\id 2CO - Biblica® Open Kannada Contemporary Version \ide UTF-8 \h 2 ಕೊರಿಂಥದವರಿಗೆ \toc1 ಕೊರಿಂಥದವರಿಗೆ ಪೌಲನು ಬರೆದ ಎರಡನೆಯ ಪತ್ರಿಕೆ \toc2 2 ಕೊರಿಂಥದವರಿಗೆ \toc3 2 ಕೊರಿಂಥ \mt1 ಕೊರಿಂಥದವರಿಗೆ \mt2 ಪೌಲನು ಬರೆದ ಎರಡನೆಯ ಪತ್ರಿಕೆ \c 1 \p \v 1 ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ, \b \p ಕೊರಿಂಥದಲ್ಲಿರುವ ದೇವರ ಸಭೆಗೆ ಮತ್ತು ಅಖಾಯ ಪ್ರಾಂತದಲ್ಲಿರುವ ಎಲ್ಲಾ ಪವಿತ್ರ ಜನರಿಗೆ ಬರೆಯುವ ಪತ್ರ: \b \p \v 2 ನಮ್ಮ ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. \b \s1 ಸಂತೈಸುವ ದೇವರು \p \v 3 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣೆಯುಳ್ಳ ತಂದೆಯೂ ಎಲ್ಲರನ್ನೂ ಆದರಿಸುವ ದೇವರೂ ಆಗಿದ್ದಾರೆ. \v 4 ದೇವರು ನಮಗಾಗುವ ಎಲ್ಲಾ ಬಾಧೆಗಳಲ್ಲಿ ನಮ್ಮನ್ನು ಸಂತೈಸುವವರಾಗಿದ್ದಾರೆ. ಇತರರು ಬಾಧೆಗಳನ್ನು ಅನುಭವಿಸುತ್ತಿರುವಾಗ, ನಾವು ಸಹ ದೇವರಿಂದ ಹೊಂದಿರುವ ಸಂತೈಸುವಿಕೆಯಿಂದ ಅವರನ್ನು ಸಂತೈಸಲು ನಮ್ಮನ್ನು ಶಕ್ತರನ್ನಾಗಿ ಮಾಡಿದ್ದಾರೆ. \v 5 ಕ್ರಿಸ್ತ ಯೇಸುವಿನ ಸಂಕಟವು ನಮ್ಮಲ್ಲಿ ಹೇಗೆ ಅಧಿಕವಾಗಿದೆಯೋ ಹಾಗೆಯೇ, ಕ್ರಿಸ್ತ ಯೇಸುವಿನ ಮೂಲಕ ನಮ್ಮ ಸಂತೈಸುವಿಕೆಯೂ ನಮ್ಮಲ್ಲಿ ಅಧಿಕವಾಗಿರುತ್ತದೆ. \v 6 ನಮಗೆ ಕಷ್ಟಸಂಕಟಗಳು ಬಂದರೆ, ಅದು ನಿಮ್ಮ ಆದರಣೆ ಮತ್ತು ರಕ್ಷಣೆಗೋಸ್ಕರವೇ ಇರುತ್ತದೆ. ನಾವು ಸಂತೈಸುವಿಕೆಯನ್ನು ಹೊಂದಿರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ಆ ಆದರಣೆಯು ನಮ್ಮಂತೆ ನೀವು ಅನುಭವಿಸುವ ಕಷ್ಟಸಂಕಟಗಳನ್ನು ಸಹನೆಯಿಂದ ಅನುಭವಿಸುವಂತೆ ಮಾಡುವುದು. \v 7 ನಿಮಗಾಗಿರುವ ನಮ್ಮ ನಿರೀಕ್ಷೆಯು ಸ್ಥಿರವಾಗಿದೆ. ಏಕೆಂದರೆ, ನಮ್ಮ ಕಷ್ಟಸಂಕಟಗಳಲ್ಲಿ ನೀವು ಪಾಲುಗಾರರಾಗಿದ್ದಂತೆಯೇ, ನಮ್ಮ ಸಂತೈಸುವಿಕೆಗಳಲ್ಲಿಯೂ ನೀವು ನಮ್ಮೊಂದಿಗೆ ಪಾಲುಗಾರರಾಗಿದ್ದೀರಿ ಎಂದು ನಮಗೆ ಗೊತ್ತಿದೆ. \p \v 8 ಪ್ರಿಯರೇ, ನಾವು ಏಷ್ಯಾ ಪ್ರಾಂತದಲ್ಲಿ ಅನುಭವಿಸಿದ ಕಷ್ಟ ಸಂಕಟಗಳ ಬಗ್ಗೆ ನೀವು ತಿಳಿಯಬೇಕೆಂದು ಬಯಸುತ್ತೇವೆ. ನಾವು ಸಹಿಸುವುದಕ್ಕೆ ಬಹುಕಷ್ಟಕರವಾದ ಒತ್ತಡಗಳು ನಮಗೆ ಬಂದೊದಗಿದಾಗ, ಅವು ನಮ್ಮ ಪ್ರಾಣಕ್ಕೂ ಅಪಾಯಕಾರಿ ಎಂದೆನಿಸಿತು. \v 9 ಮರಣದ ಶಿಕ್ಷೆಯನ್ನು ನಾವು ಅನುಭವಿಸುತ್ತೇವೋ ಎಂಬಂತೆ ನಮಗಾಯಿತು. ನಾವು ನಮ್ಮ ಮೇಲೆ ಭರವಸೆಯಿಡದೆ, ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸೆ ಇಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು. \v 10 ನಾವು ಭರವಸೆಯಿಟ್ಟ ದೇವರು ಅಂಥಾ ಮರಣಕರ ಅಪಾಯದಿಂದ ನಮ್ಮನ್ನು ತಪ್ಪಿಸಿದ್ದಾರೆ ಮತ್ತು ಮುಂದೆಯೂ ಅಪಾಯಗಳಿಂದ ನಮ್ಮನ್ನು ಪಾರುಮಾಡುವರು. \v 11 ನೀವು ನಿಮ್ಮ ಪ್ರಾರ್ಥನೆಯಿಂದ ನಮಗೆ ಸಹಾಯಮಾಡಿರಿ. ಹೀಗೆ, ಬಹಳ ಜನರ ಪ್ರಾರ್ಥನೆಗಳಿಗೆ ಉತ್ತರವಾಗಿ ನಮಗೆ ದೊರಕಿದ ಕೃಪೆಯ ಮೆಚ್ಚುಗೆಗಾಗಿ, ಅನೇಕರು ನಮ್ಮ ಪರವಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವರು. \s1 ಪೌಲನ ಬದಲಾದ ಯೋಜನೆಗಳು \p \v 12 ಈ ಲೋಕದೊಂದಿಗೂ, ವಿಶೇಷವಾಗಿ ನಮ್ಮ ಮತ್ತು ನಿಮ್ಮ ಸಂಬಂಧದಲ್ಲಿಯೂ, ನಾವು ದೇವರಿಂದ ಹೊಂದಿದ ಪವಿತ್ರತೆ ಮತ್ತು ದೈವಿಕ ನಿಷ್ಕಪಟತ್ವದಿಂದ ಯೋಗ್ಯರಾಗಿ ವರ್ತಿಸಿದ್ದೇವೆ ಎಂದು ನಮ್ಮ ಮನಸ್ಸಾಕ್ಷಿ ಹೇಳುತ್ತದೆ. ಈ ಮನಸ್ಸಾಕ್ಷಿಯ ಹೇಳಿಕೆಯು ನಮಗೆ ಹೆಮ್ಮೆಯ ವಿಷಯವಾಗಿದೆ. ನಾವು ಇದನ್ನು ಈ ಲೋಕದ ಜ್ಞಾನದಿಂದ ಅಲ್ಲ, ದೇವರ ಕೃಪೆಯನ್ನೇ ಆಶ್ರಯಿಸಿ ಮಾಡಿದ್ದೇವೆ. \v 13 ನಿಮಗೆ ಓದಲು ಅಥವಾ ಅರ್ಥಮಾಡಿಕೊಳ್ಳಲು ಅಸಾಧ್ಯವಾದ ಯಾವುದನ್ನೂ ನಾವು ಬರೆಯಲಿಲ್ಲ. \v 14 ಈಗ ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರಿತುಕೊಂಡಿದ್ದೀರಿ. ಆದರೆ ಕರ್ತ ಆಗಿರುವ ಯೇಸುವಿನ ಪುನರಾಗಮನ ದಿನದಲ್ಲಿ ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುವಂತೆ, ನಮ್ಮ ಬಗ್ಗೆ ಹೆಮ್ಮೆ ಪಡಲು ನೀವು ಸಂಪೂರ್ಣವಾಗಿ ನಮ್ಮನ್ನು ಅರಿತುಕೊಳ್ಳುವಿರೆಂಬ ನಿರೀಕ್ಷೆ ನಮಗಿದೆ. \p \v 15 ಈ ಭರವಸೆಯಿಂದ, ನಾನು ನಿಮ್ಮನ್ನು ಮೊದಲು ಸಂದರ್ಶಿಸಿ, ನಿಮಗೆ ಎರಡರಷ್ಟು ಉಪಯುಕ್ತತೆಯನ್ನು ಹೊಂದುವಂತೆ ಯೋಚನೆ ಮಾಡಿದ್ದೆನು. \v 16 ಮಕೆದೋನ್ಯಕ್ಕೆ ಹೋಗುವಾಗ ನಾನು ನಿಮ್ಮನ್ನು ಸಂದರ್ಶಿಸುವೆನು, ಅಲ್ಲಿಂದ ಹಿಂದಿರುಗಿ ಬರುವಾಗಲೂ ನಿಮ್ಮನ್ನು ಸಂದರ್ಶಿಸಲು ನಾನೇ ಯೂದಾಯಕ್ಕೆ ಬರುವಂತೆ ಯೋಚನೆ ಮಾಡಿದ್ದೆನು. \v 17 ನಾನು ಇದನ್ನು ಯೋಚಿಸಿದಾಗ, ಚಂಚಲಹೃದಯವನ್ನು ತಾಳಿದೆನೋ? ಅಥವಾ, ಒಮ್ಮೆ ಅದು “ಹೌದು, ಹೌದು” ಅದೇ ಕ್ಷಣದಲ್ಲಿ ಅದು “ಅಲ್ಲ, ಅಲ್ಲ” ಎಂದು ನಾನು ಲೋಕ ರೀತಿಯಾಗಿ ಯೋಜನೆಯನ್ನು ತಯಾರಿಸಿದ್ದೇನೋ? \p \v 18 ನಿಶ್ಚಯವಾಗಿ, ದೇವರು ಹೇಗೆ ಪ್ರಾಮಾಣಿಕತೆಗೆ ಯೋಗ್ಯರೋ, ಹಾಗೆಯೇ ನಾವು ನಿಮಗೆ ಕೊಟ್ಟ ಸಂದೇಶವೂ, ಒಮ್ಮೆ “ಹೌದು,” ಒಮ್ಮೆ “ಅಲ್ಲ” ಎಂದಾಗಿರುವುದಿಲ್ಲ. \v 19 ನಾನು, ಸಿಲ್ವಾನ ಮತ್ತು ತಿಮೊಥೆಯನು ನಿಮ್ಮಲ್ಲಿ ಬೋಧಿಸಿದ ದೇವರ ಪುತ್ರನಾದ ಯೇಸು ಕ್ರಿಸ್ತನು ಒಮ್ಮೆ “ಹೌದು,” ಒಮ್ಮೆ “ಅಲ್ಲ” ಎಂದಾಗಿರುವುದಿಲ್ಲ. ಯಾವಾಗಲೂ ಅದು ಕ್ರಿಸ್ತನಲ್ಲಿ ಹೌದು ಎಂದೇ ಆಗಿರುತ್ತಾನೆ. \v 20 ದೇವರು ಕೊಟ್ಟಿರುವ ವಾಗ್ದಾನಗಳೆಲ್ಲವೂ ಕ್ರಿಸ್ತ ಯೇಸುವಿನಲ್ಲಿ “ಹೌದು” ಎಂದೇ ಇರುತ್ತದೆ. ಕ್ರಿಸ್ತ ಯೇಸುವಿನ ಮೂಲಕ ನಾವು ಅದಕ್ಕೆ “ಆಮೆನ್” ಎಂದು ದೇವರ ಮಹಿಮೆಗಾಗಿ ಎನ್ನುತ್ತೇವೆ. \v 21 ನೀವೂ ನಾವೂ ಕ್ರಿಸ್ತ ಯೇಸುವಿನಲ್ಲಿ ದೃಢವಾಗಿ ನಿಲ್ಲುವಂತೆ ದೇವರು ನಮ್ಮನ್ನು ಸ್ಥಿರಪಡಿಸುತ್ತಾರೆ. ದೇವರು ನಮ್ಮನ್ನು ಅಭಿಷೇಕಿಸಿ, \v 22 ನಮ್ಮ ಮೇಲೆ ದೇವರಿಗಿರುವ ಅಧಿಕಾರವೆಂಬ ಮುದ್ರೆಯನ್ನು ಒತ್ತಿದರು. ಮಾತ್ರವಲ್ಲದೇ ತಮ್ಮ ಪವಿತ್ರಾತ್ಮನನ್ನು ಖಾತರಿಯಾಗಿ ನಮ್ಮ ಹೃದಯದಲ್ಲಿಟ್ಟರು. \p \v 23 ನಿಮಗೆ ಶ್ರಮೆ ಪಡಿಸಬಾರದೆಂದು ನಾನು ಕೊರಿಂಥಕ್ಕೆ ಹಿಂದಿರುಗಿ ಬರಲಿಲ್ಲ. ಇದಕ್ಕೆ ದೇವರೇ ಸಾಕ್ಷಿ. \v 24 ನಿಮ್ಮ ವಿಶ್ವಾಸದ ಬಗ್ಗೆ ನಾವು ದಬ್ಬಾಳಿಕೆ ನಡೆಸುತ್ತೇವೆಂದು ತಿಳಿಯಬೇಡಿರಿ. ಆದರೆ ನಿಮ್ಮ ಆನಂದಕ್ಕಾಗಿ ಕೆಲಸಮಾಡಿ, ನಾವೂ ಭಾಗಿಗಳಾಗಿರಲು ಬಯಸುತ್ತೇವೆ. ಏಕೆಂದರೆ, ನೀವು ವಿಶ್ವಾಸದಲ್ಲಿ ದೃಢವಾಗಿ ನಿಂತಿದ್ದೀರಲ್ಲ. \c 2 \nb \v 1 ಆದ್ದರಿಂದ ಇನ್ನೊಮ್ಮೆ ನಿಮ್ಮ ಬಳಿಗೆ ಬಂದು ನಿಮಗೆ ವೇದನೆಯನ್ನು ಉಂಟುಮಾಡಬಾರದೆಂದು ನಾನು ನಿರ್ಧರಿಸಿಕೊಂಡೆನು. \v 2 ನಾನೇ ನಿಮ್ಮನ್ನು ದುಃಖಪಡಿಸಿದರೆ, ನಾನು ದುಃಖಪಡಿಸಿದ ನಿಮ್ಮನ್ನಲ್ಲದೆ ನನ್ನನ್ನು ಆನಂದಪಡಿಸುವವರು ಬೇರೆ ಯಾರಿದ್ದಾರೆ? \v 3 ನಾನು ಬಂದಾಗ ನನ್ನನ್ನು ಆನಂದಪಡಿಸತಕ್ಕವರಿಂದಲೇ ದುಃಖ ಹೊಂದಬಾರದೆಂದು ನಾನು ಹಿಂದಿನ ಪತ್ರವನ್ನು ನಿಮಗೆ ಬರೆದಿದ್ದೇನೆ. ನನ್ನ ಆನಂದದಲ್ಲಿ ನೀವೆಲ್ಲರೂ ಪಾಲಾಗುವಿರಿ ಎಂದು ನಿಮ್ಮೆಲ್ಲರ ವಿಷಯದಲ್ಲಿ ನನಗೆ ಭರವಸೆ ಇದೆ. \v 4 ಏಕೆಂದರೆ, ನಿಮಗೆ ದುಃಖವಾಗಬೇಕೆಂದಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂತಲೇ ನಾನು ಮಹಾ ದುಃಖದಿಂದಲೂ ಬಹಳ ಕಣ್ಣೀರಿನಿಂದಲೂ ಹೃದಯದ ವೇದನೆಯಿಂದಲೂ ನಿಮಗೆ ಬರೆದೆನು. \s1 ಅಪರಾಧಿಗೆ ಕ್ಷಮಾಪಣೆ \p \v 5 ನಿಮ್ಮಲ್ಲಿ ಯಾರಾದರೂ ನನ್ನನ್ನು ದುಃಖಪಡಿಸಿದರೆ, ಅವನು ನನ್ನನ್ನು ಮಾತ್ರವೇ ದುಃಖ ಪಡಿಸದೆ, ಒಂದು ವಿಧದಲ್ಲಿ ನಿಮ್ಮೆಲ್ಲರನ್ನೂ ದುಃಖಪಡಿಸಿದ್ದಾನೆ. ಅವನ ಮೇಲೆ ಬಹಳ ಕಠಿಣನಾಗಿರಲು ನನಗೆ ಇಷ್ಟವಿಲ್ಲ. \v 6 ಅವನಿಗೆ ನಿಮ್ಮಲ್ಲಿ ಅನೇಕರಿಂದ ಉಂಟಾದ ಶಿಕ್ಷೆಯೇ ಸಾಕು. \v 7 ಈಗ ಅವನನ್ನು ನೀವು ಕ್ಷಮಿಸಿ ಸಂತೈಸಿರಿ. ಇಲ್ಲವಾದರೆ, ಅವನು ದುಃಖದಲ್ಲಿ ಮುಳುಗಿ ಹೋದಾನು. \v 8 ಅದಕ್ಕಾಗಿ ನೀವು ನಿಮ್ಮ ಪ್ರೀತಿಯನ್ನು ಮೊದಲು ಇದ್ದಂತೆ ಈಗಲೂ ಅವನ ಮೇಲೆ ತೋರಿಸಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. \v 9 ಎಲ್ಲಾ ವಿಷಯಗಳಲ್ಲಿ ನೀವು ವಿಧೇಯರಾಗುತ್ತೀರೋ ಏನೋ ಎಂದು ಪರೀಕ್ಷಿಸಿ ಅರಿತುಕೊಳ್ಳಬೇಕೆಂಬ ಕಾರಣಕ್ಕಾಗಿ ನಾನು ನಿಮಗೆ ಹಾಗೆ ಬರೆದನು. \v 10 ನೀವು ಯಾರನ್ನಾದರೂ ಕ್ಷಮಿಸಿದರೆ, ನಾನು ಅವರನ್ನು ಕ್ಷಮಿಸುವೆನು. ನಾನು ಯಾರನ್ನಾದರೂ ಕ್ಷಮಿಸಿದರೆ, ನಿಮ್ಮ ನಿಮಿತ್ತವಾಗಿಯೇ ಕ್ರಿಸ್ತ ಯೇಸುವಿನ ಸನ್ನಿಧಾನದಲ್ಲಿ ಕ್ಷಮಿಸುವೆನು. \v 11 ಸೈತಾನನು ನಮ್ಮನ್ನು ವಂಚಿಸಲು ಅವಕಾಶ ಕೊಡಬಾರದು. ಅವನ ಕುತಂತ್ರಗಳನ್ನು ನಾವು ಅರಿತವರಲ್ಲವೇ? \s1 ಹೊಸ ಒಡಂಬಡಿಕೆಯ ಸೇವಕರು \p \v 12 ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಹೋದಾಗ, ಅಲ್ಲಿ ಕರ್ತ ಯೇಸುವು ನನಗೆ ಬಾಗಿಲು ತೆರೆದಿರುವುದನ್ನು ಕಂಡೆನು. \v 13 ನನ್ನ ಸಹೋದರನಾದ ತೀತನು ನನಗೆ ಅಲ್ಲಿ ಸಿಗದಿದ್ದ ಕಾರಣ, ನನ್ನ ಆತ್ಮಕ್ಕೆ ಇನ್ನೂ ವಿಶ್ರಾಂತಿಯಿರಲಿಲ್ಲ. ಆದ್ದರಿಂದ ತ್ರೋವದವರಿಗೆ ನಾನು ನನ್ನ ವಂದನೆಗಳನ್ನರ್ಪಿಸಿ ಮಕೆದೋನ್ಯ ಪ್ರಾಂತಕ್ಕೆ ಹೋದೆನು. \p \v 14 ಕ್ರಿಸ್ತ ಯೇಸುವಿನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರೆಸುತ್ತಾ, ಅವರ ವಿಷಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ಪ್ರಸಾರಗೊಳಿಸುವ ದೇವರಿಗೆ ಕೃತಜ್ಞತೆಗಳು. \v 15 ರಕ್ಷಣಾ ಮಾರ್ಗದಲ್ಲಿರುವವರಿಗೂ ನಾಶದ ಮಾರ್ಗದಲ್ಲಿರುವವರಿಗೂ ನಾವು ದೇವರಿಗೆ ಕ್ರಿಸ್ತ ಯೇಸುವಿನ ಪರಿಮಳವಾಗಿದ್ದೇವೆ. \v 16 ಕೆಲವರಿಗೆ ನಾವು ಮರಣದ ವಾಸನೆಯಾಗಿದ್ದೇವೆ. ಇತರರಿಗೆ ಜೀವವನ್ನು ಹುಟ್ಟಿಸುವ ವಾಸನೆಯಾಗಿರುತ್ತೇವೆ. ಇಂಥ ಸೇವೆಗೆ ಸಮರ್ಥರು ಯಾರು? \v 17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ, ಅದರಿಂದ ಹಣಗಳಿಸುತ್ತಾರೆ. ನಾವಾದರೋ ಹಾಗೆ ಮಾಡುವವರಲ್ಲ. ನಾವು ದೇವರಿಂದ ಕಳುಹಿಸಲಾದವರಾಗಿ ಕ್ರಿಸ್ತ ಯೇಸುವಿನಲ್ಲಿದ್ದುಕೊಂಡು ದೇವರ ಮುಂದೆ ಯಥಾರ್ಥವಾಗಿ ಮಾತನಾಡುತ್ತೇವೆ. \c 3 \p \v 1 ನಮ್ಮನ್ನು ನಾವೇ ತಿರುಗಿ ಶಿಫಾರಸ್ಸು ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸುತ್ತೇವೋ? ಬೇರೆಯವರಂತೆ ನಿಮಗೆ ತೋರಿಸುವುದಕ್ಕೆ ಯೋಗ್ಯತಾಪತ್ರವು ಬೇಕೋ ಅಥವಾ ನಿಮ್ಮಿಂದ ನಮಗೆ ಯೋಗ್ಯತಾಪತ್ರವು ಬೇಕಾಗಿದೆಯೋ? \v 2 ನೀವೇ ನಮ್ಮ ಹೃದಯದ ಮೇಲೆ ಎಲ್ಲರೂ ಓದಿ ತಿಳಿದುಕೊಳ್ಳಬಹುದಾದ ಪತ್ರವಾಗಿರುತ್ತೀರಿ. \v 3 ನಮ್ಮ ಸುವಾರ್ತಾ ಸೇವೆಯ ಫಲಿತಾಂಶವಾಗಿ, ನೀವು ಕ್ರಿಸ್ತ ಯೇಸುವಿನ ಪತ್ರವೆಂದು ಪ್ರಕಟಿಸುತ್ತಿದ್ದೀರಿ ಎಂಬುದು ಸ್ಪಷ್ಟವಾಗಿದೆ. ಆ ಪತ್ರವು ಮಸಿಯಿಂದ ಬರೆದದ್ದಲ್ಲ, ಜೀವವುಳ್ಳ ದೇವರ ಆತ್ಮನಿಂದಲೇ ಬರೆಯಲಾಗಿದೆ, ಕಲ್ಲಿನ ಹಲಗೆಗಳ ಮೇಲೆಯಲ್ಲ, ಮಾನವ ಹೃದಯಗಳೆಂಬ ಹಲಗೆಗಳ ಮೇಲೆ ಬರೆಯಲಾಗಿದೆ. \p \v 4 ಕ್ರಿಸ್ತ ಯೇಸುವಿನ ಮೂಲಕ ದೇವರ ಮುಂದೆ ನಮಗೆ ಅಂಥಾ ಭರವಸೆಯು ಇರುವುದರಿಂದ ನಾವು ಹಾಗೆ ಹೇಳುತ್ತಿದ್ದೇವೆ. \v 5 ನಮ್ಮಿಂದಲೇ ಉಂಟಾಯಿತು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಯಾವ ಸಾಮರ್ಥ್ಯವೂ ಇಲ್ಲ. ನಮ್ಮ ಸಾಮರ್ಥ್ಯವು ದೇವರಿಂದಲೇ ಬರುತ್ತದೆ. \v 6 ದೇವರು ನಮಗೆ ಹೊಸ ಒಡಂಬಡಿಕೆಯ ಸೇವಕರಾಗುವಂತೆ ಸಾಮರ್ಥ್ಯವನ್ನು ನೀಡಿರುತ್ತಾರೆ. ಇದು ಲಿಖಿತ ನಿಯಮಕ್ಕೆ ಸೇರಿದ್ದಾಗಿರದೆ, ಪವಿತ್ರಾತ್ಮನ ನಿಯಮದ ಸೇವೆಯಾಗಿರುತ್ತದೆ. ಏಕೆಂದರೆ, ಲಿಖಿತವಾದದ್ದು ಮರಣವನ್ನುಂಟುಮಾಡುತ್ತದೆ. ದೇವರಾತ್ಮನಿಂದಾದದ್ದು ಜೀವವನ್ನು ಉಂಟುಮಾಡುತ್ತದೆ. \s1 ಹೊಸ ಒಡಂಬಡಿಕೆಯ ಮಹಿಮೆ \p \v 7 ಕಲ್ಲಿನ ಮೇಲೆ ಅಕ್ಷರಗಳನ್ನು ಕೆತ್ತಿಸಿದ್ದೂ, ಮರಣವನ್ನುಂಟುಮಾಡುವಂಥದ್ದೂ ಆಗಿರುವ ಆ ಸೇವೆಯು ಮಹಿಮೆಯಿಂದ ಕೂಡಿದ್ದಾಗಿತ್ತು. ಕುಂದಿಹೋಗುವಂಥ ಆ ಮಹಿಮೆಯಿಂದ ತುಂಬಿದ ಮೋಶೆಯ ಮುಖವನ್ನು ಇಸ್ರಾಯೇಲರಿಗೆ ದಿಟ್ಟಿಸಿ ನೋಡಲು ಸಾಧ್ಯವಾಗಲಿಲ್ಲ. \v 8 ಆದರೆ ಪವಿತ್ರಾತ್ಮ ದೇವರಿಂದ ಜೀವವನ್ನು ಉಂಟುಮಾಡುವ ಸೇವೆಯು ಎಷ್ಟೋ ಹೆಚ್ಚಾಗಿ ಮಹಿಮೆಯುಳ್ಳದ್ದಾಗಿರಬೇಕು? \v 9 ಮನುಷ್ಯರನ್ನು ದಂಡನಾ ತೀರ್ಪಿಗೆ ಒಳಪಡಿಸುವಂಥ ಸೇವೆಯೇ ಮಹಿಮೆಯುಳ್ಳದ್ದಾಗಿದ್ದರೆ, ನೀತಿವಂತರೆಂದು ನಿರ್ಣಯಿಸುವ ಸೇವೆಯು ಇನ್ನೆಷ್ಟು ಮಹಿಮೆಯುಳ್ಳದ್ದಾಗಿರಬೇಕು! \v 10 ಈ ಸೇವೆಯ ಅಪರಿಮಿತ ಮಹಿಮೆಯ ಮುಂದೆ, ಹಿಂದಿನ ಆ ಶಾಸನದ ಮಹಿಮೆಯು ಇಲ್ಲದಂತಾಗಿದೆ. \v 11 ಇಲ್ಲದೆ ಹೋಗುವಂಥದ್ದು ಮಹಿಮೆಯುಳ್ಳದ್ದಾಗಿದ್ದಲ್ಲಿ, ನಿತ್ಯವಾಗಿರುವಂಥದ್ದು ಇನ್ನು ಹೆಚ್ಚಾದ ಮಹಿಮೆಯಲ್ಲಿರಬೇಕಲ್ಲವೇ? \p \v 12 ಇಂಥಾ ನಿರೀಕ್ಷೆಯು ನಮಗಿರುವುದರಿಂದ ನಾವು ಬಹಳ ಧೈರ್ಯಶಾಲಿಗಳಾಗಿದ್ದೇವೆ. \v 13 ತನ್ನ ಮುಖದಲ್ಲಿರುವ ಮಹಿಮೆಯು ಕುಂದಿ ಹೋಗುತ್ತಿರುವುದನ್ನು ಇಸ್ರಾಯೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು. ನಾವು ಮೋಶೆಯಂತೆ ಮಾಡುವವರಲ್ಲ. \v 14 ಆದರೆ ಇಸ್ರಾಯೇಲರ ಬುದ್ಧಿ ಮಂದವಾಯಿತು. ಈ ದಿನದವರೆಗೂ ಹಳೆಯ ಒಡಂಬಡಿಕೆಯು ಓದುವಾಗಲೆಲ್ಲಾ, ಅದೇ ಮುಸುಕು ಅವರಲ್ಲಿ ಇರುತ್ತದೆ. ಅದು ಕ್ರಿಸ್ತ ಯೇಸುವಿನಲ್ಲಿ ಮಾತ್ರವೇ ತೆಗೆಯಲು ಸಾಧ್ಯ. ಆದ್ದರಿಂದ ಅದು ಈಗಲೂ ತೆಗೆದುಹಾಕಲಾಗಿಲ್ಲ. \v 15 ಈ ದಿನದ ತನಕವೂ ಮೋಶೆಯ ಗ್ರಂಥವು ಓದುಗುವಾಗಲೆಲ್ಲಾ, ಅವರ ಹೃದಯಕ್ಕೆ ಮುಸುಕು ಹಾಕಲಾಗಿರುತ್ತದೆ. \v 16 ಆದರೆ ಯಾರಾದರೂ ಕರ್ತ ಯೇಸುವಿನ ಕಡೆಗೆ ತಿರುಗಿದಾಗೆಲ್ಲಾ, ಆ ಮುಸುಕು ಅವರಿಂದ ತೆಗೆಯಲಾಗುತ್ತದೆ. \v 17 ಕರ್ತದೇವರೇ ಆತ್ಮರಾಗಿದ್ದಾರೆ. “ಕರ್ತದೇವರ ಆತ್ಮವು ಎಲ್ಲಿರುತ್ತದೋ ಅಲ್ಲಿ ಸ್ವಾತಂತ್ರ್ಯವಿರುವುದು.” \v 18 ಹಾಗೆಯೇ, ನಾವು ಮುಸುಕಿಲ್ಲದ ನಮ್ಮ ಮುಖದಲ್ಲಿ ಕರ್ತದೇವರ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಹೀಗೆ ನಾವು ಮಹಿಮೆಯಿಂದ ಅಧಿಕ ಮಹಿಮೆಗೆ ಸಾಗಿ ಅವರ ಸಾರೂಪ್ಯಕ್ಕೆ ಅನುಸಾರವಾಗಿ ನಾವು ರೂಪಾಂತರವಾಗುತ್ತಿದ್ದೇವೆ. ಈ ರೂಪಾಂತರವು ದೇವರಾತ್ಮನಾಗಿರುವ ಕರ್ತನಿಂದಲೇ. \c 4 \s1 ಸಾಕ್ಷಿಯೂ ಪುನರುತ್ಥಾನದ ಜೀವವೂ \p \v 1 ದೇವರ ಕರುಣೆಯ ನಿಮಿತ್ತ ನಾವು ಈ ಸೇವೆಯನ್ನು ಹೊಂದಿರುವುದರಿಂದ ನಾವು ಧೈರ್ಯಗೆಡುವವರಲ್ಲ. \v 2 ನಾವು ನಾಚಿಕೆಯ ಗುಪ್ತ ಕಾರ್ಯಗಳನ್ನು ಬಿಟ್ಟುಬಿಟ್ಟು, ಕುತಂತ್ರದಲ್ಲಿ ನಡೆಯದೆಯೂ ವಂಚನೆಯಿಂದ ದೇವರ ವಾಕ್ಯಗಳನ್ನು ವ್ಯಾಖ್ಯಾನ ಮಾಡದೆಯೂ ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತಾ, ಎಲ್ಲಾ ಮನುಷ್ಯರ ಮನಸ್ಸಾಕ್ಷಿಯು ಒಪ್ಪಬೇಕಾದ ರೀತಿಯಲ್ಲಿ ನಮ್ಮನ್ನು ನಾವೇ ದೇವರ ಮುಂದೆ ಸಮರ್ಪಿಸಿಕೊಳ್ಳುತ್ತೇವೆ. \v 3 ನಾವು ಪ್ರಚಾರ ಮಾಡುವ ಸುವಾರ್ತೆಯು ಮುಸುಕು ಹಾಕಿರುವುದಾದರೆ, ಅದು ನಾಶದ ಮಾರ್ಗದಲ್ಲಿರುವವರಿಗೆ ಮಾತ್ರ. \v 4 ಈ ಲೋಕದ ದೇವರು ನಂಬದವರ ಮನಸ್ಸನ್ನು ಕುರುಡುಮಾಡಿರುತ್ತಾನೆ. ಆದ್ದರಿಂದ ದೇವರ ಸ್ವರೂಪವಾಗಿರುವ ಕ್ರಿಸ್ತ ಯೇಸುವಿನ ಸುವಾರ್ತೆಯ ಮಹಿಮೆಯ ಬೆಳಕನ್ನು ಅವರು ಕಾಣಲಾರರು. \v 5 ನಾವು ನಮ್ಮ ಬಗ್ಗೆಯೇ ಪ್ರಚಾರ ಮಾಡುವುದಿಲ್ಲ. ಆದರೆ ಕ್ರಿಸ್ತ ಯೇಸು ಕರ್ತ ದೇವರೆಂದೂ ನಾವು ಯೇಸುವಿಗಾಗಿ ನಿಮ್ಮ ಸೇವಕರಾಗಿದ್ದೇವೆ ಎಂದೂ ಪ್ರಚುರಪಡಿಸುತ್ತೇವೆ. \v 6 “ಕತ್ತಲೆಯಿಂದ ಬೆಳಕು ಹೊಳೆಯಲಿ,”\f + \fr 4:6 \fr*\ft \+xt ಆದಿ 1:3\+xt*\ft*\f* ಎಂದು ಆಜ್ಞಾಪಿಸಿದ ದೇವರು ತಾವೇ, ತಮ್ಮ ಪ್ರಕಾಶವನ್ನು ನಮ್ಮ ಹೃದಯದ ಮೇಲೆ ಬೆಳಗಿಸಿದ್ದಾರೆ. ಹೀಗೆ ಕ್ರಿಸ್ತ ಯೇಸುವಿನ ಮುಖದಲ್ಲಿ ಪ್ರತಿಬಿಂಬಿಸುತ್ತಿರುವ ದೇವರ ಮಹಿಮೆಯ ತಿಳುವಳಿಕೆಯನ್ನು ನಮ್ಮಲ್ಲಿ ಉದಯಿಸುವಂತಾಗಿದೆ. \p \v 7 ಆದರೆ ಸರ್ವೋನ್ನತವಾದ ಈ ಶಕ್ತಿಯೂ ನಮ್ಮಿಂದಲ್ಲ ದೇವರಿಂದಲೇ ಬಂದಿರುತ್ತದೆ ಎಂಬುದನ್ನು ತೋರಿಸುವಂತೆ ಮಣ್ಣಿನ ಮಡಕೆಗಳಾದ ನಮ್ಮಲ್ಲಿ ನಿಕ್ಷೇಪವಿದೆ. \v 8 ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಜಜ್ಜಿಹೋಗಲಿಲ್ಲ, ನಾವು ಚಂಚಲರಾಗಿದ್ದರೂ ನಿರಾಶರಾಗಲಿಲ್ಲ. \v 9 ಹಿಂಸೆಗೆ ಒಳಪಟ್ಟರೂ ಕೈಬಿಟ್ಟವವರಲ್ಲ, ದಬ್ಬಿದವರಾದಾಗ್ಯೂ ನಾಶವಾಗಲಿಲ್ಲ. \v 10 ಯೇಸುವಿನ ಜೀವವು ನಮ್ಮ ಶರೀರದಲ್ಲಿ ಪ್ರಕಟವಾಗುವಂತೆ, ನಾವು ಯಾವಾಗಲೂ ನಮ್ಮ ಶರೀರದಲ್ಲಿ ಯೇಸುವಿನ ಮರಣವನ್ನು ಧರಿಸುವವರಾಗಿರುತ್ತೇವೆ. \v 11 ಏಕೆಂದರೆ ಜೀವಂತವಾಗಿರುವ ನಾವು ಯೇಸುವಿನ ಜೀವವು ನಮ್ಮ ಮರ್ತ್ಯ ಶರೀರದಲ್ಲಿ ಪ್ರಕಟಿಸುವಂತೆ, ನಮ್ಮನ್ನು ಯಾವಾಗಲೂ ಯೇಸುವಿಗಾಗಿ ಮರಣಕ್ಕೆ ಒಪ್ಪಿಸಿಕೊಟ್ಟವರಾಗಿದ್ದೇವೆ. \v 12 ಹೀಗಿರುವುದರಿಂದ, ನಮ್ಮೊಳಗೆ ಮರಣವು ಕಾರ್ಯ ಮಾಡುತ್ತದೆ, ಆದರೆ ನಿಮ್ಮೊಳಗೆ ಜೀವವು ಕಾರ್ಯ ಮಾಡುತ್ತದೆ. \p \v 13 “ನಾನು ನಂಬಿದೆನು, ಆದ್ದರಿಂದ ಮಾತನಾಡುವೆನು,”\f + \fr 4:13 \fr*\ft \+xt ಕೀರ್ತನೆ 116:10\+xt*\ft*\f* ಎಂದು ಪವಿತ್ರ ವೇದದಲ್ಲಿ ಬರೆಯಲಾಗಿದೆ. ಅದೇ ನಂಬಿಕೆಯ ಆತ್ಮವನ್ನು ಹೊಂದಿದವರಾದ ನಾವು ಕೂಡಾ ನಂಬಿದ್ದೇವೆ, ಆದ್ದರಿಂದ ನಾವು ಮಾತನಾಡುತ್ತೇವೆ. \v 14 ಏಕೆಂದರೆ, ಕರ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರೇ, ನಮ್ಮನ್ನೂ ಸಹ ಯೇಸುವಿನೊಂದಿಗೆ ಎಬ್ಬಿಸಿ, ನಿಮ್ಮ ಜೊತೆಯಲ್ಲಿಯೂ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ. \v 15 ಇವೆಲ್ಲವೂ ನಿಮ್ಮ ಒಳ್ಳೆಯದಕ್ಕಾಗಿಯೇ. ಇದರಿಂದ ಹೆಚ್ಚಾದ ಜನರಿಗೆ ತಲುಪುತ್ತಿರುವ ಕೃಪೆಯು, ಕೃತಜ್ಞತೆಯಿಂದ ತುಂಬಿ ಹರಿಯುವುದು. ಆಗ ದೇವರ ಮಹಿಮೆಯು ಸ್ಪಷ್ಟವಾಗುವುದು. \p \v 16 ಆದ್ದರಿಂದ ನಾವು ಅಧೈರ್ಯಪಡುವುದಿಲ್ಲ. ನಮ್ಮ ಹೊರಗಿನ ಮನುಷ್ಯ ಕ್ಷಯಿಸುತ್ತಿದ್ದರೂ ನಮ್ಮ ಆಂತರ್ಯ ಮನುಷ್ಯ ಅನುದಿನವೂ ನೂತನವಾಗುತ್ತಿದೆ. \v 17 ಹಗುರವಾಗಿಯೂ ಕ್ಷಣಿಕವಾಗಿಯೂ ಇರುವ ನಮ್ಮ ಸಂಕಟವು ಅತ್ಯಂತ ಘನತೆಯುಳ್ಳ ನಿತ್ಯ ಮಹಿಮೆಯನ್ನು ನಮಗೆ ದೊರಕಿಸಿಕೊಡುವುದು. \v 18 ಆದ್ದರಿಂದ ನಮ್ಮ ದೃಷ್ಟಿಯು ದೃಶ್ಯ ಸಂಗತಿಗಳ ಮೇಲಿರದೆ, ಅದೃಶ್ಯವಾದವುಗಳ ಮೇಲೆ ಇವೆ. ಕಾಣುವವುಗಳು ತಾತ್ಕಾಲಿಕವಾದವುಗಳು. ಆದರೆ ಕಾಣದಿರುವಂಥದ್ದು ನಿತ್ಯವಾಗಿರುವುದು. \c 5 \s1 ನಮ್ಮ ಸ್ವರ್ಗನಿವಾಸ \p \v 1 ನಾವು ಜೀವಿಸುತ್ತಿರುವ ನಮ್ಮ ದೇಹವೆಂಬ ಗುಡಾರವು ನಾಶವಾಗಿ ಹೋದರೂ, ಪರಲೋಕದಲ್ಲಿ ಶಾಶ್ವತವಾದ ನಿವಾಸವು ನಮಗೆ ಉಂಟೆಂದು ಬಲ್ಲೆವು. ಅದು ಮಾನವರ ಕೈಯಿಂದ ಕಟ್ಟಿದ ನಿವಾಸವಲ್ಲ, ದೇವರಿಂದಲೇ ನಿರ್ಮಿತವಾದದ್ದಾಗಿದೆ. \v 2 ನಮ್ಮ ಪರಲೋಕದ ನಿವಾಸವನ್ನು ನೀವೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸಿ, ಈ ಜೀವನದಲ್ಲಿ ನರಳುತ್ತಿದ್ದೇವೆ. \v 3 ಏಕೆಂದರೆ, ನಾವು ಪರಲೋಕದ ನಿವಾಸವನ್ನು ಧರಿಸಿಕೊಂಡಾಗ, ಆತ್ಮವಿಲ್ಲದ ದೇಹವಾಗಿ ನಾವು ಇರುವುದಿಲ್ಲ. \v 4 ನಾವು ಈ ದೇಹವೆಂಬ ಗುಡಾರದಲ್ಲಿರುವ ತನಕ ನರಳುತ್ತೇವೆ, ಭಾರದಿಂದ ಬಳಲುತ್ತೇವೆ. ಈ ಗುಡಾರವೆಂಬ ಹಳೆಯ ಶರೀರವು ನಮ್ಮಿಂದ ಕಳಚಿ ಹೋಗಬೇಕೆಂಬುದು ನಮ್ಮ ಇಷ್ಟವಲ್ಲ. ಆದರೆ ಪರಲೋಕದ ನಿವಾಸವೆಂಬ ನೂತನ ಶರೀರವನ್ನು ನಾವು ಧರಿಸಿಕೊಳ್ಳಲು ಬಯಸುತ್ತೇವೆ. ಏಕೆಂದರೆ ನಶ್ವರವಾದ ಈ ನಮ್ಮ ದೇಹವು ಅಮರತ್ವವನ್ನು ಧರಿಸಿಕೊಳ್ಳಬೇಕು. \v 5 ಈ ಉದ್ದೇಶಕ್ಕಾಗಿಯೇ ನಮ್ಮನ್ನು ಸಿದ್ಧಮಾಡಿದ ದೇವರು, ಮುಂಬರುವುದರ ಖಾತರಿಯಾಗಿ ನಮಗೆ ತಮ್ಮ ಆತ್ಮವನ್ನೇ ಕೊಟ್ಟಿದ್ದಾರೆ. \p \v 6 ಹೀಗಿರುವುದರಿಂದ ಶರೀರದಲ್ಲಿ ವಾಸಿಸುವವರೆಗೂ ನಾವು ಕರ್ತನಿಂದ ದೂರವಾಗಿದ್ದೇವೆಂದು ತಿಳಿದು, ನಾವು ಯಾವಾಗಲೂ ಭರವಸೆ ಉಳ್ಳವರಾಗಿದ್ದೇವೆ. \v 7 ನಾವು ನೋಡುವವರಾಗಿ ಜೀವಿಸದೆ, ನಂಬುವವರಾಗಿ ಜೀವಿಸುತ್ತಿದ್ದೇವೆ. \v 8 ನಮ್ಮ ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವುದು ಉತ್ತಮವೆಂದು ಆಶಿಸಿ, ಅದರಲ್ಲಿ ಭರವಸೆ ಉಳ್ಳವರಾಗಿರುತ್ತೇವೆ. \v 9 ಆದ್ದರಿಂದ ನಾವು ದೇಹದಲ್ಲಿದ್ದರೂ ಸರಿಯೇ, ಅದನ್ನು ಬಿಟ್ಟಿದ್ದರೂ ಸರಿಯೇ ಕರ್ತನನ್ನು ಮೆಚ್ಚಿಸಬೇಕೆಂಬುದೇ ನಮ್ಮ ಗುರಿಯಾಗಿದೆ. \v 10 ಏಕೆಂದರೆ, ನಾವೆಲ್ಲರೂ ನಮ್ಮ ದೇಹದ ಮೂಲಕ ನಡೆಸಿದ ಒಳ್ಳೆಯದಕ್ಕಾಗಲಿ, ಕೆಟ್ಟದ್ದಕ್ಕಾಗಲಿ ಸಿಗಬೇಕಾದ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳಲೇಬೇಕು. \s1 ಸಮಾಧಾನ ಪಡಿಸುವ ಸೇವೆ \p \v 11 ಕರ್ತನ ಭಯಭಕ್ತಿಯನ್ನು ಅರಿತಿರುವ ಕಾರಣ, ಜನರ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಅದು ನಿಮ್ಮ ಮನಸ್ಸಾಕ್ಷಿಗೂ ತಿಳಿದಿದೆ ಎಂದು ನಾನು ನಂಬುತ್ತೇನೆ. \v 12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ. \v 13 ನಮಗೆ ಬುದ್ಧಿ ಭ್ರಮಣೆಯಾಗಿದ್ದರೆ, ಅದು ದೇವರಿಗಾಗಿಯೇ. ನಾವು ಸ್ವಸ್ಥಬುದ್ಧಿಯುಳ್ಳವರಾಗಿದ್ದರೆ, ಅದು ನಿಮಗಾಗಿಯೇ. \v 14 ಕ್ರಿಸ್ತ ಯೇಸುವಿನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ. ಏಕೆಂದರೆ, ಎಲ್ಲರಿಗೋಸ್ಕರ ಕ್ರಿಸ್ತ ಯೇಸು ಸತ್ತದ್ದರಿಂದ, ಎಲ್ಲರೂ ಸತ್ತಂತಾಯಿತು. \v 15 ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ, ತಮಗಾಗಿ ಸತ್ತು ಪುನರುತ್ಥಾನವಾಗಿ ಬಂದ ಕ್ರಿಸ್ತ ಯೇಸುವಿಗೋಸ್ಕರವೇ ಜೀವಿಸಬೇಕೆಂದು ಕ್ರಿಸ್ತ ಯೇಸು ಎಲ್ಲರಿಗೋಸ್ಕರ ಸತ್ತರು. \p \v 16 ಇನ್ನು ಮೇಲೆ ನಾವು ಯಾರನ್ನೂ ಶರೀರ ಸಂಬಂಧವಾಗಿ ಅರಿತುಕೊಳ್ಳುವುದಿಲ್ಲ. ಒಂದು ಕಾಲದಲ್ಲಿ ಕ್ರಿಸ್ತ ಯೇಸುವನ್ನು ನಾವು ಶರೀರ ಸಂಬಂಧವಾಗಿ ಅರಿತಿದ್ದೆವು. ಆದರೆ ಇನ್ನು ಮುಂದೆ ಕ್ರಿಸ್ತ ಯೇಸುವನ್ನು ಶರೀರ ಸಂಬಂಧವಾಗಿ ನಾವು ಅರಿತುಕೊಳ್ಳುವುದಿಲ್ಲ. \v 17 ಆದ್ದರಿಂದ ಯಾರಾದರೂ ಕ್ರಿಸ್ತ ಯೇಸುವಿನಲ್ಲಿದ್ದರೆ, ಅವರು ನೂತನ ಸೃಷ್ಟಿಯಾಗಿದ್ದಾರೆ: ಹಳೆಯದೆಲ್ಲವೂ ಹೋಗಿ ಅವರಿಗೆ ಹೊಸ ಸೃಷ್ಟಿಯು ಬರುವುದು. \v 18 ಇವೆಲ್ಲವೂ ದೇವರಿಂದಲೇ ಆಯಿತು. ನಮ್ಮನ್ನು ಕ್ರಿಸ್ತ ಯೇಸುವಿನ ಮೂಲಕ ತಮ್ಮೊಂದಿಗೆ ಸಮಾಧಾನ ಮಾಡಿಕೊಂಡ ದೇವರು, ಇತರರನ್ನು ಸಮಾಧಾನಕ್ಕೆ ತರುವ ಸೇವೆಯನ್ನೂ ನಮಗೆ ಕೊಟ್ಟಿರುತ್ತಾರೆ: \v 19 ಹೇಗೆಂದರೆ, ದೇವರು ಮನುಷ್ಯರ ಪಾಪಗಳನ್ನು ಅವರಿಗೆ ವಿರೋಧವಾಗಿ ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಂದಿಗೆ ಸಮಾಧಾನಪಡಿಸುತ್ತಿದ್ದಾರೆ. ಈ ಸಮಾಧಾನದ ಸಂದೇಶವನ್ನೇ ದೇವರು ನಮಗೊಪ್ಪಿಸಿ ಕೊಟ್ಟಿದ್ದಾರೆ. \v 20 ಆದ್ದರಿಂದ ನಾವು ಕ್ರಿಸ್ತ ಯೇಸುವಿನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ನಿಮಗೆ ಕರೆ ನೀಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿನ ಪರವಾಗಿ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: ದೇವರೊಡನೆ ಸಮಾಧಾನ ಮಾಡಿಕೊಳ್ಳಿರಿ. \v 21 ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪವನ್ನಾಗಿ ಮಾಡಿದರು. ಹೀಗೆ ಕ್ರಿಸ್ತ ಯೇಸುವಿನಲ್ಲಿ ದೇವರ ನೀತಿಯನ್ನಾಗಿ ದೇವರು ನಮ್ಮನ್ನು ಮಾಡಿದರು. \c 6 \p \v 1 ನೀವು ಹೊಂದಿರುವ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ದೇವರ ಜೊತೆಕೆಲಸದವರಾದ ನಾವು ನಿಮ್ಮಲ್ಲಿ ಬೇಡಿಕೊಳ್ಳುತ್ತೇವೆ, \v 2 ಏಕೆಂದರೆ ದೇವರು ಹೇಳಿದ ಹಾಗೆ, \q1 “ಪ್ರಸನ್ನತೆಯ ಕಾಲದಲ್ಲಿ ನಿನ್ನ ಪ್ರಾರ್ಥನೆಯನ್ನು ನಾನು ಲಾಲಿಸಿದೆನು. \q2 ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು,”\f + \fr 6:2 \fr*\ft \+xt ಯೆಶಾಯ 49:8\+xt*\ft*\f* \m ಇಗೋ, ಇದೇ ದೇವರ ಮೆಚ್ಚುಗೆಯ ಕಾಲ, ಈಗಲೇ ರಕ್ಷಣೆಯ ದಿನ. \s1 ಪೌಲನ ಕಷ್ಟಸಂಕಟಗಳು \p \v 3 ನಮ್ಮ ಸೇವೆಯು ಅಪವಾದಕ್ಕೆ ಗುರಿಯಾಗದಂತೆ ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ. \v 4 ಅದಕ್ಕೆ ಬದಲಾಗಿ, ಸರ್ವ ವಿಷಯಗಳಲ್ಲಿ ನಾವು ದೇವರ ಸೇವಕರಾಗಿದ್ದೇವೆಂದು ತೋರಿಸುತ್ತೇವೆ. ಕಷ್ಟ, ಸಂಕಟ ತೊಂದರೆಗಳಲ್ಲಿ ಮಹಾ ದೀರ್ಘತಾಳ್ಮೆಯನ್ನು ತೋರಿಸುತ್ತೇವೆ. \v 5 ನಾವು ಪೆಟ್ಟು ತಿಂದಿದ್ದೇವೆ, ಸೆರೆವಾಸವಾಗಿದ್ದೇವೆ, ಕಲಹಗಳನ್ನು ಅನುಭವಿಸಿದ್ದೇವೆ, ಶ್ರಮೆಪಟ್ಟು