\id 2KI - Biblica® Open Kannada Contemporary Version \ide UTF-8 \h 2 ಅರಸುಗಳು \toc1 ಅರಸುಗಳು ದ್ವಿತೀಯ ಭಾಗ \toc2 2 ಅರಸುಗಳು \toc3 2 ಅರಸು \mt1 ಅರಸುಗಳು \mt2 ದ್ವಿತೀಯ ಭಾಗ \c 1 \s1 ಅಹಜ್ಯನ ಮೇಲೆ ಯೆಹೋವ ದೇವರ ತೀರ್ಪು \p \v 1 ಅಹಾಬನ ಮರಣದ ನಂತರ ಮೋವಾಬ್ಯರು ಇಸ್ರಾಯೇಲರ ವಿರುದ್ಧ ದಂಗೆ ಎದ್ದರು. \v 2 ಅಹಜ್ಯನು ಸಮಾರ್ಯದಲ್ಲಿದ್ದ ತನ್ನ ಮೇಲುಪ್ಪರಿಗೆಯ ಕಿಟಕಿಯೊಂದರಿಂದ ಬಿದ್ದು ಅಸ್ವಸ್ಥನಾಗಿದ್ದನು. ಅವನು ತನ್ನ ಸೇವಕರನ್ನು ಕರೆದು, “ಎಕ್ರೋನಿನ ದೇವರಾದ ‘ಬಾಳ್ ಜೆಬೂಬನ’ ಸನ್ನಿಧಿಗೆ ಹೋಗಿ, ನಾನು ಈ ಅಸ್ವಸ್ಥತೆಯಿಂದ ಗುಣವಾಗುವೆನೋ ಇಲ್ಲವೋ? ಎಂದು ವಿಚಾರಿಸಿ ಬನ್ನಿ,” ಎಂದು ಹೇಳಿ ಕಳುಹಿಸಿದನು. \p \v 3 ಆದರೆ ಯೆಹೋವ ದೇವರ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನೆದ್ದು ಸಮಾರ್ಯದ ಅರಸನ ಸೇವಕರಿಗೆ ಎದುರಾಗಿ ಹೋಗಿ ಅವರಿಗೆ, ‘ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀವು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಹೋಗುತ್ತಿರುವುದೇಕೆ? \v 4 ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ ಎಂದು ಹೇಳು,” ಎಂದರು. ಆಗ ಎಲೀಯನು ಹೊರಟುಹೋಗಿ ಅದರಂತೆ ಹೇಳಿದನು. \p \v 5 ಸೇವಕರು ಅರಸನ ಬಳಿಗೆ ಹಿಂದಿರುಗಿ ಬಂದಾಗ, ಅವನು ಅವರಿಗೆ, “ನೀವು ಹಿಂದಿರುಗಿ ಬಂದದ್ದೇಕೆ?” ಎಂದನು. \p \v 6 ಅವರು ಅರಸನಿಗೆ, “ಒಬ್ಬ ಮನುಷ್ಯನು ನಮಗೆ ಎದುರಾಗಿ ಬಂದು, ‘ನೀವು ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹಿಂದಿರುಗಿ ಹೋಗಿ, ಯೆಹೋವ ದೇವರು ಹೇಳುವುದು ಏನೆಂದರೆ: ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಜನರನ್ನು ಕಳುಹಿಸಿರುತ್ತೀ? ಇದರ ನಿಮಿತ್ತ, ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂಬುದಾಗಿ ಅವನಿಗೆ ಹೇಳಿರಿ, ಎಂದು ತಿಳಿಸಿದನು,” ಎಂದರು. \p \v 7 ಅರಸನು ಅವರಿಗೆ, “ನಿಮಗೆದುರಾಗಿ ಬಂದು ಈ ಮಾತುಗಳನ್ನು ನಿಮಗೆ ಹೇಳಿದ ಆ ಮನುಷ್ಯನು ಹೇಗಿದ್ದನು?” ಎಂದು ಕೇಳಿದನು. \p \v 8 ಅದಕ್ಕವರು, “ಅವನು ಕಂಬಳಿಯನ್ನು ಹೊದ್ದುಕೊಂಡಿದ್ದನು; ಅವನ ಸೊಂಟಕ್ಕೆ ಸುತ್ತಲೂ ತೊಗಲಿನ ನಡುಕಟ್ಟು ಇತ್ತು,” ಎಂದರು. \p ಆಗ ಅರಸನು, “ಅವನು ತಿಷ್ಬೀಯನಾದ ಎಲೀಯನೇ ಆಗಿರಬೇಕು,” ಎಂದು ಹೇಳಿದನು. \p \v 9 ಆಗ ಅರಸನು ಒಬ್ಬ ಪ್ರಧಾನನನ್ನು, ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಎಲೀಯನ ಬಳಿಗೆ ಕಳುಹಿಸಿದನು. ಪ್ರಧಾನನು ಅವನ ಬಳಿಗೆ ಹೋದಾಗ, ಇಗೋ, ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿದ್ದನು. ಆಗ ಅವನು ಎಲೀಯನಿಗೆ, “ದೇವರ ಮನುಷ್ಯನೇ, ‘ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು. \p \v 10 ಅದಕ್ಕೆ ಎಲೀಯನು ಪ್ರಧಾನನಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು. \p \v 11 ತಿರುಗಿ ಅರಸನು ಎಲೀಯನ ಬಳಿಗೆ ಐವತ್ತು ಮಂದಿಯ ಪ್ರಧಾನನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಅವನು ಬಂದು ಇವನಿಗೆ, “ದೇವರ ಮನುಷ್ಯನೇ, ‘ಬೇಗನೆ ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು. \p \v 12 ಎಲೀಯನು ಅವರಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ದೇವರ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ಸುಟ್ಟುಬಿಟ್ಟಿತು. \p \v 13 ತಿರುಗಿ ಅರಸನು ಐವತ್ತು ಮಂದಿಯ ಪ್ರಧಾನನಾದ ಮೂರನೆಯವನನ್ನೂ, ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಈ ಐವತ್ತು ಮಂದಿಗೆ ಪ್ರಧಾನನಾದ ಮೂರನೆಯವನು ಬಂದು ಎಲೀಯನ ಮುಂದೆ ತನ್ನ ಮೊಣಕಾಲೂರಿಕೊಂಡು ಅವನಿಗೆ, “ದೇವರ ಮನುಷ್ಯನೇ, ನೀನು ದಯಮಾಡು, ನನ್ನ ಪ್ರಾಣವೂ, ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣಗಳೂ ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ. \v 14 ಇಗೋ, ಬೆಂಕಿಯು ಆಕಾಶದಿಂದ ಇಳಿದು ಮೊದಲಿನ ಇಬ್ಬರು ಪ್ರಧಾನರನ್ನೂ, ಅವರ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು. ಆದರೆ ಈಗ ನನ್ನ ಪ್ರಾಣವು ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ,” ಎಂದು ಹೇಳಿ ಅವನನ್ನು ಬೇಡಿಕೊಂಡನು. \p \v 15 ಆಗ ಯೆಹೋವ ದೇವರ ದೂತನು ಎಲೀಯನಿಗೆ, “ಅವನ ಸಂಗಡ ಇಳಿದು ಹೋಗು, ಅವನಿಗೆ ಭಯಪಡಬೇಡ,” ಎಂದನು. ಆದ್ದರಿಂದ ಎಲೀಯನು ಎದ್ದು ಅವನ ಸಂಗಡ ಅರಸನ ಬಳಿಗೆ ಇಳಿದು ಹೋದನು. \p \v 16 ಅರಸನಿಗೆ, “ಯೆಹೋವ ದೇವರ ವಾಕ್ಯವನ್ನು ವಿಚಾರಿಸಲು ಇಸ್ರಾಯೇಲಿನಲ್ಲಿ ದೇವರಿಲ್ಲವೆಂಬ ಹಾಗೆ ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನ್ನು ವಿಚಾರಿಸಲು ದೂತರನ್ನು ಕಳುಹಿಸಿದ ಕಾರಣ, ‘ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು. \v 17 ಹಾಗೆಯೇ ಅವನು ಎಲೀಯನು ಹೇಳಿದ ಯೆಹೋವ ದೇವರ ವಾಕ್ಯದ ಪ್ರಕಾರವೇ ಸತ್ತುಹೋದನು. \p ಅಹಜ್ಯನಿಗೆ ಮಗನಿಲ್ಲದ್ದರಿಂದ ಯೆಹೂದದ ಅರಸನಾದ ಯೆಹೋಷಾಫಾಟನ ಮಗ ಯೆಹೋರಾಮನ ಎರಡನೆಯ ವರ್ಷದಲ್ಲಿ ಯೋರಾಮನು ಅವನಿಗೆ ಬದಲಾಗಿ ಅರಸನಾದನು. \v 18 ಅಹಜ್ಯನು ಮಾಡಿದ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \c 2 \s1 ಎಲೀಯನು ಪರಲೋಕಕ್ಕೆ ಎತ್ತಿಕೊಂಡದ್ದು \p \v 1 ಯೆಹೋವ ದೇವರು ಎಲೀಯನನ್ನು ಬಿರುಗಾಳಿಯಿಂದ ಆಕಾಶಕ್ಕೆ ಎತ್ತಿಕೊಳ್ಳುವಾಗ, ಎಲೀಯನು ಎಲೀಷನ ಸಂಗಡ ಗಿಲ್ಗಾಲಿನಿಂದ ಹೋಗುತ್ತಾ ಇದ್ದನು. \v 2 ಆಗ ಎಲೀಯನು ಎಲೀಷನಿಗೆ, “ನೀನು ದಯಮಾಡಿ ಇಲ್ಲಿ ಇರು. ಯೆಹೋವ ದೇವರು ನನ್ನನ್ನು ಬೇತೇಲಿಗೆ ಕಳುಹಿಸುತ್ತಿದ್ದಾರೆ,” ಎಂದನು. \p ಅದಕ್ಕೆ ಎಲೀಷನು, “ಯೆಹೋವ ದೇವರ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರು ಬೇತೇಲಿಗೆ ಹೋದರು. \p \v 3 ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಗುಂಪು ಎಲೀಷನ ಬಳಿಗೆ ಬಂದು ಅವನಿಗೆ, “ಇಂದು ಯೆಹೋವ ದೇವರು ನಿನ್ನ ಯಜಮಾನನನ್ನು ನಿನ್ನಿಂದ ತೆಗೆದುಕೊಳ್ಳುವರೆಂದು ತಿಳಿದಿದ್ದೀಯೋ?” ಎಂದರು. \p ಅದಕ್ಕವನು, “ಹೌದು, ನಾನು ಕೂಡಾ ಬಲ್ಲೆ, ಸುಮ್ಮನೆ ಇರಿ,” ಎಂದನು. \p \v 4 ಆಗ ಎಲೀಯನು ಅವನಿಗೆ, “ಎಲೀಷನೇ, ನೀನು ದಯಮಾಡಿ ಇಲ್ಲೇ ಇರು. ಯೆಹೋವ ದೇವರು ನನ್ನನ್ನು ಯೆರಿಕೋವಿಗೆ ಕಳುಹಿಸುತ್ತಿದ್ದಾರೆ” ಎಂದನು. \p ಅದಕ್ಕವನು, “ಯೆಹೋವ ದೇವರ ಜೀವದಾಣೆ, ನನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರು ಯೆರಿಕೋವಿಗೆ ಬಂದರು. \p \v 5 ಆಗ ಯೆರಿಕೋವಿನಲ್ಲಿರುವ ಪ್ರವಾದಿಗಳ ಗುಂಪು ಎಲೀಷನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ಇಂದು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತೆಗೆದುಕೊಳ್ಳುವನೆಂದು ತಿಳಿದಿದ್ದೀಯೋ?” ಎಂದರು. \p ಅದಕ್ಕವನು, “ನಾನು ಕೂಡಾ ಬಲ್ಲೆ, ಸುಮ್ಮನೆ ಇರಿ,” ಎಂದನು. \p \v 6 ಎಲೀಯನು ಅವನಿಗೆ, “ನೀನು ದಯಮಾಡಿ ಇಲ್ಲೇ ಇರು. ಯೆಹೋವ ದೇವರು ನನ್ನನ್ನು ಯೊರ್ದನಿಗೆ ಕಳುಹಿಸುತ್ತಿದ್ದಾರೆ,” ಎಂದನು. \p ಅದಕ್ಕವನು, “ಯೆಹೋವ ದೇವರ ಜೀವದಾಣೆ, ನನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರಿಬ್ಬರೂ ಮುಂದಕ್ಕೆ ನಡೆದರು. \p \v 7 ಪ್ರವಾದಿಗಳ ಗುಂಪಿನಲ್ಲಿ ಐವತ್ತು ಮಂದಿ ಹೋಗಿ ದೂರದಲ್ಲಿ ಎದುರಾಗಿ ನಿಂತರು. ಆದರೆ ಆ ಇಬ್ಬರು ಯೊರ್ದನ್ ನದಿ ಬಳಿಯಲ್ಲಿ ನಿಂತರು. \v 8 ಆದರೆ ಎಲೀಯನು ತನ್ನ ಹೊದಿಕೆಯನ್ನು ತೆಗೆದು ಮಡಿಸಿಕೊಂಡು, ನೀರನ್ನು ಹೊಡೆದನು. ಆಗ ಆ ನೀರು ಈ ಕಡೆ, ಆ ಕಡೆ ವಿಭಾಗವಾದುದರಿಂದ ಅವರಿಬ್ಬರೂ ಒಣಭೂಮಿಯ ಮೇಲೆ ದಾಟಿಹೋದರು. \p \v 9 ಅವರು ದಾಟಿಹೋದ ತರುವಾಯ, ಎಲೀಯನು ಎಲೀಷನಿಗೆ, “ನಾನು ನಿನ್ನನ್ನು ಬಿಟ್ಟುಹೋಗುವುದಕ್ಕೆ ಮುಂಚೆ, ನಿನಗೋಸ್ಕರ ನಾನು ಮಾಡಬೇಕಾದದ್ದನ್ನು ಕೇಳು,” ಎಂದನು. \p ಅದಕ್ಕೆ ಎಲೀಷನು, “ನಿನ್ನ ಆತ್ಮದ ಎರಡು ಪಾಲನ್ನು ನಾನು ಬಾಧ್ಯವಾಗಿ ಹೊಂದುವಂತೆ ಮಾಡು,” ಎಂದನು. \p \v 10 ಅದಕ್ಕವನು, “ನೀನು ಕಠಿಣವಾದದ್ದನ್ನು ಕೇಳಿದೆ. ಆದಾಗ್ಯೂ ನಿನ್ನ ಬಳಿಯಿಂದ ತೆಗೆಯಲಾಗುವಾಗ ನೀನು ನನ್ನನ್ನು ಕಂಡರೆ, ನಿನಗೆ ಅದು ದೊರಕುವುದು, ಇಲ್ಲದಿದ್ದರೆ, ದೊರಕುವುದಿಲ್ಲ,” ಎಂದನು. \p \v 11 ಅವರು ನಡೆಯುತ್ತಾ ಬಂದು ಮಾತನಾಡಿಕೊಂಡಿರುವಾಗ, ಬೆಂಕಿಯ ರಥವೂ ಬೆಂಕಿಯ ಕುದುರೆಗಳೂ ಅವರಿಬ್ಬರನ್ನೂ ಬೇರೆಯಾಗಿ ಮಾಡಿದವು. ಎಲೀಯನು ಬಿರುಗಾಳಿಯಲ್ಲಿ ಆಕಾಶಕ್ಕೆ ಏರಿಹೋದನು. \v 12 ಎಲೀಷನು ಅದನ್ನು ಕಂಡು, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥ ಮತ್ತು ಸಾರಥಿಯಾದ್ದಾತನೇ!” ಎಂದು ಕೂಗಿದನು. ಮತ್ತೆ ಅವನನ್ನು ಕಾಣಲಿಲ್ಲ. ಆಗ ಅವನು ತನ್ನ ವಸ್ತ್ರಗಳನ್ನು ತೆಗೆದು ಎರಡು ತುಂಡುತುಂಡಾಗಿ ಹರಿದನು. \p \v 13 ಎಲೀಷನು ಎಲೀಯನಿಂದ ಬಿದ್ದ ಹೊದಿಕೆಯನ್ನು ಎತ್ತಿಕೊಂಡು, ಹಿಂದಕ್ಕೆ ಹೋಗಿ, ಯೊರ್ದನ್ ನದಿ ತೀರದಲ್ಲಿ ನಿಂತನು. \v 14 ಎಲೀಯನಿಂದ ಬಿದ್ದ ಹೊದಿಕೆಯನ್ನು ತೆಗೆದುಕೊಂಡು ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವ ದೇವರು ಎಲ್ಲಿ?” ಎಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ, ಅದು ಬಲಗಡೆಗೂ ಎಡಗಡೆಗೂ ವಿಭಾಗವಾದದ್ದರಿಂದ, ಎಲೀಷನು ದಾಟಿಹೋದನು. \p \v 15 ಯೆರಿಕೋವಿನ ಬಳಿಯಲ್ಲಿ ಎದುರಾಗಿದ್ದ ಪ್ರವಾದಿಗಳ ಗುಂಪು ಅವನನ್ನು ಕಂಡಾಗ, “ಎಲೀಯನ ಆತ್ಮವು ಎಲೀಷನ ಮೇಲೆ ನಿಂತಿರುವುದು,” ಎಂದು ಹೇಳಿ, ಎದುರುಗೊಳ್ಳಲು ಬಂದು, ಅವನ ಮುಂದೆ ನೆಲದವರೆಗೂ ಅಡ್ಡಬಿದ್ದರು. \v 16 ಇದಲ್ಲದೆ ಅವರು ಅವನಿಗೆ, “ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ. ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಆಗಲಿ. ಒಂದು ವೇಳೆ ಯೆಹೋವ ದೇವರ ಆತ್ಮರು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ, ತಗ್ಗಿನಲ್ಲಾದರೂ ಇಟ್ಟಿರಬಹುದು,” ಎಂದರು. \p ಅದಕ್ಕೆ ಅವನು, “ಕಳುಹಿಸಬೇಡಿರಿ,” ಎಂದನು. \p \v 17 ಆದರೆ ಅವರು ಅವನನ್ನು ಬೇಸರಪಡುವವರೆಗೂ ಬಲವಂತ ಮಾಡಿದ್ದರಿಂದ ಅವನು, “ಕಳುಹಿಸಿರಿ,” ಎಂದನು. ಅವರು ಐವತ್ತು ಮಂದಿಯನ್ನು ಕಳುಹಿಸಿದರು. ಇವರು ಮೂರು ದಿವಸ ಹುಡುಕಿ ಅವನನ್ನು ಕಾಣದೆ ಹೋದರು. \v 18 ಅವನು ಯೆರಿಕೋವಿನಲ್ಲಿ ನಿಂತಿರುವಾಗ, ಅವರು ತಿರುಗಿ ಅವನ ಬಳಿಗೆ ಬಂದರು. ಆಗ ಅವನು ಅವರಿಗೆ, “ಹೋಗಬೇಡಿರೆಂದು ನಾನು ನಿಮಗೆ ಹೇಳಲಿಲ್ಲವೋ?” ಎಂದನು. \s1 ನೀರನ್ನು ಶುದ್ಧಮಾಡಿದ್ದು \p \v 19 ಆಗ ಪಟ್ಟಣದ ಮನುಷ್ಯರು ಎಲೀಷನಿಗೆ, “ಈ ಪಟ್ಟಣದ ಸ್ಥಳವು ಒಳ್ಳೆಯದಾಗಿದೆ. ನಮ್ಮ ಯಜಮಾನನೇ, ನೋಡು ನಿನಗೆ ಕಾಣುವುದು. ಆದರೆ ನೋಡು ನೀರು ಕೆಟ್ಟದ್ದು, ಭೂಮಿ ಬಂಜೆಯಾದದ್ದು,” ಎಂದರು. \p \v 20 ಅದಕ್ಕವನು, “ನನ್ನ ಬಳಿಗೆ ಹೊಸ ಗಡಿಗೆಯನ್ನು ತೆಗೆದುಕೊಂಡು ಬಂದು ಅದರಲ್ಲಿ ಉಪ್ಪು ಹಾಕಿರಿ,” ಎಂದನು. ಅವರು ಅವನ ಬಳಿಗೆ ತೆಗೆದುಕೊಂಡು ಬಂದರು. \p \v 21 ಅವನು ನೀರಿನ ಬುಗ್ಗೆಯ ಬಳಿಗೆ ಹೊರಟುಹೋಗಿ, ನೀರಿನಲ್ಲಿ ಉಪ್ಪು ಹಾಕಿ, “ ‘ಆ ನೀರನ್ನು ಶುದ್ಧಮಾಡಿದೆನು. ಇನ್ನು ಮೇಲೆ ಅದರಿಂದ ಮರಣವೂ, ಬಂಜೆತನವೂ ಆಗದಿರಲಿ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು. \v 22 ಎಲೀಷನು ಹೇಳಿದ ವಾಕ್ಯದ ಪ್ರಕಾರವೇ ಆ ನೀರು ಇಂದಿನವರೆಗೂ ಶುದ್ಧವಾಗಿಯೇ ಇದೆ. \s1 ಎಲೀಷನನ್ನು ಹಾಸ್ಯಮಾಡಿದ್ದು \p \v 23 ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿರುವಾಗ, ಚಿಕ್ಕ ಹುಡುಗರು ಪಟ್ಟಣದಿಂದ ಹೊರಟುಬಂದು ಅವನನ್ನು ಹಾಸ್ಯಮಾಡಿ ಅವನಿಗೆ, “ಬೋಳು ತಲೆಯವನೇ, ಏರಿ ಹೋಗು; ಬೋಳು ತಲೆಯವನೇ, ಏರಿ ಹೋಗು,” ಎಂದರು. \v 24 ಅವನು ಹಿಂದಿರುಗಿ ಅವರನ್ನು ನೋಡಿ, ಯೆಹೋವ ದೇವರ ಹೆಸರಿನಲ್ಲಿ ಅವರನ್ನು ಶಪಿಸಿದನು. ಆಗ ಅಡವಿಯಿಂದ ಎರಡು ಕರಡಿಗಳು ಹೊರಟು, ಅವರಲ್ಲಿ ನಾಲ್ವತ್ತೆರಡು ಹುಡುಗರನ್ನು ಸೀಳಿಬಿಟ್ಟವು. \v 25 ಅವನು ಆ ಸ್ಥಳವನ್ನು ಬಿಟ್ಟು ಕರ್ಮೆಲ್ ಬೆಟ್ಟಕ್ಕೆ ಹೋದನು. ಅಲ್ಲಿಂದ ಸಮಾರ್ಯಕ್ಕೆ ಇಳಿದು ಹೋದನು. \c 3 \s1 ಯೋರಾಮನು ಯುದ್ಧಕ್ಕೆ ಹೋದದ್ದು \p \v 1 ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೆಂಟನೆಯ ವರ್ಷದಲ್ಲಿ, ಅಹಾಬನ ಮಗ ಯೋರಾಮನು\f + \fr 3:1 \fr*\fq ಯೋರಾಮ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಯೆಹೋರಾಮ್\fqa*\f* ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ, ಹನ್ನೆರಡು ವರ್ಷ ಆಳಿದನು. \v 2 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನ್ನ ತಂದೆಯಂತೆ, ತನ್ನ ತಾಯಿಯಂತೆ ಮಾಡಲಿಲ್ಲ. ತನ್ನ ತಂದೆಯು ಮಾಡಿಟ್ಟ ಬಾಳನ ಸ್ತಂಭವನ್ನು ತೆಗೆದುಹಾಕಿದನು. \v 3 ಆದರೂ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಗೆ ಅವನು ಅಂಟಿಕೊಂಡು ಅವುಗಳನ್ನು ಬಿಟ್ಟು ತೊಲಗದೆ ಇದ್ದನು. \p \v 4 ಮೋವಾಬಿನ ಅರಸನಾದ ಮೇಷನು ಕುರಿ ಮಂದೆಯುಳ್ಳವನಾಗಿದ್ದು ಇಸ್ರಾಯೇಲಿನ ಅರಸನಿಗೆ ಒಂದು ಲಕ್ಷ ಕುರಿಮರಿಗಳನ್ನೂ, ಒಂದು ಲಕ್ಷ ಟಗರುಗಳ ಉಣ್ಣೆಯನ್ನೂ ಕಪ್ಪವಾಗಿ ಕೊಡುತ್ತಿದ್ದನು. \v 5 ಅಹಾಬನು ಮರಣ ಹೊಂದಿದ ತರುವಾಯ, ಮೋವಾಬಿನ ಅರಸನು ಇಸ್ರಾಯೇಲಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು. \v 6 ಆ ದಿವಸದಲ್ಲಿ ಅರಸನಾದ ಯೋರಾಮನು ಸಮಾರ್ಯದಿಂದ ಹೊರಟುಹೋಗಿ ಇಸ್ರಾಯೇಲರನ್ನು ಕೂಡಿಸಿದನು. \v 7 ಇದಲ್ಲದೆ ಅವನು ಹೋಗಿ, “ಮೋವಾಬಿನ ಅರಸನು ನನಗೆ ವಿರೋಧವಾಗಿ ತಿರುಗಿಬಿದ್ದನು. ನೀನು ನನ್ನ ಸಂಗಡ ಮೋವಾಬಿನ ಮೇಲೆ ಯುದ್ಧಮಾಡಲು ಬರುವೆಯೋ?” ಎಂದು ಯೆಹೂದದ ಅರಸನಾದ ಯೆಹೋಷಾಫಾಟನಿಗೆ ಹೇಳಿ ಕಳುಹಿಸಿದನು. \p ಅದಕ್ಕವನು, “ನಾನು ಬರುವೆನು, ನಾನು ನಿನ್ನವನೇ, ನನ್ನ ಜನರು ನಿನ್ನ ಜನರೇ, ಹಾಗೆಯೇ ನನ್ನ ಕುದುರೆಗಳು ನಿನ್ನ ಕುದುರೆಗಳೇ,” ಎಂದನು. \p \v 8 ಯೋರಾಮನು, “ಯಾವ ಮಾರ್ಗವಾಗಿ ಹೋಗೋಣ?” ಎಂದು ಇವನು ಕೇಳಿದನು. \p ಯೆಹೋಷಾಫಾಟನು, “ಎದೋಮಿನ ಮರುಭೂಮಿಯ ಮಾರ್ಗವಾಗಿ,” ಎಂದನು. \p \v 9 ಹೀಗೆ ಇಸ್ರಾಯೇಲಿನ ಅರಸನು ಮತ್ತು ಯೆಹೂದದ ಅರಸನು, ಎದೋಮಿನ ಅರಸನೊಂದಿಗೆ ಹೊರಟು, ಸುತ್ತಾದ ಮಾರ್ಗದಲ್ಲಿ ಏಳು ದಿವಸ ನಡೆದರು. ಆದರೆ ಸೈನ್ಯಕ್ಕೂ, ಅವರು ತಂದಿದ್ದ ಪಶುಗಳಿಗೂ ನೀರು ಇಲ್ಲದೆ ಹೋಯಿತು. \p \v 10 ಆಗ ಇಸ್ರಾಯೇಲಿನ ಅರಸನು, “ಅಯ್ಯೋ, ಯೆಹೋವ ದೇವರು ಈ ಮೂರು ಮಂದಿ ಅರಸರನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿಕೊಡಲು ಕರೆದಿದ್ದಾರಲ್ಲಾ?” ಎಂದನು. \p \v 11 ಆದರೆ ಯೆಹೋಷಾಫಾಟನು ಪ್ರವಾದಿಯ ಮೂಲಕವಾಗಿ ಯೆಹೋವ ದೇವರನ್ನು ಕೇಳುವ ಹಾಗೆ, “ಇಲ್ಲಿ ಯೆಹೋವ ದೇವರ ಪ್ರವಾದಿಯು ಯಾವನೂ ಇಲ್ಲವೋ?” ಎಂದನು. \p ಆಗ ಇಸ್ರಾಯೇಲಿನ ಅರಸನ ಸೇವಕರಲ್ಲಿ ಒಬ್ಬನು ಉತ್ತರವಾಗಿ, “ಎಲೀಯನ ಕೈಗಳ ಮೇಲೆ ನೀರು ಹೊಯ್ಯುತ್ತಿದ್ದ\f + \fr 3:11 \fr*\ft ಎಂದರೆ, ಆತನು ಎಲೀಷನ ಸೇವಕನಾಗಿದ್ದನು.\ft*\f* ಶಾಫಾಟನ ಮಗ ಎಲೀಷನು ಇಲ್ಲಿದ್ದಾನೆ,” ಎಂದು ಹೇಳಿದನು. \p \v 12 ಆಗ ಯೆಹೋಷಾಫಾಟನು, “ಅವನ ಬಳಿಯಲ್ಲಿ ಯೆಹೋವ ದೇವರ ವಾಕ್ಯ ಇದೆ,” ಎಂದನು. ಇಸ್ರಾಯೇಲಿನ ಅರಸನೂ, ಯೆಹೋಷಾಫಾಟನೂ, ಎದೋಮಿನ ಅರಸನೂ ಅವನ ಬಳಿಗೆ ಇಳಿದು ಹೋದರು. \p \v 13 ಎಲೀಷನು ಇಸ್ರಾಯೇಲಿನ ಅರಸನಿಗೆ, “ನಿನ್ನೊಂದಿಗೆ ನಾನೇನು ಮಾಡಬೇಕು? ನೀನು ನಿನ್ನ ತಂದೆಯ ಪ್ರವಾದಿಗಳ ಬಳಿಗೂ, ನಿನ್ನ ತಾಯಿಯ ಪ್ರವಾದಿಗಳ ಬಳಿಗೂ ಹೋಗು,” ಎಂದನು. \p ಇಸ್ರಾಯೇಲಿನ ಅರಸನು ಅವನಿಗೆ, “ಇಲ್ಲ, ಯೆಹೋವ ದೇವರು ಈ ಮೂರು ಮಂದಿ ಅರಸರನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿಕೊಡುವುದಕ್ಕೆ ಒಟ್ಟಾಗಿ ಕರೆದಿದ್ದಾರಲ್ಲಾ,” ಎಂದನು. \p \v 14 ಎಲೀಷನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸೇನಾಧೀಶ್ವರ ಯೆಹೋವ ದೇವರ ಆಣೆ, ನಿಶ್ಚಯವಾಗಿ ಯೆಹೂದದ ಅರಸನಾದ ಯೆಹೋಷಾಫಾಟನು ನಿನ್ನ ಜೊತೆಯಲ್ಲಿ ಬಂದಿರುವುದರಿಂದ ಗೌರವಿಸುತ್ತಿದ್ದೇನೆ; ಇಲ್ಲದಿದ್ದರೆ, ನಾನು ನಿನ್ನ ಕಡೆ ಸಹ ನೋಡುತ್ತಿರಲಿಲ್ಲ. \v 15 ಆದರೆ ಈಗ ವಾದ್ಯಗಾರನನ್ನು ನನ್ನ ಬಳಿಗೆ ಕರೆದುಕೊಂಡು ಬಾ,” ಎಂದನು. \p ಆ ವಾದ್ಯ ಬಾರಿಸುವವನು ಬಾರಿಸಿದಾಗ, ಯೆಹೋವ ದೇವರ ಕೈ ಎಲೀಷನ ಮೇಲೆ ಬಂತು. \v 16 ಆಗ ಅವನು, “ಈ ತಗ್ಗನ್ನು ಹಳ್ಳಕೊಳ್ಳಗಳಾಗಿ ಮಾಡಿರೆಂದು ಯೆಹೋವ ದೇವರು ಹೇಳುತ್ತಾರೆ. \v 17 ಏಕೆಂದರೆ ಯೆಹೋವ ದೇವರು, ‘ನೀವು ಗಾಳಿಯನ್ನೂ, ಮಳೆಯನ್ನೂ ಕಾಣುವುದಿಲ್ಲ. ಆದರೆ ನೀವು ನಿಮ್ಮ ದನಗಳೂ, ನಿಮ್ಮ ಪಶುಗಳೂ ಕುಡಿಯುವ ಹಾಗೆ ಈ ತಗ್ಗು ನೀರಿನಿಂದ ತುಂಬುವುದು.’ \v 18 ಇದಲ್ಲದೆ ಇದು ಯೆಹೋವ ದೇವರ ದೃಷ್ಟಿಗೆ ಅಲ್ಪವಾಗಿರುವುದು. ಅವರು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವರು. \v 19 ನೀವು ಕೋಟೆಯುಳ್ಳ ಎಲ್ಲಾ ಪಟ್ಟಣಗಳನ್ನೂ ನಾಶಮಾಡಿಬಿಟ್ಟು, ಉತ್ತಮವಾದ ಎಲ್ಲಾ ಮರಗಳನ್ನೂ ಬೀಳಮಾಡಿ, ನೀರು ಬಾವಿಗಳನ್ನೆಲ್ಲಾ ಮುಚ್ಚಿ, ಉತ್ತಮವಾದ ಭೂಮಿಯಲ್ಲಿರುವ ಹೊಲಗಳನ್ನೆಲ್ಲಾ ಕಲ್ಲುಗಳಿಂದ ಕೆಡಿಸುವಿರಿ,” ಎಂದನು. \p \v 20 ಉದಯದಲ್ಲಿ ಕಾಣಿಕೆಗಳನ್ನು ಅರ್ಪಿಸುತ್ತಿರುವಾಗ, ನೀರು ಎದೋಮಿನ ಮಾರ್ಗವಾಗಿ ಬಂದದ್ದರಿಂದ ದೇಶವು ನೀರಿನಿಂದ ತುಂಬಿಕೊಂಡಿತು. \p \v 21 ಅರಸರು ತಮ್ಮ ಸಂಗಡ ಯುದ್ಧಮಾಡುವುದಕ್ಕೆ ಬಂದಿದ್ದಾರೆಂದು ಮೋವಾಬ್ಯರು ಕೇಳಿದಾಗ, ಅವರು ಆಯುಧ ಧರಿಸತಕ್ಕ ಪ್ರಾಯಸ್ಥರು ಮೊದಲುಗೊಂಡು, ಸಮಸ್ತರನ್ನು ಕೂಡಿಸಿಕೊಂಡು ಮೇರೆಯಲ್ಲಿ ನಿಂತರು. \v 22 ಮೋವಾಬ್ಯರು ಉದಯಕಾಲದಲ್ಲಿ ಎದ್ದು, ಆ ನೀರಿನ ಮೇಲೆ ಸೂರ್ಯ ಪ್ರಕಾಶ ಮೂಡಿದ್ದರಿಂದ ಆಚೆಯಲ್ಲಿರುವ ಆ ನೀರು ರಕ್ತದ ಹಾಗೆ ಕೆಂಪಾಗಿರುವುದನ್ನು ಕಂಡರು. \v 23 ಆಗ ಅವರು, “ಇದು ರಕ್ತವೇ. ಆ ಅರಸರು ತಮ್ಮನ್ನು ತಾವೇ ನಿಜವಾಗಿ ನಾಶಮಾಡಿ ಒಬ್ಬರನ್ನೊಬ್ಬರು ಕೊಂದಿದ್ದಾರೆ. ಈಗ ಮೋವಾಬ್ಯರೇ ಕೊಳ್ಳೆಗೆ ಬನ್ನಿರಿ,” ಎಂದು ಹೇಳಿಕೊಂಡರು. \p \v 24 ಅವರು ಇಸ್ರಾಯೇಲಿನ ದಂಡಿಗೆ ಬಂದಾಗ, ಇಸ್ರಾಯೇಲರು ಎದ್ದು ಮೋವಾಬ್ಯರು ತಮ್ಮ ಮುಂದೆ ಓಡಿಹೋಗುವ ಹಾಗೆ ಅವರನ್ನು ಸೋಲಿಸಿ, ಮೋವಾಬ್ಯರನ್ನು ಅವರ ದೇಶದವರೆಗೂ ಹೊಡೆಯುತ್ತಾ ಬಂದರು. \v 25 ಇದಲ್ಲದೆ ಅವರು ಪಟ್ಟಣಗಳನ್ನು ಕೆಡವಿಹಾಕಿ, ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ, ಬಾವಿಗಳನ್ನೆಲ್ಲಾ ಮುಚ್ಚಿ, ಸಮಸ್ತ ಉತ್ತಮವಾದ ಮರಗಳನ್ನು ಕಡಿದುಹಾಕಿದರು. ಕೀರ್ ಹರೆಷೆತ್ ನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನು ಸುತ್ತಿಕೊಂಡು ಹೊಡೆದುಬಿಟ್ಟರು. \p \v 26 ಮೋವಾಬಿನ ಅರಸನು ಯುದ್ಧವು ತನಗೆ ಅತಿ ಕಷ್ಟವಾಯಿತೆಂದು ಕಂಡಾಗ, ಎದೋಮಿನ ಅರಸನ ಮೇಲೆ ಹೋಗಿ ಬೀಳುವ ನಿಮಿತ್ತ, ಖಡ್ಗ ಹಿಡಿಯುವ ಏಳು ನೂರು ಮಂದಿಯನ್ನು ತನ್ನ ಸಂಗಡ ತೆಗೆದುಕೊಂಡನು. ಆದರೆ ಅದು ಅವರಿಂದ ಆಗದೆ ಹೋಯಿತು. \v 27 ಆಗ ಮೋವಾಬಿನ ಅರಸನು ತನಗೆ ಬದಲಾಗಿ ಆಳುವುದಕ್ಕಿರುವ ತನ್ನ ಹಿರಿಯ ಮಗನನ್ನು ತೆಗೆದುಕೊಂಡು, ಅವನನ್ನು ಗೋಡೆಯ ಮೇಲೆ ದಹನಬಲಿಯಾಗಿ ಅರ್ಪಿಸಿದನು. ಮೋವಾಬ್ಯರು ಇಸ್ರಾಯೇಲರಿಗೆ ವಿರೋಧವಾಗಿ ರೋಷವುಳ್ಳವರಾಗಿ ಅವರನ್ನು ಬಿಟ್ಟು, ತಮ್ಮ ದೇಶಕ್ಕೆ ಹಿಂದಿರುಗಿ ಹೋದರು. \c 4 \s1 ವಿಧವೆಯ ಎಣ್ಣೆ \p \v 1 ಪ್ರವಾದಿಗಳ ಗುಂಪಿನಲ್ಲಿದ್ದ ಒಬ್ಬ ಪ್ರವಾದಿಯ ಹೆಂಡತಿ ಎಲೀಷನಿಗೆ ಕೂಗಿ, “ನಿನ್ನ ದಾಸನಾದ ನನ್ನ ಗಂಡನು ಮರಣಹೊಂದಿದನು. ನಿನ್ನ ದಾಸನು ಯೆಹೋವ ದೇವರಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ. ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸರಾಗಿ ತೆಗೆದುಕೊಳ್ಳಲು ಬಂದಿದ್ದಾನೆ,” ಎಂದಳು. \p \v 2 ಎಲೀಷನು ಅವಳಿಗೆ, “ನಾನು ನಿನಗೆ ಏನು ಮಾಡಬೇಕು? ಮನೆಯಲ್ಲಿ ನಿನಗೆ ಏನು ಉಂಟು? ನನಗೆ ತಿಳಿಸು,” ಎಂದನು. \p ಅವಳು, “ನಿನ್ನ ಸೇವಕಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪವೇ ಎಣ್ಣೆ ಅಲ್ಲದೆ ಮನೆಯಲ್ಲಿ ಮತ್ತೊಂದಿಲ್ಲ,” ಎಂದಳು. \p \v 3 ಆಗ ಅವನು, “ನೀನು ಹೋಗಿ ಹೊರಗಿರುವ ನಿನ್ನ ಎಲ್ಲಾ ನೆರೆಮನೆಯವರಿಂದ ಬರಿದಾದ ಪಾತ್ರೆಗಳನ್ನು ಬೇಕಾದಷ್ಟು ಕೇಳಿ ತೆಗೆದುಕೊಂಡು ಬಾ. \v 4 ನೀನು ಒಳಗೆ ಪ್ರವೇಶಿಸಿ, ನೀನೂ, ನಿನ್ನ ಪುತ್ರರೂ ಬಾಗಿಲು ಮುಚ್ಚಿಕೊಂಡು, ಆ ಪಾತ್ರೆಗಳಲ್ಲೆಲ್ಲಾ ಎಣ್ಣೆ ಹೊಯ್ದು ತುಂಬಿದ್ದನ್ನು ಒಂದು ಕಡೆ ಇಡು,” ಎಂದನು. \p \v 5 ಹೀಗೆ ಅವಳು ಅವನನ್ನು ಬಿಟ್ಟು ಹೋಗಿ, ತಾನೂ, ತನ್ನ ಪುತ್ರರೂ ಬಾಗಿಲು ಮುಚ್ಚಿದರು. ಇವರು ಅವಳ ಬಳಿಗೆ ಪಾತ್ರೆಗಳನ್ನು ತೆಗೆದುಕೊಂಡು ಬಂದರು. ಅವಳು ಎಣ್ಣೆಯನ್ನು ಅವುಗಳಲ್ಲಿ ಹೊಯ್ದಳು. \v 6 ಆ ಪಾತ್ರೆಗಳು ತುಂಬಿದ ತರುವಾಯ ಅವಳು ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದಳು. \p ಮಗನು ಅವಳಿಗೆ, “ಇನ್ನೊಂದು ಪಾತ್ರೆ ಇಲ್ಲ,” ಎಂದನು. ಆಗ ಎಣ್ಣೆಯು ನಿಂತುಹೋಯಿತು. \p \v 7 ಅವಳು ಬಂದು ದೇವರ ಮನುಷ್ಯನಿಗೆ ತಿಳಿಸಿದಳು. ಅವನು, “ನೀನು ಹೋಗಿ ಆ ಎಣ್ಣೆಯನ್ನು ಮಾರಿ ನಿನ್ನ ಸಾಲವನ್ನು ತೀರಿಸಿ, ಮಿಕ್ಕದ್ದರಿಂದ ನೀನೂ, ನಿನ್ನ ಮಕ್ಕಳು ಜೀವನ ಮಾಡಿರಿ,” ಎಂದನು. \s1 ಶೂನೇಮಿನ ಸ್ತ್ರೀಯ ಮಗುವು ಬದುಕಿದ್ದು \p \v 8 ಒಂದು ದಿನ ಎಲೀಷನು ಶೂನೇಮಿಗೆ ಹೋದನು. ಅಲ್ಲಿ ಒಬ್ಬಳು ಶ್ರೀಮಂತ ಸ್ತ್ರೀಯು ಇದ್ದಳು. ಅವಳು ಅವನನ್ನು ಊಟ ಮಾಡಲು ಬಲವಂತ ಮಾಡಿದಳು. ಹಾಗೆಯೇ ಅವನು ಆ ಮಾರ್ಗವಾಗಿ ಹೋಗುವಾಗಲೆಲ್ಲಾ, ಅಲ್ಲಿ ಊಟ ಮಾಡಲು ಹೋಗುತ್ತಿದ್ದನು. \v 9 ಆದ್ದರಿಂದ ಅವಳು ತನ್ನ ಗಂಡನಿಗೆ, “ಇಗೋ, ನಮ್ಮ ಬಳಿಯಲ್ಲಿ ಯಾವಾಗಲೂ ಹಾದುಹೋಗುವ ಇವನು ದೇವರ ಪರಿಶುದ್ಧ ಮನುಷ್ಯನಾಗಿರುತ್ತಾನೆಂದು ನನಗೆ ಗೊತ್ತಾಯಿತು. \v 10 ನಾವು ಮಾಳಿಗೆಯ ಮೇಲೆ ಒಂದು ಚಿಕ್ಕ ಕೊಠಡಿಯನ್ನು ಕಟ್ಟಿಸಿ, ಅದರಲ್ಲಿ ಅವನಿಗೋಸ್ಕರ ಮಂಚವನ್ನೂ, ಮೇಜನ್ನೂ, ಕುರ್ಚಿಯನ್ನೂ, ದೀಪವನ್ನೂ ಇಡೋಣ. ಅವನು ನಮ್ಮ ಬಳಿಗೆ ಬರುವಾಗ ಅಲ್ಲಿ ಇರಲಿ,” ಎಂದಳು. \p \v 11 ಒಂದು ದಿವಸ ಎಲೀಷನು ಅಲ್ಲಿಗೆ ಬಂದು, ಆ ಕೊಠಡಿಯಲ್ಲಿ ಪ್ರವೇಶಿಸಿ ಮಲಗಿದನು. \v 12 ಆಗ ಎಲೀಷನು ತನ್ನ ಸೇವಕನಾದ ಗೇಹಜಿಗೆ, “ನೀನು ಶೂನೇಮ್ಯಳನ್ನು ಕರೆ,” ಎಂದನು. ಅವನು ಅವಳನ್ನು ಕರೆದದ್ದರಿಂದ ಅವಳು ಎಲೀಷನ ಮುಂದೆ ಬಂದು ನಿಂತಳು. \v 13 ಅವನು ಗೇಹಜಿಗೆ, “ಇಗೋ, ನೀನು ಕಷ್ಟಪಟ್ಟು ನಮಗೋಸ್ಕರ ಉಪಕಾರಮಾಡಿದೆ. ನಾನು ನಿನಗೆ ಮಾಡಬೇಕಾದದ್ದೇನು? ನಿನಗೋಸ್ಕರ ಅರಸನ ಸಂಗಡಲಾದರೂ, ಸೈನ್ಯಾಧಿಪತಿಯ ಸಂಗಡಲಾದರೂ ಮಾತನಾಡಬೇಕೋ ಎಂದು ಆಕೆಗೆ ಕೇಳು,” ಎಂದನು. \p ಅದಕ್ಕವಳು, “ನಾನು ನನ್ನ ಜನರ ಮಧ್ಯದಲ್ಲಿ ಸುಖವಾಗಿದ್ದೇನೆ,” ಎಂದಳು. \p \v 14 ಎಲೀಷನು ಗೇಹಜಿಗೆ, “ಅವಳಿಗೋಸ್ಕರ ಮಾಡಬೇಕಾದದ್ದೇನು?” ಎಂದನು. \p ಅದಕ್ಕೆ ಗೇಹಜಿಯು, “ಅವಳಿಗೆ ಮಕ್ಕಳಿಲ್ಲ. ಅವಳ ಗಂಡನು ವೃದ್ಧನಾಗಿದ್ದಾನೆ,” ಎಂದನು. \p \v 15 ಪ್ರವಾದಿಯು, “ಅವಳನ್ನು ಕರೆ,” ಎಂದನು. ಗೇಹಜಿಯು ಅವಳನ್ನು ಕರೆದಾಗ ಅವಳು ಬಾಗಿಲಲ್ಲೇ ನಿಂತಳು. \v 16 ಆಗ ಅವನು, “ಮುಂದಿನ ವರ್ಷ ಈ ಸಮಯದಲ್ಲಿ ನಿನ್ನ ಕೈಯಲ್ಲಿ ಒಬ್ಬ ಮಗನನ್ನು ಎತ್ತಿಕೊಂಡಿರುವೆ,” ಎಂದನು. \p ಅದಕ್ಕವಳು, “ಹಾಗಲ್ಲ, ದೇವರ ಮನುಷ್ಯನೇ, ನನ್ನ ಒಡೆಯನೇ, ನಿನ್ನ ಸೇವಕಿಗೆ ನೀನು ಸುಳ್ಳು ಹೇಳಬೇಡ,” ಎಂದಳು. \p \v 17 ಆದರೆ, ಆ ಸ್ತ್ರೀಯು ಗರ್ಭಧರಿಸಿ, ಎಲೀಷನು ಹೇಳಿದ ಪ್ರಕಾರ ಮುಂದಿನ ವರ್ಷದ ಅದೇ ಸಮಯದಲ್ಲಿ ಮಗನನ್ನು ಹೆತ್ತಳು. \p \v 18 ಆ ಮಗುವು ಬೆಳೆದಾಗ ಒಂದು ದಿವಸ, ಅವನು ಬೆಳೆ ಕೊಯ್ಯುವವರ ಬಳಿಯಲ್ಲಿರುವ ತನ್ನ ತಂದೆಯ ಬಳಿಗೆ ಹೋದನು. \v 19 ಆಗ ಅವನು ತನ್ನ ತಂದೆಗೆ, “ನನ್ನ ತಲೆ, ನನ್ನ ತಲೆ,” ಎಂದನು. \p ತಂದೆಯು ತನ್ನ ಸೇವಕನಿಗೆ, “ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋಗು,” ಎಂದನು. \v 20 ಸೇವಕನು ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋದನು. ಅವನು ಮಧ್ಯಾಹ್ನದವರೆಗೂ ಅವಳ ತೊಡೆಯ ಮೇಲೆ ಇದ್ದು ಅನಂತರ ಮರಣಹೊಂದಿದನು. \v 21 