\id AMO - Biblica® Open Kannada Contemporary Version \ide UTF-8 \h ಆಮೋಸ \toc1 ಆಮೋಸ \toc2 ಆಮೋಸ \toc3 ಆಮೋ \mt1 ಆಮೋಸ \c 1 \p \v 1 ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನು, ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯೋವಾಷನ ಮಗ ಯಾರೊಬ್ಬಾಮನ ದಿವಸಗಳಲ್ಲಿಯೂ ಭೂಕಂಪಕ್ಕೆ ಎರಡು ವರ್ಷಗಳ ಮುಂಚೆ ಇಸ್ರಾಯೇಲಿನ ವಿಷಯವಾಗಿ ಕಂಡ ದರ್ಶನಗಳು. \b \b \p \v 2 ಆಮೋಸನು ಹೇಳಿದ್ದೇನೆಂದರೆ: \q1 “ಯೆಹೋವ ದೇವರು ಚೀಯೋನಿನಿಂದ ಗರ್ಜಿಸಿ, \q2 ಯೆರೂಸಲೇಮಿನಿಂದ ತಮ್ಮ ಧ್ವನಿ ಗೈಯುವರು. \q1 ಕುರುಬರ ಹುಲ್ಲುಗಾವಲುಗಳು ಬಾಡಿ ಹೋಗುತ್ತಿವೆ, \q2 ಕರ್ಮೆಲಿನ ತುದಿಯ ಗಿಡಗಳು ಒಣಗಿ ಹೋಗುತ್ತವೆ.” \s1 ಇಸ್ರಾಯೇಲಿನ ನೆರೆಯವರಿಗೆ ನ್ಯಾಯತೀರ್ಪು \p \v 3 ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 ದಮಸ್ಕದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, \q2 ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. \q1 ಏಕೆಂದರೆ ಕಬ್ಬಿಣದ ಬಡಿಗೆಯಿಂದ ಧಾನ್ಯಗಳನ್ನು ಒಕ್ಕುವಂತೆ, \q2 ಅವರು ಗಿಲ್ಯಾದ್ ಜನರನ್ನು ಬಡಿದುಬಿಟ್ಟಿದ್ದಾರೆ. \q1 \v 4 ಆದರೆ ನಾನು ಹಜಾಯೇಲನ ವಂಶದ ಮೇಲೆ ಬೆಂಕಿಯನ್ನು ಕಳುಹಿಸುವೆನು. \q2 ಅದು ಬೆನ್ಹದದನ ಕೋಟೆಗಳನ್ನು ದಹಿಸಿಬಿಡುವುದು. \q1 \v 5 ನಾನು ದಮಸ್ಕದ ಹೆಬ್ಬಾಗಿಲನ್ನು ಸಹ ಮುರಿಯುವೆನು. \q2 ಆವೆನಿನ ಕಣಿವೆಯಿಂದ ನಿವಾಸಿಯನ್ನು \q1 ಮತ್ತು ಬೇತ್ ಏದೆನಿನ ಮನೆಯಿಂದ ರಾಜದಂಡ ಹಿಡಿಯುವವನನ್ನೂ ಕಡಿದುಬಿಡುವೆನು. \q2 ಅರಾಮ್ ಜನರು ಸೆರೆಯಾಗಿ ಕೀರಿಗೆ ಹೋಗುವರು, \q2 ಇದು ಯೆಹೋವ ದೇವರ ನುಡಿ. \p \v 6 ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ಗಾಜದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, \q2 ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. \q1 ಏಕೆಂದರೆ ಅವರು ಎಲ್ಲಾ ಸಮುದಾಯಗಳನ್ನು ಸೆರೆಹಿಡಿದು \q2 ಎದೋಮಿಗೆ ಮಾರಿಬಿಟ್ಟರು. \q1 \v 7 ನಾನು ಗಾಜದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು. \q2 ಅದು ಅವರ ಕೋಟೆಗಳನ್ನು ದಹಿಸಿಬಿಡುವುದು. \q1 \v 8 ಅಷ್ಡೋದಿನಿಂದ ನಿವಾಸಿಯನ್ನು \q2 ಮತ್ತು ಅಷ್ಕೆಲೋನಿನಿಂದ ರಾಜದಂಡ ಹಿಡಿಯುವವನನ್ನು ನಾಶಮಾಡುವೆನು. \q1 ಫಿಲಿಷ್ಟಿಯರಲ್ಲಿ ಕೊನೆಯವರು ಸಾಯುವವರೆಗೂ \q2 ನಾನು ಎಕ್ರೋನಿನ ವಿರುದ್ಧ ನನ್ನ ಕೈಯನ್ನು ತಿರುಗಿಸುವೆನು,” \q2 ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. \p \v 9 ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ಟೈರ್ ಪಟ್ಟಣದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, \q2 ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. \q1 ಏಕೆಂದರೆ ಅವರು ಸಹೋದರರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೆ \q2 ಸೆರೆಯಾಳುಗಳ ಸಂಪೂರ್ಣ ಸಮುದಾಯಗಳನ್ನು ಎದೋಮಿಗೆ ಮಾರಿಬಿಟ್ಟರು. \q1 \v 10 ಆದರೆ ನಾನು ಟೈರ್ ಪಟ್ಟಣದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು. \q2 ಅದು ಅಲ್ಲಿಯ ಕೋಟೆಗಳನ್ನು ದಹಿಸಿಬಿಡುವುದು.” \p \v 11 ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ಎದೋಮಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, \q2 ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. \q1 ಏಕೆಂದರೆ ಅವನು ತನ್ನ ಸಹೋದರನನ್ನು ಖಡ್ಗವನ್ನು ಹಿಂಬಾಲಿಸಿದನು. \q2 ಮತ್ತು ದೇಶದ ಸ್ತ್ರೀಯರನ್ನು ಕೊಂದುಹಾಕಿದನು. \q1 ಏಕೆಂದರೆ ಅವನ ಕೋಪವು ನಿರಂತರವಾಗಿ ಹರಿಯುತ್ತಿತ್ತು. \q2 ಆತನು ರೌದ್ರವನ್ನು ನಿತ್ಯವಾಗಿ ಇಟ್ಟುಕೊಂಡನು. \q1 \v 12 ಆದರೆ ನಾನು ತೇಮಾನಿನ ಮೇಲೆ ಬೆಂಕಿಯನ್ನು ಕಳುಹಿಸುವೆನು. \q2 ಅದು ಬೊಚ್ರದ ಕೋಟೆಗಳನ್ನು ದಹಿಸಿಬಿಡುವುದು.” \p \v 13 ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ಅಮ್ಮೋನಿನ ಮಕ್ಕಳು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, \q2 ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. \q1 ಏಕೆಂದರೆ ತಮ್ಮ ಮೇರೆಯನ್ನು ವಿಸ್ತಾರ ಮಾಡುವುದಕ್ಕಾಗಿ, \q2 ಗಿಲ್ಯಾದಿನ ಗರ್ಭಿಣಿಯರನ್ನು ಸೀಳಿಬಿಟ್ಟಿದ್ದಾರೆ. \q1 \v 14 ನಾನು ರಬ್ಬದ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. \q2 ಅದು ಅದರ ಕೋಟೆಗಳನ್ನು ದಹಿಸಿಬಿಡುವುದು. \q1 ಆಗ ಯುದ್ಧಾರ್ಭಟವೂ, ಚಂಡಮಾರುತದಂಥ ಪ್ರಚಂಡ ಕಾದಾಟವೂ ಉಂಟಾಗುವುವು. \q1 \v 15 ಅವರ ಅರಸನು ತನ್ನ ರಾಜ್ಯಾಧಿಕಾರರ ಸಂಗಡ ಸೆರೆಗೆ ಹೋಗುವನು” \q2 ಎಂದು ಯೆಹೋವ ದೇವರು ಹೇಳುತ್ತಾರೆ. \c 2 \p \v 1 ಯೆಹೋವ ದೇವರು ಹೀಗೆ ಹೇಳುತ್ತಾನೆ: \q1 “ಮೋವಾಬಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, \q2 ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. \q1 ಏಕೆಂದರೆ ಅವನು ಎದೋಮಿನ ಅರಸನ ಎಲುಬುಗಳನ್ನು, \q2 ಸುಟ್ಟು ಸುಣ್ಣ ಮಾಡಿದ್ದಾನೆ. \q1 \v 2 ನಾನು ಮೋವಾಬಿನ ಮೇಲೆ ಬೆಂಕಿಯನ್ನು ಕಳುಹಿಸುವೆನು. \q2 ಅದು ಕೆರೀಯೋತಿನ ಕೋಟೆಗಳನ್ನು ದಹಿಸಿಬಿಡುವುದು. \q1 ಮೋವಾಬು ಆರ್ಭಟದ ಮತ್ತು ತುತೂರಿಯ ಧ್ವನಿಯ ಸಂಗಡ \q2 ಗಲಿಬಿಲಿಯಲ್ಲಿ ಸಾಯುವುದು. \q1 \v 3 ನಾನು ಅದರ ಮಧ್ಯದಿಂದ ನ್ಯಾಯಾಧಿಪತಿಯನ್ನು ಕಡಿದುಹಾಕುವೆನು. \q2 ಎಲ್ಲಾ ಪ್ರಧಾನರನ್ನು ಅಲ್ಲಿ ಅವನೊಂದಿಗೆ ಕೊಲ್ಲುವೆನು,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \p \v 4 ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ಯೆಹೂದದವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, \q2 ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. \q1 ಏಕೆಂದರೆ ಅವರು ಯೆಹೋವ ದೇವರ ನಿಯಮವನ್ನು ನಿರಾಕರಿಸಿದರು. \q2 ಆತನ ಆಜ್ಞೆಗಳನ್ನು ಕೈಗೊಳ್ಳಲಿಲ್ಲ. \q1 ಅವರ ಪಿತೃಗಳು ಅನುಸರಿಸಿದ ಸುಳ್ಳು ದೇವರುಗಳೇ, \q2 ಇವರನ್ನು ದಾರಿ ತಪ್ಪುವವರನ್ನಾಗಿ ಮಾಡಿವೆ. \q1 \v 5 ನಾನು ಯೆಹೂದದ ಮೇಲೆ ಬೆಂಕಿಯನ್ನು ಕಳುಹಿಸುವೆನು. \q2 ಅದು ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.” \s1 ಇಸ್ರಾಯೇಲರ ಮೇಲೆ ತೀರ್ಪು \p \v 6 ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ಇಸ್ರಾಯೇಲಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, \q2 ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. \q1 ಏಕೆಂದರೆ ಅವರು ನಿರಪರಾಧಿಗಳನ್ನು ಬೆಳ್ಳಿಗೆ \q2 ಮತ್ತು ಬಡವರನ್ನು ಒಂದು ಜೋಡಿ ಕೆರಗಳಿಗೆ ಮಾರಿದರು. \q1 \v 7 ಬಡವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದು ಬಿಡುತ್ತಾರೆ. \q2 ದೀನದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. \q1 ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು, \q2 ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತರುತ್ತಾರೆ. \q1 \v 8 ಅವರು ಅಡವು ಇಟ್ಟ ವಸ್ತ್ರಗಳ ಮೇಲೆ \q2 ಪ್ರತಿಯೊಂದು ಬಲಿಪೀಠಗಳ ಬಳಿಯಲ್ಲೂ ಮಲಗುತ್ತಾರೆ. \q1 ನಿಷೇಧಿಸಿದ ದ್ರಾಕ್ಷಾರಸವನ್ನು \q2 ತಮ್ಮ ದೇವರ ಆಲಯದಲ್ಲಿ ಕುಡಿಯುತ್ತಾರೆ. \b \q1 \v 9 “ಆದರೂ ನನ್ನ ಜನರೇ, ದೇವದಾರು ಮರದಂತೆ ಎತ್ತರವಾಗಿ, \q2 ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ, \q2 ಅಮೋರಿಯರನ್ನು ನಾನು ನಾಶ ಪಡಿಸಿದೆನು. \q1 ನಾನು ಮೇಲೆ ಅದರ ಫಲವನ್ನು ಮತ್ತು ಕೆಳಗೆ ಅದರ ಬೇರನ್ನು ಕಿತ್ತು ಹಾಕುವಂತೆ, \q2 ಅವರನ್ನು ನಿರ್ಮೂಲ ಮಾಡುವೆನು. \q1 \v 10 ನಾನೇ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆತಂದೆನು. \q2 ಅಮೋರಿಯರ ದೇಶವನ್ನು ನಿಮಗೆ ಸೊತ್ತಾಗಿ ಕೊಡಲು, \q2 ನಿಮ್ಮನ್ನು ನಾಲ್ವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದೆನು. \b \q1 \v 11 “ನಾನು ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ \q2 ನಿಮ್ಮ ಯೌವನಸ್ಥರಲ್ಲಿ ನಾಜೀರರನ್ನೂ ಎಬ್ಬಿಸಿದೆನು. \q1 ಇಸ್ರಾಯೇಲಿನ ಜನರೇ, ಇದು ಸರಿಯಲ್ಲವೋ?” \q2 ಎಂದು ಯೆಹೋವ ದೇವರು ಹೇಳುತ್ತಾರೆ. \q1 \v 12 “ಆದರೆ ನೀವು ನಾಜೀರರಿಗೆ ಕುಡಿಯಲು ದ್ರಾಕ್ಷಾರಸವನ್ನು ಕೊಟ್ಟಿರಿ. \q2 ಪ್ರವಾದಿಗಳಿಗೆ ಪ್ರವಾದಿಸಬೇಡಿರಿ ಎಂದು ಆಜ್ಞಾಪಿಸಿದಿರಿ. \b \q1 \v 13 “ಇಗೋ, ಸಿವುಡು ತುಂಬಿದ ಬಂಡಿ ಒತ್ತುವ ಪ್ರಕಾರ, \q2 ನಾನು ನಿಮ್ಮನ್ನು ಕೆಳಗೆ ಹಾಕಿ ಒತ್ತುವೆನು. \q1 \v 14 ಆದ್ದರಿಂದ ತ್ವರೆಯಾಗಿ ಓಡುವವನು ತಪ್ಪಿಸಿಕೊಳ್ಳನು. \q2 ಬಲಿಷ್ಠನು ತನ್ನ ತ್ರಾಣವನ್ನು ಬಲಪಡಿಸಿಕೊಳ್ಳಲಾರನು. \q2 ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳನು. \q1 \v 15 ಬಿಲ್ಲು ಹಿಡಿಯುವವನು ಭೂಮಿಯ ಮೇಲೆ ನಿಲ್ಲನು. \q2 ಪಾದತ್ವರಿತನು ತಪ್ಪಿಸಿಕೊಳ್ಳನು. \q2 ಅಶ್ವಾರೂಢನು ತನ್ನ ಪ್ರಾಣವನ್ನು ಉಳಿಸಿಕೊಳ್ಳನು. \q1 \v 16 ಶೂರರಲ್ಲಿ ಧೈರ್ಯ ಹೃದಯವುಳ್ಳವನು, \q2 ಆ ದಿನದಲ್ಲಿ ಬೆತ್ತಲೆಯಾಗಿ ಓಡಿಹೋಗುವನು,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \c 3 \s1 ಇಸ್ರಾಯೇಲಿಗೆ ವಿರುದ್ಧ ಸಾಕ್ಷಿಗಳನ್ನು ಕರೆಯಲಾದದ್ದು \p \v 1 ಇಸ್ರಾಯೇಲರೇ, ಯೆಹೋವ ದೇವರು ನಿಮಗೆ ವಿರೋಧವಾಗಿ ಹೇಳುವ ವಾಕ್ಯವನ್ನು ಕೇಳಿರಿ. ನಾನು ಈಜಿಪ್ಟ್ ದೇಶದೊಳಗಿಂದ ಕರೆದುತಂದ ಸಮಸ್ತ ಕುಟುಂಬಕ್ಕೆ ಹೇಳುವುದೇನೆಂದರೆ: \q1 \v 2 “ಭೂಮಿಯ ಎಲ್ಲಾ ಕುಟುಂಬಗಳಲ್ಲಿ \q2 ನಿಮ್ಮನ್ನು ಮಾತ್ರವೇ ಆರಿಸಿಕೊಂಡಿದ್ದೇನೆ. \q1 ಆದ್ದರಿಂದ ನಾನು ನಿಮ್ಮ ಎಲ್ಲಾ ಪಾಪಗಳಿಗಾಗಿ ಶಿಕ್ಷಿಸುತ್ತೇನೆ.” \b \q1 \v 3 ಒಪ್ಪಂದ ಮಾಡಿಕೊಳ್ಳದ ಹೊರತು, \q2 ಇಬ್ಬರು ಜೊತೆಯಾಗಿ ನಡೆಯಲು ಸಾಧ್ಯವೋ? \q1 \v 4 ಬೇಟೆ ಇಲ್ಲದಿದ್ದರೆ, \q2 ಅಡವಿಯಲ್ಲಿ ಸಿಂಹವು ಗರ್ಜಿಸುವುದೋ? \q1 ಏನಾದರೂ ಹಿಡಿಯದಿದ್ದರೆ, \q2 ಗುಹೆಯಲ್ಲಿರುವ ಎಳೆಯ ಸಿಂಹವು ಅರಚುವುದೋ? \q1 \v 5 ಬೋನು ಇಲ್ಲದಿದ್ದರೆ \q2 ಪಕ್ಷಿಯು ಭೂಮಿಯ ಮೇಲೆ ಉರುಲಿನಲ್ಲಿ ಬೀಳುವುದೇ? \q1 ಏನೂ ಸಿಕ್ಕಿಕೊಳ್ಳದಿದ್ದರೆ, \q2 ಅದನ್ನು ಭೂಮಿಯಿಂದ ಯಾರಾದರೂ ತೆಗೆಯುವರೇ? \q1 \v 6 ಪಟ್ಟಣದಲ್ಲಿ ಕಹಳೆಯನ್ನು ಊದಿದರೆ, \q2 ಜನರು ಹೆದರುವುದಿಲ್ಲವೇ? \q1 ಯೆಹೋವ ದೇವರಿಂದಲ್ಲದೆ \q2 ಪಟ್ಟಣಕ್ಕೆ ಕೇಡು ತಟ್ಟುವುದುಂಟೇ? \b \q1 \v 7 ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ \q2 ತನ್ನ ಯೋಜನೆಗಳನ್ನು ತಿಳಿಸದೆ, \q2 ಸಾರ್ವಭೌಮ ಯೆಹೋವ ದೇವರು ಏನನ್ನೂ ಮಾಡುವುದಿಲ್ಲ. \b \q1 \v 8 ಸಿಂಹವು ಗರ್ಜಿಸಿದರೆ \q2 ಭಯಪಡದೆ ಇರುವವರು ಯಾರು? \q1 ಸಾರ್ವಭೌಮ ಯೆಹೋವ ದೇವರು ನುಡಿದಿದ್ದಾರೆ, \q2 ಅವರ ನುಡಿಯನ್ನು ಪ್ರವಾದಿಸದವರು ಯಾರು? \b \q1 \v 9 ಅಷ್ಡೋದಿನ ಕೋಟೆಗಳಲ್ಲಿ \q2 ಮತ್ತು ಈಜಿಪ್ಟ್ ದೇಶದ ಕೋಟೆಗಳಲ್ಲಿ ಹೀಗೆ ಸಾರಿ ಹೇಳಿರಿ: \q1 “ಸಮಾರ್ಯ ಬೆಟ್ಟಗಳ ಮೇಲೆ ನೀವೆಲ್ಲರೂ ಕೂಡಿಕೊಂಡು, \q2 ಅದರ ಮಧ್ಯದಲ್ಲಿರುವ ದೊಡ್ಡ ಗದ್ದಲವನ್ನೂ \q2 ಅದರೊಳಗಿರುವ ಹೆಚ್ಚಾದ ಹಿಂಸೆಯನ್ನೂ ನೋಡಿರಿ.” \b \q1 \v 10 “ತಮ್ಮ ಕೋಟೆಗಳಲ್ಲಿ ಬಲಾತ್ಕಾರವನ್ನೂ ಕೊಳ್ಳೆಯನ್ನೂ \q2 ನಿಕ್ಷೇಪವಾಗಿ ಕೂಡಿಸಿಕೊಂಡಿರುವವರಿಗೆ, \q1 ನ್ಯಾಯ ನೀತಿಯನ್ನು ಮಾಡುವುದಕ್ಕೆ ತಿಳಿಯುವುದಿಲ್ಲ,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \p \v 11 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ವಿರೋಧಿಯು ದೇಶದ ಸುತ್ತಲೂ ಇರುವನು. \q2 ನಿನ್ನ ಬಲವನ್ನು ತಗ್ಗಿಸುವನು. \q2 ನಿನ್ನ ಅರಮನೆಗಳು ಸೂರೆಯಾಗುವುವು.” \p \v 12 ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ಹೇಗೆ ಕುರುಬನು ಸಿಂಹದ ಬಾಯಿಯಿಂದ \q2 ಎರಡು ಕಾಲಿನ ಎಲಬುಗಳನ್ನು ಅಥವಾ ಕಿವಿಯ ಒಂದು ತುಂಡನ್ನು ರಕ್ಷಿಸಲು ಪ್ರಯತ್ನಿಸುತ್ತಾನೋ \q1 ಹಾಗೆಯೇ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲರು \q2 ಹಾಸಿಗೆಯ ತಲೆ ಮತ್ತು ಮಂಚದ ಬಟ್ಟೆಯ ತುಂಡುಗಳೊಂದಿಗೆ \q2 ಸಂರಕ್ಷಣೆ ಹೊಂದುತ್ತಾರೆ.” \p \v 13 ಸರ್ವಶಕ್ತ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: “ನೀವು ಕೇಳಿ, ಯಾಕೋಬಿನ ಮನೆತನದವರಿಗೆ ವಿರುದ್ಧವಾಗಿ ಸಾಕ್ಷಿ ಕೊಡಿರಿ.” \q1 \v 14 “ನಾನು ಇಸ್ರಾಯೇಲಿನ ಪಾಪಗಳನ್ನು ವಿಚಾರಿಸುವ ದಿವಸದಲ್ಲಿ, \q2 ಬೇತೇಲಿನ ಬಲಿಪೀಠಗಳನ್ನು ನಾಶಮಾಡುವೆನು. \q1 ಬಲಿಪೀಠದ ಕೊಂಬುಗಳು ಕಡಿಯಲಾಗಿ, \q2 ನೆಲಕ್ಕೆ ಉರುಳುವುವು. \q1 \v 15 ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ \q2 ಹೊಡೆದು ಹಾಕುವೆನು. \q1 ಆಗ ದಂತ ಮಂದಿರಗಳು ನಾಶವಾಗುವುವು. \q2 ದೊಡ್ಡ ಮನೆಗಳು ಕೊನೆಗಾಣುವುವು,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \c 4 \s1 ಇಸ್ರಾಯೇಲರು ದೇವರ ಕಡೆಗೆ ತಿರುಗಲಿಲ್ಲ \q1 \v 1 ಸಮಾರ್ಯ ಬೆಟ್ಟದಲ್ಲಿರುವ ಬಾಷಾನಿನ ಹಸುಗಳಂತಿರುವ ಮಹಿಳೆಯರೇ, \q2 ನೀವು ಬಡವರನ್ನು ಹಿಂಸಾಚಾರ ಮಾಡಿ, ದರಿದ್ರರನ್ನು ಜಜ್ಜಿ, \q1 ನಿಮ್ಮ ಪತಿಗಳಿಗೆ, “ಪಾನವನ್ನು ತರಿಸಿರಿ, ಕುಡಿಯೋಣ,” \q2 ಎಂದು ಹೇಳುವವರೇ, ಈ ವಾಕ್ಯವನ್ನು ಕೇಳಿರಿ. \q1 \v 2 “ದಿನಗಳು ಬರುವುವು. \q2 ಆಗ ನಿಮ್ಮನ್ನು ಕೊಂಡಿಗಳಿಂದ ಎಳೆದುಕೊಂಡು ಹೋಗುವರು. \q1 ನಿಮ್ಮಲ್ಲಿ ಅಳಿದುಳಿದವರನ್ನು ಗಾಳಕ್ಕೆ ಸಿಕ್ಕಿದ ಮೀನಿನಂತೆ ಸೆಳೆದೊಯ್ಯುವರು. \q2 ಎಂದು ಸಾರ್ವಭೌಮ ಯೆಹೋವ ದೇವರು ಇದನ್ನು ಆಣೆಯಿಟ್ಟು ನುಡಿದಿದ್ದಾರೆ. \q1 \v 3 ಗೋಡೆಯಲ್ಲಿಯ ಬಿರುಕುಗಳ ಮೂಲಕ \q2 ನೀವು ಹೊರಟು ಹೋಗುವಿರಿ. \q1 ನಿಮ್ಮನ್ನು ಹರ್ಮೋನಿನ ಕಡೆಗೆ ಎಸೆಯಲಾಗುತ್ತದೆ,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \q1 \v 4 “ಪಾಪ ಮಾಡಬೇಕಾದರೆ, ಬೇತೇಲಿಗೆ ಹೋಗಿ ಪಾಪ ಮಾಡಿರಿ. \q2 ಗಿಲ್ಗಾಲಿಗೆ ಹೋಗಿ ಯಥೇಚ್ಛವಾಗಿ ಪಾಪ ಮಾಡಿರಿ. \q1 ಪ್ರತಿದಿನವೂ ಪ್ರಾತಃಕಾಲದ ಬಲಿಗಳನ್ನು ಅರ್ಪಿಸಿರಿ. \q2 ಮೂರು ದಿನಗಳಿಗೊಮ್ಮೆ\f + \fr 4:4 \fr*\fq ದಿನಗಳಿಗೊಮ್ಮೆ \fq*\ft ಅಥವಾ \ft*\fqa ವರ್ಷಗಳು\fqa*\f* ದಶಮಾಂಶವನ್ನು ಸಲ್ಲಿಸಿರಿ.” \q1 \v 5 “ಹುಳಿಹಿಟ್ಟಿನ ರೊಟ್ಟಿಯನ್ನು ಹೋಮ ಮಾಡಿ, \q2 ಸ್ತೋತ್ರದ ಯಜ್ಞವನ್ನೂ ಅರ್ಪಿಸಿರಿ. \q1 ಕಾಣಿಕೆ ಕೊಟ್ಟದ್ದನ್ನು ಹೇಳಿಕೊಳ್ಳಿರಿ. \q2 ಇಸ್ರಾಯೇಲರೇ, ಹೀಗೆ ಮಾಡುವುದು ಇಷ್ಟವಾಗಿದೆ,” \q2 ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. \b \q1 \v 6 “ಪ್ರತಿಯೊಂದು ಪಟ್ಟಣದಲ್ಲಿ ಬರಿದಾದ ಹೊಟ್ಟೆಗಳನ್ನು ನಿಮಗೆ ಕೊಟ್ಟಿದ್ದೇನೆ. \q2 ಪ್ರತಿಯೊಂದು ಪಟ್ಟಣದಲ್ಲಿ ಆಹಾರದ ಕೊರತೆಯಿದೆ. \q1 ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \b \q1 \v 7 “ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ, \q2 ಮಳೆಯನ್ನು ನಾನು ನಿಮ್ಮಿಂದ ಹಿಂದೆಗೆದಿದ್ದೇನೆ. \q1 ಒಂದು ಪಟ್ಟಣದ ಮೇಲೆ ಮಳೆ ಸುರಿಸಿ, \q2 ಇನ್ನೊಂದು ಪಟ್ಟಣದ ಮೇಲೆ ಮಳೆ ಸುರಿಸಲಿಲ್ಲ. \q1 ಒಂದು ಹೊಲದ ಮೇಲೆ ಮಳೆ ಸುರಿಸಿ, \q2 ಇನ್ನೊಂದು ಹೊಲದ ಮೇಲೆ ಮಳೆ ಸುರಿಸಲಿಲ್ಲ ಮತ್ತು ಅದು ಒಣಗಿ ಹೋಯಿತು. \q1 \v 8 ಎರಡು ಅಥವಾ ಮೂರು ಪಟ್ಟಣದವರು ಕುಡಿಯುವ ನೀರಿಗಾಗಿ ಒಂದು ಪಟ್ಟಣದಿಂದ \q2 ಇನ್ನೊಂದು ಪಟ್ಟಣಕ್ಕೆ ಅಲೆದಾಡುತ್ತಾ ಹೋದರೂ, \q2 ಅವರ ಬಾಯಾರಿಕೆ ತೀರಲಿಲ್ಲ. \q1 ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \b \q1 \v 9 “ಬಿಸಿಗಾಳಿಯನ್ನು ಕಳುಹಿಸಿ ನಿಮ್ಮ ಉದ್ಯಾನವನಗಳನ್ನು \q2 ಮತ್ತು ದ್ರಾಕ್ಷಿತೋಟಗಳನ್ನು ಒಣಗುವಂತೆ ಮಾಡಿದೆ. \q2 ನಿಮ್ಮ ಬೆಳೆ ರೋಗ ಮತ್ತು ಶಿಲೀಂಧ್ರವುಗಳಿಂದ ನಾಶವಾಯಿತು. \q1 ನಿಮ್ಮ ಅಂಜೂರದ ಗಿಡ ಮತ್ತು ಎಣ್ಣೆಮರಗಳನ್ನೂ ಮಿಡತೆಗಳು ತಿಂದು ಬಿಡುವಂತೆ ಮಾಡಿದೆ. \q2 ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ, \q2 ಎಂದು ಯೆಹೋವ ದೇವರು ಹೇಳುತ್ತಾರೆ. \b \q1 \v 10 “ಹಿಂದೊಮ್ಮೆ ಈಜಿಪ್ಟಿಗೆ ನಾನು ಮಾಡಿದಂತೆ \q2 ನಿಮ್ಮನ್ನು ವ್ಯಾಧಿಯಿಂದ ಬಾಧಿಸಿದೆ. \q1 ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ, \q2 ನಿಮ್ಮ ಯೌವನಸ್ಥರನ್ನೂ ಖಡ್ಗದಿಂದ ಕೊಂದು ಹಾಕಿದ್ದೇನೆ. \q1 ನಿಮ್ಮ ಪಾಳೆಯಗಳ ದುರ್ವಾಸನೆಯು ನಿಮ್ಮ ಮೂಗು ಸಹಿಸದ ಹಾಗೆ ಮಾಡಿದ್ದೇನೆ. \q2 ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \b \q1 \v 11 “ಸೊದೋಮನ್ನೂ, ಗೊಮೋರವನ್ನೂ ಕೆಡವಿದ ಹಾಗೆ, \q2 ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ. \q1 ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. \q2 ಆದರೂ ನೀವೂ ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \b \q1 \v 12 ಇಸ್ರಾಯೇಲೇ, ನಾನು ನಿನಗೆ ಹೀಗೆ ಮಾಡುತ್ತೇನೆ. \q2 ನಾನು ನಿನಗೆ ಹೀಗೆ ಮಾಡುವುದರಿಂದ, \q2 ನೀನು ನಿನ್ನ ದೇವರನ್ನು ಎದುರುಗೊಳ್ಳಲು ಸಿದ್ಧಮಾಡಿಕೋ. \b \q1 \v 13 ಬೆಟ್ಟಗಳನ್ನು ರೂಪಿಸಿ, \q2 ಗಾಳಿಯನ್ನು ನಿರ್ಮಿಸಿ, \q2 ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ, \q1 ಉದಯವನ್ನು ಅಂಧಕಾರವನ್ನಾಗಿ ಮಾಡಿ, \q2 ಭೂಮಿಯ ಉನ್ನತ ಸ್ಥಳಗಳನ್ನು ತುಳಿದುಬಿಡುವಾತನು, \q2 ಸರ್ವಶಕ್ತರಾದ ಯೆಹೋವ ದೇವರು ಇದೇ ಅವರ ಹೆಸರು. \c 5 \s1 ಒಂದು ಪ್ರಲಾಪ ಮತ್ತು ಪಶ್ಚಾತ್ತಾಪಕ್ಕೆ ಕರೆ \p \v 1 ಇಸ್ರಾಯೇಲಿನ ಜನರೇ, ನಿಮ್ಮನ್ನು ಕುರಿತು ನಾನು ಹಾಡುವ ಈ ಶೋಕಗೀತೆಯ ವಾಕ್ಯವನ್ನು ಕೇಳಿರಿ: \q1 \v 2 “ಇಸ್ರಾಯೇಲ್ ಎಂಬ ಕನ್ಯೆಯು ಬಿದ್ದಿದ್ದಾಳೆ. \q2 ಇನ್ನು ಮೇಲೆ ಎದ್ದೇಳುವುದೇ ಇಲ್ಲ. \q1 ಅವಳು ದಿಕ್ಕಿಲ್ಲದೆ ತನ್ನ ಭೂಮಿಯ ಮೇಲೆ ಒರಗಿದ್ದಾಳೆ. \q2 ಅಲ್ಲಿ ಅವಳನ್ನು ಎಬ್ಬಿಸುವವರು ಯಾರೂ ಇಲ್ಲ.” \p \v 3 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ಯುದ್ಧಕ್ಕೆ ಹೊರಟ ಸಾವಿರ ಮಂದಿ ಸೈನಿಕರಲ್ಲಿ, \q2 ಪಟ್ಟಣಕ್ಕೆ ಮರಳಿದವರು ನೂರೇ ಮಂದಿ. \q1 ರಣರಂಗಕ್ಕೆ ಹೊರಟ ನೂರು ಮಂದಿ ಯೋಧರಲ್ಲಿ, \q2 ಇಸ್ರಾಯೇಲಿಗೆ ಮರಳಿದವರು ಹತ್ತೇ ಮಂದಿ.” \p \v 4 ಯೆಹೋವ ದೇವರು ಇಸ್ರಾಯೇಲಿನ ಮನೆಯವರಿಗೆ ಹೀಗೆ ಹೇಳುತ್ತಾರೆ: \q1 “ನೀವು ನನ್ನನ್ನು ಹುಡುಕಿರಿ ಮತ್ತು ಬದುಕಿಕೊಳ್ಳಿರಿ. \q2 \v 5 ಆದರೆ ಬೇತೇಲನ್ನು ಹುಡುಕಬೇಡಿರಿ. \q1 ಗಿಲ್ಗಾಲಿಗೆ ಹೋಗಬೇಡಿರಿ. \q2 ಬೇರ್ಷೆಬಕ್ಕೆ ಯಾತ್ರೆ ಹೋಗಬೇಡಿರಿ. \q1 ಏಕೆಂದರೆ ಗಿಲ್ಗಾಲು ಸೆರೆಗೆ ನಿಶ್ವಯವಾಗಿ ಹೋಗುವುದು, \q2 ಬೇತೇಲಿನ ಬಾಧೆಗಳು ಕೊನೆಗೊಳ್ಳುವುದಿಲ್ಲ\f + \fr 5:5 \fr*\fq ಕೊನೆಗೊಳ್ಳುವುದಿಲ್ಲ \fq*\ft \+xt ಹೋಶೇ 4:15\+xt* ನೋಡಿರಿ\ft*\f*.” \q1 \v 6 ನೀವು ಯೆಹೋವ ದೇವರನ್ನು ಹುಡುಕಿರಿ ಮತ್ತು ಬದುಕಿರಿ. \q2 ಇಲ್ಲದಿದ್ದರೆ, ಆತನು ಬೆಂಕಿಯಂತೆ ಯೋಸೇಫನ ಗೋತ್ರಗಳಲ್ಲಿ ಪ್ರವೇಶಿಸುವನು. \q1 ಅದು ದಹಿಸಿಬಿಡುವುದು, \q2 ಅದನ್ನು ಆರಿಸುವವರು ಬೇತೇಲಿನಲ್ಲಿ ಯಾರೂ ಇರುವುದಿಲ್ಲ. \b \q1 \v 7 ನ್ಯಾಯವನ್ನು ಕಹಿಯಾಗಿ ತಿರುಗಿಸುವವರೇ, \q2 ನೀತಿಯನ್ನು ಭೂಮಿಯಲ್ಲಿ ಬಿಡುವವರೇ. \b \q1 \v 8 ವೃಷಭ ರಾಶಿಯನ್ನೂ, ಮೃಗಶಿರವನ್ನೂ ಉಂಟು ಮಾಡಿದವನನ್ನೂ \q2 ಕಾರ್ಗತ್ತಲನ್ನು ಉದಯಕ್ಕೆ ಬದಲಿಸಿ, \q2 ಹಗಲನ್ನು ರಾತ್ರಿಯಾಗುವ ಹಾಗೆ ಕತ್ತಲೆ ಮಾಡಿ, \q1 ಸಮುದ್ರದ ನೀರನ್ನು ಬರಮಾಡಿ, \q2 ಅವುಗಳನ್ನು ಭೂಮಿಯ ಮೇಲೆ ಸುರಿಸುವ \q2 ಯೆಹೋವ ದೇವರು ಎಂಬ ಹೆಸರುಳ್ಳವರನ್ನೇ ಹುಡುಕಿರಿ. \q1 \v 9 ಕಣ್ಣು ಮಿಟುಕಿಸುವುದರಲ್ಲಿ ಅವರು ಕೋಟೆಯನ್ನು ನಾಶಪಡಿಸುತ್ತಾರೆ \q2 ಮತ್ತು ಕೋಟೆಯ ನಗರವನ್ನು ವಿನಾಶಪಡಿಸುತ್ತಾರೆ. \b \q1 \v 10 ಸಭೆಯಲ್ಲಿ ದೋಷವನ್ನು ಎತ್ತಿ ತೋರಿಸುವವನನ್ನು ನೀವು ದ್ವೇಷಿಸುತ್ತೀರಿ. \q2 ನಿಮ್ಮ ವಿಷಯವಾಗಿ ಸತ್ಯವನ್ನು ಹೇಳುವವನನ್ನೇ ಹೀನೈಸುತ್ತೀರಿ. \b \q1 \v 11 ಆದಕಾರಣ ನೀವು ಬಡವನನ್ನು ತುಳಿದು \q2 ಅವರ ಧಾನ್ಯಕ್ಕೆ ತೆರಿಗೆ ವಿಧಿಸುತ್ತೀರಿ. \q1 ಆದ್ದರಿಂದ ನೀವು ಕೆತ್ತಿದ ಕಲ್ಲಿನ ಮನೆಗಳನ್ನು ಕಟ್ಟಿದ್ದೀರಿ. \q2 ಆದರೆ ನೀವು ಅವುಗಳಲ್ಲಿ ವಾಸ ಮಾಡದೇ ಇರುವಿರಿ. \q1 ರಮ್ಯವಾದ ದ್ರಾಕ್ಷಿತೋಟಗಳನ್ನು ನೆಟ್ಟಿರಲ್ಲಾ, \q2 ಆದರೆ ಅವುಗಳ ದ್ರಾಕ್ಷಾರಸವನ್ನು ಕುಡಿಯಲಾರಿರಿ. \q1 \v 12 ಏಕೆಂದರೆ ನಿಮ್ಮ ಅನೇಕ ಅಪರಾಧಗಳನ್ನೂ, \q2 ನಿಮ್ಮ ಘೋರವಾದ ಪಾಪಗಳನ್ನೂ ನಾನು ಬಲ್ಲೆನು. \b \q1 ಅವರು ನಿರಪರಾಧಿಯನ್ನು ಬಾಧೆಪಡಿಸಿ, ಲಂಚವನ್ನು ತೆಗೆದುಕೊಂಡರು \q2 ಮತ್ತು ಬಾಗಿಲ ಬಳಿಯಲ್ಲಿರುವ ಬಡವರ ನ್ಯಾಯವನ್ನು ತೀರಿಸದೇ ಕಳುಹಿಸಿಬಿಟ್ಟಿರಿ. \q1 \v 13 ಆದ್ದರಿಂದ ಆ ಕಾಲದಲ್ಲಿ ಬುದ್ಧಿವಂತನು ಮೌನವಾಗಿರುವನು, \q2 ಏಕೆಂದರೆ ಅದು ಕೆಟ್ಟ ಕಾಲವಾಗಿದೆ. \b \q1 \v 14 ನೀವು ಬದುಕುವ ಹಾಗೆ \q2 ಒಳ್ಳೆಯದನ್ನು ಹುಡುಕಿ, ಕೆಟ್ಟದ್ದನ್ನಲ್ಲ. \q1 ಆಗ ನೀವು ಹೇಳಿಕೊಳ್ಳುವಂತೆ \q2 ಸರ್ವಶಕ್ತರಾದ ಯೆಹೋವ ದೇವರು ನಿಮ್ಮ ಸಂಗಡ ಇರುವರು. \q1 \v 15 ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, \q2 ಬಾಗಿಲಲ್ಲಿ ನ್ಯಾಯವನ್ನು ಸ್ಥಾಪಿಸಿರಿ. \q1 ಒಂದು ವೇಳೆ ಸರ್ವಶಕ್ತರಾದ ಯೆಹೋವ ದೇವರು \q2 ಯೋಸೇಫನ ಗೋತ್ರದಲ್ಲಿ ಉಳಿದವರಿಗೆ ಕನಿಕರಿಸಬಹುದು. \p \v 16 ಆದ್ದರಿಂದ ಸರ್ವಶಕ್ತ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: \q1 “ಎಲ್ಲಾ ಬೀದಿಗಳಲ್ಲೂ ವಿಲಾಪಗಳು, \q2 ಎಲ್ಲಾ ಸಾರ್ವಜನಿಕ ಚೌಕದಲ್ಲಿ ದುಃಖದ ಗೋಳಾಟಗಳು ಎನ್ನುವರು. \q1 ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು, \q2 ಗೋಳಾಡುವುದಕ್ಕೂ ಕರೆಯಲಾಗುವುದು. \q1 \v 17 ಎಲ್ಲಾ ದ್ರಾಕ್ಷಿ ತೋಟಗಳಲ್ಲೂ ಗೋಳಾಟವು ಇರುವುದು. \q2 ಏಕೆಂದರೆ ನಾನು ನಿನ್ನ ಮಧ್ಯೆ ಹಾದು ಹೋಗುವೆನು,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \s1 ಯೆಹೋವ ದೇವರ ದಿನ \q1 \v 18 ಯೆಹೋವ ದೇವರ ದಿನವನ್ನು ಅಪೇಕ್ಷಿಸುವವರೇ, \q2 ಅಯ್ಯೋ ನಿಮಗೆ ಕಷ್ಟ! \q1 ಆ ದಿನವನ್ನು ನೀವು ಅಪೇಕ್ಷಿಸುವುದೇಕೆ? \q2 ಯೆಹೋವ ದೇವರ ದಿವಸವು ನಿಮಗೆ ಬೆಳಕಲ್ಲ, ಕತ್ತಲೆಯೇ. \q1 \v 19 ಇದು ಒಬ್ಬ ಮನುಷ್ಯನು ಸಿಂಹದಿಂದ ತಪ್ಪಿಸಿಕೊಂಡು ಓಡಿಹೋಗಿ, \q2 ಕರಡಿಯನ್ನು ಎದುರುಗೊಂಡ ಹಾಗೆಯೂ, \q1 ಇಲ್ಲವೆ ಅವನು ಮನೆಗೆ ಹೋಗಿ \q2 ಗೋಡೆಗೆ ತನ್ನ ಕೈಯನ್ನು ಒರಗಿಸಿದಾಗ, \q2 ಸರ್ಪವು ಕಚ್ಚಿದ ಹಾಗೆಯೂ ಇರುವುದು. \q1 \v 20 ಹೀಗೆ ಯೆಹೋವ ದೇವರ ದಿವಸವು ಬೆಳಕಲ್ಲ, ಕತ್ತಲೆಯೇ. \q2 ಅದರಲ್ಲಿ ಪ್ರಕಾಶವೇನೂ ಇಲ್ಲದ ಕಾರ್ಗತ್ತಲೆಯೇ. \b \q1 \v 21 ನಿಮ್ಮ ಹಬ್ಬಗಳನ್ನು ಹಗೆಮಾಡಿ ತುಚ್ಛೀಕರಿಸುತ್ತೇನೆ. \q2 ನಿಮ್ಮ ಸಭೆಗಳು ನನಗೆ ದುರ್ವಾಸನೆ ಇದ್ದಂತೆ. \q1 \v 22 ನೀವು ನನಗೆ ದಹನಬಲಿಗಳನ್ನೂ ಧಾನ್ಯ ಸಮರ್ಪಣೆಗಳನ್ನೂ ಅರ್ಪಿಸಿದರೂ, \q2 ನಾನು ಅವುಗಳನ್ನು ಅಂಗೀಕರಿಸುವುದಿಲ್ಲ. \q1 ನಿಮ್ಮ ಕೊಬ್ಬಿದ ಪ್ರಾಣಿಗಳ ಸಮಾಧಾನದ ಬಲಿಗಳನ್ನೂ \q2 ನಾನು ಲಕ್ಷಿಸುವುದಿಲ್ಲ. \q1 \v 23 ನಿಮ್ಮ ಹಾಡುಗಳ ಬೊಬ್ಬೆಗಳನ್ನು ನನ್ನಿಂದ ತೊಲಗಿಸಿರಿ. \q2 ನಿಮ್ಮ ವೀಣೆಗಳ ಮಧುರ ಸ್ವರವನ್ನು ನಾನು ಕೇಳುವುದಿಲ್ಲ. \q1 \v 24 ಆದರೆ ನ್ಯಾಯವು ನೀರಿನಂತೆಯೂ \q2 ನೀತಿಯು ಬಲವಾದ ಪ್ರವಾಹದಂತೆಯೂ ಹರಿಯಲಿ. \b \q1 \v 25 ಇಸ್ರಾಯೇಲಿನ ಮನೆತನದವರೇ, \q2 ನೀವು ನನಗೆ ನಲವತ್ತು ವರ್ಷ ಮರುಭೂಮಿಯಲ್ಲಿ ಬಲಿಗಳನ್ನು, ಕಾಣಿಕೆಗಳನ್ನು ಅರ್ಪಿಸಿದಿರೋ? \q1 \v 26 ಆದರೆ ನೀವು ನಿಮಗೋಸ್ಕರ ಮಾಡಿಕೊಂಡ ಮೂರ್ತಿಗಳಾದ \q2 ಸಿಕ್ಕೊತ್ ಎಂಬ ನಿಮ್ಮ ರಾಜನನ್ನೂ \q2 ಕಿಯೂನ್ ಎಂಬ ನಿಮ್ಮ ನಕ್ಷತ್ರ ದೇವತೆಯನ್ನೂ \q2 ನೀವೇ ಹೊತ್ತುಕೊಂಡು ಹೋಗಬೇಕಾಗುವುದು. \q1 \v 27 ಆದ್ದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ, \q2 ಎಂದು ಸರ್ವಶಕ್ತರಾದ ದೇವರೆಂದು ಹೆಸರುಗೊಂಡ ಯೆಹೋವ ದೇವರು ಹೇಳುತ್ತಾರೆ. \c 6 \s1 ನಿಶ್ಚಿಂತೆಯಿಂದ ಇರುವವರಿಗೆ ಕಷ್ಟ \q1 \v 1 ಚೀಯೋನಿನಲ್ಲಿ ಹಾಯಾಗಿರುವವರಿಗೂ, \q2 ಸಮಾರ್ಯ ಬೆಟ್ಟದಲ್ಲಿ ಸುಭದ್ರವಾಗಿರುವವರಿಗೂ, \q1 ಇಸ್ರಾಯೇಲಿನ ಮನೆತನದವರು ಯಾರ ಬಳಿಗೆ ಬರುತ್ತಾರೋ, \q2 ಆ ಪ್ರಮುಖ ಜನಾಂಗದಲ್ಲಿ ಹೆಸರುಗೊಂಡವರಿಗೂ ಕಷ್ಟ! \q1 \v 2 ಕಲ್ನೇ ಪಟ್ಟಣಕ್ಕೆ ಹೋಗಿ ನೋಡಿರಿ. \q2 ಅಲ್ಲಿಂದ ಮಹಾ ಪಟ್ಟಣವಾದ ಹಮಾತಿಗೆ ಹೋಗಿರಿ. \q2 ಅಲ್ಲಿಂದ ಫಿಲಿಷ್ಟಿಯರ ಗತ್ ಊರಿಗೆ ಇಳಿಯಿರಿ. \q1 ಅವು ನಿಮ್ಮ ಎರಡು ರಾಜ್ಯಗಳಿಗಿಂತ ಶ್ರೇಷ್ಠವೋ? \q2 ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಕ್ಕಿಂತ ದೊಡ್ಡದೋ? \q1 \v 3 ನೀವು ಕೆಟ್ಟ ದಿವಸವನ್ನು ದೂರಮಾಡಿಕೊಂಡು, \q2 ಭಯಂಕರ ಆಳ್ವಿಕೆಯನ್ನು ಹತ್ತಿರ ಮಾಡಿಕೊಳ್ಳುತ್ತೀರಿ. \q1 \v 4 ದಂತದ ಮಂಚಗಳ ಮೇಲೆ ಮಲಗಿಕೊಳ್ಳುತ್ತೀರಿ. \q2 ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿಕೊಳ್ಳುತ್ತೀರಿ. \q1 ಮಂದೆಯೊಳಗಿಂದ ಕುರಿಮರಿಗಳನ್ನೂ \q2 ಹಟ್ಟಿಯ ಮಂದೆಯೊಳಗಿಂದ ಕರುಗಳನ್ನೂ ತಿನ್ನುತ್ತೀರಿ. \q1 \v 5 ವೀಣೆಯ ಸ್ವರಕ್ಕೆ ಹಾಡುತ್ತೀರಿ, \q2 ದಾವೀದನ ಹಾಗೆ ನಿಮಗೆ ನೀವೇ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತೀರಿ. \q1 \v 6 ನೀವು ತುಂಬಿದ ಪಾತ್ರೆಗಳಲ್ಲಿ ದ್ರಾಕ್ಷಾರಸವನ್ನು ಕುಡಿಯುತ್ತೀರಿ, \q2 ಶ್ರೇಷ್ಠವಾದ ಎಣ್ಣೆಗಳಿಂದ ನಿಮ್ಮನ್ನು ಅಭಿಷೇಕಿಸಿಕೊಳ್ಳುತ್ತೀರಿ. \q2 ಆದರೆ ಯೋಸೇಫನ ನಷ್ಟಕ್ಕೆ ವ್ಯಸನ ಪಡುವುದಿಲ್ಲ. \q1 \v 7 ಆದ್ದರಿಂದ ಸೆರೆಗೆ ಕರೆದೊಯ್ಯುವವರಲ್ಲಿ ನೀವು ಮೊದಲಿಗರಾಗಿರುವಿರಿ, \q2 ಭೋಗ ಮಾಡುವವರ ಹರ್ಷ ಧ್ವನಿಯು ಗತಿಸಿ ಹೋಗುವುದು. \s1 ಯೆಹೋವ ದೇವರು ಇಸ್ರಾಯೇಲಿನ ಅಹಂಕಾರವನ್ನು ಅಸಹ್ಯಪಡುತ್ತಾರೆ \p \v 8 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಸರ್ವಶಕ್ತ ದೇವರಾದ ಯೆಹೋವ ದೇವರು ತಮ್ಮ ಮೇಲೆ ಆಣೆಯಿಟ್ಟುಕೊಂಡಿದ್ದಾರೆ: \q1 ನಾನು ಯಾಕೋಬಿನ ಅಹಂಕಾರವನ್ನು ಅಸಹ್ಯಿಸಿಕೊಂಡು, \q2 ಅವನ ಅರಮನೆಗಳನ್ನು ಹಗೆಮಾಡುತ್ತೇನೆ. \q1 ಆದಕಾರಣ ಪಟ್ಟಣವನ್ನೂ ಅದರಲ್ಲಿರುವ ಸಮಸ್ತವನ್ನೂ \q2 ನಾನು ಒಪ್ಪಿಸಿ ಬಿಡುತ್ತೇನೆ. \p \v 9 ಒಂದು ಮನೆಯಲ್ಲಿ ಹತ್ತು ಜನರು ಉಳಿದರೆ, ಅವರು ಸಾಯುವರು. \v 10 ಮತ್ತು ಸಂಬಂಧಿಯೊಬ್ಬರು ಮೃತ ದೇಹಗಳನ್ನು ಸುಡಲು ಆ ಮನೆಯಿಂದ ಹೊರತೆಗೆಯಲು ಬಂದಾಗ ಮತ್ತು ಅಲ್ಲಿ ಅಡಗಿಕೊಂಡಿದ್ದ ವ್ಯಕ್ತಿಯನ್ನು, “ನಿಮ್ಮೊಂದಿಗೆ ಬೇರೆ ಯಾರಾದರೂ ಇದ್ದಾರೆಯೇ?” ಎಂದು ಕೇಳಲು ಅವನು ಇಲ್ಲ ಎನ್ನುವನು. ಆಗ ಆ ಸಂಬಂಧಿಕನು, “ಮೌನದಿಂದಿರು! ನಾವು ಯೆಹೋವ ದೇವರ ಹೆಸರನ್ನು ತೆಗೆದುಕೊಳ್ಳಬಾರದು.” \q1 \v 11 ಏಕೆಂದರೆ, ಯೆಹೋವ ದೇವರು ಆಜ್ಞಾಪಿಸುತ್ತಾರೆ, \q2 ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ \q2 ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು. \b \q1 \v 12 ಕುದುರೆಗಳು ಬಂಡೆಯ ಮೇಲೆ ಓಡುವುದುಂಟೇ? \q2 ಎತ್ತುಗಳಿಂದ ಅಲ್ಲಿ ಉಳುವನೋ? \q1 ನಿಮ್ಮ ನ್ಯಾಯವನ್ನು ವಿಷವನ್ನಾಗಿ, \q2 ನೀತಿ ಫಲವನ್ನು ಕಹಿಯನ್ನಾಗಿ ಬದಲಾಯಿಸಿದ್ದೀರಿ. \q1 \v 13 ಏನೂ ಇಲ್ಲದಿದ್ದರಲ್ಲಿ ಸಂತೋಷ ಪಡುವವರೇ, \q2 ನೀವು ಹೆಚ್ಚಳ ಪಡುವುದು ಶೂನ್ಯವಾಗಿರುವುದರಲ್ಲಿಯೇ? \q2 “ಸ್ವಬಲದಿಂದ ಕೊಂಬುಗಳನ್ನು ತೆಗೆದುಕೊಂಡಿಲ್ಲವೇ?” ಅಂದುಕೊಳ್ಳುತ್ತೀರಿ. \b \q1 \v 14 ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: \q2 ಇಸ್ರಾಯೇಲಿನ ಮನೆತನದವರೇ, \q2 ಜನಾಂಗವನ್ನು ನಿಮಗೆ ವಿರೋಧವಾಗಿ ಎಬ್ಬಿಸುವೆನು. \q2 ಲೆಬೊ ಹಮಾತಿನ ಪ್ರದೇಶದಿಂದ ಅರಾಬಾ ತಗ್ಗಿನ ನದಿಯವರೆಗೂ ನಿಮ್ಮನ್ನು ಹಿಂಸಿಸುವರು. \c 7 \s1 ಮಿಡತೆಗಳು, ಬೆಂಕಿ ಮತ್ತು ಒಂದು ನೂಲುಗುಂಡು \p \v 1 ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಹಿಂಗಾರು ಮಳೆ ಬಿದ್ದು, ಪೈರು ಸೊಂಪಾಗುವುದಕ್ಕೆ ಆರಂಭವಾದಾಗ, ಅಂದರೆ ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ, ಬೆಳೆಯು ವೃದ್ಧಿಯಾಗುತ್ತಿದ್ದಾಗ, ಇಗೋ ಯೆಹೋವ ದೇವರು, ಮಿಡತೆಗಳನ್ನು ಉಂಟುಮಾಡಿದರು. \v 2 ಅವು ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು, “ಸಾರ್ವಭೌಮ ಯೆಹೋವ ದೇವರೇ, ಲಾಲಿಸು, ನನ್ನನ್ನು ಮನ್ನಿಸು. ಯಾಕೋಬ ಜನಾಂಗ ಹೇಗೆ ಉಳಿಯುವುದು? ಏಕೆಂದರೆ ಅದು ಚಿಕ್ಕದಾದ ಜನಾಂಗ,” ಎಂದು ವಿಜ್ಞಾಪಿಸಿಕೊಂಡೆನು. \p \v 3 ಯೆಹೋವ ದೇವರು ಇದನ್ನು ಕುರಿತು ಮನಮರುಗಿ, \p “ಈ ದರ್ಶನ ನೆರವೇರುವುದಿಲ್ಲ,” ಎಂದರು. \p \v 4 ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಸಾರ್ವಭೌಮ ಯೆಹೋವ ದೇವರು ಬೆಂಕಿಯಿಂದ ನ್ಯಾಯತೀರ್ಪು ಮಾಡುವುದಕ್ಕೆ ಕರೆದರು. ಅದು ದೊಡ್ಡ ಅಗಾಧವನ್ನು ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು. \v 5 ಆಗ ನಾನು, “ಸಾರ್ವಭೌಮ ಯೆಹೋವ ದೇವರೇ, ನಿಲ್ಲಿಸಿಬಿಡಿರಿ,” ಎಂದು ಬೇಡಿಕೊಳ್ಳುತ್ತೇನೆ. “ಯಾಕೋಬನು ಹೇಗೆ ಬದುಕುಳಿಯುತ್ತಾನೆ? ಅವನು ತುಂಬಾ ಚಿಕ್ಕವನು,” ಎಂದು ಮೊರೆಯಿಟ್ಟೆನು. \p \v 6 ಆಗ ಸಾರ್ವಭೌಮ ಯೆಹೋವ ದೇವರು ಇದನ್ನು ಕುರಿತು ಮನಮರುಗಿ, \p “ಈ ದರ್ಶನ ನೆರವೇರುವುದಿಲ್ಲ,” ಎಂದರು. \b \p \v 7 ಆತನು ನನಗೆ ಹೀಗೆ ತೋರಿಸಿದನು. ಯೆಹೋವ ದೇವರು ನೂಲುಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದರು. ಆತನ ಕೈಯಲ್ಲಿ ನೂಲುಗುಂಡು ಇತ್ತು. \v 8 ಯೆಹೋವ ದೇವರು ನನಗೆ, “ಆಮೋಸನೇ, ಏನನ್ನು ನೋಡುತ್ತಿರುವೆ?” ಎಂದು ಕೇಳಿದರು. \p ಆಗ ನಾನು, “ನೂಲುಗುಂಡು,” ಎಂದೆನು. \p ನಂತರ ಯೆಹೋವ ದೇವರು ಹೇಳಿದ್ದೇನೆಂದರೆ, “ನೋಡು, ನಾನು ನನ್ನ ಜನರಾದ ಇಸ್ರಾಯೇಲರ ಮಧ್ಯದಲ್ಲಿ ನೂಲುಗುಂಡನ್ನು ಇಡುತ್ತೇನೆ. ಇನ್ನು ಮೇಲೆ ಅವರನ್ನು ದಾಟಿ ಹೋಗುವುದಿಲ್ಲ. \q1 \v 9 “ಇಸಾಕನ ಉನ್ನತ ಪೂಜಾಸ್ಥಳಗಳು ನಾಶವಾಗುವುವು. \q2 ಇಸ್ರಾಯೇಲಿನ ಪರಿಶುದ್ಧ ಸ್ಥಳಗಳು ಹಾಳಾಗುವುವು. \q2 ನಾನು ಖಡ್ಗದೊಂದಿಗೆ ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು.” \s1 ಆಮೋಸನು ಮತ್ತು ಅಮಚ್ಯನು \p \v 10 ಆಗ ಬೇತೇಲಿನ ಯಾಜಕನಾದ ಅಮಚ್ಯನು, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ ಕಳುಹಿಸಿ ಹೇಳಿದ್ದೇನೆಂದರೆ: “ಆಮೋಸನು ಇಸ್ರಾಯೇಲಿನ ಮನೆತನದವರ ಮಧ್ಯದಲ್ಲಿ ನಿನಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ. ದೇಶವು ಅವನ ಎಲ್ಲಾ ಮಾತುಗಳನ್ನು