ದುಡಿದಿದ್ದೇವೆ, ರಾತ್ರಿಯಲ್ಲಿ ನಿದ್ರೆಗೆಟ್ಟಿದ್ದೇವೆ, ಊಟವಿಲ್ಲದೆ ಹಸಿದಿದ್ದೇವೆ, \v 6 ಪವಿತ್ರಾತ್ಮ ದೇವರ ಸಹಾಯದಿಂದ ಶುದ್ಧ ಮನಸ್ಸು, ತಿಳುವಳಿಕೆ, ಸಹನೆಯು ಮತ್ತು ದಯೆಯಿಂದಕೂಡಿ, ನಿಷ್ಕಪಟ ಪ್ರೀತಿಯಲ್ಲಿ ಜೀವಿಸಿದ್ದೇವೆ. \v 7 ಸತ್ಯಮಾತುಗಳಿಂದಲೂ, ದೇವರ ಶಕ್ತಿಯಿಂದಲೂ, ಎಡಬಲಗೈಗಳಲ್ಲಿ ನೀತಿಯ ಆಯುಧಗಳೂ \v 8 ಮಾನ ಅವಮಾನಗಳಿಂದಲೂ ಕೀರ್ತಿ ಅಪಕೀರ್ತಿಗಳಿಂದಲೂ ಸತ್ಯವಂತರಾಗಿದ್ದರೂ ಮೋಸಗಾರರೂ ಎಂದೆಣಿಸಿಕೊಂಡವರಾಗಿದ್ದೇವೆ. \v 9 ಪ್ರಖ್ಯಾತರಾಗಿದ್ದರೂ ಅಪ್ರಖ್ಯಾತರಾಗಿದ್ದೇವೆ; ಸಾಯುತ್ತಿದ್ದರೂ ನಾವು ಜೀವಿಸುತ್ತಿದ್ದೇವೆ, ನಾವು ಪೆಟ್ಟು ತಿಂದಿದ್ದೇವೆ, ಕೊಲೆಗೆ ಗುರಿಯಾಗಲಿಲ್ಲ. \v 10 ದುಃಖ ಪಡುವವರಾಗಿದ್ದರೂ ಹರ್ಷಿಸುತ್ತಿದ್ದೆವು, ಬಡವರಾಗಿದ್ದಾಗಲೂ ಅನೇಕರನ್ನು ಐಶ್ವರ್ಯವಂತರನ್ನಾಗಿ ಮಾಡಿದೆವು, ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಾಗಿದ್ದೇವೆ. \p \v 11 ಕೊರಿಂಥದವರೇ, ನಾವು ನಿಮ್ಮೊಂದಿಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡೆವು, ನಮ್ಮ ಹೃದಯವನ್ನು ನಿಮ್ಮೊಂದಿಗೆ ವಿಶಾಲವಾಗಿ ತೆರೆದಿದ್ದೇವೆ. \v 12 ನಿಮ್ಮ ಕಡೆಗಿರುವ ನಮ್ಮ ಪ್ರೀತಿಯನ್ನು ನಿಲ್ಲಿಸಲಿಲ್ಲ. ಆದರೆ ನೀವು ನಮಗೆ ತೋರಿಸಬೇಕಾದ ಪ್ರೀತಿಯನ್ನು ತೋರಿಸಲಿಲ್ಲ. \v 13 ಆದ್ದರಿಂದ ಮಕ್ಕಳಿಗೆ ಹೇಳುವ ರೀತಿಯಲ್ಲಿ ನಿಮಗೆ ಹೇಳುತ್ತಿದ್ದೇವೆ. ನಾವು ನಿಮ್ಮನ್ನು ಪೂರ್ಣಹೃದಯದಿಂದ ಪ್ರೀತಿಸಿದಂತೆ ನೀವೂ ಪೂರ್ಣಹೃದಯದಿಂದ ನಮ್ಮನ್ನು ಪ್ರೀತಿಸಿರಿ. \s1 ಅವಿಶ್ವಾಸಿಗಳ ಸಂಗಡ ಸೇರಬೇಡಿರಿ \p \v 14 ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಲ್ಲದವರೊಂದಿಗೆ ಸೇರಿ ಒಂದಾಗಿ ಪಾಲುಗಾರರಾಗಬೇಡಿರಿ. ನೀತಿಗೂ ಅನೀತಿಗೂ ಸಮಾನವೆಲ್ಲಿ? ಅಥವಾ ಬೆಳಕಿಗೂ ಕತ್ತಲೆಗೂ ಅನ್ಯೋನ್ಯತೆಯೇನು? \v 15 ಕ್ರಿಸ್ತ ಯೇಸುವಿಗೂ ಪಿಶಾಚನಿಗೂ\f + \fr 6:15 \fr*\ft ಗ್ರೀಕ್ ಭಾಷೆಯಲ್ಲಿ \ft*\fqa ಬೆಲಿಯಲ್\fqa*\f* ಐಕ್ಯತೆಯೇನು? ಅಥವಾ ಕ್ರಿಸ್ತ ವಿಶ್ವಾಸಿಗೂ ಅವಿಶ್ವಾಸಿಗೂ ಹುದುವಾಗಿರುವುದೇನು? \v 16 ದೇವರ ಆಲಯಕ್ಕೂ ವಿಗ್ರಹಗಳಿಗೂ ಏನು ಒಪ್ಪಂದ? ನಾವು ಜೀವಿಸುವ ದೇವರ ಆಲಯವಾಗಿದ್ದೇವೆ. ದೇವರು ಹೀಗೆ ಹೇಳಿದ್ದಾರೆ: \q1 “ನಾನು ಅವರೊಂದಿಗೆ ವಾಸಿಸುವೆನು, \q2 ಅವರ ಮಧ್ಯದಲ್ಲಿ ತಿರುಗಾಡುವೆನು. \q1 ನಾನು ಅವರಿಗೆ ದೇವರಾಗಿರುವೆನು \q2 ಮತ್ತು ಅವರು ನನ್ನ ಜನರಾಗಿರುವರು.”\f + \fr 6:16 \fr*\ft \+xt ಯಾಜಕ 26:12; ಯೆರೆ 32:38; ಯೆಹೆ 37:27\+xt*\ft*\f* \m \v 17 ಆದ್ದರಿಂದ, \q1 “ಅವರ ನಡುವೆಯಿಂದ \q2 ಹೊರಟುಬಂದು ಪ್ರತ್ಯೇಕವಾಗಿರಿ. \q2 ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, \q1 ನಾನು ನಿಮ್ಮನ್ನು ಸ್ವೀಕರಿಸುವೆನು \q2 ಎಂದು ಕರ್ತದೇವರು ಹೇಳುತ್ತಾರೆ.”\f + \fr 6:17 \fr*\ft \+xt ಯೆಶಾಯ 52:11; ಯೆಹೆ 20:34,41\+xt*\ft*\f* \m \v 18 ಇದಲ್ಲದೆ, \q1 “ನಾನು ನಿಮಗೆ ತಂದೆಯಾಗಿರುವೆನು. \q2 ನೀವು ನನಗೆ ಪುತ್ರಪುತ್ರಿಯರು ಆಗಿರುವಿರಿ,”\f + \fr 6:18 \fr*\ft \+xt 2 ಸಮು 7:14; 7:8\+xt*\ft*\f* \q2 ಎಂದು ಸರ್ವಶಕ್ತ ಆಗಿರುವ ಕರ್ತದೇವರು ಹೇಳುತ್ತಾರೆ. \c 7 \p \v 1 ಪ್ರಿಯರೇ, ಇಂಥಾ ವಾಗ್ದಾನಗಳು ನಮಗಿರುವುದರಿಂದ ನಮ್ಮ ದೇಹಾತ್ಮಗಳನ್ನು ಮಲಿನಗೊಳಿಸುವ ಎಲ್ಲಾ ವಿಷಯಗಳಿಂದ ನಮ್ಮನ್ನು ಶುದ್ಧಮಾಡಿ, ದೇವರ ಮೇಲಿನ ಭಯಭಕ್ತಿಯಿಂದ ನಮ್ಮ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ. \s1 ಪೌಲನ ಆನಂದ \p \v 2 ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳ ಕೊಡಿರಿ. ನಾವು ಯಾರಿಗೂ ಅನ್ಯಾಯ ಮಾಡಲಿಲ್ಲ, ಯಾರಿಗೂ ನಾವು ಕೇಡು ಬಗೆಯಲಿಲ್ಲ, ನಾವು ಸ್ವಂತ ಲಾಭಕ್ಕಾಗಿ ಯಾರನ್ನೂ ದುಡಿಸಿಕೊಳ್ಳಲಿಲ್ಲ. \v 3 ನಿಮ್ಮ ಮೇಲೆ ತಪ್ಪು ಹೊರಿಸುವುದಕ್ಕಾಗಿ ನಾನು ಇದನ್ನು ನಿಮಗೆ ಹೇಳುತ್ತಿಲ್ಲ. ನಾವು ನಿಮ್ಮೊಂದಿಗೆ ಜೀವಿಸಿ, ಸಾಯುವಷ್ಟರ ಮಟ್ಟಿಗೆ ನಾವು ನಮ್ಮ ಹೃದಯದಾಳದಿಂದ ನಿಮ್ಮನ್ನು ಪ್ರೀತಿಸುತ್ತಿದ್ದೇವೆ ಎಂದು ನಾನು ಹಿಂದೆ ಹೇಳಲಿಲ್ಲವೇ? \v 4 ನಿಮ್ಮ ಮೇಲೆ ನನಗೆ ಪರಿಪೂರ್ಣ ಭರವಸೆ ಇದೆ. ನಿಮ್ಮ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ನಾನು ಬಹಳವಾಗಿ ಪ್ರೋತ್ಸಾಹ ಹೊಂದಿ, ನಮಗೆ ಬಂದಿದ್ದ ಎಲ್ಲಾ ಸಂಕಟಗಳಲ್ಲಿ ನಾವು ನಿಮ್ಮಿಂದ ಮಿತಿಯಿಲ್ಲದಷ್ಟು ಆನಂದಪಡುತ್ತಿದ್ದೇನೆ. \p \v 5 ನಾವು ಮಕೆದೋನ್ಯಕ್ಕೆ ಬಂದಿದ್ದಾಗ ನಮ್ಮ ದೇಹಕ್ಕೆ ವಿಶ್ರಾಂತಿ ದೊರೆಯಲಿಲ್ಲ. ಎಲ್ಲಾ ವಿಧದಲ್ಲಿಯೂ ಒತ್ತಡಗಳು: ಹೊರಗೆ ಹೋರಾಟ, ಒಳಗೆ ಅಂಜಿಕೆ. \v 6 ಆದರೆ ಮನಗುಂದಿದವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದರು. \v 7 ತೀತನು ಬರುವುದರಿಂದ ಮಾತ್ರವಲ್ಲ, ನೀವು ಅವನನ್ನು ಸ್ವೀಕರಿಸಿ, ಆದರಣೆಗಳಿಂದ ಸತ್ಕರಿಸಿದ್ದನ್ನು ಕೇಳಿ ನಮಗೆ ಸಂತೋಷವಾಯಿತು. ನೀವು ನನಗಾಗಿ ಹಂಬಲಿಸುತ್ತಿರುವುದನ್ನೂ, ಚಿಂತಿಸುವುದನ್ನೂ, ನನ್ನ ಮೇಲೆ ನಿಮಗಿರುವ ಆಳವಾದ ಅನುಕಂಪವನ್ನೂ ನಾವು ತೀತನಿಂದ ಕೇಳಿದಾಗ, ನಾನು ಇನ್ನೂ ಅಧಿಕ ಆನಂದಪಟ್ಟೆನು. \p \v 8 ನಾನು ಬರೆದಿದ್ದ ಪತ್ರದಿಂದ ನಿಮಗೆ ದುಃಖವಾಗಿದ್ದಲ್ಲಿ, ನಾನು ಅದಕ್ಕೆ ಬೇಸರಪಡುವುದಿಲ್ಲ. ನನ್ನ ಪತ್ರದಿಂದ ನಿಮಗೆ ದುಃಖವಾಯಿತಲ್ಲಾ ಎಂದು ಸ್ವಲ್ಪಕಾಲ ನಾನು ನೊಂದುಕೊಂಡಿದ್ದರೂ, \v 9 ಈಗ ಸಂತೋಷಪಡುತ್ತೇನೆ. ನಿಮಗೆ ದುಃಖವಾಯಿತೆಂಬ ಕಾರಣಕ್ಕಾಗಿ ಅಲ್ಲ. ಆ ದುಃಖವು ನಿಮ್ಮನ್ನು ಪಶ್ಚಾತ್ತಾಪಕ್ಕೆ ನಡೆಸಿ, ನಿಮಗಾದ ದುಃಖವು ದೇವರ ಚಿತ್ತದಿಂದ ಆಗಿದ್ದರಿಂದ ನಮ್ಮಿಂದ ನಿಮಗೆ ನಷ್ಟವಾಗಲಿಲ್ಲ ಎಂಬುದಕ್ಕಾಗಿಯೂ ಈಗ ಸಂತೋಷಪಡುತ್ತೇನೆ. \v 10 ದೈವಿಕ ದುಃಖವು ಪಶ್ಚಾತ್ತಾಪವನ್ನು ತಂದು ರಕ್ಷಣೆಗೆ ನಡೆಸುತ್ತದೆ. ಆ ಪಶ್ಚಾತ್ತಾಪದಲ್ಲಿ ವಿಷಾಧವಿರುವುದಿಲ್ಲ. ಆದರೆ ಪ್ರಾಪಂಚಿಕ ದುಃಖವು ಮರಣಕ್ಕೆ ನಡೆಸುತ್ತದೆ. \v 11 ಈ ದೈವಿಕ ದುಃಖವು ನಿಮ್ಮಲ್ಲಿ ಏನು ಉಂಟುಮಾಡಿದೆ ಗಮನಿಸಿರಿ: ನಿಮ್ಮಲ್ಲಿ ಎಂಥಾ ಉತ್ಸಾಹ, ನಿರಪರಾಧಕ್ಕಾಗಿ ಎಂಥಾ ಪ್ರಯಾಸ, ಎಷ್ಟು ರೋಷ, ಎಷ್ಟು ಭಯ, ಎಷ್ಟು ಹಂಬಲ, ಎಷ್ಟು ಆಸಕ್ತಿ, ನ್ಯಾಯಕ್ಕಾಗಿ ಎಷ್ಟು ಆತುರ. ಪ್ರತಿಯೊಂದು ವಿಷಯದಲ್ಲಿಯೂ ನೀವು ನಿರ್ದೋಷಿಗಳೆಂದು ರುಜುಪಡಿಸುತ್ತೀರಿ. \v 12 ನಾನು ಆ ಪತ್ರ ನಿಮಗೆ ಬರೆದದ್ದು, ತಪ್ಪು ಮಾಡಿದವನಿಗೋಸ್ಕರವಾಗಿ ಅಲ್ಲ ಮತ್ತು ಆ ತಪ್ಪಿನಿಂದ ಹಾನಿಯಾದವರಿಗೋಸ್ಕರವಾಗಿಯೂ ಅಲ್ಲ, ನೀವು ನಮಗೆ ಎಷ್ಟು ನಿಷ್ಠೆಯುಳ್ಳವರು ಎಂದು ದೇವರ ಸನ್ನಿಧಿಯಲ್ಲಿ ನಿಮಗೆ ನೀವೇ ನೋಡುವಂತೆ ಬರೆದೆನು. \v 13 ಆದಕಾರಣ ಇವೆಲ್ಲವುಗಳಿಂದ ನಮಗೆ ಉತ್ತೇಜನವಾಯಿತು. \p ನಮಗೆ ಉತ್ತೇಜನವಾಗಿದ್ದು ಅಲ್ಲದೆ, ನಿಮ್ಮೆಲ್ಲರಿಂದ ತೀತನ ಆತ್ಮಕ್ಕೆ ಉಪಶಮನವಾದ ಕಾರಣ, ನಾವು ಅವನ ಸಂತೋಷಕ್ಕಾಗಿ ಇನ್ನಷ್ಟು ಆನಂದಿಸಿದೆವು. \v 14 ನಿಮ್ಮ ವಿಷಯವಾಗಿ ನಾನು ತೀತನ ಮುಂದೆ ಹೊಗಳಿದ್ದಕ್ಕೆ ನಾನು ಬೇಸರಪಡಬೇಕಾಗಿರಲಿಲ್ಲ. ನಾನು ನಿಮಗೆ ಹೇಳಿದ್ದೆಲ್ಲವೂ ಹೇಗೆ ಸತ್ಯವಾಗಿತ್ತೋ, ಹಾಗೆಯೇ ನಿಮ್ಮ ಬಗ್ಗೆ ನಾವು ತೀತನ ಬಗ್ಗೆ ಹೊಗಳಿದ್ದೆಲ್ಲವೂ ಸತ್ಯವಾದವು. \v 15 ನೀವು ತೀತನ ಮಾತುಗಳಿಗೆ ವಿಧೇಯರಾಗಿದ್ದುದ್ದನ್ನೂ ಅವನನ್ನು ಭಯಭಕ್ತಿಯಿಂದಲೂ ನಡುಗುವಿಕೆಯಿಂದಲೂ ಸ್ವೀಕರಿಸಿದ್ದನ್ನೂ, ಅವನು ಜ್ಞಾಪಕಕ್ಕೆ ತಂದುಕೊಂಡಾಗ, ನಿಮ್ಮನ್ನು ಅತ್ಯಧಿಕವಾಗಿ ಪ್ರೀತಿಸುವವನಾಗಿದ್ದಾನೆ. \v 16 ನಿಮ್ಮ ಮೇಲೆ ಸಂಪೂರ್ಣ ಭರವಸೆ ಇಡಬಹುದೆಂಬುದಕ್ಕಾಗಿ ನಾನು ಹರ್ಷಿಸುತ್ತೇನೆ. \c 8 \s1 ಉದಾರತೆಗೆ ಪ್ರೋತ್ಸಾಹ \p \v 1 ಪ್ರಿಯರೇ, ಮಕೆದೋನ್ಯದಲ್ಲಿರುವ ಸಭೆಗಳಿಗೆ ದೇವರು ಕೊಟ್ಟಿರುವ ಕೃಪೆಯನ್ನು ಕುರಿತು ನೀವು ತಿಳಿದಿರಬೇಕೆಂದು ನಮ್ಮ ಅಪೇಕ್ಷೆ. \v 2 ಅವರು ಘೋರ ಹಿಂಸೆಯ ನಡುವೆಯಿದ್ದರೂ ಕಡುಬಡತನದಲ್ಲಿ ಬಳಲುತ್ತಿದ್ದರೂ ಅವರು ಬಹಳ ಸಂತೋಷದಿಂದ, ಉದಾರಮನಸ್ಸಿನಿಂದ ಕೊಡುವವರಾಗಿದ್ದಾರೆ. \v 3 ಅವರು ತಮಗೆ ಸಾಧ್ಯವಾದಷ್ಟು ಕೊಟ್ಟಿದ್ದಾರೆ. ಮಾತ್ರವಲ್ಲದೇ ತಮ್ಮ ಶಕ್ತಿ ಮೀರಿ ಕೊಟ್ಟಿದ್ದಾರೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. \v 4 ದೇವಜನರಿಗೆ ಸಹಾಯಮಾಡಲು ಭಾಗಿಗಳಾಗುವ ಅವಕಾಶವನ್ನು ತಮಗೆ ಕೊಡಬೇಕೆಂದು ಅವರು ತಾವಾಗಿಯೇ ನಮ್ಮನ್ನು ಬಹಳವಾಗಿ ಕೇಳಿಕೊಂಡರು. \v 5 ಇವೆಲ್ಲವನ್ನೂ ನಾವು ನೆನಸಿದ್ದಕ್ಕಿಂತಲೂ ಅವರು ಹೆಚ್ಚಾಗಿಯೇ ಮಾಡಿದರು. ಹೇಗೆಂದರೆ ಮೊದಲು ಅವರು ತಮ್ಮನ್ನೇ ಕರ್ತ ಯೇಸುವಿಗೆ ಒಪ್ಪಿಸಿಕೊಟ್ಟರು. ಅನಂತರ ದೇವರ ಚಿತ್ತಾನುಸಾರವಾಗಿ ತಮ್ಮನ್ನು ನಮಗೂ ಒಪ್ಪಿಸಿಕೊಟ್ಟರು. \v 6 ಹೀಗಿರಲಾಗಿ, ತೀತನು ಪ್ರಾರಂಭಿಸಿದ ಈ ದಾನ ಕಾರ್ಯವನ್ನು ನಿಮ್ಮಲ್ಲಿ ಸಹ ಪೂರ್ಣಗೊಳಿಸಬೇಕೆಂದು ನಾವು ಅವನನ್ನು ಬಹಳವಾಗಿ ಕೇಳಿಕೊಂಡೆವು. \v 7 ಹೇಗೆ ನೀವು ವಿಶ್ವಾಸ, ವಾಕ್ಚಾತುರ್ಯ, ತಿಳುವಳಿಕೆ, ಉತ್ಸಾಹ ಹಾಗೂ ನಮ್ಮ ಮೇಲೆ ನಿಮಗಿರುವ ಪ್ರೀತಿ, ಇವೆಲ್ಲವುಗಳಲ್ಲಿ ನೀವು ಸಮೃದ್ಧರಾಗಿದ್ದಂತೆ, ಈ ದಾನವೆಂಬ ಕೃಪಾಕಾರ್ಯದಲ್ಲಿಯೂ ಸಮೃದ್ಧರಾಗಿರಿ. \p \v 8 ಇದು ನಿಮಗೆ ನನ್ನ ಆಜ್ಞೆಯಲ್ಲ. ಆದರೆ ಇತರರಿಗೆ ನಿಮಗಿರುವ ಈ ಸೇವಾಕಾರ್ಯದ ಉತ್ಸಾಹವನ್ನೂ ನಮ್ಮ ಮೇಲಿರುವ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾಗಿದೆಯೆಂಬುದನ್ನೂ ಹೋಲಿಕೆಮಾಡಿ ಪರೀಕ್ಷಿಸಿನೋಡಲು ಬಯಸುತ್ತಿದ್ದೇನೆ. \v 9 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯನ್ನು ನೀವು ಬಲ್ಲವರಾಗಿದ್ದೀರಿ. ಅವರು ಐಶ್ವರ್ಯವಂತರಾಗಿದ್ದರೂ ತಮ್ಮ ಬಡತನದ ಮೂಲಕ ನೀವು ಐಶ್ವರ್ಯವಂತರಾಗುವಂತೆ ಅವರು ನಿಮಗೋಸ್ಕರ ಬಡವರಾದರು. \p \v 10 ಈ ವಿಷಯದಲ್ಲಿ ನನ್ನ ಸಲಹೆ ಏನೆಂದರೆ, ಕಳೆದ ವರ್ಷದಲ್ಲಿ ಮೊದಲು ನೀವೇ ಈ ಕಾರ್ಯವನ್ನು ಪ್ರಾರಂಭಿಸಿದ್ದಲ್ಲದೇ ಇದನ್ನು ಮಾಡಬೇಕೆಂದು ಬಯಸಿದ್ದೀರಿ. \v 11 ಆದ್ದರಿಂದ ನೀವು ಎಷ್ಟು ಆಸಕ್ತರಾಗಿ ಪ್ರಾರಂಭಿಸಿದ್ದೀರೋ, ಅಷ್ಟೇ ಆಸಕ್ತಿಯಿಂದ ಅದನ್ನು ಮುಗಿಸಿರಿ. ನಿಮ್ಮ ನಿಮ್ಮ ಶಕ್ತ್ಯಾನುಸಾರವಾಗಿ ಈ ಯೋಜನೆಯನ್ನು ಪೂರ್ಣಗೊಳಿಸಿರಿ. \v 12 ಯಾರಿಗಾದರೂ ಕೊಡುವ ಮನಸ್ಸಿದ್ದರೆ, ಅದು ದೇವರ ದೃಷ್ಟಿಯಲ್ಲಿ ಕೊಟ್ಟಂತೆ ಪರಿಗಣಿಸಲಾಗುವುದು. ಏಕೆಂದರೆ ಕೊಡುವವರು ಎಷ್ಟು ಕೊಟ್ಟಿದ್ದಾರೆ ಎಂಬುದು ಪ್ರಾಮುಖ್ಯವಲ್ಲ, ಆದರೆ ಇಲ್ಲದಿರುವುದನ್ನು ದೇವರು ಬಯಸದೇ ಇರುವುದನ್ನು ಕೊಡಬಯಸುತ್ತಾರೆ. \p \v 13 ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ, ಬೇರೆಯವರನ್ನು ಕಷ್ಟಕ್ಕೆ ಒಳಪಡಿಸಬಾರದೆಂಬುದು ನಮ್ಮ ಉದ್ದೇಶವಲ್ಲ. ಸಮಾನತ್ವವಿರಬೇಕೆಂಬುದೇ ನಮ್ಮ ಉದ್ದೇಶವಾಗಿದೆ. \v 14 ಸದ್ಯದಲ್ಲಿ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುವುದು. ಅನಂತರ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವುದು. ಆಗ ಸಮಾನತೆಯ ಗುರಿಯು ಉಂಟಾಗುವುದು. \v 15 ಪವಿತ್ರ ವೇದದಲ್ಲಿ ಬರೆದಿರುವಂತೆ: “ಅತಿಯಾಗಿ ಕೂಡಿಸಿದವನಿಗೆ ಹೆಚ್ಚಾಗಲಿಲ್ಲ, ಮಿತವಾಗಿ ಕೂಡಿಸಿದವನಿಗೆ ಕೊರತೆಯಾಗಲಿಲ್ಲ.”\f + \fr 8:15 \fr*\ft \+xt ವಿಮೋ 16:18\+xt*\ft*\f* \s1 ತೀತನನ್ನು ಕೊರಿಂಥಕ್ಕೆ ಕಳುಹಿಸಿದ್ದು \p \v 16 ನಿಮ್ಮ ವಿಷಯವಾಗಿ ನನಗಿರುವ ಹಿತಚಿಂತನೆಯನ್ನು ತೀತನ ಹೃದಯದಲ್ಲಿಯೂ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. \v 17 ನಮ್ಮ ವಿನಂತಿಯನ್ನು ತೀತನು ಒಪ್ಪಿಕೊಂಡದ್ದು ಮಾತ್ರವಲ್ಲದೆ, ತನ್ನ ಸ್ವಂತ ಇಚ್ಛೆಯಿಂದ ನಿಮ್ಮಲ್ಲಿಗೆ ಬರಲು ಆಸಕ್ತಿಯಿಂದ ಹೊರಟಿರುತ್ತಾನೆ. \v 18 ಅವನೊಂದಿಗೆ ಇನ್ನೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇನೆ. ಆ ಸಹೋದರನು ಮಾಡಿದ ಸುವಾರ್ತೆ ಸೇವೆಯನ್ನು ಎಲ್ಲಾ ಸಭೆಗಳವರು ಪ್ರಶಂಶಿಸಿದ್ದಾರೆ. \v 19 ಅಲ್ಲದೆ, ಕರ್ತ ಯೇಸುವಿನ ಮಹಿಮೆಗಾಗಿಯೂ ಸಹಾಯಮಾಡಬೇಕೆಂಬ ಸದುದ್ದೇಶ ತೋರಿಸುವುದಕ್ಕಾಗಿಯೂ ನಾವು ಸೇವೆಯನ್ನು ನಿರ್ವಹಿಸುತ್ತೇವೆ. ಇದಕ್ಕಾಗಿಯೇ, ನಮ್ಮ ಜೊತೆ ಬಂದು ಸಹಾಯಮಾಡಲು ಸಭೆಗಳಿಂದ ಆಯ್ಕೆಯಾದವನು ಆ ಸಹೋದರನು. \v 20 ಹೀಗೆ ನಮ್ಮ ಕೈಗೆ ಒಪ್ಪಿಸಲಾದ ಈ ಉದಾರ ಕೊಡುಗೆಯ ವಿತರಣೆಯ ಕಾರ್ಯದಲ್ಲಿ ಯಾರೂ ನಮ್ಮ ಮೇಲೆ ತಪ್ಪು ಹೊರಿಸಲು ಆಸ್ಪದವಿರಕೂಡದು. \v 21 ಏಕೆಂದರೆ, ಕರ್ತ ಯೇಸುವಿನ ದೃಷ್ಟಿಯಲ್ಲಿ ಮಾತ್ರ ಅಲ್ಲ, ಜನರ ದೃಷ್ಟಿಯಲ್ಲಿಯೂ ಯೋಗ್ಯವಾದದ್ದನ್ನು ಮಾಡಬೇಕೆಂಬುದು ನಮ್ಮ ಪ್ರಯಾಸವಾಗಿದೆ. \p \v 22 ಇವರಿಬ್ಬರ ಜೊತೆಯಲ್ಲಿ ನಾವು ನಮ್ಮ ಅನೇಕ ಅನುಭವಗಳಿಂದ ಆಸಕ್ತಿಯುಳ್ಳವನೆಂಬುದನ್ನು ದೃಢಪಡಿಸಿಕೊಂಡ ಬೇರೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇವೆ. ಅವನು ನಿಮ್ಮ ಬಗ್ಗೆ ಪೂರ್ಣ ಭರವಸೆಯನ್ನಿಟ್ಟು ನಿಮಗೆ ನೆರವಾಗಲು ಇನ್ನೂ ಉತ್ಸುಕತೆಯಲ್ಲಿದ್ದಾನೆ. \v 23 ತೀತನು ನನ್ನ ಸಹೋದ್ಯೋಗಿ ಮತ್ತು ನಿಮ್ಮ ನಡುವೆಯಿರುವ ನನ್ನ ಸಹಕಾರಿಯಾಗಿರುತ್ತಾನೆ. ಇವನ ಸಂಗಡ ಬರುತ್ತಿರುವ ನಮ್ಮ ಸಹೋದರರು ಸಭೆಗಳ ಪ್ರತಿನಿಧಿಗಳಾಗಿದ್ದಾರೆ ಮತ್ತು ಕ್ರಿಸ್ತ ಯೇಸುವಿನ ಮಹಿಮೆಗೆ ಕಾರಣಸ್ಥರೂ ಆಗಿದ್ದಾರೆ. \v 24 ಆದ್ದರಿಂದ, ಇವರೊಂದಿಗೆ ನಿಮಗಿರುವ ಪ್ರೀತಿಯನ್ನೂ ನಿಮ್ಮ ಬಗ್ಗೆಯಿರುವ ನಮ್ಮ ಹೊಗಳಿಕೆಯನ್ನೂ ಸಭೆಗಳವರ ಮುಂದೆ ರುಜುಪಡಿಸಿ ತೋರಿಸಿರಿ. \c 9 \p \v 1 ದೇವಜನರಿಗೆ ಸಹಾಯ ಮಾಡುವುದನ್ನು ಕುರಿತು ನಾನು ನಿಮಗೆ ಬರೆಯುವ ಅವಶ್ಯವಿಲ್ಲ. \v 2 ಅಖಾಯದಲ್ಲಿರುವ ನೀವು ಕಳೆದ ಒಂದು ವರ್ಷದಿಂದ ಉದಾರವಾಗಿ ದಾನ ಮಾಡಲು ಸಿದ್ಧರಾಗಿದ್ದೀರಿ ಎಂಬ ವಿಷಯವನ್ನು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಆಸಕ್ತಿಯನ್ನು ಕೇಳಿ ಮಕೆದೋನ್ಯದವರಲ್ಲಿ ಎಷ್ಟೋ ಮಂದಿ ಕಾರ್ಯರೂಪಕ್ಕೆ ಉತ್ತೇಜನಗೊಂಡಿರುತ್ತಾರೆ. \v 3 ಆದರೂ ಈ ವಿಷಯದಲ್ಲಿ ನಿಮ್ಮ ಬಗ್ಗೆ ನಮಗಿರುವ ಹೊಗಳಿಕೆಯು ಸುಳ್ಳಾಗಿರಬಾರದೆಂದು ಸಹೋದರರನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ನೀವು ಸಹ ನಾನು ನಿಮಗೆ ಹೇಳಿದಂತೆ, ಇದಕ್ಕಾಗಿ ಸಿದ್ಧರಾಗಿರುವಿರಿ ಎಂದು ಭಾವಿಸುತ್ತೇನೆ. \v 4 ಏಕೆಂದರೆ, ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಜೊತೆಯಲ್ಲಿ ಬಂದು, ನೀವು ಇನ್ನೂ ಸಿದ್ಧರಿಲ್ಲದೆ ಇರುವುದನ್ನು ಕಂಡರೆ, ನಿಮಗೆ ಬೇಸರವಾಗುವುದಲ್ಲದೆ, ನಿಮ್ಮ ಬಗ್ಗೆ ಭರವಸೆಯಿಟ್ಟಿರುವುದಕ್ಕೆ ನಾವು ಸಹ ನಾಚಿಕೆಪಡುವ ಸನ್ನಿವೇಶ ಬರಬಾರದು. \v 5 ಆದ್ದರಿಂದ ಸಹೋದರರನ್ನು ಮುಂಚಿತವಾಗಿ ಹೋಗುವುದಕ್ಕೆ ನಾನು ಏರ್ಪಾಡು ಮಾಡಬೇಕಾಯಿತು. ಅವರು ಬಂದು ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಮುಗಿಸುವರು. ಹೀಗೆ ಈ ಉದಾರವಾಗಿರುವ ದಾನವು ಬಲಾತ್ಕಾರದ ವಸೂಲಿಯಾಗಿರದೆ ಮನಃಪೂರ್ವಕವಾಗಿ ಕೊಟ್ಟಿರುವ ಸಹಾಯ ಧನವಾಗಿರುವುದು. \s1 ಉದಾರತೆಯ ಚಿಂತನೆ \p \v 6 ಸ್ವಲ್ಪವಾಗಿ ಬಿತ್ತುವವನು ಸ್ವಲ್ಪವಾಗಿ ಕೊಯ್ಯುವನು, ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿರಿ. \v 7 ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದನ್ನು ಕೊಡಲಿ. ಮನಸ್ಸಿಲ್ಲದ ಮನಸ್ಸಿನಿಂದಾಗಲಿ ಅಥವಾ ಬಲವಂತದಿಂದಾಗಲಿ ಕೊಡಬಾರದು. ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾರೆ. \v 8 ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತರಾಗಿರುವುದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿಯೂ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಿ. \v 9 ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, \q1 “ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಕೊಟ್ಟರು; \q2 ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು.”