದನ್ನು ತನ್ನ ಬಲಗೈಯಿಂದ ಮತ್ತೊಂದನ್ನು ತನ್ನ ಎಡಗೈಯಿಂದ ಹಿಡಿದುಕೊಂಡು, \v 30 “ನನ್ನ ಪ್ರಾಣವು ಫಿಲಿಷ್ಟಿಯರ ಸಂಗಡ ಸಾಯಲಿ,” ಎಂದು ಹೇಳಿ ತನ್ನ ಶಕ್ತಿಯಿದ್ದ ಮಟ್ಟಿಗೂ ಬಾಗಿದನು. ಆಗ ಮನೆಯು ಅಧಿಪತಿಗಳ ಮೇಲೆಯೂ, ಅದರಲ್ಲಿದ್ದ ಎಲ್ಲಾ ಜನರ ಮೇಲೆಯೂ ಬಿತ್ತು. ಹೀಗೆ ಸಂಸೋನನು ಬದುಕಿದ್ದಾಗ ಕೊಂದ ಜನರಿಗಿಂತಲೂ ಮರಣಹೊಂದುವಾಗ ಕೊಂದ ಜನರ ಸಂಖ್ಯೆಯೇ ಹೆಚ್ಚಾಗಿತ್ತು. \p \v 31 ಅವನ ಸಹೋದರರೂ, ಅವನ ತಂದೆಯ ಮನೆಯವರೆಲ್ಲರೂ ಹೋಗಿ ಅವನನ್ನು ತೆಗೆದುಕೊಂಡು ಬಂದು, ಚೊರ್ಗಕ್ಕೂ, ಎಷ್ಟಾವೋಲಿಗೂ ನಡುವೆ ಅವನ ತಂದೆ ಮಾನೋಹನ ಸಮಾಧಿಯಲ್ಲಿ ಅವನನ್ನು ಹೂಳಿಟ್ಟರು. ಅವನು ಇಸ್ರಾಯೇಲಿಗೆ ಇಪ್ಪತ್ತು ವರ್ಷ ನ್ಯಾಯತೀರಿಸಿದನು. \c 17 \s1 ಮೀಕನ ಮನೆಯ ವಿಗ್ರಹಗಳು \p \v 1 ಎಫ್ರಾಯೀಮ್ ಬೆಟ್ಟದ ಪ್ರಾಂತದಲ್ಲಿ ಮೀಕ ಎಂಬ ಹೆಸರುಳ್ಳ ಒಬ್ಬ ಮನುಷ್ಯನು ಇದ್ದನು. \v 2 ಅವನು ತನ್ನ ತಾಯಿಗೆ, “ನಿನ್ನ ಬಳಿಯಿಂದ ಸಾವಿರದ ನೂರು ಬೆಳ್ಳಿ ನಾಣ್ಯಗಳು ಕಳುವಾದಾಗ, ನೀನು ಆ ಹಣವನ್ನು ಕುರಿತು ಶಪಿಸಿದೆಯಲ್ಲಾ? ಇಗೋ, ಆ ನಾಣ್ಯಗಳು ನನ್ನ ಬಳಿಯಲ್ಲಿ ಇವೆ. ನಾನೇ ಅದನ್ನು ತೆಗೆದುಕೊಂಡೆನು,” ಎಂದನು. \p ಅದಕ್ಕೆ ಅವನ ತಾಯಿ, “ನನ್ನ ಮಗನೇ, ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,” ಎಂದಳು. \p \v 3 ಅವನು ಆ ಸಾವಿರದ ನೂರು ಬೆಳ್ಳಿಯ ನಾಣ್ಯಗಳನ್ನು ತನ್ನ ತಾಯಿಗೆ ತಿರುಗಿ ಕೊಟ್ಟಾಗ, ಅವನ ತಾಯಿ, “ನನ್ನ ಮಗನ ನಿಮಿತ್ತ ಕೆತ್ತಿದ ವಿಗ್ರಹವನ್ನೂ, ಎರಕದ ವಿಗ್ರಹವನ್ನೂ ಮಾಡುವುದಕ್ಕೆ ನಾನು ನನ್ನ ಕೈಯಲ್ಲಿದ್ದ ಈ ಬೆಳ್ಳಿಯನ್ನು ಯೆಹೋವ ದೇವರಿಗೆ ಸಂಪೂರ್ಣವಾಗಿ ಪ್ರತಿಷ್ಠಿಸಿದ್ದೆನು; ಆದ್ದರಿಂದ ನಾನು ಅದನ್ನು ನಿನಗೆ ತಿರುಗಿ ಕೊಡುವೆನು,” ಎಂದಳು. \p \v 4 ಆದರೆ ಅವನು ಆ ಹಣವನ್ನು ತನ್ನ ತಾಯಿಗೆ ತಿರುಗಿ ಕೊಟ್ಟನು. ಆಗ ಅವನ ತಾಯಿ ಇನ್ನೂರು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು ಅಕ್ಕಸಾಲಿಗನ ಕೈಯಲ್ಲಿ ಕೊಟ್ಟಳು. ಅವನು ಅವುಗಳಿಂದ ಕೆತ್ತಿದ ವಿಗ್ರಹವನ್ನೂ, ಎರಕದ ವಿಗ್ರಹವನ್ನೂ ಮಾಡಿದನು. ಅವು ಮೀಕನ ಮನೆಯಲ್ಲಿದ್ದವು. \p \v 5 ಈ ಮೀಕ ಎಂಬವನಿಗೆ ದೇವರ ಮನೆ ಇದ್ದುದರಿಂದ ಅವನು ಒಂದು ಏಫೋದನ್ನೂ, ಪ್ರತಿಮೆಗಳನ್ನೂ ಮಾಡಿ, ತನ್ನ ಪುತ್ರರಲ್ಲಿ ಒಬ್ಬನನ್ನು ಯಾಜಕ ಸೇವೆಗೆ ಪ್ರತಿಷ್ಠೆ ಮಾಡಿದನು. \v 6 ಆ ದಿವಸಗಳಲ್ಲಿ ಇಸ್ರಾಯೇಲಿನಲ್ಲಿ ಅರಸನು ಇರಲಿಲ್ಲ. ಒಬ್ಬೊಬ್ಬನು ತನ್ನ ದೃಷ್ಟಿಗೆ ಸರಿಯಾಗಿ ತೋಚಿದ್ದನ್ನು ಮಾಡುತ್ತಿದ್ದನು. \p \v 7 ಯೆಹೂದದ ಬೇತ್ಲೆಹೇಮಿನವನಾದ ಯೆಹೂದದ ಗೋತ್ರದ ಲೇವಿಯನಾದಂಥ ಒಬ್ಬ ಪ್ರಾಯದವನಿದ್ದನು. ಅವನು ಅಲ್ಲಿ ಪ್ರವಾಸಿಯಾಗಿದ್ದನು. \v 8 ಆ ಮನುಷ್ಯನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗುವುದಕ್ಕೆ ಯೆಹೂದದ ಬೇತ್ಲೆಹೇಮ್ ಪಟ್ಟಣವನ್ನು ಬಿಟ್ಟುಹೋದನು. ಪ್ರಯಾಣ ಮಾಡುವಾಗ ಎಫ್ರಾಯೀಮ್ ಬೆಟ್ಟದಲ್ಲಿರುವ ಮೀಕನ ಮನೆಯ ಬಳಿಗೆ ಬಂದನು. \p \v 9 ಆಗ ಮೀಕನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದನು. \p ಅವನು ಮೀಕನಿಗೆ, “ನಾನು ಯೆಹೂದದ ಬೇತ್ಲೆಹೇಮಿನವನಾದ ಲೇವಿಯನು. ನನಗೆ ಸ್ಥಳ ಸಿಕ್ಕಲ್ಲಿ ಪ್ರವಾಸಿಯಾಗಬೇಕೆಂದು ಹೊರಟಿದ್ದೇನೆ,” ಎಂದನು. \p \v 10 ಮೀಕನು ಅವನಿಗೆ, “ನೀನು ನನ್ನ ಬಳಿಯಲ್ಲಿ ವಾಸಮಾಡಿ ನನಗೆ ತಂದೆಯಾಗಿಯೂ, ಯಾಜಕನಾಗಿಯೂ ಇರು. ನಾನು ನಿನಗೆ ವರುಷಕ್ಕೆ ಹತ್ತು ಬೆಳ್ಳಿಯ ನಾಣ್ಯಗಳನ್ನೂ, ಒಂದು ದುಸ್ತು ವಸ್ತ್ರಗಳನ್ನೂ, ಆಹಾರವನ್ನೂ ಕೊಡುವೆನು,” ಎಂದನು. ಹಾಗೆಯೇ ಲೇವಿಯನು ಹೋದನು. \v 11 ಲೇವಿಯು ಆ ಮನುಷ್ಯನ ಬಳಿಯಲ್ಲಿ ವಾಸವಾಗಿರುವುದಕ್ಕೆ ಸಮ್ಮತಿಸಿದನು. ಆ ಯೌವನಸ್ಥನು ಅವನಿಗೆ ಅವನ ಪುತ್ರರಲ್ಲಿ ಒಬ್ಬನ ಹಾಗೆ ಇದ್ದನು. \v 12 ಮೀಕನು ಲೇವಿಯನನ್ನು ಪ್ರತಿಷ್ಠೆ ಮಾಡಿದನು. ಆ ಯೌವನಸ್ಥನು ಅವನಿಗೆ ಯಾಜಕನಾದನು. ಅವನು ಮೀಕನ ಮನೆಯಲ್ಲಿ ಇದ್ದನು. \v 13 ಆಗ ಮೀಕನು, “ನನಗೆ ಒಬ್ಬ ಲೇವಿಯನು ಯಾಜಕನಾಗಿರುವುದರಿಂದ, ಯೆಹೋವ ದೇವರು ನನಗೆ ಒಳ್ಳೆಯದನ್ನು ಮಾಡುವರೆಂದು ಈಗ ತಿಳಿಯುತ್ತೇನೆ,” ಎಂದುಕೊಂಡನು. \c 18 \s1 ದಾನ್ ಗೋತ್ರದವರು ಲಯಿಷಿನಲ್ಲಿ ನೆಲೆಸಿದ್ದು \p \v 1 ಆ ದಿವಸಗಳಲ್ಲಿ ಇಸ್ರಾಯೇಲಿನೊಳಗೆ ಅರಸನಿರಲಿಲ್ಲ. \p ಆ ದಿವಸಗಳಲ್ಲಿ ದಾನನ ಗೋತ್ರದವರು ವಾಸವಾಗಿರುವುದಕ್ಕೆ ತಮಗೆ ಬಾಧ್ಯತೆಯನ್ನು ಹುಡುಕುತ್ತಿದ್ದರು. ಏಕೆಂದರೆ ಅಂದಿನವರೆಗೆ ಅವರಿಗೆ ಇಸ್ರಾಯೇಲ್ ಗೋತ್ರಗಳಲ್ಲಿ ಪೂರ್ಣವಾಗಿ ಬಾಧ್ಯತೆ ದೊರೆತಿರಲಿಲ್ಲ. \v 2 ದಾನರು ದೇಶವನ್ನು ಸಂಚರಿಸಿ ನೋಡಿ, ಪರಿಶೋಧಿಸುವುದಕ್ಕಾಗಿ ತಮ್ಮ ಮೇರೆಗಳಲ್ಲಿರುವ ಚೊರ್ಗದಿಂದಲೂ, ಎಷ್ಟಾವೋಲಿನಿಂದಲೂ ತಮ್ಮ ಕುಟುಂಬದಲ್ಲಿ ಪರಾಕ್ರಮಶಾಲಿಗಳಾದ ಐದು ಮಂದಿಯನ್ನು ಕರೆದು, ಅವರ ಸಂಗಡ, “ನೀವು ಹೋಗಿ ದೇಶವನ್ನು ಸಂಚರಿಸಿ ನೋಡಿರಿ,” ಎಂದು ಹೇಳಿ ಕಳುಹಿಸಿದರು. \p ಹಾಗೆಯೇ ಇವರು ಎಫ್ರಾಯೀಮ್ ಬೆಟ್ಟದಲ್ಲಿರುವ ಮೀಕನ ಮನೆಯ ಬಳಿಗೆ ಬಂದು ಅಲ್ಲಿ ಇಳಿದುಕೊಂಡರು. \v 3 ಅವರು ಮೀಕನ ಮನೆಯ ಬಳಿಯಲ್ಲಿರುವಾಗ, ಲೇವಿಯ ಯುವಕನ ಸ್ವರ ಗುರುತಿಸಿ, ಅವನ ಬಳಿಗೆ ಹೋಗಿ, “ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದವನು ಯಾರು? ಇಲ್ಲಿ ನೀನು ಏನು ಮಾಡುತ್ತೀ? ಏಕೆ ನೀನು ಇಲ್ಲಿರುವೆ?” ಎಂದರು. \p \v 4 ಅವನು ಅವರಿಗೆ, “ಮೀಕನು ನನಗೆ ಹೀಗೆ ನಡೆಸುತ್ತಾ, ನನ್ನನ್ನು ಸಂಬಳಕ್ಕೆ ಇಟ್ಟುಕೊಂಡಿದ್ದಾನೆ. ನಾನು ಅವನಿಗೆ ಯಾಜಕನಾಗಿದ್ದೇನೆ,” ಎಂದನು. \p \v 5 ಆಗ ಅವರು ಅವನಿಗೆ, “ನಾವು ಹೋಗುವ ನಮ್ಮ ಮಾರ್ಗವು ಸಫಲವಾಗುವುದೋ? ಎಂದು ತಿಳಿಯುವ ಹಾಗೆ ದಯಮಾಡಿ ದೇವರನ್ನು ಕೇಳು,” ಎಂದರು. \p \v 6 ಆ ಯಾಜಕನು, “ಸಮಾಧಾನವಾಗಿ ಹೋಗಿರಿ. ನೀವು ಹೋಗುವ ನಿಮ್ಮ ಮಾರ್ಗಕ್ಕೆ ಯೆಹೋವ ದೇವರ ಒಪ್ಪಿಗೆ ಇದೆ,” ಎಂದನು. \p \v 7 ಆಗ ಆ ಐದು ಮಂದಿಯು ಹೊರಟು ಲಯಿಷಿಗೆ ಹೋಗಿ, ಅದರಲ್ಲಿ ವಾಸಿಸಿರುವ ಆ ಜನರನ್ನು ನೋಡುವಾಗ, ಅವರು ನಿರ್ಭೀತರಾಗಿಯೂ, ಸೀದೋನ್ಯರ ಹಾಗೆ ನೆಮ್ಮದಿಯಾಗಿಯೂ, ಸುರಕ್ಷಿತವಾಗಿಯೂ ಇದ್ದರು. ಅವರಿಗೆ ಯಾವ ಕೊರತೆಯು ಇರಲಿಲ್ಲ. ಅವರು ಸಮೃದ್ಧಿಯಲ್ಲಿದ್ದರು. ಸೀದೋನ್ಯರಿಂದ ದೂರವಾಗಿ ಜೀವಿಸುತ್ತಿದ್ದರು. ಬೇರೆ ಯಾರೊಂದಿಗೂ ಸಂಬಂಧವನ್ನು ಬೆಳೆಸಿರಲಿಲ್ಲ. \p \v 8 ಅವರು ಚೊರ್ಗದಲ್ಲಿಯೂ, ಎಷ್ಟಾವೋಲಿನಲ್ಲಿಯೂ ಇರುವ ಸಹೋದರರ ಬಳಿಗೆ ತಿರುಗಿ ಬಂದರು. ಅವರ ಸಹೋದರರಾದ ದಾನರು ಅವರಿಗೆ, “ನೀವು ಯಾವ ವರ್ತಮಾನ ತಂದಿದ್ದೀರಿ?” ಎಂದರು. \p \v 9 ಅದಕ್ಕವರು, “ನಾವು ಅವರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋಗುವಹಾಗೆ ಏಳಿರಿ; ಏಕೆಂದರೆ ನಾವು ಆ ದೇಶವನ್ನು ನೋಡಿದೆವು; ಅದು ಬಹಳ ಚೆನ್ನಾಗಿದೆ. ನೀವು ಏನನ್ನಾದರೂ ಮಾಡಲು ಹೋಗುತ್ತೀರಾ? ಆ ದೇಶದಲ್ಲಿ ಪ್ರವೇಶಿಸಿ, ಅದನ್ನು ಸ್ವಾಧೀನಮಾಡಿಕೊಳ್ಳಲು ಹೋಗುವುದಕ್ಕೆ ತಡಮಾಡಬೇಡಿರಿ. \v 10 ನೀವು ಅಲ್ಲಿಗೆ ತಲುಪಿದಾಗ, ಸಂಶಯಪಡದ ಜನರನ್ನು ಅಲ್ಲಿ ಕಾಣುವಿರಿ. ಅದು ವಿಸ್ತಾರವಾದ ದೇಶವಾಗಿದೆ. ದೇವರು ಅದನ್ನು ನಿಮ್ಮ ಕೈಗಳಲ್ಲಿ ಒಪ್ಪಿಸಿಕೊಟ್ಟಿದ್ದಾರೆ. ಆ ಪ್ರದೇಶದಲ್ಲಿ ಯಾವ ಕೊರತೆಯು ಇರುವುದಿಲ್ಲ,” ಎಂದರು. \p \v 11 ಆಗ ಚೊರ್ಗದಲ್ಲಿಯೂ, ಎಷ್ಟಾವೋಲಿನಲ್ಲಿಯೂ ಇರುವ ದಾನನ ಗೋತ್ರದವರಲ್ಲಿ ಆರುನೂರು ಜನರು ಯುದ್ಧಕ್ಕೆ ತಕ್ಕ ಆಯುಧಗಳನ್ನು ಕಟ್ಟಿಕೊಂಡು, ಅಲ್ಲಿಂದ ಹೊರಟುಹೋಗಿ, \v 12 ಯೆಹೂದದಲ್ಲಿರುವ ಕಿರ್ಯತ್ ಯಾರೀಮಿನಲ್ಲಿ ಇಳಿದುಕೊಂಡರು. ಆ ಸ್ಥಳಕ್ಕೆ ಈ ದಿನದವರೆಗೂ ಮಹನೇ ದಾನ್\f + \fr 18:12 \fr*\fq ಮಹನೇ ದಾನ್ \fq*\ft ಅರ್ಥ \ft*\fqa ದಾನ್ಯರ ಪಾಳೆಯ\fqa*\f* ಎಂಬ ಹೆಸರಿದೆ. \v 13 ಅದು ಕಿರ್ಯತ್ ಯಾರೀಮಿನ ಹಿಂದೆ ಇರುವುದು. ಅಲ್ಲಿಂದ ಅವರು ಎಫ್ರಾಯೀಮ್ ಬೆಟ್ಟಕ್ಕೆ ಹೋಗಿ, ಮೀಕನ ಮನೆಯವರೆಗೆ ಬಂದರು. \p \v 14 ಆಗ ಲಯಿಷಿನ ದೇಶವನ್ನು ಸಂಚರಿಸಿ ನೋಡಿ ಬಂದ ಆ ಐದು ಮಂದಿ ಜನರು ತಮ್ಮ ಸಹೋದರರಿಗೆ ಉತ್ತರಕೊಟ್ಟು, “ಈ ಮನೆಗಳಲ್ಲಿ ಏಫೋದೂ, ಪ್ರತಿಮೆಗಳೂ, ಕೆತ್ತಿದ ವಿಗ್ರಹವೂ, ಎರಕದ ವಿಗ್ರಹವೂ ಉಂಟೆಂದು ನಿಮಗೆ ಗೊತ್ತುಂಟೋ? ನೀವು ಈಗ ಮಾಡಬೇಕಾದದ್ದೇನೆಂದು ತಿಳಿದುಕೊಳ್ಳಿರಿ,” ಎಂದರು. \v 15 ಅವರು ಅಲ್ಲಿಗೆ ಹೋಗಿ ಮೀಕನ ಮನೆಯಲ್ಲಿರುವ ಯುವಕನಾದ ಲೇವಿಯನ ಬಳಿಗೆ ಬಂದು ಅವನ ಕ್ಷೇಮಸಮಾಚಾರವನ್ನು ವಿಚಾರಿಸತೊಡಗಿದರು. \v 16 ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ದಾನನ ಗೋತ್ರದವರಾದ ಆರುನೂರು ಮಂದಿಯು ಬಾಗಿಲ ಬಳಿಯಲ್ಲಿ ನಿಂತರು. \v 17 ಆದರೆ ದೇಶವನ್ನು ಸಂಚರಿಸಿ ನೋಡಿ ಬಂದ ಆ ಐದು ಮಂದಿ ಒಳಗೆ ಹೋಗಿ, ಕೆತ್ತಿದ ವಿಗ್ರಹವನ್ನೂ, ಏಫೋದನ್ನೂ, ಪ್ರತಿಮೆಗಳನ್ನೂ, ಎರಕದ ವಿಗ್ರಹವನ್ನೂ ತೆಗೆದುಕೊಂಡರು. ಆಗ ಯಾಜಕನೂ, ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ಆರುನೂರು ಜನರೂ ಬಾಗಿಲ ಬಳಿಯಲ್ಲಿ ನಿಂತಿದ್ದರು. \p \v 18 ಅವರು ಮೀಕನ ಮನೆಗೆ ಬಂದು, ಏಫೋದನ್ನೂ, ಪ್ರತಿಮೆಗಳನ್ನೂ, ಕೆತ್ತಿದ ವಿಗ್ರಹವನ್ನೂ, ಎರಕದ ವಿಗ್ರಹವನ್ನೂ ತೆಗೆದುಕೊಂಡಾಗ, ಯಾಜಕನು ಅವರಿಗೆ, “ನೀವು ಏನು ಮಾಡುತ್ತೀರಿ?” ಎಂದನು. \p \v 19 ಅವರು ಅವನಿಗೆ, “ನೀನು ಸುಮ್ಮನೆ ಇರು; ನಿನ್ನ ಬಾಯಿ ಮುಚ್ಚಿಕೊಂಡು ನಮ್ಮ ಸಂಗಡ ಬಂದು, ನಮಗೆ ತಂದೆಯಾಗಿಯೂ, ಯಾಜಕನಾಗಿಯೂ ಇರು. ನೀನು ಒಬ್ಬನ ಮನೆಗೆ ಯಾಜಕನಾಗಿರುವುದು ಒಳ್ಳೆಯದೋ ಅಥವಾ ಇಸ್ರಾಯೇಲಿನಲ್ಲಿ ಒಂದು ಗೋತ್ರಕ್ಕೂ, ಒಂದು ಕುಟುಂಬಕ್ಕೂ ಯಾಜಕನಾಗಿರುವುದು ಒಳ್ಳೆಯದೋ?” ಎಂದರು. \v 20 ಆಗ ಯಾಜಕನು ಸಂತೋಷಪಟ್ಟು ಏಫೋದನ್ನೂ, ಪ್ರತಿಮೆಗಳನ್ನೂ, ಕೆತ್ತಿದ ವಿಗ್ರಹವನ್ನೂ ತೆಗೆದುಕೊಂಡು ಜನರ ಮಧ್ಯದಲ್ಲಿ ಹೋದನು. \v 21 ಅವರು ತಿರುಗಿಕೊಂಡು ಹೊರಟು, ಚಿಕ್ಕವರನ್ನೂ, ಸಲಕರಣೆಗಳನ್ನೂ, ಪಶುಗಳನ್ನೂ ತಮಗೆ ಮುಂದಾಗಿ ಕಳುಹಿಸಿದರು. \p \v 22 ಅವರು ಮೀಕನ ಮನೆಯಿಂದ ಸ್ವಲ್ಪ ದೂರ ಹೋದಾಗ, ಮೀಕನ ಮನೆಯ ಸುತ್ತಲೂ ನೆರೆಮನೆಗಳಲ್ಲಿ ಇರುವ ಮನುಷ್ಯರು ಕೂಡಿಕೊಂಡು ದಾನರನ್ನು ಹಿಂದಟ್ಟಿ, ಅವರನ್ನು ಕೂಗಿ ಕರೆದರು. \v 23 ದಾನರು ತಮ್ಮ ಮುಖ ತಿರುಗಿಸಿ ಮೀಕನಿಗೆ, “ನೀನು ಗುಂಪು ಕೂಡಿಕೊಂಡು ಬರಲು ನಿನಗೆ ಏನಾಯಿತು?” ಎಂದರು. \p \v 24 ಅವನು, “ನಾನು ಮಾಡಿಕೊಂಡ ನನ್ನ ದೇವರುಗಳನ್ನೂ, ಯಾಜಕನನ್ನೂ ತೆಗೆದುಕೊಂಡು ಹೋದಿರಿ. ಇನ್ನು ನನಗೆ ಏನಿದೆ? ನೀವು ನನ್ನನ್ನು, ‘ನಿನಗೆ ಏನಾಯಿತೆಂದು ಕೇಳುವುದೇನು?’ ಎಂದನು.” \p \v 25 ಆದರೆ ದಾನನ ಮಕ್ಕಳು ಅವನಿಗೆ, “ಕೋಪಿಷ್ಟರು ನಿನ್ನ ಮೇಲೆ ಬೀಳದ ಹಾಗೆ ನೀನು ನಿನ್ನ ಪ್ರಾಣವನ್ನೂ, ನಿನ್ನ ಮನೆಯವರ ಪ್ರಾಣವನ್ನೂ ಕಳೆದುಕೊಳ್ಳದ ಹಾಗೆ ನಿನ್ನ ಶಬ್ದ ನಮಗೆ ಕೇಳಿಸದೆ ಇರಲಿ,” ಎಂದರು. \v 26 ದಾನನ ಮಕ್ಕಳು ತಮ್ಮ ಮಾರ್ಗವಾಗಿ ಹೋದರು. ಆಗ ಮೀಕನು, ಅವರು ತನಗಿಂತ ಬಲಿಷ್ಠರೆಂದು ಕಂಡು, ತಿರುಗಿಕೊಂಡು ತನ್ನ ಮನೆಗೆ ಹೋದನು. \p \v 27 ಅವರು ಮೀಕನು ಮಾಡಿಕೊಂಡವುಗಳನ್ನೂ, ಅವನಿಗಿದ್ದ ಯಾಜಕನನ್ನೂ ತೆಗೆದುಕೊಂಡು ವಿಶ್ರಾಂತಿಯಿಂದಲೂ, ಭರವಸದಿಂದಲೂ ಇದ್ದ ಲಯಿಷಿನ ಜನರ ಮೇಲೆ ಬಂದು, ಅವರನ್ನು ಖಡ್ಗದಿಂದ ಹೊಡೆದು, ಆ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು. \v 28 ಅದು ಸೀದೋನಿಗೆ ದೂರವಾಗಿದ್ದುದರಿಂದಲೂ, ಯಾವ ಮನುಷ್ಯನ ಸಂಗಡಲಾದರೂ ಅವರಿಗೆ ಕೆಲಸವಿಲ್ಲದ್ದರಿಂದಲೂ ಅವರನ್ನು ಕಾಪಾಡಲು ಯಾರೂ ಇರಲಿಲ್ಲ. ಆ ಪಟ್ಟಣವು ಬೇತ್‌ರೆಹೋಬಿಗೆ ಸಮೀಪವಾದ ತಗ್ಗಿನಲ್ಲಿ ಇತ್ತು. \p ಈ ಪಟ್ಟಣವನ್ನು ದಾನ್ಯರು ಪುನಃ ಕಟ್ಟಿಸಿ ಅದರಲ್ಲಿ ವಾಸಿಸಿದರು. \v 29 ಮೊದಲು ಆ ಪಟ್ಟಣಕ್ಕೆ ಲಯಿಷೆಂಬ ಹೆಸರಿತ್ತು. ಈಗ ದಾನ್ಯರು ಆ ಪಟ್ಟಣಕ್ಕೆ ಇಸ್ರಾಯೇಲನಿಗೆ ಹುಟ್ಟಿದ ತಮ್ಮ ಮೂಲಪುರುಷನಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು. \v 30 ಅಲ್ಲಿ ದಾನ್ಯರು ಕೆತ್ತಿದ ವಿಗ್ರಹವನ್ನು ತಮಗಾಗಿ ಸ್ಥಾಪಿಸಿಕೊಂಡರು. ಇಸ್ರಾಯೇಲರು ಸೆರೆಯಾಗಿ ಹೋಗುವವರೆಗೆ ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆದ ಯೋನಾತಾನನೂ ಅವನ ವಂಶದವರೂ ಅವನ ಮಕ್ಕಳೂ ದಾನನ ಗೋತ್ರದವರಿಗೆ ಯಾಜಕರಾಗಿದ್ದರು. \v 31 ದೇವರ ಮನೆ ಶೀಲೋವಿನಲ್ಲಿ ಇರುವ ಮಟ್ಟಿಗೂ, ಅವರು ಮೀಕನು ಮಾಡಿದ ವಿಗ್ರಹವನ್ನು ಇಟ್ಟುಕೊಂಡಿದ್ದರು. \c 19 \s1 ಲೇವಿಯನೂ ಅವನ ಉಪಪತ್ನಿಯೂ \p \v 1 ಇಸ್ರಾಯೇಲಿನಲ್ಲಿ ಆ ದಿವಸಗಳಲ್ಲಿ ಅರಸನಿರಲಿಲ್ಲ. \p ಎಫ್ರಾಯೀಮ್ ಬೆಟ್ಟದ ಒಂದು ಮೂಲೆಯಲ್ಲಿ ಒಬ್ಬ ಲೇವಿಯನು ಪ್ರವಾಸಿಯಾಗಿದ್ದನು. ಅವನು ಯೆಹೂದದ ಬೇತ್ಲೆಹೇಮಿನವಳಾದಂಥ ಸ್ತ್ರೀಯನ್ನು ಉಪಪತ್ನಿಯಾಗಿ ತೆಗೆದುಕೊಂಡಿದ್ದನು. \v 2 ಅವನ ಉಪಪತ್ನಿ ಅವನಿಗೆ ವಿರೋಧವಾಗಿ ಜಾರತ್ವ ಮಾಡಿ, ಅವನನ್ನು ಬಿಟ್ಟು, ಯೆಹೂದದ ಬೇತ್ಲೆಹೇಮಿನಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ, ಅಲ್ಲಿ ನಾಲ್ಕು ತಿಂಗಳಿದ್ದಳು. \v 3 ಆಗ ಅವಳ ಗಂಡನು ಎದ್ದು, ಅವಳ ಸಂಗಡ ಪ್ರೀತಿಯಿಂದ ಮಾತನಾಡಿ, ಅವಳನ್ನು ತಿರುಗಿ ಕರೆತರುವುದಕ್ಕೆ ತನ್ನ ಸೇವಕನನ್ನೂ, ಎರಡು ಕತ್ತೆಗಳನ್ನೂ ತೆಗೆದುಕೊಂಡು ಅವಳ ಬಳಿಗೆ ಹೋದನು. ಅವಳು ಅವನನ್ನು ತನ್ನ ತಂದೆಯ ಮನೆಗೆ ಕರೆದುಕೊಂಡು ಹೋದಳು. ಆಕೆಯ ತಂದೆ ಅವನನ್ನು ಕಂಡಾಗ, ಸಂತೋಷದಿಂದ ಅವನನ್ನು ಸ್ವಾಗತಿಸಿದನು. \v 4 ಅವನ ಮಾವನು ಅಂದರೆ ಆ ಸ್ತ್ರೀಯ ತಂದೆಯು ಅವನನ್ನು ಅಲ್ಲಿರುವಂತೆ ಒತ್ತಾಯ ಮಾಡಿದನು. ಆದ್ದರಿಂದ ಅವನು ಅಲ್ಲಿ ಊಟಮಾಡುತ್ತಾ, ಕುಡಿಯುತ್ತಾ, ಮಲಗುತ್ತಾ ಮೂರು ದಿನಗಳನ್ನು ಕಳೆದನು. \p \v 5 ನಾಲ್ಕನೆಯ ದಿನ ಅವರು ಬೇಗನೆ ಎದ್ದು, ಹೊರಡಲಿಕ್ಕೆ ಸಿದ್ಧರಾದರು. ಆದರೆ ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಸ್ವಲ್ಪ ಊಟಮಾಡಿ ಚೇತರಿಸಿಕೋ, ಆಮೇಲೆ ನೀವು ಹೋಗಬಹುದು,” ಎಂದನು. \v 6 ಆದ್ದರಿಂದ ಅವರಿಬ್ಬರು ಊಟ ಮಾಡಲು, ಕುಡಿಯಲು ಕುಳಿತುಕೊಂಡರು. ಅನಂತರದಲ್ಲಿ ಆ ಸ್ತ್ರೀಯ ತಂದೆಯು, “ಈ ರಾತ್ರಿ ಇಲ್ಲೇ ಇದ್ದುಕೊಂಡು ಸಂತೋಷಪಡು,” ಎಂದು ಹೇಳಿದನು. \v 7 