\id 1CO - Biblica® Open Kannada Contemporary Version \ide UTF-8 \h 1 ಕೊರಿಂಥದವರಿಗೆ \toc1 ಕೊರಿಂಥದವರಿಗೆ ಪೌಲನು ಬರೆದ ಮೊದಲನೆಯ ಪತ್ರಿಕೆ \toc2 1 ಕೊರಿಂಥದವರಿಗೆ \toc3 1 ಕೊರಿಂಥ \mt1 ಕೊರಿಂಥದವರಿಗೆ \mt2 ಪೌಲನು ಬರೆದ ಮೊದಲನೆಯ ಪತ್ರಿಕೆ \c 1 \p \v 1 ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನಿಂದ ಅಪೊಸ್ತಲನಾಗಲು ಕರೆಯಲಾದ ಪೌಲನೆಂಬ ನಾನು ಮತ್ತು ನಮ್ಮ ಸಹೋದರ ಸೊಸ್ಥೆನನು, \b \p \v 2 ಕ್ರಿಸ್ತ ಯೇಸುವಿನಲ್ಲಿ ಪ್ರತ್ಯೇಕವಾಗಿ, ಪವಿತ್ರರಾಗುವುದಕ್ಕೆ ಕರೆಹೊಂದಿದ ಕೊರಿಂಥದಲ್ಲಿರುವ ದೇವರ ಸಭೆಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ನಾಮದಲ್ಲಿ\f + \fr 1:2 \fr*\ft ಕ್ರಿಸ್ತ ಯೇಸುವಿಗೆ ಸೇರಿದ ಜನರು\ft*\f* ವಿಶ್ವಾಸವಿಟ್ಟ ಸಕಲ ಜನರಿಗೂ ಬರೆಯುವ ಪತ್ರ: \b \p \v 3 ನಮ್ಮ ತಂದೆಯಾದ ದೇವರಿಂದಲೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಉಂಟಾಗಲಿ. \b \s1 ಉಪಕಾರ ಸ್ಮರಣೆ \p \v 4 ಕ್ರಿಸ್ತ ಯೇಸುವಿನಲ್ಲಿ ನಿಮಗೆ ಕೊಟ್ಟಿರುವ ದೇವರ ಕೃಪೆಯ ಕಾರಣಕ್ಕಾಗಿ ನಾನು ಯಾವಾಗಲೂ ನಿಮಗೋಸ್ಕರ ಅವರಿಗೆ ಕೃತಜ್ಞತೆ ಹೇಳುವವನಾಗಿದ್ದೇನೆ. \v 5 ನೀವು ಕ್ರಿಸ್ತ ಯೇಸುವಿನಲ್ಲಿ ಜ್ಞಾನದಲ್ಲಿಯೂ ಮಾತುಗಳಲ್ಲಿಯೂ ಎಲ್ಲಾ ಸಮೃದ್ಧಿಯನ್ನು ಹೊಂದಿದ್ದೀರಿ. \v 6 ಆದ್ದರಿಂದ ದೇವರು ಕ್ರಿಸ್ತ ಯೇಸುವಿನ ವಿಷಯವಾದ ನಮ್ಮ ಸಾಕ್ಷಿಯು ನಿಮ್ಮಲ್ಲಿ ದೃಢವಾಯಿತು. \v 7 ಹೀಗಿರುವುದರಿಂದ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಪುನರಾಗಮನವನ್ನು ಆತುರದಿಂದ ಎದುರು ನೋಡುವವರಾದ ನಿಮಗೆ, ಯಾವುದೇ ಆತ್ಮಿಕ ವರಗಳ ಕೊರತೆಯು ಇರುವುದಿಲ್ಲ. \v 8 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ದಿನದಲ್ಲಿ ನೀವು ನಿರ್ದೋಷಿಗಳಾಗಿರುವಂತೆ ಅವರು ಕೊನೆಯತನಕವೂ ನಿಮ್ಮನ್ನು ಬಲಪಡಿಸಿ ಕಾಯುವರು. \v 9 ತಮ್ಮ ಪುತ್ರರೂ ನಮ್ಮ ಕರ್ತ ದೇವರೂ ಆಗಿರುವ ಕ್ರಿಸ್ತ ಯೇಸುವಿನ ಅನ್ಯೋನ್ಯತೆಗೆ ನಿಮ್ಮನ್ನು ಕರೆದ ದೇವರು ಪ್ರಾಮಾಣಿಕರು. \s1 ಸಭೆಯಲ್ಲಿ ಗುಂಪುಗಾರಿಕೆ \p \v 10 ಪ್ರಿಯರೇ, ನೀವೆಲ್ಲರೂ ಒಂದೇ ಅಭಿಪ್ರಾಯವುಳ್ಳವರಾಗಿದ್ದು, ನಿಮ್ಮೊಳಗೆ ಗುಂಪುಗಾರಿಕೆ, ಪಕ್ಷಬೇಧಗಳಿರದೆ, ಒಂದೇ ಮನಸ್ಸು ಮತ್ತು ಒಂದೇ ಆಲೋಚನೆಗಳಲ್ಲಿ ಪರಿಪೂರ್ಣವಾದ ಅನ್ಯೋನ್ಯತೆಯಲ್ಲಿರಬೇಕೆಂದು ನಾನು ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ. \v 11 ನನ್ನ ಪ್ರಿಯರೇ, ಖ್ಲೋಯೆಯ ಮನೆಯ ಕೆಲವರು, ನಿಮ್ಮೊಳಗೆ ಜಗಳಗಳುಂಟೆಂದು ನನಗೆ ತಿಳಿಸಿದರು. \v 12 ನಿಮ್ಮಲ್ಲಿ ಒಬ್ಬನು, “ನಾನು ಪೌಲನವನು,” ಇನ್ನೊಬ್ಬನು, “ನಾನು ಅಪೊಲ್ಲೋಸನವನು,” ಬೇರೊಬ್ಬನು, “ನಾನು ಕೇಫನವನು,” ಇನ್ನೊಬ್ಬನು, “ನಾನು ಕ್ರಿಸ್ತನವನು,” ಎಂದು ಹೇಳುತ್ತೀರಂತೆ. \p \v 13 ಕ್ರಿಸ್ತ ಯೇಸು ವಿಭಾಗವಾಗಿದ್ದಾರೋ? ಪೌಲನು ನಿಮಗೋಸ್ಕರ ಶಿಲುಬೆಗೆ ಹಾಕಿಸಿಕೊಂಡನೋ? ಪೌಲನ ಹೆಸರಿನಲ್ಲಿ ನೀವು ದೀಕ್ಷಾಸ್ನಾನ ತೆಗೆದುಕೊಂಡಿರುವಿರೋ? \v 14 ಕ್ರಿಸ್ಪನನ್ನು ಮತ್ತು ಗಾಯನನ್ನು ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಕೊಡಲಿಲ್ಲ. ಅದಕ್ಕಾಗಿ ನಾನು ದೇವರಿಗೆ ಸ್ತೋತ್ರ ಹೇಳುತ್ತೇನೆ. \v 15 ಏಕೆಂದರೆ ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಹೊಂದಿದ್ದಾರೆಂದು ಯಾರೂ ಹೇಳಬಾರದು. \v 16 ಹೌದು, ಸ್ತೆಫನನ ಮನೆಯವರಿಗೂ ನಾನು ದೀಕ್ಷಾಸ್ನಾನ ಕೊಟ್ಟಿದ್ದೇನೆ. ಇದನ್ನು ಬಿಟ್ಟು ಯಾರಿಗೂ ನಾನು ದೀಕ್ಷಾಸ್ನಾನ ಕೊಟ್ಟಿದ್ದು ನನ್ನ ಜ್ಞಾಪಕದಲ್ಲಿಲ್ಲ. \v 17 ದೀಕ್ಷಾಸ್ನಾನ ಕೊಡುವುದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಕಳುಹಿಸದೆ ಸುವಾರ್ತೆಯನ್ನು ಸಾರುವುದಕ್ಕಾಗಿ ನನ್ನನ್ನು ಕಳುಹಿಸಿದ್ದಾರೆ. ಸುವಾರ್ತೆ ಸಾರುವಂಥದ್ದು ವಾಕ್ಚಾತುರ್ಯದಿಂದಲ್ಲ. ಹಾಗೆ ಸಾರುತ್ತಿದ್ದರೆ ಕ್ರಿಸ್ತ ಯೇಸುವಿನ ಶಿಲುಬೆಯ ಶಕ್ತಿಯು ಬರಿದಾಗಿಬಿಡುತಿತ್ತು. \s1 ದೇವರ ಜ್ಞಾನವೂ ಸಾಮರ್ಥ್ಯವೂ ಆಗಿರುವ ಕ್ರಿಸ್ತ ಯೇಸು \p \v 18 ಶಿಲುಬೆಯ ಸಂದೇಶವು ವಿನಾಶದ ಮಾರ್ಗದಲ್ಲಿರುವವರಿಗೆ ಬುದ್ದಿಹೀನವಾಗಿದೆ. ರಕ್ಷಣೆ ಹೊಂದುತ್ತಿರುವ ನಮಗಾದರೋ, ಅದು ದೇವರ ಶಕ್ತಿಯಾಗಿದೆ. \v 19 ಏಕೆಂದರೆ, ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: \q1 “ಜ್ಞಾನಿಗಳ ಜ್ಞಾನವನ್ನು ನಾನು ನಾಶಮಾಡುವೆನು; \q2 ವಿವೇಕಿಗಳ ವಿವೇಕವನ್ನು ನಾನು ನಿರರ್ಥಕ ಮಾಡುವೆನು.”\f + \fr 1:19 \fr*\ft \+xt ಯೆಶಾಯ 29:14\+xt*\ft*\f* \p \v 20 ಜ್ಞಾನಿಯಾದ ಮನುಷ್ಯನೆಲ್ಲಿ? ಪಂಡಿತನು ಎಲ್ಲಿ? ಈ ಕಾಲದ ತತ್ವಜ್ಞಾನಿ ಎಲ್ಲಿ? ಈ ಲೋಕದ ಜ್ಞಾನವನ್ನು ದೇವರು ಬುದ್ದಿಹೀನತೆಯನ್ನಾಗಿ ಮಾಡಿದ್ದಾರಲ್ಲವೇ? \v 21 ಈ ಪ್ರಪಂಚವು ತನ್ನ ಜ್ಞಾನದ ಮೂಲಕ ದೇವರನ್ನು ಅರಿತುಕೊಳ್ಳಲಿಲ್ಲ; ಆದ್ದರಿಂದ ದೇವರ ಜ್ಞಾನದಿಂದ, ನಂಬಿದವರನ್ನು ಪ್ರಸಂಗದ ಬುದ್ದಿಹೀನತೆಯಿಂದ ರಕ್ಷಿಸುವುದು ದೇವರಿಗೆ ಮೆಚ್ಚುಗೆಯಾಯಿತು. \v 22 ಯೆಹೂದ್ಯರು ಆಶ್ಚರ್ಯಕರವಾದ ಗುರುತುಗಳನ್ನು ಹುಡುಕುತ್ತಾರೆ. ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ. \v 23 ನಾವಾದರೋ ಶಿಲುಬೆಗೆ ಹಾಕಲಾದ ಕ್ರಿಸ್ತ ಯೇಸುವನ್ನೇ ಪ್ರಸಂಗಿಸುತ್ತಿದ್ದೇವೆ. ಇದು ಯೆಹೂದ್ಯರಿಗೆ ವಿಘ್ನವೂ ಯೆಹೂದ್ಯರಲ್ಲದವರಿಗೆ ಬುದ್ದಿಹೀನತೆಯಾಗಿದೆ. \v 24 ಆದರೆ ದೇವರಿಂದ ರಕ್ಷಣೆಗೆ ಕರೆಹೊಂದಿದ ಯೆಹೂದ್ಯರಿಗಾಗಲಿ, ಯೆಹೂದ್ಯರಲ್ಲದವರಿಗಾಗಲಿ ಕ್ರಿಸ್ತ ಯೇಸು ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾರೆ. \v 25 ಏಕೆಂದರೆ ದೇವರ ಬುದ್ಧಿಹೀನತೆ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆ ಮನುಷ್ಯರ ಬಲಕ್ಕಿಂತಲೂ ಬಲವುಳ್ಳದ್ದಾಗಿದೆ. \p \v 26 ಪ್ರಿಯರೇ, ನೀವು ದೇವರ ಕರೆಯನ್ನು ಹೊಂದಿದಾಗ ಏನಾಗಿದ್ದಿರೆಂಬುದನ್ನು ಆಲೋಚಿಸಿರಿ. ನಿಮ್ಮೊಳಗೆ ಲೋಕಾನುಸಾರವಾಗಿ ಜ್ಞಾನಿಗಳೂ ಅನೇಕರಿಲ್ಲ, ಪ್ರಭಾವಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. \v 27 ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವಂತೆ, ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾರೆ. ದೇವರು ಬಲಿಷ್ಠರನ್ನು ನಾಚಿಕೆಪಡಿಸುವಂತೆ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾರೆ. \v 28 ದೇವರು ಈ ಲೋಕದ ಗಣ್ಯರನ್ನು ಏನೂ ಇಲ್ಲದವರನ್ನಾಗಿ ಮಾಡುವುದಕ್ಕಾಗಿ ಗಣನೆಗೆ ಬಾರದವರನ್ನೂ, ಹೀನೈಸಲಾದವರನ್ನೂ ಕೀಳಾದವರನ್ನೂ, ಆರಿಸಿಕೊಂಡಿದ್ದಾರೆ. \v 29 ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿರುವುದಿಲ್ಲ. \v 30 ನೀವು ದೇವರಿಂದಲೇ ಕ್ರಿಸ್ತ ಯೇಸುವಿನಲ್ಲಿದ್ದೀರಿ. ಕ್ರಿಸ್ತ ಯೇಸು ನಮಗೆ ದೇವರ ಕಡೆಯಿಂದ ಜ್ಞಾನವೂ ನೀತಿಯೂ ಶುದ್ಧೀಕರಣವೂ ವಿಮೋಚನೆಯೂ ಆಗಿದ್ದಾರೆ. \v 31 ಪವಿತ್ರ ವೇದದಲ್ಲಿ ಬರೆದಿರುವಂತೆ, “ಹೆಚ್ಚಳ ಪಡುವವನು ಕರ್ತ ದೇವರಲ್ಲಿಯೇ ಹೆಚ್ಚಳ ಪಡಲಿ.”\f + \fr 1:31 \fr*\ft \+xt ಯೆರೆ 9:24\+xt*\ft*\f* \c 2 \p \v 1 ಪ್ರಿಯರೇ, ನಾನು ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ, ಮಾನವೀಯ ಜ್ಞಾನದಿಂದಾಗಲಿ ದೇವರ ವಾಕ್ಯವನ್ನು ಸಾರುವವನಾಗಿ ಬರಲಿಲ್ಲ. \v 2 ಶಿಲುಬೆಗೆ ಹಾಕಲಾದ ಯೇಸು ಕ್ರಿಸ್ತನನ್ನೇ ಹೊರತು ನಿಮ್ಮಲ್ಲಿ ಬೇರೆ ಯಾವುದನ್ನೂ ತಿಳಿಯದವನಾಗಿರುವೆನೆಂದು ತೀರ್ಮಾನಿಸಿಕೊಂಡೆನು. \v 3 ನಾನು ನಿಮ್ಮ ಬಳಿಗೆ ಬಂದಾಗ ಬಲಹೀನನೂ ಬಹಳವಾಗಿ ಭಯಪಟ್ಟು ನಡುಗುವವನೂ ಆಗಿದ್ದೆನು. \v 4 ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಜ್ಞಾನ ಹಾಗೂ ಮನವೊಲಿಸುವ ವಾಕ್ಯಗಳನ್ನು ಪ್ರಯೋಗಿಸದೆ, ದೇವರಾತ್ಮನ ಶಕ್ತಿಯನ್ನೇ ಪ್ರಯೋಗಿಸಿದೆನು. \v 5 ನಿಮ್ಮ ನಂಬಿಕೆಯು ಮನುಷ್ಯ ಜ್ಞಾನದ ಮೇಲೆ ಅವಲಂಬಿಸದೆ ದೇವರ ಶಕ್ತಿಯ ಮೇಲೆ ಅವಲಂಬಿಸಬೇಕೆಂದು ನಾನು ಹೀಗೆ ಮಾಡಿದೆನು. \s1 ಪವಿತ್ರಾತ್ಮ ದೇವರ ಜ್ಞಾನ \p \v 6 ಹೀಗಿದ್ದರೂ ಪರಿಪೂರ್ಣರಲ್ಲಿ ಜ್ಞಾನದ ಬಗ್ಗೆ ಮಾತನಾಡುತ್ತೇವೆ. ಅದು ಇಹಲೋಕದ ಜ್ಞಾನವಲ್ಲ. ಅಳಿದು ಹೋಗುವ ಇಹಲೋಕದ ಅಧಿಕಾರಿಗಳ ಜ್ಞಾನವೂ ಅಲ್ಲ. \v 7 ನಾವು ದೇವರ ರಹಸ್ಯ ಜ್ಞಾನವನ್ನು ಕುರಿತು ಮಾತನಾಡುತ್ತೇವೆ. ಅದು ದೇವರು ನಮ್ಮ ಮಹಿಮೆಗಾಗಿ ಯುಗಗಳ ಮುಂಚೆಯೇ ನೇಮಿಸಿ, ಮರೆಮಾಡಿದ ಜ್ಞಾನವೇ ಆಗಿರುತ್ತದೆ. \v 8 ಇದನ್ನು ಇಹಲೋಕದ ಅಧಿಕಾರಿಗಳಲ್ಲಿ ಒಬ್ಬರಾದರೂ ಅರಿಯಲಿಲ್ಲ. ಅರಿತಿದ್ದರೆ, ಅವರು ಮಹಿಮೆಯುಳ್ಳ ಕರ್ತದೇವರನ್ನು ಶಿಲುಬೆಗೇರಿಸುತ್ತಿರಲಿಲ್ಲ. \v 9 ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ: \q1 “ದೇವರು ತಮ್ಮನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥದ್ದನ್ನು \q2 ಯಾವ ಕಣ್ಣೂ ಕಾಣಲಿಲ್ಲ, \q1 ಯಾವ ಕಿವಿಯೂ ಕೇಳಲಿಲ್ಲ, \q2 ಅದು ಮನುಷ್ಯನ ಹೃದಯದಲ್ಲಿಯೂ ಹುಟ್ಟಲಿಲ್ಲ.”\f + \fr 2:9 \fr*\ft \+xt ಯೆಶಾಯ 64:4\+xt*\ft*\f* \m \v 10 ನಮಗಾದರೋ ದೇವರು ತಮ್ಮ ಪವಿತ್ರಾತ್ಮರ ಮೂಲಕ ಇವುಗಳನ್ನು ಪ್ರಕಟಿಸಿದ್ದಾರೆ. \p ಪವಿತ್ರಾತ್ಮರು ಎಲ್ಲಾ ವಿಷಯಗಳನ್ನು ಹಾಗೂ ದೇವರ ಆಳವಾದ ರಹಸ್ಯಗಳನ್ನು ಪರಿಶೋಧಿಸುವವರಾಗಿದ್ದಾರೆ. \v 11 ಮನುಷ್ಯನ ಆಲೋಚನೆಗಳು ಅವನಲ್ಲಿರುವ ಆತ್ಮಕ್ಕೆ ಹೊರತು ಮತ್ತಾರಿಗೆ ತಿಳಿಯುವುದು? ಹಾಗೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ ಬೇರೆ ಯಾರೂ ಗ್ರಹಿಸಲಾರರು. \v 12 ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮರನ್ನು ಹೊಂದಿದ್ದೇವೆ. \v 13 ನಾವು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಮಾತನಾಡದೆ, ದೇವರ ಆತ್ಮರು ಕಲಿಸಿಕೊಟ್ಟ ಮಾತುಗಳಿಂದ ಇವುಗಳನ್ನು ಮಾತಾಡುತ್ತೇವೆ. ಹೀಗೆ ನಾವು ಆತ್ಮಿಕ ಸತ್ಯಗಳನ್ನು ದೇವರ ಆತ್ಮರ ಮಾತುಗಳಿಂದಲೇ ಸ್ಪಷ್ಟಪಡಿಸುತ್ತೇವೆ. \v 14 ಆದರೆ ಭೌತಿಕ ಮನುಷ್ಯನು\f + \fr 2:14 \fr*\ft ಪೌಲನು ಮನುಷ್ಯರನ್ನು ಮೂರು ವ್ಯಕ್ತಿಗಳಾಗಿ ವಿಂಗಡಿಸಿದ್ದಾನೆ. ಮೊದಲನೆಯದಾಗಿ ತಮ್ಮ ಮನಸ್ಸಿನ ಭಾವನೆಗಳ ಬದುಕುವವರು ಮತ್ತು ದೇವರ ಆತ್ಮ ಇಲ್ಲದವರು. ಎರಡನೆಯದಾಗಿ ದೈಹಿಕ ಆಸೆಗಳನ್ನು ಅನುಸರಿಸುವವರು ದೈಹಿಕರು. ಮೂರನೆಯದಾಗಿ ಪವಿತ್ರಾತ್ಮ ದೇವರನ್ನು ಅನುಸರಿಸುವವರು ಆತ್ಮಿಕರು.\ft*\f* ದೇವರಾತ್ಮರ ವಿಷಯಗಳನ್ನು ಸ್ವೀಕರಿಸುವುದಿಲ್ಲ. ಅವು ಅವನಿಗೆ ಬುದ್ಧಿಹೀನವಾಗಿ ತೋರುತ್ತವೆ. ಏಕೆಂದರೆ ಆತ್ಮಿಕ ವಿವೇಚನೆಯಿಂದ ತಿಳಿಯಬೇಕಾಗಿದ್ದ ಕಾರಣ ಅವನು ಅವುಗಳನ್ನು ತಿಳಿದುಕೊಳ್ಳಲಾರನು. \v 15 ಆದರೆ ಆತ್ಮಿಕ ಮನುಷ್ಯನು ಎಲ್ಲವನ್ನೂ ವಿವೇಚಿಸಿಕೊಳ್ಳುತ್ತಾನೆ. ಆದರೆ ಅವನಿಗೆ ಬೇರೆ ಯಾರೂ ತೀರ್ಪುಮಾಡಲಾಗದು. \v 16 ಏಕೆಂದರೆ, \q1 “ಕರ್ತದೇವರ ಮನಸ್ಸನ್ನು ತಿಳಿದುಕೊಂಡು, \q2 ಅವರಿಗೆ ಉಪದೇಶಿಸುವವನಾರು?”