\f + \fr 9:9 \fr*\ft \+xt ಕೀರ್ತನೆ 112:9\+xt*\ft*\f* \m \v 10 ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಊಟವನ್ನು ಒದಗಿಸುವ ದೇವರು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು, ಹೆಚ್ಚಿಸಿ ನಿಮ್ಮ ನೀತಿಯ ಸುಗ್ಗಿಯನ್ನು ವೃದ್ಧಿಪಡಿಸುವರು. \v 11 ನೀವು ಸದಾ ಉದಾರಿಗಳಾಗುವಂತೆ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿಯೂ ಸಿರಿವಂತರನ್ನಾಗಿ ಮಾಡುವನು. ನಿಮ್ಮ ಕೊಡುಗೆಯು ನಮ್ಮ ಸೇವೆಯ ಮೂಲಕ ಬೇರೆಯವರಿಗೆ ಮುಟ್ಟಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ನಡೆಸುವುದು. \p \v 12 ಈ ನಿಮ್ಮ ಸೇವೆಯು ಬರೀ ದೇವಜನರ ಕೊರತೆಯನ್ನು ನೀಗಿಸುವುದು ಮಾತ್ರವಲ್ಲ, ಅನೇಕರು ದೇವರಿಗೆ ತುಂಬಿ ಹರಿಯುವಷ್ಟು ಕೃತಜ್ಞತಾಸ್ತುತಿ ಸಲ್ಲಿಸುವಂತೆ ಮಾಡುವುದು. \v 13 ನಿಮ್ಮ ಸ್ವಭಾವವನ್ನು ರುಜುಪಡಿಸಿದ ಈ ಸೇವೆಯ ನಿಮಿತ್ತವಾಗಿಯೂ, ಕ್ರಿಸ್ತ ಯೇಸುವಿನ ಸುವಾರ್ತೆಯ ಅರಿಕೆಯನ್ನು ಅನುಸರಿಸುವ ನಿಮ್ಮ ವಿಧೇಯತೆಗಾಗಿಯೂ ಇತರರು ದೇವರನ್ನು ಸ್ತುತಿಸುವರು. ಹೀಗೆ, ನೀವು ಅವರಿಗೂ ಪ್ರತಿಯೊಬ್ಬರಿಗೂ ಎಷ್ಟು ಉದಾರಿಗಳಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳುವರು. \v 14 ನಿಮಗೆ ದೊರೆತ ಮಿತಿಯಿಲ್ಲದ ದೇವರ ಕೃಪೆಯ ನಿಮಿತ್ತ, ಅವರು ನಿಮ್ಮನ್ನು ಕಾಣುವ ಬಯಕೆಯಿಂದ ನಿಮಗಾಗಿ ಪ್ರಾರ್ಥಿಸುವರು. \v 15 ವರ್ಣಿಸಲು ಅಸಾಧ್ಯವಾದ ದೇವರ ಕೃಪಾವರಕ್ಕಾಗಿ ಅವರಿಗೆ ಸ್ತೋತ್ರವಾಗಲಿ! \c 10 \s1 ಪೌಲನ ಸೇವೆಯ ಸಮರ್ಥನೆ \p \v 1 ನಾನು ನಿಮ್ಮ ಬಳಿಯಲ್ಲಿ ಮುಖಾಮುಖಿಯಾಗಿ ಮಾತನಾಡುವಾಗ, “ಮೃದುವಾಗಿಯೂ” ನಿಮ್ಮಿಂದ ದೂರವಿರುವಾಗ “ಕಠಿಣನಾಗಿಯೂ ವರ್ತಿಸುವವನು” ಎಂತಲೂ ನೀವು ತಿಳಿದಿದ್ದೀರಿ. ಅಂಥ ಪೌಲನೆಂಬ, ನಾನು ಕ್ರಿಸ್ತ ಯೇಸುವಿನ ದೀನತ್ವದಿಂದಲೂ ಸಾತ್ವಿಕತೆಯಿಂದಲೂ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: \v 2 ನಾನು ನಿಮ್ಮ ಬಳಿಗೆ ಬಂದಾಗ, ಕಠಿಣವಾಗಿ ವರ್ತಿಸಲು ನನಗೆ ಅವಕಾಶಕೊಡಬೇಡಿರಿ. ಏಕೆಂದರೆ ನಾವು ಪ್ರಾಪಂಚಿಕ ರೀತಿಗನುಸಾರವಾಗಿ ನಡೆಯುತ್ತಿದ್ದೇವೆಂದು ಆಕ್ಷೇಪಿಸುವ ಕೆಲವರ ವಿರುದ್ಧ ಖಂಡಿತವಾಗಿಯು ಕಠಿಣನಾಗಿಯೇ ವರ್ತಿಸಬೇಕೆಂದಿದ್ದೇನೆ. \v 3 ನಾವು ಈ ಲೋಕದಲ್ಲಿ ಜೀವಿಸುವವರಾದರೂ, ನಾವು ಲೋಕದವರಂತೆ ಹೋರಾಟ ಮಾಡುವವರಲ್ಲ. \v 4 ನಾವು ಹೋರಾಡುವಾಗ ಉಪಯೋಗಿಸುವ ಆಯುಧಗಳು ಲೋಕದವುಗಳಲ್ಲ. ಅವುಗಳಿಗೆ ಕೋಟೆಗಳನ್ನೇ ಕೆಡವಿ ಹಾಕುವ ದೈವಿಕ ಶಕ್ತಿ ಇದೆ. \v 5 ನಾವು ದೈವಜ್ಞಾನವನ್ನು ವಿರೋಧಿಸುವ ವಾಗ್ವಾದಗಳನ್ನೂ ಪ್ರತಿಯೊಂದು ನಟನೆಯನ್ನೂ ಧ್ವಂಸಮಾಡುತ್ತೇವೆ. ಪ್ರತಿಯೊಂದು ಯೋಚನೆಗಳನ್ನು ಕ್ರಿಸ್ತ ಯೇಸುವಿಗೆ ವಿಧೇಯವಾಗುವಂತೆ ಸೆರೆಹಿಡಿಯುವವರು ಆಗಿದ್ದೇವೆ. \v 6 ನಿಮ್ಮ ವಿಧೇಯತ್ವವು ಪರಿಪೂರ್ಣವಾದಾಗ, ನಾವು ಪ್ರತಿಯೊಂದು ಅವಿಧೇಯತ್ವವನ್ನೂ ಶಿಕ್ಷಿಸಲು ಸಿದ್ಧರಾಗಿದ್ದೇವೆ. \p \v 7 ನೀವು ಹೊರಗಿನ ತೋರಿಕೆಗಳನ್ನು ಮಾತ್ರ ತೀರ್ಪುಮಾಡುವವರಾಗಿದ್ದೀರಿ. ಯಾರಾದರೂ ತಾನು ಯೇಸುವಿಗೆ ಸೇರಿದವನು ಎಂದು ದೃಢವಾಗಿ ನಂಬುವುದಾದರೆ, ತಾನು ಹೇಗೆ ಕ್ರಿಸ್ತ ಯೇಸುವಿನವನೋ, ಹಾಗೆಯೇ ನಾವೂ ಕ್ರಿಸ್ತ ಯೇಸುವಿನವರು ಎಂದು ಅವನು ತಿಳಿದುಕೊಳ್ಳಲಿ. \v 8 ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ. ನಿಮ್ಮ ಭಕ್ತಿವೃದ್ಧಿಮಾಡಲಿಕ್ಕೆ ಕರ್ತ ಯೇಸು ನಮಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಈ ಅಧಿಕಾರದ ಬಗ್ಗೆ ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾನು ನಾಚಿಕೆಪಡುವುದಿಲ್ಲ. \v 9 ನನ್ನ ಪತ್ರಗಳಿಂದ ನಾನು ನಿಮಗೆ ಭಯ ಹುಟ್ಟಿಸಲು ಪ್ರಯತ್ನಿಸುವುದಕ್ಕೆ ನನಗೆ ಮನಸ್ಸಿಲ್ಲ. \v 10 “ಅವನ ಪತ್ರಗಳು ತೀಕ್ಷ್ಣವಾಗಿಯೂ ಶಕ್ತಿಯುತವಾಗಿಯೂ ಇವೆ. ಆದರೆ ಅವನು ಎದುರು ಬಂದಾಗ ನಿರ್ಬಲನೂ ಕೆಲಸಕ್ಕೆ ಬಾರದ ಮಾತುಗಳನ್ನಾಡುವವನೂ ಆಗಿದ್ದಾನೆ,” ಎಂದು ಕೆಲವರು ಹೇಳುತ್ತಾರೆ. \v 11 ಆದರೆ, ನಾವು ದೂರದಲ್ಲಿರುವಾಗ ಪತ್ರಗಳ ಮಾತಿನಲ್ಲಿ ಎಂಥವರಾಗಿದ್ದೇವೋ, ಹತ್ತಿರದಲ್ಲಿರುವಾಗಲೂ ಕೃತ್ಯದಲ್ಲಿ ಅಂಥವರಾಗಿಯೇ ಇರುತ್ತೇವೆ ಎಂದು ಅಂಥವರು ಅರ್ಥಮಾಡಿಕೊಳ್ಳಲಿ. \p \v 12 ತಮ್ಮನ್ನು ತಾವೇ ಹೊಗಳಿಕೊಳ್ಳುವವರೊಂದಿಗೆ ನಾವು ಹೋಲಿಸಿಕೊಳ್ಳಲು ಯತ್ನಿಸುವುದಿಲ್ಲ. ಏಕೆಂದರೆ, ಅವರು ತಮ್ಮತಮ್ಮೊಳಗೆ ತಮ್ಮನ್ನು ಅಳತೆ ಮಾಡಿಕೊಂಡು ಒಬ್ಬರೊಂದಿಗೊಬ್ಬರು ಹೋಲಿಸಿಕೊಳ್ಳುವುದರಿಂದ ವಿವೇಕವಿಲ್ಲದವರಾಗಿರುತ್ತಾರೆ. \v 13 ನಾವಾದರೋ ಮೇರೆ ತಪ್ಪಿ ಹೊಗಳಿಕೊಳ್ಳುವುದಿಲ್ಲ; ದೇವರು ತಾವೇ ನಮಗೆ ನೇಮಿಸಿದ ಸೇವಾಕ್ಷೇತ್ರದ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಆ ಮೇರೆಯೊಳಗೆ ನೀವೂ ಒಳಪಟ್ಟಿದ್ದೀರಿ. \v 14 ನಾವು ಮೊದಲು ನಿಮ್ಮ ಬಳಿಗೆ ಬಾರದಿದ್ದರೆ, ನಮ್ಮ ಹೊಗಳಿಕೊಳ್ಳುವಿಕೆಯು ಮೇರೆಯನ್ನು ಉಲ್ಲಂಘಿಸುವುದಾಗಿರುತ್ತಿತ್ತು; ಆದರೆ ನಾವು ನಿಮಗೆ ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕಾಗಿ ನಿಮ್ಮ ಬಳಿಗೆ ಬಂದೇವಲ್ಲಾ. \v 15 ಬೇರೆಯವರು ಮಾಡಿದ ಪ್ರಯಾಸದ ಫಲಕ್ಕಾಗಿ, ನಾವು ಮೇರೆ ತಪ್ಪಿ ಹೊಗಳಿಕೊಳ್ಳುವವರಲ್ಲ. ಆದರೆ ನಿಮ್ಮ ವಿಶ್ವಾಸವು ವೃದ್ಧಿಯಾದಂತೆ, ನಿಮ್ಮ ಮಧ್ಯೆ ನಮ್ಮ ಸೇವಾಕ್ಷೇತ್ರವು ಅಧಿಕವಾಗಿ ವಿಸ್ತಾರವಾಗಬೇಕೆಂದು ನಿರೀಕ್ಷಿಸುತ್ತೇವೆ. \v 16 ಏಕೆಂದರೆ, ನಿಮ್ಮ ಪ್ರದೇಶಗಳಿಗೆ ಆಚೆ ಇರುವ ಸ್ಥಳಗಳಲ್ಲಿಯೂ ನಾವು ಸುವಾರ್ತೆಯನ್ನು ಸಾರಬೇಕು. ಇತರರು ಮಾಡಿದ ಸೇವಾಕ್ಷೇತ್ರದಲ್ಲಿ ನಾವು ಸೇವೆಮಾಡಿ, ಹೆಚ್ಚಳ ಪಡುವುದಕ್ಕೆ ನಮಗಿಷ್ಟವಿಲ್ಲ. \v 17 ಆದರೆ, “ಹೆಚ್ಚಳ ಪಡುವವನು ಕರ್ತ ದೇವರಲ್ಲಿಯೇ ಹೆಚ್ಚಳ ಪಡಲಿ.”\f + \fr 10:17 \fr*\ft \+xt ಯೆರೆ 9:24\+xt*\ft*\f* \v 18 ತನ್ನನ್ನು ತಾನೇ ಹೊಗಳಿಕೊಳ್ಳುವವನಲ್ಲ, ಕರ್ತ ಯೇಸು ಯಾರನ್ನು ಹೊಗಳುತ್ತಾರೋ ಅವನೇ ಯೋಗ್ಯನು. \c 11 \s1 ಪೌಲನೂ, ಸುಳ್ಳು ಅಪೊಸ್ತಲರೂ \p \v 1 ನನ್ನ ಬುದ್ಧಿಹೀನತೆಯನ್ನು ನೀವು ಇನ್ನೂ ಸ್ವಲ್ಪ ಸಹಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಈಗಾಗಲೇ ನೀವು ಸಹಿಸಿಕೊಂಡಿದ್ದೀರಿ. \v 2 ದೇವರು ನಿಮ್ಮ ವಿಷಯದಲ್ಲಿ ಅಸೂಯೆಪಡುವಂತೆ, ನಾನು ನಿಮ್ಮ ವಿಷಯದಲ್ಲಿ ಅಸೂಯೆಪಡುತ್ತಿದ್ದೇನೆ. ಹೇಗೆಂದರೆ, ನಿಮ್ಮನ್ನು ಶುದ್ಧ ಕನ್ನಿಕೆಯಾಗಿ ಕ್ರಿಸ್ತ ಯೇಸು ಎಂಬ ಒಬ್ಬರೇ ಪುರುಷನಿಗೆ ಒಪ್ಪಿಸಬೇಕೆಂದು ಆತನೊಂದಿಗೆ ನಾನು ನಿಶ್ಚಯ ಮಾಡಿದ್ದೆನಲ್ಲಾ. \v 3 ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿಬಿದ್ದು, ಹೇಗೆ ಮೋಸ ಹೋದಳೋ, ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತ ಯೇಸುವಿನ ಮೇಲಿರಬೇಕಾದ ಯಥಾರ್ಥತೆಯನ್ನೂ ಶುದ್ಧ ಭಕ್ತಿಯನ್ನೂ ಬಿಟ್ಟುಹೋದೀತೆಂಬ ಭಯ ನನಗುಂಟು. \v 4 ಏಕೆಂದರೆ ಯಾವನಾದರೂ ನಿಮ್ಮ ಬಳಿಗೆ ಬಂದು ನಾನು ನಿಮಗೆ ಬೋಧಿಸದೆ ಇರುವ ಬೇರೊಬ್ಬ ಯೇಸುವಿನ ವಿಷಯ ಬೋಧಿಸಿದರೆ, ನೀವು ಸ್ವೀಕರಿಸುವಿರಿ. ನೀವು ಹೊಂದಿದ ಆತ್ಮನ ಬದಲಿಗೆ ಬೇರೊಂದು ಆತ್ಮವನ್ನು ಪಡೆಯುವಂತೆ ಮಾಡಿದರೆ, ನೀವು ಸ್ವಾಗತಿಸುತ್ತೀರಿ. ನೀವು ಕೇಳಿರುವ ಸುವಾರ್ತೆಯ ಬದಲು ಬೇರೊಂದು ಸುವಾರ್ತೆಯನ್ನು ಯಾರಾದರೂ ಬೋಧಿಸಿದರೆ, ನೀವು ಬೇಗನೇ ಒಪ್ಪಿಕೊಳ್ಳುತ್ತೀರಿ. \p \v 5 “ಅತ್ಯಂತ ಮಹಾ ಅಪೊಸ್ತಲರು” ಎಂದೆನಿಸಿದ ಇತರ ಅಪೊಸ್ತಲರಿಗಿಂತಲೂ ನಾನು ಕಡಿಮೆಯಾದವನಲ್ಲ ಎಂದು ಭಾವಿಸುತ್ತೇನೆ. \v 6 ನನ್ನ ಮಾತಿನಲ್ಲಿ ಚಾತುರ್ಯ ಇಲ್ಲದಿದ್ದರೂ ನನಗೆ ತಿಳುವಳಿಕೆಯಿದೆ. ಇದನ್ನು ನಾನು ಪ್ರತಿಯೊಂದು ಸಂದರ್ಭಗಳಲ್ಲಿಯೂ ಬಹಳ ಸ್ಪಷ್ಟಪಡಿಸಿರುತ್ತೇನೆ. \v 7 ಪ್ರತಿಫಲವನ್ನು ಎದುರುನೋಡದೇ, ದೇವರ ಸುವಾರ್ತೆಯನ್ನು ನೀವು