ಆ ಮನುಷ್ಯನು ಎದ್ದು ಹೊರಡಲು ಸಿದ್ಧನಾದಾಗ, ಅವನ ಮಾವನು ಅವನನ್ನು ಆ ರಾತ್ರಿ ಅಲ್ಲಿಯೇ ಇರುವಂತೆ ಒಪ್ಪಿಸಿದನು. \v 8 ಐದನೆಯ ದಿನದ ಮುಂಜಾನೆ ಅವನು ಹೊರಡಲು ಎದ್ದೇಳುವಾಗ, ಆ ಸ್ತ್ರೀಯ ತಂದೆಯು, “ವಿಶ್ರಮಿಸಿಕೋ, ಮಧ್ಯಾಹ್ನದವರೆಗೆ ಇರು,” ಎಂದನು. ಅದರಂತೆ ಅವರಿಬ್ಬರು ಒಟ್ಟಾಗಿ ಊಟಮಾಡಿದರು. \p \v 9 ಅವನೂ, ಅವನ ಉಪಪತ್ನಿಯೂ ಅವನ ಸೇವಕನೂ ಹೋಗುವುದಕ್ಕೆ ಎದ್ದಾಗ, ಅವನ ಮಾವನು ಅವನಿಗೆ, “ಇಗೋ, ಹೊತ್ತು ಹೋಗಿ ಸಂಜೆ ಆಯಿತು. ಈ ರಾತ್ರಿ ನೀನು ದಯಮಾಡಿ ಇಲ್ಲೇ ಇರು; ಹೊತ್ತು ಮುಣುಗುತ್ತಾ ಬಂತು. ನೀನು ಈ ರಾತ್ರಿ ಇಲ್ಲಿದ್ದು, ನಿನ್ನ ಗುಡಾರಕ್ಕೆ ನಾಳೆ ಬೆಳಿಗ್ಗೆ ಎದ್ದು, ನಿಮ್ಮ ಮಾರ್ಗ ಹಿಡಿದು ಹೋಗಬಹುದು,” ಎಂದನು. \v 10 ಆದರೆ ಆ ಮನುಷ್ಯನು ಆ ರಾತ್ರಿ ಅಲ್ಲಿರುವುದಕ್ಕೆ ಮನಸ್ಸಿಲ್ಲದೆ, ಎದ್ದು ತಡಿಕಟ್ಟಿದ ಎರಡು ಕತ್ತೆಗಳ ಮತ್ತು ತನ್ನ ಉಪಪತ್ನಿಯ ಸಂಗಡ ಹೊರಟುಹೋಗಿ, ಯೆರೂಸಲೇಮು ಎಂಬ ಯೆಬೂಸಿಗೆ ಸರಿಯಾಗಿ ಬಂದನು. \p \v 11 ಅವರು ಯೆಬೂಸಿಗೆ ಸಮೀಪಿಸಿದಾಗ, ಹೊತ್ತು ಬಹಳ ಹೋಗಿತ್ತು. ಆಗ ಸೇವಕನು ತನ್ನ ಯಜಮಾನನಿಗೆ, “ನೀನು ದಯಮಾಡಿ ಬಾ; ಈ ಯೆಬೂಸಿಯರ ಪಟ್ಟಣಕ್ಕೆ ತಿರುಗಿಕೊಂಡು, ಅಲ್ಲಿ ರಾತ್ರಿಯಲ್ಲಿ ಇಳಿದುಕೊಳ್ಳೋಣ,” ಎಂದನು. \p \v 12 ಆದರೆ ಅವನ ಯಜಮಾನನು ಅವನಿಗೆ, “ನಾವು ಇಲ್ಲಿ ಇಸ್ರಾಯೇಲರಲ್ಲದವರ ಪಟ್ಟಣದಲ್ಲಿ ತಂಗಬಾರದು; ಗಿಬೆಯ ಪಟ್ಟಣಕ್ಕೆ ಹೋಗೋಣ,” ಎಂದನು. \v 13 ಅವನು ಸೇವಕನಿಗೆ, “ಗಿಬೆಯದಲ್ಲಾದರೂ, ರಾಮಾದಲ್ಲಾದರೂ ಇಳಿದುಕೊಳ್ಳುವುದಕ್ಕೆ ಆ ಸ್ಥಳಗಳಲ್ಲಿ ಒಂದಕ್ಕೆ ಸೇರೋಣ ಬಾ,” ಎಂದನು. \v 14 ಹಾಗೆಯೇ ಅವರು ದಾಟಿಹೋದರು. ಅವರು ಬೆನ್ಯಾಮೀನನಿಗೆ ಸೇರಿದ ಗಿಬೆಯ ಊರಿನ ಸಮೀಪಕ್ಕೆ ಬಂದಾಗ ಸೂರ್ಯ ಮುಳುಗಿತ್ತು. \v 15 ಆದ್ದರಿಂದ ಅವರು ಗಿಬೆಯದಲ್ಲಿ ರಾತ್ರಿ ಕಳೆಯಲು ಉಳಿದರು. ಅವರು ಹೋಗಿ ಪಟ್ಟಣದ ಮಧ್ಯದಲ್ಲಿ ಕುಳಿತುಕೊಂಡರು. ಮನೆಯಲ್ಲಿ ಇಳಿದುಕೊಳ್ಳುವುದಕ್ಕೆ ಅವರನ್ನು ಯಾರೂ ಸೇರಿಸಿಕೊಳ್ಳಲಿಲ್ಲ. \p \v 16 ಆಗ ಒಬ್ಬ ಮುದುಕನು ಹೊಲದಲ್ಲಿ ತನ್ನ ಕೆಲಸಮಾಡಿ ಬರುತ್ತಿದ್ದನು. ಆ ಮನುಷ್ಯನು ಎಫ್ರಾಯೀಮ್ ಬೆಟ್ಟದ ಪ್ರದೇಶಕ್ಕೆ ಸೇರಿದವನೂ ಬೆನ್ಯಾಮೀನರ ಊರಾದ ಗಿಬೆಯದಲ್ಲಿ ಪ್ರವಾಸಿಯಾಗಿಯೂ ಇದ್ದನು. \v 17 ಆ ಮುದುಕನು ತನ್ನ ಕಣ್ಣೆತ್ತಿ ಆ ಪಟ್ಟಣದ ಬೀದಿಯಲ್ಲಿ ಕುಳಿತಿದ್ದ ಯಾತ್ರಿಕನನ್ನು ಕಂಡು, “ನೀನು ಎಲ್ಲಿಗೆ ಹೋಗುತ್ತೀ? ಎಲ್ಲಿಂದ ಬಂದೆ?” ಎಂದನು. \p \v 18 ಅವನು ಇವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮ್ ಬೆಟ್ಟದ ಕಡೆಯಲ್ಲಿ ಹಾದು ಹೋಗುತ್ತೇವೆ. ನಾನು ಅಲ್ಲಿಯವನು. ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು. ಈಗ ಯೆಹೋವ ದೇವರ ಮನೆಗೆ ಹೋಗುತ್ತೇನೆ. ಆದರೆ ನಮ್ಮನ್ನು ಯಾರೂ ಮನೆಗೆ ಸೇರಿಸಿಕೊಳ್ಳಲಿಲ್ಲ. \v 19 ಆದರೂ ನಮ್ಮ ಕತ್ತೆಗಳಿಗೆ ಮೇವೂ, ನಿನ್ನ ಸೇವಕನಾದ ನನಗೂ, ನಿನ್ನ ಸೇವಕಿಗೂ, ನಿನ್ನ ಸೇವಕನ ಸಂಗಡ ಇರುವ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿ ಮತ್ತು ದ್ರಾಕ್ಷಾರಸವು ಉಂಟು. ಏನೂ ಕೊರತೆ ಇಲ್ಲ,” ಎಂದನು. \p \v 20 ಆಗ ಆ ಮುದುಕನು, “ನಿನಗೆ ಶುಭವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ, ಹೇಗಾದರೂ ಬೀದಿಯೊಳಗೆ ಇಳಿದುಕೊಳ್ಳಬೇಡ,” ಎಂದು ಹೇಳಿ \v 21 ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕೈಕಾಲುಗಳನ್ನು ತೊಳೆದು ತಿಂದು ಕುಡಿದರು. \p \v 22 ಅವರು ಸಂತೋಷಿಸುತ್ತಿರುವ ವೇಳೆಯಲ್ಲಿ ಆ ಪಟ್ಟಣದ ದುಷ್ಟ ಮನುಷ್ಯರಲ್ಲಿ ಕೆಲವರು ಆ ಮನೆಯನ್ನು ಸುತ್ತಿಕೊಂಡು, ಕದವನ್ನು ಬಡಿದು, ಆ ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದ ಆ ಮನುಷ್ಯನೊಡನೆ ನಮಗೆ ಸಂಗಮವಾಗಬೇಕು, ಹೊರಗೆ ಬಾ,” ಎಂದು ಹೇಳಿದರು. \p \v 23 ಆಗ ಮನೆಯ ಯಜಮಾನನಾದ ಆ ಮನುಷ್ಯನು ಅವರ ಬಳಿಗೆ ಹೊರಟುಹೋಗಿ, ಅವರಿಗೆ, “ಹಾಗೆ ಮಾಡಬೇಡಿರಿ. ನನ್ನ ಸಹೋದರರೇ, ದಯಮಾಡಿ ಕೆಟ್ಟತನ ಮಾಡಬೇಡಿರಿ. ಆ ಮನುಷ್ಯನು ನನ್ನ ಮನೆಯಲ್ಲಿ ಪ್ರವೇಶಿಸಿದ್ದರಿಂದ ನೀವು ಅಂಥ ಬುದ್ಧಿಹೀನತೆಯನ್ನು ಮಾಡಬೇಡಿರಿ. \v 24 ಕನ್ನಿಕೆಯಾದ ನನ್ನ ಮಗಳೂ, ಅವನ ಉಪಪತ್ನಿಯನ್ನೂ ಹೊರಗೆ ತರುವೆನು. ನೀವು ಅವರನ್ನು ಕುಂದಿಸಿ ನಿಮಗೆ ಸರಿಯಾಗಿ ತೋರುವ ಹಾಗೆ ಅವರಿಗೆ ಮಾಡಿರಿ, ಆ ಮನುಷ್ಯನಿಗೆ ಮಾತ್ರ ಅಂಥ ದುಷ್ಕೃತ್ಯವನ್ನು ಮಾಡಬೇಡಿರಿ,” ಎಂದನು. \p \v 25 ಆದರೆ ಆ ಮನುಷ್ಯರು ಅವನ ಮಾತನ್ನು ಕೇಳಲೊಲ್ಲದೆ ಹೋದರು. ಆದ್ದರಿಂದ ಆ ಮನುಷ್ಯನು ತನ್ನ ಉಪಪತ್ನಿಯನ್ನು ಹಿಡಿದು ಹೊರಗೆ ಅವರ ಬಳಿಯಲ್ಲಿ ತಂದು ಬಿಟ್ಟನು. ಅವರು ಅವಳನ್ನು ತೆಗೆದುಕೊಂಡು ಉದಯಕಾಲದ ಪರ್ಯಂತರ ರಾತ್ರಿಯೆಲ್ಲಾ ಕೆಡಿಸಿ, ಉದಯವಾಗುವಾಗ ಅವಳನ್ನು ಬಿಟ್ಟುಬಿಟ್ಟರು. \v 26 ಆ ಸ್ತ್ರೀ ಉದಯಕಾಲಕ್ಕೆ ಮುಂಚೆ ಬಂದು ಬೆಳಗಾಗುವ ಮಟ್ಟಿಗೂ ಅಲ್ಲಿ ತನ್ನ ಯಜಮಾನನು ಇರುವ ಮನೆಯ ಬಾಗಿಲ ಬಳಿಯಲ್ಲಿ ಬಿದ್ದಿದ್ದಳು. \p \v 27 ಅವಳ ಯಜಮಾನನು ಉದಯದಲ್ಲಿ ಎದ್ದು, ಮನೆಯ ಬಾಗಿಲನ್ನು ತೆರೆದು, ತನ್ನ ಮಾರ್ಗವಾಗಿ ಹೊರಡುವಾಗ, ತನ್ನ ಉಪಪತ್ನಿ ಮನೆಯ ಬಾಗಿಲ ಮುಂದೆ ತನ್ನ ಕೈಗಳನ್ನು ಹೊಸ್ತಿಲ ಮೇಲೆ ಇಟ್ಟವಳಾಗಿ ಬಿದ್ದಿದ್ದಳು. \v 28 ಆಗ ಅವನು ಅವಳಿಗೆ, “ಏಳು, ಹೋಗೋಣ,” ಎಂದನು. ಆದರೆ ಅವಳಿಂದ ಪ್ರತ್ಯುತ್ತರ ಬರಲಿಲ್ಲ. ಆಗ ಆ ಮನುಷ್ಯನು ಅವಳ ಶವವನ್ನು ಕತ್ತೆಯ ಮೇಲೆ ಹಾಕಿಕೊಂಡು, ತನ್ನ ಸ್ಥಳಕ್ಕೆ ಹೋದನು. \p \v 29 ಅವನು ತನ್ನ ಮನೆಗೆ ಹೋದಾಗ, ಒಂದು ಖಡ್ಗವನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹಿಡಿದು ಎಲುಬುಗಳ ಸಂಗಡ ಹನ್ನೆರಡು ತುಂಡುಗಳಾಗಿ ಕಡಿದು, ಅವುಗಳನ್ನು ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿದನು. \v 30 ಆಗ ಅದನ್ನು ಕಂಡವರೆಲ್ಲಾ, “ಇಸ್ರಾಯೇಲರು ಈಜಿಪ್ಟಿನಿಂದ ಬಂದ ದಿವಸ ಮೊದಲ್ಗೊಂಡು ಈ ಪರ್ಯಂತರ ಇಂಥ ಕಾರ್ಯವು ಆದದ್ದೂ ಇಲ್ಲ, ಕಂಡದ್ದೂ ಇಲ್ಲ. ನೀವು ಇದರ ವಿಷಯ ಆಲೋಚಿಸಿ ಯೋಚಿಸಿರಿ. ನಾವೇನು ಮಾಡಬೇಕು ಹೇಳಿರಿ?” ಎಂದರು. \c 20 \s1 ಇಸ್ರಾಯೇಲರು ಬೆನ್ಯಾಮೀನ್ಯರೊಂದಿಗೆ ಯುದ್ಧ ಮಾಡಿದ್ದು \p \v 1 ಆಗ ಇಸ್ರಾಯೇಲರೆಲ್ಲರು ಹೊರಟು ಗಿಲ್ಯಾದ್ ಸಹಿತವಾಗಿ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಒಬ್ಬ ಮನುಷ್ಯನಂತೆ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಕೂಡಿಬಂದರು. \v 2 ಇದಲ್ಲದೆ ಇಸ್ರಾಯೇಲಿನ ಸಮಸ್ತ ಗೋತ್ರಗಳಾದ ಸಮಸ್ತ ಜನರ ಮುಖ್ಯಸ್ಥರು ಬಿಚ್ಚು ಖಡ್ಗ ಹಿಡಿದುಕೊಂಡ ನಾಲ್ಕು ಲಕ್ಷ ಕಾಲಾಳುಗಳು ದೇವರ ಸಮೂಹದ ಜನರಲ್ಲಿಗೆ ಬಂದರು. \v 3 ಬೆನ್ಯಾಮೀನ್ಯರು, ಇಸ್ರಾಯೇಲರು ಮಿಚ್ಪೆಗೆ ಬಂದ ವರ್ತಮಾನವನ್ನು ಕೇಳಿದರು. ಆಗ ಇಸ್ರಾಯೇಲರು, “ನೀವು ಮಾತನಾಡಿರಿ; ಆ ಕೆಟ್ಟತನವು ಹೇಗೆ ಆಯಿತು?” ಎಂದರು. \p \v 4 ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು ಅವರಿಗೆ ಉತ್ತರಕೊಟ್ಟು, “ನಾನು ಬೆನ್ಯಾಮೀನನ ಊರಾದ ಗಿಬೆಯಕ್ಕೆ ನನ್ನ ಉಪಪತ್ನಿ ಸಹಿತವಾಗಿ ಇಳಿದುಕೊಳ್ಳುವುದಕ್ಕೆ ಬಂದೆನು. \v 5 ಆದರೆ ಗಿಬೆಯ ಪಟ್ಟಣದವರು ನನಗೆ ವಿರೋಧವಾಗಿ ಎದ್ದು, ನಾನು ಇಳಿದಿದ್ದ ಮನೆಯನ್ನು ರಾತ್ರಿಯಲ್ಲಿ ಮುತ್ತಿಕೊಂಡು ನನ್ನನ್ನು ಕೊಲ್ಲಬೇಕೆಂದಿದ್ದರು ಮತ್ತು ನನ್ನ ಉಪಪತ್ನಿಯನ್ನು ಅತ್ಯಾಚಾರಮಾಡಿದರು. ಅವಳು ಸತ್ತುಹೋದಳು. \v 6 ಅವರು ಇಸ್ರಾಯೇಲಿನಲ್ಲಿ ಇಂಥ ದುಷ್ಕಾರ್ಯವನ್ನೂ ಅತಿರೇಕದ ಕೆಲಸವನ್ನೂ ಮಾಡಿದ್ದರಿಂದ, ನಾನು ನನ್ನ ಉಪಪತ್ನಿಯನ್ನು ಹಿಡಿದು, ಅವಳನ್ನು ಕಡಿದು, ಇಸ್ರಾಯೇಲಿನ ಬಾಧ್ಯತೆಯಾದ ಎಲ್ಲಾ ಸೀಮೆಗಳಿಗೆ ಕಳುಹಿಸಿದೆನು. ನೀವೆಲ್ಲರೂ ಇಸ್ರಾಯೇಲರಾಗಿದ್ದೀರಿ. \v 7 ಇಲ್ಲಿ ಕೂಡಿದ ಎಲ್ಲಾ ಇಸ್ರಾಯೇಲರೇ, ನಿಮ್ಮ ಮಾತನ್ನೂ ಆಲೋಚನೆಯನ್ನೂ ಇಲ್ಲಿ ಹೇಳಿಕೊಳ್ಳಿರಿ,” ಎಂದನು. \p \v 8 ಆಗ ಸಮಸ್ತ ಜನರೂ ಒಟ್ಟಾಗಿ ಎದ್ದು, “ನಮ್ಮಲ್ಲಿ ಯಾವನೂ ತನ್ನ ಡೇರೆಗೆ ಹೋಗದಿರಲಿ. ತನ್ನ ಮನೆಗೆ ಹಿಂದಿರುಗದಿರಲಿ. \v 9 ಈಗ ನಾವು ಗಿಬೆಯಕ್ಕೆ ಮಾಡುವುದು ಇದೇ. ಅದಕ್ಕೆ ವಿರೋಧವಾಗಿ ಚೀಟುಗಳು ಬಿದ್ದ ಪ್ರಕಾರ ಹೋಗೋಣ. \v 10 ಆದರೆ ಬೆನ್ಯಾಮೀನನ ಗೋತ್ರದವರಾದ ಗಿಬೆಯದವರು ಇಸ್ರಾಯೇಲಿನಲ್ಲಿ ಮಾಡಿದ ಈ ಅತಿರೇಕದ ಕೆಲಸಕ್ಕೆ ತಕ್ಕ ಪ್ರಕಾರ ಮಾಡುವ ಹಾಗೆ ನಾವು ಆಹಾರವನ್ನು ತೆಗೆದುಕೊಂಡು ಬರುವುದಕ್ಕೆ ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿ ನೂರಕ್ಕೆ ಹತ್ತು ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಜನರನ್ನು ತೆಗೆದುಕೊಂಡು ಕಳುಹಿಸುತ್ತೇವೆ,” ಎಂದರು. \v 11 ಹೀಗೆಯೇ ಇಸ್ರಾಯೇಲರೆಲ್ಲರೂ ಒಟ್ಟಾಗಿ ಆ ಪಟ್ಟಣದ ಮುಂದೆ ಕೂಡಿದರು. \p \v 12 ಅಲ್ಲಿಂದ ಇಸ್ರಾಯೇಲ್ ಗೋತ್ರಗಳು ಬೆನ್ಯಾಮೀನನ ಸಮಸ್ತ ಗೋತ್ರಗಳಿಗೆ ದೂತರನ್ನು ಕಳುಹಿಸಿ, “ನಿಮ್ಮಲ್ಲಿ ಮಾಡಿದ ಈ ಕೆಟ್ಟತನವೇನು? \v 13 ಗಿಬೆಯದಲ್ಲಿರುವ ದುಷ್ಟ ಮನುಷ್ಯರನ್ನು ನಾವು ಕೊಂದು, ಕೆಟ್ಟತನವನ್ನು ಇಸ್ರಾಯೇಲಿನಿಂದ ತೆಗೆದುಹಾಕುವ ಹಾಗೆ, ಅವರನ್ನು ಒಪ್ಪಿಸಿಕೊಡಿರಿ,” ಎಂದು ಹೇಳಿ ಕಳುಹಿಸಿದರು. \p ಆದರೆ ಬೆನ್ಯಾಮೀನ್ಯರು ಇಸ್ರಾಯೇಲರಾದ ತಮ್ಮ ಸಹೋದರರ ಮಾತನ್ನು ಕೇಳುವುದಕ್ಕೆ ಮನಸ್ಸಿಲ್ಲದೆ, \v 14 ಇಸ್ರಾಯೇಲರ ಸಂಗಡ ಯುದ್ಧಮಾಡುವುದಕ್ಕೆ ಹೊರಡುವ ಹಾಗೆ ಪಟ್ಟಣಗಳಲ್ಲಿಂದ ಗಿಬೆಯದಲ್ಲಿ ಬಂದು ಕೂಡಿದರು. \v 15 ಆ ಕಾಲದಲ್ಲಿ ಆಯಾ ಪಟ್ಟಣಗಳಿಂದ ಯುದ್ಧಸನ್ನದ್ಧರಾಗಿ ಕೂಡಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು. \v 16 ಈ ಸಮಸ್ತ ಜನರಲ್ಲಿ ಆರಿಸಿದ ಏಳು ನೂರು ಜನರು ಬಲಗೈ ಅಭ್ಯಾಸವಿಲ್ಲದವರಾಗಿದ್ದರು. ಅವರೆಲ್ಲರೂ ಒಂದು ಕೂದಲೆಳೆ ತಪ್ಪದ ಹಾಗೆ ಕವಣೆಯಿಂದ ಕಲ್ಲೆಸೆಯುವವರಾಗಿದ್ದರು. \p \v 17 ಬೆನ್ಯಾಮೀನನವರ ಹೊರತು ಇಸ್ರಾಯೇಲರಲ್ಲಿ ನಾಲ್ಕು ಲಕ್ಷ ಯೋಧರಿದ್ದರು. ಇವರೆಲ್ಲರೂ ಯುದ್ಧವೀರರಾಗಿದ್ದರು. \p \v 18 ಆಗ ಇಸ್ರಾಯೇಲರು ಬೇತೇಲಿಗೆ ಹೋಗಿ, ತಮ್ಮಲ್ಲಿ ಮೊದಲು ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕಾದವರು ಯಾರೆಂದು ದೇವರನ್ನು ಕೇಳಿದರು. \p ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಮೊದಲು ಹೋಗಬೇಕು,” ಎಂದರು. \p \v 19 ಆಗ ಇಸ್ರಾಯೇಲರು ಉದಯದಲ್ಲಿ ಎದ್ದು ಗಿಬೆಯಕ್ಕೆ ಎದುರಾಗಿ ಪಾಳೆಯಮಾಡಿಕೊಂಡರು. \v 20 ಇಸ್ರಾಯೇಲಿನ ಮನುಷ್ಯರು ಗಿಬೆಯದ ಬಳಿಯಲ್ಲಿ ಬೆನ್ಯಾಮೀನ್ಯರೊಡನೆ ಯುದ್ಧಮಾಡುವದಕ್ಕೋಸ್ಕರ ವ್ಯೂಹ ಕಟ್ಟಿದರು. \v 21 ಆಗ ಬೆನ್ಯಾಮೀನ್ಯರು ಗಿಬೆಯದಿಂದ ಹೊರಟು, ಇಸ್ರಾಯೇಲರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಆ ದಿವಸದಲ್ಲಿ ನೆಲಕ್ಕೆ ಬೀಳುವಂತೆ ಸಂಹರಿಸಿದರು. \v 22 ಇಸ್ರಾಯೇಲರಾದ ಜನರು ಬಲಗೊಂಡು, ಮೊದಲನೆಯ ದಿವಸ ಯುದ್ಧಕ್ಕೆ ವ್ಯೂಹ ಕಟ್ಟಿದ ಸ್ಥಳದಲ್ಲಿ ತಿರುಗಿ ವ್ಯೂಹ ಕಟ್ಟಿದರು. \v 23 ಇಸ್ರಾಯೇಲರು ಯೆಹೋವ ದೇವರ ಬಳಿಗೆ ಹೋಗಿ, ಅವರ ಮುಂದೆ ಸಂಜೆಯವರೆಗೆ ಅತ್ತು, “ನಮ್ಮ ಸಹೋದರರಾದ ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕೋ?” ಎಂದು ಯೆಹೋವ ದೇವರನ್ನು ಕೇಳಿದರು. \p ಅದಕ್ಕೆ ಯೆಹೋವ ದೇವರು, “ಅವರ ಮೇಲೆ ಹೋಗಿರಿ,” ಎಂದರು. ಎರಡನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರ ಬಳಿಗೆ ಬಂದರು. \p \v 24 ಆಗ ಬೆನ್ಯಾಮೀನನವರು ಆ ಎರಡನೆಯ ದಿವಸದಲ್ಲಿ ಗಿಬೆಯದಿಂದ ಅವರಿಗೆ ಎದುರಾಗಿ ಹೊರಟುಬಂದು, \v 25 ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯಾದಿಂದ ಹೊರಗೆ ಬಂದು ಇಸ್ರಾಯೇಲರಲ್ಲಿ ಖಡ್ಗ ಹಿಡಿಯುವ ಹದಿನೆಂಟು ಸಾವಿರ ಜನರನ್ನು ನೆಲಕ್ಕೆ ಉರುಳಿಸಿದರು. \p \v 26 ಆಗ ಇಸ್ರಾಯೇಲರೆಲ್ಲರೂ ಸಮಸ್ತ ಸೇನೆಯೂ ಬೇತೇಲಿಗೆ ಹೊರಟು, ಅಲ್ಲಿ ಅಳುತ್ತಾ ಯೆಹೋವ ದೇವರ ಮುಂದೆ ಕುಳಿತುಕೊಂಡು, ಆ ಸಂಜೆಯವರೆಗೆ ಉಪವಾಸವಾಗಿದ್ದು, ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನದ ಸಮರ್ಪಣೆಗಳನ್ನೂ ಅರ್ಪಿಸಿದರು. \v 27 ಏಕೆಂದರೆ ಆ ದಿವಸಗಳಲ್ಲಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿದ್ದದರಿಂದಲೂ, \v 28 ಆರೋನನ ಮೊಮ್ಮಗನೂ, ಎಲಿಯಾಜರನ ಮಗನೂ ಆದ ಫೀನೆಹಾಸನು ಅವರ ಮುಂದೆ ನಿಂತಿದ್ದದರಿಂದಲೂ, ಇಸ್ರಾಯೇಲರು, “ನಮ್ಮ ಸಹೋದರರಾದ ಬೆನ್ಯಾಮೀನ್ಯರಿಗೆ ವಿರೋಧವಾಗಿ ಇನ್ನೂ ಯುದ್ಧಮಾಡುವುದಕ್ಕೆ ಹೋಗಬೇಕೋ ಬೇಡವೋ?” ಎಂದು ದೇವರನ್ನು ಕೇಳಿಕೊಂಡರು. \p ಯೆಹೋವ ದೇವರು, “ಹೋಗಿರಿ, ಏಕೆಂದರೆ ನಾಳೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದರು. \p \v 29 ಇಸ್ರಾಯೇಲರು ಗಿಬೆಯದ ಸುತ್ತಲೂ ಹೊಂಚಿ ನೋಡುವವರನ್ನು ಇಟ್ಟರು. \v 30 ಮೂರನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಿಗೆ ಎದುರಾಗಿ ಹೋಗಿ ಮೊದಲು ಎರಡು ಸಾರಿ ಮಾಡಿದ ಹಾಗೆಯೇ, ಗಿಬೆಯದ ಸಮೀಪದಲ್ಲಿ ವ್ಯೂಹವನ್ನು ಕಟ್ಟಿದರು. \v 31 ಆಗ ಬೆನ್ಯಾಮೀನ್ಯರು ಇಸ್ರಾಯೇಲ್ ಜನಕ್ಕೆ ಎದುರಾಗಿ ಹೊರಟು, ಪಟ್ಟಣದ ಬಳಿಯಿಂದ ಹೊರಬಂದು, ಅಡವಿಯಲ್ಲಿ ಹೆದ್ದಾರಿಯಾದ ಬೇತೇಲಿಗೂ ಗಿಬೆಯಕ್ಕೂ ಹೋಗುವ ಎರಡು ಮಾರ್ಗಗಳಲ್ಲಿ ಇಸ್ರಾಯೇಲ್ ಜನರೊಳಗೆ ಮೊದಲಿನ ಹಾಗೆಯೇ ಹೆಚ್ಚು ಕಡಿಮೆ ಮೂವತ್ತು ಜನರನ್ನು ಹೊಡೆದು ಕೊಲ್ಲಲಾರಂಭಿಸಿದಾಗ, \v 32 ಬೆನ್ಯಾಮೀನ್ಯರು, “ಅವರು ಮೊದಲಿನ ಹಾಗೆಯೇ ನಮ್ಮ ಮುಂದೆ ಸೋತುಹೋಗುತ್ತಾರೆ,” ಎಂದುಕೊಂಡರು. ಆದರೆ ಇಸ್ರಾಯೇಲರು, “ಅವರನ್ನು ಪಟ್ಟಣದ ಬಳಿಯಿಂದ ಹೆದ್ದಾರಿಗಳಿಗೆ ಎಳೆದುಕೊಳ್ಳುವ ಹಾಗೆ ನಾವು ಹಿಂದಕ್ಕೆ ಓಡಿಹೋಗೋಣ,” ಎಂದುಕೊಂಡರು. \p \v 33 ಇಸ್ರಾಯೇಲರೆಲ್ಲರೂ ತಮ್ಮ ಸ್ಥಳದಿಂದ ಎದ್ದು, ಬಾಳ್ ತಾಮಾರಿನಲ್ಲಿ ವ್ಯೂಹವನ್ನು ಕಟ್ಟಿದರು. ಆಗ ಗಿಬೆಯದ ಗವಿಯಲ್ಲಿ ಹೊಂಚಿ ನೋಡುತ್ತಿದ್ದ ಇಸ್ರಾಯೇಲರು ಹೊರಟು ಬಂದರು. \v 34 ಅವರಲ್ಲಿ ಆರಿಸಿದ ಹತ್ತು ಸಾವಿರ ಮನುಷ್ಯರು ಗಿಬೆಯಕ್ಕೆ ವಿರೋಧವಾಗಿ ಬಂದರು. ಯುದ್ಧವು ಘೋರವಾಗಿತ್ತು. ಆದರೆ ಬೆನ್ಯಾಮೀನ್ಯರು, ಕೇಡು ತಮಗೆ ಸಮೀಪವಾಗಿತ್ತೆಂದು ಅರಿಯದೆ ಇದ್ದರು. \v 35 ಆಗ ಯೆಹೋವ ದೇವರು ಇಸ್ರಾಯೇಲಿನ ಮುಂದೆ ಬೆನ್ಯಾಮೀನ್ಯರನ್ನು ಹೊಡೆದರು. ಆ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಲ್ಲಿ ಖಡ್ಗ ಹಿಡಿಯುವವರಾದ ಇಪ್ಪತ್ತೈದು ಸಾವಿರದ ನೂರು ಮನುಷ್ಯರನ್ನು ನಾಶಮಾಡಿದರು. \v 36 ತಾವು ಸೋತುಹೋದೆವೆಂಬುದು ಹೀಗೆ ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. \p ಏಕೆಂದರೆ ಇಸ್ರಾಯೇಲರು ಗಿಬೆಯದ ಹತ್ತಿರ ಹೊಂಚು ಹಾಕುವದಕ್ಕೆ ಇಟ್ಟ ಜನರನ್ನು ನಂಬಿದ್ದರು. ಆದುದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು. \v 37 ಆಗ ಹೊಂಚು ಹಾಕಿಕೊಂಡಿದ್ದವರು ತೀವ್ರವಾಗಿ ಗಿಬೆಯಕ್ಕೆ ಸಾಲಾಗಿ ಹೊರಟು, ಪಟ್ಟಣದಲ್ಲಿರುವವರೆಲ್ಲರನ್ನು ಖಡ್ಗದಿಂದ ಸಂಹರಿಸಿದರು. \v 38 ಇಸ್ರಾಯೇಲರು ಹೊಂಚು ಹಾಕಿಕೊಂಡಿದ್ದವರ ಸಂಗಡ ನೇಮಿಸಿಕೊಂಡ ಗುರುತೇನೆಂದರೆ, ಪಟ್ಟಣದಲ್ಲಿಂದ ಮಹಾ ದೊಡ್ಡ ಹೊಗೆಯನ್ನು ಏಳ ಮಾಡುವುದೇ. \v 39 ತದನಂತರ ಇಸ್ರಾಯೇಲರು ಪ್ರತಿದಾಳಿ ನಡೆಸಿದರು. \p ಬೆನ್ಯಾಮೀನ್ಯರು ಇಸ್ರಾಯೇಲರನ್ನು ಹೊಡೆಯುವುದಕ್ಕೆ ಪ್ರಾರಂಭಿಸಿ, ಅವರಲ್ಲಿ ಹೆಚ್ಚು ಕಡಿಮೆ ಮೂವತ್ತು ಜನರನ್ನು ಕೊಂದಾಗ, “ಮೊದಲು ಯುದ್ಧದಲ್ಲಿ ಆದ ಹಾಗೆ ನಿಶ್ಚಯವಾಗಿ ಅವರು ನಮ್ಮ ಮುಂದೆ ಸೋತುಹೋದರು,” ಎಂದು ಅಂದುಕೊಂಡರು. \v 40 ಆದರೆ ಪಟ್ಟಣದೊಳಗಿಂದ ಹೊಗೆಯ ಸ್ತಂಭ ಸಹಿತವಾಗಿ ಏಳುವುದಕ್ಕೆ ಪ್ರಾರಂಭಿಸಿತು. ಬೆನ್ಯಾಮೀನ್ಯರು ಹಿಂದಕ್ಕೆ ತಿರುಗಿ ನೋಡಿದಾಗ, ಪಟ್ಟಣದ ಜ್ವಾಲೆಯು ಆಕಾಶಕ್ಕೆ ಏರಿತು. \v 41 ಇಸ್ರಾಯೇಲರು ತಿರುಗಿಕೊಂಡು ಬಂದಾಗ, ಬೆನ್ಯಾಮೀನನ ಜನರು ತಲ್ಲಣಗೊಂಡರು, ಏಕೆಂದರೆ ಕೇಡು ತಮ್ಮ ಮೇಲೆ ಪ್ರಾಪ್ತವಾಯಿತೆಂದು ಕಂಡರು. \v 42 ಅವರು ಇಸ್ರಾಯೇಲರ ಮುಂದೆ ಮರುಭೂಮಿಯ ಮಾರ್ಗಕ್ಕೆ ತಿರುಗಿಕೊಂಡು ಹೋದರು. ಆದರೆ ಸೈನಿಕರು ಅವರನ್ನು ಹಿಡಿದು, ಪಟ್ಟಣದಿಂದ ಹೊರಟು ಬರುವ ಜನರನ್ನು ಮಧ್ಯದಲ್ಲೇ ಕೊಂದುಹಾಕಿದರು. \v 43 ಹೀಗೆ ಬೆನ್ಯಾಮೀನ್ಯರನ್ನು ಸುತ್ತಲೂ ಮುತ್ತಿಕೊಂಡು, ಅವರನ್ನು ಹಿಂದಟ್ಟಿ, ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿ ಅವಕಾಶವಿಲ್ಲದೆ ತುಳಿದು ಹಾಕಿದರು. \v 44 ಬೆನ್ಯಾಮೀನ್ಯರಲ್ಲಿ ಹದಿನೆಂಟು ಸಾವಿರ ಜನರು ಸತ್ತರು. ಇವರೆಲ್ಲರೂ ಪರಾಕ್ರಮಶಾಲಿಗಳಾಗಿದ್ದರು. \v 45 ಆದರೆ ಕೆಲವರು ತಿರುಗಿಕೊಂಡು ಮರುಭೂಮಿಯಲ್ಲಿರುವ ರಿಮ್ಮೋನ್ ಬಂಡೆಗೆ ಓಡಿಹೋದರು. ಅದರಲ್ಲಿ ಐದು ಸಾವಿರ ಜನರನ್ನು ಹೆದ್ದಾರಿಗಳಲ್ಲಿ ಹಕ್ಕಲಾರಿಸಿ ಕೊಂದುಹಾಕಿದರು. ಉಳಿದವರನ್ನು ಗಿದೋಮಿನವರೆಗೆ ಹಿಂದಟ್ಟಿ ಅವರಲ್ಲಿ ಎರಡು ಸಾವಿರ ಮನುಷ್ಯರನ್ನು ವಧಿಸಿದರು. \p \v 46 ಹೀಗೆಯೇ ಬೆನ್ಯಾಮೀನ್ಯರೊಳಗೆ ಆ ದಿವಸದಲ್ಲಿ ಬಿದ್ದವರೆಲ್ಲರೂ ಖಡ್ಗ ಹಿಡಿಯುವ ಇಪ್ಪತ್ತೈದು ಸಾವಿರ ಜನರು. ಇವರೆಲ್ಲರೂ ಪರಾಕ್ರಮಶಾಲಿಗಳಾಗಿದ್ದರು. \v 47 ಆದರೆ ಆರುನೂರು ಮಂದಿ ತಿರುಗಿಕೊಂಡು ಮರುಭೂಮಿಯಲ್ಲಿರುವ ರಿಮ್ಮೋನ್ ಬೆಟ್ಟಕ್ಕೆ ಓಡಿಹೋಗಿ, ರಿಮ್ಮೋನ್ ಗುಡ್ಡದಲ್ಲಿ ನಾಲ್ಕು ತಿಂಗಳು ವಾಸವಾಗಿದ್ದರು. \v 48 ಇಸ್ರಾಯೇಲರು ಬೆನ್ಯಾಮೀನ್ಯರ ಮೇಲೆ ತಿರುಗಿ ಹೋಗಿ, ಪಟ್ಟಣದಲ್ಲಿ ಜನರನ್ನೂ, ಪಶುಗಳನ್ನೂ, ಕೈಗೆ ಸಿಕ್ಕಿದ್ದೆಲ್ಲವನ್ನೂ ಸಂಹರಿಸಿ, ತಾವು ಹೋದ ಸಮಸ್ತ ಪಟ್ಟಣಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು. \c 21 \s1 ಬೆನ್ಯಾಮೀನರಿಗೆ ಹೆಂಡತಿಯರು \p \v 1 ಇಸ್ರಾಯೇಲರು ತಮ್ಮಲ್ಲಿ, “ಯಾವನೂ ತನ್ನ ಮಗಳನ್ನು ಬೆನ್ಯಾಮೀನ್ಯರಿಗೆ ಮದುವೆಮಾಡಿ ಕೊಡುವುದಿಲ್ಲ,” ಎಂದು ಮಿಚ್ಪೆಯಲ್ಲಿ ಆಣೆಯಿಟ್ಟಿದ್ದರು. \p \v 2 ಆದ್ದರಿಂದ ಜನರು ಬೇತೇಲಿಗೆ ಬಂದು, ಅಲ್ಲಿ ದೇವರ ಮುಂದೆ ಸಾಯಂಕಾಲದವರೆಗೆ ಇದ್ದು, ತಮ್ಮ ಧ್ವನಿ ಎತ್ತಿ ಬಹಳವಾಗಿ ಅತ್ತು, \v 3 “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರ ಕೊರತೆಯಾದದ್ದೇನು?” ಎಂದರು. \p \v 4 ಜನರು ಮಾರನೆಯ ದಿವಸ ಉದಯದಲ್ಲಿ ಎದ್ದು, ಅಲ್ಲಿ ಬಲಿಪೀಠವನ್ನು ಕಟ್ಟಿ, ದಹನಬಲಿಗಳನ್ನೂ ಸಮಾಧಾನದ ಸಮರ್ಪಣೆಗಳನ್ನೂ ಅರ್ಪಿಸಿದರು. \p \v 5 ಅನಂತರ ಅವರು, “ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಬಾರದವರು ಯಾರು?” ಎಂದರು. ಏಕೆಂದರೆ ಯೆಹೋವ ದೇವರ ಬಳಿಗೆ ಮಿಚ್ಪೆಗೆ ಬಾರದವನು ಖಂಡಿತವಾಗಿ ಸಾಯಬೇಕೆಂದು ದೊಡ್ಡ ಆಣೆ ಇಟ್ಟುಕೊಂಡಿದ್ದರು. \p \v 6 ಆಗ ಇಸ್ರಾಯೇಲರು ತಮ್ಮ ಸಹೋದರರಾದ ಬೆನ್ಯಾಮೀನನ ವಿಷಯವಾಗಿ ಪಶ್ಚಾತ್ತಾಪಪಟ್ಟು, “ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರವು ಕಡಿದು ಹೋಯಿತು. \v 7 ನಾವು ನಮ್ಮ ಪುತ್ರಿಯರಲ್ಲಿ ಒಬ್ಬಳನ್ನಾದರೂ ಅವರಿಗೆ ಕೊಡುವುದಿಲ್ಲ, ಎಂದು ನಾವು ಯೆಹೋವ ದೇವರ ಮೇಲೆ ಆಣೆ ಇಟ್ಟುಕೊಂಡದ್ದರಿಂದ ಉಳಿದವರಿಗೆ ಹೆಂಡರು ದೊರಕುವಂತೆ ನಾವು ಅವರಿಗೋಸ್ಕರ ಏನು ಮಾಡೋಣ? \v 8 ಇಸ್ರಾಯೇಲಿನ ಗೋತ್ರಗಳಲ್ಲಿ ಮಿಚ್ಪೆಗೆ ಯೆಹೋವ ದೇವರ ಬಳಿಗೆ ಬಾರದವರು ಯಾರಾದರೂ ಒಬ್ಬರಿದ್ದಾರೋ?” ಎಂದರು. ಆಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಸಭೆಯ ಬಳಿಗೆ ಪಾಳೆಯಕ್ಕೆ ಬಂದಿರಲಿಲ್ಲ. \v 9 ಜನರು ಲೆಕ್ಕಿಸಿದಾಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಇರಲಿಲ್ಲ. \p \v 10 ಆಗ ಸಭೆಯು ಪರಾಕ್ರಮಶಾಲಿಗಳಲ್ಲಿ ಹನ್ನೆರಡು ಸಾವಿರ ಮನುಷ್ಯರನ್ನು ಅಲ್ಲಿಗೆ ಕಳುಹಿಸುವಾಗ, ಅವರಿಗೆ, “ನೀವು ಹೋಗಿ, ಯಾಬೇಷ್ ಗಿಲ್ಯಾದಿನ ನಿವಾಸಿಗಳನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಕೂಡ, ಖಡ್ಗದಿಂದ ಸಂಹರಿಸಿಬಿಡಿರಿ. \v 11 ಎಲ್ಲಾ ಗಂಡಸರನ್ನೂ ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲ ಮಾಡಿರಿ,” ಎಂದು ಆಜ್ಞಾಪಿಸಿದರು. \v 12 ಹಾಗೆಯೇ ಯಾಬೇಷ್ ಗಿಲ್ಯಾದಿನ ನಿವಾಸಿಗಳಲ್ಲಿ ನಾನೂರು ಮಂದಿ ಪ್ರಾಯದ ಕನ್ನಿಕೆಯರನ್ನು ಕಂಡರು. ಅವರು ಯಾವುದೇ ಪುರುಷರೊಂದಿಗೆ ಸಂಬಂಧ ಹೊಂದಿರಲಿಲ್ಲ. ಅವರನ್ನು ಕಾನಾನ್ ದೇಶದಲ್ಲಿರುವ ಶೀಲೋವಿನಲ್ಲಿದ್ದ ಪಾಳೆಯಕ್ಕೆ ತಂದರು. \p \v 13 ಆಗ ಸಭೆಯವರೆಲ್ಲರೂ ರಿಮ್ಮೋನ್ ಗುಡ್ಡದಲ್ಲಿರುವ ಬೆನ್ಯಾಮೀನ್ಯರ ಸಂಗಡ ಮಾತನಾಡಿ, ಅವರಿಗೆ ಸಮಾಧಾನವನ್ನು ಸಾರಲು ಕೆಲವರನ್ನು ಕಳುಹಿಸಿದರು. \v 14 ಆ ಕಾಲದಲ್ಲಿ ಬೆನ್ಯಾಮೀನ್ಯರು ತಿರುಗಿ ಅವರ ಬಳಿಗೆ ಬಂದರು. ಅವರು ಯಾಬೇಷ್ ಗಿಲ್ಯಾದಿನ ಸ್ತ್ರೀಯರಲ್ಲಿ ಜೀವದಿಂದ ಉಳಿಸಿದ ಕನ್ನಿಕೆಯರನ್ನು ಅವರಿಗೆ ಹೆಂಡತಿಯರಾಗಿ ಕೊಟ್ಟರು. ಆದರೂ ಅವರಿಗೆ ತಕ್ಕಷ್ಟು ಹೆಂಡತಿಯರು ಸಿಕ್ಕಲಿಲ್ಲ. \p \v 15 ಯೆಹೋವ ದೇವರು ಇಸ್ರಾಯೇಲ್ ಗೋತ್ರಗಳಲ್ಲಿ ಬೆನ್ಯಾಮೀನರನ್ನು ಬೇರ್ಪಡಿಸಿದ್ದರಿಂದ ಜನರು ಬೆನ್ಯಾಮೀನರಿಗಾಗಿ ಪಶ್ಚಾತ್ತಾಪ ಪಟ್ಟರು. \v 16 ಸಮೂಹದ ಹಿರಿಯರು, “ಬೆನ್ಯಾಮೀನನ ಗೋತ್ರದ ಸ್ತ್ರೀಯರು ನಾಶವಾದದ್ದರಿಂದ ಉಳಿದ ಜನರಿಗೆ ಹೆಂಡತಿಯರು ದೊರಕುವುದಕ್ಕಾಗಿ ಏನು ಮಾಡೋಣ? \v 17 ಇಸ್ರಾಯೇಲಿನಲ್ಲಿ ಒಂದು ಗೋತ್ರವು ಅಳಿದು ಹೋಗದ ಹಾಗೆ ತಪ್ಪಿಸಿಕೊಂಡ ಬೆನ್ಯಾಮೀನ್ಯರಿಗೆ ಬಾಧ್ಯತೆ ಇರಬೇಕು. \v 18 ‘ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣು ಕೊಡುವ ಇಸ್ರಾಯೇಲ್ಯರು ಶಾಪಗ್ರಸ್ತರಾಗಲಿ,’ ಎಂದು ಆಣೆ ಇಟ್ಟುಕೊಂಡಿದ್ದರಿಂದ, ನಾವಾದರೋ ನಮ್ಮ ಪುತ್ರಿಯರಲ್ಲಿ ಅವರಿಗೆ ಹೆಣ್ಣು ಕೊಡಕೂಡದು,” ಎಂದರು. \v 19 ಅವರು ಬೇತೇಲಿಗೆ ಉತ್ತರದಲ್ಲಿಯೂ, ಬೇತೇಲಿನಿಂದ ಶೆಕೆಮಿಗೆ ಹೋಗುವ ಹೆದ್ದಾರಿಯ ಮೂಡಲಲ್ಲಿಯೂ ಲೆಬೋನಕ್ಕೆ ದಕ್ಷಿಣದಲ್ಲಿರುವ ಶೀಲೋವಿನಲ್ಲಿ ಪ್ರತಿವರ್ಷ ಯೆಹೋವ ದೇವರ ಹಬ್ಬವುಂಟೆಂದು ಹೇಳಿದರು. \p \v 20 ಅವರು ಬೆನ್ಯಾಮೀನ್ಯರಿಗೆ, “ನೀವು ಹೋಗಿ ದ್ರಾಕ್ಷಿತೋಟಗಳಲ್ಲಿ ಅಡಗಿಕೊಳ್ಳಿರಿ. \v 21 ಶೀಲೋವಿನ ಪುತ್ರಿಯರು ನಾಟ್ಯವಾಡುತ್ತಾ ಹೊರಟು ಬರುವರು. ನೀವು ಅವರನ್ನು ಕಂಡಾಗ, ದ್ರಾಕ್ಷಿ ತೋಟಗಳಿಂದ ಹೊರಟು, ಶೀಲೋವಿನ ಪುತ್ರಿಯರಲ್ಲಿ ನಿಮ್ಮಲ್ಲಿ ಅವನವನು ತನಗೆ ಹೆಂಡತಿಯಾಗಿ ಒಬ್ಬೊಬ್ಬಳನ್ನು ಹಿಡಿದುಕೊಂಡು, ಬೆನ್ಯಾಮೀನನ ದೇಶಕ್ಕೆ ಹೋಗಿರಿ,” ಎಂದು ಆಜ್ಞಾಪಿಸಿದರು. \v 22 ಅವರ ತಂದೆಗಳಾದರೂ, ಅವರ ಸಹೋದರರಾದರೂ ನಮ್ಮ ಸಂಗಡ ವ್ಯಾಜ್ಯವಾಡುವುದಕ್ಕೆ ಬಂದರೆ, ನಾವು ಅವರಿಗೆ, “ಯುದ್ಧದಲ್ಲಿ ನಾವು ಅವನವನಿಗೆ ಹೆಂಡತಿಯನ್ನು ದೊರಕಿಸಿದ ಕಾರಣ, ನಮಗೋಸ್ಕರ ಅವರ ಮೇಲೆ ದಯೆ ತೋರಿಸಿರಿ. ಏಕೆಂದರೆ ನೀವು ಈ ಸಮಯದಲ್ಲಿ ಅವರಿಗೆ ಕೊಟ್ಟು ಅಪರಾಧಸ್ಥರಾಗಲಿಲ್ಲ ಎಂಬದಾಗಿ ಹೇಳುತ್ತೇವೆ,” ಎಂದರು. \p \v 23 ಆಗ ಬೆನ್ಯಾಮೀನ್ಯರು ಅದೇ ಪ್ರಕಾರಮಾಡಿ, ನಾಟ್ಯವಾಡುವ ಹೆಣ್ಣುಗಳಲ್ಲಿ ತಮ್ಮ ಲೆಕ್ಕಕ್ಕೆ ಸರಿಯಾಗಿ ಹಿಡಿದುಕೊಂಡವರನ್ನು ಅವನವನು ತನಗೆ ಹೆಂಡತಿಯಾಗಿ ತೆಗೆದುಕೊಂಡು, ತಮ್ಮ ಬಾಧ್ಯತೆಗೆ ತಿರುಗಿಕೊಂಡು ಹೋಗಿ, ಪಟ್ಟಣಗಳನ್ನು ಕಟ್ಟಿ, ಅವುಗಳಲ್ಲಿ ವಾಸಿಸಿದರು. \p \v 24 ಇಸ್ರಾಯೇಲರು ಆ ಕಾಲದಲ್ಲಿ ಆ ಸ್ಥಳವನ್ನು ಬಿಟ್ಟು, ತಮ್ಮ ತಮ್ಮ ಗೋತ್ರಕ್ಕೂ, ತಮ್ಮ ತಮ್ಮ ಕುಟುಂಬಕ್ಕೂ ಹೋದರು. ಅಲ್ಲಿಂದ ಒಬ್ಬೊಬ್ಬನು ತನ್ನ ಬಾಧ್ಯತೆಗೆ ಹೊರಟುಹೋದನು. \p \v 25 ಆ ದಿವಸಗಳಲ್ಲಿ ಇಸ್ರಾಯೇಲಿನಲ್ಲಿ ಅರಸನು ಇರಲಿಲ್ಲ. ಒಬ್ಬೊಬ್ಬನು ತನ್ನ ದೃಷ್ಟಿಗೆ ಸರಿಯಾಗಿ ತೋಚಿದ್ದನ್ನು ಮಾಡುತ್ತಿದ್ದನು.