\f + \fr 2:16 \fr*\ft \+xt ಯೆಶಾಯ 40:13\+xt*\ft*\f* \m ಆದರೆ ನಮಗೆ ಕ್ರಿಸ್ತ ಯೇಸುವಿನ ಮನಸ್ಸು ಇದೆ. \c 3 \s1 ಸಭೆಯೊಳಗಿದ್ದ ಪಕ್ಷಭೇದಗಳು \p \v 1 ಪ್ರಿಯರೇ, ನೀವು ದೇವರಾತ್ಮರಿಗೆ ತಕ್ಕಂತೆ ಬಾಳುವವರಾಗಿ ನಾನು ನಿಮ್ಮ ಸಂಗಡ ಮಾತನಾಡುತ್ತಾ ಇಲ್ಲ. ನೀವು ಇನ್ನೂ ಕ್ರಿಸ್ತ ಯೇಸುವಿನಲ್ಲಿ ಕೂಸುಗಳೂ ಪ್ರಾಪಂಚಿಕರೂ\f + \fr 3:1 \fr*\ft ಮೂಲಭಾಷೆಯಲ್ಲಿ \ft*\fqa ದೈಹಿಕರು\fqa*\f* ಆಗಿರುವಿರೆಂದು ಭಾವಿಸಿ ನಿಮ್ಮ ಸಂಗಡ ಮಾತನಾಡಬೇಕಾಯಿತು. \v 2 ನಾನು ನಿಮಗೆ ಹಾಲು ಕೊಟ್ಟೆನು. ಗಟ್ಟಿ ಆಹಾರವನ್ನು ಕೊಡಲಿಲ್ಲ, ಏಕೆಂದರೆ ನಿಮಗೆ ಶಕ್ತಿ ಇರಲಿಲ್ಲ, ಈಗಲಾದರೂ ನಿಮಗೆ ಶಕ್ತಿಯಿಲ್ಲ. \v 3 ಏಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ಹೇಗೆಂದರೆ, ನಿಮ್ಮೊಳಗೆ ಅಸೂಯೆ, ಜಗಳಗಳು ಇರುವಲ್ಲಿ ನೀವು ಪ್ರಾಪಂಚಿಕರಾಗಿದ್ದೀರಲ್ಲದೆ ಕೇವಲ ಮಾನವರಂತೆ ನಡೆಯುತ್ತೀರಲ್ಲವೇ? \v 4 ಒಬ್ಬನು, “ನಾನು ಪೌಲನವನು,” ಎಂದು ಮತ್ತೊಬ್ಬನು, “ನಾನು ಅಪೊಲ್ಲೋಸನವನು,” ಎಂದೂ ಹೇಳುತ್ತಿರುವಾಗ, ನೀವು ಕೇವಲ ಮಾನವರಂತೆ ಆಗಿದ್ದೀರಲ್ಲವೇ? \p \v 5 ಹಾಗಾದರೆ, ಅಪೊಲ್ಲೋಸನು ಯಾರು? ಪೌಲನು ಯಾರು? ಅವನವನಿಗೆ ಕರ್ತದೇವರು ನೇಮಿಸಿದ ಕಾರ್ಯದ ಪ್ರಕಾರ ಅವರವರ ಮುಖಾಂತರ ನೀವು ನಂಬಿದ್ದೀರಿ. ಅವರು ಕೇವಲ ಸೇವಕರಾಗಿದ್ದಾರೆ. \v 6 ನಾನು ಬೀಜವನ್ನು ಬಿತ್ತಿದೆನು, ಅಪೊಲ್ಲೋಸನು ನೀರು ಹಾಕಿದನು, ಆದರೆ ಬೆಳೆಸಿದವರು ದೇವರೇ. \v 7 ಹೀಗಿರಲಾಗಿ ನೆಡುವವನಾಗಲಿ, ನೀರು ಹಾಕುವವನಾಗಲಿ ಪ್ರಾಮುಖ್ಯರಾಗಿರದೆ, ಬೆಳೆಸುವ ದೇವರೇ ಬಹು ಪ್ರಾಮುಖ್ಯವಾದವರು. \v 8 ನೆಡುವವನೂ ನೀರು ಹಾಕುವವನೂ ಒಂದೇ ಉದ್ದೇಶವುಳ್ಳವರಾಗಿರುತ್ತಾರೆ. ಪ್ರತಿಯೊಬ್ಬನಿಗೆ ಅವನವನ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದು. \v 9 ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ. \p \v 10 ದೇವರು ನನಗೆ ಕೊಟ್ಟ ಕೃಪೆಗೆ ಅನುಸಾರವಾಗಿ, ನಾನು ಜ್ಞಾನಿಯಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ಪ್ರತಿಯೊಬ್ಬನೂ ತಾನು ಅದರ ಮೇಲೆ ಎಷ್ಟು ಶ್ರದ್ಧೆಯಿಂದ ಕಟ್ಟುತ್ತಾನೆಂದು ನೋಡಿಕೊಳ್ಳಬೇಕು. \v 11 ಕ್ರಿಸ್ತ ಯೇಸುವೆಂಬ ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ. \v 12 ಯಾವನಾದರೂ ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಕಟ್ಟಿಗೆ, ಹುಲ್ಲು ಅಥವಾ ಜೊಂಡು ಮುಂತಾದವುಗಳಿಂದ ಕಟ್ಟಿದರೆ, \v 13 ಕ್ರಿಸ್ತ ಯೇಸುವಿನ ದಿನವು ಇದನ್ನು ಬಹಿರಂಗಕ್ಕೆ ತರುವಾಗ, ಅವನವನ ಕೆಲಸವು ಏನಾಗಿರುವುದೆಂಬುದು ವ್ಯಕ್ತವಾಗುವುದು. ಏಕೆಂದರೆ ಅದು ಬೆಂಕಿಯಿಂದ ಪ್ರಕಟವಾಗುವುದು. ಪ್ರತಿಯೊಬ್ಬನ ಕೆಲಸದ ಯೋಗ್ಯತೆಯನ್ನು ಬೆಂಕಿಯೇ ಪರೀಕ್ಷಿಸುವುದು. \v 14 ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಬೆಂಕಿಯಿಂದ ತಪ್ಪಿಸಿಕೊಂಡು ಉಳಿದರೆ, ಅವನಿಗೆ ಪ್ರತಿಫಲ ಸಿಕ್ಕುವುದು. \v 15 ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ, ಅವನಿಗೆ ನಷ್ಟವಾಗುವುದು, ಅವನಾದರೋ ರಕ್ಷಣೆಹೊಂದುವನು. ಆದರೆ ಬೆಂಕಿಯ ಜ್ವಾಲೆಗಳಿಂದ ತಪ್ಪಿಸಿಕೊಂಡವನ ಹಾಗಿರುವನು. \p \v 16 ನೀವು ದೇವರ ಆಲಯವಾಗಿದ್ದೀರೆಂಬುದೂ ದೇವರ ಆತ್ಮ ನಿಮ್ಮಲ್ಲಿ ವಾಸ ಮಾಡುತ್ತಾರೆಂಬುದೂ ನಿಮಗೆ ಗೊತ್ತಿಲ್ಲವೋ? \v 17 ಯಾರಾದರೂ ದೇವರ ಆಲಯವನ್ನು ನಾಶಪಡಿಸಿದರೆ, ದೇವರು ಅವರನ್ನು ನಾಶಪಡಿಸುವರು. ಏಕೆಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ. \p \v 18 ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ. ನಿಮ್ಮಲ್ಲಿ ಯಾರಾದರೂ ಇಹಲೋಕ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸಿಕೊಂಡರೆ, ಅಂಥವನು ಜ್ಞಾನಿಯಾಗುವಂತೆ ಮೂರ್ಖನಾಗಲಿ. \v 19 ಏಕೆಂದರೆ ಇಹಲೋಕ ಜ್ಞಾನವು ದೇವರ ದೃಷ್ಟಿಯಲ್ಲಿ ಮೂರ್ಖತನವಾಗಿದೆ, ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, “ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುವರು,”\f + \fr 3:19 \fr*\ft \+xt ಯೋಬ 5:13\+xt*\ft*\f* ಎಂದೂ \v 20 “ಜ್ಞಾನಿಗಳ ಯೋಚನೆಗಳು ವ್ಯರ್ಥವಾದವುಗಳೆಂದು ಕರ್ತದೇವರು ತಿಳಿದುಕೊಳ್ಳುತ್ತಾರೆ,”\f + \fr 3:20 \fr*\ft \+xt ಕೀರ್ತನೆ 94:11\+xt*\ft*\f* ಎಂದೂ ಬರೆದಿದೆಯಲ್ಲಾ. \v 21 ಆದಕಾರಣ ಇನ್ನು ಮೇಲೆ ನಾಯಕರ ಬಗ್ಗೆ ಯಾರೂ ಹೊಗಳುವುದು ಬೇಡ! ಏಕೆಂದರೆ ಸಮಸ್ತವೂ ನಿಮ್ಮದು. \v 22 ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ,\f + \fr 3:22 \fr*\ft ಅರಾಮಿಕ್ ಭಾಷೆಯಲ್ಲಿ \ft*\fqa ಪೇತ್ರನ \fqa*\ft ಹೆಸರು\ft*\f* ಲೋಕವಾಗಲಿ, ಜೀವವಾಗಲಿ, ಮರಣವಾಗಲಿ, ವರ್ತಮಾನದ ಸಂಗತಿಗಳಾಗಲಿ, ಭವಿಷ್ಯತ್ಕಾಲದ ಸಂಗತಿಗಳಾಗಲಿ ಸಮಸ್ತವೂ ನಿಮ್ಮವೇ. \v 23 ನೀವು ಕ್ರಿಸ್ತ ಯೇಸುವಿನವರು, ಕ್ರಿಸ್ತ ಯೇಸು ದೇವರವರು. \c 4 \s1 ಕ್ರಿಸ್ತ ಯೇಸುವಿನ ಅಪೊಸ್ತಲರು \p \v 1 ಆದ್ದರಿಂದ ನೀವು ಈ ರೀತಿಯಾಗಿ ನಮ್ಮನ್ನು ಪರಿಗಣಿಸಬೇಕು: ನಾವು ಕ್ರಿಸ್ತ ಯೇಸುವಿನ ದಾಸರೆಂತಲೂ ದೇವರ ರಹಸ್ಯಗಳ ನಂಬಿಗಸ್ತ ನಿರ್ವಾಹಕರೆಂದೂ ಪರಿಗಣಿಸಿರಿ. \v 2 ಹೀಗಿರುವುದರಿಂದ ನಂಬಿಗಸ್ತರಾಗಿರುವುದು ನಿರ್ವಾಹಕರಲ್ಲಿ ಅವಶ್ಯವಾಗಿ ಕಾಣತಕ್ಕ ಸದ್ಗುಣವಾಗಿದೆ. \v 3 ನನಗಾದರೋ ನಿಮ್ಮಿಂದಾಗಲಿ, ಮನುಷ್ಯರ ನ್ಯಾಯಾಲಯದಿಂದಾಗಲಿ ವಿಚಾರಣೆಯಾಗುವುದು ಅತ್ಯಲ್ಪ ಕಾರ್ಯವಾಗಿದೆ. ನನ್ನನ್ನು ನಾನೇ ನ್ಯಾಯತೀರ್ಪು ಮಾಡಿಕೊಳ್ಳುವುದೂ ಇಲ್ಲ. \v 4 ನನ್ನ ಮನಸ್ಸಾಕ್ಷಿಯು ಶುದ್ಧವಾಗಿದೆ. ಆದರೆ ಅದು ನನ್ನನ್ನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯತೀರಿಸುವವರು ಕರ್ತದೇವರೇ, \v 5 ಆದುದರಿಂದ ನೀವು ಕಾಲಕ್ಕೆ ಮೊದಲು ಯಾವುದನ್ನು ಕುರಿತೂ ತೀರ್ಪುಮಾಡದೆ, ಕರ್ತದೇವರ ಬರುವಿಕೆಗಾಗಿ ಕಾಯಿರಿ. ಅವರು ಕತ್ತಲಲ್ಲಿರುವ ಗುಪ್ತ ಕಾರ್ಯಗಳನ್ನು ಬೆಳಕಿಗೆ ತಂದು ಮನುಷ್ಯನ ಹೃದಯದ ಉದ್ದೇಶಗಳನ್ನು ಪ್ರತ್ಯಕ್ಷಪಡಿಸುವರು. ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವುದು. \p \v 6 ಪ್ರಿಯರೇ, ನಾನು ನಿಮ್ಮ ಪ್ರಯೋಜನಕ್ಕಾಗಿ ಇವುಗಳನ್ನು ದೃಷ್ಟಾಂತರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. “ನೀವು ಬರೆದಿರುವುದಕ್ಕೆ ಮೀರಿ ಹೋಗಬಾರದು,” ಎಂಬ ಹೇಳಿಕೆಯ ಅರ್ಥವನ್ನು ನಮ್ಮಿಂದ ಕಲಿತುಕೊಳ್ಳಬಹುದು. ಆಗ ನಿಮ್ಮಲ್ಲಿ ಒಬ್ಬರು ಮತ್ತೊಬ್ಬರನ್ನು ಅನುಸರಿಸುತ್ತಿದ್ದೇವೆಂದು ಹೇಳಿಕೊಳ್ಳುವುದರ ವಿರೋಧವಾಗಿ ಹೆಮ್ಮೆ ಪಡುವುದಿಲ್ಲ. \v 7 ನಿಮ್ಮನ್ನು ಇತರರಿಗಿಂತಲೂ ವ್ಯತ್ಯಾಸವುಳ್ಳವರಾಗಿ ಮಾಡಿದವರು ಯಾರು? ನೀವು ದೇವರಿಂದ ಪಡೆಯದಿರುವಂಥದು ನಿಮ್ಮಲ್ಲಿ ಯಾವುದಾದರೂ ಇದೆಯೇ? ಹೀಗೆ ಎಲ್ಲವನ್ನೂ ಪಡೆದ ಮೇಲೆ, ಪಡೆಯದವರಂತೆ ನೀವು ಹೆಮ್ಮೆ ಪಟ್ಟುಕೊಳ್ಳುವುದೇಕೆ? \p \v 8 ಈಗ ನೀವು ತೃಪ್ತರಾಗಿದ್ದೀರಿ! ಈಗಾಗಲೇ ಐಶ್ವರ್ಯವಂತರಾಗಿದ್ದೀರಿ. ನಮ್ಮ ಸಹಾಯವಿಲ್ಲದೆ ಆಳುತ್ತಿದ್ದೀರಿ. ನೀವು ನಿಜವಾಗಿಯೂ ಅರಸರಾಗಿದ್ದರೆ, ನಾವು ಸಹ ನಿಮ್ಮೊಂದಿಗೆ ಸೇರಿ ಆಳುತ್ತಿದ್ದೇವಲ್ಲವೇ? \v 9 ಅಪೊಸ್ತಲರಾದ ನಮ್ಮನ್ನು ಮರಣದಂಡನೆ ಹೊಂದಿದವರಂತೆ ದೇವರು ಮೆರವಣಿಗೆಯ ಕಡೆಯವರನ್ನಾಗಿ ಮಾಡಿ ತೋರಿಸಿದ್ದಾರೆಂದು ನನಗನಿಸುತ್ತದೆ. ಏಕೆಂದರೆ, ದೇವರು ನಮ್ಮನ್ನು ದೇವದೂತರಿಗೂ ಮನುಷ್ಯರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವನ್ನಾಗಿ ಮಾಡಿದ್ದಾರೆ. \v 10 ನಾವು ಕ್ರಿಸ್ತ ಯೇಸುವಿನ ನಿಮಿತ್ತ ಮೂರ್ಖರಾಗಿದ್ದೇವೆ! ನೀವೋ ಕ್ರಿಸ್ತ ಯೇಸುವಿನಲ್ಲಿ ಬುದ್ಧಿವಂತರು, ನಾವೋ ಬಲಹೀನರು. ನೀವು ಬಲಿಷ್ಠರು, ನೀವು ಮಾನವಂತರು, ನಾವೋ ಮಾನಹೀನರು! \v 11 ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರೂ, ಸಾಕಷ್ಟು ವಸ್ತ್ರವಿಲ್ಲದವರೂ, ಕ್ರೂರವಾಗಿ ಪೆಟ್ಟಿಗೆ ಗುರಿಯಾಗುವವರೂ, ಮನೆಯಿಲ್ಲದವರೂ, \v 12 ಸ್ವಂತ ಕೈಯಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸಿಕೊಂಡು ಆಶೀರ್ವದಿಸುತ್ತೇವೆ, ಹಿಂಸೆಪಟ್ಟು ಸಹಿಸಿಕೊಳ್ಳುತ್ತೇವೆ, \v 13 ಅಪಕೀರ್ತಿ ಹೊಂದಿ ಸಮಾಧಾನವಾಗುತ್ತೇವೆ. ನಾವು ಈಗಿನ ವರೆಗೂ ಭೂಮಿಯ ಕಸವೋ ವಿಶ್ವದ ಹೊಲಸೋ ಎಂಬಂತೆ ಆಗಿದ್ದೇವೆ. \s1 ಪೌಲನ ಬೇಡಿಕೆ ಹಾಗೂ ಬುದ್ಧಿಮಾತುಗಳು \p \v 14 ನಾನು ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ, ನನ್ನ ಪ್ರಿಯ ಮಕ್ಕಳೆಂದು ನಿಮಗೆ ಬುದ್ಧಿ ಹೇಳುತ್ತೇನಷ್ಟೆ. \v 15 ಏಕೆಂದರೆ, ನಿಮಗೆ ಕ್ರಿಸ್ತ ಯೇಸುವಿನಲ್ಲಿ ಹತ್ತು ಸಾವಿರ ಮಂದಿ ಪೋಷಕರು ಇದ್ದರೂ, ತಂದೆಗಳು ಬಹುಮಂದಿ ಇಲ್ಲ. ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ತಂದೆಯಾದೆನು. \v 16 ಆದ್ದರಿಂದ ನೀವು ನನ್ನನ್ನು ಅನುಕರಣೆ ಮಾಡುವವರಾಗಿ ಇರಬೇಕು ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. \v 17 ಇದರ ನಿಮಿತ್ತವೇ ಕರ್ತ ದೇವರಲ್ಲಿ ನಂಬಿಗಸ್ತನಾಗಿರುವ ನನ್ನ ಮಗ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. ಅವನು ನನಗೆ ಪ್ರಿಯನಾಗಿದ್ದಾನೆ. ನಾನು ಎಲ್ಲಾ ಕಡೆಗಳಲ್ಲಿಯೂ ಪ್ರತಿಯೊಂದು ಸಭೆಯಲ್ಲಿಯೂ ಬೋಧಿಸುವುದರ ಪ್ರಕಾರ, ಅವನು ಕ್ರಿಸ್ತ ಯೇಸುವಿನಲ್ಲಿರುವ ನನ್ನ ನಡವಳಿಕೆಯನ್ನು, ನಿಮ್ಮ ನೆನಪಿಗೆ ತರುವನು. \p \v 18 ನಾನು ನಿಮ್ಮಲ್ಲಿಗೆ ಬರುವುದಿಲ್ಲವೆಂದು ಕೆಲವರು ಅಹಂಕಾರಿಗಳಾಗಿದ್ದಾರೆ. \v 19 ಆದರೆ ಕರ್ತದೇವರ ಚಿತ್ತವಿದ್ದರೆ, ನಾನು ಬೇಗ ನಿಮ್ಮ ಬಳಿಗೆ ಬಂದು, ಅಹಂಕಾರಿಗಳ ಮಾತನ್ನಲ್ಲ, ಅವರಿಗೆ ಎಷ್ಟು ಶಕ್ತಿ ಇದೆ ಎಂಬುವುದನ್ನು ಕಂಡುಕೊಳ್ಳುವೆನು. \v 20 ಏಕೆಂದರೆ ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಇದೆ. \v 21 ಶಿಸ್ತಿನ ಬೆತ್ತವನ್ನು ಹಿಡಿದು ಬಿಗಿಯಲು ನಿಮ್ಮ ಬಳಿ ಬರಲೋ? ಅಥವಾ ಪ್ರೀತಿ ಸೌಮ್ಯದಿಂದ ಬರಲೋ? ನಿಮಗೆ ಯಾವುದು ಇಷ್ಟ? \c 5 \s1 ಅನೈತಿಕ ಸಹೋದರನ ಶಿಕ್ಷೆ \p \v 1 ಯೆಹೂದ್ಯರಲ್ಲದವರಲ್ಲಿ ನಡೆಯದೇ ಇರುವಂಥ ಅನೈತಿಕತೆ ನಿಮ್ಮಲ್ಲಿದೆಯೆಂದು ವಾಸ್ತವವಾಗಿ ವರದಿ ಬಂದಿದೆ: ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ. \v 2 ಹೀಗಿದ್ದರೂ ಗರ್ವಪಡುತ್ತಿದ್ದೀರಲ್ಲಾ! ನೀವು ದುಃಖಪಟ್ಟು, ಈ ಕಾರ್ಯ ಮಾಡಿದವನನ್ನು ನಿಮ್ಮೊಳಗಿಂದ ಬಹಿಷ್ಕರಿಸಬೇಕಲ್ಲವೇ? \v 3 ನಾನು ಸ್ವತಃ ನಿಮ್ಮ ಮಧ್ಯದಲ್ಲಿ ಇರದಿದ್ದರೂ ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಈ ಕಾರ್ಯಮಾಡಿದವನ ಮೇಲೆ ಆಗಲೇ ಹತ್ತಿರವಿದ್ದವನಂತೆ ನಮಗೆ ಕರ್ತ ಆಗಿರುವ ಯೇಸುವಿನ ಹೆಸರಿನಲ್ಲಿ ತೀರ್ಪುಮಾಡಿದ್ದೇನೆ. \v 4 ನೀವು ಕರ್ತ ಯೇಸುವಿನ ಹೆಸರಿನಲ್ಲಿ ಸಭೆಯಾಗಿ ಬಂದು ಸೇರಿದಾಗ, ನಾನೂ ಆತ್ಮದಲ್ಲಿ ನಿಮ್ಮೊಂದಿಗಿದ್ದು ನಮಗೆ ಕರ್ತ ಆಗಿರುವ ಯೇಸುವಿನ ಸಾನಿಧ್ಯ ಶಕ್ತಿಯೊಂದಿರುವಾಗ, \v 5 ಕರ್ತ ಯೇಸುವಿನ ಪುನರಾಗಮನ ದಿನದಲ್ಲಿ ಆ ಮನುಷ್ಯನ ಆತ್ಮವು ರಕ್ಷಣೆ ಹೊಂದುವಂತೆಯೂ ಅವನ ಪಾಪಭರಿತ ಶರೀರವು ನಾಶವಾಗುವಂತೆಯೂ ಅವನನ್ನು ಸೈತಾನನಿಗೆ ಒಪ್ಪಿಸಿ ಬಿಡುತ್ತೇನೆ. \p \v 6 ನೀವು ಜಂಬ ಕೊಚ್ಚಿಕೊಳ್ಳುವುದು ಸರಿಯಲ್ಲ. ಸ್ವಲ್ಪ ಹುಳಿ ಕಲಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬುದು ನಿಮಗೆ ತಿಳಿಯದೋ? \v 7 ಹೊಸ ಕಣಕವಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ನೀವು ಹುಳಿಯಿಲ್ಲದವರಾಗಿದ್ದೀರಲ್ಲ. ಏಕೆಂದರೆ ನಮ್ಮ ಪಸ್ಕದ ಕುರಿಯಾದ ಕ್ರಿಸ್ತ ಯೇಸು ಯಜ್ಞಾರ್ಪಿತನಾಗಿದ್ದಾರೆ. \v 8 ಆದಕಾರಣ ಹಗೆತನ, ದುಷ್ಟತನ, ಎಂಬ ಹಳೇ ಹುಳಿಯಿಂದಲ್ಲ, ಯಥಾರ್ಥತೆ ಹಾಗೂ ಸತ್ಯ ಎಂಬ ಹುಳಿಯಿಲ್ಲದ ರೊಟ್ಟಿಯಿಂದಲೇ ಹಬ್ಬವನ್ನು ಆಚರಿಸೋಣ. \p \v 9 ಅನೈತಿಕರೊಡನೆ ಸಹವಾಸ ಮಾಡಬಾರದೆಂದು ನಾನು ಪತ್ರದಲ್ಲಿ ಬರೆದಿದ್ದೆನಷ್ಟೆ. \v 10 ಈ ಲೋಕದಲ್ಲಿರುವ ಎಲ್ಲಾ ಅನೈತಿಕರು, ಲೋಭಿಗಳು, ಸುಲಿಗೆ ಮಾಡುವವರು, ವಿಗ್ರಹಾರಾಧಕರು ಇಂಥವರ ಸಹವಾಸವನ್ನು ನೀವು ಬಿಟ್ಟು ಇರಬೇಕೆಂಬುದು ನನ್ನ ಅರ್ಥವಲ್ಲ. ಹಾಗಿದ್ದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುವುದು. \v 11 ಆದರೆ ಸಹೋದರಿ ಅಥವಾ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಪರನಿಂದಕನಾದರೂ ಕುಡುಕನಾದರೂ ಸುಲಿಗೆ ಮಾಡುವವನಾದರೂ ಆಗಿದ್ದರೆ, ಅಂಥವರ ಸಹವಾಸ ಮಾಡಬೇಡಿರಿ. ಅಂಥವರ ಸಂಗಡ ಊಟ ಮಾಡಲೂ ಬೇಡಿರಿ ಎಂದು ಈಗ ಬರೆಯುತ್ತಿದ್ದೇನೆ. \p \v 12 ಸಭೆಗೆ ಸೇರದಿರುವ ಹೊರಗಿನವರನ್ನು ತೀರ್ಪುಮಾಡುವುದಕ್ಕೆ ನಾನು ಯಾರು? ಸಭೆಯ ಒಳಗಿನವರನ್ನು ತೀರ್ಪುಮಾಡಬೇಕಾದವರು ನೀವಲ್ಲವೇ? \v 13 ಆದರೆ ಹೊರಗಿನವರನ್ನು ತೀರ್ಪುಮಾಡುವವರು ದೇವರೇ. “ಆ ದುಷ್ಟನನ್ನು ನಿಮ್ಮಿಂದ ತೆಗೆದು ಹೊರಗೆ ಹಾಕಿರಿ.”\f + \fr 5:13 \fr*\ft \+xt ಧರ್ಮೋ 13:5; 17:7; 19:19; 21:21; 22:21,24; 24:7\+xt*\ft*\f* \c 6 \s1 ವಿಶ್ವಾಸಿಗಳ ನಡುವೆ ವ್ಯಾಜ್ಯಗಳು \p \v 1 ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ, ನ್ಯಾಯವಿಚಾರಣೆಗಾಗಿ ಕರ್ತದೇವರ ಜನರ ಮುಂದೆ ಹೋಗದೆ, ಭಕ್ತಿಹೀನರ ಮುಂದೆ ಹೋಗುವುದಕ್ಕೆ ಧೈರ್ಯವಿದೆಯೋ? \v 2 ಕರ್ತದೇವರ ಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೋ? ನೀವೇ ಲೋಕವನ್ನು ನ್ಯಾಯತೀರ್ಪು ಮಾಡಬೇಕಾಗಿರುವಲ್ಲಿ, ಅತ್ಯಲ್ಪ ಸಂಗತಿಗಳನ್ನು ಕುರಿತು ತೀರ್ಪುಮಾಡುವುದಕ್ಕೆ ನೀವು ಅಯೋಗ್ಯರಾಗಿದ್ದೀರೋ? \v 3 ನಾವು ದೇವದೂತರಿಗೂ ತೀರ್ಪುಮಾಡುವೆವೆಂಬುದು ನಿಮಗೆ ತಿಳಿಯದೋ? ಈ ಜೀವನದ ವ್ಯಾಜ್ಯಗಳನ್ನು ಕುರಿತು ತೀರ್ಪು ಮಾಡುವುದು ಎಷ್ಟು ಸುಲಭವಲ್ಲವೇ? \v 4 ಆದ್ದರಿಂದ ಇಂಥ ವ್ಯಾಜ್ಯಗಳ ಬಗ್ಗೆ ವ್ಯಾಜ್ಯಗಳಿದ್ದರೂ ಸಭೆಯಲ್ಲಿ ಮರ್ಯಾದೆ ಇಲ್ಲದವರನ್ನು ನ್ಯಾಯಾಧೀಶರಾಗಿ ನೇಮಿಸುವಿರೋ? \v 5 ನಿಮ್ಮಲ್ಲಿ ನಾಚಿಕೆ ಹುಟ್ಟಿಸುವುದಕ್ಕೆ ಇದನ್ನು ಹೇಳುತ್ತೇನೆ. ತನ್ನ ಸಹೋದರನ ನ್ಯಾಯವನ್ನು ವಿವೇಚಿಸಿ ತೀರ್ಮಾನ ಕೊಡುವ ಜ್ಞಾನಿಯು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ? \v 6 ಇದಕ್ಕೆ ಬದಲಾಗಿ ಒಬ್ಬ ಸಹೋದರನು ಇನ್ನೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅದೂ ಅವಿಶ್ವಾಸಿಗಳ ಮುಂದೆ ನ್ಯಾಯಕ್ಕಾಗಿ ಹೋಗುವುದು ಸರಿಯೇ? \p \v 7 ನಿಮ್ಮ ನಿಮ್ಮಲ್ಲಿ ವ್ಯಾಜ್ಯವಿರುವುದೇ, ನೀವು ಈಗಾಗಲೇ ಸಂಪೂರ್ಣವಾಗಿ ಸೋತವರೆಂಬುದಕ್ಕೆ ಸೂಚನೆಗಳಾಗಿವೆ. ಆದರೆ ಅನ್ಯಾಯವನ್ನು ಏಕೆ ಸಹಿಸಬಾರದು? ಏಕೆ ಮೋಸಹೊಂದಬಾರದು? \v 8 ಅದಕ್ಕೆ ಬದಲಾಗಿ ನೀವೇ ನಿಮ್ಮ ಸಹೋದರರಿಗೆ ಅನ್ಯಾಯ ಮಾಡಿ ಮೋಸಮಾಡುತ್ತೀರಲ್ಲಾ? \v 9 ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ: ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು, \v 10 ಕಳ್ಳರು, ಲೋಭಿಗಳು, ಕುಡುಕರು, ಬೈಯ್ಯುವವರು, ಸುಲಿಗೆ ಮಾಡುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. \v 11 ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೂ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಿಂದಲೂ ನೀವು ತೊಳೆದು, ಶುದ್ಧೀಕರಣ ಹೊಂದಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ. \s1 ಲೈಂಗಿಕ ಅನೈತಿಕತೆ \p \v 12 “ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೂ ಹಕ್ಕಿದೆ” ಎಂದು ನೀವು ಹೇಳುತ್ತೀರಿ. ಆದರೆ ಎಲ್ಲವೂ ನನಗೆ ಪ್ರಯೋಜನಕರವಾಗಿರುವುದಿಲ್ಲ. ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಹಕ್ಕಿದೆ; ಆದರೆ ನಾನು ಯಾವುದಕ್ಕೂ ಗುಲಾಮನಾಗಿರುವುದಿಲ್ಲ. \v 13 “ಆಹಾರವು ಹೊಟ್ಟೆಗಾಗಿಯೂ, ಹೊಟ್ಟೆಯು ಆಹಾರಕ್ಕಾಗಿಯೂ ಇದೆ,” ಎಂದು ನೀವು ಹೇಳುತ್ತೀರಿ. ಆದರೆ ದೇವರು ಇವೆರಡನ್ನೂ ನಾಶಮಾಡುವರು. ದೇಹವು ಲೈಂಗಿಕ ಅನೈತಿಕತೆಗಾಗಿರುವಂಥದ್ದಲ್ಲ, ಆದರೆ ಕರ್ತ ದೇವರಿಗೋಸ್ಕರವಾಗಿದೆ. ಕರ್ತದೇವರು ದೇಹಕ್ಕೋಸ್ಕರ ಇದ್ದಾರೆ. \v 14 ದೇವರು ತಮ್ಮ ಶಕ್ತಿಯಿಂದ ನಮಗೆ ಕರ್ತ ಆಗಿರುವ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರು ಮತ್ತು ನಮ್ಮನ್ನೂ ಎಬ್ಬಿಸುವರು. \v 15 ನಿಮ್ಮ ದೇಹಗಳು ಕ್ರಿಸ್ತ ಯೇಸುವಿನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ಕ್ರಿಸ್ತ ಯೇಸುವಿನ ಅಂಗಗಳಾಗಿರುವಂಥವುಗಳನ್ನೇ ತೆಗೆದುಕೊಂಡು ವೇಶ್ಯೆಯ ಅಂಗಗಳನ್ನಾಗಿ ಮಾಡಬಹುದೇ? ಎಂದಿಗೂ ಬೇಡ. \v 16 ವೇಶ್ಯೆಯನ್ನು ಸೇರುವವನು ಅವಳೊಂದಿಗೆ ಒಂದೇ ದೇಹವಾಗುವನೆಂಬುದು ನಿಮಗೆ ತಿಳಿಯದೋ? “ಅವರಿಬ್ಬರೂ ಒಂದೇ ಶರೀರವಾಗಿರುವರು,”\f + \fr 6:16 \fr*\ft \+xt ಆದಿ 2:24\+xt*\ft*\f* ಎಂದು ಹೇಳಲಾಗಿದೆಯಲ್ಲವೇ? \v 17 ಆದರೆ ಕರ್ತ ದೇವರೊಂದಿಗೆ ಅನ್ಯೋನ್ಯತೆಯಲ್ಲಿರುವವನು ಅವರೊಂದಿಗೆ ಒಂದೇ ಆತ್ಮವಾಗಿದ್ದಾನೆ. \p \v 18 ಲೈಂಗಿಕ ಅನೈತಿಕತೆಯಿಂದ ಓಡಿಹೋಗಿರಿ. ಮನುಷ್ಯನು ಮಾಡುವ ಇತರ ಎಲ್ಲಾ ಪಾಪಗಳು ಅವನ ದೇಹದ ಹೊರಗಿರುತ್ತವೆ, ಆದರೆ ಲೈಂಗಿಕ ಅನೈತಿಕತೆಯು, ತನ್ನ ದೇಹಕ್ಕೆ ವಿರುದ್ಧವಾಗಿ ಪಾಪಕ್ಕೆ ನಡೆಸುತ್ತದೆ. \v 19 ದೇವರಿಂದ ನಿಮಗೆ ದೊರಕಿ, ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮರ ಆಲಯವು ನಿಮ್ಮ ದೇಹವಾಗಿದೆ ಎಂಬುದು ನಿಮಗೆ ತಿಳಿಯದೋ? ನೀವು ನಿಮ್ಮ ಸ್ವಂತ ಸೊತ್ತಲ್ಲ. \v 20 ನೀವು ಕ್ರಯಕ್ಕೆ ಕೊಳ್ಳಲಾದವರು. ಆದ್ದರಿಂದ ನೀವು ನಿಮ್ಮ ದೇಹದಿಂದ ದೇವರನ್ನು ಮಹಿಮೆಪಡಿಸಿರಿ. \c 7 \s1 ವಿವಾಹ \p \v 1 ನೀವು ಬರೆದ ಸಂಗತಿಗಳನ್ನು ಕುರಿತಾಗಿ ಹೇಳುವುದೇನೆಂದರೆ, “ಸ್ತ್ರೀಸಂಪರ್ಕವಿಲ್ಲದೆ ಇರುವುದು ಮನುಷ್ಯನಿಗೆ ಒಳ್ಳೆಯದು.” \v 2 ಆದರೆ ಲೈಂಗಿಕ ಅನೈತಿಕತೆ ಹೆಚ್ಚಾಗಿರುವುದರಿಂದ, ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿ ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನಿರಲಿ. \v 3 ಗಂಡನು ಹೆಂಡತಿಗೆ, ಹೆಂಡತಿಯು ಗಂಡನಿಗೆ ದಾಂಪತ್ಯ ಧರ್ಮ ಪೂರೈಸಲಿ. \v 4 ಹೆಂಡತಿಯ ಸ್ವಂತ ದೇಹದ ಮೇಲೆ ಆಕೆಗೆ ಅಧಿಕಾರವಿಲ್ಲ, ಅದು ಗಂಡನಿಗಿದೆ. ಹಾಗೆಯೇ, ಗಂಡನ ಸ್ವಂತ ದೇಹದ ಮೇಲೆ ಅವನಿಗೆ ಅಧಿಕಾರವಿಲ್ಲ, ಅದು ಅವನ ಹೆಂಡತಿಗಿದೆ. \v 5 ಗಂಡ ಹೆಂಡತಿ ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ಪ್ರಾರ್ಥನೆಗಾಗಿ ಅಗಲಿರಬಹುದಷ್ಟೇ. ಇಲ್ಲದಿದ್ದರೆ, ಸೈತಾನನು ನಿಮ್ಮ ಸಂಯಮ ಇಲ್ಲದಿರುವುದನ್ನು ನೋಡಿ ನಿಮ್ಮನ್ನು ಶೋಧಿಸದಂತೆ ಒಂದುಗೂಡಬೇಕು. \v 6 ಹೀಗೆ ನಾನು ಹೇಳುವುದು ಸಲಹೆಯೇ ಹೊರತು ಆಜ್ಞೆಯಲ್ಲ. \v 7 ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ. ಆದರೆ ಒಬ್ಬರು ಒಂದು ವಿಧವಾಗಿಯೂ ಮತ್ತೊಬ್ಬರು ಇನ್ನೊಂದು ವಿಧವಾಗಿಯೂ ಸ್ವಂತ ವರವನ್ನು ದೇವರಿಂದ ಪಡೆದುಕೊಂಡಿರುತ್ತಾರೆ. \p \v 8 ಮದುವೆಯಾಗದವರಿಗೂ ವಿಧವೆಯರಿಗೂ ನಾನು ಹೇಳುವುದೇನೆಂದರೆ: ನಾನಿರುವಂತೆಯೇ ಮದುವೆಯಾಗದೇ ಇರುವುದು ಅವರಿಗೆ ಒಳ್ಳೆಯದು. \v 9 ಅವರಿಗೆ ಸ್ವಯಂನಿಯಂತ್ರಣ ಇಲ್ಲದಿದ್ದರೆ, ಮದುವೆಮಾಡಿಕೊಳ್ಳಲಿ, ಕಾಮದಾಶೆ ಪಡುವುದಕ್ಕಿಂತ ಮದುವೆ ಮಾಡಿಕೊಳ್ಳುವುದು ಉತ್ತಮ. \p \v 10 ಮದುವೆ ಮಾಡಿಕೊಂಡಿರುವವರಿಗೆ ನನ್ನ ಅಪ್ಪಣೆ ಅಲ್ಲ, ನಿಜವಾಗಿ ಕರ್ತದೇವರ ಅಪ್ಪಣೆಯಾಗಿದೆ: ಏನೆಂದರೆ, ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು. \v 11 ಒಂದು ವೇಳೆ ಅಗಲಿದರೆ ಆಕೆಯು ಮದುವೆಯಿಲ್ಲದೆ ಇರಬೇಕು. ಇಲ್ಲವೆ ಗಂಡನ ಸಂಗಡ ಸಂಧಾನವಾಗಬೇಕು ಮತ್ತು ಗಂಡನು ಹೆಂಡತಿಯನ್ನು ಬಿಟ್ಟುಬಿಡಬಾರದು. \p \v 12 ಉಳಿದವರಿಗೆ ಕರ್ತ ದೇವರಿಂದ ಮಾತು ಇಲ್ಲವಾದರೂ ನಾನು ಹೇಳುವುದೇನೆಂದರೆ: ಒಬ್ಬ ಸಹೋದರನಿಗೆ ಕ್ರೈಸ್ತ ವಿಶ್ವಾಸಿಯಲ್ಲದ ಹೆಂಡತಿಯಿರಲಾಗಿ, ಆಕೆ ಅವನೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಅವನು ಆಕೆಯನ್ನು ಬಿಡದಿರಲಿ. \v 13 ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿರಲಾಗಿ ಅವನು ಆಕೆಯೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಆಕೆಯು ಅವನನ್ನು ಬಿಡದಿರಲಿ. \v 14 ಏಕೆಂದರೆ, ಅವಿಶ್ವಾಸಿಯಾದ ಗಂಡನು ವಿಶ್ವಾಸಿಯಾದ ತನ್ನ ಹೆಂಡತಿಯಿಂದ ಮತ್ತು ಅವಿಶ್ವಾಸಿಯಾದ ಹೆಂಡತಿಯು ವಿಶ್ವಾಸಿಯಾದ ತನ್ನ ಗಂಡನಿಂದ ದೇವಜನರೊಂದಿಗೆ ಸಂಬಂಧವುಳ್ಳವರಾಗಿದ್ದಾರೆ. ಹಾಗಲ್ಲದಿದ್ದರೆ, ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವರಿಗಾಗಿ ಪವಿತ್ರರಾಗಿದ್ದಾರೆ. \p \v 15 ಆದರೆ ಅವಿಶ್ವಾಸಿಯಾದವರು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ. ಇಂಥಾ ವಿಷಯಗಳಲ್ಲಿ ವಿಶ್ವಾಸಿಯಾದ ಸಹೋದರನಾಗಲೀ, ಸಹೋದರಿಯಾಗಲೀ ಬದ್ಧರಲ್ಲ. ಸಮಾಧಾನದಲ್ಲಿ ಬಾಳುವುದಕ್ಕೆ ದೇವರು ನಮ್ಮನ್ನು ಕರೆದಿದ್ದಾರೆ. \v 16 ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವೆಯೋ ಏನೋ ನಿನಗೇನು ಗೊತ್ತು? \s1 ನಿಮ್ಮ ಕರೆಯುವಿಕೆಯ ಸನ್ನಿವೇಶಗಳು \p \v 17 ಆದರೂ ಕರ್ತದೇವರು ಪ್ರತಿಯೊಬ್ಬನಿಗೆ ನೇಮಿಸಿದಂತೆಯೂ ದೇವರು ಪ್ರತಿಯೊಬ್ಬನನ್ನು ಕರೆದಂತೆಯೂ ನಡೆದುಕೊಳ್ಳಲಿ. ಎಲ್ಲಾ ಸಭೆಗಳಲ್ಲಿಯೂ ಇರಬೇಕೆಂದು ನಾನು ಕೊಡುವ ನಿಯಮವು ಇದೇ. \v 18 ಸುನ್ನತಿ ಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿಯಿಲ್ಲದವನಂತೆ ಇರಬಾರದು. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿ ಮಾಡಿಸಿಕೊಳ್ಳಬೇಕಾಗಿಲ್ಲ. \v 19 ಸುನ್ನತಿಯಿದ್ದರೂ ಪ್ರಯೋಜನವಿಲ್ಲ, ಸುನ್ನತಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ದೇವರ ಆಜ್ಞೆಗಳನ್ನು ಕೈಗೊಳ್ಳುವುದೇ ಪ್ರಯೋಜನಕರ. \v 20 ಪ್ರತಿಯೊಬ್ಬನು ದೇವರು ಕರೆದಾಗ, ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಲಿ. \p \v 21 ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದಕ್ಕೆ ಚಿಂತೆ ಮಾಡಬೇಡ. ಆದರೆ ಬಿಡುಗಡೆಯಾಗುವುದಕ್ಕೆ ನೀನು ಶಕ್ತನಾದರೆ ಅದನ್ನೇ ಮಾಡು. \v 22 ದೇವರು ಕರೆದಾಗ ಒಬ್ಬನು ದಾಸನಾಗಿದ್ದರೂ, ಅವನು ಕರ್ತ ದೇವರಲ್ಲಿ ಸ್ವತಂತ್ರನು. ಅದೇ ಪ್ರಕಾರ, ಒಬ್ಬನು ಸ್ವತಂತ್ರನಾಗಿದ್ದಾಗ ಕರ್ತದೇವರ ಕರೆಹೊಂದಿದ್ದರೆ, ಅವನು ಕ್ರಿಸ್ತನಿಗೆ ದಾಸನು. \v 23 ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮನುಷ್ಯರಿಗೆ ಗುಲಾಮರಾಗಬೇಡಿರಿ. \v 24 ಪ್ರಿಯರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ನೆಲೆಸಿರಲಿ. \s1 ಮದುವೆಯಾಗದವರನ್ನು ಕುರಿತು \p \v 25 ಕನ್ಯೆಯರನ್ನು ಕುರಿತು ಕರ್ತ ಯೇಸುವಿನಿಂದ ನನಗೆ ಯಾವ ಆಜ್ಞೆಯೂ ಇಲ್ಲ. ಆದರೂ ಕರ್ತ ಯೇಸುವಿನಿಂದ ಕರುಣೆಯನ್ನು ಪಡೆದು ನಂಬಿಗಸ್ತನಾಗಿರುವ ನಾನು ನನ್ನ ಅಭಿಪ್ರಾಯವನ್ನು ಕೊಡುತ್ತೇನೆ. \v 26 ಇಂದಿನ ಕಷ್ಟಕಾಲದ ಪರಿಸ್ಥಿತಿಯಲ್ಲಿ ನೀವು ಇದ್ದ ಹಾಗೇ ಇರುವುದು ನಿಮಗೆ ಒಳ್ಳೆಯದೆಂದು ನಾನು ಭಾವಿಸುತ್ತೇನೆ. \v 27 ನಿನಗೆ ಹೆಂಡತಿಯಿದ್ದರೆ? ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಹೆಂಡತಿಯಿಂದ ಬಿಡುಗಡೆಯಾಗಿದ್ದರೆ? ಹೆಂಡತಿಗಾಗಿ ಹುಡುಕಬೇಡ. \v 28 ಒಂದು ವೇಳೆ ನೀನು ಮದುವೆ ಮಾಡಿಕೊಂಡರೆ, ಅದು ಪಾಪವಲ್ಲ. ಕನ್ಯೆಯು ಮದುವೆ ಮಾಡಿಕೊಂಡರೆ, ಅದು ಸಹ ಪಾಪವಲ್ಲ. ಆದರೆ ಮದುವೆ ಮಾಡಿಕೊಳ್ಳುವವರು ಈ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುವರು. ನಾನು ನಿಮ್ಮನ್ನು ಇದರಿಂದ ತಪ್ಪಿಸಬೇಕೆಂದು ಅಪೇಕ್ಷಿಸುತ್ತೇನೆ. \p \v 29 ಪ್ರಿಯರೇ, ಸಮಯವು ಕೊಂಚವಾಗಿರುವುದರಿಂದ ಇನ್ನು ಮೇಲೆ, ಮದುವೆಯಾದವರು ಮದುವೆಯಾಗದವರಂತೆಯೂ \v 30 ದುಃಖಪಡುವವರು ದುಃಖಪಡದವರಂತೆಯೂ ಆನಂದ ಪಡುವವರು ಆನಂದಪಡದವರಂತೆಯೂ ವಸ್ತುಗಳ್ನು ಕೊಂಡುಕೊಳ್ಳುವವರು ತಾವು ಕೊಂಡುಕೊಂಡದ್ದು ತಮ್ಮದಲ್ಲ ಎಂಬಂತೆಯೂ \v 31 ಲೋಕದ ವಸ್ತುಗಳನ್ನು ಉಪಯೋಗಿಸುವವರು ಅದರಲ್ಲಿಯೇ ಮಗ್ನರಾಗದಿರಲಿ. ಏಕೆಂದರೆ ಈಗಿರುವ ಪ್ರಪಂಚ ಗತಿಸಿಹೋಗುತ್ತಿದೆ. \p \v 32 ನೀವು ಚಿಂತೆ ಇಲ್ಲದೆ ಇರಬೇಕೆಂಬುದು ನನ್ನ ಇಷ್ಟ. ಮದುವೆ ಆಗದವನು ಕರ್ತ ಯೇಸುವನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತ ಯೇಸುವಿನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ. \v 33 ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಮಗ್ನನಾಗಿರುತ್ತಾನೆ. \v 34 ಇದರಿಂದ ಅವನ ಆಸಕ್ತಿಗಳಲ್ಲಿ ಭಿನ್ನತೆಯಿರುತ್ತದೆ. ಮದುವೆಯಾಗದ ಮಹಿಳೆ ಅಥವಾ ಕನ್ಯೆ ದೇಹಾತ್ಮಗಳಲ್ಲಿ ಕರ್ತ ಯೇಸುವಿಗೆ ಸಮರ್ಪಿತರಾಗಿರುವ ಉದ್ದೇಶ ಹೊಂದಿದವರಾಗಿ, ಕರ್ತ ಯೇಸುವಿನ ಕಾರ್ಯಗಳಲ್ಲಿ ಆಸಕ್ತಳಾಗಿರುತ್ತಾರೆ. ಆದರೆ ಮದುವೆಯಾದವಳು, ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ. \v 35 ನಾನು ನಿಮಗೆ ಬಂಧನ ಹಾಕಬೇಕೆಂದು ಇದನ್ನು ಹೇಳದೆ, ಗಮನ ಸೆಳೆಯದ ಭಕ್ತಿಯಿಂದ ಕರ್ತ ಯೇಸುವಿನ ಸೇವೆಯನ್ನು ಮಾಡುವವರಾಗಿ ನೀವು ಜೀವಿಸಬೇಕೆಂದು ನಿಮ್ಮ ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದೇನೆ. \p \v 36 ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಿಲ್ಲವೆಂದು ಭಾವಿಸಿದರೆ, ಆಕೆಗೆ ಪ್ರಾಯ ಕಳೆದು ಹೋಗುತ್ತಿದ್ದರೆ, ಮದುವೆಯಾಗುವುದು ಅವಶ್ಯವೆಂದು ಅವನಿಗೆ ಕಂಡರೆ, ತನ್ನಿಷ್ಟದಂತೆ ಮಾಡಲಿ. ಇದರಿಂದ ಅವನು ಪಾಪಮಾಡುವುದಿಲ್ಲ, ಮದುವೆ ಮಾಡಿಕೊಡಲಿ. \v 37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ, ತನ್ನಿಷ್ಟವನ್ನು ನಡೆಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿಕೊಂಡರೆ, ಅವನು ಹಾಗೆ ಮಾಡುವುದು ಒಳ್ಳೆಯದು. \v 38 ಹಾಗಾದರೆ, ತನ್ನ ಮಗಳನ್ನು ಮದುವೆ ಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ. ಮದುವೆ ಮಾಡಿಕೊಡದೆ ಇರುವವನು ಉತ್ತಮವಾದುದನ್ನು ಮಾಡುತ್ತಾನೆ. \p \v 39 ಹೆಂಡತಿಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಸತ್ತಿದ್ದರೆ, ಆಕೆಯು ತನಗೆ ಬೇಕಾದವನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಆ ವ್ಯಕ್ತಿಯು ಕರ್ತ ದೇವರಲ್ಲಿ ವಿಶ್ವಾಸಿಯಾಗಿರಬೇಕು. \v 40 ಆಕೆ ಮದುವೆ ಮಾಡಿಕೊಳ್ಳದೆ ಇರುವುದು ಬಹಳ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರಾತ್ಮ ಇರುವುದಾಗಿ ಭಾವಿಸುತ್ತೇನೆ. \c 8 \s1 ವಿಗ್ರಹಗಳಿಗೆ ಸಮರ್ಪಿಸಿದ ನೈವೇದ್ಯ \p \v 1 ಈಗ ವಿಗ್ರಹಕ್ಕೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳ ವಿಷಯ: “ನಮ್ಮೆಲ್ಲರಿಗೂ ತಿಳುವಳಿಕೆಯಿದೆ,” ಎಂದು ಬಲ್ಲೆವು. ತಿಳುವಳಿಕೆಯು ಅಹಂಕಾರಿಗಳನ್ನಾಗಿ ಮಾಡುತ್ತದೆ. ಆದರೆ ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ. \v 2 ಯಾರಾದರೂ ತಾನು ಏನನ್ನಾದರೂ ತಿಳಿದಿರುವುದಾಗಿ ಭಾವಿಸಿದರೆ, ಅಂಥವನು ತಿಳಿಯಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿರುವುದಿಲ್ಲ. \v 3 ಆದರೆ ದೇವರನ್ನು ಪ್ರೀತಿಸುವವರನ್ನು ದೇವರು ತಿಳಿದುಕೊಂಡಿರುತ್ತಾರೆ. \p \v 4 ಹಾಗಾದರೆ, ವಿಗ್ರಹಗಳಿಗೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದರ ವಿಷಯ: “ಲೋಕದಲ್ಲಿ ವಿಗ್ರಹವು ಏನೂ ಅಲ್ಲ. ಒಬ್ಬ ದೇವರೇ ಹೊರತು ಬೇರೆ ದೇವರಿಲ್ಲ,” ಎಂದು ನಮಗೆ ಗೊತ್ತಿದೆ. \v 5 ಆಕಾಶದಲ್ಲಾಗಲಿ, ಭೂಮಿಯ ಮೇಲೆ ಆಗಲಿ, ದೇವರುಗಳು ಎಂದು ಎನ್ನಿಸಿಕೊಳ್ಳುವವರು ಉಂಟು. ಅನೇಕರಿಗೆ ಅಂಥ “ದೇವರುಗಳು” ಹಾಗೂ “ಸ್ವಾಮಿಗಳು” ಇದ್ದಾರೆ. \v 6 ನಮಗಾದರೋ ತಂದೆ ದೇವರು ಒಬ್ಬರೇ ಇರುತ್ತಾರೆ. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರಿಗಾಗಿಯೇ ನಾವು ಜೀವಿಸುತ್ತೇವೆ. ನಮಗಿರುವ ಕರ್ತದೇವರು ಒಬ್ಬರೇ. ಅವರೇ ಕ್ರಿಸ್ತ ಯೇಸು. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರ ಮುಖಾಂತರವೇ ನಾವು ಜೀವಿಸುತ್ತೇವೆ. \p \v 7 ಆದರೆ ಈ ತಿಳುವಳಿಕೆಯು ಎಲ್ಲರಲ್ಲಿಯೂ ಇಲ್ಲ. ಕೆಲವರು ಇದುವರೆಗೂ ವಿಗ್ರಹಕ್ಕೆ ಅರ್ಪಿತವಾದದ್ದನ್ನು ತಿನ್ನುವ ರೂಢಿಯಲ್ಲಿದ್ದು, ಅವರು ವಿಗ್ರಹಕ್ಕೆ ನೈವೇದ್ಯ ಮಾಡಿ ತಿನ್ನುವುದಾಗಿ ಭಾವಿಸಿಕೊಳ್ಳುತ್ತಾರೆ. ಹೀಗೆ ಅವರ ಮನಸ್ಸಾಕ್ಷಿ ಬಲಹೀನವಾಗಿರುವುದರಿಂದ, ಅದು ಅಶುದ್ಧವಾಗಿರುತ್ತದೆ. \v 8 ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ಸೇರಿಸಲಾರದು. ಅದನ್ನು ತಿನ್ನದಿದ್ದರೆ ನಮಗೆ ನಷ್ಟವಿಲ್ಲ, ತಿಂದರೆ ನಮಗೆ ಲಾಭವಿಲ್ಲ. \p \v 9 ಆದರೆ ಈ ನಿಮ್ಮ ಸ್ವಾತಂತ್ರ್ಯವು ಬಲಹೀನರಿಗೆ ವಿಘ್ನವಾಗದಂತೆ ಜಾಗರೂಕರಾಗಿರಿ. \v 10 ಎಲ್ಲಾ ತಿಳುವಳಿಕೆಯಿರುವ ನೀನು ವಿಗ್ರಹದ ಗುಡಿಯಲ್ಲಿ ತಿನ್ನುವುದನ್ನು ನೋಡಿದರೆ ಬಲಹೀನ ಮನಸ್ಸಾಕ್ಷಿಯುಳ್ಳ ಸಹೋದರನು, ತಾನೂ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನು ತಿನ್ನುವುದಕ್ಕೆ ಧೈರ್ಯಗೊಳ್ಳುವನಲ್ಲವೇ? \v 11 ಆ ಬಲಹೀನನು ನಿನ್ನ ತಿಳುವಳಿಕೆಯಿಂದ ನಾಶವಾಗುತ್ತಾನೆ. ಆ ಸಹೋದರನಿಗಾಗಿಯೂ ಕ್ರಿಸ್ತ ಯೇಸುವು ತಮ್ಮ ಪ್ರಾಣವನ್ನು ಕೊಟ್ಟರಲ್ಲವೇ? \v 12 ಹೀಗೆ ನಿನ್ನ ಸಹೋದರರ ವಿರುದ್ಧ ಪಾಪಮಾಡಿ, ಬಲಹೀನವಾದ ಅವರ ಮನಸ್ಸನ್ನು ನೋಯಿಸಿ, ಕ್ರಿಸ್ತ ಯೇಸುವಿಗೆ ವಿರುದ್ಧವಾಗಿ ಪಾಪಮಾಡುವವನಾಗಿರುತ್ತಿ. \v 13 ಆದ್ದರಿಂದ ನಾನು ತಿನ್ನುವಂಥದ್ದು ನನ್ನ ಸಹೋದರನನ್ನು ಪಾಪದಲ್ಲಿ ಬೀಳುವಂತೆ ಮಾಡುವುದಾದರೆ, ಎಂದಿಗೂ ನಾನು ಮಾಂಸವನ್ನು ತಿನ್ನುವುದೇ ಇಲ್ಲ. ಅವನ ಬೀಳುವಿಕೆಗೆ ಕಾರಣವಾಗುವುದೂ ಇಲ್ಲ. \c 9 \s1 ಅಪೊಸ್ತಲರ ಹಕ್ಕುಗಳು \p \v 1 ನಾನು ಸ್ವತಂತ್ರನಲ್ಲವೇ? ನಾನೂ ಅಪೊಸ್ತಲನಲ್ಲವೇ? ನಾನು ನಮ್ಮ ಕರ್ತ ಆಗಿರುವ ಯೇಸುವನ್ನು ಕಂಡವನಲ್ಲವೇ? ನಾನು ಕರ್ತ ದೇವರಲ್ಲಿ ಮಾಡಿದ ಕೆಲಸದ ಫಲವು ನೀವಲ್ಲವೇ? \v 2 ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗೆ ನಾನು ಅಪೊಸ್ತಲನಾಗಿದ್ದೇನೆ! ನನ್ನ ಅಪೊಸ್ತಲ ಸೇವೆಯ ಮುದ್ರೆಯು ಕರ್ತ ದೇವರಲ್ಲಿ ನೀವೇ ಆಗಿದ್ದೀರಷ್ಟೇ. \p \v 3 ನನ್ನ ಮೇಲೆ ತಪ್ಪು ಹೊರಿಸುವವರಿಗೆ ಇದೇ ನನ್ನ ಪ್ರತಿವಾದ: \v 4 ಅನ್ನಪಾನಗಳಿಗಾಗಿ ನಮಗೆ ಹಕ್ಕಿಲ್ಲವೇ? \v 5 ಮಿಕ್ಕ ಅಪೊಸ್ತಲರಂತೆಯೂ ಕರ್ತದೇವರ ತಮ್ಮಂದಿರಂತೆಯೂ ಕೇಫನಂತೆಯೂ ವಿಶ್ವಾಸಿಯಾದ ಒಬ್ಬಳನ್ನು ಮದುವೆಮಾಡಿಕೊಳ್ಳಲು ನಮಗೆ ಹಕ್ಕಿಲ್ಲವೇ? \v 6 ಇಲ್ಲವೆ ಉಪಜೀವನಕ್ಕಾಗಿ ನಾನೂ ಮತ್ತು ಬಾರ್ನಬನೂ ಮಾತ್ರವೇ ಕೆಲಸಮಾಡಬೇಕೋ? \p \v 7 ಸೈನಿಕ ಸೇವೆಯನ್ನು ಯಾವನಾದರೂ ಸ್ವಂತ ಖರ್ಚಿನಿಂದ ಮಾಡುವುದುಂಟೋ? ದ್ರಾಕ್ಷಿಯ ತೋಟವನ್ನು ಮಾಡಿ ಅದರ ಫಲವನ್ನು ತಿನ್ನದೇ ಇರುವವರುಂಟೋ? ಮಂದೆಯನ್ನು ಮೇಯಿಸುವವನು ಹಾಲನ್ನು ಕುಡಿಯದೇ ಇರುವುದುಂಟೋ? \v 8 ನಾನು ಕೇವಲ ಮಾನವೀಯ ನೋಟದಲ್ಲಿ ಮಾತನಾಡುತ್ತಿದ್ದೇನೋ? ನಿಯಮವು ಸಹ ಇದನ್ನು ಹೇಳುವುದಿಲ್ಲವೋ? \v 9 “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು,”\f + \fr 9:9 \fr*\ft \+xt ಧರ್ಮೋ 25:4\+xt*\ft*\f* ಎಂದು ಮೋಶೆಯ ನಿಯಮದಲ್ಲಿ ಬರೆದಿದೆ. ಇಲ್ಲಿ ದೇವರಿಗೆ ಎತ್ತಿನ ಬಗ್ಗೆ ಮಾತ್ರ ಚಿಂತೆಯಿದೆಯೋ? \v 10 ನಿಶ್ಚಯವಾಗಿಯೂ, ದೇವರು ನಮಗೋಸ್ಕರ ಇವೆಲ್ಲವನ್ನು ಹೇಳುತ್ತಾರೆ ಅಲ್ಲವೇ? ಹೌದು, ಪವಿತ್ರ ವೇದವು ನಮಗೋಸ್ಕರವಾಗಿಯೇ ಬರೆಯಲಾಗಿದೆ. ಉಳುವವನು ಉಳುವಾಗ, ಒಕ್ಕುವವನು ಒಕ್ಕುವಾಗ ಸುಗ್ಗಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿಂದ ಹಾಗೆ ಮಾಡಬೇಕು. \v 11 ನಾವು ನಿಮ್ಮಲ್ಲಿ ಆತ್ಮಿಕ ಸಂಗತಿಗಳನ್ನು ಬಿತ್ತಿದ ಮೇಲೆ, ನಿಮ್ಮಿಂದ ಭೌತಿಕ ಸುಗ್ಗಿಯನ್ನು ಕೊಯ್ಯುವುದು ದೊಡ್ಡದೋ? \v 12 ಇತರರಿಗೆ ನಿಮ್ಮ ಸಹಾಯದಲ್ಲಿ ಪಾಲು ಇದ್ದರೆ, ಅದರಲ್ಲಿ ನಮಗೂ ಹೆಚ್ಚು ಪಾಲು ಇರಬೇಕಲ್ಲಾ? \p ಆದರೆ ನಾವು ಈ ಅಧಿಕಾರವನ್ನು ಚಲಾಯಿಸಿಲ್ಲ. ಕ್ರಿಸ್ತ ಯೇಸುವಿಗೆ ಸೇರಿದ ಸುವಾರ್ತೆಗೆ ಅಡ್ಡಿಯಾಗಬಾರದೆಂದು ಎಲ್ಲವನ್ನೂ ಸಹಿಸಿಕೊಂಡೆವು. \p \v 13 ದೇವಾಲಯದಲ್ಲಿ ಸೇವೆಮಾಡುವವರು, ದೇವಾಲಯದಲ್ಲಿ ಊಟ ಪಡೆಯುತ್ತಾರೆಂಬುದೂ; ಬಲಿಪೀಠದ ಬಳಿಯಲ್ಲಿ ಸೇವೆಮಾಡುವವರು, ಆ ಬಲಿಪೀಠದ ಮೇಲೆ ಸಮರ್ಪಿಸಿದ್ದರಲ್ಲಿ ಪಾಲು ಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ? \v 14 ಅದೇ ರೀತಿಯಾಗಿ ಸುವಾರ್ತೆಯನ್ನು ಸಾರುವವರು, ಸುವಾರ್ತೆಯಿಂದಲೇ ಜೀವನ ಮಾಡಬೇಕೆಂದು ಕರ್ತದೇವರು ಸಹ ಆಜ್ಞಾಪಿಸಿದ್ದಾರೆ. \p \v 15 ಆದರೆ ನಾನಂತೂ ಇವುಗಳಲ್ಲಿ ಒಂದು ಹಕ್ಕನ್ನೂ ಉಪಯೋಗಿಸಿಕೊಂಡಿಲ್ಲ. ಅಂಥವುಗಳನ್ನು ನನಗೆ ನೀವು ಮಾಡಬೇಕೆಂಬ ಅಪೇಕ್ಷೆಯಿಂದ ಈ ಸಂಗತಿಗಳನ್ನು ನಾನು ಬರೆಯಲಿಲ್ಲ. ಯಾರಾದರೂ ಈ ಹೆಮ್ಮೆಯನ್ನು ನನ್ನಿಂದ ಅಪಹರಿಸುವುದಕ್ಕಿಂತಲೂ ಸಾಯುವುದೇ ಲೇಸು. \v 16 ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಸಿಕೊಳ್ಳುವ ಯಾವ ಆಸೆಯೂ ನನಗೆ ಇಲ್ಲ. ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಸಾಲಗಾರನಾಗಿದ್ದೇನೆ. ಸುವಾರ್ತೆಯನ್ನು ಸಾರದಿದ್ದರೆ, ನನ್ನ ಗತಿ ಏನೆಂದು ಹೇಳಲಿ! \v 17 ನಾನು ಇಷ್ಟಪೂರ್ವಕವಾಗಿ ಸುವಾರ್ತೆ ಸಾರಿದರೆ, ನನಗೆ ಬಹುಮಾನವಿರುವುದು. ಇಷ್ಟವಿಲ್ಲದೆ ಮಾಡಿದರೆ, ನನ್ನ ವಶಕ್ಕೆ ಒಪ್ಪಿಸಲಾದ ಕಾರ್ಯಭಾರವನ್ನು ನಾನು ನೆರವೇರಿಸಿದಂತಾಗುತ್ತದೆ. \v 18 ಹಾಗಾದರೆ ನನಗೆ ದೊರೆಯುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ, ಅದನ್ನು ಉಚಿತವಾಗಿ ಸಾರುತ್ತಾ, ಸುವಾರ್ತೆಯ ಪ್ರಸಂಗಿಯಾಗಿ ನನ್ನ ಪೂರ್ಣ ಹಕ್ಕನ್ನು ಉಪಯೋಗಿಸದಿರುವುದೇ ನನ್ನ ಬಹುಮಾನ. \s1 ಪೌಲನ ಸ್ವತಂತ್ರ \p \v 19 ನಾನು ಸ್ವತಂತ್ರನಾಗಿದ್ದರೂ, ಯಾರಿಗೂ ಸೇರಿದವನಾಗಿರದಿದ್ದರೂ, ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂಬ ಉದ್ದೇಶದಿಂದ ನನ್ನನ್ನು ಎಲ್ಲರಿಗೂ ಗುಲಾಮನನ್ನಾಗಿ ಮಾಡಿಕೊಂಡೆನು. \v 20 ಯೆಹೂದ್ಯರನ್ನು ಸಂಪಾದಿಸಿಕೊಳ್ಳುವಂತೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ನಿಯಮಕ್ಕೆ ಅಧೀನನಲ್ಲದಿದ್ದರೂ ನಿಯಮಕ್ಕೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವಂತೆ ಅವರಿಗಾಗಿ ನಿಯಮಕ್ಕೆ ಅಧೀನನಂತಾದೆನು. \v 21 ನಾನು ನಿಯಮ ಇಲ್ಲದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಅವರಿಗೆ ನಿಯಮವಿಲ್ಲದವನಂತಾದೆನು. ನಾನು ಕ್ರಿಸ್ತ ಯೇಸುವಿನ ನಿಯಮಕ್ಕೆ ಒಳಗಾದವನಾಗಿದ್ದರೂ ನಾನು ದೇವರ ನಿಯಮದಿಂದ ಸ್ವತಂತ್ರವಾದವನಲ್ಲ. \v 22 ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ಬಲವಿಲ್ಲದವರಿಗೆ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಎಲ್ಲರಿಗೂ ಎಲ್ಲವೂ ಆದೆನು. \v 23 ನಾನು ಸುವಾರ್ತೆಯ ಆಶೀರ್ವಾದಗಳಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ. \s1 ಶಿಸ್ತಿನ ಜೀವನದ ಅವಶ್ಯಕತೆ \p \v 24 ಪಂದ್ಯಗಳಲ್ಲಿ ಎಲ್ಲರೂ ಓಡುತ್ತಾರೆ. ಆದರೆ ಒಬ್ಬನಿಗೆ ಮಾತ್ರ ಬಹುಮಾನ ದೊರೆಯುತ್ತದೆ ಎಂಬುದು ನಿಮಗೆ ತಿಳಿಯದೋ? ಬಹುಮಾನವನ್ನು ಪಡಕೊಳ್ಳಬೇಕೆಂದು ನೀವೂ ಓಡಿರಿ. \v 25 ಆಟಗಳಲ್ಲಿ ಪಂದ್ಯಕ್ಕೆ ಭಾಗವಹಿಸುವವರೆಲ್ಲರೂ, ಕಠಿಣವಾದ ತರಬೇತಿಯನ್ನು ಹೊಂದುತ್ತಾರೆ. ಅವರು ಬಹುದಿನ ಉಳಿಯದೇ ಇರುವ ಕಿರೀಟವನ್ನು ಪಡೆಯುವುದಕ್ಕೆ ಇದನ್ನು ಮಾಡುತ್ತಾರೆ. ಆದರೆ ನಾವು ಎಂದೆಂದಿಗೂ ಉಳಿಯುವ ಕಿರೀಟ ಹೊಂದಲು ಹೋರಾಡುವವರಾಗಿದ್ದೇವೆ. \v 26 ಗೊತ್ತುಗುರಿ ಇಲ್ಲದವನ ಹಾಗೆ ನಾನು ಓಡುವುದಿಲ್ಲ, ಗಾಳಿಯನ್ನು ಗುದ್ದುವವನ ಹಾಗೆ ನಾನು ಹೋರಾಡುವುದಿಲ್ಲ. \v 27 ನಾನು ಇತರರಿಗೆ ಸುವಾರ್ತೆ ಸಾರಿದ ಮೇಲೆ, ನಾನೇ ಬಹುಮಾನ ಹೊಂದಲು ಅಯೋಗ್ಯನಾಗದಂತೆ ನನ್ನ ದೇಹವನ್ನು ದಂಡಿಸಿ, ನನ್ನ ಸ್ವಾಧೀನದಲ್ಲಿಟ್ಟುಕೊಳ್ಳುತ್ತೇನೆ. \c 10 \s1 ಇಸ್ರಾಯೇಲರ ಚರಿತ್ರೆಯಿಂದ ನಮಗೆ ಸಿಗುವ ಎಚ್ಚರಿಕೆ \p \v 1 ಪ್ರಿಯರೇ, ನಮ್ಮ ಪಿತೃಗಳೆಲ್ಲರೂ ಮೇಘದ ನೆರಳಿನಲ್ಲಿದ್ದರು, ಅವರೆಲ್ಲರೂ ಸಮುದ್ರವನ್ನು ಹಾದುಹೋದರು ಎಂಬ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬಾರದೆಂದು ಅಪೇಕ್ಷಿಸುತ್ತೇನೆ. \v 2 ಅವರೆಲ್ಲರೂ ಮೋಶೆಯಲ್ಲಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಸ್ನಾನವನ್ನು ಹೊಂದಿದರು. \v 3 ಅವರೆಲ್ಲರೂ ಒಂದೇ ಆತ್ಮಿಕವಾದ ಆಹಾರವನ್ನು ಉಂಡರು. \v 4 ಅವರೆಲ್ಲರೂ ಒಂದೇ ಆತ್ಮಿಕವಾದ ಪಾನವನ್ನು ಕುಡಿದರು. ಅವರು ತಮ್ಮೊಂದಿಗೆ ಬಂದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿದರು. ಕ್ರಿಸ್ತ ಯೇಸುವೇ ಆ ಬಂಡೆ. \v 5 ಆದರೆ ಅವರೊಳಗೆ ಬಹುಮಂದಿಯನ್ನು ದೇವರು ಮೆಚ್ಚಲಿಲ್ಲ. ಆದ್ದರಿಂದ ಅವರು ಅರಣ್ಯದಲ್ಲಿ ಸಂಹಾರವಾದರು. \p \v 6 ಅವರು ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವೂ ಆಶಿಸುವವರಾಗಬಾರದೆಂಬುದಕ್ಕಾಗಿ ಈ ಸಂಗತಿಗಳು ಈಗ ನಮಗೆ ನಿದರ್ಶನಗಳಾಗಿವೆ. \v 7 “ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿ ಉಣ್ಣುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು, ಕುಣಿದಾಡುವುದಕ್ಕೆ ಎದ್ದರು,”\f + \fr 10:7 \fr*\ft \+xt ವಿಮೋ 32:6\+xt*\ft*\f* ಎಂದು ಬರೆದಿರುವಂತೆ ನೀವೂ ವಿಗ್ರಹಾರಾಧಕರಾಗಬೇಡಿರಿ. \v 8 ಅವರಲ್ಲಿ ಕೆಲವರು ಜಾರತ್ವ ಮಾಡಿ, ಒಂದೇ ದಿನದಲ್ಲಿ ಇಪ್ಪತ್ಮೂರು ಸಾವಿರ ಮಂದಿ ಸತ್ತರು. ನಾವು ಜಾರತ್ವ ಮಾಡದೆ ಇರೋಣ. \v 9 ಅವರಲ್ಲಿ ಕೆಲವರು ಕರ್ತದೇವರನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದಂತೆ, ನಾವೂ ಪರೀಕ್ಷಿಸದೆ ಇರೋಣ. \v 10 ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕನ ಕೈಯಿಂದ ಸಂಹಾರವಾದಂತೆ ನೀವೂ ಗೊಣಗುಟ್ಟಬೇಡಿರಿ. \p \v 11 ಆ ಮನುಷ್ಯರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನಗಳಾಗಿವೆ, ಯುಗಾಂತ್ಯಕ್ಕೆ ಬಂದಿರುವ ನಮಗೆ ಎಚ್ಚರಿಕೆಯ ಮಾತುಗಳಾಗಿವೆ. \v 12 ಆದಕಾರಣ ದೃಢವಾಗಿ ನಿಂತಿದ್ದೇವೆಂದು ಭಾವಿಸುವ ನೀವು ಬೀಳದಿರುವಂತೆ ನೋಡಿಕೊಳ್ಳಿರಿ. \v 13 ಮನುಷ್ಯರಿಗಾಗುವ ಶೋಧನೆಯೇ ಹೊರತು, ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲ. ಆದರೆ ದೇವರು ನಂಬಿಗಸ್ತರು. ನಿಮ್ಮ ಶಕ್ತಿಗೆ ಮೀರಿದ ಶೋಧನೆಗಳನ್ನು ಅವರು ನಿಮ್ಮ ಮೇಲೆ ಬರುವಂತೆ ಮಾಡುವುದಿಲ್ಲ. ಆದರೆ ನಿಮಗೆ ಶೋಧನೆಗಳು ಬಂದಾಗ, ಅವುಗಳನ್ನು ಜಯಿಸುವುದಕ್ಕೆ ಶಕ್ತರಾಗುವಂತೆ, ಅವುಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಮಾಡುವರು. \s1 ಪ್ರಭುವಿನ ಭೋಜನ \p \v 14 ಆದ್ದರಿಂದ ನನ್ನ ಪ್ರಿಯ ಸ್ನೇಹಿತರೇ, ವಿಗ್ರಹಾರಾಧನೆಯನ್ನು ಬಿಟ್ಟು ಓಡಿಹೋಗಿರಿ. \v 15 ವಿವೇಕಿಗಳಿಗೆ ಹೇಳಿದಂತೆ, ನಾನು ಹೇಳುವುದನ್ನು ನೀವು ವಿವೇಚಿಸಿರಿ. \v 16 ನಾವು ಸ್ತೋತ್ರಮಾಡಿ ಕುಡಿಯುವ ಸ್ತೋತ್ರದ ಪಾತ್ರೆಯು ಕ್ರಿಸ್ತ ಯೇಸುವಿನ ರಕ್ತದ ಅನ್ಯೋನ್ಯತೆಯಲ್ಲವೇ? ನಾವು ಮುರಿಯುವ ರೊಟ್ಟಿಯು ಕ್ರಿಸ್ತನ ದೇಹದಲ್ಲಿಯ ಅನ್ಯೋನ್ಯತೆಯಲ್ಲವೇ? \v 17 ರೊಟ್ಟಿ ಒಂದೇ, ಆದ್ದರಿಂದ ನಾವು ಅನೇಕರಿದ್ದರೂ, ಒಂದೇ ದೇಹವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ. \p \v 18 ನೀವು ಇಸ್ರಾಯೇಲ್ ಜನರ ಕುರಿತು ಆಲೋಚಿಸಿರಿ: ಯಜ್ಞಾರ್ಪಿತವಾದದ್ದನ್ನು ತಿನ್ನುವವರು ಬಲಿಪೀಠದೊಡನೆ ಭಾಗಿಗಳಾಗಿದ್ದಾರಲ್ಲವೇ? \v 19 ಹಾಗಾದರೆ ನಾನು ಹೇಳುವುದೇನು? ವಿಗ್ರಹಕ್ಕೆ ಅರ್ಪಿಸಿದ್ದು ಅಥವಾ ವಿಗ್ರಹಕ್ಕೆ ಏನಾದರೂ ಮಹತ್ವವಿರುತ್ತದೆಯೋ? ನಿಶ್ಚಯವಾಗಿಯೂ ಇಲ್ಲ. \v 20 ಆದರೆ ಯೆಹೂದ್ಯರಲ್ಲದವರು ಅರ್ಪಿಸುವ ಯಜ್ಞ ದೇವರಿಗಲ್ಲ, ದೆವ್ವಗಳಿಗೆ ಅರ್ಪಿಸುವಂತದ್ದಾಗಿದೆ. ನೀವು ದೆವ್ವಗಳೊಂದಿಗೆ ಭಾಗಿಗಳಾಗಿರಬೇಕೆಂಬುದು ನನ್ನ ಇಷ್ಟವಲ್ಲ. \v 21 ನೀವು ಕರ್ತದೇವರ ಪಾತ್ರೆಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯಲಾರಿರಿ. ನೀವು ಕರ್ತದೇವರ ಪಂಕ್ತಿಯಲ್ಲಿಯೂ ದೆವ್ವಗಳ ಪಂಕ್ತಿಯಲ್ಲಿಯೂ ಭಾಗಿಗಳಾಗಿರಲಾರಿರಿ. \v 22 ನಾವು ಹೀಗೆ ದೇವರನ್ನು ಅಸೂಯೆಗೆಬ್ಬಿಸಬಹುದೇ? ನಾವು ದೇವರಿಗಿಂತಲೂ ಬಲಿಷ್ಠರಾಗಿದ್ದೇವೆಯೋ? \s1 ವಿಶ್ವಾಸಿಗಳ ಸ್ವಾತಂತ್ರ್ಯ \p \v 23 ಎಲ್ಲಾ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯವಿದೆ. ಆದರೆ ಎಲ್ಲಾ ಕಾರ್ಯಗಳೂ ಪ್ರಯೋಜನಕರವಾಗಿರುವುದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯವಿದೆ ಆದರೆ, ಎಲ್ಲಾ ಕಾರ್ಯಗಳೂ ಭಕ್ತಿವೃದ್ಧಿಯನ್ನುಂಟುಮಾಡುವುದಿಲ್ಲ. \v 24 ಪ್ರತಿಯೊಬ್ಬನೂ ತನ್ನ ಹಿತವನ್ನು ಮಾತ್ರ ನೋಡಿಕೊಳ್ಳದೆ, ಪರಹಿತವನ್ನೂ ನೋಡಲಿ. \p \v 25 ಮಾಂಸದ ಅಂಗಡಿಯಲ್ಲಿ ಮಾರುವುದು ಏನಿದ್ದರೂ ಮನಸ್ಸಾಕ್ಷಿಯನ್ನು ಪ್ರಶ್ನಿಸದೇ ತಿನ್ನಿರಿ. \v 26 ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತ ದೇವರದಾಗಿದೆ.”\f + \fr 10:26 \fr*\ft \+xt ಕೀರ್ತನೆ 24:1\+xt*\ft*\f* \p \v 27 ಅವಿಶ್ವಾಸಿಗಳಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆದಾಗ ನೀವು ಹೋಗಬಯಸಿದರೆ, ನಿಮ್ಮ ಮುಂದೆ ಬಡಿಸಿದ ಪ್ರತಿಯೊಂದನ್ನು ಮನಸ್ಸಾಕ್ಷಿ ನಿಮಿತ್ತ ಏನನ್ನೂ ಪ್ರಶ್ನಿಸದೆ ತಿನ್ನಿರಿ. \v 28 ಆದರೆ ಯಾರಾದರೂ ನಿಮಗೆ, “ಇದು ನೈವೇದ್ಯ ಮಾಡಿದ್ದು,” ಎಂದು ಹೇಳಿದರೆ, ತಿಳಿಸಿದ ವ್ಯಕ್ತಿಯ ನಿಮಿತ್ತವೂ ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತವೂ ತಿನ್ನಬೇಡಿರಿ. \v 29 ನಾನು ನಿಮ್ಮ ಮನಸ್ಸಾಕ್ಷಿಯ ಬಗ್ಗೆ ಅಲ್ಲ, ಇತರರ ಮನಸ್ಸಾಕ್ಷಿಯ ಬಗ್ಗೆ ಸೂಚಿಸುತ್ತಿದ್ದೇನೆ. ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಏಕೆ ಅಡ್ಡಿಯಾಗಬೇಕು? \v 30 ನಾನು ಕೃತಜ್ಞತೆ ಸಲ್ಲಿಸಿ ಆ ಊಟವನ್ನು ಮಾಡಿದರೆ, ಹಾಗೆ ದೇವರಿಗೆ ಕೃತಜ್ಞತೆ ಸಲ್ಲಿಸಿ ಮಾಡಿದ ಊಟಕ್ಕಾಗಿ ನನ್ನ ಮೇಲೆ ತಪ್ಪುಹೊರಿಸುವುದೇಕೆ? \p \v 31 ಆದ್ದರಿಂದ ನೀವು ಊಟಮಾಡಿದರೂ ಪಾನೀಯ ಸೇವಿಸಿದರೂ ಯಾವುದನ್ನೇ ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ. \v 32 ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ, ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ. \v 33 ನಾನಂತೂ ಎಲ್ಲರನ್ನೂ, ಎಲ್ಲದರಲ್ಲೂ ಮೆಚ್ಚಿಸಲು ಶ್ರಮಿಸುವವನಾಗಿದ್ದೇನೆ. ಏಕೆಂದರೆ, ನಾನು ನನ್ನ ಸ್ವಂತ ಹಿತವನ್ನೇ ಹುಡುಕದೆ, ಅನೇಕರು ರಕ್ಷಣೆ ಹೊಂದಬೇಕೆಂದು ಇತರರ ಹಿತಕ್ಕಾಗಿ ಶ್ರಮಿಸುವವನಾಗಿದ್ದೇನೆ. \c 11 \nb \v 1 ನಾನು ಕ್ರಿಸ್ತ ಯೇಸುವನ್ನು ಅನುಸರಿಸುವಂತೆಯೇ, ನೀವೂ ನನ್ನನ್ನು ಅನುಸರಿಸಿರಿ. \s1 ಆರಾಧನೆಯಲ್ಲಿ ಸರಿಯಾದ ನಡವಳಿಕೆ \p \v 2 ನೀವು ಎಲ್ಲದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು, ನಾನು ನಿಮಗೆ ಒಪ್ಪಿಸಿಕೊಟ್ಟ ಉಪದೇಶಗಳನ್ನು ಬಿಗಿಯಾಗಿ ಅನುಸರಿಸುತ್ತಿರೆಂದು ನಿಮ್ಮನ್ನು ಹೊಗಳುತ್ತೇನೆ. \v 3 ಪ್ರತಿ ಪುರುಷನಿಗೂ ಕ್ರಿಸ್ತನು ಶಿರಸ್ಸು, ಸ್ತ್ರೀಗೆ ಪುರುಷನು ಶಿರಸ್ಸು ಮತ್ತು ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾರೆ, ಎಂಬುದನ್ನು ನೀವು ತಿಳಿಯಬೇಕೆಂಬುದು ನನ್ನ ಅಪೇಕ್ಷೆ. \v 4 ತನ್ನ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆ ಮಾಡುವ ಇಲ್ಲವೆ, ಪ್ರವಾದನೆ ಹೇಳುವ ಪ್ರತಿ ಪುರುಷನೂ ತನ್ನ ತಲೆಯನ್ನು ಅವಮಾನಪಡಿಸುತ್ತಾನೆ. \v 5 ಆದರೆ ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆ ಮಾಡುವ ಇಲ್ಲವೆ ಪ್ರವಾದನೆ ಹೇಳುವ ಪ್ರತಿ ಸ್ತ್ರೀಯು ತನ್ನ ತಲೆಯನ್ನು ಅವಮಾನ ಪಡಿಸುತ್ತಾಳೆ. ಹೀಗೆ ಮಾಡುವ ಸ್ತ್ರೀಯು ತನ್ನ ತಲೆ ಬೋಳಿಸಿಕೊಳ್ಳುವುದಕ್ಕೆ ಸಮಾನವಾಗಿದೆ. \v 6 ಸ್ತ್ರೀಯು ಮುಸುಕು ಹಾಕಿಕೊಳ್ಳದೆ ಇದ್ದರೆ, ಆಕೆಯು ಕೂದಲನ್ನು ಕತ್ತರಿಸಿಕೊಳ್ಳಲಿ. ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ, ತಲೆ ಬೋಳಿಸಿಕೊಳ್ಳವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ, ಆಕೆಯು ಮುಸುಕನ್ನು ಹಾಕಿಕೊಳ್ಳಬೇಕು. \p \v 7 ಪುರುಷನು ದೇವರ ಸ್ವರೂಪವೂ ಮಹಿಮೆಯೂ ಆಗಿರುವುದರಿಂದ, ತನ್ನ ತಲೆಗೆ ಮುಸುಕು ಹಾಕಬೇಕಾಗಿಲ್ಲ. ಆದರೆ ಸ್ತ್ರೀಯು ಪುರುಷನ ಮಹಿಮೆಯಾಗಿದ್ದಾಳೆ. \v 8 ಏಕೆಂದರೆ, ಪುರುಷನು ಸ್ತ್ರೀಯಿಂದಲ್ಲ, ಆದರೆ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. \v 9 ಪುರುಷನು ಸ್ತ್ರೀಗಾಗಿ ಸೃಷ್ಟಿಯಾಗಲಿಲ್ಲ, ಸ್ತ್ರೀಯು ಪುರುಷನಿಗಾಗಿ ಸೃಷ್ಟಿಯಾದಳು. \v 10 ಈ ಕಾರಣದಿಂದಲೂ ದೇವದೂತರ ನಿಮಿತ್ತವಾಗಿಯೂ ಸ್ತ್ರೀಯ ತಲೆಯ ಮೇಲೆ ಅಧಿಕಾರದ ಮುಸುಕನ್ನು ಹಾಕಿರಬೇಕು. \v 11 ಆದರೂ, ಕರ್ತ ದೇವರಲ್ಲಿ ಪುರುಷನಿಲ್ಲದೆ ಸ್ತ್ರೀಯು ಇಲ್ಲ; ಸ್ತ್ರೀಯಿಲ್ಲದ ಪುರುಷನೂ ಇಲ್ಲ. \v 12 ಏಕೆಂದರೆ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಂತೆ, ಪುರುಷನು ಸ್ತ್ರೀಯಿಂದ ಜನಿಸುತ್ತಾನೆ. ಆದರೆ ಸಮಸ್ತವೂ ದೇವರಿಂದಲೇ ಆಗಿರುತ್ತದೆ. \p \v 13 ಇದನ್ನು ನೀವೇ ತೀರ್ಮಾನ ಮಾಡಿಕೊಳ್ಳಿರಿ: ಸ್ತ್ರೀಯು ಮುಸುಕಿಲ್ಲದೆ ದೇವರಿಗೆ ಪ್ರಾರ್ಥಿಸುವುದು ಯುಕ್ತವೋ? \v 14 ಪುರುಷನು ಕೂದಲನ್ನು ಬೆಳೆಸಿಕೊಂಡರೆ, ಅದು ಅವನಿಗೆ ಅವಮಾನಕರವಾಗಿದೆಯೆಂದೂ \v 15 ಸ್ತ್ರೀಯು ಕೂದಲು ಬೆಳೆಸಿಕೊಂಡರೆ, ಅದು ಅವಳಿಗೆ ಮಹಿಮೆಯಾಗಿದೆಯೆಂದೂ ಪ್ರಕೃತಿಯೇ ಸ್ಪಷ್ಟಪಡಿಸುತ್ತದೆ ಅಲ್ಲವೇ? ಏಕೆಂದರೆ, ಅವಳಿಗೆ ಉದ್ದ ಕೂದಲು ಮುಸುಕಿನಂತೆ ಕೊಡಲಾಗಿದೆ. \v 16 ಇದರ ಬಗ್ಗೆ ಯಾರಿಗಾದರೂ ವಾಗ್ವಾದ ಮಾಡಬಯಸಿದರೆ, ಇಂಥ ಪದ್ಧತಿ ನಮ್ಮಲ್ಲಿಲ್ಲ, ದೇವರ ಸಭೆಗಳಲ್ಲಿಯೂ ಇಲ್ಲ. \s1 ಪ್ರಭುವಿನ ಭೋಜನ \p \v 17 ನಿಮ್ಮನ್ನು ಹೊಗಳುವುದಕ್ಕಾಗಿ ಈ ಮಾರ್ಗದರ್ಶನಗಳನ್ನು ನಾನು ನಿಮಗೆ ತಿಳಿಸುತ್ತಾಯಿಲ್ಲ. ಏಕೆಂದರೆ, ನಿಮ್ಮ ಕೂಟಗಳಿಂದ ಮೇಲಾಗುವುದಕ್ಕಿಂತ ಹೆಚ್ಚು ಕೇಡಾಗುತ್ತಲಿದೆ. \v 18 ಹೇಗೆಂದರೆ, ಮೊದಲನೆಯದು: ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮೊಳಗೆ ಭೇದಗಳಿವೆ ಎಂದು ಕೇಳುತ್ತೇನೆ. ಇದನ್ನು ಸ್ವಲ್ಪಮಟ್ಟಿಗೆ ನಂಬುತ್ತೇನೆ. \v 19 ದೇವರ ಮೆಚ್ಚುಗೆ ನಿಮ್ಮಲ್ಲಿ ಯಾರ ಮೇಲೆ ಇದೆ ಎಂಬುದು ಕಂಡುಬರುವಂತೆ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ. \v 20 ನೀವು ಒಟ್ಟಾಗಿ ಕೂಡಿಬರುವಾಗ, ನೀವು ಮಾಡುವ ಭೋಜನವು ಕರ್ತದೇವರ ಭೋಜನವಲ್ಲ. \v 21 ಏಕೆಂದರೆ, ಭೋಜನ ಮಾಡುವಾಗ, ಪ್ರತಿಯೊಬ್ಬನು ಇತರರಿಗಾಗಿ ಕಾಯದೇ, ತನ್ನ ಭೋಜನವನ್ನು ಮುಂಚಿತವಾಗಿ ಆರಂಭಿಸುತ್ತಾನೆ. ಒಬ್ಬನು ಹಸಿದಿರುತ್ತಾನೆ, ಮತ್ತೊಬ್ಬನು ಕುಡಿದಿರುತ್ತಾನೆ. \v 22 ಉಣ್ಣುವುದಕ್ಕೂ, ಕುಡಿಯುವುದಕ್ಕೂ ನಿಮಗೆ ಮನೆಗಳಿಲ್ಲವೇ? ಅಥವಾ ದೇವರ ಸಭೆಯನ್ನು ಹೀನೈಸಿ ಏನೂ ಇಲ್ಲದವರನ್ನು ನಾಚಿಕೆಪಡಿಸುತ್ತೀರಾ? ನಾನು ನಿಮಗೇನು ಹೇಳಲಿ? ಇದಕ್ಕಾಗಿ ನಾನು ನಿಮ್ಮನ್ನು ಹೊಗಳಬೇಕೆ? ಖಂಡಿತ ಇಲ್ಲ. \p \v 23 ನಾನು ಕರ್ತ ದೇವರಿಂದಲೇ ಪಡೆದದ್ದನ್ನು ನಿಮಗೆ ಒಪ್ಪಿಸಿಕೊಟ್ಟಿದ್ದೇನೆ: ಕರ್ತ ಆಗಿರುವ ಯೇಸು ತಮ್ಮನ್ನು ಹಿಡಿದುಕೊಡಲಾದ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು, \v 24 ಸ್ತೋತ್ರಮಾಡಿ ಮುರಿದು, “ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು. \v 25 ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ. ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ಜ್ಞಾಪಿಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ,” ಎಂದರು. \v 26 ನೀವು ಈ ರೊಟ್ಟಿಯನ್ನು ತಿಂದು, ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ, ಕರ್ತದೇವರ ಮರಣವನ್ನು ಅವರು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ. \p \v 27 ಹೀಗಿರುವುದರಿಂದ, ಯಾರಾದರೂ ಅಯೋಗ್ಯವಾಗಿ ಕರ್ತದೇವರ ರೊಟ್ಟಿಯನ್ನು ತಿಂದರೆ, ಇಲ್ಲವೆ ಅವರ ಪಾತ್ರೆಯಲ್ಲಿ ಪಾನ ಮಾಡಿದರೆ, ಅಂಥವರು ಕರ್ತದೇವರ ದೇಹಕ್ಕೂ, ರಕ್ತಕ್ಕೂ ದ್ರೋಹ ಮಾಡಿದವರಾಗಿರುವರು. \v 28 ಆದರೆ ಪ್ರತಿಯೊಬ್ಬರೂ ತಮ್ಮನ್ನು ಪರೀಕ್ಷಿಸಿಕೊಂಡವರಾಗಿ, ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ. \v 29 ಏಕೆಂದರೆ, ಯಾರಾದರು ಕ್ರಿಸ್ತನ ದೇಹವೆಂದು ವಿವೇಚಿಸದೆ ತಿಂದು ಕುಡಿದರೆ, ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವರು. \v 30 ಇದರಿಂದ ನಿಮ್ಮಲ್ಲಿ ಬಹುಮಂದಿ ಬಲಹೀನರೂ, ರೋಗಿಗಳೂ ಆಗಿದ್ದಾರೆ, ಕೆಲವರು ನಿದ್ರೆ ಹೋಗಿದ್ದಾರೆ. \v 31 ನಮ್ಮನ್ನು ನಾವೇ ತೀರ್ಪುಮಾಡಿಕೊಂಡರೆ, ನಾವು ನ್ಯಾಯವಿಚಾರಣೆಗೆ ಒಳಗಾಗುವುದಿಲ್ಲ. \v 32 ನಾವು ಲೋಕದವರ ಸಂಗಡ ದಂಡನೆಗೆ ಗುರಿಯಾಗಬಾರದೆಂದು, ದೇವರು ನಮ್ಮನ್ನು ಈಗ ಈ ರೀತಿಯಾಗಿ ಶಿಸ್ತಿನ ನ್ಯಾಯವಿಚಾರಣೆಗೆ ಒಳಪಡಿಸುತ್ತಾರೆ. \p \v 33 ಹೀಗಿರುವುದರಿಂದ ನನ್ನ ಪ್ರಿಯರೇ, ನೀವು ಭೋಜನಕ್ಕಾಗಿ ಕೂಡಿಬರುವಾಗ ಎಲ್ಲರಿಗಾಗಿ ಕಾದುಕೊಂಡಿರಿ. \v 34 ನೀವು ಒಟ್ಟಾಗಿ ಕೂಟಕ್ಕೆ ಸೇರಿಬರುವಾಗ, ನ್ಯಾಯತೀರ್ಪಿಗೆ ಒಳಗಾದಂತೆ, ಹಸಿದವರು ಮನೆಯಲ್ಲೇ ಊಟಮಾಡಲಿ. \p ಇನ್ನುಳಿದ ವಿಷಯಗಳನ್ನು ನಾನು ಬಂದಾಗ ಕ್ರಮಪಡಿಸುತ್ತೇನೆ. \c 12 \s1 ಆತ್ಮಿಕ ವರಗಳು \p \v 1 ಪ್ರಿಯರೇ, ಈಗ ಆತ್ಮಿಕ ವರಗಳನ್ನು ಕುರಿತು ನೀವು ಅಜ್ಞಾನಿಗಳಾಗಿರಬಾರದೆಂದು ಅಪೇಕ್ಷಿಸುತ್ತೇನೆ. \v 2 ನೀವು ಕ್ರಿಸ್ತನನ್ನು ನಂಬದಿದ್ದಾಗ, ಹೇಗೆ ಮೂಕ ವಿಗ್ರಹಗಳ ಕಡೆಗೆ ಪ್ರಭಾವಗೊಂಡು ದಾರಿತಪ್ಪಿ ಹೋಗಿದ್ದಿರಿ ಎಂಬುದನ್ನು ಬಲ್ಲಿರಿ. \v 3 ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ: ದೇವರಾತ್ಮರಿಂದ ಮಾತನಾಡುವ ಯಾವನೂ, “ಯೇಸು ಶಾಪಗ್ರಸ್ತನು,” ಎಂದು ಹೇಳುವುದಿಲ್ಲ. ಪವಿತ್ರಾತ್ಮರಿಂದಲೇ ಹೊರತು, ಯಾವನೂ, “ಯೇಸು ಕರ್ತದೇವರು,” ಎಂದು ಹೇಳಲಾರನು. \p \v 4 ಆತ್ಮಿಕ ವರಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಪವಿತ್ರಾತ್ಮರು ಒಬ್ಬರೇ. \v 5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಕರ್ತ ಆಗಿರುವವರು ಒಬ್ಬರೇ. \v 6 ಕಾರ್ಯರೀತಿಗಳಲ್ಲಿ ಬೇರೆ ಬೇರೆ ವಿಧಗಳಿವೆ, ಎಲ್ಲರಲ್ಲಿಯೂ ಎಲ್ಲಾ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬರೇ. \p \v 7 ಸರ್ವರ ಪ್ರಯೋಜನಕ್ಕಾಗಿ ಪವಿತ್ರಾತ್ಮರ ವರಗಳನ್ನು ಪ್ರತಿಯೊಬ್ಬರಿಗೆ ಕೊಡಲಾಗಿದೆ. \v 8 ಹೇಗೆಂದರೆ, ಪವಿತ್ರಾತ್ಮ ದೇವರ ಮೂಲಕ ಒಬ್ಬನಿಗೆ ಜ್ಞಾನ ವಾಕ್ಯವು, ಒಬ್ಬನಿಗೆ ಆ ಆತ್ಮರ ಅನುಸಾರವಾಗಿ ವಿದ್ಯಾವಾಕ್ಯವು, \v 9 ಒಬ್ಬನಿಗೆ ಅದೇ ಆತ್ಮನಿಂದ ನಂಬಿಕೆಯು, ಮತ್ತೊಬ್ಬನಿಗೆ ಅದೇ ಆತ್ಮನಿಂದ ರೋಗ ವಾಸಿಮಾಡುವ ವರಗಳು ಕೊಡಲಾಗಿವೆ. \v 10 ಒಬ್ಬನಿಗೆ ಅದ್ಭುತಕಾರ್ಯಗಳ ಶಕ್ತಿಯೂ ಒಬ್ಬನಿಗೆ ಪ್ರವಾದನೆಯೂ ಒಬ್ಬನಿಗೆ ಆತ್ಮಗಳನ್ನು ವಿವೇಚಿಸುವ ವರವೂ ಒಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಶಕ್ತಿಯೂ ಮತ್ತೊಬ್ಬನಿಗೆ ಅನ್ಯಭಾಷೆಗಳ ಅರ್ಥವನ್ನು ಹೇಳುವ ವರವೂ ಕೊಡಲಾಗುತ್ತದೆ. \v 11 ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಚಿತ್ತಾನುಸಾರ ಪ್ರತಿಯೊಬ್ಬನಿಗೂ ಹಂಚಿಕೊಡುತ್ತಾರೆ. \s1 ಒಂದೇ ದೇಹ ಅನೇಕ ಅಂಗಗಳು \p \v 12 ದೇಹವು ಅನೇಕ ಅಂಗಗಳುಳ್ಳದ್ದಾಗಿದ್ದರೂ ಒಂದಾಗಿರುವಂತೆಯೂ, ಅನೇಕ ಅಂಗಗಳೆಲ್ಲವು ಒಂದೇ ದೇಹವನ್ನು ರೂಪಿಸುವಂತೆಯೂ, ಕ್ರಿಸ್ತನ ದೇಹವು ಸಹ ಇರುತ್ತದೆ. \v 13 ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ಒಂದೇ ದೇಹವಾಗುವಂತೆ, ನಾವೆಲ್ಲರೂ ಒಬ್ಬರೇ ಆತ್ಮದಿಂದ ಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬ ಆತ್ಮವನ್ನು ಪಾನವಾಗಿ ಕೊಡಲಾಗಿದೆ. \v 14 ದೇಹವು ಒಂದೇ ಅಂಗವಾಗಿರದೆ, ಅನೇಕ ಅಂಗಗಳುಳ್ಳದ್ದಾಗಿದೆ. \p \v 15 ಒಂದು ವೇಳೆ ಕಾಲು, “ನಾನು ಕೈಯಲ್ಲದ ಕಾರಣ, ದೇಹಕ್ಕೆ ಸೇರಿಲ್ಲ,” ಎಂದು ಹೇಳಿದರೂ, ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ? \v 16 ಒಂದು ವೇಳೆ ಕಿವಿ, “ನಾನು ಕಣ್ಣಲ್ಲದ ಕಾರಣ, ದೇಹಕ್ಕೆ ಸೇರಿಲ್ಲ,” ಎಂದು ಹೇಳಿದರೂ ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ? \v 17 ದೇಹವೆಲ್ಲಾ ಕಣ್ಣಾದರೆ ನಾವು ಕೇಳುವುದೆಲ್ಲಿ? ಅಥವಾ ಅದೆಲ್ಲಾ ಕಿವಿಯಾದರೆ, ಮೂಸಿ ನೋಡುವುದೆಲ್ಲಿ? \v 18 ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತಮ್ಮ ಇಷ್ಟದ ಪ್ರಕಾರ ದೇಹದಲ್ಲಿ ಇಟ್ಟಿದ್ದಾರೆ. \v 19 ಅವೆಲ್ಲವೂ ಒಂದೇ ಅಂಗವಾಗಿದ್ದರೆ, ಆಗ ದೇಹವೆಲ್ಲಿ? \v 20 ಹೀಗೆ ಅಂಗಗಳು ಅನೇಕವಾಗಿದ್ದರೂ, ದೇಹ ಮಾತ್ರ ಒಂದೇ. \p \v 21 ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲ!” ಎಂದು ಹೇಳಲಾಗದು. ತಲೆಯು ಕಾಲುಗಳಿಗೆ, “ನೀನು ನನಗೆ ಅವಶ್ಯವಿಲ್ಲ!” ಎಂದು ಹೇಳಲಾಗದು. \v 22 ಆದರೆ ದೇಹದಲ್ಲಿ ಬಲಹೀನವಾದವುಗಳೆಂದು ತೋರುವ ಅಂಗಗಳೇ ನಮಗೆ ಎಷ್ಟೋ ಹೆಚ್ಚಾಗಿ ಅವಶ್ಯವಾಗಿವೆ. \v 23 ಕಡಿಮೆ ಗೌರವವುಳ್ಳವುಗಳೆಂದು ಯೋಚಿಸುವವುಗಳನ್ನು ವಿಶೇಷ ಗೌರವದಿಂದ ನೋಡುತ್ತೇವೆ. ಬಹಿರಂಗಪಡಿಸದ ಅಂಗಗಳನ್ನು ವಿಶೇಷ ಮರ್ಯಾದೆಯಿಂದ ಸಂರಕ್ಷಿಸುತ್ತೇವೆ. \v 24 ನಾವು ಬಾಹ್ಯ ಅಂಗಗಳಿಗೆ ಹೆಚ್ಚಿನ ವಿಶೇಷತೆಯನ್ನು ಕೊಡುವುದಿಲ್ಲ. ಆದರೆ ಗೌರವ ಕಡಿಮೆಯಿರುವ ಅಂಗಗಳಿಗೆ, ದೇವರು ಹೆಚ್ಚು ಗೌರವವನ್ನು ಕೊಡುವಂತೆ, ಎಲ್ಲಾ ಅಂಗಗಳನ್ನು ಒಟ್ಟಾಗಿ ದೇಹದಲ್ಲಿಟ್ಟಿದ್ದಾರೆ. \v 25 ಹೀಗೆ ದೇವರು ದೇಹದಲ್ಲಿ ಭಿನ್ನಭೇದವಿಲ್ಲದೇ, ಎಲ್ಲವೂ ಒಂದಕ್ಕೊಂದು ಪರಸ್ಪರ ಚಿಂತಿಸುವುದಾಗಿ ಕೂಡಿ ಹೋಗುವಂತೆ ಸಮಾನವಾಗಿ ಮಾಡಿದ್ದಾರೆ. \v 26 ದೇಹದ ಒಂದು ಅಂಗ ಬಾಧೆಪಟ್ಟರೆ, ಎಲ್ಲಾ ಅಂಗಗಳು ಬಾಧೆಪಡುತ್ತದೆ. ಒಂದು ಅಂಗಕ್ಕೆ ಗೌರವ ದೊರೆತರೆ, ಅದರೊಂದಿಗೆ ಪ್ರತಿಯೊಂದು ಅಂಗವೂ ಆನಂದಪಡುತ್ತವೆ. \p \v 27 ಈಗ ನೀವು ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಆ ದೇಹದ ಅಂಗಗಳಾಗಿದ್ದೀರಿ. \v 28 ದೇವರು ತಮ್ಮ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಅದ್ಭುತಕಾರ್ಯಗಳನ್ನು ಮಾಡುವವರನ್ನು, ರೋಗಗಳನ್ನು ಗುಣಪಡಿಸುವ ವರವನ್ನು, ಪರೋಪಕಾರಿಗಳನ್ನು, ಆಡಳಿತಗಾರರನ್ನು, ವಿವಿಧ ವಾಣಿಗಳನ್ನಾಡುವವರನ್ನು ನೇಮಿಸಿದ್ದಾರೆ. \v 29 ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಅದ್ಭುತ ಮಾಡುವವರೋ? \v 30 ಎಲ್ಲರೂ ರೋಗಗಳನ್ನು ಗುಣಪಡಿಸುವ ವರವನ್ನು ಹೊಂದಿದವರೋ? ಎಲ್ಲರೂ ಪರೋಪಕಾರಿಗಳೋ? ಎಲ್ಲರೂ ಆಡಳಿತಗಾರರೋ? ಎಲ್ಲರೂ ಅನ್ಯಭಾಷೆಗಳನ್ನಾಡುವವರೋ? ಅಥವಾ ಅನ್ಯಭಾಷೆಗಳ ವ್ಯಾಖ್ಯಾನ ಮಾಡುವವರೋ? \v 31 ಆದರೆ ನೀವು ಆಸಕ್ತಿಯಿಂದ ಶ್ರೇಷ್ಠ ವರಗಳನ್ನು ಅಪೇಕ್ಷಿಸಿರಿ. \s1 ಪ್ರೀತಿಯೇ ಪರಮಶ್ರೇಷ್ಠವಾದದ್ದು \p ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ. \c 13 \p \v 1 ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ನನಗೆ ಪ್ರೀತಿಯಿಲ್ಲದಿದ್ದರೆ, ನಾದ ಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ. \v 2 ನನಗೆ ಪ್ರವಾದನ ವರವಿದ್ದರೂ ನಾನು ಎಲ್ಲಾ ರಹಸ್ಯಗಳನ್ನೂ, ಸಕಲ ವಿದ್ಯೆಯನ್ನು ತಿಳಿದಿದ್ದರೂ ಬೆಟ್ಟಗಳನ್ನು ಕದಲಿಸುವಷ್ಟು ನಂಬಿಕೆಯಿದ್ದರೂ ನನಗೆ ಪ್ರೀತಿಯಿಲ್ಲದಿದ್ದರೆ, ಶೂನ್ಯನಾಗಿದ್ದೇನೆ. \v 3 ನಾನು ನನ್ನ ಎಲ್ಲಾ ಆಸ್ತಿಯನ್ನು ದಾನಮಾಡಿದರೂ, ನಾನು ಹೊಗಳಿಕೊಳ್ಳುವಂತೆ ನನ್ನ ದೇಹವನ್ನು ಸುಡುವುದಕ್ಕಾಗಿ ಒಪ್ಪಿಸಿಕೊಟ್ಟರೂ ಪ್ರೀತಿಯು ನನಗಿಲ್ಲದಿದ್ದರೆ, ನನಗೇನೂ ಪ್ರಯೋಜನವಾಗುವುದಿಲ್ಲ. \p \v 4 ಪ್ರೀತಿ ತಾಳ್ಮೆಯುಳ್ಳದ್ದು, ಪ್ರೀತಿ ದಯೆಯುಳ್ಳದ್ದು, ಪ್ರೀತಿ ಅಸೂಯೆಪಡುವುದಿಲ್ಲ, ಪ್ರೀತಿ ಹೊಗಳಿಕೊಳ್ಳುವುದಿಲ್ಲ, ಗರ್ವಪಡುವುದಿಲ್ಲ, \v 5 ಪ್ರೀತಿಯು ಇತರರನ್ನು ಅವಮಾನಪಡಿಸುವುದಿಲ್ಲ, ಸ್ವಹಿತವನ್ನೇ ಹುಡುಕುವುದಿಲ್ಲ, ಸುಲಭವಾಗಿ ಸಿಟ್ಟುಗೊಳ್ಳುವುದಿಲ್ಲ, ಅಪಕಾರವನ್ನು ಎಣಿಸುವುದಿಲ್ಲ, \v 6 ಪ್ರೀತಿ ಕೆಟ್ಟದ್ದರಲ್ಲಿ ಸಂತೋಷಪಡುವುದಿಲ್ಲ, ಸತ್ಯದೊಂದಿಗೆ ಸಂತೋಷ ಪಡುತ್ತದೆ. \v 7 ಯಾವಾಗಲೂ ಸಂರಕ್ಷಿಸುತ್ತದೆ, ಯಾವಾಗಲೂ ನಂಬುತ್ತದೆ, ಯಾವಾಗಲೂ ನಿರೀಕ್ಷಿಸುತ್ತದೆ, ಯಾವಾಗಲೂ ಸಹಿಸಿಕೊಳ್ಳುತ್ತದೆ. \p \v 8 ಪ್ರೀತಿಯು ಎಂದಿಗೂ ಅಳಿದುಹೋಗುವುದಿಲ್ಲ, ಪ್ರವಾದನೆಗಳಾದರೋ ಇಲ್ಲದಂತಾಗುವುವು, ಅನ್ಯ ಭಾಷೆಗಳು ಗತಿಸಿ ಹೋಗುವುವು, ವಿದ್ಯೆಯೋ ಇಲ್ಲದಂತಾಗುವುವು. \v 9 ನಾವು ಅಪೂರ್ಣವಾಗಿ ತಿಳಿದುಕೊಂಡಿದ್ದೇವೆ, ಅಪೂರ್ಣವಾಗಿ ಪ್ರವಾದಿಸುತ್ತೇವೆ. \v 10 ಆದರೆ ಸಂಪೂರ್ಣವಾದದ್ದು ಬಂದಾಗ, ಭಾಗವಾದದ್ದು ಅಳಿದುಹೋಗುವುದು. \v 11 ನಾನು ಬಾಲಕನಾಗಿದ್ದಾಗ, ಬಾಲಕನ ಮಾತುಗಳನ್ನಾಡಿದೆನು, ಬಾಲಕನಂತೆ ಯೋಚಿಸಿದೆನು, ಬಾಲಕನಂತೆಯೇ ತರ್ಕಿಸಿದೆನು. ಪ್ರೌಢನಾದಾಗ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು. \v 12 ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ಆಗ ಮುಖಾಮುಖಿಯಾಗಿ ನೋಡುವೆವು. ಈಗ ಸ್ವಲ್ಪ ಮಾತ್ರ ನನಗೆ ತಿಳಿದಿದೆ. ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳಿದುಕೊಂಡಂತೆ, ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು. \p \v 13 ಆದರೆ ಈಗ ನಂಬಿಕೆ, ನಿರೀಕ್ಷೆ, ಪ್ರೀತಿ, ಈ ಮೂರೇ ಉಳಿದಿರುತ್ತವೆ. ಇವುಗಳಲ್ಲಿ ಮಹತ್ತಾದದ್ದು ಪ್ರೀತಿಯೇ. \c 14 \s1 ಪ್ರವಾದಿಸುವ ಮತ್ತು ಅನ್ಯಭಾಷೆಗಳನ್ನಾಡುವ ವರಗಳು \p \v 1 ಪ್ರೀತಿಯ ಮಾರ್ಗ ಅನುಸರಿಸಿರಿ, ಆತ್ಮಿಕ ವರಗಳನ್ನು, ವಿಶೇಷವಾಗಿ ಪ್ರವಾದಿಸುವ ವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. \v 2 ಅನ್ಯಭಾಷೆಗಳನ್ನು ಆಡುವವನು ಮನುಷ್ಯರ ಸಂಗಡವಲ್ಲ, ದೇವರೊಂದಿಗೆ ಮಾತನಾಡುತ್ತಾನೆ. ಅವನು ಮಾತನಾಡುವುದನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಆತ್ಮದಲ್ಲಿ ರಹಸ್ಯಗಳನ್ನು ಮಾತನಾಡುವವನಾಗಿದ್ದಾನೆ. \v 3 ಪ್ರವಾದಿಸುವವನಾದರೋ, ಜನರ ಭಕ್ತಿವೃದ್ಧಿಗಾಗಿ, ಪ್ರೋತ್ಸಾಹಕ್ಕಾಗಿ, ಸಂತೈಸುವಿಕೆಗಾಗಿ ಮಾತನಾಡುತ್ತಾನೆ. \v 4 ಅನ್ಯಭಾಷೆಗಳನ್ನಾಡುವವನು ತನಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುತ್ತಾನೆ. \v 5 ನೀವೆಲ್ಲರೂ ಅನ್ಯಭಾಷೆಗಳನ್ನಾಡಬೇಕೆಂದು ಈಗ ನಾನು ಅಪೇಕ್ಷಿಸಿದರೂ, ಅದಕ್ಕಿಂತ ಹೆಚ್ಚಾಗಿ ನೀವು ಪ್ರವಾದಿಸಬೇಕೆಂದು ಅಪೇಕ್ಷಿಸುತ್ತೇನೆ. ಅನ್ಯಭಾಷೆಗಳನ್ನಾಡುವವನು ಸಭೆಗೆ ಭಕ್ತಿವೃದ್ಧಿಯಾಗುವಂತೆ ಅದರ ಅರ್ಥವನ್ನು ಹೇಳದೆ ಹೋದರೆ, ಅವನಿಗಿಂತ ಪ್ರವಾದಿಸುವವನೇ ಶ್ರೇಷ್ಠನು. \p \v 6 ಹೀಗಿರುವುದರಿಂದ ಪ್ರಿಯರೇ, ನಾನು ನಿಮ್ಮ ಬಳಿಗೆ ಬಂದು ಪ್ರಕಟನೆಯಿಂದಾಗಲಿ, ವಿದ್ಯೆಯಿಂದಾಗಲಿ, ಪ್ರವಾದನೆಯಿಂದಾಗಲಿ, ಉಪದೇಶದಿಂದಾಗಲಿ ಮಾತನಾಡದೆ, ಅನ್ಯಭಾಷೆಗಳಿಂದ ಮಾತನಾಡುವವನಾಗಿದ್ದರೆ, ನನ್ನಿಂದ ನಿಮಗೇನು ಪ್ರಯೋಜನ? \v 7 ಕೊಳಲು, ವೀಣೆ ಮೊದಲಾದ ನಿರ್ಜೀವ ವಾದ್ಯಗಳ ಸ್ವರಗಳ ಹಾಗೆ, ವಿವಿಧ ಶೃತಿಗಳು ಕಂಡುಬರದಿದ್ದರೆ, ಊದಿದ್ದು ಕೊಳಲೋ ಅಥವಾ ಬಾರಿಸಿದ್ದು ವೀಣೆಯೋ ಎಂದು ತಿಳಿಯುವುದು ಹೇಗೆ? \v 8 ತುತೂರಿಯನ್ನು ಸ್ಪಷ್ಟವಾಗಿ ಊದದಿದ್ದರೆ, ಯಾರು ತಾನೇ ಯುದ್ಧಕ್ಕೆ ಸನ್ನದ್ಧರಾಗುವರು? \v 9 ಅದರಂತೆಯೇ, ನೀವೂ ಸ್ಪಷ್ಟವಾದ ಭಾಷೆಯಿಂದ ಮಾತನಾಡದೆ ಹೋದರೆ, ಮಾತನಾಡಿದ್ದು ಏನೆಂದು ತಿಳಿಯುವುದು ಹೇಗೆ? ನೀವು ಗಾಳಿಯ ಸಂಗಡ ಮಾತನಾಡಿದ ಹಾಗಿರುವುದಷ್ಟೆ. \v 10 ಲೋಕದಲ್ಲಿ ಎಷ್ಟು ವಿಧವಾದ ಭಾಷೆಗಳಿದ್ದರೂ, ಅವುಗಳಲ್ಲಿ ಒಂದಾದರೂ ಅರ್ಥರಹಿತವಾದುದಲ್ಲ. \v 11 ನಾನು ಭಾಷೆಯ ಅರ್ಥವನ್ನು ಗ್ರಹಿಸದಿದ್ದರೆ, ಮಾತಾಡುವವನಿಗೆ ನಾನು ಅನ್ಯದೇಶದವನಂತಿರುವೆನು, ಮಾತನಾಡುವವನು ನನಗೆ ಅನ್ಯದೇಶದವನಂತಿರುವನು. \v 12 ಅದರಂತೆಯೇ, ನೀವು ಸಹ ಆತ್ಮಿಕ ವರಗಳನ್ನು ಬಯಸುವುದರಿಂದ, ಸಭೆಗೆ ಭಕ್ತಿವೃದ್ಧಿ ಉಂಟುಮಾಡುವ ವರಗಳನ್ನೇ ಸಮೃದ್ಧವಾಗಿ ಪ್ರಯತ್ನಿಸಿರಿ. \p \v 13 ಆದ್ದರಿಂದ, ಅನ್ಯಭಾಷೆಗಳನ್ನಾಡುವವನು ತಾನಾಡುವ ಮಾತಿನ ಅರ್ಥವನ್ನು ಹೇಳುವುದಕ್ಕೆ ದೇವರನ್ನು ಪ್ರಾರ್ಥಿಸಲಿ. \v 14 ಏಕೆಂದರೆ ನಾನು ಅನ್ಯಭಾಷೆಗಳಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದು. ಆದರೆ ನನ್ನ ಬುದ್ಧಿ ನಿಷ್ಫಲವಾಗಿರುವುದು. \v 15 ಹಾಗಾದರೇನು? ನಾನು ಆತ್ಮದಿಂದ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು. ಆತ್ಮದಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು. \v 16 ನೀನು ಆತ್ಮದಲ್ಲಿ ಮಾತ್ರ ಸ್ತೋತ್ರ ಮಾಡಿದರೆ, ತಿಳುವಳಿಕೆ ಇಲ್ಲದೆ ಕುಳಿತಿರುವವನು ನಿನ್ನ ಕೃತಜ್ಞತಾಸ್ತುತಿಗೆ, “ಆಮೆನ್” ಎಂದು ಹೇಳುವುದು ಹೇಗೆ? \v 17 ನೀನು ಚೆನ್ನಾಗಿ ಕೃತಜ್ಞತಾಸ್ತುತಿ ಮಾಡುತ್ತೀ ನಿಜವೇ. ಆದರೆ, ಮತ್ತೊಬ್ಬನಿಗೆ ಭಕ್ತಿವೃದ್ಧಿಯಾಗಲಿಲ್ಲ. \p \v 18 ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಅನ್ಯಭಾಷೆಗಳನ್ನಾಡುತ್ತೇನೆಂದು ದೇವರಿಗೆ ಕೃತಜ್ಞತೆ ಮಾಡುತ್ತೇನೆ. \v 19 ಆದರೂ ಸಭೆಯಲ್ಲಿ ಅನ್ಯಭಾಷೆಗಳಿಂದ ಹತ್ತು ಸಾವಿರ ಮಾತುಗಳನ್ನಾಡುವುದಕ್ಕಿಂತ, ನನ್ನ ಬುದ್ಧಿಯಿಂದ ಐದೇ ಮಾತುಗಳನ್ನಾಡಿ, ಇತರರಿಗೆ ಉಪದೇಶ ಮಾಡುವುದನ್ನೇ ನಾನು ಇಷ್ಟಪಡುತ್ತೇನೆ. \p \v 20 ಸಹೋದರರೇ, ಮಕ್ಕಳಂತೆ ಯೋಚಿಸುವುದನ್ನು ಬಿಟ್ಟುಬಿಡಿರಿ. ಕೇಡಿನ ವಿಷಯದಲ್ಲಿ ಶಿಶುಗಳಂತೆ ಇದ್ದರೂ, ನಿಮ್ಮ ಯೋಚನೆಯಲ್ಲಿ ಪ್ರಾಯಸ್ಥರಾಗಿರಿ. \q1 \v 21 “ಬೇರೆಭಾಷೆಯವರ ಮೂಲಕವಾಗಿಯೂ \q2 ವಿದೇಶದವರ ತುಟಿಗಳಿಂದಲೂ \q1 ನಾನು ಈ ಜನರೊಡನೆ ಮಾತಾಡುವೆನು, \q2 ಆದರೂ ಅವರು ನನಗೆ ಕಿವಿಗೊಡುವುದಿಲ್ಲವೆಂದು \q2 ಕರ್ತದೇವರು ಹೇಳುತ್ತಾರೆ,”\f + \fr 14:21 \fr*\ft \+xt ಯೆಶಾಯ 28:11,12\+xt*\ft*\f* \m ಎಂದು ನಿಯಮದಲ್ಲಿ ಬರೆದಿದೆ. \p \v 22 ಆದ್ದರಿಂದ, ಅನ್ಯಭಾಷೆಗಳನ್ನಾಡುವುದು ವಿಶ್ವಾಸಿಗಳಿಗೆ ಅಲ್ಲ, ಅವಿಶ್ವಾಸಿಗಳಿಗೆ ಸೂಚನೆಯಾಗಿದೆ. ಆದರೆ ಪ್ರವಾದಿಸುವುದು ಅವಿಶ್ವಾಸಿಗಳಿಗಲ್ಲ, ವಿಶ್ವಾಸಿಗಳಿಗೆ ಸೂಚನೆಯಾಗಿದೆ. \v 23 ಆದಕಾರಣ ಸಭೆಯೆಲ್ಲವೂ ಕೂಡಿಬಂದಾಗ ಎಲ್ಲರೂ ಅನ್ಯಭಾಷೆಗಳನ್ನಾಡಿದರೆ, ಅಜ್ಞಾನಿಗಳು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು, ನೀವು ಹುಚ್ಚರೆಂದು ಹೇಳುವುದಿಲ್ಲವೇ? \v 24 ಆದರೆ ನೀವೆಲ್ಲರೂ ಪ್ರವಾದಿಸುತ್ತಿರಲು, ಅವಿಶ್ವಾಸಿಯಾಗಲಿ, ಅನ್ವೇಷಕನಾಗಲಿ ಒಳಗೆ ಬಂದರೆ, ಅವನು ತಾನು ಪಾಪಿಯೆಂಬ ಮನವರಿಕೆಯನ್ನು ಹೊಂದುವನು. ಅವನು ಎಲ್ಲರ ಮಾತಿನಿಂದ ಪರಿಶೋಧಿತನಾಗುವನು. \v 25 ಅವನ ಹೃದಯದ ರಹಸ್ಯಗಳು ಬಯಲಾಗುವುವು. ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, “ದೇವರು ನಿಜವಾಗಿಯೂ ನಿಮ್ಮ ಮಧ್ಯದಲ್ಲಿ ಇದ್ದಾರೆ!” ಎಂದು ಪ್ರಕಟಪಡಿಸುವನು. \s1 ಆರಾಧನೆಯ ಕ್ರಮ \p \v 26 ಹಾಗಾದರೇನು ಪ್ರಿಯರೇ? ನೀವು ಸಭೆಯಾಗಿ ಕೂಡಿಬರುವಾಗ ಪ್ರತಿಯೊಬ್ಬನಿಗೆ ಕೀರ್ತನೆಯಾಗಲಿ, ಸಂದೇಶವಾಗಲಿ, ಪ್ರಕಟನೆಯಾಗಲಿ, ಅನ್ಯಭಾಷೆಯನ್ನಾಡುವುದಾಗಲಿ, ಅನ್ಯಭಾಷೆಗಳ ಅರ್ಥವನ್ನು ಹೇಳುವ ವರವಾಗಲಿ ಇರುತ್ತದಷ್ಟೆ. ಇವೆಲ್ಲವೂ ಸಭೆಗೆ ಭಕ್ತಿವೃದ್ಧಿಗಾಗಿಯೇ ಇರಲಿ. \v 27 ಯಾವನಾದರೂ ಅನ್ಯಭಾಷೆಗಳನ್ನಾಡುವುದಾದರೆ, ಇಬ್ಬರು ಅಥವಾ ಹೆಚ್ಚೆಂದರೆ ಮೂವರು ಒಬ್ಬೊಬ್ಬರಾಗಿ ಮಾತನಾಡಬೇಕು, ಒಬ್ಬನು ಅರ್ಥವನ್ನು ಹೇಳಲಿ. \v 28 ಅರ್ಥವನ್ನು ಹೇಳುವವನಿಲ್ಲದಿದ್ದರೆ, ಅನ್ಯಭಾಷೆಗಳನ್ನಾಡುವವನು ಸಭೆಯಲ್ಲಿ ಮೌನವಾಗಿರಲಿ. ಅವನು ತನ್ನೊಂದಿಗೂ ದೇವರೊಂದಿಗೂ ಮಾತನಾಡಿಕೊಳ್ಳಲಿ. \p \v 29 ಪ್ರವಾದಿಗಳು ಇಬ್ಬರಾಗಲಿ, ಮೂವರಾಗಲಿ ಮಾತಾಡಲಿ, ಇತರರರು ವಿವೇಚನೆ ಮಾಡಲಿ. \v 30 ಕುಳಿತಿರುವ ಮತ್ತೊಬ್ಬನಿಗೆ ಏನಾದರೂ ಪ್ರಕಟನೆಯಾದರೆ, ಮೊದಲಿನವನು ಮೌನವಾಗಿರಲಿ. \v 31 ಎಲ್ಲರೂ ಕಲಿತುಕೊಳ್ಳುವಂತೆಯೂ, ಎಲ್ಲರೂ ಪ್ರೋತ್ಸಾಹ ಹೊಂದುವಂತೆಯೂ, ನೀವೆಲ್ಲರು ಒಬ್ಬೊಬ್ಬರಾಗಿ ಪ್ರವಾದಿಸಿರಿ. \v 32 ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿವೆ. \v 33 ದೇವಜನರ ಎಲ್ಲಾ ಸಭೆಗಳಲ್ಲಿರುವಂತೆ, ದೇವರು ಗಲಿಬಿಲಿಯ ದೇವರಲ್ಲ, ಸಮಾಧಾನದ ದೇವರಾಗಿದ್ದಾರೆ. \p \v 34 ದೇವಜನರ ಎಲ್ಲಾ ಸಭೆಗಳಲ್ಲಿರುವಂತೆ ಸ್ತ್ರೀಯರು ಸಭೆಯ ಕೂಟಗಳಲ್ಲಿ ಮೌನವಾಗಿರಲಿ. ಏಕೆಂದರೆ ಮಾತನಾಡಲು ಅವರಿಗೆ ಅನುಮತಿಯಿಲ್ಲ, ನಿಯಮವು ಸಹ ಹೇಳಿರುವಂತೆ ಅವರು ಅಧೀನರಾಗಿರಬೇಕು. \v 35 ಅವರು ಏನಾದರೂ ಕಲಿಯಬಯಸಿದರೆ, ಮನೆಯಲ್ಲಿ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವುದು ನಾಚಿಕೆಪಡುವಂಥದಾಗಿದೆ. \p \v 36 ದೇವರ ವಾಕ್ಯವು ನಿಮ್ಮಿಂದ ಹೊರಟಿತೋ? ಅಥವಾ ಅದು ತಲುಪಿದ್ದು ನಿಮಗೆ ಮಾತ್ರವೋ? \v 37 ಯಾವನಾದರೂ ತನ್ನನ್ನು ಪ್ರವಾದಿಯೆಂದಾಗಲಿ, ಆತ್ಮನ ವರಗಳನ್ನು ಹೊದಿದವನೆಂದಾಗಲಿ ಭಾವಿಸುವುದಾದರೆ, ನಾನು ನಿಮಗೆ ಬರೆದಿರುವ ಸಂಗತಿಗಳು ಕರ್ತದೇವರ ಆಜ್ಞೆಗಳೆಂದು ಸ್ಪಷ್ಟವಾಗಿ ತಿಳಿದುಕೊಳ್ಳಲಿ. \v 38 ಆದರೆ ಯಾರಾದರೂ ಇದನ್ನು ತಿರಸ್ಕಸಿದರೆ, ಅವರೂ ತಿರಸ್ಕಾರಕ್ಕೆ ಗುರಿಯಾಗುವರು. \p \v 39 ಆದಕಾರಣ ನನ್ನ ಪ್ರಿಯರೇ, ಪ್ರವಾದಿಸುವ ವರಕ್ಕಾಗಿ ಆಸಕ್ತರಾಗಿರಿ. ಅನ್ಯಭಾಷೆಯನ್ನಾಡುವುದಕ್ಕೆ ಅಡ್ಡಿಮಾಡಬೇಡಿರಿ. \v 40 ಆದರೆ ಎಲ್ಲವನ್ನೂ ಯೋಗ್ಯವಾಗಿಯೂ ಕ್ರಮವಾಗಿಯೂ ಮಾಡಿರಿ. \c 15 \s1 ಕ್ರಿಸ್ತನ ಪುನರುತ್ಥಾನ \p \v 1 ಪ್ರಿಯರೇ, ನಾನು ನಿಮಗೆ ಸಾರಿದ ಸುವಾರ್ತೆಯನ್ನೂ, ನೀವು ಅದನ್ನು ಸ್ವೀಕರಿಸಿದ್ದನ್ನೂ, ಅದರಲ್ಲಿ ನಿಂತಿರುವುದನ್ನೂ, ಈಗ ನಿಮಗೆ ನೆನಪಿಸುತ್ತೇನೆ. \v 2 ನಾನು ಸಾರಿದ ಈ ಸುವಾರ್ತೆಯ ವಾಕ್ಯವನ್ನು ನೀವು ಬಿಗಿಯಾಗಿ ಹಿಡಿದುಕೊಂಡರೆ, ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ, ನಿಮ್ಮ ನಂಬಿಕೆ ವ್ಯರ್ಥವಾಗಿ ಹೋಗುತ್ತದೆ. \p \v 3 ಏಕೆಂದರೆ ನಾನು ಪಡೆದುಕೊಂಡಿದ್ದರಲ್ಲಿ ಬಹು ಪ್ರಾಮುಖ್ಯವಾದದ್ದನ್ನೇ ನಿಮಗೆ ಕೊಟ್ಟಿದ್ದೇನೆ. ಅದೇನೆಂದರೆ, ಪವಿತ್ರ ವೇದದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತರು, \v 4 ಹೂಣಿಡಲಾದರು, ಪವಿತ್ರ ವೇದದ ಪ್ರಕಾರವೇ ಮೂರನೆಯ ದಿನದಲ್ಲಿ ಎದ್ದು ಬಂದರು. \v 5 ಕೇಫನಿಗೂ\f + \fr 15:5 \fr*\ft ಅಥವಾ \ft*\fqa ಪೇತ್ರ\fqa*\f* ಆಮೇಲೆ ಹನ್ನೆರಡು ಮಂದಿಗೂ ಕಾಣಿಸಿಕೊಂಡರು. \v 6 ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಹಿಂಬಾಲಕರಿಗೆ ಕ್ರಿಸ್ತ ಯೇಸು ಕಾಣಿಸಿಕೊಂಡರು. ಅವರಲ್ಲಿ ಕೆಲವರು ಸತ್ತು ಹೋಗಿದ್ದರೂ ಬಹುಜನರು ಇಂದಿಗೂ ಬದುಕಿದ್ದಾರೆ. \v 7 ತರುವಾಯ ಕ್ರಿಸ್ತ ಯೇಸು ಯಾಕೋಬನಿಗೂ ಆಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡರು. \v 8 ಕಟ್ಟಕಡೆಗೆ, ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು. \p \v 9 ನಾನಾದರೋ ಅಪೊಸ್ತಲರಲ್ಲಿ ಕನಿಷ್ಠನು, ಅಪೊಸ್ತಲನೆನಿಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ, ಏಕೆಂದರೆ ನಾನು ದೇವರ ಸಭೆಯನ್ನು ಹಿಂಸೆಪಡಿಸಿದೆನು. \v 10 ಆದರೆ ನಾನು ಎಂಥವನಾಗಿದ್ದೇನೋ, ಅದು ದೇವರ ಕೃಪೆಯಿಂದಲೇ ಆಗಿರುತ್ತದೆ. ನನಗುಂಟಾದ ದೇವರ ಕೃಪೆಯು ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ. \v 11 ಆದ್ದರಿಂದ ನಾನಾದರೇನು, ಅವರಾದರೇನು ಇದನ್ನೇ ನಾವು ಸಾರುವುದು, ಇದನ್ನೇ ನೀವು ನಂಬಿದ್ದೀರಿ. \s1 ಸತ್ತವರ ಪುನರುತ್ಥಾನ \p \v 12 ಆದರೆ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದಿರುತ್ತಾರೆಂದು ಸಾರುತ್ತಿರುವಲ್ಲಿ ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನ ಇಲ್ಲ ಎಂದು ಹೇಳುವುದು ಹೇಗೆ? \v 13 ಈಗ ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಕ್ರಿಸ್ತಯೇಸುವಾದರೂ ಎದ್ದು ಬರಲಿಲ್ಲ. \v 14 ಕ್ರಿಸ್ತ ಯೇಸು ಎದ್ದು ಬರಲಿಲ್ಲವಾದರೆ, ನಮ್ಮ ಪ್ರಸಂಗವೂ ನಿಮ್ಮ ವಿಶ್ವಾಸವೂ ನಿಷ್ಪ್ರಯೋಜನವಾದದ್ದು. \v 15 ಅದು ಮಾತ್ರವಲ್ಲ, ದೇವರು ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ದೇವರ ಬಗ್ಗೆ ಸಾಕ್ಷಿಕೊಟ್ಟ ನಾವೂ ಸುಳ್ಳುಸಾಕ್ಷಿಗಳಾಗಿ ಕಂಡುಬರುವೆವು. ದೇವರು ಕ್ರಿಸ್ತನನ್ನು ಎಬ್ಬಿಸದಿದ್ದರೆ ಸತ್ತವರನ್ನೂ ದೇವರು ಎಬ್ಬಿಸುವುದಿಲ್ಲ. \v 16 ಸತ್ತವರು ಎದ್ದುಬರುವುದಿಲ್ಲವಾದರೆ, ಕ್ರಿಸ್ತ ಯೇಸುವೂ ಎದ್ದುಬಂದಿಲ್ಲ. \v 17 ಕ್ರಿಸ್ತ ಯೇಸುವು ಎದ್ದುಬಂದಿಲ್ಲವಾದರೆ, ನಿಮ್ಮ ವಿಶ್ವಾಸವೂ ವ್ಯರ್ಥವಾಗಿದೆ, ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ. \v 18 ಅಲ್ಲದೆ, ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟು ನಿದ್ರೆ ಹೋದವರು ಸಹ ನಾಶವಾದರು. \v 19 ನಾವು ಈ ಜೀವನದಲ್ಲಿ ಮಾತ್ರ ಕ್ರಿಸ್ತ ಯೇಸುವಿನಲ್ಲಿ ನಿರೀಕ್ಷೆಯಿಟ್ಟು ಕೊಂಡಿರುವವರಾಗಿದ್ದರೆ, ನಾವು ಎಲ್ಲಾ ಮನುಷ್ಯರಲ್ಲಿಯೂ ಕನಿಕರಪಡತಕ್ಕವರೇ ಆಗುತ್ತೇವೆ. \p \v 20 ಆದರೆ ಈಗ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದೇ ಇದ್ದಾರೆ. ನಿದ್ರೆ ಹೋದವರಲ್ಲಿ ಪ್ರಥಮಫಲವಾಗಿದ್ದಾರೆ. \v 21 ಏಕೆಂದರೆ ಒಬ್ಬ ಮನುಷ್ಯನ ಮೂಲಕ ಮರಣವು ಬಂದಂತೆಯೇ, ಒಬ್ಬ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವು ಸಹ ಬರುವುದು. \v 22 ಏಕೆಂದರೆ, ಆದಾಮನಲ್ಲಿ ಎಲ್ಲರೂ ಸತ್ತಂತೆಯೇ, ಕ್ರಿಸ್ತನಲ್ಲಿ ಎಲ್ಲರೂ ಜೀವಂತರಾಗುವರು. \v 23 ಆದರೆ ಒಬ್ಬೊಬ್ಬರು ತಮ್ಮ ತಮ್ಮ ಕ್ರಮದ ಅನುಸಾರವಾಗಿ ಎದ್ದು ಬರುವರು. ಪ್ರಥಮಫಲವಾಗಿ ಕ್ರಿಸ್ತನು, ತರುವಾಯ ಕ್ರಿಸ್ತನ ಪುನರಾಗಮನದಲ್ಲಿ ಕ್ರಿಸ್ತನಿಗೆ ಸೇರಿದವರು ಎದ್ದು ಬರುವರು. \v 24 ಆಮೇಲೆ ಕ್ರಿಸ್ತನು ಎಲ್ಲಾ ಆಧಿಪತ್ಯವನ್ನೂ ಎಲ್ಲಾ ಅಧಿಕಾರವನ್ನೂ ಎಲ್ಲಾ ಶಕ್ತಿಯನ್ನೂ ತೆಗೆದುಹಾಕಿ, ರಾಜ್ಯವನ್ನು ತಂದೆ ದೇವರಿಗೆ ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು. \v 25 ಏಕೆಂದರೆ, ಕ್ರಿಸ್ತನು ಎಲ್ಲಾ ಶತ್ರುಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ಆಳುವುದು ಅವಶ್ಯ. \v 26 ಕೊನೆಯದಾಗಿ, ನಿರ್ಮೂಲವಾಗುವ ವೈರಿ ಮರಣವೇ. \v 27 ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿ ಅವರಿಗೆ ಅಧೀನಮಾಡಿದ್ದಾರೆ. “ಸಮಸ್ತವೂ ಅವರಿಗೆ ಅಧೀನ ಮಾಡಲಾಗಿದೆ”\f + \fr 15:27 \fr*\ft \+xt ಕೀರ್ತನೆ 8:6\+xt*\ft*\f* ಎಂದು ಹೇಳುವಾಗ, ಸಮಸ್ತವನ್ನೂ ಕ್ರಿಸ್ತನಿಗೆ ಅಧೀನಮಾಡಿಕೊಟ್ಟ ದೇವರು ಇದರಲ್ಲಿ ಒಳಪಡಲಿಲ್ಲ ಎಂಬುದು ಸ್ಪಷ್ಟವಾಗಿದೆ. \v 28 ಸಮಸ್ತವೂ ಅವರಿಗೆ ಅಧೀನವಾದ ಮೇಲೆ, ಮಗನೂ ಸಹ ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟ ದೇವರಿಗೆ ತಾವೇ ಅಧೀನರಾಗುವರು. ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ. \p \v 29 ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ನಿಜವಾಗಿಯೂ ಎದ್ದುಬರುವುದಿಲ್ಲವಾದರೆ, ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದು ಏಕೆ? \v 30 ನಾವು ಸಹ ಪ್ರತಿ ಗಳಿಗೆಯಲ್ಲಿಯೂ ಅಪಾಯದಲ್ಲಿರುವುದೇಕೆ? \v 31 ಸಹೋದರರೇ ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನನಗೆ ನಿಮ್ಮ ಬಗ್ಗೆ ನಿಶ್ಚಯವಾಗಿರುವ ಹೆಮ್ಮೆಯಿಂದ ನಾನು ದಿನದಿನವು ಸಾಯುತ್ತಲಿದ್ದೇನೆ. \v 32 ನಾನು ಎಫೆಸದಲ್ಲಿ ಕಾಡು ಮೃಗಗಳೊಂದಿಗೆ ಹೋರಾಟ ಮಾಡಿದ್ದು ಕೇವಲ ಮಾನವ ಕಾರಣಗಳಿಂದ ಮಾತ್ರವಾಗಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರು ಎದ್ದುಬರುವುದಿಲ್ಲವಾದರೆ, \q1 “ತಿನ್ನೋಣ, ಕುಡಿಯೋಣ, \q2 ನಾಳೆ ಮರಣ ಹೊಂದೋಣ.”\f + \fr 15:32 \fr*\ft \+xt ಯೆಶಾಯ 22:13\+xt*\ft*\f* \m \v 33 ಮೋಸಹೋಗಬೇಡಿರಿ. ಏಕೆಂದರೆ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” \v 34 ಸ್ವಸ್ಥಚಿತ್ತರಾಗಿರಿ, ಪಾಪಮಾಡುವುದನ್ನು ನಿಲ್ಲಿಸಿರಿ. ಕೆಲವರಂತೂ ದೇವರನ್ನೇ ಅಲಕ್ಷ್ಯಮಾಡುವವರಾಗಿದ್ದಾರೆ. ನಿಮಗೆ ನಾಚಿಕೆಯಾಗಬೇಕೆಂದು ನಾನು ಇದನ್ನು ಹೇಳುತ್ತೇನೆ. \s1 ಪುನರುತ್ಥಾನ ಹೊಂದಿದ ಶರೀರ \p \v 35 “ಸತ್ತವರು ಎದ್ದೇಳುವುದು ಹೇಗೆ? ಎಂಥ ದೇಹದಿಂದ ಎದ್ದು ಬರುತ್ತಾರೆ?” ಎಂದು ಯಾರಾದರೂ ಕೇಳಬಹುದು. \v 36 ಮತಿಹೀನ ಮನುಷ್ಯನೇ! ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವಂತವಾಗುವುದಿಲ್ಲ. \v 37 ನೀನು ಒಂದು ವೇಳೆ ಗೋಧಿಯನ್ನಾಗಲಿ, ಬೇರೆ ಯಾವುದೇ ಬೀಜವನ್ನಾಗಲಿ ಬಿತ್ತುವಾಗ, ಬರೀ ಕಾಳನ್ನೇ ಹೊರತು ಮುಂದೆ ಆಗಬೇಕಾದ ದೇಹವನ್ನು ಬಿತ್ತುವುದಿಲ್ಲ. \v 38 ಆದರೆ ದೇವರು ತಾನು ನಿರ್ಣಯಿಸಿದಂತೆ ಅದಕ್ಕೆ ದೇಹವನ್ನು ಕೊಡುತ್ತಾರೆ ಮತ್ತು ಒಂದೊಂದು ಬೀಜಕ್ಕೂ ಅದರದರ ದೇಹವನ್ನು ಕೊಡುತ್ತಾರೆ. \v 39 ಎಲ್ಲಾ ದೇಹಗಳು ಒಂದೇ ವಿಧವಾಗಿಲ್ಲ. ಮನುಷ್ಯನ ದೇಹ ಬೇರೆ, ಪಶುಗಳ ದೇಹ ಬೇರೆ, ಪಕ್ಷಿಗಳ ದೇಹ ಬೇರೆ, ಮೀನುಗಳದೇ ಬೇರೆ. \v 40 ಪರಲೋಕದ ದೇಹಗಳಿವೆ, ಭೂಲೋಕದ ದೇಹಗಳಿವೆ. ಆದರೆ ಪರಲೋಕದ ದೇಹಗಳ ಮಹಿಮೆಯೇ ಬೇರೆ, ಭೂಲೋಕದ ದೇಹಗಳ ಮಹಿಮೆಯೇ ಬೇರೆ. \v 41 ಸೂರ್ಯನ ಮಹಿಮೆ ಬೇರೆ, ಚಂದ್ರನ ಮಹಿಮೆಯೇ ಬೇರೆ ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ. ಏಕೆಂದರೆ, ನಕ್ಷತ್ರ ನಕ್ಷತ್ರಕ್ಕೆ ಮಹಿಮೆಯಲ್ಲಿ ವ್ಯತ್ಯಾಸವಾಗಿರುವುದು. \p \v 42 ಸತ್ತವರಿಗಾಗುವ ಪುನರುತ್ಥಾನವು ಸಹ ಹಾಗೆಯೇ ಇರುವುದು. ದೇಹವು ಅಳಿಯುವ ಅವಸ್ಥೆಯಲ್ಲಿ ಬಿತ್ತಲಾಗುತ್ತದೆ. ಅಮರತ್ವ ಅವಸ್ಥೆಯಲ್ಲಿ ಎದ್ದು ಬರುವುದು. \v 43 ದೇಹವು ಹೀನಾವಸ್ಥೆಯಲ್ಲಿ ಬಿತ್ತಲಾಗುತ್ತದೆ. ಮಹಿಮೆಯಲ್ಲಿ ಎದ್ದು ಬರುವುದು. ಬಲಹೀನತೆಯಲ್ಲಿ ಬಿತ್ತಲಾಗುತ್ತದೆ, ಶಕ್ತಿಯಲ್ಲಿ ಎದ್ದು ಬರುವುದು. \v 44 ಪ್ರಾಕೃತ ದೇಹವಾಗಿ ಬಿತ್ತಲಾಗುತ್ತದೆ, ಆತ್ಮಿಕ ದೇಹವಾಗಿ ಎದ್ದು ಬರುವುದು. \p ಪ್ರಾಕೃತ ದೇಹವಿರುವುದಾದರೆ, ಆತ್ಮಿಕ ದೇಹವೂ ಇರುವುದು. \v 45 “ಮೊದಲನೆಯ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು,”\f + \fr 15:45 \fr*\ft \+xt ಆದಿ 2:7\+xt*\ft*\f* ಎಂದು ಬರೆದಿದೆಯಲ್ಲವೇ? ಕಡೇ ಆದಾಮನು ಜೀವಕೊಡುವ ಆತ್ಮನಾದನು. \v 46 ಆತ್ಮಿಕವಾದದ್ದು ಮೊದಲು ಬರಲಿಲ್ಲ, ಪ್ರಾಕೃತವಾದದ್ದೇ ಮೊದಲನೆಯದು, ಅನಂತರ ಆತ್ಮಿಕವಾದದ್ದು. \v 47 ಮೊದಲನೆಯ ಮನುಷ್ಯ, ಭೂಮಿಯ ಮಣ್ಣಿನವನಾಗಿದ್ದಾನೆ, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು. \v 48 ಮಣ್ಣಿನ ಮನುಷ್ಯನು ಎಂಥವನೋ, ಮಣ್ಣಿಗೆ ಸೇರಿದವರೂ ಅಂಥವರೇ. ಪರಲೋಕದ ಮನುಷ್ಯನು ಎಂಥವನೋ, ಪರಲೋಕಕ್ಕೆ ಸಂಬಂಧಿಸಿದವರೂ ಅಂಥವರಾಗಿರುವರು. \v 49 ನಾವು ಮಣ್ಣಿನ ಮನುಷ್ಯನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ, ಪರಲೋಕದ ಮನುಷ್ಯನ ಸಾರೂಪ್ಯವನ್ನೂ ಧರಿಸಿಕೊಳ್ಳುವೆವು. \p \v 50 ಪ್ರಿಯರೇ, ನಾನು ಹೇಳುವುದೇನೆಂದರೆ, ರಕ್ತಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರವು. ಅಳಿಯುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲಾರದು. \v 51 ನಾನು ರಹಸ್ಯವಾಗಿದ್ದ ಸಂಗತಿಯನ್ನು ನಿಮಗೆ ಹೇಳುತ್ತೇನೆ ಕೇಳಿರಿ: ನಾವೆಲ್ಲರೂ ನಿದ್ರೆ ಹೋಗುವುದಿಲ್ಲ, ನಾವೆಲ್ಲರೂ ರೂಪಾಂತರವಾಗುವೆವು. \v 52 ಆದರೆ ಒಂದು ಕ್ಷಣದಲ್ಲೇ, ರೆಪ್ಪೆ ಬಡಿಯುವಷ್ಟರಲ್ಲಿ, ಕಡೇ ತುತೂರಿಯು ಊದಲಾಗುವುದು. ತುತೂರಿ ಧ್ವನಿಯಾಗುವಾಗ, ಸತ್ತವರು ಅಮರತ್ವಪಡೆದು ಎಬ್ಬಿಸಲಾಗುವರು, ನಾವು ರೂಪಾಂತರವಾಗುವೆವು. \v 53 ಅಳಿಯುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು, ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು. \v 54 ನಶಿಸಿಹೋಗುವಂಥದ್ದು ನಶಿಸಿಹೋಗದಂಥದ್ದನ್ನೂ, ಮರಣಾಧೀನವಾದ ಈ ದೇಹವು ಅಮರತ್ವವನ್ನೂ ಧರಿಸಿಕೊಳ್ಳುವಾಗ, ಬರೆದಿರುವ ಈ ಮಾತುಗಳು ನೆರವೇರುವುದು: “ಮರಣವು ನುಂಗಿಯೇ ಹೋಯಿತು, ಜಯವಾಯಿತು.”\f + \fr 15:54 \fr*\ft \+xt ಯೆಶಾಯ 25:8\+xt*\ft*\f* \q1 \v 55 “ಓ ಮರಣವೇ, ನಿನ್ನ ಜಯವು ಎಲ್ಲಿ? \q2 ಓ ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?”\f + \fr 15:55 \fr*\ft \+xt ಹೋಶೇ 13:14\+xt*\ft*\f* \m \v 56 ಮರಣದ ಕೊಂಡಿ ಪಾಪವೇ ಮತ್ತು ಪಾಪದ ಶಕ್ತಿಯು ನಿಯಮವೇ. \v 57 ಆದರೆ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸ್ತೋತ್ರ. \p \v 58 ಆದ್ದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರವಾಗಿ ನಿಲ್ಲಿರಿ. ಯಾವುದೂ ನಿಮ್ಮನ್ನು ಕದಲಿಸದಿರಲಿ. ಕರ್ತನಲ್ಲಿ ನಿಮ್ಮ ಪ್ರಯಾಸವು ನಿಷ್ಫಲವಾಗುವುದಿಲ್ಲವೆಂದು ತಿಳಿದು, ಕರ್ತನ ಕೆಲಸಕ್ಕೆ ಯಾವಾಗಲೂ ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡಿರಿ. \c 16 \s1 ದೇವಜನರಿಗಾಗಿ ಹಣ ಕೂಡಿಸುವುದು \p \v 1 ಈಗ ದೇವಜನರಿಗೋಸ್ಕರ ಹಣ ಕೂಡಿಸಿಡುವುದನ್ನು ಕುರಿತು: ನಾನು ಗಲಾತ್ಯದ ಸಭೆಗಳಿಗೆ ಹೇಳಿದ್ದನ್ನೇ ನೀವೂ ಮಾಡಿರಿ. \v 2 ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಆದಾಯಕ್ಕೆ ತಕ್ಕಂತೆ ವಾರದ ಮೊದಲನೆಯ ದಿನದಲ್ಲಿ ಕೂಡಿಟ್ಟುಕೊಂಡಿರಲಿ. ಹೀಗೆ ಮಾಡಿದರೆ, ನಾನು ಬಂದಾಗ ನೀವು ಹಣ ಕೂಡಿಸುವ ಅವಶ್ಯವಿರುವುದಿಲ್ಲ. \v 3 ನಾನು ನಿಮ್ಮಲ್ಲಿಗೆ ಬಂದಾಗ, ನೀವು ಯಾರನ್ನು ಅನುಮೋದಿಸುವಿರೋ, ಅವರಿಗೆ ಪತ್ರ ಕೊಟ್ಟು ನಿಮ್ಮ ಕೊಡುಗೆಯನ್ನು ತೆಗೆದುಕೊಂಡು ಯೆರೂಸಲೇಮಿಗೆ ಹೋಗುವಂತೆ ಕಳುಹಿಸುವೆನು. \v 4 ನಾನು ಸಹ ಹೋಗುವುದು ಯುಕ್ತವಾಗಿದ್ದರೆ, ಅವರು ನನ್ನೊಂದಿಗೆ ಬರಲಿ. \s1 ವೈಯಕ್ತಿಕ ಬೇಡಿಕೆ \p \v 5 ಮಕೆದೋನ್ಯವನ್ನು ದಾಟಿದ ಮೇಲೆ, ಅದೇ ಮಾರ್ಗವಾಗಿ ನಾನು ಪುನಃ ನಿಮ್ಮ ಬಳಿಗೆ ಬರುವೆನು. \v 6 ಬಹುಶಃ ನಾನು ಸ್ವಲ್ಪ ಸಮಯ ನಿಮ್ಮೊಂದಿಗೆ ಇದ್ದ ಮೇಲೆ ಅಥವಾ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮೊಂದಿಗೆ ಕಳೆಯಲು ಬಯಸುತ್ತೇನೆ. ಹೀಗೆ ನಾನು ಹೋಗಬೇಕಾದ ಸ್ಥಳಗಳಲ್ಲಿ ನೀವು ನನಗೆ ಸಹಾಯ ಮಾಡಬಹುದು. \v 7 ನಾನು ಹಾದುಹೋಗುವಾಗ, ನಿಮ್ಮನ್ನು ಸ್ವಲ್ಪ ಸಮಯ ಮಾತ್ರ ಸಂದರ್ಶಿಸುವುದಕ್ಕೆ ನನಗೆ ಇಷ್ಟವಿಲ್ಲ. ಕರ್ತನು ಅನುಮತಿಸಿದರೆ, ನಿಮ್ಮ ಬಳಿಯಲ್ಲಿ ಬಂದು ಹೆಚ್ಚುಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ. \v 8 ಆದರೆ ಐವತ್ತು ದಿನಗಳ ಹಬ್ಬದ\f + \fr 16:8 \fr*\ft ಪಸ್ಕಹಬ್ಬ ಆಚರಿಸಿದ ಐವತ್ತು ದಿನಗಳ ನಂತರ ಬರುತ್ತಿದ್ದ ಯೆಹೂದ್ಯರ ಹಬ್ಬ\ft*\f* ತನಕ ಎಫೆಸದಲ್ಲಿರುವೆನು. \v 9 ಏಕೆಂದರೆ, ಪರಿಣಾಮಕಾರಿಯಾದ ಸೇವೆಗೆ ದೊಡ್ಡದಾಗಿ ಬಾಗಿಲು ನನಗೆ ತೆರೆದಿದೆ, ಬಹಳ ಜನ ವಿರೋಧಿಗಳೂ ಇದ್ದಾರೆ. \p \v 10 ನನ್ನ ಹಾಗೆಯೇ ತಿಮೊಥೆ ಕರ್ತನ ಸೇವೆ ಮಾಡುತ್ತಿದ್ದಾನೆ. ಅವನು ಬಂದರೆ, ಅವನು ನಿಮ್ಮೊಂದಿಗಿರುವಾಗ ಅವನಿಗೆ ಯಾವ ಭಯವೂ ಇಲ್ಲದಂತೆ ನೋಡಿಕೊಳ್ಳಿರಿ. \v 11 ಯಾರೂ ಅವನನ್ನು ಹೀನಾಯವಾಗಿ ಕಾಣಬಾರದು. ಆದರೆ ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ಎದುರು ನೋಡುತ್ತಿದ್ದೇನೆ. \p \v 12 ಈಗ ನಮ್ಮ ಸಹೋದರನಾದ ಅಪೊಲ್ಲೋಸನ ವಿಷಯವೇನೆಂದರೆ, ಅವನು ಇತರ ಸಹೋದರರೊಂದಿಗೆ ನಿಮ್ಮ ಬಳಿಗೆ ಬರಬೇಕೆಂದು ಅವನಿಗೆ ಬಹಳವಾಗಿ ಕೇಳಿಕೊಂಡೆನು. ಆದರೆ ಈಗ ಬರುವುದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿಲ್ಲ. ಅವನು ತನಗೆ ಸಂದರ್ಭ ಸಿಕ್ಕಿದಾಗ ಬರುವನು. \p \v 13 ಎಚ್ಚರವಾಗಿರಿ, ವಿಶ್ವಾಸದಲ್ಲಿ ಸ್ಥಿರವಾಗಿ ನಿಲ್ಲಿರಿ, ಧೈರ್ಯವಾಗಿರಿ, ಬಲಗೊಳ್ಳಿರಿ. \v 14 ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ. \p \v 15 ಸ್ತೆಫನನ ಕುಟುಂಬದವರು ಅಖಾಯದಲ್ಲಿ ಪ್ರಥಮವಾಗಿ ವಿಶ್ವಾಸಿಗಳಾದವರು\f + \fr 16:15 \fr*\ft ಮೂಲ, \ft*\fqa ಪ್ರಥಮವಾಗಿ ಫಲವಾದವರು\fqa*\f* ಎಂಬುದನ್ನು ನೀವು ಬಲ್ಲಿರಿ. ಅವರು ದೇವಜನರಿಗೆ ಸೇವೆ ಮಾಡುವುದಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡವರಾಗಿದ್ದಾರೆ. \v 16 ಪ್ರಿಯರೇ, ನೀವು ಇಂಥವರಿಗೂ ಈ ಸೇವೆಯಲ್ಲಿ ಅವರೊಂದಿಗೆ ಪ್ರಯಾಸಪಡುವವರಿಗೂ ವಿಧೇಯರಾಗಿರಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. \v 17 ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದುದರಿಂದ ನನಗೆ ಸಂತೋಷವಾಯಿತು. ನೀವಿಲ್ಲದ್ದ ಕೊರತೆಯನ್ನು ಅವರು ನನಗೆ ಒದಗಿಸಿದ್ದಾರೆ. \v 18 ಅವರು ನನ್ನ ಆತ್ಮವನ್ನೂ, ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ನೀವು ಇಂಥವರನ್ನು ಸನ್ಮಾನಿಸಿರಿ. \b \s1 ಅಂತಿಮ ವಂದನೆಗಳು \p \v 19 ಏಷ್ಯಾದ ಸೀಮೆಯ\f + \fr 16:19 \fr*\ft ನವೀನ ಕಾಲದ \ft*\fqa ಪಶ್ಚಿಮ ತುರ್ಕಿ\fqa*\f* ಸಭೆಗಳವರು ನಿಮ್ಮನ್ನು ವಂದಿಸುತ್ತಾರೆ. \p ಅಕ್ವಿಲನೂ ಮತ್ತು ಪ್ರಿಸ್ಕಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನ ಹೆಸರಿನಲ್ಲಿ ನಿಮ್ಮನ್ನು ಹೃದಯಪೂರ್ವಕವಾಗಿ ವಂದಿಸುತ್ತಾರೆ. \p \v 20 ಸಹೋದರರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. \p ಪವಿತ್ರವಾದ ಮುದ್ದಿಟ್ಟು, ಒಬ್ಬರನ್ನೊಬ್ಬರು ವಂದಿಸಿರಿ. \b \p \v 21 ಪೌಲನೆಂಬ ನಾನು, ಸ್ವಂತ ಕೈಯಿಂದ ಈ ವಂದನೆಯನ್ನು ಬರೆದಿದ್ದೇನೆ. \b \p \v 22 ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ, ಅವನು ಶಾಪಗ್ರಸ್ತನಾಗಲಿ! ಕರ್ತನೇ, ಬಾ! \b \p \v 23 ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೊಂದಿಗಿರಲಿ. \b \p \v 24 ಕ್ರಿಸ್ತ ಯೇಸುವಿನಲ್ಲಿ ನನ್ನ ಪ್ರೀತಿಯು ನಿಮ್ಮೆಲ್ಲರೊಂದಿಗೆ ಇದೆ. ಆಮೆನ್.