ಉನ್ನತರಾಗಬೇಕೆಂದು, ನನ್ನನ್ನು ನಾನೇ ತಗ್ಗಿಸಿಕೊಂಡು ಉಚಿತವಾಗಿ ಸಾರಿದ್ದು ನನ್ನ ಪಾಪವೋ? \v 8 ನಿಮ್ಮ ಸೇವೆಯನ್ನು ಮಾಡುವುದಕ್ಕಾಗಿ ನಾನು ಬೇರೆ ಸಭೆಗಳಿಂದ ಸಹಾಯವನ್ನು ಹೊಂದಿ, ಅವರಿಂದ ವಸೂಲಿ ಮಾಡುತ್ತಿದ್ದೆ. \v 9 ನಾನು ನಿಮ್ಮಲ್ಲಿದ್ದಾಗ, ನನಗೆ ಕೊರತೆಯಾದಾಗ, ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಏಕೆಂದರೆ, ಮಕೆದೋನ್ಯದಿಂದ ಬಂದಿದ್ದ ಸಹೋದರರು ನನ್ನ ಅವಶ್ಯಕತೆಯನ್ನು ಪೂರೈಸಿದರು. ಹೀಗೆ ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಇನ್ನು ಮುಂದೆಯೂ ಭಾರವಾಗಿರುವುದಿಲ್ಲ. \v 10 ಅಖಾಯ ಪ್ರಾಂತದಲ್ಲಿರುವ ಯಾರೂ ಈ ನನ್ನ ಹೊಗಳಿಕೆಯನ್ನು ನಿಲ್ಲಿಸಲಾರರು ಎಂದು ಕ್ರಿಸ್ತ ಯೇಸುವಿನ ಸತ್ಯ ನನ್ನಲ್ಲಿ ಇರುವ ನಿಶ್ಚಯದಿಂದ ಹೇಳುತ್ತೇನೆ. \v 11 ಏಕೆ? ನಾನು ನಿಮ್ಮನ್ನು ಪ್ರೀತಿ ಇಲ್ಲದ್ದರಿಂದಲೋ? ನಾನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತುಂಟು! \p \v 12 ತಾವು ಮಾಡುವ ಕಾರ್ಯಗಳ ಬಗ್ಗೆ ನಮ್ಮೊಂದಿಗೆ ಸರಿಸಮಾನವೆಂದು ಹೊಗಳಿಕೊಳ್ಳಲು ಅವಕಾಶವನ್ನು ಹುಡುಕುವವರಿಗೆ, ಯಾವ ಆಸ್ಪದವೂ ಸಿಗದಂತೆ ನಾನು ಮಾಡುತ್ತಿರುವುದನ್ನು ನಿಲ್ಲಿಸದೆ, ಇನ್ನು ಮುಂದೆಯೂ ಮಾಡುತ್ತಿರುವೆನು. \v 13 ಅಂಥಾ ಜನರು ಸುಳ್ಳು ಅಪೊಸ್ತಲರು, ವಂಚಿಸುವ ವರ್ತಕರು, ಕ್ರಿಸ್ತ ಯೇಸುವಿನ ಅಪೊಸ್ತಲರೆಂದು ವೇಷ ಹಾಕಿಕೊಂಡವರೂ ಆಗಿದ್ದಾರೆ. \v 14 ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಸೈತಾನನೂ ಬೆಳಕಿನ ದೇವದೂತನಂತೆ ಕಾಣಿಸಿಕೊಳ್ಳಬಲ್ಲನು. \v 15 ಆದ್ದರಿಂದ ಸೈತಾನನ ಸೇವಕರೂ ನೀತಿಯ ಸೇವಕರಂತೆ ಕಾಣಿಸಿಕೊಳ್ಳುವುದಕ್ಕೆ ತಮ್ಮನ್ನು ಮಾರ್ಪಡಿಸಿಕೊಳ್ಳುವುದು ಆಶ್ಚರ್ಯವೇನೂ ಅಲ್ಲ. ಅವರ ಕೃತ್ಯಗಳಿಗೆ ತಕ್ಕಂತೆ ಅವರಿಗೆ ಅಂತ್ಯವೂ ಇರುವುದು. \s1 ತನ್ನ ಶ್ರಮೆಗಳನ್ನು ಕುರಿತು ಪೌಲನ ಹೆಚ್ಚಳ \p \v 16 ನಾನು ಬುದ್ಧಿಹೀನನೆಂದು ಯಾರೂ ನೆನಸಬಾರದೆಂದು ನಾನು ತಿರುಗಿ ಹೇಳುತ್ತೇನೆ. ಒಂದು ವೇಳೆ ಹಾಗೆ ನೆನಸಿದರೆ, ನೀವು ಬುದ್ಧಿಹೀನರನ್ನು ಸ್ವೀಕರಿಸುವಂತೆಯೇ, ನನ್ನನ್ನೂ ಸ್ವೀಕರಿಸಿರಿ. ಆಗ ನನ್ನನ್ನು ನಾನೇ ಪ್ರಶಂಶಿಸಿಕೊಳ್ಳಲು ನನಗೆ ಆಸ್ಪದವಾಗುವುದು. \v 17 ಈ ಹೆಚ್ಚಳ ಪಡುವ ವಿಷಯದಲ್ಲಿ ನಾನು ಕರ್ತ ಯೇಸು ಬಯಸಿದಂತೆ ಮಾತನಾಡದೆ, ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ. \v 18 ಅನೇಕರು ಪ್ರಾಪಂಚಿಕ ವಿಷಯಗಳಲ್ಲಿ ತಮ್ಮನ್ನು ಹೊಗಳಿಕೊಳ್ಳುವಂತೆ ನಾನೂ ಹೊಗಳಿಕೊಳ್ಳುವೆನು. \v 19 ಬುದ್ಧಿಹೀನರನ್ನು ಹರ್ಷದಿಂದ ಸಹಿಸಿಕೊಳ್ಳುತ್ತಿರುವ ಬುದ್ಧಿವಂತರು ನೀವು! \v 20 ನಿಜವಾಗಿ ಹೇಳಬೇಕಾದರೆ, ಯಾರಾದರೂ ನಿಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡರೂ, ನಿಮ್ಮನ್ನು ಮರುಳುಗೊಳಿಸಿದರೂ, ತಮ್ಮ ಸ್ವಂತ ಪ್ರಯೋಜನಕ್ಕಾಗಿ ಬಳಸಿಕೊಂಡರೂ, ನಿಮ್ಮ ಕೆನ್ನೆಗೆ ಬಾರಿಸಿದರೂ, ನೀವು ಸಹಿಸಿಕೊಳ್ಳುತ್ತೀರಲ್ಲಾ. \v 21 ಹೀಗೆಲ್ಲಾ ಮಾಡಲು ಬಹಳ ಬಲಹೀನರಾದ ನಮಗೆ ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ! \p ಯಾವುದನ್ನು ಇತರರು ಹೊಗಳಿಕೊಳ್ಳುವುದಕ್ಕೆ ಧೈರ್ಯ ಮಾಡುತ್ತಾರೋ, ಅದನ್ನು ನಾನು ಬುದ್ಧಿಹೀನನಂತೆ ಹೊಗಳುವ ಧೈರ್ಯ ಮಾಡುತ್ತೇನೆ. \v 22 ಅವರು ಹೀಬ್ರಿಯರೋ? ನಾನೂ ಹೀಬ್ರಿಯನೇ. ಅವರು ಇಸ್ರಾಯೇಲರೋ? ನಾನೂ ಇಸ್ರಾಯೇಲನೇ. ಅವರು ಅಬ್ರಹಾಮನ ಸಂತತಿಯವರೋ? ನಾನೂ ಕೂಡಾ ಅಬ್ರಹಾಮನ ಸಂತತಿಯೇ. \v 23 ಅವರು ಕ್ರಿಸ್ತ ಯೇಸುವಿನ ಸೇವಕರೋ? ಅವರಿಗಿಂತ ಹೆಚ್ಚಾಗಿ ನಾನು ಸೇವೆ ಮಾಡಿದ್ದೇನೆ. ನಾನು ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ. ನಾನು ಅತಿಯಾಗಿ ಪ್ರಯಾಸ ಪಟ್ಟಿರುತ್ತೇನೆ. ಅನೇಕಬಾರಿ ಸೆರೆಮನೆಗೆ ಹಾಕಲಾದೆನು. ಬಹು ಕ್ರೂರವಾದ ರೀತಿಯಲ್ಲಿ ಪೆಟ್ಟುಗಳನ್ನು ತಿಂದೆನು. ಅನೇಕಬಾರಿ ಮರಣವನ್ನು ಎದುರಿಸಿದೆನು. \v 24 ಯೆಹೂದ್ಯರ ಕೈಯಿಂದ ಐದು ಬಾರಿ ನಲ್ವತ್ತಕ್ಕೆ ಒಂದು ಕಡಿಮೆ ಛಡಿ ಏಟುಗಳನ್ನು ತಿಂದಿದ್ದೇನೆ. \v 25 ಮೂರು ಸಾರಿ ದೊಣ್ಣೆಯಿಂದ ಬಡಿಸಿಕೊಂಡಿದ್ದೇನೆ. ಒಂದು ಸಾರಿ ಕಲ್ಲೆಸೆದು ನನ್ನನ್ನು ಕೊಲ್ಲಲು ನೋಡಿದರು. ಮೂರು ಬಾರಿ ನಾನು ಪ್ರಯಾಣಿಸುತ್ತಿದ್ದ ಹಡಗು ಒಡೆದು ನೀರು ಪಾಲಾಯಿತು. ಒಂದು ಇಡೀ ಹಗಲುರಾತ್ರಿ ನಾನು ಸಮುದ್ರದ ಮೇಲೆ ತೇಲಿದೆನು. \v 26 ಊರಿಂದೂರಿಗೆ ಪ್ರಯಾಣ ಮಾಡುತ್ತಲೇ ಇದ್ದೆನು, ನದಿಗಳಿಂದ ಅಪಾಯ, ದಾರಿಗಳ್ಳರಿಂದ ಅಪಾಯ, ನನ್ನ ಸ್ವಂತ ಜನರಿಂದ ಅಪಾಯ, ಯೆಹೂದ್ಯರಲ್ಲದವರಿಂದ ಅಪಾಯ, ಪಟ್ಟಣಗಳಲ್ಲಿ ಅಪಾಯ, ಹೊರ ಪ್ರದೇಶಗಳಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ ಮತ್ತು ಸುಳ್ಳು ಸಹೋದರರಿಂದ ಅಪಾಯಗಳನ್ನೆಲ್ಲಾ ನಾನು ಎದುರಿಸಿದೆನು. \v 27 ನಾನು ಪ್ರಯಾಸಪಟ್ಟು ಮೈಮುರಿದು ಕೆಲಸ ಮಾಡಿದೆನು. ಎಷ್ಟೋ ಬಾರಿ ನಿದ್ರೆಗೆಟ್ಟೆನು. ಹಸಿವೆ ಬಾಯಾರಿಕೆಗಳೇನೆಂಬುದನ್ನು ಅರಿತೆನು. ಊಟವಿಲ್ಲದೆ ಎಷ್ಟೋ ಬಾರಿ ಉಪವಾಸ ಬಿದ್ದೆನು. ಸರಿಯಾದ ಬಟ್ಟೆ ಇಲ್ಲದೆ ಚಳಿಯಲ್ಲಿ ಬಹಳವಾಗಿ ಸಂಕಟಪಟ್ಟೆನು. \v 28 ಇಷ್ಟೇ ಅಲ್ಲ, ಎಲ್ಲಾ ಸಭೆಗಳ ಮೇಲಿರುವ ಚಿಂತೆಯು ನನ್ನನ್ನು ದಿನನಿತ್ಯವೂ ಬಾಧಿಸುತ್ತಿದೆ. \v 29 ನಿಮ್ಮಲ್ಲಿ ಯಾರಾದರೂ ಬಲಹೀನರಾಗಿದ್ದರೆ, ನಾನೂ ಬಲಹೀನನಾಗಿರುವುದಿಲ್ಲವೋ? ನಿಮ್ಮಲ್ಲಿ ಯಾವನಾದರೂ ಪಾಪದಲ್ಲಿ ಬಿದ್ದುಹೋದರೆ, ನಾನು ನೊಂದುಕೊಳ್ಳುವುದಿಲ್ಲವೋ? \p \v 30 ನನ್ನನ್ನು ಹೊಗಳಿಕೊಳ್ಳಬೇಕಾಗಿದ್ದರೆ, ನಾನು ನನ್ನ ಬಲಹೀನತೆಯಲ್ಲಿ ಹೊಗಳಿಕೊಳ್ಳುವೆನು. \v 31 ನಮ್ಮ ಕರ್ತ ಯೇಸುವಿನ ದೇವರೂ ತಂದೆಯೂ ನಾನು ಸುಳ್ಳು ಹೇಳುವುದಿಲ್ಲ ಎಂಬುದನ್ನು ಬಲ್ಲವರಾಗಿದ್ದಾರೆ. ಅವರಿಗೇ ನಿತ್ಯವೂ ಸ್ತುತಿ ಸಲ್ಲಲಿ. \v 32 ದಮಸ್ಕದ ಅರಸನಾದ ಅರೇತನ ಆಜ್ಞೆಯ ಪ್ರಕಾರ, ಅಲ್ಲಿಯ ರಾಜ್ಯಪಾಲನು ನನ್ನನ್ನು ಹಿಡಿದು ಬಂಧಿಸಬೇಕೆಂದು ದಮಸ್ಕದ ಪಟ್ಟಣವನ್ನು ಕಾವಲಿರಿಸಿದನು. \v 33 ಆದರೆ ಪಟ್ಟಣದ ಕೋಟೆ ಗೋಡೆಯ ಕಿಟಿಕಿಯೊಳಗಿಂದ ಒಂದು ಬುಟ್ಟಿಯ ಮೂಲಕ ಕೆಳಗಿಳಿಸಲಾಗಿ, ಅವನ ಕೈಯೊಳಗಿಂದ ನಾನು ತಪ್ಪಿಸಿಕೊಂಡೆನು. \c 12 \s1 ಪೌಲನ ದರ್ಶನ ಮತ್ತು ಅವನಿಗೆ ನಾಟಿದ್ದ ಮುಳ್ಳು \p \v 1 ನನ್ನ ಹೊಗಳಿಕೆಯಲ್ಲಿ ಪ್ರಯೋಜನವಿಲ್ಲದಿದ್ದರೂ ಅದು ಅವಶ್ಯವಾಗಿದೆ. ನಾನು ಈಗ ಕರ್ತ ಯೇಸುವಿನಿಂದ ಹೊಂದಿದ ದರ್ಶನಗಳನ್ನು ಮತ್ತು ಪ್ರಕಟನೆಗಳನ್ನು ಕುರಿತು ಹೇಳುತ್ತೇನೆ. \v 2 ಕ್ರಿಸ್ತ ಯೇಸುವಿನಲ್ಲಿ ಒಬ್ಬನನ್ನು ನಾನು ಬಲ್ಲೆನು. ಹದಿನಾಲ್ಕು ವರ್ಷಗಳ ಹಿಂದೆ ನಾನು ಮೂರನೆಯ ಸ್ವರ್ಗಕ್ಕೆ ಒಯ್ಯಲಾದೆನು. ನಾನು ದೇಹ ಸಹಿತವಾಗಿ ಹೋದೆನೋ, ದೇಹ ರಹಿತನಾಗಿ ಹೋದೆನೋ ನನಗೆ ಗೊತ್ತಿಲ್ಲ ದೇವರಿಗೇ ಗೊತ್ತು. \v 3 ನನ್ನ ಅನುಭವ ದೇಹಸಹಿತನಾಗಿಯೋ, ದೇಹರಹಿತನಾಗಿಯೋ ಇದು ನನಗೆ ಗೊತ್ತಿಲ್ಲ. ದೇವರಿಗೇ ಗೊತ್ತು. \v 4 ನಾನು ಪರದೈಸಕ್ಕೆ ಒಯ್ಯಲಾದೆನು. ಅಲ್ಲಿ ನಾನು ವಿವರಿಸಲು ಅಸಾಧ್ಯವಾದದ್ದೂ ವರ್ಣಿಸಲು ಅಪ್ಪಣೆಯಿಲ್ಲದ್ದೂ ಆಗಿರುವ ವಿಷಯಗಳನ್ನು ಕೇಳಿದೆನು. \v 5 ಈ ಅನುಭವಗಳನ್ನು ಕುರಿತು ನಾನು ಹೆಚ್ಚಳ ಪಡುವೆನು. ಆದರೆ ನನ್ನ ವಿಷಯದಲ್ಲಿ ಅಲ್ಲ; ನನ್ನ ಬಲಹೀನತೆ ವಿಷಯದಲ್ಲಿ ಮಾತ್ರ ನಾನು ಹೊಗಳಿಕೊಳ್ಳುವೆನು. \v 6 ಒಂದು ವೇಳೆ ಹೊಗಳಿಕೊಳ್ಳಲು ಬಯಸಿದರೂ ನಾನು ಬುದ್ಧಿಹೀನನಾಗುವುದಿಲ್ಲ. ಏಕೆಂದರೆ, ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಆದರೆ ಯಾರೂ ನಾನು ಮಾಡುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಬಗ್ಗೆ ಎಣಿಸಬಾರದು. \v 7 ಬಹು ವಿಶೇಷವಾದ ಪ್ರಕಟನೆಗಳ ಬಗ್ಗೆ ನಾನು ಗರ್ವಪಡದಂತೆ, ನನ್ನ ಶರೀರದಲ್ಲಿ ಒಂದು ಮುಳ್ಳನ್ನು ಕೊಡಲಾಗಿತ್ತು. ಅದು ನನ್ನನ್ನು ಕಾಡಿಸಲು ಕಳುಹಿಸಲಾದ ಸೈತಾನನ ದೂತನೇ ಆಗಿತ್ತು. \v 8 ಅದು ನನ್ನಿಂದ ತಗೆದುಹಾಕಬೇಕೆಂದು ನಾನು ಮೂರು ಸಾರಿ ಕರ್ತ ಯೇಸುವನ್ನು