\id GEN - Biblica® Open Kannada Contemporary Version \usfm 3.0 \ide UTF-8 \h ಆದಿಕಾಂಡ \toc1 ಆದಿಕಾಂಡ \toc2 ಆದಿಕಾಂಡ \toc3 ಆದಿ \mt1 ಆದಿಕಾಂಡ \c 1 \s1 ಪ್ರಾರಂಭ \p \v 1 ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದರು. \v 2 ಭೂಮಿಯು ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲೆ ಕವಿದಿತ್ತು. ದೇವರಾತ್ಮರು ಜಲ ಸಮೂಹಗಳ ಮೇಲೆ ಚಲಿಸುತ್ತಿದ್ದರು. \b \p \v 3 ಆಗ ದೇವರು, “ಬೆಳಕಾಗಲಿ” ಎನ್ನಲು, ಬೆಳಕಾಯಿತು. \v 4 ದೇವರು ಬೆಳಕನ್ನು ಒಳ್ಳೆಯದೆಂದು ಕಂಡರು. ದೇವರು ಬೆಳಕನ್ನು ಕತ್ತಲೆಯಿಂದ ಪ್ರತ್ಯೇಕಿಸಿದರು. \v 5 ದೇವರು ಬೆಳಕಿಗೆ ಹಗಲು ಎಂದೂ ಕತ್ತಲೆಗೆ ರಾತ್ರಿ ಎಂದೂ ಕರೆದರು. ಆಗ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು. \b \p \v 6 ನಂತರ ದೇವರು, “ಜಲರಾಶಿಯ ನಡುವೆ ವಿಸ್ತಾರವಾದ ಗುಮ್ಮಟವಾಗಲಿ, ಅದು ನೀರಿನಿಂದ ಭೂಮಿಯನ್ನು ಪ್ರತ್ಯೇಕ ಮಾಡಲಿ,” ಎಂದರು. \v 7 ಹೀಗೆ ದೇವರು ವಿಸ್ತಾರವಾದ ಗುಮ್ಮಟವನ್ನು ಅದರ ಕೆಳಗಿದ್ದ ನೀರನ್ನೂ ಅದರ ಮೇಲಿದ್ದ ನೀರನ್ನೂ ಪ್ರತ್ಯೇಕಿಸಿದರು. ಅದು ಹಾಗೆಯೇ ಆಯಿತು. \v 8 ದೇವರು ಆ ಗುಮ್ಮಟಕ್ಕೆ ಆಕಾಶ ಎಂದು ಕರೆದರು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು. \b \p \v 9 ಆಗ ದೇವರು, “ಆಕಾಶದ ಕೆಳಗಿರುವ ನೀರು ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣ ನೆಲವು ಕಾಣಿಸಲಿ,” ಎಂದರು. ಅದು ಹಾಗೆಯೇ ಆಯಿತು. \v 10 ದೇವರು ಒಣ ನೆಲಕ್ಕೆ “ಭೂಮಿ” ಎಂದೂ ಕೂಡಿಕೊಂಡಿದ್ದ ನೀರಿಗೆ “ಸಮುದ್ರ” ಎಂದೂ ಹೆಸರಿಟ್ಟರು. ದೇವರು ಅದನ್ನು ಒಳ್ಳೆಯದೆಂದು ಕಂಡರು. \p \v 11 ಅನಂತರ ದೇವರು, “ಭೂಮಿಯು ಹುಲ್ಲನ್ನೂ ಬೀಜಬಿಡುವ ಗಿಡಗಳನ್ನೂ ಅದರದರ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳನ್ನೂ ಉತ್ಪತ್ತಿ ಮಾಡಲಿ,” ಎಂದು ಹೇಳಿದರು. ಅದು ಹಾಗೆಯೇ ಆಯಿತು. \v 12 ಭೂಮಿಯ ಮೇಲೆ ತಮ್ಮ ತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು ಮತ್ತು ಅದರದರ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳನ್ನು ಮೊಳೆಯಿಸಿದವು. ದೇವರು ಅದನ್ನು ಒಳ್ಳೆಯದೆಂದು ಕಂಡರು. \v 13 ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೂರನೆಯ ದಿನವಾಯಿತು. \b \p \v 14 ಅನಂತರ ದೇವರು, “ಹಗಲನ್ನು ರಾತ್ರಿಯಿಂದ ಪ್ರತ್ಯೇಕಿಸುವುದಕ್ಕೆ ಆಕಾಶಮಂಡಲದಲ್ಲಿ ಬೆಳಕುಗಳಿರಲಿ; ಅವು ಕಾಲಗಳನ್ನೂ ದಿನ ಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರಲಿ. \v 15 ಅವು ಭೂಮಿಗೆ ಬೆಳಕನ್ನು ಕೊಡುವುದಕ್ಕೆ ಆಕಾಶಮಂಡಲದಲ್ಲಿ ದೀಪಗಳಂತಿರಲಿ,” ಎಂದರು. ಅದು ಹಾಗೆಯೇ ಆಯಿತು. \v 16 ಹಗಲನ್ನಾಳುವುದಕ್ಕೆ ದೊಡ್ಡ ಬೆಳಕನ್ನು, ರಾತ್ರಿಯನ್ನಾಳುವುದಕ್ಕೆ ಚಿಕ್ಕ ಬೆಳಕನ್ನು ಎಂಬಂತೆ ದೇವರು ಎರಡು ದೊಡ್ಡ ಬೆಳಕುಗಳನ್ನು ಉಂಟುಮಾಡಿದರು. ದೇವರು ನಕ್ಷತ್ರಗಳನ್ನು ಸಹ ಉಂಟುಮಾಡಿದರು. \v 17 ದೇವರು ಆ ಬೆಳಕುಗಳನ್ನು ಆಕಾಶದಲ್ಲಿಟ್ಟು ಭೂಮಿಗೆ ಬೆಳಕನ್ನು ಕೊಡುವುದಕ್ಕೂ \v 18 ಹಗಲನ್ನು ಮತ್ತು ರಾತ್ರಿಯನ್ನು ಆಳುವುದಕ್ಕೂ ಬೆಳಕನ್ನು ಕತ್ತಲೆಯಿಂದ ಪ್ರತ್ಯೇಕಿಸುವುದಕ್ಕೂ ದೇವರು ಅವುಗಳನ್ನು ನೇಮಿಸಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು. \v 19 ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ನಾಲ್ಕನೆಯ ದಿನವಾಯಿತು. \b \p \v 20 ಆಮೇಲೆ ದೇವರು, “ನೀರಿನಲ್ಲಿ ಜೀವಜಂತುಗಳು ತುಂಬಿಕೊಳ್ಳಲಿ, ಭೂಮಿಯ ಮೇಲೆ ಆಕಾಶಮಂಡಲದಲ್ಲಿ ಪಕ್ಷಿಗಳು ಹಾರಾಡಲಿ,” ಎಂದರು. \v 21 ಹೀಗೆ ದೇವರು ದೊಡ್ಡ ಜಲಚರಗಳನ್ನು, ನೀರಿನಲ್ಲಿ ತುಂಬಿರುವ ಎಲ್ಲಾ ಚಲಿಸುವ ಜೀವ ಜಂತುಗಳನ್ನು, ರೆಕ್ಕೆಗಳುಳ್ಳ ಪ್ರತಿಯೊಂದು ಪಕ್ಷಿಯನ್ನು ಅವುಗಳ ಜಾತಿಗನುಸಾರವಾಗಿ ಸೃಷ್ಟಿಸಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು. \v 22 ದೇವರು ಅವುಗಳನ್ನು ಆಶೀರ್ವದಿಸಿ ಅವುಗಳಿಗೆ, “ನೀವು ಅಭಿವೃದ್ಧಿಯಾಗಿ ಹೆಚ್ಚಿರಿ, ಸಮುದ್ರಗಳಲ್ಲಿ ನೀರನ್ನು ತುಂಬಿರಿ, ಭೂಮಿಯ ಮೇಲೆ ಪಕ್ಷಿಗಳ ಸಂಖ್ಯೆ ಹೆಚ್ಚಾಗಲಿ,” ಎಂದರು. \v 23 ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಐದನೆಯ ದಿನವಾಯಿತು. \b \p \v 24 ಆಮೇಲೆ ದೇವರು, “ಭೂಮಿಯಿಂದ ಎಲ್ಲಾ ತರಹದ ಜೀವಿಗಳು ಉಂಟಾಗಲಿ: ಪಶುಗಳು, ನೆಲದ ಮೇಲೆ ಹರಿದಾಡುವ ಜೀವಿಗಳು, ಕಾಡುಮೃಗಗಳು, ತಮ್ಮ ತಮ್ಮ ಜಾತಿಗನುಸಾರವಾಗಿ ಉಂಟಾಗಲಿ,” ಎಂದರು. ಅದು ಹಾಗೆಯೇ ಆಯಿತು. \v 25 ಹೀಗೆ ದೇವರು ಎಲ್ಲ ತರದ ಕಾಡುಮೃಗಗಳನ್ನೂ ಪಶುಗಳನ್ನೂ ನೆಲದ ಮೇಲೆ ಹರಿದಾಡುವ ಜೀವಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು. \p \v 26 ತರುವಾಯ ದೇವರು, “ನಾವು ನಮ್ಮ ಸ್ವರೂಪದಲ್ಲಿ, ನಮ್ಮ ಹೋಲಿಕೆಯಲ್ಲಿ ಮನುಷ್ಯನನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಜೀವಿಗಳ ಮೇಲೆಯೂ ಆಳ್ವಿಕೆ ಮಾಡಲಿ,” ಎಂದರು. \q1 \v 27 ಹೀಗೆ ದೇವರು ಮನುಷ್ಯನನ್ನು ತಮ್ಮ ಸ್ವರೂಪದಲ್ಲಿ ಸೃಷ್ಟಿ ಮಾಡಿದರು. \q2 ದೇವರ ಸ್ವರೂಪದಲ್ಲಿಯೇ ಅವರನ್ನು ಸೃಷ್ಟಿ ಮಾಡಿದರು. \q2 ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿ ಮಾಡಿದರು. \p \v 28 ದೇವರು ಅವರನ್ನು ಆಶೀರ್ವದಿಸಿ, “ನೀವು ಸಂತಾನವುಳ್ಳವರಾಗಿ, ಸಂಖ್ಯೆಯಲ್ಲಿ ಹೆಚ್ಚಿರಿ, ಭೂಮಿಯನ್ನು ತುಂಬಿಸಿ ಅದನ್ನು ಆಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ನೆಲದ ಮೇಲೆ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ಆಳ್ವಿಕೆ ನಡೆಸಿರಿ,” ಎಂದು ಅವರಿಗೆ ಹೇಳಿದರು. \p \v 29 ದೇವರು, “ಇಗೋ, ಭೂಮಿಯ ಮೇಲಿರುವ ಬೀಜಬಿಡುವ ಸಕಲ ಸಸ್ಯಗಳನ್ನೂ ಬೀಜಬಿಡುವ ಸಕಲ ಹಣ್ಣಿನ ಮರಗಳನ್ನೂ ನಿಮಗೆ ಕೊಟ್ಟಿದ್ದೇನೆ. ಅವು ನಿಮಗೆ ಆಹಾರಕ್ಕಾಗಿರುವುವು. \v 30 ಭೂಮಿಯಲ್ಲಿರುವ ಎಲ್ಲಾ ಜೀವಿಗಳಿಗೂ ಆಕಾಶದ ಪಕ್ಷಿಗಳಿಗೂ ನೆಲದ ಮೇಲೆ ಹರಿದಾಡುವ ಜೀವಿಗಳಿಗೂ ಉಸಿರನ್ನು ಹೊಂದಿರುವ ಪ್ರತಿಯೊಂದು ಜೀವಿಗಳಿಗೆ ಹಸಿರಾದ ಸಸ್ಯಗಳನ್ನೆಲ್ಲಾ ನಾನು ಆಹಾರವಾಗಿ ಕೊಟ್ಟಿದ್ದೇನೆ,” ಎಂದರು. ಅದು ಹಾಗೆಯೇ ಆಯಿತು. \p \v 31 ದೇವರು ತಾವು ಉಂಟು ಮಾಡಿದ್ದನ್ನೆಲ್ಲಾ ನೋಡಲು, ಅವೆಲ್ಲವೂ ಬಹಳ ಒಳ್ಳೆಯದಾಗಿದ್ದವು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಆರನೆಯ ದಿನವಾಯಿತು. \b \c 2 \p \v 1 ಹೀಗೆ ಭೂಮ್ಯಾಕಾಶಗಳೂ ಅವುಗಳಲ್ಲಿರುವ ಸಮಸ್ತವೂ ಸಂಪೂರ್ಣವಾಗಿ ನಿರ್ಮಿತವಾದವು. \b \p \v 2 ದೇವರು ತಮ್ಮ ಕಾರ್ಯಗಳನ್ನೆಲ್ಲಾ ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು. \v 3 ಅನಂತರ ದೇವರು ಏಳನೆಯ ದಿನವನ್ನು ಆಶೀರ್ವದಿಸಿ, ಅದನ್ನು ಪವಿತ್ರ ದಿನವನ್ನಾಗಿ ಮಾಡಿದರು. ಏಕೆಂದರೆ ಆ ದಿನದಲ್ಲಿ ದೇವರು ಸೃಷ್ಟಿಸಿದ ತಮ್ಮ ಎಲ್ಲಾ ಕೆಲಸಗಳಿಂದ ವಿಶ್ರಮಿಸಿಕೊಂಡರು. \s1 ಆದಾಮ ಮತ್ತು ಹವ್ವ \p \v 4 ಯೆಹೋವ ದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದರು. ಇದೇ ಭೂಮ್ಯಾಕಾಶಗಳ ನಿರ್ಮಾಣ ಚರಿತ್ರೆ. \b \p \v 5 ಭೂಮಿಯಲ್ಲಿ ಯಾವ ಗಿಡವೂ ಇನ್ನೂ ಬೆಳೆದಿರಲಿಲ್ಲ, ಯಾವ ಪಲ್ಯವೂ ಇನ್ನೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ. ಆಗ ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ. \v 6 ಆದರೆ ಭೂಮಿಯಿಂದ ಮಂಜು ಏರಿಬಂದು ನೆಲವನ್ನೆಲ್ಲಾ ತೋಯಿಸಿತು. \v 7 ಹೀಗಿರಲು ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ, ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು ಆಗ ಅವನು ಜೀವಿಸುವ ವ್ಯಕ್ತಿಯಾದನು. \p \v 8 ಯೆಹೋವ ದೇವರು ಪೂರ್ವದಿಕ್ಕಿಗಿರುವ ಏದೆನ್ ಸೀಮೆಯಲ್ಲಿ ತೋಟವನ್ನು ಮಾಡಿ, ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು. \v 9 ಯೆಹೋವ ದೇವರು ನೋಟಕ್ಕೆ ರಮ್ಯವೂ ಊಟಕ್ಕೆ ಒಳ್ಳೆಯವೂ ಆದ ಎಲ್ಲಾ ಮರಗಳನ್ನೂ ಭೂಮಿಯಲ್ಲಿ ಬೆಳೆಯುವಂತೆ ಮಾಡಿದರು. ತೋಟದ ಮಧ್ಯದಲ್ಲಿ ಜೀವದ ಮರವನ್ನೂ ಒಳ್ಳೆಯದರ ಮತ್ತು ಕೆಟ್ಟದ್ದರ ತಿಳುವಳಿಕೆಯ ಮರವನ್ನೂ ಬೆಳೆಯುವಂತೆ ಮಾಡಿದರು. \p \v 10 ಏದೆನ್ ಸೀಮೆಯಿಂದ ಒಂದು ನದಿ ಹರಿದು, ತೋಟವನ್ನು ತೋಯಿಸುತ್ತಿತ್ತು. ಅದು ಅಲ್ಲಿಂದ ಹರಿದು ವಿಭಾಗವಾಗಿ, ನಾಲ್ಕು ಉಪನದಿಗಳಾದವು. \v 11 ಮೊದಲನೆಯದರ ಹೆಸರು ಪೀಶೋನ್; ಅದು ಬಂಗಾರವಿರುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತಿತ್ತು. \v 12 ಆ ದೇಶದ ಬಂಗಾರವು ಉತ್ತಮವಾಗಿತ್ತು. ಅಲ್ಲಿ ಬದೋಲಖ ಧೂಪ ಮತ್ತು ಗೋಮೇಧಿಕ ರತ್ನ ಇದ್ದವು. \v 13 ಎರಡನೆಯ ನದಿಯ ಹೆಸರು ಗೀಹೋನ್; ಅದು ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತಿತ್ತು. \v 14 ಮೂರನೆಯ ನದಿಯ ಹೆಸರು ಟೈಗ್ರಿಸ್; ಅದು ಅಸ್ಸೀರಿಯಾ ದೇಶದ ಪೂರ್ವಕ್ಕೆ ಹರಿಯುತ್ತಿತ್ತು. ನಾಲ್ಕನೆಯ ನದಿಯು ಯೂಫ್ರೇಟೀಸ್. \p \v 15 ಯೆಹೋವ ದೇವರು ಮನುಷ್ಯನನ್ನು ಕರೆದುಕೊಂಡು ಹೋಗಿ, ಏದೆನ್ ತೋಟದಲ್ಲಿ ಕೆಲಸ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಇಟ್ಟರು. \v 16 ಇದಲ್ಲದೆ ಯೆಹೋವ ದೇವರು ಮನುಷ್ಯನಿಗೆ, “ನೀನು ತೋಟದ ಎಲ್ಲಾ ಮರಗಳ ಹಣ್ಣುಗಳನ್ನು ನಿನ್ನ ಇಷ್ಟಾನುಸಾರವಾಗಿ ತಿನ್ನಬಹುದು. \v 17 ಆದರೆ ಒಳ್ಳೆಯದರ, ಕೆಟ್ಟದ್ದರ ತಿಳುವಳಿಕೆಯ ಮರದ ಹಣ್ಣನ್ನು ನೀನು ತಿನ್ನಬಾರದು. ಏಕೆಂದರೆ, ನೀನು ಅದನ್ನು ತಿಂದ ದಿನವೇ ಸಾಯುವಿ,” ಎಂದು ಹೇಳಿದರು. \p \v 18 ಅನಂತರ ಯೆಹೋವ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಬೀಳುವ ಸಹಕಾರಿಣಿಯನ್ನು ಉಂಟುಮಾಡುವೆನು,” ಎಂದರು. \p \v 19 ಯೆಹೋವ ದೇವರು ಭೂಮಿಯಲ್ಲಿರುವ ಎಲ್ಲಾ ಕಾಡುಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿದ ಮೇಲೆ, ಅವುಗಳಿಗೆ ಮನುಷ್ಯನು ಏನು ಹೆಸರಿಡುವನೋ ಎಂದು ನೋಡುವುದಕ್ಕೆ, ಅವುಗಳನ್ನು ಅವನ ಬಳಿಗೆ ತಂದರು. ಒಂದೊಂದು ಜೀವಿಗೂ ಮನುಷ್ಯನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು. \v 20 ಹೀಗೆ ಮನುಷ್ಯನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಹೆಸರಿಟ್ಟನು. \p ಆದರೆ ಆದಾಮನಿಗೆ\f + \fr 2:20 \fr*\fq ಆದಾಮ \fq*\ft ಅಂದರೆ \ft*\fqa ಮನುಷ್ಯ\fqa*\f* ಸರಿಬೀಳುವ ಸಹಕಾರಿಣಿಯು ಕಾಣಿಸಲಿಲ್ಲ. \v 21 ಆದಕಾರಣ ಯೆಹೋವ ದೇವರು ಮನುಷ್ಯನಿಗೆ ಗಾಢನಿದ್ರೆ ಬರಮಾಡಿದರು. ಅವನು ನಿದ್ರಿಸುತ್ತಿರುವಾಗ, ಅವರು ಅವನ ಪಕ್ಕೆಯನ್ನು ತೆಗೆದುಕೊಂಡು, ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು. \v 22 ಬಳಿಕ ಯೆಹೋವ ದೇವರು ಮನುಷ್ಯನಿಂದ ತೆಗೆದಿದ್ದ ಪಕ್ಕೆಯಿಂದ ಒಬ್ಬ ಸ್ತ್ರೀಯನ್ನು ಉಂಟುಮಾಡಿ, ಆಕೆಯನ್ನು ಆ ಮನುಷ್ಯನ ಬಳಿಗೆ ತಂದರು. \p \v 23 ಆಗ ಮನುಷ್ಯನು ಹೀಗೆ ಹೇಳಿದನು: \q1 “ಇದು ನನ್ನ ಎಲುಬಿನಿಂದಾದ ಎಲುಬು \q2 ಮತ್ತು ನನ್ನ ಮಾಂಸದಿಂದಾದ ಮಾಂಸವಾಗಿದೆ. \q1 ಈಕೆ ನರನಿಂದ ತೆಗೆದಿರುವುದರಿಂದ, \q2 ಈಕೆ, ‘ನಾರಿ’ ಎಂದು ಎನಿಸಿಕೊಳ್ಳುವಳು.” \m \v 24 ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರೂ ಒಂದೇ ಶರೀರವಾಗಿರುವರು. \p \v 25 ಆದಾಮನೂ ಅವನ ಹೆಂಡತಿಯೂ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ. \c 3 \s1 ಮನುಷ್ಯನ ಪತನ \p \v 1 ಯೆಹೋವ ದೇವರು ಸೃಷ್ಟಿಸಿದ ಅಡವಿಯ ಎಲ್ಲಾ ಕಾಡುಮೃಗಗಳಿಗಿಂತ ಸರ್ಪವು ಬಹು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಗೆ, “ನೀವು ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ?” ಎಂದು ಕೇಳಿತು. \p \v 2 ಆಗ ಸ್ತ್ರೀಯು ಸರ್ಪಕ್ಕೆ, “ತೋಟದ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು. \v 3 ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಹಣ್ಣಿನ ವಿಷಯವಾಗಿ, ‘ನೀವು ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸತ್ತು ಹೋಗುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದಳು. \p \v 4 ಸರ್ಪವು ಸ್ತ್ರೀಗೆ, “ನೀವು ನಿಶ್ಚಯವಾಗಿ ಸಾಯುವುದಿಲ್ಲ. \v 5 ನೀವು ಇದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯುವುವು, ನೀವು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿತವರಾಗಿ ದೇವರ ಹಾಗೆ ಇರುವಿರಿ. ಇದು ದೇವರಿಗೆ ತಿಳಿದಿದೆ,” ಎಂದು ಹೇಳಿತು. \p \v 6 ಆಗ ಸ್ತ್ರೀಯು, ಆ ಮರದ ಹಣ್ಣು ಆಹಾರಕ್ಕೆ ಒಳ್ಳೆಯದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು, ಆ ಹಣ್ಣನ್ನು ತೆಗೆದುಕೊಂಡು ತಿಂದಳು. ತನ್ನ ಸಂಗಡ ಇದ್ದ ಗಂಡನಿಗೂ ಕೊಟ್ಟಳು, ಅವನೂ ತಿಂದನು. \v 7 ಆಗ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು, ಅವರು ಅಂಜೂರದ ಎಲೆಗಳನ್ನು ತೆಗೆದುಕೊಂಡು ತಮಗೆ ತಾವೇ ಉಡುಪುಗಳನ್ನು ಮಾಡಿಕೊಂಡರು. \p \v 8 ತರುವಾಯ ಯೆಹೋವ ದೇವರು, ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ, ಆ ಸ್ತ್ರೀ ಪುರುಷರು ಅವರ ಸಪ್ಪಳವನ್ನು ಕೇಳಿ, ಅವರಿಗೆ ಕಾಣಿಸಿಕೊಳ್ಳಬಾರದೆಂದು ತೋಟದ ಮರಗಳ ಮಧ್ಯದಲ್ಲಿ ಅಡಗಿಕೊಂಡರು. \v 9 ಆಗ ಯೆಹೋವ ದೇವರು ಮನುಷ್ಯನನ್ನು ಕರೆದು ಅವನಿಗೆ, “ನೀನು ಎಲ್ಲಿದ್ದೀ?” ಎಂದರು. \p \v 10 ಅದಕ್ಕೆ ಅವನು, “ನಿನ್ನ ಶಬ್ದವನ್ನು ನಾನು ತೋಟದಲ್ಲಿ ಕೇಳಿದೆ. ನಾನು ಬೆತ್ತಲೆಯಾಗಿರುವುದರಿಂದ ಭಯಪಟ್ಟು ಅಡಗಿಕೊಂಡೆನು,” ಎಂದನು. \p \v 11 ಅದಕ್ಕೆ ದೇವರು, “ನೀನು ಬೆತ್ತಲೆಯಾಗಿದ್ದೀ ಎಂದು ನಿನಗೆ ತಿಳಿಸಿದವರು ಯಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದೀಯೋ?” ಎಂದು ಕೇಳಿದರು. \p \v 12 ಅದಕ್ಕೆ ಮನುಷ್ಯನು, “ನೀನು ನನ್ನ ಸಂಗಡ ಇರಿಸಿದ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು. ನಾನು ತಿಂದೆನು,” ಎಂದು ಹೇಳಿದನು. \p \v 13 ಯೆಹೋವ ದೇವರು ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, \p ಅದಕ್ಕೆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು. ನಾನು ತಿಂದೆನು,” ಎಂದು ಉತ್ತರಕೊಟ್ಟಳು. \p \v 14 ಆಗ ಯೆಹೋವ ದೇವರು ಸರ್ಪಕ್ಕೆ ಹೀಗೆ ಹೇಳಿದರು, “ನೀನು ಇದನ್ನು ಮಾಡಿದ ಕಾರಣ, \q1 “ಎಲ್ಲಾ ಪಶುಗಳಲ್ಲಿಯೂ \q2 ಎಲ್ಲಾ ಕಾಡುಮೃಗಗಳಲ್ಲಿಯೂ ನೀನು ಬಹು ಶಾಪಗ್ರಸ್ತನಾದೆ. \q1 ಇಂದಿನಿಂದ ನಿನ್ನ ಜೀವನ ಪೂರ್ತಿ \q2 ಹೊಟ್ಟೆಯಿಂದ ಹರಿದಾಡಿ, \q2 ಮಣ್ಣನ್ನು ತಿನ್ನುವೆ. \q1 \v 15 ನಾನು ನಿನಗೂ ಸ್ತ್ರೀಗೂ \q2 ನಿಮ್ಮ ಸಂತಾನಕ್ಕೂ ಆಕೆಯ ಸಂತಾನಕ್ಕೂ \q2 ವೈರತ್ವವನ್ನು ಇಡುವೆನು. \q1 ಆತನು ನಿನ್ನ ತಲೆಯನ್ನು ಜಜ್ಜುವನು \q2 ಮತ್ತು ನೀನು ಆತನ ಹಿಮ್ಮಡಿಯನ್ನು ಕಚ್ಚುವಿ.” \p \v 16 ಬಳಿಕ ದೇವರು ಸ್ತ್ರೀಗೆ ಹೀಗೆ ಹೇಳಿದರು, \q1 “ನಾನು ನಿನ್ನ ಗರ್ಭ ವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು. \q2 ನೀನು ನೋವಿನಿಂದ ಮಕ್ಕಳನ್ನು ಹೆರುವಿ. \q1 ನಿನ್ನ ಗಂಡನ ಮೇಲೆ ನಿನ್ನ ಬಯಕೆ ಇರುವುದು. \q2 ಅವನು ನಿನ್ನನ್ನು ಆಳುವನು.” \p \v 17 ಅನಂತರ ದೇವರು ಆದಾಮನಿಗೆ ಹೀಗೆ ಹೇಳಿದರು, “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನಿನ್ನ ಹೆಂಡತಿಯ ಮಾತು ಕೇಳಿ ತಿಂದ ಕಾರಣ, \q1 “ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. \q2 ನಿನ್ನ ಜೀವಮಾನವೆಲ್ಲಾ ಕಷ್ಟಪಟ್ಟು ದುಡಿದು, \q2 ಅದರ ಹುಟ್ಟುವಳಿಯನ್ನು ಉಣ್ಣುವೆ. \q1 \v 18 ಭೂಮಿಯಲ್ಲಿ ಮುಳ್ಳುಗಿಡಗಳೂ ಕಳ್ಳಿಗಳೂ ಬೆಳೆಯುವುವು. \q2 ನೀನು ಹೊಲದ ಬೆಳೆಯನ್ನು ಉಣ್ಣುವೆ. \q1 \v 19 ನೀನು ಪುನಃ ಮಣ್ಣಿಗೆ ಸೇರುವ ತನಕ, \q2 ಬೆವರಿಡುತ್ತಾ ಆಹಾರವನ್ನು ಉಣ್ಣುವೆ. \q1 ನೀನು ಮಣ್ಣಿನಿಂದ ತೆಗೆದವನಾಗಿರುವುದರಿಂದ ನೀನು ಮಣ್ಣೇ. \q1 ನೀನು ಪುನಃ ಮಣ್ಣಿಗೆ ಸೇರತಕ್ಕವನು.” \p \v 20 ಆದಾಮನು\f + \fr 3:20 \fr*\ft ಅಥವಾ \ft*\fqa ಮನುಷ್ಯ\fqa*\f* ತನ್ನ ಹೆಂಡತಿಯ ಹೆಸರನ್ನು ಹವ್ವ\f + \fr 3:20 \fr*\fq ಹವ್ವ \fq*\ft ಬಹುಶಃ ಇದರ ಅರ್ಥ \ft*\fqa ಬದುಕುವುದು\fqa*\f* ಎಂದು ಕರೆದನು. ಏಕೆಂದರೆ ಆಕೆಯೇ ಬದುಕಿದವರಿಗೆಲ್ಲಾ ತಾಯಿಯಾಗಿದ್ದಾಳೆ. \p \v 21 ಯೆಹೋವ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದರು. \v 22 ಯೆಹೋವ ದೇವರು, “ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿದು, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು,” ಎಂದರು. \v 23 ಆದ್ದರಿಂದ ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡುವುದಕ್ಕೆ ಯೆಹೋವ ದೇವರು ಏದೆನ್ ತೋಟದೊಳಗಿಂದ ಅವನನ್ನು ಹೊರಗೆ ಕಳುಹಿಸಿಬಿಟ್ಟರು. \v 24 ಹೀಗೆ ಅವರು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷದ ದಾರಿಯನ್ನು ಕಾಯುವುದಕ್ಕೆ ಏದೆನ್ ತೋಟದ ಪೂರ್ವದಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಖಡ್ಗವನ್ನೂ ಇರಿಸಿದರು. \c 4 \s1 ಕಾಯಿನ ಮತ್ತು ಹೇಬೆಲ \p \v 1 ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಲು, ಆಕೆಯು ಗರ್ಭಿಣಿಯಾಗಿ, ಕಾಯಿನನನ್ನು ಹೆತ್ತು, “ನಾನು ಯೆಹೋವ ದೇವರ ಅನುಗ್ರಹದಿಂದ ಗಂಡು ಮಗುವನ್ನು ಪಡೆದಿದ್ದೇನೆ,” ಎಂದು ಹೇಳಿದಳು. \v 2 ಅನಂತರ ಆಕೆಯು ಅವನ ತಮ್ಮನಾದ ಹೇಬೆಲನನ್ನು ಹೆತ್ತಳು. \p ಹೇಬೆಲನು ಕುರಿ ಕಾಯುವವನಾದನು ಮತ್ತು ಕಾಯಿನನು ವ್ಯವಸಾಯ ಮಾಡುವವನಾದನು. \v 3 ಸ್ವಲ್ಪ ಕಾಲದ ತರುವಾಯ, ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು, ಯೆಹೋವ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದನು. \v 4 ಹೇಬೆಲನು ಸಹ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನೂ ಅವುಗಳ ಕೊಬ್ಬನ್ನೂ ತಂದನು. ಯೆಹೋವ ದೇವರು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು. \v 5 ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ದೇವರು ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು. ಅವನ ಮುಖವು ಬಾಡಿತು. \p \v 6 ಆಗ ಯೆಹೋವ ದೇವರು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? ಏಕೆ ನಿನ್ನ ಮುಖವು ಬಾಡಿದೆ? \v 7 ನೀನು ಒಳ್ಳೆಯದನ್ನು ಮಾಡಿದರೆ, ನೀನು ಸ್ವೀಕಾರವಾಗುತ್ತಿದ್ದೆ ಅಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ, ಬಾಗಿಲಲ್ಲಿ ಪಾಪವು ಹೊಂಚಿಕೊಂಡಿರುವುದು ಮತ್ತು ಅದು ನಿನ್ನನ್ನು ನುಂಗಲು ಬಯಸುತ್ತದೆ. ಆದರೂ ನೀನು ಅದರ ಮೇಲೆ ಅಧಿಕಾರ ಮಾಡಬೇಕು,” ಎಂದು ಹೇಳಿದರು. \p \v 8 ಅನಂತರ ಕಾಯಿನನು, “ಅಡವಿಗೆ ಹೋಗೋಣ ಬಾ,” ಎಂದು ತನ್ನ ತಮ್ಮನಿಗೆ ಹೇಳಿದನು. ಅವರು ಅಲ್ಲಿ ಬಂದಾಗ ಕಾಯಿನನು ತನ್ನ ತಮ್ಮ ಹೇಬೆಲನ ಮೇಲೆ ದಾಳಿಮಾಡಿ, ಅವನನ್ನು ಕೊಂದುಹಾಕಿದನು. \p \v 9 ಯೆಹೋವ ದೇವರು ಕಾಯಿನನನ್ನು, “ನಿನ್ನ ತಮ್ಮ ಹೇಬೆಲನು ಎಲ್ಲಿ?” ಎಂದು ಕೇಳಲು, \p ಅವನು, “ನಾನರಿಯೆ. ನಾನು ನನ್ನ ತಮ್ಮನನ್ನು ಕಾಯುವವನೋ?” ಎಂದು ಉತ್ತರಕೊಟ್ಟನು. \p \v 10 ಅದಕ್ಕೆ ಯೆಹೋವ ದೇವರು, “ನೀನು ಏನು ಮಾಡಿದೆ? ನಿನ್ನ ತಮ್ಮನ ರಕ್ತವು ಭೂಮಿಯಿಂದ ನನ್ನನ್ನು ಕೂಗುತ್ತಿದೆ. \v 11 ನೀನು ಈಗ ಶಾಪಗ್ರಸ್ತನಾಗಿದ್ದಿ. ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಸ್ವೀಕರಿಸಲು ಬಾಯಿತೆರೆದಿರುವ ಭೂಮಿಯಿಂದ ತಿರಸ್ಕಾರವಾಗಿದ್ದಿ. \v 12 ನೀನು ಭೂಮಿಯನ್ನು ವ್ಯವಸಾಯ ಮಾಡಿದರೂ ಅದು ಇನ್ನು ಮುಂದೆ ಫಲಿಸುವುದಿಲ್ಲ. ನೀನು ಭೂಲೋಕದಲ್ಲಿ ಅಲೆಮಾರಿಯಾಗಿ ತಿರುಗುವವನು ಆಗಿರುವೆ,” ಎಂದರು. \p \v 13 ಆಗ ಕಾಯಿನನು ಯೆಹೋವ ದೇವರಿಗೆ, “ನನ್ನ ಶಿಕ್ಷೆಯು ತಾಳಲಾರದಷ್ಟು ದೊಡ್ಡದಾಗಿದೆ. \v 14 ಇಗೋ, ನೀವು ಈ ದಿನ ನನ್ನನ್ನು ಸ್ವದೇಶದಿಂದ ಓಡಿಸುತ್ತಿದ್ದೀರಲ್ಲಾ! ನಿಮ್ಮ ಸಮ್ಮುಖದಿಂದ ನಾನು ಮರೆಯಾಗಿರಬೇಕಾಯಿತು. ಭೂಮಿಯಲ್ಲಿ ಅಲೆಮಾರಿಯಾಗಿರಬೇಕು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು,” ಎಂದನು. \p \v 15 ಆದ್ದರಿಂದ ಯೆಹೋವ ದೇವರು ಅವನಿಗೆ, “ಹಾಗಲ್ಲ, ಕಾಯಿನನನ್ನು ಕೊಲ್ಲುವವನ ಮೇಲೆ ಏಳರಷ್ಟು ಪ್ರತೀಕಾರವಿರುವುದು,” ಎಂದು ಹೇಳಿದರು. ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಯೆಹೋವ ದೇವರು ಅವನ ಮೇಲೆ ಒಂದು ಗುರುತನ್ನು ಇಟ್ಟರು. \v 16 ಆಗ ಕಾಯಿನನು ಯೆಹೋವ ದೇವರ ಸನ್ನಿಧಿಯಿಂದ ಹೊರಟುಹೋಗಿ, ಏದೆನ್ ಸೀಮೆಗೆ ಪೂರ್ವದಲ್ಲಿದ್ದ ನೋದು\f + \fr 4:16 \fr*\ft ಹೀಬ್ರೂ ಭಾಷೆಯಲ್ಲಿ \ft*\fq ನೋದು \fq*\ft ಎಂದರೆ \ft*\fqa ಅಲೆದಾಟ\fqa*\ft ; \+xt ನೋಡಿರಿ ವಾಕ್ಯ 12|link-href="GEN 4:12"\+xt*\ft*\f* ಎಂಬ ದೇಶದಲ್ಲಿ ವಾಸಿಸಿದನು. \p \v 17 ಕಾಯಿನನು ತನ್ನ ಹೆಂಡತಿಯನ್ನು ಕೂಡಲು, ಅವಳು ಗರ್ಭಿಣಿಯಾಗಿ ಹನೋಕನನ್ನು ಪಡೆದಳು. ಇದಲ್ಲದೆ ಕಾಯಿನನು ಒಂದು ಊರನ್ನು ಕಟ್ಟಿ, ಅದಕ್ಕೆ ಹನೋಕ್ ಎಂದು ತನ್ನ ಮಗನ ಹೆಸರನ್ನಿಟ್ಟನು. \v 18 ಹನೋಕನಿಂದ ಈರಾದನು ಹುಟ್ಟಿದನು. ಈರಾದನಿಂದ ಮೆಹೂಯಾಯೇಲನು ಹುಟ್ಟಿದನು. ಮೆಹೂಯಾಯೇಲನಿಂದ ಮೆತೂಷಾಯೇಲನು ಹುಟ್ಟಿದನು. ಮೆತೂಷಾಯೇಲನಿಂದ ಲೆಮೆಕನು ಹುಟ್ಟಿದನು. \p \v 19 ಲೆಮೆಕನು ಇಬ್ಬರು ಸ್ತ್ರೀಯರನ್ನು ಮದುವೆಯಾದನು. ಒಬ್ಬಳ ಹೆಸರು ಆದಾ ಮತ್ತೊಬ್ಬಳ ಹೆಸರು ಚಿಲ್ಲಾ. \v 20 ಆದಾಳು ಯಾಬಾಲನನ್ನು ಹೆತ್ತಳು. ಪಶುಗಳನ್ನು ಸಾಕುತ್ತಾ, ಗುಡಾರಗಳಲ್ಲಿ ವಾಸಿಸುವವರೆಲ್ಲರ ಮೂಲಪುರುಷನು ಇವನೇ. \v 21 ಇವನ ತಮ್ಮನ ಹೆಸರು ಯೂಬಾಲನು. ಇವನು ಕಿನ್ನರಿ ಕೊಳಲುಗಳನ್ನು ನುಡಿಸುವವರ ಮೂಲಪುರುಷನು. \v 22 ಚಿಲ್ಲಾ ತೂಬಲ್ ಕಾಯಿನನನ್ನು ಪಡೆದಳು. ಅವನು ಕಂಚು ಮತ್ತು ಕಬ್ಬಿಣದ ಆಯುಧಗಳನ್ನು ಮಾಡುವವನಾಗಿದ್ದನು.\f + \fr 4:22 \fr*\ft ಅಥವಾ \ft*\fqa ಎಲ್ಲಾ ಕುಲುಮೆ ಕೆಲಸದವರೆಲ್ಲರಿಗೆ ಶಿಕ್ಷಣ ಕೊಡುವವನಾಗಿದ್ದನು\fqa*\f* ತೂಬಲ್ ಕಾಯಿನನ ತಂಗಿಯ ಹೆಸರು ನಯಮಾ. \p \v 23 ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು: \q1 “ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿರಿ. \q2 ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಗಮನಿಸಿರಿ. \q1 ನನಗೆ ಗಾಯಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು. \q2 ನನ್ನನ್ನು ಹೊಡೆದ ಯುವಕನನ್ನು ಹತ ಮಾಡಿದೆನು. \q1 \v 24 ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತೀಕಾರವಾದರೆ, \q2 ಲೆಮೆಕನನ್ನು ಹೊಡೆಯುವವನಿಗೆ, ಎಪ್ಪತ್ತೇಳರಷ್ಟಾಗುವುದು.” \p \v 25 ಆದಾಮನು ತಿರುಗಿ ತನ್ನ ಹೆಂಡತಿಯನ್ನು ಕೂಡಲು, ಆಕೆ ಗಂಡು ಮಗುವನ್ನು ಹೆತ್ತು, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ, ದೇವರು ನನಗೆ ಬೇರೆ ಸಂತಾನವನ್ನು ನೇಮಿಸಿದನು,” ಎಂದು ಆ ಮಗುವಿಗೆ, ಸೇತ್\f + \fr 4:25 \fr*\fq ಸೇತ್ \fq*\ft ಬಹುಶಃ ಇದರ ಅರ್ಥ \ft*\fqa ಮಂಜೂರು\fqa*\f* ಎಂದು ಹೆಸರಿಟ್ಟಳು. \v 26 ಸೇತನಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ ಎನೋಷ್ ಎಂದು ಹೆಸರಿಟ್ಟನು. \p ಆ ಕಾಲದಲ್ಲಿ ಜನರು, ಯೆಹೋವ ಎಂಬ ಹೆಸರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದರು. \c 5 \s1 ಆದಾಮನಿಂದ ನೋಹನವರೆಗೆ \p \v 1 ಆದಾಮನ ವಂಶದವರ ದಾಖಲೆಯಿದು: \b \p ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ಅವನನ್ನು ತಮ್ಮನ್ನೇ ಹೋಲುವಂತೆ ಉಂಟುಮಾಡಿದರು. \v 2 ದೇವರು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿ ಮಾಡಿದರು. ಅದೇ ದಿನದಲ್ಲಿ ಅವರನ್ನು ಆಶೀರ್ವದಿಸಿ, ಅವರಿಗೆ “ಮನುಷ್ಯ”\f + \fr 5:2 \fr*\ft ಹೀಬ್ರೂ ಭಾಷೆಯಲ್ಲಿ \ft*\fqa ಆದಾಮ\fqa*\f* ಎಂದು ಕರೆದರು. \b \li1 \v 3 ಆದಾಮನು ನೂರಮೂವತ್ತು ವರುಷದವನಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ, “ಸೇತ್” ಎಂದು ಹೆಸರಿಟ್ಟನು. \v 4 ಸೇತನು ಹುಟ್ಟಿದ ಮೇಲೆ ಆದಾಮನು ಗಂಡು ಹೆಣ್ಣು ಮಕ್ಕಳನ್ನು ಪಡೆದು, ಎಂಟುನೂರು ವರುಷ ಬದುಕಿದನು. \v 5 ಆದಾಮನು ಒಟ್ಟು ಒಂಬೈನೂರ ಮೂವತ್ತು ವರುಷ ಬದುಕಿ ಸತ್ತನು. \li1 \v 6 ಸೇತನು ನೂರ ಐದು ವರುಷದವನಾದಾಗ ಎನೋಷನನ್ನು ಪಡೆದನು. \v 7 ಎನೋಷನು ಹುಟ್ಟಿದ ಮೇಲೆ ಸೇತನು ಎಂಟುನೂರ ಏಳು ವರುಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳು ಇದ್ದರು. \v 8 ಸೇತನು ಒಟ್ಟು ಒಂಬೈನೂರ ಹನ್ನೆರಡು ವರ್ಷ ಬದುಕಿ ಸತ್ತನು. \li1 \v 9 ಎನೋಷನು ತೊಂಬತ್ತು ವರ್ಷದವನಾದಾಗ ಕೇನಾನನನ್ನು ಪಡೆದನು. \v 10 ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರುಷ ಬದುಕಿದನು. \v 11 ಅವನು ಒಟ್ಟು ಒಂಬೈನೂರ ಐದು ವರುಷ ಬದುಕಿ ಸತ್ತನು. \li1 \v 12 ಕೇನಾನನು ಎಪ್ಪತ್ತು ವರುಷದವನಾದಾಗ, ಅವನಿಂದ ಮಹಲಲೇಲನು ಹುಟ್ಟಿದನು. \v 13 ಕೇನಾನನು ಮಹಲಲೇಲನು ಹುಟ್ಟಿದ ಮೇಲೆ ಎಂಟುನೂರ ನಲವತ್ತು ವರ್ಷ ಬದುಕಿ, ಗಂಡು ಹೆಣ್ಣು ಮಕ್ಕಳನ್ನು ಪಡೆದನು. \v 14 ಕೇನಾನನು ಒಟ್ಟು ಒಂಬೈನೂರ ಹತ್ತು ವರ್ಷ ಬದುಕಿ ಸತ್ತನು. \li1 \v 15 ಮಹಲಲೇಲನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಯೆರೆದನು ಹುಟ್ಟಿದನು. \v 16 ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಎಂಟುನೂರ ಮೂವತ್ತು ವರ್ಷ ಬದುಕಿ ಗಂಡು, ಹೆಣ್ಣು ಮಕ್ಕಳನ್ನು ಪಡೆದನು. \v 17 ಮಹಲಲೇಲನು ಎಂಟುನೂರ ತೊಂಬತ್ತೈದು ವರ್ಷ ಬದುಕಿ ತರುವಾಯ ಸತ್ತನು. \li1 \v 18 ಯೆರೆದನು ನೂರ ಅರವತ್ತೆರಡು ವರುಷದವನಾಗಿದ್ದಾಗ, ಅವನಿಂದ ಹನೋಕನು ಹುಟ್ಟಿದನು. \v 19 ಹನೋಕನು ಹುಟ್ಟಿದ ಮೇಲೆ, ಯೆರೆದನು ಎಂಟುನೂರು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು. \v 20 ಯೆರೆದನು ಒಟ್ಟು ಒಂಬೈನೂರ ಅರವತ್ತೆರಡು ವರ್ಷ ಬದುಕಿ, ತರುವಾಯ ಸತ್ತನು. \li1 \v 21 ಹನೋಕನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಮೆತೂಷೆಲಹನು ಹುಟ್ಟಿದನು. \v 22 ಮೆತೂಷೆಲಹನು ಹುಟ್ಟಿದ ತರುವಾಯ, ಹನೋಕನು ಮುನ್ನೂರು ವರ್ಷ ದೇವರೊಂದಿಗೆ ನಡೆದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು. \v 23 ಹನೋಕನು ಒಟ್ಟು ಮುನ್ನೂರ ಅರವತ್ತೈದು ವರ್ಷ ಬದುಕಿದನು. \v 24 ದೇವರೊಂದಿಗೆ ನಂಬಿಗಸ್ತನಾಗಿ ನಡೆಯುತ್ತಿದ್ದ ಹನೋಕನನ್ನು ದೇವರು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ. \li1 \v 25 ಮೆತೂಷೆಲಹನು ನೂರ ಎಂಬತ್ತೇಳು ವರ್ಷದವನಾಗಿದ್ದಾಗ, ಅವನಿಂದ ಲೆಮೆಕನು ಹುಟ್ಟಿದನು. \v 26 ಲೆಮೆಕನು ಹುಟ್ಟಿದ ಮೇಲೆ, ಮೆತೂಷೆಲಹನು ಏಳುನೂರ ಎಂಬತ್ತೆರಡು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು. \v 27 ಮೆತೂಷೆಲಹನಿಗೆ ಒಟ್ಟು ಒಂಬೈನೂರ ಅರವತ್ತೊಂಭತ್ತು ವರ್ಷಗಳಾಗಿದ್ದವು. ತರುವಾಯ ಅವನು ಸತ್ತನು. \li1 \v 28 ಲೆಮೆಕನು ನೂರ ಎಂಬತ್ತೆರಡು ವರ್ಷದವನಾದಾಗ, ಒಬ್ಬ ಮಗನನ್ನು ಪಡೆದನು. \v 29 ಅವನಿಗೆ, ನೋಹ\f + \fr 5:29 \fr*\fq ನೋಹ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಸಾಂತ್ವನ\fqa*\f* ಎಂದು ಹೆಸರಿಟ್ಟು, “ಯೆಹೋವ ದೇವರು ಶಪಿಸಿದ ಭೂಮಿಯಿಂದ ನಮಗೆ ಉಂಟಾದ ಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಉಪಶಮನಗೊಳಿಸುವನು,” ಎಂದು ಹೇಳಿದನು. \v 30 ನೋಹನು ಹುಟ್ಟಿದ ಮೇಲೆ, ಲೆಮೆಕನು ಗಂಡು, ಹೆಣ್ಣು ಮಕ್ಕಳನ್ನು ಪಡೆದು, ಐನೂರ ತೊಂಬತ್ತೈದು ವರ್ಷ ಬದುಕಿದನು. \v 31 ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿದನು. ತರುವಾಯ ಅವನು ಸತ್ತನು. \li1 \v 32 ನೋಹನು ಐನೂರು ವರ್ಷದವನಾಗಿದ್ದನು. ಆಗ ನೋಹನಿಂದ ಶೇಮ್, ಹಾಮ್, ಯೆಫೆತರು ಹುಟ್ಟಿದರು. \c 6 \s1 ಜಲಪ್ರಳಯ \p \v 1 ಭೂಮಿಯ ಮೇಲೆ ಜನರ ಸಂಖ್ಯೆ ಹೆಚ್ಚಾಗತೊಡಗಿದಾಗ ಅವರಿಗೆ ಪುತ್ರಿಯರು ಹುಟ್ಟಿದರು. \v 2 ಆಗ ದೇವಪುತ್ರರು, ಮನುಷ್ಯ ಪುತ್ರಿಯರ ಸೌಂದರ್ಯವನ್ನು ಕಂಡು ಅವರನ್ನು ಆರಿಸಿಕೊಂಡು, ತಮಗೆ ಹೆಂಡತಿಯರನ್ನಾಗಿ ಮಾಡಿಕೊಂಡರು. \v 3 ಆಗ ಯೆಹೋವ ದೇವರು, “ನನ್ನ ಆತ್ಮವು ಮನುಷ್ಯರಲ್ಲಿ ನಿತ್ಯವಾಗಿ ಇರುವುದಿಲ್ಲ. ಏಕೆಂದರೆ ಅವರು ಮರ್ತ್ಯರೇ. ಆದರೂ ಅವರ ಆಯುಷ್ಯವು ನೂರ ಇಪ್ಪತ್ತು ವರ್ಷಗಳಾಗಿರುವುದು,” ಎಂದರು. \p \v 4 ಆ ದಿನಗಳಲ್ಲಿ ಭೂಮಿಯ ಮೇಲೆ ನೆಫೀಲಿಯೆಂಬ ರಾಕ್ಷಸ ವಂಶದವರು ಇದ್ದರು. ನಂತರದಲ್ಲಿಯೂ ಇದ್ದರು. ದೇವಪುತ್ರರು ಮನುಷ್ಯ ಪುತ್ರಿಯರೊಂದಿಗೆ ಕೂಡಿದಾಗ, ಮಕ್ಕಳು ಹುಟ್ಟಿದರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾಗಿದ್ದ ಪರಾಕ್ರಮಿಗಳು. \p \v 5 ಮನುಷ್ಯನ ದುಷ್ಟತನವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳೆಲ್ಲವೂ ಯಾವಾಗಲೂ ಬರೀ ಕೆಟ್ಟದ್ದೆಂದೂ ಯೆಹೋವ ದೇವರು ಕಂಡರು. \v 6 ಯೆಹೋವ ದೇವರು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ನಿಟ್ಟುಸಿರುಬಿಟ್ಟು, ತಮ್ಮ ಹೃದಯದಲ್ಲಿ ನೊಂದುಕೊಂಡರು. \v 7 ಇದಲ್ಲದೆ ಯೆಹೋವ ದೇವರು, “ನಾನು ಸೃಷ್ಟಿಸಿದ ಮನುಷ್ಯನಿಂದ ಹಿಡಿದು, ಸಕಲ ಪ್ರಾಣಿ, ಆಕಾಶದ ಪಕ್ಷಿಗಳನ್ನೂ ನೆಲದ ಮೇಲೆ ಹರಿದಾಡುವ ಜೀವಿಗಳನ್ನು, ಭೂಮಿಯ ಮೇಲಿನಿಂದ ಎಲ್ಲವನ್ನು ನಾಶಮಾಡುವೆನು. ನಾನು ಅವರನ್ನು ಉಂಟುಮಾಡಿದ್ದಕ್ಕೆ ದುಃಖಪಡುತ್ತೇನೆ,” ಎಂದರು. \v 8 ಆದರೆ ನೋಹನಿಗೆ ಯೆಹೋವ ದೇವರ ದಯೆ ದೊರಕಿತು. \s1 ನೋಹ ಮತ್ತು ಜಲಪ್ರಳಯ \p \v 9 ಇದು ನೋಹನ ಮತ್ತು ಅವನ ವಂಶದವರ ಚರಿತ್ರೆ: \b \p ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ನಿರ್ದೋಷಿಯೂ ಆಗಿದ್ದನು. ಅವನು ದೇವರೊಂದಿಗೆ ವಿಶ್ವಾಸದಿಂದ ನಡೆಯುತ್ತಿದ್ದನು. \v 10 ನೋಹನಿಗೆ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳಿದ್ದರು. \p \v 11 ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು. ಹಿಂಸಾಚಾರವು ಲೋಕವನ್ನು ತುಂಬಿಕೊಂಡಿತ್ತು. \v 12 ದೇವರು ಭೂಮಿಯನ್ನು ನೋಡಲಾಗಿ ಅದು ಕೆಟ್ಟುಹೋಗಿತ್ತು, ಮನುಷ್ಯರೆಲ್ಲರೂ ಭೂಮಿಯ ಮೇಲೆ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು. \v 13 ಆಗ ದೇವರು ನೋಹನಿಗೆ, “ನಾನು ಮನುಷ್ಯರೆಲ್ಲರಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ. ಅವರಿಂದ ಭೂಮಿಯು ಹಿಂಸಾಚಾರದಿಂದ ತುಂಬಿದೆ. ನಾನು ಭೂಮಿಯೊಂದಿಗೆ ಅವರನ್ನೂ ನಾಶಮಾಡುವೆನು. \v 14 ಆದ್ದರಿಂದ ನಿನಗೋಸ್ಕರವಾಗಿ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ಕೋಣೆಗಳನ್ನು ಮಾಡು, ಅದರ ಒಳಭಾಗಕ್ಕೂ ಹೊರಭಾಗಕ್ಕೂ ರಾಳವನ್ನು ಹಚ್ಚು. \v 15 ನೀನು ಅದನ್ನು ಈ ರೀತಿಯಾಗಿ ಮಾಡತಕ್ಕದ್ದು: ನಾವೆಯ ಉದ್ದವು ಸುಮಾರು ಒಂದುನೂರ ಮೂವತ್ತೈದು ಮೀಟರ್, ಅದರ ಅಗಲ ಇಪ್ಪತ್ತಮೂರು ಮೀಟರ್, ಅದರ ಎತ್ತರ ಹದಿನಾಲ್ಕು ಮೀಟರ್ ಇರಬೇಕು.\f + \fr 6:15 \fr*\ft ಅಂದರೆ, ಸುಮಾರು ಉದ್ದ ಮುನ್ನೂರು ಮೊಳ, ಅಗಲ ಐವತ್ತು ಮೊಳ, ಎತ್ತರ ಮೂವತ್ತು ಮೊಳ\ft*\f* \v 16 ಅದಕ್ಕೆ ಚಾವಣಿಯನ್ನು ಮಾಡು, ಅದರ ಕೆಳಗೆ ಹದಿನೆಂಟು ಇಂಚಿನ\f + \fr 6:16 \fr*\ft ಅಂದರೆ, ಸುಮಾರು ಎತ್ತರ ಒಂದು ಮೊಳ\ft*\f* ಕಿಟಕಿಯನ್ನು ನಾವೆಯ ಸುತ್ತಲೂ ಮಾಡಬೇಕು; ಅದರ ಪಕ್ಕದಲ್ಲಿ ನಾವೆಯ ಬಾಗಿಲನ್ನು ಇಡಬೇಕು. ಕೆಳಗಿನದು, ಎರಡನೆಯದು, ಮೂರನೆಯದು ಎಂಬ ಮೂರು ಅಂತಸ್ತುಗಳನ್ನು ಮಾಡಬೇಕು. \v 17 ನಾನು ಆಕಾಶದ ಕೆಳಗಿರುವ ಜೀವಶ್ವಾಸವುಳ್ಳ ಸಕಲ ಪ್ರಾಣಿಗಳನ್ನು ನಾಶಮಾಡುವುದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ. ಆಗ ಭೂಮಿಯಲ್ಲಿರುವುದೆಲ್ಲವೂ ನಾಶವಾಗುವುದು. \v 18 ಆದರೆ ನಾನು ನಿನ್ನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು. ನೀನು, ನಿನ್ನ ಸಂಗಡ ನಿನ್ನ ಮಕ್ಕಳು, ನಿನ್ನ ಹೆಂಡತಿ ಹಾಗೂ ಸೊಸೆಯರು ನಾವೆಯೊಳಗೆ ಸೇರಬೇಕು. \v 19 ಜೀವಿಗಳ ಪ್ರತಿಜಾತಿಯಲ್ಲೂ ಒಂದು ಗಂಡು, ಒಂದು ಹೆಣ್ಣು; ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ ನಿನ್ನೊಂದಿಗೆ ಜೀವಂತವಾಗಿ ಉಳಿಸಿಕೊಳ್ಳಬೇಕು. \v 20 ಪಕ್ಷಿಗಳಲ್ಲಿ ಅವುಗಳ ಜಾತಿಗನುಸಾರವಾಗಿ, ಪ್ರಾಣಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಮತ್ತು ನೆಲದ ಮೇಲೆ ಹರಿದಾಡುವ ಸಕಲ ಜೀವಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಎರಡೆರಡು ಬದುಕಿಬಾಳಲು ಅವುಗಳನ್ನು ನೀನು ಕಾಪಾಡುವಂತೆ ನಿನ್ನ ಬಳಿಗೆ ಬರುವುವು. \v 21 ನೀನು, ಎಲ್ಲ ವಿಧವಾದ ಆಹಾರ ಪದಾರ್ಥಗಳನ್ನು ಕೂಡಿಸಿಡಬೇಕು. ಅದು ನಿಮಗೂ ಮತ್ತು ಪ್ರಾಣಿಗಳಿಗೂ ಆಹಾರವಾಗಿರಬೇಕು,” ಎಂದು ಹೇಳಿದರು. \p \v 22 ದೇವರು ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನು ಮಾಡಿದನು. \c 7 \p \v 1 ಯೆಹೋವ ದೇವರು ನೋಹನಿಗೆ, “ನೀನೂ, ನಿನ್ನ ಮನೆಯವರೆಲ್ಲರೂ ನಾವೆಯೊಳಗೆ ಸೇರಿಕೊಳ್ಳಿರಿ. ಏಕೆಂದರೆ ಈ ಕಾಲದವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿರುವುದನ್ನು ನಾನು ನೋಡಿದ್ದೇನೆ. \v 2 ಎಲ್ಲಾ ಶುದ್ಧ ಪಶುಗಳಲ್ಲಿ ಏಳೇಳು ಗಂಡು, ಹೆಣ್ಣುಗಳನ್ನೂ, ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡು, ಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೊಳ್ಳಬೇಕು. \v 3 ಆಕಾಶದ ಪಕ್ಷಿಗಳಲ್ಲಿ ಗಂಡು, ಹೆಣ್ಣು ಏಳೇಳರಂತೆ ತೆಗೆದುಕೊಂಡು, ಭೂಮಿಯ ಮೇಲೆಲ್ಲಾ ಅವುಗಳ ಸಂತತಿಯನ್ನು ಜೀವಂತವಾಗಿ ಉಳಿಸಬೇಕು. \v 4 ಏಳು ದಿವಸಗಳಾದ ಮೇಲೆ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳು ಮಳೆಯು ಬರುವಂತೆ ನಾನು ಮಾಡುವೆನು. ನಾನು ಉಂಟುಮಾಡಿದ ಪ್ರತಿಯೊಂದು ಜೀವರಾಶಿಯನ್ನೂ ಭೂಮಿಯ ಮೇಲಿಂದ ಅಳಿಸಿಬಿಡುತ್ತೇನೆ,” ಎಂದರು. \p \v 5 ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನೂ ಮಾಡಿದನು. \p \v 6 ಜಲಪ್ರಳಯವು ಭೂಮಿಯ ಮೇಲೆ ಉಂಟಾದಾಗ ನೋಹನು ಆರುನೂರು ವರ್ಷದವನಾಗಿದ್ದನು. \v 7 ಆಗ ನೋಹನು ಪ್ರಳಯದ ನಿಮಿತ್ತವಾಗಿ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯಲ್ಲಿ ಸೇರಿದನು. \v 8 ಶುದ್ಧ ಪ್ರಾಣಿಗಳಲ್ಲಿಯೂ, ಅಶುದ್ಧ ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ಮತ್ತು ನೆಲದ ಮೇಲೆ ಹರಿದಾಡುವ ಜೀವಿಗಳೆಲ್ಲವೂ \v 9 ದೇವರು ನೋಹನಿಗೆ ಆಜ್ಞಾಪಿಸಿದಂತೆಯೇ ಗಂಡುಹೆಣ್ಣುಗಳು ಜೋಡಿ ಜೋಡಿಯಾಗಿ ಬಂದು ನೋಹನೊಂದಿಗೆ ನಾವೆಯಲ್ಲಿ ಸೇರಿಕೊಂಡವು. \v 10 ಏಳು ದಿವಸಗಳಾದ ನಂತರ ಜಲಪ್ರಳಯವು ಭೂಮಿಯ ಮೇಲೆ ಬಂತು. \p \v 11 ನೋಹನ ಜೀವನದ ಆರುನೂರು ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾಸಾಗರದ ಸೆಲೆಗಳು ಒಡೆದವು. ಆಕಾಶದ ಪ್ರವಾಹದ ದ್ವಾರಗಳು ತೆರೆದವು. \v 12 ನಲವತ್ತು ದಿವಸ ಹಗಲಿರುಳು ಭೂಮಿಯ ಮೇಲೆ ದೊಡ್ಡ ಮಳೆ ಸುರಿಯಿತು. \p \v 13 ಅದೇ ದಿನದಲ್ಲಿ ನೋಹನು ಮತ್ತು ಅವನ ಪುತ್ರರಾದ ಶೇಮ್, ಹಾಮ್, ಯೆಫೆತ್ ಇವರೂ ನೋಹನ ಹೆಂಡತಿಯೂ ಅವನ ಪುತ್ರರ ಹೆಂಡತಿಯರೂ ನಾವೆಯನ್ನು ಪ್ರವೇಶಿಸಿದರು. \v 14 ಇದಲ್ಲದೆ ತಮ್ಮ ತಮ್ಮ ಜಾತಿಗನುಸಾರವಾಗಿ ಎಲ್ಲಾ ಕಾಡು ಮೃಗಗಳೂ ಎಲ್ಲಾ ಪಶುಗಳೂ ನೆಲದ ಮೇಲೆ ಹರಿದಾಡುವ ಎಲ್ಲಾ ಜೀವಿಗಳೂ ಎಲ್ಲಾ ಪಕ್ಷಿಗಳೂ ಎಲ್ಲಾ ವಿಧವಾದ ರೆಕ್ಕೆಯಿರುವ ಜೀವಿಗಳೂ ಪ್ರವೇಶಿಸಿದವು. \v 15 ಹೀಗೆ ಜೀವಶ್ವಾಸವಿರುವ ಎಲ್ಲಾ ಸೃಷ್ಟಿಗಳಲ್ಲಿ ಎರಡೆರಡು ನೋಹನ ಬಳಿಗೆ ನಾವೆಯೊಳಗೆ ಹೋದವು. \v 16 ದೇವರು ನೋಹನಿಗೆ ಆಜ್ಞಾಪಿಸಿದಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವ ದೇವರು ನೋಹನನ್ನು ಒಳಗೆ ಬಿಟ್ಟು ಬಾಗಿಲನ್ನು ಮುಚ್ಚಿದರು. \p \v 17 ನಲವತ್ತು ದಿನ ಭೂಮಿಯ ಮೇಲೆ ಪ್ರಳಯವು ಬಂದು, ನೀರು ಹೆಚ್ಚಿ ನಾವೆಯನ್ನು ಮೇಲಕ್ಕೆ ಎತ್ತಲು ಅದು ಭೂಮಿಯಿಂದ ತೇಲಾಡಿತು. \v 18 ನೀರು ಪ್ರಬಲವಾಗಿ ಭೂಮಿಯ ಮೇಲೆ ಹೆಚ್ಚಿದಾಗ ನಾವೆಯು ನೀರಿನ ಮೇಲೆ ಚಲಿಸಿತು. \v 19 ಭೂಮಿಯ ಮೇಲೆ ನೀರು ಅಧಿಕವಾಗಿ ಪ್ರಬಲವಾದದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಕೊಂಡವು. \v 20 ನೀರು ಬೆಟ್ಟವನ್ನು ಮುಚ್ಚಿ ಅವುಗಳ ಮೇಲೆ ಸುಮಾರು ಏಳು ಮೀಟರಷ್ಟು\f + \fr 7:20 \fr*\ft ಅಂದರೆ, ಸುಮಾರು ಹದಿನೈದು ಮೊಳ\ft*\f* ಏರಿತು. \v 21 ಪಕ್ಷಿಗಳು, ಪಶುಗಳು, ಕಾಡುಮೃಗಗಳು, ನೆಲದ ಮೇಲೆ ಚಲಿಸುವ ಸಕಲ ಪ್ರಾಣಿಗಳು ಮತ್ತು ಮನುಷ್ಯರು ನಾಶವಾದರು. \v 22 ಒಣನೆಲದ ಮೇಲಿದ್ದ ಮೂಗಿನಿಂದ ಶ್ವಾಸಬೀಡುವ ಜೀವಿಗಳೆಲ್ಲವೂ ಸತ್ತು ಹೋದವು. \v 23 ಹೀಗೆ ಮನುಷ್ಯರು, ಪಶುಪಕ್ಷಿ, ಕ್ರಿಮಿಕೀಟಗಳು, ಭೂಮಿಯ ಮೇಲಿದ್ದ ಎಲ್ಲಾ ಜೀವರಾಶಿಗಳೂ ನಾಶವಾಯಿತು. ಅವು ಭೂಮಿಯ ಮೇಲಿಂದ ಅಳಿದುಹೋದವು. ನೋಹನು ಮತ್ತು ಅವನ ಸಂಗಡ ನಾವೆಯಲ್ಲಿದ್ದವರು ಮಾತ್ರ ಜೀವಂತವಾಗಿ ಉಳಿದರು. \p \v 24 ಜಲವು ಭೂಮಿಯ ಮೇಲೆ ನೂರೈವತ್ತು ದಿನ ಮುಂದುವರೆಯಿತು. \c 8 \p \v 1 ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಕಾಡುಮೃಗಗಳನ್ನೂ ಪಶುಗಳನ್ನೂ ನೆನಪಿಗೆ ತಂದುಕೊಂಡು, ಭೂಲೋಕದ ಮೇಲೆ ಗಾಳಿಬೀಸುವಂತೆ ಮಾಡಲಾಗಿ, ನೀರು ತಗ್ಗಿತು. \v 2 ಮಾತ್ರವಲ್ಲದೆ ಸಾಗರದ ಸೆಲೆಗಳೂ, ಆಕಾಶದ ದ್ವಾರಗಳೂ ಮುಚ್ಚಿಹೋದವು. ಆಕಾಶದಿಂದ ಬೀಳುವ ಮಳೆ ನಿಂತುಹೋಯಿತು. \v 3 ಹೀಗೆ ನೀರು ಭೂಮಿಯ ಮೇಲಿನಿಂದ ಕ್ರಮವಾಗಿ ಇಳಿಯಿತು. ನೀರು ನೂರೈವತ್ತು ದಿನಗಳ ಅಂತ್ಯದಲ್ಲಿ ಕಡಿಮೆಯಾಯಿತು. \v 4 ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಬೆಟ್ಟಗಳ ಮೇಲೆ ನಿಂತಿತು. \v 5 ಹತ್ತನೆಯ ತಿಂಗಳಿನವರೆಗೂ ನೀರು ಕಡಿಮೆಯಾಗುತ್ತಾ ಬಂತು, ಹತ್ತನೆಯ ತಿಂಗಳಿನ ಮೊದಲಿನ ದಿನದಲ್ಲಿ ಬೆಟ್ಟಗಳ ಶಿಖರಗಳು ಕಾಣಿಸಲಾರಂಭಿಸಿದವು. \p \v 6 ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದನು. \v 7 ಅವನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು, ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು. \v 8 ಭೂಮುಖದ ಮೇಲೆ ಜಲವು ಕಡಿಮೆಯಾಯಿತೋ ಇಲ್ಲವೋ ಎಂದು ನೋಡುವಂತೆ, ಒಂದು ಪಾರಿವಾಳವನ್ನೂ ಹೊರಕ್ಕೆ ಕಳುಹಿಸಿದನು. \v 9 ಆದರೆ ನೀರು ಭೂಮಿಯ ಮೇಲೆಲ್ಲಾ ಇರುವುದರಿಂದ ಪಾರಿವಾಳವು ಕಾಲಿಡುವುದಕ್ಕೂ ಸ್ಥಳವನ್ನು ಕಾಣದೆ, ಅವನ ಬಳಿಗೆ ನಾವೆಗೆ ಹಿಂದಿರುಗಿತು. ಅವನು ಕೈಚಾಚಿ ಅದನ್ನು ಹಿಡಿದು, ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು. \v 10 ಅವನು ಇನ್ನೂ ಏಳು ದಿವಸ ತಡೆದು, ಪಾರಿವಾಳವನ್ನು ಪುನಃ ನಾವೆಯೊಳಗಿಂದ ಹೊರಕ್ಕೆ ಬಿಟ್ಟನು. \v 11 ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರುಗಿ ಬರಲು, ಅದರ ಬಾಯಿಯಲ್ಲಿ ಓಲಿವ್ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದಿದೆಯೆಂದು ತಿಳಿದುಕೊಂಡನು. \v 12 ಇನ್ನೂ ಏಳು ದಿನಗಳು ತಡೆದು, ಆ ಪಾರಿವಾಳವನ್ನು ಬಿಟ್ಟಾಗ, ಅದು ತಿರುಗಿ ಅವನ ಬಳಿಗೆ ಬರಲೇ ಇಲ್ಲ. \p \v 13 ಆರುನೂರ ಒಂದನೆಯ ವರ್ಷದ, ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಮೇಲಿನ ಮುಚ್ಚಳವನ್ನು ತೆಗೆದು ನೋಡಲಾಗಿ, ನೆಲವು ಒಣಗಿತ್ತು. \v 14 ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿಯು ಒಣಗಿತ್ತು. \p \v 15 ಆಗ ದೇವರು ನೋಹನಿಗೆ, \v 16 “ನೀನು, ನಿನ್ನ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ. \v 17 ನಿನ್ನ ಬಳಿಯಲ್ಲಿರುವ ಪಕ್ಷಿ, ಪಶು, ಕ್ರಿಮಿ, ಮುಂತಾದ ಎಲ್ಲಾ ಜೀವಿಗಳನ್ನು ಹೊರಗೆ ತೆಗೆದುಕೊಂಡು ಬಾ. ಅವುಗಳಿಗೆ ಭೂಮಿಯ ಮೇಲೆ ಬಹು ಸಂತಾನವಾಗಲಿ, ಅವು ಅಭಿವೃದ್ಧಿಯಾಗಿ ಹೆಚ್ಚಲಿ,” ಎಂದು ಹೇಳಿದರು. \p \v 18 ಹೀಗೆ ನೋಹನು, ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ಹೊರಗೆ ಬಂದನು. \v 19 ಎಲ್ಲಾ ಮೃಗಗಳೂ ಎಲ್ಲಾ ಕ್ರಿಮಿಗಳೂ ಎಲ್ಲಾ ಪಕ್ಷಿಗಳೂ ಭೂಮಿಯಲ್ಲಿ ಹರಿದಾಡುವ ಎಲ್ಲವೂ ತಮ್ಮ ತಮ್ಮ ಜಾತಿಗನುಸಾರವಾಗಿ ನಾವೆಯೊಳಗಿಂದ ಹೊರಗೆ ಬಂದವು. \p \v 20 ನೋಹನು ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಶುದ್ಧವಾದ ಪ್ರತಿ ಪಶುಗಳಿಂದಲೂ ಶುದ್ಧವಾದ ಪ್ರತಿ ಪಕ್ಷಿಗಳಿಂದಲೂ ಕೆಲವೊಂದನ್ನು ಆಯ್ದುಕೊಂಡು, ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು. \v 21 ಅದರ ಸುವಾಸನೆಯು ಯೆಹೋವ ದೇವರಿಗೆ ಗಮಗಮಿಸಲು, ಅವರು ಹೃದಯದೊಳಗೆ, “ಮನುಷ್ಯನ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು, ಆದರೂ ನಾನು ಇನ್ನು ಮೇಲೆ ಮನುಷ್ಯರ ನಿಮಿತ್ತವಾಗಿ ಭೂಮಿಯನ್ನು ಶಪಿಸುವುದಿಲ್ಲ. ನಾನು ಎಲ್ಲಾ ಜೀವಿಗಳನ್ನೂ ಸಂಹರಿಸಿದಂತೆ ಇನ್ನು ಮೇಲೆ ಸಂಹರಿಸುವುದಿಲ್ಲ. \q1 \v 22 “ಭೂಮಿಯು ಇರುವವರೆಗೆ \q1 ಬಿತ್ತುವ ಕಾಲವೂ ಕೊಯ್ಯುವ ಕಾಲವೂ; \q1 ತಂಪೂ ಸೆಕೆಯೂ; \q1 ಬೇಸಿಗೆಯೂ ಹಿಮಕಾಲವೂ; \q1 ಹಗಲೂ ರಾತ್ರಿಯೂ \q1 ನಿಂತುಹೋಗುವುದಿಲ್ಲ.” \c 9 \s1 ನೋಹನ ಜೊತೆ ಯೆಹೋವ ದೇವರ ಒಡಂಬಡಿಕೆ \p \v 1 ದೇವರು ನೋಹನನ್ನೂ, ಅವನ ಪುತ್ರರನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿ, ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ. \v 2 ಭೂಮಿಯ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಸಮುದ್ರದ ಎಲ್ಲಾ ಮೀನುಗಳ ಮೇಲೆಯೂ ನಿಮ್ಮ ಭಯ ಬೆದರಿಕೆಯು ಇರುವುದು. ನಿಮ್ಮ ಕೈಗೆ ಅವು ಕೊಡಲಾಗಿವೆ. \v 3 ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ. ಹಸಿರು ಪಲ್ಯಗಳ ಹಾಗೆಯೇ, ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ. \p \v 4 “ಆದರೆ ಮಾಂಸವನ್ನು ಅದರ ಜೀವವಾಗಿರುವ ರಕ್ತದೊಂದಿಗೆ ನೀವು ತಿನ್ನಬಾರದು. \v 5 ನಿಮ್ಮ ರಕ್ತ ಸುರಿಸಿ, ಪ್ರಾಣ ತೆಗೆಯುವವರಿಗೆ, ಮುಯ್ಯಿತೀರಿಸುವೆನು, ಮೃಗವಾಗಿದ್ದರೆ ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಇನ್ನೊಬ್ಬ ಮನುಷ್ಯನಾದುದರಿಂದ ಹತಿಸಿದವನಿಗೂ ಮುಯ್ಯಿತೀರಿಸುವೆನು. \q1 \v 6 “ಯಾರಾದರೂ ಮನುಷ್ಯರ ರಕ್ತವನ್ನು ಸುರಿಸುತ್ತಾರೋ, \q2 ಅವರ ರಕ್ತವನ್ನು ಮನುಷ್ಯರೇ ಸುರಿಸುವರು. \q1 ಏಕೆಂದರೆ ದೇವರು ತಮ್ಮ ಸ್ವರೂಪದಲ್ಲಿಯೇ \q2 ಮನುಷ್ಯರನ್ನು ಸೃಷ್ಟಿಸಿದರು. \m \v 7 ಆದ್ದರಿಂದ ನೀವು ಬಹುಸಂತಾನವಾಗಿ ಹೆಚ್ಚಿರಿ. ಸಂಖ್ಯೆಯಲ್ಲಿಯೂ ಅಧಿಕವಾಗಿ ಭೂಮಿಯಲ್ಲಿ ಹೆಚ್ಚಿರಿ,” ಎಂದು ಹೇಳಿದರು. \p \v 8 ಇದಲ್ಲದೆ ದೇವರು ನೋಹನಿಗೂ ಅವನ ಸಂಗಡ ಇದ್ದ ಅವನ ಪುತ್ರರಿಗೂ ಹೇಳಿದ್ದೇನೆಂದರೆ, \v 9 “ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡವೂ ನಿಮ್ಮ ತರುವಾಯ ನಿಮ್ಮ ಸಂತತಿಯವರ ಸಂಗಡವೂ \v 10 ನಿಮ್ಮ ಜೊತೆ ನಾವೆಯೊಳಗಿಂದ ಹೊರಗೆ ಬಂದ ಎಲ್ಲಾ ಜೀವಿಗಳ ಸಹಿತ ಅಂದರೆ ಪಕ್ಷಿಗಳು, ಪಶುಗಳು, ಕಾಡುಮೃಗಗಳು ಮತ್ತು ಭೂಮಿಯ ಎಲ್ಲಾ ಜೀವಿಗಳೊಂದಿಗೆ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ \v 11 ಜಲಪ್ರಳಯದಿಂದ ಇನ್ನು ಮೇಲೆ ಎಲ್ಲಾ ಜೀವಿಗಳು ನಾಶವಾಗುವುದಿಲ್ಲ. ಭೂಮಿಯನ್ನು ಹಾಳು ಮಾಡುವುದಕ್ಕೆ ಇನ್ನು ಮುಂದೆ ಇಂಥ ಪ್ರಳಯವು ಇರುವುದಿಲ್ಲ ಎಂದು ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ.” \p \v 12 ದೇವರು ಮತ್ತೆ ಹೇಳಿದ್ದೇನೆಂದರೆ, “ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳವರೆಗೆ ನಾನು ಮಾಡುವ ಒಡಂಬಡಿಕೆಗೆ ಗುರುತು ಇದೆ: \v 13 ನನ್ನ ಮಳೆಬಿಲ್ಲನ್ನು ಮೇಘಗಳಲ್ಲಿ ಇಟ್ಟಿದ್ದೇನೆ, ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವುದು. \v 14 ನಾನು ಭೂಮಿಯ ಮೇಲೆ ಮೇಘಗಳನ್ನು ಬರಮಾಡುವಾಗ, ಆ ಮಳೆಬಿಲ್ಲು ಮೇಘಗಳಲ್ಲಿ ಕಂಡುಬರುವುದು. \v 15 ಆಗ ನಾನು ನನಗೂ ನಿಮಗೂ ಪ್ರತಿಯೊಂದು ಜೀವಿಗಳಿಗೂ ಮಧ್ಯೆಯಿರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಎಲ್ಲಾ ಜೀವಿಗಳನ್ನು ನಾಶಮಾಡುವ ಪ್ರಳಯವಾಗುವುದೇ ಇಲ್ಲ. \v 16 ಆ ಮಳೆಬಿಲ್ಲು ಮೇಘಗಳಲ್ಲಿರುವಾಗ, ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ಇರುವ ನಿತ್ಯವಾದ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವ ಹಾಗೆ, ನಾನು ಅದನ್ನು ನೋಡುವೆನು.” \p \v 17 ನಂತರ ದೇವರು ನೋಹನಿಗೆ, “ಈ ಮಳೆಬಿಲ್ಲು ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಮಧ್ಯದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತಾಗಿದೆ,” ಎಂದು ಹೇಳಿದರು. \s1 ನೋಹನ ಪುತ್ರರು \p \v 18 ನಾವೆಯೊಳಗಿಂದ ಹೊರಬಂದ ನೋಹನ ಪುತ್ರರು ಯಾರೆಂದರೆ ಶೇಮ್, ಹಾಮ್, ಯೆಫೆತ್. ಹಾಮನು ಕಾನಾನನ ತಂದೆಯು. \v 19 ಈ ಮೂವರು ನೋಹನ ಮಕ್ಕಳು; ಭೂಮಿಯ ಮೇಲೆ ಚೆದರಿದ ಎಲ್ಲ ಜನರು ಇವರಿಂದಲೇ ಉತ್ಪತ್ತಿಯಾದರು. \p \v 20 ನೋಹನು ವ್ಯವಸಾಯಗಾರನಾಗಿದ್ದನು. ಅವನು ಒಂದು ದ್ರಾಕ್ಷಿತೋಟವನ್ನು ಪ್ರಾರಂಭಿಸಿದನು. \v 21 ಅವನು ಅದರಿಂದ ಸ್ವಲ್ಪ ದ್ರಾಕ್ಷಾರಸವನ್ನು ಕುಡಿದು ಅಮಲೇರಿ, ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಮಲಗಿದ್ದನು. \v 22 ಕಾನಾನನ ತಂದೆ ಹಾಮನು, ತನ್ನ ತಂದೆಯ ಬೆತ್ತಲೆತನವನ್ನು ನೋಡಿ, ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿದನು. \v 23 ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತೆಗೆದುಕೊಂಡು, ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು, ಹಿಂಭಾಗವಾಗಿ ಹೋಗಿ, ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಮ್ಮುಖವಾಗಿದ್ದುದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ. \p \v 24 ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚೆತ್ತು, ತನ್ನ ಕಿರಿಯ ಮಗನು ತನಗೆ ಮಾಡಿದ್ದನ್ನು ತಿಳಿದನು. \v 25 ನಂತರ ಅವನು ಹೀಗೆಂದನು, \q1 “ಕಾನಾನನು ಶಾಪಗ್ರಸ್ತನಾಗಲಿ, \q2 ಅವನು ತನ್ನ ಸಹೋದರರಿಗೆ ದಾಸಾನುದಾಸನಾಗಿರಲಿ.” \p \v 26 ನೋಹನು ಮತ್ತೆ ಹೇಳಿದ್ದು, \q1 “ಶೇಮನ ದೇವರಾದ ಯೆಹೋವ ಸ್ತುತಿಹೊಂದಲಿ. \q2 ಕಾನಾನನು ಶೇಮನಿಗೆ ದಾಸನಾಗಿರಲಿ. \q1 \v 27 ಯೆಫೆತನ ಮೇರೆಗಳನ್ನು ದೇವರು ವಿಸ್ತರಿಸಲಿ. \q2 ಯೆಫೆತನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ, \q2 ಕಾನಾನನು ಯೆಫೆತನಿಗೆ ದಾಸನಾಗಿರಲಿ.” \p \v 28 ಪ್ರಳಯವಾದ ಮೇಲೆ ನೋಹನು ಮುನ್ನೂರ ಐವತ್ತು ವರ್ಷ ಬದುಕಿದನು. \v 29 ನೋಹ ಒಟ್ಟು ಒಂಬೈನೂರ ಐವತ್ತು ವರ್ಷ ಜೀವಿಸಿ, ಸತ್ತನು. \c 10 \s1 ಜನಾಂಗಗಳ ಪಟ್ಟಿ \li4 \v 1 ನೋಹನ ಪುತ್ರರಾದ ಶೇಮ್, ಹಾಮ್, ಯೆಫೆತರಿಗೆ ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು. ಅವರ ವಂಶಾವಳಿ ಇದು: \s2 ಯೆಫೆತನ ವಂಶಜರು \li1 \v 2 ಯೆಫೆತನ ಪುತ್ರರು: \li2 ಗೋಮೆರ್, ಮಾಗೋಗ್, ಮಾದಯ್, ಯಾವಾನ್ ತೂಬಲ್, ಮೆಷೆಕ್ ಮತ್ತು ತೀರಾಸ್. \li1 \v 3 ಗೋಮೆರನ ಪುತ್ರರು: \li2 ಅಷ್ಕೆನಜ್, ರೀಫತ್, ತೋಗರ್ಮ. \li1 \v 4 ಯಾವಾನನ ಮಕ್ಕಳು: \li2 ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾನೀಮ್.\f + \fr 10:4 \fr*\fq ದೋದಾನೀಮ್ \fq*\ft ಇತರ ಹಸ್ತಪ್ರತಿಗಳಲ್ಲಿ \ft*\fqa ರೋಡಾನೀಮ್\fqa*\f* \v 5 ಇವರಿಂದ ಕಡಲತೀರದ ಹಾಗೂ ದ್ವೀಪಗಳ ನಿವಾಸಿಯರು ತಮ್ಮ ಸ್ವಂತ ದೇಶ, ಭಾಷೆ, ಕುಲ ಜನಾಂಗಗಳ ಪ್ರಕಾರ ಹರಡುತ್ತಿದ್ದರು. \s2 ಹಾಮನ ವಂಶಜರು \li1 \v 6 ಹಾಮನ ಪುತ್ರರು: \li2 ಕೂಷ್, ಈಜಿಪ್ಟ್, ಪೂಟ್, ಕಾನಾನ್. \li1 \v 7 ಕೂಷನ ಪುತ್ರರು: \li2 ಸೆಬ, ಹವೀಲ, ಸಬ್ತಾ, ರಾಮ, ಸಬ್ತೆಕ. \li1 ರಾಮನ ಪುತ್ರರು: \li2 ಶೆಬಾ ಮತ್ತು ದೆದಾನ್. \li4 \v 8 ಕೂಷನು ನಿಮ್ರೋದನ ತಂದೆಯಾಗಿದ್ದನು, ಇವನು ಭೂಮಿಯ ಮೇಲೆ ಬಲಿಷ್ಠ ಯುದ್ಧವೀರನಾದನು. \v 9 ಅವನು ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರನಾದನು. ಆದ್ದರಿಂದ, “ನಿಮ್ರೋದನಂತೆ ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರ” ಎಂಬ ಹೇಳಿಕೆ ಇಂದಿಗೂ ಇದೆ. \v 10 ಶಿನಾರ್ ದೇಶದಲ್ಲಿರುವ ಬಾಬಿಲೋನ್, ಯೆರೆಕ್, ಅಕ್ಕದ್, ಕಲ್ನೇ ಎಂಬವು ಅವನ ರಾಜ್ಯದ ಪ್ರಾರಂಭದ ಕೇಂದ್ರಗಳು. \v 11 ಆ ದೇಶದಿಂದ ಅವನು ಅಸ್ಸೀರಿಯಕ್ಕೆ ಹೋಗಿ ನಿನೆವೆ, ರೆಹೋಬೋತೀರ್, ಕೆಲಹ ಪಟ್ಟಣಗಳನ್ನೂ \v 12 ಮತ್ತು ನಿನೆವೆ ಹಾಗೂ ಕೆಲಹ ಮಧ್ಯದಲ್ಲಿರುವ ರೆಸೆನ್ ಮಹಾಪಟ್ಟಣವನ್ನು ಕಟ್ಟಿಸಿದನು. \li1 \v 13 ಈಜಿಪ್ಟನವರಿಂದ \li2 ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು \v 14 ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದವರು, \li1 \v 15 ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; \li2 ಆಮೇಲೆ ಹೇತನು ಹುಟ್ಟಿದನು. \v 16 ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು \v 17 ಹಿವ್ವಿಯರು, ಅರ್ಕಿಯರು, ಸೀನಿಯರು, \v 18 ಅರ್ವಾದಿಯರು, ಚೆಮಾರಿಯರು, ಹಮಾತಿಯರು, ಕಾನಾನನಿಂದ ಹುಟ್ಟಿದರು. \li2 ತರುವಾಯ ಕಾನಾನ್ ಕುಟುಂಬಗಳು ವಿಸ್ತಾರವಾಗಿ ಹರಡಿದವು. \v 19 ಕಾನಾನ್ಯರ ಮೇರೆಯು ಸೀದೋನ್ ಪಟ್ಟಣದಿಂದ ಗೆರಾರಿನ ಮಾರ್ಗವಾಗಿ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳ ಮಾರ್ಗವಾಗಿ ಲೆಷಾ ಊರಿನವರೆಗೂ ಇರುತ್ತದೆ. \li4 \v 20 ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ, ತಮ್ಮ ಸೀಮೆ ಹಾಗು ದೇಶಗಳಲ್ಲಿಯೂ ಇರುವ ಹಾಮನ ಪುತ್ರರು. \s2 ಶೇಮನ ವಂಶಜರು \li4 \v 21 ಯೆಫೆತನ ಹಿರಿಯ ಸಹೋದರನೂ ಏಬೆರನ ಮಕ್ಕಳ ಮೂಲಪುರುಷನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು. \li1 \v 22 ಶೇಮನ ಪುತ್ರರು: \li2 ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್, ಅರಾಮ್. \li1 \v 23 ಅರಾಮನ ಪುತ್ರರು: \li2 ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.\f + \fr 10:23 \fr*\fq ಮೆಷೆಕ್ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಮಷ್ \fqa*\ft ನೋಡಿರಿ \+xt 1 ಪೂರ್ವ 1:17\+xt*.\ft*\f* \li1 \v 24 ಅರ್ಪಕ್ಷದ್ ಶೆಲಹನ ತಂದೆ; \li2 ಶೆಲಹ ಏಬೆರನ ತಂದೆ, \li1 \v 25 ಏಬೆರನಿಗೆ ಇಬ್ಬರು ಪುತ್ರರು ಹುಟ್ಟಿದರು. \li2 ಒಬ್ಬನಿಗೆ ಪೆಲೆಗ್ ಎಂದು ಹೆಸರಿಡಲಾಯಿತು, ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಅವನ ತಮ್ಮನ ಹೆಸರು ಯೊಕ್ತಾನ್. \li1 \v 26 ಯೊಕ್ತಾನನ ಸಂತಾನದವರು: \li2 ಅಲ್ಮೋದಾದ್, ಶೆಲೆಪ್, ಹಜರ್ಮಾವೆತ್, ಯೆರಹ, \v 27 ಹದೋರಾಮ್, ಊಜಾಲ್, ದಿಕ್ಲಾ, \v 28 ಓಬಾಲ್, ಅಬೀಮಯೇಲ್, ಶೆಬಾ, \v 29 ಓಫೀರ್, ಹವೀಲಾ ಹಾಗೂ ಯೋಬಾಬ್ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಪುತ್ರರು. \li2 \v 30 ಅವರ ನಿವಾಸವು ಮೇಶಾ ನಾಡು ಮೊದಲುಗೊಂಡು ಪೂರ್ವದಿಕ್ಕಿನ ಸೆಫಾರ್ ಎಂಬ ಬೆಟ್ಟದವರೆಗೂ ಹರಡಿತ್ತು. \li4 \v 31 ಇವರೇ ತಮ್ಮ ಕುಟುಂಬಗಳ, ತಮ್ಮ ಭಾಷೆಗಳ ಪ್ರಕಾರ, ತಮ್ಮ ದೇಶಗಳಲ್ಲಿ, ತಮ್ಮ ಜನಾಂಗಗಳ ಪ್ರಕಾರ ಶೇಮನ ಪುತ್ರರು. \b \li4 \v 32 ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರವಾಗಿ ನೋಹನ ಪುತ್ರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ಹರಡಿಕೊಂಡವು. \c 11 \s1 ಬಾಬೆಲಿನ ಗೋಪುರ \p \v 1 ಆ ಕಾಲದಲ್ಲಿ ಭೂಲೋಕದಲ್ಲೆಲ್ಲಾ ಒಂದೇ ಭಾಷೆಯಿತ್ತು. ಭಾಷಾಭೇದವೇನೂ ಇರಲಿಲ್ಲ. \v 2 ಜನರು ಪೂರ್ವದಿಕ್ಕಿಗೆ ಪ್ರಯಾಣ ಮಾಡುವಾಗ, ಶಿನಾರ್ ದೇಶದ ಬಯಲನ್ನು ಕಂಡು ಅಲ್ಲಿ ವಾಸಮಾಡಿದರು. \p \v 3 ಅಲ್ಲಿ ಅವರು, “ಬನ್ನಿರಿ ನಾವು ಇಟ್ಟಿಗೆಗಳನ್ನು ಮಾಡಿ, ಚೆನ್ನಾಗಿ ಸುಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರು ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನು, ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣನ್ನು ಉಪಯೋಗಿಸಿದರು. \v 4 ಅನಂತರ ಅವರು, “ಬನ್ನಿರಿ, ನಾವು ಭೂಮಿಯ ಮೇಲೆ ಪಟ್ಟಣವನ್ನು ಕಟ್ಟೋಣ. ಆಕಾಶವನ್ನು ಮುಟ್ಟುವ ಒಂದು ಗೋಪುರವನ್ನು ನಮಗೋಸ್ಕರವಾಗಿ ಕಟ್ಟಿಕೊಂಡು, ನಮಗೆ ಹೆಸರು ಸಂಪಾದಿಸಿಕೊಳ್ಳೋಣ. ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರುವುದಕ್ಕೆ ಆಸ್ಪದವಾಗುವದಿಲ್ಲ,” ಎಂದುಕೊಂಡರು. \p \v 5 ಜನರು ಕಟ್ಟುತ್ತಿದ್ದ ಪಟ್ಟಣವನ್ನೂ ಗೋಪುರವನ್ನೂ ನೋಡುವುದಕ್ಕೆ ಯೆಹೋವ ದೇವರು ಇಳಿದು ಬಂದರು. \v 6 ಯೆಹೋವ ದೇವರು, “ಇವರಿಗೆ ಒಂದೇ ಜನಾಂಗವೂ ಒಂದೇ ಭಾಷೆಯೂ ಇದೆ. ಇವರು ಇದನ್ನು ಮಾಡಲಾರಂಭಿಸಿದ್ದಾರೆ. ಈಗ ಇನ್ನು ಮುಂದೆ ಇವರು ಮಾಡುವುದಕ್ಕೆ ಉದ್ದೇಶಿಸುವುದು ಇವರಿಗೆ ಅಸಾಧ್ಯವಾಗುವುದಿಲ್ಲ. \v 7 ನಾವು ಇಳಿದು ಹೋಗಿ, ಇವರು ಒಬ್ಬರ ಮಾತನ್ನು ಒಬ್ಬರು ತಿಳಿಯದಂತೆ, ಇವರ ಭಾಷೆಯನ್ನು ಗಲಿಬಿಲಿ ಮಾಡೋಣ,” ಎಂದರು. \p \v 8 ಆದ್ದರಿಂದ ಯೆಹೋವ ದೇವರು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿದರು. ಆಗ ಅವರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು. \v 9 ಆದಕಾರಣ ಅದಕ್ಕೆ, ಬಾಬೆಲ್\f + \fr 11:9 \fr*\fq ಬಾಬೆಲ್ \fq*\ft ಹೀಬ್ರೂ ಭಾಷೆಯಲ್ಲಿ \ft*\fq ಗಲಿಬಿಲಿ\fq*\f* ಎಂದು ಹೆಸರಾಯಿತು. ಏಕೆಂದರೆ ಅಲ್ಲಿ ಯೆಹೋವ ದೇವರು ಇಡೀ ಜಗತ್ತಿನ ಭಾಷೆಗಳನ್ನು ಗಲಿಬಿಲಿ ಮಾಡಿದರು. ಅಲ್ಲಿಂದ ಯೆಹೋವ ದೇವರು ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿಬಿಟ್ಟರು. \s1 ಶೇಮನಿಂದ ಅಬ್ರಾಮನವರೆಗೆ \p \v 10 ಶೇಮನ ವಂಶಾವಳಿ: \b \li1 ಶೇಮನು ನೂರು ವರ್ಷದವನಾಗಿದ್ದಾಗ, ಎಂದರೆ, ಪ್ರಳಯವಾಗಿ ಎರಡು ವರ್ಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು. \v 11 ಶೇಮನಿಂದ ಅರ್ಪಕ್ಷದನು ಹುಟ್ಟಿದ ಮೇಲೆ, ಶೇಮನು ಐನೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು. \li1 \v 12 ಅರ್ಪಕ್ಷದನು ಮೂವತ್ತೈದು ವರ್ಷದವನಾಗಿರುವಾಗ, ಅವನಿಂದ ಶೆಲಹನು ಹುಟ್ಟಿದನು. \v 13 ಅರ್ಪಕ್ಷದನಿಂದ ಶೆಲಹನು ಹುಟ್ಟಿದ ಮೇಲೆ ಅರ್ಪಕ್ಷದನು ನಾನೂರ ಮೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು. \li1 \v 14 ಶೆಲಹನು ಮೂವತ್ತು ವರ್ಷದವನಾಗಿದ್ದಾಗ, ಅವನಿಂದ ಏಬೆರನು ಹುಟ್ಟಿದನು. \v 15 ಶೆಲಹನಿಂದ ಏಬೆರನು ಹುಟ್ಟಿದ ಮೇಲೆ, ಶೆಲಹನು ನಾನೂರ ಮೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು. \li1 \v 16 ಏಬೆರನು ಮೂವತ್ತ ನಾಲ್ಕು ವರ್ಷದವನಾಗಿದ್ದಾಗ, ಅವನಿಂದ ಪೆಲೆಗನು ಹುಟ್ಟಿದನು. \v 17 ಏಬೆರನಿಂದ ಪೆಲೆಗನು ಹುಟ್ಟಿದ ಮೇಲೆ, ಏಬೆರನು ನಾನೂರ ಮೂವತ್ತು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು. \li1 \v 18 ಪೆಲೆಗನು ಮೂವತ್ತು ವರ್ಷದವನಾಗಿದ್ದಾಗ, ಅವನಿಂದ ರೆಗೂವನು ಹುಟ್ಟಿದನು. \v 19 ಪೆಲೆಗನಿಂದ ರೆಗೂವನು ಹುಟ್ಟಿದ ಮೇಲೆ, ಪೆಲೆಗನು ಇನ್ನೂರ ಒಂಬತ್ತು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು. \li1 \v 20 ರೆಗೂವನು ಮೂವತ್ತೆರಡು ವರ್ಷದವನಾಗಿದ್ದಾಗ, ಅವನಿಂದ ಸೆರೂಗನು ಹುಟ್ಟಿದನು. \v 21 ರೆಗೂವನಿಂದ ಸೆರೂಗನು ಹುಟ್ಟಿದ ಮೇಲೆ, ರೆಗೂವನು ಇನ್ನೂರ ಏಳು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು. \li1 \v 22 ಸೆರೂಗನು ಮೂವತ್ತು ವರ್ಷದವನಾಗಿದ್ದಾಗ, ಅವನಿಂದ ನಾಹೋರನು ಹುಟ್ಟಿದನು. \v 23 ಸೆರೂಗನಿಂದ ನಾಹೋರನು ಹುಟ್ಟಿದ ಮೇಲೆ, ಸೆರೂಗನು ಇನ್ನೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು. \li1 \v 24 ನಾಹೋರನು ಇಪ್ಪತ್ತೊಂಬತ್ತು ವರ್ಷದವನಾಗಿದ್ದಾಗ, ಅವನಿಂದ ತೆರಹನು ಹುಟ್ಟಿದನು. \v 25 ನಾಹೋರನಿಂದ ತೆರಹನು ಹುಟ್ಟಿದ ಮೇಲೆ, ನಾಹೋರನು ನೂರ ಹತ್ತೊಂಬತ್ತು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು. \li1 \v 26 ತೆರಹನು ಎಪ್ಪತ್ತು ವರ್ಷದವನಾಗಿದ್ದಾಗ, ಅವನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು. \s1 ಅಬ್ರಾಮನ ವಂಶ \p \v 27 ತೆರಹನ ವಂಶಾವಳಿ: \b \p ತೆರಹನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು. ಹಾರಾನನಿಂದ ಲೋಟನು ಹುಟ್ಟಿದನು. \v 28 ಆದರೆ ಹಾರಾನನು ತಾನು ಹುಟ್ಟಿದ ಸೀಮೆಯಾದ ಕಸ್ದೀಯರ ಊರ್ ಎಂಬ ಪಟ್ಟಣದಲ್ಲಿ ತನ್ನ ತಂದೆ ತೆರಹನಿಗಿಂತ ಮೊದಲು ಸತ್ತನು. \v 29 ಅಬ್ರಾಮನೂ ನಾಹೋರನೂ ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು. ಹಾರಾನನು ಮಿಲ್ಕಾಳಿಗೂ ಇಸ್ಕಳಿಗೂ ತಂದೆ. \v 30 ಸಾರಯಳು ಬಂಜೆಯಾದದ್ದರಿಂದ ಆಕೆಗೆ ಮಕ್ಕಳಿರಲಿಲ್ಲ. \p \v 31 ತೆರಹನು ತನ್ನ ಮಗನಾದ ಅಬ್ರಾಮನನ್ನು ಮತ್ತು ತನಗೆ ಮೊಮ್ಮಗನೂ ಹಾರಾನನಿಗೆ ಮಗನೂ ಆದ ಲೋಟನನ್ನೂ ಹಾಗೂ ತನಗೆ ಸೊಸೆಯೂ ಅಬ್ರಾಮನಿಗೆ ಹೆಂಡತಿಯೂ ಆದ ಸಾರಯಳನ್ನೂ ಕರೆದುಕೊಂಡು ಕಾನಾನ್ ದೇಶಕ್ಕೆ ಹೋಗುವುದಕ್ಕಾಗಿ ಕಸ್ದೀಯರ ಊರ್ ಪಟ್ಟಣವನ್ನು ಬಿಟ್ಟು, ಹಾರಾನ್ ಎಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸವಾಗಿದ್ದನು. \p \v 32 ತೆರಹನು ಇನ್ನೂರ ಐದು ವರ್ಷ ಜೀವಿಸಿ, ಹಾರಾನಿನಲ್ಲಿ ಮರಣಹೊಂದಿದನು. \c 12 \s1 ಅಬ್ರಾಮನಿಗಾದ ಕರೆ \p \v 1 ಯೆಹೋವ ದೇವರು ಅಬ್ರಾಮನಿಗೆ ಹೀಗೆ ಹೇಳಿದರು, “ನೀನು ನಿನ್ನ ಸ್ವದೇಶದಿಂದಲೂ ಬಂಧುಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರಬಂದು, ನಾನು ನಿನಗೆ ತೋರಿಸುವ ನಾಡಿಗೆ ಹೋಗು. \q1 \v 2 “ನಾನು ನಿನ್ನನ್ನು ದೊಡ್ಡ ಜನಾಂಗದವನನ್ನಾಗಿ ಮಾಡಿ, \q2 ನಿನ್ನನ್ನು ಆಶೀರ್ವದಿಸಿ, \q1 ನಿನ್ನ ಹೆಸರನ್ನು ಪ್ರಸಿದ್ಧ ಮಾಡುವೆನು. \q2 ನೀನು ಆಶೀರ್ವಾದವಾಗಿ ಇರುವಿ. \q1 \v 3 ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು. \q2 ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು. \q1 ನಿನ್ನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ \q2 ಆಶೀರ್ವಾದ ಉಂಟಾಗುವುದು.” \p \v 4 ಆದ್ದರಿಂದ ಯೆಹೋವ ದೇವರು ತನಗೆ ಹೇಳಿದ ಪ್ರಕಾರ, ಅಬ್ರಾಮನು ಹೊರಟುಹೋದನು. ಲೋಟನು ಅವನೊಂದಿಗೆ ಹೋದನು. ಅಬ್ರಾಮನು ಹಾರಾನಿನಿಂದ ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು. \v 5 ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ, ತನ್ನ ಸಹೋದರನ ಮಗ ಲೋಟನನ್ನೂ, ತಾವು ಕೂಡಿಸಿಕೊಂಡಿದ್ದ ಎಲ್ಲಾ ಆಸ್ತಿಯನ್ನೂ, ಹಾರಾನಿನಲ್ಲಿ ಸಂಪಾದಿಸಿಕೊಂಡಿದ್ದ ಎಲ್ಲಾ ಜನರನ್ನೂ ತಮ್ಮ ಸಂಗಡ ಕರೆದುಕೊಂಡು ಕಾನಾನ್ ದೇಶಕ್ಕೆ ಸೇರಿದನು. \p \v 6 ಅಬ್ರಾಮನು ಆ ದೇಶದಲ್ಲಿ ಶೆಕೆಮ್ ಎಂಬ ಸ್ಥಳದ ಮೋರೆ ಎಂಬ ಮಹಾವೃಕ್ಷದವರೆಗೆ ಪ್ರಯಾಣಮಾಡಿದನು. ಆಗ ಕಾನಾನ್ಯರು ಆ ದೇಶದಲ್ಲಿ ಇದ್ದರು. \v 7 ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನು ನಿನ್ನ ಸಂತತಿಗೆ ಈ ದೇಶವನ್ನು ಕೊಡುವೆನು,” ಎಂದರು. ಆದ್ದರಿಂದ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿದನು. \p \v 8 ಅಲ್ಲಿಂದ ಅವರು ಬೇತೇಲಿನ ಪೂರ್ವದ ಬೆಟ್ಟಕ್ಕೆ ಹೋಗಿ, ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರೂ ಇರುವ ಹಾಗೆ ತನ್ನ ಗುಡಾರವನ್ನು ಹಾಕಿಕೊಂಡನು. ಅಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಆರಾಧಿಸಿದನು. \p \v 9 ಅಬ್ರಾಮನು ಪ್ರಯಾಣಮಾಡಿ, ನೆಗೆವ\f + \fr 12:9 \fr*\fq ನೆಗೆವ \fq*\ft ಅರ್ಥ \ft*\fqa ದೇಶದ ದಕ್ಷಿಣ ಪ್ರಾಂತ್ಯದ ಕಡೆಗೆ\fqa*\f* ಕಡೆಗೆ ಹೊರಟನು. \s1 ಈಜಿಪ್ಟಿನಲ್ಲಿ ಅಬ್ರಾಮನು \p \v 10 ಆಗ ಆ ದೇಶದಲ್ಲಿ ಬರ ಉಂಟಾದದ್ದರಿಂದ, ಅಬ್ರಾಮನು ಈಜಿಪ್ಟಿನಲ್ಲಿ ಕೆಲವು ಸಮಯ ಇರಲು ಇಳಿದು ಹೋದನು. ಏಕೆಂದರೆ ಬರವು ಆ ದೇಶದಲ್ಲಿ ಘೋರವಾಗಿತ್ತು. \v 11 ಅವನು ಈಜಿಪ್ಟನ್ನು ಸಮೀಪಿಸುತ್ತಿದ್ದಾಗ, ತನ್ನ ಹೆಂಡತಿ ಸಾರಯಳಿಗೆ, “ನೀನು ನೋಡುವುದಕ್ಕೆ ರೂಪವತಿಯೆಂದು ನನಗೆ ತಿಳಿದಿದೆ. \v 12 ಹೀಗಿರುವುದರಿಂದ ಈಜಿಪ್ಟಿನವರು ನಿನ್ನನ್ನು ಕಂಡು, ‘ಈಕೆಯು ಅವನ ಹೆಂಡತಿ’ ಎಂದು ಹೇಳಿ, ನನ್ನನ್ನು ಕೊಂದುಹಾಕಿ, ನಿನ್ನನ್ನು ಉಳಿಸುವರು. \v 13 ನಿನ್ನ ದೆಸೆಯಿಂದ ನನಗೆ ಒಳ್ಳೆಯದಾಗಿ, ನನ್ನ ಪ್ರಾಣವು ಉಳಿಯುವಂತೆ ನೀನು ನನ್ನ ಸಹೋದರಿ ಎಂದು ದಯಮಾಡಿ ಹೇಳಬೇಕು,” ಎಂದು ಹೇಳಿದನು. \p \v 14 ಅಬ್ರಾಮನು ಈಜಿಪ್ಟಿಗೆ ಬಂದಾಗ, ಈಜಿಪ್ಟಿನವರು, ಆ ಸಾರಯಳು ಬಹಳ ಸುಂದರಿ ಎಂದುಕೊಂಡರು. \v 15 ಫರೋಹನ ಅಧಿಕಾರಿಗಳು ಆಕೆಯನ್ನು ನೋಡಿ, ಫರೋಹನ ಮುಂದೆ ಆಕೆಯನ್ನು ಹೊಗಳಿ, ಆ ಸ್ತ್ರೀಯನ್ನು ಅವನ ಅರಮನೆಗೆ ಕರೆದುಕೊಂಡು ಹೋದರು. \v 16 ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೆಯದನ್ನು ಮಾಡಿದನು. ಅವನಿಗೆ ಕುರಿ, ಎತ್ತು, ಕತ್ತೆಗಳೂ ದಾಸದಾಸಿಯರೂ ಹೆಣ್ಣು ಕತ್ತೆಗಳೂ ಒಂಟೆಗಳೂ ದೊರೆತವು. \p \v 17 ಆದರೆ ಯೆಹೋವ ದೇವರು ಫರೋಹನನ್ನೂ, ಅವನ ಮನೆಯನ್ನೂ ಅಬ್ರಾಮನ ಹೆಂಡತಿ ಸಾರಯಳಿಗಾಗಿ ಭಯಂಕರವಾದ ರೋಗಗಳಿಂದ ಬಾಧಿಸಿದರು. \v 18 ಅನಂತರ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ಮಾಡಿದ್ದೇನು? ಈಕೆಯು ನಿನ್ನ ಹೆಂಡತಿ ಎಂದು ಯಾಕೆ ನನಗೆ ತಿಳಿಸಲಿಲ್ಲ? \v 19 ‘ಆಕೆಯು ನನ್ನ ಸಹೋದರಿ,’ ಎಂದು ಯಾಕೆ ಹೇಳಿದೆ? ನೀನು ಹಾಗೆ ಹೇಳಿದ್ದರಿಂದ ಆಕೆಯನ್ನು ನನಗೆ ಹೆಂಡತಿಯಾಗಿ ಇಟ್ಟುಕೊಳ್ಳುವುದರಲ್ಲಿದ್ದೆನು. ಆದರೆ ಈಗ, ನಿನ್ನ ಹೆಂಡತಿ, ಈಕೆಯನ್ನು ನೀನು ಕರೆದುಕೊಂಡು ಹೋಗು,” ಎಂದನು. \v 20 ಫರೋಹನು ತನ್ನ ಜನರಿಗೆ ಅವನ ವಿಷಯದಲ್ಲಿ ಆಜ್ಞಾಪಿಸಲು, ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗಿದ್ದ ಎಲ್ಲದರ ಸಮೇತ ಅಲ್ಲಿಂದ ಕಳುಹಿಸಿಬಿಟ್ಟನು. \c 13 \s1 ಅಬ್ರಾಮನು ಲೋಟನನ್ನು ಅಗಲಿದ್ದು \p \v 1 ಆಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ತನಗೆ ಇದ್ದದ್ದನ್ನೆಲ್ಲಾ ತೆಗೆದುಕೊಂಡು ಲೋಟನ ಸಂಗಡ ಈಜಿಪ್ಟನ್ನು ಬಿಟ್ಟು ನೆಗೆವಕ್ಕೆ ಪ್ರಯಾಣಮಾಡಿದನು. \v 2 ಅಬ್ರಾಮನು ಪಶುಗಳು, ಬೆಳ್ಳಿ ಮತ್ತು ಬಂಗಾರವನ್ನು ಹೊಂದಿ ಬಹು ಧನವಂತನಾಗಿದ್ದನು. \p \v 3 ಅವನು ತನ್ನ ಪ್ರಯಾಣಗಳಲ್ಲಿ ನೆಗೆವದಿಂದ ಬೇತೇಲಿಗೆ, ಎಂದರೆ ಮೊದಲು ಬೇತೇಲಿಗೂ ಆಯಿ ಎಂಬ ಊರಿಗೂ ಮಧ್ಯದಲ್ಲಿ ಅವನ ಗುಡಾರವಿದ್ದ ಸ್ಥಳಕ್ಕೆ ಬಂದನು. \v 4 ಅಲ್ಲಿ ಅಬ್ರಾಮನು ಯೆಹೋವ ದೇವರ ಹೆಸರನ್ನು ಹೇಳಿಕೊಂಡು ಆರಾಧಿಸಿದನು. \p \v 5 ಅಬ್ರಾಮನ ಸಂಗಡ ಬಂದ ಲೋಟನಿಗೆ ಸಹ ಕುರಿ ದನಗಳೂ ಗುಡಾರಗಳೂ ಇದ್ದವು. \v 6 ಆಗ ಅವರು ಒಂದಾಗಿ ವಾಸಿಸಲಿಕ್ಕೆ ಆ ಸ್ಥಳ ಸಾಲದೆ ಹೋಯಿತು. ಅವರಿಬ್ಬರ ಸಂಪತ್ತು ಬಹಳವಾಗಿದ್ದರಿಂದ ಒಂದೇ ಸ್ಥಳದಲ್ಲಿ ಅವರು ವಾಸವಾಗಿರಲು ಆಗಲಿಲ್ಲ. \v 7 ಆಗ ಅಬ್ರಾಮನ ದನ ಕಾಯುವವರಿಗೂ ಲೋಟನ ದನ ಕಾಯುವವರಿಗೂ ಜಗಳವಾಯಿತು. ಕಾನಾನ್ಯರೂ ಪೆರಿಜೀಯರೂ ಆಗ ದೇಶದಲ್ಲಿ ವಾಸವಾಗಿದ್ದರು. \p \v 8 ಅಬ್ರಾಮನು ಲೋಟನಿಗೆ, “ನನಗೂ, ನಿನಗೂ; ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಿರಬಾರದು. ಏಕೆಂದರೆ ನಾವು ಬಳಗದವರು. \v 9 ದೇಶವೆಲ್ಲಾ ನಿನ್ನ ಮುಂದೆ ಇರುತ್ತದೆಯಲ್ಲವೆ? ನಾವು ಪ್ರತ್ಯೇಕವಾಗೋಣ. ನೀನು ಎಡಕ್ಕೆ ಹೋದರೆ, ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ, ನಾನು ಎಡಕ್ಕೆ ಹೋಗುವೆನು,” ಎಂದನು. \p \v 10 ಲೋಟನು ತನ್ನ ಕಣ್ಣುಗಳನ್ನೆತ್ತಿ ನೋಡಿ ಯೊರ್ದನಿನ ಮೈದಾನವನ್ನೆಲ್ಲಾ ಕಂಡನು. ಏಕೆಂದರೆ ಯೆಹೋವ ದೇವರು ಸೊದೋಮನ್ನೂ ಗೊಮೋರವನ್ನೂ ನಾಶ ಮಾಡುವುದಕ್ಕಿಂತ ಮುಂಚೆ, ಅದೆಲ್ಲಾ ಚೋಗರಿನವರೆಗೆ ನೀರಾವರಿ ಪ್ರದೇಶವಾಗಿದ್ದು, ಯೆಹೋವ ದೇವರ ತೋಟದಂತೆಯೂ ಈಜಿಪ್ಟ್ ದೇಶದಂತೆಯೂ ಇತ್ತು. \v 11 ಆದುದರಿಂದ ಲೋಟನು ಯೊರ್ದನಿನ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಲೋಟನು ಪೂರ್ವದಿಕ್ಕಿನ ಕಡೆಗೆ ಹೊರಟಿದ್ದರಿಂದ, ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾದರು. \v 12 ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನಾದರೋ ಸಮತಟ್ಟಾದ ಊರುಗಳಲ್ಲಿ ವಾಸಿಸುತ್ತಾ ಸೊದೋಮಿನ ಬಳಿ ತನ್ನ ಗುಡಾರವನ್ನು ಹಾಕಿದನು. \v 13 ಸೊದೋಮಿನ ಜನರು ದುಷ್ಟರಾಗಿದ್ದರು ಮತ್ತು ಯೆಹೋವ ದೇವರ ವಿರುದ್ಧ ಬಹಳ ಪಾಪಮಾಡುತ್ತಿದ್ದರು. \p \v 14 ಲೋಟನು ಅಬ್ರಾಮನಿಂದ ಹೋದ ಮೇಲೆ ಯೆಹೋವ ದೇವರು ಅವನಿಗೆ, “ಈಗ ನೀನಿರುವ ಸ್ಥಳದಿಂದ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಪಶ್ಚಿಮಕ್ಕೂ ಕಣ್ಣೆತ್ತಿ ನೋಡು. \v 15 ಏಕೆಂದರೆ ನೀನು ಕಾಣುವ ದೇಶವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು. \v 16 ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ, ನಿನ್ನ ಸಂತಾನದವರನ್ನು ಸಹ ಲೆಕ್ಕಿಸಲು ಸಾಧ್ಯವಾಗುವುದು. \v 17 ಎದ್ದು ದೇಶದ ಉದ್ದಗಲಕ್ಕೂ ನಡೆದಾಡು. ನಾನು ನಿನಗೆ ಅದನ್ನು ಕೊಡುವೆನು,” ಎಂದರು. \p \v 18 ಅನಂತರ ಅಬ್ರಾಮನು ತನ್ನ ಗುಡಾರವನ್ನು ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆಯ ತೋಪಿಗೆ ಬಂದು, ಅಲ್ಲಿ ವಾಸವಾಗಿದ್ದನು. ಅಲ್ಲಿ ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿದನು. \c 14 \s1 ಅಬ್ರಾಮನು ಲೋಟನನ್ನು ರಕ್ಷಿಸಿದ್ದು \p \v 1 ಶಿನಾರಿನ ಅರಸ ಅಮ್ರಾಫೆಲನು ಎಲ್ಲಸಾರಿನ ಅರಸ ಅರಿಯೋಕನು, ಏಲಾಮಿನ ಅರಸ ಕೆದೊರ್ಲಗೋಮರನು, ಗೋಯಿಮದ ಅರಸ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನೆಂದರೆ: \v 2 ಇವರು ಸೊದೋಮಿನ ಅರಸ ಬೆರಗನೂ ಗೊಮೋರದ ಅರಸ ಬಿರ್ಶಗನೂ ಅದ್ಮಾಹದ ಅರಸ ಶಿನಾಬನಿಗೂ ಚೆಬೋಯಿಮಿನ ಅರಸ ಶೆಮೇಬರನಿಗೂ ಬೆಲಗಿನ ಅಂದರೆ, ಚೋಗರದ ಅರಸನಿಗೂ ವಿರೋಧವಾಗಿ ಯುದ್ಧಮಾಡಿದರು. \v 3 ಇವರೆಲ್ಲರು ಉಪ್ಪಿನ ಸಮುದ್ರವಾಗಿರುವ ಸಿದ್ದೀಮ್ ತಗ್ಗಿನಲ್ಲಿ ಒಟ್ಟಾಗಿ ಕೂಡಿಬಂದರು. \v 4 ಅವರು ಹನ್ನೆರಡು ವರ್ಷ ಕೆದೊರ್ಲಗೋಮರನಿಗೆ ಸೇವೆಮಾಡಿ, ಹದಿಮೂರನೆಯ ವರ್ಷದಲ್ಲಿ ತಿರುಗಿಬಿದ್ದರು. \p \v 5 ಹದಿನಾಲ್ಕನೆಯ ವರ್ಷದಲ್ಲಿ ಕೆದೊರ್ಲಗೋಮರನೂ ಅವನ ಸಂಗಡ ಇದ್ದ ಅರಸರೂ ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನೂ, ಹಾಮಿನಲ್ಲಿ ಜೂಜ್ಯರನ್ನೂ, ಶಾವೆ ಕಿರ್ಯಾತಯಿಮಿನಲ್ಲಿ ಏಮಿಯರನ್ನೂ, \v 6 ಅವರ ಬೆಟ್ಟವಾದ ಸೇಯೀರನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸಮೀಪವಾದ ಏಲ್ಪಾರಾನಿನವರೆಗೂ ಅವರನ್ನು ಸೋಲಿಸಿದರು. \v 7 ಅವರು ಹಿಂದಿರುಗಿ ಕಾದೇಶ್ ಎಂಬ ಎನ್ಮಿಷ್ಪಾಟಿಗೆ ಬಂದು, ಅಮಾಲೇಕ್ಯರ ಎಲ್ಲಾ ಬಯಲನ್ನು ಹಜಜೋನ್ ತಾಮಾರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಜಯಿಸಿದರು. \p \v 8 ಸೊದೋಮಿನ ಅರಸನೂ ಗೊಮೋರದ ಅರಸನೂ ಅದ್ಮಾಹದ ಅರಸನೂ ಚೆಬೋಯಿಮಿನ ಅರಸನೂ ಚೋಗರೆಂಬ ಬೆಲಗದ ಅರಸನೂ ಹೊರಟು, \v 9 ಏಲಾಮಿನ ಅರಸ ಕೆದೊರ್ಲಗೋಮರನಿಗೂ ಗೋಯಿಮದ ಅರಸನಾದ ತಿದ್ಗಾಲನಿಗೂ ಶಿನಾರಿನ ಅರಸ ಅಮ್ರಾಫೆಲನಿಗೂ ಎಲ್ಲಸಾರಿನ ಅರಸ ಅರಿಯೋಕನಿಗೂ ವಿರೋಧವಾಗಿ ಸಿದ್ದೀಮ್ ತಗ್ಗಿನಲ್ಲಿ ಯುದ್ಧಮಾಡಿದರು. ಹೀಗೆ ನಾಲ್ವರು ಅರಸರಿಗೆ ವಿರೋಧವಾಗಿ ಐದು ಮಂದಿ ಅರಸರು ಎದುರಿಸಿದರು. \v 10 ಸಿದ್ದೀಮ್ ತಗ್ಗು ಕಲ್ಲರಗಿನ ಕೆಸರುಕುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ಅರಸರು ಓಡಿಹೋಗಿ ಅದರಲ್ಲಿ ಬಿದ್ದರು. ಉಳಿದವರು ಬೆಟ್ಟಕ್ಕೆ ಓಡಿಹೋದರು. \v 11 ಆಗ ಅವರು ಸೊದೋಮ್, ಗೊಮೋರಗಳ ಎಲ್ಲಾ ಸಂಪತ್ತನ್ನೂ, ಅವರ ಎಲ್ಲಾ ಆಹಾರ ಪದಾರ್ಥಗಳನ್ನೂ ತೆಗೆದುಕೊಂಡು ಹೊರಟು ಹೋದರು. \v 12 ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗ ಲೋಟನನ್ನು ಅವನ ಆಸ್ತಿ ಸಹಿತ ಹಿಡಿದುಕೊಂಡು ಹೋದರು. \p \v 13 ತಪ್ಪಿಸಿಕೊಂಡವನೊಬ್ಬನು ಹೋಗಿ ಹಿಬ್ರಿಯನಾದ ಅಬ್ರಾಮನಿಗೆ ಇದನ್ನು ತಿಳಿಸಿದನು. ಆಗ ಅಬ್ರಾಮನು ಎಷ್ಕೋಲನಿಗೂ ಆನೇರನಿಗೂ ಸಹೋದರನಾಗಿದ್ದ ಅಮೋರಿಯನಾದ ಮಮ್ರೆಯನ ತೋಪಿನಲ್ಲಿ ವಾಸವಾಗಿದ್ದನು. ಇವರು ಅಬ್ರಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು. \v 14 ತನ್ನ ಸಹೋದರನ ಮಗನು ಸೆರೆಯಾಗಿ ಹೋಗಿರುವುದನ್ನು ಕೇಳಿದಾಗ, ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿ, ಶಿಕ್ಷಿತರಾಗಿದ್ದ ಮುನ್ನೂರ ಹದಿನೆಂಟು ಸೇವಕರನ್ನು ಯುದ್ಧಕ್ಕೆ ಸಿದ್ಧಮಾಡಿ, ದಾನಿನವರೆಗೆ ಹಿಂದಟ್ಟಿದನು. \v 15 ಅಬ್ರಾಮನು ರಾತ್ರಿಯಲ್ಲಿ ಅವರಿಗೆ ವಿರೋಧವಾಗಿ ತನ್ನ ಸೇವಕರ ಸೈನ್ಯವನ್ನು ವಿಭಾಗಿಸಿ, ಅವರನ್ನು ಹೊಡೆದು, ದಮಸ್ಕದ ಉತ್ತರದಲ್ಲಿ ಹೋಬಾದವರೆಗೆ ಅವರನ್ನು ಸೋಲಿಸಿದನು. \v 16 ಆಸ್ತಿಯನ್ನೆಲ್ಲಾ ಹಿಂದಕ್ಕೆ ತೆಗೆದುಕೊಂಡು ಬಂದನು. ತನ್ನ ಬಂಧುವಾದ ಲೋಟನನ್ನೂ, ಅವನ ಸಂಪತ್ತನ್ನೂ ಸ್ತ್ರೀಯರನ್ನೂ ಜನರನ್ನೂ ಹಿಂದಕ್ಕೆ ತೆಗೆದುಕೊಂಡು ಬಂದನು. \p \v 17 ಅವನು ಕೆದೊರ್ಲಗೋಮರನನ್ನೂ, ಅವನ ಸಂಗಡ ಇದ್ದ ರಾಜರನ್ನೂ ಸೋಲಿಸಿ, ಹಿಂದಿರುಗಿ ಬಂದಾಗ, ಸೊದೋಮಿನ ಅರಸನು ಹೊರಟು ಶಾವೆ ತಗ್ಗು ಎಂಬ ಅರಸನ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಳ್ಳುವುದಕ್ಕಾಗಿ ಬಂದನು. \p \v 18 ಸಾಲೇಮಿನ ಅರಸ ಮೆಲ್ಕಿಜೆದೇಕನು ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತಂದನು. ಇವನು ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು. \v 19 ಇವನು ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು: \q1 “ಅಬ್ರಾಮನು ಭೂಮಿ, ಆಕಾಶವನ್ನು ಸೃಷ್ಟಿಸಿದ \q2 ಮಹೋನ್ನತ ದೇವರಿಂದ ಆಶೀರ್ವಾದ ಹೊಂದಲಿ. \q1 \v 20 ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ \q2 ಮಹೋನ್ನತ ದೇವರು ಸ್ತುತಿಹೊಂದಲಿ.” \m ಅಬ್ರಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನು. \p \v 21 ಸೊದೋಮಿನ ಅರಸನು ಅಬ್ರಾಮನಿಗೆ, “ನೀನು ಬಿಡಿಸಿಕೊಂಡು ಬಂದ ಜನರನ್ನು ನನಗೆ ಕೊಡು. ಸಂಪತ್ತನ್ನು ನೀನು ತೆಗೆದುಕೋ,” ಎಂದನು. \p \v 22 ಅದಕ್ಕೆ ಅಬ್ರಾಮನು ಸೊದೋಮಿನ ಅರಸನಿಗೆ, “ಭೂಮಿ ಆಕಾಶವನ್ನು ಸ್ವಾಧೀನ ಪಡಿಸಿಕೊಂಡಿರುವ ಮಹೋನ್ನತ ದೇವರಾಗಿರುವ ಯೆಹೋವ ದೇವರ ಕಡೆಗೆ ನನ್ನ ಕೈ ಎತ್ತಿ ಪ್ರಮಾಣ ಮಾಡುತ್ತೇನೆ. \v 23 ನಿನಗೆ ಸೇರಿದ ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಾನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ‘ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದ್ದೇನೆ’ ಎಂದು ನೀನು ಹೇಳಬಾರದು. \v 24 ನನ್ನ ಆಳುಗಳು ಊಟಮಾಡಿದ್ದು ಸಾಕು. ನನ್ನ ಸಂಗಡ ಬಂದ ಆನೇರ, ಎಷ್ಕೋಲ್ ಮತ್ತು ಮಮ್ರೆ ಎಂಬ ಈ ಜನರ ಪಾಲನ್ನು ಬಿಟ್ಟು ನಾನು ಏನನ್ನೂ ತೆಗೆದುಕೊಳ್ಳುವುದಿಲ್ಲ. ಇವರು ತಮ್ಮ ಪಾಲನ್ನು ತೆಗೆದುಕೊಳ್ಳಲಿ,” ಎಂದನು. \c 15 \s1 ಅಬ್ರಾಮನೊಂದಿಗೆ ಯೆಹೋವ ದೇವರ ಒಡಂಬಡಿಕೆ \p \v 1 ಇವುಗಳಾದ ಮೇಲೆ ಯೆಹೋವ ದೇವರ ವಾಕ್ಯವು ಅಬ್ರಾಮನಿಗೆ ದರ್ಶನದಲ್ಲಿ ಉಂಟಾಗಿ ಹೇಳಿದ್ದೇನೆಂದರೆ: \q1 “ಅಬ್ರಾಮನೇ, ಭಯಪಡಬೇಡ. \q2 ನಾನು ನಿನಗೆ ಗುರಾಣಿಯಾಗಿದ್ದೇನೆ. \q2 ನಾನೇ ನಿನಗೆ ಅತ್ಯಧಿಕ ಬಹುಮಾನವಾಗಿದ್ದೇನೆ.” \p \v 2 ಅದಕ್ಕೆ ಅಬ್ರಾಮನು, “ಸಾರ್ವಭೌಮ ಯೆಹೋವ ದೇವರೇ, ಮಕ್ಕಳಿಲ್ಲದವನಾಗಿರುವ ನನಗೆ ಏನು ಕೊಡುವಿರಿ? ಈ ದಮಸ್ಕದ ಎಲೀಯೆಜೆರನಿಗೆ ನನ್ನ ಆಸ್ತಿ ಪಾಲಾಗಿಬಿಡುವುದು,” ಎಂದನು. \v 3 ಅನಂತರ ಅಬ್ರಾಮನು, “ನೀವು ನನಗೆ ಸಂತಾನವನ್ನು ಕೊಡಲಿಲ್ಲ. ನನ್ನ ಮನೆಯಲ್ಲಿರುವ ದಾಸನೇ ಉತ್ತರಾಧಿಕಾರಿಯಾಗಿರುವನು,” ಎಂದನು. \p \v 4 ಆಗ ಯೆಹೋವ ದೇವರ ವಾಕ್ಯವು, “ಈ ಮನುಷ್ಯನು ನಿನ್ನ ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದಲೇ ಹುಟ್ಟಿಬರುವ ನಿನ್ನ ಮಗನು ನಿನ್ನ ವಾರಸುದಾರನಾಗುವನು,” ಎಂದು ಹೇಳಿ, \v 5 ಯೆಹೋವ ದೇವರು ಅವನನ್ನು ಹೊರಗೆ ಕರೆದುಕೊಂಡು ಬಂದು, “ಈಗ ನೀನು ಆಕಾಶವನ್ನು ದೃಷ್ಟಿಸಿ, ನಕ್ಷತ್ರಗಳನ್ನು ಲೆಕ್ಕಿಸಲು ನಿನ್ನಿಂದಾದರೆ, ಲೆಕ್ಕಿಸು. ಅದರಂತೆಯೇ ನಿನ್ನ ಸಂತತಿಯು ಆಗುವುದು,” ಎಂದು ಹೇಳಿದರು. \p \v 6 ಅಬ್ರಾಮನು ಯೆಹೋವ ದೇವರನ್ನು ನಂಬಿದನು, ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು. \p \v 7 ದೇವರು ಅವನಿಗೆ, “ಈ ದೇಶವನ್ನು ಸೊತ್ತಾಗಿ ನಿನಗೆ ಕೊಡಲು, ಕಸ್ದೀಯರ ಊರ್ ಎಂಬ ಪ್ರದೇಶದಿಂದ ನಿನ್ನನ್ನು ಹೊರಗೆ ತಂದ ಯೆಹೋವ ದೇವರು ನಾನೇ,” ಎಂದು ಹೇಳಿದರು. \p \v 8 ಅದಕ್ಕೆ ಅವನು, “ಸಾರ್ವಭೌಮ ಯೆಹೋವ ದೇವರೇ ನಾನು ಅದನ್ನು ನನ್ನ ಸೊತ್ತಾಗಿ ಹೊಂದುವೆನೆಂದು ಯಾವುದರಿಂದ ತಿಳಿದುಕೊಳ್ಳಲಿ?” ಎಂದನು. \p \v 9 ಅದಕ್ಕೆ ಯೆಹೋವ ದೇವರು ಅಬ್ರಾಮನಿಗೆ, “ಮೂರು ವರ್ಷದ ಕಡಸನ್ನು, ಮೂರು ವರ್ಷದ ಮೇಕೆಯನ್ನು, ಮೂರು ವರ್ಷದ ಟಗರನ್ನು, ಒಂದು ಬೆಳವಕ್ಕಿಯನ್ನು, ಒಂದು ಪಾರಿವಾಳವನ್ನು ನನಗಾಗಿ ತೆಗೆದುಕೊಂಡು ಬಾ,” ಎಂದರು. \p \v 10 ಅನಂತರ ಅವನು ಇವುಗಳನ್ನೆಲ್ಲಾ ಯೆಹೋವ ದೇವರಿಗಾಗಿ ತೆಗೆದುಕೊಂಡು ಬಂದು ಎರಡೆರಡು ಹೋಳುಮಾಡಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು. ಆದರೆ ಅವನು ಪಕ್ಷಿಗಳನ್ನು ತುಂಡು ಮಾಡಲಿಲ್ಲ. \v 11 ರಣಹದ್ದುಗಳು ಆ ಶವಗಳ ಮೇಲೆ ಇಳಿದು ಬಂದಾಗ, ಅಬ್ರಾಮನು ಅವುಗಳನ್ನು ಓಡಿಸಿದನು. \p \v 12 ಸೂರ್ಯನು ಅಸ್ತಮಿಸಲಾಗಿ ಅಬ್ರಾಮನಿಗೆ ಗಾಢನಿದ್ರೆ ಹತ್ತಿತ್ತು. ಭೀಕರವಾದ ಕಾರ್ಗತ್ತಲು ಅವನ ಮೇಲೆ ಕವಿಯಿತು. \v 13 ಯೆಹೋವ ದೇವರು ಅಬ್ರಾಮನಿಗೆ, “ನಿನ್ನ ಸಂತತಿಯವರು ತಮ್ಮದಲ್ಲದ ದೇಶದಲ್ಲಿ ಪ್ರವಾಸಿಗಳಾಗಿರುವರು, ಅವರು ಗುಲಾಮರಾಗಿ ನಾಲ್ಕುನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಗುರಿಯಾಗುವರು ಎಂಬುದನ್ನು ನೀನು ಖಂಡಿತವಾಗಿಯೂ ತಿಳಿಯತಕ್ಕದ್ದು. \v 14 ಆದರೆ ಅವರು ಗುಲಾಮರಾಗಿ ಸೇವೆ ಸಲ್ಲಿಸುತ್ತಿದ್ದ ದೇಶಕ್ಕೆ ನಾನು ನ್ಯಾಯತೀರಿಸುವೆನು. ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು. \v 15 ನೀನಾದರೋ ಸಮಾಧಾನದಿಂದ ನಿನ್ನ ಪಿತೃಗಳ ಬಳಿಗೆ ಸೇರುವೆ. ಬಹಳ ಮುದಿ ಪ್ರಾಯದವನಾಗಿ ಮರಣಹೊಂದುವೆ. \v 16 ಆಗ ನಾಲ್ಕನೆಯ ಸಂತಾನದವರು ಇಲ್ಲಿಗೆ ತಿರುಗಿ ಬರುವರು. ಏಕೆಂದರೆ ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ,” ಎಂದು ಹೇಳಿದರು. \p \v 17 ಇದಾದ ಮೇಲೆ ಹೊತ್ತು ಮುಳುಗಿ ಕತ್ತಲಾಗುತ್ತಿರಲು, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು. \v 18 ಅದೇ ದಿನದಲ್ಲಿ ಯೆಹೋವ ದೇವರು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು, “ಈಜಿಪ್ಟ್ ದೇಶದ ನದಿಯಿಂದ ಮಹಾನದಿ ಯೂಫ್ರೇಟೀಸ್ ನದಿಯವರೆಗೆ ವಾಸಿಸುವ \v 19 ಕೇನ್ಯರೂ ಕೆನಿಜ್ಜೀಯರೂ ಕದ್ಮೋನಿಯರೂ \v 20 ಹಿತ್ತಿಯರೂ ಪೆರಿಜೀಯರೂ ರೆಫಾಯರೂ \v 21 ಅಮೋರಿಯರೂ ಕಾನಾನ್ಯರೂ ಗಿರ್ಗಾಷಿಯರೂ ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ,” ಎಂದು ಹೇಳಿದರು. \c 16 \s1 ಹಾಗರಳು ಮತ್ತು ಇಷ್ಮಾಯೇಲ್ \p \v 1 ಅಬ್ರಾಮನ ಹೆಂಡತಿ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಹಾಗರಳೆಂಬ ಈಜಿಪ್ಟಿನ ದಾಸಿ ಇದ್ದಳು. \v 2 ಆಗ ಸಾರಯಳು ಅಬ್ರಾಮನಿಗೆ, “ನಾನು ಮಕ್ಕಳನ್ನು ಹೆರದಂತೆ ಯೆಹೋವ ದೇವರು ನನಗೆ ಅಡ್ಡಿ ಮಾಡಿದ್ದಾರೆ. ದಯಮಾಡಿ ನೀನು ನನ್ನ ದಾಸಿಯ ಬಳಿಗೆ ಹೋಗು. ಒಂದು ವೇಳೆ ನಾನು ಅವಳ ಮೂಲಕ ಕುಟುಂಬವನ್ನು ಕಟ್ಟಬಲ್ಲೆ,” ಎಂದಳು. \p ಅಬ್ರಾಮನು ಸಾರಯಳ ಮಾತನ್ನು ಕೇಳಿದನು. \v 3 ಅಬ್ರಾಮನು ಕಾನಾನ್ ದೇಶದಲ್ಲಿ ಹತ್ತು ವರ್ಷ ವಾಸಿಸಿದ ತರುವಾಯ, ಅಬ್ರಾಮನ ಹೆಂಡತಿಯಾದ ಸಾರಯಳು ಈಜಿಪ್ಟಿನವಳಾದ ಹಾಗರಳೆಂಬ ದಾಸಿಯನ್ನು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು. \v 4 ಅವನು ಹಾಗರಳನ್ನು ಕೂಡಿದನು. ಆಗ ಅವಳು ಗರ್ಭಿಣಿಯಾದಳು. \p ತಾನು ಗರ್ಭಿಣಿಯಾದೆನೆಂದು ತಿಳಿದಾಗ, ಅವಳು ತನ್ನ ಯಜಮಾನಿಯನ್ನು ತಿರಸ್ಕರಿಸಿದಳು. \v 5 ಸಾರಯಳು ಅಬ್ರಾಮನಿಗೆ, “ನನಗೆ ಆದ ಅನ್ಯಾಯಕ್ಕೆ ನೀನೇ ಹೊಣೆ. ನಾನು ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರಕ್ಕೆ ಯೋಗ್ಯಳಾದೆನು. ಯೆಹೋವ ದೇವರು ನಿನಗೂ ನನಗೂ ನ್ಯಾಯತೀರಿಸಲಿ,” ಎಂದಳು. \p \v 6 ಆದರೆ ಅಬ್ರಾಮನು ಸಾರಯಳಿಗೆ, “ಇಗೋ, ನಿನ್ನ ದಾಸಿಯು ನಿನ್ನ ಕೈಯಲ್ಲಿ ಇದ್ದಾಳೆ. ನಿನ್ನ ಮನಸ್ಸಿಗೆ ಬಂದಂತೆ ಮಾಡು,” ಎಂದನು. ಆಗ ಸಾರಯಳು ಹಾಗರಳನ್ನು ಬಾಧಿಸಿದ್ದರಿಂದ, ಅವಳು ಸಾರಯಳಿಂದ ಓಡಿ ಹೋದಳು. \p \v 7 ಯೆಹೋವ ದೇವರ ದೂತನು ಮರುಭೂಮಿಯಲ್ಲಿ ಶೂರಿನ ಮಾರ್ಗವಾಗಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಹಾಗರಳನ್ನು ಕಂಡು, \v 8 “ಸಾರಯಳ ದಾಸಿ ಹಾಗರಳೇ, ನೀನು ಎಲ್ಲಿಂದ ಬಂದೆ? ನೀನು ಎಲ್ಲಿಗೆ ಹೋಗುತ್ತೀ?” ಎಂದು ವಿಚಾರಿಸಿದನು. \p ಅವಳು, “ನನ್ನ ಯಜಮಾನಿ ಸಾರಯಳನ್ನು ಬಿಟ್ಟು ಓಡಿ ಹೋಗುತ್ತಿದ್ದೇನೆ,” ಎಂದಳು. \p \v 9 ಯೆಹೋವ ದೇವರ ದೂತನು ಆಕೆಗೆ, “ನಿನ್ನ ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಆಕೆಗೆ ಅಧೀನಳಾಗಿರು,” ಎಂದನು. \v 10 ಇದಲ್ಲದೆ ಯೆಹೋವ ದೇವರ ದೂತನು ಅವಳಿಗೆ, “ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ಹೆಚ್ಚಿಸುತ್ತೇನೆ,” ಎಂದನು. \p \v 11 ಅನಂತರ ಯೆಹೋವ ದೇವರ ದೂತನು ಆಕೆಗೆ ಹೀಗೆ ಹೇಳಿದನು: \q1 “ನೀನು ಈಗ ಗರ್ಭಿಣಿಯಾಗಿರುವೆ, \q2 ಒಬ್ಬ ಮಗನನ್ನು ಹೆರುವೆ. \q1 ಅವನಿಗೆ, ಇಷ್ಮಾಯೇಲ್\f + \fr 16:11 \fr*\fq ಇಷ್ಮಾಯೇಲ್ \fq*\ft ಅಂದರೆ \ft*\fqa ದೇವರು ಕೇಳಿಸಿಕೊಳ್ಳುತ್ತಾರೆ.\fqa*\f* ಎಂದು ಹೆಸರಿಡಬೇಕು. \q2 ಏಕೆಂದರೆ ಯೆಹೋವ ದೇವರು ನಿನ್ನ ವ್ಯಥೆಗೆ ಕಿವಿಗೊಟ್ಟಿದ್ದಾರೆ. \q1 \v 12 ಅವನು ಕಾಡುಕತ್ತೆಯಂತೆ ಇರುವನು. \q2 ಪ್ರತಿಯೊಬ್ಬರಿಗೂ ವಿರೋಧವಾಗಿ ಅವನು ಕೈ ಎತ್ತುವನು, \q2 ಪ್ರತಿಯೊಬ್ಬರ ಕೈಯೂ ಅವನ ವಿರೋಧವಾಗಿ ಇರುವುದು. \q1 ಅವನು ತನ್ನ ಸಹೋದರರೆಲ್ಲರ \q2 ಎದುರಿನಲ್ಲಿ ವಾಸವಾಗಿರುವನು.” \p \v 13 ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವ ದೇವರಿಗೆ, “ನೀವು ನನ್ನನ್ನು ನೋಡುವ ದೇವರು,” ಎಂದು ಹೆಸರಿಟ್ಟಳು. ಏಕೆಂದರೆ, “ನನ್ನನ್ನು ನೋಡುವ ದೇವರನ್ನು ನಾನು ಇಲ್ಲಿ ನೋಡಿದೆ,” ಎಂದುಕೊಂಡಳು. \v 14 ಆದ್ದರಿಂದ ಆ ಬಾವಿಗೆ, ಬೇರ್ ಲಹೈರೋಯಿ\f + \fr 16:14 \fr*\fq ಬೇರ್ ಲಹೈರೋಯಿ \fq*\ft ಅಂದರೆ \ft*\fqa ಜೀವಿಸುವವರ ಬಾವಿ\fqa*\f* ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ. \p \v 15 ತರುವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳ ಮಗನಿಗೆ ಅಬ್ರಾಮನು ಇಷ್ಮಾಯೇಲ್ ಎಂದು ಹೆಸರಿಟ್ಟನು. \v 16 ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ, ಅಬ್ರಾಮನು ಎಂಬತ್ತಾರು ವರ್ಷದವನಾಗಿದ್ದನು. \c 17 \s1 ಸುನ್ನತಿಯ ಒಡಂಬಡಿಕೆ \p \v 1 ಅಬ್ರಾಮನು ತೊಂಬತ್ತೊಂಬತ್ತು ವರ್ಷದವನಾದಾಗ, ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನೇ ಸರ್ವಶಕ್ತ ದೇವರು. ನೀನು ನನ್ನ ಸನ್ನಿಧಿಯಲ್ಲಿಯೇ ನಡೆಯುತ್ತಾ ದೋಷವಿಲ್ಲದವನಾಗಿರು. \v 2 ನನಗೂ ನಿನಗೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ಮಾಡುವೆನು. ಇದಲ್ಲದೆ ನಿನ್ನನ್ನು ಅತ್ಯಧಿಕವಾಗಿ ವೃದ್ಧಿಪಡಿಸುವೆನು,” ಎಂದು ಅವನಿಗೆ ಹೇಳಿದರು. \p \v 3 ಆಗ ಅಬ್ರಾಮನು ಸಾಷ್ಟಾಂಗ ನಮಸ್ಕಾರಮಾಡಿದನು. ದೇವರು ಅವನ ಸಂಗಡ ಮಾತನಾಡಿದ್ದೇನೆಂದರೆ: \v 4 “ನಾನಾದರೋ ಈ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ: ನೀನು ಅನೇಕ ರಾಷ್ಟ್ರಗಳಿಗೆ ತಂದೆಯಾಗಿರುವೆ. \v 5 ಇನ್ನು ಮುಂದೆ, ‘ಅಬ್ರಾಮ್’\f + \fr 17:5 \fr*\fq ಅಬ್ರಾಮ್ \fq*\ft ಅಂದರೆ \ft*\fqa ಉದಾತ್ತ ತಂದೆ\fqa*\f* ಎಂದು ನಿನಗೆ ಹೆಸರಿರುವುದಿಲ್ಲ. ನಿನ್ನ ಹೆಸರು, ‘ಅಬ್ರಹಾಮ\f + \fr 17:5 \fr*\fq ಅಬ್ರಹಾಮ \fq*\ft ಅಂದರೆ \ft*\fqa ಅನೇಕ ರಾಷ್ಟ್ರಗಳ ತಂದೆ\fqa*\f*’ ಎಂದು ಇರುವುದು. ಏಕೆಂದರೆ ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ. \v 6 ನಿನ್ನಿಂದ ಅನೇಕ ಜನಾಂಗಗಳೂ ಅರಸರೂ ಹುಟ್ಟುವರು. \v 7 ಇದಲ್ಲದೆ ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನು. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ತರುವಾಯ ಬರುವ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುವೆನು. \v 8 ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ತರುವಾಯ ನಿನ್ನ ಸಂತತಿಗೂ ಶಾಶ್ವತವಾದ ಸ್ವತ್ತನ್ನಾಗಿ ಕೊಟ್ಟು, ನಾನು ಅವರಿಗೆ ದೇವರಾಗಿರುವೆನು,” ಎಂದರು. \p \v 9 ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನೂ, ನಿನ್ನ ತರುವಾಯ ಬರುವ ನಿನ್ನ ಸಂತತಿಯವರೂ ತಲತಲಾಂತರಕ್ಕೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. \v 10 ನೀನೂ, ನಿನ್ನ ತರುವಾಯ ನಿನ್ನ ಸಂತತಿಯವರೂ ಕೈಕೊಳ್ಳಬೇಕಾದ ನನ್ನ ಒಡಂಬಡಿಕೆ ಯಾವುದೆಂದರೆ: ನಿಮ್ಮಲ್ಲಿರುವ ಗಂಡಸರೆಲ್ಲರಿಗೂ ಸುನ್ನತಿಯಾಗಬೇಕು. \v 11 ನೀವು ಸುನ್ನತಿ ಮಾಡಿಸಿಕೊಳ್ಳುವುದು, ನಿಮಗೂ ನನಗೂ ಉಂಟಾದ ಒಡಂಬಡಿಕೆಗೆ ಗುರುತಾಗಿ ಇರುವುದು. \v 12 ನಿಮ್ಮ ಸಂತತಿಯವರಲ್ಲಿ ಪ್ರತಿಯೊಂದು ಗಂಡು ಮಗುವಿಗೂ ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು. ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಕ್ರಯಕ್ಕೆ ತೆಗೆದುಕೊಂಡವನಾಗಲಿ, \v 13 ಹೀಗೆ ನಿನ್ನ ಮನೆಯಲ್ಲಿ ಹುಟ್ಟಿದವನಿಗೂ ಕ್ರಯಕ್ಕೆ ತೆಗೆದುಕೊಂಡವನಿಗೂ ಸುನ್ನತಿಯಾಗಬೇಕು. ಈ ನನ್ನ ಒಡಂಬಡಿಕೆಯು ನಿಮ್ಮ ಶರೀರದಲ್ಲಿ ನಿತ್ಯವಾದ ಒಡಂಬಡಿಕೆಯಾಗಿರುವುದನ್ನು ಸೂಚಿಸುವುದು. \v 14 ಸುನ್ನತಿ ಮಾಡಿಸಿಕೊಳ್ಳದವನು ನನ್ನ ಒಡಂಬಡಿಕೆಯನ್ನು ಮೀರಿದ ಕಾರಣ, ಅವನನ್ನು ಜನರೊಳಗಿಂದ ಬಹಿಷ್ಕರಿಸಬೇಕು,” ಎಂದರು. \p \v 15 ದೇವರು ಅಬ್ರಹಾಮನಿಗೆ, “ನಿನ್ನ ಹೆಂಡತಿ ಸಾರಯಳ ವಿಷಯದಲ್ಲಾದರೋ, ಆಕೆಯನ್ನು ಸಾರಯಳೆಂದು ಕರೆಯಬೇಡ, ಅವಳ ಹೆಸರು, ‘ಸಾರಾ.’ \v 16 ಆಕೆಯನ್ನು ನಾನು ಆಶೀರ್ವದಿಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಆಕೆಯು ಜನಾಂಗಗಳ ತಾಯಿಯಾಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ರಾಷ್ಟ್ರಗಳೂ ಅರಸರೂ ಹುಟ್ಟುವರು,” ಎಂದರು. \p \v 17 ಅಬ್ರಹಾಮನು ಅಡ್ಡಬಿದ್ದು ನಕ್ಕು, “ನೂರು ವರ್ಷದವನಿಗೆ ಮಗುವು ಹುಟ್ಟುವುದುಂಟೇ? ತೊಂಬತ್ತು ವರ್ಷದವಳಾದ ಸಾರಳು ಹೆರುವುದುಂಟೋ?” ಎಂದು ತನ್ನ ಹೃದಯದಲ್ಲಿ ಅಂದುಕೊಂಡನು. \v 18 ಅಬ್ರಹಾಮನು ದೇವರಿಗೆ, “ಇಷ್ಮಾಯೇಲನು ನಿನ್ನ ಆಶೀರ್ವಾದದಲ್ಲಿ ಬದುಕಲಿ,” ಎಂದನು. \p \v 19 ಅದಕ್ಕೆ ದೇವರು, “ನಿಶ್ಚಯವಾಗಿ ನಿನ್ನ ಹೆಂಡತಿ ಸಾರಳು ಮಗನನ್ನು ಹೆರುವಳು. ಅವನಿಗೆ, ‘ಇಸಾಕ್\f + \fr 17:19 \fr*\fq ಇಸಾಕ್ \fq*\ft ಅಂದರೆ \ft*\fqa ಅವನು ನಗುವನು\fqa*\f*’ ಎಂದು ಹೆಸರಿಡಬೇಕು. ಅವನ ಸಂಗಡವೂ ಅವನ ತರುವಾಯ ಹುಟ್ಟುವ ಅವನ ಸಂತತಿಯವರ ಸಂಗಡವೂ ನಾನು ನನ್ನ ಶಾಶ್ವತವಾದ ಒಡಂಬಡಿಕೆಯನ್ನು ಸ್ಥಾಪಿಸುವೆನು. \v 20 ಇಷ್ಮಾಯೇಲನ ವಿಷಯದಲ್ಲಿ ನೀನು ಬೇಡಿದ್ದನ್ನು ಕೇಳಿದ್ದೇನೆ. ನಾನು ಅವನನ್ನು ಸಹ ಆಶೀರ್ವದಿಸುವೆನು. ಅವನನ್ನು ಅಭಿವೃದ್ಧಿ ಮಾಡಿ, ಅತ್ಯಧಿಕವಾಗಿ ಹೆಚ್ಚಿಸುವೆನು. ಅವನಿಂದ ಹನ್ನೆರಡು ಪ್ರಭುಗಳು ಹುಟ್ಟುವರು. ನಾನು ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು. \v 21 ಆದರೆ ಬರುವ ವರ್ಷ ಈ ಕಾಲದಲ್ಲಿ ಸಾರಳು ನಿನ್ನಿಂದ ಹೆರುವ ಇಸಾಕನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸವೆನು,” ಎಂದು ಹೇಳಿದರು. \v 22 ಆಗ ದೇವರು ಅವನ ಸಂಗಡ ಮಾತನಾಡುವುದನ್ನು ಮುಗಿಸಿ, ಅಬ್ರಹಾಮನ ಬಳಿಯಿಂದ ಹೊರಟು ಹೋದರು. \p \v 23 ಅಬ್ರಹಾಮನು ತನ್ನ ಮಗ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿ ಹುಟ್ಟಿದವರೆಲ್ಲರಿಗೂ ತಾನು ಕ್ರಯಕ್ಕೆ ತೆಗೆದುಕೊಂಡವರೆಲ್ಲರಿಗೂ ಹೀಗೆ ತನ್ನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ದೇವರು ತನಗೆ ಹೇಳಿದ ಹಾಗೆ, ಆ ದಿನವೇ ಸುನ್ನತಿ ಮಾಡಿಸಿದನು. \v 24 ಅಬ್ರಹಾಮನಿಗೆ ಸುನ್ನತಿಯಾದಾಗ ಅವನು ತೊಂಬತ್ತೊಂಬತ್ತು ವರ್ಷದವನಾಗಿದ್ದನು. \v 25 ಅವನ ಮಗ ಇಷ್ಮಾಯೇಲನಿಗೆ ಸುನ್ನತಿಯಾದಾಗ, ಅವನು ಹದಿಮೂರು ವರ್ಷದವನಾಗಿದ್ದನು. \v 26 ಅಬ್ರಹಾಮನೂ ಅವನ ಮಗ ಇಷ್ಮಾಯೇಲನೂ ಅದೇ ದಿನದಲ್ಲಿ ಸುನ್ನತಿ ಮಾಡಿಸಿಕೊಂಡರು. \v 27 ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಮನೆಯಲ್ಲಿ ಹುಟ್ಟಿದವರಿಗೂ ಪರರಿಂದ ಕ್ರಯಕ್ಕೆ ತೆಗೆದುಕೊಂಡವರಿಗೂ ಅವನ ಸಂಗಡವೇ ಸುನ್ನತಿ ಆಯಿತು. \c 18 \s1 ಮೂವರು ಸಂದರ್ಶಕರು \p \v 1 ಯೆಹೋವ ದೇವರು ಮಮ್ರೆಯ ಮೈದಾನಗಳಲ್ಲಿ ಅಬ್ರಹಾಮನಿಗೆ ಕಾಣಿಸಿಕೊಂಡರು. ಹಗಲಿನ ಬಿಸಿಲಿನಲ್ಲಿ ಅವನು ಡೇರೆಯ ಬಾಗಿಲಿನಲ್ಲಿ ಕುಳಿತುಕೊಂಡಿದ್ದನು. \v 2 ಆಗ ತನ್ನ ಕಣ್ಣುಗಳನ್ನೆತ್ತಿ ನೋಡಲು, ಮೂವರು ಪುರುಷರು ಹತ್ತಿರದಲ್ಲಿ ನಿಂತಿದ್ದರು. ಅವನು ಅವರನ್ನು ಕಂಡು ಅವರಿಗೆ ಎದುರಾಗಿ ಡೇರೆಯ ಬಾಗಿಲಿನಿಂದ ಓಡಿಬಂದು ನೆಲದವರೆಗೂ ಬಗ್ಗಿ ನಮಸ್ಕರಿಸಿದನು. \p \v 3 ಅಬ್ರಹಾಮನು ಅವರಿಗೆ, “ನನ್ನ ಸ್ವಾಮಿ, ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆತಿದ್ದರೆ, ನಿಮ್ಮ ದಾಸನ ಬಳಿಯಿಂದ ಹೊರಟು ಹೋಗಬೇಡಿ. \v 4 ಸ್ವಲ್ಪ ನೀರು ತೆಗೆದುಕೊಂಡು ಬರುತ್ತೇನೆ, ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ, ಮರದ ಕೆಳಗೆ ವಿಶ್ರಮಿಸಿಕೊಳ್ಳಿರಿ. \v 5 ನಾನು ಸ್ವಲ್ಪ ಆಹಾರವನ್ನು ತರುತ್ತೇನೆ. ತರುವಾಯ ನೀವು ಮುಂದೆ ಹೊರಟು ಹೋಗಬಹುದು. ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ,” ಎಂದು ಬೇಡಿಕೊಂಡನು. \p ಅದಕ್ಕೆ ಅವರು, “ನೀನು ಹೇಳಿದಂತೆಯೇ ಮಾಡು,” ಎಂದರು. \p \v 6 ಆಗ ಅಬ್ರಹಾಮನು ತ್ವರೆಯಾಗಿ ಗುಡಾರದಲ್ಲಿದ್ದ ಸಾರಳ ಬಳಿಗೆ ಹೋಗಿ, “ಬೇಗನೇ ಮೂರು ಸೇರು\f + \fr 18:6 \fr*\ft ಸುಮಾರು 16 ಕಿಲೋಗ್ರಾಂ\ft*\f* ನಯವಾದ ಹಿಟ್ಟು ನಾದಿ, ಒಲೆಯ ಮೇಲೆ ರೊಟ್ಟಿಗಳನ್ನು ಮಾಡು,” ಎಂದನು. \p \v 7 ಅಬ್ರಹಾಮನು ದನದ ಮಂದೆಯ ಬಳಿಗೆ ಓಡಿಹೋಗಿ, ಒಳ್ಳೆಯ ಕರುವನ್ನು ತೆಗೆದುಕೊಂಡು ಒಬ್ಬ ಸೇವಕನಿಗೆ ಕೊಟ್ಟನು. ಆ ಸೇವಕನು ಬೇಗನೆ ಅಡಿಗೆಯನ್ನು ಸಿದ್ಧಪಡಿಸಿದನು. \v 8 ತರುವಾಯ ಮೊಸರನ್ನೂ, ಹಾಲನ್ನೂ, ಪಕ್ವಮಾಡಿದ ಮಾಂಸವನ್ನೂ ತೆಗೆದುಕೊಂಡು ಅವರ ಮುಂದೆ ಇಟ್ಟನು. ಅವನಾದರೋ ಮರದ ಕೆಳಗೆ ಅವರ ಹತ್ತರ ನಿಂತುಕೊಂಡನು. ಅವರು ಊಟಮಾಡಿದರು. \p \v 9 ಅವರು ಅಬ್ರಹಾಮನಿಗೆ, “ನಿನ್ನ ಹೆಂಡತಿ ಸಾರಳು ಎಲ್ಲಿ?” ಎಂದು ಕೇಳಲು, \p ಅವನು, “ಇಗೋ, ಡೇರೆಯಲ್ಲಿದ್ದಾಳೆ,” ಎಂದನು. \p \v 10 ಆಗ ಆ ಮೂವರಲ್ಲಿ ಒಬ್ಬರು, “ಬರುವ ವರ್ಷ ಇದೇ ಸಮಯದಲ್ಲಿ ನಾನು ನಿಶ್ಚಯವಾಗಿ ತಿರುಗಿ ನಿನ್ನ ಬಳಿಗೆ ಬರುವೆನು. ಆಗ ನಿನ್ನ ಹೆಂಡತಿ ಸಾರಳಿಗೆ ಒಬ್ಬ ಮಗನಿರುವನು,” ಎಂದನು. \p ಸಾರಳು ಅವರ ಹಿಂದೆ ಇದ್ದ ಡೇರೆಯ ಬಾಗಿಲಲ್ಲಿದ್ದು ಅದನ್ನು ಕೇಳಿಸಿಕೊಂಡಳು. \v 11 ಅಬ್ರಹಾಮನೂ ಸಾರಳೂ ವಯಸ್ಸಾಗಿ, ಮುದುಕರಾಗಿದ್ದರು. ಸಾರಳಿಗೆ ಮಗುವನ್ನು ಹೆರುವ ಕಾಲ ಮುಗಿದು ಹೋಗಿತ್ತು. \v 12 ಆದ್ದರಿಂದ ಸಾರಳು ತನ್ನೊಳಗೆ ನಕ್ಕು, “ನಾನು ವೃದ್ಧಳಾಗಿದ್ದೇನೆ, ನನ್ನ ಯಜಮಾನನು ಸಹ ಮುದುಕನಾಗಿದ್ದಾನೆ. ಹೀಗಿರುವಲ್ಲಿ ನನ್ನಿಂದ ಮಗುವನ್ನು ಹೆರುವದಾದೀತೇ?” ಎಂದುಕೊಂಡಳು. \p \v 13 ಆಗ ಯೆಹೋವ ದೇವರು ಅಬ್ರಹಾಮನಿಗೆ, “ನಾನು ಮುದಿಪ್ರಾಯದವಳಾಗಿ ಮಗುವನ್ನು ಹೆರುವುದು ನಿಜವೋ? ಎಂದುಕೊಂಡು ಸಾರಳು ಏಕೆ ನಕ್ಕಳು? \v 14 ಯೆಹೋವ ದೇವರಿಗೆ ಅಸಾಧ್ಯವಾದದ್ದು ಯಾವುದಾದರೂ ಇದೆಯೋ? ಬರುವ ವರ್ಷ ಇದೇ ಸಮಯದಲ್ಲಿ ನಾನು ತಿರುಗಿ ನಿನ್ನ ಬಳಿಗೆ ಬರುವೆನು. ಆಗ ಸಾರಳಿಗೆ ಒಬ್ಬ ಮಗನಿರುವನು,” ಎಂದರು. \p \v 15 ಆದರೆ ಸಾರಳು ಭಯಪಟ್ಟು, “ನಾನು ನಗಲಿಲ್ಲ,” ಎಂದು ಹೇಳಿ ಸುಳ್ಳಾಡಿದಾಗ, \p ದೇವರು, “ನೀನು ನಕ್ಕದ್ದು ನಿಜ,” ಎಂದರು. \s1 ಸೊದೋಮಿಗಾಗಿ ವಿಜ್ಞಾಪಿಸಿದ್ದು \p \v 16 ತರುವಾಯ ಆ ಮನುಷ್ಯರು ಎದ್ದು ಅಲ್ಲಿಂದ ಸೊದೋಮಿನ ಕಡೆಗೆ ನೋಡಿದರು. ಅಬ್ರಹಾಮನು ಅವರನ್ನು ಕಳುಹಿಸಿಕೊಡುವುದಕ್ಕೆ ಅವರ ಸಂಗಡ ಹೋದನು. \v 17 ಆಗ ಯೆಹೋವ ದೇವರು, “ನಾನು ಮಾಡುವುದನ್ನು ಅಬ್ರಹಾಮನಿಗೆ ಮರೆಮಾಡಲೋ? \v 18 ಅಬ್ರಹಾಮನು ನಿಶ್ಚಯವಾಗಿ ಬಲವಾದ ದೊಡ್ಡ ಜನಾಂಗವಾಗುವನು, ಅವನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು. \v 19 ಏಕೆಂದರೆ, ಅವನು ತನ್ನ ಮಕ್ಕಳಿಗೂ ಅವನ ತರುವಾಯ ಅವನ ಮನೆಯವರಿಗೂ ಯೆಹೋವ ದೇವರ ಮಾರ್ಗವನ್ನು ಕೈಗೊಂಡು, ನೀತಿ ನ್ಯಾಯಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸುವನು. ಆಗ ಯೆಹೋವ ದೇವರಾದ ನಾನು ಅಬ್ರಹಾಮನಿಗೆ ಹೇಳಿದ್ದು ನೆರವೇರುವದು,” ಎಂದುಕೊಂಡರು. \p \v 20 ಇದಲ್ಲದೆ ಯೆಹೋವ ದೇವರು, “ಸೊದೋಮ್ ಗೊಮೋರಗಳ ಕೂಗು ದೊಡ್ಡದಾಗಿದೆ. ಅವರ ಪಾಪವೂ ಘೋರವಾಗಿದೆ. \v 21 ನಾನು ಇಳಿದು ಹೋಗಿ ನನ್ನ ಬಳಿಗೆ ಬಂದ ಆ ಊರಿನವರ ಕೂಗಿನ ಪ್ರಕಾರವೇ, ಅವರು ಮಾಡಿದ್ದಾರೋ, ಇಲ್ಲವೋ, ಎಂದು ನೋಡಿ ತಿಳಿದುಕೊಳ್ಳುವೆನು,” ಎಂದುಕೊಂಡರು. \p \v 22 ಆ ಮನುಷ್ಯರು ಅಲ್ಲಿಂದ ತಮ್ಮ ಮುಖಗಳನ್ನು ತಿರುಗಿಸಿಕೊಂಡು, ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಇನ್ನೂ ಯೆಹೋವ ದೇವರ ಮುಂದೆ ನಿಂತುಕೊಂಡಿದ್ದನು. \v 23 ಆಗ ಅಬ್ರಹಾಮನು ಹತ್ತಿರ ಬಂದು, “ದುಷ್ಟರ ಜೊತೆ ನೀತಿವಂತರನ್ನೂ ನಾಶಮಾಡುವಿರೋ? \v 24 ಒಂದು ವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ, ಅದರೊಳಗಿರುವ ಆ ಐವತ್ತು ನೀತಿವಂತರಿಗೋಸ್ಕರ ಆ ಸ್ಥಳವನ್ನು ಉಳಿಸದೆ ನಾಶಮಾಡುವಿರೋ? \v 25 ಈ ರೀತಿಯಾಗಿ ನೀತಿವಂತರಿಗೂ ದುಷ್ಟರಿಗೂ ಭೇದ ಮಾಡದೆ, ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವುದು ನಿಮ್ಮಿಂದ ಎಂದಿಗೂ ಆಗಬಾರದು. ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿರುವ ತಾವು ನ್ಯಾಯವಾದದ್ದನ್ನೇ ಮಾಡಬೇಕಲ್ಲವೇ?” ಎಂದನು. \p \v 26 ಅದಕ್ಕೆ ಯೆಹೋವ ದೇವರು, “ನನಗೆ ಸೊದೋಮ್ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ, ಅವರಿಗೋಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು,” ಎಂದರು. \p \v 27 ಆಗ ಅಬ್ರಹಾಮನು, “ಇಗೋ, ಮಣ್ಣೂ, ಬೂದಿಯೂ ಆಗಿರುವ ನಾನು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ಧೈರ್ಯಗೊಂಡಿದ್ದೇನೆ. \v 28 ಒಂದು ವೇಳೆ ಐವತ್ತು ನೀತಿವಂತರಲ್ಲಿ ಐದು ಮಂದಿ ಕಡಿಮೆ ಇದ್ದರೆ, ಆ ಐದು ಮಂದಿ ಇಲ್ಲದ್ದರಿಂದ ಪಟ್ಟಣವನ್ನು ನಾಶಮಾಡುವಿರೋ?” ಎಂದು ಕೇಳಿದನು. \p ಅದಕ್ಕೆ ದೇವರು, “ನಲವತ್ತೈದು ಮಂದಿ ಅಲ್ಲಿ ಸಿಕ್ಕಿದರೆ ನಾನು ನಾಶಮಾಡುವುದಿಲ್ಲ,” ಎಂದರು. \p \v 29 ಅಬ್ರಹಾಮನು ದೇವರ ಸಂಗಡ ಇನ್ನೂ ಮಾತನಾಡಿ, “ಅಲ್ಲಿ ನಲವತ್ತು ಮಂದಿ ದೊರೆತರೆ, ಏನು ಮಾಡುವಿರಿ?” ಎನ್ನಲು, \p ಅದಕ್ಕೆ ದೇವರು, “ನಲವತ್ತು ಮಂದಿಗೋಸ್ಕರ ಅದನ್ನು ನಾನು ನಾಶಮಾಡುವುದಿಲ್ಲ,” ಎಂದರು. \p \v 30 ಅವನು, “ಯೆಹೋವ ದೇವರಿಗೆ ಕೋಪಬಾರದೆ ಇರಲಿ, ನಾನು ಮಾತನಾಡುತ್ತೇನೆ. ಒಂದು ವೇಳೆ ಅಲ್ಲಿ ಮೂವತ್ತು ಮಂದಿ ಇದ್ದರೆ,” ಎಂದಾಗ, \p ದೇವರು, “ನನಗೆ ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ, ನಾಶಮಾಡುವುದಿಲ್ಲ,” ಎಂದರು. \p \v 31 ಅವನು, “ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ಬಂದಿದ್ದೇನೆ. ಒಂದು ವೇಳೆ ಇಪ್ಪತ್ತು ಮಂದಿ ಸಿಕ್ಕಿದರೆ ಏನು ಮಾಡುವಿರಿ?” ಎಂದನು. \p ಅದಕ್ಕೆ ದೇವರು, “ಇಪ್ಪತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವುದಿಲ್ಲ,” ಎಂದರು. \p \v 32 ಆಗ ಅವನು, “ಯೆಹೋವ ದೇವರೇ, ನಿಮಗೆ ಕೋಪಬಾರದೆ ಇರಲಿ. ಇನ್ನು ಒಂದೇ ಸಾರಿ ಮಾತನಾಡುತ್ತೇನೆ. ಒಂದು ವೇಳೆ ಅಲ್ಲಿ ಹತ್ತು ಮಂದಿ ಸಿಕ್ಕಿದರೆ,” ಎಂದಾಗ, \p ದೇವರು, “ಹತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವುದಿಲ್ಲ,” ಎಂದರು. \p \v 33 ಯೆಹೋವ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿದ ಕೂಡಲೆ ಹೊರಟು ಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು. \c 19 \s1 ಸೊದೋಮ್ ಗೊಮೋರಗಳ ನಾಶನ \p \v 1 ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮಿಗೆ ಬಂದಾಗ, ಲೋಟನು ಸೊದೋಮಿನ ಬಾಗಿಲಲ್ಲಿ ಕುಳಿತಿದ್ದನು. ಲೋಟನು ಅವರನ್ನು ಎದುರುಗೊಳ್ಳುವುದಕ್ಕೆ ಎದ್ದು ನೆಲದವರೆಗೆ ಬಾಗಿ, \v 2 “ಸ್ವಾಮಿಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ತಂಗಿ, ರಾತ್ರಿ ಕಳೆಯಿರಿ. ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ. ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು,” ಎಂದು ಬೇಡಿಕೊಂಡನು. \p ಅದಕ್ಕೆ ಅವರು, “ಹಾಗಲ್ಲ, ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ,” ಎಂದರು. \p \v 3 ಅದಕ್ಕವನು ಅವರನ್ನು ಬಹಳವಾಗಿ ಬಲವಂತ ಮಾಡಿದ್ದರಿಂದ, ಅವರು ತಿರುಗಿಬಂದು ಅವನ ಮನೆಯೊಳಕ್ಕೆ ಪ್ರವೇಶಿಸಿದರು. ಅವನು ಅವರಿಗಾಗಿ ಔತಣ ಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನು ಸಿದ್ಧಮಾಡಿದನು. ಅವರು ಊಟಮಾಡಿದರು. \v 4 ಆದರೆ ಅವರು ಮಲಗುವುದಕ್ಕಿಂತ ಮುಂಚೆ ಸೊದೋಮ್ ಪಟ್ಟಣದ ಜನರು, ಹುಡುಗರು ಮೊದಲುಗೊಂಡು ಮುದುಕರವರೆಗೆ ಎಲ್ಲಾ ಜನರೂ ಪ್ರತಿಯೊಂದು ಮೂಲೆಯಿಂದ ಕೂಡಿ, ಮನೆಯನ್ನು ಸುತ್ತಿಕೊಂಡರು. \v 5 ಅವರು ಲೋಟನನ್ನು ಕರೆದು, “ಈ ರಾತ್ರಿಯಲ್ಲಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ನಮ್ಮ ಬಳಿಗೆ ಕರೆದುಕೊಂಡು ಬಾ, ಅವರೊಡನೆ ಸಂಭೋಗಿಸಬೇಕು,” ಎಂದು ಹೇಳಿದರು. \p \v 6 ಆಗ ಲೋಟನು ಅವರ ಬಳಿಗೆ ಬಂದು ಬಾಗಿಲನ್ನು ತನ್ನ ಹಿಂದೆ ಮುಚ್ಚಿಕೊಂಡು, \v 7 “ನನ್ನ ಸಹೋದರರೇ, ಈ ದುಷ್ಟತನವನ್ನು ಮಾಡಬೇಡಿರಿ. \v 8 ಗಂಡಸರನ್ನು ಅರಿಯದ ಇಬ್ಬರು ಪುತ್ರಿಯರು ನನಗೆ ಇದ್ದಾರೆ. ಅವರನ್ನು ನಿಮ್ಮ ಬಳಿಗೆ ಕರೆ ತರುವೆನು. ನಿಮ್ಮ ದೃಷ್ಟಿಗೆ ಒಳ್ಳೆಯದೆಂದು ಕಾಣುವ ಹಾಗೆ ನೀವು ಅವರಿಗೆ ಮಾಡಿರಿ. ಆ ಮನುಷ್ಯರಿಗೆ ಮಾತ್ರ ಏನೂ ಮಾಡಬೇಡಿರಿ. ಏಕೆಂದರೆ ಅವರು ನನ್ನ ಮನೆಯ ಆಶ್ರಯಕ್ಕೆ ಬಂದಿದ್ದಾರೆ,” ಎಂದು ಬೇಡಿಕೊಂಡನು. \p \v 9 ಆದರೆ ಅವರು, “ಹಿಂದಕ್ಕೆ ಸರಿ,” ಎಂದು ಹೇಳಿ, “ಇವನು ಪ್ರವಾಸಿಯಾಗಿ ಬಂದು ನ್ಯಾಯಾಧಿಪತಿಯಾಗಲು ಯತ್ನಿಸುತ್ತಿದ್ದಾನೆ. ಈಗ ನಿನಗೆ ಅವರಿಗಿಂತ ಹೆಚ್ಚು ಕೇಡು ಮಾಡುತ್ತೇವೆ,” ಎಂದರು. ಅವರು ಲೋಟನನ್ನು ಬಲವಾಗಿ ತುಳಿದು, ಬಾಗಿಲನ್ನು ಮುರಿಯಲು ಸಮೀಪಕ್ಕೆ ಬಂದರು. \p \v 10 ಆಗ ಲೋಟನ ಮನೆಗೆ ಬಂದಿದ್ದ ಆ ದೂತರಿಬ್ಬರು ತಮ್ಮ ಕೈಯಿಂದ ಲೋಟನನ್ನು ತಮ್ಮ ಕಡೆಗೆ ಒಳಕ್ಕೆ ಎಳೆದುಕೊಂಡು ಬಾಗಿಲನ್ನು ಮುಚ್ಚಿದರು. \v 11 ಬಾಗಿಲಲ್ಲಿದ್ದವರನ್ನು ಕಿರಿಯರಿಂದ ಹಿರಿಯರವರೆಗೆ ಕುರುಡಾಗುವಂತೆ ಮಾಡಿದರು. ಆಗ ಆ ಊರಿನವರು ಬಾಗಿಲನ್ನು ಕಂಡುಕೊಳ್ಳದೆ ಬೇಸರಗೊಂಡರು. \p \v 12 ಆ ದೂತರಿಬ್ಬರು ಲೋಟನಿಗೆ, “ಇಲ್ಲಿ ನಿನಗೆ ಇನ್ನೂ ಯಾರಾದರೂ ಇದ್ದಾರೋ? ನಿನ್ನ ಅಳಿಯಂದಿರನ್ನೂ, ನಿನ್ನ ಪುತ್ರರನ್ನೂ, ಪುತ್ರಿಯರನ್ನೂ, ಪಟ್ಟಣದಲ್ಲಿ ನಿನಗಿರುವ ಎಲ್ಲರನ್ನೂ ಈ ಸ್ಥಳದಿಂದ ಹೊರಗೆ ಕರೆದುಕೊಂಡು ಬಾ. \v 13 ಏಕೆಂದರೆ ಈ ಸ್ಥಳದವರ ಕೂಗು ಯೆಹೋವ ದೇವರ ಸನ್ನಿಧಿಯಲ್ಲಿ ದೊಡ್ಡದಾಗಿರುವುದರಿಂದ ನಾವು ಇದನ್ನು ನಾಶ ಮಾಡುತ್ತೇವೆ. ಯೆಹೋವ ದೇವರು ನಮ್ಮನ್ನು ಕಳುಹಿಸಿದ್ದಾರೆ.” \p \v 14 ಆಗ ಲೋಟನು ಹೊರಟುಹೋಗಿ, ತನ್ನ ಪುತ್ರಿಯರನ್ನು ಗೊತ್ತುಮಾಡಿದ್ದ ಅಳಿಯಂದಿರ ಸಂಗಡ ಮಾತನಾಡಿ, “ಎದ್ದು ಈ ಸ್ಥಳದಿಂದ ಹೊರಡಿರಿ. ಏಕೆಂದರೆ ಯೆಹೋವ ದೇವರು ಈ ಪಟ್ಟಣವನ್ನು ನಾಶಮಾಡುವುದಕ್ಕಿದ್ದಾರೆ,” ಎಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಪರಿಹಾಸ್ಯಮಾಡುವಂತೆ ಕಾಣಿಸಿದನು. \p \v 15 ಸೂರ್ಯೋದಯವಾಗುವ ಮೊದಲು ದೂತರು ಲೋಟನನ್ನು ತ್ವರೆಪಡಿಸಿ, “ಈ ಪಟ್ಟಣಕ್ಕೆ ಉಂಟಾಗುವ ದಂಡನೆಯಿಂದ ನೀನು ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಪುತ್ರಿಯರನ್ನೂ ಕರೆದುಕೊಂಡು ನಡೆ,” ಎಂದರು. \p \v 16 ಅವರು ತಡಮಾಡಿದಾಗ ಯೆಹೋವ ದೇವರು ಅವನನ್ನು ಕನಿಕರಿಸಿದ್ದರಿಂದ, ಆ ದೂತರು ಅವನ ಕೈಯನ್ನೂ, ಅವನ ಹೆಂಡತಿಯ ಕೈಯನ್ನೂ, ಅವನ ಇಬ್ಬರು ಪುತ್ರಿಯರ ಕೈಗಳನ್ನೂ ಹಿಡಿದು, ಅವರನ್ನು ಪಟ್ಟಣದ ಹೊರಗೆ ತಂದುಬಿಟ್ಟರು. \v 17 ಅವರನ್ನು ಹೊರಗೆ ತಂದಮೇಲೆ ಅವರಲ್ಲಿ ಒಬ್ಬನು, “ಹಿಂದಕ್ಕೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ. ನೀನು ನಾಶವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಓಡಿಹೋಗು,” ಎಂದನು. \p \v 18 ಅದಕ್ಕೆ ಲೋಟನು, “ಸ್ವಾಮಿ, ಅದು ನನ್ನಿಂದಾಗದು. \v 19 ಈಗ ನಿನ್ನ ದಾಸನಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಿದೆ. ನನ್ನ ಪ್ರಾಣವನ್ನು ಉಳಿಸುವ ಹಾಗೆ ನೀನು ನನಗೆ ಮಾಡಿದ ದಯೆ ದೊಡ್ಡದು. ಆದರೆ ನಾನು ತಪ್ಪಿಸಿಕೊಂಡು ಬೆಟ್ಟಕ್ಕೆ ಓಡಿಹೋಗಲಾರೆನು, ನನಗೆ ವಿಪತ್ತು ಉಂಟಾಗಿ ಸತ್ತೇನು. \v 20 ಆ ಪಟ್ಟಣವನ್ನು ನೋಡಿರಿ. ನಾನು ಅಲ್ಲಿಗೆ ಓಡಿಹೋಗಲು ಸಮೀಪವಾಗಿದೆ ಮತ್ತು ಅದು ಸಣ್ಣದು. ನಾನು ತಪ್ಪಿಸಿಕೊಂಡು ಅಲ್ಲಿಗೆ ಹೋಗುತ್ತೇನೆ. ಇದರಿಂದ ನನ್ನ ಪ್ರಾಣವು ಉಳಿಯುವುದು,” ಎಂದನು. \p \v 21 ದೂತನು ಅವನಿಗೆ, “ಈ ವಿಷಯದಲ್ಲಿಯೂ ನಾನು ನಿನ್ನ ಬೇಡಿಕೆಯನ್ನು ಅಂಗೀಕರಿಸಿದ್ದೇನೆ. ನೋಡು, ನೀನು ಹೇಳಿದ ಆ ಊರನ್ನು ನಾನು ಕೆಡವಿ ಹಾಕುವುದಿಲ್ಲ. \v 22 ಬೇಗನೆ ತಪ್ಪಿಸಿಕೊಂಡು ಅಲ್ಲಿಗೆ ಹೋಗು, ಏಕೆಂದರೆ ನೀನು ಅಲ್ಲಿ ಸೇರುವ ತನಕ ನಾನೇನೂ ಮಾಡಲಾರೆನು,” ಎಂದನು. ಆದ್ದರಿಂದ ಆ ಊರಿಗೆ ಚೋಗರ್\f + \fr 19:22 \fr*\fq ಚೋಗರ್ \fq*\ft ಅರ್ಥ \ft*\fqa ಚಿಕ್ಕದು\fqa*\f* ಎಂದು ಹೆಸರಾಯಿತು. \p \v 23 ಲೋಟನು ಚೋಗರಿಗೆ ಬಂದಾಗ ಸೂರ್ಯೋದಯವಾಗಿತ್ತು. \v 24 ಆಗ ಯೆಹೋವ ದೇವರು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ, ಬೆಂಕಿಯನ್ನೂ ಆಕಾಶದಿಂದ ಸುರಿಸಿದರು. \v 25 ಹೀಗೆ ದೇವರು ಆ ಪಟ್ಟಣಗಳನ್ನೂ, ಅಲ್ಲಿಯ ಪ್ರದೇಶವನ್ನೂ, ಪಟ್ಟಣಗಳ ಎಲ್ಲಾ ನಿವಾಸಿಗಳನ್ನೂ, ಭೂಮಿಯ ಮೇಲೆ ಬೆಳೆದ ಬೆಳೆಯನ್ನೂ ಅಳಿಸಿಬಿಟ್ಟರು. \v 26 ಆದರೆ ಲೋಟನ ಹಿಂದೆ ಬರುತ್ತಿದ್ದ ಅವನ ಹೆಂಡತಿಯು ಹಿಂದಿರುಗಿ ನೋಡಿ ಉಪ್ಪಿನ ಸ್ತಂಭವಾದಳು. \p \v 27 ಅಬ್ರಹಾಮನು ಬೆಳಿಗ್ಗೆ ಎದ್ದು, ತಾನು ಯೆಹೋವ ದೇವರ ಸನ್ನಿಧಿಯಲ್ಲಿ ನಿಂತಿದ್ದ ಆ ಸ್ಥಳಕ್ಕೆ ಹೋದನು. \v 28 ಅವನು ಸೊದೋಮ್ ಗೊಮೋರಗಳ ಕಡೆಗೂ ಮೈದಾನದ ಎಲ್ಲಾ ಪ್ರದೇಶಗಳ ಕಡೆಗೂ ನೋಡಿದನು. ಆ ಪ್ರದೇಶದಿಂದ ಹೊಗೆಯು ಕುಲುಮೆಯ ಹೊಗೆಯಂತೆ ಏರುತ್ತಿತ್ತು. \p \v 29 ದೇವರು ಆ ಬಯಲುಸೀಮೆಯ ಪಟ್ಟಣಗಳನ್ನು ನಾಶಮಾಡಿದಾಗ, ಲೋಟನು ವಾಸವಾಗಿದ್ದ ಪಟ್ಟಣಗಳನ್ನು ನಾಶಮಾಡಿದರು. ಆದರೆ ಅಬ್ರಹಾಮನನ್ನು ಜ್ಞಾಪಕಮಾಡಿಕೊಂಡು, ಲೋಟನನ್ನು ಹೊರಗೆ ಕಳುಹಿಸಿ ಪಾರು ಮಾಡಿದರು. \s1 ಲೋಟನ ಹೆಣ್ಣುಮಕ್ಕಳು \p \v 30 ಲೋಟನು ಚೋಗರಿನಲ್ಲಿ ವಾಸಿಸಲು ಭಯಪಟ್ಟು, ತನ್ನ ಇಬ್ಬರು ಪುತ್ರಿಯರ ಸಂಗಡ ಬೆಟ್ಟದ ಮೇಲೆ ಹೋಗಿ ವಾಸಮಾಡಿದನು. ಅಲ್ಲಿ ಅವನೂ ಅವನ ಇಬ್ಬರು ಪುತ್ರಿಯರೂ ಒಂದು ಗವಿಯಲ್ಲಿ ವಾಸವಾಗಿದ್ದರು. \v 31 ಆಗ ಹಿರಿಯ ಮಗಳು ಚಿಕ್ಕವಳಿಗೆ, “ನಮ್ಮ ತಂದೆಯು ಮುದುಕನಾಗಿದ್ದಾನೆ. ಲೋಕದ ಎಲ್ಲಾ ಕ್ರಮದ ಪ್ರಕಾರ ನಮ್ಮೊಂದಿಗಿರಲು ನಮ್ಮ ಸುತ್ತಲಿನ ಪ್ರದೇಶದಲ್ಲಿ ಪುರುಷರಿಲ್ಲ. \v 32 ಆದ್ದರಿಂದ ನಾವು ನಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ನಾವು ಅವನ ಸಂಗಡ ಮಲಗಿಕೊಳ್ಳೋಣ. ಏಕೆಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು,” ಎಂದಳು. \p \v 33 ಆ ರಾತ್ರಿಯಲ್ಲಿ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಆಗ ಹಿರಿಯ ಮಗಳು ಬಂದು ತನ್ನ ತಂದೆಯ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಂಡದ್ದೂ, ಎದ್ದು ಹೋದದ್ದೂ ಅವನಿಗೆ ತಿಳಿಯಲಿಲ್ಲ. \p \v 34 ಮರುದಿನ ಹಿರಿಯವಳು ಚಿಕ್ಕವಳಿಗೆ, “ಕಳೆದ ರಾತ್ರಿ ತಂದೆಯ ಸಂಗಡ ನಾನು ಮಲಗಿಕೊಂಡೆನು. ಈ ರಾತ್ರಿಯಲ್ಲಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸಿ, ನೀನು ಹೋಗಿ ಅವನ ಸಂಗಡ ಮಲಗಿಕೋ. ಏಕೆಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು,” ಎಂದಳು. \v 35 ಹಾಗೆ ಆ ರಾತ್ರಿಯಲ್ಲಿಯೂ ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಆಗ ಚಿಕ್ಕವಳು ಎದ್ದು, ಅವನ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಂಡದ್ದೂ, ಎದ್ದು ಹೋದದ್ದೂ ಅವನಿಗೆ ತಿಳಿಯಲಿಲ್ಲ. \p \v 36 ಈ ಪ್ರಕಾರ ಲೋಟನ ಇಬ್ಬರು ಪುತ್ರಿಯರು ತಮ್ಮ ತಂದೆಯಿಂದ ಗರ್ಭಿಣಿಯರಾದರು. \v 37 ಹಿರಿಯ ಮಗಳು ಮಗನನ್ನು ಹೆತ್ತು, ಅವನಿಗೆ ಮೋವಾಬ್\f + \fr 19:37 \fr*\fq ಮೋವಾಬ್ \fq*\ft ಹೀಬ್ರೂ ಭಾಷೆಯಲ್ಲಿ ಅರ್ಥ \ft*\fqa ತಂದೆಯಿಂದ ಹುಟ್ಟಿದವನು\fqa*\f* ಎಂದು ಹೆಸರಿಟ್ಟಳು. ಈಗಿನ ಮೋವಾಬ್ಯರಿಗೂ ಇವನೇ ತಂದೆ. \v 38 ಚಿಕ್ಕವಳು ಸಹ ಮಗನನ್ನು ಹೆತ್ತು, ಅವನಿಗೆ ಬೆನಮ್ಮಿ\f + \fr 19:38 \fr*\fq ಬೆನಮ್ಮಿ \fq*\ft ಅರ್ಥ \ft*\fqa ನನ್ನ ತಂದೆಯ ಜನರ ಮಗ\fqa*\f* ಎಂದು ಹೆಸರಿಟ್ಟಳು. ಈಗಿನ ಅಮ್ಮೋನಿಯರಿಗೂ ಇವನೇ ತಂದೆ. \c 20 \s1 ಅಬ್ರಹಾಮನು ಮತ್ತು ಅಬೀಮೆಲೆಕನು \p \v 1 ಅಬ್ರಹಾಮನು ಅಲ್ಲಿಂದ ನೆಗೆವ ಕಡೆಗೆ ಕಾದೇಶಿಗೆ ಪ್ರಯಾಣಮಾಡಿ, ಕಾದೇಶ್ ಹಾಗೂ ಶೂರಿನ ಮಧ್ಯದ ಗೆರಾರಿನಲ್ಲಿ ಸ್ವಲ್ಪಕಾಲ ಪ್ರವಾಸಿಯಾಗಿದ್ದನು. \v 2 ಗೆರಾರಿನಲ್ಲಿ ಅಬ್ರಹಾಮನು ತನ್ನ ಹೆಂಡತಿ ಸಾರಳ ವಿಷಯವಾಗಿ, “ಅವಳು ನನ್ನ ತಂಗಿ,” ಎಂದು ಹೇಳಿದ್ದನು. ಆದ್ದರಿಂದ ಗೆರಾರಿನ ಅರಸ ಅಬೀಮೆಲೆಕನು ಸಾರಳನ್ನು ಕರೆಯಿಸಿ ತನ್ನ ಅರಮನೆಗೆ ತೆಗೆದುಕೊಂಡನು. \p \v 3 ಆದರೆ ದೇವರು ಅಬೀಮೆಲೆಕನಿಗೆ ರಾತ್ರಿಯ ಕನಸಿನಲ್ಲಿ ಬಂದು, “ನೀನು ಆ ಸ್ರೀಯನ್ನು ತೆಗೆದುಕೊಂಡ ಕಾರಣ ಸಾಯತಕ್ಕವನಾಗಿದ್ದಿ, ಏಕೆಂದರೆ ಆಕೆಯು ಆ ಮನುಷ್ಯನ ಹೆಂಡತಿ,” ಎಂದು ಅವನಿಗೆ ಹೇಳಿದರು. \p \v 4 ಆದರೆ ಅಬೀಮೆಲೆಕನು ಆಕೆಯ ಸಮೀಪಕ್ಕೆ ಬಂದಿರಲಿಲ್ಲ. ಆದ್ದರಿಂದ ಅವನು, “ಪ್ರಭುವೇ, ನಿರಪರಾಧಿಯಾದ ಪ್ರಜೆಯನ್ನು ನೀವು ನಾಶಮಾಡುವಿರೋ? \v 5 ಅವನು ನನಗೆ, ‘ಅವಳು ನನ್ನ ತಂಗಿ,’ ಎಂದು ಹೇಳಲಿಲ್ಲವೋ? ಅವಳೇ, ‘ಅವನು ನನ್ನ ಅಣ್ಣ,’ ಎಂದು ಹೇಳಿದ್ದಾಳೆ. ಆದ್ದರಿಂದ ನಾನು ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಹಸ್ತದಿಂದಲೂ ಇದನ್ನು ಮಾಡಿದ್ದೇನೆ,” ಎಂದನು. \p \v 6 ಅದಕ್ಕೆ ದೇವರು ಕನಸಿನಲ್ಲಿ ಅವನಿಗೆ, “ಹೌದು, ನೀನು ಇದನ್ನು ಯಥಾರ್ಥವಾದ ಹೃದಯದಿಂದಲೇ ಮಾಡಿದ್ದೀಯೆ ಎಂದು ನನಗೂ ತಿಳಿದಿದೆ. ಆದ್ದರಿಂದ ನೀನು ನನಗೆ ವಿರೋಧವಾಗಿ ಪಾಪಮಾಡದಂತೆ ನಾನು ನಿನ್ನನ್ನು ತಡೆದು, ಆಕೆಯನ್ನು ಮುಟ್ಟಗೊಡಿಸಲಿಲ್ಲ. \v 7 ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸಿಬಿಡು. ಏಕೆಂದರೆ ಅವನು ಪ್ರವಾದಿಯಾಗಿದ್ದಾನೆ. ನೀನು ಬದುಕುವಂತೆ ಅವನು ನಿನಗೋಸ್ಕರ ಪ್ರಾರ್ಥಿಸುವನು. ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ, ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ,” ಎಂದರು. \p \v 8 ಅಬೀಮೆಲೆಕನು ಬೆಳಿಗ್ಗೆ ಎದ್ದು, ತನ್ನ ಸೇವಕರೆಲ್ಲರನ್ನೂ ಕರೆದು, ಇವುಗಳನ್ನೆಲ್ಲಾ ಅವರಿಗೆ ಹೇಳಿದನು. ಅದಕ್ಕೆ ಆ ಮನುಷ್ಯರು ಬಹಳವಾಗಿ ಹೆದರಿದರು. \v 9 ಅಬೀಮೆಲೆಕನು ಅಬ್ರಹಾಮನನ್ನು ಕರೆದು ಅವನಿಗೆ, “ನೀನು ನಮಗೆ ಮಾಡಿದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಿನಗೆ ನಾನು ಏನು ಅಪರಾಧ ಮಾಡಿದ್ದೇನೆ? ನೀನು ನನಗೆ ಮಾಡಬಾರದ ಕೆಲಸಗಳನ್ನು ಮಾಡಿದ್ದೀಯೆ,” ಎಂದನು. \v 10 ಇದಲ್ಲದೆ ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಹೀಗೆ ಮಾಡಿದ ಕಾರಣವೇನು?” ಎಂದು ವಿಚಾರಿಸಿದನು. \p \v 11 ಅದಕ್ಕೆ ಅಬ್ರಹಾಮನು, “ಈ ಸ್ಥಳದಲ್ಲಿ ಖಂಡಿತವಾಗಿ ದೇವರ ಭಯವು ಇಲ್ಲವೆಂದೂ ನನ್ನ ಹೆಂಡತಿಗಾಗಿ ಅವರು ನನ್ನನ್ನು ಕೊಲ್ಲುವರೆಂದೂ ನಾನು ನೆನಸಿದೆನು. \v 12 ಇದಲ್ಲದೆ ನಿಜವಾಗಿಯೂ ಅವಳು ನನ್ನ ತಂಗಿ, ಆದರೆ ನನ್ನ ತಾಯಿಯ ಮಗಳಲ್ಲ, ನನ್ನ ತಂದೆಯ ಮಗಳೇ, ನನಗೆ ಹೆಂಡತಿಯಾದಳು. \v 13 ದೇವರು ನನ್ನ ತಂದೆಯ ಮನೆಯೊಳಗಿಂದ ನನ್ನನ್ನು ದೇಶಾಂತರಕ್ಕೆ ಕರೆದಾಗ, ನಾನು ಅವಳಿಗೆ, ನೀನು ನನಗೆ ತೋರಿಸತಕ್ಕ ದಯೆಯು ಯಾವುದೆಂದರೆ, ನಾವು ಹೋಗುವ ಪ್ರತಿಯೊಂದು ಸ್ಥಳದಲ್ಲಿ ನನ್ನ ವಿಷಯವಾಗಿ, ‘ಇವನು ನನ್ನ ಅಣ್ಣ,’ ಎಂದು ಹೇಳು ಎಂದು ತಿಳಿಸಿದೆನು,” ಎಂದನು. \p \v 14 ಆಗ ಅಬೀಮೆಲೆಕನು ಕುರಿಗಳನ್ನೂ ಎತ್ತುಗಳನ್ನೂ ದಾಸರನ್ನೂ ದಾಸಿಯರನ್ನೂ ತೆಗೆದುಕೊಂಡು ಅಬ್ರಹಾಮನಿಗೆ ಕೊಟ್ಟು, ಅವನ ಹೆಂಡತಿ ಸಾರಳನ್ನು ಅವನಿಗೆ ಒಪ್ಪಿಸಿಕೊಟ್ಟನು. \v 15 ಅಬೀಮೆಲೆಕನು, “ನನ್ನ ದೇಶವು ನಿನ್ನ ಮುಂದೆ ಇದೆ, ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು,” ಎಂದನು. \p \v 16 ಸಾರಳಿಗೆ, “ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿಯ ಹಣವನ್ನು ಕೊಟ್ಟಿದ್ದೇನೆ. ನೋಡು, ನಡೆದ ಘಟನೆಗೆ ಇದು ಪ್ರಾಯಶ್ಚಿತ್ತವಾಗಿದೆ. ನಿನ್ನ ಸಂಗಡ ಇರುವವರೆಲ್ಲರಿಗೂ ಉಳಿದವರೆಲ್ಲರಿಗೂ ನೀನು ನಿರ್ದೋಷಿಯೆಂದು ಇದು ಸಾಕ್ಷಿಯಾಗಿರಲಿ,” ಎಂದನು. \p \v 17 ಆಗ ಅಬ್ರಹಾಮನು ದೇವರಿಗೆ ಪ್ರಾರ್ಥನೆಮಾಡಿದನು. ದೇವರು ಅಬೀಮೆಲೆಕನನ್ನೂ, ಅವನ ಹೆಂಡತಿಯನ್ನೂ ದಾಸಿಯರನ್ನೂ ವಾಸಿಮಾಡಿದರು. ಆದ್ದರಿಂದ ಅವರಿಗೆ ಮಕ್ಕಳಾದರು. \v 18 ಏಕೆಂದರೆ ಯೆಹೋವ ದೇವರು ಅಬ್ರಹಾಮನ ಹೆಂಡತಿ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಮಹಿಳೆಯರನ್ನು ಬಂಜೆಯರನ್ನಾಗಿ ಮಾಡಿದ್ದರು. \c 21 \s1 ಇಸಾಕನ ಜನನ \p \v 1 ಯೆಹೋವ ದೇವರು ಸಾರಳಿಗೆ ವಾಗ್ದಾನ ಮಾಡಿದಂತೆ ಆಕೆಗೆ ದಯೆತೋರಿಸಿದರು. \v 2 ದೇವರು ಅಬ್ರಹಾಮನಿಗೆ ಹೇಳಿದ ಸಮಯದಲ್ಲಿ ಅವನು ಮುದುಕನಾಗಿದ್ದಾಗ, ಸಾರಳು ಗರ್ಭಿಣಿಯಾಗಿ ಅವನಿಗೆ ಮಗನನ್ನು ಹೆತ್ತಳು. \v 3 ಅಬ್ರಹಾಮನು ತನಗೆ ಸಾರಳಲ್ಲಿ ಹುಟ್ಟಿದ ಮಗನಿಗೆ, ಇಸಾಕ, ಎಂದು ಹೆಸರಿಟ್ಟನು. \v 4 ದೇವರು ತನಗೆ ಅಪ್ಪಣೆಕೊಟ್ಟ ಹಾಗೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು. \v 5 ಅಬ್ರಹಾಮನ ಮಗ ಇಸಾಕನು ಜನಿಸಿದಾಗ ಅವನು ನೂರು ವರ್ಷದವನಾಗಿದ್ದನು. \p \v 6 ಆಗ ಸಾರಳು, “ದೇವರು ನನ್ನನ್ನು ನಗುವಂತೆ ಮಾಡಿದ್ದಾರೆ. ಹೀಗೆ ಕೇಳುವವರೆಲ್ಲರೂ ನನ್ನೊಂದಿಗೆ ನಗುವರು. \v 7 ಸಾರಳು ಮಕ್ಕಳಿಗೆ ಹಾಲು ಕುಡಿಸುವಳೆಂದು ಅಬ್ರಹಾಮನಿಗೆ ಯಾರು ಹೇಳುತ್ತಿದ್ದರು? ನಾನು ಅವನಿಗೆ ಮುದಿಪ್ರಾಯದಲ್ಲಿ ಮಗನನ್ನು ಹೆತ್ತೆನು,” ಎಂದಳು. \s1 ಹಾಗರ್ ಮತ್ತು ಇಷ್ಮಾಯೇಲರನ್ನು ಹೊರಹಾಕಿದ್ದು \p \v 8 ಇಸಾಕನು ಬೆಳೆದು ಬಾಲಕನಾಗಿ ತಾಯಿಯ ಹಾಲು ಕುಡಿಯುವುದನ್ನು ಬಿಟ್ಟನು. ಆ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣ ಮಾಡಿಸಿದನು. \v 9 ಈಜಿಪ್ಟಿನವಳಾದ ಹಾಗರಳಿಗೆ ಅಬ್ರಹಾಮನಿಂದ ಜನಿಸಿದ ಮಗನು ಹಾಸ್ಯ ಮಾಡುವುದನ್ನು ಸಾರಳು ನೋಡಿ, \v 10 ಅಬ್ರಹಾಮನಿಗೆ, “ಈ ದಾಸಿಯನ್ನೂ, ಅವಳ ಮಗನನ್ನೂ ಹೊರಗೆ ಹಾಕು. ಈ ದಾಸಿಯ ಮಗನು ನನ್ನ ಮಗ ಇಸಾಕನ ಸಂಗಡ ಬಾಧ್ಯನಾಗಬಾರದು,” ಎಂದಳು. \p \v 11 ಅಬ್ರಹಾಮನಿಗೆ ತನ್ನ ಮಗನ ದೆಸೆಯಿಂದ ಬಹು ದುಃಖವಾಯಿತು. \v 12 ಆಗ ದೇವರು ಅಬ್ರಹಾಮನಿಗೆ, “ಹುಡುಗನಿಗಾಗಿಯೂ, ನಿನ್ನ ದಾಸಿಗಾಗಿಯೂ ನೀನು ಚಿಂತಿಸಬೇಡ. ಸಾರಳು ನಿನಗೆ ಹೇಳಿದ್ದೆಲ್ಲವನ್ನು ಕೇಳು. ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು. \v 13 ದಾಸಿಯ ಮಗನೂ ನಿನ್ನ ಸಂತಾನವಾಗಿರುವುದರಿಂದ, ಅವನನ್ನೂ ನಾನು ಜನಾಂಗವಾಗಿ ಮಾಡುವೆನು,” ಎಂದರು. \p \v 14 ಅಬ್ರಹಾಮನು ಬೆಳಿಗ್ಗೆ ಎದ್ದು ರೊಟ್ಟಿಯನ್ನೂ, ನೀರಿನ ತಿತ್ತಿಯನ್ನೂ ತೆಗೆದುಕೊಂಡು ಹಾಗರಳಿಗೆ ಕೊಟ್ಟು, ಅವುಗಳನ್ನು ಆಕೆಯ ಹೆಗಲಿನ ಮೇಲೆ ಇರಿಸಿ, ಆ ಹುಡುಗನ ಸಂಗಡ ಅವಳನ್ನು ಕಳುಹಿಸಿಬಿಟ್ಟನು. ಆಕೆಯು ಹೋಗಿ ಬೇರ್ಷೆಬದ ಮರುಭೂಮಿಯಲ್ಲಿ ಅಲೆದಾಡುತ್ತಿದ್ದಳು. \p \v 15 ತಿತ್ತಿಯೊಳಗಿನ ನೀರು ಮುಗಿದಾಗ, ಆಕೆ ಮಗುವನ್ನು ಒಂದು ಮರದ ಕೆಳಗೆ ಮಲಗಿಸಿ, \v 16 ಬಾಣವನ್ನೆಸೆಯುವಷ್ಟು ದೂರಹೋಗಿ ಕುಳಿತುಕೊಂಡು, “ಮಗುವಿನ ಸಾವನ್ನು ನಾನು ನೋಡಲಾರೆನು,” ಎಂದು ಹೇಳಿ ಸ್ವರವೆತ್ತಿ ಅತ್ತಳು. \p \v 17 ದೇವರು ಆ ಹುಡುಗನ ಅಳುವ ಸ್ವರವನ್ನು ಕೇಳಿದರು. ಆಗ ದೇವದೂತನು ಆಕಾಶದೊಳಗಿಂದ ಹಾಗರಳನ್ನು ಕರೆದು, ಆಕೆಗೆ, “ಹಾಗರಳೇ, ವ್ಯಥೆಪಡುವುದೇಕೆ? ಅಂಜಬೇಡ ದೇವರು ಹುಡುಗನ ಸ್ವರವನ್ನು ಕೇಳಿದ್ದಾರೆ. \v 18 ಎದ್ದು ಹುಡುಗನನ್ನು ಎತ್ತಿಕೊಂಡು ನಿನ್ನ ಕೈಯಲ್ಲಿ ತೆಗೆದುಕೋ. ನಾನು ಅವನನ್ನು ದೊಡ್ಡ ಜನಾಂಗದವನನ್ನಾಗಿ ಮಾಡುವೆನು,” ಎಂದನು. \p \v 19 ದೇವರು ಆಕೆಯ ಕಣ್ಣುಗಳನ್ನು ತೆರೆಯಲು, ಆಕೆಯು ನೀರಿನ ಬಾವಿಯನ್ನು ನೋಡಿದಳು. ಅಲ್ಲಿಗೆ ಹೋಗಿ ತಿತ್ತಿಯಲ್ಲಿ ನೀರನ್ನು ತುಂಬಿಸಿ, ಹುಡುಗನಿಗೆ ಕುಡಿಯಲು ಕೊಟ್ಟಳು. \p \v 20 ದೇವರು ಆ ಹುಡುಗನ ಸಂಗಡ ಇದ್ದರು. ಹುಡುಗನು ಬೆಳೆದು ಮರುಭೂಮಿಯಲ್ಲಿ ವಾಸಮಾಡಿ ಬಿಲ್ಲುಗಾರನಾದನು. \v 21 ಇಷ್ಮಾಯೇಲನು ಪಾರಾನಿನ ಮರುಭೂಮಿಯಲ್ಲಿ ವಾಸಮಾಡುತ್ತಿದ್ದಾಗ, ಅವನ ತಾಯಿಯು ಅವನಿಗೋಸ್ಕರ ಈಜಿಪ್ಟ್ ದೇಶದ ಒಬ್ಬ ಹೆಣ್ಣನ್ನು ತರಿಸಿ ಮದುವೆಮಾಡಿಸಿದಳು. \s1 ಬೇರ್ಷೆಬದಲ್ಲಿ ಒಡಂಬಡಿಕೆ \p \v 22 ಆ ಕಾಲದಲ್ಲಿ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿಯಾದ ಫೀಕೋಲನೂ ಅಬ್ರಹಾಮನಿಗೆ, “ನೀನು ಮಾಡುವ ಎಲ್ಲಾ ಕೆಲಸಕಾರ್ಯಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾರೆ. \v 23 ಆದ್ದರಿಂದ ನೀನು ನನಗೂ, ನನ್ನ ಮಗನಿಗೂ, ನನ್ನ ಮೊಮ್ಮಗನಿಗೂ ವಂಚನೆ ಮಾಡುವುದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣಮಾಡು. ನಾನು ನಿನಗೆ ಒಳ್ಳೆಯದನ್ನೇ ಮಾಡಿದ ಪ್ರಕಾರ, ನೀನು ನನಗೂ, ನೀನು ವಾಸಮಾಡುತ್ತಿರುವ ಈ ದೇಶಕ್ಕೂ ಒಳ್ಳೆಯದನ್ನೇ ಮಾಡಬೇಕು,” ಎಂದನು. \p \v 24 ಅದಕ್ಕೆ ಅಬ್ರಹಾಮನು, “ನಾನು ಹಾಗೆಯೇ ಪ್ರಮಾಣ ಮಾಡುತ್ತೇನೆ,” ಎಂದನು. \p \v 25 ಅಬೀಮೆಲೆಕನ ಸೇವಕರು ಬಲಾತ್ಕಾರದಿಂದ ತೆಗೆದುಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನ ಮೇಲೆ ತಪ್ಪು ಹೊರಿಸಿದನು. \v 26 ಅದಕ್ಕೆ ಅಬೀಮೆಲೆಕನು, “ಈ ಕೆಲಸವನ್ನು ಯಾರು ಮಾಡಿದರೆಂದು ನಾನು ಅರಿಯೆ. ನೀನೂ ನನಗೆ ತಿಳಿಸಲಿಲ್ಲ. ನಾನು ಇಂದಿನವರೆಗೂ ಅದನ್ನು ಕೇಳಲೂ ಇಲ್ಲ,” ಎಂದನು. \p \v 27 ಆಗ ಅಬ್ರಹಾಮನು ಕುರಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು. ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು. \v 28 ಅಬ್ರಹಾಮನು ಹಿಂಡಿನಿಂದ ಏಳು ಹೆಣ್ಣು ಕುರಿಮರಿಗಳನ್ನು ಬೇರೆ ಮಾಡಿ ನಿಲ್ಲಿಸಿದನು. \v 29 ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಆ ಏಳು ಹೆಣ್ಣು ಕುರಿಮರಿಗಳನ್ನು ಬೇರೆಯಾಗಿ ನಿಲ್ಲಿಸಿದ ಅರ್ಥ ಏನು?” ಎಂದನು. \p \v 30 ಅದಕ್ಕೆ ಅಬ್ರಹಾಮನು, “ನಾನೇ ಆ ಬಾವಿಯನ್ನು ಅಗೆದಿದ್ದೇನೆಂಬುದಕ್ಕೆ ಸಾಕ್ಷಿಯಾಗಿ ಆ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು,” ಎಂದನು. \p \v 31 ಹೀಗೆ ಅವರಿಬ್ಬರೂ ಅಲ್ಲಿ ಪ್ರಮಾಣ ಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ\f + \fr 21:31 \fr*\fq ಬೇರ್ಷೆಬ \fq*\ft ಅರ್ಥ \ft*\fqa ಏಳು ಬಾವಿಗಳು \fqa*\ft ಮತ್ತು \ft*\fqa ಬಾವಿಯ ಪ್ರಮಾಣ.\fqa*\f* ಎಂದು ಅಬ್ರಹಾಮನು ಹೆಸರಿಟ್ಟನು. \p \v 32 ಹೀಗೆ ಅವರು ಬೇರ್ಷೆಬದಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡರು. ತರುವಾಯ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂದಿರುಗಿದರು. \v 33 ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲ ವೃಕ್ಷವನ್ನು ನೆಟ್ಟು, ಅಲ್ಲಿ ನಿತ್ಯ ದೇವರಾಗಿರುವ ಯೆಹೋವ ದೇವರ ಹೆಸರನ್ನು ಹೇಳಿ ಆರಾಧಿಸಿದನು. \v 34 ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹುಕಾಲ ತಂಗಿದ್ದನು. \c 22 \s1 ಅಬ್ರಹಾಮನಿಗೆ ಪರೀಕ್ಷೆ \p \v 1 ಕೆಲವು ಕಾಲದ ನಂತರ, ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕಾಗಿ ಅವನಿಗೆ, “ಅಬ್ರಹಾಮನೇ,” ಎಂದು ಕರೆದರು. \p ಅದಕ್ಕವನು, “ಇಗೋ, ಇಲ್ಲಿದ್ದೇನೆ,” ಎಂದು ಉತ್ತರಕೊಟ್ಟನು. \p \v 2 ಆಗ ದೇವರು, “ನೀನು ಪ್ರೀತಿ ಮಾಡುವ ನಿನ್ನ ಒಬ್ಬನೇ ಮಗ ಇಸಾಕನನ್ನು ಈಗ ತೆಗೆದುಕೊಂಡು, ಮೊರೀಯಾ ದೇಶಕ್ಕೆ ಹೋಗಿ, ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು,” ಎಂದರು. \p \v 3 ಅಬ್ರಹಾಮನು ಬೆಳಿಗ್ಗೆ ಎದ್ದು, ತನ್ನ ಕತ್ತೆಗೆ ತಡಿ ಕಟ್ಟಿ, ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗ ಇಸಾಕನನ್ನೂ, ದಹನಬಲಿಗಳಿಗಾಗಿ ಕಟ್ಟಿಗೆಗಳನ್ನೂ ತೆಗೆದುಕೊಂಡು, ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು. \v 4 ಮೂರನೆಯ ದಿನ ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಆ ಸ್ಥಳವು ದೂರದಲ್ಲಿ ಕಾಣಿಸಿತು. \v 5 ಅಬ್ರಹಾಮನು ತನ್ನ ಸೇವಕರಿಗೆ, “ಕತ್ತೆಯ ಸಂಗಡ ಇಲ್ಲಿಯೇ ಇರಿ. ನಾನೂ, ಹುಡುಗನೂ ಅಲ್ಲಿಗೆ ಹೋಗಿ, ಆರಾಧನೆ ಮಾಡಿ, ನಿಮ್ಮ ಬಳಿಗೆ ಹಿಂದಿರುಗಿ ಬರುತ್ತೇವೆ,” ಎಂದನು. \p \v 6 ಅಬ್ರಹಾಮನು ದಹನಬಲಿಗಳ ಕಟ್ಟಿಗೆಗಳನ್ನು ತೆಗೆದುಕೊಂಡು, ತನ್ನ ಮಗ ಇಸಾಕನ ಮೇಲೆ ಹೊರಿಸಿ; ಬೆಂಕಿಯನ್ನೂ, ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡನು. ಅವರಿಬ್ಬರೂ ಹೊರಟು ಹೋದರು. \v 7 ಇಸಾಕನು ತನ್ನ ತಂದೆ ಅಬ್ರಹಾಮನಿಗೆ, “ಅಪ್ಪಾ,” ಎಂದನು. \p ಆಗ ಅಬ್ರಹಾಮನು, “ಏನು ಮಗನೇ?” ಎಂದನು. \p ಅದಕ್ಕೆ ಅವನು, “ಇಗೋ, ಬೆಂಕಿಯೂ, ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ?” ಎಂದನು. \p \v 8 ಅಬ್ರಹಾಮನು, “ನನ್ನ ಮಗನೇ, ದೇವರೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿಸುವರು,” ಎಂದು ಉತ್ತರಕೊಟ್ಟನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು. \p \v 9 ದೇವರು ಅವನಿಗೆ ಹೇಳಿದ ಸ್ಥಳಕ್ಕೆ ಬಂದಾಗ, ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ, ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ, ತನ್ನ ಮಗ ಇಸಾಕನನ್ನು ಕಟ್ಟಿ, ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು. \v 10 ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವುದಕ್ಕೆ ಕತ್ತಿ ತೆಗೆದುಕೊಂಡನು. \v 11 ಆಗ ಯೆಹೋವ ದೇವರ ದೂತನು ಆಕಾಶದೊಳಗಿಂದ, “ಅಬ್ರಹಾಮನೇ, ಅಬ್ರಹಾಮನೇ,” ಎಂದು ಅವನನ್ನು ಕರೆದನು. \p ಅವನು, “ಇಲ್ಲಿ ಇದ್ದೇನೆ,” ಎಂದನು. \p \v 12 ಯೆಹೋವ ದೇವರ ದೂತನು ಅಬ್ರಹಾಮನಿಗೆ, “ಹುಡುಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ; ಏಕೆಂದರೆ ನೀನು ದೇವರಿಗೆ ಭಯಪಡುತ್ತೀ ಎಂದು ಈಗ ನಾನು ತಿಳಿದಿದ್ದೇನೆ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವುದಕ್ಕೆ ಹಿಂಜರಿಯಲಿಲ್ಲ,” ಎಂದು ಹೇಳಿದನು. \p \v 13 ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು, ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು. \v 14 ಅಬ್ರಹಾಮನು ಆ ಸ್ಥಳಕ್ಕೆ ಯೆಹೋವ ಯೀರೆ\f + \fr 22:14 \fr*\ft ಅಥವಾ \ft*\fqa ಯೆಹೋವ ದೇವರು ಒದಗಿಸುವರು\fqa*\f* ಎಂದು ಹೆಸರಿಟ್ಟನು. “ಯೆಹೋವ ದೇವರು ಪರ್ವತದ ಮೇಲೆ ಒದಗಿಸುವರು,” ಎಂದು ಇಂದಿನವರೆಗೂ ಜನರು ಹೇಳುತ್ತಾರೆ. \p \v 15 ಯೆಹೋವ ದೇವರ ದೂತನು ಆಕಾಶದೊಳಗಿಂದ ಎರಡನೆಯ ಸಾರಿ ಅಬ್ರಹಾಮನನ್ನು ಕರೆದು ಅವನಿಗೆ, \v 16 “ನೀನು ಈ ಕಾರ್ಯವನ್ನು ಮಾಡಿ, ನಿನ್ನ ಒಬ್ಬನೇ ಮಗನನ್ನು ಸಹ ನನಗೆ ಕೊಡುವುದಕ್ಕೆ ಹಿಂಜರಿಯದೆ ಇದ್ದುದರಿಂದ, ಯೆಹೋವ ದೇವರಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ, \v 17 ನಿಶ್ಚಯವಾಗಿ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸುವೆನು. ನಿನ್ನ ಸಂತಾನದವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು. \v 18 ನೀನು ನನಗೆ ವಿಧೇಯನಾದದ್ದರಿಂದ, ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು,” ಎಂದರು. \p \v 19 ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂದಿರುಗಿ ಬಂದನು. ಅವರೆಲ್ಲರೂ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು. \s1 ನಾಹೋರನ ಮಕ್ಕಳು \li1 \v 20 ಕೆಲ ಸಮಯದ ನಂತರ ಕೆಲವರು ಅಬ್ರಹಾಮನಿಗೆ, “ಮಿಲ್ಕಾಳು ತಾಯಾಗಿದ್ದಾಳೆ. ನಿನ್ನ ಸಹೋದರ ನಾಹೋರನಿಗೆ ಅವಳು ಮಕ್ಕಳನ್ನು ಹೆತ್ತಿದ್ದಾಳೆ,” ಎಂದು ತಿಳಿಸಿದರು. \li2 \v 21 ಅವರು ಯಾರೆಂದರೆ, ಅವನ ಚೊಚ್ಚಲು ಮಗ ಊಚ್, ಅವನ ಸಹೋದರ ಬೂಜ್, \li2 ಅರಾಮನ ತಂದೆ ಕೆಮೂಯೇಲ್, \li2 \v 22 ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್, ಬೆತೂಯೇಲ್. \li3 \v 23 ಬೆತೂಯೇಲನಿಂದ ರೆಬೆಕ್ಕಳು ಹುಟ್ಟಿದಳು. \li4 ಈ ಎಂಟು ಮಂದಿಯನ್ನು ಮಿಲ್ಕಾಳು ಅಬ್ರಹಾಮನ ಸಹೋದರ ನಾಹೋರನಿಗೆ ಹೆತ್ತಳು. \b \li1 \v 24 ಅವನ ಉಪಪತ್ನಿ ರೂಮಳೆಂಬವಳು ಸಹ \li2 ಟೆಬಹ, ಗಹಮ, ತಹಷ, ಮಾಕಾ ಎಂಬುವರನ್ನು ಹೆತ್ತಳು. \c 23 \s1 ಸಾರಳ ಮರಣ \p \v 1 ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು. \v 2 ಅವಳು ಕಾನಾನ್ ದೇಶದಲ್ಲಿರುವ ಹೆಬ್ರೋನಿನಲ್ಲಿ ಅಂದರೆ ಕಿರ್ಯತ್ ಅರ್ಬದಲ್ಲಿ ಮರಣಹೊಂದಿದಳು. ಅಬ್ರಹಾಮನು ಸಾರಳಿಗೋಸ್ಕರ ಗೋಳಾಡಿದನು. \p \v 3 ಆಗ ಅಬ್ರಹಾಮನು ತನ್ನ ಹೆಂಡತಿಯ ಶವದ ಬಳಿಯಿಂದ ಎದ್ದು, ಹಿತ್ತಿಯರ ಬಳಿಗೆ ಬಂದು, ಅವರಿಗೆ, \v 4 “ನಾನು ನಿಮ್ಮೊಂದಿಗೆ ಪರದೇಶಸ್ಥನೂ, ಪರವಾಸಿಯೂ ಆಗಿದ್ದೇನೆ. ನನಗೆ ನಿಮ್ಮ ಬಳಿಯಲ್ಲಿ ಸಮಾಧಿಯ ಸ್ಥಳವನ್ನು ಕೊಡಿರಿ. ಆಗ ನನ್ನ ಹೆಂಡತಿಯ ಶವವನ್ನು ಹೂಳಿಡುವೆನು,” ಎಂದನು. \p \v 5 ಹಿತ್ತಿಯರು ಅಬ್ರಹಾಮನಿಗೆ ಉತ್ತರಕೊಟ್ಟು, \v 6 “ಒಡೆಯಾ, ನಮ್ಮ ಮಾತನ್ನು ಕೇಳು, ನೀನು ನಮ್ಮ ಮಧ್ಯದಲ್ಲಿ ಮಹಾಪ್ರಭುವಾಗಿದ್ದೀ. ನಮ್ಮ ಸಮಾಧಿಗಳೊಳಗೆ ಉತ್ತಮವಾದದ್ದರಲ್ಲಿ ನಿನ್ನ ಹೆಂಡತಿಯ ಶವವನ್ನು ಹೂಳಿಡು. ನಮ್ಮಲ್ಲಿ ಯಾರೂ ನಿನಗೆ ಸಮಾಧಿಯನ್ನು ಕೊಡುವುದಿಲ್ಲ ಎಂದು ಹೇಳಲಾರರು,” ಎಂದರು. \p \v 7 ಆಗ ಅಬ್ರಹಾಮನು ಎದ್ದು, ಆ ದೇಶದ ಜನರಾದ ಹಿತ್ತಿಯರ ಮುಂದೆ ತಲೆಬಾಗಿ, \v 8 ಅವರ ಸಂಗಡ ಮಾತನಾಡಿ, “ನಾನು ನನ್ನ ಹೆಂಡತಿಯ ಶವವನ್ನು ಹೂಳಿಡುವುದು ನಿಮ್ಮ ಮನಸ್ಸಿಗೆ ಸರಿಬಿದ್ದರೆ, ನನ್ನ ಮಾತು ಕೇಳಿ ಚೋಹರನ ಮಗ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ. \v 9 ಅವನು ತನ್ನ ಹೊಲದ ಅಂಚಿನಲ್ಲಿರುವ ಮಕ್ಪೇಲಾ ಗವಿಯನ್ನು ನನಗೆ ಕೊಡಲಿ. ಅವನು ಅದನ್ನು ತಕ್ಕ ಕ್ರಯಕ್ಕೆ ನಿಮ್ಮ ಎದುರಿನಲ್ಲಿ ನನಗೆ ಕೊಡಲಿ,” ಎಂದನು. \p \v 10 ಆಗ ಅವರ ಮಧ್ಯದಲ್ಲಿ ಕುಳಿತುಕೊಂಡಿದ್ದ ಹಿತ್ತಿಯನಾದ ಎಫ್ರೋನನು ಪಟ್ಟಣದ ದ್ವಾರದ ಬಳಿಯಲ್ಲಿ ಕೂತಿದ್ದ ಎಲ್ಲಾ ಹಿತ್ತಿಯರು ಕೇಳುವಂತೆ ಅಬ್ರಹಾಮನಿಗೆ, \v 11 “ಒಡೆಯನೇ ಹಾಗಲ್ಲ, ನನ್ನ ಮಾತನ್ನು ಕೇಳು. ಆ ಹೊಲವನ್ನು ನಿನಗೆ ಕೊಡುತ್ತೇನೆ. ಅದರಲ್ಲಿರುವ ಗವಿಯನ್ನೂ ನಿನಗೆ ಕೊಡುತ್ತೇನೆ. ಅದನ್ನು ನನ್ನ ಜನರ ಎದುರಿನಲ್ಲಿ ನಿನಗೆ ಕೊಡುತ್ತೇನೆ. ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು. \p \v 12 ಆಗ ಅಬ್ರಹಾಮನು ದೇಶದ ಜನರ ಮುಂದೆ ತಲೆಬಾಗಿ, \v 13 ದೇಶದ ಜನರು ಕೇಳುವಂತೆ ಎಫ್ರೋನನಿಗೆ, “ನೀನು ನನಗೆ ಕೊಡಬೇಕೆಂದಿದ್ದರೆ ನನ್ನ ಮಾತನ್ನು ಕೇಳು. ನಾನು ಹೊಲದ ಕ್ರಯವನ್ನು ಕೊಡುತ್ತೇನೆ. ಅದನ್ನು ನನ್ನಿಂದ ತೆಗೆದುಕೋ, ಆಗ ನನ್ನ ಹೆಂಡತಿಯ ಶವವನ್ನು ಅಲ್ಲಿ ಹೂಳಿಡುವೆನು,” ಎಂದನು. \p \v 14 ಎಫ್ರೋನನು ಅಬ್ರಹಾಮನಿಗೆ ಉತ್ತರವಾಗಿ, \v 15 “ನನ್ನ ಒಡೆಯನೇ, ನನ್ನ ಮಾತನ್ನು ಕೇಳು. ಆ ಭೂಮಿಯು ನಾನೂರು ಬೆಳ್ಳಿಯ ನಾಣ್ಯಗಳ\f + \fr 23:15 \fr*\ft ನಾನೂರು ಶೆಕೆಲ್ ಸುಮಾರು 4.6 ಕಿಲೋಗ್ರಾಂ\ft*\f* ಬೆಲೆಯುಳ್ಳದ್ದು, ಈ ಕುರಿತು ನಮ್ಮೊಳಗೇ ವಾದವೇಕೆ? ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು. \p \v 16 ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿಕೊಂಡು, ಎಫ್ರೋನನು ಹಿತ್ತಿಯರ ಎದುರಿನಲ್ಲಿ ಹೇಳಿದ ಬೆಲೆ ಅಂದರೆ, ವರ್ತಕರಲ್ಲಿ ನಡೆಯುವ ನಾನೂರು ಬೆಳ್ಳಿ ನಾಣ್ಯಗಳನ್ನು ತೂಕಮಾಡಿ ಅವನಿಗೆ ಕೊಟ್ಟನು. \p \v 17 ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲದಲ್ಲಿರುವ ಎಫ್ರೋನನ ಹೊಲವೂ, ಆ ಹೊಲದಲ್ಲಿರುವ ಗವಿಯೂ, ಆ ಹೊಲದ ಸುತ್ತಲೂ ಇರುವ ಎಲ್ಲಾ ಮರಗಳೂ, \v 18 ಹಿತ್ತಿಯರ ಮುಂದೆಯೂ, ಅವರ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ದೃಢವಾಯಿತು. \v 19 ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಸಾರಳನ್ನು ಕಾನಾನ್ ದೇಶದಲ್ಲಿ ಹೆಬ್ರೋನ್ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿಟ್ಟನು. \v 20 ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಅಬ್ರಹಾಮನಿಗೆ ಸ್ವಂತ ಸಮಾಧಿ ಎಂದು ಸ್ಥಿರವಾಯಿತು. \c 24 \s1 ಇಸಾಕನು ಮತ್ತು ರೆಬೆಕ್ಕಳು \p \v 1 ಅಬ್ರಹಾಮನು ವೃದ್ಧನಾಗಿದ್ದನು. ಯೆಹೋವ ದೇವರು ಅಬ್ರಹಾಮನನ್ನು ಎಲ್ಲಾದರಲ್ಲಿಯೂ ಆಶೀರ್ವದಿಸಿದ್ದರು. \v 2 ಅಬ್ರಹಾಮನು ತನಗೆ ಇದ್ದವುಗಳ ಮೇಲೆಲ್ಲಾ ಆಡಳಿತ ಮಾಡುವ ತನ್ನ ಮನೆಯ ಹಿರಿಯ ಸೇವಕನಿಗೆ, “ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಡು, \v 3 ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಪುತ್ರಿಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬಾರದು. \v 4 ನನ್ನ ದೇಶಕ್ಕೂ, ಬಂಧುಗಳ ಬಳಿಗೂ ಹೋಗಿ ನನ್ನ ಮಗ ಇಸಾಕನಿಗೆ ಹೆಂಡತಿಯನ್ನು ತೆಗೆದುಕೊಂಡು ಬರುತ್ತೇನೆಂದು ಪರಲೋಕದ ಮತ್ತು ಭೂಲೋಕದ ದೇವರಾಗಿರುವ ಯೆಹೋವ ದೇವರ ಮೇಲೆ ನೀನು ನನಗೆ ಪ್ರಮಾಣಮಾಡಬೇಕು,” ಎಂದನು. \p \v 5 ಆ ಸೇವಕನು ಅವನಿಗೆ, “ಒಂದು ವೇಳೆ ನನ್ನನ್ನು ಹಿಂಬಾಲಿಸಿ, ಈ ದೇಶಕ್ಕೆ ಬರಲು ಆ ಸ್ತ್ರೀಗೆ ಮನಸ್ಸಿಲ್ಲದೆ ಹೋದರೆ, ನೀನು ಬಿಟ್ಟುಬಂದ ದೇಶಕ್ಕೆ ನಿನ್ನ ಮಗನನ್ನು ತಿರುಗಿ ಕರೆದುಕೊಂಡು ಹೋಗಬೇಕೋ?” ಎಂದನು. \p \v 6 ಅಬ್ರಹಾಮನು ಅವನಿಗೆ, “ನನ್ನ ಮಗನನ್ನು ತಿರುಗಿ ಅಲ್ಲಿಗೆ ಕರೆದುಕೊಂಡು ಹೋಗಬಾರದು, \v 7 ನನ್ನ ತಂದೆಯ ಮನೆಯಿಂದಲೂ ಬಂಧುಗಳ ದೇಶದೊಳಗಿಂದಲೂ ನನ್ನನ್ನು ಹೊರಗೆ ಕರೆದು, ನನ್ನ ಸಂಗಡ ಮಾತನಾಡಿ, ‘ನಿನ್ನ ಸಂತಾನಕ್ಕೆ ಈ ದೇಶವನ್ನು ಕೊಡುವೆನು,’ ಎಂದು ನನಗೆ ಪ್ರಮಾಣ ಮಾಡಿದ ಪರಲೋಕದ ದೇವರಾದ ಯೆಹೋವ ದೇವರು ಅಲ್ಲಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳುವ ಹಾಗೆ, ತಮ್ಮ ದೂತನನ್ನು ನಿನ್ನ ಮುಂದೆ ಕಳುಹಿಸುವರು. \v 8 ಆದರೆ ನಿನ್ನನ್ನು ಹಿಂಬಾಲಿಸಿ ಬರುವುದಕ್ಕೆ ಆ ಸ್ತ್ರೀಗೆ ಮನಸ್ಸಿಲ್ಲದಿದ್ದರೆ, ನನಗೆ ಮಾಡಿದ ಆ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವೆ. ಆದರೆ ನನ್ನ ಮಗನನ್ನು ಅಲ್ಲಿಗೆ ಮಾತ್ರ ತಿರುಗಿ ಕರೆದುಕೊಂಡು ಹೋಗಬಾರದು,” ಎಂದನು. \v 9 ಆಗ ಆ ಸೇವಕನು ತನ್ನ ಕೈಯನ್ನು ತನ್ನ ಯಜಮಾನನಾದ ಅಬ್ರಹಾಮನ ತೊಡೆಯ ಕೆಳಗೆ ಇಟ್ಟು, ಆ ವಿಷಯ ಬಗ್ಗೆ ಅವನಿಗೆ ಪ್ರಮಾಣ ಮಾಡಿದನು. \p \v 10 ಆಗ ಆ ಸೇವಕನು ತನ್ನ ಯಜಮಾನನ ಒಂಟೆಗಳಲ್ಲಿ ಹತ್ತು ಒಂಟೆಗಳನ್ನೂ, ತನ್ನ ಯಜಮಾನನಿಂದ ಎಲ್ಲಾ ತರಹದ ವಸ್ತ್ರಗಳನ್ನೂ ತೆಗೆದುಕೊಂಡು ಅರಾಮ್ ನಹರೈಮಿಗೆ\f + \fr 24:10 \fr*\ft ಅಂದರೆ, ಮೆಸೊಪೊತಾಮ್ಯ\ft*\f* ಹೊರಟು, ನಾಹೋರನು ವಾಸವಾಗಿದ್ದ ಊರನ್ನು ಸೇರಿದನು. \v 11 ಆಗ ಸ್ತ್ರೀಯರು ನೀರು ತರಲು ಬರುವ ಸಂಜೆಯ ಸಮಯವಾಗಿತ್ತು. ಅವನು ಪಟ್ಟಣದ ಹೊರಗೆ ನೀರಿನ ಬಾವಿಯ ಬಳಿಯಲ್ಲಿ ಒಂಟೆಗಳನ್ನು ಮಲಗಿಸಿದನು. \p \v 12 ಆಗ ಅವನು, “ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಯೆಹೋವ ದೇವರೇ, ಈ ಹೊತ್ತು ನನಗೆ ಅನುಕೂಲವನ್ನು ಉಂಟುಮಾಡಿ, ನನ್ನ ಯಜಮಾನನಾದ ಅಬ್ರಹಾಮನಿಗೆ ದಯೆ ತೋರಿಸಿರಿ. \v 13 ನಾನು ನೀರಿನ ಬಾವಿಯ ಬಳಿಯಲ್ಲಿ ನಿಂತುಕೊಂಡಿದ್ದೇನೆ. ಊರಿನ ಜನರ ಪುತ್ರಿಯರು ನೀರು ಸೇದುವುದಕ್ಕೆ ಹೊರಗೆ ಬರುತ್ತಾರೆ. \v 14 ನಾನು ಯಾವ ಹುಡುಗಿಗೆ, ‘ನೀರು ಕುಡಿಯುವ ಹಾಗೆ ನಿನ್ನ ಕೊಡವನ್ನು ಇಳಿಸು,’ ಎಂದು ಕೇಳಿಕೊಂಡಾಗ, ‘ನೀನೂ ಕುಡಿ, ನಿನ್ನ ಒಂಟೆಗಳಿಗೆ ಸಹ ಕುಡಿಯುವುದಕ್ಕೆ ಕೊಡುತ್ತೇನೆ,’ ಎಂದು ಹೇಳುವಳೋ, ಆಕೆಯನ್ನೇ ನೀವು ನಿಮ್ಮ ಸೇವಕನಾದ ಇಸಾಕನಿಗೆ ನೇಮಕ ಮಾಡಿದ್ದೀರಿ ಮತ್ತು ಯಜಮಾನನಿಗೆ ದಯೆ ತೋರಿಸಿದ್ದೀರಿ, ಎಂದು ಇದರಿಂದ ನಾನು ತಿಳಿದುಕೊಳ್ಳುವೆನು,” ಎಂದು ಬೇಡಿಕೊಂಡನು. \p \v 15 ಅವನು ಹಾಗೆ ಹೇಳುವುದನ್ನು ಮುಗಿಸುವುದಕ್ಕಿಂತ ಮುಂಚೆ ಅಬ್ರಹಾಮನ ಸಹೋದರನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಾಳ ಮಗ ಬೆತೂಯೇಲನಿಗೆ ಹುಟ್ಟಿದ ರೆಬೆಕ್ಕಳು ತನ್ನ ಕೊಡವನ್ನು ಹೆಗಲಿನ ಮೇಲೆ ಇಟ್ಟುಕೊಂಡು ಹೊರಗೆ ಬಂದಳು. \v 16 ಆ ಹುಡುಗಿಯು ನೋಡುವುದಕ್ಕೆ ಬಹು ಸುಂದರಿಯಾಗಿದ್ದಳು, ಮದುವೆಯಾಗದ ಕನ್ನಿಕೆಯಾಗಿದ್ದಳು. ಆಕೆಯು ಬಾವಿಯ ಬಳಿಗೆ ಹೋಗಿ, ತನ್ನ ಕೊಡವನ್ನು ತುಂಬಿಕೊಂಡು ಬಂದಳು. \p \v 17 ಆಗ ಸೇವಕನು ಅವಳೆದುರಿಗೆ ಓಡಿಹೋಗಿ, “ನಿನ್ನ ಕೊಡದೊಳಗಿಂದ ಸ್ವಲ್ಪ ನೀರು ನನಗೆ ಕುಡಿಯುವುದಕ್ಕೆ ಕೊಡು,” ಎಂದು ಕೇಳಿಕೊಂಡನು. \p \v 18 ಅದಕ್ಕವಳು, “ನನ್ನ ಒಡೆಯನೇ, ಕುಡಿ,” ಎಂದು ಹೇಳಿ, ತ್ವರೆಯಾಗಿ ತನ್ನ ಕೊಡವನ್ನು ಕೈಯಿಂದ ಇಳಿಸಿ, ಅವನಿಗೆ ಕುಡಿಯಲು ಕೊಟ್ಟಳು. \p \v 19 ಅವನಿಗೆ ಕುಡಿಯುವುದಕ್ಕೆ ಕೊಟ್ಟನಂತರ ಆಕೆಯು, “ನಿನ್ನ ಒಂಟೆಗಳಿಗೂ ಸಾಕಾಗುವಷ್ಟು ನೀರನ್ನು ಸೇದುತ್ತೇನೆ,” ಎಂದು ಹೇಳಿದಳು. \v 20 ಆಕೆಯು ತ್ವರೆಪಟ್ಟು ತನ್ನ ಕೊಡದಲ್ಲಿದ್ದ ನೀರನ್ನು ತೊಟ್ಟಿಯಲ್ಲಿ ಹೊಯ್ದು, ತಿರುಗಿ ಸೇದುವುದಕ್ಕೆ ಬಾವಿಯ ಬಳಿಗೆ ಓಡಿ, ಅವನ ಎಲ್ಲಾ ಒಂಟೆಗಳಿಗೋಸ್ಕರ ನೀರನ್ನು ಸೇದಿದಳು. \v 21 ಆಗ ಯೆಹೋವ ದೇವರು ತನ್ನ ಪ್ರಯಾಣನ್ನು ಸಫಲ ಮಾಡಿದರೋ ಏನೋ, ಎಂದು ತಿಳಿದುಕೊಳ್ಳುವುದಕ್ಕೆ ಆ ಮನುಷ್ಯನು ಆಕೆಯನ್ನು ಗಮನಿಸುತ್ತಾ, ಆಶ್ಚರ್ಯಪಟ್ಟು ಮೌನವಾಗಿದ್ದನು. \p \v 22 ಒಂಟೆಗಳು ನೀರು ಕುಡಿದಾದ ಮೇಲೆ, ಆ ಮನುಷ್ಯನು ಅರ್ಧ ತೊಲೆಯ\f + \fr 24:22 \fr*\ft ಸುಮಾರು 5.7 ಗ್ರಾಂ\ft*\f* ತೂಕದ ಚಿನ್ನದ ಮೂಗುತಿಯನ್ನು, ಹತ್ತು ತೊಲೆ ತೂಕದ ಎರಡು ಬಳೆಗಳನ್ನು ಆಕೆಗೆ ಕೊಟ್ಟನು. \v 23 ಅನಂತರ, “ನೀನು ಯಾರ ಮಗಳು? ನನಗೆ ಹೇಳು. ನಿನ್ನ ತಂದೆಯ ಮನೆಯಲ್ಲಿ ಒಂದು ರಾತ್ರಿ ಕಳೆಯುವುದಕ್ಕೆ ನಮಗೆ ಸ್ಥಳವಿದೆಯೋ?” ಕೇಳಿದನು. \p \v 24 ಅದಕ್ಕೆ ಆಕೆಯು, “ನಾಹೋರನಿಗೆ ಮಿಲ್ಕಾಳು ಹೆತ್ತ ಬೆತೂಯೇಲನ ಮಗಳು,” ಎಂದಳು. \v 25 ಇದಲ್ಲದೆ ಆಕೆಯು ಅವನಿಗೆ, “ಹುಲ್ಲೂ, ಮೇವೂ ನಮ್ಮಲ್ಲಿ ಸಾಕಷ್ಟು ಇವೆ, ನೀವು ಒಂದು ರಾತ್ರಿ ಕಳೆಯುವುದಕ್ಕೆ ಸ್ಥಳವಿದೆ,” ಎಂದು ಅವನಿಗೆ ಹೇಳಿದಳು. \p \v 26 ಆಗ ಆ ಮನುಷ್ಯನು ತಲೆಬಾಗಿ ಯೆಹೋವ ದೇವರಿಗೆ ಅಡ್ಡಬಿದ್ದು ಆರಾಧಿಸಿದನು. \v 27 ಇದಲ್ಲದೆ ಅವನು, “ನನ್ನ ಯಜಮಾನನಾದ ಅಬ್ರಹಾಮನ ದೇವರಾದ ಯೆಹೋವ ದೇವರು ಸ್ತುತಿಹೊಂದಲಿ. ಅವರು ನನ್ನ ಯಜಮಾನನನ್ನು ಕೈಬಿಡದೆ, ತಮ್ಮ ದಯೆಯನ್ನೂ, ನಂಬಿಗಸ್ತಿಕೆಯನ್ನೂ ತೋರಿಸಿದ್ದಾರೆ. ನಾನು ಮಾರ್ಗದಲ್ಲಿರುವಾಗ ಯೆಹೋವ ದೇವರು ನನ್ನನ್ನು ನನ್ನ ಯಜಮಾನನ ಸಹೋದರನ ಮನೆಗೇ ನಡೆಸಿದ್ದಾರೆ,” ಎಂದನು. \p \v 28 ಆಗ ಆ ಹುಡುಗಿಯು ಓಡಿಹೋಗಿ ಈ ವಿಷಯಗಳನ್ನು ತನ್ನ ತಾಯಿಯ ಮನೆಯಲ್ಲಿದ್ದವರಿಗೆ ತಿಳಿಸಿದಳು. \v 29 ರೆಬೆಕ್ಕಳಿಗೆ ಲಾಬಾನನೆಂಬ ಸಹೋದರನಿದ್ದನು. ಬಾವಿಯ ಬಳಿಯಲ್ಲಿದ್ದ ಆ ಮನುಷ್ಯನ ಬಳಿಗೆ ಲಾಬಾನನು ಓಡಿದನು. \v 30 ಅವನು ಮೂಗುತಿಯನ್ನೂ, ತನ್ನ ಸಹೋದರಿಯ ಕೈಗಳಲ್ಲಿದ್ದ ಬಳೆಗಳನ್ನೂ ಕಂಡು, ಆ ಮನುಷ್ಯನು ತನ್ನ ಬಳಿ ಹೀಗೆ ಮಾತನಾಡಿದನೆಂದು ಹೇಳಿದ ತನ್ನ ಸಹೋದರಿ ರೆಬೆಕ್ಕಳ ಮಾತುಗಳನ್ನು ಕೇಳಿ, ಆ ಮನುಷ್ಯನ ಬಳಿಗೆ ಬಂದನು. ಅವನು ಇನ್ನೂ ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ನಿಂತಿದ್ದನು. \v 31 ಲಾಬಾನನು ಅವನಿಗೆ, “ಯೆಹೋವ ದೇವರಿಂದ ಆಶೀರ್ವಾದ ಪಡೆದವನೇ, ಒಳಗೆ ಬಾ, ಏಕೆ ಹೊರಗೆ ನಿಂತಿರುವೆ? ನಾನು ಮನೆಯನ್ನೂ, ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ,” ಎಂದನು. \p \v 32 ಆಗ ಆ ಮನುಷ್ಯನು ಮನೆಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ, ಅವುಗಳಿಗೆ ಹುಲ್ಲನ್ನೂ, ಮೇವನ್ನೂ ಕೊಟ್ಟನು. ಅವನ ಕಾಲುಗಳನ್ನೂ, ಅವನ ಸಂಗಡ ಇದ್ದ ಮನುಷ್ಯರ ಕಾಲುಗಳನ್ನೂ ತೊಳೆಯುವುದಕ್ಕೆ ನೀರನ್ನು ಕೊಟ್ಟನು. \v 33 ಅವನಿಗೆ ಊಟಕ್ಕೆ ಬಡಿಸಿದಾಗ, ಅವನು, “ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವುದಿಲ್ಲ,” ಎಂದನು. \p ಅದಕ್ಕೆ ಲಾಬಾನನು, “ಹೇಳು,” ಎಂದನು. \p \v 34 ಅವನು, “ನಾನು ಅಬ್ರಹಾಮನ ಸೇವಕನು. \v 35 ಯೆಹೋವ ದೇವರು ನನ್ನ ಯಜಮಾನನನ್ನು ಬಹಳವಾಗಿ ಆಶೀರ್ವದಿಸಿದ್ದರಿಂದ ಅವನು ಧನವಂತನಾದನು. ದೇವರು ಅವನಿಗೆ ಕುರಿದನ, ಬೆಳ್ಳಿಬಂಗಾರ, ದಾಸದಾಸಿ, ಒಂಟೆಗಳು ಮತ್ತು ಕತ್ತೆಗಳನ್ನು ಕೊಟ್ಟಿದ್ದಾರೆ. \v 36 ಇದಲ್ಲದೆ ನನ್ನ ಯಜಮಾನನ ಹೆಂಡತಿ ಸಾರಳು ಮುದಿಪ್ರಾಯದಲ್ಲಿ ನನ್ನ ಯಜಮಾನನಿಗೆ ಮಗನನ್ನು ಹೆತ್ತಿದ್ದಾಳೆ. ಇವನು ತನಗಿದ್ದದ್ದನ್ನೆಲ್ಲಾ ಅವನಿಗೆ ಕೊಟ್ಟಿದ್ದಾನೆ. \v 37 ನನ್ನ ಯಜಮಾನನು, ‘ನಾನು ಯಾರ ದೇಶದಲ್ಲಿ ವಾಸಮಾಡುತ್ತೇನೋ, ಆ ಕಾನಾನ್ಯರ ಪುತ್ರಿಯರಲ್ಲಿ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬೇಡ. \v 38 ಆದರೆ ನೀನು ನನ್ನ ತಂದೆಯ ಮನೆಗೂ, ನನ್ನ ಬಂಧುಗಳ ಬಳಿಗೂ ಹೋಗಿ, ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬೇಕೆಂದು,’ ನನ್ನಿಂದ ಪ್ರಮಾಣ ಮಾಡಿಸಿಕೊಂಡಿದ್ದಾನೆ. \p \v 39 “ನಾನು ನನ್ನ ಯಜಮಾನನಿಗೆ, ‘ಒಂದು ವೇಳೆ ಆ ಸ್ತ್ರೀ ನನ್ನನ್ನು ಹಿಂಬಾಲಿಸದೆ ಹೋದಾಳು,’ ಹೇಳಿದೆ. \p \v 40 “ಅವನು ನನಗೆ, ‘ನಾನು ಯಾರ ಮುಂದೆ ನಂಬಿಗಸ್ತಿಕೆಯಿಂದ ನಡೆದುಕೊಳ್ಳುತ್ತೇನೋ, ಆ ಯೆಹೋವ ದೇವರು ತಮ್ಮ ದೂತನನ್ನು ನಿನ್ನ ಸಂಗಡ ಕಳುಹಿಸಿ, ನೀನು ನನ್ನ ಬಂಧುಗಳಿಂದಲೂ ನನ್ನ ತಂದೆಯ ಮನೆಯೊಳಗಿಂದಲೂ ನನ್ನ ಮಗನಿಗೋಸ್ಕರ ಹೆಂಡತಿಯನ್ನು ತೆಗೆದುಕೊಳ್ಳುವ ಹಾಗೆ ನಿನ್ನ ಪ್ರಯತ್ನವನ್ನು ಸಫಲಮಾಡುವರು. \v 41 ನೀನು ನನ್ನ ಬಂಧುಗಳ ಬಳಿಗೆ ಬಂದಾಗ, ಅವರು ನಿನಗೆ ಆ ಹುಡುಗಿಯನ್ನು ಕೊಡದೆ ಹೋದರೆ, ನಾನು ಮಾಡಿಸಿದ ಪ್ರಮಾಣದಿಂದ ಬಿಡುಗಡೆಯಾಗಿರುವೆ,’ ” ಎಂದನು. \p \v 42 “ಈ ದಿನ ನಾನು ಆ ಬಾವಿಯ ಬಳಿಗೆ ಬಂದಾಗ, ‘ನನ್ನ ಯಜಮಾನನಾದ ಅಬ್ರಹಾಮನ ದೇವರಾದ ಯೆಹೋವ ದೇವರೇ, ನೀವು ಬಯಸಿದರೆ, ದಯವಿಟ್ಟು ನಾನು ಬಂದ ಪ್ರಯಾಣಕ್ಕೆ ನೀವು ಸಫಲ ಮಾಡಿದ್ದಾದರೆ, \v 43 ಇಗೋ, ನಾನು ಈಗ ಬಾವಿಯ ಬಳಿಯಲ್ಲಿ ನಿಂತಿದ್ದೇನೆ. ಯಾವ ಹುಡುಗಿ ನೀರು ಸೇದುವುದಕ್ಕೆ ಹೊರಗೆ ಬರುತ್ತಾಳೋ, ನಾನು ಆಕೆಗೆ, “ನಿನ್ನ ಕೊಡದೊಳಗಿಂದ ನನಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಡು,” ಎಂದು ಕೇಳಿದಾಗ, \v 44 ಆಕೆಯು ನನಗೆ, “ನೀನೂ ಕುಡಿ, ನಿನ್ನ ಒಂಟೆಗಳಿಗೂ ಸೇದಿ ಹಾಕುತ್ತೇನೆ,” ಎಂದು ನನಗೆ ಹೇಳಿದರೆ, ಆಕೆಯೇ ಯೆಹೋವ ದೇವರಿಂದ ನನ್ನ ಯಜಮಾನನ ಮಗನಿಗೆ ನೇಮಕವಾದ ಹೆಂಡತಿಯಾಗಿರಲಿ,’ ಎಂದುಕೊಂಡೆನು. \p \v 45 “ನಾನು ನನ್ನ ಹೃದಯದಲ್ಲಿ ಹಾಗೆ ಅಂದುಕೊಂಡು ಮುಗಿಸುವುದರೊಳಗಾಗಿ, ರೆಬೆಕ್ಕಳು ತನ್ನ ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಹೊರಗೆ ಬಂದಳು. ಆಕೆಯು ಬಾವಿಯಿಂದ ನೀರನ್ನು ಸೇದಿದಳು. ಆಗ ನಾನು, ‘ನನಗೆ ಕುಡಿಯುವುದಕ್ಕೆ ಕೊಡು,’ ಎಂದು ಆಕೆಯನ್ನು ಕೇಳಿದೆನು. \p \v 46 “ಅದಕ್ಕೆ ಆಕೆಯು ತ್ವರೆಪಟ್ಟು, ತನ್ನ ಹೆಗಲಿನ ಮೇಲಿನಿಂದ ಕೊಡವನ್ನು ಇಳಿಸಿ, ‘ನೀನು ಕುಡಿ ಮತ್ತು ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ,’ ಎಂದಳು. ಆಗ ನಾನು ಕುಡಿದೆನು, ಆಕೆಯು ಒಂಟೆಗಳಿಗೂ ನೀರನ್ನು ತಂದುಕೊಟ್ಟಳು. \p \v 47 “ನಾನು ಆಕೆಗೆ, ‘ನೀನು ಯಾರ ಮಗಳು?’ ಎಂದು ಕೇಳಿದೆನು. \p “ಅದಕ್ಕವಳು, ‘ನಾಹೋರನಿಗೆ ಮಿಲ್ಕಾಳು ಹೆತ್ತ ಮಗನಾದ ಬೆತೂಯೇಲನ ಮಗಳು,’ ಎಂದಳು. \p “ಆಗ ನಾನು ಆಕೆಗೆ ಮೂಗುತಿಯನ್ನೂ, ಆಕೆಯ ಕೈಗಳಿಗೆ ಬಳೆಗಳನ್ನೂ ಕೊಟ್ಟು, \v 48 ತಲೆಬಾಗಿ ಯೆಹೋವ ದೇವರನ್ನು ಆರಾಧಿಸಿ, ನನ್ನ ಯಜಮಾನನ ಸಹೋದರನ ಮಗಳನ್ನು ಅವನ ಮಗನಿಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕೆ ನನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸಿದ ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಯೆಹೋವ ದೇವರನ್ನು ಕೊಂಡಾಡಿದೆ. \v 49 ಆದ್ದರಿಂದ ನೀವು ನನ್ನ ಯಜಮಾನನಿಗೆ ದಯೆಯಿಂದಲೂ ನಂಬಿಗಸ್ತಿಕೆಯಿಂದಲೂ ವರ್ತಿಸುವುದಾದರೆ ನನಗೆ ತಿಳಿಸಿರಿ. ಇಲ್ಲದಿದ್ದರೂ ನನಗೆ ತಿಳಿಸಿರಿ. ಆಗ ನಾನು ಬಲಗಡೆಯಾದರೂ, ಎಡಗಡೆಯಾದರೂ ತಿರುಗಿಕೊಂಡುಹೋಗುವೆನು,” ಎಂದನು. \p \v 50 ಅದಕ್ಕೆ ಲಾಬಾನನು ಮತ್ತು ಬೆತೂಯೇಲನು, “ಈ ಕಾರ್ಯವು ಯೆಹೋವ ದೇವರಿಂದಲೇ ಉಂಟಾಯಿತು. ನಾವಂತೂ ಹೌದೆಂದೂ ಅಲ್ಲವೆಂದೂ ಹೇಳಲಾರೆವು \v 51 ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ; ಕರೆದುಕೊಂಡು ಹೋಗಬಹುದು; ಯೆಹೋವ ದೇವರು ಹೇಳಿದಂತೆಯೇ ಆಕೆ ನಿನ್ನೊಡೆಯನ ಮಗನಿಗೆ ಹೆಂಡತಿಯಾಗಲಿ,” ಎಂದರು. \p \v 52 ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿದಾಗ ಯೆಹೋವ ದೇವರ ಮುಂದೆ ಅಡ್ಡಬಿದ್ದು, ಆರಾಧಿಸಿದನು. \v 53 ಅವನು ಬೆಳ್ಳಿಯ ಒಡವೆ, ಬಂಗಾರದ ಒಡವೆ, ವಸ್ತ್ರಗಳನ್ನೂ ತಂದು, ರೆಬೆಕ್ಕಳಿಗೆ ಕೊಟ್ಟನು. ಆಕೆಯ ಸಹೋದರನಿಗೂ, ಆಕೆಯ ತಾಯಿಗೂ ಅಮೂಲ್ಯವಾದ ಉಡುಗೊರೆಗಳನ್ನು ಕೊಟ್ಟನು. \v 54 ತರುವಾಯ ಅವನೂ, ಅವನ ಸಂಗಡ ಇದ್ದ ಜನರೂ ಊಟಮಾಡಿ, ಕುಡಿದು, ರಾತ್ರಿಯನ್ನು ಅಲ್ಲೇ ಕಳೆದರು. \p ಬೆಳಿಗ್ಗೆ ಎದ್ದ ಮೇಲೆ ಅವನು, “ನನ್ನನ್ನು ನನ್ನ ಯಜಮಾನನ ಬಳಿಗೆ ಕಳುಹಿಸಿರಿ,” ಎಂದನು. \p \v 55 ಅದಕ್ಕೆ ಆಕೆಯ ಸಹೋದರನೂ, ತಾಯಿಯೂ, “ಹುಡುಗಿಯು ಕೆಲವು ದಿನ ಇರಲಿ. ಹತ್ತು ದಿನಗಳಾದರೂ ನಮ್ಮ ಬಳಿಯಲ್ಲಿ ಇದ್ದು ತರುವಾಯ ಹೋಗಲಿ,” ಎಂದರು. \p \v 56 ಆಗ ಅವನು ಅವರಿಗೆ, “ನನ್ನನ್ನು ತಡೆಯಬೇಡಿರಿ, ಯೆಹೋವ ದೇವರು ನನ್ನ ಮಾರ್ಗವನ್ನು ಸಫಲ ಮಾಡಿದ್ದಾರಲ್ಲಾ. ನನ್ನ ಯಜಮಾನನ ಬಳಿಗೆ ಹೋಗುವಂತೆ ನನ್ನನ್ನು ಕಳುಹಿಸಿರಿ,” ಎಂದನು. \p \v 57 ಆಗ ಅವರು, “ನಾವು ಹುಡುಗಿಯನ್ನು ಕರೆದು, ಆಕೆಯ ಅಭಿಪ್ರಾಯವನ್ನು ವಿಚಾರಿಸೋಣ,” ಎಂದರು. \v 58 ಅವರು ರೆಬೆಕ್ಕಳನ್ನು ಕರೆದು ಆಕೆಗೆ, “ಈ ಮನುಷ್ಯನ ಸಂಗಡ ಹೋಗುತ್ತೀಯಾ?” ಎಂದು ಕೇಳಿದರು. \p ಅದಕ್ಕೆ ಆಕೆಯು, “ನಾನು ಹೋಗುತ್ತೇನೆ,” ಎಂದಳು. \p \v 59 ಆಗ ಅವರು ತಮ್ಮ ಸಹೋದರಿಯಾದ ರೆಬೆಕ್ಕಳನ್ನೂ ಅವಳ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಜೊತೆಯಲ್ಲಿದ್ದ ಮನುಷ್ಯರನ್ನೂ ಸಾಗಕಳುಹಿಸಿದರು. \v 60 ಇದಲ್ಲದೆ ಅವರು ರೆಬೆಕ್ಕಳನ್ನು ಹೀಗೆಂದು ಆಶೀರ್ವದಿಸಿದರು: \q1 “ನಮ್ಮ ಸಹೋದರಿಯೇ, \q2 ನೀನು ಸಹಸ್ರ ಸಹಸ್ರ ಮಕ್ಕಳಿಗೆ ತಾಯಿಯಾಗು. \q1 ನಿನ್ನ ಸಂತಾನದವರು ತಮ್ಮ \q2 ವೈರಿಗಳ ಪ್ರದೇಶಗಳನ್ನು ಸ್ವಾಧೀನಮಾಡಿಕೊಳ್ಳಲಿ.” \p \v 61 ಆಗ ರೆಬೆಕ್ಕಳೂ, ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿ, ಆ ಮನುಷ್ಯನ ಹಿಂದೆ ಹೋದರು. ಆ ಸೇವಕನು ರೆಬೆಕ್ಕಳನ್ನು ಕರಕೊಂಡು ಹೋದನು. \p \v 62 ಇಸಾಕನು ಬೇರ್ ಲಹೈರೋಯಿ ಬಾವಿಗೆ ಹೋಗಿ ಬಂದನು. ಅವನು ದೇಶದ ನೆಗೆವನಲ್ಲಿ ವಾಸವಾಗಿದ್ದನು. \v 63 ಇಸಾಕನು ಸಾಯಂಕಾಲ ಹೊಲದಲ್ಲಿ ಧ್ಯಾನಮಾಡುವುದಕ್ಕೆ ಹೋದಾಗ, ಕಣ್ಣೆತ್ತಿ ನೋಡಲು, ಒಂಟೆಗಳು ಬರುವುದನ್ನು ಕಂಡನು. \v 64 ರೆಬೆಕ್ಕಳು ಸಹ ಕಣ್ಣೆತ್ತಿ ಇಸಾಕನನ್ನು ನೋಡಿ, ಒಂಟೆಗಳಿಂದ ಇಳಿದಳು. \v 65 ಆಕೆಯು ಆ ಸೇವಕನಿಗೆ, “ಹೊಲದಲ್ಲಿ ನಮಗೆ ಎದುರಾಗಿ ಬರುವ ಆ ಮನುಷ್ಯನು ಯಾರು?” ಎಂದಳು. \p ಅದಕ್ಕೆ ಸೇವಕನು, “ಅವನೇ ನನ್ನ ಯಜಮಾನನು,” ಎಂದಾಗ, ಆಕೆಯು ಮುಸುಕು ಹಾಕಿಕೊಂಡಳು. \p \v 66 ಆಗ ಸೇವಕನು ಇಸಾಕನಿಗೆ ತಾನು ಮಾಡಿದ ಕಾರ್ಯಗಳನ್ನೆಲ್ಲಾ ತಿಳಿಸಿದನು. \v 67 ಇಸಾಕನು ಆಕೆಯನ್ನು ತನ್ನ ತಾಯಿಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಅವನು ರೆಬೆಕ್ಕಳನ್ನು ಸ್ವೀಕರಿಸಿದನು. ಆಕೆಯು ಅವನ ಹೆಂಡತಿಯಾದಳು, ಅವನು ಆಕೆಯನ್ನು ಪ್ರೀತಿಸಿದನು. ಹೀಗೆ ಇಸಾಕನು ತನ್ನ ತಾಯಿಯ ಮರಣದ ದುಃಖ ಶಮನ ಮಾಡಿಕೊಂಡನು. \c 25 \s1 ಅಬ್ರಹಾಮನ ಮರಣ \p \v 1 ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬಳನ್ನು ಮದುವೆಮಾಡಿಕೊಂಡನು. \v 2 ಆಕೆಯು ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು. \v 3 ಯೊಕ್ಷಾನನಿಗೆ ಶೆಬಾ ಮತ್ತು ದೆದಾನ್ ಹುಟ್ಟಿದರು. ದೆದಾನನ ಪುತ್ರರು ಅಶ್ಯೂರರು, ಲೆಟೂಶ್ಯರೂ, ಲೆಯುಮ್ಯರೂ. \v 4 ಮಿದ್ಯಾನನ ಪುತ್ರರು: ಏಫಾ, ಏಫೆರ್, ಹನೋಕ್, ಅಬೀದ, ಎಲ್ದಾಯ. ಇವರೆಲ್ಲರೂ ಕೆಟೂರಳ ಸಂತತಿಯವರು. \p \v 5 ಆದರೆ ಅಬ್ರಹಾಮನು ತನಗಿದ್ದದ್ದನ್ನೆಲ್ಲಾ ಇಸಾಕನಿಗೆ ಕೊಟ್ಟನು. \v 6 ಅಬ್ರಹಾಮನಿಗೆ ಇದ್ದ ಉಪಪತ್ನಿಯರ ಮಕ್ಕಳಿಗೆ ಅಬ್ರಹಾಮನು ದಾನಗಳನ್ನು ಕೊಟ್ಟು, ತಾನು ಜೀವಿಸುತ್ತಿರುವಾಗಲೇ ಅವರನ್ನು ತನ್ನ ಮಗ ಇಸಾಕನ ಬಳಿಯಿಂದ ಪೂರ್ವದಿಕ್ಕಿನ ಕಡೆಗೆ ಕಳುಹಿಸಿದನು. \p \v 7 ಅಬ್ರಹಾಮನು ನೂರೆಪ್ಪತ್ತೈದು ವರ್ಷಗಳವರೆಗೆ ಜೀವಿಸಿದನು. \v 8 ಅವನು ಪೂರ್ಣಾಯುಷ್ಯನಾಗಿ ತುಂಬಾ ಮುದುಕನಾಗಿ ಮರಣಹೊಂದಿ ತನ್ನ ಪಿತೃಗಳ ಬಳಿಗೆ ಸೇರಿದನು. \v 9 ಅವನ ಪುತ್ರರಾದ ಇಸಾಕನೂ, ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯನಾದ ಚೋಹರನ ಮಗ ಎಫ್ರೋನನ ಹೊಲದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಳಿಟ್ಟರು. \v 10 ಅಬ್ರಹಾಮನು ಅದನ್ನು ಹಿತ್ತಿಯರಿಂದ ಕೊಂಡುಕೊಂಡಿದ್ದನು. ಅಬ್ರಹಾಮನಿಗೂ, ಅವನ ಹೆಂಡತಿ ಸಾರಳಿಗೂ ಒಂದೇ ಸ್ಥಳದಲ್ಲಿ ಸಮಾಧಿ ಆಯಿತು. \v 11 ಅಬ್ರಹಾಮನು ಸತ್ತ ನಂತರ ದೇವರು ಅವನ ಮಗ ಇಸಾಕನನ್ನು ಆಶೀರ್ವದಿಸಿದರು. ಇಸಾಕನು ಬೇರ್ ಲಹೈರೋಯಿ ಎಂಬ ಬಾವಿಯ ಬಳಿಯಲ್ಲಿ ವಾಸಿಸಿದನು. \s1 ಇಷ್ಮಾಯೇಲನ ವಂಶಸ್ಥರು \p \v 12 ಸಾರಳ ದಾಸಿ ಈಜಿಪ್ಟಿನ ಹಾಗರಳು ಅಬ್ರಹಾಮನಿಗೆ ಹೆತ್ತ ಮಗ ಇಷ್ಮಾಯೇಲನ ವಂಶಾವಳಿ: \b \li4 \v 13 ಜನನದ ಪ್ರಕಾರ ಇಷ್ಮಾಯೇಲನ ಪುತ್ರರ ಹೆಸರುಗಳು ಇವೇ: \b \li1 ಇಷ್ಮಾಯೇಲನ ಚೊಚ್ಚಲ ಮಗನು ನೆಬಾಯೋತ್, \li1 ಕೇದಾರ್, ಅದ್ಬೆಯೇಲ್, ಮಿಬ್ಸಾಮ್, \li1 \v 14 ಮಿಷ್ಮಾ, ದೂಮಾ, ಮಸ್ಸಾ, \li1 \v 15 ಹದದ್, ತೇಮಾ, ಯೆಟೂರ್, \li1 ನಾಫೀಷ್, ಕೇದೆಮ. \b \li4 \v 16 ಇವರೇ ಇಷ್ಮಾಯೇಲನ ಪುತ್ರರು. ಇವುಗಳೇ ಅವರ ಗ್ರಾಮಗಳ ಪ್ರಕಾರವಾಗಿಯೂ, ಪಾಳೆಯಗಳ ಪ್ರಕಾರವಾಗಿಯೂ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು. \b \p \v 17 ಇಷ್ಮಾಯೇಲನು ಬದುಕಿದ ವರ್ಷಗಳು ನೂರಮೂವತ್ತೇಳು. ಅವನು ಮರಣಹೊಂದಿ ತನ್ನ ಪಿತೃಗಳ ಬಳಿಗೆ ಸೇರಿದನು. \v 18 ಅವನ ವಂಶಸ್ಥರು ಅಸ್ಸೀರಿಯಗೆ ಹೋಗುವ, ಈಜಿಪ್ಟಿನ ಮೇರೆಯಲ್ಲಿ ಹವೀಲದಿಂದ ಶೂರ್‌ವರೆಗಿನ ಪ್ರದೇಶದಲ್ಲಿ ವಾಸಿಸಿದರು. ಅವರು ತಮ್ಮ ಎಲ್ಲಾ ಸಹೋದರರೊಂದಿಗೆ ಎದುರುಬದಿರಿನಲ್ಲೇ ವಾಸಮಾಡಿದರು. \s1 ಯಾಕೋಬನು ಮತ್ತು ಏಸಾವನು \p \v 19 ಅಬ್ರಹಾಮನ ಮಗ ಇಸಾಕನ ವಂಶಾವಳಿ: \b \p ಅಬ್ರಹಾಮನಿಂದ ಇಸಾಕನು ಹುಟ್ಟಿದನು. \v 20 ಇಸಾಕನು ನಲವತ್ತು ವರ್ಷದವನಾಗಿದ್ದಾಗ ಪದ್ದನ್ ಅರಾಮಿನಿಂದ ಅರಾಮ್ಯನಾದ ಬೆತೂಯೇಲನ ಮಗಳೂ, ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತೆಗೆದುಕೊಂಡನು. \p \v 21 ಆದರೆ ಆಕೆಯು ಬಂಜೆಯಾಗಿದ್ದುದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವ ದೇವರನ್ನು ಬೇಡಿಕೊಂಡನು. ಯೆಹೋವ ದೇವರು ಅವನ ಬೇಡಿಕೆಯನ್ನು ಪೂರೈಸಿದರು. ಆದ್ದರಿಂದ ಅವನ ಹೆಂಡತಿ ರೆಬೆಕ್ಕಳು ಗರ್ಭಿಣಿಯಾದಳು. \v 22 ಅವಳ ಗರ್ಭದಲ್ಲಿ ಶಿಶುಗಳು ಒಂದನ್ನೊಂದು ನೂಕಿಕೊಂಡಾಗ ಆಕೆಯು, “ನನಗೆ ಏಕೆ ಹೀಗಾಗುತ್ತಿದೆ?” ಎಂದು ಕೇಳಿ, ಯೆಹೋವ ದೇವರ ಬಳಿಗೆ ವಿಚಾರಿಸುವುದಕ್ಕೆ ಹೋದಳು. \p \v 23 ಯೆಹೋವ ದೇವರು ಆಕೆಗೆ ಹೀಗೆ ಹೇಳಿದರು: \q1 “ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. \q2 ನಿನ್ನ ಗರ್ಭದೊಳಗಿನಿಂದಲೇ ಎರಡು ಜನಾಂಗಗಳು ಹೊರಟುಬಂದು ಬೇರೆಯಾಗುವುವು. \q1 ಒಂದು ಇನ್ನೊಂದಕ್ಕಿಂತ ಬಲವಾಗಿರುವುದು. \q2 ಇದಲ್ಲದೆ ಹಿರಿಯನು ಕಿರಿಯವನಿಗೆ ಸೇವೆಮಾಡುವನು.” \p \v 24 ಆಕೆಯು ಹೆರುವುದಕ್ಕೆ ದಿನತುಂಬಿದಾಗ, ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದರು. \v 25 ಮೊದಲನೆಯವನು ಕೆಂಪಾಗಿಯೂ ಕೂದಲಿನ ವಸ್ತ್ರದಂತೆ ಇಡೀ ದೇಹವು ಇದ್ದುದರಿಂದ ಅವನಿಗೆ, ಏಸಾವ, ಎಂದು ಹೆಸರಿಟ್ಟರು. \v 26 ತರುವಾಯ ಅವನ ತಮ್ಮನು ಏಸಾವನ ಹಿಮ್ಮಡಿಯನ್ನು ಕೈಯಿಂದ ಹಿಡಿದುಕೊಂಡು ಹೊರಗೆ ಬಂದನು. ಅವನಿಗೆ, ಯಾಕೋಬ, ಎಂದು ಹೆಸರಿಟ್ಟರು. ಆಕೆಯು ಇವರನ್ನು ಹೆತ್ತಾಗ ಇಸಾಕನು ಅರವತ್ತು ವರ್ಷದವನಾಗಿದ್ದನು. \p \v 27 ಆ ಹುಡುಗರು ಬೆಳೆದಾಗ ಏಸಾವನು ಬೇಟೆಯಾಡುವುದರಲ್ಲಿ ಜಾಣನಾಗಿದ್ದು, ಅಡವಿಯ ಮನುಷ್ಯನಾದನು. ಯಾಕೋಬನು ಗುಡಾರಗಳಲ್ಲಿ ವಾಸಮಾಡುವ ಸಾಧು ಮನುಷ್ಯನಾಗಿದ್ದನು. \v 28 ಬೇಟೆಯಲ್ಲಿ ಆಸಕ್ತನಾಗಿದ್ದ ಇಸಾಕನು ಏಸಾವನನ್ನು ಪ್ರೀತಿಸಿದನು. ಆದರೆ ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು. \p \v 29 ಒಂದು ಸಾರಿ ಯಾಕೋಬನು ಅಡಿಗೆ ಮಾಡುತ್ತಿದ್ದಾಗ, ಏಸಾವನು ದಣಿದು ಅಡವಿಯಿಂದ ಬಂದನು. \v 30 ಏಸಾವನು ಯಾಕೋಬನಿಗೆ, “ಆ ಕೆಂಪಾದ ಪದಾರ್ಥವನ್ನು ತಿನ್ನುವುದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ,” ಎಂದನು. ಆದ್ದರಿಂದ ಅವನಿಗೆ, ಎದೋಮ್, ಎಂದು ಹೆಸರಾಯಿತು. \p \v 31 ಆಗ ಯಾಕೋಬನು, “ಈ ಹೊತ್ತು ನಿನ್ನ ಜೇಷ್ಠ ಪುತ್ರನ ಹಕ್ಕನ್ನು ನನಗೆ ಮಾರು,” ಎಂದನು. \p \v 32 ಏಸಾವನು, “ಇಗೋ, ನಾನು ಸಾಯುತ್ತಿದ್ದೇನೆ, ಜೇಷ್ಠ ಪುತ್ರನ ಹಕ್ಕಿನಿಂದ ನನಗೇನು ಲಾಭ?” ಎಂದನು. \p \v 33 ಯಾಕೋಬನು, “ಈ ಹೊತ್ತು ನನಗೆ ಪ್ರಮಾಣಮಾಡು,” ಎಂದನು. ಆಗ ಅವನು ಯಾಕೋಬನಿಗೆ ಪ್ರಮಾಣಮಾಡಿ, ತನ್ನ ಜೇಷ್ಠ ಪುತ್ರನ ಹಕ್ಕನ್ನು ಅವನಿಗೆ ಮಾರಿದನು. \p \v 34 ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ, ಅಲಸಂದಿ ಗುಗ್ಗರಿಯನ್ನೂ ಕೊಟ್ಟನು. ಅವನು ತಿಂದು, ಕುಡಿದು ಎದ್ದು ಹೋದನು. \p ಹೀಗೆ ಏಸಾವನು ತನ್ನ ಜೇಷ್ಠ ಪುತ್ರನ ಹಕ್ಕನ್ನು ತಾತ್ಸಾರದಿಂದ ಕಂಡನು. \c 26 \s1 ಇಸಾಕ ಮತ್ತು ಅಬೀಮೆಲೆಕ \p \v 1 ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ, ದೇಶದಲ್ಲಿ ಮತ್ತೊಂದು ಬರವು ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು. \v 2 ಆಗ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ಈಜಿಪ್ಟಿಗೆ ಇಳಿದು ಹೋಗಬೇಡ. ನಾನು ನಿನಗೆ ಹೇಳುವ ದೇಶದಲ್ಲಿ ವಾಸವಾಗಿರು. \v 3 ಈ ದೇಶದಲ್ಲಿ ಪ್ರವಾಸಿಯಾಗಿರು. ಆಗ ನಾನು ನಿನ್ನ ಸಂಗಡ ಇದ್ದು, ನಿನ್ನನ್ನು ಆಶೀರ್ವದಿಸುವೆನು. ನಿನಗೂ, ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು. \v 4 ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವಾಗುವುದು. \v 5 ಏಕೆಂದರೆ ಅಬ್ರಹಾಮನು ನನ್ನ ಮಾತಿಗೆ ನನ್ನ ವಿಧಿಯನ್ನೂ, ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ನನ್ನ ನೇಮಗಳನ್ನೂ, ಕೈಗೊಂಡು ನಡೆದನು,” ಎಂದರು. \v 6 ಆಗ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು. \p \v 7 ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು, ರೆಬೆಕ್ಕಳು ನೋಟಕ್ಕೆ ಚೆಲುವೆಯಾಗಿದ್ದುದರಿಂದ ಆಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು, ಆಕೆ ತನ್ನ ಹೆಂಡತಿಯೆಂದು ಹೇಳುವುದಕ್ಕೆ ಅಂಜಿ ಅವನು, “ಆಕೆಯು ನನ್ನ ತಂಗಿ” ಎಂದನು. \p \v 8 ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ, ಒಂದು ದಿನ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನು ಕಿಟಕಿಯಿಂದ ನೋಡುತ್ತಿದ್ದಾಗ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸಮಾಡುವುದನ್ನು ಕಂಡನು. \v 9 ಆಗ ಅಬೀಮೆಲೆಕನು ಇಸಾಕನನ್ನು ಕರೆದು, “ಆಕೆಯು ಖಂಡಿತ ನಿನ್ನ ಹೆಂಡತಿಯಾಗಿದ್ದಾಳೆ. ಆದರೆ ನೀನು, ‘ಆಕೆಯು ನನ್ನ ತಂಗಿ,’ ಎಂದು ಏಕೆ ಹೇಳಿದೆ?” ಎಂದನು. \p ಇಸಾಕನು ಅವನಿಗೆ, “ನಾನು ಆಕೆಯ ನಿಮಿತ್ತ ಸಾಯಬಾರದೆಂದು ಹಾಗೆ ಹೇಳಿದೆನು,” ಎಂದನು. \p \v 10 ಆಗ ಅಬೀಮೆಲೆಕನು, “ನೀನು ನಮಗೆ ಮಾಡಿದ್ದೇನು? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯನ್ನು ತೆಗೆದುಕೊಂಡಿದ್ದರೆ, ನೀನು ನಮ್ಮ ಮೇಲೆ ಅಪರಾಧವನ್ನು ಬರಮಾಡುತ್ತಿದ್ದೆಯಲ್ಲಾ,” ಎಂದನು. \p \v 11 ಅಬೀಮೆಲೆಕನು ತನ್ನ ಜನರಿಗೆಲ್ಲಾ, “ಈ ಮನುಷ್ಯನನ್ನಾಗಲಿ, ಅವನ ಹೆಂಡತಿಯನ್ನಾಗಲಿ ಮುಟ್ಟುವವನು ಖಂಡಿತವಾಗಿ ಸಾಯಬೇಕು,” ಎಂದು ಅಪ್ಪಣೆಕೊಟ್ಟನು. \p \v 12 ಇಸಾಕನು ಆ ದೇಶದಲ್ಲಿ ಬಿತ್ತಿದ ವರ್ಷದಲ್ಲಿಯೇ ನೂರರಷ್ಟು ಬೆಳೆಯನ್ನು ಹೊಂದಿದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು. \v 13 ಅವನು ಬಹಳ ಶ್ರೀಮಂತನಾಗಿ, ಕ್ರಮೇಣವಾಗಿ ಹೆಚ್ಚಿದ್ದರಿಂದ ಅಭಿವೃದ್ಧಿಯಾದನು. \v 14 ಏಕೆಂದರೆ ಅವನಿಗೆ ಕುರಿ ಮಂದೆಗಳೂ ದನಗಳ ಹಿಂಡುಗಳೂ ಬಹಳ ಮಂದಿ ಸೇವಕರೂ ಇದ್ದರು. ಆದ್ದರಿಂದ ಫಿಲಿಷ್ಟಿಯರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. \v 15 ಅವನ ತಂದೆ ಅಬ್ರಹಾಮನ ದಿನಗಳಲ್ಲಿ ಅಬ್ರಹಾಮನ ಸೇವಕರು ಅಗೆದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದರು. \p \v 16 ಅಬೀಮೆಲೆಕನು ಇಸಾಕನಿಗೆ, “ನಮ್ಮನ್ನು ಬಿಟ್ಟು ಹೋಗು, ಏಕೆಂದರೆ ನೀನು ನಮಗಿಂತ ಬಲಿಷ್ಠನಾಗಿಬಿಟ್ಟೆ,” ಎಂದನು. \p \v 17 ಆಗ ಇಸಾಕನು ಅಲ್ಲಿಂದ ಹೋಗಿ ಗೆರಾರಿನ ತಗ್ಗಿನಲ್ಲಿ ಗುಡಾರ ಹಾಕಿ, ಅಲ್ಲಿ ವಾಸಮಾಡಿದನು. \v 18 ಇದಲ್ಲದೆ ಇಸಾಕನು ತನ್ನ ತಂದೆ ಅಬ್ರಹಾಮನ ದಿನಗಳಲ್ಲಿ ಅಗೆದಂಥ ಬಾವಿಗಳನ್ನು ತಿರುಗಿ ಅಗೆದನು. ಏಕೆಂದರೆ ಅಬ್ರಹಾಮನು ಮರಣದ ನಂತರ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರುಕೊಟ್ಟನು. \p \v 19 ಇಸಾಕನ ಸೇವಕರು ತಗ್ಗಿನಲ್ಲಿ ಅಗೆದಾಗ, ಅಲ್ಲಿ ಅವರಿಗೆ ಉಕ್ಕುವ ಒರತೆಯ ಬಾವಿಯು ಸಿಕ್ಕಿತು. \v 20 ಗೆರಾರಿನ ಮಂದೆಯನ್ನು ಮೇಯಿಸುವವರು, “ಈ ನೀರು ನಮ್ಮದು,” ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ, ಏಸೆಕ್\f + \fr 26:20 \fr*\fq ಏಸೆಕ್ \fq*\ft ಅಂದರೆ \ft*\fqa ವಿವಾದ\fqa*\f*, ಎಂದು ಹೆಸರಿಟ್ಟನು. \v 21 ತರುವಾಯ ಅವರು ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿಯೂ ಅವರು ಜಗಳವಾಡಿದಾಗ, ಅವನು ಅದಕ್ಕೆ, ಸಿಟ್ನಾ\f + \fr 26:21 \fr*\fq ಸಿಟ್ನಾ \fq*\ft ಅಂದರೆ \ft*\fqa ವಿರೋಧ\fqa*\f*, ಎಂದು ಹೆಸರಿಟ್ಟನು. \v 22 ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು, “ಈಗ ಯೆಹೋವ ದೇವರು ನಮಗೆ ಸ್ಥಳವನ್ನು ಮಾಡಿದ್ದಾರೆ. ನಾವು ಈ ದೇಶದಲ್ಲಿ ಅಭಿವೃದ್ಧಿ ಹೊಂದುವೆವು,” ಎಂದು ಹೇಳಿ ಅದಕ್ಕೆ, ರೆಹೋಬೋತ್\f + \fr 26:22 \fr*\fq ರೆಹೋಬೋತ್ \fq*\ft ಅಂದರೆ \ft*\fqa ಕೋಣೆಗಳು\fqa*\f*, ಎಂದು ಹೆಸರಿಟ್ಟನು. \p \v 23 ಅಲ್ಲಿಂದ ಅವನು ಬೇರ್ಷೆಬಕ್ಕೆ ಹೋದನು. \v 24 ಅದೇ ರಾತ್ರಿಯಲ್ಲಿ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ನಿನ್ನ ತಂದೆ ಅಬ್ರಹಾಮನ ದೇವರು ನಾನೇ, ಭಯಪಡಬೇಡ. ಏಕೆಂದರೆ ನಾನು ನಿನ್ನ ಸಂಗಡ ಇದ್ದೇನೆ, ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ, ನಿನ್ನ ಸಂತತಿಯನ್ನು ಹೆಚ್ಚಿಸುವೆನು,” ಎಂದರು. \p \v 25 ಆಗ ಇಸಾಕನು ಅಲ್ಲಿ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಹೇಳಿಕೊಂಡು, ತನ್ನ ಗುಡಾರವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗೆದರು. \p \v 26 ತರುವಾಯ ಅಬೀಮೆಲೆಕನೂ, ಅವನ ಸ್ನೇಹಿತರಲ್ಲಿ ಒಬ್ಬನಾದ ಅಹುಜ್ಜತನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಗೆರಾರಿನಿಂದ ಅವನ ಬಳಿಗೆ ಬಂದರು. \v 27 ಇಸಾಕನು ಅವರಿಗೆ, “ನನ್ನ ಬಳಿಗೆ ನೀವು ಏಕೆ ಬಂದಿದ್ದೀರಿ? ನೀವು ನನ್ನನ್ನು ಹಗೆಮಾಡಿ, ನಿಮ್ಮ ಬಳಿಯಿಂದ ನನ್ನನ್ನು ಕಳುಹಿಸಿಬಿಟ್ಟಿರಲ್ಲಾ?” ಎಂದನು. \p \v 28 ಅದಕ್ಕೆ ಅವರು, “ನಿಶ್ಚಯವಾಗಿ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ ಎಂದು ತಿಳಿದು, ನಮಗೂ, ನಿನಗೂ ಮಧ್ಯದಲ್ಲಿ ಒಂದು ಪ್ರಮಾಣವಿರುವ ಹಾಗೆ, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳೋಣವೆಂದು ನಾವು ತೀರ್ಮಾನಿಸಿದ್ದೇವೆ. \v 29 ಅದೇನೆಂದರೆ, ನಾವು ನಿನ್ನನ್ನು ಮುಟ್ಟದೆ, ನಿನಗೆ ಒಳ್ಳೆಯದನ್ನೇ ಮಾಡಿ, ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು. ಏಕೆಂದರೆ ನೀನು ಈಗ ಯೆಹೋವ ದೇವರಿಂದ ಆಶೀರ್ವಾದ ಹೊಂದಿರುವೆ,” ಎಂದರು. \p \v 30 ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು. ಅವರೆಲ್ಲರೂ ತಿಂದು ಕುಡಿದರು. \v 31 ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡರು. ಅನಂತರ ಇಸಾಕನು ಅವರನ್ನು ಸಾಗಕಳುಹಿಸಿದನು. ಅವರು ಸಮಾಧಾನದಿಂದ ಹೊರಟು ಹೋದರು. \p \v 32 ಅದೇ ದಿನದಲ್ಲಿ ಇಸಾಕನ ಸೇವಕರು ಬಂದು ತಾವು ಅಗೆದ ಬಾವಿಯಲ್ಲಿ, “ನೀರು ಸಿಕ್ಕಿತ್ತು,” ಎಂದು ಅವನಿಗೆ ಹೇಳಿದರು. \v 33 ಅದಕ್ಕೆ ಅವನು, ಷಿಬಾ\f + \fr 26:33 \fr*\fq ಷಿಬಾ \fq*\ft ಅಂದರೆ \ft*\fqa ಪ್ರಮಾಣ\fqa*\f*, ಎಂದು ಹೆಸರಿಟ್ಟನು. ಆದ್ದರಿಂದ ಇಂದಿನವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು. \s1 ಯಾಕೋಬ ಏಸಾವನ ಆಶೀರ್ವಾದ ಕಸಿದುಕೊಂಡದ್ದು \p \v 34 ಏಸಾವನು ನಲವತ್ತು ವರ್ಷದವನಾಗಿದ್ದಾಗ, ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತಳನ್ನೂ, ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಮದುವೆಯಾದನು. \v 35 ಇವರ ದೆಸೆಯಿಂದ ಇಸಾಕನಿಗೂ, ರೆಬೆಕ್ಕಳಿಗೂ ಮನೋವ್ಯಥೆಯಾಯಿತು. \c 27 \p \v 1 ಇಸಾಕನು ಮುದುಕನಾಗಿ ನೋಡುವುದಕ್ಕಾಗದಷ್ಟು ಅವನ ಕಣ್ಣುಗಳು ಮಬ್ಬಾದಾಗ, ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು ಅವನಿಗೆ, “ನನ್ನ ಮಗನೇ,” ಎಂದನು. \p ಅವನು ಇಸಾಕನಿಗೆ, “ಇದ್ದೇನೆ,” ಎಂದನು. \p \v 2 ಆಗ ಇಸಾಕನು, “ಇಗೋ, ಈಗ ನಾನು ಮುದುಕನಾಗಿದ್ದೇನೆ. ನನ್ನ ಸಾವಿನ ದಿನವನ್ನು ಅರಿಯೆನು. \v 3 ಆದ್ದರಿಂದ ಈಗ ನೀನು ನಿನ್ನ ಆಯುಧಗಳನ್ನೂ, ಬಿಲ್ಲುಬತ್ತಳಿಕೆಯನ್ನೂ, ತೆಗೆದುಕೊಂಡು ಅಡವಿಗೆ ಹೋಗಿ ನನಗೋಸ್ಕರ ಬೇಟೆಯ ಮಾಂಸವನ್ನೂ, \v 4 ನಾನು ಇಷ್ಟಪಡುವ ರುಚಿಯಾದ ಊಟವನ್ನೂ ಸಿದ್ಧಮಾಡಿ ತೆಗೆದುಕೊಂಡು ಬಾ. ಆಗ ಸಾಯುವುದಕ್ಕಿಂತ ಮುಂಚೆ ನಾನು ನಿನ್ನನ್ನು ಆಶೀರ್ವದಿಸುವಂತೆ ಅದನ್ನು ಊಟಮಾಡುವೆನು,” ಎಂದನು. \p \v 5 ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ್ದನ್ನು ರೆಬೆಕ್ಕಳು ಕೇಳಿಸಿಕೊಂಡಳು. ಏಸಾವನು ಬೇಟೆಯಾಡಿ ಅದನ್ನು ತರುವುದಕ್ಕಾಗಿ ಅಡವಿಗೆ ಹೋದನು. \v 6 ಆಗ ರೆಬೆಕ್ಕಳು ತನ್ನ ಮಗ ಯಾಕೋಬನಿಗೆ, “ನಿನ್ನ ತಂದೆ ನಿನ್ನ ಸಹೋದರ ಏಸಾವನಿಗೆ, \v 7 ‘ನನಗೋಸ್ಕರ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಂದು, ನಾನು ಇಷ್ಟಪಡುವ ರುಚಿಯಾದ ಅಡಿಗೆಯನ್ನು ಮಾಡಿಕೊಂಡು ಬಾ, ಆಗ ನಾನು ಸಾಯುವುದಕ್ಕಿಂತ ಮುಂಚೆ ಊಟಮಾಡಿ, ಯೆಹೋವ ದೇವರ ಸನ್ನಿಧಿಯಲ್ಲಿ ನಿನ್ನನ್ನು ಆಶೀರ್ವದಿಸುವೆನು,’ ಎಂದು ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. \v 8 ಆದ್ದರಿಂದ ಈಗ ನನ್ನ ಮಗನೇ, ನಾನು ನಿನಗೆ ಆಜ್ಞಾಪಿಸುವ ನನ್ನ ಮಾತಿಗೆ ವಿಧೇಯನಾಗು. \v 9 ನೀನು ಮಂದೆಯ ಬಳಿಗೆ ಹೋಗಿ, ಅಲ್ಲಿಂದ ಎರಡು ಒಳ್ಳೆಯ ಮೇಕೆಯ ಮರಿಗಳನ್ನು ತೆಗೆದುಕೊಂಡು ಬಾ. ನಿನ್ನ ತಂದೆಗೋಸ್ಕರ ನಾನು ಅವುಗಳನ್ನೂ, ಅವನು ಇಷ್ಟಪಡುವ ರುಚಿಯಾದ ಅಡಿಗೆಯನ್ನೂ ಸಿದ್ಧಮಾಡುತ್ತೇನೆ. \v 10 ನೀನು ಅದನ್ನು ನಿನ್ನ ತಂದೆಯ ಬಳಿಗೆ ತೆಗೆದುಕೊಂಡು ಹೋಗಬೇಕು. ಅವನು ಸಾಯುವುದಕ್ಕಿಂತ ಮೊದಲು ನಿನ್ನನ್ನು ಆಶೀರ್ವದಿಸುವಂತೆ ಊಟಮಾಡಲಿ,” ಎಂದಳು. \p \v 11 ಅದಕ್ಕೆ ಯಾಕೋಬನು ತನ್ನ ತಾಯಿ ರೆಬೆಕ್ಕಳಿಗೆ, “ನನ್ನ ಸಹೋದರ ಏಸಾವನು ರೋಮವುಳ್ಳವನಾಗಿದ್ದಾನೆ, ನಾನು ನುಣುಪಾದ ಚರ್ಮವುಳ್ಳವನಾಗಿದ್ದೇನೆ. \v 12 ಒಂದು ವೇಳೆ ನನ್ನ ತಂದೆಯು ನನ್ನನ್ನು ಮುಟ್ಟಿದರೆ, ನನ್ನ ಗತಿಯೇನು? ನಾನು ಅವನಿಗೆ ಮೋಸಮಾಡುವವನಾಗಿ ಕಂಡು ಬಂದು, ಆಶೀರ್ವಾದಕ್ಕಿಂತ ಶಾಪವನ್ನೇ ಹೊಂದುವೆನು,” ಎಂದನು. \p \v 13 ಅವನ ತಾಯಿಯು ಅವನಿಗೆ, “ನನ್ನ ಮಗನೇ, ನಿನ್ನ ಶಾಪವು ನನ್ನ ಮೇಲೆ ಇರಲಿ, ನೀನು ಮಾತ್ರ ನನ್ನ ಮಾತಿಗೆ ವಿಧೇಯನಾಗಿ ಹೋಗಿ, ಅವುಗಳನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದಳು. \p \v 14 ಆಗ ಯಾಕೋಬನು ಹೋಗಿ ಅವುಗಳನ್ನು ಹಿಡಿದು ತೆಗೆದುಕೊಂಡು ತನ್ನ ತಾಯಿಗೆ ತಂದುಕೊಟ್ಟನು. ಅವನ ತಾಯಿಯು, ಅವನ ತಂದೆಯು ಇಷ್ಟಪಡುವ ರುಚಿಯಾದ ಅಡಿಗೆಯನ್ನು ಸಿದ್ಧಮಾಡಿದಳು. \v 15 ತರುವಾಯ ರೆಬೆಕ್ಕಳು ಮನೆಯಲ್ಲಿದ್ದ ತನ್ನ ಹಿರಿಯ ಮಗನಾದ ಏಸಾವನ ಒಳ್ಳೆಯ ವಸ್ತ್ರವನ್ನು ತೆಗೆದುಕೊಂಡು, ತನ್ನ ಕಿರಿಯ ಮಗ ಯಾಕೋಬನಿಗೆ ಉಡಿಸಿದಳು. \v 16 ಇದಲ್ಲದೆ ಮೇಕೆಯ ಮರಿಗಳ ಚರ್ಮಗಳನ್ನು ಅವನ ಕೈಗಳ ಮೇಲೆಯೂ, ನುಣುಪಾದ ಅವನ ಕೊರಳಿನ ಮೇಲೆಯೂ ಕಟ್ಟಿದಳು. \v 17 ತರುವಾಯ ತಾನು ಸಿದ್ಧಮಾಡಿದ ರುಚಿಯಾದ ಊಟವನ್ನೂ, ರೊಟ್ಟಿಯನ್ನೂ ತನ್ನ ಮಗ ಯಾಕೋಬನ ಕೈಯಲ್ಲಿ ಕೊಟ್ಟಳು. \p \v 18 ಆಗ ಅವನು ತನ್ನ ತಂದೆಯ ಬಳಿಗೆ ಹೋಗಿ, “ನನ್ನ ತಂದೆಯೇ,” ಎಂದನು. \p ಅದಕ್ಕೆ ಅವನು, “ನೀನು ಯಾರು?” ಎಂದನು. \p \v 19 ಯಾಕೋಬನು ತನ್ನ ತಂದೆಗೆ, “ನಾನು ನಿನ್ನ ಹಿರಿಯ ಮಗ ಏಸಾವನು. ನೀನು ನನಗೆ ಹೇಳಿದಂತೆ ಮಾಡಿದ್ದೇನೆ, ಎದ್ದು ಕುಳಿತುಕೋ. ನೀನು ನನ್ನನ್ನು ಆಶೀರ್ವದಿಸುವಂತೆ ನನ್ನ ಬೇಟೆಯ ಮಾಂಸವನ್ನು ಊಟಮಾಡು,” ಎಂದನು. \p \v 20 ಇಸಾಕನು ತನ್ನ ಮಗನಿಗೆ, “ನನ್ನ ಮಗನೇ, ಇಷ್ಟು ಬೇಗ ಅದು ನಿನಗೆ ಹೇಗೆ ಸಿಕ್ಕಿತು?” ಎಂದನು. \p ಅವನು, “ನಿನ್ನ ದೇವರಾದ ಯೆಹೋವ ದೇವರು ನನ್ನೆದುರಿಗೆ ಅದು ಬರುವಂತೆ ಮಾಡಿದರು,” ಎಂದನು. \p \v 21 ಆಗ ಇಸಾಕನು ಯಾಕೋಬನಿಗೆ, “ನನ್ನ ಮಗನೇ, ನೀನೇ ನನ್ನ ಮಗ ಏಸಾವನು ಹೌದೋ, ಅಲ್ಲವೋ ಎಂದು ನಾನು ನಿನ್ನನ್ನು ಮುಟ್ಟಿನೋಡುವಂತೆ ಹತ್ತಿರ ಬಾ,” ಎಂದನು. \p \v 22 ಆಗ ಯಾಕೋಬನು ತನ್ನ ತಂದೆ ಇಸಾಕನ ಹತ್ತಿರ ಬಂದನು. ಇಸಾಕನು ಅವನನ್ನು ಮುಟ್ಟಿ, “ಸ್ವರವು ಯಾಕೋಬನ ಸ್ವರವಾಗಿದೆ, ಆದರೆ ಕೈಗಳು ಏಸಾವನ ಕೈಗಳು,” ಎಂದು ಹೇಳಿದನು. \v 23 ಅವನ ಕೈಗಳು ಅವನ ಅಣ್ಣ ಏಸಾವನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ, ಅವನು ಯಾರೆಂದು ತಿಳಿಯದೆ, ಅವನನ್ನು ಆಶೀರ್ವದಿಸಿದನು. \v 24 ಮತ್ತೆ ಅವನು, “ನೀನು ನನ್ನ ಮಗ ಏಸಾವನೋ?” ಎಂದಾಗ. \p ಯಾಕೋಬನು, “ನಾನೇ,” ಎಂದನು. \p \v 25 ಆಗ ಇಸಾಕನು, “ನನ್ನ ಮಗನೇ, ನೀನು ತಂದದ್ದನ್ನು ಕೊಡು, ಊಟಮಾಡಿ, ನಿನ್ನನ್ನು ಆಶೀರ್ವದಿಸುವೆನು,” ಎಂದನು. \p ಆಗ ಯಾಕೋಬನು ಅದನ್ನು ಹತ್ತಿರ ತೆಗೆದುಕೊಂಡು ಬಂದಾಗ ಅವನು ಊಟಮಾಡಿದನು. ಅವನು ದ್ರಾಕ್ಷಾರಸವನ್ನು ತಂದಾಗ, ಅದನ್ನು ಕುಡಿದನು. \v 26 ಅವನ ತಂದೆ ಇಸಾಕನು ಅವನಿಗೆ, “ನನ್ನ ಮಗನೇ, ಹತ್ತಿರ ಬಂದು ನನಗೆ ಮುದ್ದಿಡು,” ಎಂದನು. \p \v 27 ಆಗ ಯಾಕೋಬನು ಹತ್ತಿರ ಬಂದು ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ, ಅವನನ್ನು ಹೀಗೆ ಆಶೀರ್ವದಿಸಿದನು, \q1 “ನನ್ನ ಮಗನ ವಾಸನೆಯು \q2 ಯೆಹೋವ ದೇವರು ಆಶೀರ್ವದಿಸಿದ \q2 ಹೊಲದ ವಾಸನೆಯಂತೆ ಇದೆ. \q1 \v 28 ದೇವರು ನಿನಗೆ ಆಕಾಶದ ಮಂಜನ್ನೂ \q2 ಸಾರವುಳ್ಳ ಭೂಮಿಯನ್ನೂ \q2 ಸಮೃದ್ಧಿಯಾದ ಧಾನ್ಯವನ್ನೂ ಹೊಸ ದ್ರಾಕ್ಷಾರಸವನ್ನೂ ಕೊಡಲಿ. \q1 \v 29 ಜನರು ನಿನಗೆ ಸೇವೆಮಾಡಲಿ, \q2 ಜನಾಂಗಗಳು ನಿನಗೆ ಅಡ್ಡಬೀಳಲಿ, \q1 ನಿನ್ನ ಸಹೋದರರಿಗೆ ನೀನು ದೊರೆಯಾಗಿರು. \q2 ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ. \q1 ನಿನ್ನನ್ನು ಶಪಿಸುವವರಿಗೆ ಶಾಪವೂ \q2 ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದವೂ ಆಗಲಿ.” \p \v 30 ಇಸಾಕನು ಯಾಕೋಬನನ್ನು ಆಶೀರ್ವದಿಸಿದ ತರುವಾಯ, ಯಾಕೋಬನು ತನ್ನ ತಂದೆ ಇಸಾಕನ ಸಮ್ಮುಖದಿಂದ ಹೊರಟುಹೋದನು. ಆಮೇಲೆ ಅವನ ಸಹೋದರ ಏಸಾವನು ಬೇಟೆಯಿಂದ ಬಂದನು. \v 31 ಅವನೂ ಸಹ ರುಚಿಯಾದ ಊಟವನ್ನು ಸಿದ್ಧಮಾಡಿ, ತನ್ನ ತಂದೆಯ ಬಳಿಗೆ ತಂದು, “ನನ್ನ ತಂದೆಯೇ, ಎದ್ದು ನನ್ನನ್ನು ಆಶೀರ್ವದಿಸುವಂತೆ ನಿನ್ನ ಮಗನ ಬೇಟೆಯ ಮಾಂಸವನ್ನು ಊಟಮಾಡು,” ಎಂದನು. \p \v 32 ಅವನ ತಂದೆ ಇಸಾಕನು ಅವನಿಗೆ, “ನೀನು ಯಾರು?” ಎಂದಾಗ. \p ಅವನು, “ನಾನು ನಿನ್ನ ಚೊಚ್ಚಲ ಮಗ ಏಸಾವನು,” ಎಂದನು. \p \v 33 ಆಗ ಇಸಾಕನು ಬಹಳವಾಗಿ ನಡುಗುತ್ತಾ, “ನೀನು ಬರುವುದಕ್ಕಿಂತ ಮೊದಲು ಬೇಟೆಯಾಡಿ ನನಗೆ ಊಟ ತಂದವನು ಯಾರು? ಅವನು ಎಲ್ಲಿದ್ದಾನೆ? ನೀನು ಬರುವುದರೊಳಗಾಗಿ ನಾನು ಎಲ್ಲವನ್ನೂ ಊಟಮಾಡಿ ಅವನನ್ನು ಆಶೀರ್ವದಿಸಿದೆನು. ಅವನು ಆಶೀರ್ವಾದ ಹೊಂದಿರುವನು,” ಎಂದನು. \p \v 34 ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿದಾಗ, ವ್ಯಥೆಪಟ್ಟು ಗಟ್ಟಿಯಾದ ಸ್ವರದಿಂದ ಅತ್ತನು. ತನ್ನ ತಂದೆಗೆ, “ತಂದೆಯೇ, ನನ್ನನ್ನು ಕೂಡಾ ಆಶೀರ್ವದಿಸು,” ಎಂದನು. \p \v 35 ಇಸಾಕನು, “ನಿನ್ನ ಸಹೋದರನು ಮೋಸದಿಂದ ಬಂದು ನಿನ್ನ ಆಶೀರ್ವಾದವನ್ನು ತೆಗೆದುಕೊಂಡಿದ್ದಾನೆ,” ಎಂದನು. \p \v 36 ಅದಕ್ಕೆ ಏಸಾವನು, “ಅವನಿಗೆ ಯಾಕೋಬನೆಂಬ ಹೆಸರು ಸರಿಯಲ್ಲವೋ? ಅವನು ನನ್ನನ್ನು ಎರಡು ಸಾರಿ ವಂಚಿಸಿದ್ದಾನೆ. ಅವನು ನನ್ನ ಚೊಚ್ಚಲತನವನ್ನು ತೆಗೆದುಕೊಂಡಿದ್ದಾನೆ. ಇಗೋ, ಈಗ ನನ್ನ ಆಶೀರ್ವಾದವನ್ನೂ ತೆಗೆದುಕೊಂಡಿದ್ದಾನೆ. ನೀನು ನನಗೋಸ್ಕರ ಒಂದಾದರೂ ಆಶೀರ್ವಾದವನ್ನು ಉಳಿಸಲಿಲ್ಲವೋ?” ಎಂದನು. \p \v 37 ಇಸಾಕನು ಉತ್ತರವಾಗಿ ಏಸಾವನಿಗೆ, “ಅವನನ್ನು ನಿನಗೆ ದೊರೆಯನನ್ನಾಗಿ ನೇಮಿಸಿದ್ದೇನೆ, ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕರನ್ನಾಗಿ ಕೊಟ್ಟು, ಧಾನ್ಯದಿಂದಲೂ ಹೊಸ ದ್ರಾಕ್ಷಾರಸದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ?” ಎಂದನು. \p \v 38 ಏಸಾವನು ತನ್ನ ತಂದೆಗೆ, “ನನ್ನ ತಂದೆಯೇ, ಆ ಒಂದೇ ಆಶೀರ್ವಾದವು ನಿನಗೆ ಇದೆಯೋ? ತಂದೆಯೇ, ನನ್ನನ್ನೂ ಆಶೀರ್ವದಿಸು,” ಎಂದು ಅವನು ಗಟ್ಟಿಯಾಗಿ ಕೂಗಿ ಅತ್ತನು. \p \v 39 ಆಗ ಅವನ ತಂದೆ ಇಸಾಕನು ಉತ್ತರವಾಗಿ ಅವನಿಗೆ ಹೀಗೆ ಹೇಳಿದನು, \q1 “ನಿನ್ನ ನಿವಾಸವು \q2 ಭೂಮಿಯ ಐಶ್ವರ್ಯದಿಂದಲೂ \q2 ಮೇಲಿನ ಆಕಾಶದಿಂದ ಬೀಳುವ ಮಂಜಿನಿಂದಲೂ ಇರುವುದು. \q1 \v 40 ನೀನು ಖಡ್ಗದಿಂದಲೇ ಬದುಕುವೆ, \q2 ನಿನ್ನ ಸಹೋದರರನ್ನು ನೀನು ಸೇವೆಮಾಡುವೆ, \q1 ಆದರೆ ನಿನ್ನ ತಾಳ್ಮೆ ತಪ್ಪಿದಾಗ, \q2 ಅವನ ನೊಗವನ್ನು \q2 ನಿನ್ನ ಕೊರಳಿನಿಂದ ಮುರಿದುಹಾಕುವೆ.” \p \v 41 ಏಸಾವನು ತನ್ನ ತಂದೆಯು ಅವನಿಗೆ ಕೊಟ್ಟ ಆಶೀರ್ವಾದಕ್ಕೋಸ್ಕರ ಯಾಕೋಬನನ್ನು ದ್ವೇಷಿಸಿದನು. ಏಸಾವನು, “ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸಮೀಪವಾಗಿವೆ. ತರುವಾಯ ನಾನು ನನ್ನ ಸಹೋದರ ಯಾಕೋಬನನ್ನು ಕೊಲ್ಲುವೆನು,” ಎಂದು ತನ್ನಲ್ಲಿಯೇ ಅಂದುಕೊಂಡನು. \p \v 42 ರೆಬೆಕ್ಕಳಿಗೆ ತನ್ನ ಹಿರಿಯ ಮಗ ಏಸಾವನ ಬಗ್ಗೆ ಗ್ರಹಿಸಿದಾಗ, ಆಕೆಯು ತನ್ನ ಕಿರಿಯ ಮಗ ಯಾಕೋಬನನ್ನು ಕರೆದು ಅವನಿಗೆ, “ನಿನ್ನ ಸಹೋದರ ಏಸಾವನು ನಿನ್ನನ್ನು ಕೊಂದು, ತನ್ನನ್ನು ಸಂತೈಸಿಕೊಳ್ಳುವುದಕ್ಕಿದ್ದಾನೆ. \v 43 ಆದ್ದರಿಂದ ಈಗ ನನ್ನ ಮಗನೇ, ನನ್ನ ಮಾತಿಗೆ ವಿಧೇಯನಾಗು. ಎದ್ದು ಹಾರಾನಿನಲ್ಲಿರುವ ನನ್ನ ಸಹೋದರ ಲಾಬಾನನ ಬಳಿಗೆ ಓಡಿಹೋಗು. \v 44 ನಿನ್ನ ಸಹೋದರನ ಕೋಪವು ತೀರುವವರೆಗೆ ಕೆಲವು ದಿವಸಗಳು ಅಲ್ಲೇ ಇರು. \v 45 ನಿನ್ನ ಕಡೆಗಿರುವ ನಿನ್ನ ಸಹೋದರನ ಕೋಪವು ತೀರಿಹೋಗಿ, ನೀನು ಅವನಿಗೆ ಮಾಡಿದ್ದನ್ನು ಅವನು ಮರೆಯುವವರೆಗೆ ನೀನು ಅಲ್ಲೇ ಇರು. ತರುವಾಯ ನಾನು ನಿನ್ನನ್ನು ಅಲ್ಲಿಂದ ಕರೆಸಿಕೊಳ್ಳುವೆನು. ಒಂದೇ ದಿನದಲ್ಲಿ ನಾನು ನಿಮ್ಮಿಬ್ಬರನ್ನೂ ಕಳೆದುಕೊಳ್ಳುವುದು ಏಕೆ?” ಎಂದಳು. \p \v 46 ರೆಬೆಕ್ಕಳು ಇಸಾಕನಿಗೆ, “ಹಿತ್ತಿಯ ಸ್ತ್ರೀಯರ ದೆಸೆಯಿಂದ ನನ್ನ ಜೀವ ನನಗೆ ಬೇಸರವಾಗಿದೆ. ಇಂಥ ಹಿತ್ತಿಯ ಸ್ತ್ರೀಯರಲ್ಲಿ ಒಬ್ಬಳನ್ನು ತನ್ನ ಹೆಂಡತಿಯಾಗಿ ಯಾಕೋಬನು ಮದುವೆ ಮಾಡಿಕೊಂಡರೆ, ನಾನು ಬದುಕಿರುವುದು ವ್ಯರ್ಥ,” ಎಂದಳು. \c 28 \p \v 1 ಇಸಾಕನು ಯಾಕೋಬನನ್ನು ಕರೆದು ಆಶೀರ್ವದಿಸಿ ಆಜ್ಞಾಪಿಸಿದ್ದೇನೆಂದರೆ, “ಕಾನಾನ್ಯರ ಸ್ತ್ರೀಯರನ್ನು ನೀನು ಮದುವೆಯಾಗಬಾರದು. \v 2 ಕೂಡಲೇ ನಿನ್ನ ತಾಯಿಯ ತಂದೆ ಬೆತೂಯೇಲನು ಇರುವ ಪದ್ದನ್ ಅರಾಮಿಗೆ ಹೋಗು. ನಿನ್ನ ತಾಯಿಯ ಸಹೋದರ ಲಾಬಾನನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಹೆಂಡತಿಯನ್ನಾಗಿ ಮಾಡಿಕೋ. \v 3 ಸರ್ವಶಕ್ತ ದೇವರು ನಿನ್ನನ್ನು ಆಶೀರ್ವದಿಸಿ, ನೀನು ದೊಡ್ಡ ಸಮುದಾಯವಾಗುವಂತೆ ನಿನ್ನನ್ನು ಅಭಿವೃದ್ಧಿ ಮಾಡಿ ಹೆಚ್ಚಿಸಲಿ. \v 4 ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ನೀನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ, ನಿನಗೂ, ನಿನ್ನ ಸಂತತಿಗೂ ಕೊಡಲಿ,” ಎಂದನು. \v 5 ಇಸಾಕನು ಯಾಕೋಬನನ್ನು ಕಳುಹಿಸಿದಾಗ, ಅವನು ಪದ್ದನ್ ಅರಾಮಿನಲ್ಲಿದ್ದ ಯಾಕೋಬನ ಮತ್ತು ಏಸಾವನ ತಾಯಿ ರೆಬೆಕ್ಕಳ ಸಹೋದರ ಅರಾಮಿನವನಾದ ಬೆತೂಯೇಲನ ಮಗನಾಗಿದ್ದ ಲಾಬಾನನ ಬಳಿಗೆ ಹೋದನು. \p \v 6 ಇಸಾಕನು ಯಾಕೋಬನನ್ನು ಆಶೀರ್ವದಿಸಿ, ಅವನಿಗೆ ಹೆಂಡತಿಯನ್ನು ತೆಗೆದುಕೊಳ್ಳುವುದಕ್ಕೆ ಪದ್ದನ್ ಅರಾಮಿಗೆ ಕಳುಹಿಸಿದ್ದನ್ನೂ, ಇಸಾಕನು ಅವನನ್ನು ಆಶೀರ್ವದಿಸುತ್ತಿದ್ದಾಗ, ಅವನಿಗೆ, “ಕಾನಾನ್ಯರ ಪುತ್ರಿಯರಲ್ಲಿ ಹೆಂಡತಿಯನ್ನು ತೆಗೆದುಕೊಳ್ಳಬಾರದು,” ಎಂದು ಆಜ್ಞಾಪಿಸಿದ್ದನ್ನೂ, ಏಸಾವನು ತಿಳಿದುಕೊಂಡನು. \v 7 ಯಾಕೋಬನು ತನ್ನ ತಂದೆತಾಯಿಗಳ ಮಾತಿಗೆ ವಿಧೇಯನಾಗಿ, ಪದ್ದನ್ ಅರಾಮಿಗೆ ಹೋದದ್ದನ್ನೂ \v 8 ಕಾನಾನ್ಯರ ಪುತ್ರಿಯರು ತನ್ನ ತಂದೆ ಇಸಾಕನಿಗೆ ಮೆಚ್ಚಿಗೆಯಾಗಲಿಲ್ಲವೆಂದು ಏಸಾವನು ತಿಳಿದು, \v 9 ಅವನು ಇಷ್ಮಾಯೇಲನ ಬಳಿಗೆ ಹೋಗಿ, ತನಗಿದ್ದ ಹೆಂಡತಿಯರಲ್ಲದೆ ಅಬ್ರಹಾಮನ ಮಗ ಇಷ್ಮಾಯೇಲನ ಮಗಳೂ, ನೆಬಾಯೋತನ ತಂಗಿಯೂ ಆಗಿರುವ ಮಹಲತ್ ಎಂಬವಳನ್ನೂ ಮದುವೆಮಾಡಿಕೊಂಡನು. \s1 ಯಾಕೋಬನ ಕನಸು \p \v 10 ಆಗ ಯಾಕೋಬನು ಬೇರ್ಷೆಬದಿಂದ ಹಾರಾನಿನ ಕಡೆಗೆ ಹೊರಟನು. \v 11 ಅವನು ಒಂದು ಸ್ಥಳಕ್ಕೆ ಸೇರಿದಾಗ, ಸೂರ್ಯಾಸ್ತಮವಾದದ್ದರಿಂದ ಅಲ್ಲಿ ಉಳಿದುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದು ತಲೆ ದಿಂಬನ್ನಾಗಿ ಇಟ್ಟುಕೊಂಡು, ಆ ಸ್ಥಳದಲ್ಲಿ ಮಲಗಿಕೊಂಡನು. \v 12 ಆಗ ಅವನು ಒಂದು ಕನಸುಕಂಡನು. ಏಣಿಯು ಭೂಮಿಯ ಮೇಲೆ ನಿಂತಿತ್ತು. ಅದರ ತುದಿಯು ಪರಲೋಕಕ್ಕೆ ಮುಟ್ಟಿತ್ತು. ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು. \v 13 ಇದಲ್ಲದೆ ಯೆಹೋವ ದೇವರು ಅದರ ಮೇಲೆ ನಿಂತುಕೊಂಡು, “ನಿನ್ನ ತಂದೆ ಅಬ್ರಹಾಮನ ದೇವರೂ, ಇಸಾಕನ ದೇವರೂ ಆದ ಯೆಹೋವ ದೇವರು ನಾನೇ. ನೀನು ಮಲಗಿರುವ ಭೂಮಿಯನ್ನು ನಿನಗೂ, ನಿನ್ನ ಸಂತತಿಗೂ ಕೊಡುವೆನು. \v 14 ನಿನ್ನ ಸಂತತಿಯು ಭೂಮಿಯ ಧೂಳಿನಂತೆ ಅಸಂಖ್ಯವಾಗುವುದು. ನೀನು ಪೂರ್ವ, ಪಶ್ಚಿಮ, ದಕ್ಷಿಣೋತ್ತರಗಳಿಗೆ ಹರಡಿಕೊಳ್ಳುವೆ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಜನರು ಆಶೀರ್ವಾದ ಹೊಂದುವರು. \v 15 ಇಗೋ, ನಾನು ನಿನ್ನ ಸಂಗಡ ಇದ್ದು, ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ, ಈ ದೇಶಕ್ಕೆ ನಿನ್ನನ್ನು ತಿರುಗಿ ಬರಮಾಡುವೆನು. ಏಕೆಂದರೆ ನಾನು ನಿನಗೆ ಹೇಳಿದ್ದನ್ನು ಮಾಡುವವರೆಗೆ ನಿನ್ನನ್ನು ಬಿಡುವುದಿಲ್ಲ,” ಎಂದರು. \p \v 16 ತರುವಾಯ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ನಿಶ್ಚಯವಾಗಿ ಈ ಸ್ಥಳದಲ್ಲಿ ಯೆಹೋವ ದೇವರು ಇದ್ದಾರೆ. ಇದನ್ನು ನಾನು ಅರಿಯಲಿಲ್ಲ,” ಎಂದನು. \v 17 ಅವನು ಭಯಪಟ್ಟು, “ಈ ಸ್ಥಳವು ಎಷ್ಟೋ ಗಂಭೀರವಾದದ್ದು, ಇದು ದೇವರ ಮನೆಯೇ ಹೊರತು ಬೇರೆಯಲ್ಲ. ಇದೇ ಪರಲೋಕದ ಬಾಗಿಲು,” ಎಂದನು. \p \v 18 ಯಾಕೋಬನು ಬೆಳಿಗ್ಗೆ ಎದ್ದು, ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು, ಅದನ್ನು ಸ್ತಂಭವಾಗಿ ನೆಟ್ಟು, ಅದರ ಮೇಲೆ ಎಣ್ಣೆಯನ್ನು ಹೊಯ್ದನು. \v 19 ಇದಲ್ಲದೆ ಅವನು ಆ ಸ್ಥಳಕ್ಕೆ, ಬೇತೇಲ್\f + \fr 28:19 \fr*\fq ಬೇತೇಲ್ \fq*\ft ಅಂದರೆ \ft*\fqa ದೇವರ ಮನೆ\fqa*\f*, ಎಂದು ಹೆಸರಿಟ್ಟನು. ಅದಕ್ಕಿಂತ ಮೊದಲು ಆ ಸ್ಥಳಕ್ಕೆ, ಲೂಜ್ ಎಂದು ಹೆಸರಿತ್ತು. \p \v 20 ಆಗ ಯಾಕೋಬನು ಪ್ರಮಾಣಮಾಡಿ, “ದೇವರು ನನ್ನ ಸಂಗಡ ಇದ್ದು, ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ, ಉಣ್ಣುವುದಕ್ಕೆ ಆಹಾರವನ್ನೂ, ಉಡುವುದಕ್ಕೆ ವಸ್ತ್ರವನ್ನೂ ನನಗೆ ಕೊಟ್ಟು, \v 21 ನನ್ನನ್ನು ಸಮಾಧಾನವಾಗಿ ನನ್ನ ತಂದೆಯ ಮನೆಗೆ ತಿರುಗಿ ಬರಮಾಡಿದರೆ, ಯೆಹೋವ ನನಗೆ ದೇವರಾಗಿರುವರು. \v 22 ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವುದು. ಆಗ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ದೇವರಿಗೆ ನಾನು ಖಂಡಿತವಾಗಿ ಕೊಡುವೆನು,” ಎಂದನು. \c 29 \s1 ಯಾಕೋಬನು ಪದ್ದನ್ ಅರಾಮ್ ತಲುಪಿದ್ದು \p \v 1 ಆಗ ಯಾಕೋಬನು ಪ್ರಯಾಣವನ್ನು ಮುಂದುವರಿಸುತ್ತಾ ಪೂರ್ವದಿಕ್ಕಿನ ಜನರ ದೇಶಕ್ಕೆ ಬಂದನು. \v 2 ಅವನು ಕಣ್ಣೆತ್ತಿ ನೋಡಲಾಗಿ, ಹೊಲದಲ್ಲಿ ಒಂದು ಬಾವಿ ಇತ್ತು. ಅದರ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿದ್ದವು. ಏಕೆಂದರೆ ಆ ಬಾವಿಯ ನೀರನ್ನು ಮಂದೆಗಳಿಗೆ ಕುಡಿಸುತ್ತಿದ್ದರು. ಆ ಬಾವಿಯ ಮೇಲೆ ಒಂದು ದೊಡ್ಡ ಕಲ್ಲು ಇತ್ತು. \v 3 ಅಲ್ಲಿ ಮಂದೆಗಳೆಲ್ಲಾ ಕೂಡಿದಾಗ, ಬಾವಿಯ ಮೇಲಿದ್ದ ಕಲ್ಲನ್ನು ಉರುಳಿಸಿ, ಕುರಿಗಳಿಗೆ ನೀರನ್ನು ಕುಡಿಸಿ, ಕಲ್ಲನ್ನು ಮತ್ತೆ ಅದರ ಸ್ಥಳದಲ್ಲಿ ಇಡುತ್ತಿದ್ದರು. \p \v 4 ಯಾಕೋಬನು ಅವರಿಗೆ, “ನನ್ನ ಸಹೋದರರೇ, ನೀವು ಎಲ್ಲಿಯವರು?” ಎಂದಾಗ. \p ಅವರು, “ನಾವು ಹಾರಾನಿನವರು,” ಎಂದರು. \p \v 5 ಅದಕ್ಕವನು ಅವರಿಗೆ, “ನಾಹೋರನ ಮೊಮ್ಮಗ ಲಾಬಾನನನ್ನು ನೀವು ಬಲ್ಲಿರೋ?” ಎಂದಾಗ. \p ಅವರು, “ನಾವು ಅವನನ್ನು ಬಲ್ಲೆವು,” ಎಂದರು. \p \v 6 ಯಾಕೋಬನು ಅವರಿಗೆ, “ಅವನು ಕ್ಷೇಮವಾಗಿದ್ದಾನೋ?” ಎಂದು ಕೇಳಿದಾಗ, \p ಆಗ ಅವರು, “ಕ್ಷೇಮವಾಗಿದ್ದಾನೆ, ಅಗೋ, ಅವನ ಮಗಳಾದ ರಾಹೇಲಳು ಕುರಿಗಳ ಸಂಗಡ ಬರುತ್ತಿದ್ದಾಳೆ,” ಎಂದರು. \p \v 7 ಯಾಕೋಬನು ಅವರಿಗೆ, “ಇನ್ನೂ ಬಹಳ ಹೊತ್ತು ಇದೆ. ಮಂದೆಗಳನ್ನು ಕೂಡಿಸುವ ಸಮಯವು ಇದಲ್ಲ. ಕುರಿಗಳಿಗೆ ನೀರು ಕುಡಿಸಿ ಹೋಗಿ ಮೇಯಿಸಿರಿ,” ಎಂದನು. \p \v 8 ಅದಕ್ಕೆ ಅವರು, “ಮಂದೆಗಳನ್ನೆಲ್ಲಾ ಒಟ್ಟುಗೂಡಿಸಿದ ಮೇಲೆ ಬಾವಿಯ ಮೇಲಿರುವ ಕಲ್ಲನ್ನು ಉರುಳಿಸುತ್ತಾರೆ. ಆಗ ನಾವು ಕುರಿಗಳಿಗೆ ನೀರನ್ನು ಕುಡಿಸುತ್ತೇವೆ,” ಎಂದರು. \p \v 9 ಯಾಕೋಬನು ಇನ್ನೂ ಅವರ ಸಂಗಡ ಮಾತನಾಡುತ್ತಿದ್ದಾಗ, ಕುರಿಗಳನ್ನು ಮೇಯಿಸುವ ರಾಹೇಲಳು ತನ್ನ ತಂದೆಯ ಕುರಿಗಳ ಸಂಗಡ ಬಂದಳು. \v 10 ಯಾಕೋಬನು ತನ್ನ ತಾಯಿಯ ಸಹೋದರ ಲಾಬಾನನ ಮಗಳಾದ ರಾಹೇಲಳನ್ನೂ, ಅವಳ ಕುರಿಗಳನ್ನೂ ನೋಡಿದಾಗ, ಯಾಕೋಬನು ಹತ್ತಿರ ಬಂದು, ಬಾವಿಯ ಮೇಲಿದ್ದ ಕಲ್ಲನ್ನು ಹೊರಳಿಸಿ, ತನ್ನ ತಾಯಿಯ ಸಹೋದರನಾದ ಲಾಬಾನನ ಕುರಿಗಳಿಗೆ ನೀರನ್ನು ಕುಡಿಸಿದನು. \v 11 ಆಗ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು, ತನ್ನ ಸ್ವರವನ್ನೆತ್ತಿ ಗಟ್ಟಿಯಾಗಿ ಅತ್ತನು. \v 12 ಯಾಕೋಬನು ರಾಹೇಲಳಿಗೆ, ತಾನು ಆಕೆಯ ತಂದೆಗೆ ಸೋದರಳಿಯನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ಆಕೆಯು ಓಡಿಹೋಗಿ ತನ್ನ ತಂದೆಗೆ ತಿಳಿಸಿದಳು. \p \v 13 ಲಾಬಾನನು ತನ್ನ ಸಹೋದರಿಯ ಮಗ ಯಾಕೋಬನ ಸುದ್ದಿಯನ್ನು ಕೇಳಿದಾಗ, ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವನನ್ನು ಮನೆಗೆ ಕರೆದುಕೊಂಡು ಬಂದನು. ಅವನು ಲಾಬಾನನಿಗೆ ಎಲ್ಲಾ ವಿಷಯಗಳನ್ನು ತಿಳಿಸಿದನು. \v 14 ಆಗ ಲಾಬಾನನು ಅವನಿಗೆ, “ನಿಶ್ಚಯವಾಗಿ ನೀನು ನನ್ನ ರಕ್ತಸಂಬಂಧಿಯಾಗಿದ್ದೀ,” ಎಂದನು. \s1 ಯಾಕೋಬನ ವಿವಾಹ \p ಯಾಕೋಬನು ಅವನ ಸಂಗಡ ಒಂದು ತಿಂಗಳು ವಾಸವಾಗಿದ್ದನು. \v 15 ಲಾಬಾನನು ಯಾಕೋಬನಿಗೆ, “ನೀನು ನನ್ನ ಸಂಬಂಧಿಕನಾಗಿರುವುದರಿಂದ ಸುಮ್ಮನೆ ನನಗೆ ಸೇವೆ ಮಾಡಬೇಕೆ? ನಿನ್ನ ಸಂಬಳ ಎಷ್ಟೆಂಬುದನ್ನು ನನಗೆ ಹೇಳು?” ಎಂದನು. \p \v 16 ಲಾಬಾನನಿಗೆ ಇಬ್ಬರು ಪುತ್ರಿಯರಿದ್ದರು. ದೊಡ್ಡವಳ ಹೆಸರು ಲೇಯಳು, ಚಿಕ್ಕವಳ ಹೆಸರು ರಾಹೇಲಳು. \v 17 ಲೇಯಳ ಕಣ್ಣುಗಳು ಕಾಂತಿಹೀನವಾಗಿದ್ದವು. ಆದರೆ ರಾಹೇಲಳು ಸುಂದರಿಯೂ ರೂಪವತಿಯೂ ಆಗಿದ್ದಳು. \v 18 ಹೀಗಿರುವುದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಸಿ, “ನಾನು ನಿನ್ನ ಕಿರಿ ಮಗಳಾಗಿರುವ ರಾಹೇಲಳಿಗೋಸ್ಕರ ನಿಮ್ಮಲ್ಲಿ ಏಳು ವರ್ಷ ಸೇವೆ ಮಾಡುತ್ತೇನೆ,” ಎಂದನು. \p \v 19 ಅದಕ್ಕೆ ಲಾಬಾನನು, “ಅವಳನ್ನು ಬೇರೊಬ್ಬನಿಗೆ ಕೊಡುವುದಕ್ಕಿಂತ, ನಿನಗೆ ಕೊಡುವುದು ಒಳ್ಳೆಯದು. ಆದ್ದರಿಂದ ನನ್ನ ಸಂಗಡವಿರು,” ಎಂದನು. \v 20 ಈ ಪ್ರಕಾರ ಯಾಕೋಬನು ರಾಹೇಲಳಿಗೋಸ್ಕರ ಏಳು ವರ್ಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರ್ಷಗಳು ಅವನಿಗೆ ಸ್ವಲ್ಪದಿನಗಳಾಗಿ ತೋರಿದವು. \p \v 21 ತರುವಾಯ ಯಾಕೋಬನು ಲಾಬಾನನಿಗೆ, “ನನ್ನ ಸೇವಾ ದಿನಗಳು ಪೂರ್ತಿಯಾದವು. ನಾನು ನನ್ನ ಹೆಂಡತಿಯೊಂದಿಗೆ ಬಾಳುವಂತೆ ಆಕೆಯನ್ನು ನನಗೆ ಕೊಡು,” ಎಂದನು. \p \v 22 ಆಗ ಲಾಬಾನನು ಆ ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣ ಮಾಡಿಸಿದನು. \v 23 ರಾತ್ರಿಯಾದಾಗ ಅವನು ತನ್ನ ಮಗಳಾದ ಲೇಯಳನ್ನು ಯಾಕೋಬನ ಬಳಿಗೆ ಕರೆತಂದನು. ಆಗ ಅವನು ಲೇಯಳ ಬಳಿಗೆ ಬಂದನು. \v 24 ಇದಲ್ಲದೆ ಲಾಬಾನನು ತನ್ನ ದಾಸಿಯಾದ ಜಿಲ್ಪಳನ್ನು, ತನ್ನ ಮಗಳಾದ ಲೇಯಳಿಗೆ ದಾಸಿಯಾಗಿ ಕೊಟ್ಟನು. \p \v 25 ಬೆಳಿಗ್ಗೆ ನೋಡಲಾಗಿ ಆಕೆಯು ಲೇಯಳಾಗಿದ್ದಳು. ಆಗ ಯಾಕೋಬನು ಲಾಬಾನನಿಗೆ, “ಇದೇನು ನೀನು ನನಗೆ ಮಾಡಿದೆ? ರಾಹೇಲಳಿಗೋಸ್ಕರ ನಾನು ನಿನಗೆ ಸೇವೆಮಾಡಿದೆನಲ್ಲಾ? ಏಕೆ ನನಗೆ ಮೋಸಮಾಡಿದೆ?” ಎಂದನು. \p \v 26 ಅದಕ್ಕೆ ಲಾಬಾನನು, “ಹಿರಿಯಳಿಗಿಂತ ಮೊದಲು ಕಿರಿಯಳನ್ನು ಮದುವೆ ಮಾಡಿಕೊಡುವುದು ನಮ್ಮ ಪದ್ಧತಿಯಲ್ಲ. \v 27 ಹಿರಿಯಳೊಡನೆ ಈ ವಾರವನ್ನು ಪೂರೈಸು. ತರುವಾಯ ನೀನು ಇನ್ನು ಬೇರೆ ಏಳು ವರ್ಷಗಳವರೆಗೆ ಸೇವೆ ಮಾಡಲು ಒಪ್ಪಿಕೊಂಡರೆ, ನಾನು ಕಿರಿಯ ಮಗಳನ್ನು ನಿನಗೆ ಕೊಡುತ್ತೇನೆ,” ಎಂದನು. \p \v 28 ಯಾಕೋಬನು ಅದರಂತೆ ಮಾಡಿ, ವಾರವನ್ನು ಪೂರೈಸಿದನು. ಆಗ ಲಾಬಾನನು ತನ್ನ ಮಗಳಾದ ರಾಹೇಲಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. \v 29 ಲಾಬಾನನು ತನ್ನ ಮಗಳಾದ ರಾಹೇಲಳಿಗೆ, ತನ್ನ ದಾಸಿಯಾದ ಬಿಲ್ಹಳನ್ನು ದಾಸಿಯಾಗಿ ಕೊಟ್ಟನು. \v 30 ಯಾಕೋಬನು ರಾಹೇಲಳೊಂದಿಗೆ ಕೂಡಿ, ಲೇಯಳಿಗಿಂತ ರಾಹೇಲಳನ್ನು ಹೆಚ್ಚು ಪ್ರೀತಿಸಿದನು. ಇನ್ನೂ ಏಳು ವರ್ಷ ಲಾಬಾನನ ಬಳಿಯಲ್ಲಿ ಸೇವೆ ಮಾಡಿದನು. \s1 ಯಾಕೋಬನ ಮಕ್ಕಳು \p \v 31 ಲೇಯಳು ತಾತ್ಸಾರಕ್ಕೆ ತುತ್ತಾಗುವಳೆಂದು ಯೆಹೋವ ದೇವರು ಕಂಡು, ಅವಳು ಗರ್ಭಿಣಿಯಾಗುವಂತೆ ಅನುಗ್ರಹಮಾಡಿದರು. ಆದರೆ ರಾಹೇಲಳು ಬಂಜೆಯಾಗಿದ್ದಳು. \v 32 ಲೇಯಳು ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಿಜವಾಗಿ ಯೆಹೋವ ದೇವರು ನನ್ನ ಬಾಧೆಯನ್ನು ನೋಡಿದ್ದಾರೆ. ಆದ್ದರಿಂದ ನನ್ನ ಗಂಡನು ನನ್ನನ್ನು ಪ್ರೀತಿ ಮಾಡುವನು,” ಎಂದು ಹೇಳಿ ಮಗುವಿಗೆ ರೂಬೇನ್\f + \fr 29:32 \fr*\fq ರೂಬೇನ್ \fq*\ft ಅಂದರೆ \ft*\fqa ಮಗನನ್ನು ನೋಡಿರಿ\fqa*\f* ಎಂದು ಹೆಸರಿಟ್ಟಳು. \p \v 33 ಲೇಯಳು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಾನು ತಾತ್ಸಾರವಾಗಿದ್ದೆ ಎಂದು ಯೆಹೋವ ದೇವರು ಕೇಳಿ, ಇವನನ್ನು ನನಗೆ ಕೊಟ್ಟಿದ್ದಾರೆ,” ಎಂದು ಹೇಳಿ ಅವನಿಗೆ ಸಿಮೆಯೋನ\f + \fr 29:33 \fr*\fq ಸಿಮೆಯೋನ \fq*\ft ಅಂದರೆ \ft*\fqa ಕೇಳುವವನು\fqa*\f* ಎಂದು ಹೆಸರಿಟ್ಟಳು. \p \v 34 ಮತ್ತೊಮ್ಮೆ ಲೇಯಳು ಮಗನನ್ನು ಹೆತ್ತು, “ಈಗಲಾದರೂ ನನ್ನ ಗಂಡನು ನನ್ನೊಂದಿಗೆ ಒಂದಾಗುವನು. ಏಕೆಂದರೆ ನಾನು ಅವನಿಗೆ ಮೂರು ಪುತ್ರರನ್ನು ಹೆತ್ತಿದ್ದೇನೆ,” ಎಂದು ಹೇಳಿ, ಆ ಮಗುವಿಗೆ ಲೇವಿ\f + \fr 29:34 \fr*\fq ಲೇವಿ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಜೋಡಿಯಾಗಿರುವನು\fqa*\f* ಎಂದು ಹೆಸರಿಟ್ಟಳು. \p \v 35 ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು, “ಈಗ ನಾನು ಯೆಹೋವ ದೇವರನ್ನು ಸ್ತುತಿಸುವೆನು,” ಎಂದು ಹೇಳಿ, ಅವನಿಗೆ ಯೆಹೂದ\f + \fr 29:35 \fr*\fq ಯೆಹೂದ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಸ್ತುತಿ\fqa*\f* ಎಂದು ಹೆಸರಿಟ್ಟಳು. ಆಮೇಲೆ ಆಕೆಗೆ ಮಕ್ಕಳಾಗಲಿಲ್ಲ. \c 30 \p \v 1 ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರಲಿಲ್ಲ ಎಂದು ತಿಳಿದಾಗ, ಆಕೆಯು ತನ್ನ ಸಹೋದರಿಯ ಮೇಲೆ ಹೊಟ್ಟೆಕಿಚ್ಚು ಪಟ್ಟು ಯಾಕೋಬನಿಗೆ, “ನನಗೆ ಮಕ್ಕಳನ್ನು ಕೊಡು, ಇಲ್ಲದಿದ್ದರೆ ನಾನು ಸಾಯುತ್ತೇನೆ,” ಎಂದಳು. \p \v 2 ಅದಕ್ಕೆ ಯಾಕೋಬನು ರಾಹೇಲಳ ಮೇಲೆ ಕೋಪಿಸಿಕೊಂಡು, “ನಿನಗೆ ಗರ್ಭ ಫಲವನ್ನು ಕೊಡುವ ದೇವರ ಸ್ಥಾನದಲ್ಲಿ ನಾನಿದ್ದೇನೋ?” ಎಂದನು. \p \v 3 ಅದಕ್ಕೆ ಆಕೆಯು, “ನನ್ನ ದಾಸಿ ಬಿಲ್ಹಳು ಇದ್ದಾಳೆ, ಅವಳ ಬಳಿಗೆ ಹೋಗು, ಅವಳು ಹೆತ್ತು ನನ್ನ ಮಡಿಲಲ್ಲಿ ಇಡಲಿ. ಅವಳಿಂದ ನನಗೆ ಮಕ್ಕಳಾಗುವರು,” ಎಂದಳು. \p \v 4 ಹೀಗೆ ಅವನಿಗೆ ತನ್ನ ದಾಸಿ ಬಿಲ್ಹಳನ್ನು ಕೊಟ್ಟಳು. ಯಾಕೋಬನು ಅವಳನ್ನು ಸ್ವೀಕರಿಸಿದನು. \v 5 ಬಿಲ್ಹಳು ಗರ್ಭಿಣಿಯಾಗಿ, ಯಾಕೋಬನಿಗೆ ಮಗನನ್ನು ಹೆತ್ತಳು. \v 6 ರಾಹೇಲಳು, “ದೇವರು ನನಗೆ ನ್ಯಾಯತೀರಿಸಿ, ನನ್ನ ಸ್ವರವನ್ನು ಕೇಳಿ, ನನಗೆ ಮಗನನ್ನು ಕೊಟ್ಟಿದ್ದಾರೆ,” ಎಂದು ಹೇಳಿದಳು. ಆದ್ದರಿಂದ ಆಕೆಯು ಅವನಿಗೆ ದಾನ್\f + \fr 30:6 \fr*\fq ದಾನ್ \fq*\ft ಅಂದರೆ \ft*\fqa ನ್ಯಾಯತೀರ್ಪು\fqa*\f* ಎಂದು ಹೆಸರಿಟ್ಟಳು. \p \v 7 ರಾಹೇಲಳ ದಾಸಿ ಬಿಲ್ಹಳು ಮತ್ತೆ ಗರ್ಭಿಣಿಯಾಗಿ, ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. \v 8 ಆಗ ರಾಹೇಲಳು, “ಅಧಿಕವಾದ ಹೋರಾಟಗಳಿಂದ ನನ್ನ ಸಹೋದರಿಯ ಸಂಗಡ ಹೋರಾಡಿ ಜಯಿಸಿದ್ದೇನೆ,” ಎಂದು ಹೇಳಿ ಅವನಿಗೆ ನಫ್ತಾಲಿ\f + \fr 30:8 \fr*\fq ನಫ್ತಾಲಿ \fq*\ft ಪದದ ಅರ್ಥ \ft*\fqa ಹೋರಾಟ\fqa*\f* ಎಂದು ಹೆಸರಿಟ್ಟಳು. \p \v 9 ಲೇಯಳು ತಾನು ಹೆರುವುದು ನಿಂತಿತೆಂದು ತಿಳಿದು, ತನ್ನ ದಾಸಿ ಜಿಲ್ಪಳನ್ನು ಯಾಕೋಬನಿಗೆ ಹೆಂಡತಿಯಾಗಿ ಕೊಟ್ಟಳು. \v 10 ಲೇಯಳ ದಾಸಿ ಜಿಲ್ಪಳು ಯಾಕೋಬನಿಗೆ ಮಗನನ್ನು ಹೆತ್ತಳು. \v 11 ಆಗ ಲೇಯಳು, “ಎಂಥಾ ಸೌಭಾಗ್ಯ,” ಎಂದು ಹೇಳಿ ಅವನಿಗೆ ಗಾದ್\f + \fr 30:11 \fr*\fq ಗಾದ್ \fq*\ft ಅಂದರೆ \ft*\fqa ಸೌಭಾಗ್ಯ\fqa*\f* ಎಂದು ಹೆಸರಿಟ್ಟಳು. \p \v 12 ಲೇಯಳ ದಾಸಿ ಜಿಲ್ಪಳು ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. \v 13 ಆಗ ಲೇಯಳು, “ನಾನು ಧನ್ಯಳಾದೆನು, ಏಕೆಂದರೆ ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯುವರು,” ಎಂದು ಹೇಳಿ ಅವನಿಗೆ ಆಶೇರ್\f + \fr 30:13 \fr*\fq ಆಶೇರ್ \fq*\ft ಅಂದರೆ \ft*\fqa ಧನ್ಯನು\fqa*\f* ಎಂದು ಹೆಸರಿಟ್ಟಳು. \p \v 14 ರೂಬೇನನು ಗೋಧಿ ಕೊಯ್ಯುವ ಕಾಲದಲ್ಲಿ ಹೋಗಿ, ಹೊಲದಲ್ಲಿ ದುದಾಯಿ\f + \fr 30:14 \fr*\fq ದುದಾಯಿ \fq*\ft ಒಂದು ರೀತಿಯ \ft*\fqa ಕಾಮಜನಕ\fqa*\f* ಫಲಗಳನ್ನು ಕಂಡು, ತಾಯಿ ಲೇಯಳ ಬಳಿಗೆ ಕೆಲವು ಫಲಗಳನ್ನು ತಂದಾಗ, ರಾಹೇಲಳು ಲೇಯಳಿಗೆ, “ನಿನ್ನ ಮಗನು ತಂದ ಫಲಗಳಲ್ಲಿ ಕೆಲವನ್ನು ನನಗೆ ಕೊಡು,” ಎಂದಳು. \p \v 15 ಅದಕ್ಕೆ ಆಕೆಯು, “ನೀನು ನನ್ನ ಗಂಡನನ್ನು ತೆಗೆದುಕೊಂಡದ್ದು ಅಲ್ಪಕಾರ್ಯವೋ? ನೀನು ಈಗ ನನ್ನ ಮಗನು ತಂದ ದುದಾಯ ಫಲಗಳನ್ನು ಸಹ ತೆಗೆದುಕೊಳ್ಳುವಿಯೋ?” ಎಂದಳು. \p ಅದಕ್ಕೆ ರಾಹೇಲಳು, “ನಿನ್ನ ಮಗನು ತಂದ ದುದಾಯ ಫಲಗಳಿಗೋಸ್ಕರ ಯಾಕೋಬನು ಈ ರಾತ್ರಿ ನಿನ್ನ ಸಂಗಡ ಮಲಗಲಿ,” ಎಂದಳು. \p \v 16 ಯಾಕೋಬನು ಸಾಯಂಕಾಲದಲ್ಲಿ ಹೊಲದಿಂದ ಬಂದಾಗ, ಲೇಯಳು ಅವನೆದುರಿಗೆ ಹೋಗಿ, “ನೀನು ನನ್ನ ಬಳಿಗೆ ಬರಬೇಕು. ನನ್ನ ಮಗನು ತಂದ ದುದಾಯಿ ಫಲಗಳನ್ನು ಕೊಟ್ಟು ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ,” ಎಂದಳು. ಆದ್ದರಿಂದ ಅವನು ಆ ರಾತ್ರಿಯಲ್ಲಿ ಆಕೆಯ ಸಂಗಡ ಮಲಗಿದನು. \p \v 17 ಆಗ ದೇವರು ಲೇಯಳ ಪ್ರಾರ್ಥನೆಯನ್ನು ಕೇಳಿದ್ದರಿಂದ, ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಮಗನನ್ನು ಹೆತ್ತಳು. \v 18 ಲೇಯಳು, “ನಾನು ನನ್ನ ಗಂಡನಿಗೆ ನನ್ನ ದಾಸಿಯನ್ನು ಕೊಟ್ಟಿದ್ದರಿಂದ ದೇವರು ನನಗೆ ಪ್ರತಿಫಲವನ್ನು ಕೊಟ್ಟಿದ್ದಾರೆ,” ಎಂದು ಹೇಳಿ, ಅವನಿಗೆ ಇಸ್ಸಾಕಾರ್\f + \fr 30:18 \fr*\fq ಇಸ್ಸಾಕಾರ್ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಪ್ರತಿಫಲ\fqa*\f* ಎಂದು ಹೆಸರಿಟ್ಟಳು. \p \v 19 ಮತ್ತೊಂದು ಸಾರಿ ಲೇಯಳು ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಮಗನನ್ನು ಹೆತ್ತಳು, \v 20 ಲೇಯಳು, “ದೇವರು ನನಗೆ ಒಳ್ಳೆಯ ವರದಾನವನ್ನು ಕೊಟ್ಟಿದ್ದಾರೆ. ಈಗ ನಾನು ಅವನಿಗೆ ಆರು ಮಕ್ಕಳನ್ನು ಹೆತ್ತದ್ದರಿಂದ, ನನ್ನ ಗಂಡನು ಈಗಲಾದರೂ ನನ್ನನ್ನು ಗೌರವಿಸುವನು,” ಎಂದು ಹೇಳಿ, ಅವನಿಗೆ ಜೆಬುಲೂನ್\f + \fr 30:20 \fr*\fq ಜೆಬುಲೂನ್ \fq*\ft ಪದದ ಅರ್ಥ \ft*\fqa ಗೌರವ\fqa*\f* ಎಂದು ಹೆಸರಿಟ್ಟಳು. \p \v 21 ತರುವಾಯ ಆಕೆಯು ಒಬ್ಬ ಮಗಳನ್ನು ಹೆತ್ತು, ಆಕೆಗೆ ದೀನಾ ಎಂದು ಹೆಸರಿಟ್ಟಳು. \p \v 22 ಆಗ ದೇವರು ರಾಹೇಲಳನ್ನು ಜ್ಞಾಪಕಮಾಡಿಕೊಂಡರು. ದೇವರು ಆಕೆಯ ಮೊರೆಯನ್ನು ಕೇಳಿ, ಆಕೆಗೆ ಮಕ್ಕಳಾಗುವಂತೆ ಅನುಗ್ರಹಮಾಡಿದರು. \v 23 ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು, “ದೇವರು ನನ್ನ ನಿಂದೆಯನ್ನು ತೆಗೆದುಬಿಟ್ಟಿದ್ದಾರೆ,” ಎಂದಳು. \v 24 ಆಕೆಯು, “ಯೆಹೋವ ದೇವರು ನನಗೆ ಮತ್ತೊಬ್ಬ ಮಗನನ್ನು ದಯಪಾಲಿಸುವರು,” ಎಂದು ಹೇಳಿ ಅವನಿಗೆ ಯೋಸೇಫ ಎಂದು ಹೆಸರಿಟ್ಟಳು. \s1 ಯಾಕೋಬನ ಕುರಿಮಂದೆಯ ಅಭಿವೃದ್ಧಿ \p \v 25 ರಾಹೇಲಳು ಯೋಸೇಫನನ್ನು ಹೆತ್ತಾಗ ಯಾಕೋಬನು ಲಾಬಾನನಿಗೆ, “ನಾನು ನನ್ನ ಸ್ಥಳಕ್ಕೂ ಸ್ವದೇಶಕ್ಕೂ ಹೋಗುವಂತೆ ನನ್ನನ್ನು ಕಳುಹಿಸಿಕೊಡು. \v 26 ನಾನು ಯಾರಿಗೋಸ್ಕರ ನಿನಗೆ ಸೇವೆ ಮಾಡಿದೆನೋ, ಆ ನನ್ನ ಹೆಂಡತಿಯರನ್ನೂ, ನನ್ನ ಮಕ್ಕಳನ್ನೂ ನನ್ನೊಂದಿಗೆ ಕಳುಹಿಸಿಕೊಡು. ನಾನು ನಿನಗೆ ಮಾಡಿದ ಸೇವೆಯನ್ನು ನೀನು ಬಲ್ಲವನಾಗಿದ್ದೀಯೆ,” ಎಂದನು. \p \v 27 ಲಾಬಾನನು ಅವನಿಗೆ, “ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದಿದವನಾಗಿದ್ದರೆ, ನನ್ನ ಬಳಿಯಲ್ಲಿಯೇ ಇರು. ಏಕೆಂದರೆ ಯೆಹೋವ ದೇವರು ನಿನಗೋಸ್ಕರ ನನ್ನನ್ನು ಆಶೀರ್ವದಿಸಿದ್ದಾರೆಂದು ನಾನು ಭವಿಷ್ಯಜ್ಞಾನ ಅನುಭವದಿಂದ ಕಲಿತುಕೊಂಡಿದ್ದೇನೆ. \v 28 ನೀನು ನಿನ್ನ ಸಂಬಳವನ್ನು ನಿರ್ಣಯಿಸು. ಅದನ್ನು ನಾನು ನಿನಗೆ ಕೊಡುವೆನು,” ಎಂದನು. \p \v 29 ಅದಕ್ಕೆ ಯಾಕೋಬನು ಅವನಿಗೆ, “ನಾನು ನಿನಗೆ ಮಾಡಿದ ಸೇವೆಯನ್ನೂ, ನಿನ್ನ ಪಶುಗಳು ನನ್ನ ಬಳಿಯಲ್ಲಿ ಹೇಗೆ ಅಭಿವೃದ್ಧಿ ಆಗಿವೆ ಎಂಬುದನ್ನೂ ನೀನು ಬಲ್ಲೆ. \v 30 ನಾನು ಬರುವುದಕ್ಕಿಂತ ಮುಂಚೆ ನಿನಗಿದ್ದದ್ದು ಸ್ವಲ್ಪವೇ. ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಬಂದಂದಿನಿಂದ ಯೆಹೋವ ದೇವರು ನಿನ್ನನ್ನು ಆಶೀರ್ವದಿಸಿದ್ದಾರೆ. ಈಗ ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದಿಸಲಿ?” ಎಂದನು. \p \v 31 ಅದಕ್ಕೆ ಲಾಬಾನನು, “ನಿನಗೆ ನಾನು ಏನು ಕೊಡಲಿ?” ಎಂದನು. \p ಯಾಕೋಬನು, “ಏನೂ ಕೊಡಬೇಡ, ಒಂದು ವಿಷಯದಲ್ಲಿ ಒಪ್ಪಿಕೊಂಡರೆ, ನಾನು ಮತ್ತೆ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು. \v 32 ಈ ಹೊತ್ತು ನಾನು ನಿನ್ನ ಎಲ್ಲಾ ಮಂದೆಯ ಮಧ್ಯದಲ್ಲಿ ಹಾದು ಹೋಗುವೆನು. ಕುರಿಗಳಲ್ಲಿ ಕಂದುಬಣ್ಣದವುಗಳನ್ನೆಲ್ಲಾ, ಮೇಕೆಗಳಲ್ಲಿ ಚುಕ್ಕೆ ಮತ್ತು ಮಚ್ಚೆ ಉಳ್ಳವುಗಳನ್ನೆಲ್ಲಾ ಬೇರೆ ಮಾಡುವೆನು. ಅವೇ ನನ್ನ ಕೂಲಿಯಾಗಿರಲಿ. \v 33 ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ, ನನ್ನ ಪ್ರಾಮಾಣಿಕತೆಯೇ ನನಗೆ ಸಾಕ್ಷಿಕೊಡುವುದು. ಮೇಕೆಗಳಲ್ಲಿ ಚುಕ್ಕೆ ಮತ್ತು ಮಚ್ಚೆ ಕುರಿಗಳಲ್ಲಿ ಕಂದು ಬಣ್ಣವಿಲ್ಲದವುಗಳು ನನ್ನ ಬಳಿಯಲ್ಲಿದ್ದರೆ, ಅವು ಕದ್ದವುಗಳು ಎಂದು ಎಣಿಕೆಯಾಗಿರಲಿ,” ಎಂದನು. \p \v 34 ಲಾಬಾನನು, “ನೀನು ಹೇಳಿದಂತೆಯೇ ಆಗಲಿ,” ಎಂದನು. \v 35 ಅದೇ ದಿನದಲ್ಲಿ ಲಾಬಾನನು ಹೋತಗಳಲ್ಲಿ ರೇಖೆ, ಮಚ್ಚೆ ಇದ್ದವುಗಳನ್ನೂ ಮತ್ತು ಸ್ವಲ್ಪ ಬಿಳುಪಾದ ಬಣ್ಣವಿದ್ದ ಎಲ್ಲವುಗಳನ್ನೂ, ಕುರಿಗಳಲ್ಲಿ ಕಂದು ಬಣ್ಣವಿದ್ದವುಗಳನ್ನೂ ವಿಂಗಡಿಸಿ, ತನ್ನ ಪುತ್ರರ ಕೈಗೆ ಕೊಟ್ಟನು. \v 36 ತನಗೂ, ಯಾಕೋಬನಿಗೂ ಮಧ್ಯದಲ್ಲಿ ಮೂರು ದಿನಗಳ ಪ್ರಯಾಣದಷ್ಟು ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಮಿಕ್ಕ ಮಂದೆಯನ್ನು ಮೇಯಿಸಿದನು. \p \v 37 ಹೀಗಿರುವಲ್ಲಿ ಯಾಕೋಬನು ಲಿಬ್ನೆ, ಲೂಜು, ಅರ್ಮೋನ್ ಎಂಬ ಮರಗಳ ಹಸಿ ಕೋಲುಗಳನ್ನು ತೆಗೆದುಕೊಂಡು, ಪಟ್ಟೆಪಟ್ಟೆಯಾಗಿ ತೊಗಟೆಯನ್ನು ಸುಲಿದು, ಅವುಗಳಲ್ಲಿರುವ ಬಿಳಿಯ ಬಣ್ಣವು ಕಾಣಿಸುವಂತೆ ಮಾಡಿದನು. \v 38 ಮಂದೆಗಳು ನೀರು ಕುಡಿಯುವುದಕ್ಕೆ ಬಂದಾಗ, ಅವು ಗರ್ಭಧರಿಸಬೇಕೆಂದು ನೀರು ಕುಡಿಯುವ ದೋಣಿಗಳಲ್ಲಿ ತಾನು ತೊಗಟೆ ಸುಲಿದ ಕೋಲುಗಳನ್ನು ಅವುಗಳ ಮುಂದೆ ಇಟ್ಟನು. \v 39 ಮಂದೆಗಳು ಆ ಕೋಲುಗಳನ್ನು ನೋಡಿ, ಸಂಗಮ ಮಾಡಿದ್ದರಿಂದ, ಚುಕ್ಕೆ ಮಚ್ಚೆ ರೇಖೆಗಳುಳ್ಳ ಮರಿಗಳನ್ನು ಈಯುತ್ತಿದ್ದವು. \v 40 ಯಾಕೋಬನು ಕುರಿಗಳನ್ನು ಬೇರೆ ಮಾಡಿ, ಲಾಬಾನನ ಮಂದೆಯಲ್ಲಿರುವ ರೇಖೆಗಳುಳ್ಳ ಆಡುಕುರಿಗಳೆದುರಾಗಿಯೂ ಕಂದು ಬಣ್ಣ ಉಳ್ಳವುಗಳೆದುರಾಗಿಯೂ ಕುರಿಗಳನ್ನು ಇರಿಸಿದನು. ಅವನು ತನ್ನ ಮಂದೆಯನ್ನು ಲಾಬಾನನ ಮಂದೆಗಳೊಂದಿಗೆ ಸೇರಿಸದೆ, ಅವುಗಳನ್ನು ಬೇರೆ ಇಟ್ಟುಕೊಂಡನು. \v 41 ಬಲವಾದ ಕುರಿಗಳು ಸಂಗಮ ಮಾಡುವಾಗ ಯಾಕೋಬನು ಆ ಕುರಿಗಳು ಕೋಲುಗಳನ್ನು ನೋಡುತ್ತಾ ಗರ್ಭಧರಿಸುವ ಹಾಗೆ ಕೋಲುಗಳನ್ನು ಕುರಿಗಳ ಕಣ್ಣೆದುರಾಗಿ ದೋಣಿಗಳಲ್ಲಿ ಇಡುತ್ತಿದ್ದನು. \v 42 ಆದರೆ ಕುರಿಗಳು ಬಲಹೀನವಾಗಿದ್ದಾಗ, ಅವನು ಕೋಲುಗಳನ್ನು ದೋಣಿಗಳಲ್ಲಿ ಇಡಲಿಲ್ಲ. ಹೀಗಾಗಿ ಬಲಹೀನವಾದವುಗಳು ಲಾಬಾನನಿಗೂ, ಬಲವಾದವುಗಳು ಯಾಕೋಬನಿಗೂ ಆದವು. \v 43 ಈ ಪ್ರಕಾರ ಯಾಕೋಬನು ಅತ್ಯಧಿಕವಾಗಿ ಅಭಿವೃದ್ಧಿಯಾದ್ದರಿಂದ, ಬಹು ಕುರಿಗಳೂ ದಾಸದಾಸಿಯರೂ ಒಂಟೆಗಳೂ ಕತ್ತೆಗಳೂ ಅವನಿಗೆ ದೊರೆತವು. \c 31 \s1 ಲಾಬಾನನಿಂದ ಯಾಕೋಬನ ಪಲಾಯನ \p \v 1 ಲಾಬಾನನ ಮಕ್ಕಳು, “ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತೆಗೆದುಕೊಂಡು, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ,” ಎಂದು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು. \v 2 ಇದಲ್ಲದೆ ಯಾಕೋಬನು ಲಾಬಾನನ ಮುಖವನ್ನು ನೋಡಿದಾಗ, ಅದು ತನ್ನ ಕಡೆಗೆ ಮೊದಲು ಇದ್ದ ಹಾಗೆ ಇರಲಿಲ್ಲ. \p \v 3 ಆಗ ಯೆಹೋವ ದೇವರು ಯಾಕೋಬನಿಗೆ, “ನಿನ್ನ ತಂದೆಗಳ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ನಾನು ನಿನ್ನ ಸಂಗಡ ಇರುವೆನು,” ಎಂದರು. \p \v 4 ಯಾಕೋಬನು ರಾಹೇಲಳನ್ನೂ, ಲೇಯಳನ್ನೂ ಹೊಲದಲ್ಲಿದ್ದ ತನ್ನ ಮಂದೆಯ ಬಳಿಗೆ ಕರೆಸಿದನು. \v 5 ಅವರಿಗೆ, “ನಿಮ್ಮ ತಂದೆಯ ಮುಖವು ಮೊದಲು ನನ್ನ ಕಡೆಗೆ ಇದ್ದ ಹಾಗೆ ಈಗ ಇಲ್ಲದಿರುವುದನ್ನು ನಾನು ನೋಡಿದ್ದೇನೆ. ಆದರೆ ನನ್ನ ತಂದೆಯ ದೇವರು ನನ್ನ ಕಡೆಗೆ ಇದ್ದಾರೆ. \v 6 ನಾನು ಪೂರ್ಣಬಲದಿಂದ ನಿಮ್ಮ ತಂದೆಯ ಸೇವೆ ಮಾಡಿದ್ದು ನಿಮಗೆ ತಿಳಿದಿದೆ. \v 7 ಆದರೆ ನಿಮ್ಮ ತಂದೆಯು ನನಗೆ ವಂಚನೆಮಾಡಿ, ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದನು. ಆದಾಗ್ಯೂ ದೇವರು ಅವನಿಂದ ನನಗೆ ಕೇಡು ಮಾಡಗೊಡಿಸಲಿಲ್ಲ. \v 8 ನಿಮ್ಮ ತಂದೆ ನನಗೆ, ‘ಚುಕ್ಕೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಅಂದಾಗ, ಮಂದೆಯೆಲ್ಲಾ ಚುಕ್ಕೆಯುಳ್ಳದ್ದನ್ನೇ ಈಯಿತು. ಅವನು, ‘ರೇಖೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಎಂದಾಗ, ಮಂದೆಯೆಲ್ಲಾ ರೇಖೆಯುಳ್ಳದ್ದನ್ನೇ ಈಯಿತು. \v 9 ಹೀಗೆ ದೇವರು ನಿಮ್ಮ ತಂದೆಯ ಪಶುಗಳನ್ನು ತೆಗೆದು, ನನಗೆ ಕೊಟ್ಟಿದ್ದಾರೆ. \p \v 10 “ಇದಲ್ಲದೆ ಕುರಿಗಳು ಸಂಗಮ ಮಾಡುವಾಗ, ಸ್ವಪ್ನದಲ್ಲಿ ನಾನು ನನ್ನ ಕಣ್ಣುಗಳನ್ನೆತ್ತಿ ನೋಡಲಾಗಿ, ಕುರಿಗಳ ಮೇಲೆ ಏರುವ ಟಗರುಗಳು ಚುಕ್ಕೆ, ಮಚ್ಚೆ, ರೇಖೆಗಳುಳ್ಳವುಗಳಾಗಿದ್ದವು. \v 11 ದೇವದೂತನು ಸ್ವಪ್ನದಲ್ಲಿ ನನಗೆ, ‘ಯಾಕೋಬನೇ’ ಎಂದನು. ಅದಕ್ಕೆ ನಾನು, ‘ಇಲ್ಲಿ ಇದ್ದೇನೆ,’ ಎಂದೆನು. \v 12 ಅವನು ನನಗೆ, ‘ನಿನ್ನ ಕಣ್ಣುಗಳನ್ನೆತ್ತಿ ಕುರಿಗಳನ್ನೇರುವ ಎಲ್ಲಾ ಟಗರುಗಳನ್ನು ನೋಡು. ಅವು ಚುಕ್ಕೆ, ಮಚ್ಚೆ, ರೇಖೆಯೂ ಉಳ್ಳವುಗಳಾಗಿವೆ. ಏಕೆಂದರೆ ಲಾಬಾನನು ನಿನಗೆ ಮಾಡಿದ್ದನ್ನೆಲ್ಲಾ ಕಂಡಿದ್ದೇನೆ. \v 13 ನೀನು ಸ್ತಂಭವನ್ನು ಅಭಿಷೇಕಿಸಿ, ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ಎದ್ದು ಈ ದೇಶದಿಂದ ಹೊರಟು, ನಿನ್ನ ಬಂಧುಗಳ ದೇಶಕ್ಕೆ ಹಿಂದಿರುಗಿ ಹೋಗು,’ ಎಂದು ಹೇಳಿದ್ದಾರೆ,” ಎಂದನು. \p \v 14 ಆಗ ರಾಹೇಲಳು, ಲೇಯಳು ಅವನಿಗೆ, “ನಮ್ಮ ತಂದೆಯ ಮನೆಯಲ್ಲಿ ಇನ್ನೇನಾದರೂ ಭಾಗವೂ, ಬಾಧ್ಯತೆಯೂ ಇದೆಯೋ? \v 15 ಅವನು ನಮ್ಮನ್ನು ಹೊರಗಿನವರಂತೆ ಎಣಿಸಿದ್ದಾನಲ್ಲಾ. ಅವನು ನಮ್ಮನ್ನು ಮಾರಿ, ನಮ್ಮ ಹಣವನ್ನೂ ನುಂಗೇ ಬಿಟ್ಟನಲ್ಲಾ. \v 16 ಆದ್ದರಿಂದ ದೇವರು ನಮ್ಮ ತಂದೆಯಿಂದ ತೆಗೆದುಕೊಂಡ ಐಶ್ವರ್ಯವೆಲ್ಲಾ ನಮ್ಮದು, ನಮ್ಮ ಮಕ್ಕಳದು. ಹಾಗಾದರೆ ಈಗ ದೇವರು ನಿನಗೆ ಹೇಳಿದ್ದನ್ನೆಲ್ಲಾ ಮಾಡು,” ಎಂದರು. \p \v 17 ಆಗ ಯಾಕೋಬನು ಎದ್ದು ತನ್ನ ಮಕ್ಕಳನ್ನೂ, ತನ್ನ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ, \v 18 ತನ್ನ ಎಲ್ಲಾ ಪಶುಗಳನ್ನೂ, ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ, ಪದ್ದನ್ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್ ದೇಶದಲ್ಲಿದ್ದ ತನ್ನ ತಂದೆ ಇಸಾಕನ ಬಳಿಗೆ ತೆಗೆದುಕೊಂಡು ಹೊರಟನು. \p \v 19 ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕೆ ಹೋಗಿದ್ದನು. ಆಗ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು. \v 20 ಆದರೆ ಯಾಕೋಬನು ತಾನು ಹೋಗುವುದನ್ನು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ವಂಚಿಸಿ ಓಡಿಹೋದನು. \v 21 ಅವನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖವಾಗಿ ಯೂಫ್ರೇಟೀಸ್ ನದಿಯನ್ನು ದಾಟಿದನು. \s1 ಲಾಬಾನನು ಯಾಕೋಬನ ಬೆನ್ನಟ್ಟಿ ಬಂದದ್ದು \p \v 22 ಯಾಕೋಬನು ಓಡಿಹೋದನೆಂದು ಮೂರನೆಯ ದಿವಸದಲ್ಲಿ ಲಾಬಾನನಿಗೆ ತಿಳಿಯಿತು. \v 23 ಆಗ ಅವನು ತನ್ನ ಬಂಧುಗಳನ್ನು ಕರೆದುಕೊಂಡು, ಅವನನ್ನು ಬೆನ್ನಟ್ಟಿ, ಏಳು ದಿನ ಪ್ರಯಾಣಮಾಡಿ, ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು. \v 24 ಆ ರಾತ್ರಿ ದೇವರು ಸ್ವಪ್ನದಲ್ಲಿ ಅರಾಮಿನವನಾದ ಲಾಬಾನನ ಬಳಿಗೆ ಬಂದು ಅವನಿಗೆ, “ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು,” ಎಂದರು. \p \v 25 ತರುವಾಯ ಲಾಬಾನನು ಯಾಕೋಬನನ್ನು ಸಂಧಿಸಿದಾಗ, ಯಾಕೋಬನು ಗಿಲ್ಯಾದ್ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹ ಅಲ್ಲಿಯೇ ಗುಡಾರವನ್ನು ಹಾಕಿಸಿದ್ದನು. \v 26 ಲಾಬಾನನು ಯಾಕೋಬನಿಗೆ, “ನೀನು ಏನು ಮಾಡಿದೆ? ನನಗೆ ತಿಳಿಸದೆ ಮೋಸಮಾಡಿದ್ದೀಯೆ ಮತ್ತು ನನ್ನ ಪುತ್ರಿಯರನ್ನು ಯುದ್ಧದಲ್ಲಿ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಹೋದೆಯಲ್ಲಾ. \v 27 ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಹೋದೆ? ಏಕೆ ಮೋಸಮಾಡಿದೆ? ನನಗೆ ತಿಳಿಸಿದ್ದರೆ ಸಂತೋಷದಿಂದ ಹಾಡು, ತಾಳ, ವೀಣೆಗಳ ಸಂಗೀತದೊಂದಿಗೆ ನಿನ್ನನ್ನು ಕಳುಹಿಸುತ್ತಿದ್ದೆನು. \v 28 ಆದರೆ ನೀನು ನನ್ನ ಮೊಮ್ಮಕ್ಕಳಿಗೂ, ನನ್ನ ಹೆಣ್ಣು ಮಕ್ಕಳಿಗೂ ಮುದ್ದು ಕೊಡುವುದಕ್ಕೂ ಬಿಡಲಿಲ್ಲ. ನೀನು ಮಾಡಿದ್ದು ಬುದ್ಧಿಹೀನ ಕೆಲಸವೇ ಸರಿ. \v 29 ನಿನಗೆ ಕೇಡು ಮಾಡುವುದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ, ‘ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಹೇಳದಂತೆ ಎಚ್ಚರವಾಗಿರು,’ ಎಂದು ಹೇಳಿದರು. \v 30 ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಹಾರೈಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ?” ಎಂದನು. \p \v 31 ಅದಕ್ಕೆ ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನಿನ್ನ ಪುತ್ರಿಯರನ್ನು ನನ್ನಿಂದ ಬಲಾತ್ಕಾರದಿಂದ ಹಿಂದಕ್ಕೆ ತೆಗೆದುಕೊಳ್ಳುವೆ ಎಂದು ಭಯಪಟ್ಟೆನು. \v 32 ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳು ಸಿಕ್ಕುವುವೋ ಅವರು ಸಾಯಲಿ. ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ, ನಮ್ಮ ಬಂಧುಗಳ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ,” ಎಂದನು. ಆದರೆ ರಾಹೇಲಳು ಅವುಗಳನ್ನು ಕದ್ದುಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ. \p \v 33 ಆಗ ಲಾಬಾನನು ಯಾಕೋಬನ ಗುಡಾರದಲ್ಲಿಯೂ, ಲೇಯಳ ಗುಡಾರದಲ್ಲಿಯೂ, ಆ ಇಬ್ಬರು ದಾಸಿಯರ ಗುಡಾರಗಳಲ್ಲಿಯೂ ಹೋಗಿ ಹುಡುಕಿದರೂ, ಅವುಗಳನ್ನು ಕಾಣಲಿಲ್ಲ. ಲೇಯಳ ಗುಡಾರದಿಂದ ಹೊರಟು ರಾಹೇಲಳ ಗುಡಾರದೊಳಗೆ ಹೋದನು. \v 34 ಆದರೆ ರಾಹೇಲಳು ವಿಗ್ರಹಗಳನ್ನು ತೆಗೆದುಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು, ಅದರ ಮೇಲೆ ಕುಳಿತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದರೂ, ಅವನು ಅವುಗಳನ್ನು ಕಾಣಲಿಲ್ಲ. \p \v 35 ರಾಹೇಲಳು ತನ್ನ ತಂದೆಗೆ, “ಅಪ್ಪಾ, ನಾನು ನಿನ್ನ ಮುಂದೆ ಎದ್ದು ನಿಂತುಕೊಳ್ಳದೇ ಇರುವುದರಿಂದ, ನನ್ನ ಮೇಲೆ ಕೋಪಬಾರದೆ ಇರಲಿ. ಏಕೆಂದರೆ ನಾನು ಮುಟ್ಟಾಗಿದ್ದೇನೆ,” ಎಂದಳು. ಅವನು ಹುಡುಕಿ ಆ ವಿಗ್ರಹಗಳನ್ನು ಕಂಡುಕೊಳ್ಳದೆ ಹೋದನು. \p \v 36 ಆಗ ಯಾಕೋಬನು ಕೋಪಗೊಂಡು ಲಾಬಾನನೊಂದಿಗೆ ವಾದಿಸಿದನು. ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನನ್ನನ್ನು ಬೆನ್ನಟ್ಟಿ ಬರುವುದಕ್ಕೆ ನನ್ನ ಅಪರಾಧವೇನು?” ನನ್ನ ಪಾಪವೇನು? \v 37 ನೀನು ನನ್ನ ಸಲಕರಣೆಗಳನ್ನೆಲ್ಲಾ ಹುಡುಕಿದ ಮೇಲೆ ನಿನ್ನ ಮನೆಯ ಯಾವ ವಸ್ತುಗಳನ್ನು ಕಂಡುಕೊಂಡೆ? ನನಗೂ, ನಿನಗೂ ಬಂಧುಗಳಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ. \p \v 38 “ಈ ಇಪ್ಪತ್ತು ವರ್ಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ, ಮೇಕೆಗಳೂ ಮರಿ ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ. \v 39 ಮೃಗಗಳಿಂದ ಘಾಯವಾದವುಗಳನ್ನು ನಿನ್ನ ಬಳಿಗೆ ತಾರದೆ, ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ, ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡೆ. \v 40 ನನ್ನ ಸ್ಥಿತಿ ಹೀಗೆ ಇತ್ತು: ಹಗಲಲ್ಲಿ ಬಿಸಿಲಿನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು. ನನ್ನ ಕಣ್ಣುಗಳಿಗೆ ನಿದ್ರೆ ತಪ್ಪಿಹೋಯಿತು. \v 41 ನಿನ್ನ ಇಬ್ಬರು ಪುತ್ರಿಯರಿಗಾಗಿ ಹದಿನಾಲ್ಕು ವರ್ಷ, ನಿನ್ನ ಮಂದೆಗಳಿಗೋಸ್ಕರ ಆರು ವರ್ಷ, ಈ ಪ್ರಕಾರ ಇಪ್ಪತ್ತು ವರ್ಷ ನಿನ್ನ ಮನೆಯಲ್ಲಿದ್ದು, ನಿನ್ನ ಸೇವೆ ಮಾಡಿದೆನು. ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದೆ. \v 42 ನನ್ನ ತಂದೆ ದೇವರೂ, ಅಬ್ರಹಾಮನ ದೇವರೂ, ಇಸಾಕನ ಭಯವೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ, ನಿಶ್ಚಯವಾಗಿ ನೀನು ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದೆ. ನನ್ನ ಬಾಧೆಯನ್ನೂ, ನನ್ನ ಕಷ್ಟವನ್ನೂ ದೇವರು ಕಂಡು, ನಿನ್ನೆ ರಾತ್ರಿ ನಿನ್ನನ್ನು ಗದರಿಸಿದ್ದಾರೆ,” ಎಂದನು. \p \v 43 ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ, “ಈ ಪುತ್ರಿಯರು ನನ್ನ ಪುತ್ರಿಯರೇ, ಈ ಮಕ್ಕಳು ನನ್ನ ಮಕ್ಕಳೇ, ಈ ಮಂದೆಯು ನನ್ನ ಮಂದೆಯೇ, ಅಂತು ನೀನು ಕಾಣುವುದೆಲ್ಲಾ ನನ್ನದೇ. ಹಾಗಾದರೆ ನನ್ನ ಪುತ್ರಿಯರಿಗಾಗಲಿ, ಅವರು ಹೆತ್ತ ಮಕ್ಕಳಿಗಾಗಲಿ ನಾನು ಈ ಹೊತ್ತು ಏನು ಮಾಡಲಿ? \v 44 ಆದ್ದರಿಂದ ನೀನು ಇಲ್ಲಿ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ, ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ,” ಎಂದನು. \p \v 45 ಆಗ ಯಾಕೋಬನು ಒಂದು ಕಲ್ಲನ್ನು ತೆಗೆದುಕೊಂಡು ಸ್ತಂಭವಾಗಿ ನಿಲ್ಲಿಸಿದನು. \v 46 ಯಾಕೋಬನು ತನ್ನ ಕಡೆಯವರಿಗೆ, “ಕಲ್ಲುಗಳನ್ನು ಕೂಡಿಸಿರಿ,” ಎಂದನು. ಅವರು ಕಲ್ಲುಗಳನ್ನು ತೆಗೆದುಕೊಂಡು ಒಂದು ಕುಪ್ಪೆ ಮಾಡಿದರು. ಅವರು ಆ ಕುಪ್ಪೆಯ ಬಳಿಯಲ್ಲಿ ಕುಳಿತುಕೊಂಡು ಊಟಮಾಡಿದರು. \v 47 ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು. ಯಾಕೋಬನು ಗಲೇದ್\f + \fr 31:47 \fr*\ft ಒಂದು ಅರಮೀಯ ಭಾಷೆಯಲ್ಲಿ \ft*\fq ಯಗರಸಾಹದೂತ \fq*\ft ಇನ್ನೊಂದು ಗ್ರೀಕ್ ಭಾಷೆಯಲ್ಲಿ \ft*\fq ಗಲೇದ್ \fq*\ft ಎರಡರದೂ ಅರ್ಥ \ft*\fqa ಸಾಕ್ಷಿಯ ಕುಪ್ಪೆ\fqa*\f* ಎಂದು ಹೆಸರಿಟ್ಟನು. \p \v 48 ಆಗ ಲಾಬಾನನು, “ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ,” ಎಂದನು. ಆದ್ದರಿಂದ ಅದಕ್ಕೆ ಗಲೇದ್ ಎಂದೂ, \v 49 ಮಿಚ್ಪಾ\f + \fr 31:49 \fr*\fq ಮಿಚ್ಪಾ \fq*\ft ಅಂದರೆ \ft*\fqa ಕಾವಲು ಗೋಪುರ\fqa*\f* ಎಂದೂ ಹೆಸರಾಯಿತು. ಏಕೆಂದರೆ, “ನನಗೂ ನಿನಗೂ ಮಧ್ಯದಲ್ಲಿ ನಾವು ಒಬ್ಬರಿಗೊಬ್ಬರು ಅಗಲಿರುವಾಗ ಯೆಹೋವ ದೇವರು ನಮ್ಮನ್ನು ನೋಡಿಕೊಳ್ಳುತ್ತಾ ಇರಲಿ. \v 50 ನೀನು ನನ್ನ ಪುತ್ರಿಯರನ್ನು ಉಪದ್ರವಪಡಿಸಿದರೆ, ಇಲ್ಲವೆ ನನ್ನ ಮಕ್ಕಳ ಹೊರತಾಗಿ ಬೇರೆ ಹೆಂಡತಿಯರನ್ನು ನೀನು ಪಡೆದರೆ, ಯಾವ ಮನುಷ್ಯನೂ ವಿಚಾರಿಸಲು ಇಲ್ಲದಿದ್ದರೂ ನನಗೂ ನಿನಗೂ ನಡುವೆ ದೇವರೇ ಈ ಒಪ್ಪಂದಕ್ಕೆ ಸಾಕ್ಷಿ,” ಎಂದನು. \p \v 51 ಲಾಬಾನನು ಯಾಕೋಬನಿಗೆ, “ನಿನಗೂ ನನಗೂ ಮಧ್ಯೆ ನಾನು ಹಾಕಿಸಿರುವ ಈ ಕುಪ್ಪೆಯನ್ನು ನೋಡು, ಈ ಸ್ತಂಭವನ್ನು ನೋಡು, \v 52 ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವುದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವುದಿಲ್ಲವೆಂಬುದಕ್ಕೆ ಈ ಕುಪ್ಪೆಯೂ ಈ ಸ್ತಂಭವೂ ಸಾಕ್ಷಿಯಾಗಿವೆ. \v 53 ಅಬ್ರಹಾಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು. \p ಆಗ ಯಾಕೋಬನು ತನ್ನ ತಂದೆ ಇಸಾಕನ ಭಯದ ಮೇಲೆ ಪ್ರಮಾಣ ಮಾಡಿದನು. \v 54 ಯಾಕೋಬನು ಆ ಬೆಟ್ಟದಲ್ಲಿ ಬಲಿಯನ್ನು ಅರ್ಪಿಸಿ, ಭೋಜನ ಮಾಡುವುದಕ್ಕೆ ತನ್ನ ಬಂಧುಗಳನ್ನು ಕರೆಕಳುಹಿಸಿದನು. ಅವರು ಭೋಜನ ಮಾಡಿ ಬೆಟ್ಟದಲ್ಲಿಯೇ ರಾತ್ರಿ ಇಳಿದುಕೊಂಡರು. \p \v 55 ಮುಂಜಾನೆ ಲಾಬಾನನು ಎದ್ದು ತನ್ನ ಪುತ್ರ ಪುತ್ರಿಯರಿಗೆ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು. \c 32 \s1 ಯಾಕೋಬನು ಏಸಾವನನ್ನು ಸಂದರ್ಶಿಸಲು ಸಿದ್ಧತೆ \p \v 1 ಅನಂತರ ಯಾಕೋಬನು ತನ್ನ ಮಾರ್ಗವಾಗಿ ಹೋಗುತ್ತಿದ್ದಾಗ, ದೇವದೂತರು ಅವನ ಎದುರಿಗೆ ಬಂದರು. \v 2 ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೈನ್ಯ,” ಎಂದು ಹೇಳಿ, ಆ ಸ್ಥಳಕ್ಕೆ ಮಹನಯಿಮ್\f + \fr 32:2 \fr*\fq ಮಹನಯಿಮ್ \fq*\ft ಅಂದರೆ \ft*\fqa ಎರಡು ಸೈನ್ಯ\fqa*\f* ಎಂದು ಹೆಸರಿಟ್ಟನು. \p \v 3 ಯಾಕೋಬನು ಎದೋಮ್ಯರ ದೇಶವಾದ ಸೇಯೀರನ ಸೀಮೆಯಲ್ಲಿರುವ ತನ್ನ ಅಣ್ಣನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು. \v 4 ಕಳುಹಿಸುವಾಗ ಅವರಿಗೆ, “ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳಬೇಕು: ‘ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ: ಲಾಬಾನನ ಸಂಗಡ ನಾನು ಇಲ್ಲಿಯವರೆಗೆ ಪ್ರವಾಸಿಯಾಗಿದ್ದೆನು. \v 5 ಈಗ ನನಗೆ ಎತ್ತು, ಕತ್ತೆ, ಕುರಿಗಳು, ದಾಸದಾಸಿಯರು ಇದ್ದಾರೆ. ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದುವಂತೆ ನಾನು ಈ ಸಂದೇಶವನ್ನು ನನ್ನ ಯಜಮಾನನಾದ ನಿಮಗೆ ತಿಳಿಸುವುದಕ್ಕಾಗಿ ಕಳುಹಿಸಿದ್ದೇನೆ,’ ಎಂದು ಹೇಳಿರಿ,” ಎಂದನು. \p \v 6 ಆಗ ದೂತರು ಯಾಕೋಬನ ಬಳಿಗೆ ಹಿಂದಿರುಗಿ ಬಂದು, “ನಾವು ನಿನ್ನ ಸಹೋದರ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರೆದುಕೊಂಡು ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಿದ್ದಾನೆ,” ಎಂದರು. \p \v 7 ಆಗ ಯಾಕೋಬನು ಬಹಳವಾಗಿ ಭಯಪಟ್ಟು, ತನ್ನ ಸಂಗಡ ಇದ್ದ ಜನರನ್ನೂ, ಕುರಿಗಳನ್ನೂ, ದನಗಳನ್ನೂ, ಒಂಟೆಗಳನ್ನೂ ಎರಡು ಗುಂಪುಗಳಾಗಿ\f + \fr 32:7 \fr*\ft ಅಥವಾ \ft*\fqa ಸೈನ್ಯ\fqa*\f* ವಿಭಾಗಿಸಿದನು. \v 8 ಏಕೆಂದರೆ, “ಏಸಾವನು ಒಂದು ಗುಂಪಿನ ಮೇಲೆ ದಾಳಿಮಾಡಿದರೆ, ಉಳಿದ ಗುಂಪು ತಪ್ಪಿಸಿಕೊಂಡು ಹೋಗಬಹುದು,” ಎಂದುಕೊಂಡನು. \p \v 9 ಇದಲ್ಲದೆ ಯಾಕೋಬನು, “ನನ್ನ ತಂದೆ ಅಬ್ರಹಾಮನ ದೇವರೇ, ನನ್ನ ತಂದೆ ಇಸಾಕನ ದೇವರೇ, ನಿಮ್ಮ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ಆಗ ನಾನು ನಿನಗೆ ಒಳ್ಳೆಯದನ್ನು ಮಾಡುವೆನು ಎಂದು ನನಗೆ ಹೇಳಿದ ಯೆಹೋವ ದೇವರೇ, \v 10 ನೀವು ನಿಮ್ಮ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ, ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಏಕೆಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ, ನನ್ನ ಕೈಯಲ್ಲಿ ಕೋಲು ಮಾತ್ರವೇ ಇತ್ತು, ಈಗ ನನಗೆ ಎರಡು ಗುಂಪುಗಳಿವೆ. \v 11 ನನ್ನ ಅಣ್ಣ ಏಸಾವನ ಕೈಯಿಂದ ನನ್ನನ್ನು ತಪ್ಪಿಸಿರಿ. ಏಕೆಂದರೆ ಅವನು ಬಂದು ನನ್ನನ್ನೂ, ಮಕ್ಕಳೊಂದಿಗೆ ತಾಯಂದಿರನ್ನೂ, ದಾಳಿಮಾಡುವನು ಎಂದು ನಾನು ಅವನಿಗೆ ಭಯಪಡುತ್ತೇನೆ. \v 12 ‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡುವೆನು ಮತ್ತು ನಿನ್ನ ಸಂತತಿಯನ್ನು ಎಣಿಸುವುದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು,’ ಎಂದು ನನಗೆ ಹೇಳಿದ್ದೀರಲ್ಲಾ?” ಎಂದನು. \p \v 13 ಯಾಕೋಬನು ಆ ರಾತ್ರಿ ಅಲ್ಲೇ ಕಳೆದನು. ತಾನು ತಂದದ್ದರಲ್ಲಿ ಕೆಲವನ್ನು ಅವನ ಅಣ್ಣ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು. \v 14 ಅವು ಯಾವುವೆಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು, \v 15 ಹಾಲು ಕೊಡುವ ಮೂವತ್ತು ಒಂಟೆಗಳು, ಅವುಗಳ ಮರಿಗಳು, ನಲವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಗಂಡುಕತ್ತೆಗಳು, \v 16 ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನೂ, ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ, ಅವರಿಗೆ, “ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳ ಬಿಡಿರಿ,” ಎಂದನು. \p \v 17 ಅವನು ಮೊದಲನೆಯವನಿಗೆ, “ನನ್ನ ಅಣ್ಣ ಏಸಾವನು ನಿನ್ನೆದುರಿಗೆ ಬಂದು, ‘ನೀನು ಯಾರ ಕಡೆಯವನು? ಎಲ್ಲಿಗೆ ಹೋಗುತ್ತೀ? ಇಲ್ಲಿ ನಿನ್ನ ಮುಂದೆ ಇರುವ ಇವೆಲ್ಲ ಯಾರವು?’ ಎಂದು ಕೇಳಿದರೆ, \v 18 ನೀನು ಅವನಿಗೆ, ‘ಇವು ನಿನ್ನ ದಾಸನಾದ ಯಾಕೋಬನವುಗಳೇ, ಇದು ನನ್ನ ಯಜಮಾನನಾದ ಏಸಾವನಿಗೆ ಕಳುಹಿಸಲಾದ ಕಾಣಿಕೆ, ಅವನೂ ನಮ್ಮ ಹಿಂದೆ ಇದ್ದಾನೆ,’ ಎಂದು ಅವನಿಗೆ ಹೇಳಬೇಕು,” ಎಂದು ಆಜ್ಞಾಪಿಸಿದನು. \p \v 19 ಎರಡನೆಯವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂ, “ನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು. \v 20 ಇದಲ್ಲದೆ, ‘ನಿನ್ನ ದಾಸ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು,’ ” ಎಂದು ಆಜ್ಞಾಪಿಸಿದನು. ಏಕೆಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ಕಾಣುವೆನು. ಅವನು ನನ್ನನ್ನು ಅಂಗೀಕರಿಸುವನೇನೋ ಎಂದುಕೊಂಡನು. \v 21 ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟುಹೋಯಿತು. ತಾನಾದರೋ ಆ ರಾತ್ರಿ ಅಲ್ಲಿಯೇ ತಂಗಿದನು. \s1 ಯಾಕೋಬನು ದೇವರೊಂದಿಗೆ ಹೋರಾಡಿದ್ದು \p \v 22 ಆ ರಾತ್ರಿಯಲ್ಲಿ ಯಾಕೋಬನು ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ, ತನ್ನ ಇಬ್ಬರು ದಾಸಿಯರನ್ನೂ, ತನ್ನ ಹನ್ನೊಂದು ಮಂದಿ ಪುತ್ರರನ್ನೂ ಕರೆದುಕೊಂಡು ಯಬ್ಬೋಕ್ ಎಂಬ ಹೊಳೆಯ ದಂಡೆಯನ್ನು ದಾಟಿದನು. \v 23 ಅವನು ಅವರನ್ನು ಕರೆದುಕೊಂಡು ಹೊಳೆ ದಂಡೆಯನ್ನು ದಾಟಿಸಿದ್ದಲ್ಲದೆ ತನಗಿದ್ದದ್ದನ್ನೆಲ್ಲಾ ದಾಟಿಸಿದನು. \v 24 ಆಗ ಯಾಕೋಬನು ಒಬ್ಬನೇ ಉಳಿದಾಗ, ಒಬ್ಬ ಮನುಷ್ಯನು ಉದಯವಾಗುವವರೆಗೆ ಅವನ ಸಂಗಡ ಹೋರಾಡಿದನು. \v 25 ಆ ಮನುಷ್ಯನು ಅವನನ್ನು ಜಯಿಸದೆ ಇರುವುದನ್ನು ಕಂಡು, ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಸಂಗಡ ಹೋರಾಡುತ್ತಿರುವಾಗಲೇ ಯಾಕೋಬನ ತೊಡೆಯ ಕೀಲು ತಪ್ಪಿತು. \v 26 ಅವನು ಯಾಕೋಬನಿಗೆ, “ಉದಯವಾಯಿತು, ನನ್ನನ್ನು ಹೋಗಗೊಡು,” ಎಂದಾಗ. \p ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು, ನಾನು ನಿನ್ನನ್ನು ಹೋಗಗೊಡಿಸೆನು,” ಎಂದನು. \p \v 27 ಆ ಮನುಷ್ಯನು ಅವನಿಗೆ, “ನಿನ್ನ ಹೆಸರು ಏನು?” ಎಂದಾಗ. \p ಅವನು, “ಯಾಕೋಬ,” ಎಂದನು. \p \v 28 ಅದಕ್ಕೆ ಅವನು, “ನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಎನಿಸಿಕೊಳ್ಳದೆ, ಇಸ್ರಾಯೇಲ್\f + \fr 32:28 \fr*\fq ಇಸ್ರಾಯೇಲ್ \fq*\ft ಪದದ ಅರ್ಥ \ft*\fqa ದೇವರೊಂದಿಗೆ ಹೋರಾಡಿದನು\fqa*\f* ಎಂದು ನಿನಗೆ ಹೆಸರಾಗುವುದು. ಏಕೆಂದರೆ ನೀನು ದೇವರ ಸಂಗಡವೂ, ಮನುಷ್ಯರ ಸಂಗಡವೂ ಹೋರಾಡಿ ಜಯಿಸಿದ್ದೀ,” ಎಂದನು. \p \v 29 ಯಾಕೋಬನು, “ನಿನ್ನ ಹೆಸರನ್ನು ನನಗೆ ತಿಳಿಸು,” ಎಂದು ಅವನನ್ನು ಕೇಳಿಕೊಂಡನು. \p ಆತನು, “ನನ್ನ ಹೆಸರನ್ನು ಏಕೆ ಕೇಳುತ್ತೀ?” ಎಂದು ಹೇಳಿ ಅವನನ್ನು ಅಲ್ಲೇ ಆಶೀರ್ವದಿಸಿದನು. \p \v 30 ಆಗ ಯಾಕೋಬನು, “ನಾನು ದೇವರನ್ನು ಮುಖಾಮುಖಿಯಾಗಿ ನೋಡಿದರೂ, ನನ್ನ ಪ್ರಾಣ ಉಳಿಯಿತು,” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್\f + \fr 32:30 \fr*\fq ಪೆನೀಯೇಲ್ \fq*\ft ಅಂದರೆ \ft*\fqa ದೇವರ ಮುಖ\fqa*\f* ಎಂದು ಹೆಸರಿಟ್ಟನು. \p \v 31 ಯಾಕೋಬನು ಪೆನೀಯೇಲನ್ನು ದಾಟಿಹೋದಾಗ, ಸೂರ್ಯೋದಯವಾಯಿತು. ಆದರೆ ಅವನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು. \v 32 ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲರು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದವರೆಗೂ ತಿನ್ನುವುದಿಲ್ಲ. \c 33 \s1 ಯಾಕೋಬನು ಏಸಾವನನ್ನು ಸಂಧಿಸಿದ್ದು \p \v 1 ಯಾಕೋಬನು ಕಣ್ಣೆತ್ತಿ ನೋಡಿದಾಗ, ಏಸಾವನು ನಾನೂರು ಮಂದಿ ಮನುಷ್ಯರ ಸಂಗಡ ಬರುತ್ತಿದ್ದನು. ಆಗ ಅವನು ಲೇಯಳಿಗೂ, ರಾಹೇಲಳಿಗೂ, ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ, ಅವರನ್ನು ಬೇರೆ ಬೇರೆ ಮಾಡಿದನು. \v 2 ದಾಸಿಯರನ್ನೂ, ಅವರ ಮಕ್ಕಳನ್ನೂ ಮುಂದುಗಡೆಯಲ್ಲಿಯೂ; ಅವರ ಹಿಂದೆ ಲೇಯಳನ್ನೂ, ಆಕೆಯ ಮಕ್ಕಳನ್ನೂ; ಕಟ್ಟಕಡೆಯಲ್ಲಿ ರಾಹೇಲಳನ್ನೂ, ಯೋಸೇಫನನ್ನೂ ಇರಿಸಿದನು. \v 3 ತಾನೇ ಅವರ ಮುಂದಾಗಿ ಹೋಗಿ ತನ್ನ ಸಹೋದರನ ಬಳಿಗೆ ಬರುವವರೆಗೆ ಏಳು ಸಾರಿ ನೆಲದವರೆಗೆ ಬಗ್ಗಿದನು. \p \v 4 ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು, ಅವನನ್ನು ಅಪ್ಪಿಕೊಂಡು, ಅವನ ಕೊರಳಿನ ಮೇಲೆ ಬಿದ್ದು, ಅವನಿಗೆ ಮುದ್ದಿಟ್ಟನು. ಅವರಿಬ್ಬರೂ ಅತ್ತರು. \v 5 ಆಗ ಏಸಾವನು ತನ್ನ ದೃಷ್ಟಿ ಹರಿಸಿ, ಆ ಸ್ತ್ರೀಯರನ್ನೂ, ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ಕೇಳಿದನು. \p ಅದಕ್ಕವನು, “ದೇವರು ನಿನ್ನ ದಾಸನಿಗೆ ಕೃಪೆಯಿಂದ ಕೊಟ್ಟ ಮಕ್ಕಳು,” ಎಂದನು. \p \v 6 ಆಗ ದಾಸಿಯರೂ, ಅವರ ಮಕ್ಕಳೂ ಹತ್ತಿರ ಬಂದು ಅವನಿಗೆ ಅಡ್ಡಬಿದ್ದರು. \v 7 ಲೇಯಳು ಸಹ ತನ್ನ ಮಕ್ಕಳೊಂದಿಗೆ ಹತ್ತಿರ ಬಂದು ಅಡ್ಡಬಿದ್ದಳು. ತರುವಾಯ ಯೋಸೇಫನೂ, ರಾಹೇಲಳೂ ಬಂದು ಅಡ್ಡಬಿದ್ದರು. \p \v 8 ಆಗ ಏಸಾವನು, “ನಾನು ದಾರಿಯಲ್ಲಿ ಕಂಡ ಪಶುಗಳ ಮಂದೆಗಳೆಲ್ಲಾ ಏತಕ್ಕೆ?” ಎಂದು ಕೇಳಿದನು. \p ಯಾಕೋಬನು, “ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕುವುದಕ್ಕೋಸ್ಕರ,” ಎಂದನು. \p \v 9 ಅದಕ್ಕೆ ಏಸಾವನು, “ನನ್ನ ಸಹೋದರನೇ, ನನಗೆ ಸಾಕಷ್ಟು ಇದೆ. ನಿನಗೆ ಇದ್ದದ್ದು ನೀನೇ ಇಟ್ಟುಕೋ,” ಎಂದನು. \p \v 10 ಆಗ ಯಾಕೋಬನು, “ಹಾಗಲ್ಲ, ಈಗ ನಿನ್ನ ದೃಷ್ಟಿಯಲ್ಲಿ ನಾನು ದಯೆ ಹೊಂದಿದ್ದೆನಾದರೆ, ನನ್ನ ಕಾಣಿಕೆಯನ್ನು ನನ್ನ ಕೈಯಿಂದ ತೆಗೆದುಕೊಳ್ಳಬೇಕು. ಏಕೆಂದರೆ ನಾನು ದೇವರ ಮುಖವನ್ನು ಕಂಡಂತೆ, ನಿನ್ನ ಮುಖವನ್ನು ಕಂಡದ್ದಕ್ಕಾಗಿಯೂ, ನೀನು ನನ್ನನ್ನು ಮೆಚ್ಚಿದ್ದಕ್ಕಾಗಿಯೂ, \v 11 ನಿನಗೋಸ್ಕರ ತಂದಿರುವ ನನ್ನ ಕಾಣಿಕೆಯನ್ನು ಸ್ವೀಕರಿಸಬೇಕೆಂದು ಬೇಡುತ್ತೇನೆ. ದೇವರು ನನ್ನೊಂದಿಗೆ ಕೃಪೆಯಿಂದ ವರ್ತಿಸಿದ್ದರಿಂದ ನನಗೆ ಬೇಕಾದಷ್ಟು ಇವೆ,” ಎಂದು ಹೇಳಿ, ಅವನನ್ನು ಬಲವಂತ ಮಾಡಿದ್ದರಿಂದ ಏಸಾವನು ಅದನ್ನು ತೆಗೆದುಕೊಂಡನು. \p \v 12 ತರುವಾಯ ಏಸಾವನು, “ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ. ನಾನು ನಿನ್ನ ಮುಂದೆ ಹೋಗುವೆನು,” ಎಂದನು. \p \v 13 ಅದಕ್ಕೆ ಯಾಕೋಬನು ಅವನಿಗೆ, “ಮಕ್ಕಳು ಎಳೆಯ ಪ್ರಾಯದವರಿದ್ದಾರೆ, ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ನನ್ನ ಒಡೆಯನಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡೆಸಿದರೆ, ಎಲ್ಲಾ ಮಂದೆಯು ಸತ್ತು ಹೋದಾವು. \v 14 ಆದ್ದರಿಂದ ನನ್ನ ಒಡೆಯನೇ, ನೀನು ನಿನ್ನ ಸೇವಕನಿಗಿಂತಲೂ ಮುಂಚೆ ಹೋಗಬಹುದು. ನಾನು ನನ್ನ ಒಡೆಯನ ಬಳಿಗೆ ಸೇಯೀರಿಗೆ ಬರುವವರೆಗೆ, ನನ್ನ ಮುಂದಿರುವ ಮಂದೆಗಳ ನಡಿಗೆಗೂ, ಮಕ್ಕಳ ನಡಿಗೆಗೂ ತಕ್ಕ ಹಾಗೆ ಮೆಲ್ಲಗೆ ನಡೆದು ಬರುವೆನು,” ಎಂದನು. \p \v 15 ಅದಕ್ಕೆ ಏಸಾವನು, “ನನ್ನ ಬಳಿಯಲ್ಲಿರುವ ಜನರಲ್ಲಿ ಕೆಲವರನ್ನು ನಿನ್ನ ಬಳಿಯಲ್ಲಿ ಬಿಟ್ಟು ಹೋಗುತ್ತೇನೆ,” ಅನ್ನಲು. \p ಯಾಕೋಬನು, “ಅದರ ಅಗತ್ಯವೇನು? ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ,” ಎಂದನು. \p \v 16 ಹೀಗೆ ಏಸಾವನು ಆ ದಿನವೇ ತನ್ನ ಮಾರ್ಗವಾಗಿ ಸೇಯೀರಿಗೆ ಹಿಂದಿರುಗಿ ಹೋದನು. \v 17 ಯಾಕೋಬನು ಪ್ರಯಾಣಮಾಡಿ, ಸುಕ್ಕೋತಿಗೆ ಹೋಗಿ, ಮನೆಯನ್ನು ಕಟ್ಟಿಸಿಕೊಂಡನು. ಇದಲ್ಲದೆ ತನ್ನ ಪಶುಗಳಿಗೆ ಹಟ್ಟಿಗಳನ್ನು ಮಾಡಿಸಿದನು. ಆದ್ದರಿಂದ ಆ ಸ್ಥಳಕ್ಕೆ ಸುಕ್ಕೋತ್\f + \fr 33:17 \fr*\fq ಸುಕ್ಕೋತ್ \fq*\ft ಪದದ ಅರ್ಥ \ft*\fqa ಮಂಟಪಗಳು\fqa*\f* ಎಂದು ಹೆಸರಾಯಿತು. \p \v 18 ಯಾಕೋಬನು ಪದ್ದನ್ ಅರಾಮಿನಿಂದ ಬಂದು, ಕಾನಾನ್ ದೇಶದ ಶೆಕೆಮ್ ಪಟ್ಟಣವನ್ನು ಸೇರಿ, ಅದರ ಮುಂದೆ ತನ್ನ ಗುಡಾರಗಳನ್ನು ಹಾಕಿದನು. \v 19 ಅವನು ತನ್ನ ಗುಡಾರಗಳನ್ನು ಹಾಕಿದ ಭೂಮಿಯನ್ನು ಶೆಕೆಮಿನ ತಂದೆ ಹಮೋರನ ಮಕ್ಕಳ ಕೈಯಿಂದ ನೂರು ನಾಣ್ಯಗಳಿಗೆ ಕೊಂಡುಕೊಂಡನು. \v 20 ಅಲ್ಲಿ ಬಲಿಪೀಠವನ್ನು ಕಟ್ಟಿಸಿ ಅದಕ್ಕೆ, ಏಲೆಲೋಹೇ ಇಸ್ರಾಯೇಲ್\f + \fr 33:20 \fr*\fq ಏಲೆಲೋಹೇ ಇಸ್ರಾಯೇಲ್ \fq*\ft ಅರ್ಥ \ft*\fqa ಏಲ್ ಅಂದರೆ ಇಸ್ರಾಯೇಲ್ ದೇವರು \fqa*\ft ಅಥವಾ \ft*\fqa ಪರಾಕ್ರಮಶಾಲಿ ಇಸ್ರಾಯೇಲ್ ದೇವರು ಪರಾಕ್ರಮಶಾಲಿ\fqa*\f* ಎಂದು ಹೆಸರಿಟ್ಟನು. \c 34 \s1 ದೀನಾ ಹಾಗೂ ಶೆಕೆಮಿನವರು \p \v 1 ಲೇಯಳು ಯಾಕೋಬನಿಗೆ ಹೆತ್ತ ಮಗಳಾದ ದೀನಳು ದೇಶದ ಸ್ತ್ರೀಯರನ್ನು ನೋಡುವುದಕ್ಕಾಗಿ ಹೊರಗೆ ಹೋದಳು. \v 2 ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗ ಶೆಕೆಮನು ಆಕೆಯನ್ನು ತೆಗೆದುಕೊಂಡುಹೋಗಿ ಮಾನಭಂಗ ಮಾಡಿದನು. \v 3 ಅವನ ಮನಸ್ಸು ಯಾಕೋಬನ ಮಗಳಾದ ದೀನಳ ಮೇಲೆಯೇ ಇತ್ತು. ಅವನು ಆ ಹುಡುಗಿಯನ್ನು ಪ್ರೀತಿಸಿ, ಆಕೆಯೊಂದಿಗೆ ಅನುರಾಗದಿಂದ ಮಾತನಾಡಿದನು. \v 4 ಶೆಕೆಮನು ತನ್ನ ತಂದೆ ಹಮೋರನಿಗೆ, “ಈ ಹುಡುಗಿಯನ್ನು ನನಗೆ ಹೆಂಡತಿಯಾಗಿರುವಂತೆ ಹೇಳು,” ಎಂದನು. \p \v 5 ಯಾಕೋಬನು ತನ್ನ ಮಗಳಾದ ದೀನಳನ್ನು ಶೆಕೆಮನು ಕೆಡಿಸಿದ್ದಾನೆಂದು ಕೇಳಿದಾಗ, ಅವನ ಮಕ್ಕಳು ಅವನ ಪಶುಗಳ ಸಂಗಡ ಹೊಲದಲ್ಲಿದ್ದರು. ಅವರು ಬರುವವರೆಗೆ ಯಾಕೋಬನು ಸುಮ್ಮನಿದ್ದನು. \p \v 6 ಆಗ ಶೆಕೆಮನ ತಂದೆ ಹಮೋರನು ಯಾಕೋಬನ ಸಂಗಡ ಮಾತನಾಡುವುದಕ್ಕೆ ಬಂದನು. \v 7 ಯಾಕೋಬನ ಮಕ್ಕಳು ಆ ವಿಷಯವನ್ನು ಕೇಳಿದ ಕೂಡಲೇ ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ, ಇಸ್ರಾಯೇಲಿನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ, ಅವರು ವ್ಯಸನಪಟ್ಟು, ಬಹಳ ಕೋಪಗೊಂಡರು. ಅದು ಹಾಗೆ ಆಗಬಾರದಾಗಿತ್ತು. \p \v 8 ಹಮೋರನು ಅವರಿಗೆ, “ನನ್ನ ಮಗ ಶೆಕೆಮನ ಮನಸ್ಸು ನಿಮ್ಮ ಮಗಳನ್ನು ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ, ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. \v 9 ನೀವು ನಮ್ಮೊಂದಿಗೆ ಮದುವೆ ಸಂಬಂಧ ಮಾಡಿಕೊಳ್ಳಿರಿ. ನಿಮ್ಮ ಪುತ್ರಿಯರನ್ನು ನಮಗೆ ಕೊಡಿರಿ, ನಮ್ಮ ಪುತ್ರಿಯರನ್ನು ನೀವು ಮದುವೆಯಾಗಿರಿ. \v 10 ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ. ದೇಶವು ನಿಮ್ಮ ಮುಂದೆ ಇದೆ. ನೀವು ಅದರಲ್ಲಿ ವಾಸಿಸಿ, ಅದರಲ್ಲಿ ವ್ಯಾಪಾರಮಾಡಿ,\f + \fr 34:10 \fr*\ft ಅಥವಾ \ft*\fqa ಸ್ವತಂತ್ರ್ಯವಾಗಿ ನಡೆದಾಡಿರಿ\fqa*\f* ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ,” ಎಂದನು. \p \v 11 ಬಳಿಕ ಶೆಕೆಮನು ಆಕೆಯ ತಂದೆಗೂ, ಆಕೆಯ ಸಹೋದರರಿಗೂ, “ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ, ನೀವು ಕೇಳಿದ್ದನ್ನು ನಾನು ನಿಮಗೆ ಕೊಡುವೆನು. \v 12 ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ,” ಎಂದನು. \p \v 13 ಆಗ ಯಾಕೋಬನ ಮಕ್ಕಳು ಶೆಕೆಮನಿಗೂ, ಅವನ ತಂದೆ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಏಕೆಂದರೆ ಅವನು ತಮ್ಮ ತಂಗಿ ದೀನಳನ್ನು ಕೆಡಿಸಿದ್ದನು. \v 14 ಯಾಕೋಬನ ಮಕ್ಕಳು ಅವರಿಗೆ, “ನಾವು ಈ ಕಾರ್ಯವನ್ನು ಮಾಡಲಾರೆವು. ಸುನ್ನತಿ ಇಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು. ಅದು ನಮಗೆ ಅವಮಾನ. \v 15 ಆದರೆ ನೀವು ನಮ್ಮ ಹಾಗಿದ್ದು, ನಿಮ್ಮಲ್ಲಿರುವ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಂಡರೆ ಮಾತ್ರ ನಾವು ನಿಮಗೆ ಒಪ್ಪುವೆವು. \v 16 ನಮ್ಮ ಪುತ್ರಿಯರನ್ನು ನಿಮಗೆ ಕೊಟ್ಟು, ನಿಮ್ಮ ಪುತ್ರಿಯರನ್ನು ತೆಗೆದುಕೊಳ್ಳುವೆವು. ಇದಲ್ಲದೆ ನಾವು ನಿಮ್ಮೊಂದಿಗೆ ವಾಸಮಾಡಿ, ಒಂದೇ ಜನಾಂಗವಾಗುವೆವು. \v 17 ಆದರೆ ನೀವು ನಮ್ಮ ಮಾತನ್ನು ಕೇಳದೆ, ಸುನ್ನತಿ ಮಾಡಿಸಿಕೊಳ್ಳದೆ ಹೋದರೆ, ನಮ್ಮ ಹುಡುಗಿಯನ್ನು ನಾವು ಕರೆದುಕೊಂಡು ಹೋಗಿಬಿಡುತ್ತೇವೆ,” ಎಂದು ಹೇಳಿದರು. \p \v 18 ಅವರ ಮಾತುಗಳು ಹಮೋರನಿಗೂ, ಅವನ ಮಗ ಶೆಕೆಮನಿಗೂ ಯೋಗ್ಯವಾಗಿ ಕಂಡವು. \v 19 ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ, ಆ ಕಾರ್ಯವನ್ನು ಮಾಡುವುದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು. \v 20 ಆಗ ಹಮೋರನೂ, ಅವನ ಮಗ ಶೆಕೆಮನೂ ತಮ್ಮ ಪಟ್ಟಣ ದ್ವಾರದ ಬಳಿಗೆ ಬಂದು, ತಮ್ಮ ಪಟ್ಟಣದ ಜನರ ಸಂಗಡ ಮಾತನಾಡಿ ಅವರಿಗೆ, \v 21 “ಈ ಜನರು ನಮ್ಮ ಸಂಗಡ ಸಮಾಧಾನವಾಗಿದ್ದಾರೆ, ಆದ್ದರಿಂದ ಅವರು ದೇಶದಲ್ಲಿ ವಾಸಮಾಡಿ, ಅದರಲ್ಲಿ ವ್ಯಾಪಾರಮಾಡಲಿ. ದೇಶವು ಅವರಿಗಾಗಿ ಸಾಕಷ್ಟು ವಿಸ್ತಾರವಾಗಿದೆ. ಅವರ ಪುತ್ರಿಯರನ್ನು ನಮಗೆ ಹೆಂಡತಿಯರನ್ನಾಗಿ ಮಾಡಿಕೊಳ್ಳೋಣ ಮತ್ತು ನಮ್ಮ ಪುತ್ರಿಯರನ್ನು ಅವರಿಗೆ ಕೊಡೋಣ. \v 22 ಸುನ್ನತಿ ಮಾಡಿಸಿಕೊಂಡರೆ ಮಾತ್ರ ಅವರು ನಮ್ಮ ಸಂಗಡ ವಾಸಮಾಡುವುದಕ್ಕೂ, ಒಂದೇ ಜನಾಂಗವಾಗುವುದಕ್ಕೂ ಒಪ್ಪುವರು. \v 23 ಅವರ ಮಂದೆಗಳೂ, ಅವರ ಸಂಪತ್ತೂ, ಅವರ ಎಲ್ಲಾ ಪಶುಗಳೂ ನಮ್ಮದಾಗುವುವು ಅಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ, ಅವರು ನಮ್ಮ ಸಂಗಡ ವಾಸಿಸುವರು,” ಎಂದರು. \p \v 24 ಆಗ ಪಟ್ಟಣದ ದ್ವಾರದಲ್ಲಿ ಹೋಗುವ ಗಂಡಸರೆಲ್ಲರೂ ಹಮೋರನೂ, ಅವನ ಮಗ ಶೆಕೆಮನೂ ಹೇಳಿದ ಮಾತುಗಳನ್ನು ಕೇಳಿ, ಒಪ್ಪಿಕೊಂಡರು. ಹೀಗೆ ಪಟ್ಟಣದಲ್ಲಿದ್ದ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಂಡರು. \p \v 25 ಮೂರನೆಯ ದಿನದಲ್ಲಿ ಅವರಿಗೆ ನೋವುಂಟಾದಾಗ, ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ, ದೀನಳ ಸಹೋದರರಾದ ಸಿಮೆಯೋನನೂ, ಲೇವಿಯೂ ತಮ್ಮ ತಮ್ಮ ಖಡ್ಗಗಳನ್ನು ತೆಗೆದುಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು, ಗಂಡಸರನ್ನೆಲ್ಲಾ ಕೊಂದುಹಾಕಿದರು. \v 26 ಹಮೋರನನ್ನೂ, ಅವನ ಮಗನಾದ ಶೆಕೆಮನನ್ನೂ ಅವರು ಖಡ್ಗದಿಂದ ಕೊಂದುಹಾಕಿ, ದೀನಳನ್ನು ಶೆಕೆಮನ ಮನೆಯಿಂದ ಕರೆದುಕೊಂಡು ಹೊರಗೆ ಹೋದರು. \v 27 ಅವರು ತಮ್ಮ ಸಹೋದರಿಯನ್ನು ಕೆಡಿಸಿದ್ದರಿಂದ ಯಾಕೋಬನ ಮಕ್ಕಳು ಬಂದು ಆ ಊರನ್ನೇ ಕೊಳ್ಳೆಹೊಡೆದರು. \v 28 ಪಟ್ಟಣದಲ್ಲಿಯೂ, ಹೊಲದಲ್ಲಿಯೂ ಇದ್ದ ಅವರ ಕುರಿ, ದನ, ಕತ್ತೆಗಳನ್ನು ತೆಗೆದುಕೊಂಡರು. \v 29 ಅವರ ಎಲ್ಲಾ ಆಸ್ತಿಯನ್ನೂ, ಅವರ ಎಲ್ಲಾ ಚಿಕ್ಕ ಮಕ್ಕಳನ್ನೂ, ಅವರ ಹೆಂಡತಿಯರನ್ನೂ ಸೆರೆಹಿಡಿದು, ಮನೆಯಲ್ಲಿ ಇದ್ದದ್ದೆಲ್ಲವನ್ನೂ ಅವರು ಕೊಳ್ಳೆಹೊಡೆದರು. \p \v 30 ಆಗ ಯಾಕೋಬನು ಸಿಮೆಯೋನನಿಗೂ, ಲೇವಿಗೂ, “ನೀವು ನನ್ನನ್ನು ಈ ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ಅಸಹ್ಯವಾಗುವಂತೆ ಮಾಡಿ, ನನ್ನನ್ನು ಕಳವಳಪಡಿಸಿದಿರಿ. ನಾವು ಸ್ವಲ್ಪ ಜನರು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ದಾಳಿಮಾಡುವರು. ಆಗ ನಾನೂ, ನನ್ನ ಮನೆಯವರೂ ನಾಶವಾಗುವೆವು,” ಎಂದನು. \p \v 31 ಆದರೆ ಅವರು, “ಅವನು ನಮ್ಮ ತಂಗಿಯನ್ನು ವೇಶ್ಯೆಯಂತೆ ನಡೆಸಬಹುದೋ?” ಎಂದರು. \c 35 \s1 ಯಾಕೋಬನು ಮತ್ತೆ ಬೇತೇಲಿಗೆ ಬಂದದ್ದು \p \v 1 ದೇವರು ಯಾಕೋಬನಿಗೆ, “ನೀನು ಇಲ್ಲಿಂದ ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು, ನಿನ್ನ ಸಹೋದರ ಏಸಾವನ ಎದುರಿನಿಂದ ಓಡಿ ಹೋಗುತ್ತಿದ್ದಾಗ, ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟು,” ಎಂದರು. \p \v 2 ಆಗ ಯಾಕೋಬನು ತನ್ನ ಮನೆಯವರಿಗೂ, ತನ್ನ ಸಂಗಡ ಇದ್ದವರೆಲ್ಲರಿಗೂ, “ನಿಮ್ಮ ಮಧ್ಯದಲ್ಲಿರುವ ಅನ್ಯದೇವರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ, ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ. \v 3 ನಾವು ಇಲ್ಲಿಂದ ಹೊರಟು ಬೇತೇಲಿಗೆ ಹೋಗೋಣ. ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಆಲಿಸಿ, ನಾನು ಹೋದ ದಾರಿಯಲ್ಲಿ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ನಾನು ಬಲಿಪೀಠವನ್ನು ಕಟ್ಟುವೆನು,” ಎಂದನು. \v 4 ಆಗ ಅವರು ತಮ್ಮ ಬಳಿಯಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ, ತಮ್ಮ ಕಿವಿಗಳಲ್ಲಿದ್ದ ಮುರುವುಗಳನ್ನೂ ತೆಗೆದು, ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮ್ ಊರಿಗೆ ಸಮೀಪವಾಗಿದ್ದ ಏಲಾ ಮರದ ಕೆಳಗೆ ಹೂಳಿಟ್ಟರು. \v 5 ತರುವಾಯ ಅವರು ಮುಂದೆ ಪ್ರಯಾಣಮಾಡಿದರು. ಆಗ ಸುತ್ತಲಿರುವ ಪಟ್ಟಣಗಳವರ ಮೇಲೆ ದೇವರ ಭಯವು ಇದ್ದುದರಿಂದ, ಅವರು ಯಾಕೋಬನ ಮಕ್ಕಳನ್ನು ಬೆನ್ನಟ್ಟಿ ಬರಲಿಲ್ಲ. \p \v 6 ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನರಸಹಿತವಾಗಿ ಕಾನಾನ್ ದೇಶದಲ್ಲಿರುವ ಬೇತೇಲ್ ಎಂಬ ಲೂಜಿಗೆ ಬಂದನು. \v 7 ಅಲ್ಲಿ ಅವನು ಬಲಿಪೀಠವನ್ನು ಕಟ್ಟಿ, ತಾನು ತನ್ನ ಸಹೋದರನ ಬಳಿಯಿಂದ ಓಡಿಹೋದಾಗ, ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್ ಬೇತೇಲ್\f + \fr 35:7 \fr*\fq ಏಲ್ ಬೇತೇಲ್ \fq*\ft ಎಂದರೆ \ft*\fqa ಬೇತೇಲಿನ ದೇವರು\fqa*\f* ಎಂದು ಹೆಸರಿಟ್ಟನು. \p \v 8 ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಮರಣಹೊಂದಿದಳು. ಬೇತೇಲಿನ ಕೆಳಗಿದ್ದ ಏಲಾ ಮರದ ಬುಡದಲ್ಲಿ ಆಕೆಯನ್ನು ಹೂಳಿಟ್ಟರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್\f + \fr 35:8 \fr*\fq ಅಲ್ಲೋನ್ ಬಾಕೂತ್ \fq*\ft ಎಂದರೆ \ft*\fqa ಅಳುತ್ತಿರುವ ಮರ\fqa*\f* ಎಂದು ಹೆಸರಾಯಿತು. \p \v 9 ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ, ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ, ಅವನನ್ನು ಆಶೀರ್ವದಿಸಿದರು. \v 10 ದೇವರು ಅವನಿಗೆ, “ಈಗ ನಿನಗೆ ಯಾಕೋಬನೆಂದು ಹೆಸರಿರುವುದು. ಆದರೆ ಇನ್ನು ಮೇಲೆ ನೀನು ಯಾಕೋಬನೆಂದು ಕರೆಸಿಕೊಳ್ಳದೆ, ‘ಇಸ್ರಾಯೇಲ್,’ ಎಂದು ಕರೆಸಿಕೊಳ್ಳುವೆ,” ಎಂದು ಹೇಳಿ, ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟರು. \p \v 11 ದೇವರು ಅವನಿಗೆ, “ಸರ್ವಶಕ್ತ ದೇವರು ನಾನೇ. ನೀನು ಅಭಿವೃದ್ಧಿಯಾಗಿ, ನಿನ್ನ ಸಂತಾನವು ಹೆಚ್ಚಲಿ. ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವುವು. ಅರಸರು ನಿನ್ನಿಂದ ಹುಟ್ಟುವರು. \v 12 ಇದಲ್ಲದೆ ಅಬ್ರಹಾಮನಿಗೂ, ಇಸಾಕನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಈ ದೇಶವನ್ನು ಕೊಡುವೆನು,” ಎಂದರು. \v 13 ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಮೇಲಕ್ಕೇರಿ ಹೋದರು. \p \v 14 ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ, ಆ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ, ಪಾನಾರ್ಪಣೆ ಮಾಡಿ, ಅದರ ಮೇಲೆ ಎಣ್ಣೆಯನ್ನು ಹೊಯ್ದನು. \v 15 ದೇವರು ತನ್ನ ಸಂಗಡ ಮಾತನಾಡಿದ ಸ್ಥಳಕ್ಕೆ ಯಾಕೋಬನು ಬೇತೇಲ್ ಎಂದು ಹೆಸರಿಟ್ಟನು. \s1 ರಾಹೇಲ ಮತ್ತು ಯಾಕೋಬರ ನಿಧನ \p \v 16 ಬೇತೇಲಿನಿಂದ ಅವರು ಪ್ರಯಾಣಮಾಡಿ, ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ, ರಾಹೇಲಳು ಪ್ರಸವವೇದನೆಯಿಂದ ಕಷ್ಟಪಟ್ಟಳು. \v 17 ಹೆರುವುದರಲ್ಲಿ ಆಕೆಯು ಕಷ್ಟಪಡುತ್ತಿದ್ದಾಗ, ಸೂಲಗಿತ್ತಿಯು ಅವಳಿಗೆ, “ನೀನು ಭಯಪಡಬೇಡ, ಈ ಮಗನನ್ನು ಸಹ ನೀನು ಪಡೆಯುವೆ,” ಎಂದಳು. \v 18 ಆದರೆ ರಾಹೇಲಳು ಸತ್ತುಹೋದಳು. ಅವಳು ಪ್ರಾಣಬಿಡುವಾಗ, ಮಗನಿಗೆ ಬೆನೋನಿ\f + \fr 35:18 \fr*\fq ಬೆನೋನಿ \fq*\ft ಎಂದರೆ \ft*\fqa ನನ್ನ ತೊಂದರೆಯ ಮಗ\fqa*\f* ಎಂದು ಹೆಸರಿಟ್ಟಳು, ಆದರೆ ಅವನ ತಂದೆ ಅವನಿಗೆ ಬೆನ್ಯಾಮೀನ್ ಎಂದು ಹೆಸರಿಟ್ಟನು. \p \v 19 ಸತ್ತು ಹೋದ ರಾಹೇಲಳನ್ನು ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಹೂಳಿಟ್ಟರು. \v 20 ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ. \p \v 21 ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರಿನ ಆಚೆ ತನ್ನ ಗುಡಾರವನ್ನು ಹಾಕಿದನು. \v 22 ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ, ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿ ಬಿಲ್ಹಳ ಸಂಗಡ ಮಲಗಿದನು. ಈ ವಿಷಯ ಇಸ್ರಾಯೇಲನಿಗೆ ತಿಳಿಯಿತು. \b \li4 ಯಾಕೋಬನಿಗೆ ಹನ್ನೆರಡು ಮಂದಿ ಪುತ್ರರು ಇದ್ದರು. \b \li1 \v 23 ಅವರಲ್ಲಿ ಲೇಯಳ ಪುತ್ರರು: \li2 ಯಾಕೋಬನ ಚೊಚ್ಚಲ ಮಗ ರೂಬೇನ್, \li2 ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್. \li1 \v 24 ರಾಹೇಲಳ ಪುತ್ರರು: \li2 ಯೋಸೇಫ್ ಮತ್ತು ಬೆನ್ಯಾಮೀನ್. \li1 \v 25 ರಾಹೇಲಳ ದಾಸಿ ಬಿಲ್ಹಳ ಪುತ್ರರು: \li2 ದಾನ್, ನಫ್ತಾಲಿ. \li1 \v 26 ಲೇಯಳ ದಾಸಿ ಜಿಲ್ಪಳ ಪುತ್ರರು: \li2 ಗಾದ್ ಮತ್ತು ಆಶೇರ್. \b \li4 ಇವರೇ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹುಟ್ಟಿದ ಮಕ್ಕಳು. \b \p \v 27 ಯಾಕೋಬನು ಮಮ್ರೆಯಲ್ಲಿದ್ದ ತನ್ನ ತಂದೆ ಇಸಾಕನ ಬಳಿಗೆ ಅಬ್ರಹಾಮನೂ, ಇಸಾಕನೂ ಪ್ರವಾಸಿಗರಾಗಿ ವಾಸವಾಗಿದ್ದ ಹೆಬ್ರೋನ್ ಎಂಬ ಕಿರ್ಯತ್ ಅರ್ಬ ಪಟ್ಟಣಕ್ಕೆ ಬಂದನು. \v 28 ಆಗ ಇಸಾಕನು ನೂರ ಎಂಬತ್ತು ವರ್ಷದವನಾಗಿದ್ದನು. \v 29 ಇಸಾಕನು ಮುದುಕನಾಗಿಯೂ, ತುಂಬಾ ಆಯುಷ್ಯವುಳ್ಳವನಾಗಿಯೂ ಮರಣಹೊಂದಿ ತನ್ನ ಪಿತೃಗಳೊಂದಿಗೆ ಸೇರಿದನು. ಅವನ ಮಕ್ಕಳಾದ ಏಸಾವನೂ, ಯಾಕೋಬನೂ ಅವನನ್ನು ಸಮಾಧಿಮಾಡಿದರು. \c 36 \s1 ಏಸಾವನ ವಂಶಸ್ಥರು \p \v 1 ಎದೋಮ್ ಎಂಬ ಏಸಾವನ ವಂಶಾವಳಿ ಇದು: \b \p \v 2 ಏಸಾವನು ಕಾನಾನ್ಯರ ಪುತ್ರಿಯರನ್ನು ಅಂದರೆ, ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ, \v 3 ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋದರಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು. \p \v 4 ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಯೂವೇಲನನ್ನು ಹೆತ್ತಳು. \v 5 ಒಹೊಲೀಬಾಮಳು ಯೆಯೂಷನನ್ನು, ಯಳಾಮನನ್ನು, ಕೋರಹ ಇವರನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಪುತ್ರರು. \p \v 6 ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಪುತ್ರಪುತ್ರಿಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು, ತನ್ನ ಸಹೋದರನಾದ ಯಾಕೋಬನ ಬಳಿಯಿಂದ ಸ್ವಲ್ಪ ದೂರವಿದ್ದ ಮತ್ತೊಂದು ಊರಿಗೆ ಹೋದನು. \v 7 ಏಕೆಂದರೆ ಅವರ ಸಂಪತ್ತು ಅವರು ಕೂಡಿ ಇರುವುದಕ್ಕೆ ಆಗದಷ್ಟು ಅಭಿವೃದ್ಧಿಯಾಗಿತ್ತು. ಅವರ ಪಶುಪ್ರಾಣಿಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು. \v 8 ಹೀಗೆ ಎದೋಮನು ಎಂಬ ಏಸಾವನು ಸೇಯೀರ್ ಪರ್ವತದಲ್ಲಿ ವಾಸವಾಗಿದ್ದನು. \b \li4 \v 9 ಸೇಯೀರ್ ಪರ್ವತದಲ್ಲಿರುವ ಎದೋಮ್ಯರ ತಂದೆ ಏಸಾವನ ವಂಶಾವಳಿಗಳು ಇವೇ: \b \li1 \v 10 ಏಸಾವನ ಪುತ್ರರ ಹೆಸರುಗಳು ಯಾವುವೆಂದರೆ: \li2 ಏಸಾವನ ಹೆಂಡತಿಯಾಗಿರುವ ಆದಾ ಎಂಬಾಕೆಯ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿ ಬಾಸೆಮತಳ ಮಗ ರೆಯೂವೇಲನು. \li1 \v 11 ಎಲೀಫಜನ ಮಕ್ಕಳು ಯಾರೆಂದರೆ: \li2 ತೇಮಾನ್, ಓಮಾರ್, ಚೆಫೋ, ಗತಾಮ್, ಕೆನಜ್. \v 12 ತಿಮ್ನಾಳು ಏಸಾವನ ಮಗ ಎಲೀಫಜನಿಗೆ ಉಪಪತ್ನಿಯಾಗಿದ್ದು, ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾ ಎಂಬಾಕೆಯ ಪುತ್ರರು ಇವರೇ. \li1 \v 13 ರೆಯೂವೇಲನ ಮಕ್ಕಳು ಯಾರೆಂದರೆ: \li2 ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ, ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು. \li1 \v 14 ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀಬಾಮಳ ಪುತ್ರರು ಯಾರೆಂದರೆ: ಆಕೆಯು ಏಸಾವನಿಗೆ \li2 ಯೆಯೂಷ್, ಯಳಾಮ್ ಹಾಗೂ ಕೋರಹ ಇವರನ್ನು ಹೆತ್ತಳು. \b \li4 \v 15 ಏಸಾವನ ಪುತ್ರರ ಮುಖಂಡರು ಯಾರೆಂದರೆ: \li1 ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ \li2 ತೇಮಾನ್, ಓಮಾರ್, ಚೆಫೋ, ಕೆನಜ್, \v 16 ಕೋರಹ, ಗತಾಮ್, ಅಮಾಲೇಕ್, ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾ ಎಂಬಾಕೆಯ ಮೊಮ್ಮಕ್ಕಳು. \li1 \v 17 ಏಸಾವನ ಮಗ ರೆಯೂವೇಲನ ಪುತ್ರರು ಯಾರೆಂದರೆ: \li2 ನಹತ್, ಜೆರಹ, ಶಮ್ಮಾ ಹಾಗೂ ಮಿಜ್ಜಾ; ಎದೋಮ್ ದೇಶದಲ್ಲಿದ್ದ ರೆವುಯೇಲನಿಂದ ಬಂದ ಮುಖಂಡರು ಇವರೇ. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು. \li1 \v 18 ಏಸಾವನ ಹೆಂಡತಿ ಒಹೊಲೀಬಾಮಳ ಪುತ್ರರು ಯಾರೆಂದರೆ: \li2 ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ. ಇವರು ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳಿಂದ ಬಂದ ಮುಖಂಡರು. \li4 \v 19 ಇವರು ಎದೋಮ್ ಎಂಬ ಏಸಾವನ ಪುತ್ರರು. ಇವರು ಮುಖಂಡರಾಗಿದ್ದರು. \b \li1 \v 20 ದೇಶದಲ್ಲಿ ವಾಸಿಸುತ್ತಿದ್ದ ಹೋರಿಯನಾದ ಸೇಯೀರನ ಪುತ್ರರು ಯಾರೆಂದರೆ: \li2 ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, \v 21 ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯೀರನ ಮಕ್ಕಳಾದ ಹೋರಿಯರ ಮುಖಂಡರು. \li1 \v 22 ಲೋಟಾನನ ಪುತ್ರರು ಯಾರೆಂದರೆ: \li2 ಹೋರಿ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನಾ ಎಂಬ ಸಹೋದರಿ ಇದ್ದಳು. \li1 \v 23 ಶೋಬಾಲನ ಮಕ್ಕಳು ಯಾರೆಂದರೆ: \li2 ಅಲ್ವಾನ್, ಮಾನಹತ್, ಏಬಾಲ್, ಶೆಫೋ ಮತ್ತು ಓನಾಮ್. \li1 \v 24 ಸಿಬೆಯೋನನ ಮಕ್ಕಳು: \li2 ಅಯ್ಯಾಹ ಮತ್ತು ಅನಾಹ ಎಂಬುವರು. ತನ್ನ ತಂದೆ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಕಾಡಿನಲ್ಲಿ ಬಿಸಿನೀರಿನ ಒರತೆಗಳನ್ನು ಕಂಡುಕೊಂಡವನೂ ಅರಣ್ಯದಲ್ಲಿ ಹೇಸರಗತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ. \li1 \v 25 ಅನಾಹನ ಮಕ್ಕಳು ಯಾರೆಂದರೆ: \li2 ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು. \li1 \v 26 ದೀಶೋನನ ಮಕ್ಕಳು ಯಾರೆಂದರೆ: \li2 ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್. \li1 \v 27 ಏಚೆರನ ಮಕ್ಕಳು ಯಾರೆಂದರೆ: \li2 ಬಿಲ್ಹಾನ್, ಜಾವಾನ್ ಮತ್ತು ಆಕಾನ್. \li1 \v 28 ದೀಶಾನನ ಮಕ್ಕಳು ಯಾರೆಂದರೆ: \li2 ಊಚ್ ಮತ್ತು ಅರಾನ್. \li1 \v 29 ಹೋರಿಯರಿಂದ ಬಂದ ಮುಖಂಡರು ಯಾರೆಂದರೆ: \li2 ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, \v 30 ದೀಶೋನ್, ಏಚೆರ್, ದೀಶಾನ್. \li4 ಹೋರಿಯರಿಂದ ಹುಟ್ಟಿದ ಸೇಯೀರ್ ದೇಶದಲ್ಲಿ ಮುಖಂಡರು ಇವರೇ. \s1 ಎದೋಮಿನ ಅರಸರು \li4 \v 31 ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ. \li1 \v 32 ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ. \li1 \v 33 ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು. \li1 \v 34 ಯೋಬಾಬನ ಮರಣದ ನಂತರ ಅವನ ಬದಲಾಗಿ ತೇಮಾನೀಯರ ದೇಶದ ಹುಷಾಮನು ಅರಸನಾದನು. \li1 \v 35 ಹುಷಾಮನ ಮರಣದ ನಂತರ ಅವೀತದ ಬೆದದನ ಮಗ ಹದದ ಅರಸನಾದನು. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್. \li1 \v 36 ಹದದ ಮೃತನಾದ ಮೇಲೆ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಅರಸನಾದನು. \li1 \v 37 ಸಮ್ಲಾಹನ ಮರಣದ ನಂತರ ಅವನ ಬದಲಾಗಿ ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು. \li1 \v 38 ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ ಹಾನಾನ್ ಅರಸನಾದನು. \li1 \v 39 ಅಕ್ಬೋರನ ಮಗ ಬಾಳ್ ಹಾನಾನನು ಮೃತನಾದ ಮೇಲೆ ಅವನ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾವು. ಅವನ ಹೆಂಡತಿಯ ಹೆಸರು ಮೆಹೇಟಬೇಲ್. ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು. \b \li4 \v 40 ಕುಟುಂಬ, ಸ್ಥಳ, ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವುವೆಂದರೆ: \li1 ತಿಮ್ನಾ, ಅಲ್ವಾ, ಯೆತೇತ, \li1 \v 41 ಒಹೊಲೀಬಾಮ, ಏಲಾ, ಪೀನೋನ್, \li1 \v 42 ಕೆನಜ್, ತೇಮಾನ್, ಮಿಬ್ಜಾರ, \li1 \v 43 ಮಗ್ದೀಯೇಲ್ ಮತ್ತು ಗೀರಾಮ್ \li4 ಇವರೇ ತಮ್ಮ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಮುಖಂಡರು. \b \li4 ಎದೋಮ್ಯರ ತಂದೆ ಏಸಾವನು ವಂಶಾವಳಿ ಇದೇ. \c 37 \s1 ಯೋಸೇಫನ ಕನಸುಗಳು \p \v 1 ಯಾಕೋಬನು ತನ್ನ ತಂದೆ ಪ್ರವಾಸಿಯಾಗಿದ್ದ ಕಾನಾನ್ ದೇಶದಲ್ಲಿ ವಾಸವಾಗಿದ್ದನು. \b \p \v 2 ಇದು ಯಾಕೋಬನ ವಂಶದವರ ಚರಿತ್ರೆ: \b \p ಯೋಸೇಫನು ಹದಿನೇಳು ವರ್ಷದವನಾಗಿದ್ದಾಗ, ತನ್ನ ಸಹೋದರರ ಸಂಗಡ ಅಂದರೆ, ತನ್ನ ತಂದೆಯ ಹೆಂಡತಿಯರಾಗಿದ್ದ ಬಿಲ್ಹಳ ಮತ್ತು ಜಿಲ್ಪಳ ಮಕ್ಕಳ ಸಂಗಡ ಕುರಿಮಂದೆಗಳನ್ನು ಕಾಯುತ್ತಿದ್ದನು. ಯೋಸೇಫನು ಅವರ ಕೆಟ್ಟತನದ ಸುದ್ದಿಯನ್ನು ತನ್ನ ತಂದೆಗೆ ತಿಳಿಸುತ್ತಿದ್ದನು. \p \v 3 ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನ ವಯಸ್ಸಿನಲ್ಲಿ ಹುಟ್ಟಿದ ಮಗನಾಗಿದ್ದುದರಿಂದ ಅವನು ತನ್ನ ಎಲ್ಲಾ ಮಕ್ಕಳಿಗಿಂತ ಅವನನ್ನು ಹೆಚ್ಚು ಪ್ರೀತಿಮಾಡಿ, ಅವನಿಗೆ ಅನೇಕ ಬಣ್ಣಗಳ ಅಂಗಿಯನ್ನು ಹೊಲಿಸಿಕೊಟ್ಟನು. \v 4 ತಮ್ಮ ತಂದೆಯು ಅವನನ್ನು ಎಲ್ಲಾ ಸಹೋದರರಿಗಿಂತ ಹೆಚ್ಚು ಪ್ರೀತಿಮಾಡುತ್ತಿರುವುದನ್ನು ಅವನ ಸಹೋದರರು ಕಂಡು, ಅವನನ್ನು ದ್ವೇಷಿಸಿ, ಅವನ ಸಂಗಡ ಸಮಾಧಾನದಿಂದ ಮಾತಾಡದೆಹೋದರು. \p \v 5 ಯೋಸೇಫನು ಒಂದು ಕನಸನ್ನು ಕಂಡು ತನ್ನ ಸಹೋದರರಿಗೆ ತಿಳಿಸಿದಾಗ, ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು. \v 6 ಅವನು ಅವರಿಗೆ, “ನಾನು ಕಂಡ ಈ ಕನಸನ್ನು ಹೇಳುತ್ತೇನೆ ಕೇಳಿರಿ. \v 7 ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು. ನನ್ನ ಸಿವುಡು ಎದ್ದುನಿಂತಿತು. ಆಗ ನಿಮ್ಮ ಸಿವುಡುಗಳು ತಿರುಗಿ ನನ್ನ ಸಿವುಡಿಗೆ ಅಡ್ಡಬಿದ್ದವು,” ಎಂದನು. \p \v 8 ಆಗ ಅವನ ಸಹೋದರರು ಅವನಿಗೆ, “ನೀನು ನಮ್ಮನ್ನು ನಿಶ್ಚಯವಾಗಿಯೂ ಆಳುವೆಯೋ? ನಿಜವಾಗಿ ನಮ್ಮ ಮೇಲೆ ದೊರೆತನ ಮಾಡುವಿಯೋ?” ಎಂದು ಹೇಳಿ, ಅವನ ಕನಸು ಮತ್ತು ಅವನ ಮಾತುಗಳಿಗೆ ಅವನನ್ನು ಮತ್ತಷ್ಟೂ ದ್ವೇಷಿಸಿದರು. \p \v 9 ಇದಲ್ಲದೆ ಅವನು ಇನ್ನೊಂದು ಕನಸನ್ನು ಕಂಡು ತನ್ನ ಸಹೋದರರಿಗೆ, “ಇನ್ನೊಂದು ಕನಸನ್ನು ಕಂಡಿದ್ದೇನೆ. ಸೂರ್ಯನೂ ಚಂದ್ರನೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು,” ಎಂದನು. \p \v 10 ಅವನು ತನ್ನ ತಂದೆಗೂ ತನ್ನ ಸಹೋದರರಿಗೂ ತಿಳಿಸಿದಾಗ, ಅವನ ತಂದೆಯು ಅವನನ್ನು ಗದರಿಸಿ, “ನೀನು ಕಂಡ ಈ ಕನಸು ಏನು? ನಾನು, ನಿನ್ನ ತಾಯಿ, ನಿನ್ನ ಸಹೋದರರೂ ನಿಜವಾಗಿ ನಿನ್ನ ಮುಂದೆ ಅಡ್ಡ ಬೀಳುವುದಕ್ಕೆ ಬರಬೇಕೋ?” ಎಂದನು. \v 11 ಹೀಗೆ ಅವನ ಸಹೋದರರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ಅವನ ತಂದೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡನು. \s1 ಯೋಸೇಫನನ್ನು ಮಾರಾಟ ಮಾಡಿದ್ದು \p \v 12 ಅವನ ಸಹೋದರರು ಶೆಕೆಮಿನಲ್ಲಿ ತಮ್ಮ ತಂದೆಯ ಮಂದೆಯನ್ನು ಮೇಯಿಸುವುದಕ್ಕೆ ಹೋದರು. \v 13 ಆದ್ದರಿಂದ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಸಹೋದರರು ಶೆಕೆಮಿನಲ್ಲಿ ಮಂದೆಯನ್ನು ಮೇಯಿಸುತ್ತಾರಲ್ಲಾ. ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಹೋಗು,” ಎಂದನು. \p ಅದಕ್ಕೆ ಅವನು, “ಆಗಲಿ ಹೋಗುತ್ತೇನೆ,” ಎಂದನು. \p \v 14 ಯಾಕೋಬನು ಅವನಿಗೆ, “ಹೋಗಿ ನಿನ್ನ ಸಹೋದರರ ಕ್ಷೇಮಸಮಾಚಾರವನ್ನೂ, ಮಂದೆಗಳ ಕ್ಷೇಮಸಮಾಚಾರವನ್ನೂ ತಿಳಿದುಕೊಂಡು ಬಂದು ನನಗೆ ತಿಳಿಸು,” ಎಂದು ಹೇಳಿ ಹೆಬ್ರೋನ್ ಕಣಿವೆಯಿಂದ ಕಳುಹಿಸಿದನು. \p ಯೋಸೇಫನು ಶೆಕೆಮಿಗೆ ಬಂದಾಗ, \v 15 ಒಬ್ಬಾನೊಬ್ಬ ಮನುಷ್ಯನು ಯೋಸೇಫನು ಹೊಲದಲ್ಲಿ ಅಲೆದಾಡುವುದನ್ನು ಕಂಡು ಅವನಿಗೆ, “ನೀನು ಏನು ಹುಡುಕುತ್ತಿದ್ದೀ?” ಎಂದು ಕೇಳಿದನು. \p \v 16 ಅದಕ್ಕೆ ಅವನು, “ನನ್ನ ಸಹೋದರರನ್ನು ಹುಡುಕುತ್ತಿದ್ದೇನೆ, ಅವರು ತಮ್ಮ ಮಂದೆಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆಂದು ದಯವಿಟ್ಟು ನನಗೆ ಹೇಳು,” ಎಂದನು. \p \v 17 ಆ ಮನುಷ್ಯನು, “ಅವರು ಇಲ್ಲಿಂದ ಹೊರಟು ಹೋದರು. ಅವರು, ‘ನಾವು ದೋತಾನಿಗೆ ಹೋಗೋಣ,’ ಎಂದು ಮಾತಾಡುವದನ್ನು ನಾನು ಕೇಳಿಸಿಕೊಂಡೆ,” ಎಂದನು. \p ಆಗ ಯೋಸೇಫನು ತನ್ನ ಸಹೋದರರನ್ನು ಹುಡುಕಿಕೊಂಡು ಹೋಗಿ ದೋತಾನಿನಲ್ಲಿ ಅವರನ್ನು ಕಂಡುಕೊಂಡನು. \v 18 ಅವರು ದೂರದಿಂದ ಅವನನ್ನು ನೋಡಿದಾಗ, ಅವನು ಸಮೀಪಕ್ಕೆ ಬರುವ ಮುಂಚೆಯೇ ಅವನನ್ನು ಕೊಂದುಹಾಕಬೇಕೆಂದು ಅವನಿಗೆ ವಿರೋಧವಾಗಿ ಒಳಸಂಚು ಮಾಡಿಕೊಂಡರು. \p \v 19 ಅವರು, “ಇಗೋ, ಈ ಕನಸುಗಾರ ಬರುತ್ತಿದ್ದಾನೆ, \v 20 ಬನ್ನಿರಿ, ಈಗ ಅವನನ್ನು ಕೊಂದು, ಯಾವುದೋ ಒಂದು ಕಾಡುಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ. ತರುವಾಯ ಅವನ ಕನಸುಗಳು ಏನಾಗುವವೋ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. \p \v 21 ಆದರೆ ರೂಬೇನನು ಅದನ್ನು ಕೇಳಿ, ಅವನನ್ನು ಅವರ ಕೈಗಳಿಂದ ತಪ್ಪಿಸಿ, “ಅವನನ್ನು ಕೊಲ್ಲುವುದು ಬೇಡ,” ಎಂದನು. \v 22 ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ, ತನ್ನ ತಂದೆಯ ಬಳಿಗೆ ತಿರುಗಿ ಕರೆದುಕೊಂಡುಹೋಗುವ ಉದ್ದೇಶದಿಂದ ಅವರಿಗೆ, “ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ಗುಂಡಿಯಲ್ಲಿ ಹಾಕಿರಿ, ಆದರೆ ಅವನ ಮೇಲೆ ಕೈಹಾಕಬೇಡಿರಿ,” ಎಂದನು. \p \v 23 ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ, ಅವರು ಯೋಸೇಫನ ಮೇಲಿದ್ದ ಬಣ್ಣಗಳ ಅಂಗಿಯನ್ನು ತೆಗೆದರು. \v 24 ಅವನನ್ನು ತೆಗೆದುಕೊಂಡು ಗುಂಡಿಯಲ್ಲಿ ಹಾಕಿದರು. ಆ ಗುಂಡಿ ನೀರಿಲ್ಲದೆ ಬರಿದಾಗಿತ್ತು. \p \v 25 ಅವರು ಊಟಕ್ಕೆ ಕುಳಿತುಕೊಂಡಾಗ, ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ, ಸುಗಂಧ ತೈಲ, ರಕ್ತಬೋಳಗಳನ್ನು ಹೊರುತ್ತಿದ್ದವು. ಅವರು ಅವುಗಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು. \p \v 26 ಆಗ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ಸಹೋದರನನ್ನು ಕೊಂದುಹಾಕಿ, ಅವನ ರಕ್ತವನ್ನು ಮರೆಮಾಡುವುದರಲ್ಲಿ ಲಾಭವೇನು? \v 27 ಬನ್ನಿರಿ, ಇಷ್ಮಾಯೇಲರಿಗೆ ಅವನನ್ನು ಮಾರೋಣ. ನಾವು ಅವನ ಮೇಲೆ ಕೈಹಾಕಬಾರದು. ಏಕೆಂದರೆ ಅವನು ನಮ್ಮ ಸಹೋದರನೂ ನಮ್ಮ ದೇಹವೂ ರಕ್ತವೂ ಆಗಿದ್ದಾನೆ,” ಎಂದನು. ಅದಕ್ಕೆ ಅವನ ಸಹೋದರರು ಒಪ್ಪಿದರು. \p \v 28 ಈ ಪ್ರಕಾರ ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ, ಅವರು ಯೋಸೇಫನನ್ನು ಗುಂಡಿಯಿಂದ ಮೇಲೆತ್ತಿ, ಇಷ್ಮಾಯೇಲರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ\f + \fr 37:28 \fr*\ft ಸುಮಾರು 230 ಗ್ರಾಂ\ft*\f* ಮಾರಿದರು. ಅವರು ಯೋಸೇಫನನ್ನು ಈಜಿಪ್ಟಿಗೆ ಕರೆದುಕೊಂಡು ಹೋದರು. \p \v 29 ರೂಬೇನನು ಗುಂಡಿಯ ಬಳಿಗೆ ತಿರುಗಿ ಬಂದಾಗ, ಯೋಸೇಫನು ಗುಂಡಿಯಲ್ಲಿ ಇಲ್ಲದ್ದರಿಂದ, ತನ್ನ ವಸ್ತ್ರಗಳನ್ನು ಹರಿದುಕೊಂಡನು. \v 30 ಅವನು ತನ್ನ ಸಹೋದರರ ಬಳಿಗೆ ತಿರುಗಿ ಹೋಗಿ, “ಬಾಲಕನು ಅಲ್ಲಿ ಇಲ್ಲವಲ್ಲಾ, ನಾನು ಎಲ್ಲಿಗೆ ಹೋಗಲಿ?” ಎಂದನು. \p \v 31 ಆಗ ಅವರು ಯೋಸೇಫನ ಅಂಗಿಯನ್ನು ತೆಗೆದುಕೊಂಡು, ಒಂದು ಹೋತವನ್ನು ಕೊಯ್ದು, ಆ ಅಂಗಿಯನ್ನು ರಕ್ತದಲ್ಲಿ ಅದ್ದಿ, \v 32 ಆ ಬಣ್ಣದ ಅಂಗಿಯನ್ನು ಅವರು ತಮ್ಮ ತಂದೆಯ ಬಳಿಗೆ ತಂದು, “ಇದು ನಮಗೆ ಸಿಕ್ಕಿತು, ಇದು ನಿನ್ನ ಮಗನ ಅಂಗಿಯೋ ಏನೋ ನೋಡು,” ಎಂದು ಹೇಳಿದರು. \p \v 33 ಯಾಕೋಬನು ಅದನ್ನು ಗುರುತು ಹಿಡಿದು, “ಇದು ನನ್ನ ಮಗನ ಅಂಗಿ ಹೌದು, ದುಷ್ಟಮೃಗವು ಅವನನ್ನು ತಿಂದುಬಿಟ್ಟಿತು, ಯೋಸೇಫನನ್ನು ನಿಸ್ಸಂದೇಹವಾಗಿ ಸೀಳಿಹಾಕಿರಬೇಕು,” ಎಂದನು. \p \v 34 ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು. \v 35 ಅವನ ಪುತ್ರಪುತ್ರಿಯರೆಲ್ಲಾ ಅವನನ್ನು ಆದರಿಸಿದರೂ ಅವನು ಆದರಣೆ ಹೊಂದಲೊಲ್ಲದೆ, “ನನ್ನ ಮಗನಿರುವ ಸಮಾಧಿಗೆ ದುಃಖದಿಂದಲೇ ಇಳಿದು ಹೋಗುವೆನು,” ಎಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು. \p \v 36 ಇದರೊಂದಿಗೆ, ಆ ಮಿದ್ಯಾನ್ಯರು ಯೋಸೇಫನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡುಹೋಗಿ ಪೋಟೀಫರನಿಗೆ ಮಾರಿದರು. ಇವನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು. \c 38 \s1 ಯೆಹೂದನು ಮತ್ತು ತಾಮಾರಳು \p \v 1 ಆ ಕಾಲದಲ್ಲಿ ಯೆಹೂದನು ತನ್ನ ಸಹೋದರರ ಬಳಿಯಿಂದ ಹೊರಟು, ಅದುಲ್ಲಾಮೂರಿನವನಾದ ಹೀರಾನ ಬಳಿಗೆ ಹೋದನು. \v 2 ಅಲ್ಲಿ ಯೆಹೂದನು ಕಾನಾನ್ಯನಾದ ಶೂಗನ ಮಗಳನ್ನು ಕಂಡು, ಅವಳನ್ನು ಮದುವೆಯಾಗಿ ಅವಳನ್ನು ಕೂಡಿದನು. \v 3 ಅವಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಯೆಹೂದನು ಅವನಿಗೆ ಏರ್ ಎಂದು ಹೆಸರಿಟ್ಟನು. \v 4 ಆಕೆಯು ತಿರುಗಿ ಗರ್ಭಿಣಿಯಾಗಿ ಮಗನನ್ನು ಹೆತ್ತು, ಅವನಿಗೆ ಓನಾನ್ ಎಂದು ಹೆಸರಿಟ್ಟಳು. \v 5 ಆಕೆಯು ಮತ್ತೊಂದು ಸಾರಿ ಮಗನನ್ನು ಹೆತ್ತು, ಅವನಿಗೆ ಶೇಲಹ ಎಂದು ಹೆಸರಿಟ್ಟಳು. ಆಕೆಯು ಅವನನ್ನು ಹೆತ್ತಾಗ, ಯೆಹೂದನು ಕೆಜೀಬಿನಲ್ಲಿ ಇದ್ದನು. \p \v 6 ಇದಾದ ಮೇಲೆ ಯೆಹೂದನು ತನ್ನ ಜೇಷ್ಠಪುತ್ರ ಏರನಿಗೆ ತಾಮಾರ್ ಎಂಬ ಹೆಣ್ಣನ್ನು ತಂದು ಮದುವೆಮಾಡಿದನು. \v 7 ಆದರೆ ಯೆಹೂದನ ಜೇಷ್ಠಪುತ್ರ ಏರನು ಯೆಹೋವ ದೇವರ ದೃಷ್ಟಿಯಲ್ಲಿ ದುಷ್ಟನಾಗಿದ್ದುದರಿಂದ, ಯೆಹೋವ ದೇವರು ಅವನನ್ನು ಸಾವಿಗೀಡುಮಾಡಿದರು. \p \v 8 ಆಗ ಯೆಹೂದನು ಓನಾನನಿಗೆ, “ನಿನ್ನ ಸಹೋದರನ ಹೆಂಡತಿಯ ಬಳಿಗೆ ಹೋಗಿ, ಅವಳನ್ನು ಮದುವೆಯಾಗಿ, ನಿನ್ನ ಅಣ್ಣನಿಗೆ ಸಂತತಿಯನ್ನು ಉಂಟುಮಾಡು,” ಎಂದನು. \v 9 ಆದರೆ ಓನಾನನು ಆ ಸಂತತಿಯು ತನ್ನದಾಗತಕ್ಕದ್ದಲ್ಲವೆಂದು ತಿಳಿದುಕೊಂಡು, ತನ್ನ ಅಣ್ಣನಿಗೆ ಸಂತತಿಯನ್ನು ಉಂಟು ಮಾಡದ ಹಾಗೆ, ತನ್ನ ವೀರ್ಯವನ್ನು ನೆಲದ ಮೇಲೆ ಚೆಲ್ಲಿದನು. \v 10 ಅವನು ಮಾಡಿದ್ದು ಯೆಹೋವ ದೇವರ ದೃಷ್ಟಿಯಲ್ಲಿ ಮೆಚ್ಚಿಗೆಯಾಗಿರಲಿಲ್ಲ. ಆದ್ದರಿಂದ ಅವರು ಇವನನ್ನೂ ಸಾವಿಗೀಡುಮಾಡಿದರು. \p \v 11 ಆಗ ಯೆಹೂದನು ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ದೊಡ್ಡವನಾಗುವವರೆಗೆ ವಿಧವೆಯಾಗಿದ್ದು, ನಿನ್ನ ತಂದೆಯ ಮನೆಯಲ್ಲಿರು,” ಎಂದನು. ಏಕೆಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳಾದರೋ ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು. \p \v 12 ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ಸತ್ತಳು. ಯೆಹೂದನು ಆದರಣೆ ಹೊಂದಿದ ಮೇಲೆ, ತಾನೂ, ತನ್ನ ಸ್ನೇಹಿತನಾಗಿರುವ ಅದುಲ್ಲಾಮ್ಯನಾದ ಹೀರಾನನೂ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವವರ ಬಳಿಗೆ ತಿಮ್ನಾ ಊರಿಗೆ ಹೋದರು. \p \v 13 ಆಗ ತಾಮಾರಳಿಗೆ, “ನಿನ್ನ ಮಾವನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವುದಕ್ಕೆ ತಿಮ್ನಾ ಊರಿಗೆ ಹೋಗುತ್ತಿದ್ದಾನೆ,” ಎಂದು ತಿಳಿಸಿದಾಗ, \v 14 ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು, ಮುಸುಕುಹಾಕಿ ಮುಚ್ಚಿಕೊಂಡು, ತಿಮ್ನಾ ಊರಿನ ಮಾರ್ಗದಲ್ಲಿರುವ ಏನಯಿಮೂರಿನ ಬಹಿರಂಗ ಸ್ಥಳದಲ್ಲಿ ಕೂತುಕೊಂಡಳು. ಏಕೆಂದರೆ ಶೇಲಹನು ದೊಡ್ಡವನಾಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲವೆಂದು ಹಾಗೆ ಮಾಡಿದಳು. \p \v 15 ಯೆಹೂದನು ಅವಳನ್ನು ಕಂಡಾಗ, ಅವಳು ಮುಖ ಮುಚ್ಚಿಕೊಂಡಿದ್ದರಿಂದ ಅವಳು ವೇಶ್ಯೆಯೆಂದು ತಿಳಿದುಕೊಂಡನು. \v 16 ಮಾರ್ಗದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು, “ನನ್ನನ್ನು ನಿನ್ನ ಬಳಿಗೆ ಬರಗೊಡಿಸು,” ಎಂದನು. ಏಕೆಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ. \p ಅವಳು, “ನೀನು ನನ್ನ ಬಳಿಗೆ ಬಂದರೆ, ನನಗೆ ಏನು ಕೊಡುವೆ?” ಎಂದಳು. \p \v 17 ಅವನು, “ಮಂದೆಯಿಂದ ನಿನಗೆ ಮೇಕೆಯ ಮರಿಯನ್ನು ಕಳುಹಿಸುತ್ತೇನೆ,” ಎಂದನು. \p ಅವಳು, “ನೀನು ಅದನ್ನು ಕಳುಹಿಸುವವರೆಗೆ ಈಡು ಕೊಡುವೆಯೋ?” ಎಂದಳು. \p \v 18 ಅದಕ್ಕೆ ಅವನು, “ನಿನಗೆ ಕೊಡತಕ್ಕ ಈಡು ಏನು?” ಎಂದಾಗ. \p ಅವಳು, “ನಿನ್ನ ಮುದ್ರೆಯೂ ನಿನ್ನ ದಾರವೂ ನಿನ್ನ ಕೈಯಲ್ಲಿರುವ ಕೋಲೂ,” ಎಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು, ಆಕೆಯನ್ನು ಕೂಡಿದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು. \v 19 ತರುವಾಯ ಅವಳು ಎದ್ದು ಹೋಗಿ, ಮುಸುಕನ್ನು ತೆಗೆದಿಟ್ಟು, ತನ್ನ ವಿಧವೆಯ ವಸ್ತ್ರಗಳನ್ನು ಹಾಕಿಕೊಂಡಳು. \p \v 20 ಯೆಹೂದನು ಆ ಸ್ತ್ರೀಯ ಕೈಯಿಂದ ಈಡು ತೆಗೆದುಕೊಳ್ಳುವದಕ್ಕೆ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಿಂದ ಮೇಕೆಯ ಮರಿಯನ್ನು ಕಳುಹಿಸಿದಾಗ ಆಕೆಯು ಸಿಗಲಿಲ್ಲ. \v 21 ಅದುಲ್ಲಾಮ್ಯನು ಆಕೆಯ ಊರಿನವರನ್ನು, “ಏನಯಿಮಿನ ಬಹಿರಂಗ ಮಾರ್ಗದ ಬಳಿಯಲ್ಲಿದ್ದ ವೇಶ್ಯೆ ಎಲ್ಲಿ?” ಎಂದು ಕೇಳಿದಾಗ. \p ಅವರು, “ಈ ಸ್ಥಳದಲ್ಲಿ ಯಾವ ವೇಶ್ಯೆಯೂ ಇರಲಿಲ್ಲ,” ಎಂದರು. \p \v 22 ಆಗ ಅವನು ಯೆಹೂದನ ಬಳಿಗೆ ತಿರುಗಿಬಂದು, “ಆಕೆಯು ನನಗೆ ಸಿಕ್ಕಲಿಲ್ಲ, ಇದಲ್ಲದೆ ಆ ಸ್ಥಳದ ಮನುಷ್ಯರು, ‘ಈ ಸ್ಥಳದಲ್ಲಿ ದೇವದಾಸಿ ಇರಲಿಲ್ಲ,’ ಎಂದು ಹೇಳಿದರು,” ಎಂದು ಹೇಳಿದನು. \p \v 23 ಆಗ ಯೆಹೂದನು, “ನಾವು ಅಪಹಾಸ್ಯಕ್ಕೆ ಒಳಗಾಗದ ಹಾಗೆ ಅವಳು ಅದನ್ನು ತೆಗೆದುಕೊಂಡು ಹೋಗಲಿ, ಈ ಮೇಕೆಯ ಮರಿಯನ್ನು ನಾನು ಕಳುಹಿಸಿದೆನು, ಆದರೆ ಆಕೆಯು ನಿನಗೆ ಸಿಕ್ಕಲಿಲ್ಲ,” ಎಂದನು. \p \v 24 ಹೆಚ್ಚು ಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ, “ನಿನ್ನ ಸೊಸೆ ತಾಮಾರಳು ವೇಶ್ಯಾವೃತ್ತಿಮಾಡಿ ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ,” ಎಂದು ತಿಳಿಸಿದರು. \p ಆಗ ಯೆಹೂದನು, “ಅವಳನ್ನು ಹೊರಗೆ ತನ್ನಿರಿ, ಅವಳನ್ನು ಸುಡಬೇಕು,” ಎಂದನು. \p \v 25 ಆಕೆಯನ್ನು ಹೊರಗೆ ತಂದಾಗ, ಆಕೆಯು ತನ್ನ ಮಾವನಿಗೆ, “ಈ ಒತ್ತೆಯ ಸಾಮಾನುಗಳನ್ನು ಕೊಟ್ಟ ಆ ಮನುಷ್ಯನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಆದ್ದರಿಂದ ಈ ಮುದ್ರೆಯೂ ದಾರವೂ ಕೋಲೂ ಯಾರವೆಂದು ತಿಳಿದುಕೋ,” ಎಂದು ಹೇಳಿದಳು. \p \v 26 ಆಗ ಯೆಹೂದನು ಅವುಗಳನ್ನು ಗುರುತಿಸಿ, “ಆಕೆಯು ನನಗಿಂತ ನೀತಿವಂತಳು, ಏಕೆಂದರೆ ನಾನು ನನ್ನ ಮಗ ಶೇಲಹನಿಗೆ ಅವಳನ್ನು ಕೊಡಲಿಲ್ಲ,” ಎಂದನು. ಅವನು ಮತ್ತೆ ಆಕೆಯೊಡನೆ ಸಂಸರ್ಗವಿಲ್ಲದೆ ಇದ್ದನು. \p \v 27 ಅವಳು ಹೆರುವ ಸಮಯದಲ್ಲಿ, ಅವಳಿ ಮಕ್ಕಳು ಆಕೆಯ ಗರ್ಭದಲ್ಲಿದ್ದವು. \v 28 ಆಕೆಯು ಹೆರುವಾಗ ಒಂದು ಮಗುವು ತನ್ನ ಕೈಚಾಚಿತು. ಆಗ ಸೂಲಗಿತ್ತಿಯು, “ಇದು ಮೊದಲು ಬಂದದ್ದು,” ಎಂದು ಹೇಳಿ ಅದರ ಕೈಗೆ ಕೆಂಪು ನೂಲನ್ನು ಕಟ್ಟಿದಳು. \v 29 ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು, “ನೀನು ಕಿತ್ತುಕೊಂಡು ಹೊರಗೆ ಬಂದೆಯಾ?” ಎಂದಳು. ಹೀಗೆ ಅವನಿಗೆ ಪೆರೆಚ್ ಎಂದು ಹೆಸರಾಯಿತು. \v 30 ತರುವಾಯ ತನ್ನ ಕೈಯಲ್ಲಿ ಕೆಂಪು ನೂಲು ಇದ್ದ ಅವನ ಸಹೋದರನು ಹೊರಗೆ ಬಂದನು. ಅವನಿಗೆ ಜೆರಹ ಎಂದು ಹೆಸರಾಯಿತು. \c 39 \s1 ಯೋಸೇಫ ಮತ್ತು ಪೋಟೀಫರನ ಹೆಂಡತಿ \p \v 1 ಯೋಸೇಫನನ್ನು ಕರೆದುಕೊಂಡುಹೋದ ಇಷ್ಮಾಯೇಲರು ಈಜಿಪ್ಟಿಗೆ ಸೇರಿದಾಗ ಅವನನ್ನು ಈಜಿಪ್ಟಿನ ಪೋಟೀಫರ್ ಎಂಬವನಿಗೆ ಮಾರಿಬಿಟ್ಟರು. ಪೋಟೀಫರನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು. \p \v 2 ಯೆಹೋವ ದೇವರು ಯೋಸೇಫನ ಸಂಗಡ ಇದ್ದುದರಿಂದ, ಅವನು ಏಳಿಗೆಯಾಗಿ ಈಜಿಪ್ಟಿನವನಾದ ತನ್ನ ಯಜಮಾನನ ಮನೆಯಲ್ಲಿ ಇದ್ದನು. \v 3 ಯೆಹೋವ ದೇವರು ಅವನ ಸಂಗಡ ಇದ್ದಾನೆಂದೂ ಅವನು ಮಾಡಿದ್ದನ್ನೆಲ್ಲಾ ಯೆಹೋವ ದೇವರು ಅವನ ಕೈಯಿಂದ ಅಭಿವೃದ್ಧಿಮಾಡಿದನೆಂದೂ ಅವನ ಯಜಮಾನನಿಗೆ ತಿಳಿಯಿತು. \v 4 ಆದ್ದರಿಂದ ಯೋಸೇಫನು ಪೋಟೀಫರನ ದೃಷ್ಟಿಯಲ್ಲಿ ದಯೆಹೊಂದಿ ಅವನ ಸೇವೆ ಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ, ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು. \v 5 ಅವನನ್ನು ಮನೆಯಲ್ಲಿಯೂ, ತನಗಿದ್ದ ಎಲ್ಲದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಯೆಹೋವ ದೇವರು ಆ ಈಜಿಪ್ಟಿನವನ ಮನೆಯನ್ನು