ತಾಳಲಾರದು. \v 11 ಆಮೋಸನು ಹೇಳಿದ್ದೇನೆಂದರೆ: \q1 “ಯಾರೊಬ್ಬಾಮನು ಖಡ್ಗದಿಂದ ಸಾಯುವನೆಂದೂ \q2 ಇಸ್ರಾಯೇಲರು ನಿಶ್ಚಯವಾಗಿ ತಮ್ಮ ಸ್ವದೇಶದಿಂದ ಸೆರೆಯಾಗಿ ಕರೆದೊಯ್ಯುವರು.” \p \v 12 ಅನಂತರ ಅಮಚ್ಯನು ಆಮೋಸನಿಗೆ ಹೇಳಿದ್ದೇನೆಂದರೆ: “ದರ್ಶಿಯೇ, ಯೆಹೂದ ದೇಶಕ್ಕೆ ಓಡಿಹೋಗು. ಅಲ್ಲಿ ದುಡಿದು ರೊಟ್ಟಿ ತಿಂದು ಅಲ್ಲಿಯೇ ಪ್ರವಾದಿಸು. \v 13 ಆದರೆ ಇನ್ನು ಮೇಲೆ ಬೇತೇಲಿನಲ್ಲಿ ಪ್ರವಾದಿಸಬೇಡ. ಏಕೆಂದರೆ ಅದು ಅರಸನ ಪರಿಶುದ್ಧ ಸ್ಥಾನವಾಗಿಯೂ, ರಾಜ್ಯದ ಆಲಯವಾಗಿಯೂ ಇದೆ,” ಎಂದನು. \p \v 14 ಆಗ ಆಮೋಸನು ಅಮಚ್ಯನಿಗೆ ಉತ್ತರವಾಗಿ, “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ಆದರೆ ನಾನು ಕುರುಬನೂ ಅತ್ತಿಹಣ್ಣುಗಳನ್ನು ಕೂಡಿಸುವವನೂ ಆಗಿದ್ದೆನು,” ಎಂದನು. \v 15 ನಾನು ಕುರಿಯ ಹಿಂಡನ್ನು ಹಿಂಬಾಲಿಸುವ ವೇಳೆಯಲ್ಲಿ, ಯೆಹೋವ ದೇವರು ನನ್ನನ್ನು ಕರೆದು ಹೇಳಿದ್ದೇನೆಂದರೆ: “ನೀನು ಹೋಗಿ ನನ್ನ ಜನರಾದ ಇಸ್ರಾಯೇಲರಿಗೆ ಪ್ರವಾದಿಸು.” \v 16 ಹೀಗಿರುವುದರಿಂದ ನೀನು ಈಗ ಯೆಹೋವ ದೇವರ ವಾಕ್ಯವನ್ನು ಕೇಳು: \q1 ಇಸ್ರಾಯೇಲಿಗೆ ಪ್ರವಾದನೆ ಮಾಡಬೇಡವೆಂದೂ, \q2 ಇಸಾಕನ ಮನೆತನಕ್ಕೆ ವಿರೋಧವಾಗಿ ಖಂಡನೆ ಮಾಡಬಾರದೆಂದೂ ನೀನು ಹೇಳುವೆಯಲ್ಲಾ. \p \v 17 ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ: \q1 “ ‘ನಿನ್ನ ಹೆಂಡತಿ ಪಟ್ಟಣದಲ್ಲಿ ವ್ಯಭಿಚಾರಿಣಿಯಾಗುವಳು. \q2 ನಿನ್ನ ಪುತ್ರ ಪುತ್ರಿಯರೂ ಖಡ್ಗದಿಂದ ಬೀಳುವರು. \q1 ನಿನ್ನ ದೇಶವನ್ನು ಅಳೆಯಲಾಗುತ್ತದೆ ಮತ್ತು ವಿಭಾಗಿಸಲಾಗುತ್ತದೆ. \q2 ನೀನು ಅಪವಿತ್ರವಾದ ದೇಶದಲ್ಲಿ ಸಾಯುವಿ. \q2 ಇಸ್ರಾಯೇಲ್ ನಿಶ್ಚಯವಾಗಿ ತನ್ನ ದೇಶದಿಂದ ಸೆರೆಯಾಗಿ ಕರೆದೊಯ್ಯಲಾಗುವುದು.’ ” \c 8 \s1 ಮಾಗಿದ ಹಣ್ಣುಗಳುಳ್ಳ ಪುಟ್ಟಿ \p \v 1 ಸಾರ್ವಭೌಮ ಯೆಹೋವ ದೇವರು ನನಗೆ ಮಾಗಿದ ಹಣ್ಣುಗಳುಳ್ಳ ಬುಟ್ಟಿ ತೋರಿಸಿದರು. \v 2 ಆಗ, “ಆಮೋಸನೇ, ಏನು ನೋಡುತ್ತಿರುವೆ?” ಎಂದು ಕೇಳಿದರು. \p ನಾನು, “ಮಾಗಿದ ಹಣ್ಣುಗಳ ಬುಟ್ಟಿ,” ಎಂದೆನು. \p ಆಗ ಯೆಹೋವ ದೇವರು ನನಗೆ, “ನನ್ನ ಜನರಾದ ಇಸ್ರಾಯೇಲರ ಸಮಯವು ಮಾಗುತ್ತಾ ಬಂತು. ನಾನು ಇನ್ನು ಮೇಲೆ ಅವರನ್ನು ಉಳಿಸುವುದಿಲ್ಲ,” ಎಂದು ಹೇಳಿದರು. \p \v 3 “ಆ ದಿನದಲ್ಲಿ ದೇವಾಲಯದ ಹಾಡುಗಳು ವಿಲಾಪವಾಗುವುವು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. “ಎಲ್ಲಾ ಕಡೆಗಳಲ್ಲಿ ಅನೇಕ ಹೆಣಗಳು ಬಿದ್ದಿರುವುವು. ಮೌನವಾಗಿರಿ!” \q1 \v 4 ಬಡವರನ್ನು ನುಂಗುವವರೇ, \q2 ನಾಡಿನ ಬಡವರನ್ನು ಮುಗಿಸಿಬಿಡಬೇಕೆಂದಿರುವವರೇ, ಇದನ್ನು ಕೇಳಿರಿ. \p \v 5 ನೀವು ಹೇಳುವುದೇನೆಂದರೆ, \q1 “ನಾವು ಧಾನ್ಯವನ್ನು ಮಾರುವ ಹಾಗೆ \q2 ಅಮಾವಾಸ್ಯೆಯು ಯಾವಾಗ ಕೊನೆಗೊಳ್ಳುತ್ತದೆ? \q1 ಗೋಧಿಯನ್ನು ಮಾರುವ ಹಾಗೆ \q2 ಸಬ್ಬತ್ ದಿನವು ಯಾವಾಗ ಮುಗಿಯುವುದು? \q1 ಕೊಳಗವನ್ನು ಚಿಕ್ಕದಾಗಿಯೂ ತೊಲಗಳನ್ನು ದೊಡ್ಡದಾಗಿಯೂ, \q2 ಕಳ್ಳತಕ್ಕಡಿಗಳನ್ನು ಮೋಸಕ್ಕಾಗಿಯೂ ಮಾಡೋಣವೆಂದೂ, \q1 \v 6 ಬಡವರನ್ನು ಬೆಳ್ಳಿಗೂ \q2 ದರಿದ್ರರನ್ನು ಕೆರಗಳ ಜೋಡಿಗೂ ಕೊಂಡುಕೊಳ್ಳುವೆವು, \q2 ಹೌದು ಗೋಧಿಯ ಕಸವನ್ನು ಸಹ ಮಾರೋಣ.” \p \v 7 ಯೆಹೋವ ದೇವರು ಯಾಕೋಬಿನ ಅಹಂಕಾರದ ಮೇಲೆ ಆಣೆ ಇಟ್ಟುಕೊಂಡು ಹೇಳುವುದೇನೆಂದರೆ: “ನಿಶ್ಚಯವಾಗಿಯೂ ನಾನು ಎಂದೆಂದಿಗೂ ಅವರ ಯಾವ ಕ್ರಿಯೆಗಳನ್ನೂ ಮರೆಯುವುದಿಲ್ಲ. \q1 \v 8 “ಇದಕ್ಕಾಗಿ ದೇಶವು ನಡುಗುವುದಿಲ್ಲವೇ? \q2 ಅದರಲ್ಲಿ ವಾಸಿಸುವವರೆಲ್ಲರೂ ಗೋಳಾಡುವುದಿಲ್ಲವೇ? \q1 ದೇಶವೆಲ್ಲಾ ನೈಲ್ ನದಿಯ ಪ್ರವಾಹದಂತೆ ಉಬ್ಬಿ ಅಲ್ಲೊಲಕಲ್ಲೋಲವಾಗುವುದು, \q2 ಈಜಿಪ್ಟಿನ ನದಿಯಂತೆ ಇಳಿದುಹೋಗುವದು. \p \v 9 “ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ, \q1 “ಆ ದಿನದಲ್ಲಿ,” ನಾನು ಸೂರ್ಯನನ್ನು ಮಧ್ಯಾಹ್ನದಲ್ಲಿ ಮುಳುಗುವಂತೆ ಮಾಡುತ್ತೇನೆ. \q2 ಭೂಮಿಯನ್ನು ಹಗಲಲ್ಲೇ ಕತ್ತಲಾಗುವಂತೆ ಮಾಡುತ್ತೇನೆ. \q1 \v 10 ನಿಮ್ಮ ಹಬ್ಬಗಳನ್ನು ದುಃಖಕ್ಕೂ, \q2 ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು. \q1 ಎಲ್ಲರೂ ಸೊಂಟಗಳಿಗೆ ಗೋಣಿತಟ್ಟನ್ನು ಕಟ್ಟಿಕೊಂಡು, \q2 ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು. \q1 ಒಬ್ಬನೇ ಮಗನಿಗಾಗಿ ಗೋಳಾಡುವ ಸಮಯದಂತೆ ಮಾಡುವೆನು. \q2 ಅದರ ಅಂತ್ಯವು ಕಹಿಯಾದ ದಿನದಂತಿರುವುದು. \b \q1 \v 11 ದಿನಗಳು ಬರುವುವು, \q2 ಆಗ ನಾನು ದೇಶದಲ್ಲಿ ಕ್ಷಾಮವನ್ನು ಕಳುಹಿಸುವೆನು. \q1 ಅದು ರೊಟ್ಟಿಯ ಕ್ಷಾಮವಲ್ಲ, ನೀರಿನ ದಾಹದ ಬರವಲ್ಲ. \q2 ಯೆಹೋವ ದೇವರ ವಾಕ್ಯಗಳನ್ನು ಕೇಳಬೇಕೆಂಬ ಕ್ಷಾಮವನ್ನೇ, \q2 ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾನೆ. \q1 \v 12 ಆಗ ಅವರು ಸಮುದ್ರದಿಂದ ಸಮುದ್ರಕ್ಕೂ, \q2 ಉತ್ತರದಿಂದ ಪೂರ್ವಕ್ಕೂ ಅಲೆದು \q1 ಯೆಹೋವ ದೇವರ ವಾಕ್ಯವನ್ನು ಹುಡುಕುವುದಕ್ಕೆ ಅತ್ತಿತ್ತ ಓಡಾಡಿ, ಅದನ್ನು ಕಾಣದೆ ಹೋಗುವರು. \p \v 13 “ಆ ದಿನದಲ್ಲಿ, \q1 “ಸೌಂದರ್ಯವತಿಯರಾದ ಕನ್ಯೆಯರು \q2 ಮತ್ತು ಯೌವನಸ್ಥರು ಸಹ ದಾಹದಿಂದ ಕುಗ್ಗಿ ಹೋಗುವರು. \q1 \v 14 ಅವರು ಸಮಾರ್ಯದ ಪಾಪದ ಮೇಲೆ ಆಣೆ ಇಟ್ಟುಕೊಂಡು, \q2 ದಾನೇ, ನಿನ್ನ ದೇವರ ಜೀವದಾಣೆ ಎಂದೂ, \q2 ಬೇರ್ಷೆಬದ ಮಾರ್ಗದ ಜೀವದಾಣೆ ಎಂದೂ ಹೇಳುವರು. \q2 ಅವರು ಬಿದ್ದು ಮತ್ತೆ ಮೇಲೆ ಏಳಲಾರರು.” \c 9 \s1 ಇಸ್ರಾಯೇಲು ನಾಶವಾಗುವುದು \p \v 1 ಕರ್ತದೇವರು ಬಲಿಪೀಠದ ಪಕ್ಕದಲ್ಲಿ ನಿಂತಿರುವುದನ್ನು ನಾನು ಕಂಡೆನು. ಅವರು ಹೇಳಿದ್ದೇನೆಂದರೆ: \q1 “ಹೊಸ್ತಿಲುಗಳು ಕದಲುವಂತೆ \q2 ಆಧಾರ ಬೋದಿಗೆಗಳನ್ನು ಬಲವಾಗಿ ಹೊಡೆದು, \q1 ಅವು ಎಲ್ಲರ ತಲೆಗಳ ಮೇಲೆ ಬೀಳುವ ಹಾಗೆ ಅವುಗಳನ್ನು ಕಡಿದುಬಿಡು. \q2 ಅವರಲ್ಲಿ ಉಳಿದವರನ್ನು ಖಡ್ಗದಿಂದ ಕೊಲ್ಲುವೆನು. \q2 ಅವರಲ್ಲಿ ಓಡಿಹೋಗುವವನು ಓಡಿಹೋಗಲಾಗುವುದಿಲ್ಲ. \q1 \v 2 ಅವರು ಪಾತಾಳದವರೆಗೂ ಅಗೆದುಕೊಂಡು ಹೋದರೂ, \q2 ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವುದು. \q1 ಅವರು ಆಕಾಶಕ್ಕೆ ಏರಿಹೋದರೂ, \q2 ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು. \q1 \v 3 ಅವರು ಕರ್ಮೆಲಿನ ಬೆಟ್ಟದ ತುದಿಯಲ್ಲಿ ಅಡಗಿಕೊಂಡರೂ, \q2 ನಾನು ಅವರನ್ನು ಹುಡುಕಿ, ಅಲ್ಲಿಂದ ತೆಗೆಯುವೆನು. \q1 ಅವರು ನನ್ನ ದೃಷ್ಟಿಗೆ ಮರೆಯಾಗಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ, \q2 ಸರ್ಪಕ್ಕೆ ಅಪ್ಪಣೆಕೊಟ್ಟು, ಅದು ಅವರನ್ನು ಅಲ್ಲೇ ಕಚ್ಚುವಂತೆ ಮಾಡುವೆನು. \q1 \v 4 ಅವರು ತಮ್ಮ ಶತ್ರುಗಳ ಮುಂದೆ ಸೆರೆಗೆ ಹೋಗಿದ್ದರೂ, \q2 ಖಡ್ಗವು ನನ್ನ ಆಜ್ಞಾನುಸಾರ ಅಲ್ಲಿಯೂ ಅವರನ್ನು ಕೊಲ್ಲುವುದು. \b \q1 “ಅವರ ಮೇಲಿಗಾಗಿ ಅಲ್ಲ, \q2 ಕೇಡಿಗಾಗಿ ಅವರ ಮೇಲೆ ನನ್ನ ದೃಷ್ಟಿಯಿಡುವೆನು.” \b \q1 \v 5 ಸೇನಾಧೀಶ್ವರ ಯೆಹೋವ ದೇವರಾದ ಕರ್ತರೇ, \q1 ನೀವು ದೇಶವನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುವುದು. \q2 ಅದರಲ್ಲಿ ವಾಸವಾಗಿರುವವರೆಲ್ಲರೂ ಗೋಳಾಡುವರು. \q1 ಅವೆಲ್ಲಾ ನೈಲ್ ನದಿಯ ಹಾಗೆ ಪ್ರವಾಹದಂತೆ ಉಕ್ಕಿ, \q2 ಈಜಿಪ್ಟಿನ ಪ್ರವಾಹದಂತೆ ಉಕ್ಕಿ ಮುಳುಗಿ ಹೋಗುವುದು. \q1 \v 6 ಆಕಾಶದಲ್ಲಿ ಉಪ್ಪರಿಗೆಗಳನ್ನು ಕಟ್ಟಿಕೊಂಡು, \q2 ಭೂಮಿಯ ಮೇಲೆ ತಮ್ಮ ತಂಡಗಳನ್ನು ಸ್ಥಾಪಿಸಿ, \q1 ಸಮುದ್ರದ ನೀರನ್ನು ಕರೆದು, \q2 ಅದನ್ನು ಭೂಮಿಯ ಮೇಲೆ ಹೊಯ್ಯುವಂತೆ ಮಾಡುವಾತರು ಅವರೇ. \q2 ಅವರ ಹೆಸರು ಯೆಹೋವ ದೇವರು. \b \q1 \v 7 “ಇಸ್ರಾಯೇಲರೇ, ನೀವು ನನಗೆ ಕೂಷ್ಯರ ಮಕ್ಕಳ ಹಾಗಲ್ಲವೇ? \q2 ನಾನು ನಿಮ್ಮನ್ನು ಈಜಿಪ್ಟಿನಿಂದಲೂ ಫಿಲಿಷ್ಟಿಯರನ್ನು \q2 ಕಫ್ತೋರಿನಿಂದಲೂ ಅರಾಮ್ಯರನ್ನು ಕೀರಿನಿಂದಲೂ ತರಲಿಲ್ಲವೇ?” \q2 ಎಂದು ಯೆಹೋವ ದೇವರು ಹೇಳುತ್ತಾರೆ. \b \q1 \v 8 “ಸಾರ್ವಭೌಮ ಯೆಹೋವ ದೇವರ ಕಣ್ಣುಗಳು \q2 ಪಾಪವುಳ್ಳ ರಾಜ್ಯದ ಮೇಲೆ ಇವೆ. \q1 ನಾನು ಅದನ್ನು ಭೂಮಿಯ ಮೇಲಿನಿಂದ ನಾಶಮಾಡುವೆನು. \q2 ಆದರೆ ಯಾಕೋಬಿನ ಮನೆತನದವರನ್ನು ನಾನು ನಿಜವಾಗಿ ನಾಶಮಾಡುವುದಿಲ್ಲ,” \q2 ಎಂದು ಯೆಹೋವ ದೇವರು ಹೇಳುತ್ತಾರೆ. \q1 \v 9 ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ \q2 ನಾನು ಇಸ್ರಾಯೇಲರನ್ನು ಎಲ್ಲಾ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕೆಂದು ಆಜ್ಞಾಪಿಸುವೆನು. \q2 ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ. \q1 \v 10 ಕೇಡು ನಮ್ಮನ್ನು ಹಿಂದಟ್ಟದು ಮತ್ತು ನಮ್ಮನ್ನು ತಡೆಯುವದೂ ಇಲ್ಲ, \q2 ಎನ್ನುವ ನನ್ನ ಜನರಲ್ಲಿರುವ ಪಾಪಿಗಳೆಲ್ಲರೂ ಖಡ್ಗದಿಂದ ಸಾಯುವರು. \s1 ಇಸ್ರಾಯೇಲಿನ ಪುನಃಸ್ಥಾಪನೆ \p \v 11 ಆ ದಿನದಲ್ಲಿ, \q1 ಬಿದ್ದುಹೋದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ \q2 ಅದರ ಮುರಿದ ಗೋಡೆಗಳನ್ನು ಸರಿಪಡಿಸುತ್ತೇನೆ. \q2 ಮತ್ತು ಅದರ ಅವಶೇಷಗಳನ್ನು ಪುನಃಸ್ಥಾಪಿಸಿ \q2 ಮತ್ತು ಅದನ್ನು ಮೊದಲಿನಂತೆ ಪುನಃ ನಿರ್ಮಿಸುವೆನು. \q1 \v 12 ಆಗ ಅವರು ಎದೋಮಿನ ಮಿಕ್ಕ ಭಾಗವನ್ನೂ, \q2 ನನ್ನ ಹೆಸರಿನಿಂದ ಕರೆಯಲಾಗುವ ಎಲ್ಲಾ ಜನಾಂಗಗಳನ್ನೂ ಸ್ವಾಧೀನ ಮಾಡಿಕೊಳ್ಳುವೆನು, \q2 ಎಂಬುದಾಗಿ ಇದನ್ನು ಮಾಡುವವರಾದ ಯೆಹೋವ ದೇವರು ಹೇಳುತ್ತಾರೆ. \p \v 13 ಯೆಹೋವ ದೇವರು ಹೇಳುವುದೇನೆಂದರೆ: “ದಿನಗಳು ಬರುವುವು,” \q1 “ಆಗ ಉಳುವವನು ಕೊಯ್ಯುವವನನ್ನೂ, \q2 ದ್ರಾಕ್ಷಿ ಮಾರುವವನು ಬೀಜ ಹಾಕುವವನನ್ನೂ ಹಿಂದಟ್ಟುವರು. \q1 ಆಗ ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಯುವುವು, \q2 ಗುಡ್ಡಗಳೆಲ್ಲಾ ಕರಗುವುವು. \q2 \v 14 ನನ್ನ ಜನರಾದ ಇಸ್ರಾಯೇಲರನ್ನು ಸೆರೆಯಿಂದ ತಿರುಗಿ ಬರಮಾಡುವೆನು. \b \q1 “ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು. \q2 ದ್ರಾಕ್ಷಿತೋಟಗಳನ್ನು ನೆಟ್ಟು, ಅವುಗಳ ದ್ರಾಕ್ಷಾರಸವನ್ನು ಕುಡಿಯುವರು. \q2 ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು. \q1 \v 15 ನಾನು ಇಸ್ರಾಯೇಲರನ್ನು ಅವರ ದೇಶದಲ್ಲಿ ನೆಡುವೆನು. \q2 ನಾನು ಅವರಿಗೆ ಕೊಟ್ಟಿರುವ ದೇಶದಿಂದ ಇನ್ನು ಮುಂದೆ ಯಾರೂ ಅವರನ್ನು ಕಿತ್ತುಹಾಕರು,” \m ಎಂದು ನಿಮ್ಮ ದೇವರಾದ ಯೆಹೋವ ದೇವರು ಹೇಳುತ್ತಾರೆ.