ಆಗ ಅವಳು ಏರಿಹೋಗಿ, ಅವನನ್ನು ದೇವರ ಮನುಷ್ಯನ ಮಂಚದ ಮೇಲೆ ಮಲಗಿಸಿ ಬಾಗಿಲು ಮುಚ್ಚಿದಳು. \p \v 22 ತನ್ನ ಗಂಡನನ್ನು ಕರೆದು, “ನಾನು ದೇವರ ಮನುಷ್ಯನ ಬಳಿಗೆ ಬೇಗನೆ ಹೋಗಿ ತಿರುಗಿ ಬರುವ ಹಾಗೆ, ನೀನು ದಯಮಾಡಿ ಸೇವಕನನ್ನೂ ಒಂದು ಕತ್ತೆಯನ್ನೂ ಕಳುಹಿಸು,” ಎಂದಳು. \p \v 23 ಅದಕ್ಕೆ ಅವನು, “ಇದು ಅಮಾವಾಸ್ಯೆ ಅಲ್ಲ, ಸಬ್ಬತ್\f + \fr 4:23 \fr*\fq ಸಬ್ಬತ್ \fq*\ft ಅಂದರೆ \ft*\fqa ವಿಶ್ರಾಂತಿ ದಿನ\fqa*\f* ದಿನವೂ ಅಲ್ಲ. ನೀನು ಏಕೆ ಈ ಹೊತ್ತು ಅವನ ಬಳಿಗೆ ಹೋಗುತ್ತೀ?” ಎಂದನು. \p ಅದಕ್ಕವಳು, “ಅಡ್ಡಿಯೇನಿಲ್ಲ,” ಎಂದಳು. \p \v 24 ಆಗ ಅವಳು ಕತ್ತೆಯ ಮೇಲೆ ತಡಿಯನ್ನು ಹಾಕಿಸಿ ತನ್ನ ಸೇವಕನಿಗೆ, “ನಡೆಸಿಕೊಂಡು ಹೋಗು. ನಾನು ನಿನಗೆ ಹೇಳುವವರೆಗೂ, ನನಗೋಸ್ಕರ ಸವಾರಿಯನ್ನು ನಿಧಾನಗೊಳಿಸಬೇಡ,” ಎಂದು ಹೇಳಿ, \v 25 ಕರ್ಮೆಲ್ ಬೆಟ್ಟದಲ್ಲಿರುವ ದೇವರ ಮನುಷ್ಯನ ಬಳಿಗೆ ಬಂದಳು. ಆಗ ದೇವರ ಮನುಷ್ಯನು ದೂರದಿಂದ ಅವಳು ಬರುವುದನ್ನು ಕಂಡನು. \p ಅವನು ತನ್ನ ಸೇವಕನಾದ ಗೇಹಜಿಗೆ, “ಇಗೋ, ಆ ಶೂನೇಮ್ಯಳು ಬರುತ್ತಿದ್ದಾಳೆ. \v 26 ನೀನು ಅವಳನ್ನು ಎದುರುಗೊಳ್ಳಲು ಓಡಿಹೋಗಿ, ಅವಳಿಗೆ, ‘ನಿನಗೂ, ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೇ? ಎಂದು ಕೇಳು,’ ” ಎಂದನು. \p ಅವಳು, “ಕ್ಷೇಮ” ಎಂದಳು. \p \v 27 ಅವಳು ಬೆಟ್ಟಕ್ಕೆ ದೇವರ ಮನುಷ್ಯನ ಬಳಿಗೆ ಬಂದು, ಅವನ ಪಾದಗಳನ್ನು ಹಿಡಿದಳು. ಆದರೆ ಅವಳನ್ನು ತಳ್ಳಿ ಹಾಕಲು ಗೇಹಜಿಯು ಹತ್ತಿರ ಬಂದದ್ದರಿಂದ ದೇವರ ಮನುಷ್ಯನು, “ಅವಳನ್ನು ಬಿಡು. ಏಕೆಂದರೆ ಅವಳ ಹೃದಯವು ಬಹಳ ನೋವಿನಿಂದ ತುಂಬಿದೆ. ಯೆಹೋವ ದೇವರು ಅದನ್ನು ನನಗೆ ತಿಳಿಸದೆ ಮರೆಮಾಡಿದ್ದಾರೆ,” ಎಂದನು. \p \v 28 ಆಗ ಅವಳು, “ನಾನು ನನ್ನ ಒಡೆಯನಿಂದ ಪುತ್ರನನ್ನು ಕೇಳಿಕೊಂಡೆನೋ? ನನ್ನನ್ನು ಮೋಸಗೊಳಿಸಬೇಡವೆಂದು ನಾನು ಹೇಳಲಿಲ್ಲವೋ?” ಎಂದಳು. \p \v 29 ಎಲೀಷನು ಗೇಹಜಿಗೆ, “ನೀನು ನಿನ್ನ ಸಡಿಲವಾದ ಉಡುಪನ್ನು ನಡುವಿಗೆ ಕಟ್ಟಿಕೊಂಡು, ನನ್ನ ಕೋಲನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡು ಹೋಗು. ನಿನಗೆ ಯಾವನಾದರೂ ಎದುರುಗೊಂಡರೆ, ಅವನನ್ನು ವಂದಿಸಬೇಡ; ಯಾವನಾದರೂ ನಿನ್ನನ್ನು ವಂದಿಸಿದರೆ, ಅವನಿಗೆ ಉತ್ತರ ಹೇಳಬೇಡ; ನನ್ನ ಕೋಲನ್ನು ಆ ಹುಡುಗನ ಮುಖದ ಮೇಲೆ ಹಾಕು,” ಎಂದನು. \p \v 30 ಆದರೆ ಹುಡುಗನ ತಾಯಿಯು, “ಯೆಹೋವ ದೇವರ ಜೀವದಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದಳು. ಆಗ ಅವನೆದ್ದು ಅವಳ ಹಿಂದೆ ಹೋದನು. \p \v 31 ಗೇಹಜಿಯು ಅವರಿಗೆ ಮುಂದಾಗಿ ಹೋಗಿ, ಆ ಕೋಲನ್ನು ಆ ಹುಡುಗನ ಮುಖದ ಮೇಲೆ ಇಟ್ಟನು. ಆದರೆ ಶಬ್ದವಾದರೂ, ಆಲೈಸುವುದಾದರೂ ಇರಲಿಲ್ಲ. ಆದ್ದರಿಂದ ಗೇಹಜಿಯು ಎಲೀಷನನ್ನು ಎದುರುಗೊಳ್ಳಲು ತಿರುಗಿ ಹೋಗಿ ಅವನಿಗೆ, “ಹುಡುಗನು ಎಚ್ಚರವಾಗಲಿಲ್ಲ,” ಎಂದನು. \p \v 32 ಎಲೀಷನು ಆ ಮನೆಯನ್ನು ಮುಟ್ಟಿದಾಗ, ಸತ್ತ ಹುಡುಗನನ್ನು ತನ್ನ ಮಂಚದ ಮೇಲೆ ಇಟ್ಟಿರುವುದನ್ನು ಕಂಡನು. \v 33 ಅವನು ಒಳಗೆ ಪ್ರವೇಶಿಸಿ, ಯಾರೂ ಒಳಗೆ ಬಾರದಂತೆ ಬಾಗಿಲು ಮುಚ್ಚಿಕೊಂಡು, ಯೆಹೋವ ದೇವರನ್ನು ಪ್ರಾರ್ಥಿಸಿದನು. \v 34 ಅವನು ಮಗುವಿನ ಮೇಲೆ ಮಲಗಿಕೊಂಡು, ತನ್ನ ಬಾಯಿಯನ್ನು ಅವನ ಬಾಯಿಯ ಮೇಲೆಯೂ, ತನ್ನ ಕಣ್ಣುಗಳನ್ನು ಅವನ ಕಣ್ಣುಗಳ ಮೇಲೆಯೂ, ತನ್ನ ಕೈಗಳನ್ನು ಅವನ ಕೈಗಳ ಮೇಲೆಯೂ ಇರಿಸಿದನು. ಅವನ ಮೇಲೆ ಬೋರಲು ಬಿದ್ದುದರಿಂದ ಮಗುವಿನ ಶರೀರವು ಬೆಚ್ಚಗೆ ಆಯಿತು. \v 35 ಅವನು ಆಮೇಲೆ ಎದ್ದು ಕೋಣೆಯಲ್ಲಿ ಸ್ವಲ್ಪ ಅತ್ತಿತ್ತ ತಿರುಗಾಡಿ, ಪುನಃ ಅವನ ಮೇಲೆ ಬೋರಲು ಬಿದ್ದನು. ಆಗ ಆ ಹುಡುಗನು ಏಳು ಸಾರಿ ಸೀತು ಕಣ್ಣುಗಳನ್ನು ತೆರೆದನು. \p \v 36 ಆಗ ಅವನು ಗೇಹಜಿಯನ್ನು ಕರೆದು ಅವನಿಗೆ, “ಶೂನೇಮ್ಯಳನ್ನು ಕರೆ,” ಎಂದನು. ಗೇಹಜಿಯು ಅವಳನ್ನು ಕರೆದನು. ಅವಳು ಎಲೀಷನ ಬಳಿಗೆ ಬಂದಾಗ ಅವನು, “ನಿನ್ನ ಪುತ್ರನನ್ನು ತೆಗೆದುಕೊಂಡು ಹೋಗು,” ಎಂದನು. \v 37 ಆಗ ಅವಳು ಬಂದು, ಅವನ ಪಾದಗಳ ಮೇಲೆ ಬಿದ್ದು, ನೆಲಕ್ಕೆ ಬಗ್ಗಿ ತನ್ನ ಮಗನನ್ನು ಎತ್ತಿಕೊಂಡು ಹೊರಟು ಹೋದಳು. \s1 ಗಡಿಗೆಯಲ್ಲಿ ಮರಣ \p \v 38 ಎಲೀಷನು ತಿರುಗಿ ಗಿಲ್ಗಾಲಿಗೆ ಬಂದಾಗ, ದೇಶದಲ್ಲಿ ಬರ ಉಂಟಾಗಿತ್ತು. ಪ್ರವಾದಿಗಳ ಮಂಡಳಿ ಅವನ ಮುಂದೆ ಕುಳಿತಿರುವಾಗ, ಅವನು ತನ್ನ ಸೇವಕನಿಗೆ, “ನೀನು ದೊಡ್ಡ ಗಡಿಗೆಯನ್ನು ಮೇಲಿಟ್ಟು, ಈ ಜನರಿಗೋಸ್ಕರ ಅಡಿಗೆ ಮಾಡು,” ಎಂದನು. \p \v 39 ಅವರಲ್ಲಿ ಒಬ್ಬನು ಪಲ್ಯವನ್ನು ತರಲು ಅಡವಿಗೆ ಹೋಗಿ, ಅಡವಿಯ ಬಳ್ಳಿಯನ್ನು ಕಂಡು, ಅಡವಿಯ ಕಾಯಿಗಳನ್ನು ತನ್ನ ಉಡಿಯ ತುಂಬ ಕೂಡಿಸಿಕೊಂಡು ಬಂದು, ಅವುಗಳನ್ನು ಕೊಯ್ದು ಗಡಿಗೆಯಲ್ಲಿ ಹಾಕಿದನು. ಅವು ಏನೆಂದು ಯಾರಿಗೂ ತಿಳಿದಿರಲಿಲ್ಲ. \v 40 ಜನರಿಗೆ ಅದನ್ನು ತಿನ್ನುವುದಕ್ಕೆ ಬಡಿಸಿದರು. ಅವರು ಆಹಾರವನ್ನು ತಿನ್ನುತ್ತಿರುವಾಗ, “ದೇವರ ಮನುಷ್ಯನೇ, ಗಡಿಗೆಯಲ್ಲಿ ಮರಣ,” ಎಂದು ಕೂಗಿದರು. ಅವರು ಅದರಲ್ಲಿದ್ದದ್ದನ್ನು ತಿನ್ನಲಾರದೆ ಹೋದರು. \p \v 41 ಆಗ ಎಲೀಷನು ಹಿಟ್ಟನ್ನು ತೆಗೆದುಕೊಂಡು ಬರಲು ಹೇಳಿ, ಅದನ್ನು ಗಡಿಗೆಯಲ್ಲಿ ಹಾಕಿ, “ಈಗ ಇದನ್ನು ಜನರಿಗೆ ಬಡಿಸಿರಿ,” ಎಂದನು. ಆಗ ಆ ಗಡಿಗೆಯಲ್ಲಿನ ವಿಷವೆಲ್ಲಾ ಹೋಗಿತ್ತು. \s1 ನೂರು ಮಂದಿ ಊಟಮಾಡಿದ್ದು \p \v 42 ಬಾಳ್ ಶಾಲಿಷಾ ಊರಿನಿಂದ ಒಬ್ಬನು ದೇವರ ಮನುಷ್ಯನಿಗೆ ಪ್ರಥಮ ಫಲವಾದ ಜವೆಗೋಧಿಯ ಇಪ್ಪತ್ತು ರೊಟ್ಟಿಗಳನ್ನೂ ಒಂದು ಚೀಲ ತುಂಬಿದ ತೆನೆಗಳನ್ನೂ ತೆಗೆದುಕೊಂಡು ಬಂದನು. ಆಗ ಎಲೀಷನು, “ಜನರಿಗೆ ಕೊಡು ಅವರು ತಿನ್ನಲಿ,” ಎಂದನು. \p \v 43 ಅವನ ಸೇವಕನು, “ಇದನ್ನು ನೂರು ಮಂದಿಗೆ ಬಡಿಸುವುದು ಹೇಗೆ?” ಎಂದನು. \p “ ‘ತಿನ್ನಲು ಜನರಿಗೆ ನೀಡು, ಅವರು ತಿಂದು ಅನಂತರ ಉಳಿಯುವುದು,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಎಲೀಷನು ಉತ್ತರಕೊಟ್ಟನು. \v 44 ಹಾಗೆಯೇ ಸೇವಕನು ಬಡಿಸಿದನು. ಯೆಹೋವ ದೇವರು ನುಡಿದಂತೆಯೇ ಜನರು ಊಟಮಾಡಿ, ತೃಪ್ತರಾಗಿ ಇನ್ನೂ ಉಳಿಯಿತು. \c 5 \s1 ನಾಮಾನನ ಕುಷ್ಠರೋಗ ವಾಸಿಯಾದದ್ದು \p \v 1 ಅರಾಮಿನ ಅರಸನ ಸೈನ್ಯಾಧಿಪತಿ ನಾಮಾನನು ತನ್ನ ಯಜಮಾನನ ಮುಂದೆ ಮಹಾಪುರುಷನಾಗಿಯೂ, ಘನವುಳ್ಳವನಾಗಿಯೂ ಇದ್ದನು. ಏಕೆಂದರೆ ಅವನಿಂದ ಯೆಹೋವ ದೇವರು ಅರಾಮ್ಯರಿಗೆ ಬಿಡುಗಡೆಯನ್ನು ಉಂಟುಮಾಡಿದ್ದರು. ಇದಲ್ಲದೆ ಅವನು ಪರಾಕ್ರಮಶಾಲಿಯಾಗಿದ್ದನು. ಆದರೆ ಅವನು ಕುಷ್ಠರೋಗಿಯಾಗಿದ್ದನು. \p \v 2 ಅರಾಮಿನವರು ಗುಂಪುಗುಂಪಾಗಿ ಹೊರಟು, ಇಸ್ರಾಯೇಲ್ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡಿದುಕೊಂಡು ಬಂದರು. ಅವಳು ನಾಮಾನನ ಹೆಂಡತಿಗೆ ಸೇವಕಿಯಾದಳು. \v 3 ಅವಳು ತನ್ನ ಯಜಮಾನನಿಗೆ, “ನನ್ನ ಧಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಬಳಿಯಲ್ಲಿರುತ್ತಿದ್ದರೆ, ಅವನು ಧಣಿಯ ಕುಷ್ಠರೋಗವನ್ನು ವಾಸಿಮಾಡುತ್ತಿದ್ದನು,” ಎಂದಳು. \p \v 4 ನಾಮಾನನು ಹೋಗಿ ಇಸ್ರಾಯೇಲ್ ದೇಶದ ಹುಡುಗಿಯು ಹೇಳಿದ್ದನ್ನು ತನ್ನ ಯಜಮಾನನಿಗೆ ತಿಳಿಸಿದನು. \v 5 ಅರಾಮ್ಯರ ಅರಸನು, “ನೀನು ಹೋಗಿ ಬಾ. ನಾನು ಇಸ್ರಾಯೇಲಿನ ಅರಸನಿಗೆ ಪತ್ರವನ್ನು ಕಳುಹಿಸುವೆನು,” ಎಂದನು. ಅದರಂತೆ ನಾಮಾನನು 340 ಕಿಲೋಗ್ರಾಂ ಬೆಳ್ಳಿ, 64 ಕಿಲೋಗ್ರಾಂ ಬಂಗಾರ, ಹತ್ತು ಜೊತೆ ಬಟ್ಟೆಗಳನ್ನೂ ತೆಗೆದುಕೊಂಡು ಹೋದನು. \v 6 ಅವನು ಇಸ್ರಾಯೇಲಿನ ಅರಸನ ಬಳಿಗೆ ಆ ಪತ್ರವನ್ನು ತೆಗೆದುಕೊಂಡು ಬಂದನು. ಅದರಲ್ಲಿ, “ಈ ಪತ್ರ ನಿನಗೆ ಸೇರುವಾಗ, ನಿನ್ನ ಸೇವಕನಾದ ನಾಮಾನನ ಕುಷ್ಠರೋಗವನ್ನು ವಾಸಿಮಾಡುವ ಹಾಗೆ ನಿನ್ನ ಬಳಿಗೆ ಕಳುಹಿಸಿದ್ದೇನೆ,” ಎಂದು ಬರೆದಿತ್ತು. \p \v 7 ಇಸ್ರಾಯೇಲಿನ ಅರಸನು ಆ ಪತ್ರವನ್ನು ಓದಿದ ಮೇಲೆ ತನ್ನ ವಸ್ತ್ರಗಳನ್ನು ಹರಿದುಕೊಂಡು, “ಕೊಲ್ಲುವುದಕ್ಕೂ, ಬದುಕಿಸುವುದಕ್ಕೂ ನಾನು ದೇವರೋ? ಇವನ ಕುಷ್ಠರೋಗವನ್ನು ವಾಸಿ ಮಾಡುವುದಕ್ಕೆ ನನ್ನ ಬಳಿಗೆ ಕಳುಹಿಸಿದ್ದೇನು? ಇವನು ನನಗೆ ವಿರೋಧವಾಗಿ ಜಗಳಕ್ಕೆ ಕಾರಣ ಹುಡುಕುವುದನ್ನು ನೀವೇ ನೋಡಿರಿ,” ಎಂದನು. \p \v 8 ಇಸ್ರಾಯೇಲಿನ ಅರಸನು ತನ್ನ ವಸ್ತ್ರಗಳನ್ನು ಹರಿದುಕೊಂಡನೆಂದು ದೇವರ ಮನುಷ್ಯನಾದ ಎಲೀಷನು ಕೇಳಿದಾಗ, “ನೀನು ನಿನ್ನ ವಸ್ತ್ರಗಳನ್ನು ಹರಿದುಕೊಂಡದ್ದೇನು? ಇಸ್ರಾಯೇಲಿನಲ್ಲಿ ಪ್ರವಾದಿ ಇದ್ದಾನೆಂದು ನಾಮಾನನು ತಿಳಿದುಕೊಳ್ಳುವಂತೆ ಅವನು ನನ್ನ ಬಳಿಗೆ ಬರಲಿ,” ಎಂದು ಅರಸನಿಗೆ ಹೇಳಿ ಕಳುಹಿಸಿದನು. \v 9 ಹಾಗೆಯೇ ನಾಮಾನನು ತನ್ನ ಕುದುರೆಗಳ ಸಂಗಡ, ತನ್ನ ರಥದ ಸಂಗಡ ಬಂದು, ಎಲೀಷನ ಮನೆಯ ಬಾಗಿಲ ಬಳಿಯಲ್ಲಿ ನಿಂತನು. \v 10 ಆಗ ಎಲೀಷನು, “ನೀನು ಹೋಗಿ ಯೊರ್ದನಿನಲ್ಲಿ ಏಳು ಸಾರಿ ಸ್ನಾನಮಾಡು, ಆಗ ನಿನ್ನ ಶರೀರವು ಮೊದಲಿನಂತೆ ಮಾರ್ಪಡುವುದು, ನೀನು ಶುದ್ಧನಾಗುವೆ,” ಎಂದು ಹೇಳಲು, ಅವನ ಬಳಿಗೆ ಸೇವಕನನ್ನು ಕಳುಹಿಸಿದನು. \p \v 11 ಆಗ ನಾಮಾನನು ಕೋಪಗೊಂಡು ಹೊರಟುಹೋಗಿ, “ಅವನು ನಿಶ್ಚಯವಾಗಿ ನನ್ನ ಬಳಿಗೆ ಹೊರಟುಬಂದು, ತನ್ನ ದೇವರಾದ ಯೆಹೋವ ದೇವರ ಹೆಸರನ್ನು ಕರೆದು, ನನ್ನ ಚರ್ಮದ ಮೇಲೆ ತನ್ನ ಕೈಯನ್ನಾಡಿಸಿ, ಕುಷ್ಠರೋಗವನ್ನು ವಾಸಿಮಾಡುವನೆಂದು, ನಾನು ನೆನಸಿದೆ. \v 12 ನಾನು ಹೊಳೆಗಳಲ್ಲಿ ಸ್ನಾನಮಾಡಿ ಶುದ್ಧನಾಗುವಂತೆ ದಮಸ್ಕದ ನದಿಗಳಾದ ಅಬಾನಾವೂ, ಪಾರ್ಪರೂ ಇಸ್ರಾಯೇಲಿನ ಸಮಸ್ತ ನೀರುಗಳಿಗಿಂತ ಉತ್ತಮವಾಗಿಲ್ಲವೋ?” ಎಂದು ಹೇಳಿ ತಿರುಗಿಕೊಂಡು ಕೋಪದಿಂದ ಹೋದನು. \p \v 13 ಆದರೆ ನಾಮಾನನ ಸೇವಕನು ಅವನ ಬಳಿಗೆ ಬಂದು, ಅವನ ಸಂಗಡ ಮಾತನಾಡಿ, “ನನ್ನ ತಂದೆಯೇ, ಪ್ರವಾದಿಯು ದೊಡ್ಡ ಕಾರ್ಯವನ್ನು ನಿನಗೆ ಹೇಳಿದ್ದರೆ, ನೀನು ಮಾಡುತ್ತಿದ್ದಿಲ್ಲವೋ? ಅವನು ನಿನಗೆ, ‘ಸ್ನಾನಮಾಡಿ ಶುದ್ಧನಾಗು’ ಎಂದು ಹೇಳಿದರಲ್ಲಿ ಅಡ್ಡಿ ಏನು?” ಎಂದನು. \v 14 ಆಗ ಅವನು ಇಳಿದು ಹೋಗಿ ದೇವರ ಮನುಷ್ಯನ ಮಾತಿನ ಪ್ರಕಾರ ಯೊರ್ದನಿನಲ್ಲಿ ಏಳು ಸಾರಿ ಮುಳುಗಿದನು. ಆಗ ಅವನ ಶರೀರವು ಚಿಕ್ಕ ಮಗುವಿನ ಶರೀರದ ಹಾಗೆ ಮಾರ್ಪಟ್ಟಿತು, ಅವನು ಶುದ್ಧನಾದನು. \p \v 15 ಆಗ ನಾಮಾನನೂ, ಅವನ ಸಮಸ್ತ ಸೈನ್ಯವೂ ದೇವರ ಮನುಷ್ಯನ ಬಳಿಗೆ ತಿರುಗಿ ಬಂದರು. ಅವನು ಪ್ರವಾದಿಯ ಮುಂದೆ ಬಂದು ನಿಂತು, “ಇಸ್ರಾಯೇಲಿನಲ್ಲಿರುವ ದೇವರ ಹೊರತು ಭೂಮಿಯಲ್ಲೆಲ್ಲೂ ಬೇರೆ ದೇವರು ಇಲ್ಲವೆಂದು ನಾನು ಬಲ್ಲೆನು. ಆದಕಾರಣ ನೀನು ದಯಮಾಡಿ ನಿನ್ನ ಸೇವಕನಿಂದ ಕಾಣಿಕೆಯನ್ನು ತೆಗೆದುಕೋ,” ಎಂದನು. \p \v 16 ಆದರೆ ಪ್ರವಾದಿಯು, “ನಾನು ಯಾರ ಮುಂದೆ ನಿಲ್ಲುತ್ತೇನೋ ಆ ಯೆಹೋವ ದೇವರ ಜೀವದಾಣೆ, ನಾನು ಏನೂ ತೆಗೆದುಕೊಳ್ಳುವುದಿಲ್ಲ,” ಎಂದನು. ಅವನು ತೆಗೆದುಕೊಳ್ಳಬೇಕೆಂದು ಬಲವಂತ ಮಾಡಿದರೂ, “ಬೇಡ,” ಎಂದನು. \p \v 17 ನಾಮಾನನು, “ಹಾಗಾದರೆ ಎರಡು ಹೇಸರಗತ್ತೆಗಳು ಹೊರತಕ್ಕ ಮಣ್ಣು ನಿನ್ನ ಸೇವಕನಿಗೆ ಕೊಡುವಂತೆ ಮಾಡು. ಏಕೆಂದರೆ ನಿನ್ನ ಸೇವಕನು ಇನ್ನು ಮೇಲೆ ಯೆಹೋವ ದೇವರಿಗೆ ಹೊರತಾಗಿ ಅನ್ಯ ದೇವರುಗಳಿಗೆ ದಹನಬಲಿಯನ್ನಾಗಲಿ, ಯಜ್ಞವನ್ನಾಗಲಿ ಅರ್ಪಿಸನು. \v 18 ಈ ಕಾರ್ಯವನ್ನು ಯೆಹೋವ ದೇವರು ನಿನ್ನ ಸೇವಕನಿಗೆ ಮನ್ನಿಸಲಿ. ಏನೆಂದರೆ, ನನ್ನ ಯಜಮಾನನು ಅಡ್ಡ ಬೀಳುವುದಕ್ಕೆ ರಿಮ್ಮೋನನ ದೇವಸ್ಥಾನಕ್ಕೆ ಹೋಗಿ, ಅವನು ನನ್ನ ಕೈಯ ಮೇಲೆ ಆತುಕೊಳ್ಳುವಾಗ, ರಿಮ್ಮೋನನ ದೇವಸ್ಥಾನದಲ್ಲಿ ನಾನು ಬಾಗಿದರೆ, ಯೆಹೋವ ದೇವರು ನಿನ್ನ ಸೇವಕನಿಗೆ ಈ ಕಾರ್ಯವನ್ನು ಮನ್ನಿಸಲಿ,” ಎಂದನು. \p \v 19 ಅದಕ್ಕೆ ಎಲೀಷನು, “ಸಮಾಧಾನದಿಂದ ಹೋಗು,” ಎಂದನು. \p ನಾಮಾನನು ಸ್ವಲ್ಪ ದೂರ ಹೋದನು. \v 20 ದೇವರ ಮನುಷ್ಯನಾದ ಎಲೀಷನ ಸೇವಕನಾಗಿರುವ ಗೇಹಜಿಯು, “ನನ್ನ ಯಜಮಾನನು ಈ ಅರಾಮ್ಯನಾದ ನಾಮಾನನು ತೆಗೆದುಕೊಂಡು ಬಂದದ್ದನ್ನು ಅವನ ಕೈಯಿಂದ ತೆಗೆದುಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಯೆಹೋವ ದೇವರ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ, ಅವನ ಕೈಯಿಂದ ಏನಾದರೂ ತೆಗೆದುಕೊಳ್ಳುವೆನು,” ಅಂದುಕೊಂಡನು. \p \v 21 ಅದರಂತೆ ಗೇಹಜಿಯು ನಾಮಾನನ ಹಿಂದೆ ಹೋದನು. ನಾಮಾನನು ತನ್ನ ಹಿಂದೆ ಓಡಿ ಬರುವವನನ್ನು ಕಂಡಾಗ, ಅವನನ್ನು ಎದುರುಗೊಳ್ಳಲು ರಥದಿಂದ ಇಳಿದು ಅವನಿಗೆ, “ಎಲ್ಲಾ ಕ್ಷೇಮವೋ?” ಎಂದನು. \p \v 22 ಅದಕ್ಕೆ ಗೇಹಜಿಯು, “ಎಲ್ಲಾ ಕ್ಷೇಮ. ಪ್ರವಾದಿಗಳ ಮಂಡಳಿಯಲ್ಲಿಯ ಇಬ್ಬರು ಯುವಕರು ಎಫ್ರಾಯೀಮ್ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ. ನೀನು ದಯಮಾಡಿ ಅವರಿಗೆ ಮೂರು ಸಾವಿರ ಬೆಳ್ಳಿ ನಾಣ್ಯಗಳನ್ನೂ, ಎರಡು ಜೊತೆ ಬಟ್ಟೆಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ,” ಎಂದನು. \p \v 23 ಆಗ ನಾಮಾನನು, “ನೀನು ದಯಮಾಡಿ ಆರು ಸಾವಿರ ನಾಣ್ಯಗಳನ್ನಾದರೂ ತೆಗೆದುಕೋ,” ಎಂದು ಹೇಳಿ ಗೇಹಜಿಯನ್ನು ಬಲವಂತ ಮಾಡಿದನು. ಹಾಗೆಯೇ ಆರು ಸಾವಿರ ಬೆಳ್ಳಿ ನಾಣ್ಯಗಳನ್ನು ಎರಡು ಚೀಲಗಳಲ್ಲಿ ಕಟ್ಟಿಸಿ, ಅದರ ಸಂಗಡ ಎರಡು ಜೊತೆ ಬಟ್ಟೆಗಳನ್ನು ಕೊಟ್ಟು, ತನ್ನ ಸೇವಕರಲ್ಲಿ ಇಬ್ಬರ ಮೇಲೆ ಹೊರಿಸಿದನು. ಅವರು ಗೇಹಜಿಯ ಮುಂದೆ ಹೊತ್ತುಕೊಂಡು ಹೋದರು. \v 24 ಆದರೆ ಗೇಹಜಿಯು ಬೆಟ್ಟಕ್ಕೆ ಬಂದಾಗ, ಅವರ ಕೈಯಿಂದ ಅವುಗಳನ್ನು ತೆಗೆದುಕೊಂಡು ಮನೆಯಲ್ಲಿಟ್ಟು, ಆ ಮನುಷ್ಯರನ್ನು ಕಳುಹಿಸಿಬಿಟ್ಟದ್ದರಿಂದ ಅವರು ಹೊರಟು ಹೋದರು. \p \v 25 ಆಗ ಗೇಹಜಿಯು ಒಳಗೆ ಪ್ರವೇಶಿಸಿ, ತನ್ನ ಯಜಮಾನನ ಮುಂದೆ ನಿಂತನು. ಎಲೀಷನು ಅವನಿಗೆ, “ಗೇಹಜಿಯೇ, ಎಲ್ಲಿಗೆ ಹೋಗಿ ಬಂದೆ?” ಎಂದನು. \p ಅದಕ್ಕೆ ಗೇಹಜಿಯು, “ನಿನ್ನ ಸೇವಕನು ಎಲ್ಲಿಗೂ ಹೋಗಲಿಲ್ಲ,” ಎಂದನು. \p \v 26 ಆದರೆ ಎಲೀಷನು ಅವನಿಗೆ, “ಆ ಮನುಷ್ಯನು ನಿನ್ನನ್ನು ಎದುರುಗೊಳ್ಳಲು ತನ್ನ ರಥದಿಂದ ಇಳಿದು ನಿನ್ನ ಬಳಿಗೆ ಬಂದಾಗ, ನನ್ನ ಹೃದಯವು ನಿನ್ನ ಸಂಗಡ ಹೋಗಲಿಲ್ಲವೋ? ಹಣವನ್ನೂ, ವಸ್ತ್ರಗಳನ್ನೂ, ದ್ರವ್ಯವನ್ನೂ, ಹಿಪ್ಪೆಯ ತೋಪುಗಳನ್ನೂ, ದ್ರಾಕ್ಷಿಯ ತೋಟಗಳನ್ನೂ, ಕುರಿದನಗಳನ್ನೂ, ದಾಸದಾಸಿಯರನ್ನೂ ಪಡೆದುಕೊಳ್ಳುವುದಕ್ಕೆ ಇದು ಸಮಯವೋ? \v 27 ನಾಮಾನನ ಕುಷ್ಠರೋಗವು ನಿನಗೂ, ನಿನ್ನ ಸಂತಾನಕ್ಕೂ ನಿತ್ಯವಾಗಿ ಇರುವುದು,” ಎಂದನು. ಆಗ ಗೇಹಜಿಯು ಹಿಮದಂತೆ ಬಿಳುಪಾಗಿ, ಕುಷ್ಠರೋಗಿ ಆಗಿ ಎಲೀಷನಿಂದ ಹೊರಟುಹೋದನು. \c 6 \s1 ಎಲೀಷನು ಕೊಡಲಿಯನ್ನು ತೇಲಾಡಿಸಿದ್ದು \p \v 1 ಪ್ರವಾದಿಗಳ ಮಂಡಳಿಯು ಎಲೀಷನಿಗೆ, “ಇಗೋ, ಈಗ ನಾವು ನಿನ್ನ ಸಂಗಡ ವಾಸವಾಗಿರುವ ಸ್ಥಳವು ನಮಗೆ ಇಕ್ಕಟ್ಟಾಗಿದೆ. ಅಪ್ಪಣೆಕೊಡು, \v 2 ನಾವು ಯೊರ್ದನಿನವರೆಗೂ ಹೋಗಿ, ಪ್ರತಿ ಮನುಷ್ಯನು ಅಲ್ಲಿಂದ ಒಂದೊಂದು ತೊಲೆಯನ್ನು ತೆಗೆದುಕೊಂಡು ಬಂದು, ವಾಸವಾಗಿರುವುದಕ್ಕೆ ನಮಗೋಸ್ಕರ ಒಂದು ಸ್ಥಳವನ್ನು ಅಲ್ಲಿ ಮಾಡುವೆವು,” ಎಂದರು. \p ಅವನು, “ಹೋಗಿರಿ,” ಎಂದನು. \p \v 3 ಆಗ ಅವರಲ್ಲಿ ಒಬ್ಬನು ಎಲೀಷನಿಗೆ, “ನೀವು ದಯಮಾಡಿ ನಿಮ್ಮ ಸೇವಕರ ಸಂಗಡ ಬರುವಿರಾ?” ಎಂದನು. \p ಅದಕ್ಕವನು, “ನಾನು ಬರುತ್ತೇನೆ,” ಎಂದನು. \v 4 ಹಾಗೆಯೇ ಅವನು ಅವರ ಸಂಗಡ ಹೋದನು. \p ಅವರು ಯೊರ್ದನ್ ನದಿಯ ಕಡೆಗೆ ಬಂದು ಅಲ್ಲಿ ಮರಗಳನ್ನು ಕಡಿದರು. \v 5 ಆದರೆ ಒಬ್ಬನು ಮರವನ್ನು ಬೀಳಿಸುವಾಗ ಕೊಡಲಿಯು ನೀರಿನೊಳಕ್ಕೆ ಬಿತ್ತು. ಆಗ ಅವನು, “ಅಯ್ಯೋ! ಯಜಮಾನನೇ, ನಾನು ಅದನ್ನು ಸಾಲವಾಗಿ ತೆಗೆದುಕೊಂಡದ್ದು,” ಎಂದು ಕೂಗಿ ಹೇಳಿದನು. \p \v 6 ದೇವರ ಮನುಷ್ಯನು, “ಅದು ಎಲ್ಲಿ ಬಿತ್ತು?” ಎಂದನು. ಅವನು ಎಲೀಷನಿಗೆ ಸ್ಥಳವನ್ನು ತೋರಿಸಿದ ತರುವಾಯ, ಎಲೀಷನು ಒಂದು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದ್ದರಿಂದ ಆ ಕಬ್ಬಿಣವು ತೇಲಿತು. \v 7 ಪ್ರವಾದಿಯು, “ನೀನು ತೆಗೆದುಕೋ,” ಎಂದನು. ಹಾಗೆಯೇ ಅವನು ತನ್ನ ಕೈಯನ್ನು ಚಾಚಿ ಅದನ್ನು ತೆಗೆದುಕೊಂಡನು. \s1 ಎಲೀಷನು ಅರಾಮ್ಯರು ಕುರುಡರಾಗುವಂತೆ ಮಾಡಿದ್ದು \p \v 8 ಅರಾಮ್ಯರ ಅರಸನು ಇಸ್ರಾಯೇಲಿನ ಮೇಲೆ ಯುದ್ಧ ಮಾಡುತ್ತಿದ್ದನು. ಇಂಥಿಂಥ ಸ್ಥಳದಲ್ಲಿ ತನ್ನ ದಂಡು ಇಳಿಯಬೇಕೆಂದು ತನ್ನ ಸೇವಕರ ಸಂಗಡ ಯೋಚನೆ ಮಾಡಿಕೊಂಡನು. \p \v 9 ಆಗ ದೇವರ ಮನುಷ್ಯನು ಇಸ್ರಾಯೇಲಿನ ಅರಸನಿಗೆ, “ಅಂಥಾ ಸ್ಥಳವನ್ನು ಹಾದುಹೋಗದೆ ಜಾಗ್ರತೆಯಾಗಿ ಇರು. ಏಕೆಂದರೆ ಅರಾಮ್ಯರು ಅಲ್ಲಿಗೆ ಇಳಿದು ಬಂದಿದ್ದಾರೆ,” ಎಂದು ಹೇಳಿ ಕಳುಹಿಸಿದನು. \v 10 ಹೀಗೆಯೇ ದೇವರ ಮನುಷ್ಯನು ತನ್ನನ್ನು ಎಚ್ಚರಿಸಿ, ತನಗೆ ಹೇಳಿದ ಸ್ಥಳಕ್ಕೆ ಇಸ್ರಾಯೇಲಿನ ಅರಸನು ಹೇಳಿ ಕಳುಹಿಸಿ, ತನ್ನ ಸೈನ್ಯವನ್ನು ಕರೆಯಿಸಿಕೊಂಡನು. ಹೀಗೆ ಅವನು ಹಲವು ಸಾರಿ ತಪ್ಪಿಸಿಕೊಂಡನು. \p \v 11 ಆದ್ದರಿಂದ ಅರಾಮ್ಯರ ಅರಸನ ಹೃದಯವು ಇದರ ನಿಮಿತ್ತ ಕಳವಳಗೊಂಡು, ಅವನು ತನ್ನ ಸೇವಕರನ್ನು ಕರೆದು ಅವರಿಗೆ, “ನಮ್ಮಲ್ಲಿ ಇಸ್ರಾಯೇಲಿನ ಅರಸನ ಕಡೆಯವನು ಯಾರು? ನೀವು ನನಗೆ ತಿಳಿಸುವುದಿಲ್ಲವೋ?” ಎಂದನು. \p \v 12 ಅವನ ಸೇವಕರಲ್ಲಿ ಒಬ್ಬನು, “ನನ್ನ ಒಡೆಯನೇ, ಅರಸನೇ, ಯಾವನೂ ಇಲ್ಲ. ಆದರೆ ಇಸ್ರಾಯೇಲಿನಲ್ಲಿರುವ ಪ್ರವಾದಿಯಾದ ಎಲೀಷನು ನಿನ್ನ ಮಲಗುವ ಕೋಣೆಯಲ್ಲಿ ನೀನು ಹೇಳುವ ಮಾತುಗಳನ್ನು ಸಹ ಇಸ್ರಾಯೇಲಿನ ಅರಸನಿಗೆ ಹೇಳುತ್ತಾನೆ,” ಎಂದನು. \p \v 13 ಆಗ ಅರಾಮ್ಯರ ಅರಸನು, “ನಾನು ಅವನನ್ನು ಹಿಡಿಯುವ ಹಾಗೆ ನೀವು ಹೋಗಿ ಅವನು ಎಲ್ಲಿದ್ದಾನೋ ನೋಡಿರಿ,” ಎಂದನು. ಅವನು ದೋತಾನಿನಲ್ಲಿದ್ದಾನೆಂದು ಅವನಿಗೆ ತಿಳಿಸಿದರು. \v 14 ಆದ್ದರಿಂದ ಅರಾಮ್ಯರ ಅರಸನು ಅಲ್ಲಿಗೆ ಕುದುರೆಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು. \p \v 15 ದೇವರ ಮನುಷ್ಯನ ಸೇವಕನು ಉದಯದಲ್ಲಿ ಎದ್ದು ಹೊರಗೆ ಹೊರಟಾಗ, ಕುದುರೆಗಳೂ ರಥಗಳೂ ಉಳ್ಳ ಸೈನ್ಯ ಪಟ್ಟಣವನ್ನು ಸುತ್ತಿಕೊಂಡಿರುವುದನ್ನು ಕಂಡು ಎಲೀಷನಿಗೆ, “ಅಯ್ಯೋ! ನನ್ನ ಯಜಮಾನನೇ, ನಾವು ಏನು ಮಾಡುವುದು?” ಎಂದನು. \p \v 16 ಆದರೆ ಪ್ರವಾದಿಯು, “ಭಯಪಡಬೇಡ. ಅವರ ಸಂಗಡ ಇರುವವರಿಗಿಂತ ನಮ್ಮ ಕಡೆ ಇರುವವರು ಹೆಚ್ಚಾಗಿದ್ದಾರೆ,” ಎಂದನು. \p \v 17 ಆಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಇವನು ಕಾಣುವ ಹಾಗೆ ಇವನ ಕಣ್ಣುಗಳನ್ನು ತೆರೆಯಿರಿ,” ಎಂದು ಪ್ರಾರ್ಥಿಸಿದನು. ಯೆಹೋವ ದೇವರು ಆ ಯುವ ಸೇವಕನ ಕಣ್ಣುಗಳನ್ನು ತೆರೆದಾಗ, ಎಲೀಷನ ಸುತ್ತಲೂ ಬೆಟ್ಟದಲ್ಲಿ ಬೆಂಕಿಯ ರಥಗಳೂ, ಕುದುರೆಗಳೂ ತುಂಬಿರುವುದನ್ನು ಅವನು ಕಂಡನು. \p \v 18 ಶತ್ರುಗಳು ಸಮೀಪಕ್ಕೆ ಬಂದಾಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಈ ಜನರನ್ನು ಕುರುಡರನ್ನಾಗಿ ಮಾಡಿರಿ,” ಎಂದು ಪ್ರಾರ್ಥಿಸಿದನು. ಎಲೀಷನ ಮಾತಿನ ಹಾಗೆಯೇ ದೇವರು ಅವರನ್ನು ಕುರುಡರನ್ನಾಗಿ ಮಾಡಿದರು. \p \v 19 ಆಗ ಎಲೀಷನು ಅವರಿಗೆ, “ಇದು ಆ ಮಾರ್ಗವಲ್ಲ, ಇದು ಆ ಪಟ್ಟಣವಲ್ಲ, ನನ್ನ ಹಿಂದೆ ಬನ್ನಿರಿ. ನೀವು ಹುಡುಕುವ ಮನುಷ್ಯರ ಬಳಿಗೆ ನಿಮ್ಮನ್ನು ಬರಮಾಡುವೆನು,” ಎಂದು ಹೇಳಿ ಅವರನ್ನು ಸಮಾರ್ಯಕ್ಕೆ ನಡೆಸಿದನು. \p \v 20 ಅವರು ಸಮಾರ್ಯಕ್ಕೆ ಬಂದಾಗ, ಎಲೀಷನು, “ಯೆಹೋವ ದೇವರೇ, ಇವರು ಕಾಣುವಂತೆ ಇವರ ಕಣ್ಣುಗಳನ್ನು ತೆರೆಯಿರಿ,” ಎಂದನು. ಆಗ ಯೆಹೋವ ದೇವರು ಅವರ ಕಣ್ಣುಗಳನ್ನು ತೆರೆದರು. ಅವರು ನೋಡಿದಾಗ ಸಮಾರ್ಯದ ಮಧ್ಯದಲ್ಲಿದ್ದರು. \p \v 21 ಇಸ್ರಾಯೇಲಿನ ಅರಸನು ಅವರನ್ನು ಕಂಡಾಗ ಎಲೀಷನಿಗೆ, “ನನ್ನ ತಂದೆಯೇ, ನಾನು ಸಂಹರಿಸಲೋ, ಸಂಹರಿಸಲೋ?” ಎಂದನು. \p \v 22 ಅದಕ್ಕವನು, “ಸಂಹರಿಸಬೇಡ. ನೀನು ನಿನ್ನ ಖಡ್ಗದಿಂದಲೂ ನಿನ್ನ ಬಿಲ್ಲಿನಿಂದಲೂ ಸೆರೆಯಾಗಿ ತೆಗೆದುಕೊಳ್ಳದವರನ್ನು ಹೊಡೆಯುತ್ತೀಯೋ? ರೊಟ್ಟಿಯನ್ನೂ, ನೀರನ್ನೂ ಇವರ ಮುಂದೆ ಇಡು. ಅವರು ತಿಂದು ಕುಡಿದು ತಮ್ಮ ಯಜಮಾನನ ಬಳಿಗೆ ಹೋಗಲಿ,” ಎಂದನು. \v 23 ಆಗ ಅವರಿಗೋಸ್ಕರ ದೊಡ್ಡ ಔತಣ ಮಾಡಿಸಿದನು. ಅವರು ತಿಂದು ಕುಡಿದ ತರುವಾಯ ಅವರನ್ನು ಕಳುಹಿಸಿಬಿಟ್ಟನು. ಅವರು ತಮ್ಮ ಯಜಮಾನನ ಬಳಿಗೆ ಹೋದರು. ಅರಾಮ್ಯರ ದಂಡುಗಳು ಇಸ್ರಾಯೇಲ್ ದೇಶದ ಮೇಲೆ ಮತ್ತೆ ದಾಳಿಮಾಡಲಿಲ್ಲ. \s1 ಸಮಾರ್ಯಕ್ಕೆ ಘೋರ ಬರಗಾಲ ಬಂದದ್ದು \p \v 24 ಸ್ವಲ್ಪ ಸಮಯದ ನಂತರ, ಅರಾಮಿನ ಅರಸ ಬೆನ್ಹದದನು ತನ್ನ ಸಮಸ್ತ ಸೈನ್ಯವನ್ನು ಕೂಡಿಸಿಕೊಂಡು ಹೊರಟುಹೋಗಿ, ಸಮಾರ್ಯವನ್ನು ಮುತ್ತಿಗೆಹಾಕಿದನು. \v 25 ಆಗ ಸಮಾರ್ಯದಲ್ಲಿ ದೊಡ್ಡ ಬರವಿತ್ತು. ಒಂದು ಕತ್ತೆಯ ತಲೆಯು ಎಂಬತ್ತು ಶೆಕೆಲ್ ಬೆಳ್ಳಿಗೆ, ಸುಮಾರು ನೂರು ಗ್ರಾಂ\f + \fr 6:25 \fr*\ft ಹೀಬ್ರೂ ಭಾಷೆಯಲ್ಲಿ \ft*\fqa ಕಬ್‌ನ ಕಾಲುಭಾಗ, \fqa*\ft ಅಂದರೆ ಸುಮಾರು 100 ಗ್ರಾಂ\ft*\f* ಪಾರಿವಾಳದ ಗೊಬ್ಬರವನ್ನು ಐದು ಶೆಕೆಲ್ ಬೆಳ್ಳಿಗೆ ಮಾರಲಾಗುವವರೆಗೂ ಅದನ್ನು ಮುತ್ತಿಗೆಹಾಕಿದನು. \p \v 26 ಇಸ್ರಾಯೇಲಿನ ಅರಸನು ಗೋಡೆಯ ಮೇಲೆ ಹಾದು ಹೋಗುತ್ತಿರುವಾಗ, ಒಬ್ಬ ಸ್ತ್ರೀಯು ಅವನನ್ನು ಕೂಗಿ, “ನನ್ನ ಯಜಮಾನನೇ, ಅರಸನೇ, ಸಹಾಯ ಮಾಡಿ,” ಎಂದಳು. \p \v 27 ಅದಕ್ಕವನು, “ಯೆಹೋವ ದೇವರು ನಿನಗೆ ಸಹಾಯ ಮಾಡದೆ ಹೋದರೆ, ನಾನು ಎಲ್ಲಿಂದ ನಿನಗೆ ಸಹಾಯ ಮಾಡಲಿ? ಕಣದಿಂದಲೋ, ದ್ರಾಕ್ಷಿ ಆಲೆಯಿಂದಲೋ?” ಎಂದನು. \v 28 ಅರಸನು ಅವಳಿಗೆ, “ನಿನ್ನ ದುಃಖವೇನು?” ಎಂದನು. \p ಅದಕ್ಕವಳು, “ಈ ಸ್ತ್ರೀಯು ನನಗೆ ಹೇಳಿದ್ದೇನೆಂದರೆ, ‘ಈ ಹೊತ್ತು ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು, ನಾಳೆ ನನ್ನ ಮಗನನ್ನು ತಿನ್ನೋಣ,’ ಎಂದಳು. \v 29 ಹಾಗೆಯೇ ನಾವು ನನ್ನ ಮಗನನ್ನು ಬೇಯಿಸಿ ಅವನನ್ನು ತಿಂದೆವು. ಮಾರನೆಯ ದಿವಸದಲ್ಲಿ ನಾನು ಅವಳಿಗೆ, ‘ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು,’ ಎಂದೆನು. ಆದರೆ ಅವಳು ತನ್ನ ಮಗನನ್ನು ಬಚ್ಚಿಟ್ಟಿದ್ದಾಳೆ,” ಎಂದಳು. \p \v 30 ಅರಸನು ಆ ಸ್ತ್ರೀಯು ಹೇಳಿದ ಮಾತುಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಡೆಯ ಮೇಲೆ ಹಾದುಹೋದನು. ಜನರು ಕಂಡಾಗ ಅವನ ಮೈಮೇಲೆ ಗೋಣಿತಟ್ಟು ಇತ್ತು. \v 31 ಆಗ ಅವನು, “ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ, ದೇವರು ನನಗೆ ಇದರಂತೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ,” ಎಂದನು. \p \v 32 ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರ ಇದ್ದ ಒಬ್ಬ ದೂತನನ್ನು ಕಳುಹಿಸಿದನು. ಅವನು ಇನ್ನೂ ಸ್ವಲ್ಪ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿರಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ದೂತನನ್ನು ಕಳುಹಿಸಿದ್ದಾನೆ. ದೂತನು ಇಲ್ಲಿಗೆ ಬಂದ ಕೂಡಲೇ ನೀವು ಬಾಗಿಲನ್ನು ಮುಚ್ಚಿ, ಅವನು ಒಳಗೆ ಬಾರದಂತೆ ಅದನ್ನು ಒತ್ತಿಹಿಡಿಯಿರಿ. ಅವನ ಹಿಂದೆಯೇ ಬರುತ್ತಿರುವ ಅವನೊಡೆಯನ ಕಾಲಿನ ಸಪ್ಪಳ ಕೇಳಿಸುತ್ತಿದೆಯಲ್ಲವೇ?” ಎಂದು ಹೇಳಿದನು. \v 33 ಎಲೀಷನು ಅವರೊಡನೆ ಮಾತನಾಡುತ್ತಿರುವಾಗಲೇ ಆ ದೂತನೂ ಅವನ ಹಿಂದಿನಿಂದ ಅರಸನೂ ಅಲ್ಲಿಗೆ ಬಂದರು. \p ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಯೆಹೋವ ದೇವರಿಂದಲೇ ಬಂದದ್ದು. ಇನ್ನು ಮುಂದೆ ನಾನೇಕೆ ಅವರನ್ನು ನಂಬಿ ನಿರೀಕ್ಷಿಸಿಕೊಂಡಿರಬೇಕು?” ಎಂದನು. \c 7 \p \v 1 ಆಗ ಎಲೀಷನು, “ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾಳೆ ಹೆಚ್ಚು ಕಡಿಮೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಿಲಲ್ಲಿ ಮೂರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೆ ಮತ್ತು ಆರು ಕಿಲೋಗ್ರಾಂ ಜವೆಗೋಧಿ ಒಂದು ಬೆಳ್ಳಿ ನಾಣ್ಯಕ್ಕೆ ಮಾರಲಾಗುವುದು,” ಎಂದನು. \p \v 2 ಆಗ ಅರಸನಿಗೆ ಹಸ್ತಕನಾದ ಅಧಿಕಾರಿಯು ದೇವರ ಮನುಷ್ಯನಿಗೆ ಉತ್ತರವಾಗಿ, “ಇಗೋ, ಯೆಹೋವ ದೇವರು ಆಕಾಶದಲ್ಲಿ ಕಿಟಕಿಗಳನ್ನು ಮಾಡಿದರೆ, ಈ ಕಾರ್ಯ ಸಂಭವಿಸುವುದೋ?” ಎಂದನು. \p ಅದಕ್ಕವನು, “ನೀನು ನಿನ್ನ ಕಣ್ಣುಗಳಿಂದ ಅದನ್ನು ನೋಡುವೆ, ಆದರೆ ಅದರಲ್ಲಿ ಯಾವುದನ್ನೂ ತಿನ್ನುವುದಿಲ್ಲ,” ಎಂದನು. \s1 ಬರಗಾಲ ತೀರಿಹೋದದ್ದು \p \v 3 ಆಗ ಊರು ಬಾಗಿಲ ದ್ವಾರದಲ್ಲಿ ನಾಲ್ಕು ಮಂದಿ ಕುಷ್ಠರೋಗಿಗಳು ಇದ್ದರು. ಅವರು ಒಬ್ಬರಿಗೊಬ್ಬರು, “ನಾವು ಸಾಯುವವರೆಗೂ ಇಲ್ಲಿ ಕುಳಿತುಕೊಂಡಿರುವುದೇನು? \v 4 ನಾವು ಇಲ್ಲಿಯೇ ಇದ್ದರೆ, ಪಟ್ಟಣದಲ್ಲಿ ಬರವಿರುವುದರಿಂದ ಅಲ್ಲಿ ಸಾಯುತ್ತೇವೆ. ಇಲ್ಲಿ ನಾವು ಕುಳಿತಿದ್ದರೂ ಹಾಗೆಯೇ ಸಾಯುತ್ತೇವೆ. ಆದ್ದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗಿ ಅವರಿಗೆ ಶರಣಾಗೋಣ. ಅವರು ನಮ್ಮನ್ನು ಬದುಕಿಸಿದರೆ ಬದುಕುವೆವು, ಅವರು ನಮ್ಮನ್ನು ಕೊಲ್ಲುವುದಾದರೆ ಕೊಲ್ಲಲಿ,” ಎಂದುಕೊಂಡರು. \p \v 5 ಹಾಗೆಯೇ ಸಂಜೆಯಲ್ಲಿ ಎದ್ದು, ಅರಾಮ್ಯರ ಪಾಳೆಯಕ್ಕೆ ಹೋಗಲು ಅವರು ಅರಾಮ್ಯರ ಪಾಳೆಯದ ಅಂಚಿಗೆ ಬಂದಾಗ, ಅಲ್ಲಿ ಯಾರೂ ಇರಲಿಲ್ಲ. \v 6 ಏಕೆಂದರೆ ಯೆಹೋವ ದೇವರು ಪಾಳೆಯದಲ್ಲಿರುವ ಅರಾಮ್ಯರಿಗೆ ರಥಗಳ, ಕುದುರೆಗಳ ಮತ್ತು ಮಹಾ ಸೈನ್ಯದ ಶಬ್ದವೂ ಕೇಳಿಸುವಂತೆ ಮಾಡಿದ್ದರಿಂದ ಅವರು ಒಬ್ಬರಿಗೊಬ್ಬರು, “ಇಸ್ರಾಯೇಲಿನ ಅರಸನು ಹಿತ್ತಿಯರ ಅರಸರನ್ನೂ, ಈಜಿಪ್ಟಿನ ಅರಸರನ್ನೂ ನಮ್ಮ ಮೇಲೆ ದಾಳಿಮಾಡಲು ಅವರನ್ನು ಕೂಲಿಗೆ ಕರೆದಿದ್ದಾನೆ,” ಎಂದುಕೊಂಡರು. \v 7 ಅವರು ಸಂಜೆಯಲ್ಲಿ ಎದ್ದು ಪಾಳೆಯದಲ್ಲಿದ್ದ ಹಾಗೆ ತಮ್ಮ ಗುಡಾರಗಳನ್ನೂ, ತಮ್ಮ ಕುದುರೆಗಳನ್ನೂ, ತಮ್ಮ ಕತ್ತೆಗಳನ್ನೂ ಬಿಟ್ಟುಬಿಟ್ಟು ತಮ್ಮ ಪ್ರಾಣಕ್ಕೋಸ್ಕರ ಓಡಿಹೋಗಿದ್ದರು. \p \v 8 ಆ ಕುಷ್ಠರೋಗಿಗಳು ದಂಡಿನ ಅಂಚಿನವರೆಗೂ ಬಂದು ಒಂದು ಡೇರೆಯಲ್ಲಿ ಪ್ರವೇಶಿಸಿ, ಅಲ್ಲಿ ತಿಂದು ಕುಡಿದು ಅಲ್ಲಿದ್ದ ಬೆಳ್ಳಿಬಂಗಾರವನ್ನೂ, ವಸ್ತ್ರಗಳನ್ನೂ ತೆಗೆದುಕೊಂಡುಹೋಗಿ ಬಚ್ಚಿಟ್ಟರು. ತಿರುಗಿಬಂದು ಮತ್ತೊಂದು ಡೇರೆಯಲ್ಲಿ ಪ್ರವೇಶಿಸಿ, ಅಲ್ಲಿಂದಲೂ ಹಾಗೆಯೇ ತೆಗೆದುಕೊಂಡುಹೋಗಿ ಬಚ್ಚಿಟ್ಟರು. \p \v 9 ಅನಂತರ ಅವರು, “ಇದು ಶುಭವಾರ್ತೆಯ ದಿವಸ, ನಾವು ಇದನ್ನು ಪ್ರಕಟಿಸದಿರುವುದು ಒಳ್ಳೆಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ, ಶಿಕ್ಷೆಗೆ ಪಾತ್ರರಾಗಬಹುದು. ಆದ್ದರಿಂದ ಹೋಗಿ ಅರಮನೆಯವರಿಗೆ ಈ ಸಂಗತಿಯನ್ನು ತಿಳಿಸೋಣ,” ಎಂದು ಮಾತನಾಡಿಕೊಂಡರು. \p \v 10 ಹಾಗೆಯೇ ಅವರು ಬಂದು ಪಟ್ಟಣದ ಬಾಗಿಲು ಕಾಯುವವನನ್ನು ಕರೆದು ಅವನಿಗೆ, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿ ಬಂದೆವು, ಅಲ್ಲಿ ಯಾರೂ ಕಾಣಿಸಲಿಲ್ಲ, ಮನುಷ್ಯರ ಶಬ್ದವೇ ಕೇಳಿಸಲಿಲ್ಲ. ಕತ್ತೆ ಕುದುರೆಗಳನ್ನು ಅಲ್ಲಲ್ಲಿ ಕಟ್ಟಿಹಾಕಲಾಗಿತ್ತು ಡೇರೆಗಳು ಇದ್ದ ಹಾಗೆಯೇ ಇವೆ,” ಎಂದರು. \v 11 ಅವನು ಬಾಗಿಲು ಕಾಯುವವರನ್ನು ಕರೆದನು. ಅವರು ಒಳಗಿರುವ ಅರಸನ ಮನೆಯವರಿಗೆ ತಿಳಿಸಿದರು. \p \v 12 ಅರಸನು ರಾತ್ರಿಯಲ್ಲೇ ಎದ್ದು ತನ್ನ ಪರಿವಾರದವರಿಗೆ, “ಅರಾಮ್ಯರ ಹಂಚಿಕೆಯನ್ನು ಹೇಳುತ್ತೇನೆ ಕೇಳಿ. ನಾವು ಹಸಿವೆಯಿಂದ ಸಾಯುವವರಾಗಿದ್ದೇವೆ ಎಂಬುದನ್ನು ಅವರು ಬಲ್ಲರು. ಆದ್ದರಿಂದ ಪಾಳೆಯವನ್ನು ಬಿಟ್ಟು ಹೋಗಿ ಅಡವಿಯಲ್ಲಿ ಅಡಗಿಕೊಂಡಿದ್ದಾರೆ. ನಾವು ಪಟ್ಟಣದಿಂದ ಹೊರಗೆ ಹೋದ ಕೂಡಲೇ ನಮ್ಮನ್ನು ಸಜೀವಿಗಳನ್ನಾಗಿಯೇ ಹಿಡಿದು ಪಟ್ಟಣವನ್ನು ಪ್ರವೇಶಿಸಬೇಕೆಂದಿದ್ದಾರೆ.” \p \v 13 ಆಗ ಅವನ ಸೇವಕರಲ್ಲಿ ಒಬ್ಬನು ಉತ್ತರವಾಗಿ, “ಪಟ್ಟಣದಲ್ಲಿ ಉಳಿದಿರುವ ಕುದುರೆಗಳಲ್ಲಿ ಐದು ಕುದುರೆಗಳನ್ನು ಕೆಲವರು ತೆಗೆದುಕೊಂಡು ಹೋಗಲಿ. ಅವು ಇಸ್ರಾಯೇಲಿನ ಸಮಸ್ತ ಸಮೂಹದಲ್ಲಿ ಉಳಿದವುಗಳ ಹಾಗೆ ಇವೆ. ಅಂದರೆ ಇಸ್ರಾಯೇಲಿನ ಸಮಸ್ತ ಗುಂಪಿನಲ್ಲಿ ನಾಶವಾಗದೆ ಉಳಿದವುಗಳಂತಿವೆ, ನಾವು ಕಳುಹಿಸಿ ನೋಡೋಣ,” ಎಂದನು. \p \v 14 ಆದ್ದರಿಂದ ಅವರು ಎರಡು ಜೋಡಿ ಕುದುರೆಗಳೊಂದಿಗೆ ಎರಡು ರಥಗಳನ್ನು ಆರಿಸಿಕೊಂಡರು ಮತ್ತು ಅರಸನು ಅರಾಮ್ಯರ ಸೈನ್ಯದ ಹಿಂದೆ ಅವರನ್ನು ಕಳುಹಿಸಿ, “ಹೋಗಿ ಏನಾಯಿತು ಎಂದು ತಿಳಿದುಕೊಳ್ಳಿ” ಎಂದು ಅವನು ರಾಹುತರಿಗೆ ಆಜ್ಞಾಪಿಸಿದನು. \v 15 ಅವರು ಅವರ ಹಿಂದೆ ಯೊರ್ದನಿನವರೆಗೆ ಹೋದರು. ಮಾರ್ಗದಲ್ಲೆಲ್ಲಾ ಅರಾಮ್ಯರು ಅವಸರದಿಂದ ಬಿಸಾಡಿದ ವಸ್ತ್ರಗಳೂ, ಪಾತ್ರೆಗಳೂ ತುಂಬಿದ್ದವು. ದೂತರು ತಿರುಗಿಬಂದು ಅರಸನಿಗೆ ತಿಳಿಸಿದರು. \v 16 ಆಗ ಜನರು ಹೊರಟುಹೋಗಿ ಅರಾಮ್ಯರ ಡೇರೆಗಳನ್ನು ಸುಲಿದುಕೊಂಡರು. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರವೇ ಮೂರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೂ, ಆರು ಕಿಲೋಗ್ರಾಂ ಜವೆಗೋಧಿಯು ಒಂದು ಬೆಳ್ಳಿ ನಾಣ್ಯಕ್ಕೂ ಮಾರಲಾಯಿತು. \p \v 17 ಆದರೆ ಅರಸನಿಗೆ ಹಸ್ತಕನಾದ ಆ ಅಧಿಕಾರಿಯನ್ನು ಅರಸನು ಪಟ್ಟಣದ ಬಾಗಿಲಿನ ಕಾವಲಿಗೆ ನೇಮಿಸಿದ್ದನು. ಅರಸನು ದೇವರ ಮನುಷ್ಯನ ಬಳಿಗೆ ಬಂದಾಗ, ದೇವರ ಮನುಷ್ಯನು ಹೇಳಿದ್ದ ಪ್ರಕಾರವೇ ಜನರು ಆ ಅಧಿಕಾರಿಯನ್ನು ಪಟ್ಟಣದ ಬಾಗಿಲಲ್ಲಿ ತುಳಿದುಹಾಕಿದ್ದರಿಂದ ಅವನು ಮರಣಹೊಂದಿದನು. \v 18 ಹಾಗೆಯೇ, “ಆರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೆ ಮತ್ತು ಜವೆಗೋಧಿ ಹನ್ನೆರಡು ಕಿಲೋಗ್ರಾಂ ಒಂದು ಬೆಳ್ಳಿ ನಾಣ್ಯಕ್ಕೆ ನಾಳೆ ಇಷ್ಟು ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಿಲಿನಲ್ಲಿ ಮಾರಲಾಗುವುದು,” ಎಂದು ದೇವರ ಮನುಷ್ಯನು ಅರಸನಿಗೆ ಹೇಳಿದ ಪ್ರಕಾರವೇ ಸಂಭವಿಸಿತು. \p \v 19 ಆ ಅಧಿಕಾರಿ ದೇವರ ಮನುಷ್ಯನಿಗೆ ಉತ್ತರವಾಗಿ, “ಇಗೋ, ಯೆಹೋವ ದೇವರು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ, ಸಂಭವಿಸುವುದೋ?” ಎಂದು ನುಡಿದಿದ್ದನು. ಅದಕ್ಕವನು, “ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವೆ, ಆದರೆ ನೀನು ಅದನ್ನು ತಿನ್ನುವುದಿಲ್ಲ,” ಎಂದು ಪ್ರವಾದಿಯು ಹೇಳಿದ್ದನು. \v 20 ಆ ಪ್ರಕಾರವೇ ಅವನಿಗೆ ಸಂಭವಿಸಿತು. ಬಾಗಿಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಮರಣಹೊಂದಿದನು. \c 8 \s1 ಶೂನೇಮ್ಯಳಾದ ಸ್ತ್ರೀಯ ಸ್ವತ್ತನ್ನು ತಿರುಗಿಕೊಟ್ಟದ್ದು \p \v 1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ನೀನು, ನಿನ್ನ ಮನೆಯವರು ಎದ್ದು ಎಲ್ಲಿ ಇಳಿದುಕೊಳ್ಳುವ ಸ್ಥಳ ಉಂಟೋ ಅಲ್ಲಿ ಹೋಗಿ ವಾಸಿಸಿರಿ. ಏಕೆಂದರೆ ಯೆಹೋವ ದೇವರು ಬರವನ್ನು ಕಳುಹಿಸಲಿದ್ದಾರೆ. ಅದು ದೇಶದ ಮೇಲೆ ಏಳು ವರ್ಷದವರೆಗೂ ಬರುವುದು,” ಎಂದು ಹೇಳಿದನು. \v 2 ಆಗ ಆ ಸ್ತ್ರೀಯು ಎದ್ದು ದೇವರ ಮನುಷ್ಯನ ಮಾತಿನ ಪ್ರಕಾರವೇ ಮಾಡಿ, ತನ್ನ ಮನೆಯವರ ಸಂಗಡ ಹೋಗಿ ಫಿಲಿಷ್ಟಿಯರ ದೇಶದಲ್ಲಿ ಏಳು ವರ್ಷ ವಾಸವಾಗಿದ್ದಳು. \p \v 3 ಏಳು ವರ್ಷ ಆದ ತರುವಾಯ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರುಗಿಬಂದು ತನ್ನ ಹೊಲಮನೆಗಳಿಗೋಸ್ಕರ ಅರಸನಿಗೆ ಮೊರೆಯಿಟ್ಟಳು. \v 4 ಅರಸನು ದೇವರ ಮನುಷ್ಯನ ಸೇವಕನಾದ ಗೇಹಜಿಯ ಸಂಗಡ ಮಾತನಾಡಿ, “ಎಲೀಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರಿಸು,” ಎಂದು ಅವನಿಗೆ ಹೇಳಿದನು. \v 5 ಗೇಹಜಿಯು ಸತ್ತ ಹುಡುಗನನ್ನು ಹೇಗೆ ಎಲೀಷನು ಬದುಕಿಸಿದನೆಂದು ಅರಸನಿಗೆ ವಿವರವಾಗಿ ಹೇಳುತ್ತಿರುವಾಗಲೇ, ಎಲೀಷನು ಬದುಕಿಸಿದ ಹುಡುಗನ ತಾಯಿಯು ತನ್ನ ಹೊಲಮನೆಗೋಸ್ಕರ, ಮೊರೆಯಿಡಲು ಅರಸನ ಬಳಿಗೆ ಬಂದಳು. \p ಕೂಡಲೆ ಗೇಹಜಿಯು, “ನನ್ನ ಒಡೆಯನೇ, ಅರಸನೇ, ಇವಳೇ ಆ ಸ್ತ್ರೀಯು, ಎಲೀಷನು ಬದುಕಿಸಿದ ಆ ಹುಡುಗನು ಇವನೇ,” ಎಂದನು. \v 6 ಅರಸನು ಆ ಸ್ತ್ರೀಯನ್ನು ವಿಚಾರಿಸಿದಾಗ, ಅವಳು ವಿವರವಾಗಿ ಹೇಳಿದಳು. \p ಆಗ ಅರಸನು ಅವಳಿಗಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ, ಅವನಿಗೆ, “ಅವಳಿಗೆ ಸೇರಿದ ಎಲ್ಲವನ್ನು, ಅವಳು ದೇಶವನ್ನು ಬಿಟ್ಟ ದಿನದಿಂದ ಇಂದಿನವರೆಗೆ ಅವಳಿಗೆ ಸಲ್ಲತಕ್ಕ ಆ ಹೊಲದ ಆದಾಯವನ್ನೆಲ್ಲಾ ಅವಳಿಗೆ ಕೊಡಿಸು,” ಎಂದನು. \s1 ಹಜಾಯೇಲನು ಬೆನ್ಹದದನನ್ನು ಕೊಲೆಮಾಡಿದ್ದು \p \v 7 ಅರಾಮಿನ ಅರಸನಾದ ಬೆನ್ಹದದನು ಅಸ್ವಸ್ಥನಾಗಿರುವಾಗ ಎಲೀಷನು ದಮಸ್ಕಕ್ಕೆ ಬಂದನು. “ದೇವರ ಮನುಷ್ಯನು ಇಲ್ಲಿಗೆ ಬಂದಿದ್ದಾನೆ,” ಎಂದು ಅವನಿಗೆ ತಿಳಿಸಲಾಯಿತು. \v 8 ಆಗ ಅರಸನು ಹಜಾಯೇಲನಿಗೆ, “ನೀನು ಕೈಯಲ್ಲಿ ಕಾಣಿಕೆಯನ್ನು ತೆಗೆದುಕೊಂಡುಹೋಗಿ ದೇವರ ಮನುಷ್ಯನನ್ನು ಎದುರುಗೊಂಡು, ಈ ವ್ಯಾಧಿಯಿಂದ ನಾನು ಗುಣವಾಗುವೆನೋ? ಎಂದು ಅವನಿಂದ ಯೆಹೋವ ದೇವರನ್ನು ವಿಚಾರಿಸು,” ಎಂದನು. \p \v 9 ಹಜಾಯೇಲನು ದಮಸ್ಕದಲ್ಲಿರುವ ಸಕಲ ಉತ್ತಮವಾದವುಗಳಲ್ಲಿ ನಲವತ್ತು ಒಂಟೆಗಳು ಹೊರುವಷ್ಟು ಕಾಣಿಕೆಗಳನ್ನು ತೆಗೆದುಕೊಂಡು, ಎಲೀಷನನ್ನು ಎದುರುಗೊಳ್ಳಲು ಹೋಗಿ, ಅವನ ಮುಂದೆ ಬಂದು ನಿಂತು, “ಅರಾಮಿನ ಅರಸನಾಗಿರುವ ನಿನ್ನ ಮಗ ಬೆನ್ಹದದನು, ‘ಈ ವ್ಯಾಧಿಯಿಂದ ಬದುಕುವೆನೋ?’ ಎಂದು ಕೇಳಲು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ,” ಎಂದನು. \p \v 10 ಅದಕ್ಕೆ ಎಲೀಷನು, “ನೀನು ಹೋಗಿ ಅವನಿಗೆ, ನಿಜವಾಗಿಯೂ ಸ್ವಸ್ಥನಾಗುವೆ, ಎಂದು ಹೇಳು. ಆದರೆ ಅವನು ಸಾಯುವನೆಂದು ಯೆಹೋವ ದೇವರು ನನಗೆ ತೋರಿಸಿದ್ದಾರೆ,” ಎಂದನು. \v 11 ದೇವರ ಮನುಷ್ಯನಾದ ಎಲೀಷನು ಹಜಾಯೇಲನು ಮುಜುಗರಕ್ಕೆ ಒಳಗಾಗುವವರೆಗೂ ಅವನನ್ನು ದಿಟ್ಟಿಸಿ ನೋಡುತ್ತಿದ್ದನು. ನಂತರ ದೇವರ ಮನುಷ್ಯನು ಅಳತೊಡಗಿದನು. \p \v 12 ಆಗ ಹಜಾಯೇಲನು, “ನನ್ನ ಒಡೆಯನು ಅಳುವುದೇಕೆ?” ಎಂದನು. \p ಅದಕ್ಕವನು, “ಏಕೆಂದರೆ ಇಸ್ರಾಯೇಲರಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ. ನೀನು ಅವರ ಕೋಟೆಗಳಿಗೆ ಬೆಂಕಿ ಹತ್ತಿಸಿ, ಅವರ ಯೌವನಸ್ಥರನ್ನು ಖಡ್ಗದಿಂದ ಕೊಂದು, ಅವರ ಕೂಸುಗಳನ್ನು ತುಂಡು ತುಂಡುಗಳಾಗಿ ಮಾಡಿ, ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವೆ,” ಎಂದ ಉತ್ತರಕೊಟ್ಟನು. \p \v 13 ಆದರೆ ಹಜಾಯೇಲನು, “ನಿಮ್ಮ ಸೇವಕನು ಕೇವಲ ನಾಯಿ, ಇಂಥಾ ಮಹಾ ಕೆಲಸವನ್ನು ಮಾಡುವುದಕ್ಕೆ ಹೇಗೆ ಸಾಧ್ಯ?” ಎಂದನು. \p ಎಲೀಷನು, “ನೀನು ಅರಾಮಿನ ಮೇಲೆ ಅರಸನಾಗುವೆ ಎಂದು ಯೆಹೋವ ದೇವರು ನನಗೆ ತಿಳಿಸಿದ್ದಾರೆ,” ಎಂದನು. \p \v 14 ಹಜಾಯೇಲನು ಎಲೀಷನನ್ನು ಬಿಟ್ಟು ಹೊರಟು ತನ್ನ ಯಜಮಾನನ ಬಳಿಗೆ ಬಂದನು. ಆಗ ಅವನು, “ಎಲೀಷನು ನಿನಗೆ ಏನು ಹೇಳಿದನು?” ಎಂದು ಕೇಳಿದ್ದಕ್ಕೆ ಹಜಾಯೇಲನು, “ನೀನು ನಿಜವಾಗಿ ಬದುಕುವೆ ಎಂದು ನನಗೆ ಹೇಳಿದನು,” ಎಂದನು. \v 15 ಆದರೆ ಮಾರನೆಯ ದಿವಸದಲ್ಲಿ, ಅವನು ದಪ್ಪ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ, ಅರಸನ ಮುಖದ ಮೇಲೆ ಹಾಕಿದ್ದರಿಂದ ಅವನು ಮರಣಹೊಂದಿದನು. ಹಜಾಯೇಲನು ಅವನಿಗೆ ಬದಲಾಗಿ ಅರಸನಾದನು. \s1 ಯೆಹೂದ್ಯರ ಅರಸನಾದ ಯೆಹೋರಾಮ್ \p \v 16 ಅಹಾಬನ ಮಗನೂ ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ, ಯೆಹೂದದ ರಾಜನಾದ ಯೆಹೋಷಾಫಾಟನ ಮಗ ಯೆಹೋರಾಮನು ಆಳತೊಡಗಿದನು. \v 17 ಅವನು ಆಳಲಾರಂಭಿಸಿದಾಗ, ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು. \v 18 ಅಹಾಬನ ಮಗಳು ಅವನಿಗೆ ಹೆಂಡತಿಯಾಗಿದ್ದರಿಂದ ಅವನು ಅಹಾಬನ ಮನೆಯವರು ನಡೆದ ಹಾಗೆ ಇಸ್ರಾಯೇಲರ ಅರಸರ ಮಾರ್ಗವನ್ನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. \v 19 ಆದರೂ ಯೆಹೋವ ದೇವರು ಯೆಹೂದದ ರಾಜ್ಯವನ್ನು ನಾಶಮಾಡಲಿಲ್ಲ. “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂಬುದಾಗಿ ತಮ್ಮ ದಾಸನಾದ ದಾವೀದನಿಗೆ ಪ್ರಮಾಣ ಮಾಡಿದ ಕಾರಣ ಉಳಿಸಿದರು. \p \v 20 ಯೆಹೋರಾಮನ ದಿನಗಳಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿಬಿದ್ದು, ತಮ್ಮ ಅರಸನನ್ನು ತಾವೇ ನೇಮಿಸಿಕೊಂಡರು. \v 21 ಆದ್ದರಿಂದ ಯೆಹೋರಾಮನು\f + \fr 8:21 \fr*\fq ಯೆಹೋರಾಮ \fq*\ft ಅಥವಾ \ft*\fqa ಯೋರಾಮ\fqa*\f* ತನ್ನ ಬಳಿಯಲ್ಲಿದ್ದ ಎಲ್ಲಾ ರಥಬಲವನ್ನು ತೆಗೆದುಕೊಂಡು ಚಾಯೀರಿಗೆ ಹೋಗಿ, ರಾತ್ರಿಯಲ್ಲಿ ಎದ್ದು, ತನ್ನನ್ನೂ ತನ್ನ ರಥಗಳ ಅಧಿಪತಿಗಳನ್ನೂ ಎದೋಮ್ಯರನ್ನು ಸೋಲಿಸಿದನು. ಅವನ ಸೈನಿಕರು ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. \v 22 ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ. ಅದೇ ಕಾಲದಲ್ಲಿ ಲಿಬ್ನದವರೂ ಸ್ವತಂತ್ರರಾದರು. \p \v 23 ಯೆಹೋರಾಮನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 24 ಯೆಹೋರಾಮನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು. \s1 ಯೆಹೂದ್ಯರ ಅರಸನಾದ ಅಹಜ್ಯ \p \v 25 ಅಹಾಬನ ಮಗನೂ ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಯೆಹೋರಾಮನ ಮಗ ಅಹಜ್ಯನು ಅರಸನಾದನು. \v 26 ಇವನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಒಂದು ವರ್ಷ ಆಳಿದನು. ಇವನ ತಾಯಿಯ ಹೆಸರು ಅತಲ್ಯಳು, ಅವಳು ಇಸ್ರಾಯೇಲಿನ ಅರಸನಾದ ಒಮ್ರಿಯ ಮೊಮ್ಮಗಳು. \v 27 ಇವನು ಅಹಾಬನ ಮನೆಯವರ ಮಾರ್ಗಗಳಲ್ಲಿ ನಡೆದು, ಅಹಾಬನ ಮನೆಯವರ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಏಕೆಂದರೆ ಇವನು ಅಹಾಬನ ಅಳಿಯನಾಗಿದ್ದನು. \p \v 28 ಅಹಜ್ಯನು ಅಹಾಬನ ಮಗ ಯೋರಾಮನ ಸಂಗಡ ಗಿಲ್ಯಾದಿನ ರಾಮೋತಿಗೆ ಅರಾಮಿನ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಲು ಹೋದನು. ಆದರೆ ಅರಾಮ್ಯರು ಯೋರಾಮನನ್ನು ಹೊಡೆದು ಗಾಯಗೊಳಿಸಿದರು. \v 29 ಆದ್ದರಿಂದ ಅರಸನಾದ ಯೋರಾಮನು ಅರಾಮ್ಯ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ, ರಾಮೋತಿನಲ್ಲಿ ಅರಾಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಇಜ್ರೆಯೇಲ್ ಪಟ್ಟಣಕ್ಕೆ ತಿರುಗಿಹೋದನು. \p ಆಗ ಅಹಾಬನ ಮಗ ಯೋರಾಮನು ಇಜ್ರೆಯೇಲಿನಲ್ಲಿ ಅಸ್ವಸ್ಥನಾಗಿದ್ದುದರಿಂದ ಯೆಹೂದದ ಅರಸನಾಗಿರುವ ಯೆಹೋರಾಮನ ಮಗ ಅಹಜ್ಯನು ಅವನನ್ನು ನೋಡಲು ಹೋದನು. \c 9 \s1 ಯೇಹು ಇಸ್ರಾಯೇಲಿನ ಅರಸನಾಗಿ ನೇಮಕವಾದದ್ದು \p \v 1 ಪ್ರವಾದಿಯಾದ ಎಲೀಷನು ಪ್ರವಾದಿಗಳ ಮಂಡಳಿಯಲ್ಲಿ ಒಬ್ಬನನ್ನು ಕರೆದು ಅವನಿಗೆ, “ನಡುವನ್ನು ಕಟ್ಟಿಕೊಂಡು ಈ ಎಣ್ಣೆಯ ಪಾತ್ರೆಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಗಿಲ್ಯಾದಿನ ರಾಮೋತಿಗೆ ಹೋಗು. \v 2 ನೀನು ಅಲ್ಲಿಗೆ ಸೇರಿದಾಗ ನಿಂಷಿಯ ಮಗನಾಗಿರುವ ಯೆಹೋಷಾಫಾಟನ ಮಗ ಯೇಹುವನ್ನು ಅಲ್ಲಿ ಕಂಡು, ಒಳಗೆ ಪ್ರವೇಶಿಸಿ, ಅವನನ್ನು ಅವರ ಸಹೋದರರ ಮಧ್ಯದಿಂದ ಎಬ್ಬಿಸಿ, ಒಳಗಿನ ಕೋಣೆಗೆ ಕರೆದುಕೊಂಡು ಹೋಗಿ, \v 3 ಎಣ್ಣೆಯ ಪಾತ್ರೆಯನ್ನು ತೆಗೆದುಕೊಂಡು, ಅವನ ತಲೆಯ ಮೇಲೆ ಹೊಯ್ದು, ಅವನಿಗೆ, ‘ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆ, ಎಂದು ಯೆಹೋವ ದೇವರು ಹೇಳುತ್ತಾರೆ,’ ಎಂಬುದಾಗಿ ಹೇಳು. ಅನಂತರ ಕದವನ್ನು ತೆರೆದು ತಡಮಾಡದೆ ಓಡಿಹೋಗು,” ಎಂದನು. \p \v 4 ಹಾಗೆಯೇ ಯೌವನಸ್ಥನಾದ ಪ್ರವಾದಿಯು ಗಿಲ್ಯಾದಿನ ರಾಮೋತಿಗೆ ಹೋದನು. \v 5 ಅವನು ಅಲ್ಲಿ ಸೇರಿದಾಗ, ಅಲ್ಲಿ ಯೇಹುವು ಮತ್ತು ಸೈನ್ಯಾಧಿಪತಿಗಳು ಕುಳಿತುಕೊಂಡಿದ್ದರು. ಆಗ ಅವನು, “ಅಧಿಪತಿಯೇ, ನಿನಗೊಂದು ಮಾತು ಹೇಳುವುದಿದೆ,” ಎಂದನು. \p ಯೇಹುವು, “ನಮ್ಮಲ್ಲಿ ಯಾರಿಗೆ?” ಎಂದು ಕೇಳಿದನು. \p ಅವನು, “ಅಧಿಪತಿಯಾದ ನಿಮಗೇ ಹೇಳಬೇಕಾಗಿದೆ,” ಎಂದು ಉತ್ತರಕೊಟ್ಟನು. \p \v 6 ಯೇಹುವು ಎದ್ದು ಮನೆಯೊಳಕ್ಕೆ ಹೋದನು. ಆಗ ಪ್ರವಾದಿಯು ಎಣ್ಣೆಯನ್ನು ಅವನ ತಲೆಯ ಮೇಲೆ ಹೊಯ್ದು ಅವನಿಗೆ, “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: ಯೆಹೋವ ದೇವರ ಜನರಾದ ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆ. \v 7 ನಾನು ಪ್ರವಾದಿಗಳಾದ ನನ್ನ ಸೇವಕರ ರಕ್ತಕ್ಕೋಸ್ಕರವೂ ಈಜೆಬೆಲಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವಂತೆ ನೀನು ನಿನ್ನ ಯಜಮಾನನಾದ ಅಹಾಬನ ಮನೆಯನ್ನು ಸಂಹರಿಸಬೇಕು. \v 8 ಅಹಾಬನ ಮನೆಯೆಲ್ಲಾ ನಾಶವಾಗುವುದು. ಇಸ್ರಾಯೇಲಿನಲ್ಲಿ ಉಳಿದಿರುವ ಅಹಾಬನ ಗಂಡಸರಲ್ಲಿ ಸ್ವತಂತ್ರರಾಗಲಿ, ಗುಲಾಮರಾಗಲಿ ಎಲ್ಲರನ್ನೂ ತೆಗೆದುಹಾಕುವೆನು. \v 9 ಅಹಾಬನ ಮನೆಯನ್ನು ನೆಬಾಟನ ಮಗ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗ ಬಾಷನ ಮನೆಯ ಹಾಗೆಯೂ ಮಾಡುವೆನು. \v 10 ಇದಲ್ಲದೆ ಇಜ್ರೆಯೇಲ್ ಊರಿನ ಹೊಲದಲ್ಲಿ ನಾಯಿಗಳು ಈಜೆಬೆಲಳನ್ನು ತಿಂದುಬಿಡುವುವು; ಅವಳ ಶವವನ್ನು ಸಮಾಧಿಮಾಡಲು ಯಾವನೂ ಇರುವುದಿಲ್ಲ,” ಎಂದು ಹೇಳಿ ಬಾಗಿಲನ್ನು ತೆರೆದು ಓಡಿಹೋದನು. \p \v 11 ಆಗ ಯೇಹುವು ತನ್ನ ಯಜಮಾನನ ಸೇವಕರ ಬಳಿಗೆ ಬಂದನು. ಅವರು ಅವನಿಗೆ, “ಶುಭವೋ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇನು?” ಎಂದರು. \p ಅವನು ಅವರಿಗೆ, “ಆ ಮನುಷ್ಯನನ್ನೂ ಅವನ ಮಾತನ್ನೂ ನೀವು ಬಲ್ಲಿರಿ,” ಎಂದನು. \p \v 12 ಅದಕ್ಕವರು, “ಅದು ಸುಳ್ಳು, ದಯಮಾಡಿ ನಮಗೆ ತಿಳಿಸು,” ಎಂದರು. \p ಆದ್ದರಿಂದ ಅವನು, “ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆಂಬುದಾಗಿ ಯೆಹೋವ ದೇವರು ಹೇಳುತ್ತಾರೆಂದು ಹೀಗೆ ನನಗೆ ಹೇಳಿದನು,” ಎಂದನು. \p \v 13 ಆಗ ಅವರು ತ್ವರೆಪಟ್ಟು ಪ್ರತಿಯೊಬ್ಬರು ತಮ್ಮ ಹೊರ ಉಡುಪುಗಳನ್ನು ತೆಗೆದು, ಮೆಟ್ಟಿಲುಗಳ ಮೇಲೆ ಹಾಸಿ, ಇವನನ್ನು ಕುಳ್ಳಿರಿಸಿ, ತುತೂರಿಗಳನ್ನು ಊದಿ, “ಯೇಹುವು ಅರಸನಾಗಿದ್ದಾನೆ,” ಎಂದು ಆರ್ಭಟಿಸಿದರು. \s1 ಯೇಹುವು ಯೋರಾಮನನ್ನು ಮತ್ತು ಅಹಜ್ಯನನ್ನು ಕೊಂದದ್ದು \p \v 14 ಹೀಗೆಯೇ ನಿಂಷಿಯ ಮಗ ಯೆಹೋಷಾಫಾಟನ ಮಗ ಯೇಹುವು ಯೋರಾಮನಿಗೆ ವಿರೋಧವಾಗಿ ಒಳಸಂಚು ಮಾಡಿದನು. ಅರಾಮ್ಯರ ಅರಸನಾದ ಹಜಾಯೇಲನ ನಿಮಿತ್ತ ಯೋರಾಮನೂ, ಸಮಸ್ತ ಇಸ್ರಾಯೇಲರೂ ಗಿಲ್ಯಾದಿನ ರಾಮೋತಿನಲ್ಲಿ ಕಾಯುತ್ತಿದ್ದರು. \v 15 ಆದರೆ ಅರಸನಾದ ಯೋರಾಮನು ಅರಾಮಿನ ಅರಸನಾದ ಹಜಾಯೇಲನ ಸಂಗಡ ಯುದ್ಧಮಾಡುವಾಗ, ಅರಾಮ್ಯರು ತನ್ನನ್ನು ಹೊಡೆದ ಗಾಯವನ್ನು ಸ್ವಸ್ಥಮಾಡಿಕೊಳ್ಳುವ ನಿಮಿತ್ತ ಇಜ್ರೆಯೇಲಿಗೆ ಹೋಗಿದ್ದನು. ಆಗ ಯೇಹುವು, “ನಿಮಗೆ ಮನಸ್ಸಿದ್ದರೆ ಇದನ್ನು ಇಜ್ರೆಯೇಲಿಗೆ ಹೋಗಿ ತಿಳಿಸಲು ಪಟ್ಟಣದಿಂದ ಯಾರೂ ತಪ್ಪಿಸಿಕೊಂಡು ಹೊರಡದೆ ಇರಲಿ,” ಎಂದನು. \v 16 ಯೇಹುವು ರಥದ ಮೇಲೆ ಏರಿ ಇಜ್ರೆಯೇಲಿಗೆ ಹೋದನು. ಏಕೆಂದರೆ ಯೋರಾಮನು ಅಲ್ಲಿ ವಿಶ್ರಾಂತಿಯಲ್ಲಿದ್ದನು. ಇದಲ್ಲದೆ ಯೋರಾಮನನ್ನು ನೋಡುವುದಕ್ಕೆ ಯೆಹೂದದ ಅರಸನಾದ ಅಹಜ್ಯನು ಅಲ್ಲಿಗೆ ಬಂದಿದ್ದನು. \p \v 17 ಇಜ್ರೆಯೇಲ್ ಪಟ್ಟಣದ ಗೋಪುರದಲ್ಲಿದ್ದ ಕಾವಲುಗಾರನು ಯೇಹುವಿನ ಗುಂಪಿನವರನ್ನು ಕಂಡು, “ಜನರ ಒಂದು ಗುಂಪು ಕಾಣಿಸುತ್ತಿದೆ,” ಎಂದು ಯೋರಾಮನಿಗೆ ತಿಳಿಸಿದನು. \p ಯೋರಾಮನು, “ನೀನು ಒಬ್ಬ ರಾಹುತನನ್ನು ಕರೆದು, ಬರುತ್ತಿರುವವರು ಶುಭವಾರ್ತೆಯನ್ನು ತರುತ್ತಾರೋ ಇಲ್ಲವೋ ಎಂದು ಕೇಳುವುದಕ್ಕೆ ಕಳುಹಿಸು,” ಎಂಬುದಾಗಿ ಆಜ್ಞಾಪಿಸಿದನು. \p \v 18 ಒಬ್ಬ ರಾಹುತನು ಯೇಹುವನ್ನು ಎದುರುಗೊಂಡು, “ಅರಸನು, ‘ಶುಭವಾರ್ತೆ ಉಂಟೋ?’ ಎಂದು ಕೇಳುತ್ತಾನೆ,” ಎನ್ನಲು ಅವನು, \p “ಶುಭವಾರ್ತೆಯಿಂದ ನಿನಗೇನು? ನನ್ನ ಹಿಂದೆ ಬಾ,” ಎಂದನು. \p ಕಾವಲುಗಾರನು ಅರಸನಿಗೆ, “ರಾಹುತನು ಆ ಗುಂಪನ್ನು ಮುಟ್ಟಿದನು, ಆದರೆ ತಿರುಗಿ ಬರುವುದು ಕಾಣಿಸುವುದಿಲ್ಲ,” ಎಂದು ತಿಳಿಸಿದನು. \p \v 19 ಆಗ ಅರಸನು ಇನ್ನೊಬ್ಬ ರಾಹುತನನ್ನು ಕಳುಹಿಸಿದನು. ಇವನು ಹೋಗಿ ಯೇಹುವನ್ನು ಎದುರುಗೊಂಡು, “ಅರಸನು, ‘ಶುಭವಾರ್ತೆ ಉಂಟೋ?’ ಎಂದು ಕೇಳುತ್ತಾನೆ,” ಎನ್ನಲು ಅವನು, \p “ಶುಭವಾರ್ತೆಯಿಂದ ನಿನಗೇನು? ನನ್ನ ಹಿಂದೆ ಬಾ,” ಎಂದನು. \p \v 20 ಆಗ ಕಾವಲುಗಾರನು, “ಇವನೂ ಅವರ ಬಳಿಗೆ ಹೋಗಿ ತಿರುಗಿ ಬರಲಿಲ್ಲ. ಇದಲ್ಲದೆ ರಥವನ್ನು ಓಡಿಸುವುದು ನಿಂಷಿಯ ಮಗನಾದ ಯೇಹುವು ಓಡಿಸುವ ಹಾಗಿದೆ, ಏಕೆಂದರೆ ಅವನು ಹುಚ್ಚನಂತೆ ಓಡಿಸುತ್ತಿದ್ದಾನೆ,” ಎಂದನು. \p \v 21 ಯೋರಾಮನು, “ನನ್ನ ರಥವನ್ನು ಸಿದ್ಧಮಾಡು,” ಎಂದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ, ಯೆಹೂದದ ಅರಸನಾದ ಅಹಜ್ಯನೂ ಹೊರಟು, ಅವರವರು ತಮ್ಮ ತಮ್ಮ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು, ಇಜ್ರೆಯೇಲಿನವನಾದ ನಾಬೋತನಿಗೆ ಸಂಬಂಧಿಸಿದ ಸ್ಥಳದಲ್ಲಿ ಅವನನ್ನು ಸಂಧಿಸಿದರು. \v 22 ಯೋರಾಮನು ಯೇಹುವನ್ನು ಕಂಡಾಗ, “ಯೇಹುವೇ, ಸಮಾಧಾನದಿಂದ ಬಂದಿರುವೆಯೋ?” ಎಂದನು. \p ಅದಕ್ಕವನು, “ನಿನ್ನ ತಾಯಿಯಾದ ಈಜೆಬೆಲಳ ಜಾರತ್ವವೂ, ಅವಳ ಮಾಟಮಂತ್ರಗಳೂ ಅಧಿಕವಾಗಿರುವಾಗ ಸಮಾಧಾನವೆಲ್ಲಿ?” ಎಂದನು. \p \v 23 ಆಗ ಯೋರಾಮನು ಅಹಜ್ಯನಿಗೆ, “ಅಹಜ್ಯನೇ, ಇದು ದ್ರೋಹ!” ಎಂದು ಹೇಳಿ ತನ್ನ ಕೈ ತಿರುಗಿಸಿಕೊಂಡು ಓಡಿಹೋದನು. \p \v 24 ಆದರೆ ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬಗ್ಗಿಸಿ ತನ್ನ ಕೈಯಿಂದ ಯೋರಾಮನನ್ನು ಅವನ ತೋಳುಗಳ ನಡುವೆ ಹೊಡೆದನು. ಬಾಣ ಹೃದಯದಲ್ಲಿ ತೂರಿ ಹೊರಟಿತು. ಅವನು ರಥದಲ್ಲಿ ಕೆಳಗೆ ಮುದುರಿಕೊಂಡು ಬಿದ್ದನು. \v 25 ಆಗ ಯೇಹುವು ತನ್ನ ಅಧಿಪತಿಯಾದ ಬಿದ್ಕಾರನಿಗೆ, “ನೀನು ಅವನನ್ನು ತೆಗೆದುಕೊಂಡುಹೋಗಿ ಇಜ್ರೆಯೇಲಿನವನಾದ ನಾಬೋತನ ಪಾಲಾಗಿರುವ ಹೊಲದಲ್ಲಿ ಹಾಕಿಬಿಡು. ಏಕೆಂದರೆ ನಾನೂ, ನೀನೂ ಅವನ ತಂದೆಯಾದ ಅಹಾಬನ ಹಿಂದೆ ರಥವನ್ನು ಏರಿಕೊಂಡು ಹೋಗುತ್ತಿರುವಾಗ, ಯೆಹೋವ ದೇವರು ಈ ಪ್ರವಾದನೆಯನ್ನು ಅವನ ಬಗ್ಗೆ ತಿಳಿಸಿದರೆಂದು ಜ್ಞಾಪಕಮಾಡಿಕೋ. \v 26 ನಾಬೋತನ ರಕ್ತವನ್ನೂ, ಅವನ ಪುತ್ರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ, ಎಂದು ಯೆಹೋವ ದೇವರು ಹೇಳುತ್ತಾರೆ. ಇದಲ್ಲದೆ ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರ ಎತ್ತಿಕೊಂಡು ಆ ಹೊಲದಲ್ಲಿ ಅವನನ್ನು ಹಾಕಿಬಿಡು,” ಎಂದನು. \p \v 27 ಯೆಹೂದದ ಅರಸನಾದ ಅಹಜ್ಯನು ಇದನ್ನೆಲ್ಲಾ ಕಂಡು, ಬೇತ್ ಹಗ್ಗನಿನ ಮಾರ್ಗವಾಗಿ ಓಡಿಹೋದನು. ಯೇಹುವು ಅವನ ಹಿಂದೆ ಹೋಗಿ ರಥದಲ್ಲಿ, “ಅವನನ್ನು ಸಹ ಸಂಹರಿಸಿರಿ,” ಎಂದನು. ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್ ಎಂಬ ಸ್ಥಳಕ್ಕೆ ಏರಿಹೋಗುವ ಅಹಜ್ಯನನ್ನು ಮಾರ್ಗದಲ್ಲಿ ರಥದಲ್ಲಿ ಹೊಡೆದರು. ಅವನು ಮೆಗಿದ್ದೋವಿಗೆ ಓಡಿಹೋಗಿ ಅಲ್ಲಿ ಸತ್ತುಹೋದನು. \v 28 ಅವನ ಸೇವಕರು ಅವನನ್ನು ರಥದಲ್ಲಿ ಯೆರೂಸಲೇಮಿಗೆ ತೆಗೆದುಕೊಂಡುಹೋಗಿ, ದಾವೀದನ ಪಟ್ಟಣದೊಳಗೆ ಅವನ ಪಿತೃಗಳ ಬಳಿಯಲ್ಲಿ ಅವನ ಸಮಾಧಿಯಲ್ಲಿ ಅವನನ್ನು ಹೂಳಿಟ್ಟರು. \v 29 ಅಹಾಬನ ಮಗ ಯೋರಾಮನ ಹನ್ನೊಂದನೆಯ ವರ್ಷದಲ್ಲಿ ಅಹಜ್ಯನು ಯೆಹೂದದ ಅರಸನಾಗಿದ್ದನು. \s1 ಈಜೆಬೆಲಳ ಮರಣ \p \v 30 ಯೇಹುವು ಇಜ್ರೆಯೇಲಿಗೆ ಬಂದನು. ಅಲ್ಲಿಗೆ ಅವನು ಬಂದಿದ್ದಾನೆಂದು ಈಜೆಬೆಲಳು ಕೇಳಿ, ಅವಳು ತನ್ನ ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಂಡು, ತನ್ನ ತಲೆಯನ್ನು ಶೃಂಗರಿಸಿಕೊಂಡು, ಕಿಟಕಿಯಿಂದ ಇಣಿಕಿ ನೋಡಿದಳು. \v 31 ಯೇಹುವು ಬಾಗಿಲಲ್ಲಿ ಪ್ರವೇಶಿಸಿದಾಗ ಅವಳು, “ತನ್ನ ಯಜಮಾನನನ್ನು ಕೊಂದ ಜಿಮ್ರಿಗೆ ಸಮಾನನೇ, ಕ್ಷೇಮವೋ?” ಎಂದಳು. \p \v 32 ಯೇಹುವು ತನ್ನ ಮುಖವನ್ನು ಆ ಕಿಟಕಿಯ ಕಡೆಗೆ ಎತ್ತಿ, “ನನ್ನ ಕಡೆ ಇರುವವರು ಯಾರು?” ಎಂದನು. ಆಗ ಇಬ್ಬರು ಮೂವರು ಕಂಚುಕಿಗಳು ಆ ಕಿಟಕಿಯಲ್ಲಿಂದ ಅವನನ್ನು ನೋಡಿದರು. \v 33 ಯೇಹುವು, “ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ,” ಎಂದನು. ಅವರು ಅವಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ, ಕುದುರೆಗಳ ಮೇಲೆಯೂ ಸಿಡಿಯಿತು. ಯೇಹುವು ರಥವನ್ನು ಅವಳ ಮೇಲೆ ಓಡಿಸಿದನು. \p \v 34 ಯೇಹುವು ಒಳಗೆ ಹೋಗಿ ತಿಂದು ಕುಡಿದನು. ಆಮೇಲೆ ಅವರಿಗೆ, “ನೀವು ಹೋಗಿ ಆ ಶಾಪಗ್ರಸ್ತ ಸ್ತ್ರೀಯ ಶವವನ್ನು ಕಂಡು, ಅವಳನ್ನು ಹೂಳಿಡಿರಿ. ಏಕೆಂದರೆ ಅವಳು ಅರಸನ ಮಗಳು,” ಎಂದನು. \v 35 ಅವರು ಅವಳನ್ನು ಹೂಳಿಡಲು ಹೋದಾಗ, ಅವಳ ತಲೆ ಬುರುಡೆಯೂ, ಕಾಲುಗಳೂ, ಅಂಗೈಗಳೂ ಹೊರತು ಮತ್ತೇನೂ ಕಾಣಲಿಲ್ಲ. ಆದ್ದರಿಂದ ಅವರು ತಿರುಗಿಬಂದು ಅವನಿಗೆ ತಿಳಿಸಿದರು. \v 36 ಅದಕ್ಕವನು, “ಯೆಹೋವ ದೇವರು ತಮ್ಮ ಸೇವಕನಾಗಿರುವ ತಿಷ್ಬೀಯನಾದ ಎಲೀಯನ ಮುಖಾಂತರ ಹೇಳಿದ ವಾಕ್ಯವು ಇದೇ: ಇಜ್ರೆಯೇಲ್ ಊರಿನ ಹೊಲದಲ್ಲಿ ನಾಯಿಗಳು ಈಜೆಬೆಲಳ ಮಾಂಸವನ್ನು ತಿನ್ನುವುವು. \v 37 ಇದಲ್ಲದೆ ಇದೇ ಈಜೆಬೆಲಳೆಂದು ಗುರುತು ಸಿಕ್ಕದ ಹಾಗೆ ಇಜ್ರೆಯೇಲಿನ ಹೊಲದಲ್ಲಿ ಈಜೆಬೆಲಳ ಹೆಣ ಗೊಬ್ಬರದ ಹಾಗೆ ಇರುವುದು,” ಎಂದನು. \c 10 \s1 ಅಹಾಬನ ಕುಟುಂಬದವರು ಹತರಾದದ್ದು \p \v 1 ಆಗ ಸಮಾರ್ಯದಲ್ಲಿ ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳು ಇದ್ದರು, ಯೇಹುವು ಸಮಾರ್ಯದಲ್ಲಿರುವ ಇಜ್ರೆಯೇಲ್ ಊರಿನ ಪ್ರಧಾನರಿಗೂ ಹಿರಿಯರಿಗೂ ಅಹಾಬನ ಮಕ್ಕಳನ್ನು ಪೋಷಿಸುವವರಿಗೂ ಪತ್ರಗಳನ್ನು ಬರೆದು, ಸಮಾರ್ಯಕ್ಕೆ ಕಳುಹಿಸಿದನು. ಅವನು, \v 2 “ನಿಮ್ಮ ಯಜಮಾನನ ಪುತ್ರರು ನಿಮ್ಮ ಬಳಿಯಲ್ಲಿ ಇದ್ದಾರೆ. ಇದಲ್ಲದೆ ರಥಗಳು, ಕುದುರೆಗಳು, ಕೋಟೆಗಳುಳ್ಳ ಪಟ್ಟಣ, ಆಯುಧಗಳು ನಿಮ್ಮ ಬಳಿಯಲ್ಲಿವೆ. ಆದ್ದರಿಂದ ಈ ಪತ್ರವು ನಿಮಗೆ ತಲುಪಿದ ತಕ್ಷಣ, \v 3 ನೀವು ನಿಮ್ಮ ಯಜಮಾನನ ಪುತ್ರರಲ್ಲಿ ಉತ್ತಮನಾಗಿರುವ ಮತ್ತು ಸಮರ್ಥನಾಗಿರುವವನನ್ನು ಆರಿಸಿಕೊಂಡು, ಅವನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕೂರಿಸಿ, ನಿಮ್ಮ ಯಜಮಾನನ ಕುಟುಂಬದವರಿಗಾಗಿ ಯುದ್ಧಮಾಡಿರಿ,” ಎಂದು ತಿಳಿಸಿದನು. \p \v 4 ಆದರೆ ಅವರು ತುಂಬಾ ಭಯಪಟ್ಟು, “ಇಬ್ಬರೂ ಅರಸರು ಅವನ ಮುಂದೆ ನಿಲ್ಲಲು ಸಾಧ್ಯವಾಗದಿದ್ದಾಗ, ನಾವು ನಿಲ್ಲುವುದು ಹೇಗೆ?” ಎಂದರು. \p \v 5 ಆಗ ಅರಮನೆಯ ಆಡಳಿತಾಧಿಕಾರಿ, ಪಟ್ಟಣದ ರಾಜ್ಯಪಾಲರು, ಹಿರಿಯರು ಮತ್ತು ಪಾಲಕರು ಈ ಸಂದೇಶವನ್ನು ಯೇಹುವಿನ ಬಳಿಗೆ ಕಳುಹಿಸಿ, “ನಾವು ನಿಮ್ಮ ಸೇವಕರು ನೀವು ನಮಗೆ ಹೇಳುವುದನ್ನೆಲ್ಲಾ ಮಾಡುತ್ತೇವೆ. ನಾವು ಯಾರನ್ನೂ ಅರಸನನ್ನಾಗಿ ನೇಮಿಸುವುದಿಲ್ಲ. ನಿಮ್ಮ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ನೀವು ಮಾಡಿರಿ,” ಎಂದರು. \p \v 6 ಆಗ ಯೇಹುವು ಅವರಿಗೆ ಎರಡನೆಯ ಸಾರಿ ಪತ್ರವನ್ನು ಬರೆದು, “ನೀವು ನನ್ನವರಾಗಿದ್ದು ನನ್ನ ಮಾತು ಕೇಳುವವರಾಗಿದ್ದರೆ, ನಾಳೆ ಇಷ್ಟು ಹೊತ್ತಿಗೆ ಇಜ್ರೆಯೇಲ್ ಪಟ್ಟಣಕ್ಕೆ ನಿಮ್ಮ ಯಜಮಾನನ ಪುತ್ರರ ತಲೆಗಳನ್ನು ತೆಗೆದುಕೊಂಡು ನನ್ನ ಬಳಿಗೆ ಬನ್ನಿರಿ,” ಎಂದು ಹೇಳಿದನು. \p ಆದರೆ ಅರಸನ ಮಕ್ಕಳಾದ ಎಪ್ಪತ್ತು ಮಂದಿ ಮನುಷ್ಯರು ಪಟ್ಟಣದ ಪ್ರಮುಖರ ಬಳಿಯಲ್ಲಿ ಇದ್ದರು. ಅವರು ಅವರನ್ನು ಪೋಷಿಸುತ್ತಿದ್ದರು. \v 7 ಈ ಪತ್ರವು ಅವರ ಬಳಿಗೆ ಬಂದಾಗ, ಅವರು ರಾಜಪುತ್ರರನ್ನು ಹಿಡಿದು, ಎಪ್ಪತ್ತು ಮಂದಿಯನ್ನು ಕೊಂದು, ಅವರ ತಲೆಗಳನ್ನು ಪುಟ್ಟಿಗಳಲ್ಲಿ ಹಾಕಿ ಇಜ್ರೆಯೇಲ್ ಪಟ್ಟಣದಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು. \v 8 ಆಗ ಆ ಸೇವಕನು ಬಂದು ಯೇಹುವಿಗೆ, “ರಾಜಪುತ್ರರ ತಲೆಗಳನ್ನು ತೆಗೆದುಕೊಂಡು ಬಂದಿದ್ದಾರೆ,” ಎಂದು ತಿಳಿಸಿದನು. \p ಅದಕ್ಕೆ ಯೇಹು, “ಉದಯಕಾಲದವರೆಗೂ ಅವುಗಳನ್ನು ಹೆಬ್ಬಾಗಿಲಿನಲ್ಲಿ ಎರಡು ರಾಶಿಗಳಾಗಿ ಹಾಕಿರಿ,” ಎಂದು ಆಜ್ಞಾಪಿಸಿದನು. \p \v 9 ಮರುದಿನ ಬೆಳಿಗ್ಗೆ ಯೇಹು ಹೊರಗೆ ಬಂದು, ಸಕಲ ಜನರ ಮುಂದೆ ನಿಂತು, “ನೀವು ನಿರಪರಾಧಿಗಳು. ನಾನು ನನ್ನ ಯಜಮಾನನ ಮೇಲೆ ಒಳಸಂಚುಮಾಡಿ, ಅವನನ್ನು ಕೊಂದುಹಾಕಿದೆನು. ಆದರೆ ಇವರೆಲ್ಲರನ್ನು ಸಂಹರಿಸಿದವರ‍್ಯಾರು? \v 10 ಯೆಹೋವ ದೇವರು ಅಹಾಬನ ಮನೆಯನ್ನು ಕುರಿತು ಹೇಳಿದ ಯೆಹೋವ ದೇವರ ಮಾತುಗಳಲ್ಲಿ ಒಂದೂ ವ್ಯರ್ಥವಾಗುವುದಿಲ್ಲವೆಂದು ನೀವು ತಿಳಿದುಕೊಳ್ಳಿರಿ. ಯೆಹೋವ ದೇವರು ತಮ್ಮ ಸೇವಕನಾದ ಎಲೀಯನ ಮುಖಾಂತರ ಹೇಳಿದ್ದನ್ನು ನೆರವೇರಿಸಿದ್ದಾರೆ,” ಎಂದನು. \v 11 ಈ ಪ್ರಕಾರ ಯೇಹುವು ಇಜ್ರೆಯೇಲ್ ಪಟ್ಟಣದಲ್ಲಿ ಉಳಿದ ಅಹಾಬನ ಕುಟುಂಬದವರನ್ನೂ ಅವನ ಸರದಾರರು, ಆಪ್ತಮಿತ್ರರು, ಪುರೋಹಿತರು ಇವರನ್ನೂ ಸಂಹರಿಸಿದನು; ಒಬ್ಬನನ್ನೂ ಉಳಿಸಲಿಲ್ಲ. \p \v 12 ಆಗ ಯೇಹುವು ಹೊರಟು ಸಮಾರ್ಯಕ್ಕೆ ಬಂದನು. ಅವನು ಕುರುಬರ ಬೇತ್ ಎಕೆದ್\f + \fr 10:12 \fr*\fq ಬೇತ್ ಎಕೆದ್ \fq*\ft ಎಂದರೆ \ft*\fqa ಕುರುಬರು ಉಣ್ಣೆ ಕತ್ತರಿಸುವ ಮನೆ\fqa*\f* ಬಳಿ ಬಂದಾಗ, \v 13 ಯೆಹೂದದ ಅರಸನಾದ ಅಹಜ್ಯನ ಸಹೋದರರನ್ನು ಕಂಡು ಅವರಿಗೆ, “ನೀವು ಯಾರು?” ಎಂದನು. \p ಅದಕ್ಕವರು, “ನಾವು ಅಹಜ್ಯನ ಸಹೋದರರು. ಅರಸನ ಮಕ್ಕಳನ್ನೂ, ರಾಣಿಯ ಮಕ್ಕಳನ್ನೂ ವಂದಿಸಲು ಹೋಗುತ್ತಿದ್ದೇವೆ,” ಎಂದರು. \p \v 14 ಆಗ ಅವನು, “ಅವರನ್ನು ಜೀವದಿಂದ ಹಿಡಿಯಿರಿ,” ಎಂದು ಹೇಳಿದ್ದರಿಂದ ಕುರುಬರು ಇವರನ್ನು ಜೀವದಿಂದ ಹಿಡಿದು, ಉಣ್ಣೆ ಕತ್ತರಿಸುವ ಮನೆಯ ಬಾವಿಯ ಬಳಿಯಲ್ಲಿ ಕೊಂದುಹಾಕಿದರು. ಅವರು ನಲವತ್ತೆರಡು ಮಂದಿ ಇದ್ದರು. ಅವರಲ್ಲಿ ಒಬ್ಬನನ್ನಾದರೂ ಉಳಿಸಲಿಲ್ಲ. \p \v 15 ಯೇಹುವು ಅಲ್ಲಿಂದ ಹೋಗಿ, ತನ್ನನ್ನು ಎದುರುಗೊಳ್ಳಲು ಬಂದ ರೇಕಾಬನ ಮಗ ಯೆಹೋನಾದಾಬನನ್ನು ಕಂಡು ಅವನನ್ನು ವಂದಿಸಿ ಅವನಿಗೆ, “ನನ್ನ ಹೃದಯವು ನಿನ್ನ ಹೃದಯದ ಸಂಗಡ ಇರುವ ಹಾಗೆ ನಿನ್ನ ಹೃದಯವು ಯಥಾರ್ಥವಾಗಿ ಇದೆಯೋ?” ಎಂದನು. \p ಯೆಹೋನಾದಾಬನು, “ಇದೆ,” ಎಂದನು. \p “ಹಾಗಾದರೆ ನಿನ್ನ ಕೈ ಕೊಡು,” ಎಂದನು. ಇವನು ತನ್ನ ಕೈ ಕೊಟ್ಟನು. ತನ್ನ ಬಳಿಗೆ ರಥದ ಮೇಲೆ ಹತ್ತಿಸಿಕೊಂಡು ಅವನಿಗೆ, \v 16 “ನೀನು ನನ್ನ ಸಂಗಡ ಬಂದು ಯೆಹೋವ ದೇವರಿಗೋಸ್ಕರ ನನಗುಂಟಾದ ಆಸಕ್ತಿಯನ್ನು ನೋಡು,” ಎಂದು ಹೇಳಿ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು. \p \v 17 ಯೇಹುವು ಸಮಾರ್ಯಕ್ಕೆ ಬಂದ ತರುವಾಯ ಸಮಾರ್ಯದಲ್ಲಿ ಅಹಾಬನಿಗೆ ಉಳಿದವರೆಲ್ಲರನ್ನು ಎಲೀಯನಿಗೆ ಹೇಳಿದ ಯೆಹೋವ ದೇವರ ವಾಕ್ಯದ ಪ್ರಕಾರ ಅವರನ್ನು ಸಂಹರಿಸಿದನು. \s1 ಬಾಳನ ಸೇವಕರು ಸಂಹಾರವಾದದ್ದು \p \v 18 ಯೇಹುವು ಜನರೆಲ್ಲರನ್ನು ಕೂಡಿಸಿ ಅವರಿಗೆ, “ಅಹಾಬನು ಸ್ವಲ್ಪವಾಗಿ ಬಾಳನನ್ನು ಸೇವಿಸಿದನು. ಆದರೆ ಯೇಹುವು ಅವನನ್ನು ಬಹಳವಾಗಿ ಸೇವಿಸುವನು. \v 19 ಆದ್ದರಿಂದ ಬಾಳನ ಸಮಸ್ತ ಪ್ರವಾದಿಗಳನ್ನೂ, ಅವನ ಸಮಸ್ತ ಸೇವಕರನ್ನೂ, ಅವನ ಸಮಸ್ತ ಯಾಜಕರನ್ನೂ ನನ್ನ ಬಳಿಗೆ ಕರೆಯಿರಿ. ಒಬ್ಬನೂ ಬಾರದೆ ಇರಕೂಡದು. ನಾನು ಬಾಳನಿಗೆ ಮಹಾಬಲಿ ಕೊಡಬೇಕಾಗಿದೆ. ಯಾವನಾದರೂ ಬಾರದೆ ಹೋದರೆ ಅವನು ಬದುಕನು,” ಎಂದನು. ಏಕೆಂದರೆ ಯೇಹುವು ಬಾಳನನ್ನು ಸೇವಿಸುವವರನ್ನು ನಾಶಮಾಡುವಂತೆ ಇದನ್ನು ತಂತ್ರದಿಂದ ಮಾಡಿದನು. \p \v 20 ಆಗ ಯೇಹುವು, “ಬಾಳನಿಗೋಸ್ಕರ ಪವಿತ್ರ ಸಮಾರಂಭವನ್ನು ಮಾಡಿರಿ,” ಎಂದನು. ಅವರು ಅದನ್ನು ಸಾರಿದರು. \v 21 ಯೇಹುವು ಇಸ್ರಾಯೇಲಿನಲ್ಲೆಲ್ಲಾ ಕಳುಹಿಸಿದ್ದರಿಂದ ಬಾಳನನ್ನು ಸೇವಿಸುವವರೆಲ್ಲರೂ ಬಂದರು. ಬಾರದೆ ಇದ್ದವನು ಒಬ್ಬನೂ ಇರಲಿಲ್ಲ. ಅವರು ಬಾಳನ ಮನೆಯಲ್ಲಿ ಪ್ರವೇಶಿಸಿದಾಗ, ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಾಳನ ದೇವಸ್ಥಾನ ಪೂರ್ಣವಾಗಿ ತುಂಬಿತ್ತು. \v 22 ಆಗ ಅವನು ವಸ್ತ್ರಗಳ ಮನೆಯ ಮೇಲಧಿಕಾರಿಗೆ, “ಬಾಳನನ್ನು ಸೇವಿಸುವ ಸಮಸ್ತರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಾ,” ಎಂದು ಹೇಳಿದ್ದರಿಂದ, ಅವನು ಅವರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಂದನು. \p \v 23 ಆಗ ಯೇಹುವೂ, ರೇಕಾಬನ ಮಗ ಯೆಹೋನಾದಾಬನೂ ಬಾಳನ ದೇವಸ್ಥಾನದಲ್ಲಿ ಪ್ರವೇಶಿಸಿದರು. ಯೇಹುವು, “ಬಾಳನನ್ನು ಸೇವಿಸುವವರ ಹೊರತು ಅವರ ಸಂಗಡ ಯೆಹೋವ ದೇವರ ಸೇವಕರಲ್ಲಿ ಒಬ್ಬನೂ ಇರದ ಹಾಗೆ ಪರಿಶೋಧಿಸಿ ನೋಡಿರಿ,” ಎಂದು ಬಾಳನನ್ನು ಸೇವಿಸುವವರಿಗೆ ಹೇಳಿದನು. \v 24 ಅವರು ಬಲಿಗಳನ್ನೂ, ದಹನಬಲಿಗಳನ್ನೂ ಅರ್ಪಿಸಲು ಒಳಗೆ ಪ್ರವೇಶಿಸಿದ ತರುವಾಯ, ಯೇಹುವು ಹೊರಗೆ ಎಂಬತ್ತು ಮಂದಿಯನ್ನು ಇರಿಸಿಕೊಂಡು ಅವರಿಗೆ, “ನಾನು ನಿಮ್ಮ ಕೈಗೆ ಒಪ್ಪಿಸಿದ ಮನುಷ್ಯರಲ್ಲಿ ಯಾವನಾದರೂ ತಪ್ಪಿಸಿಕೊಂಡುಹೋದರೆ, ಅವನ ಪ್ರಾಣಕ್ಕೆ ನಿಮ್ಮ ಪ್ರಾಣ ಈಡಾಗಿರುವುದು,” ಎಂದನು. \p \v 25 ಅವನು ದಹನಬಲಿಯನ್ನು ಅರ್ಪಿಸಿ ತೀರಿಸಿದ ತರುವಾಯ, ಯೇಹುವು ಕಾವಲುಗಾರರಿಗೂ, ಅಧಿಪತಿಗಳಿಗೂ, “ನೀವು ಒಳಗೆ ಹೋಗಿ ಯಾವನೂ ಹೊರಗೆ ಬಾರದ ಹಾಗೆ ಅವರನ್ನು ಸಂಹರಿಸಿರಿ,” ಎಂದನು. ಹಾಗೆಯೇ ಅವರು ಒಳಗೆ ಹೋಗಿ ಅವರನ್ನು ಖಡ್ಗದಿಂದ ಸಂಹರಿಸಿ ಅವರ ಶವಗಳನ್ನು ಹೊರಗೆ ಹಾಕಿದ ತರುವಾಯ, ಬಾಳನ ಗರ್ಭಗುಡಿಯನ್ನು ಪ್ರವೇಶಿಸಿ, \v 26 ಬಾಳನ ದೇವಸ್ಥಾನದಿಂದ ವಿಗ್ರಹಗಳನ್ನು ತಂದು ಅವುಗಳನ್ನು ಸುಟ್ಟುಬಿಟ್ಟರು. \v 27 ಇದಲ್ಲದೆ ಅವರು ಬಾಳನ ವಿಗ್ರಹವನ್ನು ಒಡೆದುಹಾಕಿ, ಬಾಳನ ದೇವಸ್ಥಾನವನ್ನು ಕೆಡವಿಬಿಟ್ಟು, ಆ ಸ್ಥಳವನ್ನು ಇಂದಿನವರೆಗೂ ಶೌಚಕ್ಕಾಗಿ ಉಪಯೋಗಿಸುತ್ತಾರೆ. \p \v 28 ಹೀಗೆಯೇ ಯೇಹುವು ಬಾಳನ ಪೂಜೆಯನ್ನು ಇಸ್ರಾಯೇಲಿನಲ್ಲಿಂದ ನಾಶಮಾಡಿಬಿಟ್ಟನು. \v 29 ಆದರೆ ಬೇತೇಲಿನಲ್ಲಿಯೂ, ದಾನಿನಲ್ಲಿಯೂ ಇರುವ ಬಂಗಾರದ ಕರುಗಳಿಂದ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ತೊರೆದುಬಿಡಲಿಲ್ಲ. \p \v 30 ಯೆಹೋವ ದೇವರು ಯೇಹುವಿಗೆ, “ನೀನು ನನ್ನ ದೃಷ್ಟಿಯಲ್ಲಿ ಸರಿಯಾದದ್ದನ್ನು ನಡೆಸಿ ನನ್ನ ಮೆಚ್ಚಿಗೆಯನ್ನು ಪಡೆದೆ; ಅಹಾಬನ ಮನೆಯವರನ್ನು ಕುರಿತು ನನ್ನ ಹೃದಯದಲ್ಲಿದ್ದ ಎಲ್ಲದರ ಪ್ರಕಾರ ಮಾಡಿದ್ದರಿಂದ, ನಿನ್ನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು,” ಎಂದರು. \v 31 ಯೇಹುವು ತನ್ನ ಪೂರ್ಣಹೃದಯದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ನಿಯಮದಲ್ಲಿ ನಡೆಯಲು ಪ್ರಯತ್ನಿಸಲಿಲ್ಲ. ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. \p \v 32 ಆ ದಿವಸಗಳಲ್ಲಿ ಯೆಹೋವ ದೇವರು ಇಸ್ರಾಯೇಲನ್ನು ತಗ್ಗಿಸಲು ಆರಂಭಿಸಿದರು. ಹಜಾಯೇಲನು ಬಂದು ಇಸ್ರಾಯೇಲಿನ ಸಮಸ್ತ ಮೇರೆಗಳಲ್ಲಿ ಅವರನ್ನು ಸಂಹರಿಸಿದನು. \v 33 ಪೂರ್ವದಲ್ಲಿ ಯೊರ್ದನ್ ಮೊದಲುಗೊಂಡು ಗಾದ್ಯರೂ, ರೂಬೇನ್ಯರೂ ನಿವಾಸವಾಗಿದ್ದ ಗಿಲ್ಯಾದಿನ ಸಮಸ್ತ ದೇಶವನ್ನೂ, ಅರ್ನೋನ್ ನದಿಯ ಬಳಿಯಲ್ಲಿರುವ ಅರೋಯೇರ್ ಮೊದಲುಗೊಂಡು ಮನಸ್ಸೆಯವರು ನಿವಾಸವಾಗಿದ್ದ ಗಿಲ್ಯಾದ್ ಬಾಷಾನಿನಲ್ಲಿರುವವರನ್ನೂ ಹಜಾಯೇಲನು ಸಂಹರಿಸಿದನು. \p \v 34 ಯೇಹುವಿನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಅವನ ಪರಾಕ್ರಮವೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \p \v 35 ಯೇಹು ತನ್ನ ಪಿತೃಗಳ ಜೊತೆಯಲ್ಲಿ ವಿಶ್ರಾಂತಿ ಹೊಂದಿದ್ದರಿಂದ ಅವನನ್ನು ಸಮಾರ್ಯದಲ್ಲಿ ಹೂಳಿಟ್ಟರು. ಅವನ ಮಗ ಯೆಹೋವಾಹಾಜನು ಅವನಿಗೆ ಬದಲಾಗಿ ಅರಸನಾದನು. \v 36 ಯೇಹುವು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಿದ ಸಮಯ ಇಪ್ಪತ್ತೆಂಟು ವರ್ಷಗಳು. \c 11 \s1 ಅತಲ್ಯಳು ಹಾಗೂ ಯೋವಾಷ್ \p \v 1 ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ಕಂಡಾಗ, ಅವಳು ಎದ್ದು ರಾಜಸಂತಾನದವರನ್ನೆಲ್ಲಾ ನಾಶಮಾಡಲು ಆರಂಭಿಸಿದಳು. \v 2 ಆದರೆ ಅರಸನಾದ ಯೆಹೋರಾಮನ\f + \fr 11:2 \fr*\fq ಯೆಹೋರಾಮ \fq*\ft ಅಥವಾ \ft*\fqa ಯೋರಾಮ\fqa*\f* ಮಗಳೂ ಅಹಜ್ಯನ ಸಹೋದರಿಯೂ ಆದ ಯೆಹೋಷೆಬಳು ಹತರಾಗುವುದಕ್ಕಿದ್ದ ಅರಸನ ಮಕ್ಕಳ ಮಧ್ಯದಿಂದ ಅಹಜ್ಯನ ಮಗನಾದ ಯೋವಾಷನನ್ನು ಕದ್ದುಕೊಂಡು ಹೋಗಿ ಅವನು ಹತನಾಗದ ಹಾಗೆ ಅವನನ್ನೂ ಅವನ ದಾದಿಯನ್ನೂ ಅತಲ್ಯಳಿಗೆ ಕಾಣದ ಹಾಗೆ ಮಲಗುವ ಕೋಣೆಯಲ್ಲಿ ಬಚ್ಚಿಟ್ಟಳು. \v 3 ಹೀಗೆ ಅವನು ಯೆಹೋಷೆಬಳ ಸಂಗಡ ಆರು ವರ್ಷ ಯೆಹೋವ ದೇವರ ಆಲಯದಲ್ಲಿ ಗುಪ್ತವಾಗಿದ್ದನು, ಈ ಆರು ವರ್ಷ ಅತಲ್ಯಳು ದೇಶವನ್ನು ಆಳುತ್ತಾ ಇದ್ದಳು. \p \v 4 ಏಳನೆಯ ವರ್ಷದಲ್ಲಿ ಯೆಹೋಯಾದಾವನು ಶತಾಧಿಪತಿಯಾದವರನ್ನೂ, ಕಾರಿ ಎಂಬ ಸಿಪಾಯಿಗಳ ಅಧಿಪತಿಗಳನ್ನೂ ಕಾವಲುಗಾರರ ಸಹಿತವಾಗಿ ಕರೆಯಿಸಿ, ತನ್ನ ಬಳಿಗೆ ಯೆಹೋವ ದೇವರ ಆಲಯಕ್ಕೆ ಕರೆದುಕೊಂಡು ಬಂದನು. ಅವರ ಸಂಗಡ ಒಡಂಬಡಿಕೆಯನ್ನು ಮಾಡಿ, ಯೆಹೋವ ದೇವರ ಆಲಯದಲ್ಲಿ ಅವರಿಂದ ಪ್ರಮಾಣ ತೆಗೆದುಕೊಂಡು, ಅನಂತರ ಅವನಿಗೆ ಅರಸನ ಮಗನನ್ನು ತೋರಿಸಿದನು. \v 5 ಅವರಿಗೆ, “ನೀವು ಮಾಡಬೇಕಾದದ್ದೇನೆಂದರೆ, ಸಬ್ಬತ್ ದಿನದಲ್ಲಿ ಪ್ರವೇಶಿಸುವ ನಿಮ್ಮಲ್ಲಿರುವ ಮೂರನೇ ಒಂದು ಭಾಗವು ಅರಮನೆಯ ಕಾವಲುಗಾರರಾಗಿರಬೇಕು. \v 6 ಇನ್ನೊಂದು ಭಾಗವು ಸೂರ್ ಎಂಬ ಬಾಗಿಲ ಬಳಿಯಲ್ಲಿಯೂ, ಮತ್ತೊಂದು ಭಾಗವು ಕಾವಲಿನ ಹಿಂದೆ ಇರುವ ಬಾಗಿಲ ಬಳಿಯಲ್ಲಿಯೂ ಇರಿ. ಹೀಗೆಯೇ ದೇವಾಲಯ ಕಾವಲು ಮುರಿಯದ ಹಾಗೆ ಅದನ್ನು ಕಾಯಿರಿ. \v 7 ಇದಲ್ಲದೆ ಸಬ್ಬತ್ ದಿನದಲ್ಲಿ ಹೊರಡುವ ನಿಮ್ಮೆಲ್ಲರಲ್ಲಿ ಎರಡು ಭಾಗ ಯೆಹೋವ ದೇವರ ಆಲಯದಲ್ಲಿರುವ ಅರಸನನ್ನು ಕಾಯುವವರಾಗಿರಿ. \v 8 ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ಇರಬೇಕು. ಯಾವನಾದರೂ ನಿಮ್ಮ ಸಾಲುಗಳಲ್ಲಿ ನುಗ್ಗುವಂಥವನನ್ನು ಸಂಹರಿಸಬೇಕು. ಆದರೆ ಅರಸನು ಹೊರಗೆ ಹೋಗುವಾಗಲೂ, ಒಳಗೆ ಬರುವಾಗಲೂ ನೀವು ಅವನ ಜೊತೆಯಲ್ಲಿಯೇ ಇರಬೇಕು,” ಎಂದು ಆಜ್ಞಾಪಿಸಿದನು. \p \v 9 ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಪ್ರಕಾರ ಶತಾಧಿಪತಿಗಳು ಮಾಡಿದರು. ಪ್ರತಿ ಮನುಷ್ಯನು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಬರತಕ್ಕ ಸಿಪಾಯಿಗಳನ್ನು ಯೆಹೋಯಾದಾವನ ಬಳಿಗೆ ಕರೆದುಕೊಂಡು ಬಂದರು. \v 10 ಆಗ ಯಾಜಕನು ಯೆಹೋವ ದೇವರ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ, ಗುರಾಣಿಗಳನ್ನೂ ಶತಾಧಿಪತಿಗಳಿಗೆ ಕೊಟ್ಟನು. \v 11 ಕಾವಲುಗಾರರಲ್ಲಿ ಪ್ರತಿ ಮನುಷ್ಯನು ತನ್ನ ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡು ಬಲಿಪೀಠದ ಬಳಿಯಲ್ಲಿಯೂ, ಆಲಯದ ಬಳಿಯಲ್ಲಿಯೂ, ಆಲಯದ ಬಲಗಡೆಯ ಮೊದಲುಗೊಂಡು, ಆಲಯದ ಎಡಗಡೆಯವರೆಗೂ ಅರಸನ ಸುತ್ತಲೂ ನಿಂತುಕೊಂಡರು. \p \v 12 ಆಗ ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆತಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ದೇವರ ನಿಯಮ ಗ್ರಂಥವನ್ನು ಕೊಟ್ಟು, ಅರಸನನ್ನಾಗಿ ಮಾಡಿ ಅವನನ್ನು ಅಭಿಷೇಕಿಸಿದರು. ಕೂಡಲೆ ಜನರು ಚಪ್ಪಾಳೆ ಹೊಡೆದು, “ಅರಸನು ಚಿರಂಜೀವಿಯಾಗಿರಲಿ!” ಎಂದು ಹರಸಿದರು. \p \v 13 ಅತಲ್ಯಳು ಕಾವಲುಗಾರರ ಮತ್ತು ಜನರ ಶಬ್ದವನ್ನೂ ಕೇಳಿದಾಗ, ಯೆಹೋವ ದೇವರ ಆಲಯದಲ್ಲಿ ಜನರ ಬಳಿಗೆ ಬಂದಳು. \v 14 ಅಲ್ಲಿ ಅರಸನು ಪದ್ಧತಿಯ ಪ್ರಕಾರ ಕಂಬದ ಬಳಿಯಲ್ಲಿ ನಿಂತಿದ್ದನು. ಪ್ರಧಾನರೂ, ತುತೂರಿ ಊದುವವರೂ ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದುತ್ತಿದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು. \p \v 15 ಆಗ ಯಾಜಕನಾದ ಯೆಹೋಯಾದಾವನು ಸೈನ್ಯದ ಮೇಲೆ ಇರುವ ಶತಾಧಿಪತಿಗಳಿಗೆ, “ಅವಳನ್ನು ಯೆಹೋವ ದೇವರ ಆಲಯದಲ್ಲಿ ಕೊಲ್ಲಬೇಡಿರಿ, ಎರಡು ಸಾಲು ಸಿಪಾಯಿಗಳು ಅವಳನ್ನು ನಡುವೆ ಸಾಗಿಸಿಕೊಂಡು ಹೋಗಿ ಹೊರಗೆ ತಳ್ಳಲಿ ಮತ್ತು ಅವಳನ್ನು ಹಿಂಬಾಲಿಸುವಂಥವರನ್ನು ಖಡ್ಗದಿಂದ ಕೊಂದುಹಾಕಿರಿ,” ಎಂದು ಆಜ್ಞಾಪಿಸಿದನು. \v 16 ಆಗ ಅವರು ಅವಳನ್ನು ಅಧೀನಕ್ಕೆ ತೆಗೆದುಕೊಂಡು, ಕುದುರೆಗಳು ಅರಸನ ಮನೆಯೊಳಕ್ಕೆ ಬರುವ ಮಾರ್ಗದಲ್ಲಿ ಅವಳನ್ನು ಕೊಂದುಹಾಕಿದರು. \p \v 17 ಅನಂತರ ಯೆಹೋವ ದೇವರ ಜನರಾಗಿರುವಂತೆ ಯೆಹೋಯಾದಾವನು ಯೆಹೋವ ದೇವರಿಗೂ, ಅರಸನಿಗೂ, ಜನರಿಗೂ ಮಧ್ಯೆ ಒಡಂಬಡಿಕೆ ಮಾಡಿದನು. ಹಾಗೆಯೇ ಅರಸನಿಗೂ, ಜನರಿಗೂ ಮಧ್ಯದಲ್ಲಿ ಒಡಂಬಡಿಕೆ ಮಾಡಿಸಿದನು. \v 18 ದೇಶದ ಜನರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಅದನ್ನು ಕೆಡವಿಹಾಕಿ, ಅದರ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ತುಂಡುತುಂಡಾಗಿ ಒಡೆದುಬಿಟ್ಟು, ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು. \p ಆಗ ಯಾಜಕನಾದ ಯೆಹೋಯಾದಾವನು ಯೆಹೋವ ದೇವರ ಆಲಯಕ್ಕೆ ಕಾವಲುಗಾರರನ್ನು ನೇಮಿಸಿದನು. \v 19 ಅವನು ಶತಾಧಿಪತಿಗಳನ್ನೂ, “ಕಾರಿ” ಎಂಬ ಸಿಪಾಯಿಗಳ ಅಧಿಕಾರಿಗಳನ್ನೂ, ಕಾವಲುಗಾರರನ್ನೂ, ದೇಶದ ಜನರೆಲ್ಲರನ್ನೂ ಕರೆದುಕೊಂಡು ಹೋಗಿ, ಅರಸನನ್ನು ಯೆಹೋವ ದೇವರ ಆಲಯದಿಂದ ಕಾವಲುಗಾರರ ಬಾಗಿಲ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಬಂದು, ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು. \v 20 ಅತಲ್ಯಳನ್ನು ಅರಮನೆಯ ಬಳಿಯಲ್ಲಿ ಖಡ್ಗದಿಂದ ಕೊಂದುಹಾಕಿದ್ದರಿಂದ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು. \p \v 21 ಯೋವಾಷ್\f + \fr 11:21 \fr*\fq ಯೋವಾಷ್ \fq*\ft ಅಥವಾ \ft*\fqa ಯೆಹೋವಾಷ್\fqa*\f* ಅರಸನಾದಾಗ ಏಳು ವರ್ಷದವನಾಗಿದ್ದನು. \c 12 \s1 ಯೋವಾಷನು ದೇವಾಲಯವನ್ನು ದುರಸ್ತಿ ಮಾಡಿದ್ದು \p \v 1 ಯೇಹುವಿನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೋವಾಷನು ಅರಸನಾಗಿ, ಯೆರೂಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಚಿಬ್ಯಳು. ಅವಳು ಬೇರ್ಷೆಬ ಊರಿನವಳು. \v 2 ಯಾಜಕನಾದ ಯೆಹೋಯಾದಾವನು ಯೋವಾಷನಿಗೆ ಬೋಧಿಸಿದ ಎಲ್ಲಾ ವರ್ಷಗಳಲ್ಲಿ ಯೋವಾಷನು ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು. \v 3 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. \p \v 4 ಯೋವಾಷನು ಯಾಜಕರಿಗೆ, “ಯೆಹೋವ ದೇವರ ಆಲಯಕ್ಕೆ ಪವಿತ್ರ ಅರ್ಪಣೆಗಳಾಗಿ ತರಲಾದ ಜನಗಣತಿಯಲ್ಲಿ ಸಂಗ್ರಹಿಸಿದ ಹಣ, ವೈಯಕ್ತಿಕ ಪ್ರತಿಜ್ಞೆಗಳಿಂದ ಪಡೆದ ಹಣ ಮತ್ತು ದೇವಾಲಯಕ್ಕೆ ಸ್ವಯಂಪ್ರೇರಣೆಯಿಂದ ತಂದ ಹಣವನ್ನು ಸಂಗ್ರಹಿಸಿರಿ ಎಂದನು. \v 5 ಯಾಜಕರಲ್ಲಿ ಪ್ರತಿಯೊಬ್ಬನು ಖಜಾಂಚಿಯವರಿಂದ ಹಣವನ್ನು ತೆಗೆದುಕೊಂಡು ಆಲಯದಲ್ಲಿ ಕಂಡುಕೊಳ್ಳುವ ಒಡಕುಗಳನ್ನೆಲ್ಲಾ ದುರಸ್ತಿ ಮಾಡಿಸಲು ಉಪಯೋಗಿಸಿರಿ,” ಎಂದನು. \p \v 6 ಆದರೆ ಯಾಜಕರು ಅರಸನಾದ ಯೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದವರೆಗೂ ದೇವಾಲಯವನ್ನು ದುರಸ್ತಿ ಮಾಡದೆ ಇದ್ದರು. \v 7 ಆದ್ದರಿಂದ ಅರಸನಾದ ಯೋವಾಷನು ಯಾಜಕನಾದ ಯೆಹೋಯಾದಾವನನ್ನು, ಇತರ ಯಾಜಕರನ್ನು ಕರೆದು ಅವರಿಗೆ, “ನೀವು ದೇವಾಲಯದ ಒಡಕುಗಳನ್ನು ಏಕೆ ದುರಸ್ತಿ ಮಾಡಿಸುತ್ತಿಲ್ಲ? ಇನ್ನು ಮೇಲೆ ನೀವು ನಿಮಗೆ ಪರಿಚಯವಿರುವ ಖಜಾಂಚಿಯವರಿಂದ ಹಣವನ್ನು ತೆಗೆದುಕೊಳ್ಳದೆ ದೇವಾಲಯದ ಒಡಕುಗಳನ್ನು ದುರಸ್ತಿ ಮಾಡಿಸಲು ಅದನ್ನು ಒಪ್ಪಿಸಿಕೊಡಿರಿ,” ಎಂದನು. \v 8 ಆಗ ಯಾಜಕರು, “ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ, ದೇವಾಲಯದ ದುರಸ್ತಿಗಾಗಿ ಕೈ ಹಾಕುವುದಿಲ್ಲ,” ಎಂಬುದಾಗಿ ಮಾತುಕೊಟ್ಟರು. \p \v 9 ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಅದರ ಮುಚ್ಚಳದಲ್ಲಿ ಒಂದು ರಂಧ್ರವನ್ನು ಮಾಡಿದನು. ಅವನು ಅದನ್ನು ಬಲಿಪೀಠದ ಬಳಿಯಲ್ಲಿ ಯೆಹೋವ ದೇವರ ಆಲಯ ಪ್ರವೇಶದ ಬಲಗಡೆಯಲ್ಲಿ ಇಟ್ಟನು. ಆಗ ಬಾಗಿಲು ಕಾಯುವ ಯಾಜಕರು ಯೆಹೋವ ದೇವರ ಆಲಯಕ್ಕೆ ತರಲಾದ ಹಣವನ್ನೆಲ್ಲಾ ಅದರಲ್ಲಿ ಹಾಕಿಸುತ್ತಿದ್ದರು. \v 10 ಪೆಟ್ಟಿಗೆಯಲ್ಲಿ ಬಹಳ ಹಣ ಉಂಟೆಂದು ಅವರು ಕಂಡಾಗಲೆಲ್ಲಾ ಅರಸನ ಲೇಖಕನೂ, ಮಹಾಯಾಜಕನೂ ಬಂದು, ಯೆಹೋವ ದೇವರ ಆಲಯದಲ್ಲಿ ತಂದಿದ್ದ ಹಣವನ್ನು ಎಣಿಸಿ, ಚೀಲಗಳಲ್ಲಿ ಹಾಕಿದರು. \v 11 ಅವರು ಎಣಿಸಿದ ಹಣವನ್ನು ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಅದನ್ನು ಒಪ್ಪಿಸಿದರು. ಅದರೊಂದಿಗೆ, ಅವರು ಯೆಹೋವ ದೇವರ ದೇವಸ್ಥಾನದಲ್ಲಿ ಕೆಲಸ ಮಾಡುವ ಬಡಗಿ, ಶಿಲ್ಪಿ, \v 12 ಉಪ್ಪಾರ, ಕಲ್ಲುಕುಟಿಗರಿಗೆ ಕೊಟ್ಟರು. ಇದಲ್ಲದೆ ಯೆಹೋವ ದೇವರ ಆಲಯವನ್ನು ದುರಸ್ತಿ ಮಾಡುವುದಕ್ಕೆ ಮರ, ಕೆತ್ತಿದ ಕಲ್ಲುಗಳನ್ನು ತೆಗೆದುಕೊಳ್ಳುವುದಕ್ಕೂ, ಆಲಯ ದುರಸ್ತಿ ಮಾಡಲು ಬೇಕಾದ ಸಮಸ್ತ ಖರ್ಚಿಗೂ ಕೊಟ್ಟರು. \p \v 13 ಯೆಹೋವ ದೇವರ ಆಲಯದೊಳಗೆ ತಂದ ಹಣದಿಂದ ಬೆಳ್ಳಿ ಬಟ್ಟಲು, ಕತ್ತರಿ, ಪಾತ್ರೆ, ತುತೂರಿ, ಬೆಳ್ಳಿಬಂಗಾರದ ಸಾಮಾನುಗಳು, ಇವೆಲ್ಲವುಗಳನ್ನು ಮಾಡಿಸದೆ, \v 14 ಅವರು ಅದನ್ನು ಕೆಲಸದವರಿಗೆ ಕೊಟ್ಟು, ಯೆಹೋವ ದೇವರ ಆಲಯದ ದುರಸ್ತಿ ಮಾಡಿಸಿದರು. \v 15 ಇದಲ್ಲದೆ ಅವರು ಕೆಲಸಮಾಡುವವರಿಗೆ ಹಣ ಕೊಡುವುದಕ್ಕೆ ಯಾರ ಕೈಯಲ್ಲಿ ಒಪ್ಪಿಸಿದ್ದರೋ, ಅವರಿಂದ ಹಣದ ಲೆಕ್ಕವನ್ನು ತೆಗೆದುಕೊಳ್ಳಲಿಲ್ಲ, ಏಕೆಂದರೆ ಅವರು ನಂಬಿಗಸ್ತರಾಗಿದ್ದರು. \v 16 ಆದರೆ ಪ್ರಾಯಶ್ಚಿತ್ತ ಬಲಿಯ ಹಣವನ್ನು, ಪಾಪ ಪರಿಹಾರದ ಬಲಿಯ ಹಣವನ್ನು ಯೆಹೋವ ದೇವರ ಆಲಯಕ್ಕೆ ತೆಗೆದುಕೊಂಡು ಬರಲಿಲ್ಲ, ಅದು ಯಾಜಕರದಾಗಿತ್ತು. \p \v 17 ಈ ಸಮಯದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಹೋಗಿ ಗತ್ ಊರಿನ ಮೇಲೆ ಯುದ್ಧಮಾಡಿ, ಅದನ್ನು ವಶಪಡಿಸಿಕೊಂಡನು. ನಂತರ ಹಜಾಯೇಲನು ಯೆರೂಸಲೇಮಿನ ಮೇಲೆ ದಾಳಿಮಾಡಲು ಹೊರಟನು. \v 18 ಆಗ ಯೆಹೂದದ ಅರಸನಾದ ಯೋವಾಷನು ತನ್ನ ಪೂರ್ವಜರಾದ ಯೆಹೋಷಾಫಾಟ, ಯೆಹೋರಾಮ್, ಅಹಜ್ಯ ಎಂಬ ಯೆಹೂದದ ಅರಸರು ಅರ್ಪಿಸಿದ ಸಮಸ್ತ ಪ್ರತಿಷ್ಠಿತವಾದವುಗಳನ್ನೂ ತಾನೇ ಸ್ವತಃ ಅರ್ಪಿಸಿದ ಪ್ರತಿಷ್ಠಿತವಾದವುಗಳನ್ನೂ ಯೆಹೋವ ದೇವರ ಆಲಯದ ಬೊಕ್ಕಸದಲ್ಲಿಯೂ, ಅರಸನ ಮನೆಯಲ್ಲಿಯೂ ಸಿಕ್ಕಿದ ಸಕಲ ಬಂಗಾರವನ್ನೂ ತೆಗೆದುಕೊಂಡು ಅರಾಮಿನ ಅರಸನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟುಹೋದನು. \p \v 19 ಯೋವಾಷನ ಇತರ ಕಾರ್ಯಗಳು, ಅವನು ಮಾಡಿದ್ದೆಲ್ಲವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 20 ಯೋವಾಷನ ಸೇವಕರು ಎದ್ದು ಅವನಿಗೆ ವಿರೋಧವಾಗಿ ಒಳಸಂಚುಮಾಡಿ, ಸಿಲ್ಲಾ ಊರಿಗೆ ಇಳಿದು ಹೋಗುವ ಮಾರ್ಗವಾದ ಬೇತ್ ಮಿಲ್ಲೋ ಎಂಬ ಸ್ಥಳದಲ್ಲಿ ಯೋವಾಷನನ್ನು ಕೊಂದುಹಾಕಿದರು. \v 21 ಅವನ ಸೇವಕರಾದ ಶಿಮೆಯಾತನ ಮಗ ಯೋಜಾಬಾದ್\f + \fr 12:21 \fr*\fq ಯೋಜಾಬಾದ್ \fq*\ft ಕೆಲವು ಪ್ರತಿಗಳಲ್ಲಿ \ft*\fqa ಯೋಜಾಕಾರ್\fqa*\f* ಮತ್ತು ಶೋಮೇರನ ಮಗ ಯೆಹೋಜಾಬಾದ್ ಎಂಬವರು ಅರಸನನ್ನು ಕೊಂದರು. ಯೋವಾಷನ ಜನರು ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನ ಮಗ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು. \c 13 \s1 ಇಸ್ರಾಯೇಲರ ಅರಸನಾದ ಯೆಹೋವಾಹಾಜನು \p \v 1 ಯೆಹೂದದ ಅರಸನಾದ ಅಹಜ್ಯನ ಮಗ ಯೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದಲ್ಲಿ, ಯೇಹುವಿನ ಮಗ ಯೆಹೋವಾಹಾಜನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾದನು. ಅವನು ಹದಿನೇಳು ವರ್ಷ ಆಳಿದನು. \v 2 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ಬಿಟ್ಟುಬಿಡದೆ, ಅವುಗಳನ್ನು ಹಿಂಬಾಲಿಸಿದನು. \v 3 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಿಸಿಕೊಂಡು, ಅವರನ್ನು ಅರಾಮ್ಯರ ಅರಸನಾದ ಹಜಾಯೇಲನ ಕೈಯಲ್ಲಿಯೂ, ಹಜಾಯೇಲನ ಮಗ ಬೆನ್ಹದದನ ಕೈಯಲ್ಲಿಯೂ ಬಹುಕಾಲ ಒಪ್ಪಿಸಿದರು. \p \v 4 ಆಗ ಯೆಹೋವಾಹಾಜನು ಯೆಹೋವ ದೇವರನ್ನು ಬೇಡಿಕೊಂಡದ್ದರಿಂದ ಯೆಹೋವ ದೇವರು ಅವನ ಮೊರೆಯನ್ನು ಕೇಳಿದರು. ಅರಾಮ್ಯರ ಅರಸನು ಇಸ್ರಾಯೇಲರನ್ನು ಬಾಧೆಪಡಿಸಿದ್ದನ್ನು ಅವರು ಕಂಡು, \v 5 ಯೆಹೋವ ದೇವರು ಇಸ್ರಾಯೇಲರಿಗೆ ಒಬ್ಬ ವಿಮೋಚಕನನ್ನು ಕೊಟ್ಟಿದ್ದರಿಂದ, ಅವರು ಅರಾಮ್ಯರ ಕೈಯಿಂದ ತಪ್ಪಿಸಿಕೊಂಡು ಹೋದರು. ಆಗ ಇಸ್ರಾಯೇಲರು ಮುಂಚಿನ ಹಾಗೆ ತಮ್ಮ ಮನೆಗಳಲ್ಲಿ ವಾಸವಾಗಿದ್ದರು. \v 6 ಆದರೆ ಅವರು ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಮನೆಯ ಪಾಪಗಳನ್ನು ಬಿಟ್ಟುಬಿಡದೆ ಅವುಗಳಲ್ಲಿ ಮುಂದುವರಿದರು. ಇದಲ್ಲದೆ ಸಮಾರ್ಯದಲ್ಲಿ ಅಶೇರ ಸ್ತಂಭ ಇನ್ನೂ ಉಳಿದಿತ್ತು. \p \v 7 ಯೆಹೋವಾಹಾಜನ ಸೈನ್ಯದಲ್ಲಿ ಐವತ್ತು ಕುದುರೆ ರಾಹುತರು, ಹತ್ತು ರಥಗಳು, ಹತ್ತು ಸಾವಿರ ಜನ ಕಾಲಾಳುಗಳ ಹೊರತು ಏನೂ ಉಳಿಯಲಿಲ್ಲ. ಏಕೆಂದರೆ ಅರಾಮಿನ ಅರಸನು ಉಳಿದವರನ್ನು ಸಂಹರಿಸಿ, ತುಳಿದು, ಧೂಳಿನ ಹಾಗೆ ಮಾಡಿದನು. \p \v 8 ಯೆಹೋವಾಹಾಜನ ಇತರ ಕಾರ್ಯಗಳೂ ಅವನು ಮಾಡಿದ್ದೆಲ್ಲವೂ ಅವನ ಪರಾಕ್ರಮವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 9 ಯೆಹೋವಾಹಾಜನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನ ಶವವನ್ನು ಸಮಾರ್ಯದಲ್ಲಿ ಹೂಳಿಟ್ಟರು. ಅವನ ಮಗ ಯೋವಾಷನು ಅವನಿಗೆ ಬದಲಾಗಿ ಅರಸನಾದನು. \s1 ಇಸ್ರಾಯೇಲರ ಅರಸನಾದ ಯೆಹೋವಾಷನು \p \v 10 ಯೆಹೂದದ ಅರಸನಾದ ಯೋವಾಷನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗ ಯೋವಾಷನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾದನು. ಅವನು ಹದಿನಾರು ವರ್ಷ ಆಳಿದನು. \v 11 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಸಮಸ್ತ ಪಾಪಗಳನ್ನು ತೊರೆದುಬಿಡದೆ, ಅವುಗಳಲ್ಲಿ ಮುಂದುವರೆದನು. \p \v 12 ಯೋವಾಷನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಅವನು ಯೆಹೂದದ ಅರಸನಾದ ಅಮಚ್ಯನ ವಿರುದ್ಧ ಯುದ್ಧ ಮಾಡಿದ ಅವನ ಪರಾಕ್ರಮವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 13 ಯೋವಾಷನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು, ಇವನ ಶವವನ್ನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸರ ಸ್ಮಶಾನದಲ್ಲಿ ಸಮಾಧಿಮಾಡಿದರು. ಯಾರೊಬ್ಬಾಮನು ಅವನ ಸಿಂಹಾಸನ ಮೇಲೆ ಕುಳಿತುಕೊಂಡನು. \p \v 14 ಆಗ ಎಲೀಷನು ಮರಣಕರ ವ್ಯಾಧಿಯಿಂದ ಬಳಲುತ್ತಿದ್ದಾಗ, ಇಸ್ರಾಯೇಲಿನ ಅರಸನಾದ ಯೋವಾಷನು ಅವನ ಬಳಿಗೆ ಬಂದು, ಅವನ ಮೇಲೆ ಬಿದ್ದು, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥಗಳೂ ಕುದುರೆ ಸವಾರರು ಆಗಿದ್ದವನೇ!” ಎಂದು ಹೇಳುತ್ತಾ ಅತ್ತನು. \p \v 15 ಎಲೀಷನು ಅವನಿಗೆ, “ಒಂದು ಬಿಲ್ಲನ್ನೂ ಬಾಣಗಳನ್ನೂ ತೆಗೆದುಕೋ,” ಎಂದನು. ಅವನು ತೆಗೆದುಕೊಂಡನು. \v 16 ಅವನು ಇಸ್ರಾಯೇಲಿನ ಅರಸನಿಗೆ, “ನಿನ್ನ ಕೈಯಲ್ಲಿ ಬಿಲ್ಲನ್ನು ತೆಗೆದುಕೋ,” ಅವನು ಅದನ್ನು ತೆಗೆದುಕೊಂಡಾಗ ಎಲೀಷನು ತನ್ನ ಕೈಗಳನ್ನು ಅರಸನ ಕೈಗಳ ಮೇಲೆ ಇಟ್ಟನು. \p \v 17 “ಪೂರ್ವದಲ್ಲಿರುವ ಕಿಟಕಿಯನ್ನು ತೆರೆ,” ಎಂದನು. ಅವನು ತೆರೆದನು. ಎಲೀಷನು, “ಎಸೆ,” ಅನ್ನಲು, ಅವನು ಎಸೆದನು. “ಯೆಹೋವ ದೇವರ ವಿಜಯದ ಬಾಣವೇ, ಅರಾಮಿನಿಂದ ತಪ್ಪಿಸುವ ವಿಜಯದ ಬಾಣವೇ, ಅಫೇಕಿನಲ್ಲಿ ಅರಾಮ್ಯರನ್ನು ನಾಶಮಾಡುವವರೆಗೂ ನೀನು ಅವರನ್ನು ಹೊಡೆಯುವೆ,” ಎಂದು ಎಲೀಷನು ಹೇಳಿದನು. \p \v 18 ಅವನು, “ಬಾಣಗಳನ್ನು ತೆಗೆದುಕೋ,” ಎಂದನು. ಅರಸನು ತೆಗೆದುಕೊಂಡನು. ಎಲೀಷನು ಇಸ್ರಾಯೇಲಿನ ಅರಸನಿಗೆ, “ನೆಲದ ಮೇಲೆ ಹೊಡೆ,” ಎಂದನು. ಆಗ ಅವನು ಮೂರು ಸಾರಿ ಮಾತ್ರ ಹೊಡೆದು ನಿಂತನು. \v 19 ಆದರೆ ದೇವರ ಮನುಷ್ಯನು ಅವನ ಮೇಲೆ ಕೋಪಗೊಂಡು, “ನೀನು ಐದಾರು ಸಾರಿ ಹೊಡೆಯಬೇಕಾಗಿತ್ತು. ಆಗ ಅರಾಮ್ಯರನ್ನು ನಾಶಮಾಡುವವರೆಗೂ ಹೊಡೆಯುತ್ತಿದ್ದೆ. ಆದರೆ ಈಗ ಅರಾಮ್ಯರನ್ನು ಮೂರು ಸಾರಿ ಮಾತ್ರ ಹೊಡೆಯುವೆ,” ಎಂದನು. \p \v 20 ಅನಂತರ ಎಲೀಷನು ಮೃತನಾದನು. ಅವನ ಶವವನ್ನು ಸಮಾಧಿಮಾಡಿದರು. \p ವರ್ಷದ ಆರಂಭದಲ್ಲಿ ಮೋವಾಬ್ಯರ ದಂಡುಗಳು ದೇಶದಲ್ಲಿ ಪ್ರವೇಶಿಸಿದವು. \v 21 ಒಂದು ದಿನ ಕೆಲವು ಇಸ್ರಾಯೇಲರು ಒಬ್ಬ ಮನುಷ್ಯನನ್ನು ಸಮಾಧಿಮಾಡಲು ಹೋಗುತ್ತಿದ್ದರು. ಆಗ, ಮೋವಾಬ್ಯರ ದಂಡು ಬರುತ್ತಿರುವುದನ್ನು ಕಂಡು, ಆ ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿಹೋದರು. ಆ ಶವ ಸಮಾಧಿಯ ಮೇಲೆಬಿದ್ದಾಗ, ಅದು ಎಲೀಷನ ಎಲುಬುಗಳಿಗೆ ತಗಲಿ ಜೀವ ಬಂದು ಎದ್ದು ನಿಂತನು. \p \v 22 ಯೆಹೋವಾಹಾಜನ ದಿವಸಗಳೆಲ್ಲಾ ಅರಾಮಿನ ಅರಸನಾದ ಹಜಾಯೇಲನು ಇಸ್ರಾಯೇಲರನ್ನು ಬಾಧೆಪಡಿಸಿದನು. \v 23 ಆದರೆ ಯೆಹೋವ ದೇವರು ಅಬ್ರಹಾಮನ, ಇಸಾಕನ, ಯಾಕೋಬನ ಸಂಗಡ ಒಡಂಬಡಿಕೆಯನ್ನು ಮಾಡಿದ್ದರಿಂದ ಇಸ್ರಾಯೇಲರಿಗೆ ಕೃಪೆತೋರಿಸಿ ಅವರ ಮೇಲೆ ಅನುಕಂಪಗೊಂಡರು. ಅವರನ್ನು ನಾಶಮಾಡಲು, ಆತನು ಅವರನ್ನು ತನ್ನಿಂದ ತೊರೆದುಬಿಡಲು ಅವರನ್ನು ತನ್ನ ಸಮ್ಮುಖದಿಂದ ಹೊರಡಿಸಲು ಮನಸ್ಸು ಮಾಡಲಿಲ್ಲ. \p \v 24 ಅರಾಮಿನ ಅರಸನಾದ ಹಜಾಯೇಲನು ಮರಣಹೊಂದಿದನು. ಅವನ ಮಗ ಬೆನ್ಹದದನು ಅವನಿಗೆ ಬದಲಾಗಿ ಅರಸನಾದನು. \v 25 ಆಗ ಯೆಹೋವಾಹಾಜನ ಮಗ ಯೋವಾಷನು ಯುದ್ಧದಲ್ಲಿ ತನ್ನ ತಂದೆ ಯೆಹೋವಾಹಾಜನ ಕೈಯಿಂದ ಹಜಾಯೇಲನು ತೆಗೆದುಕೊಂಡಿದ್ದ ಪಟ್ಟಣಗಳನ್ನು ಅವನ ಮಗ ಬೆನ್ಹದದನ ಕೈಯಿಂದ ತಿರುಗಿ ತೆಗೆದುಕೊಂಡನು. ಯೋವಾಷನು ಅವನನ್ನು ಮೂರು ಸಾರಿ ಸೋಲಿಸಿ, ಇಸ್ರಾಯೇಲಿನ ಪಟ್ಟಣಗಳನ್ನು ತಿರುಗಿ ತೆಗೆದುಕೊಂಡನು. \c 14 \s1 ಯೆಹೂದ್ಯರ ಅರಸನಾದ ಅಮಚ್ಯನು \p \v 1 ಇಸ್ರಾಯೇಲಿನ ಅರಸನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಆಳ್ವಿಕೆಯ ಎರಡನೆಯ ವರ್ಷದಲ್ಲಿ, ಯೆಹೂದದ ಅರಸನಾದ ಯೋವಾಷನ ಮಗ ಅಮಚ್ಯನು ಅರಸನಾದನು. \v 2 ಅವನು ಆಳಲು ಆರಂಭಿಸಿದಾಗ, ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್, ಅವಳು ಯೆರೂಸಲೇಮಿನವಳು. \v 3 ಅವನು ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೇ ಮಾಡಿದನು, ಆದರೆ ತನ್ನ ಪಿತೃವಾದ ದಾವೀದನ ಹಾಗಲ್ಲ. ತನ್ನ ತಂದೆ ಯೋವಾಷನು ಮಾಡಿದ ಹಾಗೆ ಸಮಸ್ತವನ್ನು ಮಾಡಿದನು. \v 4 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. \p \v 5 ಇವನು ರಾಜ್ಯವನ್ನು ಸ್ಥಿರಪಡಿಸಿಕೊಂಡ ತರುವಾಯ, ಅರಸನಾಗಿದ್ದ ತನ್ನ ತಂದೆಯನ್ನು ಕೊಂದ ಸೇವಕರಿಗೆ ಮರಣದಂಡನೆಯನ್ನು ವಿಧಿಸಿದನು. \v 6 ಆದರೆ, “ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು,” ಎಂದು ಯೆಹೋವ ದೇವರು ಆಜ್ಞಾಪಿಸಿದ ಮೋಶೆಯ ನಿಯಮ ಗ್ರಂಥದಲ್ಲಿ ಬರೆದಿರುವ ಪ್ರಕಾರ, ಅವನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ.\f + \fr 14:6 \fr*\ft \+xt ಧರ್ಮೋ 24:16\+xt*\ft*\f* \p \v 7 ಅವನು ಉಪ್ಪಿನ ತಗ್ಗಿನಲ್ಲಿ ಎದೋಮ್ಯರಾದ ಹತ್ತು ಸಾವಿರ ಜನರನ್ನು ಸೋಲಿಸಿ, ಯುದ್ಧದಲ್ಲಿ ಸೆಲ ದುರ್ಗವನ್ನು ವಶಪಡಿಸಿಕೊಂಡು, ಅದಕ್ಕೆ ಯೊಕ್ತೆಯೇಲ್ ಎಂದು ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ. \p \v 8 ಆಗ ಅಮಚ್ಯನು, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲರ ಅರಸನಾದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರಿಸೋಣ ಬಾ,” ಎಂದು ದೂತರ ಮುಖಾಂತರ ಹೇಳಿ ಕಳುಹಿಸಿದನು. \p \v 9 ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ, “ಲೆಬನೋನಿನಲ್ಲಿದ್ದ ಮುಳ್ಳುಗಿಡವು ಲೆಬನೋನಿನಲ್ಲಿರುವ ದೇವದಾರು ಮರಕ್ಕೆ, ‘ನನ್ನ ಮಗನಿಗೆ ಹೆಂಡತಿಯಾಗಿರಲು ನೀನು ನಿನ್ನ ಮಗಳನ್ನು ಕೊಡು,’ ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ, ಆ ಮುಳ್ಳುಗಿಡವನ್ನು ತುಳಿಯಿತು. \v 10 ನೀನು ಎದೋಮ್ಯರನ್ನು ಸೋಲಿಸಿದ್ದರಿಂದ ಗರ್ವಪಡುತ್ತಿರುವೆ, ನಿನ್ನ ಜಯದಲ್ಲಿ ಘನಪಡುತ್ತಾ, ಮನೆಯಲ್ಲಿ ಸುಮ್ಮನೆ ಕೂತಿರು. ನೀನೂ, ನಿನ್ನ ಸಂಗಡ ಯೆಹೂದವೂ ಬಿದ್ದುಹೋಗುವಂತೆ ನಿನ್ನ ಕೇಡಿಗೆ ನೀನೇ ಕೈ ಹಾಕುವುದೇಕೆ?” ಎಂದು ಹೇಳಿ ಕಳುಹಿಸಿದನು. \p \v 11 ಆದರೆ ಅಮಚ್ಯನು ಕೇಳದೆ ಹೋದನು. ಆದ್ದರಿಂದ ಇಸ್ರಾಯೇಲಿನ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು. ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ ಷೆಮೆಷ್ ಊರಿನ ಬಳಿಯಲ್ಲಿ ಒಬ್ಬರನ್ನೊಬ್ಬರು ಎದುರಿಸಿದರು. \v 12 ಯೆಹೂದದವರು ಇಸ್ರಾಯೇಲರ ಮುಂದೆ ಸೋತುಹೋದದ್ದರಿಂದ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಓಡಿಹೋದರು. \v 13 ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಬೇತ್ ಷೆಮೆಷ್ ಬಳಿಯಲ್ಲಿ ವಶಪಡಿಸಿಕೊಂಡನು. ಅನಂತರ ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು, ಎಫ್ರಾಯೀಮಿನ ಬಾಗಿಲು ಮೊದಲುಗೊಂಡು ಮೂಲೆಯ ಬಾಗಿಲವರೆಗೂ, ಆರುನೂರು ಅಡಿ ಉದ್ದದ ಯೆರೂಸಲೇಮಿನ ಗೋಡೆಯನ್ನು ಕೆಡವಿಬಿಟ್ಟನು. \v 14 ಯೆಹೋವ ದೇವರ ಆಲಯದಲ್ಲಿ, ಅರಮನೆಯ ಬೊಕ್ಕಸಗಳಲ್ಲಿ ಸಿಕ್ಕಿದ ಸಕಲ ಬೆಳ್ಳಿಬಂಗಾರವನ್ನೂ ಎಲ್ಲಾ ಸಲಕರಣೆಗಳನ್ನೂ ಯುದ್ಧದಲ್ಲಿ ಬಂಧಿತರಾದವರನ್ನೂ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು. \p \v 15 ಯೋವಾಷನು ಮಾಡಿದ ಇತರ ಕ್ರಿಯೆಗಳೂ, ಅವನ ಪರಾಕ್ರಮವೂ, ಅವನು ಯೆಹೂದದ ಅರಸನಾದ ಅಮಚ್ಯನ ವಿರುದ್ಧ ಯುದ್ಧ ಮಾಡಿದ್ದೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 16 ಯೋವಾಷನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನನ್ನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸುಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನ ಮಗ ಯಾರೊಬ್ಬಾಮನು ಅವನ ಬದಲಿಗೆ ಅರಸನಾದನು. \p \v 17 ಇಸ್ರಾಯೇಲಿನ ಅರಸನಾದ ಯೆಹೋವಾಹಾಜನ ಮಗನಾದ ಯೆಹೋವಾಷನ ಮರಣದ ತರುವಾಯ, ಯೆಹೂದದ ಅರಸನಾದ ಯೋವಾಷನ ಮಗನಾಗಿರುವ ಅಮಚ್ಯನು ಹದಿನೈದು ವರ್ಷ ಬದುಕಿದನು. \v 18 ಅಮಚ್ಯನ ಆಳ್ವಿಕೆಯ ಇತರ ಕ್ರಿಯೆಗಳನ್ನು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \p \v 19 ಯೆರೂಸಲೇಮಿನವರು ಅಮಚ್ಯನ ವಿರೋಧವಾಗಿ ಒಳಸಂಚು ಮಾಡಿದ್ದರಿಂದ, ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ, ಅಲ್ಲಿ ಅವನನ್ನು ಕೊಂದುಹಾಕಿದರು. \v 20 ಅವರು ಅವನ ಶವವನ್ನು ಕುದುರೆಗಳ ಮೇಲೆ ತೆಗೆದುಕೊಂಡು ಬಂದು, ದಾವೀದನ ಪಟ್ಟಣವಾದ ಯೆರೂಸಲೇಮಿನಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. \p \v 21 ಆಗ ಯೆಹೂದದ ಎಲ್ಲಾ ಜನರು ಹದಿನಾರು ವರ್ಷದವನಾದ ಅಜರ್ಯನನ್ನು ತೆಗೆದುಕೊಂಡು, ಅವನನ್ನು ಅವನ ತಂದೆಯಾದ ಅಮಚ್ಯನಿಗೆ ಬದಲಾಗಿ ಅರಸನಾಗಿ ಮಾಡಿದರು. \v 22 ಅಮಚ್ಯನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದ ತರುವಾಯ, ಅಜರ್ಯನು ಏಲತನ್ನು ಪುನಃ ಕಟ್ಟಿಸಿ, ಅದನ್ನು ಯೆಹೂದಕ್ಕೆ ತಿರುಗಿ ಸೇರಿಸಿಕೊಂಡನು. \s1 ಇಸ್ರಾಯೇಲರಲ್ಲಿ ಎರಡನೆಯ ಯಾರೊಬ್ಬಾಮ \p \v 23 ಯೆಹೂದದ ಅರಸನಾದ ಯೋವಾಷನ ಮಗನಾದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರಾಯೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನು ಸಮಾರ್ಯದಲ್ಲಿ ಆಳಲು ಆರಂಭಿಸಿ, ನಾಲ್ವತ್ತೊಂದು ವರ್ಷ ಆಳಿದನು. \v 24 ಆದರೆ ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನೆಲ್ಲಾ ಅವನು ತೊರೆದುಬಿಡಲಿಲ್ಲ. \v 25 ಇದಲ್ಲದೆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಗತ್‌ಹೇಫೆರಿನ ಪ್ರವಾದಿಯಾದ ಅಮಿತ್ತೈಯನ ಮಗ ಯೋನನೆಂಬ ತನ್ನ ಸೇವಕನ ಮುಖಾಂತರ ಹೇಳಿದ ವಾಕ್ಯದಂತೆ ಅವನು ಹಮಾತಿನ ಪ್ರವೇಶ ಮೊದಲುಗೊಂಡು ಅರಾಬಾ ತಗ್ಗಿನ ಸಮುದ್ರದವರೆಗೂ ಇರುವ ಇಸ್ರಾಯೇಲಿನ ಮೇರೆಯನ್ನು ತಿರುಗಿ ತೆಗೆದುಕೊಂಡನು. \p \v 26 ಇಸ್ರಾಯೇಲಿನಲ್ಲಿ ಪ್ರತಿಯೊಬ್ಬರೂ ಸ್ವತಂತ್ರನಾಗಿರಲಿ, ಗುಲಾಮನಾಗಿರಲಿ, ಎಲ್ಲರು ಎಷ್ಟು ಕಷ್ಟದಲ್ಲಿದ್ದಾರೆಂಬುದನ್ನು ಯೆಹೋವ ದೇವರು ನೋಡಿದರು. ಅವರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. \v 27 ಇಸ್ರಾಯೇಲಿನ ನಾಮವನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನೆಂದು ಯೆಹೋವ ದೇವರು ಹೇಳದೇ ಇದ್ದುದರಿಂದ, ಯೋವಾಷನ ಮಗ ಯಾರೊಬ್ಬಾಮನ ಕೈಯಿಂದ ಅವರನ್ನು ರಕ್ಷಿಸಿದರು. \p \v 28 ಯಾರೊಬ್ಬಾಮನ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಅವನ ಪರಾಕ್ರಮವೂ, ಅವನ ಯುದ್ಧಗಳೂ, ಯೆಹೂದಕ್ಕೆ ಸೇರಿದ ದಮಸ್ಕವನ್ನೂ, ಹಮಾತನ್ನೂ ಇಸ್ರಾಯೇಲಿಗೋಸ್ಕರ ಹಿಂದಿರುಗಿ ತೆಗೆದುಕೊಂಡದ್ದೂ, ಇಸ್ರಾಯೇಲಿನ ಅರಸುಗಳ ದಿನಚರ್ಯೆಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 29 ಯಾರೊಬ್ಬಾಮನು ಮೃತನಾಗಿ ಇಸ್ರಾಯೇಲಿನ ಅರಸುಗಳಾದ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಜೆಕರ್ಯನು ಅವನಿಗೆ ಬದಲಾಗಿ ಅರಸನಾದನು. \c 15 \s1 ಯೆಹೂದದ ಅರಸನಾದ ಅಜರೀಯನು \p \v 1 ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ, ಯೆಹೂದದ ಅರಸನಾಗಿರುವ ಅಮಚ್ಯನ ಮಗ ಅಜರ್ಯನು ಆಳಲು ಆರಂಭಿಸಿದನು. \v 2 ಅವನು ಅರಸನಾದಾಗ, ಹದಿನಾರು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು, ಅವಳು ಯೆರೂಸಲೇಮಿನವಳು. \v 3 ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. \v 4 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. \p \v 5 ಯೆಹೋವ ದೇವರು ಅರಸನನ್ನು ಮರಣದ ದಿವಸದವರೆಗೂ ಕುಷ್ಠರೋಗದಿಂದ ಬಾಧಿಸಿದ್ದರಿಂದ, ಅವನು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗ ಯೋತಾಮನು ರಾಜಗೃಹಾಧಿಪತ್ಯವನ್ನು ಮತ್ತು ಪ್ರಜಾಪಾಲನೆಯನ್ನೂ ನೋಡಿಕೊಳ್ಳುತ್ತಿದ್ದನು. \p \v 6 ಅಜರ್ಯನ ಇತರ ಕ್ರಿಯೆಗಳನ್ನು ಅವನು ಮಾಡಿದ ಸಮಸ್ತವನ್ನು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 7 ಅಜರ್ಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು. \s1 ಇಸ್ರಾಯೇಲರ ಅರಸನಾದ ಜೆಕರ್ಯನು \p \v 8 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ಜೆಕರ್ಯನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾದನು. ಅವನು ಆರು ತಿಂಗಳು ಆಳಿದನು. \v 9 ಅವನು ತನ್ನ ಪಿತೃಗಳು ಮಾಡಿದ ಪ್ರಕಾರ, ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. \p \v 10 ಯಾಬೇಷನ ಮಗ ಶಲ್ಲೂಮನು ಜೆಕರ್ಯನ ಮೇಲೆ ಒಳಸಂಚುಮಾಡಿ, ಜನರ ಮುಂದೆ ಅವನನ್ನು ಹೊಡೆದು, ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು. \v 11 ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 12 “ನಿನ್ನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು,”\f + \fr 15:12 \fr*\ft \+xt 2 ಅರಸು 10:30\+xt*\ft*\f* ಎಂದು ಯೆಹೋವ ದೇವರು ಯೇಹುವಿಗೆ ಹೇಳಿದ ವಾಕ್ಯದಂತೆ ಇವೆಲ್ಲವೂ ನೆರವೇರಿತು. \s1 ಇಸ್ರಾಯೇಲರ ಅರಸನಾದ ಶಲ್ಲೂಮನು \p \v 13 ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗ ಶಲ್ಲೂಮನು ಅರಸನಾಗಿ, ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು. \v 14 ಗಾದಿಯ ಮಗ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದು, ಸಮಾರ್ಯದಲ್ಲಿ ಯಾಬೇಷನ ಮಗ ಶಲ್ಲೂಮನನ್ನು ಹೊಡೆದು, ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು. \p \v 15 ಶಲ್ಲೂಮನ ಇತರ ಕ್ರಿಯೆಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \p \v 16 ಆ ಸಮಯದಲ್ಲಿ ಮೆನಹೇಮನು ತಿರ್ಚದಿಂದ ತಿಪ್ಸಹು ಪಟ್ಟಣಕ್ಕೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲುಗಳನ್ನು ತನಗೆ ತೆರೆಯದೆ ಇದ್ದುದರಿಂದ ಎಲ್ಲರನ್ನೂ, ಅದರ ಮೇರೆಗಳಲ್ಲಿದ್ದವರೆಲ್ಲರನ್ನೂ ಸಂಹರಿಸಿದನು. ತಿಪ್ಸಹವನ್ನು ಹಾಳು ಮಾಡಿ, ಎಲ್ಲಾ ಗರ್ಭಿಣಿಯರ ಹೊಟ್ಟೆಗಳನ್ನು ಸೀಳಿಸಿದನು. \s1 ಇಸ್ರಾಯೇಲರ ಅರಸನಾದ ಮೆನಹೇಮನು \p \v 17 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗ ಮೆನಹೇಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹತ್ತು ವರ್ಷ ಆಳಿದನು. \v 18 ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ತನ್ನ ದಿವಸಗಳಲ್ಲೆಲ್ಲಾ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. \p \v 19 ಅಸ್ಸೀರಿಯಾ ದೇಶದ ಅರಸನಾದ ಪೂಲನು ಇಸ್ರಾಯೇಲ್ ದೇಶದ ಮೇಲೆ ಯುದ್ಧಕ್ಕೆ ಬಂದನು. ಆಗ ಮೆನಹೇಮನು ಅವನ ಬೆಂಬಲವನ್ನು ಪಡೆಯಲು ಮತ್ತು ರಾಜ್ಯವನ್ನು ದೃಢಪಡಿಸಲು ಪೂಲನಿಗೆ ಮೂವತ್ತು ನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು. \v 20 ಮೆನಹೇಮನು ಈ ಹಣವನ್ನು ಇಸ್ರಾಯೇಲಿನಿಂದ ವಸೂಲಿ ಮಾಡಿದನು. ಪ್ರತಿಯೊಬ್ಬ ಶ್ರೀಮಂತನು ಅಸ್ಸೀರಿಯದ ಅರಸನಿಗೆ ಕೊಡಬೇಕಾದ ಅರ್ಧ ಕಿಲೋಗ್ರಾಂ ಬೆಳ್ಳಿಯನ್ನು ನೀಡಬೇಕಾಗಿತ್ತು. ಆದ್ದರಿಂದ ಅಸ್ಸೀರಿಯದ ಅರಸನು ದೇಶದಲ್ಲಿ ನಿಲ್ಲದೆ ತನ್ನ ಸೈನ್ಯದೊಂದಿಗೆ ಹಿಂದಿರುಗಿ ಹೋದನು. \p \v 21 ಮೆನಹೇಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 22 ಮೆನಹೇಮನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಪೆಕಹ್ಯನು ಅವನಿಗೆ ಬದಲಾಗಿ ಅರಸನಾದನು. \s1 ಇಸ್ರಾಯೇಲರ ಅರಸನಾದ ಪೆಕಹ್ಯನು \p \v 23 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗ ಪೆಕಹ್ಯನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾಗಿ, ಎರಡು ವರ್ಷ ಆಳಿದನು. \v 24 ಪೆಕಹ್ಯನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆಯಲಿಲ್ಲ. \v 25 ಆದರೆ ಅವನ ಅಧಿಪತಿಯಾದಂಥ ರೆಮಲ್ಯನ ಮಗ ಪೆಕಹನು ಗಿಲ್ಯಾದಿನ ಐವತ್ತು ಮಂದಿಯನ್ನು ತನ್ನ ಸಂಗಡ ಕೂಡಿಸಿಕೊಂಡು ಪೆಕಹ್ಯನ ವಿರುದ್ಧ ಒಳಸಂಚುಮಾಡಿ, ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಪೆಕಹ್ಯನನ್ನು ಮತ್ತು ಅರ್ಗೋಬ್, ಅರ್ಯೇ ಎಂಬವರನ್ನು ಕೊಂದುಹಾಕಿದನು. ಅನಂತರ, ಪೆಕಹ್ಯನಿಗೆ ಬದಲಾಗಿ ಪೆಕಹನು ಅರಸನಾದನು. \p \v 26 ಪೆಕಹ್ಯನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \s1 ಇಸ್ರಾಯೇಲರ ಅರಸನಾದ ಪೆಕಹನು \p \v 27 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರುಷದಲ್ಲಿ ರೆಮಲ್ಯನ ಮಗ ಪೆಕಹನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾಗಿ, ಇಪ್ಪತ್ತು ವರ್ಷ ಆಳಿದನು. \v 28 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. \p \v 29 ಇಸ್ರಾಯೇಲಿನ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನು ಬಂದು, ಇಯ್ಯೋನ್, ಆಬೇಲ್ ಬೇತ್ ಮಾಕಾ, ಯಾನೋಹ, ಕೆದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಎಲ್ಲಾ ಭೂಮಿಯನ್ನು ವಶಮಾಡಿಕೊಂಡು, ಜನರನ್ನು ಸೆರೆಯಾಗಿ ಅಸ್ಸೀರಿಯಾ ದೇಶಕ್ಕೆ ಒಯ್ದನು. \v 30 ಇದಲ್ಲದೆ ಏಲನ ಮಗ ಹೋಶೇಯನು ರೆಮಲ್ಯನ ಮಗ ಪೆಕಹನ ವಿರುದ್ಧ ಒಳಸಂಚುಮಾಡಿ, ಇವನನ್ನು ಉಜ್ಜೀಯನ ಮಗ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಸಂಹರಿಸಿ, ಅವನಿಗೆ ಬದಲಾಗಿ ಅರಸನಾದನು. \p \v 31 ಪೆಕಹನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \s1 ಯೆಹೂದ್ಯರ ಅರಸನಾದ ಯೋತಾಮನು \p \v 32 ಇಸ್ರಾಯೇಲಿನ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳಿಕೆಯ ಎರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಉಜ್ಜೀಯನ ಮಗ ಯೋತಾಮನು ಆಳಲು ಆರಂಭಿಸಿದನು. \v 33 ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಅವನ ತಾಯಿ. \v 34 ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. \v 35 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. ಯೋತಾಮನು ಯೆಹೋವ ದೇವರ ಆಲಯದ ಮೇಲಿನ ಬಾಗಿಲನ್ನು ಕಟ್ಟಿಸಿದನು. \p \v 36 ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 37 ಆ ದಿವಸಗಳಲ್ಲಿ ಯೆಹೋವ ದೇವರು ಅರಾಮಿನ ಅರಸನಾದ ರೆಚೀನನನ್ನೂ ರೆಮಲ್ಯನ ಮಗ ಪೆಕಹನನ್ನೂ ಯೆಹೂದದ ವಿರೋಧವಾಗಿ ಕಳುಹಿಸಲು ಆರಂಭಿಸಿದರು. \v 38 ಯೋತಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ಮಗ ಆಹಾಜನು ಅವನಿಗೆ ಬದಲಾಗಿ ಅರಸನಾದನು. \c 16 \s1 ಯೆಹೂದ್ಯರ ಅರಸನಾದ ಆಹಾಜ \p \v 1 ರೆಮಲ್ಯನ ಮಗ ಪೆಕಹನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಯೆಹೂದದ ಅರಸನಾಗಿರುವ ಯೋತಾಮನ ಮಗ ಆಹಾಜನು ಆಳಲು ಆರಂಭಿಸಿದನು. \v 2 ಆಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಆದರೆ ಅವನು ತನ್ನ ತಂದೆಯಾದ ದಾವೀದನ ಹಾಗೆ ನಡೆಯದೆ, ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಲಿಲ್ಲ, \v 3 ಆಹಾಜನು ಇಸ್ರಾಯೇಲಿನ ಅರಸರ ಮಾರ್ಗದಲ್ಲಿ ನಡೆದನು. ಇದಲ್ಲದೆ ಯೆಹೋವ ದೇವರು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಇತರ ಜನಾಂಗಗಳ ಅಸಹ್ಯಕರವಾದ ಆಚಾರಗಳನ್ನು ಅನುಸರಿಸಿ ಅವನು ತನ್ನ ಮಗನನ್ನೇ ಬೆಂಕಿಯಲ್ಲಿ ಯಜ್ಞವಾಗಿ ಅರ್ಪಿಸಿದನು. \v 4 ಇದಲ್ಲದೆ ಅವನು ಪೂಜಾಸ್ಥಳಗಳ ಮೇಲೆಯೂ ಬೆಟ್ಟಗಳ ಮೇಲೆಯೂ ಎಲ್ಲಾ ಹಸಿರಾದ ಮರಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಅರ್ಪಿಸಿದನು. \p \v 5 ಆಗ ಅರಾಮಿನ ಅರಸನಾದ ರೆಚೀನ್, ಮತ್ತು ಇಸ್ರಾಯೇಲರ ಅರಸನೂ ರೆಮಲ್ಯನ ಮಗನೂ ಆದ ಪೆಕಹನು ಯುದ್ಧಮಾಡಲು ಯೆರೂಸಲೇಮಿಗೆ ಬಂದು ಆಹಾಜನನ್ನು ಮುತ್ತಿಗೆ ಹಾಕಿದರು. ಆದರೆ ಅವನನ್ನು ಜಯಿಸುವುದು ಅವರಿಂದ ಆಗಲಿಲ್ಲ. \v 6 ಅದೇ ವೇಳೆಯಲ್ಲಿ ಅರಾಮಿನ ಅರಸನಾದ ರೆಚೀನನು ಏಲತ್ ಪಟ್ಟಣವನ್ನು ಅರಾಮ್ ರಾಜ್ಯಕ್ಕೆ ತಿರುಗಿ ಸೇರಿಸಿಕೊಂಡು ಏಲತ್ ಪಟ್ಟಣದಿಂದ ಯೆಹೂದ್ಯರನ್ನು ಓಡಿಸಿಬಿಟ್ಟನು. ಎದೋಮ್ಯರು ಏಲತ್ ಪಟ್ಟಣದಲ್ಲಿ ಬಂದು ಇಂದಿನವರೆಗೂ ಅಲ್ಲಿ ವಾಸವಾಗಿದ್ದಾರೆ. \p \v 7 ಆಹಾಜನು ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನಿಗೆ, “ನಾನು ನಿನ್ನ ಸೇವಕನೂ, ನಿನ್ನ ಮಗನೂ ಆಗಿದ್ದೇನೆ. ನನಗೆ ವಿರೋಧವಾಗಿ ಎದ್ದ ಅರಾಮಿನ ಅರಸನ ಕೈಗೂ, ಇಸ್ರಾಯೇಲಿನ ಅರಸನ ಕೈಗೂ ನನ್ನನ್ನು ತಪ್ಪಿಸಿ, ರಕ್ಷಿಸುವುದಕ್ಕೆ ಬರಬೇಕು,” ಎಂದು ಹೇಳಿ ಸೇವಕರನ್ನು ಕಳುಹಿಸಿದನು. \v 8 ಆಹಾಜನು ಯೆಹೋವ ದೇವರ ಆಲಯದಲ್ಲಿಯೂ, ಅರಮನೆಯ ಖಜಾನೆಯಲ್ಲಿಯೂ ಇದ್ದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಅಸ್ಸೀರಿಯದ ಅರಸನಿಗೆ ಕಾಣಿಕೆಯಾಗಿ ಕಳುಹಿಸಿದನು. \v 9 ಆಗ ಅಸ್ಸೀರಿಯದ ಅರಸನು ಅವನ ಮಾತು ಕೇಳಿ, ದಮಸ್ಕಕ್ಕೆ ಹೋಗಿ, ಅದನ್ನು ಮುತ್ತಿಗೆ ಹಾಕಿ, ಅದರ ನಿವಾಸಿಗಳನ್ನು ಕೀರ್ ಪ್ರಾಂತಕ್ಕೆ ಸೆರೆಯಾಗಿ ತಂದು, ರೆಚೀನನನ್ನು ಕೊಂದುಹಾಕಿದನು. \p \v 10 ಅರಸನಾದ ಆಹಾಜನು ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನನ್ನು ಎದುರುಗೊಳ್ಳಲು ದಮಸ್ಕಕ್ಕೆ ಹೋಗಿ, ದಮಸ್ಕದಲ್ಲಿ ಒಂದು ಬಲಿಪೀಠವನ್ನು ಕಂಡನು. ಅರಸನಾದ ಆಹಾಜನು ಆ ಬಲಿಪೀಠದ ರೂಪವನ್ನೂ, ಅದರ ಎಲ್ಲಾ ಕೈಕೆಲಸದ ಪ್ರಕಾರ ಮಾದರಿಯನ್ನೂ ಯಾಜಕನಾದ ಊರೀಯನಿಗೆ ಕಳುಹಿಸಿದನು. \v 11 ಯಾಜಕನಾದ ಊರೀಯನು ಅದರ ಪ್ರಕಾರ ಒಂದು ಬಲಿಪೀಠವನ್ನು ಹಾಗೆಯೇ ಅರಸನಾದ ಆಹಾಜನು ದಮಸ್ಕದಿಂದ ಬರುವ ಮೊದಲೇ ಕಟ್ಟಿ ಮುಗಿಸಿದನು. \v 12 ಅರಸನು ದಮಸ್ಕದಿಂದ ಬಂದ ಮೇಲೆ ಬಲಿಪೀಠವನ್ನು ಕಂಡನು. ಅರಸನು ಬಲಿಪೀಠದ ಬಳಿಗೆ ಹೋಗಿ, \v 13 ಬಲಿಪೀಠದ ಮೇಲೆ ದಹನಬಲಿಯನ್ನೂ ತನ್ನ ಧಾನ್ಯ ಸಮರ್ಪಣೆಯನ್ನೂ ಅರ್ಪಿಸಿದನು, ಪಾನಗಳನ್ನು ಹೊಯ್ದನು, ಸಮಾಧಾನದ ಬಲಿಗಳ ರಕ್ತವನ್ನು ಚಿಮುಕಿಸಿದನು. \v 14 ಯೆಹೋವ ದೇವರ ಸಮ್ಮುಖದಲ್ಲಿ ಕಂಚಿನ ಬಲಿಪೀಠವನ್ನು ದೇವಾಲಯದ ಮುಂಭಾಗದಿಂದ ಅಂದರೆ ಯೆಹೋವ ದೇವರ ಆಲಯಕ್ಕೂ, ಬಲಿಪೀಠಕ್ಕೂ ಮಧ್ಯದಿಂದಲೂ ತಂದು, ಅದನ್ನು ಹೊಸ ಬಲಿಪೀಠಕ್ಕೆ ಉತ್ತರ ಕಡೆಯಲ್ಲಿ ಇಟ್ಟನು. \p \v 15 ಆಗ ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ, “ಉದಯದಲ್ಲಿ ದಹನಬಲಿಯನ್ನೂ, ಸಾಯಂಕಾಲದ ಧಾನ್ಯ ಸಮರ್ಪಣೆಯನ್ನೂ, ಪಾನದ್ರವ್ಯವನ್ನೂ ದೊಡ್ಡ ಹೊಸ ಬಲಿಪೀಠದ ಮೇಲೆ ಅರ್ಪಿಸಿ, ದಹನಬಲಿಯ ರಕ್ತವೆಲ್ಲವನ್ನೂ ಚಿಮುಕಿಸಿದನು. ಆದರೆ ಕಂಚಿನ ಬಲಿಪೀಠವನ್ನು ನಾನು ಮಾರ್ಗದರ್ಶನಕ್ಕಾಗಿ ಉಪಯೋಗಿಸುವೆನು,” ಎಂದು ಆಜ್ಞಾಪಿಸಿದನು. \v 16 ಅರಸನಾದ ಆಹಾಜನು ಆಜ್ಞಾಪಿಸಿದ ಪ್ರಕಾರವೇ ಯಾಜಕನಾದ ಊರೀಯನು ಮಾಡಿದನು. \p \v 17 ಅರಸನಾದ ಆಹಾಜನು ಪೀಠದ ಅಂಚುಗಳನ್ನು ಕೊಯ್ದು, ಕಂಚಿನ ಕಡಲೆಂಬ ದೊಡ್ಡ ಪಾತ್ರೆಯನ್ನು ಅದರ ಮೇಲಿನಿಂದ ಇಳಿಸಿ, ಅದನ್ನು ಕಲ್ಲುಗಳ ಕಟ್ಟೆಯ ಮೇಲೆ ಇಟ್ಟನು. \v 18 ಯೆಹೋವ ದೇವರ ಆಲಯದ ಪ್ರಾಕಾರದ ಒಳಗೆ ಸಬ್ಬತ್ ದಿನದ ಆರಾಧನೆಗಾಗಿ, ರಾಜರಿಗಾಗಿ ಕಟ್ಟಲಾಗಿದ್ದ ಮಂಟಪವನ್ನು ಹಾಗು ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದನು, ಇವುಗಳನ್ನೆಲ್ಲ ಅಸ್ಸೀರಿಯದ ಅರಸನ ನಿಮಿತ್ತವಾಗಿ ಆಹಾಜನೇ ಬದಲಾಯಿಸಿದನು. \p \v 19 ಆಹಾಜನ ಆಳ್ವಿಕೆಯಲ್ಲಿಯ ಇತರ ಕ್ರಿಯೆಗಳು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 20 ಆಹಾಜನು ಮೃತನಾಗಿ ತನ್ನ ಪಿತೃಗಳ ಬಳಿಯಲ್ಲಿ ಸೇರಿದನು. ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಹಿಜ್ಕೀಯನು ಅರಸನಾದನು. \c 17 \s1 ಇಸ್ರಾಯೇಲರ ಕೊನೆಯ ಅರಸನಾದ ಹೋಶೇಯನು \p \v 1 ಯೆಹೂದದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಏಲನ ಮಗ ಹೋಶೇಯನು ಇಸ್ರಾಯೇಲಿನ ಮೇಲೆ ಸಮಾರ್ಯದಲ್ಲಿ ಅರಸನಾಗಿ, ಒಂಬತ್ತು ವರ್ಷ ಆಳಿದನು. \v 2 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನಗೆ ಮುಂಚೆ ಇದ್ದ ಇಸ್ರಾಯೇಲಿನ ಅರಸರ ಹಾಗಿರಲಿಲ್ಲ. \p \v 3 ಅಸ್ಸೀರಿಯದ ಅರಸನಾದ ಶಲ್ಮನೆಸೆರನು ಅವನ ವಿರುದ್ಧ ಬಂದದ್ದರಿಂದ, ಹೋಶೇಯನು ಅವನಿಗೆ ಸೇವಕನಾಗಿ ಅವನಿಗೆ ಕಪ್ಪವನ್ನು ಕೊಟ್ಟನು. \v 4 ಆದರೆ ಅಸ್ಸೀರಿಯದ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನೆಂದರೆ, ಹೋಶೇಯನು ಅಸ್ಸೀರಿಯದ ಅರಸನಿಗೆ ವರ್ಷ ವರ್ಷಕ್ಕೂ ಕೊಡುವ ಕಪ್ಪವನ್ನು ಕೊಡದೆ, ಈಜಿಪ್ಟಿನ ಅರಸನಾದ ಸೋ ಎಂಬವನ ಬಳಿಗೆ ದೂತರನ್ನು ಕಳುಹಿಸಿದನು. ಆದ್ದರಿಂದ ಅಸ್ಸೀರಿಯದ ಅರಸನು ಅವನನ್ನು ಕಟ್ಟಿ, ಸೆರೆಮನೆಯಲ್ಲಿ ಬಂಧಿಸಿದನು. \v 5 ಆಗ ಅಸ್ಸೀರಿಯದ ಅರಸನು ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು, ಸಮಾರ್ಯಕ್ಕೆ ವಿರೋಧವಾಗಿ ಬಂದು ಅದನ್ನು ಮೂರು ವರ್ಷಗಳವರೆಗೂ ಮುತ್ತಿಗೆಹಾಕಿದನು. \v 6 ಹೋಶೇಯನ ಒಂಬತ್ತನೆಯ ವರ್ಷದಲ್ಲಿ ಅಸ್ಸೀರಿಯದ ಅರಸನು ಸಮಾರ್ಯವನ್ನು ವಶಪಡಿಸಿಕೊಂಡನು. ಅವನು ಇಸ್ರಾಯೇಲನ್ನು ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಒಯ್ದು ಹಲಹ ಪ್ರಾಂತದಲ್ಲಿಯೂ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತದಲ್ಲಿಯೂ ಮತ್ತು ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು. \s1 ಇಸ್ರಾಯೇಲರ ಪಾಪದ ನಿಮಿತ್ತ ಸೆರೆಯಾಗಿ ಹೋದದ್ದು \p \v 7 ಇಸ್ರಾಯೇಲರನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ತಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದರಿಂದ ಇದೆಲ್ಲವೂ ಆಯಿತು. ಅವರು ಬೇರೆ ದೇವರುಗಳನ್ನು ಆರಾಧಿಸಿದರು. \v 8 ಅವರ ಮುಂದೆ ಯೆಹೋವ ದೇವರು ಓಡಿಸಿಬಿಟ್ಟಿದ್ದ ಜನರ ಮತ್ತು ಇಸ್ರಾಯೇಲ್ ರಾಜರ ದುರಾಚಾರಗಳನ್ನು ಅವರು ಅನುಸರಿಸಿದರು. \v 9 ಇಸ್ರಾಯೇಲರು ರಹಸ್ಯವಾಗಿ ತಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಯುಕ್ತವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲುಗೊಂಡು ಕೋಟೆಯುಳ್ಳ ಪಟ್ಟಣಗಳವರೆಗೂ, ತಮ್ಮ ಸಮಸ್ತ ಪಟ್ಟಣಗಳಲ್ಲಿ ತಮಗೆ ಪೂಜಾಸ್ಥಳಗಳನ್ನು ಕಟ್ಟಿಸಿಕೊಂಡಿದ್ದರು. \v 10 ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ, ಹಸಿರಾದ ಎಲ್ಲಾ ಮರಗಳ ಕೆಳಗೂ ತಮಗೆ ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿದ್ದರು. \v 11 ಯೆಹೋವ ದೇವರು ತಮ್ಮ ಮುಂದೆ ಓಡಿಸಿಬಿಟ್ಟ ಇತರ ಜನರಂತೆ ಅವರು ಎಲ್ಲಾ ಪೂಜಾಸ್ಥಳಗಳಲ್ಲಿ ಧೂಪವನ್ನು ಸುಟ್ಟು ಯೆಹೋವ ದೇವರನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು. \v 12 “ನೀವು ಈ ಕಾರ್ಯವನ್ನು ಮಾಡಬೇಡಿರಿ,”\f + \fr 17:12 \fr*\ft \+xt ವಿಮೋ 20:4,5\+xt*\ft*\f* ಎಂದು ಯೆಹೋವ ದೇವರು ಅವರಿಗೆ ಹೇಳಿದ್ದರೂ, ಅವರು ಮೂರ್ತಿಗಳಿಗೆ ಪೂಜೆ ಮಾಡಿದರು. \v 13 “ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ, ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ಮೋಶೆಯ ಎಲ್ಲಾ ನಿಯಮದ ಪ್ರಕಾರ ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ಕೈಗೊಳ್ಳಿರಿ,” ಎಂದು ಯೆಹೋವ ದೇವರು ಸಮಸ್ತ ಪ್ರವಾದಿಗಳ ಮುಖಾಂತರವಾಗಿಯೂ, ಸಮಸ್ತ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ, ಯೆಹೂದಕ್ಕೂ ಎಚ್ಚರಿಕೆ ಕೊಟ್ಟಿದ್ದರು. \p \v 14 ಆದರೆ ಅವರು ಕೇಳದೆ ತಮ್ಮ ದೇವರಾದ ಯೆಹೋವ ದೇವರಲ್ಲಿ ನಂಬಿಕೆ ಇಡದೆ ತಮ್ಮ ಪಿತೃಗಳಂತೆ ದೇವರ ಆಜ್ಞೆಗಳಿಗೆ ಮಣಿಯದೆ, \v 15 ದೇವರ ಕಟ್ಟಳೆಗಳನ್ನೂ, ದೇವರು ತಮ್ಮ ಪಿತೃಗಳ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಅವರಿಗೆ ಹೇಳಿದ ಎಚ್ಚರಿಕೆಯನ್ನೂ ತಿರಸ್ಕರಿಸಿದರು. ಅವರು ವ್ಯರ್ಥವಾದ ವಿಗ್ರಹಗಳನ್ನು ಹಿಂಬಾಲಿಸಿ, ನಿಷ್ಪ್ರಯೋಜಕರಾದರು. “ನೀವು ಅವರ ಹಾಗೆ ಮಾಡಬೇಡಿರಿ,” ಎಂದು ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ್ದರೂ, ಅವರು ತಮ್ಮ ಸುತ್ತಲಿನ ಜನರನ್ನೇ ಅನುಸರಿಸಿದರು. \p \v 16 ಇದಲ್ಲದೆ ಅವರು ತಮ್ಮ ದೇವರಾದ ಯೆಹೋವ ದೇವರ ಸಮಸ್ತ ಆಜ್ಞೆಗಳನ್ನು ಬಿಟ್ಟುಬಿಟ್ಟು, ತಮಗೆ ತಾವೇ ಎರಡು ಎರಕದ ಕರುಗಳ ಮೂರ್ತಿಗಳನ್ನು ಮಾಡಿಕೊಂಡರು. ಅವರು ಅಶೇರ ಸ್ತಂಭವನ್ನು ನಿಲ್ಲಿಸಿ, ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು, ಬಾಳನನ್ನು ಸೇವಿಸಿ ತಮ್ಮ ಪುತ್ರಪುತ್ರಿಯರನ್ನೂ ಬೆಂಕಿಯಲ್ಲಿ ಬಲಿಕೊಟ್ಟರು. \v 17 ಕಣಿಗಳನ್ನೂ, ಶಕುನಗಳನ್ನೂ ಬಳಸಿ, ಯೆಹೋವ ದೇವರಿಗೆ ಕೋಪ ಬರುವಂತೆ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು. \p \v 18 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಬಹುಕೋಪಗೊಂಡು, ಅವರನ್ನು ತಮ್ಮ ಸಮ್ಮುಖದಿಂದ ತೆಗೆದುಹಾಕಿದರು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿಯಲಿಲ್ಲ. \v 19 ಯೆಹೂದದವರು ಸಹ ತಮ್ಮ ಯೆಹೋವ ದೇವರ ಆಜ್ಞೆಗಳನ್ನು ಕೈಕೊಳ್ಳದೆ, ಇಸ್ರಾಯೇಲರ ಪದ್ಧತಿಗಳಲ್ಲಿಯೇ ನಡೆದರು. \v 20 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಸಂತತಿಯನ್ನೆಲ್ಲಾ ಅಲಕ್ಷ್ಯಮಾಡಿ, ಅವರನ್ನು ಕುಂದಿಸಿ, ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಡುವವರೆಗೆ ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟರು. \p \v 21 ದೇವರು ಇಸ್ರಾಯೇಲನ್ನು ದಾವೀದನ ಸಂತಾನದಿಂದ ವಿಭಾಗಿಸಿದಾಗ, ಅವರು ನೆಬಾಟನ ಮಗ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲನ್ನು ಯೆಹೋವ ದೇವರ ಮಾರ್ಗದಿಂದ ತಪ್ಪಿಸಿ, ಮಹಾ ಪಾಪಮಾಡಲು ಪ್ರೇರೇಪಿಸಿದನು. \v 22 ಇಸ್ರಾಯೇಲರು ಯಾರೊಬ್ಬಾಮನು ಮಾಡಿದ ಸಮಸ್ತ ಪಾಪಗಳಲ್ಲಿ ನಡೆದರು. ಅವುಗಳನ್ನು ತೊರೆದುಬಿಡಲಿಲ್ಲ. \v 23 ಯೆಹೋವ ದೇವರು ಪ್ರವಾದಿಗಳಾದ ತಮ್ಮ ಸೇವಕರ ಮುಖಾಂತರ ಎಚ್ಚರಿಸಿದ ಹಾಗೆ, ಇಸ್ರಾಯೇಲನ್ನು ದೇವರು ತಮ್ಮ ಸಮ್ಮುಖದಿಂದ ತೆಗೆದುಹಾಕಿದರು. ಹೀಗೆ ಇಸ್ರಾಯೇಲರು ಬಹು ಕಾಲದವರೆಗೂ ತಮ್ಮ ದೇಶದಿಂದ ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಇರಬೇಕಾಯಿತು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ. \s1 ಸಮಾರ್ಯ ಪುನಃ ಸ್ಥಾಪಿತವಾದದ್ದು \p \v 24 ಅಸ್ಸೀರಿಯದ ಅರಸನು ಬಾಬಿಲೋನ್, ಕೂತಾ, ಅವ್ವಾ, ಹಮಾತ್, ಸೆಫರ್ವಯಿಮ್ ಊರುಗಳ ಜನರನ್ನು ಬರಮಾಡಿ, ಅವರನ್ನು ಇಸ್ರಾಯೇಲರಿಗೆ ಬದಲಾಗಿ ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದನು. ಅವರು ಸಮಾರ್ಯವನ್ನು ಸ್ವತಂತ್ರಿಸಿಕೊಂಡು, ಅದರ ಪಟ್ಟಣಗಳಲ್ಲಿ ವಾಸಿಸಿದರು. \v 25 ಆದರೆ ಅವರು ಅಲ್ಲಿ ವಾಸಿಸಲು ಆರಂಭಿಸಿದಾಗ, ಯೆಹೋವ ದೇವರಿಗೆ ಭಯಪಡದ ಕಾರಣ, ಯೆಹೋವ ದೇವರು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದರು. ಅವು ಅವರಲ್ಲಿ ಕೆಲವರನ್ನು ಕೊಂದುಹಾಕಿದವು. \v 26 ಆದಕಾರಣ ಸೇವಕರು ಅಸ್ಸೀರಿಯದ ಅರಸನಿಗೆ, “ನೀನು ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಜನರು ಆ ದೇಶದ ದೇವರು ಅಪೇಕ್ಷಿಸುವುದನ್ನು ತಿಳಿಯದೆ ಇದ್ದಾರೆ. ಆದುದರಿಂದ, ದೇವರು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದ್ದಾರೆ. ಅವು ಅವರನ್ನು ಕೊಂದುಹಾಕುತ್ತವೆ,” ಎಂದು ತಿಳಿಸಿದರು. \p \v 27 ಆಗ ಅಸ್ಸೀರಿಯದ ಅರಸನು, “ನೀವು ಅಲ್ಲಿಂದ ತೆಗೆದುಕೊಂಡು ಬಂದ ಯಾಜಕರಲ್ಲಿ ಒಬ್ಬನನ್ನು ಅಲ್ಲಿಗೆ ಕರೆದುಕೊಂಡು ಹೋಗಿರಿ. ಅವನು ಅಲ್ಲಿ ವಾಸವಾಗಿರಲಿ. ಅವನೇ ಅವರಿಗೆ ಆ ದೇಶದ ದೇವರು ಅಪೇಕ್ಷಿಸುವುದನ್ನು ಬೋಧಿಸಲಿ,” ಎಂದು ಆಜ್ಞಾಪಿಸಿದನು. \v 28 ಆಗ ಅವರು ಸಮಾರ್ಯದಿಂದ ಕರೆತಂದ ಯಾಜಕರಲ್ಲಿ, ಒಬ್ಬನು ಬಂದು ಬೇತೇಲಿನಲ್ಲಿ ವಾಸವಾಗಿದ್ದು, ಅವರು ಯೆಹೋವ ದೇವರಿಗೆ ಭಯಪಡತಕ್ಕ ವಿಧವನ್ನು ಅವರಿಗೆ ಬೋಧಿಸಿದನು. \p \v 29 ಆದರೆ ಪ್ರತಿ ಜನಾಂಗದವರೂ, ತಾವು ವಾಸಿಸಿದ ಪಟ್ಟಣಗಳಲ್ಲಿ ತಮಗೆ ದೇವರುಗಳನ್ನು ಮಾಡಿ, ಸಮಾರ್ಯದವರು ಮಾಡಿದ ಪೂಜಾಸ್ಥಳಗಳ ಮಂದಿರಗಳಲ್ಲಿ ಅವುಗಳನ್ನು ಇರಿಸಿದರು. \v 30 ಬಾಬಿಲೋನಿನ ಜನರು ಸುಕ್ಕೋತ್ ಬೆನೋತ್ ವಿಗ್ರಹವನ್ನು ಮಾಡಿದರು; ಕೂತವಿನ ಜನರು ನೇರ್ಗಲ್ ವಿಗ್ರಹವನ್ನು ಮಾಡಿಕೊಂಡರು; ಹಮಾತಿನ ಜನರು ಅಷೀಮಾವನ್ನು ಮಾಡಿಕೊಂಡರು; \v 31 ಅವ್ವೀಯರು ನಿಭಜ್, ತರ್ತಕ್ ಎಂಬ ದೇವತೆಗಳನ್ನು ಮಾಡಿದರು. ಸೆಫರ್ವಯಿಮಿನವರು ತಮ್ಮ ಕುಲದೇವತೆಗಳಾದ ಅದ್ರಮ್ಮೆಲೆಕ್, ಅನಮ್ಮೇಲೆಕ್ ಎಂಬುವುಗಳಿಗಾಗಿ ತಮ್ಮ ಮಕ್ಕಳನ್ನು ಅಗ್ನಿಬಲಿ ಕೊಡುತ್ತಿದ್ದರು. \v 32 ಅವರು ಯೆಹೋವ ದೇವರಿಗೆ ಆರಾಧನೆ ಸಲ್ಲಿಸಿದರು. ಆದರೂ ತಮ್ಮಲ್ಲಿರುವ ಪೂಜಾಸ್ಥಳಗಳ ಯಾಜಕರನ್ನು ನೇಮಿಸಿಕೊಂಡರು. ಇವರು ಪೂಜಾಸ್ಥಳಗಳ ಮೇಲಿರುವ ಮಂದಿರಗಳಲ್ಲಿ ಅವರಿಗೋಸ್ಕರ ಬಲಿಗಳನ್ನು ಅರ್ಪಿಸುತ್ತಾ ಇದ್ದರು. \v 33 ಅವರು ಯೆಹೋವ ದೇವರಿಗೆ ಆರಾಧನೆ ಮಾಡಿದರು. ಆದರೂ ಅವರು ಬಿಟ್ಟುಬಂದ ದೇಶಗಳ ಪದ್ಧತಿಯ ಪ್ರಕಾರ ತಮ್ಮ ಕುಲದೇವತೆಗಳನ್ನು ಸಹ ಸೇವಿಸಿದರು. \p \v 34 ಈ ದಿವಸದವರೆಗೂ ಅವರು ತಮ್ಮ ಪೂರ್ವದ ಪದ್ಧತಿಯ ಪ್ರಕಾರ ಮಾಡುತ್ತಾರೆ. ಅವರು ಯೆಹೋವ ದೇವರಿಗೆ ಭಯಪಡದೆ, ತಮ್ಮ ಕಟ್ಟಳೆಗಳ ಪ್ರಕಾರವಾಗಿಯೂ, ತಮ್ಮ ನೀತಿಗಳ ಪ್ರಕಾರವಾಗಿಯೂ, ನಿಯಮದ ಪ್ರಕಾರವಾಗಿಯೂ ಯೆಹೋವ ದೇವರು ಇಸ್ರಾಯೇಲೆಂದು ಹೆಸರಿಟ್ಟ ಯಾಕೋಬನ ಮಕ್ಕಳಿಗೆ ಆಜ್ಞಾಪಿಸಿದ ಆಜ್ಞೆಯ ಪ್ರಕಾರವಾಗಿಯೂ ಮಾಡದೆ ಇದ್ದಾರೆ. \v 35 ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿ ಅವರಿಗೆ ಆಜ್ಞಾಪಿಸಿ, “ನೀವು ಇತರ ದೇವರುಗಳಿಗೆ ಭಯಪಡದೆ ಅವುಗಳಿಗೆ ಅಡ್ಡಬೀಳದೆ, ಅವುಗಳನ್ನು ಸೇವಿಸದೆ, ಅವುಗಳಿಗೆ ಬಲಿಯನ್ನು ಅರ್ಪಿಸದೆ ಇರಬೇಕು. \v 36 ಆದರೆ ಮಹಾಶಕ್ತಿಯಿಂದಲೂ, ಚಾಚಿದ ಭುಜಪರಾಕ್ರಮದಿಂದಲೂ ಈಜಿಪ್ಟ್ ದೇಶದಿಂದ ನಿಮ್ಮನ್ನು ಬರಮಾಡಿದ ಯೆಹೋವ ದೇವರಿಗೆ ನೀವು ಭಯಪಟ್ಟು, ಅವರೊಬ್ಬರಿಗೇ ಅಡ್ಡಬಿದ್ದು, ಬಲಿ ಅರ್ಪಿಸಿರಿ. \v 37 ಇದಲ್ಲದೆ ದೇವರು ನಿಮಗೆ ಬರೆದುಕೊಟ್ಟ ಕಟ್ಟಳೆಗಳನ್ನೂ, ನೀತಿಗಳನ್ನೂ, ನಿಯಮವನ್ನೂ, ಆಜ್ಞೆಯನ್ನೂ ನೀವು ನಿರಂತರವಾಗಿ ಕೈಗೊಳ್ಳಲು ಎಚ್ಚರಿಕೆಯಾಗಿರಬೇಕು. ಇತರ ದೇವರುಗಳಿಗೆ ಭಯಪಡಬೇಡಿರಿ. \v 38 ನಾನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ನೀವು ಮರೆಯದೆ, ಇತರ ದೇವರುಗಳಿಗೆ ಭಯಪಡದೆ, \v 39 ನಿಮ್ಮ ದೇವರಾಗಿರುವ ಯೆಹೋವ ದೇವರಿಗೆ ಭಯಪಡಿರಿ. ಆಗ ಅವರು ನಿಮ್ಮನ್ನು ನಿಮ್ಮ ಶತ್ರುಗಳ ಕೈಯೊಳಗಿಂದ ವಿಮೋಚನೆ ಮಾಡುವರು,” ಎಂದು ಹೇಳಿದ್ದರು. \p \v 40 ಆದರೆ ಜನರು ಕೇಳದೆ ತಮ್ಮ ಪೂರ್ವದ ಪದ್ಧತಿಯ ಹಾಗೆ ಮಾಡಿದರು. \v 41 ಇವರು ಯೆಹೋವ ದೇವರಿಗೆ ಇಂದಿನವರೆಗೂ ಭಯಪಡದೆ, ತಮ್ಮ ಕೆತ್ತಿದ ವಿಗ್ರಹಗಳನ್ನು ಸೇವಿಸಿದರು. ಇವರ ಪಿತೃಗಳು ಮಾಡಿದ ಹಾಗೆ, ಇವರೂ, ಇವರ ಮಕ್ಕಳೂ, ಇವರ ಮೊಮ್ಮಕ್ಕಳೂ ಮಾಡುತ್ತಿದ್ದಾರೆ. \c 18 \s1 ಯೆಹೂದ್ಯರ ಅರಸನಾದ ಹಿಜ್ಕೀಯ \p \v 1 ಇಸ್ರಾಯೇಲಿನ ಅರಸನಾಗಿರುವ ಏಲನ ಮಗ ಹೋಶೇಯನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದದ ಅರಸನಾಗಿದ್ದ ಆಹಾಜನ ಮಗ ಹಿಜ್ಕೀಯನು ಆಳಲು ಆರಂಭಿಸಿದನು. \v 2 ಅವನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಅಬೀಯಾ\f + \fr 18:2 \fr*\fq ಅಬೀಯಾ \fq*\ft ಹೀಬ್ರೂ ಭಾಷೆಯಲ್ಲಿ \ft*\fqa ಅಬೀ\fqa*\f*. ಅವಳು ಜೆಕರ್ಯನ ಮಗಳಾಗಿದ್ದಳು. \v 3 ಹಿಜ್ಕೀಯನು ತನ್ನ ತಂದೆ ದಾವೀದನು ಮಾಡಿದ ಪ್ರಕಾರ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. \v 4 ಹಿಜ್ಕೀಯನು ಉನ್ನತ ಪೂಜಾಸ್ಥಳಗಳನ್ನು ತೆಗೆದುಹಾಕಿ, ವಿಗ್ರಹಗಳನ್ನು ಒಡೆದುಬಿಟ್ಟು, ಅಶೇರ ಸ್ತಂಭಗಳನ್ನು ಕಡಿದುಹಾಕಿದನು. ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಮುರಿದುಬಿಟ್ಟನು. ಏಕೆಂದರೆ ಆ ದಿವಸಗಳವರೆಗೂ ಇಸ್ರಾಯೇಲರು ಅದಕ್ಕೆ ಧೂಪ ಸುಡುತ್ತಿದ್ದರು. ಅದನ್ನು ನೆಹುಷ್ಟಾನ್ ಎಂದು ಕರೆಯುತ್ತಿದ್ದರು. \p \v 5 ಹಿಜ್ಕೀಯನು ಇಸ್ರಾಯೇಲಿನ ಯೆಹೋವ ದೇವರಲ್ಲಿ ಭರವಸೆವುಳ್ಳವನಾಗಿದ್ದನು. ಅವನಿಗೆ ಮುಂಚೆ ಇದ್ದವರಲ್ಲಿಯೂ, ಅವನ ತರುವಾಯ ಯೆಹೂದದ ಸಮಸ್ತ ಅರಸುಗಳಲ್ಲಿಯೂ ಅವನ ಹಾಗೆ ಒಬ್ಬರೂ ಇರಲಿಲ್ಲ. \v 6 ಅವನು ಯೆಹೋವ ದೇವರನ್ನು ಹಿಂಬಾಲಿಸುವುದನ್ನು ಬಿಟ್ಟುಬಿಡದೆ, ದೇವರನ್ನೇ ಆತುಕೊಂಡು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಆಜ್ಞೆಗಳನ್ನು ಕೈಗೊಂಡನು. \v 7 ಯೆಹೋವ ದೇವರು ಅವನ ಸಂಗಡ ಇದ್ದರು. ಹಿಜ್ಕೀಯನು ಯಾವ ಕಡೆಗೆ ಹೋದರೂ ಅವನಿಗೆ ಸಫಲವಾಯಿತು. ಅವನು ಅಸ್ಸೀರಿಯದ ಅರಸನನ್ನು ಸೇವಿಸದೆ, ಅವನ ಮೇಲೆ ತಿರುಗಿಬಿದ್ದನು. \v 8 ಅವರು ಕಾವಲು ಗೋಪುರದಿಂದ ಕೋಟೆಯುಳ್ಳ ಪಟ್ಟಣಗಳವರೆಗೂ ಫಿಲಿಷ್ಟಿಯರನ್ನು ಗಾಜಪ್ರಾಂತ್ಯದವರೆಗೆ ಸಂಹರಿಸಿದನು. \p \v 9 ಇಸ್ರಾಯೇಲಿನ ಅರಸನಾದ ಏಲನ ಮಗ ಹೋಶೇಯನ ಆಳ್ವಿಕೆಯ ಏಳನೆಯ ವರ್ಷ, ಹಿಜ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಶಲ್ಮನೆಸೆರನು ಸಮಾರ್ಯಕ್ಕೆ ವಿರೋಧವಾಗಿ ಬಂದು ಅದಕ್ಕೆ ಮುತ್ತಿಗೆಹಾಕಿದನು. \v 10 ಮೂರು ವರ್ಷದ ತರುವಾಯ ಸಮಾರ್ಯವನ್ನು ಅಸ್ಸೀರಿಯದವರು ಸ್ವಾಧೀನಮಾಡಿಕೊಂಡರು. ಇಸ್ರಾಯೇಲಿನ ಅರಸನಾದ ಹೋಶೇಯನ ಒಂಬತ್ತನೆಯ ವರ್ಷವಾದ, ಹಿಜ್ಕೀಯನ ಆರನೆಯ ವರ್ಷದಲ್ಲಿ ಸಮಾರ್ಯವು ಸ್ವಾಧೀನವಾಯಿತು. \v 11 ಅಸ್ಸೀರಿಯದ ಅರಸನು ಇಸ್ರಾಯೇಲರನ್ನು ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಒಯ್ದು ಹಲಹ ಪ್ರಾಂತದಲ್ಲಿಯೂ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತದಲ್ಲಿಯೂ ಮತ್ತು ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು. \v 12 ಏಕೆಂದರೆ ಅವರು ತಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ಅವರ ಒಡಂಬಡಿಕೆಯನ್ನೂ, ಯೆಹೋವ ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದ್ದ ಸಮಸ್ತವನ್ನೂ ಮೀರಿದರು. ಅವರು ದೇವರ ಆಜ್ಞೆಗಳಿಗೆ ಕಿವಿಗೊಡಲಿಲ್ಲ, ಅವುಗಳಂತೆ ನಡೆಯಲಿಲ್ಲ. \p \v 13 ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು. \v 14 ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಸ್ಸೀರಿಯದ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಬಿಟ್ಟು ಹಿಂದಿರುಗಿ ಹೋಗು. ನೀನು ನನ್ನ ಮೇಲೆ ವಿಧಿಸುವುದನ್ನು ನಾನು ಕೊಡುತ್ತೇನೆ,” ಎಂದು ಹೇಳಿ ಕಳುಹಿಸಿದನು. ಆಗ ಅಸ್ಸೀರಿಯದ ಅರಸನು ಯೆಹೂದದ ಅರಸನಾದ ಹಿಜ್ಕೀಯನು ಹತ್ತು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನೂ, ಒಂದು ಸಾವಿರ ಕಿಲೋಗ್ರಾಂ ಬಂಗಾರವನ್ನೂ ಕೊಡಬೇಕೆಂದು ನೇಮಕಮಾಡಿದನು. \v 15 ಆದ್ದರಿಂದ ಹಿಜ್ಕೀಯನು ಯೆಹೋವ ದೇವರ ಆಲಯದಲ್ಲಿಯೂ, ಅರಸನ ಮನೆಯ ಬೊಕ್ಕಸಗಳಲ್ಲಿಯೂ, ಸಿಕ್ಕಿದ ಸಮಸ್ತ ಬೆಳ್ಳಿಯನ್ನೂ ಕೊಟ್ಟನು. \p \v 16 ಈ ಸಮಯದಲ್ಲಿ ಯೆಹೂದದ ಅರಸನಾದ ಹಿಜ್ಕೀಯನು, ಯೆಹೋವ ದೇವರ ಮಂದಿರದ ಕದಗಳ ಮೇಲೆಯೂ, ಸ್ತಂಭಗಳ ಮೇಲೆಯೂ ತಾನು ಹೊದಿಸಿದ್ದ ಬಂಗಾರವನ್ನೂ ಕತ್ತರಿಸಿ, ಅಸ್ಸೀರಿಯದ ಅರಸನಿಗೆ ಕೊಟ್ಟನು. \s1 ಸನ್ಹೇರೀಬನು ಯೆರೂಸಲೇಮನ್ನು ಹೆದರಿಸಿದ್ದು \p \v 17 ಅಸ್ಸೀರಿಯದ ಅರಸನು ತನ್ನ ಅತಿ ಪ್ರಮುಖ ಅಧಿಕಾರಿಯನ್ನೂ, ಮುಖ್ಯ ನಾಯಕರನ್ನೂ, ಸೈನ್ಯಾಧಿಕಾರಿಯನ್ನೂ ಲಾಕೀಷಿನಿಂದ ದೊಡ್ಡ ಸೈನ್ಯದೊಂದಿಗೆ ರಬ್ಷಾಕೆ ಎಂಬವನನ್ನೂ ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅಗಸರ ಹೊಲದ ಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಸಮೀಪದಲ್ಲಿ ನಿಂತುಕೊಂಡರು. \v 18 ಅವರು ಅರಸನನ್ನು ಕರೆಕಳುಹಿಸಿದರು. ಅರಮನೆಯ ಕಾರ್ಯನಿರ್ವಾಹಕನಾದ ಹಿಲ್ಕೀಯನ ಮಗ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬುವರು ಅವರ ಬಳಿಗೆ ಬಂದರು. \p \v 19 ರಬ್ಷಾಕೆಯು ಅವರಿಗೆ, “ನೀವು ಹಿಜ್ಕೀಯನಿಗೆ ಹೀಗೆ ಹೇಳಬೇಕು: \pm “ ‘ಮಹಾರಾಜನಾದ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ಈ ನಿನ್ನ ಭರವಸೆಗೆ ಆಧಾರ ಏನು? \v 20 ಯುದ್ಧಕ್ಕೆ ಬೇಕಾದ ಆಲೋಚನೆಯೂ, ಪರಾಕ್ರಮವೂ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದೀಯೆ? \v 21 ಇಗೋ, ನೀನು ಜಜ್ಜಿದ ದಂಟಿಗೆ ಸಮಾನವಾಗಿರುವ ಈಜಿಪ್ಟಿನ ಮೇಲೆ ಭರವಸೆ ಇಟ್ಟಿರುವಿಯಷ್ಟೆ, ಅದರ ಮೇಲೆ ಮನುಷ್ಯನು ಊರಿಕೊಂಡರೆ ಅದು ಅವನ ಕೈಯನ್ನೇ ಚುಚ್ಚಿ ಗಾಯ ಮಾಡುವುದು! ಈಜಿಪ್ಟಿನ ಅರಸನಾದ ಫರೋಹನಲ್ಲಿ ಭರವಸೆ ಇಟ್ಟವರೆಲ್ಲರಿಗೂ ಇದೇ ಗತಿಯಾಗುವದು. \v 22 ಬಹುಶಃ ನೀವು, “ನಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿದ್ದೇವೆ,” ಎಂದು ಹೇಳಬಹುದು. “ಯೆರೂಸಲೇಮಿನ ಬಲಿಪೀಠದ ಮುಂದೆಯೇ ಆರಾಧನೆ ಮಾಡಬೇಕು,” ಎಂದು ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ ಹಿಜ್ಕೀಯನು ಆಜ್ಞಾಪಿಸಿ, ಆ ಯೆಹೋವ ದೇವರ ಪೂಜಾಸ್ಥಳಗಳನ್ನೂ, ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೇ? \pm \v 23 “ ‘ಹಾಗಾದರೆ ಈಗ ನೀನು ಅಸ್ಸೀರಿಯದ ಅರಸನಾದ ನನ್ನ ಯಜಮಾನನೊಂದಿಗೆ ಒಪ್ಪಂದ ಮಾಡಿಕೋ, ಆಗ ನಿನಗೆ ಎರಡು ಸಾವಿರ ಕುದುರೆಸವಾರರನ್ನು ಬಳಸಲು ಸಾಮರ್ಥ್ಯವಿದ್ದರೆ ನಾನು ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ. \v 24 ಇದಾಗದಿದ್ದರೆ ನನ್ನ ಯಜಮಾನನ ಸೇವಕರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯನ್ನು ಹೇಗೆ ಎದುರಿಸುತ್ತೀ? ನೀನು ರಥಗಳಿಗೋಸ್ಕರವೂ, ರಾಹುತರಿಗೋಸ್ಕರವೂ ಈಜಿಪ್ಟಿನ ಮೇಲೆ ಭರವಸೆ ಇಟ್ಟಿದ್ದೀಯೋ? \v 25 ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’ ” ಎಂದನು. \p \v 26 ಆಗ ಹಿಲ್ಕೀಯನ ಮಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವರು ರಬ್ಷಾಕೆಗೆ, “ನೀನು ಮಾತನಾಡುವುದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ ಆದ್ದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು: ಅದು ನಮಗೆ ತಿಳಿಯುತ್ತದೆ ಆದರೆ ಹಿಬ್ರಿಯ ಭಾಷೆಯಲ್ಲಿ ಮಾತನಾಡಬೇಡ,” ಎಂದು ಹೇಳಿದರು. \p \v 27 ಆದರೆ ರಬ್ಷಾಕೆಯು ಅವರಿಗೆ, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಯಜಮಾನನ ಸಂಗಡವಾಗಲಿ ಮಾತ್ರ ಈ ಮಾತುಗಳನ್ನು ಹೇಳುವುದಕ್ಕೆ ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಿಮ್ಮ ಸಂಗಡ ಇದ್ದರೆ ನಿಮ್ಮ ಹಾಗೆ ಇವರೂ ಸಹ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ,” ಎಂದು ಹೇಳಿದನು. \p \v 28 ಆಗ ರಬ್ಷಾಕೆ ನಿಂತುಕೊಂಡು ಯೆಹೂದ್ಯರ ಭಾಷೆಯಾದ ಹಿಬ್ರಿಯದಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನೆಂದರೆ, “ನೀವು ಅಸ್ಸೀರಿಯದ ಮಹಾರಾಜನ ಮಾತನ್ನು ಕೇಳಿರಿ. \v 29 ಅರಸನು ಹೇಳುವುದೇನೆಂದರೆ: ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿರಿ. ಏಕೆಂದರೆ ಅವನು ನನ್ನ ಕೈಯಿಂದ ನಿಮ್ಮನ್ನು ಬಿಡಿಸಲು ಶಕ್ತನಲ್ಲ. \v 30 ಇದಲ್ಲದೆ, ‘ಯೆಹೋವ ದೇವರು ನಮ್ಮನ್ನು ನಿಶ್ಚಯವಾಗಿ ರಕ್ಷಿಸುವರು, ಈ ಪಟ್ಟಣವು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ, ಹಿಜ್ಕೀಯನು ನಿಮಗೆ ಯೆಹೋವ ದೇವರಲ್ಲಿ ಭರವಸೆ ಇಡುವಂತೆ ಮಾಡುವನು. \p \v 31 “ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ: ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು. \v 32 ಸ್ವಲ್ಪ ಕಾಲವಾದ ನಂತರ ನಾನು ಬಂದು, ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಎಣ್ಣೆಮರಗಳು, ಜೇನು ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು. ಜೀವವನ್ನು ಆಯ್ದುಕೊಳ್ಳಿರಿ, ಮರಣವನ್ನಲ್ಲ. \p “ ‘ಯೆಹೋವ ದೇವರು ನಮ್ಮನ್ನು ರಕ್ಷಿಸುವರು,’ ಎಂದು ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸಿ ತಪ್ಪು ಮಾರ್ಗದಲ್ಲಿ ನಡೆಸುವಾಗ, ಅವನ ಮಾತನ್ನು ಕೇಳಬೇಡಿರಿ. \v 33 ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಸ್ಸೀರಿಯದ ಅರಸನ ಕೈಯಿಂದ ಬಿಡಿಸಿದ್ದು ಉಂಟೋ? \v 34 ಹಮಾತ್, ಅರ್ಪಾದ್ ದೇವರುಗಳು ಎಲ್ಲಿ? ಸೆಫರ್ವಯಿಮ್, ಹೇನ, ಇವ್ವಗಳ ದೇವರುಗಳು ಎಲ್ಲಿ? ಅವರು ಸಮಾರ್ಯವನ್ನು ನನ್ನ ಕೈಯಿಂದ ಬಿಡಿಸಿಕೊಂಡರೋ? \v 35 ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು. \p \v 36 ಆದರೆ ಜನರು ಅವನಿಗೆ ಪ್ರತ್ಯುತ್ತರ ಕೊಡದೆ ಸುಮ್ಮನಿದ್ದರು. ಏಕೆಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು. \p \v 37 ಆಗ ಅರಮನೆಯ ಮೇಲ್ವಿಚಾರಕನಾದ ಹಿಲ್ಕೀಯನ ಮಗ ಎಲ್ಯಾಕೀಮನೂ, ಕಾರ್ಯದರ್ಶಿಯಾದ ಶೆಬ್ನನೂ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬವನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಸೈನ್ಯಾಧಿಕಾರಿಯಾದ ರಬ್ಷಾಕೆ ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು. \c 19 \s1 ಯೆರೂಸಲೇಮಿನ ಬಿಡುಗಡೆ ಮುಂತಿಳಿಸಿದ್ದು \p \v 1 ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ, ತನ್ನ ಬಟ್ಟೆಗಳನ್ನು ಹರಿದುಕೊಂಡು, ಗೋಣಿ ತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು, ಯೆಹೋವ ದೇವರ ಆಲಯಕ್ಕೆ ಹೋದನು. \v 2 ಇದಲ್ಲದೆ ಅವನು ಅರಮನೆಯ ಮೇಲ್ವಿಚಾರಕನಾಗಿದ್ದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಹಿರಿಯ ಯಾಜಕರು ಇವರನ್ನು ಕರೆಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನಾದ ಪ್ರವಾದಿ ಯೆಶಾಯನ ಬಳಿಗೆ ಹೋಗಿರಿ,” ಎಂದು ಹೇಳಿ ಕಳುಹಿಸಿದನು. \v 3 ಆಗ ಅವರು ಯೆಶಾಯನಿಗೆ, “ಹಿಜ್ಕೀಯನು ಹೇಳುವುದೇನೆಂದರೆ: ‘ಈ ದಿವಸವು ಕಷ್ಟಕರವಾಗಿಯೂ ಗದರಿಕೆಯಾಗಿಯೂ ಅವಮಾನಕರವಾಗಿಯೂ ಇದೆ. ಏಕೆಂದರೆ ಹೆರಿಗೆಯ ಸಮಯವು ಬಂದಿದೆ ಆದರೆ ಹೆರುವುದಕ್ಕೆ ಶಕ್ತಿಯಿಲ್ಲ. \v 4 ಜೀವಿಸುವ ದೇವರನ್ನು ನಿಂದಿಸಲು ಅಸ್ಸೀರಿಯದ ಅರಸನಿಂದ ಕಳುಹಿಸಲಾಗಿದ್ದ ಸೈನ್ಯಾಧಿಕಾರಿಯ ನಿಂದೆಯ ಮಾತುಗಳನ್ನು ನಿನ್ನ ದೇವರಾದ ಯೆಹೋವ ದೇವರು ಕೇಳಿದ್ದಾರೆ. ನಿನ್ನ ದೇವರಾದ ಯೆಹೋವ ದೇವರು ಅವನ ಮಾತುಗಳಿಗೋಸ್ಕರ ಅವನನ್ನು ಗದರಿಸುವರು. ಆದ್ದರಿಂದ ನೀನು ಉಳಿದಿರುವ ಜನರಿಗಾಗಿ ಅವರನ್ನು ಪ್ರಾರ್ಥಿಸು,’ ” ಎಂದರು. \p \v 5 ಅರಸನಾದ ಹಿಜ್ಕೀಯನ ಸೇವಕರು ಯೆಶಾಯನ ಬಳಿಗೆ ಬಂದು ಹೇಳಿದಾಗ, \v 6 ಯೆಶಾಯನು ಅವರಿಗೆ, “ನೀವು ನಿಮ್ಮ ಯಜಮಾನನಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀನು ಕೇಳಿದಂಥ ಅಸ್ಸೀರಿಯದ ಅರಸನ ಸೇವಕರು ನನ್ನನ್ನು ದೂಷಿಸಿದಂಥ ಮಾತುಗಳನ್ನು ನೀವು ಕೇಳಿದ್ದಕ್ಕೋಸ್ಕರ ಭಯಪಡಬೇಡಿರಿ. \v 7 ಇಗೋ, ನಾನು ಅವರ ಮೇಲೆ ಆತ್ಮವನ್ನು ಕಳುಹಿಸುವೆನು. ಅವನು ಒಂದು ಸುದ್ದಿಯನ್ನು ಕೇಳಿ ತನ್ನ ದೇಶಕ್ಕೆ ಹಿಂದಿರುಗುವನು. ಇದಲ್ಲದೆ ಅವನು ತನ್ನ ದೇಶದಲ್ಲಿ ಖಡ್ಗಕ್ಕೆ ತುತ್ತಾಗುವಂತೆ ಮಾಡುವೆನು,’ ” ಎಂದು ಹೇಳಿದನು. \p \v 8 ಹೀಗೆ ಸೈನ್ಯಾಧಿಕಾರಿಯು ಅಸ್ಸೀರಿಯದ ಅರಸನು ಲಾಕೀಷನ್ನು ಬಿಟ್ಟು ಹೊರಟಿದ್ದಾನೆಂದು ಕೇಳಿದಾಗ, ಅವನು ಲಿಬ್ನಕ್ಕೆ ಹೋಗಿ, ಅಲ್ಲಿ ಅರಸನು ಲಿಬ್ನದವರೊಂದಿಗೆ ಯುದ್ಧಮಾಡುತ್ತಿರುವುದನ್ನು ಕಂಡನು. \p \v 9 ಅಷ್ಟರಲ್ಲಿ ಕೂಷನ ಅರಸನಾದ ತಿರ್ಹಾಕನು ತನಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೊರಟಿದ್ದಾನೆಂಬ ಸುದ್ದಿಯನ್ನು ಅಸ್ಸೀರಿಯದ ಅರಸನು ಕೇಳಿ, ಹಿಜ್ಕೀಯನ ಬಳಿಗೆ ತಿರಿಗಿ ದೂತರನ್ನು ಕಳುಹಿಸಿ ಅವರಿಗೆ, \v 10 “ನೀವು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇನೆಂದರೆ: ನೀನು ನಂಬುವ ದೇವರು, ‘ಯೆರೂಸಲೇಮನ್ನು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ ನಿನ್ನನ್ನು ಮೋಸಗೊಳಿಸಾನು. \v 11 ಇಗೋ, ಅಸ್ಸೀರಿಯದ ಅರಸರು ಸಮಸ್ತ ದೇಶಗಳನ್ನು ಸಂಪೂರ್ಣವಾಗಿ ನಾಶಮಾಡಿದರೆಂದು ನೀನು ಕೇಳಿದಿಯಲ್ಲಾ. ಹೀಗಿದ್ದ ಮೇಲೆ ನೀನು ಬಿಡುಗಡೆಯಾಗುವೆಯೋ? \v 12 ನನ್ನ ಪಿತೃಗಳು ಹಾಳುಮಾಡಿದ ಗೋಜಾನ್, ಹಾರಾನ್, ರೆಜೆಫ್ ಮುಂತಾದ ದೇವರುಗಳು ಅವರನ್ನು ಬಿಡುಗಡೆ ಮಾಡಲಿಲ್ಲ. ತೆಲ್ ಅಸ್ಸಾರ್ ಎಂಬಲ್ಲಿದ್ದ ಏದೆನಿನ ಜನರನ್ನು ಈ ದೇವರುಗಳು ಅವರನ್ನು ರಕ್ಷಿಸಲು ಸಾಧ್ಯವಾಯಿತೇ? \v 13 ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ, ಎಂಬ ಪಟ್ಟಣಗಳ ಅರಸರು ಏನಾದರು ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ,” ಎಂದು ಪತ್ರ ಬರೆದು ದೂತರ ಮುಖಾಂತರ ಕಳುಹಿಸಿದನು. \s1 ಹಿಜ್ಕೀಯನ ಪ್ರಾರ್ಥನೆ \p \v 14 ಹಿಜ್ಕೀಯನು ಆ ದೂತರ ಕೈಯಿಂದ ಪತ್ರವನ್ನು ತೆಗೆದುಕೊಂಡು ಓದಿದನು, ಅನಂತರ ಯೆಹೋವ ದೇವರ ಆಲಯಕ್ಕೆ ಹೋಗಿ ಅದನ್ನು ಯೆಹೋವ ದೇವರ ಮುಂದೆ ತೆರೆದಿಟ್ಟನು. \v 15 ಇದಲ್ಲದೆ ಹಿಜ್ಕೀಯನು ಯೆಹೋವ ದೇವರ ಮುಂದೆ ಪ್ರಾರ್ಥನೆಮಾಡಿ ಹೇಳಿದ್ದೇನೆಂದರೆ, “ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವೊಬ್ಬರೇ ಭೂಮಿಯ ಸಮಸ್ತ ರಾಜ್ಯಗಳಿಗೆ ದೇವರಾಗಿದ್ದೀರಿ. ನೀವೇ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ. \v 16 ಯೆಹೋವ ದೇವರೇ, ನಿಮ್ಮ ಕಿವಿಗೊಟ್ಟು ಕೇಳಿರಿ. ಯೆಹೋವ ದೇವರೇ, ನಿಮ್ಮ ಕಣ್ಣುಗಳನ್ನು ತೆರೆದು ನೋಡಿರಿ. ಸನ್ಹೇರೀಬನು ಜೀವವುಳ್ಳ ದೇವರನ್ನು ನಿಂದಿಸಿ ಕಳುಹಿಸಿದ ಮಾತುಗಳನ್ನು ಕೇಳಿರಿ. \p \v 17 “ಯೆಹೋವ ದೇವರೇ, ಅಸ್ಸೀರಿಯದ ಅರಸರು ಜನಾಂಗಗಳನ್ನೂ ಅವರ ದೇಶಗಳನ್ನೂ ಹಾಳು ಮಾಡಿ, ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ. \v 18 ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳಷ್ಟೆ, ಆದ್ದರಿಂದಲೇ ಅವರು ಅವುಗಳನ್ನು ನಾಶಮಾಡಿದ್ದಾರೆ. \v 19 ಹೀಗಿರುವುದರಿಂದ, ಈಗ ನಮ್ಮ ದೇವರಾದ ಯೆಹೋವ ದೇವರೇ, ‘ನೀವೊಬ್ಬರೇ ದೇವರಾದ ಯೆಹೋವ ದೇವರಾಗಿದ್ದೀರಿ,’ ಎಂದು ಭೂಮಿಯ ಸಮಸ್ತ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಿರಿ,” ಎಂದು ಹಿಜ್ಕೀಯನು ಯೆಹೋವ ದೇವರಿಗೆ ಪ್ರಾರ್ಥಿಸಿದನು. \s1 ಯೆಶಾಯನು ಸನ್ಹೇರೀಬನ ಬೀಳುವಿಕೆಯನ್ನು ಕುರಿತು ಪ್ರವಾದಿಸಿದ್ದು \p \v 20 ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನೆಂದರೆ: “ಇಸ್ರಾಯೇಲಿನ ಯೆಹೋವ ದೇವರ ಮಾತಿದು: ನೀನು ಅಸ್ಸೀರಿಯದ ಅರಸನಾದ ಸನ್ಹೇರೀಬನನ್ನು ಕುರಿತು ಮಾಡಿದ ಪ್ರಾರ್ಥನೆಯನ್ನು ಕೇಳಿದ್ದೇನೆ. \v 21 ಅವನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: \q1 “ ‘ಕನ್ನಿಕೆಯಾದ ಚೀಯೋನ್ ಪುತ್ರಿಯು ನಿನ್ನನ್ನು ತಿರಸ್ಕರಿಸಿ, \q2 ನಿನಗೆ ಅಪಹಾಸ್ಯ ಮಾಡುತ್ತಾಳೆ. \q1 ಯೆರೂಸಲೇಮಿನ ಪುತ್ರಿಯು \q2 ನೀನು ಓಡಿ ಹೋಗುವಾಗ ತನ್ನ ತಲೆಯಾಡಿಸುತ್ತಾಳೆ. \q1 \v 22 ನೀನು ಯಾರನ್ನು ನಿಂದಿಸಿ, ಯಾರನ್ನು ದೂಷಿಸಿದೆ? \q2 ಯಾರಿಗೆ ವಿರೋಧವಾಗಿ ನಿನ್ನ ಧ್ವನಿಯನ್ನು ಎತ್ತಿದ್ದೀ? \q1 ನಿನ್ನ ಕಣ್ಣುಗಳು ಗರ್ವದಿಂದ ನೋಡಿದ್ದು ಯಾರನ್ನು? \q2 ಇಸ್ರಾಯೇಲಿನ ಪರಿಶುದ್ಧ ದೇವರಿಗೆ ವಿರೋಧವಾಗಿಯಲ್ಲವೇ? \q1 \v 23 ನೀನು ನಿನ್ನ ದೂತರ ಮುಖಾಂತರ \q2 ಯೆಹೋವ ದೇವರನ್ನು ನಿಂದಿಸಿರುವೆ. \q1 ಇದಲ್ಲದೆ ನೀನು ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿದ್ದೀ, \q2 “ನಾನು ನನ್ನ ರಥಸಮೂಹದೊಡನೆ \q1 ಪರ್ವತಗಳ ಶಿಖರಗಳನ್ನು ಹತ್ತಿದ್ದೇನೆ, \q2 ಲೆಬನೋನಿನ ಎತ್ತರಗಳಿಗೆ ಹೋಗಿದ್ದೇನೆ. \q1 ಅದರ ಉನ್ನತವಾದ ದೇವದಾರುಗಳನ್ನೂ, \q2 ಅತ್ಯುತ್ತಮ ತುರಾಯಿ ಮರಗಳನ್ನೂ ಕಡಿದುಹಾಕಿದ್ದೇನೆ. \q1 ಅದರ ಅಂಚಿನ ಗಡಿಸ್ಥಳಗಳಲ್ಲಿಯೂ, \q2 ಅದರ ಫಲಭರಿತ ಅಡವಿಯಲ್ಲಿಯೂ ಪ್ರವೇಶಿಸಿದ್ದೇನೆ. \q1 \v 24 ಪರದೇಶಗಳಲ್ಲಿ ನಾನು ಬಾವಿಗಳನ್ನು ಅಗೆದು, \q2 ನೀರು ಕುಡಿದಿದ್ದೇನೆ. \q1 ನನ್ನ ಅಂಗಾಲುಗಳಿಂದ ಈಜಿಪ್ಟಿನವರ \q2 ಎಲ್ಲಾ ನದಿಗಳನ್ನು ಬತ್ತಿಹೋಗುವಂತೆ ಮಾಡಿದ್ದೇನೆ.” \b \q1 \v 25 “ ‘ಹೀಗಾಗಬೇಕೆಂದು ಬಹಳ ದಿನಗಳ ಹಿಂದೆಯೇ \q2 ನಿರ್ಣಯಿಸಿದ್ದನ್ನು ನೀನು ಕೇಳಲಿಲ್ಲವೋ? \q1 ಪುರಾತನ ದಿನಗಳಲ್ಲಿ ನಾನು ಯೋಚಿಸಿದ್ದನ್ನು, \q2 ಈಗ ನಾನು ಅದನ್ನು ನೆರವೇರಿಸಿದ್ದೇನೆ. \q1 ಆದ್ದರಿಂದಲೇ ನೀನು ಕೋಟೆಗಳುಳ್ಳ ಪಟ್ಟಣಗಳನ್ನು \q2 ಹಾಳಾದ ದಿಬ್ಬಗಳಾಗಿ ಮಾಡಿಬಿಟ್ಟಿರುವೆ. \q1 \v 26 ಆದ್ದರಿಂದ ಅವುಗಳ ನಿವಾಸಿಗಳು ಬಲಹೀನರಾಗಿ \q2 ಹೆದರಿ ಆಶಾಭಂಗಹೊಂದಿ ನಾಚಿಕೆಪಟ್ಟರು. \q1 ಅವರು ಹೊಲದ ಹುಲ್ಲಿನಂತೆಯೂ, \q2 ಹಸಿರು ಸಸಿಗಳಂತೆಯೂ, \q1 ಮಾಳಿಗೆಯ ಮೇಲಿನ ಹುಲ್ಲಿನಂತೆಯೂ, \q2 ಬೆಳೆಯುವುದಕ್ಕಿಂತ ಮುಂಚೆಯೇ ಬಾಡಿಹೋಗುವ ಪೈರಿನಂತೆಯೂ ಅವರಿದ್ದಾರೆ. \b \q1 \v 27 “ ‘ಆದರೆ ನೀನು ಎಲ್ಲಿ ವಾಸಿಸುವೆಯೆಂಬುದನ್ನು \q2 ನೀನು ಯಾವಾಗ ಬರುವೆ ಹೋಗುವೆ ಎಂಬುದನ್ನು \q2 ನೀನು ನನ್ನ ಮೇಲೆ ಹೇಗೆ ಕೋಪಿಸಿಕೊಳ್ಳುವೆ? ಎಂಬುದನ್ನು ನಾನು ಬಲ್ಲೆನು. \q1 \v 28 ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ, \q2 ನಿನ್ನ ಅಹಂಕಾರವೂ ನನ್ನ ಕಿವಿಗಳಿಗೆ ತಲುಪಿದೆ. \q1 ಆದ್ದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ, \q2 ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ, \q1 ನೀನು ಬಂದ ದಾರಿಯಿಂದಲೇ \q2 ನಿನ್ನನ್ನು ಹಿಂದಿರುಗಿಸುವೆನು.’ \p \v 29 “ಹಿಜ್ಕೀಯನೇ, ಇದು ನಿಮಗೆ ಸಂಕೇತವಾಗಿರುವದು, \q1 “ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ, \q2 ಎರಡನೆಯ ವರ್ಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ. \q1 ಆದರೆ ಮೂರನೆಯ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ. \q2 ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ, ಅವುಗಳ ಫಲಗಳನ್ನು ತಿನ್ನುವಿರಿ. \q1 \v 30 ಯೆಹೂದದ ಮನೆತನದಲ್ಲಿ ತಪ್ಪಿಸಿಕೊಂಡು ಉಳಿದವರು ತಿರುಗಿ \q2 ದೇಶದಲ್ಲಿ ಬೇರೂರಿ ನೆಲೆಗೊಂಡು ಅಭಿವೃದ್ಧಿಯಾಗುವರು. \q1 \v 31 ಏಕೆಂದರೆ ಯೆರೂಸಲೇಮಿನಿಂದ ಉಳಿದವರೂ, \q2 ಚೀಯೋನ್ ಪರ್ವತದಿಂದ ತಪ್ಪಿಸಿಕೊಂಡವರೂ ಹೊರಡುವರು. \m ಸೇನಾಧೀಶ್ವರ ಯೆಹೋವ ದೇವರ ಆಸಕ್ತಿಯು ಇದನ್ನು ನೆರವೇರಿಸುವುದು. \b \p \v 32 “ಆದ್ದರಿಂದ ಯೆಹೋವ ದೇವರು ಅಸ್ಸೀರಿಯದ ಅರಸನನ್ನು ಕುರಿತು ಹೀಗೆ ಹೇಳುತ್ತಾರೆ: \q1 “ ‘ಅವನು ಈ ಪಟ್ಟಣದೊಳಗೆ ಬರುವುದಿಲ್ಲ; \q2 ಅಲ್ಲಿ ಬಾಣವನ್ನು ಎಸೆಯುವುದಿಲ್ಲ; \q1 ಗುರಾಣಿಯೊಂದಿಗೆ ಅದರ ಮುಂದೆ ಬರಲಾರನು; \q2 ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಲು ದಿಬ್ಬವನ್ನು ನಿರ್ಮಿಸುವುದಿಲ್ಲ. \q1 \v 33 ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು, \q2 ಈ ಪಟ್ಟಣದೊಳಗೆ ಬರುವುದೇ ಇಲ್ಲ, \q2 ಎಂದು ಯೆಹೋವ ದೇವರು ಹೇಳುತ್ತಾರೆ. \q1 \v 34 ಈ ಪಟ್ಟಣವನ್ನು ನನಗೋಸ್ಕರವೂ \q2 ನನ್ನ ಸೇವಕನಾದ ದಾವೀದನಿಗೋಸ್ಕರವೂ ಕಾಪಾಡಿ \q2 ಅದನ್ನು ರಕ್ಷಿಸುವೆನು.’ ” \p \v 35 ಅದೇ ರಾತ್ರಿಯಲ್ಲಿ ಯೆಹೋವ ದೇವರ ದೂತನು ಹೊರಟುಬಂದು ಅಸ್ಸೀರಿಯದ ದಂಡಿನಲ್ಲಿದ್ದ 1,85,000 ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ, ಇಗೋ, ಅವರೆಲ್ಲರು ಸತ್ತು ಹೆಣಗಳಾಗಿದ್ದರು. \v 36 ಆಗ ಅಸ್ಸೀರಿಯದ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು. \p \v 37 ಒಂದು ದಿನ ಅವನು ತನ್ನ ದೇವರಾದ ನಿಸ್ರೋಕನ ಆಲಯದಲ್ಲಿ ಆರಾಧನೆ ಮಾಡುತ್ತಿರುವಾಗ, ಅವನ ಮಕ್ಕಳಾದ ಅದ್ರಮ್ಮೆಲೆಕ್, ಸರೆಚೆರ್ ಎಂಬವರು ಅವನನ್ನು ಖಡ್ಗದಿಂದ ಕೊಂದು, ಅರಾರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು. \c 20 \s1 ಹಿಜ್ಕೀಯನ ಅಸ್ವಸ್ಥತೆ \p \v 1 ಆ ದಿವಸಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ಮನೆಯನ್ನು ವ್ಯವಸ್ಥೆ ಮಾಡಿಕೋ, ಏಕೆಂದರೆ ನೀನು ಬದುಕದೆ ಸಾಯುವೆ, ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು. \p \v 2 ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ, \v 3 “ಯೆಹೋವ ದೇವರೇ, ನಾನು ಸತ್ಯದಿಂದಲೂ, ಪೂರ್ಣಹೃದಯದಿಂದಲೂ ನಿಮ್ಮ ಮುಂದೆ ನಡೆದು, ನಿಮ್ಮ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ,” ಎಂದು ಬೇಡಿಕೊಂಡನು. ಹೀಗೆ ಹಿಜ್ಕೀಯನು ವ್ಯಥೆಪಟ್ಟು ಅತ್ತನು. \p \v 4 ಯೆಶಾಯನು ಅರಮನೆಯ ಆವರಣದ ಮಧ್ಯಕ್ಕೆ ಹೋಗುವ ಮುಂಚೆ ಯೆಹೋವ ದೇವರ ವಾಕ್ಯವು ಅವನಿಗೆ ಬಂದಿತು, \v 5 ದೇವರು ಅವನಿಗೆ, “ನೀನು ಹಿಂದಿರುಗಿ ಹೋಗಿ ನನ್ನ ಜನರ ನಾಯಕನಾದ ಹಿಜ್ಕೀಯನಿಗೆ, ‘ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೇಳಿದ್ದೇನೆಂದರೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ಕಂಡಿದ್ದೇನೆ. ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ. ಮೂರನೆಯ ದಿವಸದಲ್ಲಿ ಯೆಹೋವ ದೇವರ ಆಲಯಕ್ಕೆ ಹೋಗುವೆ. \v 6 ಇದಲ್ಲದೆ ನಾನು ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಾಗಿ ಕೂಡಿಸುತ್ತೇನೆ. ನಿನ್ನನ್ನೂ, ಈ ಪಟ್ಟಣವನ್ನೂ ಅಸ್ಸೀರಿಯದ ಅರಸನ ಕೈಯಿಂದ ಬಿಡಿಸುವೆನು. ಈ ಪಟ್ಟಣವನ್ನು ನನ್ನ ನಿಮಿತ್ತವಾಗಿಯೂ, ನನ್ನ ಸೇವಕನಾದ ದಾವೀದನ ನಿಮಿತ್ತವಾಗಿಯೂ ಕಾಪಾಡುವೆನು,’ ಎಂದು ಹೇಳು,” ಎಂದರು. \p \v 7 ಆಗ ಯೆಶಾಯನು ಅಂಜೂರದ ಹಣ್ಣುಗಳ ಉಂಡೆಯನ್ನು ತೆಗೆದುಕೊಂಡು ಬರಲು ಹೇಳಿದ್ದನು. ಅವರು ಹಾಗೆಯೇ ತೆಗೆದುಕೊಂಡು ಬಂದು ಹುಣ್ಣಿನ ಮೇಲೆ ಹಾಕಿದ್ದರಿಂದ ಅವನು ಗುಣಹೊಂದಿದನು. \p \v 8 ಹಿಜ್ಕೀಯನು ಯೆಶಾಯನಿಗೆ, “ಯೆಹೋವ ದೇವರು ನನ್ನನ್ನು ಸ್ವಸ್ಥಮಾಡುವರೆಂಬುದಕ್ಕೆ ಮತ್ತು ನಾನು ಮೂರನೆಯ ದಿವಸದಲ್ಲಿ ಯೆಹೋವ ದೇವರ ಆಲಯಕ್ಕೆ ಹೋಗುವೆನೆಂಬುದಕ್ಕೆ ನನಗೆ ಗುರುತೇನು?” ಎಂದು ಕೇಳಿದನು. \p \v 9 ಯೆಶಾಯನು, “ಯೆಹೋವ ದೇವರು, ತಾವು ಹೇಳಿದ ಕಾರ್ಯವನ್ನು ಮಾಡುವರೆಂಬುದಕ್ಕೆ ಯೆಹೋವ ದೇವರ ಕಡೆಯಿಂದ ನಿನಗೆ ಉಂಟಾಗುವ ಗುರುತು, ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ? ಇಲ್ಲವೆ ಹತ್ತು ಮೆಟ್ಟಲು ಹಿಂದಕ್ಕೆ ಬರಬೇಕೋ?” ಎಂದು ಕೇಳಿದನು. \p \v 10 ಅದಕ್ಕೆ ಹಿಜ್ಕೀಯನು, “ನೆರಳು ಹತ್ತು ಮೆಟ್ಟಲು ಮುಂದೆ ಹೋಗುವುದು ಸಾಮಾನ್ಯ, ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡು,” ಎಂದನು. \p \v 11 ಆಗ ಪ್ರವಾದಿಯಾದ ಯೆಶಾಯನು ಯೆಹೋವ ದೇವರಿಗೆ ಮೊರೆಯಿಟ್ಟದ್ದರಿಂದ, ದೇವರು ಆಹಾಜನ ಮೆಟ್ಟಲುಗಳಲ್ಲಿ ಇಳಿದು ಹೋದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರಮಾಡಿದರು. \s1 ಬಾಬಿಲೋನಿನಿಂದ ದೂತರು \p \v 12 ಅದೇ ಕಾಲದಲ್ಲಿ ಬಲದಾನನ ಮಗನೂ, ಬಾಬಿಲೋನಿನ ಅರಸನೂ ಆದ ಮೆರೋದಕ್ ಬಲದಾನ್ ಎಂಬವನು, ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂದು ಕೇಳಿದ್ದರಿಂದ ಪತ್ರಗಳನ್ನೂ, ಉಡುಗೊರೆಗಳನ್ನೂ ಹಿಜ್ಕೀಯನ ಬಳಿಗೆ ಕಳುಹಿಸಿದನು. \v 13 ಹಿಜ್ಕೀಯನು ಅವರ ಮಾತು ಕೇಳಿ ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳ ತೈಲ ಮೊದಲಾದ ಅಮೂಲ್ಯ ಪದಾರ್ಥಗಳಿರುವ ಮನೆಯನ್ನೂ, ಆಯುಧ ಶಾಲೆಯನ್ನೂ, ತನ್ನ ಭಂಡಾರದಲ್ಲಿ ಇರುವುದೆಲ್ಲವನ್ನೂ ತೋರಿಸಿದನು. ಹೀಗೆ ಹಿಜ್ಕೀಯನು ತನ್ನ ಅರಮನೆಯಲ್ಲಿಯೂ, ತನ್ನ ಸಮಸ್ತ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ. \p \v 14 ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಂದ ಬಂದವರು ಮತ್ತು ಅವರು ನಿನಗೆ ಏನು ಹೇಳಿದರು?” ಎಂದು ಕೇಳಿದನು. \p ಹಿಜ್ಕೀಯನು, “ಅವರು ಬಹುದೂರ ದೇಶವಾದ ಬಾಬಿಲೋನಿನಿಂದ ಬಂದವರು,” ಎಂದು ಹೇಳಿದನು. \p \v 15 ಅದಕ್ಕೆ ಯೆಶಾಯನು ಪುನಃ ಅವನನ್ನು, “ಅವರು ನಿನ್ನ ಅರಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು. \p ಹಿಜ್ಕೀಯನು, “ನನ್ನ ಅರಮನೆಯಲ್ಲಿ ಇರುವುದೆಲ್ಲವನ್ನು ಅವರು ನೋಡಿದರು, ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಏನೂ ಇಲ್ಲ,” ಎಂದು ಉತ್ತರಕೊಟ್ಟನು. \p \v 16 ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವ ದೇವರ ವಾಕ್ಯವನ್ನು ಕೇಳು: \v 17 ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ನಿನ್ನ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬಿಲೋನಿಗೆ ಕೊಂಡೊಯ್ಯುವ ದಿವಸ ಬರುವುದು. ಇಲ್ಲಿ ಏನೂ ಉಳಿಯುವುದಿಲ್ಲ. \v 18 ಬಾಬಿಲೋನಿನವರು ನಿನ್ನಿಂದ ಹುಟ್ಟುವಂಥ, ನಿನ್ನ ಮಕ್ಕಳಲ್ಲಿ ಕೆಲವರನ್ನು ತೆಗೆದುಕೊಂಡು ಹೋಗುವರು, ಅವರು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗಿರುವರು,” ಎಂದನು. \p \v 19 ಆಗ ಹಿಜ್ಕೀಯನು, “ನೀನು ಹೇಳಿದ ಯೆಹೋವ ದೇವರ ವಾಕ್ಯವು ಒಳ್ಳೆಯದೇ,” ಎಂದು ಯೆಶಾಯನಿಗೆ ಹೇಳಿದನು. ಅವನು, ಹೇಗೂ ನನ್ನ ಜೀವಮಾನದಲ್ಲಿ ಸಮಾಧಾನವು, ಭದ್ರತೆಯೂ ಇರುವುವು, ಎಂದುಕೊಂಡನು. \p \v 20 ಹಿಜ್ಕೀಯನ ಇತರ ಕಾರ್ಯಗಳೂ, ಅವನ ಸಮಸ್ತ ಪರಾಕ್ರಮವೂ ಅವನು ಕೆರೆ ಮತ್ತು ಕಾಲುವೆಗಳನ್ನು ಮಾಡಿಸಿ ಪಟ್ಟಣದಲ್ಲಿ ನೀರನ್ನು ಬರಮಾಡಿದ್ದೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 21 ಹಿಜ್ಕೀಯನು ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಮಗ ಮನಸ್ಸೆಯು ಅವನಿಗೆ ಬದಲಾಗಿ ಅರಸನಾದನು. \c 21 \s1 ಯೆಹೂದ್ಯರ ಅರಸನಾದ ಮನಸ್ಸೆಯು \p \v 1 ಮನಸ್ಸೆಯು ಅರಸನಾದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಐವತ್ತೈದು ವರ್ಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಚಿಬಾ. \v 2 ಆದರೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಜನಾಂಗಗಳ ಅಸಹ್ಯವಾದವುಗಳನ್ನು ಅವನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. \v 3 ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ, ಬಾಳನಿಗೆ ಬಲಿಪೀಠಗಳನ್ನು ಕಟ್ಟಿಸಿ, ಇಸ್ರಾಯೇಲಿನ ಅರಸನಾದ ಅಹಾಬನು ಮಾಡಿದ ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ಸಮಸ್ತ ನಕ್ಷತ್ರಮಂಡಲಕ್ಕೆ ಅಡ್ಡಬಿದ್ದು ಅವುಗಳನ್ನು ಪೂಜಿಸಿದನು. \v 4 ಇದಲ್ಲದೆ, “ಯೆರೂಸಲೇಮಿನಲ್ಲಿ ನನ್ನ ಹೆಸರನ್ನು ಸ್ಥಾಪಿಸುವೆನು,” ಎಂದು ಯೆಹೋವ ದೇವರು ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ಅವನು ಬಲಿಪೀಠಗಳನ್ನು ಕಟ್ಟಿಸಿದನು. \v 5 ಯೆಹೋವ ದೇವರ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಸಮಸ್ತ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು. \v 6 ಇದಲ್ಲದೆ ಮನಸ್ಸೆಯು ತನ್ನ ಸ್ವಂತ ಮಗನನ್ನು ಬೆಂಕಿಯಲ್ಲಿ ಬಲಿಯಾಗಿ ಅರ್ಪಿಸಿದನು. ಮೇಘ ಮಂತ್ರಗಳನ್ನೂ, ಸರ್ಪಮಂತ್ರಗಳನ್ನು ಮಾಡಿದನು. ಕಣಿಹೇಳುವವರನ್ನೂ, ಮಾಂತ್ರಿಕರನ್ನೂ ವಿಚಾರಿಸಿದನು. ಯೆಹೋವ ದೇವರ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿ ಅವರಿಗೆ ಕೋಪವನ್ನು ಎಬ್ಬಿಸಿದನು. \p \v 7 “ಈ ಆಲಯದಲ್ಲಿಯೂ, ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿಯೂ, ನಾನು ಆಯ್ದುಕೊಂಡ ಯೆರೂಸಲೇಮಿನಲ್ಲಿಯೂ, ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನು,” ಎಂದು ಯೆಹೋವ ದೇವರು ದಾವೀದನಿಗೂ, ಅವನ ಮಗನಾದ ಸೊಲೊಮೋನನಿಗೂ ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ತಾನು ಮಾಡಿದ ಅಶೇರ ವಿಗ್ರಹಸ್ತಂಭವನ್ನು ಇಟ್ಟನು. \v 8 ಯೆಹೋವ ದೇವರು, “ನಾನು ಅವರಿಗೆ ಆಜ್ಞಾಪಿಸಿದ ಎಲ್ಲದರ ಪ್ರಕಾರ ಮತ್ತು ನನ್ನ ಸೇವಕನಾದ ಮೋಶೆಯು ಅವರಿಗೆ ಆಜ್ಞಾಪಿಸಿದ ಸಮಸ್ತ ನಿಯಮದ ಪ್ರಕಾರ ಕೈಗೊಂಡು ನಡೆಯುವುದರಲ್ಲಿ ಅವರು ಜಾಗರೂಕರಾಗಿದ್ದರೆ, ನಾನು ಅವರ ಪಿತೃಗಳಿಗೆ ಕೊಟ್ಟ ದೇಶದಿಂದ ಪುನಃ ಇಸ್ರಾಯೇಲರು ಅಲೆದಾಡುವಂತೆ ಮಾಡುವುದಿಲ್ಲ,” ಎಂದು ಹೇಳಿದ್ದರು. \v 9 ಆದರೆ ಜನರು ಕೇಳದೆ ಹೋದರು. ಇಸ್ರಾಯೇಲರ ಮುಂದೆಯೇ ಯೆಹೋವ ದೇವರಿಂದ ನಾಶಹೊಂದಿದ ಇತರ ಜನಾಂಗಗಳಿಗಿಂತ ಅಧಿಕವಾಗಿ ಕೆಟ್ಟದ್ದನ್ನು ಮಾಡಲು ಮನಸ್ಸೆಯು ಅವರನ್ನು ಪ್ರೇರೇಪಿಸಿದನು. \p \v 10 ಯೆಹೋವ ದೇವರು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ್ದೇನೆಂದರೆ, \v 11 “ಯೆಹೂದದ ಅರಸನಾದ ಮನಸ್ಸೆಯು ತನ್ನ ಮುಂದೆ ಇದ್ದ ಅಮೋರಿಯರು ಮಾಡಿದ ಕೆಟ್ಟವುಗಳಿಗಿಂತಲೂ ಅಸಹ್ಯವಾದವುಗಳನ್ನು ಮಾಡಿದ್ದರಿಂದಲೂ, ಯೆಹೂದವನ್ನು ತನ್ನ ವಿಗ್ರಹಗಳಿಂದ ಪಾಪಕ್ಕೆ ಪ್ರೇರೇಪಿಸಿದ್ದರಿಂದಲೂ, \v 12 ಇಸ್ರಾಯೇಲಿನ ಯೆಹೋವ ದೇವರಾದ ನಾನು ಯೆರೂಸಲೇಮಿನ ಮೇಲೆಯೂ, ಯೆಹೂದದ ಮೇಲೆಯೂ ಕೇಡನ್ನು ಬರಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳು ಕಿರಗುಟ್ಟುವುವು. \v 13 ನಾನು ಯೆರೂಸಲೇಮಿನ ಮೇಲೆ ಸಮಾರ್ಯದ ವಿರುದ್ಧ ಬಳಸಿದ ನೂಲನ್ನೂ, ಅಹಾಬನ ಮನೆಯ ವಿರುದ್ಧ ಬಳಸಿದ ಮಟ್ಟಗೋಲನ್ನೂ ಚಾಚಿ, ಒಬ್ಬನು ತಟ್ಟೆಯನ್ನು ಒರೆಸಿದಂತೆ ಅದನ್ನು ಒರೆಸಿ ತಲೆಕೆಳಗಾಗಿ ಹಾಕುವ ಹಾಗೆ ನಾನು ಯೆರೂಸಲೇಮನ್ನು ಅಳಿಸಿಬಿಡುವೆನು. \v 14 ಇದಲ್ಲದೆ ನಾನು ನನ್ನ ಬಾಧ್ಯತೆಗೆ ಉಳಿದಿರುವುದನ್ನು ಬಿಟ್ಟುಬಿಟ್ಟು, ಅವರನ್ನು ಅವರ ಶತ್ರುಗಳ ಕೈಗೆ ಒಪ್ಪಿಸಿಬಿಡುವೆನು. ಅವರು ತಮ್ಮ ಶತ್ರುಗಳಿಗೆ ಕೊಳ್ಳೆಯೂ, ಸೂರೆಯೂ ಆಗಿ ಹೋಗುವರು. \v 15 ಏಕೆಂದರೆ ಅವರ ತಂದೆಗಳು ಈಜಿಪ್ಟಿನಿಂದ ಹೊರಟ ದಿವಸ ಮೊದಲುಗೊಂಡು, ಇಂದಿನವರೆಗೂ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ನನಗೆ ಕೋಪವನ್ನು ಎಬ್ಬಿಸಿದ್ದಾರೆ, ಎಂದು ಹೇಳುತ್ತಾರೆ,” ಎಂಬುದೇ. \p \v 16 ಇದಲ್ಲದೆ ಮನಸ್ಸೆಯು ಯೆಹೋವ ದೇವರ ದೃಷ್ಟಿಯಲ್ಲಿ ಕೇಡನ್ನು ಮಾಡಿದ್ದರಲ್ಲಿ ಯೆಹೂದವು ಪಾಪವನ್ನು ಮಾಡಲು ಪ್ರೇರೇಪಿಸಿದ ತನ್ನ ಪಾಪದ ಹೊರತು ಅವನು ಯೆರೂಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ತಾನು ಬಹು ಹೆಚ್ಚಾಗಿ ಚೆಲ್ಲಿದ ನಿರಪರಾಧದ ರಕ್ತದಿಂದ ತುಂಬಿಸಿದನು. \p \v 17 ಮನಸ್ಸೆಯ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಅವನು ಮಾಡಿದ ಪಾಪವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 18 ಮನಸ್ಸೆಯು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು, ಅವನ ಅರಮನೆಯ ತೋಟವಾದ ಉಜ್ಜನ ತೋಟದಲ್ಲಿ ಅವನ ಶವವನ್ನು ಸಮಾಧಿಮಾಡಿದರು. ಅವನ ಮಗ ಆಮೋನನು ಅವನಿಗೆ ಬದಲಾಗಿ ಅರಸನಾದನು. \s1 ಯೆಹೂದ್ಯರ ಅರಸನಾದ ಆಮೋನನು \p \v 19 ಆಮೋನನು ಅರಸನಾದಾಗ ಇಪ್ಪತ್ತೆರಡು ವರ್ಷದವನಾಗಿದ್ದನು, ಅವನು ಯೆರೂಸಲೇಮಿನಲ್ಲಿ ಎರಡು ವರ್ಷ ಆಳಿದನು. ಅವನ ತಾಯಿಯು ಯೋತ್ಬಾ ಊರಿನ ಹಾರೂಚನ ಮಗಳಾದ ಮೆಷುಲ್ಲೇಮೆತಳು. \v 20 ಅವನು ತನ್ನ ತಂದೆ ಮನಸ್ಸೆಯು ಮಾಡಿದ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು. \v 21 ಅವನು ತನ್ನ ಪಿತೃಗಳ ದೇವರಾದ ಯೆಹೋವ ದೇವರ ಮಾರ್ಗವನ್ನು ಬಿಟ್ಟುಬಿಟ್ಟು, \v 22 ತನ್ನ ತಂದೆಯು ನಡೆದ ಸಮಸ್ತ ಮಾರ್ಗದಲ್ಲಿ ನಡೆದು, ತನ್ನ ತಂದೆಯು ಸೇವಿಸಿದ ವಿಗ್ರಹಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದನು. \p \v 23 ಆಮೋನನ ಸೇವಕರು ಅವನ ವಿರುದ್ಧ ಒಳಸಂಚುಮಾಡಿ, ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು. \v 24 ಆದರೆ ದೇಶದ ಜನರು ಅರಸನಾದ ಆಮೋನನ ವಿರುದ್ಧ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ, ಅವನ ಮಗ ಯೋಷೀಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು. \p \v 25 ಆಮೋನನು ಮಾಡಿದ ಅವನ ಇತರ ಕ್ರಿಯೆಗಳು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 26 ಅವನ ಶವವನ್ನು, ಉಜ್ಜನ ತೋಟದಲ್ಲಿ ಅವನು ಮೊದಲೇ ತನಗೋಸ್ಕರ ಸಿದ್ದಪಡಿಸಿಟ್ಟಿದ್ದ ಸಮಾಧಿಯಲ್ಲಿ ಹೂಣಿಟ್ಟರು. ಅವನ ಮಗ ಯೋಷೀಯನು ಅವನಿಗೆ ಬದಲಾಗಿ ಅರಸನಾದನು. \c 22 \s1 ನಿಯಮದ ಪುಸ್ತಕವು ದೊರೆತದ್ದು \p \v 1 ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದನು, ಅವನು ಮೂವತ್ತೊಂದು ವರ್ಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿ ಬೊಚ್ಕತಿನ ಅದಾಯನ ಮಗಳಾದ ಯೆದೀದಾ ಎಂಬವಳು. \v 2 ಅವನು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದನ್ನು ಮಾಡಿ, ಎಡಕ್ಕಾಗಲಿ ಬಲಕ್ಕಾಗಲಿ ತಿರುಗದೆ ತನ್ನ ಪೂರ್ವಜನಾದ ದಾವೀದನ ಮಾರ್ಗಗಳಲ್ಲಿಯೇ ನಡೆದನು. \p \v 3 ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಅರಸನು ಕಾರ್ಯದರ್ಶಿಯಾದ ಮೆಷುಲ್ಲಾಮನ ಮಗ, ಅಚಲ್ಯನ ಮಗನಾದ ಶಾಫಾನನನ್ನು ಯೆಹೋವ ದೇವರ ಆಲಯಕ್ಕೆ ಕಳುಹಿಸಿ, \v 4 “ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ಅವನು ಯೆಹೋವ ದೇವರ ಆಲಯದ ದ್ವಾರಪಾಲಕರು ಜನರಿಂದ ತೆಗೆದುಕೊಂಡು ಕೂಡಿಸಿದ ಹಣವನ್ನು ಲೆಕ್ಕ ಮಾಡಲಿ. \v 5 ಅವರು ಅದನ್ನು ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಒಪ್ಪಿಸಲಿ. \v 6 ಆಲಯ ದುರಸ್ತಿ ಮಾಡುವಂತೆ ಯೆಹೋವ ದೇವರ ಆಲಯದಲ್ಲಿ ಕೆಲಸ ಮಾಡುವವರಾದ ಬಡಗಿಯರಿಗೂ, ಶಿಲ್ಪಿಗಾರರಿಗೂ, ಕಲ್ಲುಕೆಲಸದವರಿಗೂ ಕೊಟ್ಟು, ಆಲಯವನ್ನು ದುರಸ್ತಿ ಮಾಡಲು ಮರಗಳನ್ನೂ, ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಳ್ಳುವುದಕ್ಕೆ ಕೊಡಲಿ. \v 7 ಆದರೆ ಅವರು ನಂಬಿಗಸ್ತರಾಗಿ ಕೆಲಸ ಮಾಡಿದ್ದರಿಂದ, ಅವರ ಕೈಗೆ ಒಪ್ಪಿಸಿದ ಹಣವನ್ನು ಕುರಿತು ಅವರಿಂದ ಲೆಕ್ಕ ಕೇಳುವ ಅವಶ್ಯಕತೆ ಇಲ್ಲ, ಎಂದು ಹೇಳು,” ಎಂದನು. \p \v 8 ಆಗ ಮಹಾಯಾಜಕನಾದ ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ, “ನನಗೆ ಯೆಹೋವ ದೇವರ ಆಲಯದಲ್ಲಿ ಮೋಶೆಯ ನಿಯಮದ ಗ್ರಂಥವು ಸಿಕ್ಕಿರುತ್ತದೆ,” ಎಂದನು. ಹಿಲ್ಕೀಯನು ಆ ಗ್ರಂಥವನ್ನು ಶಾಫಾನನಿಗೆ ಒಪ್ಪಿಸಿದನು. ಅವನು ಅದನ್ನು ಓದಿದನು. \v 9 ಕಾರ್ಯದರ್ಶಿಯಾದ ಶಾಫಾನನು ಅರಸನ ಬಳಿಗೆ ಬಂದು ಅರಸನಿಗೆ, “ಯೆಹೋವ ದೇವರ ಆಲಯದಲ್ಲಿ ದೊರಕಿದ ಹಣವನ್ನು ನಿನ್ನ ಸೇವಕರು ಕೂಡಿಸಿ, ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಒಪ್ಪಿಸಿದ್ದಾರೆ,” ಎಂದನು. \v 10 ಇದಲ್ಲದೆ, “ಯಾಜಕನಾದ ಹಿಲ್ಕೀಯನು ನನಗೆ ಪುಸ್ತಕವನ್ನು ಒಪ್ಪಿಸಿದ್ದಾನೆ,” ಎಂದು ತೋರಿಸಿ, ಶಾಫಾನನು ಅದನ್ನು ಅರಸನ ಮುಂದೆ ಓದಿದನು. \p \v 11 ಅರಸನು ಮೋಶೆಯ ನಿಯಮದ ಪುಸ್ತಕದ ಮಾತುಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡನು. \v 12 ಇದಲ್ಲದೆ ಅರಸನು ಯಾಜಕನಾದ ಹಿಲ್ಕೀಯನಿಗೂ, ಶಾಫಾನನ ಮಗನಾದ ಅಹೀಕಾಮನಿಗೂ, ಮೀಕಾಯನ ಮಗನಾದ ಅಕ್ಬೋರನಿಗೂ, ಕಾರ್ಯದರ್ಶಿಯಾದ ಶಾಫಾನನಿಗೂ, ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ, \v 13 “ನೀವು ಹೋಗಿ ಸಿಕ್ಕಿದ ಈ ಗ್ರಂಥದ ವಾಕ್ಯಗಳ ಕುರಿತು ನನಗೋಸ್ಕರವೂ, ಜನರಿಗೋಸ್ಕರವೂ, ಸಮಸ್ತ ಯೆಹೂದ್ಯರಿಗೋಸ್ಕರವೂ ಯೆಹೋವ ದೇವರ ಬಳಿಯಲ್ಲಿ ವಿಚಾರಿಸಿರಿ. ಏಕೆಂದರೆ ನಮ್ಮನ್ನು ಕುರಿತು ಬರೆದಿರುವ ಎಲ್ಲವನ್ನೂ ಕೈಗೊಂಡು ನಡೆಯಲು ನಮ್ಮ ಪಿತೃಗಳು ಈ ಗ್ರಂಥದ ಮಾತುಗಳನ್ನು ಕೇಳದೆ ಹೋದುದರಿಂದ, ದೇವರ ಮಹಾಕೋಪಕ್ಕೆ ಪಾತ್ರರಾಗಿದ್ದೇವೆ,” ಎಂದನು. \p \v 14 ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಅಸಾಯ ಎಂಬವರು ಪ್ರವಾದಿನಿ ಹುಲ್ದಳ ಬಳಿಗೆ ವಿಚಾರಿಸಲು ಹೋದರು. ಆಕೆಯು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ರಾಜವಸ್ತ್ರಗಳ ಮೇಲ್ವಿಚಾರಕನೂ ಆದ ಶಲ್ಲೂಮನ ಹೆಂಡತಿ. ಅವಳು ಯೆರೂಸಲೇಮಿನೊಳಗೆ ಹೊಸದಾದ ನಿರ್ಮಿತ ಭಾಗದಲ್ಲಿ ವಾಸವಾಗಿದ್ದಳು. \p \v 15 ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಇಸ್ರಾಯೇಲ್ ದೇವರಾದ ಯೆಹೋವ ದೇವರ ಮಾತುಗಳನ್ನು ತಿಳಿಸಿರಿ: \v 16 ‘ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಯೆಹೂದದ ಅರಸನು ಓದಿದ ಗ್ರಂಥದಲ್ಲಿ ಬರೆದಿರುವ ಪ್ರತಿಯೊಂದರಂತೆ ಕೇಡನ್ನು ಬರಮಾಡುವೆನು. \v 17 ಏಕೆಂದರೆ ಅವರು ನನ್ನನ್ನು ಬಿಟ್ಟುಬಿಟ್ಟು, ತಮ್ಮ ಸಮಸ್ತ ಕ್ರಿಯೆಗಳಿಂದ ನನಗೆ ಕೋಪವನ್ನು ಎಬ್ಬಿಸುವಂತೆ ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದ್ದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಹೊತ್ತಿ ಉರಿಯುತ್ತಿದೆ, ಅದು ಆರಿಹೋಗುವುದಿಲ್ಲ.’ \v 18 ಆದರೆ ಯೆಹೋವ ದೇವರನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ, ‘ನೀವು ಕೇಳಿದ ಮಾತುಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, \v 19 ಈ ಸ್ಥಳವೂ ಅದರ ನಿವಾಸಿಗಳೂ ನಾಶಕ್ಕೂ ಶಾಪಕ್ಕೂ ಗುರಿಯಾಗುವರೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ, ನಿನ್ನ ಹೃದಯವು ಮೃದುವಾಗಿ ನೀನು ನಿನ್ನನ್ನು ಯೆಹೋವ ದೇವರ ಮುಂದೆ ತಗ್ಗಿಸಿಕೊಂಡೆ. ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ್ದರಿಂದ ನಾನು ನಿನ್ನ ಮೊರೆಯನ್ನು ಕೇಳಿದೆನು. \v 20 ಆದ್ದರಿಂದ ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವೆ. ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವುದಿಲ್ಲ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದಳು. \p ಅವರು ಹೋಗಿ ಈ ಉತ್ತರವನ್ನು ಅರಸನಿಗೆ ತಿಳಿಸಿದರು. \c 23 \s1 ಯೋಷೀಯನು ಒಡಂಬಡಿಕೆಯನ್ನು ನವೀಕರಿಸಿದ್ದು \p \v 1 ಅನಂತರ ಅರಸನಾದ ಯೋಷೀಯನು ಯೆಹೂದದ, ಯೆರೂಸಲೇಮಿನ ಹಿರಿಯರೆಲ್ಲರನ್ನು ಕರೆಕಳುಹಿಸಿ ತನ್ನ ಬಳಿಯಲ್ಲಿ ಒಟ್ಟಾಗಿ ಕೂಡಿಸಿದನು. \v 2 ಆಗ ಅರಸನೂ, ಅವನ ಸಂಗಡ ಯೆಹೂದದ ಜನರೂ, ಯೆರೂಸಲೇಮಿನ ನಿವಾಸಿಗಳೂ, ಯಾಜಕರೂ, ಪ್ರವಾದಿಗಳೂ, ಹಿರಿಕಿರಿಯರಾದ ಸಮಸ್ತ ಜನರೂ ಯೆಹೋವ ದೇವರ ಆಲಯಕ್ಕೆ ಹೋದರು. ಅರಸನು ಯೆಹೋವ ದೇವರು ಆಲಯದಲ್ಲಿ ದೊರಕಿದ ಒಡಂಬಡಿಕೆಯ ಗ್ರಂಥದ ಮಾತುಗಳನ್ನೆಲ್ಲಾ ಅವರು ಕೇಳುವಂತೆ ಓದಿದನು. \v 3 ಅರಸನು ಸ್ತಂಭದ ಬಳಿಯಲ್ಲಿ ನಿಂತುಕೊಂಡು ಯೆಹೋವ ದೇವರನ್ನು ಹಿಂಬಾಲಿಸುವುದಕ್ಕೂ, ದೇವರ ಆಜ್ಞೆಗಳನ್ನೂ, ನಿಯಮಗಳನ್ನೂ, ಕಟ್ಟಳೆಗಳನ್ನೂ ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಕೈಗೊಳ್ಳುವುದಕ್ಕೂ, ಈ ಗ್ರಂಥದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವುದಕ್ಕೂ ಯೆಹೋವ ದೇವರ ಮುಂದೆ ಒಡಂಬಡಿಕೆಯನ್ನು ಮಾಡಿದನು. ಜನರೆಲ್ಲರು ಹಾಗೆಯೇ ಒಡಂಬಡಿಕೆಗೆ ಒಪ್ಪಿದರು. \p \v 4 ಅರಸನಾದ ಯೋಷೀಯನು ಬಾಳನಿಗೋಸ್ಕರವೂ, ಅಶೇರನಿಗೋಸ್ಕರವೂ, ಆಕಾಶದ ಸೈನ್ಯಕ್ಕೋಸ್ಕರವೂ ಉಪಯೋಗಿಸುತ್ತಿದ್ದ ಸಮಸ್ತ ಸಲಕರಣೆಗಳನ್ನು ಯೆಹೋವ ದೇವರ ಆಲಯದಿಂದ ಹೊರಗೆ ತೆಗೆದುಕೊಂಡು ಬರಬೇಕೆಂದು ಮಹಾಯಾಜಕನಾದ ಹಿಲ್ಕೀಯನಿಗೂ, ಮುಖ್ಯಯಾಜಕರಿಗೂ, ದ್ವಾರಪಾಲಕರಿಗೂ ಆಜ್ಞಾಪಿಸಿದನು. ಅರಸನು ಅವುಗಳನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್ ಕಣಿವೆಯ ಬಯಲಿನಲ್ಲಿ ಸುಡಿಸಿ, ಅವುಗಳ ಬೂದಿಯನ್ನು ಬೇತೇಲಿಗೆ ತರುವಂತೆ ಮಾಡಿದನು. \v 5 ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಪೂಜಾಸ್ಥಳಗಳಲ್ಲಿಯೂ, ಯೆರೂಸಲೇಮಿನ ಸುತ್ತಲಿರುವ ಉನ್ನತ ಪೂಜಾಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸರು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ, ಸೂರ್ಯನಿಗೂ, ಚಂದ್ರನಿಗೂ, ಗ್ರಹಗಳಿಗೂ, ಆಕಾಶದ ಸಮಸ್ತ ಸೈನ್ಯಕ್ಕೂ, ಧೂಪಸುಡುವವರನ್ನೂ ತೆಗೆದುಹಾಕಿದನು. \v 6 ಅವನು ಅಶೇರ ಸ್ತಂಭವನ್ನು ಯೆಹೋವ ದೇವರ ಆಲಯದೊಳಗಿಂದ ಯೆರೂಸಲೇಮಿನ ಹೊರಗೆ ಕಿದ್ರೋನ್ ಹಳ್ಳಕ್ಕೆ ತರಿಸಿ, ಅದನ್ನು ಕಿದ್ರೋನ್ ಕಣಿವೆಯ ಬಳಿಯಲ್ಲಿ ಸುಟ್ಟು, ಅದನ್ನು ಧೂಳಾಗಿ ಪುಡಿಮಾಡಿ, ಆ ಧೂಳಿನ ಪುಡಿಯನ್ನು ಸಾಮಾನ್ಯ ಜನರ ಸಮಾಧಿಗಳ ಮೇಲೆ ಹಾಕಿದನು. \v 7 ಯೆಹೋವ ದೇವರ ಆಲಯದ ಬಳಿಯಲ್ಲಿದ್ದ ಅಶೇರದೇವತೆಗಾಗಿ ನೇಯ್ಗೆ ಕೆಲಸ ಮಾಡುತ್ತಿದ್ದ ಸ್ತ್ರೀಯರ ಹಾಗೂ ವೇಶ್ಯಾವೃತ್ತಿಯವರ ಮನೆಗಳನ್ನು ಕೆಡವಿಸಿದನು. \p \v 8 ಯೋಷೀಯನು ಯೆಹೂದದ ಪಟ್ಟಣಗಳಿಂದ ಯಾಜಕರೆಲ್ಲರನ್ನು ಬರಮಾಡಿ, ಗಿಬೆಯ ಪಟ್ಟಣದಿಂದ ಬೇರ್ಷೆಬದವರೆಗೂ, ಯಾಜಕರು ಧೂಪ ಸುಡುತ್ತಿದ್ದ ಉನ್ನತ ಪೂಜಾಸ್ಥಳಗಳನ್ನೂ ಅಶುದ್ಧ ಮಾಡಿದನು. ಅನಂತರ ಪುರಾಧಿಕಾರಿಯಾದ ಯೆಹೋಶುವನ ಬಾಗಿಲಿನ ದ್ವಾರದಲ್ಲಿದ್ದ ಬಾಗಿಲುಗಳ ಉನ್ನತ ಸ್ಥಳಗಳನ್ನು ಕೆಡವಿ ಹಾಕಿದನು. \v 9 ಆದರೆ ಉನ್ನತ ಪೂಜಾಸ್ಥಳಗಳ ಯಾಜಕರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಬಲಿಪೀಠದ ಬಳಿಯಲ್ಲಿ ಸೇವೆ ಮಾಡದೇ ಇದ್ದರೂ, ತಮ್ಮ ಸಹೋದರರ ಮಧ್ಯದಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುತ್ತಾ ಇದ್ದರು. \p \v 10 ಯಾವನೂ ತನ್ನ ಮಗನನ್ನಾದರೂ, ಮಗಳನ್ನಾದರೂ ಮೋಲೆಕನಿಗೋಸ್ಕರ ಬೆಂಕಿಯಲ್ಲಿ ಬಲಿ ಅರ್ಪಿಸದಂತೆ ಹಿನ್ನೋಮ್ ತಗ್ಗಿನಲ್ಲಿದ್ದ ತೋಫೆತನ್ನು ಅಶುದ್ಧ ಮಾಡಿದನು. \v 11 ಯೆಹೂದದ ಅರಸರು ಸೂರ್ಯನಿಗೆ ಪ್ರತಿಷ್ಠೆಪಡಿಸಿದ್ದ ಕುದುರೆಗಳನ್ನು ತೆಗೆದುಹಾಕಿ ರಥಗಳನ್ನು ಯೋಷೀಯನು ಸುಟ್ಟುಹಾಕಿದನು. ಅವು ಯೆಹೋವ ದೇವರ ಆಲಯದ ದ್ವಾರದಲ್ಲಿ ಪ್ರಧಾನನಾದ ನಾತಾನ್ ಮೆಲೆಕನ ಕೊಠಡಿಯ ಹತ್ತಿರ ಇದ್ದವು. ಅರಸರು ಸೂರ್ಯನಿಗೆ ಸಮರ್ಪಿಸಿ ನಿಲ್ಲಿಸಿದ್ದ ರಥಗಳನ್ನು ಸಹ ಸುಟ್ಟುಬಿಟ್ಟನು. \p \v 12 ಯೆಹೂದದ ಅರಸರು ಮಾಡಿದ ಆಹಾಜನ ಮೇಲು ಮಾಳಿಗೆಯ ಮೇಲೆ ಇದ್ದ ಬಲಿಪೀಠಗಳನ್ನೂ, ಮನಸ್ಸೆಯು ಯೆಹೋವ ದೇವರ ಮನೆಯ ಎರಡು ಅಂಗಳಗಳಲ್ಲಿ ಮಾಡಿದ ಬಲಿಪೀಠಗಳನ್ನೂ ಅರಸನು ಕೆಡವಿಸಿ, ಅಲ್ಲಿಂದ ಅದರ ಧೂಳನ್ನು ಕಿದ್ರೋನ್ ಕಣಿವೆಯಲ್ಲಿ ಹಾಕಿಸಿಬಿಟ್ಟನು. \v 13 ಇದಲ್ಲದೆ ಯೆರೂಸಲೇಮಿನ ಮುಂದೆ ವಿಘ್ನ ಬೆಟ್ಟದ ದಕ್ಷಿಣದಲ್ಲಿದ್ದ ಸೀದೋನ್ಯರ ಅಸಹ್ಯಕರವಾದ ಅಷ್ಟೋರೆತಿಗೂ, ಮೋವಾಬ್ಯರ ಅಸಹ್ಯಕರವಾದ ಕೆಮೋಷನಿಗೂ, ಅಮ್ಮೋನ್ಯರ ಅಸಹ್ಯಕರವಾದ ಮಿಲ್ಕೋಮನಿಗೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕಟ್ಟಿಸಿದ ಉನ್ನತ ಪೂಜಾಸ್ಥಳಗಳನ್ನೂ ಯೋಷೀಯನು ಅಶುದ್ಧ ಮಾಡಿದನು. \v 14 ಇದಲ್ಲದೆ ಯೋಷೀಯನು ವಿಗ್ರಹಗಳನ್ನು ಮುರಿದು, ಅಶೇರ ಸ್ತಂಭಗಳನ್ನು ಕಡಿದುಬಿಟ್ಟು, ಅವುಗಳ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು. \p \v 15 ಇದಲ್ಲದೆ ಬೇತೇಲಿನಲ್ಲಿ ಇದ್ದ ಬಲಿಪೀಠವನ್ನೂ, ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನು ಮಾಡಿದ ಉನ್ನತ ಪೂಜಾಸ್ಥಳವನ್ನೂ ಸುಟ್ಟುಬಿಟ್ಟು, ಅದನ್ನು ಧೂಳಾಗಲು ಪುಡಿಮಾಡಿ ಅಶೇರ ಸ್ತಂಭವನ್ನು ಸುಟ್ಟುಬಿಟ್ಟನು. \v 16 ಯೋಷೀಯನು ತಿರುಗಿಕೊಂಡು ಅಲ್ಲಿ ಬೆಟ್ಟದಲ್ಲಿದ್ದ ಸಮಾಧಿಗಳನ್ನು ಕಂಡು, ಸಮಾಧಿಗಳಿಂದ ಎಲುಬುಗಳನ್ನು ತೆಗೆದುಕೊಂಡು, ದೇವರ ಮನುಷ್ಯನು ಹೇಳಿದ ಈ ಮಾತುಗಳನ್ನು ಯೆಹೋವ ದೇವರ ವಾಕ್ಯದ ಪ್ರಕಾರ, ಬಲಿಪೀಠದ ಮೇಲೆ ಅವುಗಳನ್ನು ಸುಟ್ಟು ಅದನ್ನು ಅಶುದ್ಧ ಮಾಡಿದನು. \p \v 17 ಆಗ ಅರಸನು, “ನಾನು ಕಾಣುವ ಈ ಸಮಾಧಿ ಕಲ್ಲು ಯಾರದು?” ಎಂದು ಕೇಳಿದನು. \p ಅದಕ್ಕೆ ಆ ಊರಿನವರು ಅವನಿಗೆ, “ನೀನು ಈಗ ಬೇತೇಲಿನ ಬಲಿಪೀಠಕ್ಕೆ ಮಾಡಿದ್ದನ್ನು ಮುಂತಿಳಿಸಿದ ಯೆಹೂದದ ದೇವರ ಮನುಷ್ಯನ ಸಮಾಧಿ,” ಎಂದರು. \p \v 18 “ಅದನ್ನು ಬಿಟ್ಟುಬಿಡಿರಿ. ಯಾವನೂ ಅವನ ಎಲುಬುಗಳನ್ನು ಮುಟ್ಟದೆ ಇರಲಿ,” ಎಂದನು. ಹಾಗೆಯೇ ಅವನು ಅವರ ಎಲುಬುಗಳನ್ನು ಸಮಾರ್ಯದಿಂದ ಬಂದ ಪ್ರವಾದಿಯ ಎಲುಬುಗಳ ಸಂಗಡ ಬಿಟ್ಟುಬಿಟ್ಟರು. \p \v 19 ಇಸ್ರಾಯೇಲಿನ ಅರಸರು ಸಮಾರ್ಯದ ಪಟ್ಟಣಗಳಲ್ಲಿ ಮಾಡಿದ ಯೆಹೋವ ದೇವರ ಕೋಪಕ್ಕೆ ಕಾರಣವಾಗಿದ್ದ ಉನ್ನತ ಪೂಜಾಸ್ಥಳಗಳನ್ನು ಯೋಷೀಯನು ಕೆಡವಿಹಾಕಿ, ಬೇತೇಲಿನಲ್ಲಿ ತಾನು ಮಾಡಿದಂತೆ ಅವುಗಳಿಗೆ ಮಾಡಿದನು. \v 20 ಅಲ್ಲಿದ್ದ ಉನ್ನತ ಪೂಜಾಸ್ಥಳಗಳ ಯಾಜಕರನ್ನೆಲ್ಲಾ ಬಲಿಪೀಠಗಳ ಮೇಲೆ ಕೊಂದುಹಾಕಿ, ಅವುಗಳ ಮೇಲೆ ಮನುಷ್ಯರ ಎಲುಬುಗಳನ್ನು ಸುಟ್ಟು, ಯೋಷೀಯನು ಯೆರೂಸಲೇಮಿಗೆ ತಿರುಗಿಬಂದನು. \p \v 21 ಅರಸನಾದ ಯೋಷೀಯನು ಸಮಸ್ತ ಜನರಿಗೂ, “ಈ ಒಡಂಬಡಿಕೆಯ ಗ್ರಂಥದಲ್ಲಿ ಬರೆದಿರುವ ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರ ಪಸ್ಕಹಬ್ಬವನ್ನು ಆಚರಿಸಿರಿ,” ಎಂದು ಆಜ್ಞಾಪಿಸಿದನು. \v 22 ನಿಶ್ಚಯವಾಗಿ ಇಸ್ರಾಯೇಲಿಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳ ದಿವಸಗಳು ಮೊದಲುಗೊಂಡು, ಇಸ್ರಾಯೇಲಿನ ಯೆಹೂದದ ಅರಸರ ಸಕಲ ದಿವಸಗಳಲ್ಲಿಯೂ ಇಂಥಾ ಪಸ್ಕವನ್ನು ಆಚರಿಸಿರಲಿಲ್ಲ. \v 23 ಅರಸನಾದ ಯೋಷೀಯನ ಹದಿನೆಂಟನೆಯ ವರ್ಷದಲ್ಲಿ ಈ ಪಸ್ಕಹಬ್ಬವನ್ನು ಯೆರೂಸಲೇಮಿನಲ್ಲಿ ಯೆಹೋವ ದೇವರಿಗೆ ಆಚರಿಸಲಾಯಿತು. \p \v 24 ಇದಲ್ಲದೆ ಯಾಜಕನಾದ ಹಿಲ್ಕೀಯನು ಯೆಹೋವ ದೇವರ ಆಲಯದಲ್ಲಿ ಕಂಡುಕೊಂಡ ಗ್ರಂಥದಲ್ಲಿ ಬರೆದಿದ್ದ ನಿಯಮದ ಮಾತುಗಳನ್ನು ಯೋಷೀಯನು ಈಡೇರಿಸುವಂತೆ ಯೆಹೂದ ದೇಶದಲ್ಲಿಯೂ, ಯೆರೂಸಲೇಮಿನಲ್ಲಿಯೂ ಭೂತಪ್ರೇತಗಳನ್ನು ವಿಚಾರಿಸುವವರನ್ನೂ, ಮಂತ್ರಗಾರರನ್ನೂ, ಮನೆದೇವರುಗಳನ್ನೂ, ವಿಗ್ರಹಗಳನ್ನೂ, ಸಮಸ್ತ ಅಸಹ್ಯಕರವಾದವುಗಳನ್ನೂ ತೆಗೆದುಹಾಕಿಬಿಟ್ಟನು. \v 25 ತನ್ನ ಪೂರ್ಣಹೃದಯದಿಂದಲೂ, ತನ್ನ ಪೂರ್ಣಪ್ರಾಣದಿಂದಲೂ, ತನ್ನ ಪೂರ್ಣ ಬಲದಿಂದಲೂ ಮೋಶೆಯ ಸಮಸ್ತ ನಿಯಮದ ಪ್ರಕಾರ ಯೆಹೋವ ದೇವರ ಕಡೆಗೆ ತಿರುಗಿಕೊಂಡ ಯೋಷೀಯ ಅರಸನಿಗೆ ಸಮಾನನಾದ ಅರಸನು ಹಿಂದೆಯೂ ಅನಂತರವೂ ಇರಲಿಲ್ಲ. \p \v 26 ಆದರೂ ಮನಸ್ಸೆಯು ಮಾಡಿದ ದುಷ್ಕೃತ್ಯಗಳ ನಿಮಿತ್ತ ಯೆಹೂದ್ಯರ ಮೇಲೆ ಯೆಹೋವ ದೇವರ ಕೋಪವು ಇನ್ನೂ ನೆಲೆಯಾಗಿತ್ತು. \v 27 ಯೆಹೋವ ದೇವರು, “ನಾನು ಇಸ್ರಾಯೇಲನ್ನು ತೆಗೆದುಹಾಕಿದ ಹಾಗೆ ಯೆಹೂದವನ್ನು ಸಹ ನನ್ನ ಸಮ್ಮುಖದಿಂದ ತೆಗೆದುಹಾಕುವೆನು. ಇದಲ್ಲದೆ ನಾನು ಆಯ್ದುಕೊಂಡ ಯೆರೂಸಲೇಮ್ ಪಟ್ಟಣವನ್ನೂ, ‘ನನ್ನ ಹೆಸರು ಅಲ್ಲಿರುವುದು,’\f + \fr 23:27 \fr*\ft \+xt 1 ಅರಸು 8:29\+xt*\ft*\f* ಎಂದು ನಾನು ಹೇಳಿದ ಆಲಯವನ್ನೂ ತೆಗೆದುಬಿಡುವೆನು,” ಎಂದು ಹೇಳಿದರು. \p \v 28 ಯೋಷೀಯನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \p \v 29 ಅವನ ಕಾಲದಲ್ಲಿ ಈಜಿಪ್ಟಿನ ಅರಸ ಫರೋಹ ನೆಕೋ ಎಂಬವನು ಅಸ್ಸೀರಿಯದ ಅರಸನಿಗೆ ಸಹಾಯಮಾಡಲು ಯೂಫ್ರೇಟೀಸ್ ನದಿಯವರೆಗೆ ಹೋದನು. ಅರಸನಾದ ಯೋಷೀಯನು ಅವನನ್ನು ಯುದ್ಧದಲ್ಲಿ ಎದುರಿಸಲು ಹೋದಾಗ, ನೆಕೋ ಅವನನ್ನು ಎದುರಿಸಿ ಮೆಗಿದ್ದೋವಿನಲ್ಲಿ ಕೊಂದುಹಾಕಿದನು. \v 30 ಯೋಷೀಯನ ಸೇವಕರು ಅವನ ಶವವನ್ನು ಮೆಗಿದ್ದೋವಿನಿಂದ ಯೆರೂಸಲೇಮಿಗೆ ರಥದಲ್ಲಿ ತೆಗೆದುಕೊಂಡು ಬಂದು ಅವನ ಸ್ವಂತ ಸಮಾಧಿಯಲ್ಲಿ ಇಟ್ಟರು. ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ಅಭಿಷೇಕಿಸಿ, ಅವನ ತಂದೆಗೆ ಬದಲಾಗಿ ಅವನನ್ನು ಅರಸನನ್ನಾಗಿ ಮಾಡಿದರು. \s1 ಯೆಹೂದ್ಯರ ಅರಸನಾದ ಯೆಹೋವಾಹಾಜನು \p \v 31 ಯೆಹೋವಾಹಾಜನು ಅರಸನಾದಾಗ ಇಪ್ಪತ್ತಮೂರು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿ ಲಿಬ್ನ ಊರಿನ ಯೆರೆಮೀಯನ ಮಗಳಾದ ಹಮೂಟಲ್. \v 32 ಯೆಹೋವಾಹಾಜನು ತನ್ನ ಪೂರ್ವಿಕರಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. \v 33 ಆದರೆ ಫರೋಹ ನೆಕೋವನು ಇವನನ್ನು ಯೆರೂಸಲೇಮಿನಲ್ಲಿ ಆಳದ ಹಾಗೆ ಹಮಾತ್ ದೇಶದ ರಿಬ್ಲಾ ಎಂಬ ಊರಲ್ಲಿ ಬಂಧಿಸಿಟ್ಟನು. ಯೆಹೂದ್ಯರು ಅವನಿಗೆ ಮೂರು ಸಾವಿರದ ನಾಲ್ಕುನೂರು ಕಿಲೋಗ್ರಾಂ ಬೆಳ್ಳಿಯನ್ನೂ, ಮೂವತ್ತ ನಾಲ್ಕು ಕಿಲೋಗ್ರಾಂ ಬಂಗಾರವನ್ನೂ ದಂಡ ತೆರಬೇಕಾಯಿತು. \v 34 ಫರೋಹ ನೆಕೋವನು ಯೋಷೀಯನಿಗೆ ಬದಲಾಗಿ ಅವನ ಮಗನಾದ ಎಲ್ಯಾಕೀಮನನ್ನು ಅರಸನನ್ನಾಗಿ ಮಾಡಿ, ಅವನಿಗೆ ಯೆಹೋಯಾಕೀಮನೆಂಬ ಹೆಸರನ್ನಿಟ್ಟನು. ಯೆಹೋವಾಹಾಜನನ್ನು ತೆಗೆದುಕೊಂಡು ಈಜಿಪ್ಟಿಗೆ ಒಯ್ದನು. ಯೆಹೋವಾಹಾಜನು ಅಲ್ಲೇ ಮರಣಹೊಂದಿದನು. \v 35 ಯೆಹೋಯಾಕೀಮನು ಬೆಳ್ಳಿಯನ್ನೂ, ಬಂಗಾರವನ್ನೂ ಫರೋಹನಿಗೆ ಕೊಟ್ಟನು. ಅವನು ಬೆಳ್ಳಿಯನ್ನೂ, ಬಂಗಾರವನ್ನೂ ನೆಕೋ ಫರೋಹನಿಗೆ ಕೊಡಲು ದೇಶದ ಜನರಿಂದ ಪ್ರತಿಯೊಬ್ಬರ ತೆರಿಗೆಯನ್ನು ಬಲವಂತವಾಗಿ ತೆಗೆದುಕೊಂಡನು. \s1 ಯೆಹೂದ್ಯರ ಅರಸನಾದ ಯೆಹೋಯಾಕೀಮನು \p \v 36 ಯೆಹೋಯಾಕೀಮನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿ ರೂಮಾ ಊರಿನವಳೂ ಪೆದಾಯನ ಮಗಳೂ ಆದ ಜೆಬೂದಾ. \v 37 ಅವನು ತನ್ನ ಪೂರ್ವಿಕರಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. \c 24 \p \v 1 ಯೆಹೋಯಾಕೀಮನ ಆಳಿಕೆಯಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದೇಶವನ್ನು ದಾಳಿಮಾಡಿದನು. ಯೆಹೋಯಾಕೀಮನು ಮೂರು ವರ್ಷ ಅವನ ಸೇವಕನಾಗಿದ್ದು, ತರುವಾಯ ಅವನ ಮೇಲೆ ತಿರುಗಿಬಿದ್ದನು. \v 2 ಯೆಹೋವ ದೇವರು ಬಾಬಿಲೋನಿಯರನ್ನೂ, ಅರಾಮ್ಯರನ್ನೂ, ಮೋವಾಬ್ಯರನ್ನೂ, ಅಮ್ಮೋನಿಯರನ್ನೂ ಅವನ ಮೇಲೆ ಕಳುಹಿಸಿದನು. ಯೆಹೋವ ದೇವರು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ, ಯೆಹೂದವನ್ನು ನಾಶಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು. \v 3 ನಿಶ್ಚಯವಾಗಿ ಯೆಹೋವ ದೇವರ ಅಪ್ಪಣೆಯಿಂದ ಇದು ಯೆಹೂದದ ಮೇಲೆ ಆಯಿತು. ಮನಸ್ಸೆಯು ತನ್ನ ಸಮಸ್ತ ಕೃತ್ಯಗಳಿಂದ ಮಾಡಿದ ಪಾಪಗಳ ನಿಮಿತ್ತ, ಯೆಹೂದವನ್ನು ದೇವರು ತಮ್ಮ ಸಮ್ಮುಖದಿಂದ ತೆಗೆದುಹಾಕುವಂತೆ ಇದಾಯಿತು. \v 4 ಇದಲ್ಲದೆ ಮನಸ್ಸೆಯು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಯೆಹೋವ ದೇವರು ಅದನ್ನು ಕ್ಷಮಿಸಲು ಸಿದ್ಧವಾಗಿರಲಿಲ್ಲ. \p \v 5 ಯೆಹೋಯಾಕೀಮನ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. \v 6 ಯೆಹೋಯಾಕೀಮನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಖೀನನು ಅರಸನಾದನು. \p \v 7 ಆದರೆ ಈಜಿಪ್ಟಿನ ಅರಸನು ತನ್ನ ದೇಶದಿಂದ ತಿರುಗಿ ಬರಲಿಲ್ಲ. ಏಕೆಂದರೆ ಈಜಿಪ್ಟ್ ನದಿ ಮೊದಲುಗೊಂಡು ಯೂಫ್ರೇಟೀಸ್ ನದಿಯವರೆಗೂ ಈಜಿಪ್ಟಿನ ಅರಸನಿಗೆ ಇದ್ದದ್ದನ್ನೆಲ್ಲಾ ಬಾಬಿಲೋನಿನ ಅರಸನು ಸ್ವಾಧೀನಮಾಡಿಕೊಂಡಿದ್ದನು. \s1 ಯೆಹೂದ್ಯರ ಅರಸನಾದ ಯೆಹೋಯಾಕೀನನು \p \v 8 ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಯೆರೂಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ. \v 9 ಅವನು ತನ್ನ ತಂದೆಯು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು. \p \v 10 ಆ ಕಾಲದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಸೈನ್ಯದವರು ಯೆರೂಸಲೇಮಿಗೆ ವಿರೋಧವಾಗಿ ಬಂದು ಆ ಪಟ್ಟಣಕ್ಕೆ ಮುತ್ತಿಗೆ ಹಾಕಿದರು. \v 11 ಅಷ್ಟರಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತಾನೇ ಆ ಪಟ್ಟಣಕ್ಕೆ ಬಂದನು. \v 12 ಆಗ ಯೆಹೂದದ ಅರಸನಾದ ಯೆಹೋಯಾಖೀನನೂ, ಅವನ ತಾಯಿಯೂ, ಅವನ ಸೇವಕರೂ, ಅವನ ಪ್ರಧಾನರೂ, ಅವನ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಶರಣಾದರು. \p ಬಾಬಿಲೋನಿನ ಅರಸನು ತನ್ನ ಆಳಿಕೆಯ ಎಂಟನೆಯ ವರ್ಷದಲ್ಲಿ ಯೆಹೋಯಾಕೀನನನ್ನು ಸೆರೆಹಿಡಿದನು. \v 13 ಯೆಹೋವ ದೇವರು ಮುಂತಿಳಿಸಿದ ಪ್ರಕಾರವೇ ನೆಬೂಕದ್ನೆಚ್ಚರನು ಯೆಹೋವ ದೇವರ ಆಲಯದಲ್ಲಿ ಸಮಸ್ತ ಬೊಕ್ಕಸಗಳನ್ನೂ, ಅರಮನೆಯ ಬೊಕ್ಕಸಗಳನ್ನೂ, ಇಸ್ರಾಯೇಲಿನ ಅರಸನಾದ ಸೊಲೊಮೋನನು ಅರಸನ ಆಲಯದಲ್ಲಿ ಮಾಡಿದ ಬಂಗಾರದ ಸಮಸ್ತ ಪಾತ್ರೆಗಳನ್ನೂ ಸೂರೆಯಾಗಿ ತೆಗೆದುಕೊಂಡನು. \v 14 ಅವನು ಯೆರೂಸಲೇಮಿನವರೆಲ್ಲರನ್ನೂ, ಸಮಸ್ತ ಪ್ರಧಾನರನ್ನೂ, ಸಮಸ್ತ ಸ್ಥಿತಿಯುಳ್ಳ ಪರಾಕ್ರಮಶಾಲಿಗಳನ್ನೂ, ಹತ್ತು ಸಾವಿರ ಸೆರೆಯವರನ್ನೂ ಮತ್ತು ಸಮಸ್ತ ಕೌಶಲಗಾರರನ್ನೂ, ಕಮ್ಮಾರರನ್ನೂ ಅಲ್ಲಿಂದ ಒಯ್ದನು. ದೇಶದಲ್ಲಿ ಬಡವರು ಹೊರತು ಉಳಿದವರು ಯಾರೂ ಇರಲಿಲ್ಲ. \p \v 15 ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು ಬಾಬಿಲೋನಿಗೆ ಸೆರೆಯಾಗಿ ಒಯ್ದನು. ಅರಸನ ತಾಯಿಯನ್ನೂ, ಅರಸನ ಹೆಂಡತಿಯರನ್ನೂ, ಅವನ ಅಧಿಕಾರಿಗಳನ್ನೂ, ದೇಶದ ಪ್ರತಿಷ್ಠಿತರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಯಾಗಿ ಒಯ್ದನು. \v 16 ಬಾಬಿಲೋನಿನ ಅರಸನು ಸಮಸ್ತ ಸ್ಥಿತಿವಂತರಾದ ಏಳು ಸಾವಿರ ಸೈನಿಕರನ್ನೂ, ಕೌಶಲಗಾರರನ್ನೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಾಬಿಲೋನಿಗೆ ಸೆರೆಯಾಗಿ ಒಯ್ದನು. \v 17 ಬಾಬಿಲೋನಿನ ಅರಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ, ಅವನಿಗೆ ಚಿದ್ಕೀಯನೆಂದು ಬೇರೆ ಹೆಸರನ್ನಿಟ್ಟನು. \s1 ಯೆಹೂದ್ಯರ ಅರಸನಾದ ಚಿದ್ಕೀಯನು \p \v 18 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್. \v 19 ಅವನು ಯೆಹೋಯಾಕೀಮನು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. \v 20 ಯೆಹೋವ ದೇವರ ಕೋಪದಿಂದ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಇವೆಲ್ಲ ಉಂಟಾದವು. ಹೀಗೆ ಯೆಹೋವ ದೇವರು ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಟ್ಟರು. \s1 ಯೆರೂಸಲೇಮಿನ ಪತನ \p ಅನಂತರ ಚಿದ್ಕೀಯನು ಬಾಬಿಲೋನಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು. \c 25 \p \v 1 ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯ ಸಮೇತ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿಸಿದನು. \v 2 ಅರಸನಾದ ಚಿದ್ಕೀಯನ ಹನ್ನೊಂದನೆಯ ವರ್ಷದವರೆಗೆ ಪಟ್ಟಣಕ್ಕೆ ಮುತ್ತಿಗೆಹಾಕಿದನು. \p \v 3 ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿವಸದಲ್ಲಿ ಪಟ್ಟಣದಲ್ಲಿ ಕ್ಷಾಮವು ಬಲವಾದದ್ದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು. \v 4 ಆಗ ಪಟ್ಟಣದ ಗೋಡೆ ಮುರಿಯಲಾಯಿತು. ಸೈನಿಕರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನ ಮಾರ್ಗವಾಗಿ ಹೊರಟು, ಬಾಬಿಲೋನಿನವರು ಪಟ್ಟಣದ ಬಳಿಯಲ್ಲಿ ಇದ್ದದ್ದರಿಂದ ಅವರು ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು. \v 5 ಆಗ ಕಸ್ದೀಯರ\f + \fr 25:5 \fr*\fq ಕಸ್ದೀಯ \fq*\ft ಅಥವಾ \ft*\fqa ಬಾಬಿಲೋನಿನವರ\fqa*\f* ದಂಡು ಅರಸನನ್ನು ಹಿಂದಟ್ಟಿ, ಯೆರಿಕೋವಿನ ಬಯಲು ಸ್ಥಳದಲ್ಲಿ ಅವನನ್ನು ಹಿಡಿದರು. ಅವನ ದಂಡೆಲ್ಲಾ ಅವನನ್ನು ಬಿಟ್ಟು ಚದರಿಹೋಯಿತು. \v 6 ಅವರು ಅರಸನನ್ನು ಹಿಡಿದುಕೊಂಡರು. \p ರಿಬ್ಲದಲ್ಲಿರುವ ಬಾಬಿಲೋನಿನ ಅರಸನ ಬಳಿಗೆ ತೆಗೆದುಕೊಂಡು ಬಂದು, ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು. \v 7 ಅವರು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದರು. ತರುವಾಯ ಅವನ ಕಣ್ಣುಗಳನ್ನು ಕೀಳಿಸಿ, ಅವನಿಗೆ ಬೇಡಿಹಾಕಿಸಿ ಅವನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. \p \v 8 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದ ಐದನೆಯ ತಿಂಗಳಿನ, ಏಳನೆಯ ದಿನದಲ್ಲಿ ಬಾಬಿಲೋನಿನ ಅರಸನ ಸೇವಕನೂ, ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂಸಲೇಮಿಗೆ ಬಂದು, \v 9 ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ, ಯೆರೂಸಲೇಮಿನಲ್ಲಿರುವ ಸಮಸ್ತ ಮನೆಗಳನ್ನೂ, ಪ್ರತಿ ದೊಡ್ಡಮನುಷ್ಯರ ಮನೆಗಳನ್ನೂ ಬೆಂಕಿಯಿಂದ ಸುಟ್ಟುಬಿಟ್ಟನು. \v 10 ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಬಾಬಿಲೋನಿಯರ ಸೈನ್ಯದವರೆಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆಗಳನ್ನು ಕೆಡವಿಬಿಟ್ಟರು. \v 11 ಕಾವಲಿನ ಅಧಿಪತಿಯಾದ ನೆಬೂಜರದಾನನು ಪಟ್ಟಣದಲ್ಲಿ ಉಳಿದ ಜನರನ್ನೂ, ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನೂ, ಬೇರೆ ಎಲ್ಲಾ ಜನರನ್ನೂ ಸೆರೆಯಾಗಿ ಒಯ್ದನು. \v 12 ಆದರೆ ಕಾವಲಿನ ಅಧಿಪತಿಯು ಹೊಲಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಬೇಸಾಯ ಮಾಡುವದಕ್ಕಾಗಿ ದೇಶದ ಜನರಲ್ಲಿ ಕೇವಲ ಬಡವರನ್ನು ಮಾತ್ರ ಬಿಟ್ಟುಹೋದನು. \p \v 13 ಯೆಹೋವ ದೇವರ ಆಲಯದಲ್ಲಿದ್ದ ಕಂಚಿನ ಸ್ತಂಭಗಳನ್ನೂ, ಪೀಠಗಳನ್ನೂ, ಕಂಚಿನ ಸಮುದ್ರವೆಂಬ ಪಾತ್ರೆಯನ್ನೂ ಬಾಬಿಲೋನಿಯರು ಒಡೆದುಹಾಕಿ, ಅದರ ಕಂಚನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. \v 14 ಇದಲ್ಲದೆ ಅವರು ಆಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಬಟ್ಟಲು ಮತ್ತು ಸಮಸ್ತ ಕಂಚಿನ ಸಲಕರಣೆಗಳನ್ನೂ ತೆಗೆದುಕೊಂಡು ಹೋದರು. \v 15 ಕಾವಲುಗಾರರ ಅಧಿಪತಿಯು ಅಗ್ನಿ ಪಾತ್ರೆಗಳನ್ನೂ, ತಟ್ಟೆಗಳನ್ನೂ, ಬಂಗಾರ ಬೆಳ್ಳಿಗಳಿಂದ ಮಾಡಿದ ಎಲ್ಲವನ್ನೂ ತೆಗೆದುಕೊಂಡನು. \p \v 16 ಸೊಲೊಮೋನನು ಯೆಹೋವ ದೇವರ ಆಲಯಕ್ಕಾಗಿ ಮಾಡಿಸಿದ್ದ ಎರಡು ಕಂಬಗಳು, ಕಂಚಿನ ಸಮುದ್ರವೆಂಬ ಪಾತ್ರೆ, ಚಕ್ರದ ಬಂಡಿಗಳು, ಇವುಗಳನ್ನು ಮಾಡುವುದಕ್ಕೆ ತೂಕ ಮಾಡಲಾರದಷ್ಟು ಕಂಚು ಹಿಡಿದಿತ್ತು. \v 17 ಪ್ರತಿಯೊಂದು ಕಂಬ ಎಂಟು ಮೀಟರ್ ಎತ್ತರವಿತ್ತು. ಪ್ರತಿಯೊಂದರ ಮೇಲೆ ಸುಮಾರು ಒಂದೂವರೆ ಮೀಟರ್ ಎತ್ತರವಾದ ಒಂದು ಕಂಚಿನ ಕುಂಭವಿತ್ತು. ಆ ಕುಂಭಗಳ ಮೇಲೆ ಸುತ್ತಲೂ ಕಂಚಿನ ಜಾಲರಿ ಹಾಗೂ ದಾಳಿಂಬೆ ಹಣ್ಣುಗಳು ಇದ್ದವು. \p \v 18 ಕಾವಲುಗಾರರ ಅಧಿಪತಿಯು ಮುಖ್ಯಯಾಜಕನಾದ ಸೆರಾಯನನ್ನೂ, ಎರಡನೆಯ ಯಾಜಕನಾದ ಚೆಫನ್ಯನನ್ನೂ, ಮೂವರು ದ್ವಾರಪಾಲಕರನ್ನೂ ಹಿಡಿದುಕೊಂಡು ಹೋದನು. \v 19 ಇದಲ್ಲದೆ ಪಟ್ಟಣದೊಳಗಿಂದ ಸೈನಿಕರ ಮೇಲಿದ್ದ ಒಬ್ಬ ಅಧಿಕಾರಿಯನ್ನೂ, ಅರಸನ ಐದು ಮಂದಿ ಸಲಹೆಗಾರರನ್ನೂ, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಮಾಡುವ ಸೇನಾಧಿಪತಿಯ ಲೇಖಕನನ್ನೂ, ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶದ ಜನರಲ್ಲಿ ಅರವತ್ತು ಮಂದಿಯನ್ನೂ ತೆಗೆದುಕೊಂಡನು. \v 20 ಇವರನ್ನೆಲ್ಲಾ ಕಾವಲಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡುಹೋಗಿ, ರಿಬ್ಲದಲ್ಲಿದ್ದ ಬಾಬಿಲೋನಿನ ಅರಸನಿಗೆ ಒಪ್ಪಿಸಿದನು. \v 21 ಬಾಬಿಲೋನಿನ ಅರಸನು ಹಮಾತಿನ ರಿಬ್ಲದಲ್ಲಿ ಅವರನ್ನು ಕೊಂದುಹಾಕಿಸಿದನು. \p ಈ ಪ್ರಕಾರ ಯೆಹೂದ್ಯರು ಸೆರೆಯಾಳುಗಳಾಗಿ ತಮ್ಮ ದೇಶವನ್ನು ಬಿಟ್ಟುಹೋಗಬೇಕಾಯಿತು. \p \v 22 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದ ದೇಶದಲ್ಲಿ ಉಳಿಸಿದ ಜನರ ಮೇಲೆ, ಶಾಫಾನನ ಮೊಮ್ಮಗನೂ, ಅಹೀಕಾಮನ ಮಗನೂ ಆದ ಗೆದಲ್ಯನನ್ನು ರಾಜ್ಯಪಾಲನನ್ನಾಗಿ ನೇಮಿಸಿದನು. \v 23 ಆದರೆ ಬಾಬಿಲೋನಿನ ಅರಸನು ಗೆದಲ್ಯನನ್ನು ರಾಜ್ಯಪಾಲನಾಗಿ ಮಾಡಿದ್ದಾನೆಂಬ ಸುದ್ದಿಯನ್ನು ಕೇಳಿದ ಮೇಲೆ, ಉಳಿದಿದ್ದ ಯೆಹೂದ ಸೇನಾಧಿಪತಿಗಳೂ ಅವರ ಜನರೂ, ನೆತನ್ಯನ ಮಗ ಇಷ್ಮಾಯೇಲನೂ, ಕಾರೇಹನ ಮಗ ಯೋಹಾನಾನ್, ನೆಟೋಫದವನಾದ ತನ್ಹುಮೆತನ ಮಗ ಸೆರಾಯ್, ಮಾಕಾತ್ಯರಲ್ಲಿ ಒಬ್ಬನ ಮಗ ಯಾಜನ್ಯ, ಇವರೆಲ್ಲರೂ ತಮ್ಮ ಜನರಸಹಿತವಾಗಿ ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಬಂದರು. \v 24 ಆಗ ಗೆದಲ್ಯನು ಅವರಿಗೂ, ಅವರ ಜನರಿಗೂ ಪ್ರಮಾಣಮಾಡಿ, “ಬಾಬಿಲೋನಿಯದ ಸೈನಿಕರಿಗೆ ಭಯಪಡಬೇಡಿರಿ; ದೇಶದಲ್ಲಿ ವಾಸವಾಗಿದ್ದು, ಬಾಬಿಲೋನಿನ ಅರಸನಿಗೆ ಸೇವೆಮಾಡಿರಿ; ಆಗ ನಿಮಗೆ ಒಳ್ಳೆಯದಾಗುವುದು,” ಎಂದನು. \p \v 25 ಆದರೆ ಏಳನೆಯ ತಿಂಗಳಲ್ಲಿ ಅರಸನ ಸಂತಾನದವನೂ, ಎಲೀಷಾಮನ ಮೊಮ್ಮಗನೂ, ನೆತನ್ಯನ ಮಗನೂ ಆದ ಇಷ್ಮಾಯೇಲನು ಅವನ ಸಂಗಡ ಹತ್ತು ಮಂದಿಯೂ ಬಂದು ಗೆದಲ್ಯನನ್ನೂ, ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನೂ, ಬಾಬಿಲೋನಿಯರನ್ನೂ ಕೊಂದುಹಾಕಿದರು. \v 26 ಆಗ ಹಿರಿಕಿರಿಯರಾದ ಸಮಸ್ತ ಜನರೂ, ದಂಡುಗಳ ಅಧಿಪತಿಗಳೂ ಬಾಬಿಲೋನಿಯದವರಿಗೆ ಹೆದರಿ ಎದ್ದು ಈಜಿಪ್ಟಿಗೆ ಹೋದರು. \s1 ಯೆಹೋಯಾಕೀನನ ಬಿಡುಗಡೆ \p \v 27 ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿವಸದಲ್ಲಿ, ಬಾಬಿಲೋನಿನ ಅರಸನಾದ ಎವೀಲ್ಮೆರೋದಕನು ತನ್ನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಅವನು ಯೆಹೂದದ ಅರಸನಾದ ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡಿಸಿದನು. \v 28 ಇದಲ್ಲದೆ ಅವನ ಸಂಗಡ ಪ್ರೀತಿಯಿಂದ ಮಾತನಾಡಿ, ತನ್ನ ಸಂಗಡ ಬಾಬೆಲಿನಲ್ಲಿದ್ದ ಎಲ್ಲಾ ಅರಸರಿಗಿಂತ ಅವನಿಗೆ ಉನ್ನತಸ್ಥಾನವನ್ನು ಕೊಟ್ಟನು. \v 29 ಅವನ ಸೆರೆಯ ವಸ್ತ್ರಗಳನ್ನು ತೆಗೆದು ರಾಜವಸ್ತ್ರ ತೊಡಿಸಿದನು. ಹೀಗೆ ಯೆಹೋಯಾಖೀನನು ಬದುಕಿದ ಸಕಲ ದಿವಸಗಳಲ್ಲಿ ಅರಸನ ಪಂಕ್ತಿಯಲ್ಲಿಯೇ ಊಟಮಾಡುತ್ತಿದ್ದನು. \v 30 ಅವನು ಬದುಕಿರುವವರೆಗೂ ಅವನಿಗೆ ಬೇಕಾಗಿದ್ದ ಎಲ್ಲಾ ಪದಾರ್ಥಗಳು ಬಾಬಿಲೋನಿನ ಅರಸನಿಂದಲೇ ಪ್ರತಿನಿತ್ಯವೂ ದೊರಕುತ್ತಿದ್ದವು.