ಯೋಸೇಫನಿಗಾಗಿ ಆಶೀರ್ವದಿಸಿದರು. ಮನೆಯಲ್ಲಿಯೂ ಹೊಲದಲ್ಲಿಯೂ ಅವನಿಗಿದ್ದ ಎಲ್ಲದರ ಮೇಲೆಯೂ ಯೆಹೋವ ದೇವರ ಆಶೀರ್ವಾದವಿತ್ತು. \v 6 ಹೀಗಿರುವುದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ, ತನ್ನ ಊಟದ ವಿಷಯದಲ್ಲಿ ಹೊರತು ಬೇರೆ ಯಾವುದರ ವಿಷಯದಲ್ಲಿಯೂ ಚಿಂತಿಸದೆ ಇದ್ದನು. \p ಯೋಸೇಫನು ಸುರೂಪಿಯೂ ಸುಂದರನೂ ಆಗಿದ್ದನು. \v 7 ಸ್ವಲ್ಪ ಸಮಯದ ನಂತರ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ, “ನನ್ನ ಸಂಗಡ ಮಲಗು,” ಎಂದಳು. \p \v 8 ಆದರೆ ಅವನು ಅದಕ್ಕೆ ಒಪ್ಪದೆ, ತನ್ನ ಯಜಮಾನನ ಹೆಂಡತಿಗೆ, “ನನ್ನ ಯಜಮಾನನು ತನ್ನ ಮನೆಯಲ್ಲಿರುವ ಯಾವುದರ ಬಗ್ಗೆಯೂ ಚಿಂತಿಸದೆ, ತನಗಿದ್ದದ್ದನ್ನೆಲ್ಲಾ ನನಗೆ ಒಪ್ಪಿಸಿದ್ದಾನೆ. \v 9 ಈ ಮನೆಯಲ್ಲಿ ನನಗಿಂತ ದೊಡ್ಡವನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವುದರಿಂದ, ನಿನ್ನನ್ನು ಹೊರತುಪಡಿಸಿ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ಮಹಾ ದುಷ್ಕೃತ್ಯ ಮಾಡಿ, ದೇವರಿಗೆ ವಿರೋಧವಾಗಿ ಪಾಪ ಮಾಡುವುದು ಹೇಗೆ?” ಎಂದನು. \v 10 ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದರೂ, ಅವನು ಅವಳ ಕೂಡ ಮಲಗುವುದಕ್ಕಾಗಲಿ, ಅವಳ ಹತ್ತಿರ ಇರುವುದಕ್ಕಾಗಲಿ ಒಪ್ಪಲಿಲ್ಲ. \p \v 11 ಹೀಗಿರುವಲ್ಲಿ ಒಂದು ದಿನ ಅವನು ತನ್ನ ಕೆಲಸ ಮಾಡುವುದಕ್ಕೆ ಮನೆಯನ್ನು ಪ್ರವೇಶಿಸಿದಾಗ, ಮನೆಯ ಸೇವಕರಲ್ಲಿ ಒಬ್ಬರೂ ಇರಲಿಲ್ಲ. \v 12 ಆಗ ಆಕೆಯು ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನ ಸಂಗಡ ಮಲಗು,” ಎಂದಳು. ಆದರೆ ಅವನು ತನ್ನ ವಸ್ತ್ರವನ್ನು ಅವಳ ಕೈಯಲ್ಲಿ ಬಿಟ್ಟು ಹೊರಗೆ ಓಡಿಹೋದನು. \p \v 13 ಅವನು ತನ್ನ ವಸ್ತ್ರವನ್ನು ತನ್ನ ಕೈಯಲ್ಲಿ ಬಿಟ್ಟು ಬಿಟ್ಟಿದ್ದನ್ನೂ, ಹೊರಗೆ ಓಡಿ ಹೋದದ್ದನ್ನೂ ಅವಳು ಕಂಡು, \v 14 ತನ್ನ ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನಮ್ಮನ್ನು ಅವಮಾನ ಮಾಡುವುದಕ್ಕೆ ಈ ಹಿಬ್ರಿಯನು ನಮ್ಮಲ್ಲಿಗೆ ಬಂದಿದ್ದಾನೆ. ಅವನು ನನ್ನ ಮೇಲೆ ಅತ್ಯಾಚಾರಮಾಡುವುದಕ್ಕೆ ನನ್ನ ಹತ್ತಿರ ಬಂದನು. ಆಗ ನಾನು ಗಟ್ಟಿಯಾಗಿ ಕೂಗಿದೆನು. \v 15 ನಾನು ಜೋರಾಗಿ ಕೂಗಿದ್ದನ್ನು ಅವನು ಕೇಳಿ, ತನ್ನ ವಸ್ತ್ರವನ್ನು ನನ್ನ ಬಳಿಯಲ್ಲೇ ಬಿಟ್ಟು ಹೊರಗೆ ಓಡಿಹೋದನು,” ಎಂದಳು. \p \v 16 ತನ್ನ ಯಜಮಾನನು ಹೊರಗಿನಿಂದ ಬರುವವರೆಗೆ, ಆಕೆಯು ಅವನ ವಸ್ತ್ರವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಳು. \v 17 ಅವನು ಬಂದಾಗ ಅವನಿಗೂ ಅದರಂತೆಯೇ ಹೇಳುತ್ತಾ, “ನೀನು ನಮ್ಮ ಬಳಿಗೆ ತಂದ ಹಿಬ್ರಿಯ ಸೇವಕನು ನನ್ನನ್ನು ಅವಮಾನ ಮಾಡುವುದಕ್ಕೆ ನನ್ನ ಬಳಿಗೆ ಬಂದನು. \v 18 ಆದರೆ ನಾನು ಜೋರಾಗಿ ಕೂಗಿಕೊಂಡಾಗ, ಅವನು ತನ್ನ ವಸ್ತ್ರವನ್ನು ನನ್ನ ಬಳಿಯಲ್ಲಿ ಬಿಟ್ಟು ಹೊರಗೆ ಓಡಿಹೋದನು,” ಎಂದಳು. \p \v 19 “ನಿನ್ನ ಸೇವಕನು ನನಗೆ ಹೀಗೆ ಮಾಡಿದ,” ಎಂದು ತನ್ನ ಹೆಂಡತಿ ಹೇಳಿದ್ದನ್ನು ಯಜಮಾನನು ಕೇಳಿ, ಅವನ ಕೋಪವೇರಿತು. \v 20 ಆಗ ಯೋಸೇಫನ ಯಜಮಾನನು ಅವನನ್ನು ಹಿಡಿದುಕೊಂಡು, ರಾಜನ ಕೈದಿಗಳನ್ನಿಡುವ ಸೆರೆಮನೆಯಲ್ಲಿ ಹಾಕಿದನು. \p ಯೋಸೇಫನು ಆ ಸೆರೆಮನೆಯಲ್ಲಿದ್ದನು. \v 21 ಆದರೆ ಯೆಹೋವ ದೇವರು ಯೋಸೇಫನ ಸಂಗಡ ಇದ್ದು, ಅವನ ಮೇಲೆ ಕರುಣೆಯಿಟ್ಟು, ಸೆರೆಮನೆಯ ಯಜಮಾನನು ಅವನ ಮೇಲೆ ದಯೆ ತೋರಿಸುವಂತೆ ಮಾಡಿದರು. \v 22 ಆದ್ದರಿಂದ ಸೆರೆಯ ಯಜಮಾನನು ಸೆರೆಮನೆಯಲ್ಲಿ ಬಂಧಿಸಿದ ಕೈದಿಗಳನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸಿದನು. \v 23 ಯೆಹೋವ ದೇವರು ಅವನ ಸಂಗಡ ಇದ್ದುದರಿಂದಲೂ ಅವನು ಮಾಡುವುದನ್ನು ಯೆಹೋವ ದೇವರು ಅಭಿವೃದ್ಧಿಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವುದಕ್ಕೂ ಚಿಂತೆ ಮಾಡದೆ ಇದ್ದನು. \c 40 \s1 ಪಾನದಾಯಕ ಮತ್ತು ರೊಟ್ಟಿಗಾರ \p \v 1 ಕೆಲವು ಸಮಯದ ನಂತರ ಈಜಿಪ್ಟಿನ ಅರಸನ ಪಾನದಾಯಕನೂ, ರೊಟ್ಟಿಗಾರನೂ ತಮ್ಮ ಅರಸನಿಗೆ ಎದುರಾಗಿ ಅಪರಾಧ ಮಾಡಿದರು. \v 2 ಆಗ ಫರೋಹನು ಪಾನದಾಯಕರಲ್ಲಿ ಮುಖ್ಯಸ್ಥನೂ, ರೊಟ್ಟಿಗಾರರಲ್ಲಿ ಮುಖ್ಯಸ್ಥನೂ ಆಗಿದ್ದ ಅವನ ಇಬ್ಬರು ಉದ್ಯೋಗಸ್ಥರ ಮೇಲೆ ಕೋಪಿಸಿಕೊಂಡು, \v 3 ಅವರನ್ನು ಮೈಗಾವಲಿನವರ ದಳಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸ್ಥಳವಾಗಿತ್ತು. \v 4 ಮೈಗಾವಲಿನ ದಳಪತಿಯು ಅವರನ್ನೂ ನೋಡಿಕೊಳ್ಳುವದಕ್ಕೆ ಯೋಸೇಫನನ್ನು ನೇಮಿಸಿದ್ದರಿಂದ, ಅವನು ಅವರನ್ನು ನೋಡಿಕೊಳ್ಳುತ್ತಿದ್ದನು. \p ಅವರು ಕೆಲವು ಕಾಲ ಸೆರೆಯಲ್ಲಿದ್ದರು. \v 5 ಅವರಿಬ್ಬರಿಗೂ ಅಂದರೆ, ಈಜಿಪ್ಟ್ ದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ರೊಟ್ಟಿಗಾರನಿಗೂ ಒಂದೇ ರಾತ್ರಿ ಕನಸು ಬಿತ್ತು. ಅವರವರ ಕನಸಿಗೆ ಅದರದೇ ಆದ ಅರ್ಥವಿತ್ತು. \p \v 6 ಆಗ ಯೋಸೇಫನು ಬೆಳಿಗ್ಗೆ ಅವರ ಬಳಿಗೆ ಬಂದು ಅವರನ್ನು ನೋಡಿದಾಗ, ಅವರು ಚಿಂತೆಯುಳ್ಳವರಾಗಿದ್ದರು. \v 7 ಅವನು ತನ್ನ ಸಂಗಡ ತನ್ನ ಯಜಮಾನನ ಸೆರೆಯಲ್ಲಿದ್ದ ಫರೋಹನ ಅಧಿಕಾರಿಗಳನ್ನು, “ನಿಮ್ಮ ಮುಖಗಳು ಇಂದು ಚಿಂತೆಗೊಂಡಿರುವುದು ಏಕೆ?” ಎಂದು ಕೇಳಿದನು. \p \v 8 ಅವರು ಯೋಸೇಫನಿಗೆ, “ನಾವು ಕನಸನ್ನು ಕಂಡಿದ್ದೇವೆ, ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ,” ಎಂದರು. \p ಯೋಸೇಫನು ಅವರಿಗೆ, “ಅರ್ಥ ಹೇಳುವುದು ದೇವರದಲ್ಲವೋ? ಎಂದು ಹೇಳಿ, ಅವುಗಳನ್ನು ನನಗೆ ಹೇಳಿರಿ,” ಎಂದನು. \p \v 9 ಆಗ ಮುಖ್ಯ ಪಾನದಾಯಕನು ತನ್ನ ಕನಸನ್ನು ಯೋಸೇಫನಿಗೆ ತಿಳಿಸುತ್ತಾ, “ಕನಸಿನಲ್ಲಿ ನನ್ನ ಮುಂದೆ ದ್ರಾಕ್ಷಿಬಳ್ಳಿ ಇತ್ತು. \v 10 ಆ ದ್ರಾಕ್ಷಿಬಳ್ಳಿಯಲ್ಲಿ ಮೂರು ಕೊಂಬೆಗಳಿದ್ದವು. ಅವು ಚಿಗುರಿ, ಹೂವು ಅರಳಿ, ಅದರ ಗೊಂಚಲುಗಳು ಹಣ್ಣಾದವು. \v 11 ಫರೋಹನ ಪಾತ್ರೆಯು ನನ್ನ ಕೈಯಲ್ಲಿರಲಾಗಿ, ನಾನು ಆ ದ್ರಾಕ್ಷಿಹಣ್ಣುಗಳನ್ನು ತೆಗೆದು ಫರೋಹನ ಪಾತ್ರೆಯಲ್ಲಿ ಹಿಂಡಿ, ಆ ಪಾತ್ರೆಯನ್ನು ಫರೋಹನ ಕೈಯಲ್ಲಿ ಕೊಟ್ಟೆನು,” ಎಂದನು. \p \v 12 ಅದಕ್ಕೆ ಯೋಸೇಫನು, “ಅದರ ಅರ್ಥ ಏನೆಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ. \v 13 ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಗೌರವಿಸಿ, ತಿರುಗಿ ನಿನ್ನ ಕೆಲಸದಲ್ಲಿ ಇಡುವನು. ನೀನು ಮೊದಲು ಅವನ ಪಾನದಾಯಕನಾಗಿದ್ದ ಹಾಗೆ ಫರೋಹನ ಪಾತ್ರೆಯನ್ನು ಅವನ ಕೈಗೆ ಕೊಡುವೆ. \v 14 ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಪಿಸಿಕೊಂಡು, ನನಗೆ ದಯೆತೋರಿಸಿ, ಫರೋಹನ ಮುಂದೆ ನನ್ನ ವಿಷಯ ತಿಳಿಸಿ, ಈ ಸೆರೆಯೊಳಗಿಂದ ನನ್ನನ್ನು ಹೊರಗೆ ಬರುವಂತೆ ಮಾಡಬೇಕು. \v 15 ಏಕೆಂದರೆ ನನ್ನನ್ನು ಹಿಬ್ರಿಯರ ದೇಶದೊಳಗಿಂದ ಹಿಡಿದು ತಂದಿದ್ದಾರೆ. ಇಲ್ಲಿಯೂ ಸಹ ನಾನು ಏನೂ ತಪ್ಪುಮಾಡದೆ ಇದ್ದರೂ ನನ್ನನ್ನು ಸೆರೆಯಲ್ಲಿ ಹಾಕಿದರು,” ಎಂದನು. \p \v 16 ಯೋಸೇಫನು ಒಳ್ಳೆಯ ಅರ್ಥವನ್ನು ಹೇಳಿದನೆಂದು ಮುಖ್ಯ ರೊಟ್ಟಿಗಾರನು ತಿಳಿದಾಗ, ಅವನು ಯೋಸೇಫನಿಗೆ, “ನನ್ನ ಕನಸಿನಲ್ಲಿಯೂ ಮೂರು ರೊಟ್ಟಿಯ ಪುಟ್ಟಿಗಳು ನನ್ನ ತಲೆಯ ಮೇಲಿದ್ದವು. \v 17 ಮೇಲಿದ್ದ ಪುಟ್ಟಿಯಲ್ಲಿ ಫರೋಹನಿಗೋಸ್ಕರ ರೊಟ್ಟಿಗಾರರು ಮಾಡುವ ಎಲ್ಲಾ ವಿಧವಾದ ಆಹಾರವಿತ್ತು. ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿದ್ದ ಅದನ್ನು ಪಕ್ಷಿಗಳು ತಿಂದವು,” ಎಂದನು. \p \v 18 ಅದಕ್ಕೆ ಯೋಸೇಫನು ಉತ್ತರವಾಗಿ, “ಅದರ ಅರ್ಥವು ಇದೇ: ಆ ಮೂರು ಪುಟ್ಟಿಗಳು, ಮೂರು ದಿನಗಳು. \v 19 ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ತೆಗೆಸಿ, ನಿನ್ನನ್ನು ಮರದ ಮೇಲೆ ತೂಗು ಹಾಕಿಸುವನು. ಪಕ್ಷಿಗಳು ನಿನ್ನ ಮಾಂಸವನ್ನು ತಿಂದುಬಿಡುವುವು,” ಎಂದನು. \p \v 20 ಮೂರನೆಯ ದಿನದಲ್ಲಿ ಫರೋಹನ ಜನ್ಮದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೂ ಔತಣವನ್ನು ಮಾಡಿಸಿ, ಮುಖ್ಯ ಪಾನದಾಯಕನನ್ನು ಮತ್ತು ಮುಖ್ಯ ರೊಟ್ಟಿಗಾರನನ್ನು ತನ್ನ ಅಧಿಕಾರಿಗಳ ಮುಂದೆ ನಿಲ್ಲಿಸಿದನು. \v 21 ಮುಖ್ಯ ಪಾನದಾಯಕನನ್ನು ತಿರುಗಿ ಉದ್ಯೋಗದಲ್ಲಿ ಇರಿಸಿದ್ದರಿಂದ, ಮತ್ತೆ ಅವನು ಫರೋಹನ ಕೈಗೆ ಪಾನಪಾತ್ರೆಯನ್ನು ಕೊಟ್ಟನು. \v 22 ಆದರೆ ಮುಖ್ಯ ರೊಟ್ಟಿಗಾರನನ್ನು ಗಲ್ಲಿಗೇರಿಸಿದನು. ಹೀಗೆ ಯೋಸೇಫನು ಹೇಳಿದ ಹೇಳಿದಂತೆಯೇ ಆಯಿತು. \p \v 23 ಆದರೂ ಪಾನದಾಯಕರ ಮುಖ್ಯಸ್ಥನು ಯೋಸೇಫನನ್ನು ಜ್ಞಾಪಕಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು. \c 41 \s1 ಫರೋಹನ ಕನಸುಗಳು \p \v 1 ಎರಡು ಪೂರ್ಣ ವರ್ಷಗಳು ಕಳೆದ ಮೇಲೆ ಫರೋಹನು ಒಂದು ಕನಸನ್ನು ಕಂಡನು. ಆ ಕನಸಿನಲ್ಲಿ ಅವನು ನೈಲ್ ನದಿಯ ಬಳಿಯಲ್ಲಿ ನಿಂತಿದ್ದನು. \v 2 ಲಕ್ಷಣವಾದ ಮತ್ತು ಕೊಬ್ಬಿದ ಏಳು ಹಸುಗಳು ನೈಲ್ ನದಿಯೊಳಗಿಂದ ಏರಿಬಂದು, ಆಪುಹುಲ್ಲುಗಾವಲಲ್ಲಿ ಮೇಯುತ್ತಿದ್ದವು. \v 3 ಅವಲಕ್ಷಣವಾದ ಬೇರೆ ಏಳು ಬಡಹಸುಗಳು ಅವುಗಳ ಹಿಂದೆ ನದಿಯೊಳಗಿಂದ ಏರಿಬಂದು, ಆ ಹಸುಗಳ ಹತ್ತಿರ ನೈಲ್ ನದಿ ತೀರದಲ್ಲಿ ನಿಂತಿದ್ದವು. \v 4 ಆ ಅವಲಕ್ಷಣವಾದ ಬಡಹಸುಗಳು, ಕೊಬ್ಬಿದ ಮತ್ತು ಲಕ್ಷಣವಾದ ಏಳು ಹಸುಗಳನ್ನು ತಿಂದುಬಿಟ್ಟವು. ಆಗ ಫರೋಹನು ಎಚ್ಚೆತ್ತನು. \p \v 5 ಅವನು ತಿರುಗಿ ನಿದ್ರೆ ಮಾಡಿದಾಗ, ಎರಡನೆಯ ಸಾರಿ ಕನಸನ್ನು ಕಂಡನು. ಒಂದೇ ದಂಟಿನಲ್ಲಿ ಏಳು ಒಳ್ಳೆಯ ಪುಷ್ಟಿಯಾದ ತೆನೆಗಳು ಎದ್ದವು. \v 6 ಅವುಗಳ ಹಿಂದೆಯೇ ಪೂರ್ವದಿಕ್ಕಿನ ಗಾಳಿಯಿಂದ ಬತ್ತಿ, ಒಣಗಿ ಹೋದ ಏಳು ತೆನೆಗಳು ಮೊಳೆತವು. \v 7 ಆ ಬತ್ತಿ ಹೋಗಿದ್ದ ತೆನೆಗಳು, ಪುಷ್ಟಿಯಾದ ಏಳು ತೆನೆಗಳನ್ನು ನುಂಗಿ ಬಿಟ್ಟವು. ಫರೋಹನು ಎಚ್ಚೆತ್ತಾಗ ಅದು ಕನಸಾಗಿತ್ತು. \p \v 8 ಬೆಳಿಗ್ಗೆ ಅವನ ಮನಸ್ಸು ಕಳವಳಗೊಂಡಿತು. ಆದ್ದರಿಂದ ಅವನು ಈಜಿಪ್ಟಿನ ಎಲ್ಲಾ ಮಂತ್ರವಾದಿಗಳನ್ನೂ ಎಲ್ಲಾ ಜ್ಞಾನಿಗಳನ್ನೂ ಕರೆಕಳುಹಿಸಿದನು. ಫರೋಹನು ಅವರಿಗೆ ತನ್ನ ಕನಸನ್ನು ತಿಳಿಸಿದಾಗ, ಅವುಗಳ ಅರ್ಥವನ್ನು ಹೇಳುವವರು ಯಾರೂ ಇರಲಿಲ್ಲ. \p \v 9 ಆಗ ಪಾನದಾಯಕರ ಮುಖ್ಯಸ್ಥನು ಫರೋಹನಿಗೆ, “ಈ ಹೊತ್ತು ನನ್ನ ತಪ್ಪನ್ನು ಜ್ಞಾಪಕಮಾಡಿಕೊಳ್ಳುತ್ತೇನೆ. \v 10 ಫರೋಹನು ತನ್ನ ಸೇವಕರ ಮೇಲೆ ಕೋಪಿಸಿಕೊಂಡಾಗ, ನನ್ನನ್ನೂ, ರೊಟ್ಟಿಗಾರರ ಮುಖ್ಯಸ್ಥನನ್ನೂ ಮೈಗಾವಲಿನ ದಳಪತಿಯ ಮನೆಯಲ್ಲಿ ಕಾವಲಲ್ಲಿ ಇಟ್ಟಿದ್ದೀರಿ. \v 11 ನಾವು ಒಂದು ರಾತ್ರಿಯಲ್ಲಿ ಕನಸನ್ನು ಕಂಡೆವು. ಒಬ್ಬೊಬ್ಬನ ಕನಸಿಗೆ ಬೇರೆ ಬೇರೆ ಅರ್ಥವಿತ್ತು. \v 12 ಮೈಗಾವಲಿನ ದಳಪತಿಗೆ ಸೇವಕನಾಗಿದ್ದ ಹಿಬ್ರಿಯ ಯೌವನಸ್ಥನು ಅಲ್ಲಿ ನಮ್ಮ ಸಂಗಡ ಇದ್ದನು. ಅವನಿಗೆ ನಾವು ನಮ್ಮ ಕನಸುಗಳನ್ನು ತಿಳಿಸಿದಾಗ, ಅವನು ನಮ್ಮ ನಮ್ಮ ಕನಸಿನ ಅರ್ಥವನ್ನು ಹೇಳಿದನು. \v 13 ಅವನು ಹೇಳಿದ ಅರ್ಥದಂತೆಯೇ ನಮಗಾಯಿತು. ನಾನು ನನ್ನ ಸ್ಥಾನವನ್ನು ಪುನಃ ಪಡೆದುಕೊಂಡೆನು, ಇನ್ನೊಬ್ಬನನ್ನು ಗಲ್ಲಿಗೇರಿಸಲಾಯಿತು,” ಎಂದು ಹೇಳಿದನು. \p \v 14 ಆಗ ಫರೋಹನು ಯೋಸೇಫನನ್ನು ಕರೆತರುವಂತೆ ಸೇವಕರನ್ನು ಕಳುಹಿಸಿದನು. ಅವರು ಅವನನ್ನು ತ್ವರೆಯಾಗಿ ಕಾರಾಗೃಹದಿಂದ ಹೊರಗೆ ತಂದರು. ಅವನು ಕ್ಷೌರಮಾಡಿಸಿಕೊಂಡು, ವಸ್ತ್ರಗಳನ್ನು ಬದಲಾಯಿಸಿ ಫರೋಹನ ಬಳಿಗೆ ಬಂದನು. \p \v 15 ಆಗ ಫರೋಹನು ಯೋಸೇಫನಿಗೆ, “ನಾನು ಕನಸನ್ನು ಕಂಡಿದ್ದೇನೆ, ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ. ನೀನು ಕನಸನ್ನು ಗ್ರಹಿಸಿ, ಅರ್ಥವನ್ನು ಹೇಳುತ್ತೀ ಎಂದು ನಿನ್ನ ವಿಷಯವಾಗಿ ನಾನು ಕೇಳಿದ್ದೇನೆ,” ಎಂದನು. \p \v 16 ಯೋಸೇಫನು ಫರೋಹನಿಗೆ ಉತ್ತರವಾಗಿ, “ಅದನ್ನು ನಾನು ಹೇಳಲಾರೆ, ಆದರೆ ದೇವರು ಫರೋಹನಿಗೆ ಮೆಚ್ಚಿಕೆಯಾದ ಉತ್ತರವನ್ನು ಕೊಡುವರು,” ಎಂದನು. \p \v 17 ಅದಕ್ಕೆ ಫರೋಹನು ಯೋಸೇಫನಿಗೆ, “ನನ್ನ ಕನಸಿನಲ್ಲಿ, ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು. \v 18 ಆಗ ಕೊಬ್ಬಿದ ಮಾಂಸವಿದ್ದ ಲಕ್ಷಣವಾದ ಏಳು ಹಸುಗಳು ನೈಲ್ ನದಿಯೊಳಗಿಂದ ಏರಿಬಂದು, ಆಪುಹುಲ್ಲುಗಾವಲಲ್ಲಿ ಮೇಯುತ್ತಿದ್ದವು. \v 19 ಅವುಗಳ ಹಿಂದೆ ಅವಲಕ್ಷಣವಾದ ಕೊಬ್ಬಿಲ್ಲದ ಬೇರೆ ಏಳು ಬಡಹಸುಗಳು ಏರಿ ಬಂದವು. ಅಂಥ ಬಡ ಹಸುಗಳನ್ನು, ನಾನು ಈಜಿಪ್ಟ್ ದೇಶದಲ್ಲಿ ಎಲ್ಲಿಯೂ ನೋಡಿದ್ದಿಲ್ಲ. \v 20 ಅವಲಕ್ಷಣವಾದ ಬಡಹಸುಗಳು, ಕೊಬ್ಬಿದ ಆ ಏಳು ಹಸುಗಳನ್ನು ತಿಂದುಬಿಟ್ಟವು. \v 21 ಇವು ಅವುಗಳನ್ನು ತಿಂದ ಮೇಲೂ ಅವು ತಿಂದ ಹಾಗೆ ತೋರಲಿಲ್ಲ. ಅವು ಮೊದಲಿನಂತೆ ಬಡಕಲಾಗಿಯೇ ಇದ್ದವು. ತರುವಾಯ ನಾನು ಎಚ್ಚೆತ್ತೆನು. \p \v 22 “ನನಗೆ ಇನ್ನೊಂದು ಕನಸು ಬಂತು. ನಾನು ಆ ಕನಸಿನಲ್ಲಿ, ಒಂದೇ ದಂಟಿನಲ್ಲಿ ಪುಷ್ಟಿಯುಳ್ಳ ಏಳು ತೆನೆಗಳು ಇದ್ದವು. \v 23 ಪೂರ್ವದಿಕ್ಕಿನ ಗಾಳಿಯಿಂದ ಒಣಗಿ ಬತ್ತಿ ಹೋಗಿದ್ದ ಏಳು ತೆನೆಗಳು ಅವುಗಳ ತರುವಾಯ ಮೊಳೆತವು. \v 24 ಆ ಒಣಗಿದ್ದ ಏಳು ತೆನೆಗಳು, ಪುಷ್ಟಿಯಾದ ಏಳು ತೆನೆಗಳನ್ನು ನುಂಗಿದವು. ನಾನು ಇದನ್ನು ಮಂತ್ರವಾದಿಗಳಿಗೆ ತಿಳಿಸಿದಾಗ, ಅದರ ಅರ್ಥವನ್ನು ನನಗೆ ಯಾರೂ ಹೇಳಲಿಲ್ಲ,” ಎಂದನು. \p \v 25 ಆಗ ಯೋಸೇಫನು ಫರೋಹನಿಗೆ, “ಫರೋಹನ ಎರಡು ಕನಸುಗಳ ವಿಷಯ ಒಂದೇ, ದೇವರು ಮಾಡಲಿರುವುದನ್ನು ಫರೋಹನಿಗೆ ತಿಳಿಸಿದ್ದಾರೆ. \v 26 ಆ ಏಳು ಒಳ್ಳೆಯ ಹಸುಗಳು ಏಳು ವರ್ಷಗಳು; ಏಳು ಒಳ್ಳೆಯ ತೆನೆಗಳೂ, ಏಳು ವರ್ಷಗಳೇ. ಇವೆರಡು ಕನಸುಗಳ ಅರ್ಥ ಒಂದೇ. \v 27 ಅವುಗಳ ತರುವಾಯ ಏರಿ ಬಂದ ಬಡಕಲಾದ ಕೆಟ್ಟ ಏಳು ಹಸುಗಳು ಮತ್ತು ಪೂರ್ವದಿಕ್ಕಿನ ಗಾಳಿಯಿಂದ ಒಣಗಿ ಬತ್ತಿ ಹೋಗಿದ್ದ ಏಳು ತೆನೆಗಳು, ಬರಲಿರುವ ಏಳು ವರ್ಷಗಳು. \p \v 28 “ನಾನು ಫರೋಹನಿಗೆ ಹೇಳಿದ ಮಾತಿನಂತೆ ದೇವರು ಮಾಡಲಿರುವುದನ್ನು ಫರೋಹನಿಗೆ ತೋರಿಸಿದ್ದಾರೆ. \v 29 ಈಜಿಪ್ಟ್ ದೇಶದಲ್ಲೆಲ್ಲಾ ಬಹುಸಮೃದ್ಧಿಯ ಸುಭಿಕ್ಷ ವರ್ಷಗಳು ಬರುತ್ತವೆ. \v 30 ಆದರೆ ಅವುಗಳ ಹಿಂದೆ ಏಳು ವರ್ಷಗಳ ಬರಗಾಲ ಬರುತ್ತವೆ. ಆಗ ಈಜಿಪ್ಟಿನಲ್ಲಿದ್ದ ಸುಭಿಕ್ಷವು ಮರೆಯುವಂತಾಗುವುದು. ಇದಲ್ಲದೆ ಬರಗಾಲವು ದೇಶವನ್ನು ನಾಶಮಾಡುವುದು. \v 31 ತರುವಾಯ ಬರಗಾಲವು ಬಹಳ ಕಠಿಣವಾಗಿರುವುದರಿಂದ, ಸುಭಿಕ್ಷ ಕಾಲದ ನೆನಪು ದೇಶದಲ್ಲಿ ಇರದೆ ಹೋಗುವುದು. \v 32 ಇದಲ್ಲದೆ ಆ ಕನಸು ಫರೋಹನಿಗೆ ಎರಡು ಸಾರಿ ಬಿದ್ದುದರಿಂದ, ಆ ಕಾರ್ಯವು ದೇವರಿಂದ ಸ್ಥಿರಪಡಿಸಲಾಗಿದೆ. ಆದ್ದರಿಂದ ದೇವರು ಅದನ್ನು ಬೇಗನೆ ನೆರವೇರಿಸುವರು. \p \v 33 “ಹೀಗಿರುವುದರಿಂದ ಈಗ ಫರೋಹನು ವಿವೇಕಿಯಾದ ಬುದ್ಧಿಯುಳ್ಳ ಒಬ್ಬನನ್ನು ನೋಡಿ, ಅವನನ್ನು ಈಜಿಪ್ಟ್ ದೇಶದ ಮೇಲೆ ನೇಮಿಸಲಿ. \v 34 ಫರೋಹನು ಅಧಿಕಾರಿಗಳನ್ನು ನೇಮಿಸಿ, ದೇಶದ ಮೇಲಿಟ್ಟು, ಸುಭಿಕ್ಷದ ಏಳು ವರ್ಷಗಳಲ್ಲಿ ಈಜಿಪ್ಟ್ ದೇಶದ ಐದರಲ್ಲಿ ಒಂದು ಭಾಗ ಬೆಳೆಯನ್ನು ಕಂದಾಯವಾಗಿ ತೆಗೆದುಕೊಳ್ಳಲಿ. \v 35 ಅಧಿಕಾರಿಗಳು ಮುಂಬರುವ ಈ ಒಳ್ಳೆಯ ವರ್ಷಗಳ ಆಹಾರವನ್ನೆಲ್ಲಾ ಕೂಡಿಸಿ, ಫರೋಹನ ಕೈಕೆಳಗೆ ಧಾನ್ಯವನ್ನು ಪಟ್ಟಣಗಳಲ್ಲಿ ಇಟ್ಟುಕೊಂಡು ಕಾಯಲಿ. \v 36 ಈಜಿಪ್ಟಿನಲ್ಲಿ ಬರುವದಕ್ಕಿರುವ ಬರಗಾಲದ ಏಳು ವರ್ಷಗಳಲ್ಲಿ ದೇಶವು ಹಾಳಾಗದಂತೆ, ಆಹಾರವು ದೇಶಕ್ಕೆ ಸಂಗ್ರಹವಾಗಿರುವುದು,” ಎಂದನು. \p \v 37 ಈ ಮಾತುಗಳು ಫರೋಹನಿಗೂ, ಅವನ ಸೇವಕರಿಗೂ ಒಳ್ಳೆಯದೆಂದು ತೋರಿತು. \v 38 ಫರೋಹನು ತನ್ನ ಸೇವಕರಿಗೆ, “ಯೋಸೇಫನಂಥ ದೇವರಾತ್ಮವುಳ್ಳ ಮನುಷ್ಯನು ಸಿಕ್ಕಾನೋ?” ಎಂದನು. \p \v 39 ಫರೋಹನು ಯೋಸೇಫನಿಗೆ, “ದೇವರು ನಿನಗೆ ಇವುಗಳನ್ನೆಲ್ಲಾ ತೋರಿಸಿದ ಮೇಲೆ, ನಿನ್ನ ಹಾಗೆ ವಿವೇಕಿಯೂ ಬುದ್ಧಿವಂತನೂ ಯಾರೂ ಇಲ್ಲ. \v 40 ನೀನೇ ನನ್ನ ಅರಮನೆಯ ಅಧಿಕಾರಿಯಾಗಿರಬೇಕು. ನಿನ್ನ ಮಾತಿನ ಪ್ರಕಾರ ನನ್ನ ಜನರೆಲ್ಲಾ ಅಧೀನವಾಗಿರಲಿ. ಸಿಂಹಾಸನದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು,” ಎಂದನು. \s1 ಈಜಿಪ್ಟಿನ ಅಧಿಕಾರಿಯಾದ ಯೋಸೇಫನು \p \v 41 ಇದಲ್ಲದೆ ಫರೋಹನು ಯೋಸೇಫನಿಗೆ, “ನೋಡು, ನಾನು ನಿನ್ನನ್ನು ಈಜಿಪ್ಟ್ ದೇಶದ ಮೇಲೆಲ್ಲಾ ನೇಮಿಸಿದ್ದೇನೆ,” ಎಂದನು. \v 42 ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು, ನಾರುಮಡಿಯ ವಸ್ತ್ರವನ್ನು ತೊಡಿಸಿ, ಚಿನ್ನದ ಸರಪಣಿಯನ್ನು ಅವನ ಕೊರಳಿಗೆ ಹಾಕಿದನು. \v 43 ತನಗಿದ್ದ ಎರಡನೆಯ ರಥದಲ್ಲಿ ಅವನನ್ನು ಕೂಡಿಸಿದಾಗ, “ಈತನನ್ನು ನಮಸ್ಕರಿಸಿ ದಾರಿಮಾಡಿರಿ,” ಎಂದು ಪ್ರಕಟಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶವನ್ನೆಲ್ಲಾ ಆಳುವವನನ್ನಾಗಿ ನೇಮಿಸಿದನು. \p \v 44 ಇದಲ್ಲದೆ ಫರೋಹನು ಯೋಸೇಫನಿಗೆ, “ನಾನು ಫರೋಹನು, ನಿನ್ನ ಅಪ್ಪಣೆಯಿಲ್ಲದೆ ಈಜಿಪ್ಟ್ ದೇಶದಲ್ಲೆಲ್ಲಾ ಯಾವನೂ ತನ್ನ ಕೈಯನ್ನಾಗಲಿ, ಕಾಲನ್ನಾಗಲಿ ಎತ್ತಬಾರದು,” ಎಂದನು. \v 45 ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ತರುವಾಯ ಯೋಸೇಫನು ಈಜಿಪ್ಟ್ ದೇಶದಲ್ಲೆಲ್ಲಾ ಸಂಚರಿಸಿದನು. \p \v 46 ಯೋಸೇಫನು ಈಜಿಪ್ಟಿನ ಅರಸನಾದ ಫರೋಹನ ಮುಂದೆ ನಿಂತಾಗ, ಮೂವತ್ತು ವರ್ಷದವನಾಗಿದ್ದನು. ತರುವಾಯ ಯೋಸೇಫನು ಫರೋಹನ ಸನ್ನಿಧಿಯಿಂದ ಹೊರಟು, ಈಜಿಪ್ಟ್ ದೇಶದಲ್ಲೆಲ್ಲಾ ಸಂಚಾರಮಾಡಿದನು. \v 47 ಆ ದೇಶವು ಸುಭಿಕ್ಷದ ಏಳು ವರ್ಷಗಳಲ್ಲಿ ರಾಶಿರಾಶಿಯಾಗಿ ಫಲಕೊಟ್ಟಿತು. \v 48 ಹೀಗಿರಲಾಗಿ ಅವನು ಈಜಿಪ್ಟ್ ದೇಶದಲ್ಲಿದ್ದ ಆ ಏಳು ವರ್ಷಗಳ ಆಹಾರವನ್ನೆಲ್ಲಾ ಕೂಡಿಸಿ, ಪಟ್ಟಣಗಳಲ್ಲಿ ಇಟ್ಟನು. ಒಂದೊಂದು ಪಟ್ಟಣದ ಸುತ್ತಲಿರುವ ಬೆಳೆಯನ್ನು ಆಯಾ ಪಟ್ಟಣದಲ್ಲಿ ಕೂಡಿಸಿಟ್ಟನು. \v 49 ಈ ಮೇರೆಗೆ ಯೋಸೇಫನು ದವಸ ಧಾನ್ಯವನ್ನು ಸಮುದ್ರದ ಮರಳಿನಷ್ಟು ರಾಶಿರಾಶಿಯಾಗಿ ಕೂಡಿಸಿ ಲೆಕ್ಕಮಾಡುವುದನ್ನು ಬಿಟ್ಟುಬಿಟ್ಟನು. ಅದನ್ನು ಲೆಕ್ಕಮಾಡುವುದಕ್ಕೆ ಆಗದೆ ಹೋಯಿತು. \p \v 50 ಇದಲ್ಲದೆ ಬರಗಾಲದ ವರ್ಷಗಳು ಬರುವುದಕ್ಕೆ ಮುಂಚೆ, ಯೋಸೇಫನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್, ಅವಳನ್ನು ಯೋಸೇಫನಿಗೆ ಹೆತ್ತಳು. \v 51 ಜೇಷ್ಠಪುತ್ರನಿಗೆ ಯೋಸೇಫನು ಮನಸ್ಸೆ\f + \fr 41:51 \fr*\fq ಮನಸ್ಸೆ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಮರೆತುಬಿಡು\fqa*\f* ಎಂದು ಹೆಸರಿಟ್ಟನು. ಏಕೆಂದರೆ ಅವನು, “ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನು ಮರೆತುಬಿಡುವಂತೆ ಮಾಡಿದರು,” ಎಂದನು. \v 52 ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯೀಮ್\f + \fr 41:52 \fr*\fq ಎಫ್ರಾಯೀಮ್ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಫಲಭರಿತ\fqa*\f* ಎಂದು ಹೆಸರಿಟ್ಟನು. “ನಾನು ಬಾಧೆಯನ್ನನುಭವಿಸಿದ ದೇಶ ಫಲಭರಿತವಾಗುವಂತೆ ದೇವರು ಮಾಡಿದ್ದಾರೆ,” ಎಂದನು. \p \v 53 ಈಜಿಪ್ಟ್ ದೇಶದಲ್ಲಿದ್ದ ಸುಭಿಕ್ಷದ ಏಳು ವರ್ಷಗಳು ಮುಗಿದ ತರುವಾಯ, \v 54 ಯೋಸೇಫನು ಹೇಳಿದಂತೆ ಬರುವುದಕ್ಕಿದ್ದ ಬರಗಾಲದ ಏಳು ವರ್ಷಗಳು ಆರಂಭವಾದವು. ಆಗ ಎಲ್ಲಾ ದೇಶಗಳಲ್ಲಿ ಬರಗಾಲವಿತ್ತು. ಆದರೆ ಈಜಿಪ್ಟ್ ದೇಶದಲ್ಲೆಲ್ಲಾ ಆಹಾರವಿತ್ತು. \v 55 ಈಜಿಪ್ಟ್‌ದವರೆಲ್ಲಾ ಹಸಿದು, ಜನರು ಆಹಾರಕ್ಕಾಗಿ ಫರೋಹನ ಬಳಿಗೆ ಹೋಗಿ ಕೂಗಿಕೊಂಡಾಗ, ಫರೋಹನು ಎಲ್ಲಾ ಈಜಿಪ್ಟಿನವರಿಗೆ, “ಯೋಸೇಫನ ಬಳಿಗೆ ಹೋಗಿರಿ, ಅವನು ನಿಮಗೆ ಹೇಳುವುದನ್ನು ಮಾಡಿರಿ,” ಎಂದನು. \p \v 56 ಈಜಿಪ್ಟಿನಲ್ಲೆಲ್ಲಾ ಬರವಿತ್ತು. ಯೋಸೇಫನು ಧಾನ್ಯವಿದ್ದ ಕಣಜಗಳನ್ನೆಲ್ಲಾ ತೆರೆದು ಈಜಿಪ್ಟಿನವರಿಗೆ ಮಾರಿದನು. ಆಗ ಬರವು ಈಜಿಪ್ಟ್ ದೇಶದಲ್ಲಿ ಕಠಿಣವಾಗಿತ್ತು. \v 57 ಇದಲ್ಲದೆ ಭೂಮಿಯ ಮೇಲೆಲ್ಲಾ ಬರಗಾಲವು ಕಠಿಣವಾಗಿದ್ದದರಿಂದ, ಎಲ್ಲಾ ದೇಶದವರು ಯೋಸೇಫನಿಂದ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಈಜಿಪ್ಟಿಗೆ ಬರುತ್ತಿದ್ದರು. \c 42 \s1 ಯೋಸೇಫನ ಸಹೋದರರು ಈಜಿಪ್ಟಿಗೆ ಬಂದದ್ದು \p \v 1 ಈಜಿಪ್ಟಿನಲ್ಲಿ ಧಾನ್ಯ ಉಂಟೆಂದು ಯಾಕೋಬನು ತಿಳಿದಾಗ, ಅವನು ತನ್ನ ಪುತ್ರರಿಗೆ, “ನೀವು ಒಬ್ಬರನ್ನೊಬ್ಬರು ನೋಡಿಕೊಂಡು ಸುಮ್ಮನಿರುವುದೇನು?” ಎಂದನು. \v 2 ಅವನು ಮುಂದುವರಿಸಿ, “ಈಜಿಪ್ಟಿನಲ್ಲಿ ಧಾನ್ಯ ಉಂಟೆಂದು ನಾನು ಕೇಳಿದ್ದೇನೆ. ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಇಳಿದು ಹೋಗಿ, ನಮಗಾಗಿ ಅಲ್ಲಿಂದ ಧಾನ್ಯವನ್ನು ಕೊಂಡುಕೊಳ್ಳಿರಿ,” ಎಂದನು. \p \v 3 ಆಗ ಯೋಸೇಫನ ಹತ್ತು ಮಂದಿ ಸಹೋದರರು ಈಜಿಪ್ಟಿನಲ್ಲಿ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಹೋದರು. \v 4 ಆದರೆ ಯೋಸೇಫನ ಸಹೋದರನಾದ ಬೆನ್ಯಾಮೀನನನ್ನು ಕಳುಹಿಸಲಿಲ್ಲ. ಏಕೆಂದರೆ ಅವನಿಗೆ ಕೇಡು ಬಂದೀತೆಂದು ಹೇಳಿ, ಯಾಕೋಬನು ಅವನನ್ನು ಅವನ ಸಹೋದರರ ಸಂಗಡ ಕಳುಹಿಸಲಿಲ್ಲ. \v 5 ಕಾನಾನ್ ದೇಶದಲ್ಲಿ ಬರವಿದ್ದುದರಿಂದ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಬರುವವರೊಂದಿಗೆ ಇಸ್ರಾಯೇಲನ ಪುತ್ರರೂ ಬಂದರು. \p \v 6 ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರುವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು, ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು. \v 7 ಯೋಸೇಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದರೂ, ತಿಳಿಯದವನ ಹಾಗೆ ಅನ್ಯನಂತೆ ಕಠಿಣವಾದ ಮಾತುಗಳನ್ನಾಡಿ, ಅವರಿಗೆ, “ಎಲ್ಲಿಂದ ಬಂದಿರಿ?” ಎಂದನು. \p ಅದಕ್ಕೆ ಅವರು, “ಆಹಾರ ಕೊಂಡುಕೊಳ್ಳುವುದಕ್ಕೆ ಕಾನಾನ್ ದೇಶದಿಂದ ಬಂದೆವು,” ಎಂದರು. \p \v 8 ಯೋಸೇಫನು ತನ್ನ ಸಹೋದರರನ್ನು ಗುರುತಿಸಿದರೂ, ಅವರು ಅವನನ್ನು ಗುರುತಿಸಲಿಲ್ಲ. \v 9 ಆಗ ಯೋಸೇಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದರೂ ಆಗ ಯೋಸೇಫನು ತಾನು ಅವರ ವಿಷಯದಲ್ಲಿ ಕಂಡ ಕನಸುಗಳನ್ನು ಜ್ಞಾಪಕಮಾಡಿಕೊಂಡು ಅವರಿಗೆ, “ನೀವು ಗೂಢಚಾರರು, ದೇಶದ ಒಳಗುಟ್ಟನ್ನು ನೋಡುವುದಕ್ಕೆ ಬಂದಿದ್ದೀರಿ,” ಎಂದನು. \p \v 10 ಅದಕ್ಕವರು, “ಅಲ್ಲ, ನಮ್ಮ ಒಡೆಯಾ, ನಿನ್ನ ದಾಸರಾದ ನಾವು ಆಹಾರವನ್ನು ಕೊಂಡುಕೊಳ್ಳುವದಕ್ಕೆ ಬಂದಿದ್ದೇವೆ. \v 11 ನಾವೆಲ್ಲರೂ ಒಬ್ಬ ಮನುಷ್ಯನ ಪುತ್ರರಾಗಿದ್ದು ಸತ್ಯವಂತರಾಗಿದ್ದೇವೆ. ಆದ್ದರಿಂದ ನಿನ್ನ ದಾಸರು ಗೂಢಚಾರರಲ್ಲ,” ಎಂದರು. \p \v 12 ಆದರೆ ಅವನು ಅವರಿಗೆ, “ಇಲ್ಲ, ದೇಶದ ಒಳಗುಟ್ಟನ್ನು ನೀವು ತಿಳಿದುಕೊಳ್ಳುವುದಕ್ಕೋಸ್ಕರವೇ ಬಂದಿದ್ದೀರಿ,” ಎಂದನು. \p \v 13 ಅದಕ್ಕವರು, “ನಿನ್ನ ದಾಸರಾದ ನಾವು ಹನ್ನೆರಡು ಸಹೋದರರು. ನಾವು ಕಾನಾನ್ ದೇಶದಲ್ಲಿರುವ ಒಬ್ಬ ಮನುಷ್ಯನ ಮಕ್ಕಳು. ಈಗ ಚಿಕ್ಕವನು ನನ್ನ ತಂದೆಯೊಂದಿಗೆ ಇದ್ದಾನೆ, ಮತ್ತೊಬ್ಬನು ಇಲ್ಲ,” ಎಂದು ಹೇಳಿದರು. \p \v 14 ಆಗ ಯೋಸೇಫನು ಅವರಿಗೆ, “ನೀವು ಗೂಢಚಾರರೆಂದು ನಾನು ನಿಮಗೆ ಹೇಳಿದ ಮಾತು ನಿಜವೇ! \v 15 ಈಗ ನಿಮ್ಮನ್ನು ನಾನು ಪರೀಕ್ಷಿಸುತ್ತೇನೆ. ಹೇಗೆಂದರೆ, ನಿಮ್ಮ ಚಿಕ್ಕ ಸಹೋದರನು ಇಲ್ಲಿಗೆ ಬಂದ ಹೊರತು, ಫರೋಹನ ಜೀವದಾಣೆ ನೀವು ಇಲ್ಲಿಂದ ಹೋಗಬಾರದು. \v 16 ನಿಮ್ಮಲ್ಲಿಂದ ಒಬ್ಬನನ್ನು ಕಳುಹಿಸಿರಿ, ಅವನು ನಿಮ್ಮ ಸಹೋದರನನ್ನು ಕರೆದುಕೊಂಡು ಬರಲಿ. ಆದರೆ ನೀವು ಸೆರೆಮನೆಯಲ್ಲಿರಬೇಕು. ಹೀಗೆ ನಿಮ್ಮಲ್ಲಿ ಸತ್ಯವು ಉಂಟೋ, ಇಲ್ಲವೋ ಎಂದು ನಿಮ್ಮ ಮಾತುಗಳನ್ನು ಪರೀಕ್ಷಿಸುತ್ತೇನೆ. ಇಲ್ಲದಿದ್ದರೆ, ಫರೋಹನ ಜೀವದಾಣೆ ನಿಶ್ಚಯವಾಗಿ ನೀವು ಗೂಢಚಾರರು,” ಎಂದು ಹೇಳಿದನು. \v 17 ಯೋಸೇಫನು ಎಲ್ಲರನ್ನು ಒಟ್ಟಿಗೆ ಮೂರು ದಿನಗಳು ಸೆರೆಯಲ್ಲಿಟ್ಟನು. \p \v 18 ಮೂರನೆಯ ದಿನದಲ್ಲಿ ಯೋಸೇಫನು ಅವರಿಗೆ, “ನಾನು ದೇವರಿಗೆ ಭಯಪಡುವವನಾಗಿದ್ದೇನೆ. \v 19 ನೀವು ಸತ್ಯವಂತರಾಗಿದ್ದರೆ, ನಿಮ್ಮ ಸಹೋದರರಲ್ಲಿ ಒಬ್ಬನು ನೀವು ಇದ್ದ ಸೆರೆಮನೆಯಲ್ಲಿ ಬಂಧಿತನಾಗಿರಲಿ. ಆದರೆ ನೀವು ಎಲ್ಲರೂ ನಿಮ್ಮ ಮನೆಗಳ ಕ್ಷಾಮಕ್ಕೆ ಧಾನ್ಯಗಳನ್ನು ತೆಗೆದುಕೊಂಡು ಹೋಗಿರಿ. \v 20 ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ಕರೆತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು. ನೀವು ಸಾಯದೆ ಉಳಿಯುವಿರಿ,” ಎಂದನು. ಅವರು ಹಾಗೆಯೇ ಮಾಡಿದರು. \p \v 21 ಆಗ ಅವರು, “ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ, ಅವನ ಪ್ರಾಣಸಂಕಟವನ್ನು ಕಂಡರೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು,” ಎಂದು ಮಾತಾಡಿಕೊಂಡರು. \p \v 22 ಆಗ ರೂಬೇನನು ಅವರಿಗೆ ಉತ್ತರವಾಗಿ, “ಹುಡುಗನಿಗೆ ಏನೂ ಕೇಡು ಮಾಡಬೇಡಿರಿ, ಎಂದು ನಾನು ನಿಮಗೆ ಹೇಳಿದರೂ ನೀವು ಕೇಳಲಿಲ್ಲ. ಆದ್ದರಿಂದ ಅವನಿಗಾದ ಪ್ರಾಣಹಾನಿಯ ವಿಷಯದಲ್ಲಿ ಈಗ ನಾವು ಲೆಕ್ಕ ಒಪ್ಪಿಸುತ್ತಿದ್ದೇವೆ,” ಎಂದನು. \v 23 ಆದರೆ ಯೋಸೇಫನು ಅವರು ಆಡಿದ್ದನ್ನು ತಿಳಿದುಕೊಳ್ಳುತ್ತಿದ್ದನು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಏಕೆಂದರೆ ಯೋಸೇಫನು ಅನುವಾದಕನ ಮುಖಾಂತರ ಅವರ ಸಂಗಡ ಮಾತಾಡುತ್ತಿದ್ದನು. \p \v 24 ಅನಂತರ ಯೋಸೇಫನು ಅವರ ಬಳಿಯಿಂದ ಹೊರಟುಹೋಗಿ ಅತ್ತನು. ಮತ್ತೆ ಅವರ ಬಳಿಗೆ ಬಂದು, ಅವರ ಸಂಗಡ ಮಾತನಾಡಿ ಅವರೊಂದಿಗೆ ಸಿಮೆಯೋನನನ್ನು ತಂದು, ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿದನು. \p \v 25 ತರುವಾಯ ಯೋಸೇಫನು ಧಾನ್ಯವನ್ನು ತುಂಬಿಸಬೇಕೆಂದೂ, ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರುಗಿ ಇಡಬೇಕೆಂದೂ, ಪ್ರಯಾಣಕ್ಕಾಗಿ ಅವರಿಗೆ ಆಹಾರ ಸರಬರಾಜು ಮಾಡಬೇಕೆಂದೂ ಆಜ್ಞಾಪಿಸಿದನು. \v 26 ಆಗ ಅವರು ತಮ್ಮ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು, ಅಲ್ಲಿಂದ ಹೊರಟು ಹೋದರು. \p \v 27 ಆಗ ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡುವುದಕ್ಕೆ ವಸತಿಗೃಹದಲ್ಲಿ ತನ್ನ ಚೀಲವನ್ನು ಬಿಚ್ಚಿದಾಗ, ಚೀಲದ ಬಾಯಲ್ಲಿಟ್ಟಿದ್ದ ತನ್ನ ಹಣವನ್ನು ಕಂಡನು. \v 28 ಅವನು ತನ್ನ ಸಹೋದರರಿಗೆ, “ನನ್ನ ಹಣವನ್ನು ಹಿಂದಕ್ಕೆ ಕೊಟ್ಟಿದ್ದಾರೆ, ಅದು ನನ್ನ ಚೀಲದಲ್ಲಿದೆ,” ಎಂದು ಹೇಳಿದ. \p ಅವರಿಗೆ ಹೃದಯ ಕಂಪನವಾದಂತಾಗಿ ಹೆದರಿ ಒಬ್ಬರಿಗೊಬ್ಬರು, “ದೇವರು ನಮಗೆ ಮಾಡಿದ್ದೇನು?” ಎಂದರು. \p \v 29 ಅವರು ಕಾನಾನ್ ದೇಶದಲ್ಲಿದ್ದ ತಮ್ಮ ತಂದೆ ಯಾಕೋಬನ ಬಳಿಗೆ ಬಂದಾಗ, ತಮಗೆ ಸಂಭವಿಸಿದ್ದೆಲ್ಲವನ್ನೂ ಅವನಿಗೆ ತಿಳಿಸಿದರು. \v 30 ದೇಶದ ಅಧಿಪತಿಯಾಗಿರುವ ಮನುಷ್ಯನು ನಮ್ಮ ಸಂಗಡ ಕಠಿಣವಾಗಿ ಮಾತನಾಡಿ, ದೇಶದ ಗೂಢಚಾರರನ್ನಾಗಿ ನಮ್ಮನ್ನು ಎಣಿಸಿದನು. \v 31 ನಾವು ಅವನಿಗೆ, “ನಾವು ಗೂಢಚಾರರಲ್ಲ, ಸತ್ಯವಂತರೇ. \v 32 ನಾವು ಹನ್ನೆರಡು ಮಂದಿ ಸಹೋದರರಾಗಿದ್ದು, ಒಂದೇ ತಂದೆಯ ಪುತ್ರರಾಗಿದ್ದೇವೆ, ಒಬ್ಬನು ಇಲ್ಲ, ಚಿಕ್ಕವನು ಇಂದು ನಮ್ಮ ತಂದೆಯ ಸಂಗಡ ಕಾನಾನ್ ದೇಶದಲ್ಲಿ ಇದ್ದಾನೆ,” ಎಂದೆವು. \p \v 33 “ಆಗ ದೇಶದ ಪ್ರಭುವಾಗಿರುವ ಆ ಮನುಷ್ಯನು, ‘ನೀವು ಯಥಾರ್ಥರೆಂದು ನಾನು ಇದರಲ್ಲಿ ತಿಳಿದುಕೊಳ್ಳುವೆನು. ನೀವು ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿಟ್ಟು, ನಿಮ್ಮ ಮನೆಯ ಕ್ಷಾಮಕ್ಕೆ ಅವಶ್ಯವಾದದ್ದನ್ನು ತೆಗೆದುಕೊಂಡು ಹೋಗಿರಿ. \v 34 ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ತನ್ನಿರಿ. ಆಗ ನೀವು ಗೂಢಚಾರರಲ್ಲವೆಂದೂ, ಯಥಾರ್ಥರೆಂದೂ ತಿಳಿದುಕೊಂಡು, ನಿಮ್ಮ ಸಹೋದರರನ್ನು ನಿಮಗೆ ಒಪ್ಪಿಸುವೆನು. ಆಗ ನೀವು ದೇಶದಲ್ಲಿ ವ್ಯಾಪಾರ ಮಾಡಬಹುದು,’ ಎಂದು ಹೇಳಿದನು,” ಎಂದರು. \p \v 35 ಇದಲ್ಲದೆ ಅವರು ತಮ್ಮ ಚೀಲಗಳನ್ನು ಬರಿದು ಮಾಡುತ್ತಿದ್ದಾಗ, ಅವನವನ ಹಣದ ಗಂಟು, ಅವನವನ ಚೀಲದಲ್ಲಿ ಇತ್ತು. ಅವರೂ, ಅವರ ತಂದೆಯೂ ಆ ಹಣದ ಗಂಟುಗಳನ್ನು ನೋಡಿ ಭಯಪಟ್ಟರು. \v 36 ಆಗ ಅವರ ತಂದೆ ಯಾಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನನ್ನಾಗಿ ಮಾಡಿದ್ದೀರಿ. ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗುವುದರಲ್ಲಿದ್ದೀರಿ. ಇವುಗಳೆಲ್ಲಾ ನನಗೆ ವಿರೋಧವಾಗಿವೆ,” ಎಂದನು. \p \v 37 ರೂಬೇನನು ತನ್ನ ತಂದೆಗೆ, “ನಾನು ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ, ನನ್ನ ಇಬ್ಬರು ಪುತ್ರರನ್ನು ಕೊಂದುಬಿಡು. ನೀನು ಬೆನ್ಯಾಮೀನನನ್ನು ನನ್ನ ಕೈಯಲ್ಲಿ ಒಪ್ಪಿಸು. ನಾನು ಅವನನ್ನು ನಿನ್ನ ಬಳಿಗೆ ತಿರುಗಿ ತರುವೆನು,” ಎಂದನು. \p \v 38 ಆದರೆ ಯಾಕೋಬನು, “ನನ್ನ ಮಗನು ನಿಮ್ಮ ಸಂಗಡ ಹೋಗಬಾರದು, ಅವನ ಅಣ್ಣ ಸತ್ತು ಹೋಗಿ, ಇವನೊಬ್ಬನೇ ಉಳಿದಿದ್ದಾನೆ. ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ, ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಸುವಿರಿ,” ಎಂದನು. \c 43 \s1 ಈಜಿಪ್ಟಿಗೆ ಎರಡನೆಯ ಪ್ರಯಾಣ \p \v 1 ದೇಶದಲ್ಲಿ ಬರವು ಘೋರವಾಗಿತ್ತು. \v 2 ಅವರು ಈಜಿಪ್ಟಿನಿಂದ ತಂದಿದ್ದ ಧಾನ್ಯವು ತೀರಿದ ಮೇಲೆ ಅವರ ತಂದೆ ಅವರಿಗೆ, “ತಿರುಗಿ ಹೋಗಿ ನಮಗಾಗಿ ಸ್ವಲ್ಪ ಆಹಾರ ಕೊಂಡುಕೊಳ್ಳಿರಿ,” ಎಂದನು. \p \v 3 ಆಗ ಯೆಹೂದನು ಅವನಿಗೆ, “ಆ ಮನುಷ್ಯನು ನಮಗೆ ನಿಮ್ಮ ಸಹೋದರನು ನಿಮ್ಮ ಸಂಗಡ ಇದ್ದ ಹೊರತು, ನೀವು ನನ್ನ ಮುಖವನ್ನು ನೋಡಬಾರದೆಂದು, ನಮಗೆ ದೃಢವಾಗಿ ನಿರ್ಣಯಿಸಿ ಹೇಳಿದ್ದಾನೆ. \v 4 ನೀನು ನಮ್ಮ ತಮ್ಮನನ್ನು ನಮ್ಮ ಸಂಗಡ ಕಳುಹಿಸಿದರೆ, ನಾವು ಹೋಗಿ ನಿನಗಾಗಿ ಆಹಾರವನ್ನು ಕೊಂಡುಕೊಂಡು ಬರುತ್ತೇವೆ. \v 5 ಅವನನ್ನು ಕಳುಹಿಸದೆ ಹೋದರೆ, ನಾವು ಹೋಗುವುದಿಲ್ಲ. ಏಕೆಂದರೆ ಆ ಮನುಷ್ಯನು, ‘ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ, ನನ್ನ ಮುಖವನ್ನು ನೋಡಬಾರದು,’ ಎಂದು ನಮಗೆ ಹೇಳಿದ್ದಾನೆ,” ಎಂದನು. \p \v 6 ಇಸ್ರಾಯೇಲನು, “ನಿಮಗೆ ಇನ್ನೊಬ್ಬ ತಮ್ಮನು ಇದ್ದಾನೆಂದು ನೀವು ಏಕೆ ಆ ಮನುಷ್ಯನಿಗೆ ಹೇಳಿ ನನಗೆ ಕೇಡು ಮಾಡಿದ್ದೀರಿ?” ಎಂದನು. \p \v 7 ಅವರು ಅವನಿಗೆ, “ಆ ಮನುಷ್ಯನು ನಮ್ಮ ವಿಷಯದಲ್ಲಿ ಮತ್ತು ನಮ್ಮ ಮನೆಯವರ ವಿಷಯದಲ್ಲಿ ನೇರವಾಗಿ ಕೇಳಿ ಅವನು, ‘ನಿಮ್ಮ ತಂದೆ ಇನ್ನೂ ಬದುಕಿದ್ದಾನೋ? ನಿಮಗೆ ಇನ್ನೊಬ್ಬ ಸಹೋದರನು ಇದ್ದಾನೋ?’ ಎಂದು ಕೇಳಿದನು. ಆಗ ಈ ಮಾತುಗಳಿಗೆ ತಕ್ಕ ಹಾಗೆ ನಾವು ಅವನಿಗೆ ತಿಳಿಸಿದೆವು. ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿರಿ,’ ಎಂದು ಅವನು ನಮಗೆ ಹೇಳುತ್ತಾನೆಂದು ನಮಗೆ ಹೇಗೆ ತಿಳಿಯಲು ಸಾಧ್ಯ?” ಎಂದರು. \p \v 8 ಯೆಹೂದನು ತನ್ನ ತಂದೆ ಇಸ್ರಾಯೇಲನಿಗೆ, “ಆ ಹುಡುಗನನ್ನು ನನ್ನ ಸಂಗಡ ಕಳುಹಿಸು, ಆಗ ನಾವು ಹೋಗುವೆವು. ನಾವು, ನೀನೂ ಮತ್ತು ನಮ್ಮ ಮಕ್ಕಳು ಸಾಯದೆ ಬದುಕುವೆವು. \v 9 ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ನೀನು ಅವನ ವಿಷಯದಲ್ಲಿ ನನ್ನನ್ನೇ ಕೇಳಬಹುದು. ನಾನು ಅವನನ್ನು ನಿನ್ನ ಬಳಿಗೆ ತಂದು ನಿನ್ನೆದುರಿಗೆ ನಿಲ್ಲಿಸದಿದ್ದರೆ, ಎಂದೆಂದಿಗೂ ನಾನು ಅಪರಾಧವನ್ನು ಹೊರುವೆನು. \v 10 ಏಕೆಂದರೆ ನಾವು ತಡಮಾಡದೆ ಇದ್ದಿದ್ದರೆ, ಇಷ್ಟರಲ್ಲಿ ಎರಡು ಸಾರಿ ಹೋಗಿ ಬರಬಹುದಾಗಿತ್ತು,” ಎಂದನು. \p \v 11 ಆಗ ಅವರ ತಂದೆ ಇಸ್ರಾಯೇಲನು ಅವರಿಗೆ, “ಹಾಗಿದ್ದರೆ ನೀವು ಹೀಗೆ ಮಾಡಿರಿ. ಈ ದೇಶದಲ್ಲಿ ದೊರಕುವ ಶ್ರೇಷ್ಠವಾದ ಫಲಗಳನ್ನು ನಿಮ್ಮೊಂದಿಗೆ ಇಟ್ಟುಕೊಂಡು, ಆ ಮನುಷ್ಯನಿಗೆ ಕಾಣಿಕೆ ತೆಗೆದುಕೊಂಡು ಹೋಗಿರಿ. ಅಂದರೆ, ಸ್ವಲ್ಪ ತೈಲ, ಸ್ವಲ್ಪ ಜೇನು, ಸುಗಂಧದ್ರವ್ಯ, ರಕ್ತಬೋಳ, ಆಕ್ರೋಡು ಮತ್ತು ಬಾದಾಮಿ ಇವುಗಳನ್ನು ತೆಗೆದುಕೊಂಡು ಹೋಗಿರಿ. \v 12 ಇದಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿರಿ. ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳುಹಿಸಿದ ಹಣವನ್ನೂ ತೆಗೆದುಕೊಂಡು ಹೋಗಿರಿ. ಒಂದು ವೇಳೆ ಅದು ಅವರಿಗೆ ತಿಳಿಯದೆ ಬಂದಿರಬಹುದು. \v 13 ನಿಮ್ಮ ಸಹೋದರನನ್ನು ಕರೆದುಕೊಂಡು ಆ ಮನುಷ್ಯನ ಬಳಿಗೆ ತಿರುಗಿ ಹೋಗಿರಿ. \v 14 ಸರ್ವಶಕ್ತ ದೇವರು ನಿಮ್ಮ ಮತ್ತೊಬ್ಬ ಸಹೋದರನನ್ನೂ ಬೆನ್ಯಾಮೀನನನ್ನೂ ಕಳುಹಿಸಿಕೊಡುವ ಹಾಗೆ, ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ,” ಎಂದನು. \p \v 15 ಆಗ ಅವರು ಆ ಕಾಣಿಕೆಯನ್ನು ತೆಗೆದುಕೊಂಡು, ತಮ್ಮ ಕೈಯಲ್ಲಿ ಎರಡರಷ್ಟು ಹಣವನ್ನೂ, ಬೆನ್ಯಾಮೀನನನ್ನೂ ಕರೆದುಕೊಂಡು ಈಜಿಪ್ಟಿಗೆ ಹೋಗಿ, ಯೋಸೇಫನ ಮುಂದೆ ನಿಂತರು. \v 16 ಯೋಸೇಫನು ಬೆನ್ಯಾಮೀನನನ್ನು ಅವರ ಸಂಗಡ ಕಂಡಾಗ ತನ್ನ ಮನೆ ಉಗ್ರಾಣಿಕನಿಗೆ, “ಈ ಮನುಷ್ಯರನ್ನು ಮನೆಗೆ ಕರೆದುಕೊಂಡು ಹೋಗಿ, ಮಾಂಸದ ಅಡುಗೆ ಸಿದ್ಧಮಾಡು. ಏಕೆಂದರೆ ಈ ಮನುಷ್ಯರು ಮಧ್ಯಾಹ್ನದಲ್ಲಿ ನನ್ನ ಸಂಗಡ ಊಟಮಾಡಬೇಕು,” ಎಂದನು. \p \v 17 ಯೋಸೇಫನು ಹೇಳಿದಂತೆ ಅವನು ಮಾಡಿದನು. ಅವನು ಆ ಮನುಷ್ಯರನ್ನು ಯೋಸೇಫನ ಮನೆಗೆ ಕರೆದುಕೊಂಡು ಹೋದನು. \v 18 ಯೋಸೇಫನ ಮನೆಗೆ ಕರೆತಂದದ್ದರಿಂದ ಅವರು ಭಯಪಟ್ಟು, “ಹಿಂದೆ ನಮ್ಮ ಚೀಲಗಳಲ್ಲಿ ತಿರುಗಿ ಸೇರಿದ ಹಣಕ್ಕಾಗಿ ನಮ್ಮನ್ನು ಹಿಡಿದು, ನಮ್ಮ ಮೇಲೆ ಬಿದ್ದು, ನಮ್ಮನ್ನು ದಾಸರಾಗಿ ಮಾಡಿ, ನಮ್ಮ ಕತ್ತೆಗಳನ್ನು ತೆಗೆದುಕೊಳ್ಳುವುದಕ್ಕೆ ನಮ್ಮನ್ನು ಇಲ್ಲಿಗೆ ತಂದಿದ್ದಾನೆ,” ಎಂದರು. \p \v 19 ಆಗ ಅವರು ಯೋಸೇಫನ ಮನೆಯ ಬಳಿಗೆ ಹೋಗಿ, ಬಾಗಿಲಿನ ಮುಂದೆ ಗೃಹನಿರ್ವಾಹಕನ ಸಂಗಡ ಮಾತನಾಡಿ, \v 20 “ಒಡೆಯಾ, ನಾವು ಆಹಾರವನ್ನು ಕೊಂಡುಕೊಳ್ಳುವುದಕ್ಕೆ ಮೊದಲನೆಯ ಸಾರಿ ಬಂದದ್ದು ನಿಜವೇ. \v 21 ಇದಾದ ಮೇಲೆ ನಾವು ವಸತಿಗೃಹಕ್ಕೆ ಬಂದು ನಮ್ಮ ಚೀಲಗಳನ್ನು ತೆರೆದಾಗ, ಪ್ರತಿಯೊಬ್ಬನ ಹಣವು ಅವನವನ ಚೀಲದ ಬಾಯಲ್ಲಿ ಇತ್ತು. ನಮ್ಮ ಕೈಗಳಲ್ಲಿ ಅದನ್ನು ತಿರುಗಿ ತೆಗೆದುಕೊಂಡು ಬಂದಿದ್ದೇವೆ. \v 22 ಇದಲ್ಲದೆ ಆಹಾರವನ್ನು ಕೊಂಡುಕೊಳ್ಳುವುದಕ್ಕೆ ಬೇರೆ ಹಣವನ್ನೂ ತಂದಿದ್ದೇವೆ. ಈ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೆಂದು ನಮಗೆ ತಿಳಿಯದು,” ಎಂದರು. \p \v 23 ಅದಕ್ಕವನು, “ನಿಮಗೆ ಸಮಾಧಾನವಿರಲಿ, ಭಯಪಡಬೇಡಿರಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ನಿಮ್ಮ ಚೀಲಗಳಲ್ಲಿ ನಿಮಗೆ ನಿಕ್ಷೇಪವನ್ನು ಕೊಟ್ಟಿದ್ದಾರೆ. ನಿಮ್ಮ ಹಣವು ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ತಂದನು. \p \v 24 ಆ ಮನುಷ್ಯನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಬಂದು ಅವರಿಗೆ ನೀರನ್ನು ಕೊಟ್ಟಾಗ, ಅವರು ತಮ್ಮ ಕಾಲುಗಳನ್ನು ತೊಳೆದುಕೊಂಡರು. ಇದಲ್ಲದೆ ಅವರ ಕತ್ತೆಗಳಿಗೆ ಮೇವನ್ನು ಹಾಕಿದನು. \v 25 ಅವರು ಅಲ್ಲಿ ಊಟ ಮಾಡಬೇಕೆಂದು ಕೇಳಿದ್ದರಿಂದ, ಯೋಸೇಫನು ಮಧ್ಯಾಹ್ನದಲ್ಲಿ ಮನೆಗೆ ಬರುವಷ್ಟರಲ್ಲಿ ಕಾಣಿಕೆಯನ್ನು ಸಿದ್ಧಮಾಡಿಕೊಂಡರು. \p \v 26 ಯೋಸೇಫನು ಮನೆಗೆ ಬಂದ ಮೇಲೆ, ತಮ್ಮ ಕೈಗಳಲ್ಲಿದ್ದ ಕಾಣಿಕೆಯನ್ನು ಮನೆಯೊಳಗೆ ತೆಗೆದುಕೊಂಡು ಬಂದು, ಅವನಿಗೆ ನೆಲದವರೆಗೂ ಅಡ್ಡಬಿದ್ದರು. \v 27 ಆಗ ಯೋಸೇಫನು ಅವರ ಕ್ಷೇಮಸಮಾಚಾರವನ್ನು ಕೇಳಿ, “ನೀವು ಹೇಳಿದ ವೃದ್ಧನಾದ ನಿಮ್ಮ ತಂದೆ ಕ್ಷೇಮವೋ? ಅವನು ಇನ್ನೂ ಬದುಕಿದ್ದಾನೋ?” ಎಂದನು. \p \v 28 ಅದಕ್ಕವರು, “ನಿನ್ನ ದಾಸನಾದ ನಮ್ಮ ತಂದೆಯು ಕ್ಷೇಮದಿಂದಿದ್ದಾನೆ, ಅವನು ಇನ್ನೂ ಬದುಕಿದ್ದಾನೆ,” ಎಂದು ಹೇಳಿ ತಮ್ಮ ತಲೆಗಳನ್ನು ಮತ್ತೆ ಬಾಗಿಸಿ ವಂದಿಸಿದರು. \p \v 29 ಆಗ ಅವನು ತನ್ನ ದೃಷ್ಟಿಯಿಟ್ಟು, ತನ್ನ ತಾಯಿಯ ಮಗನೂ ತನ್ನ ತಮ್ಮನೂ ಆದ ಬೆನ್ಯಾಮೀನನನ್ನು ನೋಡಿ, “ನೀವು ನನಗೆ ಹೇಳಿದ ನಿಮ್ಮ ಚಿಕ್ಕ ತಮ್ಮನು ಇವನೋ?” ಎಂದು ಹೇಳಿ, “ನನ್ನ ಮಗನೇ, ದೇವರು ನಿನಗೆ ಕೃಪಾಳುವಾಗಿರಲಿ,” ಎಂದನು. \v 30 ಆಗ ಯೋಸೇಫನ ಕರುಳು ತನ್ನ ತಮ್ಮನ ಬಗ್ಗೆ ಮರುಗಿದ್ದರಿಂದ ಅವನು ಅವಸರದಲ್ಲಿ ಎದ್ದು ಅಳುವುದಕ್ಕೆ ಸ್ಥಳವನ್ನು ಹುಡುಕಿ, ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು. \p \v 31 ತರುವಾಯ ಅವನು ಮುಖವನ್ನು ತೊಳೆದುಕೊಂಡು ಹೊರಗೆ ಬಂದನು. ಅವನು ಮನಸ್ಸನ್ನು ಬಿಗಿಹಿಡಿದುಕೊಂಡು, “ಊಟಕ್ಕೆ ಬಡಿಸಿರಿ,” ಎಂದನು. \p \v 32 ಆಗ ಅವರು ಯೋಸೇಫನಿಗೆ, ಅವನ ಅಣ್ಣತಮ್ಮಂದಿರಿಗೂ ಅವನ ಸಂಗಡ ಇದ್ದ ಈಜಿಪ್ಟಿನವರಿಗೂ ಬೇರೆಬೇರೆಯಾಗಿ ಊಟಕ್ಕೆ ಇಟ್ಟರು. ಏಕೆಂದರೆ ಈಜಿಪ್ಟಿನವರು ಹಿಬ್ರಿಯರ ಕೂಡ ಊಟಮಾಡುತ್ತಿರಲಿಲ್ಲ. ಅದು ಈಜಿಪ್ಟಿನವರಿಗೆ ಅಸಹ್ಯವಾಗಿತ್ತು. \v 33 ಯೋಸೇಫನು ಅವರನ್ನು ಹಿರಿಯವರಿಂದ ಕಿರಿಯವನವರೆಗೆ ಅವರವರ ವಯಸ್ಸಿನ ಪ್ರಕಾರ ಕುಳಿತುಕೊಳ್ಳುವಂತೆ ಮಾಡಿದ್ದರಿಂದ, ಅವರು ತಮ್ಮತಮ್ಮೊಳಗೆ ಆಶ್ಚರ್ಯಪಟ್ಟರು. \v 34 ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರವನ್ನು ಕಳುಹಿಸಿದಾಗ, ಬೆನ್ಯಾಮೀನನಿಗೆ ಕಳುಹಿಸಿದ ಆಹಾರವು ಅವರೆಲ್ಲರ ಆಹಾರಗಳಿಗಿಂತ ಐದರಷ್ಟು ಹೆಚ್ಚಾಗಿತ್ತು ಮತ್ತು ಅವರು ಅವನ ಸಂಗಡ ಕುಡಿದು ಸಂತೋಷದಿಂದಿದ್ದರು. \c 44 \s1 ಚೀಲದಲ್ಲಿ ಬೆಳ್ಳಿಪಾತ್ರೆ \p \v 1 ಯೋಸೇಫನು ತನ್ನ ಮನೆಯ ಉಗ್ರಾಣಿಕನಿಗೆ, “ಈ ಮನುಷ್ಯರ ಚೀಲಗಳಲ್ಲಿ ಹೊರುವುದಕ್ಕಾಗುವಷ್ಟು ಧಾನ್ಯವನ್ನು ತುಂಬಿಸಿ, ಪ್ರತಿಯೊಬ್ಬನ ಹಣವನ್ನು ಅವನವನ ಚೀಲದ ಬಾಯಲ್ಲಿ ಇಡು. \v 2 ನನ್ನ ಬೆಳ್ಳಿಯ ಪಾತ್ರೆಯನ್ನು ಚಿಕ್ಕವನ ಚೀಲದ ಬಾಯಲ್ಲಿ ಅವನ ಧಾನ್ಯ ಹಾಗೂ ಹಣದ ಸಂಗಡ ಇಡು,” ಎಂದು ಆಜ್ಞಾಪಿಸಿದನು. ಯೋಸೇಫನು ಹೇಳಿದಂತೆಯೇ ಅವನು ಮಾಡಿದನು. \p \v 3 ಸೂರ್ಯೋದಯವಾದಾಗ ಆ ಮನುಷ್ಯರನ್ನು ತಮ್ಮ ಕತ್ತೆಗಳ ಸಹಿತವಾಗಿ ಕಳುಹಿಸಲಾಯಿತು. \v 4 ಅವರು ಪಟ್ಟಣವನ್ನು ಬಿಟ್ಟು ದೂರ ಹೋಗುವುದಕ್ಕಿಂತ ಮುಂಚೆ ಯೋಸೇಫನು ಮನೆಯ ಗೃಹನಿರ್ವಾಹಕನಿಗೆ, “ಆ ಮನುಷ್ಯರ ಹಿಂದೆ ಹೋಗು. ಅವರು ಸಿಕ್ಕಿದಾಗ, ‘ಏಕೆ ನೀವು ಒಳ್ಳೆಯದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಿದಿರಿ? \v 5 ಆ ಪಾತ್ರೆಯು ನನ್ನ ಒಡೆಯನು ಕುಡಿಯುವ ಪಾತ್ರೆಯಲ್ಲವೋ? ಅದರಿಂದ ನಿಜವಾಗಿಯೂ ಅವನು ದೈವೋಕ್ತಿಯನ್ನು ಹೇಳುವನಲ್ಲಾ? ನೀವು ಹೀಗೆ ಮಾಡಿದ್ದು ಕೆಟ್ಟದ್ದಾಗಿದೆ,’ ಎಂದು ಅವರಿಗೆ ಹೇಳು,” ಎಂದನು. \p \v 6 ಅವನು ಅವರನ್ನು ಸಂಧಿಸಿ ಈ ಮಾತುಗಳನ್ನು ಅವರಿಗೆ ಹೇಳಿದನು. \v 7 ಆಗ ಅವರು ಅವನಿಗೆ, “ನಮ್ಮ ಒಡೆಯನು ಏಕೆ ಇಂಥ ಮಾತುಗಳನ್ನಾಡುತ್ತಾನೆ? ನಿನ್ನ ದಾಸರು ಹೀಗೆ ಮಾಡುವವರಲ್ಲ. \v 8 ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಿಮಗೆ ಕೊಡುವುದಕ್ಕೆ ಕಾನಾನ್ ದೇಶದಿಂದ ತಂದೆವು. ಹೀಗಿರಲು ನಿನ್ನ ಯಜಮಾನನ ಮನೆಯೊಳಗಿಂದ ಬೆಳ್ಳಿಬಂಗಾರವನ್ನು ಹೇಗೆ ಕದ್ದುಕೊಂಡೇವು? \v 9 ಅದು ನಿನ್ನ ದಾಸರಲ್ಲಿ ಯಾರ ಹತ್ತಿರ ಸಿಕ್ಕುವುದೋ ಅವನು ಸಾಯಲಿ ಮತ್ತು ನಾವು ಸಹ ನಮ್ಮ ಒಡೆಯನಿಗೆ ದಾಸರಾಗುವೆವು,” ಎಂದರು. \p \v 10 ಆಗ ಅವನು, “ಈಗ ನಿಮ್ಮ ಮಾತಿನಂತೆಯೇ ಆಗಲಿ. ಯಾರ ಬಳಿಯಲ್ಲಿ ಅದು ಸಿಕ್ಕುತ್ತದೋ, ಅವನು ನನಗೆ ದಾಸನಾಗಿರಲಿ, ಆದರೆ ನೀವು ನಿರಪರಾಧಿಗಳಾಗಿರುವಿರಿ,” ಎಂದನು. \p \v 11 ಅದಕ್ಕೆ ಅವರು ತ್ವರೆಪಟ್ಟು, ತಮ್ಮ ತಮ್ಮ ಚೀಲಗಳನ್ನು ನೆಲಕ್ಕೆ ಇಳಿಸಿ ಅವುಗಳನ್ನು ಬಿಚ್ಚಿದರು. \v 12 ಅವರು ಹಿರಿಯನನ್ನು ಮೊದಲುಗೊಂಡು ಕಿರಿಯವನವರೆಗೆ ಶೋಧಿಸಲಾಗಿ, ಆ ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು. \v 13 ಆಗ ಅವರು ತಮ್ಮ ವಸ್ತ್ರಗಳನ್ನು ಹರಿದುಕೊಂಡು, ತಮ್ಮ ತಮ್ಮ ಕತ್ತೆಗಳ ಮೇಲೆ ಚೀಲಗಳನ್ನು ಹೇರಿಕೊಂಡು ಪಟ್ಟಣಕ್ಕೆ ಮರಳಿ ಬಂದರು. \p \v 14 ಯೆಹೂದನೂ ಅವನ ಸಹೋದರರೂ ಯೋಸೇಫನು ಇನ್ನೂ ಮನೆಯಲ್ಲಿದ್ದಾಗಲೇ, ಅವನ ಮನೆಗೆ ಬಂದು ಮುಂದೆ ಅಡ್ಡಬಿದ್ದರು. \v 15 ಆಗ ಯೋಸೇಫನು ಅವರಿಗೆ, “ನೀವು ಮಾಡಿದ ಈ ಕೆಲಸವೇನು? ನನ್ನಂಥ ಮನುಷ್ಯನು ದೈವೋಕ್ತಿಗಳನ್ನು ಬಲ್ಲೆನೆಂದು ನಿಮಗೆ ತಿಳಿದಿರಲಿಲ್ಲವೋ?” ಎಂದನು. \p \v 16 ಯೆಹೂದನು, “ನಾವು ನಮ್ಮ ಒಡೆಯನಿಗೆ ಏನು ಹೇಳೋಣ? ಏನು ಮಾತನಾಡೋಣ? ಹೇಗೆ ನಮ್ಮನ್ನು ನಾವು ನೀತಿವಂತರಾಗಿ ಮಾಡಿಕೊಳ್ಳೋಣ? ನಿನ್ನ ದಾಸರ ಪಾಪವನ್ನು ದೇವರು ಹೊರಪಡಿಸಿದ್ದಾರೆ. ನಾವೂ ಪಾತ್ರೆಯು ಯಾರ ಕೈಯಲ್ಲಿ ಸಿಕ್ಕಿತೋ ಅವನೂ ನನ್ನ ಒಡೆಯನಿಗೆ ದಾಸರಾಗಿದ್ದೇವೆ,” ಎಂದನು. \p \v 17 ಆಗ ಯೋಸೇಫನು, “ಹಾಗೆ ಎಂದಿಗೂ ಆಗಬಾರದು. ಯಾರ ಬಳಿಯಲ್ಲಿ ಆ ಪಾತ್ರೆಯು ಸಿಕ್ಕಿತೋ, ಅವನು ನನಗೆ ದಾಸನಾಗಿರಲಿ. ಆದರೆ ನೀವು ಸಮಾಧಾನವಾಗಿ ನಿಮ್ಮ ತಂದೆಯ ಬಳಿಗೆ ಹೋಗಿರಿ,” ಎಂದನು. \p \v 18 ಯೆಹೂದನು ಅವನ ಸಮೀಪಕ್ಕೆ ಬಂದು, “ನನ್ನ ಒಡೆಯನೇ, ನನ್ನ ಒಡೆಯನ ಕಿವಿಗಳಲ್ಲಿ ಒಂದು ಮಾತು ಹೇಳುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಗಬೇಕು. ನಿನ್ನ ದಾಸನ ಮೇಲೆ ನಿನ್ನ ಕೋಪವು ಉರಿಯದೆ ಇರಲಿ. ಏಕೆಂದರೆ ನೀನು ಫರೋಹನಿಗೆ ಸಮಾನನು. \v 19 ನನ್ನ ಒಡೆಯನೇ, ‘ನಿಮಗೆ ತಂದೆಯೂ ಸಹೋದರರೂ ಇದ್ದಾರೋ,’ ಎಂದು ತನ್ನ ದಾಸರನ್ನು ಕೇಳಲು, \v 20 ನಾವು ನಮ್ಮ ಒಡೆಯನಿಗೆ, ‘ನಮಗೆ ಮುದುಕನಾದ ತಂದೆಯೂ ಅವನಿಗೆ ಮುಪ್ಪಿನಲ್ಲಿ ಹುಟ್ಟಿದ ಚಿಕ್ಕ ಮಗನೂ ಇದ್ದಾನೆ, ಅವನ ಸಹೋದರನು ಸತ್ತುಹೋಗಿದ್ದಾನೆ. ಅವನ ತಂದೆಯು ಅವನನ್ನು ಪ್ರೀತಿಸುತ್ತಾನೆ,’ ಎಂದು ಹೇಳಿದೆವು. \p \v 21 “ಅದಕ್ಕೆ ನೀನು ನಿನ್ನ ದಾಸರಿಗೆ, ‘ನಾನು ಅವನನ್ನು ನೋಡುವ ಹಾಗೆ, ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,’ ಎಂದು ಹೇಳಿದೆಯಲ್ಲಾ. \v 22 ನಾವು ನಮ್ಮ ಒಡೆಯನಿಗೆ, ‘ಆ ಹುಡುಗನು ನಮ್ಮ ತಂದೆಯನ್ನು ಬಿಡಕೂಡದು. ಅವನು ತಂದೆಯನ್ನು ಬಿಟ್ಟರೆ, ಅವನು ಸಾಯುವನು,’ ಎಂದು ಹೇಳಿದೆವು. \v 23 ಆಗ ನೀವು ನಿನ್ನ ದಾಸರಿಗೆ, ‘ನಿಮ್ಮ ಚಿಕ್ಕ ತಮ್ಮನು ನಿಮ್ಮ ಸಂಗಡ ಇಲ್ಲಿಗೆ ಬಾರದಿದ್ದರೆ, ಇನ್ನು ಮೇಲೆ ನನ್ನ ಮುಖವನ್ನು ನೋಡಬಾರದು,’ ಎಂದು ಹೇಳಿದೆ. \v 24 ಹೀಗಿರಲಾಗಿ ನಾವು ನಿನ್ನ ದಾಸನಾದ ನಮ್ಮ ತಂದೆಯ ಬಳಿಗೆ ಹೋದಾಗ, ನನ್ನ ಒಡೆಯನ ಮಾತುಗಳನ್ನು ಅವನಿಗೆ ತಿಳಿಸಿದೆವು. \p \v 25 “ನಮ್ಮ ತಂದೆಯು, ‘ನೀವು ತಿರುಗಿ ಹೋಗಿ, ನಮಗೆ ಸ್ವಲ್ಪ ಆಹಾರವನ್ನು ಕೊಂಡುಕೊಳ್ಳಿರಿ,’ ಎಂದನು. \v 26 ಆಗ ನಾವು, ‘ಹೋಗುವುದಕ್ಕಾಗದು, ನಮ್ಮ ಚಿಕ್ಕ ತಮ್ಮನು ನಮ್ಮೊಂದಿಗೆ ಇದ್ದರೆ ಮಾತ್ರ ನಾವು ಹೋಗುತ್ತೇವೆ. ಏಕೆಂದರೆ ನಮ್ಮ ಚಿಕ್ಕ ತಮ್ಮನು ನಮ್ಮ ಸಂಗಡ ಇದ್ದರೆ ಮಾತ್ರ, ಆ ಮನುಷ್ಯನ ಮುಖವನ್ನು ನಾವು ನೋಡುವುದಕ್ಕಾಗುವುದು,’ ಎಂದು ಹೇಳಿದೆವು. \p \v 27 “ಅದಕ್ಕೆ ನಿನ್ನ ದಾಸನಾದ ನನ್ನ ತಂದೆಯು, ‘ನನ್ನ ಹೆಂಡತಿಯು ನನಗೆ ಇಬ್ಬರು ಪುತ್ರರನ್ನು ಹೆತ್ತಳೆಂಬುದು ನಿಮಗೆ ತಿಳಿದಿದೆ. \v 28 ಒಬ್ಬನು ನನ್ನ ಬಳಿಯಿಂದ ಹೋಗಿ ಬಿಟ್ಟನು. “ಅವನು ನಿಶ್ಚಯವಾಗಿ ಕಾಡುಮೃಗದಿಂದ ಸೀಳಿ ಸತ್ತಿರಬೇಕು,” ಎಂದು ಹೇಳಿದಿರಿ. ಅವನನ್ನು ನಾನು ಈ ದಿನದವರೆಗೂ ನೋಡಲಿಲ್ಲ. \v 29 ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಅವನಿಗೂ ಕೇಡು ಬಂದರೆ, ನನ್ನ ಮುದಿ ತಲೆಯು ದುಃಖದಿಂದ ಸಮಾಧಿಗೆ ಇಳಿಯುವಂತೆ ಮಾಡುವಿರಿ,’ ಎಂದು ಹೇಳಿದನು. \p \v 30 “ಹೀಗಿರಲಾಗಿ ನಾನು ನಿನ್ನ ದಾಸನಾದ ನನ್ನ ತಂದೆಯ ಬಳಿಗೆ ಹೋಗುವ ಸಮಯದಲ್ಲಿ ಅವನ ಪ್ರಾಣವು ಹುಡುಗನ ಪ್ರಾಣದಲ್ಲಿ ನೆಟ್ಟಿದ್ದರಿಂದ, \v 31 ಹುಡುಗನು ನಮ್ಮ ಸಂಗಡ ಇಲ್ಲದಿರುವುದನ್ನು ಕಂಡಾಗಲೇ ಅವನು ಸಾಯುವನು. ನಿನ್ನ ದಾಸನಾಗಿರುವ ನಮ್ಮ ತಂದೆಯ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ನಿನ್ನ ದಾಸರು ಇಳಿಯುವಂತೆ ಮಾಡುವರು. \v 32 ಏಕೆಂದರೆ ನಿನ್ನ ದಾಸನಾದ ನಾನು, ಆ ಹುಡುಗನಿಗೋಸ್ಕರ ನನ್ನ ತಂದೆಯ ಬಳಿಯಲ್ಲಿ ಹೊಣೆಯಾಗಿ, ‘ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ, ಎಂದೆಂದಿಗೂ ನನ್ನ ತಂದೆಗೆ ದೋಷಿಯಾಗಿರುವೆನು,’ ಎಂದು ಹೇಳಿಕೊಂಡಿದ್ದೇನೆ. \p \v 33 “ಹಾಗಿದ್ದಲ್ಲಿ ಆ ಹುಡುಗನ ಬದಲಾಗಿ ನಿನ್ನ ದಾಸನಾದ ನಾನು ನನ್ನ ಒಡೆಯನಿಗೆ ದಾಸನಾಗಿರುವೆನು. ಹುಡುಗನು ನನ್ನ ಸಹೋದರರ ಸಂಗಡ ಹೋಗಿಬಿಡಲಿ. \v 34 ಹುಡುಗನು ನನ್ನ ಬಳಿಯಲ್ಲಿರದೆ, ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡಬೇಕಾದೀತು,” ಎಂದನು. \c 45 \s1 ಯೋಸೇಫನು ತನ್ನನ್ನು ಗುರುತಿಸಿಕೊಂಡದ್ದು \p \v 1 ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿಹಿಡಿದುಕೊಳ್ಳಲು ಆಗಲಿಲ್ಲ. “ಎಲ್ಲರನ್ನೂ ತನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ,” ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪರಿಚಯಿಸಿಕೊಳ್ಳಲು ಹೋದಾಗ, ಅಲ್ಲಿ ಬೇರೆ ಯಾರೂ ಇರಲಿಲ್ಲ. \v 2 ಆಗ ಅವನು ತನ್ನ ಸ್ವರವೆತ್ತಿ ಅತ್ತಾಗ, ಹೊರಗಿದ್ದ ಈಜಿಪ್ಟಿನವರೂ, ಫರೋಹನ ಮನೆಯವರೂ ಕೇಳಿಸಿಕೊಂಡರು. \p \v 3 ಯೋಸೇಫನು ತನ್ನ ಸಹೋದರರಿಗೆ, “ನಾನು ಯೋಸೇಫನು! ನನ್ನ ತಂದೆಯು ಬದುಕಿದ್ದಾನೋ?” ಎಂದನು. ಅದಕ್ಕೆ ಅವನ ಸಹೋದರರು ಅವನ ಮುಂದೆ ಕಳವಳಗೊಂಡವರಾಗಿ, ಅವನಿಗೆ ಉತ್ತರ ಕೊಡಲಾರದೆ ಹೋದರು. \p \v 4 ಆಗ ಯೋಸೇಫನು ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿರಿ,” ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು, “ನೀವು ಈಜಿಪ್ಟಿಗೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ! \v 5 ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟುಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾರೆ. \v 6 ಏಕೆಂದರೆ ಈ ಎರಡು ವರ್ಷಗಳವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರ್ಷಗಳವರೆಗೆ ಬಿತ್ತುವುದೂ, ಕೊಯ್ಯುವುದೂ ಇರುವುದಿಲ್ಲ. \v 7 ಆದ್ದರಿಂದ ನಿಮ್ಮ ಸಂತತಿಯನ್ನು ಭೂಮಿಯಲ್ಲಿ ಉಳಿಸುವುದಕ್ಕೂ, ದೊಡ್ಡ ಬರಗಾಲದಿಂದ ನಿಮ್ಮ ಪ್ರಾಣಗಳನ್ನು ಉಳಿಸುವುದಕ್ಕೂ ದೇವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. \p \v 8 “ಆದ್ದರಿಂದ ಈಗ ನೀವಲ್ಲ, ದೇವರು ತಾವೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ದೇವರು ನನ್ನನ್ನು ಫರೋಹನಿಗೆ ತಂದೆಯಾಗಿಯೂ, ಅವನ ಮನೆಗೆಲ್ಲಾ ಯಜಮಾನನನ್ನಾಗಿಯೂ ಈಜಿಪ್ಟ್ ದೇಶಕ್ಕೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದ್ದಾರೆ. \v 9 ನೀವು ಶೀಘ್ರವಾಗಿ ನನ್ನ ತಂದೆಯ ಬಳಿಗೆ ಹೊರಟುಹೋಗಿ, ‘ನಿನ್ನ ಮಗ ಯೋಸೇಫನನ್ನು ದೇವರು ಈಜಿಪ್ಟಿಗೆಲ್ಲಾ ಪ್ರಭುವನ್ನಾಗಿ ಮಾಡಿದ್ದಾರೆ, ತಡಮಾಡದೆ ನನ್ನ ಬಳಿಗೆ ಬೇಗ ಬಾ. \v 10 ಗೋಷೆನ್ ಪ್ರದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ, ಮೊಮ್ಮಕ್ಕಳೂ, ದನಕುರಿಗಳೂ, ನಿನಗಿದ್ದದ್ದೆಲ್ಲವೂ ನನ್ನ ಸಮೀಪದಲ್ಲಿರಬೇಕು. \v 11 ಅಲ್ಲಿ ನಿನ್ನನ್ನು ಪೋಷಿಸುವೆನು. ಏಕೆಂದರೆ ಇನ್ನೂ ಕ್ಷಾಮದ ಐದು ವರ್ಷಗಳಿವೆ. ನಿನಗೂ, ನಿನ್ನ ಮನೆಗೂ, ನಿನಗಿರುವುದೆಲ್ಲದಕ್ಕೂ ಬಡತನವಾಗಬಾರದು’ ಎಂದು ಹೇಳಿರಿ. \p \v 12 “ನಿಮ್ಮ ಸಂಗಡ ಮಾತನಾಡುವುದು ನನ್ನ ಬಾಯಿಯೇ ಎಂದು ನಿಮ್ಮ ಕಣ್ಣುಗಳೂ, ನನ್ನ ಸಹೋದರ ಬೆನ್ಯಾಮೀನನ ಕಣ್ಣುಗಳೂ ನೋಡಿವೆ. \v 13 ಹೀಗಿರಲಾಗಿ ನೀವು ಈಜಿಪ್ಟ್ ದೇಶದಲ್ಲಿ ನನಗಿರುವ ಎಲ್ಲಾ ಘನತೆಯನ್ನೂ, ನೀವು ನೋಡಿದ್ದೆಲ್ಲವನ್ನೂ ನನ್ನ ತಂದೆಗೆ ತಿಳಿಸಿ, ನನ್ನ ತಂದೆಯನ್ನು ಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬನ್ನಿರಿ,” ಎಂದನು. \p \v 14 ಅವನು ತನ್ನ ತಮ್ಮ ಬೆನ್ಯಾಮೀನನ ಕುತ್ತಿಗೆಯನ್ನು ಅಪ್ಪಿಕೊಂಡು ಅತ್ತನು, ಬೆನ್ಯಾಮೀನನೂ ಅತ್ತನು. \v 15 ಇದಲ್ಲದೆ ತನ್ನ ಸಹೋದರರಿಗೆಲ್ಲಾ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವನ ಸಹೋದರರು ಅವನ ಸಂಗಡ ಮಾತನಾಡಿದರು. \p \v 16 ಯೋಸೇಫನ ಸಹೋದರರು ಬಂದಿದ್ದಾರೆಂಬ ಸುದ್ದಿಯನ್ನು ಫರೋಹನ ಮನೆಯವರು ಕೇಳಿದಾಗ ಫರೋಹನಿಗೂ, ಅವನ ಸೇವಕರಿಗೂ ಅದು ಮೆಚ್ಚಿಗೆಯಾಗಿತ್ತು. \v 17 ಆಗ ಫರೋಹನು ಯೋಸೇಫನಿಗೆ, “ನಿನ್ನ ಸಹೋದರರಿಗೆ ಹೀಗೆ ಮಾಡಲು ಹೇಳು: ‘ನೀವು ನಿಮ್ಮ ವಾಹಕಪಶುಗಳ ಮೇಲೆ ವಸ್ತುಗಳನ್ನು ಹೇರಿ, ಕಾನಾನ್ ದೇಶಕ್ಕೆ ಹೋಗಿ, \v 18 ನಿಮ್ಮ ತಂದೆಯನ್ನೂ, ಕುಟುಂಬದವರನ್ನೂ ಕರೆದುಕೊಂಡು ನನ್ನ ಬಳಿಗೆ ಬನ್ನಿರಿ. ಈಜಿಪ್ಟ್ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.’ \p \v 19 “ಇದನ್ನು ಸಹ ನಿನ್ನ ಸಹೋದರರು ಹೇಳುವಂತೆ ನಿನಗೆ ಅಪ್ಪಣೆಯಾಗಿದೆ: ‘ಈಜಿಪ್ಟ್ ದೇಶದೊಳಗಿಂದ ನಿಮ್ಮ ಚಿಕ್ಕವರಿಗಾಗಿಯೂ, ಹೆಂಡತಿಯರಿಗಾಗಿಯೂ ಬಂಡಿಗಳನ್ನು ತೆಗೆದುಕೊಂಡುಹೋಗಿ, ನಿಮ್ಮ ತಂದೆಯನ್ನು ಕರೆದುಕೊಂಡು ಬನ್ನಿರಿ. \v 20 ನಿಮ್ಮ ಸಾಮಗ್ರಿಗಳಿಗಾಗಿ ಚಿಂತಿಸಬೇಡಿರಿ. ಈಜಿಪ್ಟ್ ದೇಶದಲ್ಲಿರುವ ಉತ್ತಮವಾದದ್ದೆಲ್ಲಾ ನಿಮ್ಮದೇ,’ ” ಎಂದನು. \p \v 21 ಇಸ್ರಾಯೇಲನ ಮಕ್ಕಳು ಹಾಗೆಯೇ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ಬಂಡಿಗಳನ್ನೂ, ಮಾರ್ಗಕ್ಕೋಸ್ಕರ ಆಹಾರವನ್ನೂ ಕೊಟ್ಟನು. \v 22 ಅವರೆಲ್ಲರಿಗೆ ಬದಲು ವಸ್ತ್ರಗಳನ್ನೂ, ಬೆನ್ಯಾಮೀನನಿಗೆ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ, ಐದು ಬದಲು ವಸ್ತ್ರಗಳನ್ನೂ ಕೊಟ್ಟನು. \v 23 ಇದಲ್ಲದೆ ಅವನು ತನ್ನ ತಂದೆಗೆ ಹತ್ತು ಕತ್ತೆಗಳು ಹೊರುವಷ್ಟು ಈಜಿಪ್ಟಿನ ಶ್ರೇಷ್ಠವಾದವುಗಳನ್ನೂ, ಪ್ರಯಾಣಕ್ಕೋಸ್ಕರ ತಂದೆಗೆ ಹತ್ತು ಹೆಣ್ಣು ಕತ್ತೆಗಳು ಹೊರುವಷ್ಟು ಗೋಧಿ, ರೊಟ್ಟಿ, ಆಹಾರಗಳನ್ನೂ ಕಳುಹಿಸಿದನು. \v 24 ಯೋಸೇಫನು ಅವರಿಗೆ, “ಮಾರ್ಗದಲ್ಲಿ ಜಗಳವಾಡಬೇಡಿರಿ,” ಎಂದು ಹೇಳಿ ಕಳುಹಿಸಿದನು. \p \v 25 ಅವರು ಈಜಿಪ್ಟಿನಿಂದ ಹೊರಟುಹೋಗಿ ಕಾನಾನಿನಲ್ಲಿದ್ದ ತಮ್ಮ ತಂದೆ ಯಾಕೋಬನ ಬಳಿಗೆ ಬಂದು, \v 26 “ಯೋಸೇಫನು ಇನ್ನೂ ಜೀವದಿಂದ ಇದ್ದಾನೆ! ಅವನೇ ಈಜಿಪ್ಟ್ ದೇಶವನ್ನೆಲ್ಲಾ ಆಳುತ್ತಿದ್ದಾನೆ,” ಎಂದು ಅವನಿಗೆ ತಿಳಿಸಿದಾಗ, ಅವನು ಆಶ್ಚರ್ಯಪಟ್ಟನು, ಅವರನ್ನು ನಂಬಲಿಲ್ಲ. \v 27 ಆದರೆ ಯೋಸೇಫನು ತಮಗೆ ಹೇಳಿದ ಎಲ್ಲಾ ಮಾತುಗಳನ್ನು ಅವರು ಯಾಕೋಬನಿಗೆ ಹೇಳಿದರು. ಅವನನ್ನು ಕರೆದುಕೊಂಡು ಹೋಗುವುದಕ್ಕೆ ಯೋಸೇಫನು ಕಳುಹಿಸಿದ ರಥಗಳನ್ನು ಅವನು ನೋಡಿದಾಗ ಯಾಕೋಬನ ಆತ್ಮವು ಉಜ್ಜೀವಿಸಿತು. \v 28 ಕೊನೆಗೆ ಇಸ್ರಾಯೇಲನು, “ನನ್ನ ಮಗ ಯೋಸೇಫನು ಇನ್ನೂ ಜೀವಂತವಾಗಿದ್ದಾನೆ, ಅಷ್ಟೇ ಸಾಕು! ನಾನು ಸಾಯುವುದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು. \c 46 \s1 ಯಾಕೋಬನು ಈಜಿಪ್ಟಿಗೆ ಹೋದದ್ದು \p \v 1 ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಬೇರ್ಷೆಬಕ್ಕೆ ಬಂದು, ತನ್ನ ತಂದೆ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿದನು. \p \v 2 ದೇವರು ಇಸ್ರಾಯೇಲನಿಗೆ ರಾತ್ರಿಯ ದರ್ಶನದಲ್ಲಿ ಮಾತನಾಡಿ, “ಯಾಕೋಬನೇ, ಯಾಕೋಬನೇ,” ಎಂದರು. \p ಅದಕ್ಕವನು, “ಇಗೋ, ಇದ್ದೇನೆ,” ಎಂದನು. \p \v 3 ದೇವರು ಅವನಿಗೆ, “ನಾನೇ ದೇವರು, ನಿನ್ನ ತಂದೆಯ ದೇವರು. ನೀನು ಈಜಿಪ್ಟಿಗೆ ಹೋಗುವುದಕ್ಕೆ ಭಯಪಡಬೇಡ. ಏಕೆಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡ ಜನಾಂಗವಾಗಮಾಡುವೆನು. \v 4 ನಾನೇ ನಿನ್ನ ಸಂಗಡ ಈಜಿಪ್ಟಿಗೆ ಹೋಗುವೆನು. ನಾನು ನಿಶ್ಚಯವಾಗಿ ನಿನ್ನನ್ನು ಕಾನಾನಿಗೆ ತಿರುಗಿ ಬರಮಾಡುವೆನು. ಯೋಸೇಫನು ನಿನ್ನ ಅಂತಿಮ ಕಾಲದಲ್ಲಿ ನೀನು ಕಣ್ಣುಮುಚ್ಚುವಾಗ ಇರುವನು,” ಎಂದನು. \p \v 5 ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಆಗ ಇಸ್ರಾಯೇಲರು ತಮ್ಮ ತಂದೆ ಯಾಕೋಬನನ್ನೂ, ತಮ್ಮ ಮಕ್ಕಳನ್ನೂ, ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ರಥಗಳಲ್ಲಿ ಕೂರಿಸಿಕೊಂಡು ಹೋದರು. \v 6 ಅವರು ತಮ್ಮ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತೆಗೆದುಕೊಂಡು ಈಜಿಪ್ಟಿಗೆ ಬಂದರು. ಯಾಕೋಬನು ತನ್ನ ಕುಟುಂಬ ಸಮೇತವಾಗಿ ಬಂದನು. \v 7 ಅವನು ತನ್ನ ಗಂಡು ಹೆಣ್ಣು ಮಕ್ಕಳನ್ನೂ, ಮೊಮ್ಮೊಕ್ಕಳನ್ನೂ, ಅಂತೂ ತನ್ನ ಇಡೀ ಕುಟುಂಬದವರೆಲ್ಲರನ್ನೂ ತನ್ನೊಂದಿಗೆ ಈಜಿಪ್ಟಿಗೆ ಕರೆದುಕೊಂಡು ಹೋದನು. \b \li4 \v 8 ಈಜಿಪ್ಟಿಗೆ ಬಂದ ಇಸ್ರಾಯೇಲರ ಮಕ್ಕಳು ಎಂದರೆ, ಯಾಕೋಬನ ಹಾಗೂ ಅವನ ಸಂತತಿಯರ ಹೆಸರುಗಳು: \b \li1 ಯಾಕೋಬನ ಚೊಚ್ಚಲ ಮಗ ರೂಬೇನನು. \li1 \v 9 ರೂಬೇನನ ಪುತ್ರರು: \li2 ಹನೋಕ್, ಪಲ್ಲೂ, ಹೆಚ್ರೋನ್ ಮತ್ತು ಕರ್ಮೀ ಎಂಬುವರು. \li1 \v 10 ಸಿಮೆಯೋನನ ಮಕ್ಕಳು: \li2 ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ ಎಂಬುವರು. \li1 \v 11 ಲೇವಿಯ ಪುತ್ರರು: \li2 ಗೇರ್ಷೋನ್, ಕೊಹಾತ್, ಮೆರಾರೀ ಎಂಬುವರು. \li1 \v 12 ಯೆಹೂದನ ಮಕ್ಕಳು: \li2 ಏರ್, ಓನಾನ್, ಶೇಲಹ, ಪೆರೆಚ್ ಮತ್ತು ಜೆರಹ. ಆದರೆ ಏರನೂ, ಓನಾನನೂ ಕಾನಾನ್ ದೇಶದಲ್ಲಿ ಸತ್ತರು. \li2 ಪೆರೆಚನ ಮಕ್ಕಳು: \li3 ಹೆಚ್ರೋನ್ ಮತ್ತು ಹಾಮೂಲ್ ಎಂಬುವರು. \li1 \v 13 ಇಸ್ಸಾಕಾರನ ಮಕ್ಕಳು: \li2 ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್ ಎಂಬುವರು. \li1 \v 14 ಜೆಬುಲೂನನ ಮಕ್ಕಳು: \li2 ಸೆರೆದ್, ಏಲೋನ್, ಯಹಲೇಲ್ ಎಂಬುವರು. \li4 \v 15 ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ, ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಪುತ್ರಪುತ್ರಿಯರೆಲ್ಲಾ ಸೇರಿ ಒಟ್ಟು ಮೂವತ್ತು ಮೂರು ಮಂದಿ. \b \li1 \v 16 ಗಾದನ ಮಕ್ಕಳು: \li2 ಚಿಫ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ ಮತ್ತು ಅರೇಲೀ ಎಂಬುವರು. \li1 \v 17 ಆಶೇರನ ಮಕ್ಕಳು: \li2 ಇಮ್ನಾ, ಇಷ್ವಾ, ಇಷ್ವೀ, ಬೆರೀಯ ಮತ್ತು ಅವರ ಸಹೋದರಿಯಾದ ಸೆರಹ. \li2 ಬೆರೀಗನ ಪುತ್ರರು: \li3 ಹೆಬೆರ, ಮಲ್ಕೀಯೇಲ್ ಎಂಬುವರು. \li4 \v 18 ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಈಕೆಯಿಂದ ಯಾಕೋಬನಿಗಾದ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟು ಹದಿನಾರು ಮಂದಿ. \b \li1 \v 19 ಯಾಕೋಬನ ಹೆಂಡತಿಯಾದ ರಾಹೇಲಳ ಪುತ್ರರು: \li2 ಯೋಸೇಫ್, ಬೆನ್ಯಾಮೀನ್ ಎಂಬುವರು. \li3 \v 20 ಯೋಸೇಫನಿಗೆ ಈಜಿಪ್ಟ್ ದೇಶದಲ್ಲಿ ಮಕ್ಕಳು ಹುಟ್ಟಿದರು. ಓನ್ ಪಟ್ಟಣದ\f + \fr 46:20 \fr*\fq ಓನ್ \fq*\ft ಅದು, \ft*\fqa ಸೂರ್ಯನ ಪಟ್ಟಣ\fqa*\f* ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತ್ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಅವನಿಗೆ ಹೆತ್ತಳು. \li1 \v 21 ಬೆನ್ಯಾಮೀನನ ಪುತ್ರರು: \li2 ಬೆಳ, ಬೆಕೆರ್, ಅಷ್ಬೇಲ್, ಗೇರಾ, ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದ್ ಎಂಬುವರು. \li4 \v 22 ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಪುತ್ರರು. ಎಲ್ಲರೂ ಕೂಡಿ ಹದಿನಾಲ್ಕು ಮಂದಿ. \b \li1 \v 23 ದಾನನ ಮಗನು: \li2 ಹುಶೀಮನು. \li1 \v 24 ನಫ್ತಾಲಿಯ ಪುತ್ರರು: \li2 ಯಹಚೇಲ, ಗೂನೀ, ಯೇಚೆರ್, ಶಿಲ್ಲೇಮ್ ಎಂಬುವರು. \li4 \v 25 ಇವರು ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಪುತ್ರರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲರೂ ಕೂಡಿ ಏಳುಮಂದಿ. \b \li4 \v 26 ಯಾಕೋಬನ ಪುತ್ರರ ಹೆಂಡತಿಯರಲ್ಲದೆ, ಯಾಕೋಬನ ಸಂಗಡ ಈಜಿಪ್ಟಿಗೆ ಹೋದವರು ಒಟ್ಟು ಅರವತ್ತಾರು ಮಂದಿ. \v 27 ಅವರಲ್ಲದೆ ಈಜಿಪ್ಟಿನಲ್ಲಿ ಯೋಸೇಫನಿಗೆ ಇಬ್ಬರು ಪುತ್ರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಈಜಿಪ್ಟಿಗೆ ಹೋದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ. \b \p \v 28 ಇದಲ್ಲದೆ ಗೋಷೆನ್ ಪ್ರಾಂತಕ್ಕೆ ಮಾರ್ಗವನ್ನು ತೋರಿಸುವಂತೆ ಯಾಕೋಬನು ಯೆಹೂದನನ್ನು ತನ್ನ ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ಪ್ರಾಂತಕ್ಕೆ ಬಂದು ಸೇರಿದರು. \v 29 ಆಗ ಯೋಸೇಫನು ತನ್ನ ರಥವನ್ನು ಸಿದ್ಧಮಾಡಿಕೊಂಡು, ತನ್ನ ತಂದೆ ಇಸ್ರಾಯೇಲನಿಗೆ ಎದುರಾಗಿ ಗೋಷೆನಿಗೆ ಹೋದನು. ಯೋಸೇಫನು ತನ್ನ ತಂದೆಯನ್ನು ಸಂಧಿಸಿ, ಅಪ್ಪಿಕೊಂಡು, ಬಹಳ ಹೊತ್ತಿನವರೆಗೆ ಅತ್ತನು. \p \v 30 ಆಗ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಂಡಿದ್ದರಿಂದ ಇನ್ನು ನಾನು ಮರಣ ಹೊಂದಲು ಸಿದ್ಧನಾಗಿದ್ದೇನೆ. ನೀನು ಇನ್ನೂ ಜೀವದಿಂದ ಇದ್ದೀಯೆ,” ಎಂದನು. \p \v 31 ಯೋಸೇಫನು ತನ್ನ ಸಹೋದರರಿಗೂ, ತನ್ನ ತಂದೆಯ ಮನೆಯವರಿಗೂ, “ನಾನು ಹೋಗಿ ಫರೋಹನಿಗೆ, ಕಾನಾನ್ ದೇಶದಲ್ಲಿದ್ದ ನನ್ನ ಸಹೋದರರೂ, ನನ್ನ ತಂದೆಯ ಮನೆಯವರೂ ನನ್ನ ಬಳಿಗೆ ಬಂದಿದ್ದಾರೆ. \v 32 ಅವರು ಕುರಿಕಾಯುವವರು, ಅವರಿಗೆ ಪಶುಗಳು ಇವೆ. ತಮ್ಮ ಕುರಿದನಗಳನ್ನೂ, ತಮಗಿದ್ದದ್ದೆಲ್ಲವನ್ನೂ ತೆಗೆದುಕೊಂಡು ಬಂದಿದ್ದಾರೆ, ಎಂದು ಹೇಳುವೆನು. \v 33 ಫರೋಹನು ನಿಮ್ಮನ್ನು ಕರೆಯಿಸಿ, ‘ನಿಮ್ಮ ಕೆಲಸವೇನು?’ ಎಂದು ಕೇಳುವನು. \v 34 ನೀವು ಅವನಿಗೆ, ‘ಚಿಕ್ಕಂದಿನಿಂದ ಇಂದಿನವರೆಗೂ ನಿನ್ನ ದಾಸರಾದ ನಾವೂ ನಮ್ಮ ಪೂರ್ವಿಕರೂ ಪಶುಗಳನ್ನು ಕಾಯುವವರಾಗಿದ್ದೇವೆ,’ ಎಂದು ಹೇಳಬೇಕು. ಏಕೆಂದರೆ ಕುರಿ ಕಾಯುವವರೆಲ್ಲಾ ಈಜಿಪ್ಟಿನವರಿಗೆ ಅಸಹ್ಯವಾಗಿದ್ದರಿಂದ, ನೀವು ಗೋಷೆನ್ ಪ್ರಾಂತದಲ್ಲಿ ವಾಸವಾಗಿರುವಂತೆ ನೇಮಿಸುವನು,” ಎಂದನು. \c 47 \p \v 1 ಯೋಸೇಫನು ಹೋಗಿ ಫರೋಹನಿಗೆ, “ನನ್ನ ತಂದೆಯೂ, ನನ್ನ ಸಹೋದರರೂ ತಮ್ಮ ಕುರಿದನಗಳನ್ನೂ, ತಮಗಿದ್ದ ಎಲ್ಲವುಗಳನ್ನೂ ತೆಗೆದುಕೊಂಡು ಕಾನಾನ್ ದೇಶದಿಂದ ಬಂದಿದ್ದಾರೆ. ಅವರು ಗೋಷೆನ್ ಪ್ರಾಂತದಲ್ಲಿ ಇದ್ದಾರೆ,” ಎಂದನು. \v 2 ಅವನು ತನ್ನ ಸಹೋದರರಲ್ಲಿ ಐದು ಮಂದಿಯನ್ನು ಕರೆದುಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು. \p \v 3 ಫರೋಹನು ಯೋಸೇಫನ ಸಹೋದರರಿಗೆ, “ನಿಮ್ಮ ಕೆಲಸವೇನು?” ಎಂದು ಕೇಳಿದನು. \p ಅವರು ಫರೋಹನಿಗೆ, “ನಿನ್ನ ದಾಸರಾದ ನಾವೂ, ನಮ್ಮ ತಂದೆಯವರೂ ಕುರಿಕಾಯುವವರಾಗಿದ್ದೇವೆ. \v 4 ದೇಶದಲ್ಲಿ ಪ್ರವಾಸಮಾಡುವುದಕ್ಕಾಗಿ ಬಂದಿದ್ದೇವೆ. ಏಕೆಂದರೆ ಕಾನಾನ್ ದೇಶದಲ್ಲಿ ಕ್ಷಾಮವು ಕಠಿಣವಾಗಿರುವುದರಿಂದ, ನಿನ್ನ ದಾಸರ ಮಂದೆಗಳಿಗೆ ಹುಲ್ಲುಗಾವಲು ಇಲ್ಲ. ಹೀಗಿರುವುದರಿಂದ ನಿನ್ನ ದಾಸರು ಗೋಷೆನ್ ಪ್ರಾಂತದ ನಿವಾಸಿಗಳಾಗುವಂತೆ ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇವೆ,” ಎಂದರು. \p \v 5 ಅದಕ್ಕೆ ಫರೋಹನು ಯೋಸೇಫನಿಗೆ, “ನಿನ್ನ ತಂದೆಯೂ, ನಿನ್ನ ಸಹೋದರರೂ ನಿನ್ನ ಬಳಿಗೆ ಬಂದಿದ್ದಾರೆ. \v 6 ಈಜಿಪ್ಟ್ ದೇಶವು ನಿನ್ನ ಮುಂದೆ ಇದೆ. ದೇಶದ ಉತ್ತಮವಾದ ಕಡೆ ನಿನ್ನ ತಂದೆಯೂ, ಸಹೋದರರೂ ವಾಸಮಾಡುವಂತೆ ಮಾಡು. ಗೋಷೆನ್ ಪ್ರಾಂತದಲ್ಲಿ ಅವರು ವಾಸವಾಗಿರಲಿ. ಅವರಲ್ಲಿ ಯಾರಾದರೂ ಸಮರ್ಥರೆಂದು ನೀನು ತಿಳಿದರೆ, ಅವರನ್ನು ನಮಗಿರುವ ಪಶುಗಳ ಮೇಲೆ ವಿಚಾರಕರನ್ನಾಗಿ ಇರಿಸು,” ಎಂದನು. \p \v 7 ಯೋಸೇಫನು ತನ್ನ ತಂದೆ ಯಾಕೋಬನನ್ನು ಕರೆದುಕೊಂಡು ಬಂದು, ಫರೋಹನ ಮುಂದೆ ನಿಲ್ಲಿಸಿದನು. ಯಾಕೋಬನು ಫರೋಹನನ್ನು ಆಶೀರ್ವದಿಸಿದನು. \v 8 ಫರೋಹನು ಯಾಕೋಬನಿಗೆ, “ನಿನಗೆ ಎಷ್ಟು ವರ್ಷಗಳು?” ಎಂದು ಕೇಳಿದನು. \p \v 9 ಯಾಕೋಬನು ಫರೋಹನಿಗೆ, “ನಾನು ಲೋಕದಲ್ಲಿ ಸಂಚಾರಮಾಡಿದ್ದು ನೂರಮೂವತ್ತು ವರುಷಗಳೇ. ನನ್ನ ವರ್ಷಗಳು ಕಡಿಮೆಯಾದರೂ ಕಠಿಣವಾದವುಗಳು ಆಗಿವೆ. ಅವು ನನ್ನ ಪಿತೃಗಳ ಪ್ರಯಾಣದ ವರ್ಷಗಳಿಗೆ ಸಮವಾಗಿಲ್ಲ,” ಎಂದನು. \v 10 ಆಗ ಯಾಕೋಬನು ಫರೋಹನನ್ನು ಆಶೀರ್ವದಿಸಿ, ಅವನಿಂದ ಬೀಳ್ಕೊಂಡನು. \p \v 11 ಯೋಸೇಫನು ತನ್ನ ತಂದೆಗೂ, ತನ್ನ ಸಹೋದರರಿಗೂ ನಿವಾಸವನ್ನು ಕೊಟ್ಟು, ಫರೋಹನ ಅಪ್ಪಣೆಯ ಪ್ರಕಾರ, ಅವರಿಗೆ ಈಜಿಪ್ಟ್ ದೇಶದ ಉತ್ತಮವಾದ ರಮ್ಸೇಸ್ ಸೀಮೆಯ ಸ್ವತ್ತನ್ನು ಕೊಟ್ಟನು. \v 12 ಯೋಸೇಫನು ತನ್ನ ತಂದೆಯನ್ನೂ, ತನ್ನ ಸಹೋದರರನ್ನೂ, ತನ್ನ ತಂದೆಯ ಮನೆಯವರೆಲ್ಲರನ್ನೂ ಅವರ ಮಕ್ಕಳ ಲೆಕ್ಕದ ಪ್ರಕಾರ ಆಹಾರಕೊಟ್ಟು, ಅವರನ್ನು ಸಂರಕ್ಷಿಸಿದನು. \s1 ಬರಗಾಲದಲ್ಲಿ ಯೋಸೇಫನ ಆಡಳಿತ \p \v 13 ಆದರೆ ಬರವು ಅತಿ ಘೋರವಾಗಿದ್ದದ್ದರಿಂದ ದೇಶದಲ್ಲೆಲ್ಲಾ ಆಹಾರ ಇರಲಿಲ್ಲ. ಈಜಿಪ್ಟ್ ದೇಶವೂ, ಕಾನಾನ್ ದೇಶವೂ ಕ್ಷಾಮದಿಂದ ಕ್ಷೀಣವಾದವು. \v 14 ಆಗ ಯೋಸೇಫನು ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ, ಅದನ್ನು ಫರೋಹನ ಮನೆಗೆ ತಂದನು. \v 15 ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಹಣವು ಮುಗಿದಾಗ, ಈಜಿಪ್ಟಿನವರೆಲ್ಲರೂ ಯೋಸೇಫನ ಬಳಿಗೆ ಬಂದು, “ನಮಗೆ ಆಹಾರವನ್ನು ಕೊಡು, ನಾವು ನಿನ್ನ ಮುಂದೆ ಏಕೆ ಸಾಯಬೇಕು? ಏಕೆಂದರೆ ಹಣವೆಲ್ಲಾ ತೀರಿತು,” ಎಂದರು. \p \v 16 ಆಗ ಯೋಸೇಫನು, “ನಿಮ್ಮ ಪಶುಗಳನ್ನು ತೆಗೆದುಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ, ನಿಮ್ಮ ಪಶುಗಳಿಗೆ ಬದಲಾಗಿ ಧಾನ್ಯವನ್ನು ಕೊಡುತ್ತೇನೆ,” ಎಂದನು. \v 17 ಅವರು ತಮ್ಮ ಪಶುಗಳನ್ನೆಲ್ಲಾ ಯೋಸೇಫನ ಬಳಿಗೆ ತಂದರು. ಅವುಗಳ ಬದಲಾಗಿ ಅವನು ಆಹಾರ ಧಾನ್ಯ ಕೊಟ್ಟನು. ಅವರ ಕುದುರೆಗಳನ್ನೂ ಕುರಿಗಳನ್ನೂ ಆಡುಗಳನ್ನೂ ದನಗಳನ್ನೂ ಕತ್ತೆಗಳನ್ನೂ ಬದಲಾಗಿ ತೆಗೆದುಕೊಂಡನು. ಆ ವರ್ಷ ಅವರು ಆಹಾರಕ್ಕಾಗಿ ತಮ್ಮ ಎಲ್ಲಾ ಪಶುಪ್ರಾಣಿಗಳನ್ನು ಮಾರಿಕೊಂಡರು. \p \v 18 ಆ ವರ್ಷವಾದ ಮೇಲೆ ಮಾರನೆಯ ವರ್ಷದಲ್ಲಿ, ಅವರು ಅವನ ಬಳಿಗೆ ಬಂದು ಅವನಿಗೆ, “ಹಣವೂ ಪಶುಗಳ ಮಂದೆಗಳೂ ನಮ್ಮ ಒಡೆಯನ ವಶವಾಗಿ ಮುಗಿದಿರುವುದರಿಂದ, ನಮ್ಮ ಶರೀರಗಳೂ, ನಮ್ಮ ಭೂಮಿಯೂ ಹೊರತು ನಮ್ಮ ಒಡೆಯನ ಮುಂದೆ ಏನೂ ಉಳಿಯಲಿಲ್ಲವೆಂಬುದನ್ನು ನಮ್ಮ ಒಡೆಯನಿಗೆ ಮರೆಮಾಡದೆ ತಿಳಿಸುತ್ತಿದ್ದೇವೆ. \v 19 ನಾವೂ, ನಮ್ಮ ಭೂಮಿಯೂ ನಿನ್ನ ಕಣ್ಣೆದುರಿಗೆ ಸಾಯುವುದು ಏಕೆ? ನಮ್ಮನ್ನೂ, ನಮ್ಮ ಭೂಮಿಯನ್ನೂ ಆಹಾರಕ್ಕಾಗಿ ಕೊಂಡುಕೋ. ಆಗ ನಾವೂ, ನಮ್ಮ ಭೂಮಿಯೂ ಫರೋಹನಿಗೆ ದಾಸರಾಗಿರುವೆವು. ನಮಗೆ ಬೀಜವನ್ನು ಕೊಡು, ಆಗ ನಾವು ಸಾಯದೆ ಬದುಕುವೆವು, ಭೂಮಿಯು ಹಾಳಾಗದೆ ಇರುವುದು,” ಎಂದರು. \p \v 20 ಆಗ ಯೋಸೇಫನು ಈಜಿಪ್ಟ್ ದೇಶವನ್ನೆಲ್ಲಾ ಫರೋಹನಿಗಾಗಿ ಕೊಂಡುಕೊಂಡನು. ಬರವು ಅವರಿಗೆ ಘೋರವಾಗಿದ್ದುದರಿಂದ ಈಜಿಪ್ಟನವರು ತಮ್ಮ ತಮ್ಮ ಹೊಲಗಳನ್ನು ಮಾರಿಬಿಟ್ಟರು. ಹೀಗೆ ದೇಶವು ಫರೋಹನದಾಯಿತು. \v 21 ಯೋಸೇಫನು ಈಜಿಪ್ಟ್ ದೇಶದ ಒಂದು ಮೇರೆಯಿಂದ ಇನ್ನೊಂದು ಮೇರೆಯವರೆಗೂ ಜನರನ್ನು ದಾಸರನ್ನಾಗಿ ಮಾಡಿದನು. \v 22 ಯಾಜಕರ ಭೂಮಿಯನ್ನು ಮಾತ್ರ ಅವನು ಕೊಂಡುಕೊಳ್ಳಲಿಲ್ಲ. ಏಕೆಂದರೆ ಫರೋಹನು ಯಾಜಕರಿಗೆ ಭತ್ಯೆಗಳನ್ನು ನೇಮಿಸಿದ್ದನು. ಅವನು ಅವರಿಗೆ ನೇಮಿಸಿದ್ದನ್ನು, ಅವರು ಊಟಮಾಡುತ್ತಿದ್ದರು. ಆದ್ದರಿಂದ ಅವರು ತಮ್ಮ ಭೂಮಿಗಳನ್ನು ಮಾರಲಿಲ್ಲ. \p \v 23 ಯೋಸೇಫನು ಜನರಿಗೆ, “ಇಂದು ನಿಮ್ಮನ್ನೂ, ನಿಮ್ಮ ಭೂಮಿಯನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಇಲ್ಲಿ ನಿಮಗೆ ಬೀಜವಿದೆ. ನೀವು ಭೂಮಿಯಲ್ಲಿ ಬೀಜ ಬಿತ್ತಿರಿ. \v 24 ಬೆಳೆ ಬಂದಾಗ ಐದನೆಯ ಪಾಲನ್ನು ಫರೋಹನಿಗೆ ಕೊಡಬೇಕು. ಉಳಿದ ನಾಲ್ಕು ಪಾಲು ಹೊಲದ ಬೀಜಕ್ಕಾಗಿಯೂ, ನಿಮ್ಮ ಆಹಾರಕ್ಕಾಗಿಯೂ, ನಿಮ್ಮ ಮಕ್ಕಳ ಆಹಾರಕ್ಕಾಗಿಯೂ ನಿಮಗೆ ಇರಲಿ,” ಎಂದನು. \p \v 25 ಆಗ ಅವರು, “ನೀನೇ ನಮ್ಮನ್ನು ಬದುಕಿಸಿದ್ದೀ, ನಮ್ಮ ಒಡೆಯನ ಕಣ್ಣುಗಳ ಮುಂದೆ ನಮಗೆ ದಯೆ ದೊರಕಲಿ. ನಾವು ಫರೋಹನ ದಾಸರಾಗಿರುವೆವು,” ಎಂದರು. \p \v 26 ಹೀಗೆ ಯೋಸೇಫನು ಫರೋಹನಿಗೆ ಐದನೆಯ ಪಾಲು ಆಗಬೇಕೆಂಬುದನ್ನು ಈಜಿಪ್ಟಿನ ಭೂಮಿಗೆ ಇಂದಿನವರೆಗೂ ನಿಯಮವಾಗಿ ಸ್ಥಾಪಿಸಿದನು. ಯಾಜಕರ ಭೂಮಿಯು ಮಾತ್ರ ಫರೋಹನದಾಗಲಿಲ್ಲ. \p \v 27 ಇಸ್ರಾಯೇಲರು ಈಜಿಪ್ಟ್ ದೇಶದ ಗೋಷೆನ್ ಪ್ರಾಂತದಲ್ಲಿ ವಾಸವಾಗಿದ್ದು, ಆಸ್ತಿಯನ್ನು ಸಂಪಾದಿಸಿ, ಬೆಳೆದು ಬಹಳವಾಗಿ ವೃದ್ಧಿಹೊಂದಿದರು. \p \v 28 ಇದಲ್ಲದೆ ಯಾಕೋಬನು ಈಜಿಪ್ಟ್ ದೇಶದಲ್ಲಿ ಹದಿನೇಳು ವರುಷ ಬದುಕಿದನು. ಯಾಕೋಬನು ಬದುಕಿದ ದಿನಗಳು ನೂರ ನಲ್ವತ್ತೇಳು ವರ್ಷಗಳು. \v 29 ಇಸ್ರಾಯೇಲನ ಮರಣದ ಸಮಯವು ಸಮೀಪಿಸಿದಾಗ, ಅವನು ತನ್ನ ಮಗ ಯೋಸೇಫನನ್ನು ಕರೆಯಿಸಿ ಅವನಿಗೆ, “ಈಗ ನಿನ್ನ ಸಮ್ಮುಖದಲ್ಲಿ ನಾನು ದಯೆ ಹೊಂದಿದ್ದೇಯಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು, ನನಗೆ ಉಪಕಾರವನ್ನೂ, ನಂಬಿಗಸ್ತಿಕೆಯನ್ನೂ ತೋರಿಸು. ಈಜಿಪ್ಟಿನಲ್ಲಿ ನನ್ನನ್ನು ಹೂಳಿಡಬೇಡ. \v 30 ನನ್ನ ತಂದೆಯ ಸಂಗಡ ನಾನು ಮಲಗಬೇಕು. ಈಜಿಪ್ಟಿನಿಂದ ನನ್ನನ್ನು ತೆಗೆದುಕೊಂಡುಹೋಗಿ, ಅವರ ಸಮಾಧಿಯ ಸ್ಥಳದಲ್ಲಿ ನನ್ನನ್ನು ಹೂಳಿಡು,” ಎಂದನು. \p ಅದಕ್ಕವನು, “ನಿನ್ನ ಮಾತಿನ ಪ್ರಕಾರ ನಾನು ಮಾಡುತ್ತೇನೆ,” ಎಂದನು. \p \v 31 ಯಾಕೋಬನು ತನಗೆ ಪ್ರಮಾಣಮಾಡು ಎಂದಾಗ ಯೋಸೇಫನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ತನ್ನ ಊರುಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು. \c 48 \s1 ಮನಸ್ಸೆ ಮತ್ತು ಎಫ್ರಾಯೀಮ್ \p \v 1 ಕೆಲವು ಕಾಲದ ನಂತರ ಯೋಸೇಫನಿಗೆ, “ನಿನ್ನ ತಂದೆ ಅಸ್ವಸ್ಥನಾಗಿದ್ದಾನೆ,” ಎಂಬ ಸುದ್ದಿ ಬಂದಿತು. ಆಗ ಅವನು ತನ್ನ ಇಬ್ಬರು ಪುತ್ರರಾದ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಕರೆದುಕೊಂಡು ತಂದೆಯ ಬಳಿಗೆ ಬಂದನು. \v 2 ಯಾಕೋಬನಿಗೆ, “ನಿನ್ನ ಮಗ ಯೋಸೇಫನು ಬಂದಿದ್ದಾನೆ,” ಎಂದು ತಿಳಿಸಿದಾಗ, ಇಸ್ರಾಯೇಲನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕುಳಿತುಕೊಂಡನು. \p \v 3 ಆಗ ಯಾಕೋಬನು ಯೋಸೇಫನಿಗೆ, “ಸರ್ವಶಕ್ತ ದೇವರು ಕಾನಾನ್ ದೇಶದ ಲೂಜ್ ಎಂಬಲ್ಲಿ ನನಗೆ ಕಾಣಿಸಿಕೊಂಡು, ನನ್ನನ್ನು ಆಶೀರ್ವದಿಸಿದರು. \v 4 ದೇವರು ನನಗೆ, ‘ನಿನ್ನನ್ನು ಅಭಿವೃದ್ಧಿಪಡಿಸಿ, ನಿನ್ನ ಸಂತತಿಯನ್ನು ಹೆಚ್ಚಿಸುವೆನು. ಅನೇಕ ಜನಾಂಗಗಳು ನಿನ್ನಿಂದುಟಾಗುವಂತೆ ಮಾಡುವೆನು, ನಿನ್ನ ತರುವಾಯ ನಿನ್ನ ಸಂತತಿಗೂ ಈ ದೇಶವನ್ನು ಶಾಶ್ವತವಾದ ಸ್ವತ್ತನ್ನಾಗಿ ಕೊಡುತ್ತೇನೆ,’ ಎಂದು ಹೇಳಿದರು. \p \v 5 “ಈಗ ನಾನು ನಿನ್ನ ಬಳಿಗೆ ಈಜಿಪ್ಟಿಗೆ ಬರುವ ಮೊದಲು ಈಜಿಪ್ಟಿನಲ್ಲಿ ನಿನಗೆ ಹುಟ್ಟಿದ ಇಬ್ಬರು ಪುತ್ರರಾದ ಎಫ್ರಾಯೀಮ್ ಮನಸ್ಸೆಯರು ನನ್ನವರಾಗಿರಬೇಕು. ಅವರು ರೂಬೇನ್ ಮತ್ತು ಸಿಮೆಯೋನರಂತೆ ನನ್ನವರಾಗಿರಬೇಕು. \v 6 ಆದರೆ ಅವರ ತರುವಾಯ ನಿನ್ನಿಂದ ಹುಟ್ಟುವ ಸಂತಾನವು ನಿನ್ನದಾಗಿರಲಿ. ಅವರು ತಮ್ಮ ಸಹೋದರರ ಸೊತ್ತಿಗೆ ಬಾಧ್ಯತೆಯನ್ನು ಪಡೆದು ಅವರ ಕುಲದ ಹೆಸರನ್ನೇ ಇಟ್ಟುಕೊಳ್ಳಲಿ. \v 7 ನಾನು ಪದ್ದನ್ ಅರಾಮಿನಿಂದ ಬಂದಾಗ, ಕಾನಾನ್ ದೇಶದಲ್ಲಿ ಎಫ್ರಾತಿನಿಂದ ಸ್ವಲ್ಪ ದೂರವಾಗಿರುವಾಗ, ರಾಹೇಲಳು ಸತ್ತುಹೋದಳು. ಅಲ್ಲಿ ಅಂದರೆ, ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಆಕೆಯನ್ನು ಸಮಾಧಿಮಾಡಿದೆನು,” ಎಂದನು. \p \v 8 ಆಗ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ಕಂಡು, “ಇವರು ಯಾರು?” ಎಂದನು. \p \v 9 ಅದಕ್ಕೆ ಯೋಸೇಫನು ತನ್ನ ತಂದೆಗೆ, “ದೇವರು ಈ ಸ್ಥಳದಲ್ಲಿ ನನಗೆ ಕೊಟ್ಟ ನನ್ನ ಪುತ್ರರು,” ಎಂದನು. \p ಆಗ ಇಸ್ರಾಯೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ನಾನು ಅವರನ್ನು ಆಶೀರ್ವದಿಸುತ್ತೇನೆ,” ಎಂದನು. \p \v 10 ಇಸ್ರಾಯೇಲನು ಮುದುಕನಾಗಿದ್ದದ್ದರಿಂದ, ಅವನ ಕಣ್ಣುಗಳು ಕಾಣದಷ್ಟು ಮಬ್ಬಾಗಿದ್ದವು. ಯೋಸೇಫನು ಅವರನ್ನು ಅವನ ಸಮೀಪಕ್ಕೆ ತಂದಾಗ, ಅವನು ಅವರನ್ನು ಮುದ್ದಿಟ್ಟು, ಅಪ್ಪಿಕೊಂಡನು. \p \v 11 ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಾಣುವೆನೆಂದು ನಾನು ನೆನಸಿರಲಿಲ್ಲ. ಆದರೆ ನಿನ್ನ ಸಂತಾನವನ್ನು ಸಹ ದೇವರು ನನಗೆ ಕಾಣುವಂತೆ ಅನುಗ್ರಹಿಸಿದ್ದಾನೆ,” ಎಂದನು. \p \v 12 ಆಗ ಯೋಸೇಫನು ಅವರನ್ನು ಮೊಣಕಾಲುಗಳ ಬಳಿಯಿಂದ ಬರಮಾಡಿ ತಂದೆಗೆ ಅಡ್ಡಬಿದ್ದನು. \v 13 ತರುವಾಯ ಯೋಸೇಫನು ತನ್ನ ಬಲಗಡೆಯಲ್ಲಿ ಇಸ್ರಾಯೇಲನ ಎಡಗೈಗೆ ಎದುರಾಗಿ ಎಫ್ರಾಯೀಮನನ್ನೂ, ತನ್ನ ಎಡಗಡೆಯಲ್ಲಿ ಇಸ್ರಾಯೇಲನ ಬಲಗೈಗೆ ಎದುರಾಗಿ ಮನಸ್ಸೆಯನ್ನೂ ನಿಲ್ಲಿಸಿ, ಅವರಿಬ್ಬರನ್ನೂ ತನ್ನ ತಂದೆಯ ಬಳಿಗೆ ತಂದನು. \v 14 ಆಗ ಇಸ್ರಾಯೇಲನು ತನ್ನ ಬಲಗೈಯನ್ನು ಚಾಚಿ ಚಿಕ್ಕವನಾದ ಎಫ್ರಾಯೀಮನ ತಲೆಯ ಮೇಲೆಯೂ, ತನ್ನ ಎಡಗೈಯನ್ನು ಮನಸ್ಸೆಯ ತಲೆಯ ಮೇಲೆಯೂ ಇಟ್ಟನು. ಮನಸ್ಸೆಯು ಹಿರಿಯವನಾಗಿದ್ದರೂ, ಬೇಕೆಂದೇ ಅವನು ತನ್ನ ಕೈಗಳನ್ನು ಹಾಗೆ ಇಟ್ಟನು. \p \v 15 ಆಗ ಅವನು ಯೋಸೇಫನನ್ನು ಹೀಗೆ ಆಶೀರ್ವದಿಸಿದನು, \q1 “ನನ್ನ ತಂದೆ \q2 ಅಬ್ರಹಾಮನೂ ಇಸಾಕನೂ ಯಾವ ದೇವರ ಮುಂದೆ ನಡೆದುಕೊಂಡರೋ, \q1 ಆ ದೇವರೇ ನಾನು ಹುಟ್ಟಿದಂದಿನಿಂದ ಇಂದಿನವರೆಗೆ \q2 ನನಗೆ ಕುರುಬ ಆಗಿದ್ದ ದೇವರು. \q1 \v 16 ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ಆ ದೇವರ ದೂತ, \q2 ಈ ಹುಡುಗರನ್ನು ಆಶೀರ್ವದಿಸಲಿ. \q1 ನನ್ನ ಹೆಸರಿನಿಂದಲೂ, \q2 ನನ್ನ ಪಿತೃಗಳಾದ ಅಬ್ರಹಾಮ, ಇಸಾಕರ ಹೆಸರಿನಿಂದಲೂ \q1 ಅವರು ಮುಂದುವರೆಯಲಿ. \q2 ಭೂಮಿಯ ಮೇಲೆ ಸಮೂಹವಾಗಿ ಹೆಚ್ಚಲಿ.” \p \v 17 ತನ್ನ ತಂದೆಯು ಎಫ್ರಾಯೀಮನ ತಲೆಯ ಮೇಲೆ ಬಲಗೈಯನ್ನು ಇಟ್ಟದ್ದನ್ನು ಯೋಸೇಫನು ಕಂಡಾಗ, ಅದು ಅವನಿಗೆ ಇಷ್ಟವಾಗಿರಲಿಲ್ಲ. ಆದ್ದರಿಂದ ಅವನು ತನ್ನ ತಂದೆಯ ಕೈಯನ್ನು ಹಿಡಿದು, ಎಫ್ರಾಯೀಮನ ತಲೆಯ ಮೇಲಿಂದ ತೆಗೆದು, ಮನಸ್ಸೆಯ ತಲೆಯ ಮೇಲೆ ಇಡುವುದರಲ್ಲಿದ್ದನು. \v 18 ಯೋಸೇಫನು ತನ್ನ ತಂದೆಗೆ, “ಅಪ್ಪಾ, ಹಾಗಲ್ಲ, ಇವನೇ ಜೇಷ್ಠಪುತ್ರನು. ಇವನ ತಲೆಯ ಮೇಲೆ ಬಲಗೈ ಇಡು,” ಎಂದನು. \p \v 19 ಅದಕ್ಕೆ ಅವನ ತಂದೆಯು ಒಪ್ಪದೆ, “ನನಗೆ ಗೊತ್ತು. ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವುದಲ್ಲದೆ ಅವನು ದೊಡ್ಡವನಾಗುವನು. ಆದರೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತತಿಯು ಜನಾಂಗಗಳ ಸಮೂಹವಾಗುವುದು,” ಎಂದನು. \v 20 ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವದಿಸಿ, ಹೀಗೆಂದನು: \q1 “ನಿಮ್ಮ ಹೆಸರಿನಲ್ಲಿ ಇಸ್ರಾಯೇಲರು ಈ ಆಶೀರ್ವಾದವನ್ನು ಹೇಳುವರು: \q2 ‘ಎಫ್ರಾಯೀಮ್ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲಿ.’ ” \m ಹೀಗೆ ಹೇಳುತ್ತಾ ಯಾಕೋಬನು ಎಫ್ರಾಯೀಮನಿಗೆ ಮನಸ್ಸೆಗಿಂತಲೂ ಉನ್ನತಸ್ಥಾನವನ್ನು ಕೊಟ್ಟನು. \p \v 21 ಆಗ ಇಸ್ರಾಯೇಲನು ಯೋಸೇಫನಿಗೆ, “ನಾನು ಸಾಯುತ್ತೇನೆ, ಆದರೆ ದೇವರು ನಿಮ್ಮ ಸಂಗಡವಿದ್ದು, ನಿಮ್ಮನ್ನು ನಿಮ್ಮ ಪಿತೃಗಳ ದೇಶಕ್ಕೆ ಮತ್ತೆ ಸೇರಿಸುವರು. \v 22 ಇದಲ್ಲದೆ ನಾನು ನನ್ನ ಖಡ್ಗದಿಂದಲೂ ಬಿಲ್ಲಿನಿಂದಲೂ ಅಮೋರಿಯರ ಕೈಯಿಂದ ತೆಗೆದುಕೊಂಡ ಒಂದು ಹೊಲವನ್ನು ನಿನ್ನ ಸಹೋದರರಿಗಿಂತ ಹೆಚ್ಚಾಗಿ ನಿನಗೆ ಕೊಟ್ಟಿದ್ದೇನೆ,” ಎಂದನು. \c 49 \s1 ಯಾಕೋಬನು ತನ್ನ ಮಕ್ಕಳನ್ನು ಆಶೀರ್ವದಿಸಿದ್ದು \p \v 1 ಆಗ ಯಾಕೋಬನು ತನ್ನ ಪುತ್ರರನ್ನು ಕರೆಯಿಸಿ ಅವರಿಗೆ, “ನೀವೆಲ್ಲರೂ ಕೂಡಿಬನ್ನಿರಿ. ಅಂತ್ಯ ದಿನಗಳಲ್ಲಿ ನಿಮಗೆ ಸಂಭವಿಸುವುದನ್ನು ನಿಮಗೆ ತಿಳಿಸುತ್ತೇನೆ. \q1 \v 2 “ಯಾಕೋಬನ ಪುತ್ರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ, \q2 ನಿಮ್ಮ ತಂದೆ ಇಸ್ರಾಯೇಲನ ಮಾತಿಗೆ ಕಿವಿಗೊಡಿರಿ. \b \q1 \v 3 “ರೂಬೇನನೇ, ನೀನು ನನ್ನ ಜೇಷ್ಠಪುತ್ರನು. \q2 ನನ್ನ ಶಕ್ತಿ, ನನ್ನ ಬಲದ ಸಂಕೇತವೂ, \q2 ಗೌರವದಲ್ಲಿ ಶಕ್ತಿಯಲ್ಲಿ ಮಿತಿಮೀರಿದವನೂ ಆಗಿರುವೆ. \q1 \v 4 ನೀರಿನಂತೆ ಚಂಚಲನಾಗಿದ್ದು, ನೀನು ಶ್ರೇಷ್ಠನಾಗುವುದಿಲ್ಲ. \q2 ಏಕೆಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆಮಾಡಿದೆ, \q2 ನನ್ನ ಹಾಸಿಗೆಯನ್ನು ಏರಿದೆ. \b \q1 \v 5 “ಸಿಮೆಯೋನನೂ ಲೇವಿಯೂ ಸಹೋದರರು \q2 ಹಿಂಸಾಚಾರದ ಆಯುಧಗಳು. \q1 \v 6 ನನ್ನ ಮನವೇ, ಅವರ ಆಲೋಚನೆಗೆ ಒಳಪಡಬೇಡ. \q2 ನನ್ನ ಪ್ರಾಣವೇ, ಅವರ ಕೂಟಗಳಲ್ಲಿ ಸೇರಬೇಡ. \q1 ಅವರು ತಮ್ಮ ಕೋಪದಲ್ಲಿ ಮನುಷ್ಯರನ್ನು ಕೊಂದರು, \q2 ಮದದಿಂದ ಎತ್ತುಗಳನ್ನು ಊನಪಡಿಸಿದರು. \q1 \v 7 ಅವರ ಕೋಪವು ಭಯಂಕರವಾಗಿಯೂ \q2 ಅವರ ರೌದ್ರವು ಕ್ರೂರವಾಗಿಯೂ ಇದ್ದು, \q2 ಅದಕ್ಕೆ ಶಾಪಗ್ರಸ್ತವಾಗಲಿ. \q1 ಯಾಕೋಬನ ಕುಟುಂಬದಲ್ಲಿ ಅವರನ್ನು ವಿಭಾಗಿಸಿ \q2 ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು. \b \q1 \v 8 “ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳುವರು. \q2 ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವುದು. \q2 ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡಬೀಳುವರು. \q1 \v 9 ಯೆಹೂದನು ಸಿಂಹದ ಮರಿಯಾಗಿದ್ದಾನೆ. \q2 ನನ್ನ ಮಗನೇ, ಬೇಟೆಹಿಡಿದು ಮೇಲಕ್ಕೆ ಬಂದೆ. \q1 ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. \q2 ಅವನನ್ನು ಕೆಣಕುವವರು ಯಾರು? \q1 \v 10 ರಾಜದಂಡವನ್ನು ಹಿಡಿಯತಕ್ಕವನು ಶೀಲೋವಿನಿಂದ ಬರುವ ತನಕ, \q2 ಯೆಹೂದನ ಕೈಯಿಂದ ರಾಜದಂಡವಾಗಲೀ, \q1 ಆಡಳಿತಗಾರನ ಅಧಿಕಾರವಾಗಲೀ ಬಿಟ್ಟು ಹೋಗುವುದಿಲ್ಲ. \q2 ಎಲ್ಲಾ ಜನಾಂಗಗಳು ಅವನಿಗೆ ವಿಧೇಯವಾಗುವುವು. \q1 \v 11 ಅವನು ತನ್ನ ವಾಹನ ಪಶುವನ್ನು ದ್ರಾಕ್ಷಾಲತೆಗೆ ಕಟ್ಟುವನು. \q2 ರಾಜದ್ರಾಕ್ಷೆಗೆ ತನ್ನ ಕತ್ತೆಯನ್ನು ಬಿಗಿಯುವನು. \q1 ದ್ರಾಕ್ಷಾರಸದಲ್ಲಿ ತನ್ನ ಬಟ್ಟೆ ಒಗೆಯುವನು, \q2 ದ್ರಾಕ್ಷಾರಸದಲ್ಲಿಯೇ ತನ್ನ ವಸ್ತ್ರಗಳನ್ನು ಅದ್ದಿ ತೊಳೆಯುವನು. \q1 \v 12 ದ್ರಾಕ್ಷಾರಸದಿಂದ ಅವನ ಕಣ್ಣುಗಳು ಕೆಂಪಾಗಿರುವವು, \q2 ಹಾಲಿನಿಂದ ಅವನ ಹಲ್ಲುಗಳು ಬಿಳುಪಾಗಿರುವವು. \b \q1 \v 13 “ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು, \q2 ಅವನಿಗೆ ಹಡಗುಗಳು ಸೇರುವ ರೇವೂ ಇರುವುದು. \q2 ಅವನ ಮೇರೆಯು ಸೀದೋನಿಗೆ ಮುಟ್ಟುವುದು. \b \q1 \v 14 “ಇಸ್ಸಾಕಾರನು ಕುರಿಯ ಹಟ್ಟಿಗಳ ನಡುವೆ \q2 ಮಲಗಿಕೊಳ್ಳುವ ಬಲವುಳ್ಳ ಕತ್ತೆಯಾಗಿದ್ದಾನೆ. \q1 \v 15 ವಿಶ್ರಾಂತಿಯು ಒಳ್ಳೆಯದೆಂದೂ \q2 ದೇಶವು ರಮ್ಯವೆಂದೂ ನೋಡಿ \q1 ಹೊರೆ ಹೊರುವುದಕ್ಕೆ ತನ್ನ ಹೆಗಲನ್ನು ಬಗ್ಗಿಸಿ \q2 ಬಿಟ್ಟಿಯ ಕೆಲಸ ಮಾಡುವನು. \b \q1 \v 16 “ದಾನನು ಇಸ್ರಾಯೇಲನ ಗೋತ್ರಗಳಲ್ಲಿ ಒಂದು ಗೋತ್ರವಾಗಿ \q2 ತನ್ನ ಜನರಿಗೆ ನ್ಯಾಯತೀರಿಸುವನು. \q1 \v 17 ದಾನನು ಮಾರ್ಗದಲ್ಲಿರುವ ಸರ್ಪವೂ \q2 ದಾರಿಯಲ್ಲಿರುವ ಹಾವೂ ಆಗಿರುವನು. \q1 ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ, \q2 ಹತ್ತಿದವನು ಬೋರಲು ಬೀಳುವನು. \b \q1 \v 18 “ಯೆಹೋವ ದೇವರೇ, ನಿಮ್ಮ ವಿಮೋಚನೆಗಾಗಿ ಕಾಯುತ್ತಿದ್ದೇನೆ. \b \q1 \v 19 “ಗಾದನ ಮೇಲೆ ಸೈನ್ಯವು ದಾಳಿಮಾಡುವುದು, \q2 ಕೊನೆಗೆ ಅವನೇ ಅವರನ್ನು ಓಡಿಸಿಬಿಡುವನು. \b \q1 \v 20 “ಆಶೇರನ ಆಹಾರವು ಕೊಬ್ಬಿದ ಆಹಾರವು. \q2 ಅವನು ಅರಸನಿಗೆ ಸವಿಯೂಟವನ್ನು ಕೊಡುವನು. \b \q1 \v 21 “ನಫ್ತಾಲಿ ಬಿಡುಗಡೆ ಹೊಂದಿದ ಜಿಂಕೆ, \q2 ಅವನು ಮಾತುಗಳು ಸುಂದರ ಮಕ್ಕಳ ಮಾತುಗಳಂತೆ. \b \q1 \v 22 “ಯೋಸೇಫನು ಫಲಭರಿತವಾದ ದ್ರಾಕ್ಷಿಬಳ್ಳಿ \q2 ಕಾಲುವೆಗಳ ಬಳಿಯಲ್ಲಿರುವ ಫಲಭರಿತ ದ್ರಾಕ್ಷಿಬಳ್ಳಿ, \q2 ಅದರ ಕೊಂಬೆಗಳು ಗೋಡೆಗಳನ್ನೇರುತ್ತವೆ. \q1 \v 23 ಸಿಟ್ಟಿನಿಂದ ಬಿಲ್ಲುಗಾರರು ಅವನ ಮೇಲೆ ಬೀಳುವರು. \q2 ವಿರೋಧದಿಂದ ಅವನ ಮೇಲೆ ಬಾಣಗಳನ್ನು ಎಸೆಯುವರು. \q1 \v 24 ಆದರೆ ಅವನ ಬಿಲ್ಲು ಸ್ಥಿರವಾಗಿ ನಿಲ್ಲುವುದು. \q2 ಅವನ ಬಲವಾದ ತೋಳುಗಳು ಚುರುಕಾಗಿ ನಿಂತವು. \q1 ಇದಕ್ಕೆ ಕಾರಣ ಯಾಕೋಬನಿಗೆ ಸರ್ವಶಕ್ತರಾಗಿರುವ ದೇವರ ಹಸ್ತವೇ; \q2 ಇದಕ್ಕೆ ಕಾರಣ ಇಸ್ರಾಯೇಲನ ಬಂಡೆಯಾಗಿರುವ ಕುರುಬ. \q1 \v 25 ಇದಕ್ಕೆ ಕಾರಣ ನಿನಗೆ ಸಹಾಯ ಮಾಡುವ ನಿನ್ನ ಪಿತೃಗಳ ದೇವರು; \q2 ನಿನ್ನನ್ನು ಸರ್ವಶಕ್ತರಾದ ದೇವರು ಆಶೀರ್ವದಿಸಲಿ. \q1 ಆ ಆಶೀರ್ವಾದಗಳು ಪರಲೋಕದವುಗಳು. \q2 ಆ ಆಶೀರ್ವಾದಗಳು ಕೆಳಗಿನಾಳದಲ್ಲಿರುವವುಗಳು. \q2 ಅವು ಎದೆಯ ಹಾಗೂ ಗರ್ಭದ ಆಶೀರ್ವಾದಗಳು. \q1 \v 26 ಪುರಾತನ ಪರ್ವತಗಳ ಆಶೀರ್ವಾದಗಳಿಗಿಂತ \q2 ನಿನ್ನ ತಂದೆಯ ಆಶೀರ್ವಾದಗಳು ಶ್ರೇಷ್ಠವಾದವುಗಳು. \q2 ಅವು ಪುರಾತನ ಶಿಖರಗಳ ಐಶ್ವರ್ಯಕ್ಕಿಂತ ಹೆಚ್ಚಿನವುಗಳು. \q1 ಇವೆಲ್ಲವೂ ಯೋಸೇಫನ ತಲೆಯ ಮೇಲೆ ಅಂದರೆ, \q2 ತನ್ನ ಸಹೋದರರಲ್ಲಿ ರಾಜಕುಮಾರನಾದವನ ಹಣೆಯ ಮೇಲಿರಲಿ. \b \q1 \v 27 “ಬೆನ್ಯಾಮೀನನು ಕ್ರೂರವಾದ ತೋಳದಂತಿದ್ದಾನೆ. \q2 ಬೆಳಿಗ್ಗೆ ತಿನ್ನುತ್ತಾನೆ, \q2 ಸಂಜೆ ಕೊಳ್ಳೆಯನ್ನು ಹಂಚಿಕೊಳ್ಳುತ್ತಾನೆ.” \p \v 28 ಇವರೆಲ್ಲಾ ಇಸ್ರಾಯೇಲಿನ ಹನ್ನೆರಡು ಗೋತ್ರಗಳು. ಅವರ ತಂದೆ ಅವರಿಗೆ ಹೇಳಿದ್ದೂ ಇದೇ. ಅವನು ಒಬ್ಬೊಬ್ಬನನ್ನೂ ಅವನಿಗೆ ತಕ್ಕ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು. \s1 ಯಾಕೋಬನ ಮರಣ \p \v 29 ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನೆಂದರೆ, “ನಾನು ನನ್ನ ಜನರೊಂದಿಗೆ ಸೇರಿಕೊಳ್ಳುತ್ತೇನೆ. ನನ್ನ ಪಿತೃಗಳ ಸಂಗಡ ಹಿತ್ತಿಯನಾದ ಎಫ್ರೋನನ ಹೊಲದಲ್ಲಿರುವ ಗವಿಯಲ್ಲಿ \v 30 ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲದಲ್ಲಿರುವಂಥ ಅಬ್ರಹಾಮನು, ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಳಿರಿ. \v 31 ಅಲ್ಲಿ ಅಬ್ರಹಾಮನನ್ನೂ, ಅವನ ಹೆಂಡತಿ ಸಾರಳನ್ನೂ ಹೂಳಿದರು. ಅಲ್ಲಿ ಇಸಾಕನನ್ನೂ, ಅವನ ಹೆಂಡತಿ ರೆಬೆಕ್ಕಳನ್ನೂ ಹೂಳಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಳಿದೆನು. \v 32 ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಕೊಂಡುಕೊಂಡದ್ದು,” ಎಂದನು. \p \v 33 ಯಾಕೋಬನು ತನ್ನ ಪುತ್ರರಿಗೆ ಆಜ್ಞಾಪಿಸಿದ ತರುವಾಯ, ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಪಿತೃಗಳೊಂದಿಗೆ ಸೇರಿದನು. \c 50 \p \v 1 ಆಗ ಯೋಸೇಫನು ತನ್ನ ತಂದೆಯ ಶವದ ಮೇಲೆ ಬಿದ್ದು, ಅವನಿಗಾಗಿ ಕಣ್ಣೀರು ಸುರಿಸುತ್ತಾ ಅವನಿಗೆ ಮುದ್ದಿಟ್ಟನು. \v 2 ಯೋಸೇಫನು ತನ್ನ ತಂದೆ ಇಸ್ರಾಯೇಲನಿಗೆ ಸುಗಂಧದ್ರವ್ಯವನ್ನು ಹಾಕಬೇಕೆಂದು ತನ್ನ ದಾಸರಾದ ವೈದ್ಯರಿಗೆ ಅಪ್ಪಣೆಕೊಟ್ಟನು. \v 3 ವೈದ್ಯರು ಇಸ್ರಾಯೇಲನಿಗೆ ನಲವತ್ತು ದಿನಗಳವರೆಗೆ ಸುಗಂಧದ್ರವ್ಯಗಳ ಲೇಪನ ಮಾಡಿದರು. ಅದಕ್ಕಾಗಿ ಅಷ್ಟು ಸಮಯ ಬೇಕಾಗಿತ್ತು. ಇದಲ್ಲದೆ ಈಜಿಪ್ಟಿನವರು ಅವನಿಗಾಗಿ ಎಪ್ಪತ್ತು ದಿವಸ ದುಃಖಪಟ್ಟರು. \p \v 4 ಅವನಿಗಾಗಿ ದುಃಖಿಸುವ ದಿನಗಳು ಮುಗಿದ ಮೇಲೆ ಯೋಸೇಫನು ಫರೋಹನ ಆಸ್ಥಾನದವರಿಗೆ, “ನಾನು ನಿಮ್ಮ ಕಣ್ಣುಗಳ ಮುಂದೆ ದಯೆ ಹೊಂದಿದ್ದೇಯಾದರೆ, ಫರೋಹನ ಕಿವಿಗಳಲ್ಲಿ ಈ ಮಾತು ಹೇಳಬೇಕು. \v 5 ‘ನನಗೆ ನನ್ನ ತಂದೆ, “ನಾನು ಸಾಯುತ್ತೇನೆ, ನಾನು ಕಾನಾನ್ ದೇಶದಲ್ಲಿ ನನಗೋಸ್ಕರ ಅಗೆದ ನನ್ನ ಸಮಾಧಿಯಲ್ಲಿಯೇ ನನ್ನನ್ನು ಸಮಾಧಿಮಾಡಬೇಕು,” ಎಂದು ನನ್ನಿಂದ ಪ್ರಮಾಣ ಮಾಡಿಸಿದ್ದಾನೆ.’ ಹೀಗಿರುವುದರಿಂದ ನಾನು ಹೋಗಿ ನನ್ನ ತಂದೆಯನ್ನು ಹೂಳಿ, ತಿರುಗಿ ಬರುವ ಹಾಗೆ ಅಪ್ಪಣೆಯಾಗಬೇಕು,” ಎಂದನು. \p \v 6 ಆಗ ಫರೋಹನು, “ನಿನ್ನ ತಂದೆಯು ನಿನ್ನಿಂದ ಪ್ರಮಾಣ ಮಾಡಿಸಿದಂತೆ, ನೀನು ಹೋಗಿ ನಿನ್ನ ತಂದೆಯನ್ನು ಹೂಳಿಡು,” ಎಂದನು. \p \v 7 ಹೀಗೆ ಯೋಸೇಫನು ತನ್ನ ತಂದೆಯನ್ನು ಸಮಾಧಿಮಾಡುವದಕ್ಕೆ ಹೊರಟುಹೋದನು. ಅವನ ಸಂಗಡ ಫರೋಹನ ದಾಸರೆಲ್ಲರೂ ಅರಮನೆಯ ಹಿರಿಯರೆಲ್ಲರೂ ಈಜಿಪ್ಟ್ ದೇಶದ ಮುಖ್ಯಸ್ಥರೆಲ್ಲರೂ, \v 8 ಯೋಸೇಫನ ಮನೆಯವರೆಲ್ಲರೂ ಅವನ ಸಹೋದರರೂ ಅವನ ತಂದೆಯ ಮನೆಯವರೆಲ್ಲರೂ ಹೋದರು. ಅವರ ಮಕ್ಕಳನ್ನೂ, ಕುರಿದನಗಳನ್ನೂ ಮಾತ್ರ ಗೋಷೆನ್ ಪ್ರಾಂತದಲ್ಲಿ ಬಿಟ್ಟರು. \v 9 ರಥಗಳೂ, ರಾಹುತರೂ ಅವನ ಸಂಗಡ ಹೊರಟು ಹೋದರು. ಸಮೂಹವು ಬಹಳ ದೊಡ್ಡದಾಗಿತ್ತು. \p \v 10 ಅವರು ಯೊರ್ದನಿನ ಆಚೆ ಇರುವ ಆಟಾದ್ ಕಣಕ್ಕೆ ಬಂದಾಗ, ಅಲ್ಲಿ ಅಧಿಕವಾದ ಮತ್ತು ಮಹಾ ಘೋರವಾದ ಗೋಳಾಟದಿಂದ ದುಃಖಪಟ್ಟರು. \v 11 ದೇಶದ ನಿವಾಸಿಗಳಾದ ಕಾನಾನ್ಯರು ಆಟಾದ್ ಕಣದಲ್ಲಿ ಆಗುತ್ತಿದ್ದ ದುಃಖವನ್ನು ಕಂಡಾಗ, “ಇದು ಈಜಿಪ್ಟಿನವರಿಗೆ ಘೋರವಾದ ದುಃಖ,” ಎಂದು ಹೇಳಿದರು. ಆದ್ದರಿಂದ ಅದಕ್ಕೆ ಆಬೇಲ್ ಮಿಚ್ರಯೀಮ್ ಎಂದು ಹೆಸರಾಯಿತು. ಅದು ಯೊರ್ದನಿನ ಆಚೆ ಇದೆ. \p \v 12 ಯಾಕೋಬನು ತನ್ನ ಪುತ್ರರಿಗೆ ಆಜ್ಞಾಪಿಸಿದ ಪ್ರಕಾರ ಅವನಿಗೆ ಮಾಡಿದರು. \v 13 ಅವನ ಪುತ್ರರು ಅವನನ್ನು ಕಾನಾನ್ ದೇಶಕ್ಕೆ ತೆಗೆದುಕೊಂಡುಹೋಗಿ, ಅಬ್ರಹಾಮನು ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನಿನಿಂದ ಕೊಂಡುಕೊಂಡಿದ್ದ ಮಮ್ರೆಗೆ ಎದುರಾಗಿರುವಂಥ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿದರು. \v 14 ಯೋಸೇಫನು ತನ್ನ ತಂದೆಯನ್ನು ಹೂಳಿದ ಮೇಲೆ, ತನ್ನ ಸಹೋದರರ ಸಂಗಡವೂ, ತನ್ನ ತಂದೆಯನ್ನು ಹೂಳುವುದಕ್ಕಾಗಿ ಅವನ ಸಂಗಡ ಹೋದವರೆಲ್ಲರೂ ಈಜಿಪ್ಟಿಗೆ ತಿರುಗಿ ಬಂದರು. \s1 ಯೋಸೇಫನು ತನ್ನ ಸಹೋದರರನ್ನು ಕ್ಷಮಿಸಿದ್ದು \p \v 15 ತಮ್ಮ ತಂದೆ ಸತ್ತು ಹೋದ ಮೇಲೆ ಯೋಸೇಫನ ಸಹೋದರರು, “ಒಂದು ವೇಳೆ ಯೋಸೇಫನು ನಮ್ಮನ್ನು ಹಗೆಮಾಡಿ, ನಾವು ಅವನಿಗೆ ಮಾಡಿದ್ದ ಎಲ್ಲಾ ಕೇಡಿಗಾಗಿ ನಿಶ್ಚಯವಾಗಿ ಪ್ರತೀಕಾರಮಾಡಬಹುದು,” ಎಂದುಕೊಂಡು, \v 16 ಅವರು ಒಬ್ಬ ಸೇವಕನನ್ನು ಕಳುಹಿಸಿ ಯೋಸೇಫನಿಗೆ, “ನಿನ್ನ ತಂದೆಯು ಮರಣ ಹೊಂದುವುದಕ್ಕಿಂತ ಮುಂಚೆ, \v 17 ‘ನಿನ್ನ ಸಹೋದರರ ಅಪರಾಧವನ್ನೂ ಅವರ ಪಾಪವನ್ನೂ ಮನ್ನಿಸು,’ ಎಂಬುದಾಗಿ ಯೋಸೇಫನಿಗೆ ಹೇಳಿರಿ, ಎಂದು ತಿಳಿಸಿದ್ದಾನೆ. ಹೀಗಿರುವುದರಿಂದ ನಿನ್ನ ತಂದೆಯ ದೇವರ ದಾಸರಾದ ನಾವು ಮಾಡಿದ ಅಪರಾಧವನ್ನು ದಯಮಾಡಿ ಕ್ಷಮಿಸು,” ಎಂದು ತಿಳಿಸಿದರು. ಈ ಸಂದೇಶ ಅವನಿಗೆ ಬಂದಾಗ, ಅವನು ಅತ್ತನು. \p \v 18 ಆಮೇಲೆ ಅವನ ಸಹೋದರರು ಬಂದು ಅವನ ಮುಂದೆ ಅಡ್ಡಬಿದ್ದು, “ನಿನ್ನ ದಾಸರಾಗಿದ್ದೇವೆ,” ಎಂದರು. \p \v 19 ಯೋಸೇಫನು ಅವರಿಗೆ, “ಭಯಪಡಬೇಡಿರಿ, ನಾನು ದೇವರ ಸ್ಥಾನದಲ್ಲಿ ಇದ್ದೇನೋ? \v 20 ನೀವು ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸಿದ್ದೀರಿ, ಆದರೆ ದೇವರು ಒಳ್ಳೆಯದಕ್ಕಾಗಿಯೇ ಸಂಕಲ್ಪಿಸಿದರು. ಈಗ ಬಹುಜನರ ಪ್ರಾಣ ಉಳಿಯುವಂತೆ ನಡೆಯುತ್ತಿದೆ. \v 21 ಹೀಗಿರುವುದರಿಂದ ನೀವು ಭಯಪಡಬೇಡಿರಿ. ನಾನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಸಂರಕ್ಷಿಸುತ್ತೇನೆ,” ಎಂದು ಹೇಳಿ, ಅವರನ್ನು ಸಂತೈಸಿ, ದಯೆಯಿಂದ ಮಾತನಾಡಿದನು. \s1 ಯೋಸೇಫನ ಮರಣ \p \v 22 ಹೀಗೆ ಯೋಸೇಫನೂ, ಅವನ ತಂದೆಯ ಮನೆಯವರೂ ಸಹಿತವಾಗಿ ಈಜಿಪ್ಟಿನಲ್ಲಿ ವಾಸಮಾಡಿದರು. ಯೋಸೇಫನು ನೂರಹತ್ತು ವರ್ಷ ಬದುಕಿದನು. \v 23 ಯೋಸೇಫನು ಎಫ್ರಾಯೀಮನ ಮರಿಮೊಮ್ಮಕ್ಕಳನ್ನೂ ಕಂಡನು. ಮನಸ್ಸೆಯ ಮಗ ಮಾಕೀರನ ಮಕ್ಕಳೂ ಸಹ ಯೋಸೇಫನ ತೊಡೆಯ ಮೇಲೆಯೇ ಬೆಳೆದರು. \p \v 24 ಇದಲ್ಲದೆ ಯೋಸೇಫನು ತನ್ನ ಸಹೋದರರಿಗೆ, “ನಾನು ಸತ್ತಮೇಲೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಿ, ಈ ದೇಶದೊಳಗಿಂದ ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಮಾಡಿದ ದೇಶಕ್ಕೆ ಸೇರುವಂತೆ ಮಾಡುವರು,” ಎಂದನು. \v 25 ಯೋಸೇಫನು ಇಸ್ರಾಯೇಲನ ಮಕ್ಕಳಿಗೆ, “ದೇವರು ನಿಶ್ಚಯವಾಗಿ ನಿಮಗೆ ಸಹಾಯ ಮಾಡುವರು. ಆಗ ನನ್ನ ಎಲುಬುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಬೇಕು,” ಎಂದು ಪ್ರಮಾಣ ಮಾಡಿಸಿದನು. \p \v 26 ಯೋಸೇಫನು ನೂರಹತ್ತು ವರ್ಷದವನಾಗಿ ಈಜಿಪ್ಟ್ ದೇಶದಲ್ಲಿ ಸತ್ತನು. ಅವರು ಅವನಿಗೆ ಸುಗಂಧದ್ರವ್ಯವನ್ನು ಹಾಕಿ, ಈಜಿಪ್ಟಿನಲ್ಲಿ ಪೆಟ್ಟಿಗೆಯೊಳಗೆ ಇಟ್ಟರು.