ಬೇಡಿಕೊಂಡೆನು. \v 9 ಅದಕ್ಕೆ ಕರ್ತ ಯೇಸು, “ನನ್ನ ಕೃಪೆಯೇ ನಿನಗೆ ಸಾಕು. ನನ್ನ ಶಕ್ತಿಯು ಬಲಹೀನತೆಯಲ್ಲಿಯೇ ಪರಿಪೂರ್ಣವಾಗುವುದು,” ಎಂದು ನನಗೆ ಹೇಳಿದರು. ಆದ್ದರಿಂದ ಕ್ರಿಸ್ತ ಯೇಸುವಿನ ಶಕ್ತಿಯು ನನ್ನ ಮೇಲೆ ನೆಲೆಯಾಗಿರಬೇಕೆಂದು, ಬಹಳ ಆನಂದದಿಂದ ನನ್ನ ಬಲಹೀನತೆಯಲ್ಲಿಯೇ ಹೆಚ್ಚಳ ಪಡುವೆನು. \v 10 ಹೀಗಿರುವುದರಿಂದ ಕ್ರಿಸ್ತ ಯೇಸುವಿನ ನಿಮಿತ್ತ ನನಗೆ ಬಲಹೀನತೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಹರ್ಷಿಸುತ್ತೇನೆ. ಏಕೆಂದರೆ, ಬಲಹೀನತೆಯಲ್ಲಿಯೇ ನಾನು ಶಕ್ತನಾಗಿರುವೆನು. \s1 ಕೊರಿಂಥದವರನ್ನು ಕುರಿತು ಪೌಲನ ಚಿಂತೆ \p \v 11 ನೀವೇ ನನ್ನನ್ನು ಹೊಗಳಿಕೊಳ್ಳುವಂತೆ ಮಾಡಿ, ನಾನು ಬುದ್ಧಿಹೀನನಾಗಿ ನಡೆಯಲು ಒತ್ತಾಯಿಸಿದ್ದೀರಿ. ನನಗೆ ನಿಮ್ಮಿಂದಲೇ ಹೊಗಳಿಕೆಯು ಬೇಕಾಗಿತ್ತು. ಏಕೆಂದರೆ ನಾನು ಕೇವಲ ಅತ್ಯಲ್ಪನಾದರೂ “ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ” ಕಡಿಮೆ ಅಲ್ಲ. \v 12 ನಾನು ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ, ಮಹತ್ಕಾರ್ಯಗಳನ್ನೂ ನಡೆಸುವುದರಲ್ಲಿ ಸರ್ವ ಸಹನೆಯಲ್ಲಿಯೂ ಸತ್ಯ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳನ್ನು ನಿಮ್ಮ ನಡುವೆ ತೋರಿಸಿದೆನು. \v 13 ನಾನು ನಿಮಗೆ ಎಂದೂ ಭಾರವಾಗಿರಲಿಲ್ಲ ಎಂಬ ಒಂದೇ ವಿಷಯದಲ್ಲಿ ಹೊರತು, ಬೇರೆ ಯಾವ ವಿಷಯದಲ್ಲಿಯೂ ನಿಮ್ಮನ್ನು ಉಳಿದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲ. ಈ ನನ್ನ ತಪ್ಪನ್ನು ಕ್ಷಮಿಸಿರಿ. \p \v 14 ಇಗೋ, ನಾನು ನಿಮ್ಮ ಬಳಿಗೆ ಬರುವುದಕ್ಕೆ ಸಿದ್ದನಾಗಿರುವುದು ಇದು ಮೂರನೆಯ ಸಾರಿ. ನಾನು ಬಂದಾಗ ನಿಮಗೆ ಭಾರವಾಗಲು ಬಿಡುವುದಿಲ್ಲ. ನಾನು ನಿಮ್ಮ ಸೊತ್ತನ್ನು ಆಶಿಸುವುದಿಲ್ಲ. ನಿಮ್ಮನ್ನೇ ಆಶಿಸುತ್ತೇನೆ. ಮಕ್ಕಳು ತಂದೆತಾಯಿಗಳಿಗೋಸ್ಕರ ನಿಕ್ಷೇಪವನ್ನು ಕೂಡಿಸಿಡುವುದಿಲ್ಲ. ತಂದೆತಾಯಿಗಳು ಮಕ್ಕಳಿಗೋಸ್ಕರ ಕೂಡಿಸಿಡುತ್ತಾರಷ್ಟೇ. \v 15 ನಾನಂತೂ ನನಗಿರುವುದೆಲ್ಲವನ್ನೂ ನಿಮ್ಮ ಆತ್ಮಗಳಿಗೋಸ್ಕರ ಬಹು ಸಂತೋಷದಿಂದ ವೆಚ್ಚಮಾಡುತ್ತೇನೆ. ನನ್ನನ್ನು ಕೂಡ ನಿಮಗೋಸ್ಕರ ವೆಚ್ಚಮಾಡಲು ಸಿದ್ಧನಾಗಿದ್ದೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ, ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುವಿರೋ? \v 16 ಏನೇ ಇದ್ದರೂ, ನಾನು ನಿಮಗೆ ಭಾರವಾಗಿರಲಿಲ್ಲ; ನಾನು ಯುಕ್ತಿಯುಳ್ಳವನಾಗಿ ನಿಮ್ಮನ್ನು ಉಪಾಯದಿಂದ ಸುಲಿದುಕೊಂಡೆನೋ? \v 17 ನಾನು ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಯಾರ ಮೂಲಕವಾಗಿಯಾಗಲಿ ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡೆನೋ? \v 18 ನಿಮ್ಮ ಬಳಿಗೆ ಹೋಗುವುದಕ್ಕೆ ನಾನು ತೀತನನ್ನು ಒತ್ತಾಯಪಡಿಸಿ, ಅವನ ಜೊತೆಯಲ್ಲಿ ಆ ಸಹೋದರನನ್ನು ಕಳುಹಿಸಿಕೊಟ್ಟೆನು. ತೀತನು ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡನೋ? ನಾವಿಬ್ಬರೂ ಒಂದೇ ಆತ್ಮದಲ್ಲಿ ನಡೆದು ಒಂದೇ ಹೆಜ್ಜೆ ಜಾಡಿನಲ್ಲಿ ನಡೆಯಲಿಲ್ಲವೋ? \p \v 19 ನಾವು ಇಷ್ಟು ಹೊತ್ತು ನಿಮ್ಮ ಮುಂದೆ ಪ್ರತಿವಾದ ಮಾಡುತ್ತಿದ್ದೇವೆಂದು ನೆನಸುತ್ತೀರೋ? ಹಾಗೆ ಅಲ್ಲ; ಪ್ರಿಯರೇ, ನಾವು ಮಾಡುವುದೆಲ್ಲವೂ ನಿಮ್ಮ ಭಕ್ತಿವೃದ್ಧಿಗಾಗಿ ದೇವರ ದೃಷ್ಟಿಯಲ್ಲಿ ಕ್ರಿಸ್ತ ಯೇಸುವಿನಲ್ಲಿ ಇರುವವರಂತೆ ಮಾತನಾಡುವವರಾಗಿದ್ದೇವೆ. \v 20 ನಾನು ಬಂದಾಗ ಒಂದು ವೇಳೆ ನೀವು ನನ್ನ ಮನಸ್ಸಿನ ತೋರಿಕೆಯ ಪ್ರಕಾರ ಇರುವುದಿಲ್ಲವೋ ಏನೋ? ನಾನು ನಿಮ್ಮ ಇಷ್ಟದ ಪ್ರಕಾರ ತೋರದೆ ಇರಬಹುದು. ಒಂದು ವೇಳೆ ನಿಮ್ಮಲ್ಲಿ ಜಗಳ, ಹೊಟ್ಟೆಕಿಚ್ಚು, ಕೋಪ, ಭೇದಗಳು, ಚಾಡಿ ಹೇಳುವುದು, ಹರಟೆ ಹೊಡೆಯುವುದು, ಉಬ್ಬಿಕೊಳ್ಳುವುದು, ಕಲಹ ಎಬ್ಬಿಸುವುದು, ಇವುಗಳು ಕಾಣಬರುವುದೋ ಎಂಬ ಭಯ ನನಗೆ ಉಂಟು. \v 21 ನಾನು ತಿರುಗಿ ಬಂದಾಗ, ಹಿಂದೆ ನಿಮ್ಮಲ್ಲಿ ಅಶುದ್ಧತ್ವ, ಲೈಂಗಿಕ ಅನೈತಿಕತೆ, ಪೋಕರಿತನ ಮುಂತಾದ ಪಾಪಗಳನ್ನು ಮಾಡಿ ಪಶ್ಚಾತ್ತಾಪ ಪಡದಿರುವ ಅನೇಕರ ವಿಷಯವಾಗಿ ನನ್ನ ದೇವರು ನಿಮ್ಮ ವಿಷಯದಲ್ಲಿ ನನ್ನನ್ನು ತಗ್ಗಿಸಿಬಿಡುವನು ಎಂದು ದುಃಖಪಡಬೇಕಾಗಿರುವುದರಿಂದ ನಾನು ಭಯಪಡುತ್ತೇನೆ. \c 13 \s1 ಅಂತಿಮ ಎಚ್ಚರಿಕೆಗಳು \p \v 1 ನಾನು ನಿಮ್ಮ ಬಳಿಗೆ ಬರುವುದು ಇದು ಮೂರನೆಯ ಸಾರಿ. “ಇಬ್ಬರು ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು,”\f + \fr 13:1 \fr*\ft \+xt ಧರ್ಮೋ 19:15\+xt*\ft*\f* ಎಂದು ಬರೆಯಲಾಗಿದೆ. \v 2 ನಾನು ಎರಡನೆಯ ಸಾರಿ ನಿಮ್ಮ ಬಳಿಗೆ ಬಂದಿದ್ದಾಗ, ಗತಕಾಲದಲ್ಲಿ ಪಾಪ ಮಾಡುತ್ತಿದ್ದವರನ್ನು ಎಚ್ಚರಿಸಿದೆನು. ನಾನು ತಿರುಗಿ ಬಂದರೆ, ನಿಮ್ಮನ್ನು ಶಿಕ್ಷಿಸದೆ ಬಿಡುವುದಿಲ್ಲವೆಂದು ಹೇಗೆ ಹೇಳಿದೆನೋ, ಹಾಗೆಯೇ ಈಗಲೂ ನಿಮಗೆ ದೂರದಲ್ಲಿದ್ದುಕೊಂಡು ಹೇಳುತ್ತಿದ್ದೇನೆ. \v 3 ಕ್ರಿಸ್ತ ಯೇಸು ನನ್ನ ಮೂಲಕ ಮಾತನಾಡುತ್ತಾನೆಂಬುದಕ್ಕೆ ನಿಮಗೆ ಬೇಕಾದ ನಿದರ್ಶನವು ಆಗ ತೋರಿಬರುವುದು. ಬಲಹೀನನಾಗಿ ಕ್ರಿಸ್ತನು ನಿಮ್ಮೊಂದಿಗೆ ವ್ಯವಹರಿಸದೆ, ನಿಮ್ಮ ನಡುವೆ ಶಕ್ತನಾಗಿದ್ದಾನೆ. \v 4 ಕ್ರಿಸ್ತ ಯೇಸು ಬಲಹೀನತೆಯಲ್ಲಿ ಶಿಲುಬೆಗೆ ಹಾಕಲಾದರು ನಿಜ. ಆದರೆ ಅವರು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾರೆ. ನಾವು ಸಹ ಬಲಹೀನತೆಯುಳ್ಳವರಾಗಿದ್ದೇವೆ. ಆದರೆ ನಾವು ನಿಮ್ಮ ಸೇವೆ ಮಾಡುವಂತೆ, ನಾವು ಕ್ರಿಸ್ತ ಯೇಸುವಿನೊಂದಿಗೆ ದೇವರ ಶಕ್ತಿಯಿಂದ ಬದುಕುತ್ತಿದ್ದೇವೆ. \p \v 5 ನಂಬಿಕೆಯಲ್ಲಿ ಇದ್ದೀರೋ, ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ. ಏನು, ಕ್ರಿಸ್ತ ಯೇಸು ನಿಮ್ಮಲ್ಲಿದ್ದಾರೆಂಬುದರ ಬಗ್ಗೆ ನಿಮಗೆ ನಂಬಿಕೆಯಿಲ್ಲವೋ? ಅವರು ನಿಮ್ಮಲ್ಲಿಲ್ಲದಿದ್ದರೆ, ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲ. \v 6 ನಾವಂತೂ ಉತ್ತೀರ್ಣರಾದವರೆಂದು ನಿಮಗೆ ಗೊತ್ತಾಗುವುದೆಂದು ನಾನು ನಿರೀಕ್ಷಿಸುತ್ತೇನೆ. \v 7 ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಉತ್ತೀರ್ಣರಾದವರು ಎಂದು ಕಂಡುಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಸೋತವರಾಗಿ ಕಂಡುಬಂದರೂ ನೀವು ಒಳ್ಳೆಯದನ್ನೇ ಮಾಡಬೇಕೆಂಬುದು ನಮ್ಮ ಪ್ರಾರ್ಥನೆಯಾಗಿದೆ. \v 8 ಸತ್ಯಕ್ಕೆ ವಿರುದ್ಧವಾಗಿ ನಾವೇನೂ ಮಾಡಲಾರೆವು. ಸತ್ಯದ ಪರವಾಗಿಯೇ ಎಲ್ಲವನ್ನೂ ಮಾಡುತ್ತೇವೆ. \v 9 ನಾವು ಬಲಹೀನರಾಗಿದ್ದರೂ, ನೀವು ಬಲಿಷ್ಠರಾಗಿದ್ದಿರೆಂದು ತಿಳಿದು ಆನಂದಪಡುತ್ತೇವೆ. ನೀವು ಪರಿಪೂರ್ಣರಾಗಬೇಕೆಂದೇ ನಾವು ಪ್ರಾರ್ಥಿಸುತ್ತೇವೆ. \v 10 ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ, ಈ ಮಾತುಗಳನ್ನು ಬರೆದಿದ್ದೇನೆ. ನಾನು ಬಂದಾಗ ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ ಆದರೆ ಕಟ್ಟುವುದಕ್ಕಾಗಿ ಕರ್ತ ಯೇಸು ನನಗೆ ಕೊಟ್ಟಿರುವ ಅಧಿಕಾರದಿಂದ ನಿಮಗೆ ಕಾಠಿಣ್ಯವನ್ನು ತೋರಿಸುವುದಕ್ಕೆ ಅವಕಾಶವಿರಬಾರದೆಂದು ಅಪೇಕ್ಷಿಸುತ್ತೇನೆ. \b \s1 ಅಂತಿಮ ವಂದನೆಗಳು \p \v 11 ಪ್ರಿಯರೇ, ಕಡೆಯ ಮಾತೇನೆಂದರೆ, ಆನಂದಪಡಿರಿ! ನಿಮ್ಮನ್ನು ಪೂರ್ಣ ಪುನಃಸ್ಥಾಪನೆಗಾಗಿ ಕ್ರಮಪಡಿಸಿಕೊಳ್ಳಿರಿ, ಉತ್ತೇಜನಗೊಳ್ಳಿರಿ, ಒಂದೇ ಮನಸ್ಸುಳ್ಳವರಾಗಿರಿ, ಸಮಾಧಾನದಿಂದಿರಿ. ಆಗ ಪ್ರೀತಿ ಹಾಗೂ ಶಾಂತಿಯ ದೇವರು ನಿಮ್ಮ ಸಂಗಡ ಇರುವರು. \b \p \v 12 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. \p \v 13 ದೇವಜನರೆಲ್ಲರೂ ನಿಮಗೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ. \b \p \v 14 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮ ದೇವರ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡ ಇರಲಿ.